ವಿಷಯಕ್ಕೆ ಹೋಗು

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಂಡಮಾನ್ ಮತ್ತು ನಿಕೋಬಾರ್ ಇಂದ ಪುನರ್ನಿರ್ದೇಶಿತ)
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು
Map of India with the location of ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು highlighted.
Map of India with the location of ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು highlighted.
ರಾಜಧಾನಿ
 - ಸ್ಥಾನ
ಪೋರ್ಟ್ ಬ್ಲೇರ್
 - 11.68° N 92.77° E
ಅತಿ ದೊಡ್ಡ ನಗರ ಪೋರ್ಟ್ ಬ್ಲೇರ್
ಜನಸಂಖ್ಯೆ (2001)
 - ಸಾಂದ್ರತೆ
356,152 1 (32)
 - 43/km²
ವಿಸ್ತೀರ್ಣ
 - ಜಿಲ್ಲೆಗಳು
8,249 km² (27th)
 - 2
ಸಮಯ ವಲಯ IST (UTC+5:30)
ಸ್ಥಾಪನೆ
 - Lt. Governor
ನವೆಂಬರ್ ೧ ೧೯೫೬
 - ರಾಮಚಂದ್ರ ಗಣೇಶ್ ಕಪ್ಸೆ
ಅಧಿಕೃತ ಭಾಷೆ(ಗಳು) ಹಿಂದಿ, ಬೆಂಗಾಲಿ ಭಾಷೆ, ಮಲಯಾಳಂ, ತೆಲಗು, ಪಂಜಾಬಿ ಭಾಷೆ, ತಮಿಳು, ನಿಕೊಬಾರಿ ಭಾಷೆ, ಆಂಗ್ಲ
Abbreviation (ISO) IN-AN

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು ರಾಜ್ಯದ ಮುದ್ರೆ
1: population as per final 2001 Census of India figures
ಅಂಡಮಾನ್ ಇಲ್ಲಿಗೆ ಕರೆತರುತ್ತದೆ. ಅಂಡಮಾನ್ ಹೆಸರಿನ ಚಲನಚಿತ್ರದ ಬಗೆಗಿನ ಮಾಹಿತಿಗೆ ಈ ಪುಟವನ್ನು ನೋಡಿ
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳ ನಕ್ಷೆ. ಪೋರ್ಟ್ ಬ್ಲೇರ್ನ ಸುತ್ತಲಿನ ಪ್ರದೇಶ ಒಳ ಚಿತ್ರದಲ್ಲಿ

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು - ಭಾರತ ದೇಶಕ್ಕೆ ಸೇರಿದ ಕೇಂದ್ರಾಡಳಿತ ಪ್ರದೇಶಗಳಲ್ಲೊಂದು. ಈ ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿವೆ. ಇವು ಭಾರತದ ಭೂಭಾಗದಿಂದ ಸುಮಾರು ೧೨೦೦ ಕಿ.ಮೀ. ದೂರದಲ್ಲಿವೆ. ಪೋರ್ಟ್ ಬ್ಲೇರ್ ಇದರ ರಾಜಧಾನಿ.

ಈ ಕೇಂದ್ರಾಡಳಿತ ಪ್ರದೇಶ ಕೊಲ್ಕತ್ತಾ ಹೈಕೋರ್ಟ್ ಗೆ ಸಂಬಂಧಿಸಿದೆ .. ಸಮೀಪದ ದೇಶ- ಮಯನ್ಮಾರ್

ಭೌಗೋಳಿಕ[ಬದಲಾಯಿಸಿ]

