ಮಹಾ ವೀರ ಚಕ್ರ
Jump to navigation
Jump to search
ಮಹಾ ವೀರ ಚಕ್ರ ಭಾರತದ ಎರಡನೇ ಅತಿ ದೊಡ್ಡ ಸೇನಾ ಪುರಸ್ಕಾರವಾಗಿದೆ. ಇದು ಶತ್ರುವಿನ ಇರುವಿಕೆಯಲ್ಲಿ ಅಪ್ರತಿಮ ಶೌರ್ಯ ಪ್ರದರ್ಶಿಸಿದ ಸೈನಿಕರಿಗೆ ಸಲ್ಲುತ್ತದೆ. ಈ ಪುರಸ್ಕಾರವನ್ನು ಮರಣೋತ್ತರವಾಗಿಯೂ ಕೊಡಬಹುದಾಗಿದೆ.
ಈ ಪದಕವು ಬೆಳ್ಳಿಯದ್ದಾಗಿದೆ ಹಾಗೂ ದುಂಡಗಿದೆ. ಇದರ ಮುಂಬದಿಯಲ್ಲಿ ಐದು ಕೋನಗಳುಳ್ಳ ಹರಿಕಾರ ನಕ್ಷತ್ರದ ಎದ್ದು ಕಾಣುವ ಕೆತ್ತನೆ ಹಾಗೂ ಭಾರತ ದೇಶದ ಲಾಂಛನಗಳಿವೆ. ಹಿಂಬದಿಯಲ್ಲಿ ಮಹಾ ವೀರ ಚಕ್ರ ಎಂದು ದೇವನಾಗರಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೆತ್ತಲಾಗಿದೆ. ಜೊತೆಗೆ ಎರಡು ಕಮಲಗಳ ಚಿತ್ರವಿದೆ. ಈ ಪುರಸ್ಕಾರವನ್ನು ಎದೆಯ ಎಡಭಾಗದಲ್ಲಿ ಧರಿಸುತ್ತಾರೆ.
೧೫೫ಕ್ಕಿಂತಲೂ ಹೆಚ್ಚು ಶೌರ್ಯ ಸಾಹಸಗಳನ್ನು ಮಹಾ ವೀರ ಚಕ್ರ ಪ್ರದಾನ ಮಾಡಿ ಗೌರವಿಸಲಾಗಿದೆ. ಇವುಗಳಲ್ಲಿ ಬಹಳಷ್ಟು ಪದಕಗಳು ೧೯೭೧ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಕೊಡಲಾಗಿದೆ.