ವಿಷಯಕ್ಕೆ ಹೋಗು

ಸಿಂಧಿ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಂಧಿ
Naskh
[[File:
|200px]]
ಬಳಕೆಯಲ್ಲಿರುವ 
ಪ್ರದೇಶಗಳು:
ಪಾಕಿಸ್ತಾನ, ಭಾರತ 
ಪ್ರದೇಶ: ಸಿಂಧ್ ಮತ್ತು ನೆರೆಯ ಪ್ರದೇಶಗಳಲ್ಲಿ ಗಡಿಯ ಹತ್ತಿರ (ಉದಾ. ಕಚ್ ಮತ್ತು ಬಲೂಚಿಸ್ತಾನ್)
ಒಟ್ಟು 
ಮಾತನಾಡುವವರು:
c. 32 million
ಭಾಷಾ ಕುಟುಂಬ: Indo-European
 ಇಂಡೋ-ಇರಾನಿಯನ್
  ಇಂಡೋ-ಆರ್ಯನ್
   ವಾಯುವ್ಯ
    ಸಿಂಧಿಕ್
     ಸಿಂಧಿ 
ಬರವಣಿಗೆ:  
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ:  ಪಾಕಿಸ್ತಾನ
ನಿಯಂತ್ರಿಸುವ
ಪ್ರಾಧಿಕಾರ:
no official regulation
ಭಾಷೆಯ ಸಂಕೇತಗಳು
ISO 639-1: sd
ISO 639-2: snd
ISO/FDIS 639-3: snd 
Sindhi-speakers by Pakistani District - 2017 Census.svg
ಲಿಪಿಗಳು
ಭಾರತದ ಸಾಂವಿಧಾನಿಕವಾಗಿ ಮಾನ್ಯತೆ ಪಡೆದ ಭಾಷೆಗಳು
Category
ಭಾರತೀಯ ಗಣರಾಜ್ಯದ 22 ಅಧಿಕೃತ ಭಾಷೆಗಳು
ಸಂಬಂಧಿತ

ಸಿಂಧಿ (IPAc-en|ˈ|s|ɪ|n|d|i)[] ಇಂಡೊ ಆರ್ಯನ್ ಭಾಷಾವರ್ಗಕ್ಕೆ ಸೇರಿದ ಪ್ರಮುಖ ಭಾಷೆ. ಸಿಂಧಿ ಎಂಬ ಪದ ಸಿಂಧ್ ಎಂಬುದರ ವಿಶೇಷಣರೂಪ. ಈಗ ಪಾಕಿಸ್ತಾನದಲ್ಲಿರುವ ಸಿಂಧ್ ಪ್ರಾಂತ್ಯದ ಭಾಷೆ ಸಿಂಧಿ. 1947ರಲ್ಲಿ ಭಾರತ ವಿಭಜನೆಯಾದ ಬಳಿಕ ಸಿಂಧಿ ಮಾತನಾಡುವ ಹಿಂದುಗಳು ಭಾರತಕ್ಕೆ ವಲಸೆ ಬಂದು, ಭಾರತದ ವಿವಿಧ ರಾಜ್ಯಗಳಲ್ಲಿ ಪ್ರಮುಖವಾಗಿ ಗುಜರಾತ್, ಮಹಾರಾಷ್ಟ್ರ, ರಾಜಾಸ್ತಾನ್ ಮತ್ತು ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ನೆಲಸಿದ್ದಾರೆ. ಭಾರತ ಪಾಕಿಸ್ತಾನ ಹಾಗೂ ಇತರೆಡೆಗಳಲ್ಲಿ ಏಳು ಮಿಲಿಯಕ್ಕಿಂತ ಹೆಚ್ಚು ಜನರು ಈ ಭಾಷೆಯನ್ನು ಆಡುತ್ತಾರೆ.

ಸಿಂಧೂ ಎಂಬ ಭಾಷೆಯು ಸಿಂಧೂ ನದಿಯ ಮೂಲದಿಂದ ಸಿಂಧಿ ಎಂಬ ಹೆಸರು ಬಂದಿದೆ ಸಿಂಧಿ ಭಾಷೆಯು ಶ್ರೀಮಂತ ಸಂಕ್ಕೃತಿ ವಿಶಾಲವಾದ ಜಾನಪದ ಮತ್ತು ಪಾಕಿಸ್ತಾನದ ಪ್ರಮುಖ ಭಾಷೆಯು ಹಾಗಿದೆ ಭಾರತದ ಇತರ ಭಾಷೆಗಳಂತೆ ಸಿಂಧಿ ಹಳೆಯ ಇಂಡೋ ಆರ್ಯನ್ ಮತ್ತು ಸಂಸ್ಕೃತ, ಇಂಡೋ ಪಾಲಿ ಪ್ರಾಕೃತಗಳು ಮತ್ತು ಅಪಭ್ರಂಸ ಬೆಳವಣಿಗೆಯ ಹಂತಗಳನ್ನು ದಾಟಿದೆ. ಇದು ಕ್ರಿ.ಶ ೧೦ನೇ ಶತಮಾನದಲ್ಲಿ ಹೂಸ ಇದೋ ಆರ್ಯನ ಪ್ರವೇಶಿತು ೧೮೬೮ರಲ್ಲಿ ಬಾಂಬೆ ಪ್ರೇಸಿಡೆನ್ನಿ ಸಿಂಧಿಯಲ್ಲಿ ಬಳಸಲು ಅಬ್ಜದ್ ಅನು ಖುದಾಬಾದಿ ಲಿಪಿಯೂಂದಿಗೆ ಬದಲಾಯಿಸಲು ನಾರಾಯಣ್ ಜಗನ್ನಾಥ ವೈಧ್ಯರನ್ನು ನಿಯೋಜಿಸಿದರು ಮುಸ್ಲಿಂ ಬಹುಸಂಖ್ಯಾತ ಪ್ರದೀಶದಲ್ಲಿ ಅರಾಜಕತೆಯನ್ನು ಪ್ರಚೋಸಿವಂತೆ ಮಾಡಲಾಯಿತು.[] ಪ್ರೆಸಿಡೆನ್ಸಿಯಿಂದ ಲಿಪಿಯನ್ನು ಆಡಳಿತ ಲಿಪಿಯಾಗಿ ಘೋಷಿಸಲಾಯಿತು.[]

ಉಗಮ ಮತ್ತು ವಿಕಾಸ

[ಬದಲಾಯಿಸಿ]

ಸಿಂಧಿ ಭಾಷೆಯ ಉಗಮ ವಿಕಾಸದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಈ ಪೈಕಿ ಕೆಲವನ್ನಿಲ್ಲಿ ಗಮನಿಸಬಹುದು.

  1. ಸಿಂಧಿ ಸಂಸ್ಕøತ ಗುಂಪಿಗೆ ಸೇರಿದ ಭಾಷೆ. ಇದರಲ್ಲಿ ಉತ್ತರ ಭಾರತದ ಇನ್ನಿತರ ದೇಶೀಯ ಭಾಷೆಗಳಿಗೆ ಹೋಲಿಸಿದರೆ ಅನ್ಯದೇಶ್ಯ ಅಂಶಗಳು ಕಡಿಮೆ ಪ್ರಮಾಣದಲ್ಲಿವೆ(ಟ್ರಂಪ್). ಇದೇ ಅಭಿಪ್ರಾಯವನ್ನು ಬೇಗ್ ಮಿರ್ಜಾ ಖಾಲಿಚ್, ಗುರುಭಕ್ಷಾನಿ, ಮೆಹರ್‍ಚಂದ್ ಭೇರುಮಲ್ ಮತ್ತಿತರರು ಸಮರ್ಥಿಸುತ್ತಾರೆ. ಇವರೆಲ್ಲ ಪ್ರಾಕೃತದ ಬ್ರಜದ ಅಪಭ್ರಂಶದಿಂದ ಸಿಂಧಿ ಜನ್ಮ ತಳೆದಿದೆಯೆಂದು ಸೂಚಿಸಿದ್ದಾರೆ.
  2. ಸಿಂಧ್‍ನ ಪ್ರಾಚೀನ ಭಾಷಾರೂಪ ಬಹುಮಟ್ಟಿಗೆ ಸೆಮಿಟಿಕ್ ವರ್ಗಕ್ಕೆ ಸೇರಿದುದಾಗಿರಬೇಕು. ಅಲ್ಲದೆ ಸಿಂಧಿ ಭಾಷೆ ಸಂಸ್ಕೃತಕ್ಕೆ ನೇರವಾಗಿ ಸಂಬಂಧಿಸಿದುದಲ್ಲ. ಬಹುಮಟ್ಟಿಗೆ ಇದು ಸಂಸ್ಕೃತಕ್ಕಿಂತ ಪ್ರಾಚೀನವಾದ ಸಿಂಧೂಕಣಿವೆಯ ಭಾಷೆಗೆ ಸಂಬಂಧಿಸಿದುದಾಗಿರಬಹುದು. ಲಹಂದ, ಸಿರಯ್ಕಿ, ಮುಲ್ತಾನಿ, ದರ್ವಾಲಿ, ಬಹವಲ್ಪುರಿ, ಹಿಂದ್‍ಕೋ, ಕಾಶ್ಮೀರಿ ಮತ್ತು ದಾರ್ದಿಕ್ ಭಾಷೆಗಳು ಇದರ ಸೋದರ ಭಾಷೆಗಳು. ಪ್ರಾಚೀನ ಸಿಂಧ್‍ಭಾಷೆಯಲ್ಲಿ ಸುಮೇರಿಯನ್ ಮತ್ತು ಬ್ಯಾಬಿಲೋನಿಯನ್ ನಾಗರಿಕತೆಯ ಮತ್ತು ಸೆಮಿಟಿಕ್ ಭಾಷಾಂಶಗಳು ಇವೆ (ಬಲೋಚ್, ನಬಿ ಬಕ್ಷ್).
  3. ಪ್ರತ್ಯಕ್ಷವಾಗಲ್ಲವಾದರೂ ಪರೋಕ್ಷವಾಗಿ ಸಂಸ್ಕøತವೇ ಸಿಂಧ್‍ನಲ್ಲಿ ಜನಿಸಿದ ಭಾಷೆ (ಸೆರಾಜ್, ಉಲ್ ಹಕ್)
  4. ಸಿಂಧಿಭಾಷೆ ಆರ್ಯೇತರ ಭಾಷೆ. ಇದರ ಮೂಲವನ್ನು ಪ್ರಾಚೀನ ಮೊಹೆಂಜೊದಾರೋದ ಪ್ರಾಚೀನ ನಾಗರಿಕತೆಗಳಲ್ಲಿಯೇ ಗುರುತಿಸಬೇಕು. ಇದು ಮೊಹೆಂಜೊದಾರೊದ ಪ್ರಾಚೀನಭಾಷೆ. ಇದನ್ನು ಸೈಂಧವ, ಸೈಂಧವಿ, ಸಿಂಧ್ವಿ ಎಂದು ಕರೆಯುತ್ತಿದ್ದು ಅನಂತರದ ದಿನಗಳಲ್ಲಿ ಸಿಂಧಿ ಎಂದಾಗಿದೆ. (ಅಲ್ಲಾನ, ಜಿ.ಎ.)

