ಜರವ ಭಾಷೆ
ಜರವ ಅಥವಾ ಜಾರ್ವಾ ಒಂಗನ್ ಭಾಷೆಗಳಲ್ಲಿ ಒಂದಾಗಿದೆ. ದಕ್ಷಿಣಅಂಡಮಾನ್ ಮತ್ತು ಮಧ್ಯ ಅಮಡಮಾನ್ ದ್ವಿಪದ ಪಶ್ಚಿಮ ಕರಾವಳಿಯಲ್ಲಿ ವಾಸಿಸುವ ಬೇಟೆಗಾರರು ಅಥವಾ ಆದಿವಾಸಿಗಳಾದ ಜರವ ಜನಾಂಗದವರು ಜರವ ಭಾಷೆಯನ್ನು ಮಾತನಾಡುತ್ತಾರೆ.
ಜರವ ಅಂದರೆ ಅಕೇಶಿಯ(Acacia) ಭಾಷೆಯಲ್ಲಿ "ವಿದೇಶಿಯರು" ಅಥವಾ "ಅಪರಿಚಿತರು" ಎಂದರ್ಥವನ್ನು ಕೊಡುತ್ತದೆ.(ತಮ್ಮನ್ನು ಆಂಗ್ ಎಂದು ಕರೆಯುತ್ತಾರೆ).[೧] ಅಂಡಮಾನ್ ದ್ವಿಪಗಳಲ್ಲಿ ಉಳಿದಿರುವ ನೆಗ್ರಿಟೋ ಅವಶೇಷಗಳು ಜರವಗಳು. ೨೦೧೧ ಜನಗಣತಿಯ ಪ್ರಕಾರ ೨೭೦ ಜನ ಜರವಗಳಿದ್ದಾರೆ. ಇವರು ಆದಿವಾಸಿಗಳಾಗಿದ್ದು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ.
ಜರವ ಭಾಷೆಗಳಲ್ಲಿ ಎರಡು ವಿಧಗಳಿವೆ. ಒಂದು ಉತ್ತರ ಅಂಡಮಾನ್ ಮತ್ತು ದಕ್ಷಣ ಮಧ್ಯ ನಲ್ಲಿ ಮಾತನಾಡುತ್ತಾರೆ. ಭಾಷೆಯ ಮೂಲ ಅಂಡಮಾನಿಸ್ ಗಳಿಂದ ಬಂದಿದೆ. ಲಿಟಲ್ ಅಂಡಮಾನ್ ನಿಂದ ಒಂಗೆ,ಜರವ ಮತ್ತು ಸೆಂಟನಿಲೀಸ್ ಗಳು ಕವಲೋಡೆಯುತ್ತಾರೆ ಅದಕ್ಕೆ ಬಹುಶಃ ಸಂಸ್ಕ್ರತಿ ಮತ್ತು ಭಾಷೆಗಳು ಒಂದೆ ರೀತಿಯಾಗಿವೆ.[೨]
ಜರವ ಭಾಷೆಯಲ್ಲಿ ೪೧ಶಬ್ದಗಳು,೨೮ ವ್ಯಂಜನಗಳು, ೧೩ ಸ್ವರಗಳಿವೆ ಆದರೆ ಜರವ ಭಾಷೆಗೆ ಬರವಣಿಗೆಯ ವ್ಯವಸ್ಥಯಿಲ್ಲ.ಗಮನಿಸಿದ ವಿನ್ಯಸಗಳಲ್ಲಿ ಅಲೆ ಅಲೆಯ ರೇಖೆಗಳನ್ನು ಎಳೆದು ಸಂವಹನವನ್ನು ಮಾಡಲಾಗುತ್ತದೆ.[೩]
ಒಂಗನ್ ಭಾಷೆಯಿಂದ ಜರವಗಳು ಸಂವಹನಮಾಡುತ್ತಾರೆ ಎಂದು ಭಾಷ ಶಾಸ್ತ್ರದ ಪಾಕಾರ ತಿಳಿದು ಬಂದಿದೆ.ಜರವ ಭಾಷೆಯು ಹಿಂದಿನ ಕಾಲದಿಂದಲು ಸ್ವತಂತ್ರವಾಗಿದೆ.ಅಂಡಮಾನಿಸ್ ಗಳಿಗೂ ಮತ್ತು ಜರವಗಳಿಗೂ ಭಾಷೆಗಳಿಂದ ದ್ವೇಷ ಭಾವನೆಗಳು ಉಂಟಾಗಿಲ್ಲ.೧೯ನೇ ಶತಮಾನದಿಂದ ಜರವಗಳು ಹೊಸ ಸಂಪರ್ಕವನ್ನು ಬಯಸಲು ಪ್ರಂಭಿಸಿದರು.ಅಂತಹ ಸಮಯದಲ್ಲಿ ಹಿಂದಿಭಾಷೆಯು ಜರವಗಳ ಮೇಲೆ ಪ್ರಭಾವ ಬೀರುತ್ತದೆ.ಆದರೆ ಜರವಗಳಿಗೆ ಜರವ ಭಾಷೆ ಮಾತ್ರ ಅಧಿಕೃತವಾಗಿದೆ.
ಭಾಷೆಯ ಗುಣಲಕ್ಷಣಗಳು
[ಬದಲಾಯಿಸಿ]ಜರವ ಭಾಷೆಯು ತನ್ನ ಸಮುದಾಯದ ಏಕ ಭಾಷೆಯಾಗಿದೆ.ಭಾರತದ ದೇಶದಲ್ಲಿರುವಂತಹ ಅಧಿಕೃತ ಭಾಷೆಗಳಿಗೆ ಅದು ಅವಲಂಬನೆಯಾಗಿಲ್ಲ. ಭಾಷೆಯ ರೊಪವು ವೀಶೇಷವಾಗಿದೆ ಕ್ರಿಯಪದಗಳನ್ನು ಪ್ರತ್ಯೇಯಗಳಿಗೆ ಜೊಡಿಸಲಾಗಿದೆ. ಭಾಷ ಅಧ್ಯಯನದ ಪ್ರಕಾರ ಹೇಳುವುದಾದರೆ ನಾಮ ಪದ ಅಲಂಕಾರಿಕವಾದರೆ ಕ್ರಿಯಾಪದವು ವಿಷಯದ ಮುಂಚಿತವಾಗಿಯೆ ಬರುತ್ತದೆ.
ಜರವ ಭಾಷೆಯ ಪದಗಳು
[ಬದಲಾಯಿಸಿ]ಆನೆ-ಪೋಡ,ಹಂದಿ-ಓವ ಶಬ್ದಗಳಿಂದ ಕರೆಯುತ್ತಾರೆ. ಭಾರತದಲ್ಲಿ ಆನೇಕ ಭಾಷೆಗಳಿಗೆ ಬರವಣಿಗೆಯಿಲ್ಲದಿದ್ದರು ಸಂವಹನದ ಸ್ವತಂತ್ರವಿದೆ.
ಜರವಗಳ ಇತ್ತಿಚೀನ ಬೆಳವಣಿಗೆಗಳು
[ಬದಲಾಯಿಸಿ]ಜರವಗಳು ಇಂದಿನ ದಿನಗಳಲ್ಲಿ ತಮ್ಮ ಭಾಷ ಫ್ರೌಢಮೆಯನ್ನು ಹೆಚ್ಚಿಸಿಕೊಂಡಿದ್ದಾರೆ.ಪ್ರವಾಸಿಗಳು ಭೇಟಿಮಾಡಿ ತೊಂದರೆಗಳನ್ನು ಕೊಡುತಿದ್ದಾರೆ.ಪ್ರವಾಸಿಗಳ ವೀಕ್ಷಣೆಯಿಂದ ಜರವಗಳು ಹೊಸ ಸಂಪರ್ಕವನ್ನು ಹೊದುತ್ತಿದ್ದಾರೆ.ಜರವಗಳ ಅವನತಿಗೆ ಬಲವಾದ ಕಾರಣವಾಗಿರುವುದರಿಂದ ಸರ್ವೋಚ್ಛ ನ್ಯಾಯಲಯವು ಜರವಗಳಿಗೆ ರಕ್ಷಣೆ ಕೊಡಲು ಮುಂದಾಗಿದೆ.ಜರವಗಳನ್ನು ಹೊರಗಿನವರು ಸಂಪರ್ಕಿಸುವಂತಿಲ್ಲ ಎಂದು ಆಜ್ಞೆಯನ್ನು ಹೊರಡಿಸಿದೆ.
ಜರವ ಚಿಕ್ಕ ಬುಡಕಟ್ಟು ಜನಾಂದವರಲ್ಲಿ ಜರವ ಭಾಷೆಯು ಅಧಿಕೃತ ಭಾಷೆಯಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ http://www.endangeredlanguages.com/lang/3845
- ↑ "ಆರ್ಕೈವ್ ನಕಲು" (PDF). Archived from the original (PDF) on 2020-10-29. Retrieved 2019-10-06.
- ↑ https://pure.mpg.de/rest/items/item_1896628/component/file_1896627/content