ವಿಷಯಕ್ಕೆ ಹೋಗು

ಮಾಲ್ಡೀವ್ಸ್

Coordinates: 3°12′N 73°13′E / 3.20°N 73.22°E / 3.20; 73.22
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾಲ್ಡೀವ್ಸ್ ಗಣರಾಜ್ಯ
ދިވެހިރާއްޖޭގެ ޖުމްހޫރިއްޔާ
ಮಾಲ್ಡೀವ್ಸ್ ಗಣರಾಜ್ಯ
(Divehi Rājjey ge Jumhuriyyā)
Flag of ಮಾಲ್ಡೀವ್ಸ್
Flag
Coat of arms of ಮಾಲ್ಡೀವ್ಸ್
Coat of arms
Anthem: Qaumii salaam
"ರಾಷ್ಟ್ರದ ಏಕತೆಯೊಂದಿಗೆ ನಾವು ರಾಷ್ಟ್ರವನ್ನು ವಂದಿಸುವೆವು"
Capital
and largest city
ಮಾಲೆ
Official languagesಧಿವೇಹಿ ಭಾಷೆ
Ethnic groups
(2001)
≈98% Mahls (Divehin)
≈2% Others (Foreign labourers)
Demonym(s)Maldivian
Governmentಅಧ್ಯಕ್ಷೀಯ ಗಣತಂತ್ರ
ಮೊಹ್ಮದ್ ನಶೀದ್
ಮೊಹಮ್ಮದ್ ವಹೀದ್ ಹಸ್ಸನ್
• ಮಜ್ಲಿಸ್‌ನ ಸ್ಪೀಕರ್
ಅಬ್ದುಲ್ಲಾ ಶಹೀದ್
• ಮುಖ್ಯ ನ್ಯಾಯಾಧೀಶ
ಅಬ್ದುಲ್ಲಾ ಸಯೀದ್
ಸ್ವಾತಂತ್ರ್ಯ
26 ಜುಲೈ 1965
• Water (%)
ಅತ್ಯಲ್ಪ
Population
• ೨೦೦೯ estimate
396,334[೧] (176ನೆಯ1)
• 2006 census
298,842[೨]
GDP (PPP)೨೦೦೮ರ estimate
• Total
$1.713 ಶತಕೋಟಿ[೩]
• Per capita
$4,967[೩]
GDP (nominal)2008 estimate
• Total
$1.261 ಶತಕೋಟಿ[೩]
• Per capita
$3,654[೩]
HDI (2007)Increase0.771[೪]
Error: Invalid HDI value · 95th
CurrencyMaldivian Rufiyaa (MVR)
Time zoneUTC+5
Driving sideleft
Calling code960
Internet TLD.mv

ಮಾಲ್ಡೀವ್ಸ್ (ಧಿವೇಹಿ ಭಾಷೆ:ދިވެހިރާއްޖެ ಧಿವೆಹಿ ರಾಜೆ)ಅಥವಾ ಮಾಲ್ಡೀವ್ಸ್ ದ್ವೀಪಗಳು ಅಧಿಕೃತವಾಗಿ ಮಾಲ್ಡೀವ್ಸ್ ಗಣರಾಜ್ಯ, ಇದು ಹಿಂದೂ ಮಹಾಸಾಗರದಲ್ಲಿರುವ ದ್ವೀಪಗಳ ದೇಶ. ಭಾರತದ ಲಕ್ಷದ್ವೀಪದ ಎರಡು ಭಾಗದಲ್ಲಿ ದಕ್ಷಿಣೋತ್ತರವಾಗಿ ಇರುವ ಮಿನಿಕೊಯ್ ದ್ವೀಪ ಮತ್ತು ಚಾಗೋಸ್ ಆರ್ಚಿಪೆಲಾಗೊಗಳ ಮಧ್ಯೆ ಇಪ್ಪತ್ತಾರು ಹವಳದ್ವೀಪಗಳು ದ್ವಿಮುಖ ಸರಪಳಿಯ ರೂಪದಲ್ಲಿ ಹರಡಿಕೊಂಡಿವೆ. ಇದು ಲಕ್ಯಾಡಿವ್ ಸಮುದ್ರದಲ್ಲಿದೆ, ಶ್ರೀಲಂಕಾದ ನೈಋತ್ಯ ಭಾಗದಲ್ಲಿ ಸುಮಾರು ಏಳು ನೂರು ಕಿ.ಮೀ (435 mi)ದೂರದಲ್ಲಿದೆ.

ಮಾಲ್ಡೀವ್ಸ್‌ನ ಹವಳದ್ವೀಪ 90,೦೦೦ ಚದರ ಕಿ.ಮೀ ಭೂಪ್ರದೇಶದಲ್ಲಿ ಹರಡಿಕೊಂದಿದೆ, ಇದು ಜಗತ್ತಿನ ಅತ್ಯಂತ ವಿಭಿನ್ನವಾದ ದೇಶವಾಗಿ ಗುರುತಿಸಿಕೊಂಡಿದೆ. ಇದು ಮುಖ್ಯವಾಗಿ ಎರಡುನೂರು ವಸಾಹತುಗಳನ್ನು ಹೊಂದಿದ 1,192 ಕಿರು ದ್ವೀಪಗಳನ್ನು ಒಳಗೊಂಡಿದೆ.[೫] ಮಾಲ್‌, ಮಾಲ್ಡೀವ್ಸ್ ‌ಗಣರಾಜ್ಯದ ರಾಜಧಾನಿ ಹಾಗೂ ದೊಡ್ಡ ನಗರ ,(2006)ರ ಗಣತಿ ಪ್ರಕಾರ 103,693 ಜನಸಂಖ್ಯೆ ಹೊಂದಿದೆ. ಇದು ಕಾಪು ಹವಳದ್ವೀಪದಲ್ಲಿ ಉತ್ತರ ಮಲ್‌ ಹವಳದ್ವೀಪದ ದಕ್ಷಿಣದ ತುದಿಯಲ್ಲಿದೆ. ಇದು ಮಾಲ್ಡೀವ್ಸ್‌ನ ಆಡಳಿತದ ವಿಭಾಗವೂ ಆಗಿದೆ. ಪಾರಂಪರಿಕವಾಗಿ ಇದು ರಾಜರ ದ್ವೀಪವಾಗಿದ್ದು ಪುರಾತನ ಮಾಲ್ಡೀವ್ಸ್‌ ರಾಜವಂಶದದಿಂದ ಆಳ್ವಿಕೆ ನಡೆಸಲ್ಪಟ್ಟಿತ್ತು. ಅರಮನೆ ಇದ್ದ ಸ್ಥಳವಾಗಿತ್ತು.

ಮಾಲ್ಡೀವ್ಸ್, ಜನಸಂಖ್ಯೆ ಹಾಗೂ ಭೂಪ್ರದೇಶ ಎರಡರಲ್ಲೂ ಏಷ್ಯಾದ ಸಣ್ಣ ದೇಶವಾಗಿದೆ. 1.5 metres (4 ft 11 in)ಜೊತೆಗೆ ಭೂಗ್ರಹದಲ್ಲಿ ಸರಾಸರಿ ಸಮುದ್ರ ಮಟ್ಟದಿಂದ ಅತ್ಯಂತ ತಳಮಟ್ಟದಲ್ಲಿರುವ ದೇಶವಾಗಿದೆ.[೬] ಇದು ಜಗತ್ತಿನಲ್ಲಿಯೇ ಅತಿ ತಳಮಟ್ಟದ ಎತ್ತರದ ಪ್ರದೇಶವನ್ನು ಹೊಂದಿದ ದೇಶವಾಗಿದೆ.2.3 metres (7 ft 7 in)[೬]

"ಮಾಲ್ಡೀವ್ಸ್‌" ಶಬ್ದದ ವ್ಯುತ್ಪತ್ತಿ

[ಬದಲಾಯಿಸಿ]

"ಮಾಲ್ಡೀವ್ಸ್" ಹೆಸರು ಮಾಲೆ ಧಿವೆಹಿ ರಾಜ್ಜೆ ಎಂಬ ಮೂಲ ಶಬ್ದದಿಂದ ಬಂದಿದ್ದಾಗಿದೆ.("ದ್ವೀಪ ರಾಜಧಾನಿ ಮಾಲೆ")[ಪ್ರಾಧಿಕಾರದ ಅಧೀನದಲ್ಲಿ] ಇದು "ಮಾಲ್ಡೀವ್ಸ್"‌ನ ಸ್ಥಳೀಯ ಹೆಸರಾಗಿದೆ. ಈ ದ್ವೀಪರಾಷ್ಟ್ರದ ಹೆಸರು ಇದರ ರಾಜಧಾನಿ ಮಾಲೆಯ ಪರ್ಯಾಯ ಪದವಾಗಿದೆ. ಕೆಲವೊಮ್ಮೆ ’ಮಹಾಲ್ಡೀಬ್’ ಎಂದೂ ಇಲ್ಲಿಯ ಜನರನ್ನು ಮಾಲ್ಡೀವಿಯನ್ ’ಧಿವೆಹಿನ್’ ಎಂದು ಕರೆಯುತ್ತಾರೆ. ಧೀಬ್/ದೀಬ್ (ಆರ್ಚಾಯಿಕ್ ಧಿವೆಹಿ, ಸಂಸ್ಕೃತದ ದ್ವೀಪ್ ಶಬ್ದದ ಮೂಲವಾಗಿದೆ)ಇದರ ಅರ್ಥ ’ದ್ವೀಪ’ಮತ್ತು ಧಿವೆಸ್ (ಧಿವೆಹಿನ್)ನ ಅರ್ಥ ’ದ್ವೀಪವಾಸಿಗಳು’(ಮಾಲ್ಡೀವಿ ಜನರು). ವಸಾಹತು ಶಕೆಯ ಕಾಲದಲ್ಲಿ , ಈ ದೇಶವನ್ನು ಡಚ್‌ರು ಮಾಲ್ಡೀವಿಸ್‌ಚೆ ಐಲ್ಯಾಂಡನ್ ಎಂದು ಉಲ್ಲೇಖಿಸಿದ್ದಾರೆ. ಬ್ರಿಟೀಷರು ಸ್ಥಳೀಯ ಹೆಸರು ಬಳಸಿಕೊಂಡು ಮಾಲ್ಡೀವ್ ಐಸ್‌ಲ್ಯಾಂಡ್ ಎಂದು ಇಂಗೀಷ್ ಭಾಷೆಗೆ ತರ್ಜುಮೆ ಮಾಡಿದರು. ನಂತರ ಮಾಲ್ಡೀವ್ಸ್ ಆಗಿ ಬರೆಯಲ್ಪಟ್ಟಿತು.[ಸೂಕ್ತ ಉಲ್ಲೇಖನ ಬೇಕು]

ಶ್ರೀಲಂಕಾದ ಪ್ರಾಚೀನ ದಾಖಲೆಗಳ ಪ್ರಕಾರ,ಮಹಾವಂಶಾ ದಲ್ಲಿ ಈ ದ್ವೀಪವನ್ನು ಮಹಿಲಾದಿವಾ ಅಥವಾ ’ಐಸ್‌ಲ್ಯಾಂಡ್ ಆಫ್ ವುಮನ್’(ंअहिलदिभ) ಎಂದು ಪಾಳಿ ಭಾಷೆಯಲ್ಲಿ ಕರೆಯಲಾಗುತ್ತಿತ್ತು ಎಂಬ ಪ್ರಸ್ತಾಪವಿದೆ. ಮಹಾವಂಶಾ ಕ್ರಿ.ಶ ಪೂರ್ವ ಎರಡನೆಯ ಶತಮಾನಕ್ಕಿಂತಲೂ ಹಳೆಯ ಸಿಂಹಳದಿಂದ ಬಂದಿದೆ.[ಸೂಕ್ತ ಉಲ್ಲೇಖನ ಬೇಕು]

ಕೆಲವು ವಿದ್ವಾಂಸರ ಸಿದ್ಧಾಂತದ ಪ್ರಕಾರ "ಮಾಲ್ಡೀವ್ಸ್ " ಸಂಸ್ಕೃತಮಾಲದ್ವೀಪ (मालाद्वीप)ಎಂಬ ಶಬ್ದದಿಂದ ಬಂದಿದೆ. ಇದರರ್ಥ "ದ್ವೀಪಗಳ ಹೂಮಾಲೆ".[೭] ಇನ್ಯಾವುದೇ ಹೆಸರು ಬೇರೆ ಕಡೆ ಉಲ್ಲೇಖವಾಗಿಲ್ಲ. ಆದರೆ ಪ್ರಾಚೀನ ಸಂಸ್ಕೃತ ಪುಸ್ತಕಗಳಲ್ಲಿ ಅಂದರೆ ವೇದಿಕ್ ಕಾಲದಲ್ಲಿ "ನೂರು ಸಹಸ್ರ ದ್ವೀಪಗಳು" (ಲಕ್ಷದ್ವೀಪ)ಎಂದು ಉಲ್ಲೇಖವಿದೆ. ಮಾಲ್ಡೀವ್ಸ್ ಎಂಬುದು ಲಕ್ಯಾಡೀವ್ಸ್ ಮತ್ತು ಚಾಗೊಸ್ ದ್ವೀಪ ಗುಂಪನ್ನೊಳಗೊಂಡು ಒಂದು ವರ್ಗಕ್ಕೆ ಸೇರಿದ ಹೆಸರಾಗಿದೆ.[೮]

ಕೆಲವು ಮಧ್ಯಕಾಲೀನ ಅರಬ್ ಯಾತ್ರಿಕ ಇಬ್ನ್‌ ಬಟುಟಾ ಈ ದ್ವೀಪವನ್ನು ಮಹಾಲ್ ದಿಬಿಯತ್ (مهل دبيأت) ಎಂದು ಕರೆದರು. ಇದು ಅರೇಬಿಕ್ ಭಾಷೆಯ ಮಹಾಲ್ (ಸ್ಥಳ) ಎಂಬ ಶಬ್ದದಿಂದ ಬಂದಿದೆ.[೯] ಪ್ರಸ್ತುತ ಈ ಹೆಸರು ಮಾಲ್ಡೀವ್ ರಾಜ್ಯದ ಲಾಂಛನವಾಗಿ ಶಾಸನದಲ್ಲಿ ದಾಖಲಿಸಲಾಗಿದೆ. ಮಾಲ್ಡೀವ್ಸ್‌ನ ಪ್ರಾಚೀನ ಯೆಮೆನಿ ಹೆಸರು ದಿಬಾಜತ್.[೧೦]

ಫಿಲೊಸ್ಟೊರ್ಜಿಯಸ್ ಎಂಬ ಏರಿಯನ್ ಗ್ರೀಕ್ ಇತಿಹಾಸಕಾರನು (AD 354) ಡಿವೋಇಸ್ ನ ಒತ್ತೆಯಾಳುವಿನ (ಡಿವಿಯನ್ಸ್) ಬಗೆಗೆ ತನ್ನ ಹೊಮೆರೈಟ್ಸ್ ತನ್ನ ದ್ವೀಪ ರಾಜ್ಯಕ್ಕೆ ಸೇರಿದ ನಂತರ "ಡಿವುಸ್" (ಮಾಲ್ಡೀವ್ಸ್) ಎಂದು ಕರೆಯಲಾಯಿತು.[೧೧] ಈಗೀನ ಮಾಲ್ಡೀವ್ಸ್ ಹೆಸರು ಕೂಡ ಸಿಂಹಳದ ಮಾಲ ದಿವೈನಾ ಎಂಬ ಶಬ್ದ ಮೂಲದ್ದು. ಇದರರ್ಥ ನೆಕ್ಲೇಸ್ ದ್ವೀಪಗಳು. ಪ್ರಾಯಶಃ ದ್ವೀಪ ಸಮೂಹಗಳ ಆಕಾರ ನೆಕ್ಲೇಸ್ ರೂಪದಲ್ಲಿರುವುದರಿಂದ ಈ ಹೆಸರು ಬಂದಿರಬಹುದು.[ಸೂಕ್ತ ಉಲ್ಲೇಖನ ಬೇಕು]

ಭೂಗೋಳಶಾಸ್ತ್ರ

[ಬದಲಾಯಿಸಿ]
ಬಾಹ್ಯಾಕಾಶದಿಂದ ಮಲ್ಹೊಸ್ಮದುಲ್ಹು ಅಟಾಲ್ ಅನ್ನು ನೋಡಬಹುದಾಗಿದೆ. "ಫಸ್ದುಟೆರೆ" ಮತ್ತು ದಕ್ಷಿಣ ಮಲ್ಹೊಸ್ಮದುಲ್ಹು ಅಟಾಲ್‌ಗಳನ್ನ ಈ ಚಿತ್ರದಲ್ಲಿ ನೋಡಬಹುದಾಗಿದೆ.
ಮಾಲ್ಡೀವ್ಸ್‌‍ನಲ್ಲಿ ದ್ವೀಪಗಳನ್ನು ನೋಡಬಹುದಾಗಿದೆ.
ಚಿತ್ರ:Coralreef.jpg
ಮಾಲ್ಡೀವ್ಸ್‌‍ನಲ್ಲಿ ವಿವಿಧ ಸಮೂಹಗಳ ಹವಳ ದಿಬ್ಬಗಳಿವೆ.

ಮಾಲ್ಡೀವ್ಸ್ ಅಂದಾಜು 1,190 ಹವಳ ದ್ವೀಪ ಸಮೂಹಗಳನ್ನು ಉತ್ತರ-ದಕ್ಷಿಣ ದಿಕ್ಕಿನ ಉದ್ದಕ್ಕೂ ಎರಡು ಸಾಲಿನಲ್ಲಿ 26 ಹವಳ ದ್ವೀಪ‌ಗಳನ್ನು ಹೊಂದಿದೆ. ಹವಳದ ದ್ವೀಪಗಳು 90,೦೦೦ ಚದರ ಕಿ.ಮೀ ಭೂಪ್ರದೇಶದಲ್ಲಿ ಹರಡಿಕೊಂಡಿವೆ. ಇದು ಜಗತ್ತಿನ ಅತ್ಯಂತ ವಿಭಿನ್ನವಾದ ದೇಶವಾಗಿ ಗುರುತಿಸಿಕೊಂಡಿದೆ. ಈ ಅಟೋಲ್ಸ್‌ಗಳು ಜೀವಂತ ಹವಳ ದಿಬ್ಬ ಮತ್ತು ಮರಳು ದಿಣ್ಣೆಗಳನ್ನು ರಚಿಸಿದ್ದು, ಹಿಂದೂ ಮಹಾಸಾಗರದ ಆಳದಿಂದ ಮೇಲೆ ಬಂದಿರುವ ಜಲಾಂತರ್ಗಾಮಿಯಾಗಿ ದಕ್ಷಿಣೋತ್ತರವಾಗಿ 960 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿದೆ. ದಕ್ಷಿಣ ತುದಿಯಲ್ಲಿ ಮಾತ್ರ ಈ ನೈಸರ್ಗಿಕ ಹವಳ ದಿಬ್ಬಗಳು ಎರಡು ತೆರೆದ ಹಾದಿ ಹೊಂದಿದ್ದು ಈ ಭಾಗದಲ್ಲಿ ಸುರಕ್ಷಿತ ಹಡಗು ಸಂಚಾರಕ್ಕೆ ಅವಕಾಶವಿದೆ. ಹಿಂದೂ ಮಹಾಸಾಗರದ ಒಂದು ಭಾಗದ ಮೂಲಕ ಮಾಲ್ಡಿವ್ಸ್‌ನ ಪ್ರದೇಶಕ್ಕೆ ಹೋಗಬಹುದಾಗಿದೆ. ಆಡಳಿತದ ಉದ್ದೇಶಕ್ಕಾಗಿ ಮಾಲ್ಡೀವ್ ಸರ್ಕಾರ ಈ ಹವಳದ ದ್ವೀಪಗಳನ್ನು ಸಂಘಟಿಸಿ ಇಪ್ಪತ್ತೊಂದು ಆಡಳಿತದ ವಿಭಾಗಗಳನ್ನಾಗಿ ವಿಂಗಡಿಸಿದೆ. ಮಾಲ್ಡಿವ್ಸ್‌ನ ಅತಿದೊಡ್ಡ ದ್ವೀಪ ಗಾನ್ ಆಗಿದ್ದು ಇದು ಲಾಮು ಹವಳ ದ್ವೀಪಕ್ಕೆ ಅಥವಾ ಹ್ಯಾದುಮ್ಮಾತಿ ಮಾಲ್ಡಿವ್ಸ್‌ಗೆ ಸೇರುತ್ತದೆ. ಅದ್ದು ಹವಳ ದ್ವೀಪ‌‍ವು ಪಶ್ಚಿಮ ದ್ವೀಪಗಳ ರಸ್ತೆಗಳ ಸಂಪರ್ಕವನ್ನು ಹೊಂದಿವೆ.14 km (9 mi)[ಸೂಕ್ತ ಉಲ್ಲೇಖನ ಬೇಕು]

ಮಾಲ್ಡೀವ್ಸ್‌ನ ಅತಿ ಎತ್ತರದ ಸ್ವಾಭಾವಿಕ ಭೂಮಟ್ಟ 2.3 metres (7 ft 7 in) ಆಗಿದ್ದು. ಸರಾಸರಿ ಎತ್ತರವು 1.5 metres (4 ft 11 in) ಆಗಿರುತ್ತದೆ ಹಾಗೂ ಜಗತ್ತಿನಲ್ಲಿಯೇ ಅತ್ಯಂತ ತಳಮಟ್ಟದ ದೇಶ ಎಂಬ ದಾಖಲೆಯನ್ನು ಹೊಂದಿರುತ್ತದೆ. ಮಾನವ ನಿರ್ಮಿತ ಕಟ್ಟಡಗಳು ಕೆಲವು ಮೀಟರುಗಳಷ್ಟು ಎತ್ತರವನ್ನು ಹೆಚ್ಚಿಸಿವೆ. ದಿಬ್ಬಗಳು ಹವಳ ಚಿಪ್ಪುಗಳಿಂದ ಮತ್ತು ಜೀವಂತ ಹವಳಗಳಿಂದ ಕೂಡಿವೆ. ಸಮುದ್ರಕ್ಕೆ ನೈಸರ್ಗಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ ಅಲ್ಲದೆ ಇದು ಲಗೂನ್‌ಗಳ ರಚನೆಗೂ ಸಹಾಯಕವಾಗಿದೆ. ಸಮಾನಾಂತರ ದೂರದಲ್ಲಿರುವ ಉಳಿದ ದ್ವೀಪಗಳು ತುದಿಯಲ್ಲಿ ತಮ್ಮದೆ ಆದ ರಕ್ಷಣಾ ದಿಬ್ಬಗಳನ್ನು ಹೊಂದಿವೆ. ಸುತ್ತಮುತ್ತಲಿರುವ ತೆರೆದ ಹವಳ ದಿಬ್ಬಗಳು ಶಾಂತವಾದ ಲಗೂನ್‌ಗಳ ನೀರಿನ ಪ್ರವೇಶಕ್ಕೆ ಅನುಮತಿ ನೀಡುತ್ತವೆ. ತಡೆಗೋಡೆ ದಿಬ್ಬಗಳು ಹಿಂದೂ ಮಹಾಸಾಗರದ ಅಬ್ಬರ ಮತ್ತು ಎತ್ತರದ ಅಲೆಗಳಿಂದ ಈ ದ್ವೀಪವನ್ನು ರಕ್ಷಿಸುತ್ತವೆ.[ಸೂಕ್ತ ಉಲ್ಲೇಖನ ಬೇಕು]

ಮಾಲ್ಡೀವ್ಸ್‌‍ನಲ್ಲಿ ತಿಮಿಂಗಲ ಶಾರ್ಕ್ ಇಂತಹ ಜಲಚರಗಳು ಮತ್ತು ಹಲವು ಪ್ರಾಣಿಗಳು ಇಡೀ ದೇಶದ ಹವಳ ದಿಬ್ಬಗಳ ಮೇಲೆ ವಾಸಿಸುತ್ತಿವೆ.

ಹ್ಯೂಮಸ್152-millimetre (6.0 in)ಮಣ್ಣು ಈ ದ್ವೀಪದ ಮಣ್ಣಿನ ಮೇಲ್ಪದಲ್ಲಿ ದಪ್ಪ ರಚನೆ ಹೊಂದಿದೆ. ಹ್ಯೂಮಸ್ ಮಣ್ಣಿನ ಕೆಳಗೆ2 feet (0.61 m)ಮರಳಿನ ಕಣ ನಂತರ ಮರಳು ಆಮೇಲೆ ಶುಭ್ರ ನೀರನ್ನು ಹೊಂದಿದೆ. ಸಮುದ್ರ ದಂಡೆಯ ಸಮೀಪದ ಮಣ್ಣಿನಲ್ಲಿ ಉಪ್ಪಿನ ಪ್ರಮಾಣ ಹೆಚ್ಚಿನ ಮಟ್ಟದಲ್ಲಿದೆ. ಸಸ್ಯಗಳು ಕಡಿಮೆ ಇದ್ದು ಕೆಲವೆ ಕುರುಚಲು ಗಿಡ, ಹೂ ಗಿಡಗಳು ಮತ್ತು ಸಣ್ಣ ಸಣ್ಣ ಪೊದೆಗಳಿವೆ. ದ್ವೀಪದ ಒಳಪ್ರದೇಶದಲ್ಲಿ ಮ್ಯಾಂಗ್ರೋವ್ ಮತ್ತು ಆಲದ ಮರದ ಬೆಳವಣಿಗೆ ಹೆಚ್ಚಿನ ಪ್ರಮಾಣದಲ್ಲಿವೆ. ತೆಂಗಿನ ಮರ ರಾಷ್ಟ್ರೀಯ ಮರವಾಗಿದ್ದು ದ್ವೀಪದ ಎಲ್ಲಾ ಕಡೆಗಳಲ್ಲೂ ಬೆಳೆಯುತ್ತದೆ ಮತ್ತು ಇದರ ಉತ್ಪನ್ನಗಳು ಎಲ್ಲಾ ಜನರ ಜೀವನಶೈಲಿಯ ಅನಿವಾರ್ಯ ಭಾಗವಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಸೀಮಿತವಾದ ಸಸ್ಯ ಸಂಪತ್ತು ಮತ್ತು ಭೂಮಿ ಮೇಲಿನ ವನ್ಯಜೀವಿಗಳು ಸಮೃದ್ಧ ಕಡಲ ಜೀವನಕ್ಕೆ ಪೂರಕವಾಗಿದೆ. ನೀರಿನಿಂದ ಸುತ್ತುವರೆದ ಮಾಲ್ಡೀವ್ಸ್‌ ಜೈವಿಕ ವಿಜ್ಞಾನದ ಮತ್ತು ವಾಣಿಜ್ಯದ ಮಹತ್ವವಿರುವ ಅನೇಕ ಅಪರೂಪದ ಜೀವಿಗಳನ್ನು ಸಮೃದ್ಧವಾಗಿ ಹೊಂದಿದೆ. ಟ್ಯುನಾ ಮೀನುಗಾರಿಕೆ ಹಿಂದಿನಿಂದಲೂ ದೇಶದ ಪ್ರಮುಖ ವಾಣಿಜ್ಯದ ಮೂಲವಾಗಿದೆ. ಮಾಲ್ಡೀವ್ಸ್, ಸಮುದ್ರ ಜೀವನದ ಅದ್ಭುತ ವೈವಿಧ್ಯತೆಗಳನ್ನು ಹೊಂದಿದ್ದು, ಹವಳದ ಜೊತೆಗೆ ಅಪರೂಪದ 2,000ಕ್ಕಿಂತಲೂ ಹೆಚ್ಚಿನ ಮೀನಿನ ಜಾತಿಗಳನ್ನು, ರೀಫ್ ಮೀನಿನಿಂದ ರೀಫ್ ಶಾರ್ಕ್ ಮೀನಿನವರೆಗೂ, ಮೊರೆಯ್ ಇಲ್ಸ್ ಮತ್ತು ವಿವಿಧ ರೀತಿಯ ಮಾಂಟಾ ರೇಯ್ಸ್, ಸ್ಟ್ರೀಂಗರಿ, ಇಗಲ್ ರೇಯ್ಸ್ ಜಾತಿಯ ಮೀನುಗಳನ್ನು ಹೊಂದಿದೆ. ಮಾಲ್ಡೀವ್ಸ್ ನೀರು ವೇಲ್ಸ್ ಶಾರ್ಕ್‌ಗಳ ಬೆಳವಣಿಗೆಗೆ ಮೂಲಸ್ಥಾನವಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಹವಾಗುಣ

[ಬದಲಾಯಿಸಿ]
ಮಾಲ್ಡೀವ್ಸ್‌‍ನಲ್ಲಿನ ಸೂರ್ಯಾಸ್ತ

ಹಿಂದೂ ಮಹಾಸಾಗರವು ಈ ದೇಶದ ವಾತಾವರಣದ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ. ಏಕೆಂದರೆ ಇಲ್ಲಿಂದ ಬೀಸುವ ಮಾರುತಗಳೇ ಇಲ್ಲಿಯ ವಾತಾವರಣಕ್ಕೆ ಕಾರಣವಾಗುತ್ತವೆ. ಇದು ಉಷ್ಣತೆಯನ್ನು ಹೀರುವುದರಿಂದ ಹಿಡಿದು ಮಳೆಯಾಗುವ ಹಾಗೂ ಬೀಸುವ ಗಾಳಿಯ ಮೇಲೂ ಪರಿಣಾಮ ಬೀರುತ್ತದೆ. ವರ್ಷ ಪೂರ್ತಿ ಮಲ್ಡೀವ್ಸ್‌ನ ಉಷ್ಣತೆಯ ಮಟ್ಟ 24(75F)ರಿಂದ 33 °C (91 °F)ಇರುತ್ತದೆ. ಆದಾಗ್ಯೂ ತೇವಾಂಶ, ಹೋಲಿಸಿದಾಗ ಹೆಚ್ಚಿಗೆ ಇದೆ. ನಿಯಮಿತವಾಗಿ ಸಮುದ್ರದ ಕಡೆಯಿಂದ ಬೀಸುವ ತಂಗಾಳಿ ಉಷ್ಣತೆಯ ತೀವ್ರತೆಯನ್ನು ಕಡಿಮೆ ಮಾಡುತ್ತದೆ.[ಸೂಕ್ತ ಉಲ್ಲೇಖನ ಬೇಕು]

ದಕ್ಷಿಣ ಏಷ್ಯಾದ ಉತ್ತರ ಭಾಗಕ್ಕಿರುವ ಹೆಚ್ಚಿನ ಭೂ ಸಾಂದ್ರತೆಯು ಮಾಲ್ಡೀವ್ಸ್‌ನ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ. ಈ ಭೂಸಾಂದ್ರತೆಯು ಭೂಮಿಯ ಮತ್ತು ನೀರಿನ ಉಷ್ಣತೆಯ ವ್ಯತ್ಯಾಸಕ್ಕೆ ಕಾರಣವಾಗುತ್ತದೆ. ಈ ಅಂಶಗಳು ಹಿಂದೂ ಮಹಾಸಾಗರದಿಂದ ದಕ್ಷಿಣ ಏಷ್ಯಾದ ಕಡೆಗೆ ಬೀಸುವ ಅಧಿಕ ತೇವಯುಕ್ತ ಆಗ್ನೇಯ ಮನ್ಸೂನ್ ಗಾಳಿಯ ಪರಿಣಾಮವನ್ನು ತಡೆಯುತ್ತವೆ. ಮಾಲ್ಡೀವ್ಸ್‌ನ ’ವಾತಾವರಣ'ದ ಮೇಲೆ ಎರಡು ಕಾಲಗಳು ಪ್ರಮುಖ ಪ್ರಭಾವ ಬೀರುತ್ತವೆ: ಈಶಾನ್ಯ ಮಾನ್ಸೂನ್‌ನಿಂದ ಬೇಸಿಗೆಕಾಲ, ಜೊತೆಗೆ ಚಳಿಗಾಲ ಮತ್ತು ಮಳೆಗಾಲ ಏಪ್ರಿಲ್ ಕೊನೆಯಿಂದ ಅಕ್ಟೋಬರ್ ಕೊನೆವರೆಗೆ ಇರುತ್ತದೆ. ಇದು ವೇಗವಾದ ಗಾಳಿ ಮತ್ತು ಚಂಡಮಾರುತ ಉಂಟುಮಾಡುತ್ತದೆ. ವಾತಾವರಣವು ಅಕ್ಟೋಬರ್‌ನಿಂದ ನವೆಂಬರ್‌ನಲ್ಲಿ ತೇವಯುಕ್ತ ನೈರುತ್ಯ ಮಾನ್ಸೂನ್‌ದಿಂದ ಒಣ ಈಶಾನ್ಯ ಮಾನ್ಸೂನ್‌‌ಗೆ ಬದಲಾಗುತ್ತದೆ. ಈ ಅವಧಿಯಲ್ಲಿ ಈಶಾನ್ಯ ಗಾಳಿಯು ಈಶಾನ್ಯ ಮಾನ್ಸೂನ್‌ ರೂಪಗೊಳ್ಳಲು ಸಹಾಯ ಮಾಡುತ್ತದೆ. ಇದು ಮಾಲ್ಡೀವ್ಸ್‌ ಅನ್ನು ಡಿಸೆಂಬರ್ ಆರಂಭದಲ್ಲಿ ತಲುಪಿ ಮಾರ್ಚ್ ಕೊನೆಯವರೆಗೂ ಇರುತ್ತವೆ. ಆದಾಗ್ಯೂ ಮಾಲ್ಡೀವ್ಸ್‌ನ ವಾತಾವರಣ ಸ್ವರೂಪವು ದಕ್ಷಿಣ ಏಷ್ಯಾದ ಮಾನ್ಸೂನ್ ವಾತಾವರಣಕ್ಕೆ ಅನುಗುಣವಾಗಿರುವುದಿಲ್ಲ. ವಾರ್ಷಿಕವಾಗಿ ಮಳೆ ಬೀಳುವ ಸರಾಸರಿ ಪ್ರಮಾಣವು ಉತ್ತರದಲ್ಲಿ 2,540 ಮಿಲಿ ಮೀಟರ್ಸ್ ಮತ್ತು ದಕ್ಷಿಣದಲ್ಲಿ 3,810 ಮಿಲಿ ಮೀಟರ್ಸ್ ಇರುತ್ತದೆ.[ಸೂಕ್ತ ಉಲ್ಲೇಖನ ಬೇಕು]

Maldivesದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
Source: BBC Weather[೧೨]

ಪರಿಸರ ವಿಷಯಗಳು

[ಬದಲಾಯಿಸಿ]

ಕಳೆದ ಕೆಲವು ಶತಮಾನಗಳಿಂದ ಸಮುದ್ರದ ಮಟ್ಟವು ಹೆಚ್ಚಾಗಿದೆ20 centimetres (8 in);[೧೩][೧೪] ಪ್ರಪಂಚದ ಅತಿ ತಳ ಮಟ್ಟದಲ್ಲಿರುವ ದೇಶವಾಗಿದ್ದು, ನೈಸರ್ಗಿಕವಾದ ಎತ್ತರದ ಭೂಪ್ರದೇಶವೆಂದರೆ2.3 metres (7 ft 7 in) ಮತ್ತು ಸರಾಸರಿ ಸಮುದ್ರ ಮಟ್ಟಕ್ಕಿಂತ ಎತ್ತರವನ್ನು ಹೊಂದಿಕೊಂಡಿದ್ದು1.5 metres (4 ft 11 in), ಸಮುದ್ರದ ಮಟ್ಟ ಸತತ ಏರುವುಕೆಯು ಮಾಲ್ಡೀವ್ಸ್‌ನ ಅಸ್ಥಿತ್ವಕ್ಕೆ ಬೆದರಿಕೆ ಉಂಟುಮಾಡುತ್ತಿದೆ. ಆದಾಗ್ಯೂ ಸರಿಸುಮಾರು 1970ರಲ್ಲಿ ಸಮುದ್ರ ಮಟ್ಟ ಕುಸಿದಿದೆ.20–30 centimetres (8–12 in)[ಸೂಕ್ತ ಉಲ್ಲೇಖನ ಬೇಕು]

ಭೂಮಿ ಬಿಸಿಯಾಗುವಿಕೆಯ ಬಗ್ಗೆ ಮತ್ತು ಹಲವು ದ್ವೀಪಗಳು ಸಮುದ್ರ ಮಟ್ಟ ಹೆಚ್ಚುವಿಕೆಯ ನೀರಿನಿಂದ ಮುಳುಗಡೆಯಾಗುವ ಸಾಧ್ಯತೆಯ ಬಗ್ಗೆ ಕಾಳಜಿಯಿಂದ,ಅಧ್ಯಕ್ಷರಾದ ಮೊಹಮ್ಮದ್ ನಶೀದ್ರವರು 2008 ನವೆಂಬರ್‌ನಲ್ಲಿ ಭಾರತ,ಶ್ರೀಲಂಕ ಮತ್ತು ಆಸ್ಟ್ರೇಲಿಯಾದಲ್ಲಿ ಹೊಸ ಭೂಮಿ ಖರೀದಿಸುವ ಯೋಜನೆಯ ಬಗ್ಗೆ ಯೋಚಿಸಿದುದನ್ನು ಬಹಿರಂಗಗೊಳಿಸಿದರು. ಈಗಿನ ಅಂದಾಜಿನ ಪ್ರಕಾರ ಸಮುದ್ರದ ಮಟ್ಟವು 2100ರ ವೇಳೆಗೆ 59 centimetres (23 in)ರಷ್ಟು ಹೆಚ್ಚಾಗಬಹುದು. ಪ್ರವಾಸೋದ್ಯಮದಿಂದ ಬಂದ ಹಣವನ್ನು ಭೂಮಿ ಖರೀದಿಸಲು ಬಂಡವಾಳವಾಗಿ ಉಪಯೋಗಿಸಲಾಗುವುದು.[೧೫] ಅಧ್ಯಕ್ಷರು ತಮ್ಮ ಉದ್ದೇಶವನ್ನು ಈ ರೀತಿ ವಿವರಿಸುತ್ತಾರೆ:

ನಾವು ಮಾಲ್ಡೀವ್ಸ್‌ನ್ನು ಬಿಡಲು ಬಯಸುವುದಿಲ್ಲ ಆದರೆ ದಶಕಗಳ ಕಾಲ ನಾವು ಟೆಂಟ್‌ಗಳಲ್ಲಿ ಹವಾಮಾನ ನಿರಾಶ್ರಿತರಾಗಿ ವಾಸಿಸುವುದನ್ನು ಇಷ್ಟ ಪಡುವುದಿಲ್ಲ.[೧೬]

ಹಿಂದೂ ಮಹಾಸಾಗರದಲ್ಲಿ 2004 ರಲ್ಲಿ ಉಂಟಾದ ಭೂಕಂಪನದಿಂದ ಎದ್ದ ಸುನಾಮಿಯಿಂದ ಹಲವಾರು ಜನರು ನಿರಾಶ್ರಿತರಾಗಿದ್ದು. ಸಾಮಾಜಿಕ ಆರ್ಥಿಕ ರಚನೆಯ ಮೇಲೆ ಮತ್ತು ಪರಿಸರದ ಮೇಲೆ ಬದಲಾಯಿಸಲಾಗದ ಹಾನಿಯಾಗಿದೆ. ಈ ದುರಂತದ ನಂತರ ದ್ವೀಪದಲ್ಲಿ ತ್ಸುನಾಮಿಯಿಂದ ಉಂಟಾದ ಮಾರ್ಪಾಡನ್ನು ನಕ್ಷೆ ಬರೆಯುವರು ನಕ್ಷೆಯನ್ನು ತಿದ್ದಿ ಬರೆಯಲು ಯೋಚಿಸಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]

ಎಪ್ರಿಲ್ 22 ,2008 ರಂದು ಮಾಲ್ಡೀವ್ಸ್‌ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯಾಮ್ ಭೂಮಂಡಲಕ್ಕೆ ಹಸಿರುಮನೆಪರಿಣಾಮದಿಂದ ಅನಿಲ ಹೊರಸುವುದನ್ನು ಕಡಿಮೆ ಮಾಡದಿದ್ದರೆ ಸಮುದ್ರದ ಮಟ್ಟ ಹೆಚ್ಚಿ ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಮುಳುಗುವ ಎಚ್ಚರಿಕೆ ನೀಡಿದರು.[೧೭] ಮುಂದಿನ ಅಧ್ಯಕ್ಷ ಮಹಮ್ಮದ್ ನಶೀದ್‌ರವರು 2009ರಲ್ಲಿ ಮುಂದಿನ ದಶಕದೊಳಗೆ ಸೌರಶಕ್ತಿ ಮತ್ತು ಪವನ ಶಕ್ತಿಯಿಂದ ಮಾಲ್ದೀವ್ಸ್‌ನ್ನು ಕಾರ್ಬನ್-ಮುಕ್ತ ಮಾಡುವ ಪ್ರಮಾಣ ಮಾಡಿದ್ದಾರೆ.[೧೮] ಅಕ್ಟೋಬರ್ 17, 2009 ರಂದು ಹವಾಮಾನ ಬದಲಾವಣೆಯಿಂದ ಮಾಲ್ಡೀವ್ಸ್‌ನಂತ ಸಮುದ್ರಮಟ್ಟದಿಂದ ಕಡಿಮೆ ಎತ್ತರದಲ್ಲಿರುವ ದೇಶಗಳಿಗೆ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಇತ್ತೀಚೆಗೆ ಅಧ್ಯಕ್ಷ ನಶೀದ್‌ರವರು ಜಗತ್ತಿನ ಮೊದಲ ನೀರೊಳಗೆ ಸಚಿವ ಸಂಪುಟದ ಸಭೆ ಕರೆದ್ದರು.[೧೯]

ಇತಿಹಾಸ

[ಬದಲಾಯಿಸಿ]

ಮಾಲ್ಡೀವ್ಸ್‌ನ ತುಲನಾತ್ಮಕ ಮೌಖಿಕ ಅಧ್ಯಯನ, ಭಾಷಾಧ್ಯಯನ, ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಪದ್ಧತಿಗಳು ಸ್ಪಷ್ಟಪಡಿಸುವುದೇನೆಂದರೆ ಇಲ್ಲಿನ ಮೊದಲ ನಿವಾಸಿಗಳು ಸಂಗಮ್ ಕಾಲದಲ್ಲಿ ಕೇರಳದಿಂದ ಬಂದ ದ್ರಾವಿಡರು[೨೦] ಇರಬಹುದು, ಬಹುಶಃ ನೈರುತ್ಯ ಸಮುದ್ರತೀರ - ಈಗಿನ ಭಾರತೀಯ ಉಪಖಂಡದ ದಕ್ಷಿಣ ಭಾಗದ ಮತ್ತು ಶ್ರೀಲಂಕಾದ ಪಶ್ಚಿಮ ಭಾಗದಿಂದ ಬಂದ ಮೀನುಗಾರರಿರಬಹುದು. ಪುರಾತನ ತಮಿಳು ತಲೆಮಾರಿನ ಗಿರಾವರು ಜನರು ಅಂತಹ ಒಂದು ಸಮುದಾಯವಾಗಿದೆ. ಮಾಲೆಯಲ್ಲಿ ರಾಜಧಾನಿಯ ಸ್ಥಾಪನೆ ಮತ್ತು ರಾಜಾಡಳಿತದ ಬಗೆಗೆ ಪ್ರಾಚೀನ ಪುರಾಣ ಕಥೆಯಲ್ಲಿ ಮತ್ತು ಸ್ಥಳೀಯ ಜನಪದ ಕಥೆಗಳಲ್ಲಿ ಇವು ಉಲ್ಲೇಖವಾಗಿದೆ. ಈ ಸಮುದಾಯದವರು ದ್ವೀಪದ ಮೊದಲ ನಿವಾಸಿಗರು ಎಂದು ಪರಿಗಣಿಸಲಾಗಿದೆ. ಮಾಲ್ಡೀವ್‌ನಲ್ಲಿರುವ ಈಗಿನ ತಮಿಳು ಜನಸಂಖ್ಯೆ ಮತ್ತು ಸಂಸ್ಕೃತಿ ಬಲವಾದ ಆಧಾರ ಒದಗಿಸುತ್ತದೆ. ಜೊತೆಗೆ ತಮಿಳು-ಮಲಯಾಳಂ ಭಾಷೆಯು ಇದಕ್ಕೆ ತಳಹದಿಯಾಗಿದೆ. ಸ್ಥಳದ ಹೆಸರುಗಳಲ್ಲಿ ಕಿನ್ ಟರ್ಮ್ಸ್, ಕವನ, ನೃತ್ಯ ಮತ್ತು ಧಾರ್ಮಿಕ ನಂಬಿಕೆಗಳಲ್ಲಿ ಕೂಡ ಕಾಣಬಹುದಾಗಿದೆ. ಕೇರಳದಿಂದ ಸಮುದ್ರಯಾನ ಶುರುವಾದ್ದರಿಂದ ತಮಿಳರು ಲಕ್ಯಾಡಿವ್ಸ್‌‌ನಲ್ಲಿ ನೆಲೆಸಿದರು ಮತ್ತು ಮಾಲ್ಡೀವ್ಸ್ ಅನ್ನು ಒಂದು ದ್ವೀಪಸಮೂಹವಾಗಿ ಪರಿಗಣಿಸಲಾಯಿತು. ಗುಜರಾತಿಗಳು ಕೂಡ ಮೊದಲ ವಲಸಿಗರು ಎಂದು ಕೆಲವರು ವಾದಿಸುತ್ತಾರೆ. ಸಿಂಧು ನಾಗರೀಕತೆಯ ಕಾಲದಲ್ಲಿಗುಜರಾತ್‌ನಿಂದ ಸಮುದ್ರ ಪ್ರಯಾಣ ಕಡಿಮೆಯಾಯಿತು. ಜಾತಕಾಗಳು ಮತ್ತು ಪುರ‍ಾಣಗಳು ಕಡಲತಡಿಯ ವ್ಯಾಪಾರಕ್ಕೆ ಹೇರಳವಾದ ಸಾಕ್ಷಿ ಒದಗಿಸುತ್ತವೆ. ಬೇರೊಂದು ಮೊದಲ ವಲಸಿಗರು ಆಗ್ನೇಯ ಏಷ್ಯಾದಿಂದ ಬಂದವರಾಗಿದ್ದಾರೆ.[೨೧] ಕಳಿಂಗಾ(ಭಾರತ)ದಿಂದ ಗಡೀಪಾರು ಮಾಡಲಾದ ರಾಜ ವಿಜಯಾನ (ವಿಜಯ ಬಂಗ ಅಥವಾ ಬೆಂಗಾಲಿ ರಾಜ ಅವನ ತಾಯಿಯ ಪೂರ್ವಜರು ಕಳಿಂಗದವರಾಗಿದ್ದರು)ತಲೆಮಾರು ಮತ್ತು ಅವನ ನೂರಾರು ಸಹಚರರಾದ ಸಿಂಹಳೀಯರು ಅಲ್ಲಿಂದ 543 ರಿಂದ 483 BCE ನಡುವೆ ಮಾಲ್ಡೀವ್ಸ್‌ಗೆ ಬಂದರು. ಭಾರತದ ವ್ಯಾಯುವ್ಯ ಭಾಗದಲ್ಲಿ ತಮ್ಮ ಸ್ಥಳೀಯ ಪ್ರಾಂತ್ಯ ಒಡಿಶಾ ಮತ್ತು ಸಿನ್ಹಾಪುರವನ್ನು ಬಿಟ್ಟು ಇಲ್ಲಿಗೆ ಬಂದವರಾಗಿದ್ದರು. ಕ್ರಿ.ಪೂ 500ರ ಸುಮಾರಿಗೆ ರಾಜ ವಿಜಯ ಹಡಗಿನಲ್ಲಿ ಪ್ರಯಾಣ ಮಾಡಿ ಶ್ರೀಲಂಕಾಕ್ಕೆ ಬರಬೇಕಾದವನು ದಿಕ್ಕು ತಪ್ಪಿ ಮಹಿಳಾ ದ್ವೀಪಿಕ ಎಂದು ಕರೆಯುವ ಮಾಲ್ಡೀವ್ಸ್‌ಗೆ ಬಂದನೆಂದು ಮಹಾವಂಶಾದಲ್ಲಿ ಎಂದು ಉಲ್ಲೇಖಿಸಲಾಗಿದೆ. ಆ ಸಮಯದಲ್ಲಿ ಜನರು ಮಹಿಲಾದ್ವೀಪಿಕಾ ಮೂಲಕ ಶ್ರೀಲಂಕಾಗೆ ಪ್ರಯಾಣ ಮಾಡುತ್ತಿದ್ದರು ಎಂದು ಹೇಳುತ್ತದೆ. ಅವರು ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನಲ್ಲಿ ನೆಲೆಸಿದ ನಂತರ ಜನಸಂಖ್ಯೆ ಮತ್ತು ಇಂಡೋ-ಆರ್ಯನ್ ಭಾಷೆ ದೀವೆಹಿ ಯಲ್ಲಿ ಗಮನಾರ್ಹ ಬದಲಾವಣೆಗಳಾದವು.ದಕ್ಷಿಣದ ತುದಿಯ ಅಟೋಲನಲ್ಲಿ ಅರಬ್ ಮತ್ತು ಪೂರ್ವ ಏಷ್ಯಾ ನಿವಾಸಿಗಳಲ್ಲಿ ಕೆಲವು ಗುರುತು ಕಾಣಬಹುದು.[ಸೂಕ್ತ ಉಲ್ಲೇಖನ ಬೇಕು]

ರಾಜ ಅಶೋಕನ ಕಾಲದಲ್ಲಿ ಬೌದ್ಧ ಧರ್ಮ ಮಾಲ್ಡೀವ್ಸ್‌ಗೂ ವಿಸ್ತರಣೆಯಾಯಾಯಿತು ಮತ್ತು 12ನೇ ಶತಮಾನದವರೆಗೂ ಮಾಲ್ಡೀವ್ಸ್‌ ಜನರ ಪ್ರಮುಖ ಧರ್ಮ ಕೂಡಾ ಆಗಿತ್ತು.ಪ್ರಾಚೀನ ಮಾಲ್ಡೀವಿಯನ್ ರಾಜರು ಬೌದ್ಧ ಧರ್ಮಕ್ಕೆ ಬೆಂಬಲ ನೀಡಿದ್ದರು. ಮತ್ತು ಮಾಲ್ಡೀವ್‌ನಲ್ಲಿ ಮೊದಲ ಬರವಣಿಗೆ ಮತ್ತು ಕಲಾತ್ಮಕ ಕಲೆಗಳಾದ ಶಿಲ್ಪಕಲೆ, ವಾಸ್ತು ಶಿಲ್ಪಗಳಲ್ಲಿ ಹೆಚ್ಚಿನ ಬೆಳವಣಿಗೆಗಳು ಈ ಸಮಯದಲ್ಲಿ ಕಂಡುಬಂತು. ಇಸ್‌ಧೂ ಲೊಮಾಫಾನು ಈವರೆಗೆ ಮಾಲ್ಡೀವ್ಸ್‌ನಲ್ಲಿ ದೊರೆತ ಅತ್ಯಂತ ಹಳೆಯ ತಾಮ್ರ ಫಲಕ ಎಂದು ನಂಬಲಾಗಿದೆ. ಸಿರಿ ಫೆನ್ನಾಧಿಟ್ಟ ಮಹಾ ರದುಮ್ (ದಿನೈ ಕಲಾಮಿಂಜಾ) ಆಳ್ವಿಕೆಯ ಅವಧಿಯಲ್ಲಿ ಈ ಪುಸ್ತಕ ಕ್ರಿ.ಶ 1194 (590 AH)ರಲ್ಲಿ ಬರೆಯಲ್ಪಟ್ಟಿತು. ಮೊದಲ ಫಲಕವನ್ನುಳಿದು ಉಳಿದೆಲ್ಲವನ್ನೂ ದಿವೇಹಿ ಒಕುರುದ ’ಇವೆಲಾ’ ರೀತಿಯಲ್ಲಿ ಬರೆಯಲಾಗಿತ್ತು. ಮಾಲ್ಡೀವ್ಸ್‌ನ ಪುರಾಣದಲ್ಲಿ ಯುದ್ಧ ದೇವತೆ ತುಸಿಟ್ಸ್ ಮಾಕ್ರಿ,ಯಾವುದೇ ಮುಖಂಡ ಕಿರೀಟ ಧರಿಸಿದಾಗ ಕಾನೂನುಬಾಹಿರವಾದ ಕಾರ್ಯ ಮಾಡಬಾರದೆಂದು ಹೇಳಿದ್ದಾಳೆ.

ಸೆಯ್‌ಲಾನ್ ಸಿವಿಲ್ ಸರ್ವೀಸ್‌ಬ್ರಿಟೀಷ್ ಕಮೀಷನರ್ ಎಚ್.ಸಿ.ಪಿ.ಬೆಲ್ ಮಾಲ್ಡೀವ್ಸ್‌‌ನ ಉಳಿದ ಮೊದಲ ಸಂಸ್ಕೃತಿ ಬಗ್ಗೆ ಸರ್ವೇಕ್ಷಣಾ ಅಧ್ಯಯನ ಮೊದಲ ಬಾರಿ ನಡೆಸಿದರು. 1879ರಲ್ಲಿ ಬೆಲ್ ಈ ದ್ವೀಪದಲ್ಲಿ ನೌಕಾಘಾತಕ್ಕೆ ಒಳಗಾದರು,ಮತ್ತು ಹಲವಾರು ಬಾರಿ ಹಿಂದಿರುಗಿ ಪುರಾತನ ಬೌದ್ಧರ ಅಧಃಪತನದ ಬಗ್ಗೆ ಅಧ್ಯಯನ ನಡೆಸಿದರು. ಅವರು ಪ್ರಾಚೀನ ದಿಬ್ಬಗಳನ್ನು ಅಧ್ಯಯನ ಮಾಡಿದರು. ಅವುಗಳನ್ನು ಹವಿತ್ತಾ ಅಥವಾ ಉಸ್ತುಬು (ಈ ಹೆಸರುಗಳು ಚೈತಿಯಾ ಅಥವಾ ಸ್ತೂಪದಿಂದ ಬಂದಿದೆ)Dhivehi: ހަވިއްތަ ಎಂದು ಮಾಲ್ಡೀವಿಯನ್ಸ್‌ರಿಂದ ಕರೆಯಲ್ಪತ್ತದೆ. ಇವುಗಳು ಹಲವಾರು ಹವಳದ್ವೀಪಗಳಲ್ಲಿ ಕಂಡುಬರುತ್ತದೆ.

ಆದಾಗ್ಯೂ ಬೆಲ್ ಪ್ರತಿಪಾದಿಸುವುದೆನೆಂದರೆ ಪ್ರಾಚೀನ ಮಾಲ್ಡೀವಿಯನ್ನರು ತೆರವಾದ ಬೌದ್ದಧರ್ಮ ಅನುಕರಿಸುತ್ತಿದ್ದರು. ಹಲವಾರು ಸ್ಥಳೀಯ ಬೌದ್ದರು ಸರ್ವೇಕ್ಷಣೆ ನಡೆಸಿ ಈಗ ಉಳಿದ ವಸ್ತುಗಳನ್ನು ಮಾಲೆ ವಸ್ತುಸಂಗ್ರಹಾಲಯದಲ್ಲಿ ಮಹಾಯಾನ ಮತ್ತು ವಜ್ರಯಾನ ವಿಗ್ರಹ ನಿರ್ಮಾಣದ ಮೂಲಕ ಪ್ರದರ್ಶನಕ್ಕೆ ಇಟ್ಟಿದ್ದಾರೆ.

11 ಶತಮಾನದ ಆರಂಭದಲ್ಲಿ ಮಧ್ಯಯುಗದ ಚೋಳ ತಮಿಳ್ ಚಕ್ರವರ್ತಿ ಮೊದಲನೆಯ ರಾಜಾ ರಾಜಾ ಚೋಳ ನು ಚೋಳ ಸಾಮ್ರಾಜ್ಯದ ಭಾಗವಾಗಿ ಉತ್ತರ ಹವಳದ್ವೀಪದ ಮಿನಿಕೊಯ್ ಮತ್ತು ತಿಲದುನ್‌ಮತಿ ಯನ್ನು ಜಯಿಸಿರುವ ಸಾಧ್ಯತೆ ಇದೆ.

