ಪ್ರವಾಸೋದ್ಯಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
"Tourist", other uses, redirects here. For Tourist (disambiguation), see the places of interest. For tourist attraction, see tourist attraction (disambiguation).
ಇತ್ತೀಚಿನ ವರ್ಷಗಳಲ್ಲಿ ಫ್ರಾನ್ಸ್‌ ವಿಶ್ವದ ಅತಿ ಹೆಚ್ಚು ಪ್ರಯಾಣಿಕರು ಭೇಟಿ ನೀಡಿದ ದೇಶವಾಗಿದೆ.[2][4]
ದಿ ಅಲ್ಹಾಂಬ್ರಾ, ಗ್ರ್ಯಾನಡಾ, ಸ್ಪೇನ್‌.
ನ್ಯೂಯಾರ್ಕ್‌ ನಗರದಲ್ಲಿರುವ ಟೈಮ್ಸ್‌ ಸ್ಕ್ವಾರ್‌, ಯುನೈಟೆಡ್ ಸ್ಟೇಟ್ಸ್‌.
ಚೀನಾದ ಮಹಾಗೋಡೆ, ಚೀನಾ.
ರೋಮ್‌ನಲ್ಲಿರುವ ಕಲಾಸಿಯಮ್‌, ಇಟಲಿ.
ಲಂಡನ್‌ನಲ್ಲಿರುವ ಟ್ರ್ಯಾಫಲ್ಗರ್‌ ಸ್ಕ್ವಾರ್‌, ಯುನೈಟೆಡ್‌ ಕಿಂಗ್‌ಡಮ್‌.
ಬವರಿಯಾದಲ್ಲಿರುವ ನ್ಯೂಶ್ವೆಸ್ಟೀನ್‌ ಕೋಟೆ, ಜರ್ಮನಿ.
St. ಮೈಕಲ್‌ರ ಚಿನ್ನದ ಗೋಪುರದ ಮಂದಿರ, ಕೀವ್‌, ಉಕ್ರೇನ್‌.
ಹಗೀಯಾ ಸೋಫಿಯಾ, ಇಸ್ತಾಂಬುಲ್‌, ಟರ್ಕಿ.
"ಎಲ್ ಕ್ಯಾಸ್ಟಿಲೋ", ಚಿಚೆನ್ ಇಟ್ಜಾ, ಮೆಕ್ಸಿಕೊ.
ಟೊಕಿಯೊ ಡಿಸ್ನಿಲ್ಯಾಂಡ್‌, ಜಪಾನ್‌.
ವ್ಯೂ ಫ್ರಮ್ ವಿಕ್ಟೋರಿಯಾ ಪೀಕ್‌, ಹಾಂಗ್ ಕಾಂಗ್‌.
ಸಿಡ್ನಿ ಒಪೆರಾ ಹೌಸ್‌, ಸಿಡ್ನಿ, ಆಸ್ಟ್ರೇಲಿಯಾ.
ಈಜಿಪ್ಟ್‌ನಲ್ಲಿರುವ ಗಿಜಾ ಗೋರಿ.
ತಾಜ್ ಮಹಲ್‌, ಆಗ್ರಾ, ಭಾರತ.
ಹಸಿರು ಬಣ್ಣದ ಬುದ್ಧ ದೇವಾಲಯ, ಗ್ರ್ಯಾಂಡ್ ಪ್ಯಾಲೇಸ್‌, ಬ್ಯಾಂಗ್‌ಕಾಕ್‌, ಥೈಲೆಂಡ್‌.

