ಪದ್ಮಶ್ರೀ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪದ್ಮ ಶ್ರೀ (ಹಾಗೂ ಪದ್ಮಶ್ರೀ)
Padma Shri India IIIe Klasse.jpg
ಪ್ರಶಸ್ತಿಯ ವಿವರ
ಮಾದರಿ ನಾಗರೀಕ
ವರ್ಗ ರಾಷ್ಟ್ರೀಯ
ಪ್ರಾರಂಭವಾದದ್ದು ೧೯೫೪
ಮೊದಲ ಪ್ರಶಸ್ತಿ ೧೯೫೪
ಕಡೆಯ ಪ್ರಶಸ್ತಿ ೨೦೧೩
ಒಟ್ಟು ಪ್ರಶಸ್ತಿಗಳು ೨೫೭೭
ಪ್ರಶಸ್ತಿ ನೀಡುವವರು ಭಾರತ ಸರ್ಕಾರ
ಪ್ರಶಸ್ತಿಯ ಶ್ರೇಣಿ
ಪದ್ಮಭೂಷಣಪದ್ಮ ಶ್ರೀ (ಹಾಗೂ ಪದ್ಮಶ್ರೀ) → none

ಪದ್ಮಶ್ರೀ ಕಲೆಗಳು, ಶಿಕ್ಷಣ, ಕೈಗಾರಿಕೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ ಮತ್ತು ಸಾರ್ವಜನಿಕ ಜೀವನವನ್ನು ಒಳಗೊಂಡಂತೆ ವಿವಿಧ ಕಾರ್ಯಕ್ಷೇತ್ರಗಳಲ್ಲಿ ವಿಶೇಷ ಕೊಡುಗೆಯನ್ನು ಗೌರವಿಸಲು ಸಾಮಾನ್ಯವಾಗಿ ಭಾರತೀಯ ನಾಗರಿಕರಿಗೆ ಭಾರತ ಸರ್ಕಾರ ನೀಡುವ ನಾಲ್ಕನೇ ಅತಿದೊಡ್ಡ ನಾಗರೀಕ ಪ್ರಶಸ್ತಿ.

ಪ್ರಶಸ್ತಿಯ ಬಗ್ಗೆ[ಬದಲಾಯಿಸಿ]

ಪದ್ಮಶ್ರೀ ನಾಗರಿಕ ಪ್ರಶಸ್ತಿಗಳ ಶ್ರೇಣಿಯಲ್ಲಿ ಭಾರತ ರತ್ನ, ಪದ್ಮ ವಿಭೂಷಣ ಮತ್ತು ಪದ್ಮ ಭೂಷಣಗಳ ನಂತರ ನಾಲ್ಕನೆಯದಾಗಿ ಬರುತ್ತದೆ. ಅದರ ಅಗ್ರಭಾಗದ ಮೇಲೆ, ದೇವನಾಗರಿಯಲ್ಲಿ "ಪದ್ಮ" ಮತ್ತು "ಶ್ರೀ" ಶಬ್ದಗಳು ಕಮಲ ಹೂವಿನ ಮೇಲೆ ಮತ್ತು ಕೆಳಗೆ ಕಾಣಿಸುತ್ತವೆ.

ಇತಿಹಾಸ[ಬದಲಾಯಿಸಿ]

ಪದ್ಮಶ್ರೀ ಕಲೆಗಳು, ಶಿಕ್ಷಣ, ಕೈಗಾರಿಕೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ,ಕ್ರೀಡೆ, ವೈಧ್ಯಕೀಯ ಮತ್ತು ಸಾರ್ವಜನಿಕ ಜೀವನವನ್ನು ಒಳಗೊಂಡಂತೆ ವಿವಿಧ ಕಾರ್ಯಕ್ಷೇತ್ರಗಳಲ್ಲಿ ವಿಶೇಷ ಕೊಡುಗೆಯನ್ನು ಗೌರವಿಸಲು ಸಾಮಾನ್ಯವಾಗಿ ಭಾರತೀಯ ನಾಗರಿಕರಿಗೆ ಭಾರತ ಸರ್ಕಾರ ನೀಡುವ ನಾಲ್ಕನೇ ಅತಿದೊಡ್ಡ ನಾಗರೀಕ ಪ್ರಶಸ್ತಿ. ಆದಾಗ್ಯೂ ಈ ಪ್ರಶಸ್ತಿಯನ್ನು ಭಾರತೀಯರಲ್ಲದ ಆದರೂ ಭಾರತಕ್ಕೆ ಅನೇಕ ವಿಧವಾಗಿ ಸೇವೆಸಲ್ಲಿಸಿದ ಆಯ್ದ ಕೆಲವರಿಗೆ ಕೂಡ ಈ ಪ್ರಶಸ್ತಿಯನ್ನು ನೀಡಲಾಗಿದೆ. ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಅಲ್ಲಲ್ಲಿ ಕೆಲವು ಅಸಮಾಧಾನಗಳು ಕೇಳಿಬಂದಿದ್ದು, ಅಱ ಕಲಾವಿಧರು ಇದರಿಂದ ವಂಚಿತರಾಗಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ.[ಸೂಕ್ತ ಉಲ್ಲೇಖನ ಬೇಕು] ಪ್ರಶಸ್ತಿಯನ್ನು ಗಮನಿಸಿದಾಗ, ಪದ್ಮ ಎಂಬ ಪದವು ಸಂಸ್ಕೃತದ ಕಮಲ ಎಂದೂ, ಶ್ರೀ ಪದವು ದೇವನಾಗರಿ ಇಂದ ತೆಗೆದುಕೊಳ್ಳಲ್ಪಟ್ಟಿದ್ದು, ಕಮಲ ಹೂವಿನ ಮೇಲೆ ಮತ್ತು ಕೆಳಗೆ ಕಾಣಿಸುತ್ತವೆ. ಇದರ ರೇಖಾ ವಿನ್ಯಾಸವು ಎರಡೂ ಬದಿಯಿಂದ ಕಂಚಿನ ಬಣ್ಣದ್ದಾಗಿದ್ದು, ಎಲ್ಲ ಉಬ್ಬು ರೇಖೆಗಳು ಬಿಳಿಯ ಚಿನ್ನದ ಬಣ್ಣದ್ದಾಗಿರುತ್ತವೆ. As of 2013, ೨೫೭೭ ಜನ ಈ ಪ್ರಶಸ್ತಿಯನ್ನು ಪಡೆದಿದ್ದಾರೆ.[೧][೨][೩][೪]

ಇವನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  3. ibnlive.in.com, full list of 2012 awardees
  4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಪದ್ಮಶ್ರೀ&oldid=639923" ಇಂದ ಪಡೆಯಲ್ಪಟ್ಟಿದೆ