ಬರವಣಿಗೆ ವ್ಯವಸ್ಥೆ

[ಬದಲಾಯಿಸಿ]

ಅಕ್ಷರಗಳಲ್ಲಿ ಇತರ ಭಾಷೆಗಳಿಗೆ ಹೋಲಿಸಿದರೆ ಸಿಂಧಿಯಲ್ಲಿ ೪೬ ವ್ಯಂಜನ ಮತ್ತು ೧೬ ಸ್ವರಗಳನ್ನು ಹೊಂದಿದೆ ಈ ಭಾಷೆಯು ಹಲವಾರು ಭಾಷೆಗಳಿಂದ ಎರವಲು ಪಡೆದಿದ್ದೆ ಇದು ಇಂಗ್ಲೀಷ ಮತ್ತು ಹಿಂಧೂ ಸ್ತಾನಿ, ಉರ್ದು ಭಾಷೆಗಳಿಂದ ಎರವಲು ಪಡೆದಿದ್ದೆ


ಧ್ವನಿವ್ಯವಸ್ಥೆ ಮತ್ತು ವ್ಯಾಕರಣ

[ಬದಲಾಯಿಸಿ]

ಸಿಂಧಿಭಾಷೆಯ ಧ್ವನಿವ್ಯವಸ್ಥೆ ಇಂಡೊಆರ್ಯನ್ ವ್ಯವಸ್ಥೆಯನ್ನೇ ಹೋಲುತ್ತದೆ. ಆದರೂ ಕಾಶ್ಮೀರಿಭಾಷೆಯೊಂದಿಗೆ ಒಂದು ವೈಶಿಷ್ಟ್ಯವನ್ನು ಹಂಚಿಕೊಂಡಿದೆ. ಅದೆಂದರೆ ಏಕವ್ಯಂಜನದ ಬದಲು ವ್ಯಂಜನ ಮತ್ತು ಘೋಷರಹಿತ ಸ್ವರ ಒಟ್ಟಿಗೆ ಇರುವುದು. ಉದಾಹರಣೆಗೆ: ಚೋಕರು ಹುಡುಗ. ಈ ಭಾಷೆಯ ಮತ್ತೊಂದು ವೈಶಿಷ್ಟ್ಯ ಪುನರಾವರ್ತಿತ ವ್ಯಂಜನಗಳ ಮಾಲೆ. ಶ್ವಾಸವನ್ನು ಒಳಗೆಳೆದುಕೊಂಡು, ಮೃದತಾಲುವನ್ನು ಕೆಳಗಿಳಿಸಿ, ಗಲಕುಹಲವನ್ನು ಮುಚ್ಚಿ ಇವನ್ನು ಉಚ್ಚರಿಸಲಾಗುತ್ತದೆ. ಸಿಂಧಿಯ ಮತ್ತೊಂದು ಗಮನಾರ್ಹ ವೈಶಿಷ್ಟ್ಯವೆಂದರೆ, ಇತರ ಇಂಡೊಆರ್ಯನ್ ಭಾಷೆಗಳಲ್ಲಿ ಎಲ್ಲೆಲ್ಲಿ ದಂತ್ಯಾಕ್ಷರಗಳು ಬರುತ್ತವೆಯೋ ಅಲ್ಲೆಲ್ಲ ಮೂರ್ಧನ್ಯಾಕ್ಷರಗಳು ಬರುವುದು.

ಲಿಂಗ ವ್ಯವಸ್ಥೆ

[ಬದಲಾಯಿಸಿ]

ಸಿಂಧಿಯಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಎಂಬ ಭೇದಗಳಿವೆ. ಏಕ ಮತ್ತು ಬಹು ಎಂಬ ಎರಡು ವಚನಗಳುಂಟು. ಪ್ರಕೃತಿಗೆ ಉಪಸರ್ಗಗಳನ್ನು ಸೇರಿಸುವುದರಿಂದ ವಿಭಕ್ತಿ ಸಂಬಂಧವನ್ನು ಗುರುತಿಸಲಾಗುತ್ತದೆ. ವಿಶೇಷಣವು, ನಾಮಪದದ ಲಿಂಗ-ವಚನ, ವಿಭಕ್ತಿಗಳನ್ನು ಹೊಂದಿರುತ್ತದೆ. ಕೃದಂತ ನಾಮಪದಗಳಿಗೆ ಸರ್ವನಾಮ ಪ್ರತ್ಯಯಗಳನ್ನು ಹಚ್ಚಲಾಗುತ್ತದೆ. ಕಾಶ್ಮೀರಿ ಭಾಷೆಯಲ್ಲಿ ಇವನ್ನು ಕ್ರಿಯಾಪದಗಳಿಗೆ ಮಾತ್ರ ಹಚ್ಚಲಾಗುವುದು. ಸಿಂಧಿಯಲ್ಲಿ ಸಕರ್ಮಕ ಮತ್ತು ನಕರ್ಮಕ ಎಂಬ ಕ್ರಿಯಾರಚನೆಗಳಿವೆ. ಅಪೂರ್ಣಕ್ರಿಯೆಯೊಡನೆ ಸಹಾಯಕ ಕ್ರಿಯಾಪದವನ್ನು ಸೇರಿಸಿ ಸಂಯುಕ್ತ ಕಾಲವನ್ನು ನಿರ್ದೇಶಿಸಲಾಗುವುದು.

ಶಬ್ದಕೋಶ

[ಬದಲಾಯಿಸಿ]

ಸಿಂಧಿ ಶಬ್ದಕೋಶವು ವೈದಿಕ ಸಂಸ್ಕೃತಕ್ಕೆ ಹತ್ತಿರವಾಗಿದೆ. ಉದಾಹರಣೆಗೆ:

ಸಿಂಧಿ ಶಬ್ದಕೋಶ
ಸಿಂಧಿ ವೈದಿಕ ಸಂಸ್ಕೃತ ಕ್ಲಾಸಿಕಲ್ ಸಂಸ್ಕೃತ ಅರ್ಥ
ಜಂಘ ಜಂಘ ಜಂಘ ಕಾಲು
ಜರುತರು ಜರತರ ಜಲಸ್ಥಲ ನೀರತಾಣ
ಝರು ಝರೇಹ ಜೆರನ್ ಹಳೆಯ
ಮಿನ್ಹು ಮೋಹ ಮೇಘ ಮಳೆ

ವಿಧಗಳು

[ಬದಲಾಯಿಸಿ]

ಸಿಂಧಿ ಶಬ್ದಕೋಶದಲ್ಲಿ ನಾಲ್ಕು ಬಗೆಯ ಪದಗಳಿವೆ:

  1. ತತ್ಸಮ: ಅಂದರೆ ಸಂಸ್ಕೃತದಿಂದ ಸ್ವೀಕೃತವಾದ ಸಂಸ್ಕøತದ್ದೇ ಆದ ಪದಗಳು.
  2. ತದ್ಭವ: ಸಂಸ್ಕೃತದಿಂದ ರೂಪ ಬದಲಾವಣೆಗೊಂಡು ಬಂದ ಪದಗಳು. ಸಿಂಧಿ, ತದ್ಭವಗಳಿಂದ ತುಂಬಿ ಹೋಗಿದೆ. ಕೆಲವು ತದ್ಭವಗಳಂತೂ ಎಷ್ಟರಮಟ್ಟಿಗೆ ರೂಪಾಂತರ ಹೊಂದಿವೆಯೆಂದರೆ, ಅವು ಸಿಂಧೀ ಪದಗಳಂತೆಯೇ ತೋರುತ್ತವೆ.
  3. ದೇಸಿ: ಅಂದರೆ ಈ ಪ್ರದೇಶಕ್ಕೆ ಆರ್ಯರ ಆಗಮನಕ್ಕಿಂತ ಮೊದಲೇ ಅಥವಾ ಅನಂತರವೂ ಇದ್ದ ಪದಗಳು. ಇವು ಸಂಸ್ಕøತದಿಂದ ಬಂದವಲ್ಲ. ಇತರ ದೇಸಿ ಮೂಲಗಳಿಂದ ಬಂದವುಗಳು. ಇದರ ಜೊತೆಗೆ, ಪೂರ್ವಕಾಲದಿಂದಲೇ ಸಿಂಧ್ ಮತ್ತು ಮಲಬಾರ್ ಕರಾವಳಿಗಳ ನಡುವೆ ವ್ಯಾಪಾರ ವಾಣಿಜ್ಯ ವ್ಯವಹಾರಗಳು ನಡೆಯುತ್ತಿದ್ದುದರಿಂದ ಕೆಲವು ದ್ರಾವಿಡ ಶಬ್ದಗಳೂ ಇಲ್ಲಿ ಸೇರಿವೆ.
  4. ವಿದೇಶಿ: ಇವು ಅನ್ಯದೇಶ್ಯ ಮೂಲದವು. ಸಿಂಧಿ ಅನೇಕ ಅರಾಬಿಕ್ ಮತ್ತು ಪರ್ಷಿಯನ್ ಪದಗಳನ್ನು ಹೊಂದಿದೆ. ಈ ಪದಗಳು ಕ್ರಿ.ಶ. 711ರಲ್ಲಿ ಸಿಂಧ್ ಪ್ರಾಂತ್ಯವನ್ನು ಅರಬರು ಜಯಸಿದ ಅನಂತರ ಹೆಚ್ಚು ಪ್ರಮಾಣದಲ್ಲಿ ಬಂದು ಸೇರಿದವು. ಅಂದಿನಿಂದ ಅರಾಬಿಕ್ ಮತ್ತು ಪರ್ಷಿಯನ್ ಭಾಷೆಯ ಶಬ್ದಗಳು ಬಂದು ಸೇರುವುದು ನಿರಂತರವಾಗಿದೆ. ಈ ಎರಡು ವಿದೇಶಿ ಭಾಷೆಗಳ ಪೂರ್ವಪ್ರತ್ಯಯಗಳನ್ನು, ಪ್ರತ್ಯಯಗಳನ್ನು, ನಾಮಪದಗಳನ್ನು, ಕೃನ್ನಾಮಗಳನ್ನು, ವಿಶೇಷಣಗಳನ್ನು, ಕ್ರಿಯಾವಿಶೇಷಗಳನ್ನು ಸಿಂಧಿಭಾಷೆ ಎರವಲು ಪಡೆದಿದೆ. ಬ್ರಿಟಿಷರು ಸಿಂಧನ್ನು ಕ್ರಿಶ. 1843ರಲ್ಲಿ ವಶಪಡಿಸಿಕೊಂಡರು. ಅಂದಿನಿಂದ ಇಂಗ್ಲಿಷ್ ಮತ್ತಿತರ ಐರೋಪ್ಯ ಭಾಷೆಗಳು, ತಮ್ಮ ಭಾಷಾ ಶ್ರೀಮಂತಿಕೆಯಿಂದ ಸಿಂಧಿಯನ್ನು ಶ್ರೀಮಂತಗೊಳಿಸಿವೆ. ಸಿಂಧಿಯಲ್ಲಿ ಗಮನಾರ್ಹ ಸಂಖ್ಯೆಯ ಗಾದೆಗಳೂ ನುಡಿಗಟ್ಟುಗಳೂ ಒಗಟುಗಳೂ ಇವೆ. ಸಿಂಧಿಯನ್ನು ಮಾತಾಡುವ ಮಂದಿ ಭಾರತಾದ್ಯಂತ ಇರುವುದರಿಂದ, ಆಯಾಯ ಪ್ರದೇಶದ, ಪ್ರಾದೇಶಿಕ ಶಬ್ದರೂಪಗಳು ಸಿಂಧಿಯನ್ನು ಸೇರಿ ವಿಶಿಷ್ಟತೆಯನ್ನು ತಂದುಕೊಟ್ಟಿವೆ.