ಪ್ರವಾಸೋದ್ಯಮ ಅಥವಾ ಯೋಜಿತ ಪ್ರವಾಸವು ಮನರಂಜನೆ, ವಿರಾಮ ಅಥವಾ ವ್ಯಾಪಾರದ ಉದ್ದೇಶಗಳಿಗಾಗಿ ಮಾಡುವ ಪ್ರಯಾಣವಾಗಿದೆ. ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ಪ್ರವಾಸಿಗರು ಎಂಬ ಪದವನ್ನು, "ವಿರಾಮ, ವ್ಯವಹಾರ ಮತ್ತು ಇತರ ಉದ್ದೇಶಗಳಿಗಾಗಿ ತನ್ನ ಎಂದಿನ ಪರಿಸರದಿಂದ ಹೊರಗಿನ ಸ್ಥಳಗಳಿಗೆ ಪ್ರಯಾಣಿಸಿ, ಅಲ್ಲಿ ಇಪ್ಪತ್ನಾಲ್ಕು (24) ಗಂಟೆಗಳಿಗಿಂತ ಹೆಚ್ಚು ಅವಧಿಗೆ ಉಳಿಯುವ ಮತ್ತು ಒಂದು ಸತತ ವರ್ಷಕ್ಕಿಂತ ಹೆಚ್ಚಾಗಿ ಉಳಿಯದ ಹಾಗೂ ತಾವು ಭೇಟಿ ನೀಡಿದ ಪ್ರದೇಶಗಳಲ್ಲಿ ಸಂಭಾವನೆ ಗಳಿಸುವ ಅಥವಾ ಪ್ರತಿಫಲ ಅಪೇಕ್ಷಿಸುವ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳದ ವ್ಯಕ್ತಿಗಳು" ಎಂಬುದಾಗಿ ವ್ಯಾಖ್ಯಾನಿಸಿದೆ.[೧] ಪ್ರವಾಸೋದ್ಯಮವು ವಿಶ್ವವ್ಯಾಪಕವಾಗಿ ಜನಪ್ರಿಯವಾಗಿರುವ ಒಂದು ವಿರಾಮದ ಚಟುವಟಿಕೆಯಾಗಿ ಮಾರ್ಪಟ್ಟಿದೆ. 2008ರಲ್ಲಿ 922 ದಶಲಕ್ಷಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನವು ದಾಖಲಾಗಿದ್ದು, 2007ಕ್ಕೆ ಈ ಪ್ರಮಾಣವನ್ನು ಹೋಲಿಸಿದಾಗ 1.9%ರಷ್ಟು ಬೆಳವಣಿಗೆ ಕಂಡಂತಾಗಿದೆ. 2008ರಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಸಂದಾಯವಾದ ಹಣದ ಪ್ರಮಾಣವು 944 ಶತಕೋಟಿ US$ನ್ನು (642 ಶತಕೋಟಿ ಯುರೊ) ಮುಟ್ಟಿದ್ದು, ಸಂಬಂಧಪಟ್ಟ ವಾಸ್ತವಿಕ ಆದಾಯದಲ್ಲಿ 1.8%ರಷ್ಟು ಏರಿಕೆ ಕಂಡಂತಾಗಿದೆ.[೨]


2000ರ ಕೊನೆಯ ಅವಧಿಯಲ್ಲಾದ ಆರ್ಥಿಕ ಹಿಂಜರಿತದ ಪರಿಣಾಮವಾಗಿ, ಉತ್ತರ ಧ್ರುವದ ಬೇಸಿಗೆ ತಿಂಗಳುಗಳ ಅವಧಿಯಲ್ಲಿ ವಿಶ್ವದಾದ್ಯಂತದ ಅಂತರರಾಷ್ಟ್ರೀಯ ಪ್ರವಾಸೋದ್ಯಮದ ಆಗಮನಗಳಲ್ಲಿ 2%ರಷ್ಟು ಕುಸಿಯುವುದರೊಂದಿಗೆ, 2008ರ ಜೂನ್‌ನ ಪ್ರಾರಂಭದಲ್ಲಿ ಅಂತರರಾಷ್ಟ್ರೀಯ ಪ್ರಯಾಣದ ಬೇಡಿಕೆಯು ಭಾರಿ ಕುಸಿತವನ್ನು ಕಂಡಿತು.[೩] 2009ರ ಮೊದಲ ನಾಲ್ಕು ತಿಂಗಳ ಅವಧಿಯಲ್ಲಿ ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನಗಳಲ್ಲಿ 8%ರಷ್ಟು ಕುಸಿತವಾಗಿದ್ದರಿಂದಾಗಿ ಈ ಋಣಾತ್ಮಕ ಪರಿಸ್ಥಿತಿಯು ಮತ್ತಷ್ಟು ತೀವ್ರವಾಯಿತು.[೨] ಇದಾದ ನಂತರ, ಸಾಂಕ್ರಾಮಿಕವಾದ AH1N1 ವೈರಸ್‌ನ ತೀವ್ರಗತಿಯ ಹರಡುವಿಕೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಈ ಇಳಿಕೆಯ ಪರಿಸ್ಥಿತಿಯು ಉಲ್ಬಣಗೊಂಡಿತು.[೨]


U.A.E, ಈಜಿಪ್ಟ್‌, ಗ್ರೀಸ್‌ ಮತ್ತು ಥೈಲೆಂಡ್‌ನಂತಹ ಅನೇಕ ದೇಶಗಳು ಮತ್ತು ದಿ ಬಹಮಾಸ್‌, ಫಿಜಿ, ಮಾಲ್ಡೀವ್ಸ್‌ ಮತ್ತು ಸೇಶೆಲ್ಸ್‌ನಂತಹ ಹಲವು ದ್ವೀಪ ರಾಷ್ಟ್ರಗಳಿಗೆ ಪ್ರವಾಸೋದ್ಯಮವು ಅತ್ಯಾವಶ್ಯಕವಾಗಿದೆ. ಪ್ರವಾಸೋದ್ಯಮದೊಂದಿಗೆ ತಳುಕುಹಾಕಿಕೊಂಡಿರುವ ಅವುಗಳ ಸರಕುಗಳು ಮತ್ತು ಸೇವೆಗಳೊಂದಿಗಿನ ವ್ಯವಹಾರಕ್ಕಾಗಿ ಮತ್ತು ಸೇವಾ ಉದ್ಯಮಗಳಲ್ಲಿನ ಉದ್ಯೋಗಾವಕಾಶಕ್ಕಾಗಿ ಬೃಹತ್‌ ಪ್ರಮಾಣದ ಹಣವನ್ನು ಸದರಿ ದೇಶಗಳು ಹೂಡಿರುತ್ತವೆಯಾದ್ದರಿಂದ ಅವುಗಳಿಗೆ ಪ್ರವಾಸೋದ್ಯಮವು ಅತ್ಯಾವಶ್ಯಕವಾಗಿದೆ.

ವಿಮಾನಯಾನ ಸಂಸ್ಥೆಗಳು, ವಿಹಾರ ನೌಕಾಯಾನದ ಹಡಗುಗಳು ಮತ್ತು ಟ್ಯಾಕ್ಸಿಗಳಂತಹ ಸಾರಿಗೆ ಸೇವೆಗಳು; ಹೊಟೇಲುಗಳು ಮತ್ತು ವಿಹಾರಧಾಮಗಳನ್ನೊಳಗೊಂಡ ವಸತಿ ಸೌಕರ್ಯಗಳು, ಮತ್ತು ಮನರಂಜನಾ ಉದ್ಯಾನಗಳು, ಮೋಜು ಮಂದಿರಗಳು, ವ್ಯಾಪಾರ ಕೇಂದ್ರಗಳು, ವಿವಿಧ ಸಂಗೀತ ತಾಣಗಳು ಮತ್ತು ರಂಗಮಂದಿರದಂತಹ ಮನರಂಜನಾ ತಾಣಗಳಂತಹ ಆತಿಥ್ಯ ಸೇವೆಗಳು ಈ ಸೇವಾ ವಲಯಗಳಲ್ಲಿ ಸೇರಿವೆ.
