ವಿಷಯಕ್ಕೆ ಹೋಗು

ಅಂಡಮಾನ್ ದ್ವೀಪಗಳು

Coordinates: 12°30′N 92°45′E / 12.500°N 92.750°E / 12.500; 92.750
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂಡಮಾನ್ ದ್ವೀಪಗಳು
ನಕ್ಷೆಯಲ್ಲಿ ಅಂಡಮಾನ್ ದ್ವೀಪಗಳು .
Geography
LocationBay of Bengal
Coordinates12°30′N 92°45′E / 12.500°N 92.750°E / 12.500; 92.750
ArchipelagoAndaman and Nicobar Islands
Total islands572
Major islandsNorth Andaman Island, Little Andaman, Middle Andaman Island
ವಿಸ್ತೀರ್ಣ೮,೨೪೯ km (೩,೧೮೫ sq mi)
ಸಮುದ್ರ ಮಟ್ಟದಿಂದ ಎತ್ತರ೭೩೨ m (೨,೪೦೨ ft)
ಸಮುದ್ರ ಮಟ್ಟದಿಂದ ಎತ್ತರದ ಸ್ಥಳSaddle Peak
Country
India
Union TerritoryAndaman and Nicobar Islands
Capital cityPort Blair
Demographics
Population343,125 (as of 2011)
ಸಾಂದ್ರತೆ೪೮ /km (೧೨೪ /sq mi)
Ethnic groupsMainland Indians
Jarawa
Onge
Sentinelese
Great Andamanese
Additional information
Official websitewww.and.nic.in

ಅಂಡಮಾನ್ ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿರುವ ಭಾರತದ ಆಧೀನಕ್ಕೆ ಒಳಪಟ್ಟ ದ್ವೀಪ ಸಮೂಹ. ಈ ಸಮೂಹದಲ್ಲಿರುವ ಹೆಚ್ಚಿನ ದ್ವೀಪಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ ಎಂಬ ಹೆಸರಿನಲ್ಲಿ ಕೇಂದ್ರಾಧೀನ ಪ್ರದೇಶವಾಗಿ ಭಾರತಕ್ಕೆ ಸೇರಿದ್ದರೂ ಕೆಲವು ಸಣ್ಣ ದ್ವೀಪಗಳು ಮ್ಯಾನ್ಮಾರ್ ದೇಶಕ್ಕೆ ಸೇರಿವೆ.[]

ಇತಿಹಾಸ

[ಬದಲಾಯಿಸಿ]

ಪುರಾತತ್ವ ಶಾಸ್ತ್ರದ ಅನುಸಾರ ಅಂಡಮಾನ್ ದ್ವೀಪ ಸಮೂಹಗಳಲ್ಲಿ ಜನವಸತಿ ಸಾವಿರಾರು ವರ್ಷಗಳಿಂದಲೂ ಕಂಡುಬರುತ್ತದೆ.ಮಧ್ಯ ಶಿಲಾಯುಗದಿಂದ ದೇಶೀಯ ಅಂಡಮಾನ್ ಜನಾಂಗ ೧೮ನೆಯ ಶತಮಾನದವರೆಗೆ ಅಲ್ಲಲ್ಲಿ ಚದುರಿದಂತೆ ಬದುಕಿದ್ದರು.ಪ್ರಸಿದ್ಧ ಭೂಗೋಳ ಶಾಸ್ತ್ರಜ್ಞ ಟಾಲೆಮಿ ಈ ದ್ವೀಪ ಸಮೂಹಗಳ ಅರಿತಿದ್ದು ತನ್ನ ಬರಹಗಳಲ್ಲಿ ಬೇರೊಂದು ಹೆಸರಿನಲ್ಲಿ ಉಲ್ಲೇಖಿಸಿದ್ದಾನೆ.೧೦ನೆಯ ಶತಮಾನದ ಪರ್ಷಿಯನ್ ನಾವಿಕ ಬುಜುರ್ಗ್ ಇಬಿನ್ ಶೆಹ್ರಿಯಾರ್ ತನ್ನ ಪ್ರವಾಸ ಕಥನ ಐಜಾಬ್ ಅಲ್ ಹಿಂದ್ (ಭಾರತದ ಅದ್ಭುತಗಳು) ಎಂಬ ಪುಸ್ತ್ರಕದಲ್ಲಿ ಈ ದ್ವೀಪ ಸಮೂಹಗಳಿಗೆ ಅಂಡಮಾನ್ ಎಂದೇ ಉಲ್ಲೇಖಿಸಿ ಇಲ್ಲಿ ನರಭಕ್ಷಕ ಜನಾಂಗದವರು ವಾಸಿಸುತ್ತಿದ್ದಾರೆ ಎಂದು ಬರೆದಿದ್ದಾನೆ.ಕ್ರಿ.ಶ. ೮೦೦ ರಿಂದ ೧೨೦೦ರ ವರೆಗೆ ತಮಿಳು ಚೋಳರು ತಮ್ಮ ಸಾಮ್ರಾಜ್ಯವನ್ನು ಸಮುದ್ರಾಚೆಗೆ ಈಗಿನ ಮಲೇಷ್ಯಾದವರೆಗೆ ವಿಸ್ತರಿಸಿದರು. ರಾಜೇಂದ್ರ ಚೋಳ (೧೦೧೪ ರಿಂದ ೧೦೪೨) ಈ ದ್ವೀಪ ಸಮೂಹಗಳನ್ನು ಸುಮಾತ್ರಶ್ರೀವಿಜಯ ಸಾಮ್ರಾಜ್ಯದ ಮೇಲೆ ದಂಡೆತ್ತಲು ಆಯಕಟ್ಟಿನ ನೌಕಾನೆಲೆಗಳನ್ನಾಗಿ ಮಾಡಿಕೊಂಡಿದ್ದನು.೧೭೯೮ರಲ್ಲಿ ಬ್ರಿಟಿಷರು ಇಲ್ಲಿ ತಮ್ಮ ನೌಕಾ ನೆಲೆ ಮತ್ತು ಕೈದಿಗಳಿಗಾಗಿ ವಸಾಹತನ್ನು ಸ್ಥಾಪಿಸಿದರು.೧೮೫೭ರ ಪ್ರಧಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೆರೆಸಿಕ್ಕ ಕೈದಿಗಳನ್ನು ನೆಲೆಗೊಳಿಸಲು ಪೋರ್ಟ್ ಬ್ಲೇರ್‍ ನಲ್ಲಿ ಬ್ರಿಟಿಷರು ದೊಡ್ಡ ಬಂಧೀಖಾನೆಯನ್ನು ನಿರ್ಮಿಸಿದರು.ಎರಡನೆಯ ಮಹಾಯುದ್ಧ ದಲ್ಲಿ ಈ ದ್ವೀಪ ಸಮೂಹಗಳು ಜಪಾನ್ ದೇಶದ ಸೇನೆಯ ವಶವಾಯಿತು. ಇಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ನೇತೃತ್ವದಲ್ಲಿ ಸ್ವತಂತ್ರ ಭಾರತದ ಮೊದಲ ಸರಕಾರವನ್ನು ರಚಿಸಲಾಯಿತು. chola raja mahavera nagaraj baruthane

ಭೌಗೋಳಿಕ ಲಕ್ಷಣಗಳು

[ಬದಲಾಯಿಸಿ]
Andaman Islands

ಉತ್ತರ ದಕ್ಷಿಣವಾಗಿ ಹಬ್ಬಿದ ೩೦೦ರಿಂದ ೭೦೦ ಮೀಟರ್ ಎತ್ತರದ ಬೆಟ್ಟಗಳು ಮತ್ತು ಅದರಿಂದಾದ ಕಣಿವೆಗಳು ಇಲ್ಲಿಯ ಮೇಲ್ಮೈ ಲಕ್ಷಣ.ಕರಾವಳಿಯಲ್ಲಿ ಅನೇಕ ಕೊಲ್ಲಿಗಳಿವೆ.ನದಿಗಳೆಲ್ಲವೂ ಸಣ್ಣವು.ಸಾಗರಿಕ ಉಷ್ಣವಲಯದ ಹವಾಮಾನ ಇಲ್ಲಿಯದು.ನಿತ್ಯಹರಿದ್ವರ್ಣದ ಕಾಡು ಗಳು, ಮ್ಯಾನ್‍ಗ್ರೋವ್ ಸಸ್ಯಗಳು ಇಲ್ಲಿಯ ಸಸ್ಯ ವೈವಿಧ್ಯಗಳು.ಇಲ್ಲಿ ನಾಟಾ ಮಾಡಬಹುದಾದ ಸುಮಾರು ೨೦೦ಕ್ಕೂ ಹೆಚ್ಚಿನ ಸಸ್ಯ ಪ್ರಭೇದಗಳು ಕಂಡು ಬರುತ್ತವೆ.ವಾಣಿಜ್ಯಿಕ ಬಳಕೆಯಲ್ಲಿರುವ ಪ್ರಭೇದಗಳಲ್ಲಿ ಗರ್ಜನ್, ಪಡೋಕ್ ಮುಖ್ಯವಾದರೆ ಇತರೆ ಮರಗಳಲ್ಲಿ ರುದ್ರಾಕ್ಷ, ಧೂಪ ಮರ ಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಜನಸಂಖ್ಯೆ

[ಬದಲಾಯಿಸಿ]

೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೩,೪೩,೧೨೫. ಈ ಜನಸಂಖ್ಯೆಯಲ್ಲಿ ಇಲ್ಲಿಯ ಮೂಲವಾಸಿಗಳಾದ ಅಂಡಮಾನೀ ಅದಿವಾಸಿಗಳ ಸಂಖ್ಯೆ ಅತ್ಯಲ್ಪ..ಇದು ಐದು ಮುಖ್ಯ ಪಂಗಡಗಳಾದ ಗ್ರೇಟ್ ಅಂಡಮಾನೀಸ್, ಜರವಾ,ಜಂಗಿಲ್,ಒಂಗೇಸ್ ಮತ್ತು ಸೆಂಟನಲೀಸ್ ಗಳಲ್ಲಿ ಹರಡಿಕೊಂಡಿದೆ.ಹಲವಾರು ಜನಾಂಗಗಳು ನಶಿಸಿ ಹೋಗಿವೆ.ಇವುಗಳು ಪ್ರಪಂಚದ ಪ್ರಾಚೀನ ಜನಾಂಗಗಳಿಗೆ ಸೇರಿದವರು.

2011 ಸಂವತ್ಸರ ಜನಗಣನೆ ಪ್ರಕಾರ ಜನಸ್ಂಖ್ಯೆ[]

ಪ್ರದೇಶ ಗಂಡು ಹೆಣ್ಣು ಒಟ್ಟಿಗೆ
ಅಂಡಮಾನ್ ನಿಕೋಬಾರ್ ದ್ವೀಪಗಳು 202871 177710 350581
ಜಿಲ್ಲೆಗಳಯಲ್ಲಿ
ದಕ್ಷಿಣ ಅಂಡಮಾನ್ 127283 110859 238142
ಉತ್ತರ ಮತ್ತು ಮಧ್ಯ ಅಂಡಮಾನ್ 54861 50736 105597
ನಿಕೋಬಾರ್ 20727 16115 36842

2011 ಸಂವತ್ಸರ ಜನಗಣನೆ ಪ್ರಕಾರ ಓದಿದವರ ಜನಸಂಖ್ಯೆ[]

ಪ್ರದೇಶ ಗಂಡು ಹೆಣ್ಣು ಒಟ್ಟಿಗೆ
ಅಂಡಮಾನ್ ನಿಕೋಬಾರ್ದ್ವೀಪಗಳು 164377 129904 294281
ದಕ್ಷಿಣ ಅಂಡಮಾನ್ 105794 84472 190266
ಉತ್ತರ ಮತ್ತು ಮಧ್ಯ ಅಂಡಮಾನ್ 43186 35497 78683
ನಿಕೋಬಾರ್ 15397 9935 25332

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖನಗಳು

[ಬದಲಾಯಿಸಿ]
  1. "Welcome to the Official Website of Andaman & Nicobar Tourism". andamans.gov.in. Retrieved 2014-03-05.
  2. ೨.೦ ೨.೧ "Population and Literacy Rate of Andaman & Nicobar Islands". and.nic.in. Retrieved 2015-03-05.