ಲೇಖನದಲ್ಲಿ ಕಾಣಸಿಗುವ ವೆರನಂದ ಚಿನ್ಹೆಗಳಿರುವಂತಹ (ಫೆನಂದಾಮಥಿ ಉನ್ಧೊಲಿ) ರಾಜರ ಅರಮನೆ ಗ್ರಾಫಿಕ್ ಚಿತ್ರಗಳು ಇಂಗ್ಲೀಷಿಗ ಸಿಡಬೆಲ್ಯೂ ರೊಸೆಟ್‌ರವರದು. ಈತ 25ಅಕ್ಟೋಬರ್1885ರಲ್ಲಿ ಮಾಲ್ಡೀವ್ಸ್‌‍ಗೆ ಭೇಟಿ ನೀಡಿದ್ದರು ಆಗ ಮೆಲೆ ನಗರದಲ್ಲಿ ತಂಗಿದ್ದರು, ಈತ ತನ್ನ ಹುಡುಕಾಟಗಳನ್ನು ಕಲೋನಿಯಲ್ ಮತ್ತು ಇಂಡಿಯನ್ ಎಗ್ಜೀಬೀಷನ್ ಗಳಲ್ಲಿ ಪ್ರದರ್ಶಿಸಿ ದಾಖಲೆ ಮಾಡುವ ಉದ್ದೇಶವನ್ನು ಹೊಂದಿದ್ದನು.

ಮಾಲ್ಡೀವಿಯನ್ ‌ಜನಪದದ ದಂತಕತೆಯ ಪ್ರಕಾರ ಕ್ರಿ.ಶ 12ನೇ ಶತಮಾನದ ಆರಂಭದಲ್ಲಿ ಕೊಇಮಲಾ ಹೆಸರಿನ ಸಿಲೋನ್‌ನ ಸಿಂಹಿಳಿ ವಂಶದ ಗಣ್ಯ ವ್ಯಕ್ತಿ ಮಧ್ಯಯುಗದ ರಾಜಕುಮಾರ ಉತ್ತರದ ಮಾಲ್ಹೊಸ್ಮದುಲು ಹವಳ ದ್ವೀಪದಲ್ಲಿರುವ ರಾಸ್ತೆಥೀಮು ದ್ವೀಪಕ್ಕೆ (ರಾಜನ ನಗರ) ಸಮುದ್ರಯಾನದ ಮೂಲಕ ಬಂದು ಅಲ್ಲಿಂದ ಮಾಲೆಯಲ್ಲಿ ಅವನ ಆಧಿಪತ್ಯ ಸ್ಥಾಪಿಸಿದನು. ಆ ನಂತರ ಹತ್ತನೇಯ ಶತಮಾನದಲ್ಲಿ ದಕ್ಷಿಣ ಭಾರತದ ಚೋಳರು ಆಕ್ರಮಣ ನಡೆಸುವವರೆಗೂ, ಆದೀತ್ತಾ (ಸೂರ್ಯ)ರಾಜವಂಶ ಆಡಳಿತ ನಡೆಸಿತ್ತು. ಚೋಳರು ಅದನ್ನು ಕೊನೆಗೊಳಿಸಿ ಕೆಲಕಾಲ ಮಾಲೆಯಲ್ಲಿ ಆಡಳಿತ ನಡೆಸಿರುವ ಸಾಧ್ಯತೆ ಇದೆ. ಮಾಲೆ ಅಟೋಲ್‌ನಲ್ಲಿರುವ ಸ್ಥಳೀಯ ಗಿರವಾರು ಜನರು ಕೊಇಮಲಾನನ್ನು ಮಾಲೆಗೆ ಆಹ್ವಾನಿಸಿ ರಾಜನಾಗಿ ಘೋಷಿಸಿದರು. ಕೊಇಮಲಾ ಕಲೊಯ್ (ಲಾರ್ಡ್ ಕೈಮಲಾ) ಮಾನಾಭರಣ ರಾಜನಂತೆ ಹೋಮಾ (ಚಂದ್ರ)ವಂಶದ ರಾಜನಾಗಿ ಆಳ್ವಿಕೆ ನಡೆಸಿದನು. ಇದನ್ನು ಕೆಲವು ಇತಿಹಾಸತಜ್ಞರು ಹೌಸ್ ಆಫ್ ಥೀಮುಗೆ ಎಂದು ಕರೆಯುತ್ತಾರೆ. ಕೈಮಲಾನ ಆಳ್ವಿಕೆ ನಂತರ ಮಾಲ್ಡೀವ್ಸ್‌ ಸಿಂಹಸನವನ್ನು ಸಿಂಗಾಸನಾ (ಸಿಂಹದ ಸಿಂಹಸನ)ಎಂದು ಕರೆಯಲಾಗುತ್ತಿತ್ತು.[೨೨] ಅದಕ್ಕಿಂತ ಮೊದಲು ಕೆಲವು ಪರಿಸ್ಥಿತಿಯ ನಂತರ ಇದನ್ನು ಸರಿಧಾಲೆಯಸ್ (ದಂತ ಸಿಂಹಾಸನ) ಎಂದೂ ಕರೆಯಲಾಗುತ್ತಿತ್ತು.[೨೩] ಕೊಇಮಲಾ, ಚೋಳರ ಆಳ್ವಿಕೆಯಿಂದ ಮಾಲ್ಡೀವ್ಸ್‌ನ್ನು ಮುಕ್ತಗೊಳಿಸಿದ ಎಂದು ಕೆಲವು ಇತಿಹಾಸತಜ್ಞರ ನಂಬುಗೆಯಾಗಿದೆ.

ಕೆಲವು ವಿದೇಶಿ ಪ್ರವಾಸಿಗರು ಅದರಲ್ಲೂ ಮುಖ್ಯವಾಗಿ ಅರಬ್ಬಿಗಳು, ಮಾಲ್ಡೀವ್ಸ್‌ ಪ್ರದೇಶವು ರಾಣಿಯ ಆಡಳಿತಕ್ಕೆ ಒಳಪಟ್ಟಿತ್ತು ಎಂದು ದಾಖಲಿಸಿದ್ದಾರೆ. ಈ ರಾಜ್ಯವು ಹಿಂದೆ ಕೊಇಮಾಲ ಆಡಳಿತದಲ್ಲಿತ್ತು ಅಲ್-ದ್ರಿಸಿ ಎಂಬುದು ಹಿಂದಿನ ಲೇಖಕರು ಬರೆದ ಬರವಣಿಗೆ ಅನ್ವಯಿಸಿದರೆ ಇದು ರಾಣಿಯರಲ್ಲಿ ಒಬ್ಬಳ ಹೆಸರು. ಅವಳ ಹೆಸರು ದಮಾಹಾರ್. ಇವಳು ಆದೀತ್ತಾ (ಸನ್) ಸಮ್ರಾಜ್ಯದ ಸದಸ್ಯೆ. ಹೋಮಾ (ಲೂನರ್)ವಂಶದ ರಾಜ ರಾಣಿಯರು ಆದೀತ್ತಾ(ಸನ್) ವಂಶದ ಜೊತೆಗೆ ಅಂತರ್ಜಾತಿ ವಿವಾಹ ಮಾಡಿಕೊಂಡರು. ಇದರಿಂದಲೇ 1968ರ ವರೆಗೂ "ಕುಲ ಸುಧಾ ಇರಾ" ಅಂದರೆ "ಸೂರ್ಯ ಚಂದ್ರರಿಂದ ಬಂದ ವಂಶದರು" ಎಂಬ ಔಪಚಾರಿಕ ಬಿರುದು ಇತ್ತು. ಅದೀತ್ತಾ ವಂಶದ ಆಡಳಿತದ ಬಗ್ಗೆ ಯಾವುದೇ ಅಧೀಕೃತ ಮಾಹಿತಿ ಲಭ್ಯವಿಲ್ಲ.

ಕ್ರಿ.ಶ 12 ಶತಮಾನದ ಕೊನೆಯಿಂದ ಇಸ್ಲಾಮಿಗೆ ಮತಾಂತರವಾದುದನ್ನು ಪ್ರಾಚೀನ ಶಾಸನದಲ್ಲಿ ತಾಮ್ರ ಫಲಕದಲ್ಲಿ ಬರೆದಿದ್ದಾರೆ. ಅಲ್ಲಿಯ ಸ್ಥಳೀಯ ಪ್ರಸಿದ್ಧ ಪುರಾಣ ಕಥೆಯ ಪ್ರಕಾರ ವಿದೇಶಿ ಸಂತನು(ಇವನು ಪರ್ಷಿಯಾ ನಗರದ ತಬ್ರಿಜ್ ಅಥವಾ ಮೊರಾಕನ್ ಬರ್ಬರ್ ಹೇಳಿಕೆ ಪ್ರಕಾರ) ರನ್ನಮಾರಿ ಎಂಬ ಭೂತವನ್ನು ಸುಮ್ಮನಿರಿಸಿದ. ಕೊಇಮಾಲ ನಂತರ ದೊವೆಮಿ ಕಲಾಮಿಂಜ ಕ್ರಿ.ಶ 1153ರಲ್ಲಿ ಇಸ್ಲಾಂಗೆ ಮತಾಂತರ ಹೊಂದಿದನು.

ಶತಮಾನಗಳಿಂದ ಅರಬ್ಬೀ ಸಮುದ್ರ ಮತ್ತು ಬಂಗಾಳ ಉಪ ಸಾಗರದ ದೇಶಗಳಿಂದ ಭೇಟಿ ನೀಡಿದ ವ್ಯಾಪಾರಿಗಳು ಮತ್ತು ನಾವಿಕರಿಂದ ಈ ದ್ವೀಪಗಳ ಬೆಳವಣಿಗೆ ಮೇಲೆ ಪರಿಣಾಮ ಬೀರಿದೆ. 1953 ರಲ್ಲಿ ಗಣರಾಜ್ಯ ಸ್ಥಾಪನೆಯ ವ್ಯರ್ಥ ಪ್ರಯತ್ನ ನೆಡೆಯಿತು, ಆದರೆ ಪುನಃ ಸುಲ್ತಾನನ ಆಳ್ವಿಕೆ ವಿಧಿಸಲಾಯಿತು. 1959ರಲ್ಲಿ ನಾಸೀರ್‌ರವರ ಕೇಂದ್ರಿಕರಣದ ಗುರಿಯ ಬಗ್ಗೆ ದಕ್ಷಿಣತುದಿಯ ಮೂರು ಅಟೋಲ್ ನಿವಾಸಿಗಳು ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ಅವರು ಯುನೈಟೆಡ್ ಸುವದಿವ್ ರಿಪಬ್ಲಿಕ್ ರೂಪಿಸಿ, ಅಬ್ದುಲ್ಲಾ ಅಫೀರ್‌ರನ್ನು ಅಧ್ಯಕ್ಷರಾಗಿಯು ಹಿತಾಧ್ದೂ ಈ ಗಣರಾಜ್ಯದ ರಾಜಧಾನಿ ಆಗಿಯು ಆರಿಸಲಾಯಿತು.

ಆದಾಗ್ಯೂ 1153 ರಿಂದ 1968, ರವರೆಗೂ ಸ್ವತಂತ್ರ ಇಸ್ಲಾಮಿಕ್ಸುಲ್ತಾನೇಟ್ ಆಡಳಿತ ನಡೆಸಲಾಯಿತು,ಮಾಲ್ಡೀವ್ಸ್ 1887 ರಿಂದ 1965 ಜುಲೈ 25 ತನಕ ಬ್ರಿಟೀಷ್ ಆಡಳಿತಕ್ಕೊಳಪಟ್ಟಿತ್ತು.

ಸ್ವಾತಂತ್ರ್ಯ

[ಬದಲಾಯಿಸಿ]

ಮಾಲ್ಡೀವ್ಸ್‌ಗೆ ಸಂಪೂರ್ಣ ರಾಜಕೀಯ ಸ್ವಾತಂತ್ರ್ಯ ನೀಡುವ ಒಪ್ಪಂದಕ್ಕೆ ಗೌರವಾನ್ವಿತ ಸುಲ್ತಾನ್ ಪರವಾಗಿ ಇಬ್ರಾಹಿಮ್ ನಾಸಿರ್ ರನ್ನಬಂದೆಯ್ರಿ ಕಿಲೆಗೆಫಾನ್ ಸಹಿ ಹಾಕಿದರು. ಗೌರವಾನ್ವಿತ ರಾಣಿಯ ಪರವಾಗಿ ಬ್ರಿಟೀಷ್ ರಾಯಭಾರಿ ಸರ್ ಮೈಕೆಲ್ ವಾಲ್ಕರ್‌ನ್ನು ಮಾಲ್ಡೀವ್ಸ್‌ ದ್ವೀಪದ ಪ್ರಧಾನಮಂತ್ರಿಯಾಗಿ ನಿಯೋಜಿಸಲಾಯಿತು. ಈ ಸಮಾರಂಭವು ಬ್ರಿಟೀಷ್ ಹೈ ಕಮೀಷನರವರ ಕೊಲೊಂಬೊದ ನಿವಾಸದಲ್ಲಿ ಜುಲೈ 26, 1965 ರಂದು ನಡೆಯಿತು. 1965ರಲ್ಲಿ ಬ್ರಿಟೀಷ್‌ರಿಂದ ಸ್ವಾತಂತ್ರ್ಯವಾದ ನಂತರ ರಾಜ ಮಹಮ್ಮದ್ ಫರೀದ್ ದಿದಿ ಆಧಿಪತ್ಯದಲ್ಲಿ ಸುಲ್ತಾನೇಟ್ ಇನ್ನೂ ಮೂರು ವರ್ಷ ಕೆಲಸ ನಿರ್ವಹಿಸಲು ಮುಂದುವರೆದನು. ನವೆಂಬರ್ 11, 1968ರಂದು ರಾಜಪ್ರಭುತ್ವ ಕೊನೆಗೊಳಿಸಲಾಯಿತು. ಇಬ್ರಾಹಿಮ್ ನಾಸೀರ್‌ರವರ ಅಧ್ಯಕ್ಷತೆಯಲ್ಲಿಗಣರಾಜ್ಯವನ್ನು ಪುನಃ ಸ್ಥಾಪಿಸಲಾಯಿತು. ಆದರೆ ಇದು ಸರ್ಕಾರದ ರಚನೆಯಲ್ಲಿ ಗಮನಾರ್ಹ ಬದಲಾವಣೆಯಾಗಲಿಲ್ಲ. ಮಾಲ್ಡೀವ್ ದ್ವೀಪ ದೇಶದ ಹೆಸರು ಮಾಲ್ಡೀವ್ಸ್ ಎಂದು ಅಧಿಕೃತವಾಗಿ ಬದಲಾಯಿತು. 1970ರ ಶುರುವಿಗೆ ಪ್ರವಾಸೋದ್ಯಮದಿಂದ ಈ ದ್ವೀಪ ಸಮೂಹಗಳ ಬೆಳವಣಿಗೆ ಆರಂಭವಾಯಿತು.

70ರ ದಶಕದಲ್ಲಿ ಅಧ್ಯಕ್ಷ ನಾಸೀರ್ ಒಳಗುಂಪಿಗೂ ಮತ್ತು ಪ್ರಸಿದ್ಧ ರಾಜಕೀಯ ವ್ಯಕಿಗಳ ನಡುವೆ ಒಳಜಗಳ 1975 ವರೆಗೂ ಮುಂದುವರೆದು ಚುನಾಯಿತ ಪ್ರಧಾನಿ ಅಹಮ್ಮದ್ ಝಕಿಯವರನ್ನು ಬಂಧಿಸಿ ಗಡಿಪಾರು ಮಾಡಿ ದೂರದ ಹವಳದ್ವೀಪದಲ್ಲಿ ಇಡಲಾಯಿತು. ಗಾನ್‌ನಲ್ಲಿರುವ ಬ್ರಿಟೀಷ್ ವಿಮಾನ ನಿಲ್ದಾಣ ಮುಚ್ಚುವಿಕೆಯಿಂದ ಮತ್ತು ಒಣ ಮೀನು ಮಾರುಕಟ್ಟೆ ಕುಸಿತವಾದ್ದರಿಂದ ಆರ್ಥಿಕತೆ ಕ್ಷೀಣಿಸಿತು. ಜೊತೆಗೆ ಅವರ ಆಡಳಿತಕ್ಕೆ ಬೆಂಬಲ ದೊರಕ್ಕದ್ದರಿಂದ 1978ರಲ್ಲಿ ಬೊಕ್ಕದದಿಂದ ಹಲವಾರು ಮಿಲಿಯನ್ ಡಾಲರ್ಸ್ ಜೊತೆಗೆ ನಾಸೀರ್ ಸಿಂಗಾಪುರಕ್ಕೆ ಪಲಾಯನ ಮಾಡಿದರು.

1978ರಿಂದ ಮೌಮುನ್ ಅಬ್ದುಲ್ ಗಯುಮ್ 30 ವರ್ಷ ಅಧ್ಯಕ್ಷರಾಗಿ ಆಡಳಿತ ಮಾಡಿದ್ದಾರೆ. ಆರು ಚುನಾವಣೆಯನ್ನು ನಿರಂತರವಾಗಿ ಯಾವುದೇ ವಿರೋಧವಿಲ್ಲದೆ ಗೆದ್ದಿದ್ದಾರೆ. ಇವರ ಆಯ್ಕೆಯ ಅವಧಿಯಲ್ಲಿ ಗಯುಮ್‌ರು ಬಡ ದ್ವೀಪಗಳ ಅಭಿವೃದ್ದಿಗೆ ಮೊದಲ ಪ್ರಾಮುಖ್ಯತೆ ನೀಡಿದ್ದರಿಂದ ರಾಜಕೀಯ ಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆಗೆ ದಾರಿ ತೋರಿತು. ವಿದೇಶಿ ಸಂಪರ್ಕಕ್ಕೆ ಹೆಚ್ಚಿನ ಉತ್ತೇಜನ ದೊರೆತು ಪ್ರವಾಸೋದ್ಯಮ ವೃದ್ಧಿಯಿಂದ ದ್ವೀಪಗಳ ಅಭಿವೃದ್ಧಿಯಾಯಿತು. ಆದಾಗ್ಯೂ ಇವರ ಆಡಳಿತ ವಿವಾದಾತ್ಮಕವಾಗಿ ಕೆಲವು ವಿಮರ್ಶಕರ ಪ್ರಕಾರ ರಾಜಕೀಯ ಪಕ್ಷಪಾತಿ ಸ್ವಾತಂತ್ರ್ಯವನ್ನು ಸೀಮಿತಗೊಳಿದ್ದರಿಂದ ಗಯುಮ್ ಒಬ್ಬ ನಿರಂಕುಶವಾದಿ ಎಂದು ಪರಿಗಣಿಸಲಾಯ್ತು.[೨೪]

ನಾಸೀರ್ ಬೆಂಬಲಿಗರು ಹಾಗೂ ವ್ಯಾಪಾರಿ ಆಸಕ್ತರು ಸರ್ಕಾರವನ್ನು ಉರುಳಿಸಲು ಹಲವಾರು (1980, 1983 ಮತ್ತು 1988ರಲ್ಲಿ) ಆಕ್ರಮಣಕಾರಿ ಪ್ರಯತ್ನದಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಮೊದಲೆರಡು ಪ್ರಯತ್ನ ಸ್ವಲ್ಪ ಯಶಸ್ಸು ಕಂಡಿತು,1988ರ ಆಕ್ರಮಣಕಾರಿ ಪ್ರಯತ್ನದಲ್ಲಿ 200ಜನ ಒಳಗೊಂಡ PLOTE ತಮಿಳು ಮಿಲಿಟರಿ ಗುಂಪಿನ ಜೊತೆಗೆ ವಿಮಾನ ನಿಲ್ದಾಣ ಸ್ವಾಧೀನ ಪಡಿಸಿಕೊಂಡರು ಮತ್ತು ಈ ಕಾರಣದಿಂದ ಗಯೂಮ್ ಮನೆಯಿಂದ ಮನೆಗೆ ಭಾರತೀಯ 1600 ವಾಯುಪಡೆಯ ಸೈನಿಕರು ಮಧ್ಯಪ್ರವೇಶಿಸಿ ಮಾಲೆಯಲ್ಲಿ ಆಡಳತ ಪುನಃಸ್ಥಾಪನೆ ಮಾಡುವ ತನಕ ಪಲಾಯನ ಮಾಡುತ್ತಿರಬೇಕಾಯಿತು.

1988 ನವೆಂಬರ್ ನಲ್ಲಿ ಮಾಲ್ಡೀವಿಯನ್ ಗುಂಪು ಮುಹಮ್ಮದು ಇಬ್ರಾಹಿಮ್ ಲುಟ್‌ಫೀ ಒಬ್ಬ ಸಣ್ಣ ವ್ಯಾಪಾರಿಯ ಮುಂದಾಳತ್ವದಲ್ಲಿ ಶ್ರೀಲಂಕಾದ ಬಾಡಿಗೆ ಸೈನಿಕರನ್ನು ಉಪಯೋಗಿಸಿಕೊಂಡು ಅಧ್ಯಕ್ಷ ಗಯೂಮ್ ವಿರುದ್ದ ಆಕ್ರಮಣ ಮಾಡಿದರು. ಮಾಲ್ಡೀವಿಯನ್ ಸರ್ಕಾರ ಸಹಾಯಕ್ಕಾಗಿ ಮನವಿ ಮಾಡಿಕೊಂಡ ನಂತರ, ಭಾರತೀಯ ಮಿಲಿಟರಿ ಮಧ್ಯಪ್ರವೇಶಿಸಿ ಬಾಡಿಗೆ ಸೈನಿಕರ ವಿರುದ್ದ ಹೋರಾಡಿ ಗಯೂಮ್ ಪುನಃ ಅಧಿಕಾರ ವಹಿಕೊಳ್ಳಲು ನೆರವಾದರು. ನವೆಂಬರ್ 3, 1988 ರ ರಾತ್ರಿ ಭಾರತದ ವಾಯು ದಳ ವಿಮಾನದ ಮೂಲಕ ಪ್ಯಾರಚ್ಯೂಟ್ ಬೆಟಾಲಿಯನ್ ಗುಂಪನ್ನು ಆಗ್ರಾದಿಂದ ಕಳುಹಿಸಿದರು. ಅವರಲ್ಲಿ ಕೆಲವರು ಮಾಲ್ಡೀವ್ಸ್‌ನ್ನು ನಿರಂತರ2,000 kilometres (1,200 miles) ಸುತ್ತುವರಿದರು. ಭಾರತೀಯ ವೈಮಾನಿಕ ಸೈನಿಕರು ಹುಲುಲುನಲ್ಲಿ ಇಳಿದರು ಮತ್ತು ಒಂದು ತಾಸಿನ ಒಳಗಡೆ ವಿಮಾನ ನಿಲ್ದಾಣ ಭದ್ರ ಪಡಿಸಿ ಸರ್ಕಾರವನ್ನು ಮಾಲೆಯಲ್ಲಿ ಪುನಃ ಸ್ಥಾಪಿಸಿದರು. ಅಲ್ಪಾವಧಿಯ ರಕ್ತರಹಿತ ಕಾರ್ಯಾಚರಣೆಯನ್ನು ಆಪರೇಷನ್ ಕ್ಯಾಕ್ಟಸ್ ಎಂದು ಗುರುತಿಸಲಾಯಿತು. ಇದರಲ್ಲಿ ಭಾರತೀಯ ನೌಕಾಪಡೆ ಕೂಡ ಭಾಗವಹಿಸಿತ್ತು.

2004 ರ ಸುನಾಮಿ

[ಬದಲಾಯಿಸಿ]

26 ಡಿಸೆಂಬರ್ 2004ರಂದು, ಹಿಂದೂ ಮಹಾಸಾಗರದ ಭೂಕಂಪದ ನಂತರ ಸುನಾಮಿಯಿಂದಾಗಿ ಮಾಲ್ಡೀವ್ಸ್ ಛಿದ್ರಗೊಂಡಿತು. ಒಂಬತ್ತು ದ್ವೀಪಗಳು ಮಾತ್ರ ಯಾವುದೇ ಪ್ರವಾಹವಿಲ್ಲದೆ ಪಾರಾಗಿವೆ ಎಂದು ವರದಿ ಮಾಡಲಾಯಿತು. [ಸೂಕ್ತ ಉಲ್ಲೇಖನ ಬೇಕು]ಆದರೆ ಐವತ್ತೇಳು ದ್ವೀಪಗಳು ಸಂಪೂರ್ಣ ಅವ್ಯವಸ್ಥಿತವಾಗಿ ಗಂಭೀರ ಹಾನಿಯನ್ನು ಎದುರಿಸಿದವು. ಹದಿನಾಲ್ಕು ದ್ವೀಪಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಯಿತು ಮತ್ತು ಆರು ದ್ವೀಪಗಳು ಬಹಳಷ್ಟು ಜನರನ್ನು ಬಲಿತೆಗೆದುಕೊಂಡವು. ಅಲ್ಲದೇ ಇಪ್ಪತ್ತೊಂದು ಪ್ರವಾಸ ಸ್ಥಳದ ದ್ವೀಪಗಳನ್ನು ಗಂಭೀರ ಹಾನಿಯ ಕಾರಣದಿಂದ ನಿಷೇಧಿಸಲು ಒತ್ತಾಯಿಸಲಾಯಿತು. ಒಟ್ಟು ಹಾನಿಯನ್ನು ಸುಮಾರು 400 ಮಿಲಿಯನ್ ಡಾಲರುಗಳು ಅಥವಾ ಜಿಡಿಪಿಯ 62%ರಷ್ಟು ಎಂದು ಅಂದಾಜಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು] [ಸೂಕ್ತ ಉಲ್ಲೇಖನ ಬೇಕು]ಆರು ಜನ ವಿದೇಶಿಯರು ಸೇರಿದಂತೆ ಒಟ್ಟು 108 ಜನರು ಸುನಾಮಿಯಲ್ಲಿ ಸಾವನ್ನಪ್ಪಿದ್ದು ವರದಿಯಾಗಿತ್ತು.[೨೪] ಕಡಿಮೆ ಎತ್ತರವಿರುವ ಪ್ರದೇಶದಲ್ಲಿ ಅಲೆಗಳ ಹೊಡೆತದಿಂದಾಗಿ ಹೆಚ್ಚಿನ ಹಾನಿಯಾಗಿ ಅಲ್ಲಿ ಅಲೆಗಳಿಂದ ತಪ್ಪಿಸಿಕೊಳ್ಳ ಬಹುದಾದ ಯಾವುದೇ ಪ್ರದೇಶಗಳು ಇಲ್ಲವಾಗಿತ್ತು. ಅತ್ಯಂತ ಎತ್ತರವಾದ ಅಲೆಗಳು 14 feet (4.3 m)ಎತ್ತರವಾಗಿದ್ದವು ಎಂದು ವರದಿಯಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಬಹು-ಪಕ್ಷ ಪ್ರಜಾಪ್ರಭುತ್ವ

[ಬದಲಾಯಿಸಿ]

2004 ಮತ್ತು 2005ರ ಹಿಂಸಾತ್ಮಕ ಪ್ರತಿಭಟನೆಗಳು ರಾಜಕೀಯ ಪಕ್ಷಗಳನ್ನು ಕಾನೂನು ಬದ್ಧಗೊಳಿಸಲು ಮತ್ತು ಪ್ರಜಾಪ್ರಭುತ್ವೀಯ ಪ್ರಕ್ರಿಯೆಯನ್ನು ಅಭಿವೃದ್ಧಿ ಪಡಿಸಲು ಅಧ್ಯಕ್ಷ ಗಯೂಮ್ ಅವರು ಸುಧಾರಣೆಯ ಕ್ರಮ ಕೈಗೊಳ್ಳುವಂತೆ ಮಾಡಿತು. ಬಹು-ಪಕ್ಷ, ಬಹು-ಅಭ್ಯರ್ಥಿ ಚುನಾವಣೆಗಳು ಅಕ್ಟೋಬರ್ 9, 2008 ರಂದು ಜರುಗಿದವು. ಇದರಲ್ಲಿ 5 ಅಭ್ಯರ್ಥಿಗಳು ಅಧಿಕಾರದಲ್ಲಿರುವ ಗಯೂಮ್ ಪ್ರತಿಸ್ಪರ್ಧಿಗಳಾಗಿದ್ದರು. ಗಯೂಮ್ ಮತ್ತು ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಮೊಹಮದ್ ನಶೀದ್, ಮಾಜಿ ಪತ್ರಕರ್ತ ಮತ್ತು ಗಾಯೂಮ್ ಪ್ರಭುತ್ವದ ವಿಶ್ವಾಸಾರ್ಹ ವಿಮರ್ಶಕನಾಗಿದ್ದಂತಹ ರಾಜಕೀಯ ಖೈದಿ ನಡುವಿನ ಅಕ್ಟೋಬರ್ 28 ರ ಅಂತಿಮ ಘಟ್ಟದ ಚುನಾವಣೆಯಲ್ಲಿ ನಶೀದ್‌ ಮತ್ತು ಅವರ ಉಪಾಧ್ಯಕ್ಷ ಅಭ್ಯರ್ಥಿ ಡಾ.ವಾಹೀದ್‌ಗೆ ಶೇ 54 ರಷ್ಟು ಬಹುಮತ ಗಳಿಸಿದ ಫಲಿತಾಂಶ ಹೊರಬಿತ್ತು. ನವೆಂಬರ್ 11 , 2008 ರಲ್ಲಿ ತನ್ನ ಉತ್ತರಾಧಿಕಾರಿಗೆ ಅಧಿಕಾರವನ್ನು ಹಸ್ತಾಂತರಿಸುವ ಮುನ್ನ ಭಾಷಣದಲ್ಲಿ, ಗಯೂಮ್ "ನನ್ನ ಕಾರ್ಯದ ಸಂದರ್ಭದಲ್ಲಿನ ಯಾವುದೇ ಕೆಲಸಕಾರ್ಯಗಳು ಯಾವುದೇ ಮಾಲ್ಡೀವ್ ಪ್ರಜೆಗೆ ಅನ್ಯಾಯವೆಸಗಿದ್ದರೆ ಮತ್ತು ಅಂತಹ ವರ್ತನೆ ಕಂಡುಬಂದಿದ್ದರೆ ಅದನ್ನು ನಾನು ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ" ಎಂದು ಹೇಳಿದರು. ಗಯೂಮ್ ಆ ಸಮಯಕ್ಕಾಗಲೇ ಏಷ್ಯಾದ ಯಾವುದೇ ದೇಶದ ನಾಯಕರು ಸಲ್ಲಿಸದಷ್ಟು ದೀರ್ಘಾವಧಿ ಸೇವೆ ಸಲ್ಲಿಸಿದ ನಾಯಕರೆನಿಸಿದ್ದರು.[೨೪]

ಮೊಹಮದ್ ನಶೀದ್ ಮಾಲ್ಡೀವ್‌ನ ಬಹು-ಪಕ್ಷ ಪ್ರಜಾಪ್ರಭುತ್ವದಿಂದ ಪ್ರಥಮ ಅಧ್ಯಕ್ಷರಾಗಿ ಚುನಾಯಿತರಾದರು ಮತ್ತು ಡಾ.ವಾಹೀದ್ ಮಾಲ್ಡೀವ್ಸ್‌ನಲ್ಲಿ ಉಪಾಧ್ಯಕ್ಷರಾಗಿ ಪ್ರಥಮ ಬಾರಿಗೆ ಆಯ್ಕೆಯಾದರು. ಅವರ ಚುನಾವಣಾ ವಿಜಯವು ಅಧ್ಯಕ್ಷ ಗಯೂಮ್‌ರ 30ವರ್ಷದ ಆಡಳಿತವನ್ನು ಅಂತ್ಯಗೊಳಿಸಿತ್ತು.

ಅಧ್ಯಕ್ಷ ನಶೀದ್‌ರ ಹೊಸ ಸರ್ಕಾರವು 2004ರ ಸುನಾಮಿ ನಂತರ ದ್ವೀಪಗಳು ಮತ್ತು ಆರ್ಥಿಕತೆಯನ್ನು ಪುನಃಶ್ಚೇತನಗೊಳಿಸುವುದನ್ನು ಎದುರಿಸಬೇಕಿತ್ತು. ದ್ವೀಪಗಳ ಲಕ್ಷಣಗಳ ಮೇಲೆ ಜಾಗತಿಕ ತಾಪಮಾನದ ಪ್ರಭಾವಕ್ಕೆ ಸಂಬಂಧಿಸಿದಂತೆ, ನಿರುದ್ಯೋಗ, ಸರ್ಕಾರದ ಭ್ರಷ್ಟಚಾರ, ಮತ್ತು ಯುವಕರ ನಡುವೆ ಮಾದಕ ದ್ರವ್ಯ ಬಳಕೆ ಹೆಚ್ಚಳ-ಇವುಗಳ ಬಗ್ಗೆ ಕಾಳಜಿ ವಹಿಸಬೇಕಿತ್ತು. ನವೆಂಬರ್ 10,2008 ರಂದು ನಶೀದ್ ಪ್ರವಾಸೋದ್ಯಮದಿಂದ ಹಣವನ್ನು ಸಂಗ್ರಹಿಸುವ ಮೂಲಕ "ಅಧ್ಯಕ್ಷ ಸಂಪತ್ತು ನಿಧಿ"ಯನ್ನು ರಚಿಸುವ ಉದ್ದೇಶವನ್ನು ಘೋಷಿಸಿದರು. ಅದನ್ನು ಏರಿಕೆಯಾಗುವ ಸಮುದ್ರ ಮಟ್ಟಗಳು ದೇಶವನ್ನು ಆವರಿಸುವ ವಾಯುಗುಣ ಬದಲಾವಣೆಗೆ ಕಾರಣವಾಗುವುದರಿಂದ ಮಾಲ್ಡೀವ್ಸ್ ಜನರನ್ನು ಮರುಸ್ಥಳಾಂತರ ಮಾಡುವುದಕ್ಕಾಗಿ ಎಲ್ಲಿಯಾದರೂ ಭೂಮಿಯನ್ನು ಖರೀದಿಸಲು ಬಳಸಲಾಗುವುದು. ಸರ್ಕಾರವು ಸಾಂಸ್ಕೃತಿಕ ಮತ್ತು ವಾಯುಗುಣ ಸದೃಶ್ಯತೆಗಳಿರುವ ಶ್ರೀಲಂಕಾ ಮತ್ತು ಭಾರತದಲ್ಲಿ ಸ್ಥಳಗಳನ್ನು ಪರಿಗಣಿಸುವುದಾಗಿ ವರದಿ ಮಾಡಿದೆ ಮತ್ತು ಅವು ಆಸ್ಟ್ರೇಲಿಯಾದಂತೆ ಬಹುದೂರದಲ್ಲಿವೆ.[೨೪]

ನಾಗರೀಕರು ಆತ್ಮಸಾಕ್ಷಿಯ ಮೂಲ ಸ್ವಾತಂತ್ಯ್ರವನ್ನು ಆನಂದಿಸುತ್ತಾರೆಂಬುದನ್ನು ಖಚಿತಪಡಿಸಲು ಮಾಲ್ಡೀವ್ ದೇಶದ ಆಡಳಿತ ಸಮರ್ಥವಾಗಿಲ್ಲ ಎಂದು ಇತ್ತೀಚಿನ ಫೊರಂ18 ವರದಿಯಲ್ಲಿ ಗುರುತಿಸಲಾಗಿದೆ.[೨೫]

ರಾಜಕೀಯ

[ಬದಲಾಯಿಸಿ]

ಮಾಲ್ಡೀವ್ಸ್‌ನ ರಾಜಕೀಯವು ಅಧ್ಯಕ್ಷೀಯ ಗಣರಾಜ್ಯ ರಚನೆಯಲ್ಲಿ ಸ್ಥಾನವನ್ನು ಪಡೆದುಕೊಂಡಿತು. ಅಲ್ಲಿ ಅಧ್ಯಕ್ಷರು ಸರ್ಕಾರದ ಮುಖಂಡರಾಗಿದ್ದರು. ಅಧ್ಯಕ್ಷರು ಕಾರ್ಯಕಾರಿ ಸಮಿತಿಯ ನಾಯಕತ್ವ ವಹಿಸಿಕೊಳ್ಳುತ್ತಿದ್ದರು ಮತ್ತು ಸಂಸತ್ತಿನಿಂದ ಅನುಮೋದನೆ ಪಡೆದ ಸಚಿವ ಸಂಪುಟವನ್ನು ನೇಮಕ ಮಾಡುತ್ತಿದ್ದರು. ಅಧ್ಯಕ್ಷರು ಮಜ್ಲಿಸ್‌ನ (ಸಂಸತ್ತು) ರಹಸ್ಯ ಮತದಾನದ ಮೂಲಕ ಐದು-ವರ್ಷದ ಅವಧಿಯವರೆಗೆ ನೇಮಕವಾಗುತ್ತಿದ್ದರು. ಈ ನೇಮಕವು ರಾಷ್ಟ್ರೀಯ ಪ್ರಜಾಭಿಮತದಿಂದ ನಿರ್ಧರಿಸಲ್ಪಡುತ್ತಿತ್ತು. ಸಂವಿಧಾನವು ಮತದಾನದಿಂದ ಮುಸ್ಲಿಂ-ಅಲ್ಲದವರನ್ನು ಪ್ರತಿಬಂಧಿಸುತ್ತದೆ.

ಮಾಲ್ಡೀವ್ಸ್‌ನ ಮಜ್ಲಿಸ್‌ನ ಏಕ ಶಾಸನ ಸಭೆಯು ಐದು-ವರ್ಷ ಅವಧಿಗಳವರೆಗೆ ಸೇವೆ ಸಲ್ಲಿಸುವ ಐವತ್ತು ಸದಸ್ಯರಿಂದ ರಚಿತವಾಗಿತ್ತು. ಪ್ರತಿಯೊಂದು ಹವಳ ದ್ವೀಪದಿಂದ ಇಬ್ಬರು ಸದಸ್ಯರು ನೇರವಾಗಿ ಚುನಾಯಿತರಾಗುತ್ತಾರೆ. ಎಂಟು ಸದಸ್ಯರು ಅಧ್ಯಕ್ಷರಿಂದ ನೇಮಕವಾಗುತ್ತಾರೆ, ಇದು ಸಂಸತ್ತನ್ನು ಮಹಿಳೆ ಪ್ರವೇಶಿಸುವ ಮೂಲಕ ಮುಖ್ಯ ಮಾರ್ಗವಾಗಿದೆ.

ಸಂಸತ್ತಿಗಾಗಿ ನಡೆದ ಕಳೆದ ಬಾರಿಯ ಚುನಾವಣೆಗಳ ನಂತರ ಆರು ತಿಂಗಳಿಗೆ ಅಂದರೆ ಜುಲೈ 2005ರಲ್ಲಿ ಈ ದೇಶವು ತನ್ನ ಇತಿಹಾಸದಲ್ಲೇ ಪ್ರಥಮ ಬಾರಿಗೆ ರಾಜಕೀಯ ಪಕ್ಷಗಳನ್ನು ಪರಿಚಯಿಸಿತು. ಸಂಸತ್ತಿನ ಮೂವತ್ತಾರು ಸದಸ್ಯರು ದಿವೆಹಿ ರೈಯಾತುಂಗೇ ಪಕ್ಷ (ಮಾಲ್ಡೀವ್ ದೇಶದ ಜನತಾ ಪಕ್ಷ)ವನ್ನು ಸೇರಿದರು ಮತ್ತು ಮೌಮೂಮ್ ಅಬ್ದುಲ್ ಗಯೂಮ್‌ರನ್ನು ಅಧ್ಯಕ್ಷತೆಗೆ ಚುನಾಯಿಸಿದರು. ಸಂಸತ್ತಿನ ಹನ್ನೆರಡು ಸದಸ್ಯರು ಪ್ರತಿಪಕ್ಷವಾದ ಮಾಲ್ಡೀವಿಯನ್ ಪ್ರಜಾಪ್ರಭುತ್ವ ಪಕ್ಷದ ಸದಸ್ಯರಾಗಿ ರೂಪಗೊಂಡರು ಮತ್ತು ಇಬ್ಬರು ಸದಸ್ಯರು ಸ್ವತಂತ್ರರಾಗಿ ಉಳಿದರು. ಮಾರ್ಚ್ 2006ರಲ್ಲಿ, ಅಧ್ಯಕ್ಷ ಗಯೂಮ್ ತನ್ನ ಸುಧಾರಣಾ ಕಾರ್ಯಕ್ರಮಕ್ಕಾಗಿ ಸವಿಸ್ತಾರವಾದ ಮಾರ್ಗದರ್ಶನವನ್ನು ಪ್ರಕಟಗೊಳಿಸಿದರು, ಅದು ಹೊಸ ಸಂವಿಧಾನವೊಂದನ್ನು ಬರೆಯಲು ಕಾಲಮಿತಿಯನ್ನು ಒದಗಿಸುತ್ತಿತ್ತು ಮತ್ತು ಕಾನೂನು ರಚನೆಯನ್ನು ಆಧುನಿಕಗೊಳಿಸುವುದಾಗಿತ್ತು. ಆ ಮಾರ್ಗದರ್ಶನದ ಅಡಿಯಲ್ಲಿ ಸರ್ಕಾರವು ಸುಧಾರಣಾ ಮಾಪನಗಳ ಸಂಗ್ರಹವನ್ನು ಸಂಸತ್ತಿಗೆ ಒಪ್ಪಿಸುತ್ತದೆ. ಅತ್ಯಂತ ಅರ್ಥಪೂರ್ಣ ಭಾಗದ ಶಾಸನವನ್ನು ಜಾರಿಗೊಳಿಸಲಾಗಿದ್ದು, ಅದು ಮಾನವ ಹಕ್ಕುಗಳ ಆಯೋಗ ಕಾಯ್ದೆಗೆ ತಿದ್ದುಪಡಿಯಾಗಿದೆ. ಅದು ಪ್ಯಾರೀಸ್ ತತ್ವಗಳೊಂದಿಗೆ ಸಂಪೂರ್ಣ ವಿಧೇಯತೆಯನ್ನು ಹೊಂದಿರುವ ಹೊಸ ಸಮಿತಿಯನ್ನು ರೂಪಿಸುತ್ತದೆ.

ಮುಲಿಯಾಏಜ್- ಮಾಲ್ಡೀವ್ಸ್‌ನಲ್ಲಿರುವ ಪುರುಷರ ಅಧ್ಯಕ್ಷೀಯ ಅರಮನೆ.

ಸಮರೂಪದ ಅಧಿಕೃತ ವ್ಯಕ್ತಿಗಳು ಮತ್ತು ಸಂವಿಧಾನಿಕ ಶಾಸನ ಸಭೆಯನ್ನು ರಚಿಸುವ ಸಚಿವ ಸಂಪುಟದ ಸಮಾನ ಸಂಖ್ಯೆ ಹೊಂದಿರುವಲ್ಲಿ ಸಂಸತ್ತಿನ ಐವತ್ತು ಸದಸ್ಯರು ಸಭೆ ಸೇರುತ್ತಾರೆ, ಅದು ಅಧ್ಯಕ್ಷನ ಮೊದಲ ಹೆಜ್ಜೆಯಲ್ಲಿ ಮಾಲ್ಡೀವ್ಸ್‌ಗಾಗಿ ಆಧುನಿಕ ಉದಾರ ಪ್ರಜಾಪ್ರಭುತ್ವೀಯ ಸಂವಿಧಾನವನ್ನು ಬರೆಯಲು ಸಭೆಸೇರಿಸುವುದಾಗಿತ್ತು. ಜುಲೈ 2004 ರಿಂದ ಶಾಸನ ಸಭೆ ಸೇರಲಾಗುತ್ತಿತ್ತು ಮತ್ತು ಅಲ್ಲಿ ನಿಧಾನಗತಿಯ ಪ್ರಗತಿಯನ್ನು ವಿಸ್ತಾರವಾಗಿ ವಿಮರ್ಶೆ ಮಾಡಲಾಗುತ್ತಿತ್ತು. ಸರ್ಕಾರ ಮತ್ತು ಪ್ರತಿಪಕ್ಷ ಈ ವಿಳಂಬನೆಗಳಿಗಾಗಿ ಒಂದನ್ನೊಂದು ಆಕ್ಷೇಪಿಸುತ್ತಿದ್ದವು. ಆದರೆ ಸ್ವತಂತ್ರ ವೀಕ್ಷಕರು ನಿಧಾನಗತಿಯ ಪ್ರಗತಿಯು ಕೀಳು ಮಟ್ಟದ (ಎಂಪಿಗಳಲ್ಲದವರು ಪಕ್ಷದ ಟಿಕೇಟಿನಲ್ಲಿ ಚುನಾಯಿತರಾಗಿರುವರು) ಮತ್ತು ಕ್ರಮಬದ್ಧವಲ್ಲದ ಅಂತ್ಯವಿಲ್ಲದ ಆದೇಶಗಳ ಮಧ್ಯ ಪ್ರವೇಶದಿಂದಾಗಿ ಹೀಗಾಗಿದೆ ಆರೋಪಿಸಿದರು. ಸುಧಾರಣಾ ಕಾರ್ಯಕ್ರಮದ ನಿರ್ವಹಣೆಯ ನೇರ ಕ್ರಿಯೆ ಮುಂದಾಳತ್ವದಿಂದ ಅಧ್ಯಕ್ಷ ಗಯೂಮ್‌ರನ್ನು ಕೆಳಗಿಳಿಸಲು ಪ್ರಯತ್ನಿಸುವ ಮುಖ್ಯ ಪ್ರತಿಪಕ್ಷವಾದ ಎಂಡಿಪಿಯ ಬದ್ಧತೆ ಕಾರಣದಿಂದಾಗಿಯೂ ಸಹ ಪ್ರಗತಿಯು ನಿಧಾನವಾಗುತ್ತದೆ. ಇದು ಜುಲೈ-ಆಗಸ್ಟ್ 2004, ಆಗಸ್ಟ್ 2005ರ ಸಾರ್ವಜನಿಕ ವಿರಾಮವಿಲ್ಲದಿರುವಿಕೆಗೆ ಕಾರಣವಾಗಿ ಮತ್ತು ನವೆಂಬರ್‌ 2006ನಲ್ಲಿ ಪರಾಭವಗೊಂಡಿದ್ದರು. ಗಮನಾರ್ಹವಾಗಿ, ಎಂಡಿಪಿಯ ನಾಯಕ ಇಬ್ರಾಹಿಂ ಇಸ್ಮಾಯಿಲ್ (ಅತ್ಯಂತ ದೊಡ್ಡ ವಿಧಾನಸಭಾ ಕ್ಷೇತ್ರದ ಎಂಪಿ-ಪುರುಷ ವಿಭಾಗ), ಎರಡು ತಿಂಗಳುಗಳ ಮುಂಚೆ ಡಾ.ಮೊಹಮದ್ ವಾಹೀದ್ ಹಸಾನ್‌ರನ್ನು ಸಮೀಪವಾಗಿ ಎದುರಿಸಿದ ನಂತರ ಏಪ್ರಿಲ್ 2005ರಲ್ಲಿ ತನ್ನ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಅವರು ಕೊನೆಗೆ ತನ್ನ ಸ್ವಂತ ನ್ಯಾಷನಲ್‌ ಎಕ್ಸಿಕ್ಯೂಟಿವ್‌ ಕಮೀಟಿಯ ರಾಜಕೀಯ ಹಠವಾದಿತನವನ್ನು ಉದಾಹರಿಸುತ್ತಾ ನವೆಂಬರ್ 2006ರಲ್ಲಿ ಎಂಡಿಪಿಯನ್ನು ತೊರೆದರು. ಸರ್ಕಾರವು ಕಾಮನ್‌ವೆಲ್ತ್ ಸ್ಪೆಷಲ್‌ ಎನ್ವೊಯ್‌ನ ತುನ್ ಮುಸ ಹಿಟಾಮ್‌ನ ಸೇವೆಗಳನ್ನು ಎಲ್ಲಾ ಪಕ್ಷದ ಚರ್ಚೆಯನ್ನು ಜಾರಿಯಲ್ಲಿಡುವುದಕ್ಕಾಗಿ ಬಳಸಲಾಗುತ್ತಿತ್ತು. ಎಂಡಿಪಿ ಅವರನ್ನು ಬಹಿಷ್ಕರಿಸಿದಾಗ ಬ್ರಿಟಿಷ್ ಹೈ ಕಮೀಷನರ್‌ರಿಗೆ ಚರ್ಚೆಯ ಗಂಭೀರತೆಯನ್ನು ಪರಿಗಣಿಸಬೇಕಾಗಿ ಹೇಳಲಾಯಿತು. ತರುವಾಯ ವೆಸ್ಟ್‌ಮಿನಿಸ್ಟರ್ ಹೌಸ್ ಪ್ರಕ್ರಿಯೆಯು ಸ್ವಲ್ಪ ಪ್ರಗತಿಯನ್ನು ಮಾಡಿತು, ಆದರೆ ಅದು ನವೆಂಬರ್ ಕ್ರಾಂತಿಗಾಗಿಯೇ ಎಂಡಿಪಿ ಸ್ವೇಚ್ಛಾಚಾರಿ ಎಂದು ಕರೆದಿದೆ.

ಚಿತ್ರ:Mosque of Hulhumalé.jpg
ಹುಲ್ಹುಮಲೆ ಮಸೀದಿ

ಮಾರ್ಗದರ್ಶನವು ಶಾಸನ ಸಭೆ ತನ್ನ ಕೆಲಸವನ್ನು ಮುಕ್ತಾಯಗೊಳಿಸುವುದಕ್ಕೆ ಮೇ 31, 2007ರ ಅಂತಿಮ ಗಡುವನ್ನು ನೀಡುತ್ತದೆ ಮತ್ತು ಅದು ಅಕ್ಟೋಬರ್ 2008ರಿಂದ ದೇಶದಲ್ಲಿ ಮೊದಲ ಬಹು-ಪಕ್ಷ ಚುನಾವಣೆಗಳಿಗೆ ಹಾದಿಯನ್ನು ಸುಗಮಗೊಳಿಸುತ್ತದೆ. ಸವಾಲುಗಾರ ಮೊಹಮದ್ ನಶೀದ್ ಮತ್ತು ಡಾ.ಮೊಹಮದ್ ವಾಹೀದ್ ಹಸಾನ್ ಜಯಶೀಲರಾದ ಎರಡನೇ ಅಂತಿಮ-ಘಟ್ಟದ ಚುನಾವಣೆಯನ್ನು ಪ್ರಚೋದಿಸಲು ಈ ಚುನಾವಣೆಯು ಸಾಕಷ್ಟು ಹತ್ತಿರವಾಗಿತ್ತು. ಡಾ.ಮೊಹಮದ್ ವಾಹೀದ್ ಹಸಾನ್ ಅವರು ಚುನಾಣೆಗಳಲ್ಲಿ ಸ್ಪರ್ಧಿಸುವುದಕ್ಕಾಗಿಯೇ ಮಾಲ್ಡೀವ್ಸ್‌ಗೆ ಬರುತ್ತಿದ್ದರು. ಅಧ್ಯಕ್ಷ ನಶೀದ್ ಮತ್ತು ಉಪಾಧ್ಯಕ್ಷ ಡಾ. ವಾಹೀದ್ ಅವರು ನವೆಂಬರ್ 11,2008 ರಂದು ಕಛೇರಿಯಲ್ಲಿ ಪ್ರತಿಜ್ಞೆಬದ್ಧರಾದರು.

ಆದಾಗ್ಯೂ ಮೊನಾರ್ಕಿಯಿಂದ ಗಣರಾಜ್ಯದವರೆಗಿನ ನಡುವೆ ಇದ್ದ ಸಮಕಾಲೀನ ರಾಜಕೀಯ ರಚನೆಯು, ಅಧಿಕಾರವೆಂಬುದು ಸಾಮಾಜಿಕ ರಚನೆಯ ಅಗ್ರಸ್ಥಾನದಲ್ಲಿನ ಕೆಲವು ಕುಟುಂಬಗಳ ಮಧ್ಯೆಯೇ ಹಂಚಿಕೆಯಾಗಿದ್ದಂತಹ ಹಿಂದಿನ ಊಳಿಗಮಾನ್ಯ ಪದ್ಧತಿಯ ಮುಂದುವರಿಕೆಯನ್ನು ತೋರಿಸುತ್ತದೆ. ಕೆಲವು ದ್ವೀಪಗಳಲ್ಲಿ ಕಛೇರಿಗಳು ಸಂತತಿಗಾಗಿಯೇ ಅದೇ ಕುಟುಂಬದೊಳಗೆ ಉಳಿದಿವೆ. ಆಧುನಿಕ ದಿನದಲ್ಲಿ ಗ್ರಾಮವನ್ನು ಕಟಿಬು ಎಂದು ಕರೆಯುವ ಆಡಳಿತದ ಅಧಿಕಾರಿ ಆಳ್ವಿಕೆ ಮಾಡುತ್ತಿದ್ದು, ಅವನು ದ್ವೀಪದ ಕಾರ್ಯಕಾರಿ ಮುಖ್ಯಸ್ಥನಾಗಿ ಸೇವೆ ಸಲ್ಲಿಸುತ್ತಿದ್ದನು. ಪ್ರತಿ ಹವಳ ದ್ವೀಪದ ಕಟಿಬಸ್‌ ಅಟೊಇಯುವೆರಿಯಾ (ಹವಳ ದ್ವೀಪ ಮುಖ್ಯಸ್ಥ) ಆಗಿತ್ತು. ಈ ಸ್ಥಳೀಯ ಮುಖ್ಯಸ್ಥರ ಅಧಿಕಾರವು ಹೆಚ್ಚು ಸೀಮಿತವಾದದ್ದು ಮತ್ತು ಅವರು ಕೆಲವು ಜವಾಬ್ದಾರಿಗಳನ್ನು ವಹಿಸಿಕೊಂಡಿರುತ್ತಾರೆ. ಅವರನ್ನು ತಮ್ಮ ದ್ವೀಪಗಳಲ್ಲಿನ ಪರಿಸ್ಥಿತಿ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಸಲು ಮತ್ತು ಕೇಂದ್ರ ಅಧಿಕಾರದಿಂದ ಸಲಹೆಗಳಿಗಾಗಿ ಮಾತ್ರ ಕಾಯುವಂತೆ,ನಂತರ ಅವನ್ನು ಅನುಸರಿಸುವಂತೆ ತರಭೇತಿಗೊಳಿಸಲಾಗುತ್ತದೆ. ಆದರೂ ದ್ವೀಪಗಳು ರಾಜಧಾನಿಯಿಂ ಸಾಕಷ್ಟು ದೂರದಲ್ಲಿವೆ. ನಿರ್ದಿಷ್ಟ ದ್ವೀಪದ ಕಾನೂನು ರಚನೆ ಮಾಡುವ ಸಮಿತಿಯನ್ನು ಮುಕ್ತಾಯಗೊಳಿಸಿದ ಆಡಳಿತಾತ್ಮಕ ನಿಯಮಗಳನ್ನು ಕನಿಷ್ಟ ಪ್ರಮಾಣದಲ್ಲಿ ತಡೆಹಿಡಿಯಲಾಯಿತು. ಆ ಹೊತ್ತಿನಿಂದ ಕೇಂದ್ರೀಕರಣವನ್ನು ದ್ವೀಪಗಳಿಂದ ಸಾಮಾನ್ಯ ಸಂಸತ್ತಿಗೆ ಮಾದರಿಗೊಳಿಸಲಾಯಿತು; ಪೀಪಲ್ಸ್‌ ಮಜ್ಲಿಸ್ ಮೇಲಾದಲ್ಲಿ ಸ್ಥಾಪಿತಗೊಂಡಿದೆ. ಅದರ ಸದನಗಳು ದೇಶದಾದ್ಯಂತ ಎಲ್ಲಾ ಕಡೆಯಿಂದ ಸದಸ್ಯರನ್ನು ಹೊಂದಿದೆ.[೨೬]

೨೦೧೮ ರ ಚುನಾವಣೆ

[ಬದಲಾಯಿಸಿ]
 • 23 ಸೆಪ್ಟೆಂಬರ್ 2018 ರಂದು ಮಾಲ್ಡೀವ್ಸ್ನಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆದವು. ಪ್ರಗತಿಶೀಲ ಪಕ್ಷದ ಮಾಲ್ಡೀವ್ಸ್ ಪಕ್ಷದ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರು ಎರಡನೇ ಐದು ವರ್ಷಗಳ ಅವಧಿಗೆ ಮರುಚುನಾವಣೆಯಲ್ಲಿ ಆಯ್ಕೆಯಾಗಲು ಪ್ರಯತ್ನಿಸಿದರು. ಮಾಲ್ಡೀವಿಯನ್ ಡೆಮೋಕ್ರಾಟಿಕ್ ಪಾರ್ಟಿಯ ಇಬ್ರಾಹಿಂ ಮೊಹಮದ್ ಸೊಲಿಹ್ ಅವರು ಅವರ ಏಕೈಕ ಚಾಲೆಂಜರ್ ಆಗಿದ್ದರು, ಅವರು ವಿರೋಧ ಪಕ್ಷಗಳ ಒಕ್ಕೂಟದ ಜಂಟಿ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡಿದ್ದರು. ಫಲಿತಾಂಶವು ಸೋಲಿಹ್ಗೆ ಆಶ್ಚರ್ಯಕರ ವಿಜಯವಾಗಿತ್ತು, ಅವರು 58% ರಷ್ಟು ಮತಗಳನ್ನು ಪಡೆದರು ಮತ್ತು ಮಾಲ್ಡೀವ್ಸ್ನ ಏಳನೇ ಅಧ್ಯಕ್ಷರಾಗಿ ಆಯ್ಕೆಯಾದರು. ಅವರು 2018 ರ ನವೆಂಬರ್ 17 ರಂದು ಅಧಿಕಾರ ವಹಿಸಿಕೊಳ್ಳುತ್ತಾರೆ. ಸೊಲಿಹ್ ದೇಶದ ಮೂರನೇ ಪ್ರಜಾಪ್ರಭುತ್ವದ ಚುನಾಯಿತ ಅಧ್ಯಕ್ಷರಾಗಿದ್ದಾರೆ.[೨೭]

