ವಿಷಯಕ್ಕೆ ಹೋಗು

ಸೈನಾ ನೆಹವಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Saina Nehwal/ಸೈನಾ ನೆಹವಾಲ್
— ಬ್ಯಾಡ್ಮಿಂಟನ್‌ ಆಟಗಾರ —
ವೈಯುಕ್ತಿಕ ಮಾಹಿತಿ
ಹುಟ್ಟು೧೭-೩-೧೯೯೦[]
ಧಿಂದಾರ್, ಹಿಸ್ಸಾರ್ ಜಿಲ್ಲೆ, ಹರಿಯಾಣ
ವಾಸಸ್ಥಾನಹೈದರಾಬಾದ್, ಆಂಧ್ರ ಪ್ರದೇಶ
ಎತ್ತರ1.65 m (5 ft 5 in)ಮೀ.
ತೂಕ೬೦ kg/ಕೆ.ಜಿ. (೧೩೦ lb)
ದೇಶ ಭಾರತ
ಆಡುವ ಕೈಬಲ
ಮಹಿಳೆಯರ ಸಿಂಗಲ್ಸ್
ಅತಿಹೆಚ್ಚಿನ ಸ್ಥಾನ[] (೨೮ ಮಾರ್ಚ್ ೨೦೧೫)
ಸದ್ಯದ ಸ್ಥಾನ[] (೩೦ ಮಾರ್ಚ್ ೨೦೧೫)
ಪ್ರಶಸ್ತಿ(ಗಳು)2009 Indonesia Super Series
2010 Singapore Super Series
2010 Indonesia Super Series
2010 Hong Kong Super Series
Chinese Taipei Open
2010 India Open Grand Prix Gold
Swiss Open 2011
Swiss Open 2012
2012 Indonesia Super Series Premier
2012 Summer Olympics
2012 Denmark Super Series Premier
BWF profile

ಸೈನಾ ನೆಹವಾಲ್ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ. ಸೈನಾ ಸದ್ಯದ(೩೦ನೇ ಮಾರ್ಚ್ ೨೦೧೫) ವಿಶ್ವ ಬ್ಯಾಡ್ಮಿಂಟನ್ ಫೆಡರೆಶನ್ ರ‍್ಯಾಂಕಿಂಗ್ ಪ್ರಕಾರ ವಿಶ್ವದ ೧ನೆಯ ಕ್ರಮಾಂಕದ ಬ್ಯಾಡ್ಮಿಂಟನ್ ಆಟಗಾರ್ತಿ.[] ಈಕೆ ೨೦೦೮ರ ಬೀಜಿಂಗ್ ಒಲಿಂಪಿಕ್ಸಿನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ಹಂತದವರೆಗೆ ತಲುಪಿದ್ದಳು. ಇಂಥ ಸಾಧನೆಗೈದ ಪ್ರಥಮ ಭಾರತೀಯಳು. ಸ್ವತಃ ಅತ್ಯುತ್ತಮ ಬ್ಯಾಡ್ಮಿಂಟನ್ ಪಟುವಾಗಿದ್ದ ಪುಲ್ಲೇಲ ಗೋಪಿಚಂದ್ ರವರಿಂದ ೨೦೧೪ರ ತನಕ ತರಬೇತಿಯನ್ನು ಪಡೆಯುತ್ತಿರು, ಸದ್ಯದಲ್ಲಿ ಯು ವಿಮಲ್ ಕುಮಾರ್ ಇವರ ತರಬೇತುದಾರ. ಬಹಳ ಸಮಯದ ಮೇಲೆ ಉದಯಿಸಿದ ಪ್ರತಿಭಾನ್ವಿತ ’ಬ್ಯಾಡ್ಮಿಂಟನ್ ಕ್ರೀಡಾಪಟು.’

ಸೈನಾ, ಜನಿಸಿದ್ದು ಹರಿಯಾಣದ 'ಹಿಸ್ಸಾರ್ ನಗರ'ದಲ್ಲಿ. ತಂದೆ, 'ಡಾ. ಹರ್ವೀರ್ ಸಿಂಗ್' ರವರು, ಹೈದರಾಬಾದ್’ ನ, ’(Directorate of Oil Seeds Research Centre), ನಲ್ಲಿ ಒಬ್ಬ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಅತ್ಯುತ್ತಮ ಆಟಗಾರ್ತಿ ಯೆಂದು ಜನ ಗುರುತಿಸಿದ್ದಾರೆ. ಸೈನಾ ’ಪಬ್ಲಿಸಿಟಿ’ ಆಕೆಯ ತಲೆಕೆಡಿಸಿಲ್ಲ. ೨೦ ರ ಹರೆಯದ ಸೈನಾಗೆ ಇನ್ನೂ ಹಲವಾರು ದೊಡ್ಡ ಸಾಧನೆಗಳನ್ನು ಇನ್ನೂ ಮಾಡಿ ತೋರಿಸಬೇಕಿದೆ. ಕಳೆದ ೭ ವರ್ಷಗಳಿಂದ ಸತತವಾಗಿ ತಮ್ಮ ಅಭ್ಯಾಸವನ್ನು ಮುಂದುವರೆಸಿದ್ದಾರೆ. ಪಾರ್ಟಿ, ಸಿನಿಮಾ, ಅತಿಯಾಗಿ ಸ್ನೇಹಿರೊಡನೆ ಓಡಾಟ ಯಾವುದೂ ಇಲ್ಲ. ತಪಸ್ಸಿನ ತರಹ ಅವರ ಕ್ರೀಡಾಭ್ಯಾಸ ಭರದಿಂದ ಸಾಗಿದೆ.