ಸಿಂಧಿಯನ್ನು ಬರೆಯಲು, ದೇವನಾಗರಿ ಲಿಪಿಯನ್ನು ಬಳಸಲಾಗಿದೆ. ಸಿಖ್‍ಗುರು ಅಂಗದ್‍ನಿಂದ 1538-52ರ ಅವಧಿಯಲ್ಲಿ ರಚಿತವಾಗಿದ್ದ ಗುರ್ಮುಖಿ ಲಿಪಿಯನ್ನು ಸಿಂಧೀ ಹಿಂದು ಸ್ತ್ರೀಯರು ಧಾರಾಳವಾಗಿ ಬಳಸುತ್ತಿದ್ದರು. 1843ರಲ್ಲಿ ಬ್ರಿಟಿಷರು ಸಿಂಧನ್ನು ವಶಪಡಿಸಿಕೊಂಡ ತರುವಾಯ, ಸಿಂಧಿಗೆ ಒಂದು ನಿರ್ದಿಷ್ಟ ಪ್ರಮಾಣೀಕೃತ ಲಿಪಿ ಬಳಕೆಯಾಗುವ ಬಗ್ಗೆ ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿಯ ಶಿಫಾರಸಿನಂತೆ 1853ರಲ್ಲಿ ಹೊಸ ಪರ್ಷೋ-ಅರಾಬಿಕ್ ಲಿಪಿಯನ್ನು ಸಿಂಧಿಲಿಪಿ ಎಂದು ಒಪ್ಪಿಕೊಂಡು ಮಾನ್ಯಮಾಡಲಾಯಿತು. ಅಂದಿನಿಂದ ಸಹಸ್ರಾರು ಸಿಂಧಿ ಗ್ರಂಥಗಳು ಪುಸ್ತಕಗಳು ಪತ್ರಿಕೆಗಳು ಆ ಲಿಪಿಯಲ್ಲಿ ಪ್ರಕಟಗೊಂಡಿವೆ. ಸಿಂಧ್ ಪ್ರದೇಶದ ಅಲ್ಪಸಂಖ್ಯಾತರು ಈ ಲಿಪಿಗೆ ವಿರೋಧ ವ್ಯಕ್ತಪಡಿಸಿದರೂ ಜನಸಾಮಾನ್ಯರಿಗೆ ಇದು ಇಷ್ಟವಾಯಿತು. ಹೀಗಿದ್ದರೂ ಈ ಲಿಪಿ ಕೆಲವು ಐರೋಪ್ಯ ವಿದ್ವಾಂಸರಿಗೆ ಮೆಚ್ಚುಗೆಯಾಗಲಿಲ್ಲವೆಂಬುದು ಗಮನಾರ್ಹ ವಿಷಯ. ಅವರು ಸಿಂಧಿ-ಇಂಗ್ಲಿಷ್, ಇಂಗ್ಲಿಷ್-ಸಿಂಧಿ ನಿಘಂಟುಗಳನ್ನು ದೇವನಾಗರಿ ಲಿಪಿಯಲ್ಲೆ ಪ್ರಕಟಿಸಿದರು. ಈ ನಿಘಂಟುಗಳನ್ನು ಕ್ಯಾಪ್ಟನ್ ಸ್ಟ್ಯಾಕ್ ಎಂಬಾತ ಸ್ಥಳೀಯ ಪಂಡಿತರುಗಳ ಸಹಾಯದಿಂದ ಸಿದ್ಧಪಡಿಸಿದನೆಂದು ತಿಳಿದುಬಂದಿದೆ. ದೇವನಾಗರಿ ಮತ್ತು ಪರ್ಷೋ-ಅರಾಬಿಕ್ ಲಿಪಿಯಲ್ಲಿ ಟ್ರಂಪ್ ಎಂಬಾತ 1858ರಲ್ಲಿ ಸಿಂಧಿಪಾಠಾವಲಿಯನ್ನು ಹೊರತಂದ. ಭಾರತದ ವಿಭಜನೆಯ ತರುವಾಯ ಹಲವಾರು ಪುಸ್ತಕಗಳು ದೇವನಾಗರಿಯಲ್ಲಿ ಪ್ರಕಟವಾದರೂ ಪರ್ಷೋ-ಅರಾಬಿಕ್ ಲಿಪಿಯಲ್ಲಿ ಪ್ರಕಟಗೊಂಡಿರುವುವೇ ಗಮನಾರ್ಹಸಂಖ್ಯೆಯಲ್ಲಿವೆ.

ಉಪಭಾಷೆಗಳು

[ಬದಲಾಯಿಸಿ]
ಸಿಂಧಿ ಭಾಷೆಯ ಪ್ರಾದೇಶಿಕ ಮತ್ತು ನೆರೆಯ ಪ್ರದೇಶಗಳ ಉಪಭಾಷೆಗಳು
  ಸಿಂಧ್ ಪ್ರಾಂತ್ಯದೊಳಗೆ

ಸಿಂಧಿಯು ಅನೇಕ ಉಪಭಾಷೆಗಳನ್ನು ಹೊಂದಿದೆ ಮತ್ತು ನೆರೆಯ ಭಾಷೆಗಳಾದ ಸರೈಕಿ ಮತ್ತು ಗುಜರಾತಿಗಳೊಂದಿಗೆ ಕೆಲವು ಸ್ಥಳಗಳಲ್ಲಿ ಉಪಭಾಷೆಯ ನಿರಂತರತೆಯನ್ನು ರೂಪಿಸುತ್ತದೆ. ಸಿಂಧಿಯ ಕೆಲವು ದಾಖಲಿತ ಉಪಭಾಷೆಗಳು;[][][][]