ಆಡಳಿತಾತ್ಮಕ ವಿಭಾಗಗಳು

[ಬದಲಾಯಿಸಿ]
ಪ್ರತಿ ಅಟಾಲ್ ಆಡಳಿತವು, ಥಾನ ಅಕ್ಷರದೊಂದಿಗೆ ಅಟಾಲ್‌ಗಳನ್ನು ಗುರುತಿಸುವಂತೆ ಮಾಡಲಾಗಿದೆ. ಸ್ವಾಭಾವಿಕ (ಅಟಾಲ್ಸ್)ಹವಳ ದ್ವೀಪಗಳನ್ನು ತಿಳಿನೀಲಿ ಬಣ್ಣದಿಂದ ಗುರುತಿಸಲಾಗಿದೆ. ನಕ್ಷೆಯ ಪೂರ್ಣ ವೀಕ್ಷಣೆ

ಮಾಲ್ಡೀವ್ಸ್ ಏಳು ಪ್ರಾಂತ್ಯಗಳನ್ನು ಹೊಂದಿದ್ದು ಪ್ರತಿಯೊಂದು ಕೆಳಗೆ ಕೊಟ್ಟಿರುವಂತಹ ಆಡಳಿತ ವಿಭಾಗಗಳನ್ನು ಹೊಂದಿವೆ (ರಾಜಧಾನಿಯಾಗಿರುವಂಹ ಮಾಲೆ ಅದರದೇ ಆದ ವಿಭಾಗವನ್ನು ಹೊಂದಿದೆ):

 1. ಮಥಿ-ಉಥುರು ಪ್ರಾಂತ್ಯ; ಹಾ ಅಲಿಫ್ ಅಟಾಲ್, ಹಾ ಧಾಲು ಅಟಾಲ್ ಮತ್ತು ಶವಿಯಾನಿ ಅಟಾಲ್ ಆಡಳಿತ ವಿಭಾಗಗಳನ್ನು ಹೊಂದಿದೆ.
 2. ಉಥುರು ಪ್ರಾಂತ್ಯ; ನೂನು ಅಟಾಲ್, ರಾ ಅಟಾಲ್, ಬಾ ಅಟಾಲ್ ಮತ್ತು ಲ್ಹವಿಯಾನಿ ಅಟಾಲ್ ಆಡಳಿತ ವಿಭಾಗಗಳನ್ನು ಹೊಂದಿದೆ.
 3. ಮೆಧು-ಉಥುರು ಪ್ರಾಂತ್ಯ; ಕಾಫು ಅಟಾಲ್, ಅಲಿಫು ಅಟಾಲ್, ಅಲಿಫು ಧಾಲು ಅಟಾಲ್ ಮತ್ತು ವಾವು ಅಟಾಲ್ ಆಡಳಿತ ವಿಭಾಗಗಳನ್ನು ಹೊಂದಿದೆ.
 4. ಮೆದು ಪ್ರಾಂತ್ಯ; ಮೀಮು ಅಟಾಲ್, ಫಾಫು ಅಟಾಲ್ ಮತ್ತು ಧಾಲು ಅಟಾಲ್ ಆಡಳಿತ ವಿಭಾಗಗಳನ್ನು ಹೊಂದಿದೆ.
 5. ಮೆಧು-ಧೆಕುನು ಪ್ರಾಂತ್ಯ; ಥಾ ಅಟಾಲ್ ಮತ್ತು ಲಾಮು ಅಟಾಲ್ ಆಡಳಿತವಿಭಾಗಗಳನ್ನು ಹೊಂದಿದೆ.
 6. ಮಥಿ-ಧೆಕುನು ಪ್ರಾಂತ್ಯ; ಗಾಫು ಅಲಿಫು ಅಟಾಲ್ ಮತ್ತು ಗಾಫು ಧಾಲು ಅಟಾಲ್ ಆಡಳಿತ ವಿಭಾಗಗಳನ್ನು ಹೊಂದಿದೆ.
 7. ಧೆಕುನು ಪ್ರಾಂತ್ಯ; ಗ್ನವಿಯಾನಿ ಅಟಾಲ್ ಮತ್ತು ಸೀನು ಅಟಾಲ್ ಆಡಳಿತ ವಿಭಾಗಗಳನ್ನು ಹೊಂದಿದೆ.

ಈ ಪ್ರಾಂತ್ಯಗಳು ಉಥುರು ಬೊದುಥಿಲಧುನ್ಮಥಿ ಐತಿಹಾಸಿಕ ವಿಭಾಗಗಳಿಗೆ ಪರ್ಯಾಯವಾಗಿವೆ. ಧೆಕುನು ಬೊದುಥಿಲಧುನ್ಮಥಿ , ಉಥುರು ಮೆಧು-ರಾಜ್ಜೆ , ಮೆಧು-ರಾಜ್ಜೆ , ಧೆಕುನು ಮೆಧು-ರಜ್ಜೆ , ಹುವಧು (ಅಥವಾ ಉಥುರು ಸುವದಿನ್ಮಥಿ ) ಮತ್ತು ಅದ್ದುಮುಲಕಥೊಲ್ಹು (ಅಥವಾ ಧೆಕುನು ಸುವದಿನ್ಮಥಿ ).

ಮಾಲ್ಡೀವ್ಸ್ ಇಪ್ಪತ್ತಾರು ಸ್ವಾಭಾವಿಕ ಹವಳ ದ್ವೀಪಗಳನ್ನು ಮತ್ತು ಪ್ರತ್ಯೇಕವಾದ ದಿಬ್ಬಗಳ ಮೇಲಿನ ಕೆಲವು ದ್ವೀಪಗಳನ್ನೂ ಹೊಂದಿದೆ, ಇವೆಲ್ಲವೂ ಸೇರಿ ಇಪ್ಪತ್ತೊಂದು ಆಡಳಿತ ವಿಭಾಗಗಳಾಗಿ ವಿಭಜನೆಗೊಂಡಿವೆ (ಇಪ್ಪತ್ತು ಆಡಳಿತ ಹವಳ ದ್ವೀಪಗಳು (ಅಟಾಲ್‌‍ಗಳು) ಮತ್ತು ಮಾಲೆ ನಗರ).[೨೮]

ಇದರ ಹೆಸರಿನೊಂದಿಗೆ ಪ್ರತಿ ಆಡಳಿತ ವಿಭಾಗವನ್ನು ಮಾಲ್ಡೀವಿಯನ್ ಸಂಕೇತ ಅಕ್ಷರಗಳಿಂದ "ಹಾ ಅಲಿಫ್" ಅನ್ನು ಥಿಲಧುನ್ನ್ಮತಿ ಉಥುರುಬುರಿ (ಥಿಲಧುನ್ಮಥಿ ನಾರ್ಥ್); ಗುರುತಿಸಲಾಗುತ್ತದೆ ಮತ್ತು ಲ್ಯಾಟಿನ್ ಸಂಕೇತ ಅಕ್ಷರಗಳಿಂದಲೂ ಗುರುತಿಸಲಾಗುತ್ತದೆ.

ಮೊದಲನೇಯದಾಗಿ ಮಾಲ್ಡೀವಿಯನ್ ಭೌಗೋಳಿಕವಾಗಿ ಅಟಾಲ್ ಹೆಸರಿನಿಂದ ಪ್ರತಿನಿಧಿಸುತ್ತದೆ. ಎರಡನೇಯದಾಗಿ ಅನುಕೂಲಕ್ಕಾಗಿ ಸಂಕೇತಗಳನ್ನು ಅಳವಡಿಸಿರುವುದು. ಇದು ಅಟಾಲ್ಸ್ ಮತ್ತು ಕೇಂದ್ರಾಡಳಿತದ ನಡುವೆ ರೇಡಿಯೋ ಸಂಪರ್ಕಕ್ಕೆ ಅನುವು ಮಾಡಿಕೊಡುವ ಸಲುವಾಗಿ ಪ್ರಾರಂಭವಾಗಿದೆ. ವಿವಿಧ ಹವಳ ದಂಡೆಗಳಲ್ಲಿರುವ ಕೆಲವು ದ್ವೀಪಗಳು ಒಂದೇ ಹೆಸರನ್ನು ಹೊಂದಿವೆ. ಆಡಳಿತದ ಉದ್ದೇಶದಿಂದ ಈ ಸಂಕೇತವನ್ನು ದ್ವೀಪದ ಹೆಸರಿಗಿಂತ ಮುಂಚೆಯೇ ನಮೂದಿಸಲಾಗಿದೆ. ಉದಾಹರಣೆಗೆ: ಬಾ ಫುನಧೂ, ಕಾಫು ಫುನಧೂ, ಗಾಫು-ಅಲಿಫು ಫುನಧೂ. ಇದುವರೆಗೂ ಹಲವು ಹವಳ ದ್ವೀಪಗಳು ಅತಿ ದೊಡ್ದ ಭೌಗೋಳಿಕ ಹೆಸರುಗಳನ್ನು ಹೊಂದಿವೆ. ಈ ಹೆಸರುಗಳನ್ನು ಅಗತ್ಯವಿದ್ದಾಗ ಚಿಕ್ಕದಾಗಿ ಬಳಸಬಹುದಾಗಿದೆ. ಉದಾಹರಣೆಗೆ ವೆಬ್‌‍ಸೈಟ್ ಹೆಸರುಗಳಲ್ಲಿ ಹವಳ ದ್ವೀಪಗಳ ಹೆಸರುಗಳು.[೨೯]

ಈ ಸಂಕೇತದ ಪಂಗಡವನ್ನು ಈ ಹೆಸರುಗಳ ಸರಿಯಾದ ಬಳಕೆಯನ್ನು ಅರ್ಥ ಮಾಡಿಕೊಳ್ಳದ ವಿದೇಶಿಯರು ಹೆಚ್ಚು ನಿಂದಿಸುತ್ತಿದ್ದಾರೆ ಮತ್ತು ಪ್ರವಾಸಿಗರಿಗಾಗಿ ಪ್ರಕಟಣೆಗಳಲ್ಲಿ ಮಾಲ್ಡೀವಿಯನ್ ನೈಜ ಹೆಸರುಗಳು ನಿಲರ್ಕ್ಷಿಸಲ್ಪಟ್ಟಿವೆ.[೩೦] ಮಾಲ್ಡೀವಿಯನ್ನರು ಆಡುಮಾತಿನ ಸಂಭಾಷಣೆಯಲ್ಲಿ ಪದ ಸಂಕೇತದ ಹೆಸರನ್ನು ಬಳಸುತ್ತಾರೆ. ಆದರೆ ಗಂಭೀರವಾದ ಭೌಗೋಳಿಕ, ಐತಿಹಾಸಿಕ ಅಥವಾ ಸಾಂಸ್ಕೃತಿಕ ಬರಹಗಳಲ್ಲಿನ ನೈಜ ಭೌಗೋಳಿಕ ಹೆಸರು ಯಾವಾಗಲೂ ಪ್ರಾಧಾನ್ಯತೆಯನ್ನು ಪಡೆದಿರುತ್ತದೆ. ಲ್ಯಾಟೀನ್ ಸಂಕೇತ ಪದವನ್ನು ಸಾಮಾನ್ಯವಾಗಿ ಹಡಗು ನೋಂದಣಿ ಫಲಕಗಳಲ್ಲಿ ಬಳಸಲಾಗುತ್ತದೆ. ಪದವು ಹರಳು ದ್ವೀಪಕ್ಕಾಗಿ ಮತ್ತು ಸಂಖ್ಯೆಯು ದ್ವೀಪಕ್ಕಾಗಿ ಎಂಬ ಅಭಿಪ್ರಾಯವನ್ನು ಹೊಂದಲಾಗಿದೆ.

ಪ್ರತಿಯೊಂದು ಹರಳು ದ್ವೀಪವನ್ನು ಅಧ್ಯಕ್ಷನಿಂದ ನೇಮಕಗೊಂಡ ಹರಳು ದ್ವೀಪದ ಮುಖ್ಯಸ್ಥ (ಅಥೊಲ್ಹು ವೆರಿಯಾ ) ಆಡಳಿತ ನಿರ್ವಹಿಸುತ್ತಾನೆ. ಹವಳ ದ್ವೀಪದ ಆಡಳಿತದ ಸಚಿವ ಮಂಡಲ ಮತ್ತು ಅದರ ಉತ್ತರ ಭಾಗದ ಮತ್ತು ದಕ್ಷಿಣ ಭಾಗದ ಪ್ರಾದೇಶಿಕ ಕಛೇರಿಗಳು, ಹವಳ ದ್ವೀಪದ ಕಛೇರಿಗಳು ಮತ್ತು ದ್ವೀಪದ ಕಛೇರಿಗಳು ಹವಳ ದ್ವೀಪದ ಆಡಳಿತಕ್ಕಾಗಿ ಅಧ್ಯಕ್ಷನಿಗೆ ಜಂಟಿಯಾಗಿ ಜವಾಬ್ದಾರಿಯುತವಾಗಿವೆ. ಪ್ರತಿ ದ್ವೀಪದ ಆಡಳಿತಾತ್ಮಕ ಮುಖಂಡನೂ ಅಧ್ಯಕ್ಷನಿಂದ ನೇಮಕವಾದ ದ್ವೀಪದ ಮುಖ್ಯಸ್ಥ(ಕಥೀಬ್)ನಾಗಿರುತ್ತಾನೆ. ದ್ವೀಪದ ಮುಖ್ಯಸ್ಥನ ಅತ್ಯಂತ ಸಮೀಪದ ಉನ್ನತಾಧಿಕಾರಿ ಹವಳ ದ್ವೀಪದ ಮುಖ್ಯಸ್ಥ.

ಸಂಕೇತ-ಪದದ ಹೆಸರುಗಳ ಪರಿಚಯವು ವಿದೇಶಿಯರ ನಡುವೆ ಹೆಚ್ಚಾಗಿ ಗೊಂದಲ ಮತ್ತು ತಪ್ಪುಗ್ರಹಿಕೆಯ ಮೂಲವಾಗಿದೆ. ಅನೇಕ ಜನರು ಇಲ್ಲಿಗೆ ಬಂದು ಆಡಳಿತಾತ್ಮಕ ಹವಳ ದ್ವೀಪದ ಸಂಕೇತ-ಪದವು ಅದರ ಹೊಸ ಹೆಸರು ಮತ್ತು ಅದನ್ನು ಅದರ ಭೌಗೋಳಿಕ ಹೆಸರಿಗೆ ಪರಿವರ್ತಿಸಲಾಗಿದೆ ಎಂದು ಆಲೋಚಿಸಿದರು. ಕೆಲವು ಸನ್ನಿವೇಶಗಳಡಿಯಲ್ಲಿ ಯಾವುದು ಬಳಕೆಗೆ ಸರಿಯಾದ ಪದ ಎಂಬುದನ್ನು ತಿಳಿಯುವುದು ಕಠಿಣವಾಗುತ್ತದೆ.[೨೯]

ಜನಸಾಂದ್ರತೆ

[ಬದಲಾಯಿಸಿ]
ಮಲೆ ನಗರ, ಮಾಲ್ಡೀವ್ಸ್‌‍ನ ರಾಜಧಾನಿ.

ಮಾಲ್ಡೀವಿಯನ್ ಜನಾಂಗದ ವ್ಯಕ್ತಿತ್ವವನ್ನು ದ್ವೀಪಗಳಲ್ಲಿನ ಪ್ರತಿಬಿಂಬವಾಗಿ ಜನರು ಸಂಸ್ಕಾರಗಳನ್ನು ಬೆರೆಸಿ ಭಾಷೆ ಮತ್ತು ಧರ್ಮವನ್ನು ಭದ್ರಪಡಿಸಿಕೊಂಡು ನೆಲೆಸಿರುವರು. ಪ್ರಾರಂಭದಲ್ಲಿ ಬಂದು ನೆಲೆಸಿದವರು ಬಹುತೇಕವಾಗಿ ಭಾರತದ ದಕ್ಷಿಣ ಭಾಗ ಮತ್ತು ಶ್ರೀಲಂಕಾದಿಂದ ಬಂದಿರುವವರಾಗಿದ್ದಾರೆ. ಅವರುಗಳು ಭಾರತೀಯ ಉಪಖಂಡದಲ್ಲಿ ಇಂಡೊ-ಆರ್ಯನ್ನರಿಗೆ ಭಾಷಿಕವಾಗಿ ಮತ್ತು ಜನಾಂಗೀಯಾವಾಗಿ ಸಂಬಂಧಿಸಿರುವರು. ಜನಾಂಗೀಯವಾಗಿ ಅವರನ್ನು ಮ್ಹಾಲ್ಸ್(ಸ್ಥಳೀಯವಾಗಿ ಧಿವೆಹಿಸ್) ಎನ್ನುವರು.

ಈ ದ್ವೀಪ ಸಮುದಾಯದಲ್ಲಿ ಕೆಲವು ಸಾಮಾಜಿಕ ಶ್ರೇಣೀಕರಣ ವ್ಯವಸ್ಥೆಗಳು ಇವೆ. ಆದರೆ ಈ ಶ್ರೇಣಿಕರಣ ವ್ಯವಸ್ಥೆಯು ತೀರಾ ಕಟ್ಟುನಿಟ್ಟಿನದಾಗಿಲ್ಲದಿದ್ದರೂ ಉದ್ಯೋಗ, ಆಸ್ತಿ, ಇಸ್ಲಾಮಿಕ್‌ ಸಚ್ಚಾರಿತ್ರ್ಯ ಮತ್ತು ಸಾಂಸಾರಿಕ ಬಂಧನಗಳನ್ನು ಆಧರಿಸಿದೆ. ಸಾಂಪ್ರದಾಯಿಕವಾಗಿ, ಮಾಲ್ದೀವ್ಸ್‌ನಲ್ಲಿ ಸಂಮಿಶ್ರಿತ ಜಾತಿ ಪಧ್ಧತಿಯ ಬದಲಾಗಿ, ಅವರಲ್ಲಿ ಶ್ರೀಮಂತರ ಮತ್ತು ಸಾಮಾನ್ಯ ಜನರ ನಡುವೆ ಮಾತ್ರ ಒಂದು ಭಿನ್ನತೆ ಇದೆ. ಸಾಮಾಜಿಕವಾಗಿ ಶ್ರೀಮಂತವಾಗಿರುವ ಜನರು ಮಾಲ್ಡಿವ್ಸ್‌ನ ರಾಜಧಾನಿ ಮೇಲ್‌ ಪಟ್ಟಣದಲ್ಲಿ ಕೇಂದ್ರಿಕೃತರಾಗಿರುವರು. ಸೇವಾ ಕೈಗಾರಿಕೆಗಳ ಹೊರತಾಗಿ ಇದೊಂದೆ ಪ್ರದೇಶದಲ್ಲಿ ವಿದೇಶಿ ಮತ್ತು ಇಲ್ಲಿಯ ಮೂಲ ನಿವಾಸಿಗಳು ಒಬ್ಬರಿಗೊಬ್ಬರು ಪರಸ್ಪರ ಮಾತನಾಡುವಂತಹ ವಾತಾವರಣ ಇದೆ. ಇಲ್ಲಿಯ ಮೂಲಜನರು ವಾಸಿಸುವ ಸ್ಥಳದಲ್ಲಿ ಪ್ರವಾಸಿ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಕಾಣಸಿಗುವುದಿಲ್ಲ. ಎರಡೂ ಗುಂಪುಗಳ ನಡುವೆ ಪರಸ್ಪರ ಸಂಪರ್ಕಕ್ಕೆ ಉತ್ತೇಜನ ಸಿಗುವುದಿಲ್ಲ.

1905 ರಲ್ಲಿನ ಜನಗಣತಿ ದಾಖಲಿಸಿದ ಪ್ರಕಾರ, ದೇಶದಲ್ಲಿ ಸರಿ ಸುಮಾರು ಜನಸಂಖ್ಯೆಯು ಮುಂದಿನ ಅರವತ್ತು ವರ್ಷದವರೆಗೂ 100,000 ಇರುತ್ತದೆ ಎಂದು ಹೇಳುತ್ತದೆ. 1965ರಲ್ಲಿ ಸ್ವಾಂತತ್ರ್ಯ ದೊರೆತ ನಂತರದಲ್ಲಿ ಜನರ ಆರೋಗ್ಯ ಸ್ಥಿತಿಯು ಸುಧಾರಿಸಿದ್ದಲ್ಲದೆ, 1978ರ ಪ್ರಕಾರ ಜನಸಂಖ್ಯೆಯು ದ್ವಿಗುಣವಾಗಿದೆ (200,000). ಅಲ್ಲದೆ 1985ರಲ್ಲಿನ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ಶೇಕಡ 3.4%ರ ಅಂಚಿನಲ್ಲಿದೆ. 2007ರಷ್ಟರಲ್ಲಿ ಜನಸಂಖ್ಯೆಯು 300,000 ಆಗಿದ್ದರೂ ಕೂಡ ಅದು 2000ರಲ್ಲಿನ ಜನಗಣತಿಯ ಪ್ರಕಾರ ಜನಸಂಖ್ಯೆ ಬೆಳವಣಿಗೆ ಪ್ರಮಾಣವು ಶೇಕಡ 1.9%ರಷ್ಟು ಇಳಿಕೆ ಕಂಡಿದೆ. 1978ರ ಸಮಯದಲ್ಲಿ ಜನರ ಸರಾಸರಿ ಬದುಕಿನ ವಯೊಮಿತಿಯು 46 ವರ್ಷವಾಗಿತ್ತು. ಅದು ಈಗ 72 ವರ್ಷ ಆಗಿದೆ. 1977ರಲ್ಲಿ ಶಿಶುವಿನ ಮರಣ ಸಂಖ್ಯೆಯು ಪ್ರತಿ ಸಾವಿರಕ್ಕೆ 127 ರಿಂದ 12 ಕ್ಕೆ ಇಂದು ಇಳಿದಿದೆ. ಹಾಗೂ ವಯಸ್ಕರ ಸಾಕ್ಷರತೆಯು ಶೇಕಡ 99%ರಷ್ಟಕ್ಕೆ ಬಂದು ನಿಂತಿದೆ. 90ರ ದಶಕದಲ್ಲಿ ದ್ವಿಲಿಂಗಿ ಶಾಲೆಗಳಿಗೆ ಮಕ್ಕಳ ಸೇರ್ಪಡೆಯು ಹೆಚ್ಚಾಗಿತ್ತು.

2008 ಏಪ್ರಿಲ್‌ನ ಪ್ರಕಾರ ಮೂರನೇ ಒಂದು ಭಾಗದ ಮಾಲ್ಡೀವಿಯನ್ ಜನಸಂಖ್ಯೆಗಿಂತ ಹೆಚ್ಚಿನ 70,೦೦೦ ವಿದೇಶಿ ಉದ್ಯೋಗಿಗಳು ಹಾಗೂ ಇತರ 33,000ದಷ್ಟು ಅಕ್ರಮ ನುಸುಳುವಿಕೆಯಿಂದ ದೇಶದಲ್ಲಿ ಸೇರಿಕೊಂಡ ಜನರು ಇಲ್ಲಿದ್ದಾರೆ. ಅಕ್ರಮ ನುಸುಳುವಿಕೆಯಿಂದ ಪ್ರಮುಖವಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳದಿಂದ ಬಂದು ಸೇರಿದ್ದಾರೆ.

ಆರ್ಥಿಕತೆ

[ಬದಲಾಯಿಸಿ]
ಮಾಲ್ಡೀವ್ಸ್ ಮಾರುಕಟ್ಟೆ

ಪ್ರಾಚೀನ ಕಾಲದಿಂದಲೂ ಮಾಲ್ಡೀವಿಯನ್ನರು ಶಂಕು ಕವಡೆಗಳು, ತೆಂಗಿನನಾರಿನ ಹಗ್ಗ, ಒಣಗಿಸಿದ ಟ್ಯುನಾ ಮೀನು (ಮಾಲ್ಡೀವ್ ಮೀನು), ಸುಗಂಧ ದ್ರವ್ಯಗಳು(ಮಾವಾಹರು) ಮತ್ತು ಕೊಕೊ(ತಾವಾಕ್ಕಾಶಿ) ಉತ್ಪನ್ನಗಳಿಗೆ ಪ್ರಖ್ಯಾತಿಯನ್ನು ಹೊಂದಿವೆ. ಶ್ರೀಲಂಕಾದಲ್ಲಿ ಈ ಉತ್ಪನ್ನಗಳನ್ನು ತುಂಬುವ ಮೂಲಕ ಅನೇಕ ಸ್ಥಳೀಯ ವ್ಯಾಪಾರಿಗಳು ಭಾರತದ ಸಮುದ್ರ ತೀರದ ಇತರ ಪ್ರದೇಶಗಳಿಗೆ ಇವುಗಳನ್ನು ಸಾಗಿಸುವ ಕಾರ್ಯ ನಡೆಯುತ್ತದೆ. ಕ್ರಿಸ್ತಶಕ 2ನೇ ಶತಮಾನದಲ್ಲಿ ಹಿಂದೂ ಮಾಹಾಸಾಗರದ ವ್ಯಾಪಾರದ ದಾರಿಗಳನ್ನು ಆಳುತ್ತಿದ್ದ ಅರಬ್ಬರು ಈ ದ್ವೀಪಗಳನ್ನು "ಹಣದ ದ್ವೀಪಗಳು" ಎಂದು ಕರೆಯುತ್ತಿದ್ದರು. ಹಿಂದಿನ ಕಾಲದಲ್ಲಿ ಚಲಾವಣೆಯ ನಾಣ್ಯ ರೂಪದಲ್ಲಿ ಅತಿದೊಡ್ಡ ಪ್ರಮಾಣದಲ್ಲಿ ಕವಡೆಗಳನ್ನು ಮಾಲ್ಡೀವಿಯನ್ನರು ಹಂಚಿಕೆಯನ್ನಾಗಿ ಬಳಸುತ್ತಿದ್ದರು. ಈಗ ಕವಡೆಯು ಮಾಲ್ಡೀವಿಯನ್ನರ ಹಣದ ನೋಟಿನ ಚಿನ್ಹೆಯಾಗಿದೆ.

1989ರ ಕಾರ್ಯಕ್ರಮದಲ್ಲಿ ಮಾಲ್ಡೀವಿಯನ್ ಸರ್ಕಾರವು ಪ್ರಾರಂಭದಲ್ಲಿ ಆಮದುಗಳ ಭಾಗವನ್ನು ಮೇಲಕ್ಕೇರಿಸಿ ಮತ್ತು ಕೆಲವು ರಫ್ತುಗಳನ್ನು ಖಾಸಗಿ ಕ್ಷೇತ್ರಗಳಿಗೆ ಕೊಟ್ಟು ಆರ್ಥಿಕ ಸುಧಾರಣೆಯನ್ನು ತಂದುಕೊಂಡಿತು. ತದ ನಂತರದಲ್ಲಿ ಅದು ಹೆಚ್ಚಿನದಾದ ವಿದೇಶಿ ಬಂಡವಾಳ ಹೂಡಿಕೆಗಳಿಗೆ ಪ್ರಗತಿಪರ ನಿಯಮಗಳನ್ನು ಅಂಗೀಕರಿಸಿತು. ಒಂದು ದಶಕಕ್ಕೂ ಹೆಚ್ಚು ನಿಜವಾದ GDP(ಒಟ್ಟೂ ದೇಸಿಯ ಉತ್ಪನ್ನ) ಬೆಳವಣಿಗೆಯು ಪ್ರತಿವರ್ಷ ಸರಾಸರಿ ಶೇಕಡ 7.5%ರ ಮೇಲಿತ್ತು. ಇತ್ತೀಚಿನ ದಿನಗಳಲ್ಲಿ ಮಾಲ್ಡೀವ್ಸ್‌ನಲ್ಲಿ ಪ್ರವಾಸೋಧ್ಯಮವು ಬೃಹತ್‌ ಉದ್ಯಮವೆನಿಸಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಶೇಕಡ 28%ರಷ್ಟು ಒಟ್ಟೂ ದೇಸಿಯ ಉತ್ಪನ್ನ (GDP)ದ ಮತ್ತು ಶೇಕಡ 60% ವಿದೇಶಿ ವಿನಿಮಯದ ಆದಾಯವು ಪ್ರವಾಸೋದ್ಯಮದಿಂದ ಬರುತ್ತದೆ. ಮೀನುಗಾರಿಕೆಯು ಅದರ ಎರಡನೆಯ ಪ್ರಮುಖ ಕಾರ್ಯಕ್ಷೇತ್ರವೆನಿಸಿದೆ.[ಸೂಕ್ತ ಉಲ್ಲೇಖನ ಬೇಕು]

ಕಳೆದ ಡಿಸೆಂಬರ್ 2004ರಲ್ಲಿ ಮುಖ್ಯವಾದ ಸುನಾಮಿಯಿಂದ ನೂರಕ್ಕೂ ಅಧಿಕ ಜನರು ಸಾವನ್ನಪ್ಪಿ, 12,000ದಷ್ಟು ಜನರು ಕಾಣೆಯಾದರು ಹಾಗೂ 400 ಮಿಲಿಯನ್ ಡಾಲರ್‌ಗೂ ಮೀರಿ ಆಸ್ತಿಯು ಹಾನಿಗೊಳಗಾಯಿತು. ಸುನಾಮಿಯ ಫಲಿತಾಂಶದ ಪರಿಣಾಮವಾಗಿ 2005ರಲ್ಲಿ ಅದರ GDPಯು ಶೇಕಡ 3.6%ಕ್ಕೆ ಕುಗ್ಗಿತು. ಸುನಾಮಿಯ ನಂತರ ಹೊಸದಾದ ತಂಗುದಾಣಗಳ ಪುನರ್ ನಿರ್ಮಾಣ ಮತ್ತು ವಿಕಾಸದಿಂದ ಪ್ರವಾಸೋದ್ಯಮವು ಮತ್ತೆ ಚಿಗುರಿಕೊಂಡಿದ್ದು 2006ರ ನಂತರ ಶೇಕಡ 18%ರಷ್ಟು ಅಭಿವೃಧ್ಧಿಯನ್ನು ತೋರ್ಪಡಿಸಿ ಹಾಗೂ ಶೀಘ್ರವಾಗಿ ಆರ್ಥಿಕತೆಯು ಸುಸ್ಥಿತಿಗೆ ತಲುಪಲು ಸಾಧ್ಯವಾಯಿತು. 2007ರ ಅಂದಾಜಿನಂತೆ ಶ್ರೀಮಂತ ಪರ್ಶಿಯನ್ ಗಲ್ಫ್ ರಾಷ್ಟ್ರಗಳು ಮತ್ತು ದಕ್ಷಿಣ ಏಷ್ಯನ್ ದೇಶಗಳನ್ನೂ ಒಳಗೊಂಡಂತೆ ಮಾಲ್ಡೀವ್ಸ್ ಅತಿಹೆಚ್ಚಿನ 4,600 ಡಾಲರ್ (2007 ಅಂದಾಜು) GDPಯನ್ನು ಗಳಿಸಿಕೊಂಡಿತು.[ಸೂಕ್ತ ಉಲ್ಲೇಖನ ಬೇಕು]

ಪ್ರವಾಸೋದ್ಯಮ

[ಬದಲಾಯಿಸಿ]
ಉದ್ದನೆಯ ತಾಳೆ ಜಾತಿಯ ಮರಗಳು ಮತ್ತು ನೀಲಿ ಲಗೂನುಗಳಿಂದ ಕೂಡಿರುವಂತಹ ವಿಭಿನ್ನ ಮಾಲ್ಡೀಯನ್ ಸಮುದ್ರ ತೀರ.

ಮಾಲ್ಡೀವ್ಸ್ 1970ರ ಪ್ರಾರಂಭದ ತನಕವು ಪ್ರವಾಸಿಗಳಿಗೆ ತೆರೆದುಕೊಳ್ಳದ ಗುಪ್ತ ಪ್ರದೇಶವಾಗಿತ್ತು. ಹಿಂದೂ ಮಹಾಸಾಗರ ಉದ್ದಕ್ಕೂ ಹರಡಿಕೊಂಡಿರುವ ಭೂಮಧ್ಯ ರೇಖೆಯಿಂದ ಹಾಯುವ ಮೂಲಕ ವಿಶೇಷವಾಗಿ ಮಾಲ್ಡೀವ್ಸ್ ಭೂಗೋಳ ಶಾಸ್ತ್ರದ ದ್ವೀಪ ಸಮುದಾಯಗಳ ಏಕಮಾತ್ರ ಸಣ್ಣ ದ್ವೀಪದ ರಾಷ್ಟ್ರ ಮಾಲ್ಡಿವ್ಸ್‌ ಎನಿಸಿಕೊಂಡಿದೆ. ಪ್ರಕೃತಿಯಲ್ಲಿ ಸುಮಾರು 1,190 ಪುಟ್ಟ ದ್ವೀಪಗಳ ಸಮುದಾಯವಿದೆ. ಅದರ 90,000 ಕಿಮಿ2ಯ ಶೇಕಡ ಒಂದು ಭಾಗ ಮಾತ್ರ ಅದು ಆವರಿಸಿಕೊಂಡಿದೆ. ಕೇವಲ 185 ದ್ವೀಪಗಳು ಮಾತ್ರ ಅದರ 300,000ದಷ್ಟು ಜನಸಂಖ್ಯೆಗೆ ಆಶ್ರಯ ನೀಡಿವೆ. ಉಳಿದ ಪ್ರದೇಶಗಳು ಹೆಚ್ಚಾಗಿ ಪ್ರವಾಸೋದ್ಯಮ ಮತ್ತು ವ್ಯವಸಾಯಕ್ಕೆ ಮೀಸಲಾಗಿದ್ದು ಆರ್ಥಿಕ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಮಾಲ್ಡೀವ್ಸ್‌ನ ಪ್ರವಾಸೋದ್ಯಮವು GDPಯ ಶೇಕಡ 28%ರಷ್ಟನ್ನು ಹಾಗೂ ವಿದೇಶಿ ವಿನಿಮಯ ಆದಾಯದ ಶೇಕಡ 60%ರಷ್ಟನ್ನು ನೀಡುತ್ತದೆ. ಸರ್ಕಾರದ ಆದಾಯ ತೆರಿಗೆಯ ಶೇಕಡ 90%ರಷ್ಟು ಭಾಗ ಆಮದು ಮಾಡಿಕೊಂಡ ತೆರಿಗೆಗಳ ಮೂಲಕ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ತೆರಿಗೆಗಳ ಮೂಲಕ ಬಂದು ಸೇರುತ್ತದೆ.[ಸೂಕ್ತ ಉಲ್ಲೇಖನ ಬೇಕು]. ತನ್ನ ಸಮಗ್ರವಾದ ರಾಷ್ಟ್ರದ ಆರ್ಥಿಕ ಅಭಿವೃಧ್ಧಿಯನ್ನು ಪ್ರವಾಸೋದ್ಯಮದ ವಿಕಸನದ ಮೂಲಕ ಬೆಳೆಸಿಕೊಂಡಿದೆ. ಇತರ ದುಡಿಮೆಗಳಿಗೆ ಸಂಬಂಧಿಸಿದಂತೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಉತ್ಪಾದನ ಆದಾಯದ ಸದಾವಕಾಶಗಳು ಇದರಿಂದ ಸೃಷ್ಟಿ ಹೊಂದುತ್ತಿವೆ. 1972ರಲ್ಲಿ ಬ್ಯಾಂಡೊಸ್ ಐಲ್ಯಾಂಡ್‌ ರೆಸಾರ್ಟ್‌ ಮತ್ತು ಕುರುಂಬಾ ವಿಲ್ಲೇಜ್‌ ಎಂಬ ಮೊಟ್ಟ ಮೊದಲ ಪ್ರವಾಸಿ ರೆಸಾರ್ಟ್‌ಗಳು ಪ್ರಾರಂಭವಾದವು.

ಮಾಲ್ಡೀವಿಯನ್ ಬೀಚ್ ವಿಡಿಯೋ

ಪ್ರವಾಸೋಧ್ಯಮ ಮಂತ್ರಿ ಮಂಡಲದ ಅನುಸಾರವಾಗಿ Website ಮೀನುಗಾರಿಕೆ ಕ್ಷೇತ್ರದ ಮೇಲೆ ಅವಲಂಬಿತವಾಗಿದ್ದ ದ್ವೀಪವು ಪ್ರವಾಸೋದ್ಯಮದ ಕಡೆ ತಿವ್ರಗತಿಯಲ್ಲಿ ಸಾಗಿ ಮಾಲ್ಡೀವ್ಸ್‌ನ ಆರ್ಥಿಕತೆಯನ್ನೇ ಬದಲಿಸಿತು. ಈ ಉದ್ಯಮವು, ಕೇವಲ ಮೂರು ಮತ್ತು ಒಂದು ಅರ್ಧ ದಶಕಗಳಲ್ಲಿಯೇ, ಮಾಲ್ಡೀವ್ಸ್ ಜನರ ಜೀವನಾಧಾರ ಹಾಗೂ ಪ್ರಮುಖವಾದ ಮೂಲ ಆದಾಯವೆನಿಸಿದೆ. ಪ್ರವಾಸೋದ್ಯಮವು ದೇಶದಲ್ಲಿನ GDPಗೆ ಅತಿದೊಡ್ಡ ವಿದೇಶಿ ಹಣಗಳಿಕೆ ಎಂದು ಹಾಗೂ ಇದೊಂದೇ ದೊಡ್ಡ ಬಗೆಯ ಚಂದಾದಾರನೆಂದು ಸಹ ಹೇಳಬಹುದಾಗಿದೆ.ಇಂದು,ಮಾಲ್ಡೀವ್ಸ್‌ನಲ್ಲಿ 17,000ಕ್ಕೂ ಹೆಚ್ಚಿನದಾದ ಹಾಸಿಗೆಯ ಸಾಮರ್ಥ್ಯವನ್ನು ಅಲ್ಲಿನ ತಂಗು ದಾಣಗಳು ಹೊಂದಿದ್ದು ,ವಾರ್ಷಿಕ ಆದಾಯ ಸಂಖ್ಯೆ 600,000ಕ್ಕೂ ಮೀರಿರುವಂತಹ ಜನರಿಗೆ ವಿಶ್ವ ಮಟ್ಟದ ಶ್ರೇಣಿಯಲ್ಲಿ ಸೌಕರ್ಯಗಳನ್ನು ಒದಗಿಸಿ ಕೊಡಲಾಗುತ್ತಿದೆ.[೩೧]

1972 ಮತ್ತು 2007ರ ನಡುವಿನ ವರ್ಷಗಳಲ್ಲಿ ರೆಸಾರ್ಟ್‌ಗಳ ಸಂಖ್ಯೆ 2 ರಿಂದ 92ಕ್ಕೆ ಏರಿಕೆಯಾಗಿವೆ. 2007ರ ಹೊತ್ತು, ಸುಮಾರು 8,380,000 ರಷ್ಟು ಪ್ರವಾಸಿಗರು ಮಾಲ್ಡೀವ್ಸ್‌ಗೆ ಭೇಟಿಕೊಟ್ಟಿದ್ದರು.[೩೨]

ವ್ಯವಾಹಾರಿಕವಾಗಿ ಎಲ್ಲಾ ಪ್ರವಾಸಿಗರು ಮಾಲೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ತಲುಪಿ,ನಂತರ ನೇರವಾಗಿ ರಾಜಧಾನಿ ಮಾಲೆಯ ಮೂಲಕವಾಗಿ ಹುಲ್‌ಹುಲೆ ದ್ವೀಪದಲ್ಲಿ ಬಂದು ನೆಲೆಸುವರು. ವಿಮಾನ ನಿಲ್ದಾಣವು ಭಾರತ, ಶ್ರೀಲಂಕಾ, ದುಬೈ, ಹಾಗೂ ದಕ್ಷಿಣ-ಪೂರ್ವ ಭಾಗದ ಏಷ್ಯದ ಪ್ರಮುಖ ವಿಮಾನ ನಿಲ್ದಾಣಗಳಿಗೆ ಒಂದು ವಿಸ್ತಾರವಾದ ಸೇವೆಯನ್ನು ವಿಮಾನ ಹಾರಾಟಗಳನ್ನು ವಿನ್ಯಾಸಗೊಳಿಸಿ, ಅದೇ ರೀತಿಯಲ್ಲಿ ಯುರೋಪ್‌ನಿಂದ ವಿಮಾನ ಹಾರಾಟದ ಅಧಿಕಾರವನ್ನು ಪಡೆದು ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಹಲವು ಬಗೆಯ ವಿಮಾನ ಹಾರಾಟಗಳು ಕೊಲಂಬೊ (ಶ್ರೀಲಂಕಾ) ಮಾರ್ಗದ ಮೂಲಕವಾಗಿ ಬಂದು ನಿಲ್ಲುತ್ತದೆ.

ಮಿಲ್ಯಾನ್‌ಗೆ ಒಂದು ವಾರದಲ್ಲಿ ಹಲವು ಬಾರಿ ಅಂತಾರಾಷ್ಟ್ರೀಯ ವಿಮಾನ ಹಾರಾಟವು ದಕ್ಷಿಣ ಭಾಗದ ಅದ್ದು ಹವಳ ದ್ವೀಪದ ಮೂಲಕ ಹಾದು ಗ್ಯಾನ್ ವಿಮಾನ ನಿಲ್ದಾಣದ ಉಪಯೋಗವನ್ನೂ ಸಹ ಪಡೆಯುತ್ತದೆ.

ಮೀನುಗಾರಿಕೆ ಉದ್ಯಮ

[ಬದಲಾಯಿಸಿ]
ಹಡಗಿನ ಧ್ವಜಸ್ತಂಭಕ್ಕೆ ಅಥವಾ ಕೊವೆಮರಕ್ಕೆ ಹರಡಿರುವ ತ್ರಿಕೋನಾಕಾರದ ಹಾಯಿಪಟ ಇಲ್ಲದ ಹಡಗು.
ಮಾಲ್ಡೀವ್ಸ್‌ನ ರೂಡರ್ ಮೀನು(ಕೈಫೊಸಸ್ ಸಿನಿರಸೆನ್ಸ್)

ಹಲವು ಶತಮಾನಗಳಿಂದಲೂ ಮಾಲ್ಡೀವ್ಸ್ ನ ಆರ್ಥಿಕತೆಯು ಸಂಪೂರ್ಣವಾಗಿ ಮೀನುಗಾರಿಕೆ ಹಾಗೂ ಇತರ ಕಡಲಿನ ಉತ್ಪನ್ನಗಳ ಮೇಲೆ ಅವಲಂಬಿತವಾಗಿತ್ತು. ಮೀನುಗಾರಿಕೆಯು ಇಲ್ಲಿನ ಜನರ ಪ್ರಮುಖವಾದ ಉದ್ಯೋಗವಾಗಿ ಉಳಿದಿತ್ತು ಹಾಗೂ ಅಲ್ಲಿನ ಸರ್ಕಾರವು ಮೀನುಗಾರಿಕೆಯ ಕ್ಷೇತ್ರಗಳ ಬೆಳವಣಿಗೆಗೆ ವಿಶೇಷವಾದ ಪ್ರಾಮುಖ್ಯತೆಯನ್ನು ಕೊಟ್ಟಿತ್ತು.

ತಂತ್ರಜ್ಞಾನದಿಂದ ಕೂಡಿದ ಮೀನುಗಾರಿಕೆ ಬೋಟುಗಳನ್ನು "ದೋಣಿ " ಎನ್ನುವರು. 1974 ರಲ್ಲಿ ದೇಶದಲ್ಲಿನ ಆರ್ಥಿಕಸ್ಥಿತಿಯು ಸಾಮಾನ್ಯವಾಗಿತ್ತು ಹಾಗೂ ಮೀನುಗಾರಿಕೆಯ ಉದ್ಯಮದಲ್ಲಿನ ಬೆಳವಣಿಗೆ ಅದರ ಒಂದು ಮೈಲಿಗಲ್ಲಾಗಿತ್ತು. 1977ರಲ್ಲಿ ಜಪಾನಿಸ್ ಸಂಸ್ಥೆಯ ಜೊತೆ ಜಂಟಿಯಾಗಿ ಮೀನು ಸಂಸ್ಕರಣಾ ಕೇಂದ್ರವನ್ನು ಫೆಲಿವಾರು ದ್ವೀಪದಲ್ಲಿ ಸ್ಥಾಪಿಸಿದರು. ಮೀನುಗಾರಿಕೆ ಕ್ಷೇತ್ರದ ಇತರ ಎಲ್ಲಾ ಪ್ರಗತಿಗಾಗಿ ಸರ್ಕಾರದ ಕಾರ್ಯ ನೀತಿಯ ನಿಯೋಗಕ್ಕೆ ಸಲಹೆಯನ್ನು ಕೊಡಲು 1979ರಲ್ಲಿ, ಮೀನುಗಾರಿಕೆಯ ಸಲಹಾ ಸಮಿತಿಯನ್ನು ಸ್ಥಾಪಿಸಲಾಯಿತು. 1980ರ ಆರಂಭದಲ್ಲಿ ಅಲ್ಲಿನ ಶಾಲೆಗಳ ಪಠ್ಯ ಪುಸ್ತಕಗಳಲ್ಲಿ ಮೀನುಗಾರಿಕೆ ಶಿಕ್ಷಣವನ್ನು ಸೇರಿಸಿ ಹಾಗೂ ಜನ ಬಲದ ಅಭಿವೃದ್ದಿಯ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. ಮೀನು ಸಂಗ್ರಹಿಸಿದ ಸಲಕರಣೆಗಳಿಗೆ ಹಾಗೂ ವಿವಿಧ ರೀತಿಯ ಹಮ್ಮಿಕೊಂಡ ವಿಷಯಗಳಿಗೆ ಸಮುದ್ರಯಾನದ ನೆರವುಗಳನ್ನು ಸ್ಥಾಪಿಸಲಾಯಿತು. ಮಾಲ್ಡೀವ್ಸ್‌ನ ಮೀನುಗಾರಿಕೆಗೆಯು ಅದಕ್ಕಿಂತ ಹೆಚ್ಚಿನದಾದ ಮೀನುಗಾರಿಕೆ ಕ್ಷೇತ್ರಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸಿ ಅದನ್ನು ಹೆಚ್ಚಿಸಲು ವಿಶಿಷ್ಟವಾದ ಆರ್ಥಿಕ ವಲಯವನ್ನು (EEZ)ಪ್ರಾರಂಭಿಸಿರುವರು. ಇಂದು ರಾಷ್ಟ್ರದಲ್ಲಿನ GDPಯು ಸುಮಾರು ಶೇಕಡ ಹದಿನೈದರಷ್ಟು ಭಾಗ ಮೀನುಗಾರಿಕೆಯ ಉದ್ಯಮವು ಒದಗಿಸಿಕೊಡುತ್ತಿದೆ ಹಾಗೂ ಸುಮಾರು ಶೇಕಡ ಮೂವತ್ತರಷ್ಟು ಭಾಗದ ದೇಶದಲ್ಲಿನ ಜನರು ಈ ಕೆಲಸದ ಪ್ರಭಾವಕ್ಕೆ ಆಕರ್ಷಿತರಾಗಿದ್ದಾರೆ. ಇದೂ ಕೂಡ ಪ್ರವಾಸೋದ್ಯಮದ ನಂತರದಲ್ಲಿ ಎರಡನೆಯ-ಅತಿದೊಡ್ಡಾದಾದ ವೀದೇಶಿ ವಿನಿಮಯದ ಆದಾಯವನ್ನು ಗಳಿಸುತ್ತಿದೆ.

ಕೃಷಿ ಮತ್ತು ಸಣ್ಣ ಕೈಗಾರಿಕೆಗಳು

[ಬದಲಾಯಿಸಿ]

ವ್ಯವಸಾಯ ಮಾಡಲು ಸಿಗುವಂತಹ ಭೂಮಿಯು ಮಿತವಾಗಿರುವುದರಿಂದ ಹಾಗೂ ದೇಶದೊಳಗಿನ ಕಾರ್ಮಿಕರ ಕೊರತೆಯಿಂದ ಕೃಷಿ ಹಾಗೂ ಉತ್ಪಾದನೆಗಳು ಆರ್ಥಿಕತೆಯಲ್ಲಿ ಕಡಿಮೆ ಪ್ರಮಾಣದ ಪಾತ್ರವನ್ನು ವಹಿಸುತ್ತಿವೆ. ಅತಿ ಹೆಚ್ಚು ಆಹಾರದ ಮುಖ್ಯ ಸಾಮಗ್ರಿಗಳನ್ನು ಇದರಿಂದಾಗಿ ಅಮದು ಮಾಡಿಕೊಳ್ಳಲೇಬೇಕಾಗಿದೆ. ಪ್ರಮುಖವಾಗಿ ಉಡುಪುಗಳ ತಯಾರಿಕೆ,ದೋಣಿ ನಿರ್ಮಿಸುವುದು ಹಾಗೂ ಕರ ಕುಶಲತೆಯ ಯಾವುದೇ ರೀತಿಯ ಉತ್ಪಾದನೆಗಳನ್ನು ಒಳಗೊಂಡಿದ್ದು,ಸುಮಾರು ಶೇಕಡ 7%ರಷ್ಟು GDPಯ ಲೆಕ್ಕ ನೀಡುತ್ತದೆ.[ಸೂಕ್ತ ಉಲ್ಲೇಖನ ಬೇಕು] ಪ್ರವಾಸೋದ್ಯಮದ ಕ್ಷೇತ್ರದ ಬೆಳವಣಿಗೆಯು,ಪಾರಂಪಾರಿಕ ಸಣ್ಣ ಕೈಗಾರಿಕೆಗಳಾದ ಚಾಪೆ ನೇಯುವುದು,ಮೆರುಗು ಎಣ್ಣೆ ತಯಾರಿಸುವ ಕೆಲಸ, ಕರಕುಶಲಗಳ ತಯಾರಿಕೆ,ಹಾಗೂ ತೆಂಗಿನ ನಾರಿನ ಹಗ್ಗ ಮಾಡುವುದರಿಂದ ರಾಷ್ಟ್ರಕ್ಕೆ ರೆಕ್ಕೆ ಬಂದಂತಾಗಿ ಅದರ ಆತ್ಮವಿಶ್ವಾಸವನ್ನು ಹೆಚ್ಚಿಸಿ ಒಂದು ಪ್ರಧಾನವಾದ ಸ್ಥಾವವನ್ನು ಕೊಟ್ಟಿದೆ. ಹೊಸದಾದ ಉದ್ಯಮಗಳಾದ, ಪ್ರಿಂಟಿಂಗ್, PVC ಗಳ ಉತ್ಪಾದನೆ, ಪೈಪ್‌ಗಳು,ಇಟ್ಟಿಗೆ ಮಾಡುವುದು,ಹಡಗಿನ ಇಂಜಿನ್ ರಿಪೇರಿಗಳು, ಬಾಟಲುಗಳಿಗೆ aerated ನೀರನ್ನು ತುಂಬಿಸುವುದು ಹಾಗೂ ಉಡುಪುಗಳ ತಯಾರಿಕೆಗಳು ಅಂದಿನಿಂದಲೂ ಅದರೊಳಗೆ ಬೆರೆತುಕೊಂಡಿವೆ.

ನ್ಯಾಯಾಂಗ

[ಬದಲಾಯಿಸಿ]

1968ರಲ್ಲಿ ಒತ್ತಾಯಯದ ಮೂಲಕ ರಚಿಸಿದ್ದ ಗಣತಂತ್ರ ರಾಷ್ಟ್ರದ ಸಂವಿಧಾನವನ್ನು (1970,1972 ಹಾಗೂ 1975ರಲ್ಲಿ ತಿದ್ದುಪಡಿಸಿರುವುದನ್ನು)ರದ್ದು ಪಡಿಸಿ, ರಾಷ್ಟ್ರಧ್ಯಕ್ಷ ಗಾಯೋಮ್ ನವೆಂಬರ್ 27, 1997ರ ನಂತರದಲ್ಲಿ ಅದನ್ನು ಬದಲಿಸುವ ಮೂಲಕ ಬೇರೊಂದು ಸಂವಿಧಾನವನ್ನು ರಚಿಸಲು ಸಮ್ಮತಿಸಿದರು. 1998ರ ಜನವರಿ 1 ರ ನಂತರದಲ್ಲಿ ಈ ಸಂವಿಧಾನವು ಒತ್ತಾಯದಿಂದ ಬಂದಿತು. ರಾಷ್ಟ್ರಾಧ್ಯಕ್ಷರು, ರಾಜ್ಯದ ಮುಖಂಡನಾಗಿ ಸರ್ಕಾರದ ಮುಖಂಡ ಮತ್ತು ಸೇನಾಬಲದ ಪ್ರಧಾನ ಸೈನ್ಯಾಧಿಕರಿಯಾಗಿ ಹಾಗೂ ಮಾಲ್ಡೀವ್ಸ್‌ನ ಪೋಲಿಸ್ ಅಧಿಕಾರಿಯಾಗಿ ರಾಜ್ಯದ ಎಲ್ಲಾ ಸ್ಥಾನಗಳನ್ನು ತಾವೇ ನೋಡಿಕೊಳ್ಳುತ್ತಿದ್ದರು. ವಿರೋಧ ಪಕ್ಷದ ತೀವ್ರ ಒತ್ತಾಯದ ಮೇರೆಗೆ ನ್ಯಾಯಾಂಗ ಇಲಾಖೆಯ ನಿಯಂತ್ರಣದ ಮೂಲಕವಾಗಿ ರಾಜ್ಯದ ಮುಖಂಡತ್ವವನ್ನು ಬೇರ್ಪಡಿಸಿ ದಿನಾಂಕ 2008 ಆಗಸ್ಟ್ 7ರಲ್ಲಿ ಒಂದು ಹೊಸದಾದ ಸಂವಿಧಾನವನ್ನು ಅಂಗೀಕರಿಸಲಾಯಿತು.

ಮಾಲ್ಡೀವ್ಸ್‌ನ ಸಂವಿಧಾನದ ಅನುಸಾರವಾಗಿ "ಕಾನೂನು ಮತ್ತು ಸಂವಿಧಾನಗಳಿಗೆ ಮಾತ್ರ ವಿಷಯ ಒಳಪಡುತಿತ್ತು ಹಾಗೂ ವಕೀಲರು ಸ್ವತಂತ್ರವಾಗಿದ್ದರು." ಸಂವಿಧಾನದ ಯಾವುದೇ ವಿಷಯಗಳ ತೀರ್ಮಾನಗಳನ್ನು ಅಥವಾ ಇಸ್ಲಾಮಿಕ್‌ ಧರ್ಮದ ಶರಿಯತ್‌ಗಳ ಕಾನೂನನ್ನು ವಕೀಲರು ಮೌನವಾಗಿ ಪರಿಗಣಿಸುತ್ತಿದ್ದರು.

ಸ್ವಯಂ ಆಡಳಿತ ನ್ಯಾಯಾಧೀಶರ ಆಯೋಗದ ಅಧಿಕಾರವನ್ನು ಅಲ್ಲಿನ ನೇಮಕಾತಿಯು ನ್ಯಾಯಾಂಗದ ಒಳಗಿನ ಭಾಗದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದನು ಹಾಗೂ ತಳ್ಳಲ್‌ಪಟ್ಟ ನ್ಯಾಯಾಧೀಶರು ಮತ್ತು "ಕಾವಲು ಪಡೆ"ಯಂತೆ ವರ್ತಿಸುವ ನ್ಯಾಯಾಧೀಶರುಗಳು ಅವರದೇ ಆದ ನಿಯಮಾವಳಿಗಳನ್ನು ನಿಶ್ಚಿತ ಮಾಡುವಂತೆ ನಡೆದು ಕೊಳ್ಳುತ್ತಿದ್ದರು. ಮಧ್ಯ ಕಾಲದ ಸ್ಥಿತಿಯಲ್ಲಿರುವಾಗ ಪ್ರಸ್ತುತ, ಒಂದು ಸದಸ್ಯತ್ವವನ್ನು ರಾಷ್ಟ್ರಾಧ್ಯಕ್ಷರನ್ನು ನೇಮಿಸಿ, ಸಿವಿಲ್ ಆಯೋಗದ ಅಧಿಕಾರ, ಪಾರ್ಲಿಮೆಂಟು, ಸಾರ್ವಜನಿಕವಾಗಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶ, ಕೆಳ ಹಂತ ನ್ಯಾಯಾಲಯದ ನ್ಯಾಯಾಧೀಶ ಮತ್ತು ಸರ್ವೋಚ್ಛ ನ್ಯಾಯಾಲಯದ ಒಂದು ಸದಸ್ಯತ್ವ, ಇನ್ನುಳಿದ ಸದಸ್ಯರಿಗೆ ನೇಮಕ ಮಾಡಲಾಗಿದೆ. ಸರ್ವೋಚ್ಛ ನ್ಯಾಯಾಲಯದ ಸದ್ಯಸನು ಪ್ರಸ್ತುದಲ್ಲಿರುವ ಆಯೋಗದ ಮೇಲಿನ ಯಾವುದೇ ಆದೇಶದ ಖಂಡನೆಯನ್ನು ಆಯೋಗದವರಿಂದ ಸುಸ್ಥಿಗೆ ತರಲು ಈಗಲೂ ಕೂಡ ಸರ್ವೋಚ್ಛ ನ್ಯಾಯಾಲಯದ ಆಯೋಗದ ಸಲಹೆಗಳ ಜೊತೆಗೆ ಜೋಡಣೆ ಹೊಂದಿರುವನು.

ಎಂಟು ಮಧ್ಯಮ ಕಾಲದ ಸದಸ್ಯರುಗಳ ಕೊಟ್ಟಿರುವ ಆಯೋಗದ ಮೇಲಿನ ಸಂಬಂದಿಸಿದ ಸ್ವಾತಂತ್ಯ್ರವನ್ನು ಹೆಚ್ಚಿಸಲ್ಪಟ್ಟಿತು ಹಾಗೂ ಹಿಂದಿನ ಸಂವಿಧಾನದ ಕೆಳಗೆ ಅದರಲ್ಲಿ ಎರಡು ಆಯೋಗದವರ ಮೂಲಕವಾಗಿ ರಾಷ್ಟ್ರಾಧ್ಯಕ್ಷರು ಒಬ್ಬನನ್ನು ನೇಮಕ ಮಾಡಿದರು ಉಳಿದೆಲ್ಲಾ ಪ್ರಸಕ್ತ ನ್ಯಾಯಾಧೀಶರುಗಳು ಅಧ್ಯಕ್ಷ ಮೌಮೋನ್ ಅಬ್ದುಲ್ ಗಾಯೋಮ್‌ನವರಿಂದ ನೇಮಿತವಾದರು.

ಮಾಲ್ಡಿವ್ಸ್‌ನ ಸುಪ್ರಿಮ್‌ ಕೋರ್ಟ್‌ಗೆ ಮುಖ್ಯ ನ್ಯಾಯಾದೀಶರು ಮುಖ್ಯಸ್ಥರಾಗಿರುತ್ತಾರೆ. ಅವರೇ ನ್ಯಾಯಾಂಗದ ಮುಖ್ಯಸ್ಥರೂ ಕೂಡ. ಸರಿಯಾಗಿ ತಾತ್ಕಾಲಿಕ ಅವಧಿಯಲ್ಲಿರುವಾಗ ಪಾರ್ಲಿಮೆಂಟಿನ ಅನುಮೋದನೆಯಿಂದ ರಾಷ್ಟ್ರಾಧ್ಯಕ್ಷರು 5 ನ್ಯಾಯಾಧೀಶರನ್ನು ನೇಮಕ ಮಾಡಿದರು. ತಾತ್ಕಾಲಿಕ ನ್ಯಾಯಲಯವು ಇರುವವರೆಗೆ ಒಂದು ಹೊಸದಾದ ಶಾಶ್ವತ ಸರ್ವೋಚ್ಛ ನ್ಯಾಯಾಲಯವನ್ನು ಸಂವಿಧಾನದ ಅಧೀನದಲ್ಲಿ ನೇಮಿಸಲಾಯಿತು. ಸರ್ವೋಚ್ಛ ನ್ಯಾಯಾಲಯದ ಕೆಳ ಬಾಗದಲ್ಲಿ ಒಂದು ಉಚ್ಚ ನ್ಯಾಯಾಲಯ ಮತ್ತು ಒಂದು ವಿಚಾರಣಾ ನ್ಯಾಯಾಲಯವಿದೆ. ಮಾಲ್ಡೀವ್ಸ್‌ನ ಉಚ್ಚ ನ್ಯಾಯಾಲಯದ ಸಂವಿಧಾನದಲ್ಲಿ ಅಸಂಖ್ಯಾತ ನಿಯಮಾವಳಿಗಳು ಬೇಕಾಗಿರುವುದರಿಂದ ಮೂವರು ನ್ಯಾಧೀಶರುಗಳನ್ನು ನೇಮಕ ಮಾಡಲಾಗಿದೆ. ಯಾವುದೇ ತೀರ್ಪು ಬಹುಮತ ಮೂಲಕ ನೀಡಬೇಕು ಆದರೆ ಇದು ’ಕಡಿಮೆ ಮತದ’ ವರದಿಯನ್ನೂ ಕೂಡ ಒಳಗೊಂಡಿರಬೇಕು.

ಹೊಸ ಸ್ವತಂತ್ರ್ಯ ನ್ಯಾಯಾಂಗದ ಭಾಗವಾಗಿ ಪ್ರಾಸಿಕ್ಯೂಟರ್ ಜನರಲ್ ನೇಮಕ ಮಾಡಲಾಯಿತು. ಇವರು ನ್ಯಾಯಾಲಯದ ನಡವಳಿಕೆಗಳು ಮುಂದುವರೆಯಲು ಸರ್ಕಾರದ ಪರಾಗಿ ಜವಾಬ್ದಾರರಾಗಿರುತ್ತಾರೆ,ಅಟಾರ್ನಿ ಜನರಲ್ ತಡೆ ಹಿಡಿದ ಮೊದಲಿನ ಕೆಲಸದ ಅಫರಾದಿಯ ಮೇಲೆ ಕಾನೂನು ಕ್ರಮ ಜರಗಿಸಲು ಯಾವ ರೀತಿಯಲ್ಲಿ ತನಿಖೆಗೆ ನಿರ್ದೇಶನ ನೀಡಿದ್ದಾರೆ ಎಂದು ಮೇಲ್ವಿಚಾರಣೆ ಮಾಡುತ್ತಾರೆ. ತನಿಖೆ ನಡೆಸಲು ಆದೇಶ ನೀಡಲು ಅಧಿಕಾರ ಹೊಂದಿದ್ದಾರೆ. ಮುನ್ನೆಚರಿಕೆಯ ಸೆರೆವಾಸಗಳ ಮನವಿ ದಾಖಲಿಸುವುದು ಮತ್ತು ಅಸ್ತಿತ್ವದಲ್ಲಿರುವ ಮೊಕದ್ದಮೆಗಳ ವಿಮರ್ಶೆ ಮಾಡುವುದು. ಮಾಲ್ಡೀವ್ಸ್‌ನ ಸಂಸತ್ತಿನಿಂದ ಅನುಮೋದನೆಯಾದ ಪ್ರಾಸಿಕ್ಯೂಟರ್ ಜನರಲ್ ಅಧ್ಯಕ್ಷರಿಂದ ನೇಮಿಸಲ್ಪಡುತ್ತಾರೆ.

ಮಾಲ್ಡೀವ್ಸ್ ಯುನೈಟೇಡ್ ನೇಷನ್ಸ್ ಡೆವಲಪ್‌‌ಮೆಂಟ್ ಪ್ರೋಗ್ರಾಮ್(ಯುಎನ್‌ಡಿಪಿ) ಸಹಕಾರದ ಅಡಿಯಲ್ಲಿ ಜಗತ್ತಿನ ಮೊದಲ ಮುಸ್ಲೀಮ್ ಅಪರಾಧ ಸಂಹಿತೆ ಬರೆಯಲು ಮೊದಲು ಮಾಡಿದೆ. ಈ ಪುಟ್ಟ ದೇಶದಲ್ಲಿನ ಅಪರಾಧ ನ್ಯಾಯಾಲಯದ ಇಂತಹ ನಡುವಳಿಕೆಗಳ ಯೋಜನೆ ಅತಿ ಹೆಚ್ಚು ವಿಸ್ತಾರಗೊಂಡು ಇದೊಂದು ಪ್ರಪಂಚದಲ್ಲಿನ ಆಧುನಿಕ ಯುಗದ ಅಪರಾಧದ ಸಂಹಿತೆಗಳು ಎಂದು ಪದ್ಧತಿಗೊಳಿಸಲಾಯಿತು. ಈ ಸಂಹಿತೆ ಬರೆಯಲಾಗಿದ್ದು ಸಂಸತ್ತಿನ ಒಪ್ಪಿಗೆಗಾಗಿ ಕಾಯಲಾಗುತ್ತಿದೆ.

ಈ ನಡುವೆ ಮಾಲ್ಡಿವ್ಸ್‌ನ ಉಳಿದ ಒಂದೇ ಒಂದು ಅಧಿಕೃತ ಧರ್ಮ ಇಸ್ಲಾಮ್. ಬಹಿರಂಗವಾಗಿ ಆಚರಿಸಲಾಗಿತ್ತಿರುವ ಉಳಿದ ಎಲ್ಲಾ ಧರ್ಮಗಳನ್ನು ನಿಷೇಧಿಸಲಾಗಿದೆ ಮತ್ತು ಕೆಲವು ಕ್ರಿಯೆಗಳು ದೇಶದ ಕಾಯಿದೆ ಪ್ರಾಕಾರ ಅಪರಾಧವಾಗಿದೆ. ಸಂವಿಧಾನ ತಿದ್ದುಪಡಿ ಪ್ರಕಾರ ಕಲಮ್ ಎರಡರಲ್ಲಿ "ಗಣರಾಜ್ಯ ಇಸ್ಲಾಮಿನ ತತ್ವದ ಮೇಲೆ ಇದೆ." "ಕಲಮ್ ಒಂಭತ್ತು ಈ ರೀತಿ ಹೇಳುತ್ತದೆ, "ಮುಸ್ಲಿಮೇತರರು ಮಾಲ್ಡೀವ್ಸ್‌ನ ನಾಗರೀಕರಾಗಲು ಸಾಧ್ಯವಿಲ್ಲಾ"; ಕಲಮ್ ಹತ್ತರ ಪ್ರಕಾರ "ಮಾಲ್ಡೀವ್ಸ್‌ನಲ್ಲಿ ಇಸ್ಲಾಮ್‌ನ ಕಾನೂನಿಗೆ ವಿರುದ್ದವಾದ ತತ್ವಗಳು ಅನ್ವಯಿಸುವುದಿಲ್ಲಾ. "ಕಲಮ್ ಹತ್ತೊಂಭತ್ತರ ಹೇಳಿಕೆ ಈ ರೀತಿ ಇದೆ, ಕಾನೂನಿನಿಂದ ಅಥವಾ ಷರಿಯಾದಿಂದ ನಿಷೇಧಕ್ಕೊಳಗಾದ ಕ್ರಿಯೆಗಳಲ್ಲಿ ನಾಗರೀಕರು ಮುಕ್ತವಾಗಿ ಭಾಗವಹಿಸಲು, ಕಾರ್ಯರೂಪದಲ್ಲಿ ತರಲು ಯಾವುದೇ ಚಟುವಟಿಕೆಗಳನ್ನು ಪ್ರಕಟಿಸಲು ಅರ್ಹರಲ್ಲ.

ಒಂದು ನಿರ್ಧಿಷ್ಟ ಧರ್ಮಕ್ಕೆ ಹೊಂದಿಕೊಂಡಿರುವುದು ಮತ್ತು ಸಾರ್ವಜನಿಕವಾಗಿ ಇನ್ನೊಂದು ಧರ್ಮವನ್ನು ಪೂಜನೀಯ ಭಾವದಿಂದ ಕಾಣುವುದು ಕಲಮ್‌ 18ರ ಸಾರ್ವತ್ರಿಕ ಮಾನವ ಹಕ್ಕು ಘೋಷಣೆಯ ಪ್ರಕಾರ ಮತ್ತು 18ನೇ ಅಂತರರಾಷ್ತ್ರೀಯ ಸಾರ್ವಜನಿಕ ಮತ್ತು ರಾಜಕೀಯ ಒಪ್ಪಂದದ ಕಲಮ್‌ನ ಪ್ರಕಾರ ವಿರೋಧವಿದೆ.[೩೩] ಅಲ್ಲದೆ ಇತ್ತೀಚೆಗೆ ಈ ಒಪ್ಪಂದದ ಪ್ರಕಾರ "ಇದರ ಉಪಯೋಗವು ಕಲಮ್‌ ಹದಿನೆಂಟರಲ್ಲಿ ಹೇಳಲಾಗಿದ್ದು. ಇದು ಯಾವುದೇ ಮಾಲ್ಡೀವ್‌ ಸಂವಿಧಾನದಲ್ಲಿ ಯಾವುದೇ ಪೂರ್ವಾಗ್ರಹ ಇಲ್ಲದೆ ಸೇರಿಸಲಾದದ್ದಾಗಿದೆ."[೩೪]

ಮಾಲ್ಡೀವ್ಸ್ ಮಿಲಿಟರಿ (ಸೈನಿಕರು)

[ಬದಲಾಯಿಸಿ]

ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ದಳ(ಎಮ್‌‍ಎನ್‌ಡಿ‍ಎಫ್) ಇದು ಮಾಲ್ಡೀವ್ಸ್‌‌ನ ಆಡಳಿತಮತ್ತು ಭದ್ರತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊತ್ತಂತಹ ಜಂಟಿ ಭದ್ರತಾ ಪಡೆಯಾಗಿದೆ. ಏಕ್ಸ್‌‍ಕ್ಲೂಸಿವ್ ಏಕಾನಾಮಿಕ್ ಜೋನ್‌‍ನ(ಮೀಸಲಾದ ಆರ್ಥಿಕ ವಲಯ)(EEZ) ರಕ್ಷಣೆಯನ್ನು ಒಳಗೊಂಡ ಮಾಲ್ಡೀವ್ಸ್‌‍ನ ಎಲ್ಲಾ ಆಂತರಿಕ ಮತ್ತು ಬಾಹ್ಯ ಭದ್ರತೆಯನ್ನು ಕಾಯ್ದುಕೊಳ್ಳುವ ಪ್ರಾಥಮಿಕ ಜವಾಬ್ದಾರಿಯನ್ನು ಇದು ಹೊಂದಿದೆ.

ಅಗ್ನಿ ಶಾಮಕ ಮತ್ತು ರಕ್ಷಣಾ ಸೇವೆಯ ಹಡಗುಗಳು.

ನೌಕಾಪಡೆ, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆ, ಕಾಲಾಳು ಪಡೆಯ ಸೇವೆ, ರಕ್ಷಣಾ ಸಂಸ್ಥೆಯ ತರಬೇತಿ ಮತ್ತು ಶಿಕ್ಷಣ (ತರಬೇತಿಯ ಆಜ್ಞೆ), ಮತ್ತು ಸಹಾಯಕ ಸೇವೆಗಳು ಇವು ಎಮ್‌‍ಎನ್‌ಡಿ‍ಎಫ್‌‍ನ ಅಂಗ ಘಟಕಗಳು.

ನೌಕಾ ಪಡೆ

[ಬದಲಾಯಿಸಿ]

ನೀರಿನಿಂದ ಆವೃತಗೊಂಡಿರುವ ಅಥವಾ ದ್ವೀಪ ರಾಷ್ಟ್ರವಾಗಿರುವುದರಿಂದ ಸಮುದ್ರದ ತಟ್ಟದಲ್ಲಿ ಹೆಚ್ಚು ಭದ್ರತಾ ಪಡೆಯು ಕಾಳಜಿವಹಿಸಿ ನೆಲೆಸಿವೆ. ಸುಮಾರು ಶೇಕಡಾ 90ರಷ್ಟು ಭಾಗದ ದೇಶವು ಸಮುದ್ರದಿಂದ ಆವೃತ್ತಗೊಂಡಿದೆ ಮತ್ತು ಉಳಿದ ಶೇಕಡಾ 10ರಷ್ಟು ಭಾಗದ ಭೂಮಿಯು 415 km (258 mi)x120 km (75 mi) ರಷ್ಟು ವ್ಯಾಪ್ತಿಯಲ್ಲಿ ಚದುರಗೊಂಡಿದೆ. ಇದು ಬೃಹತ್ ಐಸ್‌‍ಲ್ಯಾಂಡಿನಿಂದ ಕೂಡಿದ್ದು 8 km2[convert: unknown unit] ಗಿಂತ ದೊಡ್ದದಾಗಿಲ್ಲ. ಅದ್ದರಿಂದ ಮಾಲ್ಡೀವ್ಸ್‌‌ನ ಪಾನೀಯಗಳು ಮತ್ತು ಹೊರದೇಶದಿಂದ ಮಧ್ಯಪ್ರವೇಶಿಸುವವರಿಂದ ಇಇಜ್ಡ್ ಮತ್ತು ಪ್ರಾದೇಶಿಕ ಪಾನೀಯಗಳಿಗಾಗುವ ಅನಾಹುತವನ್ನು ತಪ್ಪಿಸಲು ಭದ್ರತೆಯನ್ನು ಒದಗಿಸಲು ಮತ್ತು ಸೈನ್ಯಗಳ ವ್ಯವಸ್ಥಾಪನೆಯ ತಂತ್ರ ಮತ್ತು ಆರ್ಥಿಕ ಸೂಚಕಗಳನ್ನು ಕಣ್ಗಾವಲು ಕಾಯುವಂತ ಕೆಲಸಗಳನ್ನು ಎಮ್‌‍ಎನ್‌ಡಿ‍ಎಫ್ ನಿಯೋಜಿಸಿದೆ. ಇದರಿಂದಾಗಿ ಈ ಕಾರ್ಯಗಳನ್ನು ಹೊರತೆಗೆಯಲು ನೌಕಾಪಡೆಯು ಜೀವನಾಧಾರ ಪಾತ್ರವಹಿಸುತ್ತದೆ. ಇಲ್ಲಿನ ಪೆಟ್ರೋಲ್ ದೋಣಿಳಿಗೆ ಸಕಾಲಕ್ಕೆ ಭದ್ರತೆಯನ್ನು ಒದಗಿಸುವ ಸಲುವಾಗಿ ಅವುಗಳನ್ನು ವಿವಿಧ ಎಮ್‌‍ಎನ್‌ಡಿ‍ಎಫ್‌‍ನ ಪ್ರಾದೇಶಿಕ ಕೇಂದ್ರ ಕಾರ್ಯಾಲಯಗಳಲ್ಲಿ ನಿಲುಗಡೆಮಾಡಲಾಗುತ್ತದೆ.

ನೌಕಾಪಡೆಯು ಕಡಲತೀರ ಪ್ರದೇಶಗಳಿಗೆ ಬರುವಂತಹ ಬಹಳ ಪೀಡಿಕೆಯ ಕರೆಗಳಿಗೆ ಪ್ರತಿಕ್ರಿಯಿಸುವ ಕೆಲಸವನ್ನು ಸಹ ನಿರ್ವಹಿಸಬೇಕು ಮತ್ತು ಸಮಯಕ್ಕೆ ಸರಿಯಾಗಿ ಅದನ್ನು ಪತ್ತೆಹಚ್ಚಿ ಕಾರ್ಯಗತಗೊಳಿಸಬೇಕು. ವಾಡಿಕೆಯಾಗಿ ಕಡಲತೀರದ ಮಾಲಿನ್ಯ ತಡೆಯ ಪ್ರಯೋಗಗಳನ್ನು ನಿರಂತರವಾಗಿ ವರ್ಷಗಳ ಆಧಾರದ ಮೇಲೆ ನಿಯೋಜಿಸುವುದು ಮತ್ತು ಅಂತಹ ಅಪಾಯಕರ ಸ್ಥಿಗಳನ್ನು ನಿರ್ವಹಿಸುವುದು. ನೌಕಾ ಪಡೆಯು ದೇಶದ ಸುತ್ತಲೂ ಮಿಲಟರಿ ಸಾಮಾಗ್ರಿಗಳನ್ನು ಸರಬರಾಜು ಮಾಡುವ ಶಸ್ತ್ರಸಜ್ಜಿತ ಸಾಗರ ಸಾಗಣೆ ಪಡೆಗಳನ್ನು ಸಹ ಹೊಂದಿದೆ.

ದಿ ಇಂಡಿಯನ್ ಓಷನ್ ಕಮೀಷನ್ (ಹಿಂದೂ ಮಹಾಸಾಗರ ಆಯೋಗ)

[ಬದಲಾಯಿಸಿ]
ನಾಸ ತೆಗೆದಿರುವ ಮಾಲ್ಡೀವ್ಸ್‌‍ನ ಉಪಗ್ರಹದ ಚಿತ್ರದಲ್ಲಿ ,ಮಾಲ್ಡೀವ್ಸ್‌ನ ದಕ್ಷಿಣದ ಭಾಗದಲ್ಲಿರುವ ಅಟಾಲ್(ಹವಳ ದ್ವೀಪ), ಅದ್ದು ಅಟಾಲ್ ಕಾಣಿಸುವುದಿಲ್ಲ.

ಮಾಲ್ಡೀವ್ಸ್ 1996ರವರೆಗೂ ಹಿಂದೂ ಮಹಾಸಾಗರ ಆಯೋಗವನ್ನು ಅಧಿಕೃತವಾಗಿ ನಿಯಂತ್ರಣದಲ್ಲಿಟ್ಟುಕೊಂಡಿತ್ತು. 2002ವರೆಗೂ ಮಾಲ್ಡೀವ್ಸ್ ಹಿಂದೂ ಮಹಾಸಾಗರ ಆಯೋಗದಲ್ಲಿ ಕೆಲಸ ಮಾಡುವ ಆಸಕ್ತಿಯನ್ನು ವ್ಯಕ್ತಪಡಿಸಿತ್ತು ಆದರೆ ಸದಸ್ಯತ್ವಕ್ಕೆ ಅನ್ವಯಿಕೆ ಮಾಡಲಿಲ್ಲ. ಮಾಲ್ಡೀವ್ಸ್ ತಮ್ಮದು ಸಣ್ಣ ದ್ವೀಪ ಸ್ಟೇಟ್‌‍ ಎಂದು ಗುರುತಿಸಿಕೊಳ್ಳಲು ಇಚ್ಚಿಸಿದೆ. ವಿಶೇಷವಾಗಿ ಆರ್ಥಿಕ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿಷಯಗಳಲ್ಲಿ ಬಹಳ ವೇಗವಾಗಿ ಮುನ್ನಡೆಯುವಂತಹ ಅಪೇಕ್ಷೆಯನ್ನೊಂದಿದ್ದು ಫ್ರಾನ್ಸ್ ಜೊತೆಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದು ಐಒಸಿ ವಲಯದಲ್ಲಿ ಫ್ರಾನ್ಸ್ ಒಂದು ಪ್ರಬಲ ರಾಷ್ಟ್ರವಾಗಿದೆ. ಮಾಲ್ಡೀವಿನ್‌‍ ಅನ್ನು ಸಂಸ್ಥಾಪಿಸಿದಂತಹ ದಕ್ಷಿಣ ಏಷ್ಯ ಪ್ರಾದೇಶಿಕ ಸಹಕಾರ ಸಂಘ, ಸಾರ್ಕ್, ಮತ್ತು ಮಾಜಿ ಆಶ್ರಿತ ರಾಜ್ಯ ಗ್ರೇಟ್ ಬ್ರಿಟನ್ 1982ರಲ್ಲಿ ಕಾಮನ್‌ವೆಲ್ತ್‌‍ಗೆ ಸೇರಿಕೊಂಡಿತು, 17ವರ್ಷಗಳ ನಂತರ ಗ್ರೇಟ್ ಬ್ರಿಟನ್ನಿಂದ ಸ್ವಂತಂತ್ರ್ಯ ಪಡೆದ ಮೇಲೆ , ಮಾಲ್ಡೀವ್ಸ್ ಸೇಶೆಲ್ಸ್ ಮತ್ತು ಮಾರೀಶಿಯಸ್ ಜೊತೆಗೂಡಿ ಸಂಭ್ರಮಿಸಿತು, ಇವರು ಮಾಲ್ಡೀವ್ಸ್ ಕಾಮನ್‌ವೆಲ್ತ್ ಸದಸ್ಯರಾಗಿರುವುದನ್ನು ನೆಚ್ಚಿಕೊಂಡಿದ್ದಾರೆ. ಕಮರೋಜ್ ಮತ್ತು ಮಾಲ್ಡೀವಿನ್ ಎರಡು ಸಹ ಆರ್ಗನೈಜೇಶನ್ ಅಫ್ ಇಸ್ಲಾಮಿಕ್ ಕಾನ್ಫರೆನ್ಸ್(ಇಸ್ಲಾಮಿಕ್ ಸಮ್ಮೇಳನ ಸಂಘ)ನ ಸದಸ್ಯರಾಗಿದ್ದವು. ಬ್ರಿಟೀಷ್ ಇಂಡಿಯನ್ ಓಷನ್ ಟೆರಿಟರಿ ಮತ್ತು ಮಾಲ್ಡೀವಿಸ್ ನಡುವಿನ ಸಮುದ್ರ ಗಡಿಯ ವ್ಯಾಪ್ತಿನಿರ್ಧಾರದ ವಿಚಾರದಲ್ಲಿ ಮರೀಶಿಯಸ್‌‍ನೊಂದಿಗೆ ಯಾವುದೇ ಸಂಧಾನಕ್ಕೆ ಒಪ್ಪಿಕೊಳ್ಳಲು ಹೋಗಲಿಲ್ಲ, ಅಂತರಾಷ್ಟ್ರೀಯ ಕಾನೂನಿಯ ಅಡಿಯಲ್ಲಿ ಪರಿಶೀಲಿಸಿ ಚಾಂಗೋಸ್ ಆರ್ಚಿಪೆಲಗೊವನ್ನು ಯುಕೆಯೊಂದಿಗೆ ಮರುಜೊಡನೆ ಮಾಡಲಾಯಿತು. ಅವರೊಂದಿಗೆ 1991ರಲ್ಲಿ ಸಂಧಾನಗಳನ್ನು ಪ್ರಾರಂಭಿಸಿಕೊಂಡರು.

ಭಾಷೆ ಮತ್ತು ಸಂಸ್ಕೃತಿ

[ಬದಲಾಯಿಸಿ]
ಥಾನ ಕೈಬರಹ

ಮಾಲ್ಡೀವಿನ್ ಭೌಗೋಳಿಕವಾಗಿ ಶ್ರೀಲಂಕಾ ಮತ್ತು ದಕ್ಷಿಣ ಭಾರತದೇಶಗಳಿಗೆ ಸಮೀಪವಿರುವುದರಿಂದ ಈ ದೇಶಗಳ ಸಂಸ್ಕೃತಿಯ ಪ್ರಭಾವಕ್ಕೆ ಹೆಚ್ಚಾಗಿ ಒಳಗಾಗಿದೆ. ಇಲ್ಲಿ ಅಧಿಕೃತವಾಗಿ ಮತ್ತು ಸಾಮಾನ್ಯವಾಗಿ ಮಾತನಾಡುವ ಭಾಷೆಯೆಂದರೆ ಧಿವೆಹಿ, ಇದು ಇಂಡೋ-ಯುರೋಪ್ ಭಾಷೆಯು {0ಎಲು{/0} ಭಾಷೆಯೊಂದಿಗೆ ಕೆಲವು ಸಾಮ್ಯತೆಗಳನ್ನು ಹೊಂದಿದೆ, ಇದು ಹಳೆಯ ಸಿಂಹಳದ ಭಾಷೆ. ಧಿವೆಹಿ ಇದು ಮೊದಲು ಬರೆಯಲು ತಿಳಿದಂತಹ ಕೈಬರಹ, ಇದು ಏವೆಯಲ ಅಕುರು ಕೈಬರಹವಾಗಿದ್ದು ಇದನ್ನು ಐತಿಹಾಸಿಕ ರಾಜರು ಬರೆದಿರುವಂತಹ ದಾಖಲೆಗಳ ಬರಹ ರಾಧವಲ್ಹಿಯಿಂದ ತೆಗೆದುಕೊಳ್ಳಲಾಗಿದೆ ಎಂದು ಗುರುತಿಸಲಾಗಿದೆ. ನಂತರ ಧಿವೆಸ್ ಅಕುರು ಎನ್ನುವ ಬರಹವನ್ನು ಪರಿಚಯಿಸಿ ಅದನ್ನು ದೀರ್ಘಾವದಿಯಲ್ಲಿ ಉಪಯೋಗಿಸಲಾಯಿತು. ಈಗಿರುವಂತಹ ಬರಹವನ್ನು ಥಾನ ಎಂದು ಕರೆಯುತ್ತಾರೆ ಇದನ್ನು ಬಲಗಡೆಯಿಂದ ಎಡಗಡೆಗೆ ಬರೆಯಲಾಗುತ್ತದೆ. ಮಹ್ಮದ್ ಥಕುರುಫಾನು ಆಳ್ವಿಕೆಯಲ್ಲಿ ಅವರು ಥಾನ ಭಾಷೆಯನ್ನು ಪರಿಚಿಸಿದರು ಹೇಳಲಾಗುತ್ತಿದೆ. ವಾಣಿಜ್ಯವಾಗಿ ಇಂಗ್ಲೀಷ್ ಭಾಷೆಯನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ ಮತ್ತು ಸರ್ಕಾರಿ ಶಾಲೆಗಳಲ್ಲಿ ಇದೊಂದು ಬೋಧನೆ ಮಾಧ್ಯಮವಾಗಿ ಹೆಚ್ಚಾಗಿ ಬೆಳೆಯುತ್ತಿದೆ.

ಈ ಭಾಷೆಯು ಇಂಡಿಕ್ ಸಂಸ್ಕೃತಿಕ್ ಭಾಷೆಯ ಮೂಲಗಳಿಂದ ಹುಟ್ಟಿಕೊಂಡಿದೆ. ಅನಂತರದಲ್ಲಿ ಇದು ಉತ್ತರ ಉಪಖಂಡದ ಭಾಷೆಗಳಿಂದ ಪ್ರಭಾವಿತಗೊಂಡಿದೆ ಎನ್ನುವುದನ್ನು ಸೂಚಿಸುತ್ತಿದೆ. ದಂತಕಥೆಗಳ ಪ್ರಕಾರ ಈ ದೇಶವನ್ನು ಅಲ್ಲಿರುವಂತಹ ಮೂಲ ರಾಜ ಮನೆತನಗಳು ಆಳುತ್ತಿದ್ದವೆಂದು ಹೇಳಲಾಗುತ್ತಿದೆ.

ಇಲ್ಲಿಯ ಪುರಾತನ ರಾಜರುಗಳೇ ಬಹುಶಃ ಉಪಖಂಡದಿಂದ ಬುದ್ಧಿಸಂ(ಬೌಧ ಮತ)ವನ್ನು ತಂದಿದ್ದಾರೆ. ಆದರೆ ಮಾಲ್ಡೀವ್ಸ್‌‍ನ ಪುರಾಣ ಕಥೆಗಳು ಇದನ್ನು ಸ್ಪಷ್ಠೀಕರಿಸಿಲ್ಲ. ಶ್ರೀಲಂಕಾದಲ್ಲಿ ಅದೇ ತರಹದ ಸಮರೂಪ ದಂತಕಥೆಗಳಿವೆ; ಆದರೂ, ಮಾಲ್ಡೀವ್ಸ್‌‍ನ ಪುರಾತನ ರಾಜಮನೆತನಗಳು ಮತ್ತು ಬೌಧಮತಗಳೆರಡು ಐಸ್‌‍ಲ್ಯಾಂಡಿನಿಂದ ಬಂದಿರುವುದು ಅಸಂಭವವಾದಂತಹದ್ದು. ಏಕೆಂದರೆ ಶ್ರೀಲಂಕಾದ ಯಾವುದೇ ಐತಿಹಾಸಿಕ ದಾಖಲೆಗಳು ಮಾಲ್ಡೀವ್ಸ್‌‍ನ ಬಗ್ಗೆ ಉಲ್ಲೇಖಿಸಿಲ್ಲ. ಇದರ ರಾಜ್ಯಭಾರ ಶಾಖೆನೇ ಮಾಲ್ಡೀವ್ ದ್ವೀಪ‌‍ಗಳವರೆಗೆ ವಿಸ್ತಾರಗೊಂಡಿದ್ದರೆ, ಶ್ರೀಲಂಕಾದ ಪುರಾತನ ದಾಖಲೆಗಳು ಮಾಲ್ಡೀವ್ಸ್ ಬಗ್ಗೆ ಉಲ್ಲೇಖಿಸಲು ವಿಫಲವಾಗಿವೆ ಎನ್ನುವುದು ಅಸಾಧ್ಯ.[೩೫]

ಮಾಲ್ಡೀವಿಯನ್‌‌ ಇತಿಹಾಸದಲ್ಲಿ ಬೌದ್ಧ ಧರ್ಮದ[೩೬] ದೀರ್ಘಾವಧಿ ನಂತರ ಮುಸ್ಲೀಂ ವ್ಯಾಪಾರಿಗಳು ಇಸ್ಲಾಂ ಧರ್ಮದ ಅತಿ ಹಳೆಯ ಹಾಗೂ ದೊಡ್ಡ ಇಸ್ಲಾಂ ಪಂಗಡ ಸುನ್ನಿ ಇಸ್ಲಾಂ ಅನ್ನು ಪರಿಚಯಿಸಿದರು. ಮಾಲ್ಡಿವಿಯನ್ನರು 12ನೇ ಶತಮಾನದ ಮಧ್ಯಾವದಿಯಲ್ಲಿ ಮತಾಂತರಗೊಂಡಿದ್ದರು. ಸೂಫಿ ತತ್ವಗಳಿಗೆ ಐಸ್‌‍ಲ್ಯಾಂಡಿನಲ್ಲಿ ಸುಧೀರ್ಘ ಇತಿಹಾಸವಿದೆ. ಅದಕ್ಕೆ ಸಾಕ್ಷಿಯಾಗಿ ಇಲ್ಲಿ ನಿರ್ಮಾಣಗೊಂಡಿರುವಂಹ ಸ್ಮಾರಕ ಕಟ್ಟಡಗಳು ದೇಶದ ಇತಿಹಾಸ ಬಿಂಬಿಸುವುದನ್ನು ಕಾಣಬಹುದಾಗಿದೆ. ಅವರು ಸಂತರ ಸಮಾಧಿಗಳ ಸಹಾಯವನ್ನು ಬಯಸಿ, ಮೊನ್ನೆ ಮೊನ್ನೆ ವರೆಗೂ ಅಂದರೆ 1980ರ ದಶಕದವರೆಗೂ ಬಳಸುತ್ತಿದ್ದರು. ನಂತರ ಅವರು ಕೆಲವು ಹಳೆಯ ಮಸೀದಿಗಳನ್ನು, ಇಂದು ಸಾಂಸ್ಕೃತಿಕ ಐತಿಹಾಸಿಕ ಕಟ್ಟಡಗಳನ್ನಾಗಿ ಪರಿಗಣಿಸಿರುವುದನ್ನು ನೋಡಬಹುದಾಗಿದೆ. ತಸ್ಸವುಫ್‌‍ನ ಮತ್ತೊಂದು ರೀತಿಗಳೇಂದರೆ ಧರ್ಮಾಚರಣೆಯ ಧಿಕ್ರ್ ಸಮಾರಂಭಗಳಾದ ಮೌಲುಡು ಮವ್ಲಿಡ್ ಪಠನಗಳನ್ನೋಳಗೊಂಡ (ಕ್ರೈಸ್ತ ಧರ್ಮ) ಪ್ರಭು ಭೋಜನ ಸಂಸ್ಕಾರ ಮತ್ತು ಮೊನ್ನೆಯವರೆಗೂ ಅಸ್ತಿತ್ವದಲ್ಲಿದ್ದಂತಹ ಕೆಲವು ಮಾಧುರ್ಯನಾದದ ಪ್ರಾರ್ಥನೆಗಳು. ಮೌಲುಡು ಹಬ್ಬದ ಸಂದರ್ಭಕ್ಕೆ ವಿಶೇಷವಾಗಿ ನಿರ್ಮಿಸಿರುವಂತ ಅಲಂಕೃತ ಟೆಂಟುಗಳಲ್ಲಿ ಮೌಲುಡು ಹಬ್ಬಗಳನ್ನು ಆಚರಿಸಲಾಗುತ್ತದೆ. ಸುನ್ನಿ ಇಸ್ಲಾಂನ ಕಡುಸಂಪ್ರದಾಯ ನಿಷ್ಟರಾದ ವಾಹ್ಹಬಿಸ್‌‍ರವರು ಈ ಸಾಂಪ್ರದಾಯಿಕ ರೂಢಿಯ ಆಚರಣೆಯನ್ನು ಅಸಹ್ಯಪಟ್ಟು, ಅವರು ಭಾರತೀಯ ಉಪಖಂಡದ ಎಣ್ಣೆ ಸಂಪತ್ತಿನ ಪ್ರಭಾವಕ್ಕೆ ಒಳಗಾದರು. ಪ್ರಸ್ತುತ ಸುನ್ನಿ ಇಸ್ಲಾಂ ಎಲ್ಲಾ ಜನರ ಅಧಿಕೃತ ಧರ್ಮವಾಗಿದೆ. ಇಲ್ಲಿ ನಾಗರೀಕ ಸದಸ್ಯತ್ವವನ್ನು ಹೊಂದಬೇಕಾದರೆ ಈ ಧರ್ಮಕ್ಕೆ ಬದ್ದರಾಗಿರಬೇಕು.

thumb|left|ಮಸಜೀದ್-ಅಲ್- ಸುಲ್ತಾನ್ ಮಹ್ಮದ್ ತಕುರುಫಾನು-ಅಲ್-ಎಜಯಾಮ್ ಇಸ್ಲಾಂ ಕೇಂದ್ರವನ್ನು ನಿರ್ಮಿಸಿದ್ದಾರೆ.

12ನೇ ಶತಮಾನದಲ್ಲಿ ಮಾಲ್ಡೀವಿಯನ್ಸ್ ಸಾಮಾನ್ಯವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಗೊಂಡಿದ್ದರಿಂದ ಮತ್ತು ಕೇಂದ್ರ ಹಿಂದೂ ಮಹಾಸಾಗರದ ಅಡ್ಡ ದಾರಿಯಲ್ಲಿ ಈ ಪ್ರದೇಶವಿರುವುದರಿಂದ 12ನೇ ಶತಮಾನದಲ್ಲಿ ಮಾಲ್ಡೀವ್ಸ್ ಭಾಷೆ ಮತ್ತು ಸಂಸ್ಕೃತಿಯಲ್ಲಿ ಅರೇಬಿಯಾ ದೇಶದ ಪ್ರಭಾವಕ್ಕೂ ಸಹ ಒಳಗಾಯಿತು. ದೂರದ ಪೂರ್ವ ಮತ್ತು ಮಧ್ಯಪೂರ್ವ ರಾಷ್ಟ್ರಗಳ ದೀರ್ಘಾವಧಿಯ ವ್ಯಾಪಾರ ವಹಿವಾಟಿನ ಇತಿಹಾಸದಿಂದ ಮಾಲ್ಡೀವ್ಸ್‌‍ನ ಮೇಲೆ ಅರೇಬಿಯಾದ ಪ್ರಭಾವ ಬೀರಿತು. ನಂತರ 13ನೇ ಶತಮಾನದಲ್ಲಿ ಪೋರ್ಚ್‌‍ಗ್ರೀಸರಿಗಿಂತ ಮೊದಲೇ ಸೊಮಲಿ ಫೈರೆಟ್ಸ್ ಚಿನ್ನಕ್ಕಾಗಿ ದ್ವೀಪ‌ ಅನ್ನು ಕಂಡುಹಿಡಿದವು. ಅವರ ಸಂಕ್ಷಿಪ್ತ ತಡೆಯು ನಂತರ 1424ರಲ್ಲಿ "ದಗಾಲ್ ದಿಯಿಗ್ ಬದಾನೆಯ್" ಎನ್ನುವ ಸೊಮಾಲಿಯನ್‌‍ರ ರಕ್ತಸಿಕ್ತವಾದ ಹೋರಾಟದಿಂದ ಕೊನೆಗೊಂಡಿತು.

ಮೊರೋಕನ್ ಪ್ರವಾಸಿಗ ಇಬನ್ ಬಟುಟರವರ ಪ್ರಕಾರ ಮೊರೊಕನ್ನಿಂದ ಪ್ರಯಾಣ ಮಾಡಿಬಂದಿದ್ದಂತಹ ಸುನ್ನಿ ಮುಸ್ಲೀಂ ಭೇಟಿಗಾರ ಅಬು ಅಲ್ ಬರಕಟ್ ಈತನೇ ಈ ಮತಾಂತರಕ್ಕೆ ಕಾರಣಕರ್ತ ಎಂದು ಹೇಳಿದ್ದಾರೆ. ಆದರೂ ವಿಶ್ವಾಸಾರ್ಹ ಮಾಲ್ಡೀವಿಯನ್ ಸಂಪ್ರಾಯ ಹೇಳುವಂತೆ, ಆತ ಯುಸೆಫ್ ಶಮಶುದ್ದೀನ್ ಎಂಬ ಹೆಸರಿನ ತಬ್ರಿಜ್‌‍ನ ಪರ್ಷೀಯನ್ ಸಂತ. ಆತನನ್ನು ತಬ್ರಿಜುಗೆಫಾನು ಎಂದು ಸಹ ಗುರುತಿಸುತ್ತಾರೆ. ಆತ ಪೂಜಿಸುತ್ತಿದ್ದ ಅಥವಾ ಗೌರವಿಸುತ್ತಿದ್ದ, ಫ್ರೈಡೆ ಮಾಸ್ಕ್ ಅಥವಾ ಹುಕುರು ಮಿಸ್ಕಿ ಸ್ಮಾರಕವು ಮಾಲ್ಡೀವ್ಸ್‌ನ ರಾಜ್ಯಧಾನಿಯ ಮೆಲೆನಗರದ ನೆಲದ ಮೇಲೆ ನಿಂತಿದೆ. ಇದನ್ನು 1656ರಲ್ಲಿ ನಿರ್ಮಿಸಲಾಗಿದ್ದು ಇದು ಮಾಲ್ಡೀವ್ಸ್‌‍ನ ಅತ್ಯಂತ ಹಳೆಯ ಮಸೀದಿಯಾಗಿದೆ.

ಇವನ್ನೂ ಗಮನಿಸಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
 1. CIA Population Division (2009). "CIA World Fact Book". 2009 revision. US. Archived from the original (.html) on 2015-09-18. Retrieved 2009-12-25. {{cite journal}}: Cite journal requires |journal= (help)
 2. "ಆರ್ಕೈವ್ ನಕಲು". Archived from the original on 2006-11-29. Retrieved 2008-01-20.
 3. ೩.೦ ೩.೧ ೩.೨ ೩.೩ "Maldives". International Monetary Fund. Retrieved 2009-10-01.
 4. "Human Development Report 2009. Human development index trends: Table G" (PDF). The United Nations. Retrieved 2009-10-05.
 5. "ಆರ್ಕೈವ್ ನಕಲು". Archived from the original on 2009-01-22. Retrieved 2010-02-25.
 6. ೬.೦ ೬.೧ https://www.theguardian.com/environment/2008/nov/11/ವಾತಾವರಣ[ಶಾಶ್ವತವಾಗಿ ಮಡಿದ ಕೊಂಡಿ] ಬದಲಾವಣೆ-ಅಪಾಯ ಉಂಟುಮಾಡಿದ-ನಿವಾಸಿಗಳು-ಮಾಲ್ಡೀವ್ಸ್
 7. ಜೆ ಹೊಗೆನ್‌ಡ್ರಾನ್ ಮತ್ತು ಎಮ್ ಜಾನ್‌ಸನ್, ದ ಶೆಲ್ ಮನಿ ಆಫ್ ದ ಸ್ಲೇವ್ ಟ್ರೇಡ್ , ಪು 20-22.
 8. ಆಪ್ಟೆ, ವಾಮನ್ ಶಿವ್ರಾಮ್(1985). ಸಂಸ್ಕೃತ್-ಇಂಗ್ಲೀಷ್ ಡಿಕ್ಷನರಿ . ಮೊತಿಲಾಲ್ ಬನಾರ್ಸಿದಾಸ್ ನವ ದೆಹಲಿ, 1985.
 9. ಇಬನ್ ಬಟೂಟಾ,ಟ್ರಾವೆಲರ್ಸ್ ಇನ್ ಏಷ್ಯಾ ಆ‍ಯ್ಂಡ್ ಆಫ್ರಿಕಾ.ಎ.ಆರ್.ಜಿಬ್‌ರಿಂದ ಅನುವಾದ
 10. ಅಕ್ಬರ್ ಅಲ್-ಸಿನ್-ವಾ ಲ-ಹಿಂದ್(ಚೀನಾ ಮತ್ತು ಭಾರತದ ಮೇಲೆ ಟಿಪ್ಪಣಿ), 851ರಿಂದ
  http://www.saudiaramcoworld.com/issue/200504/the.seas.of.sindbad.htm Archived 2007-02-08 ವೇಬ್ಯಾಕ್ ಮೆಷಿನ್ ನಲ್ಲಿ. Saudi Aramco world Magazine, Volume 56, Number 4, The seas of sinbad, By Historian and Arabist Paul Lunde
 11. http://www.maldivesroyalfamily.com/maldives_roman_links.shtml Archived 2010-05-15 ವೇಬ್ಯಾಕ್ ಮೆಷಿನ್ ನಲ್ಲಿ. Maldives Royal Family Website
 12. "Average Conditions Maldives". BBC Weather. Archived from the original on September 11, 2010. Retrieved December 10, 2009.
 13. Bruce C. Douglas (1997). "Global Sea Rise: A Redetermination". Surveys in Geophysics. 18: 279–292. doi:10.1023/A:1006544227856.
 14. "ಎ ಟ್ವೆಂಟಿಯತ್ ಸೆಂಚುರಿ ಅಕ್ಸೆಲೆರೆಶನ್ ಇನ್ ಗ್ಲೋಬಲ್ ಸೀ-ಲೆವೆಲ್ ರೈಸ್". Archived from the original on 2011-04-10. Retrieved 2010-02-25.
 15. https://www.theguardian.com/environment/2008/nov/10/maldives-climate-change
 16. https://www.theguardian.com/environment/2008/nov/10/maldives-climate-change Paradise almost lost: Maldives seek to buy a new homeland. ದಿ ಗಾರ್ಡಿಯನ್
 17. https://web.archive.org/web/20080502005004/http://afp.google.com/article/ALeqM5hULNt_1Dmy3xyZGEcVABqoMh6I5Q Maldives president seeks help for 'paradise drowning'. AFP.
 18. http://news.bbc.co.uk/2/hi/science/nature/7944760.stm Carbon-neutral goal for Maldives. BBC
 19. Lang, Olivia. "Maldives leader in climate change stunt". Retrieved 2010-10-19.
 20. Xavier Romero-Frias, The Maldive Islanders, A Study of the Popular Culture of an Ancient Ocean Kingdom
 21. Maloney, Clarence. "Maldives People". Archived from the original on 2013-01-10. Retrieved 2008-06-22.
 22. "Maldives Royal Family". Archived from the original on 2010-05-15. Retrieved 2010-02-25.
 23. "Maldives Royal Family". Archived from the original on 2010-05-15. Retrieved 2010-02-25.
 24. ೨೪.೦ ೨೪.೧ ೨೪.೨ ೨೪.೩ CNN. "Sinking island nation seeks new home". Retrieved 2008-11-12. {{cite web}}: |author= has generic name (help)BAT
 25. http://www.forum18.org/Archive.php?article_id=1383
 26. http://www.maldives-ethnography.com/ Maldives
 27. Maldives opposition selects veteran Ibrahim Solih for Sept presidential poll Reuters, 30 June 2018
 28. http://www.statoids.com/umv.html Maldives Atolls from statoids.com
 29. ೨೯.೦ ೨೯.೧ ದವೆಹಿರಾಜ್ಜೆ ಜೊಗ್ರಾಪಿಗೆ ವನವಾರು ಮುಹಮ್ಮದು ಇಬ್ರಾಹಿಮ್
 30. like Thor Heyerdah's book The Maldive Mystery for example
 31. Ministry of Tourism website;http://www.tourism.gov.mv/ ; accessed on 03 April 2009
 32. Report 'Fathuruverikamuge Tharaggeege Dhuveli, 35 Aharu' translated to english 'Pace of Tourism, 35 years'Ministry of Tourism and Civil Aviation, volume 23. http://tourism.gov.mv/pubs/35_years_of_tourism_final.pdf ; accessed on 03 April 2009
 33. "ಆರ್ಕೈವ್ ನಕಲು". Archived from the original on 2013-09-21. Retrieved 2021-08-10.
 34. "ಆರ್ಕೈವ್ ನಕಲು". Archived from the original on 2011-05-11. Retrieved 2021-08-29.
 35. Clarence Maloney; People of the Maldive Islands
 36. http://www.maldivesstory.com.mv/site%20files/after%20islam/latest/conversion-frames.htm Archived 2008-03-15 ವೇಬ್ಯಾಕ್ ಮೆಷಿನ್ ನಲ್ಲಿ. Untitled Document at www.maldivesstory.com.mv

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
 • ಇಬ್ರಾಹಿಮ್ ಮಹಮದ್ ಸೋಲಿಹ್
 • ದಿವೆಹಿರಾಜ್ಜೆಗೆ ಜೊಗ್ರಾಫಿಗೆ ವನವಾರು . ಮುಹಮದ್ ಇಬ್ರಾಹಿಂ ಲುಟ್ಫಿ. ಜಿ.ಸೊಸಾನಿ. ಮೇಲ್ 1999.
 • ಹೆಚ್. ಸಿ. ಪಿ. ಬೆಲ್, ದ ಮಾಲ್ಡೀವ್ಸ್ ಐಲ್ಯಾಂಡ್ಸ್, ಆ‍ಯ್‌ನ್ ಅಕೌಂಟ್ ಆಫ್ ದ ಫಿಸಿಕಲ್ ಫ್ಯುಚರ್ಸ್, ಹಿಸ್ಟರಿ, ಇನ್‌ಹ್ಯಾಬಿಟೆಂಟ್ಸ್, ಪ್ರೊಡಕ್ಷನ್ಸ್ ಆ‍ಯ್೦ಡ್ ಟ್ರೇಡ್ . ಕೊಲೊಂಬೊ 1883, ISBN 81-206-1222-1
 • ಹೆಚ್. ಸಿ. ಪಿ. ಬೆಲ್, ದ ಮಾಲ್ಡೀವ್ ಐಲ್ಯಾಂಡ್ಸ್ ; ಮೊನೊಗ್ರಾಫ್ ಆಫ್ ದ ಹಿಸ್ಟರಿ, ಆರ್ಕಾಯೊಲಜಿ ಆ‍ಯ್೦ಡ್ ಎಪಿಗ್ರಫಿ . ರಿಪ್ರಿಂಟ್ ಕೊಲಂಬೊ 1940. ಕೌನ್ಸಿಲ್ ಫಾರ್ ಲಿಂಗ್ವಿಸ್ಟಿಕ್ ಆ‍ಯ್೦ಡ್ ಹಿಸ್ಟರಿಕಾಲ್ ರಿಸರ್ಚ್. ಮೇಲ್' 1989
 • ಹೆಚ್. ಸಿ. ಪಿ. ಬೆಲ್, ಎಕ್ಸೆರ್ಪ್ಟಾ ಮಾಲ್ದಿವಿಯಾನಾ . ಮರುಮುದ್ರಣ ಕೊಲಂಬೊ 1922/35 edn. ಏಷಿಯನ್ ಏಜ್ಯುಕೇಷನಲ್ ಸರ್ವೀಸಸ್. ನವ ದೆಹಲಿ 1999
 • ಕ್ಸೇವಿಯರ್ ರೊಮೆರೊ-ಫ್ರಿಯಾಸ್, ದ ಮಾಲ್ಡೀವ್ಸ್ ಐಲ್ಯಾಂಡರ್ಸ್, ಎ ಸ್ಟಡಿ ಆಫ್ ದ ಪಾಪುಲರ್ ಕಲ್ಚರ್ ಆಫ್ ಆ‍ಯ್‌ನ್ ಏನ್ಷಿಯೆಂಟ್ ಓಸಿಯಾನ್ ಕಿಂಗ್‌ಡಂ . ಬಾರ್ಸೆಲೊನಾ 1999, ISBN 84-7254-801-5
 • ದಿವೆಹಿ ಟರಿಖಾಹ್ ಔ ಆಲಿಕಮೆಹ್ ದಿವೆಹಿ ಬಹೈ ಟರಿಖಾಹ್ ಖಿಡ್‌ಮೈಕುರಾ ಕ್ವಾಮಿ ಮರ್ಕಾಜು . ಮರುಮುದ್ರಣ 1958 edn. ಮೇಲ್ 1990.
 • ಕ್ರಿಸ್ಟೊಫರ್, ವಿಲಿಯಂ 1836-38. ಟ್ರಾನ್ಸ್ಯಾಕ್ಷನ್ಸ್ ಆಫ್ ದ ಮುಂಬಯಿ ಜಿಯೊಗ್ರಾಫಿಕಲ್ ಸೊಸೈಟಿ , ಸಂ. I. ಮುಂಬಯಿ.
 • ಲಿಯೆಟ್. ಐ.ಎ. ಯಂಗ್ & ಡಬ್ಲ್ಯೂ. ಕ್ರಿಸ್ಟಫರ್, ಮೆಮೊರಿಸ್ ಆನ್ ದಿ ಇನ್‌ಹ್ಯಾಬಿಟೆಂಟ್ಸ್ ಆಫ್ ದಿ ಮಾಲ್ಡೀವ್ ಐಲ್ಯಾಂಡ್ಸ್ .
 • ಗೇಗರ್, ವಿಲ್ಹೆಮ್. ಮಾಲ್ಡೀವಿಯನ್ ಲಿಗ್ವಿಸ್ಟಿಕ್ ಸ್ಟಡೀಸ್ . ಮರುಮುದ್ರಣ 1919 edn. ಏಶಿಯನ್ ಎಜ್ಯುಕೇಷನಲ್ ಸರ್ವೀಸಸ್. ದೆಹಲಿ 1999.
 • ಹಾಕ್ಲೀ, ಟಿ.ಡಬ್ಲ್ಯೂ. ದ ಟು ಥೌಸೆಂಡ್ ಐಲೆಸ್ . ಮರುಮುದ್ರಣ 1835 edn. ಏಶಿಯನ್ ಎಜ್ಯುಕೇಷನಲ್ ಸರ್ವೀಸಸ್. ದೆಹಲಿ ೨೦೦೩.
 • ಹಿಡೆಯುಕಿ ಟಕಹಶಿ, ಮಾಲ್ಡಿವಿಯನ್ ನ್ಯಾಷನಲ್ ಸೆಕ್ಯುರಿಟಿ –ಆ‍ಯ್೦ಡ್ ದಿ ಥ್ರೆಟ್ಸ್ ಆಫ್ ಮರ್ಸೆನಾರೀಸ್ , ದಿ ರೌಂಡ್ ಟೇಬಲ್(ಲಂಡನ್), ಸಂಖ್ಯೆ. 351, ಜುಲೈ 1999, pp. 433–444.
 • ಮಾಲ್ಟೆನ್, ಥಾಮಸ್: ಮಾಲ್ಡೀವಿಯೆನ್ ಅಂಡ್ ಲಕ್ಕಡಿವಿಯೆನ್. ಮೇಟಿರಿಯಲಿನ್ ಜರ್ ಬಿಬ್ಲಿಯೊಗ್ರಾಫಿ ಡರ್ ಅಟಾಲ್ ಇಮ್ ಇಂಡಿಸ್ಚೆನ್ ಒಜಿಯಾನ್. ಬೈಟ್ರೆಜ್ ಜರ್ ಸುಡಾಸಿಯೆನ್-ಫಾರ್ಸ್ಚಂಗ್ ಸುಡಾಸಿಯೆನ್-ಇನ್ಸ್‌ಟಿಟ್ಯೂಟ್ ಯೂನಿವರ್ಸಿಟೇಟ್ ಹೈಡೆಲ್ಬರ್ಗ್, Nr. 87. ಫ್ರಾಂಜ್ ಸ್ಟೈನರ್ ವರ್ಲಾಗ್. ವಿಯೆಸ್ಬೇಡನ್, 1983.
 • ವಿಲ್ಗನ್, ಲಾರ್ಸ್: ಮಾಲ್ಡೀವ್ ಆ‍ಯ್೦ಡ್ ಮಿನಿಕೊಯ್ ಐಲ್ಯಾಂಡ್ಸ್ ಬಿಬ್ಲಿಯೊಗ್ರಫಿ ವಿತ್ ದ ಲಕ್ಯಾಡಿವ್ ಐಲ್ಯಾಂಡ್ಸ್. ಲೇಖಕನಿಂದ ಪ್ರಕಟಗೊಂಡಿತು. ಸ್ಟಾಕೊಮ್, 1994.

ಹೊರಗಿನ ಕೊಂಡಿಗಳು

[ಬದಲಾಯಿಸಿ]

3°12′N 73°13′E / 3.20°N 73.22°E / 3.20; 73.22