ಈಗಾಗಲೇ ಸೈನಾ, ಗೆದ್ದ ಕೆಲವಾರು ಪ್ರಮುಖ ಪ್ರಶಸ್ತಿಗಳು

[ಬದಲಾಯಿಸಿ]
  1. '೨೦೦೯ ರಲ್ಲಿ ’ವಿಶ್ವ ಬ್ಯಾಡ್ ಮಿಂಟನ್ ಫೆಡರೇಷನ್’ ನಿಂದ’ಭರವಸೆಯ ಆಟಗಾರ್ಥಿ,’ ಯೆಂಬ ಬಿರುದು ಲಭಿಸಿದೆ.
  2. ’ಸಿ ಎನ್ ಎನ್,’ ’ಐಬಿಎನ್,ಚಾನೆಲ್’ ಆಕೆಗೆ ಭಾರತದ ’೨೦೦೯ ಸಾಲಿನ ಶ್ರೇಷ್ಟ ಕ್ರೀಡಾಪಟು ಪ್ರಶಸ್ತಿ’ ನೀಡಿ ಗೌರವಿಸಿದೆ.
  3. ಅರ್ಜುನ್ ಪ್ರಶಸ್ತಿ ವಿಜೇತೆ

ವಿಶ್ವ ಬ್ಯಾಡ್ಮಿಂಟನ್ ಫೆಡರೆಶನ್ ಸೂಪರ್ ಸರಣಿ ಪ್ರಶಸ್ತಿಗಳು

[ಬದಲಾಯಿಸಿ]
  1. ಭಾರತ ಸೂಪರ್ ಸರಣಿ ೨೦೧೫
  2. ಆಸ್ಟ್ರೇಲಿಯ ಒಪನ್ ೨೦೧೪, ೨೦೧೬[]
  3. ಚೈನಾ ಒಪನ್ ಸೂಪರ್ ಸರಣಿ ೨೦೧೪
  4. ಡೆನ್ಮಾರ್ಕ್ ಒಪನ್ ಸೂಪರ್ ಸರಣಿ ೨೦೧೨
  5. ಹಾಂಗ್ ಕಾಂಗ್ ಸೂಪರ್ ಸರಣಿ ೨೦೧೦
  6. ಸಿಂಗಪೂರ್ ಸೂಪರ್ ಸರಣಿ ೨೦೧೦
  7. ಇಂಡೊನೇಶಿಯ ಸೂಪರ್ ಸರಣಿ - ೨೦೦೯, ೨೦೧೧, ೨೦೧೨

ಸುವರ್ಣ ವಿಶ್ವ ಬ್ಯಾಡ್ಮಿಂಟನ್ ಫೆಡರೆಶನ್ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿಗಳು

[ಬದಲಾಯಿಸಿ]
  1. ಸುವರ್ಣ ಭಾರತ ಒಪನ್ ಗ್ರ್ಯಾಂಡ್ ಪ್ರಿಕ್ಸ್ ೨೦೦೯, ೨೦೧೦, ೨೦೧೪, ೨೦೧೫
  2. ಸುವರ್ಣ ಸ್ವಿಸ್ ಒಪನ್ ಗ್ರ್ಯಾಂಡ್ ಪ್ರಿಕ್ಸ್ ೨೦೧೧, ೨೦೧೨
  3. ಸುವರ್ಣ ಥೈಲ್ಯಾಂಡ್ ಒಪನ್ ಗ್ರ್ಯಾಂಡ್ ಪ್ರಿಕ್ಸ್ ೨೦೧೨

ಸೈನಾರ ಕ್ರೀಡಾ-ಪ್ರತಿಭೆ ಅರಿವಾಗಿದ್ದು

[ಬದಲಾಯಿಸಿ]
  • ಸನ್ ’೨೦೦೮ ರ ಬೀಜಿಂಗ್ ಒಲಂಪಿಕ್ಸ್ ಆಟ’ದಲ್ಲಿ ’ಕ್ವಾರ್ಟರ್ ಫೈನಲ್’ ಸುತ್ತಿಗೆ ಪ್ರವೇಶ ಮಾಡಿದ್ದರು. ಅದಲ್ಲದೆ ಅದು 'ಮೊಟ್ಟಮೊದಲ ಒಲಿಂಪಿಕ್ಸ್' ಆಗಿದ್ದದ್ದು ಮತ್ತೊಂದು ವಿಶೇಷ. ’ವಿಶ್ವ-ಬ್ಯಾಡ್ ಮಿಂಟನ್ ಪ್ರತಿಯೋಗಿತೆ’ಯಲ್ಲಿ ಭಾಗವಹಿಸಿದಾಗ, ಸೈನಾ, ’ಚಿಕನ್ ಪಾಕ್ಸ್’ ನಿಂದ ಬಳಲುತ್ತಿದ್ದರು. ಇದುವರೆವಿಗೆ ’ವಿಶ್ವ ಬ್ಯಾಡ್ ಮಿಂಟನ್’ ರಂಗದಲ್ಲಿ ವಿದೇಶಿ ಚೈನ, ಇಂಡೊನೇಶಿಯಾದ ಆಟಗಾರ್ತಿಯರ ತಂದೆ ತಾಯಿಯಂದಿರು, ೮ ವರ್ಷದ ಬಾಲೆಯಾಗಿರುವಾಗಲೇ ಬ್ಯಾಡ್ಮಿಂಟನ್ ಶಿಬಿರಕ್ಕೆ ಸೇರಿಸಿದ್ದರು.
  • ಮುಂಜಾನೆ ೫ ಗಂಟೆಗೆ ಎದ್ದು, ೨೦ ಕಿ. ಮೀ ದೂರದ ವರೆಗೆ ಕ್ರೀಡಾಂಗಣಕ್ಕೆ ನಡೆದೇ ಹೋಗುತ್ತಿದ್ದರು. ಸೈನಾಗೆ ಸಹಾಯವಾಗಲೆಂದೇ ಅವಳ ತಂದೆ, ಕ್ರೀಡಾಂಗಣದ ಬಳಿಯೇ ಮನೆಮಾಡಿದರು. ಭಾರತದ ಈಗಿನ ಯಶಸ್ವೀ ಕ್ರೀಡಾಪಟು. ಏನನ್ನಾದರೂ ಸಾಧಿಸುವ ಛಲವಿದೆ. ಶ್ರದ್ಧೆ ಹಾಗೂ ತ್ಯಾಗಗಳನ್ನೂ ಮಾಡ ಬೇಕಾಗುತ್ತದೆ. 'ಮಹಿಳೆಯರ ವಿಶ್ವ ಬ್ಯಾಡ್ ಮಿಂಟನ್' ನಲ್ಲಿ ಎಲ್ಲರೂ ವಿಸ್ಮಯದಿಂದ ವೀಕ್ಷಿಸುತ್ತಿದ್ದಾರೆ.

ಸೈನಾ,-ಸಿಂಗಪುರ ಓಪನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ

[ಬದಲಾಯಿಸಿ]
  • ಸನ್, ೨೦೧೦ ರ ಜೂನ್ ೨೦ ರ ರವಿವಾರದಂದು, 'ಸೈನಾ ನೆಹವಾಲ್', 'ಸಿಂಗಪುರದ ಓಪನ್ ಪ್ರಶಸ್ತಿ'ಯನ್ನು ತಮ್ಮದಾಗಿರಿಸಿಕೊಂಡಿದ್ದಾರೆ. ಆಟದ ಮೊದಲು ಸ್ವಲ್ಪ ಕಳಪೆಯ ಪ್ರದರ್ಶನವೆಂದು ಕಂಡರೂ ನಂತರದ ಘಟ್ಟಗಳಲ್ಲಿ ಅಮೋಘ ಆಟದ ಪ್ರದರ್ಶನವನ್ನು ನೀಡಿದ 'ಭಾರತದ ಬ್ಯಾಡ್ ಮಿಂಟನ್ ತಾರೆ, ಸೈನಾ ನೆಹವಾಲ್', ಚೈನೀಸ್ ಅರ್ಹತಾ ಆಟಗಾರ್ತಿ, 'ಟಿಝು ಯಿಂಗ್ ತೈ' ರವರನ್ನು 'ನೇರ ಸೆಟ್' ಗಳಿಂದ ಮಣಿಸಿ, 'ಸಿಂಗಪುರ ಓಪನ್ ಪ್ರಶಸ್ತಿ'ಯನ್ನು ಗೆದ್ದರು.
  • ಡಿಸೆಂಬರ್ ೧೨ ೨೦೧೦ ರಂದು ನಡೆದ ಹಾಂಗ್ ಕಾಂಗ್ ಓಪನ್ ಸೀರಿಸ್ ಫೈನಲ್ ಪಂದ್ಯದಲ್ಲಿ ಚೀನಾದ ಎದುರಾಳಿ ವಾಗ್ ಷಿಕ್ಸಿಯನ್ ಅವರನ್ನು ಸೋಲಿಸಿ "ಹಾಂಗ್ ಕಾಂಗ್ ಓಪನ್ ಸೀರಿಸ್" ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಏಷ್ಯನ್ ಗೇಮ್ಸ್ ಪ್ರಶಸ್ತಿ ಗೆದ್ದಿದ್ದ ಚೀನಾದ ಷಿಕ್ಸಿಯನ್ ವಿರುದ್ಧ ಸೋತಿದ್ದ ಸೈನಾ ಇಂದು ಸೇಡು ತೀರಿಸಿ ಕೊಂಡರು. ಈ ಮುಂಚೆ ಸತತವಾಗಿ ಮೂರು ಸೂಪರ್ ಸೀರಿಸ್ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದರು.
  • ಸೈನಾ ಅವರಿಗೆ 2010 ವರ್ಷ ಸ್ಮರಣೀಯ ವರ್ಷ. ಈ ವರ್ಷದಲ್ಲಿ ಅವರು ಆರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.ಈ ಮೂಲಕ ವಿಶ್ವದ ನಂ.2 ಸ್ಥಾನದಲ್ಲಿರುವ ಸೈನಾ, ಮೊದಲ ಸ್ಥಾನದ ಸನಿಹಕ್ಕೆ ಬಂದಿದ್ದಾರೆ.2010ರಲ್ಲಿ ಭಾರತದ ಬ್ಯಾಡ್ಮಿಂಟನ್‌ ನಲ್ಲಿ ಸೈನಾರ ಅದ್ಬುತ ಸಾಧನೆಯನ್ನು ಗುರುತಿಸಿ ಅತ್ಯುನ್ನತ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಪದ್ಮಶ್ರಿ ಪ್ರಶಸ್ತಿ ಪಡೆದಿದ್ದಾರೆ.೨೦೧೨ರಲ್ಲಿ ಲಂಡನ್ನಲ್ಲಿ ನಡೆಯಲಿರುವ ಒಲಂಪಿಕ್ನಲ್ಲಿ ಚಿನ್ನದ ಪದಕ ಪಡೆಯುವ ಭರವಸೆಯಲ್ಲಿದ್ದಾರೆ.