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸುಮಾರು 223 ದ್ವೀಪಗಳನ್ನು ಒಳಗೊಂಡಿರುವ ಈ ಸ್ತೋಮ ಬಂಗಾಳಕೊಲ್ಲಿಯ ಪೂರ್ವಭಾಗದಲ್ಲಿದೆ. (ಉ.ಅ. 70 _ 130 ಮತ್ತು ರೇ 92 ಡಿಗ್ರಿ _95 ಡಿಗ್ರಿ). ವಿಸ್ತೀರ್ಣ 3215 ಚದರ ಮೈಲಿಗಳು. ಅಂಡಮಾನ್ ದ್ವೀಪ ಸ್ತೋಮದಲ್ಲು ಉತ್ತರ ಅಂಡಮಾನ್, ಮಧ್ಯ ಅಂಡಮಾನ್, ದಕ್ಷಿಣ ಅಂಡಮಾನ್ ಮತ್ತು ಪುಟ್ಟ ಅಂಡಮಾನ್‍ಗಳೆಂಬ ನಾಲ್ಕು ದ್ವೀಪಗಳಿವೆ. ನಿಕೋಬಾರ್ ಸ್ತೋಮದಲ್ಲಿ ಕಾರ್‍ನಿಕೋಬಾರ್ ಪುಟ್ಟ ನಿಕೋಬಾರ್ ಮತ್ತು ಗ್ರೇಟ್ ನಿಕೋಬಾರ್ ಎಂಬ ಮೂರು ದ್ವೀಪಗಳಿವೆ. ಈ ಎರಡು ಸ್ತೋಮಗಳನ್ನು ಹತ್ತನೆಯ ಡಿಗ್ರಿಯ ಕಡಲುಗಾಲುವೆ ಬೇರ್ಪಡಿಸಿದೆ. ಈ ದ್ವೀಪಗಳಿಗೆ ಪ್ರಧಾನವಾದ ರೇವುಪಟ್ಟಣ ಪೋರ್ಟ್ ಬ್ಲೇರ್ (ಸ್ಥಾಪನೆ 1858) ಇದು ಮದ್ರಾಸಿಗೆ 1120 ಕಿ.ಮೀ. ರಂಗೂನಿಗೆ 624 ಕಿ.ಮೀ. ಹಾಗೂ ಕೋಲ್ಕತ್ತಾಗೆ 1170 ಕಿ.ಮೀ. ದೂರದಲ್ಲಿದೆ.

ಇತಿಹಾಸ[ಬದಲಾಯಿಸಿ]

ಈ ದ್ವೀಪಸ್ತೋಮ ಬಹಳ ಹಿಂದಿನಿಂದಲೂ ಪ್ರಸಿದ್ಧವಾಗಿತ್ತು. ಇತ್ಸಿಂಗ್, ಮಾರ್ಕೊಪೋಲೊ, ನಿಕಾಲೊ ಕಾಂಟಿ ಮತ್ತು ಇತರ ಪ್ರವಾಸಿಗರು ಇವುಗಳ ವಿಷಯವಾಗಿ ಬರೆದಿದ್ದಾರೆ. 1789 ರಲ್ಲಿ ಕ್ಯಾಪ್ಟನ್ ಅರ್ಚಿಬಾಲ್ಡ್ ಬ್ಲೇರ್ ಎಂಬುವನು ಇಲ್ಲಿ ಬ್ರಿಟಿಷ್ ವಸಾಹತವನ್ನು ಸ್ಥಾಪಿಸಿದರು. ಬಹಳಕಾಲ ಈ ದ್ವೀಪಗಳು ದುಷ್ಕರ್ಮಿಗಳ ಕೊಲೆಪಾತಕಿಗಳ ಮತ್ತು ರಾಜಕೀಯ ಬಂದಿಗಳ ನಿವಾಸವಾಗಿತ್ತು. 1858ರಲ್ಲಿ ಜಾರಿಗೆ ಬಂದ ಬಂದಿಗಳ ರವಾನೆಯ ಕಾನೂನು 1945ರಲ್ಲಿ ರದ್ದಾಯಿತು. 1942ರಲ್ಲಿ ಜಪಾನರು ಈ ದ್ವೀಪವನ್ನಾಕ್ರಮಿಸಿದರು. 1956ರಿಂದ ಈಚೆಗೆ ಇದು ಭಾರತದ ಕೇಂದ್ರಾಡಳಿತಕ್ಕೆ ಒಳಪಟ್ಟಿದೆ.

ಮೇಲ್ಮೈ ಲಕ್ಷಣ[ಬದಲಾಯಿಸಿ]

ಈ ದ್ವೀಪಗಳು ಬೆಟ್ಟಗುಡ್ಡಗಳಿಂದ ತುಂಬಿವೆ; ಇವು ಹೆಚ್ಚಾಗಿ ಹವಳ ದ್ವೀಪಗಳು. ಇದರಿಂದಾಗಿ ಭೂಮಿಯ ಮೇಲ್ಮೈ ಲಕ್ಷಣ ಬಹಳ ವ್ಯತ್ಯಾಸಗೊಂಡಿದೆ. ಉತ್ತರದ ದಕ್ಷಿಣಾಭಿಮುಖವಾಗಿ ಹಬ್ಬಿರುವ 1000' ದಿಂದ 2500' ಗಳ ಎತ್ತರದ ಬೆಟ್ಟಗಳು ಮತ್ತು ಅವುಗಳ ಮಧ್ಯೆ ಉಂಟಾಗಿರುವ ಕಣಿವೆಗಳು ಮೇಲ್ಮೈ ಲಕ್ಷಣದ ವೈಶಿಷ್ಟ್ಯ. ಕರಾವಳಿಯಲ್ಲಿ ಅನೇಕ ಕೊಲ್ಲಿಗಳಿವೆ. ಅವುಗಳಲ್ಲಿ ಮುಖ್ಯವಾದುವು ಬ್ಲೇರ್, ಕಾಲ್‍ಪಾಂಗ್, ಕಾಲಾರ ಮತ್ತು ಕಾಂಗೊ. ನದಿಗಳೆಲ್ಲ ಸಣ್ಣವು; ಮಳೆಗಾಲದಲ್ಲಿ ಮಾತ್ರ ಪ್ರವಾಹವುಳ್ಳ ನುಗ್ಗು ಹೊನಲಿನವು.

ಹವಾಮಾನ[ಬದಲಾಯಿಸಿ]

ಇಲ್ಲಿನ ವಾಯುಗುಣ ಸಾಗರೀಕ ಉಷ್ಣವಲಯದ ಮಾದರೀಯದು. ಶಾಖ 75 ಡಿಗ್ರಿ ಯಿಂದ 85 ಡಿಗ್ರಿಗಳ ವರೆಗೆ ಇರುತ್ತದೆ. ಸರಾಸರಿ ಸಾಪೇಕ್ಷಕ ಆಧ್ರ್ರತೆ 80%. ವಾರ್ಷಿಕ ಮಳೆ ಉತ್ತರ ಭಾಗದಲ್ಲಿ 75. ದಕ್ಷಿಣ ಭಾಗದಲ್ಲಿ 120.

ಸಸ್ಯಸಂಕುಲ[ಬದಲಾಯಿಸಿ]