  1. ಉತ್ತರಾದಿ: ಉತ್ತರದ ಸಿಂಧ್‌ನ ಉಪಭಾಷೆ (ಉತ್ತರು, ಅಂದರೆ "ಉತ್ತರ"), ಲರ್ಕಾನಾ, ಶಿಕಾರ್‌ಪುರ ಮತ್ತು ಸುಕ್ಕೂರ್ ಮತ್ತು ಕಂಡಿಯಾರೋ ಭಾಗಗಳಲ್ಲಿ ಸಣ್ಣ ವ್ಯತ್ಯಾಸಗಳನ್ನು ಹೊಂದಿದೆ.
  2. ಕಾಛಿ(ಕಾಛ್ಕಿ): ಇದನ್ನು ಗುಜರಾತ್‍ನ ಕಛ್ ಮತ್ತು ಕಥಿಯವಾರ್ ಎಂಬಲ್ಲಿ ಮಾತಾಡುವ ಜನರಿದ್ದಾರೆ. ಈ ಉಪಭಾಷೆಯ ಮೇಲೆ ಗುಜಾರಾತಿ ಮತ್ತು ರಾಜಸ್ತಾನಿ ಭಾಷೆಗಳ ಪ್ರಭಾವ ಕಂಡುಬರುತ್ತದೆ.
  3. ತ್ರರೇಲಿ: ಥರ್>ಥಲ್>ಸ್ಥಲ್ ಎಂದರೆ ಮರುಭೂಮಿ. ಈ ಪ್ರಭೇದವನ್ನು ಸಿಂಧ್‍ನ ಪೂರ್ವಭಾಗವಾದ ಥಾರ್‍ಮರುಭೂಮಿ ಪ್ರದೇಶದಲ್ಲಿ-ಅಂದರೆ ಸಿಂಧ್, ರಾಜಸ್ತಾನದ ಮಾರ್ವಾರ್‌ನಿಂದ ಬೇರೆಯಾಗುವ ಪ್ರದೇಶದಲ್ಲಿ ಮಾತಾಡುವ ಮಂದಿಯಿದ್ದಾರೆ. ಈ ಪ್ರಭೇದಕ್ಕೆ ಥರೇಚಿ ಎಂಬ ಮತ್ತೊಂದು ಹೆಸರುಂಟು. ಇದರ ಪ್ರಭೇದವೇ ಧಾತ್ಕಿ.
  4. ಮಾಚಾರಿಯಾ ಡುಕ್ಸಿಲ್‌ನು ಮುಸ್ಲಿಂ ಸಿಂಧಿಗಳನ್ನು ಒಳಗೊಂಡಿದೆ.[]
  5. ಲಾಸಿ : ಲಾರ್ ಎಂದರೆ ಇಳಿಜಾರಿನ ಪ್ರದೇಶ ಎಂದರ್ಥ. ಬಲೂಚಿಸ್ತಾನದ ಲಾಸ್ಬೆಲಾ, ಹಬ್ ಮತ್ತು ಗ್ವಾದರ್ ಜಿಲ್ಲೆಗಳ ಉಪಭಾಷೆ, ಲಾರಿ ಮತ್ತು ವಿಚೋಲಿಗೆ ನಿಕಟ ಸಂಬಂಧ ಹೊಂದಿದೆ ಮತ್ತು ಬಲೂಚಿಯೊಂದಿಗೆ ಸಂಪರ್ಕದಲ್ಲಿದೆ. ಇದರಿಂದ ಲಾಸಿ ಎಂಬುದು ರೂಪು ತಳೆದಿದೆ. ಇದು ಸಿಂಧೂನದಿಯ ಬಯಲು ಪ್ರದೇಶದಲ್ಲಿ ಬಳಕೆಯಲ್ಲಿದೆ. ದಕ್ಷಿಣ ಸಿಂಧ್‌ನ ಉಪಭಾಷೆ (ಲರು) ಕರಾಚಿ, ಥಟ್ಟಾ, ಸುಜಾವಲ್ ಮತ್ತು ಬಾಡಿನ್‌ನಂತಹ ಪ್ರದೇಶಗಳಲ್ಲಿ ಮಾತನಾಡುತ್ತಾರೆ.ಗ್ರಿಯರ್‍ಸನ್ ಎಂಬವನ ಪ್ರಕಾರ, ಸ್ಥಳೀಯರು ಈ ಉಪಭಾಷೆಯನ್ನು ಒಂದು ರೀತಿಯ ಒರಟುನುಡಿ, ಅನಾಗರಿಕನುಡಿ ಎಂದು ಭಾವಿಸುತ್ತಾರಾದರೂ ಭಾಷಾವಿಜ್ಞಾನಿಗೆ ಈ ಉಪಭಾಷೆಯನ್ನು ಕುರಿತು ವಿಶೇಷ ಆಸಕ್ತಿ ಮೂಡುತ್ತದೆ. ಇದಕ್ಕೆ ಪ್ರಮುಖ ಕಾರಣ, ಈ ಉಪಭಾಷೆ ಕೆಲವು ದಾರ್ದಿಕ್ ವೈಶಿಷ್ಟ್ಯಗಳನ್ನು ಉಳಿಸಿಕೊಂಡಿದೆ ಎನ್ನುವುದು.
  6. ವಿಚೋಲಿ ವಿಚ್ ಎಂದರೆ ಕೇಂದ್ರ ಎಂದರ್ಥ. ಇದರಿಂದ ವಿಭೋಲಿ ರೂಪು ತಳೆದಿದೆ. ಇದನ್ನು ವಿಭೋಲೋ `ಮಧ್ಯಭಾಗದಲ್ಲಿ ಮಾತಾಡುತ್ತಾರೆ. ಈ ಪ್ರಭೇದವನ್ನು ವಿದ್ಯಾವಂತರ ಮಾತಿನಲ್ಲಿ ಹಾಗೂ ಸಾಹಿತ್ಯದಲ್ಲಿ ಬಳಸುವ ಪ್ರಮಾಣ ಅಥವಾ ಶಿಷ್ಟ ಪ್ರಭೇದವೆಂದು ಸ್ವೀಕರಿಸಲಾಗಿದೆ. ಹೈದರಾಬಾದ್ ಮತ್ತು ಮಧ್ಯ ಸಿಂಧ್ (ವಿಚೊಲೊ ಪ್ರದೇಶ) ಸುತ್ತಲೂ ಮಾತನಾಡುವ ಪ್ರತಿಷ್ಠೆಯ ಉಪಭಾಷೆ. ಸಿಂಧಿಯ ಸಾಹಿತ್ಯಿಕ ಮಾನದಂಡವು ಈ ಉಪಭಾಷೆಯನ್ನು ಆಧರಿಸಿದೆ.
  7. ಫಿರಾಕಿ ಸಿಂಧಿ: ಬಲೂಚಿಸ್ತಾನದ ಈಶಾನ್ಯ ಜಿಲ್ಲೆಗಳಲ್ಲಿ ಕಚ್ಚಿ ಬಯಲಿನ ಉಪಭಾಷೆ, ಇದನ್ನು ಫಿರಾಕಿ ಸಿಂಧಿ ಅಥವಾ ಸಾಮಾನ್ಯವಾಗಿ ಸಿಂಧಿ ಎಂದು ಉಲ್ಲೇಖಿಸಲಾಗುತ್ತದೆ.
  8. ಸಿಂಧಿ ಭಿಲ್: ಇದು ಸಿಂಧ್‌ನಲ್ಲಿ ಮೇಘವರ್‌ಗಳು ಮತ್ತು ಭಿಲ್‌ಗಳು ಮಾತನಾಡುವ ಉಪಭಾಷೆಯಾಗಿದೆ.[42] ಸಿಂಧಿ ಭಿಲ್ ಅನೇಕ ಹಳೆಯ ಸಿಂಧಿ ಪದಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ, ಇದು ಅರೇಬಿಕ್, ಪರ್ಷಿಯನ್ ಮತ್ತು ಚಘತಾಯಿ ಪ್ರಭಾವದ ನಂತರ ಕಳೆದುಹೋಯಿತು.
  9. ಸಿರೋಲಿ/ಸಿರೈಕಿ ಅಥವಾ ಉಭೇಜಿ : ಉತ್ತರ ಸಿಂಧ್ ಪ್ರಾಂತ್ಯದಲ್ಲಿ ಬಳಕೆಯಲ್ಲಿದೆ. ಸಿರೋ ಎಂದರೆ ತೊರೆಯ ಮೇಲ್ಭಾಗ ಎಂದರ್ಥ. ಸಿಂಧ್‌ನಾದ್ಯಂತ ಮಾತನಾಡುತ್ತಾರೆ ಆದರೆ ಬಹುಪಾಲು ಜಾಕೋಬಾಬಾದ್ ಮತ್ತು ಕಾಶ್ಮೋರ್‌ನಲ್ಲಿದೆ, ಇದು ದಕ್ಷಿಣ ಪಂಜಾಬ್‌ನ ಸರೈಕಿ ಭಾಷೆಯೊಂದಿಗೆ ಸ್ವಲ್ಪ ಹೋಲಿಕೆಯನ್ನು ಹೊಂದಿದೆ. ಮತ್ತು ಇದನ್ನು ಸರೈಕಿಯ ಉಪಭಾಷೆಯಾಗಿ ಅಥವಾ ಸಿಂಧಿ ಉಪಭಾಷೆಯಾಗಿ ಪರಿಗಣಿಸಲಾಗಿದೆ. ಇದರಿಂದ ಸಿರೇಲಿ ಎಂಬುದು ರೂಪುಗೊಂಡಿದೆ. ಉತ್ತರದಲ್ಲಿ ಮುಲ್ತಾನಿ ಇರುವುದರಿಂದ, ಸಹಜವಾಗಿಯೇ ಮುಲ್ತಾನಿ ಮತ್ತು ಸಿರೇಲಿ ವಾಕ್ಯರಚನಾ ವಿಧಾನಗಳಲ್ಲಿ ಸಾಮ್ಯವುಂಟು. ಸರ್ವನಾಮ ಪ್ರತ್ಯಯಗಳನ್ನು ಈ ಉಪಭಾಷೆಯಲ್ಲಿ ಕಾಣಬಹುದಾದ್ದರಿಂದ, ಇದು ಇನ್ನಿತರ ಉಪಭಾಷೆಗಳಿಗಿಂತ ಭಿನ್ನತೆ ಪಡೆದಿದೆ. ಸ್ವರೋನ್ನತಿ ಮತ್ತು ನಾದಯುಕ್ತ ಸ್ವರಭಾರ ಈ ಭಾಷಾರೂಪದಲ್ಲಿ ಹೆಚ್ಚಾಗಿದೆ.

ಭಾರತಕ್ಕೆ ವಲಸೆ ಬಂದ ಸಿಂಧಿ ಹಿಂದೂಗಳು ಮಾತನಾಡುವ ಸಿಂಧಿ ವೈವಿಧ್ಯವನ್ನು ಡಕ್ಸ್ಲಿನು ಸಿಂಧಿ ಎಂದು ಕರೆಯಲಾಗುತ್ತದೆ. ಇದಲ್ಲದೆ, ಕಚ್ಚಿ ಮತ್ತು ಜಡ್ಗಲಿಗಳನ್ನು ಕೆಲವೊಮ್ಮೆ ಸ್ವತಂತ್ರ ಭಾಷೆಗಳ ಬದಲಿಗೆ ಸಿಂಧಿಯ ಉಪಭಾಷೆಗಳಾಗಿ ವರ್ಗೀಕರಿಸಲಾಗಿದೆ.

ಸಿಂಧಿ ಭಾಷಯ ಬಳಕೆ

[ಬದಲಾಯಿಸಿ]

೮ನೇಶತಮಾನದಲ್ಲಿ ಮಹಾ ಭಾರತದಲ್ಲಿ ಮಹಾಭಾರತದಲ್ಲಿ ಸಿಂಧಿ ಭಾಷೆಯ ಉಲ್ಲೇಖವನ್ನು ನೋಡಬಹುದು ಇದು ಮೊದಲಿಗೆ ಸಿಂಧ್ ಭಾಷೆಯಲ್ಲಿ ದೇವನಾಗರಿ ಮತ್ತು ಲುಂಡಾ ಲಿಪಿಗಳ ಹಲವಾರು ರೂಪಗಳನ್ನು ವ್ಯಾಪಾರಕ್ಕಾಗಿ ಬಳಸುತ್ತಿದ್ದರು ೧೯ ನೇಶತಮಾನದಲ್ಲಿ ಉತ್ತರಾರ್ಥದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಸಿಂಧ್ ಭಾಷೆಯನ್ನು ವರ್ಣಮಾಲೆಯನ್ನು ಬಳಸಲಾಯಿತು ಮಧ್ಯಕಾಲೀನ ಸಿಂಧಿ ಭಾಷೆಯನ್ನು ಭಕ್ತಿ ಸಾಹಿತ್ಯದಲ್ಲಿ ೧೫೦೦-೧೮೪೩ ಸೂಫಿ ಕವನ ನತ್ತು ಅದ್ವೈತ ವೇದಾಂತ ಕಾವ್ಯಗಳಲ್ಲಿ ಭಾಷೆಯನ್ನು ನೋಡಬಹುದು ಸಿಂಧೀ ಇಂಡೋಆರ್ಯನ್ ಭಾಷೆ ಇದು ಉತ್ತರ ಭಾಗದ ಪ್ರದೇಶದಲ್ಲಿ ಮಾತನಾಡುವ ಭಾಷೆಯಾಗಿದೆ ಸಿಂಧೀ ಭಾಷೆಯು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸಿಂಧಿ ಭಾಷೆಗಳ ಭಾಷಾ ಕುಟುಂಬಗಳನ್ನು ಒಳಗೊಂಡಿದೆ ಭಾರತ ಸರ್ಕಾರವು ಸಿಂಧೀಯನ್ನು ಆಯ್ಕಯ ಭಾಷೆಯಾಗಿ ಮತ್ತು ಭಾರತದಲ್ಲಿ ಅಧ್ಯನ ಮಾಧ್ಯಮವಾಗಿ ವಿದ್ಯಾರ್ಥಿಗಳಿಗೆ ಸಿಂಧಿ ಕಲಿಯುವುದಕ್ಕೆ ಆಯ್ಕೆ ನೀಡಲಾಗಿದೆ.[೧೦]