ಚೀನಾ ಓಪನ್ ಸೂಪರ್ ಸೀರಿಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿ-2014

[ಬದಲಾಯಿಸಿ]
  • ಚೀನಾ ಓಪನ್ ಸೂಪರ್ ಸೀರಿಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿ-2014 ಯಲ್ಲಿ 16-11-2014: ಭಾನುವಾರ ಫುಜೌ (ಚೀನಾ} ಇಲ್ಲಿನ ಹೈಕ್ಸಿಯಾ ಒಲಿಂಪಿಕ್ ಸ್ಪೋರ್ಟ್ಸ್ ಕೇಂದ್ರದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ 21-12, 22-20 ಗೇಮ್‌ಗಳಿಂದ ಜಪಾನಿನ ಅನುಭವಿ ಅಕಾನೆ ಯಮಗುಚಿ ವಿರುದ್ಧ ಗೆಲುವು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು
  • ಪ್ರತಿಷ್ಠಿತ ಟೂರ್ನಿಯಲ್ಲಿ ಆರನೇ ಬಾರಿಗೆ ಪಾಲ್ಗೊಂಡಿದ್ದ ವಿಶ್ವದ 5ನೇ ರ‌್ಯಾಂಕಿನ ಆಟಗಾರ್ತಿ ಸೈನಾ, 17 ವರ್ಷದ ಜಪಾನಿನ ಯುವ ಆಟಗಾರ್ತಿಯನ್ನು 42 ನಿಮಿಷಗಳಲ್ಲಿ ಪರಾಭವಗೊಳಿಸಿ ಸಂಭ್ರಮಿಸಿದರು.
  • ಪಂದ್ಯದ ಬಳಿಕ ಸಂತಸ ವ್ಯಕ್ತಪಡಿಸಿದ ಸೈನಾ ನೆಹ್ವಾಲ್ ಈ ಪ್ರಶಸ್ತಿ ಗೆದ್ದಿರುವುದಕ್ಕೆ ಬಹಳ ಸಂತವಾಗುತ್ತಿದೆ. ಪ್ರಸಕ್ತ ಋತುವಿನಲ್ಲಿ ಇದು ನನ್ನ ಮೂರನೇ ಪ್ರಶಸ್ತಿ. ಕಠಿಣ ಪಂದ್ಯಗಳ ಪೈಕಿ ಇದು ಒಂದು. ಕಳೆದ ಕೆಲ ತಿಂಗಳುಗಳಿಂದ ಕಠಿಣ ಅಭ್ಯಾಸ ನಡೆಸಿದ್ದೆ, ನನ್ನ ಪ್ರಯತ್ನಕ್ಕೆ ತುಂಬ ಹರ್ಷವಾಗುತ್ತಿದೆ, ಎಂದು ಹೇಳಿದರು.
  • ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಹುಲಿಗಳೆಂದೇ ಪರಿಗಣಿಸಲಾಗಿರುವ ಚೀನಾದ ಘಟಾನುಘಟಿ ಆಟಗಾರರನ್ನು ಅವರ ತವರಿನಲ್ಲಿಯೇ ಭಾರತೀಯ ಆಟಗಾರರು ಮಣಿಸಿರುವುದು ಚಾರಿತ್ರಿಕ ಸಾಧನೆ. ಚೀನಾ ಓಪನ್‌ ಬ್ಯಾಡ್ಮಿಂಟನ್‌ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್‌ ಮತ್ತು ಕೆ.ಶ್ರೀಕಾಂತ್‌ ಗೆದ್ದಿರುವ ಪ್ರಶಸ್ತಿ ಭಾರತದ ಹೊಸ ಪೀಳಿಗೆಯ ಆಟಗಾರರಿಗೆ ಆತ್ಮವಿಶ್ವಾಸದ ಸಿಂಚನದಂತಿದೆ.
  • ಒಲಿಂಪಿಕ್ಸ್‌, ಏಷ್ಯನ್‌ ಕ್ರೀಡಾಕೂಟ, ಉಬೆರ್‌ ಕಪ್‌ಗಳಲ್ಲಿ ಕಂಚಿನ ಸಾಧನೆ ಮಾಡಿರುವ ಅನುಭವಿ ಸೈನಾ ನೆಹ್ವಾಲ್‌ ಹಿಂದೆ ಚೀನಾ ಓಪನ್‌ನಲ್ಲಿ ಐದು ಸಲ ನಿರಾಸೆ ಕಂಡಿದ್ದರು. ಆದರೆ ಸೈನಾ, ಸಿಂಧು, ಕಶ್ಯಪ್‌ ಸೇರಿದಂತೆ ಹಲ­ವರು ಹಿರಿಯರ ದಾರಿಯಲ್ಲಿ ಸಾಗಿ ಇನ್ನಷ್ಟು ಎತ್ತರಕ್ಕೆ ಏರಿದರು.(ಪ್ರಜಾವಾಣಿ/೧೮/೧೧/೨೦೧೪)

ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌

[ಬದಲಾಯಿಸಿ]
  • 2013ರಲ್ಲಿ ಮುಂಬಯಿಯಲ್ಲಿ ಆರಂಭವಾದ ಇಂಡಿಯನ್‌ ಬ್ಯಾಡ್ಮಿಂಟನ್‌ ಲೀಗ್‌ ಈಗ ದಿ.೧-೧-೨೦೧೬ ರಿಂದ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ ಆಗಿ ಮರುನಾಮಕರಣಗೊಂಡಿದೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ ಅನುಭವ ಹೊಂದಿರುವ ಸೈನಾ ನೆಹ್ವಾಲ್‌ ಪಿಬಿಎಲ್‌ ಟೂರ್ನಿಯಲ್ಲಿ ಅವಧ್‌ ವಾರಿಯರ್ಸ್‌ ತಂಡದ ಶಕ್ತಿ ಎನಿಸಿದ್ದಾರೆ.[]
  • ಸೈನಾ ನೆಹವಾಲ್ ಅವರ ಫೋಟೋ -ಆಟದ ವರಸೆಯಲ್ಲಿ:[[೨]]

ಇಂಡಿಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿ-2015

[ಬದಲಾಯಿಸಿ]
  • ಭಾರತದ ಸೈನಾ ನೆಹ್ವಾಲ್‌ ಮತ್ತು ಕೆ.ಶ್ರೀಕಾಂತ್‌ ಇಂಡಿಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ (29-3-2015) ಪ್ರಶಸ್ತಿ ಗೆದ್ದು ವಿಶೇಷ ಸಾಧನೆ ಮಾಡಿದ್ದಾರೆ.

ಸಿರಿ ಫೋರ್ಟ್‌ ಸ್ಪೋರ್ಟ್‌ ಕ್ರೀಡಾ ಸಂಕೀರ್ಣದಲ್ಲಿ ನಡೆದ ಸಿಂಗಲ್ಸ್‌ ವಿಭಾಗದ ಫೈನಲ್‌ ಹೋರಾಟದಲ್ಲಿ ಸೈನಾ 21–16, 21–14ರಲ್ಲಿ ಥಾಯ್ಲೆಂಡ್‌ನ ರಚಾನೊಕ್‌ ಇಂಟಾನೊನ್‌ ಅವರನ್ನು ಪರಾಭವಗೊಳಿಸಿದರು.ಅವರು ಮತ್ತೊಂದು ಚಿನ್ನ ಗಳಿಸಿದರು 29-3-2015 ರ ಶನಿವಾರ ಸೈನಾ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರ (ಒಂದನೇ) ಸ್ಥಾನಕ್ಕೆ ಏರಿ ಭಾರತದ ಬ್ಯಾಡ್ಮಿಂಟನ್‌ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದರು. []

  • ೨೦೧೬ ರ ಕೇಂದ್ರ ಸರ್ಕಾರ ನೀಡುವ ಪದ್ಮಭೂಷಣ ಪ್ರಶಸ್ತಿಯು ಬ್ಯಾಡ್ಮಿಂಟನ್‌ ಆಟಗಾರಳಾದ ಸೈನಾ ನೆಹ್ವಾಲ್ ಅವರಿಗೆ ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಲಭಿಸಿದೆ.೨೫-೧-೨೦೧೬ ರಂದು ಘೋಷಣೆ ಮಾಡಿದ್ದು ದಿ..೨೬-೧-೨೦೧೬ ರಂದು ಪ್ರದಾನ ಮಾಡಲಾಗುವುದು.[]

ಇಂಡೊನೇಷ್ಯಾ ಸೂಪರ್‌ ಸರಣಿ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಟೂರ್ನಿ 2016

[ಬದಲಾಯಿಸಿ]
  • 2016 ಇಂಡೊನೇಷ್ಯಾ ಸೂಪರ್‌ ಸರಣಿ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ನಾಲ್ಕನೇ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಭಾರತದ ಸೈನಾ ನೆಹ್ವಾಲ್‌ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರಿ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಸೈನಾ 21–11, 21–10ರ ನೇರ ಗೇಮ್‌ಗಳಿಂದ ಸ್ಥಳೀಯ ಆಟಗಾರ್ತಿ ಫಿತ್ರಿಯಾನಿ ಅವರನ್ನು ಪರಾಭವಗೊಳಿಸಿದರು.2009, 2010 ಮತ್ತು 2012ರ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿರುವ ಸೈನಾ ಎರಡನೇ ಸುತ್ತಿನ ಪಂದ್ಯದಲ್ಲಿ ಉತ್ತಮ ಆರಂಭ ಪಡೆದರು.
  • ಈಗಾಗಲೇ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಭಾರತದ ಆಟಗಾರ್ತಿ. ವಿಶ್ವ ಕ್ರಮಾಂಕಪಟ್ಟಿಯಲ್ಲಿ ಎಂಟನೇ ಸ್ಥಾನ ಹೊಂದಿರುವ ಸೈನಾ ಆ ಜಕಾರ್ತದಲ್ಲಿ ಮಿಂಚಿನ ಆಟ ಆಡಿದರು.prajavani.net/article/ಕ್ವಾರ್ಟರ್‌-ಫೈನಲ್‌-ತಲುಪಿದ-ಸೈನಾ[[೩]]