ಇಲ್ಲಿನ ಸಸ್ಯವರ್ಗದಲ್ಲಿ ಪ್ರಧಾನವಾದವು ದಟ್ಟವಾದ ಉಷ್ಣವಲಯದ ಕಾಡುಗಳು; ನಿತ್ಯ ಹರಿದ್ವರ್ಣದ, ಚಳಿಗಾಲದಲ್ಲಿ ಎಲೆಯುದುರುವ ಮತ್ತು ಮ್ಯಾನ್‍ಗ್ರೋವ್ ಎಂಬ ಜಾತಿಯ ಮರಗಳಿಂದ ತುಂಬಿದ ಮರಗಳು ಎಲ್ಲೆಡೆ ಹಬ್ಬಿವೆ. ನಿತ್ಯಹರಿದ್ವರ್ಣದ ಕಾಡುಗಳು ನದಿ ಕಣಿವೆಗಳಲ್ಲಿಯೂ ಬೆಟ್ಟಗಳ ಮೇಲ್ಭಾಗದಲ್ಲಿಯೂ ಕಾಣಬರುವವು. ಬೆಟ್ಟಗಳ ಇಳಿಜಾರುಗಳಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ಅಗಲವಾದ ಎಲೆಯುಳ್ಳ ಮರಗಳು ಬೆಳೆಯುತ್ತವೆ. ಮ್ಯಾನ್‍ಗ್ರೊವ್ ಕಾಡುಗಳು ಕರಾವಳಿಯಲ್ಲಿ ಹೆಚ್ಚು. ಈ ದ್ವೀಪಗಳ ಆರ್ಥಿಕ ಸಂಪತ್ತು ಅರಣ್ಯ, ಮೀನುಗಾರಿಕೆ ಮತ್ತು ವ್ಯವಸಾಯಗಳನ್ನವಲಂಬಿಸಿದೆ. ಕೆಲವು ಮುಖ್ಯ ಜಾತಿಯ ಮರಗಳು ಇಲ್ಲಿಂದ ರಫ್ತಾಗುತ್ತಿವೆ.

ವಾಣಿಜ್ಯ[ಬದಲಾಯಿಸಿ]

ಮೀನುಗಾರಿಕೆ ಹೆಚ್ಚಾಗಿ ಬೆಳೆಯಲವಕಾಶವಿದ್ದರೂ ಈಗ ಇಲ್ಲಿನ ಜನರ ಅವಶ್ಯಕತೆಯನ್ನು ಮಾತ್ರ ಪೂರೈಸುವಷ್ಟಿದೆ. ಶಿಕ್ಷೆ ವಿಧಿಸಲ್ಪಟ್ಟ ಅಪರಾಧಿಗಳ ನೆಲೆಸುನಾಡಾದಾಗಲೇ ಇಲ್ಲಿ ಭೂ ವ್ಯವಸಾಯ ಪ್ರಾರಂಭವಾಯಿತು; ಈಗ ಕೇವಲ ಒಂದರಷ್ಟು ಭೂಮಿಯನ್ನು ಕೃಷಿಗೆ ಉಪಯೋಗಿಸುತ್ತಿದ್ದಾರೆ. ಉಷ್ಣ ವಲಯದ ಬೆಳೆಗಳಾದ ಎಣ್ಣೆ ಕಾಳುಗಳು, ಕಬ್ಬು, ಭತ್ತ, ಸಿಹಿ ಆಲೂಗೆಡ್ಡೆ, ಬಾಳೆ, ಪರಂಗಿ, ಮಾವು, ಸೇಬು, ತೆಂಗು, ರಬ್ಬರ್, ಟೀ ಇವೇ ಮೊದಲಾದವುಗಳನ್ನು ಬೆಳೆಯುತ್ತಾರೆ. ಆಹಾರಕ್ಕಾಗಿ ಕೋಳಿ ಸಾಕಣೆ ಎಲ್ಲೆಡೆಯೂ ಕಂಡುಬರುತ್ತದೆ. ಮರ ಕಡಿಯುವುದು ಮತ್ತು ಮರ ಕೊಯ್ಯುವ ಕಾರ್ಖಾನೆಗಳಲ್ಲಿ ಕೆಲಸ ಮಾಡುವುದು ಜನರ ಮುಖ್ಯ ಉದ್ಯೋಗ. ಜಾತಂ ದ್ವೀಪದಲ್ಲಿರುವ ಚಾತಂ ಮರ ಕೊಯ್ಯುವ ಕಾರ್ಖಾನೆ ಭಾರತದಲ್ಲಿಯೇ ದೊಡ್ಡದು. ಪೋರ್ಟ್‍ಬ್ಲೇರ್‍ನಲ್ಲಿ ಒಂದು ಬೆಂಕಿಪೊಟ್ಟಣದ ಕಾರ್ಖಾನೆ ಇದೆ. ವಿವಿಧ ಕೈಗಾರಿಕೆಗಳ ಬೆಳವಣಿಗೆಗೆ ಇಲ್ಲಿ ಸಾಕಷ್ಟು ಅನುಕೂಲಗಳಿವೆ.

ಜನಜೀವನ[ಬದಲಾಯಿಸಿ]

ಈ ದ್ವೀಪ ಸ್ತೋಮದಲ್ಲಿನ ಜನಸಂಖ್ಯೆ ೩,೭೯,೯೪೪ (೨೦೧೧). ಸುಮಾರು 400 ಹಳ್ಳಿಗಳಿವೆ. ಈ ದ್ವೀಪಸ್ತೋಮದಲ್ಲಿ ಪೋರ್ಟ್‍ಬ್ಲೇರ್ ಒಂದೇ ಜನನಿಬಿಡವಾದ ಪಟ್ಟಣ. ಜನಸಂಖ್ಯೆ-೧,೦೮,೦೫೮ (೨೦೧೧).[೧] 1951_61ರ ಅವಧಿಯಲ್ಲಿ ಪೂರ್ವಬಂಗಾಳದಿಂದ ನಿರಾಶ್ರಿತರನ್ನು ಇಲ್ಲಿ ನೆಲೆಸುವಂತೆ ಮಾಡಿದುದರಿಂದ ಜನಸಂಖ್ಯೆ 105% ಹೆಚ್ಚಿತು. ಸ್ಥಳೀಯ ಬುಡಕಟ್ಟಿನ ಒಟ್ಟು ಜನಸಂಖ್ಯೆ 14,122. ಇದು ಒಟ್ಟು ಜನಸಂಖ್ಯೆಯ 22 % ರಷ್ಟಿದೆ. ಇಲ್ಲಿನ ಜಾರಾವಾಸ್, ಒಂಗೇಸ್, ಅಂಡಮಾನೀಸ್ ಮತ್ತು ಸೆಂಟಿನಲೀಸ್ ಪಂಗಡದವರು ಪ್ರಪಂಚದ ಅತ್ಯಂತ ಪುರಾತನ ಜನಾಂಗಗಳಿಗೆ ಸೇರಿದವರು[೨] .ದಟ್ಟವಾದ ಕಾಡುಗಳು, ಅನಾಗರೀಕ ಜನರು, ಪ್ರವೇಶಿಸಲು ಅಸಾಧ್ಯವಾದ ಭೂಸ್ಥಿತಿ ಇವುಗಳಿಂದ ಈ ದ್ವೀಪಗಳು ವಿಚಿತ್ರವಾದೊಂದು ಅಸ್ತಿತ್ವವನ್ನು ಪಡೆದಿವೆ. ಇತ್ತೀಚಿನವರೆಗೆ ಈ ದ್ವೀಪಗಳು ದಂಡನೆಗೊಳಗಾದ ಅಪರಾಧಿಗಳನ್ನಿಡುವ ಸ್ಥಳವಾಗಿದ್ದವು.ಈ ಸ್ತೋಮ ಇಂದು ಭಾರತ ಒಕ್ಕೂಟದ ಒಂದು ಭಾಗವಾಗಿ ಉತ್ತಮ ಭವಿಷ್ಯವನ್ನು ಎದುರು ನೋಡುತ್ತಿದೆ. ಅರಣ್ಯ ಮತ್ತು ಮೀನುಗಾರಿಕೆಯ ಸಂಪತ್ತುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉಪಯೋಗಿಸಿಕೊಂಡರೆ ಈ ದ್ವೀಪಗಳ ಭವಿಷ್ಯ ಉತ್ತಮವಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Census of India Search details". censusindia.gov.in. Retrieved 10 May 2015.
  2. "Andaman & Nicobar Administration". and.nic.in.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]