ಸಿಂಧಿ ಭಾಷೆಯ ಉಗಮ

[ಬದಲಾಯಿಸಿ]

ಮೊದಲನೆಯವರು ಸಿಂಧಿಯನ್ನು ವರ್ಚಡ ಅಪಭ್ರಂಶದ ಮೂಲಕ ಸಂಸ್ಕೃತದಿಂದ ಬಂದಿದೆ. ಡಾ. ಅರ್ನೆಸ್ಟ್ ಟ್ರಂಪ್ ಈ ಸಿದ್ಧಾಂತದ ಪ್ರವರ್ತಕರಾಗಿದ್ದರು, ಸಿಂಧಿ ಹೀಗೆ ಸ್ವತಂತ್ರ ಭಾಷೆಯಾಗಿ ಮಾರ್ಪಟ್ಟಿದೆ, ಸಿಂಧಿ ಪ್ರಾಚೀನ ಇಂಡೋ-ಆರ್ಯನ್ ಭಾಷೆಯಾಗಿದ್ದು, ಬಹುಶಃ ಇದರ ಮೂಲ ಸಂಸ್ಕೃತ ಪೂರ್ವ ಇಂಡೋ-ಆರ್ಯನ್ ಇಂಡಸ್-ವ್ಯಾಲಿ ಭಾಷೆಯಲ್ಲಿರಬಹುದು. ಲಾಹಂಡಾ ಮತ್ತು ಕಾಶ್ಮೀರಿಗಳು ಅದರ ಅರಿವಿನ ಸಹೋದರಿಯಂತೆ ಕಂಡುಬರುತ್ತವೆ. ಸಿಂಧಿ ದ್ರಾವಿಡ ಭಾಷೆಯಲ್ಲಿ ಒಂದಾಗಿದೆ, ಸಿಂಧೂ ಕಣಿವೆಯಲ್ಲಿ ಆರ್ಯ ನೆಲೆಸುವ ಮೊದಲು ಸಿಂಧೂ ಕಣಿವೆಯನ್ನು ಆರ್ಯೇತರ (ದ್ರಾವಿಡ) ಜನರು ಆಕ್ರಮಿಸಿಕೊಂಡಿದ್ದಾರೆ ಎಂದು ಎಲ್ಲಾ ವಿದ್ವಾಂಸರು, ಪುರಾತತ್ತ್ವಜ್ಞರು, ಇತಿಹಾಸಕಾರರು ಮತ್ತು ಮಾನವಶಾಸ್ತ್ರಜ್ಞರು ಒಪ್ಪಿಕೊಂಡಿದ್ದಾರೆ.ಸಿಂಧಿಯನ್ನು ಈಗ ಅರೇಬಿಕ್ ನಾಸ್ಕ್ಲಿ ಲಿಪಿಯಲ್ಲಿ ಬರೆಯಲಾಗಿದೆ

ಉಲ್ಲೇಖಗಳು

[ಬದಲಾಯಿಸಿ]
  1. Iyengar, Arvind; Parchani, Sundri (2021). "Like Community, Like Language: Seventy-Five Years of Sindhi in Post-Partition India". Journal of Sindhi Studies. 1: 1–32. doi:10.1163/26670925-bja10002. S2CID 246551773. Retrieved 12 November 2021.
  2. Laurie Bauer, 2007, The Linguistics Student’s Handbook, Edinburgh
  3. Wadhwani, Y. K. (1981). "The Origin of the Sindhi Language" (PDF). Bulletin of the Deccan College Post-Graduate and Research Institute. 40: 192–201. JSTOR 42931119. Retrieved 9 April 2021.
  4. Nationalencyklopedin "Världens 100 största språk 2007" The World's 100 Largest Languages in 2007
  5. Austin, Peter; Austin, Marit Rausing Chair in Field Linguistics Peter K. (2008). One Thousand Languages: Living, Endangered, and Lost (in ಇಂಗ್ಲಿಷ್). University of California Press. ISBN 9780520255609.
  6. Paniker, K. Ayyappa (1997). Medieval Indian Literature: Surveys and selections (in ಇಂಗ್ಲಿಷ್). Sahitya Akademi. ISBN 9788126003655.
  7. Survey of India|8|3|chapter=Sindhi[ಶಾಶ್ವತವಾಗಿ ಮಡಿದ ಕೊಂಡಿ]
  8. Gazetteer of the Province of Sind (in ಇಂಗ್ಲಿಷ್). Government at the "Mercantile" Steam Press. 1907. pp. 188–519.
  9. Gulshan Majeed. "Ethnicity and Ethnic Conflict in Pakistan" (PDF). Journal of Political Studies. Retrieved December 27, 2013.
  10. https://www.britannica.com/topic/Sindhi-language
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: