ವೀರ ಚಕ್ರ
ಗೋಚರ
ವೀರ ಚಕ್ರವು ಭಾರತದ ಶೌರ್ಯ ಪುರಸ್ಕಾರವಾಗಿದ್ದು ಯುದ್ಧಭೂಮಿಯಲ್ಲಿ ಶೌರ್ಯ ಸಾಹಸಗಳನ್ನು ಪ್ರದರ್ಶಿಸಿದವರಿಗೆ ಪ್ರದಾನ ಮಾಡಲಾಗುವುದು. ಸೇನಾ ಪುರಸ್ಕಾರಗಳ ಪಟ್ಟಿಯಲ್ಲಿ ಇದರ ಆದ್ಯತೆ ಪರಮ ವೀರ ಚಕ್ರ ಮತ್ತು ಮಹಾ ವೀರ ಚಕ್ರಗಳ ನಂತರ ಮೂರನೆಯದ್ದಾಗಿದೆ.
ಈ ಪುರಸ್ಕಾರದ ಜೊತೆಗೆ ಧನಸಹಾಯವೂ ಸಂದಾಯವಾಗುತ್ತದೆ. ಇದು ವಿವಾದಾತ್ಮಕವಾಗಿದ್ದು ಫೆಬ್ರವರಿ ೧ ೧೯೯೯ರಂದು ಭಾರತ ಸರ್ಕಾರ ಈ ಪುರಸ್ಕಾರದ ವಿಜೇತರಿಗೆ ರೂ.೮೫೦ರ ಮಾಸಿಕ ಮಾಸಾಶನ ಘೋಷಿಸಿತು. ಬಹಳಷ್ಟು ರಾಜ್ಯಗಳು ತಮ್ಮದೇ ಮಾಸಾಶನಗಳನ್ನು ಕೊಡುತ್ತವೆ.
ಸ್ಥಾಪನೆ: ಭಾರತದ ರಾಷ್ಟ್ರಪತಿಗಳಿಂದ ೨೬ ಜನವರಿ ೧೯೫೦ ರಂದು, ಜಾರಿಗೆ ಬಂದದ್ದು ೧೫ ಆಗಸ್ಟ್ ೧೯೪೭ರಂದು.
ಮುಂಬದಿ: ಮೂರೂವರೆ ಸೆಂ.ಮಿ. ದುಂಡನೆಯ ಬೆಳ್ಳಿಯ ಪದಕ. ಐದು ಕೋನಗಳುಳ್ಳ ನಕ್ಷತ್ರ, ಇದರ ಮಧ್ಯದಲ್ಲಿ ಚಕ್ರ, ಇದರ ಮೇಲೆ ಭಾರತದ ಲಾಂಛನ. ತುದಿಯಲ್ಲಿ ಪದಕದ ಹೆಸರು.
ಹಿಂಬದಿ: ಎರಡು ಆಖ್ಯಾನಗಳು ಕಮಲದ ಹೂವುಗಳು ಇವುಗಳ ಮಧ್ಯೆ. ಇದರ ಮೇಲೆ ವೀರ ಚಕ್ರ ಎಂದು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ.
ರಿಬ್ಬನ್: ೩೨ ಮಿ.ಮಿ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಭಾರತೀಯ ವಾಯು ಸೇನೆಯ ವೀರ ಚಕ್ರ ವಿಜೇತರು Archived 2006-11-05 ವೇಬ್ಯಾಕ್ ಮೆಷಿನ್ ನಲ್ಲಿ.