ಮಹಿಳೆಯರ ಆಸ್ಟ್ರೇಲಿಯನ್ ಓಪನ್ ಬಾಡ್ಮಿಂಟನ್ ಸೂಪರ್ ಸೀರಿಸ್ ೨೦೧೬

[ಬದಲಾಯಿಸಿ]
  • ಜೂನ್' 12, 2016, ವಿಶ್ವದ ನಂ 8 ಆಟಗಾರ್ತಿ ಸೈನಾ ಅವರು ಅಂತಿಮ ಹಣಾಹಣಿಯಲ್ಲಿ ಚೀನಾದ ಸನ್ ಯು ವಿರುದ್ಧ ಗೆಲುವು ಸಾಧಿಸಿದರು.ಆರಂಭಿಕ ಸೆಟ್ 11-21ರಲ್ಲಿ ಕಳೆದುಕೊಂಡ ಸೈನಾ ಮುಂದಿನ ಎರಡು ಸೆಟ್ ಗಳನ್ನು 21-14, 21-19ರಂತೆ ಗೆದ್ದುಕೊಂಡು ಚಾಂಪಿಯನ್ ಎನಿಸಿಕೊಂಡರು, ಕಳೆದ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಸೂಪರ್ ಸೀರಿಸ್ ಗೆದ್ದುಕೊಂಡರು. 2014ರ ಆಸ್ಟ್ರೇಲಿಯಾ ಟೂರ್ನಿ ಯಲ್ಲಿ ಚಾಂಪಿಯನ್‌ ಆಗಿದ್ದ ಸೈನಾ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ 20–10, 21–14ರಲ್ಲಿ ಆಸ್ಟ್ರೇಲಿಯಾದ ಜಾಯ್‌ ಲಿಯಿ ಎದುರು ಜಯ ಪಡೆದರು. ವಿಶ್ವದ ಎರಡನೇ ರ್‍ಯಾಂಕಿನ ಚೀನದ ಯಿಹಾನ್‌ ವಾಂಗ್‌ ಅವರನ್ನು 21-8, 21-12 ಸೆಟ್‌ಗಳ ಅಂತರದಿಂದ ಸೋಲಿಸಿ ಸೈನಾ ಫೈನಲ್‌ ಪ್ರವೇಶಿಸಿದ್ದರು. 26 ವರ್ಷ ವಯಸ್ಸಿನ ಸೈನಾ ನೆಹ್ವಾಲ್ ಅವರು ಒಟ್ಟಾರೆ ಏಳು ಸೂಪರ್ ಸೀರಿಸ್ ಕಿರೀಟ ಗೆದ್ದಿದ್ದಾರೆ. ಲಂಡನ್ನಿನ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ಅವರು ವಿಶ್ವದ ನಂ.2 ಆಟಗಾರ್ತಿ ವಾಂಗ್ ಯಿಯಾನ್ ಅವರನ್ನು ಸೆಮಿಫೈನಲ್ಸ್ ನಲ್ಲಿ ಸೋಲಿಸಿದ್ದರು.(750,000 ಡಾಲರ್ ಮೊತ್ತದ ಪ್ರಶಸ್ತಿ}[]
  • 10 ಲಕ್ಷ ಬಹುಮಾನ: ಭಾರತ ಬ್ಯಾಡ್ಮಿಂಟನ್ ಸಂಸ್ಥೆಯು (ಬಿಎಐ) ಸೈನಾ ಅವರಿಗೆ ₹ 10 ಲಕ್ಷ ನಗದು ಬಹುಮಾನ ಘೋಷಿಸಿದೆ. 94 Reads

, [೧೦]

ವಿಶ್ವ ರ್‍ಯಾಂಕಿಂಗ್‌ನಲ್ಲಿ ಐದನೇ ಸ್ಥಾನ

[ಬದಲಾಯಿಸಿ]
  • 01/07/2016
  • ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಬಡ್ತಿ ಪಡೆದಿದ್ದಾರೆ. ಮೊದಲು ಆರನೇ ಸ್ಥಾನದಲ್ಲಿದ್ದ ಸೈನಾ ಈಗ ಐದನೇ ಸ್ಥಾನ ಹೊಂದಿದ್ದಾರೆ. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಹೈದರಾಬಾದ್‌ನ ಆಟಗಾರ್ತಿ ಇತ್ತೀಚಿಗೆ ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು. ಜಪಾನ್‌ನ ನೊಜುಮಿ ಒಕುಹಾರ ಆರನೇ ಸ್ಥಾನ ಹೊಂದಿದ್ದಾರೆ.
  • 01/07/2016[:w:prajavani.net/article/ಸೈನಾಗೆ-ಒಂದು-ಸ್ಥಾನ-ಬಡ್ತಿ]
  • (26 Aug, 2016)ಸೈನಾ ನೆಹ್ವಾಲ್ ಅವರು ನಾಲ್ಕು ಸ್ಥಾನಗಳ ಕುಸಿತ ಕಂಡಿದ್ದಾರೆ. ಇದರೊಂದಿಗೆ ಅವರು ಒಂಬತ್ತನೇ ಸ್ಥಾನ ಪಡೆದುಕೊಂಡಿದ್ದಾರೆ.[೧೧]

ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ೨೦೧೭

[ಬದಲಾಯಿಸಿ]
  • 21 Jan, 2017;ಸರವಾಕ್‌, ಮಲೇಷ್ಯಾ;ವಿಶ್ವದ ಅಗ್ರರ್‍ಯಾಂಕ್‌ನ ಆಟಗಾರ್ತಿ ಯಾಗಿದ್ದ ಸೈನಾ ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್‌ ಗ್ರ್ಯಾಂಡ್‌ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿ ದ್ದಾರೆ. ಆದರೆ ಭಾರತದ ಇನ್ನೊಬ್ಬ ಆಟ ಗಾರ ಅಜಯ್‌ ಜಯರಾಮ್ ಸೋತು ಟೂರ್ನಿಯಿಂದ ನಿರ್ಗಮಿಸಿದರು. 20 ಜನ,ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಸೈನಾ 21–15, 21–14ರಲ್ಲಿ ಇಂಡೊನೇಷ್ಯಾದ ಫಿಟ್ರಿಯಾನಿ ಎದುರು ಗೆಲುವು ಪಡೆದರು. ವಿಶ್ವ ರ್‍ಯಾಂಕ್‌ನಲ್ಲಿ 40ನೇ ಸ್ಥಾನ ಹೊಂದಿ ರುವ ಫಿಟ್ರಿಯಾನಿ ಎದುರು ಸೈನಾ ಗೆಲುವು ಪಡೆದಿದ್ದು ಮೂರನೇ ಬಾರಿ.
  • 22 Jan, 2017 ಭಾನುವಾರ:
ಫೈನಲ್‌ಗೆ ಸೈನಾ ನೆಹ್ವಾಲ್‌;?
  • ಭಾರತದ ಸೈನಾ ನೆಹ್ವಾಲ್‌ ಅವರು ಮಲೇಷ್ಯಾ ಮಾಸ್ಟರ್ಸ್‌ ಗ್ರ್ಯಾಂಡ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಜಯಿಸಲು ಒಂದು ಹೆಜ್ಜೆಯಷ್ಟೇ ಬಾಕಿಯಿದೆ. ಮಂಡಿ ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಮೊದಲ ಮಹತ್ವದ ಟೂರ್ನಿ ಆಡುತ್ತಿರುವ ಅವರು ಶನಿವಾರ ನಡೆದ ಸೆಮಿಫೈನಲ್‌ನಲ್ಲಿ 21–13, 21–10ರಲ್ಲಿ ಯಿಪ್‌ ಪುಯಿ ಯಿನ್ ಎದುರು ಸುಲಭ ಗೆಲುವು ಪಡೆದರು.[೧೨]
  • 23 Jan, 2017
  • ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ ಹಣಾಹಣಿ ಯಲ್ಲಿ ಸೈನಾ 22–20, 22–20 ರ ನೇರ ಗೇಮ್‌ಗಳಿಂದ ಥಾಯ್ಲೆಂಡ್‌ನ ಪೊರ್ನ್‌ಪಾವೀ ಚೊಚುವಾಂಗ್‌ ಅವರನ್ನು ಪರಾಭವಗೊಳಿಸಿದರು. ಈ ಮೂಲಕ ವೃತ್ತಿ ಬದುಕಿನ 23ನೇ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಹೋದ ವರ್ಷ ನಡೆದಿದ್ದ ಆಸ್ಟ್ರೇಲಿಯಾ ಓಪನ್‌ ಬಳಿಕ ಸೈನಾ ಜಯಿಸಿದ ಮೊದಲ ಟ್ರೋಫಿ ಇದಾಗಿದೆ. [೧೩]


ಪ್ರಶಸ್ತಿ

[ಬದಲಾಯಿಸಿ]
  • ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆತಗಾರ್ತಿಯಾದ ಸೈನಾ ನೆಹ್ವಾಲ್ ಸಾಧನೆಗಳನ್ನು ಪರಿಗಣಿಸಿ ಇದುವರೆಗೆ ಅವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ಮುಖ್ಯವಾಗಿ ಅರ್ಜುನ ಪ್ರಶಸ್ತಿ (2009), ರಾಜೀವ್ ಗಾಂಧಿ ಖೇಲ್ ರತ್ನ (2010) ಪದ್ಮಶ್ರೀ (2010)ಗಳು ಸೇರಿವೆ.
೧.ಫೋಟೊ:ಸೂಪರ್ 'ಸೈನಾ' ವೃತ್ತಿ ಜೀವನ ಸಾಧನೆ ಕಿರುನೋಟ:

[[೪]][[೫]][https://web.archive.org/web/20160629230912/http://www.prajavani.net/sites/default/files/article_images/2016/06/13/pvec13xsaina%20nehwal.jpg Archived 2016-06-29 ವೇಬ್ಯಾಕ್ ಮೆಷಿನ್ ನಲ್ಲಿ.] Archived 2016-06-29 ವೇಬ್ಯಾಕ್ ಮೆಷಿನ್ ನಲ್ಲಿ.[[೬]]

[೧೪]

ಪ್ರಮುಖ ಮೈಲಿಗಲ್ಲುಗಳು

[ಬದಲಾಯಿಸಿ]

ಜಾಗತಿಕ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಪಟ್ಟಕ್ಕೇರಿದ ಮೊದಲ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ.

ವೃತ್ತಿಪರ ದಾಖಲೆಗಳು - ಉತ್ತಮ ಫಲಿತಾಂಶಗಳು

[ಬದಲಾಯಿಸಿ]
ಸ್ಪರ್ಧೆ ವರ್ಷ ಫಲಿತಾಂಶ
ಝೆಕೋಸ್ಲೋವಾಕಿಯಾ ಜ್ಯೂನಿಯರ್ ಓಪನ್ ೨೦೦೩ ವಿಜಯಿ
೨೦೦೪ ಕಾಮನ್‍ವೆಲ್ತ್ ಯುವ ಕ್ರೀಡಾಕೂಟ ೨೦೦೪ 2 ಬೆಳ್ಳಿ
ಏಷ್ಯನ್ ಸ್ಯಾಟಲೈಟ್ ಬ್ಯಾಡ್ಮಿಂಟನ್ ಪಂದ್ಯಾವಳಿ ೨೦೦೫ ವಿಜಯಿ
೨೦೦೬ ಕಾಮನ್‍ವೆಲ್ತ್ ಕ್ರೀಡಾಕೂಟ ೨೦೦೬ 3 ಕಂಚು
ಫಿಲಿಪ್ಪೀನ್ಸ್ ಫಿಲಿಪೈನ್ಸ್ ಓಪನ್ ಬ್ಯಾಡ್ಮಿಂಟನ್) ೨೦೦೬ ವಿಜಯಿ
ಏಷ್ಯನ್ ಸ್ಯಾಟಲೈಟ್ ಬ್ಯಾಡ್ಮಿಂಟನ್ ಪಂದ್ಯಾವಳಿ ೨೦೦೬ ವಿಜಯಿ
ಭಾರತ ಭಾರತೀಯ ರಾಷ್ಟ್ರೀಯ ಬ್ಯಾಡ್ಮಿಂಟನ್ ಸ್ಪರ್ಧೆಗಳು ೨೦೦೭ ವಿಜಯಿ
ಭಾರತ ಭಾರತದ ರಾಷ್ಟ್ರೀಯ ಕ್ರೀಡಾಕೂಟ ೨೦೦೭ 1 ಚಿನ್ನ
Chinese Taipei ೨೦೦೮ Chinese Taipei Open Grand Prix Gold ೨೦೦೮ ವಿಜಯಿ
ಭಾರತ ಭಾರತೀಯ ರಾಷ್ಟ್ರೀಯ ಬ್ಯಾಡ್ಮಿಂಟನ್ ಸ್ಪರ್ಧೆಗಳು ೨೦೦೮ ವಿಜಯಿ
೨೦೦೮ ಕಾಮನ್‍ವೆಲ್ತ್ ಯುವ ಕ್ರೀಡಾಕೂಟ ೨೦೦೮ 1 ಚಿನ್ನ
೨೦೦೮ BWF World Junior ಸ್ಪರ್ಧೆಗ ೨೦೦೮ ವಿಜಯಿ
೨೦೦೮ BWF Super Series Masters finals ೨೦೦೮ Semifinalist
ಇಂಡೋನೇಷ್ಯಾ ೨೦೦೯ Indonesia Super Series ೨೦೦೯ ವಿಜಯಿ
೨೦೦೯ BWF World ಸ್ಪರ್ಧೆಗಳು ೨೦೦೯ Quarter-finalist
ಭಾರತ ೨೦೦೯ Indian Open Grand Prix ೨೦೦೯ ವಿಜಯಿ
ಇಂಗ್ಲೆಂಡ್ ೨೦೧೦ All-England Super Series ೨೦೧೦ semifinalist
೨೦೧೦ ಬ್ಯಾಡ್ಮಿಂಟನ್ ಏಷ್ಯಾ ಸ್ಪರ್ಧೆಗಳು ೨೦೧೦ 3 ಕಂಚು
ಭಾರತ ೨೦೧೦ India Open Grand Prix Gold ೨೦೧೦ ವಿಜಯಿ
ಸಿಂಗಾಪುರ ೨೦೧೦ Singapore Open Super Series ೨೦೧೦ ವಿಜಯಿ
ಇಂಡೋನೇಷ್ಯಾ ೨೦೧೦ Indonesia Open Super Series ೨೦೧೦ ವಿಜಯಿ
France ೨೦೧೦ BWF World ಸ್ಪರ್ಧೆಗಳು ೨೦೧೦ Quarter-finalist
ಭಾರತ ೨೦೧೦ ಕಾಮನ್‍ವೆಲ್ತ್ ಕ್ರೀಡಾಕೂಟ ೨೦೧೦ 1 ಚಿನ್ನ

ಉಲ್ಲೇಖಗಳು

[ಬದಲಾಯಿಸಿ]
  1. name="news.oneindia.in">"Saina Nehwal | India Medal Hopes | Badminton | Delhi Commonwealth Games | Profile | Career – Oneindia News". News.oneindia.in. 2010-09-24. Archived from the original on 2012-01-04. Retrieved 2011-06-29.
  2. – Best World Ranking
  3. "ಆರ್ಕೈವ್ ನಕಲು". Archived from the original on 2016-03-03. Retrieved 2013-08-29. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  4. http://vijaykarnataka. indiatimes.com/sportshome/sports/Saina-Nehwal-No-1/articleshow/46729774.cms
  5. "ಆಸ್ಟ್ರೇಲಿಯಾ ಓಪನ್ನಿನ ಅಧಿಕೃತ ತಾಣ". Archived from the original on 2012-04-15. Retrieved 2016-06-13.
  6. www.prajavani.net/article/ಬ್ಯಾಡ್ಮಿಂಟನ್-ಲೀಗ್‌ಗೆ-ಇಂದು-ಚಾಲನೆ
  7. http://indianexpress.com/article/sports/badminton/saina-nehwal-becomes-world-no-1-after-carolina-marins-defeat-in-india-open/
  8. http://timesofindia.indiatimes.com/india/Padma-Awards-2016-Prominent-awardees/articleshow/50723510.cms
  9. kannada.oneindia.com/[[೧]]
  10. Mon.06/13/2016prajavaniw:prajavani.net/article/ಸೈನಾ-ಮುಡಿಗೆ-ಕಿರೀಟ
  11. ಕ್ರೀಡೆ:ಬ್ಯಾಡ್ಮಿಂಟನ್‌:26 Aug, 2016..prajavani
  12. ಮೊದಲ ಪ್ರಶಸ್ತಿಗೆ ಒಂದೇ ಹೆಜ್ಜೆ;22 Jan, 2017
  13. ಸೈನಾ ಮುಡಿಗೆ ಸಿಂಗಲ್ಸ್‌ ಕಿರೀಟ;ಪಿಟಿಐ;23 Jan, 2017
  14. w:prajavani.net/article/ಪ್ರಶಸ್ತಿಯ-ಹೆಬ್ಬಾಗಿಲಲ್ಲಿ-ಸೈನಾ

ಹೊರಗಿನ ಸಂಪರ್ಕಗಳು

[ಬದಲಾಯಿಸಿ]