ರಾಷ್ಟ್ರಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶರಾಷ್ಟ್ರಭಾಷೆ ಅನ್ನುವುದು ಒಂದು ರಾಷ್ಟ್ರವನ್ನು ಪ್ರತಿನಿಧಿಸುವ ಭಾಷೆಯಾಗಿರುತ್ತದೆ.

ಭಾರತದಲ್ಲಿ ರಾಷ್ಟ್ರಭಾಷೆ[ಬದಲಾಯಿಸಿ]

ಬಹುಭಾಷೆಗಳನ್ನು ಹೊಂದಿರುವ ಭಾರತದಂತಹ ಹಲವಾರು ದೇಶಗಳು ಯಾವುದೇ ರಾಷ್ಟ್ರಭಾಷೆಯನ್ನೂ ಹೊಂದಿಲ್ಲ. ಭಾರತದಲ್ಲಿ ಆಡಳಿತದ ಅನುಕೂಲಕ್ಕಾಗಿ ಪ್ರಮುಖ ಭಾಷೆಗಳನ್ನು "ಆಡಳಿತ ಭಾಷೆ" (official language) ಎಂದು ಮಾಡಿಕೊಳ್ಳಲಾಗಿದೆ. ನಮ್ಮ ದೇಶದ ೨೨ ಭಾಷೆಗಳಿಗೆ ಸಮಾನ ಸ್ಥಾನವನ್ನು ಸಂವಿಧಾನವು ನೀಡಿದ್ದು ೨೨ ಭಾಷೆಗಳೂ ದೇಶದ "ಅಧಿಕೃತ ಆಡಳಿತ ಭಾಷೆಗಳು" (Articles 343 and 345) ಎಂದು ಘೋಷಿಸಲಾಗಿದೆ. ಇದೇ ಆರ್ಟಿಕಲ್‌ನ ಪ್ರಕಾರ ಹಿಂದಿ ಕೂಡಾ ಒಂದು ಅಧಿಕೃತ ಭಾಷೆಯಾಗಿದೆಯೇ ಹೊರತು "ರಾಷ್ಟ್ರಭಾಷೆ" ಅಲ್ಲ.[೧] ಭಾರತವು ಒಂದು ಒಕ್ಕೂಟ ವ್ಯವಸ್ಥೆಯಾಗಿದ್ದು ಇಲ್ಲಿನ ಸ್ಥಳೀಯ ಭಾಷೆಗಳೇ ಆಯಾ ರಾಜ್ಯಗಳ ಆಡಳಿತ ಭಾಷೆಗಳಾಗಿವೆ. ಆದಾಗ್ಯೂ ಯಾವುದೇ ರಾಜ್ಯವು ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ತನ್ನ ಆಡಳಿತದಲ್ಲಿ ಬಳಸಿಕೊಳ್ಳುವ ಅವಕಾಶವನ್ನು ಸಂವಿಧಾನವು ಮಾಡಿ ಕೊಟ್ಟಿದೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]