ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಅಥವಾ ಸಂಗೀತ ನಾಟಕ ಅಕಾಡೆಮಿ ರತ್ನ ಸದಸ್ಯ ಸಂಗೀತ, ನಾಟಕ ಮತ್ತು ನೃತ್ಯ ಕ್ಷೇತ್ರದ ಕಲಾವಿದರಿಗೆ ಭಾರತ ಸರಕಾರ ನೀಡುವ ಅತ್ಯುಚ್ಚ ಗೌರವ. ಸಂಗೀತ ನಾಟಕ ಅಕಾಡೆಮಿ ನೀಡುವ ಈ ಗೌರವ ಯಾವುದೇ ಕಾಲದಲ್ಲಿಯೂ ಮೂವತ್ತನ್ನು ಮೀರುವುದಿಲ್ಲ.

ಇತಿಹಾಸ[ಬದಲಾಯಿಸಿ]

೧೯೫೪ರಲ್ಲಿ ಪ್ರಾರಂಭಿಸಲಾದ ಈ ಫೆಲೋಶಿಪ್ ಗೆ ಪಾತ್ರರಾದ ಮೊದಲಿಗರು ಕರ್ನಾಟಕ ಸಂಗೀತದ ಕಾರೈಕುಡಿ ಸಾಂಬಶೀವ ಅಯ್ಯರ್‍ ಮತ್ತು ಅರಿಯಾಕುಡಿ ರಾಮಾನುಜ ಅಯ್ಯಂಗಾರ್‍ , ಹಿಂದೂಸ್ತಾನಿ ಸಂಗೀತದ ಅಲ್ಲಾವುದ್ದೀನ್ ಖಾನ್ ಮತ್ತು ಹಫೀಜ್ ಆಲಿ ಖಾನ್ ಮತ್ತು ನಾಟಕ ಮತ್ತು ಚಲನಚಿತ್ರ ನಟ ಪೃಥ್ವೀರಾಜ ಕಪೂರ್‍.

ಇಲ್ಲಿಯವರೆಗಿನ ಫೆಲೋಗಳು[ಬದಲಾಯಿಸಿ]