ಪರಿವಿಡಿ

ವ್ಯಾಖ್ಯಾನ[ಬದಲಾಯಿಸಿ]

1941ರಲ್ಲಿ ಹುಂಜಿಕರ್‌ ಮತ್ತು ಕ್ರಾಪ್ಫ್‌ರವರು ಪ್ರವಾಸೋದ್ಯಮದ ಕುರಿಯು ಹೇಳುತ್ತಾ, "ಶಾಶ್ವತ ವಸತಿಯಷ್ಟರ ಮಟ್ಟಿಗೆ ಮಾಡಿಕೊಳ್ಳದ ಮತ್ತು ಯಾವುದೇ ಸಂಪಾದನೆಯ ಚಟುಯವಟಿಕೆಯೊಂದಿಗೆ ಸಂಬಂಧವನ್ನು ಹೊಂದಿರದ ಅನಿವಾಸಿಗಳ ಪ್ರಯಾಣ ಮತ್ತು ಉಳಿಯುವಿಕೆಯಿಂದ ಉದ್ಭವಿಸುವ ವಿದ್ಯಮಾನ ಮತ್ತು ಸಂಬಂಧಗಳ ಸಾಗಣೆಯ ಒಟ್ಟುಮೊತ್ತವೇ ಪ್ರವಾಸೋದ್ಯಮ" ಎಂದು ವ್ಯಾಖ್ಯಾನಿಸಿದ್ದಾರೆ.[೪] 1976ರಲ್ಲಿ ಇಂಗ್ಲೆಂಡ್‌ನ ಪ್ರವಾಸೋದ್ಯಮ ಸಂಘವು ಪ್ರವಾಸೋದ್ಯಮವನ್ನು ಹೀಗೆ ವ್ಯಾಖ್ಯಾನಿಸಿದೆ: "ಜನರು ಸಾಮಾನ್ಯವಾಗಿ ತಾವು ವಾಸಿಸುವ ಮತ್ತು ಕೆಲಸ ಮಾಡುವ ಸ್ಥಳದಿಂದ ಹೊರಗಿನ ಗಮ್ಯಸ್ಥಾನಕ್ಕೆ ನಡೆಸುವ ತಾತ್ಕಾಲಿಕ, ಅಲ್ಪಾವಧಿಯ ಚಲನೆ ಮತ್ತು ಇಂಥಾ ಪ್ರತೀ ಗಮ್ಯಸ್ಥಾನದಲ್ಲೂ ತಾವಿರುವ ಅವಧಿಯಲ್ಲಿ ಅವರು ನಡೆಸುವ ಚಟುವಟಿಕೆಗಳು ಪ್ರವಾಸೋದ್ಯಮ ಎನಿಸಿಕೊಳ್ಳುತ್ತದೆ. ಇದು ಎಲ್ಲಾ ಉದ್ದೇಶಗಳಿಗಾಗಿರುವ ಸಾಗುವಿಕೆಯನ್ನು ಒಳಗೊಳ್ಳುತ್ತದೆ."[ಸೂಕ್ತ ಉಲ್ಲೇಖನ ಬೇಕು] ಪ್ರವಾಸೋದ್ಯಮದಲ್ಲಿ ಪರಿಣತಿಯನ್ನು ಪಡೆದಿರುವ ವೈಜ್ಞಾನಿಕ ಪರಿಣಿತರ ಅಂತರರಾಷ್ಟ್ರೀಯ ಸಂಸ್ಥೆಯು ಪ್ರವಾಸೋದ್ಯಮದ ಕುರಿತು 1981ರಲ್ಲಿ ವ್ಯಾಖ್ಯಾನವೊಂದನ್ನು ನೀಡಿದೆ. ನಿರ್ದಿಷ್ಟ ಚಟುವಟಿಕೆಗಳನ್ನು ಇಚ್ಛಾನುಸಾರ ಆಯ್ಕೆಮಾಡುವ ಹಾಗೂ ಅವುಗಳನ್ನು ಮನೆಯಿಂದ ಹೊರಗಡೆ ಕಾರ್ಯರೂಪಕ್ಕೆ ತರುವಿಕೆಯ ಸ್ವರೂಪದಲ್ಲಿ ಅದು ಪ್ರವಾಸೋದ್ಯಮವನ್ನು ವ್ಯಾಖ್ಯಾನಿಸಿದೆ.[೫]1994ರಲ್ಲಿ ವಿಶ್ವ ಸಂಸ್ಥೆಯು "ಪ್ರವಾಸೋದ್ಯಮ ಅಂಕಿ-ಅಂಶಗಳ ಕುರಿತಾದ ತನ್ನ ಶಿಫಾರಸುಗಳಲ್ಲಿ ದೇಶೀಯ ಪ್ರವಾಸೋದ್ಯಮ", ಒಳನಾಡಿನ ಪ್ರವಾಸೋದ್ಯಮ ಮತ್ತು ಹೊರನಾಡಿನ ಎಂಬುದಾಗಿ ಪ್ರವಾಸೋದ್ಯಮವನ್ನು ಮೂರು ಸ್ವರೂಪಗಳಾಗಿ ವರ್ಗೀಕರಿಸಿದೆ. ಒಂದು ನಿರ್ದಿಷ್ಟ ದೇಶದ ನಿವಾಸಿಗಳು ಆ ದೇಶದೊಳಗೇ ಪ್ರಯಾಣಿಸುವುದನ್ನು ದೇಶೀಯ ಪ್ರವಾಸೋದ್ಯಮ ಒಳಗೊಂಡಿದ್ದರೆ, ನಿರ್ದಿಷ್ಟ ದೇಶದಲ್ಲಿ ಅನಿವಾಸಿಗಳು ಪ್ರಯಾಣ ಮಾಡುವುದನ್ನು ಒಳನಾಡಿನ ಪ್ರವಾಸೋದ್ಯಮ ಒಳಗೊಂಡಿರುತ್ತದೆ ಹಾಗೂ ನಿವಾಸಿಗಳು ಮತ್ತೊಂದು ದೇಶದಲ್ಲಿ ಪ್ರಯಾಣ ಮಾಡುವುದನ್ನು ಹೊರನಾಡಿನ ಪ್ರವಾಸೋದ್ಯಮ ಒಳಗೊಂಡಿರುತ್ತದೆ.[ಸೂಕ್ತ ಉಲ್ಲೇಖನ ಬೇಕು] ಪ್ರವಾಸೋದ್ಯಮದ ಮೂರು ಮೂಲ ಸ್ವರೂಪಗಳನ್ನು ಸಂಯೋಜಿಸುವ ಅಥವಾ ಒಗ್ಗೂಡಿಸುವ ಮೂಲಕ, ಪ್ರವಾಸೋದ್ಯಮದ ವಿವಿಧ ವರ್ಗಗಳನ್ನೂ ಸಹ UN ಹುಟ್ಟುಹಾಕಿದೆ. ಅವುಗಳೆಂದರೆ, ದೇಶೀಯ ಪ್ರವಾಸೋದ್ಯಮ ಮತ್ತು ಒಳನಾಡಿನ ಪ್ರವಾಸೋದ್ಯಮವನ್ನು ಒಳಗೊಂಡಿರುವ ಆಂತರಿಕ ಪ್ರವಾಸೋದ್ಯಮ; ದೇಶೀಯ ಪ್ರವಾಸೋದ್ಯಮ ಮತ್ತು ಹೊರನಾಡಿನ ಪ್ರವಾಸೋದ್ಯಮವನ್ನು ಒಳಗೊಂಡಿರುವ ರಾಷ್ಟ್ರೀಯ ಪ್ರವಾಸೋದ್ಯಮ; ಮತ್ತು ಒಳನಾಡಿನ ಪ್ರವಾಸೋದ್ಯಮ ಹಾಗೂ ಹೊರನಾಡಿನ ಪ್ರವಾಸೋದ್ಯಮವನ್ನು ಒಳಗೊಂಡಿರುವ ಅಂತರರಾಷ್ಟ್ರೀಯ ಪ್ರವಾಸೋದ್ಯಮ. ಕೊರಿಯಾ ಪ್ರವಾಸೋದ್ಯಮ ಸಂಸ್ಥೆಯಿಂದ ಅಂತರ ನಾಡಿನ ಪ್ರವಾಸೋದ್ಯಮ ಎಂಬ ಪದವು ರಚನೆಯಾಗಿದ್ದು, ಕೊರಿಯಾದಲ್ಲಿ ಈ ಪದವನ್ನು ವ್ಯಾಪಕವಾಗಿ ಬಳಸುತ್ತಾರೆ.[ಸೂಕ್ತ ಉಲ್ಲೇಖನ ಬೇಕು] ರಾಷ್ಟ್ರೀಯ ಪ್ರವಾಸೋದ್ಯಮ ನೀತಿಗಳಿಗೆ ಸಂಬಂಧಿಸಿದ ಕಾರ್ಯನೀತಿಗಳನ್ನು ರೂಪಿಸುವುದು ಮತ್ತು ಅನುಷ್ಠಾನಗೊಳಿಸುವುದನ್ನು ಅಂತರ ನಾಡಿನ ಪ್ರವಾಸೋದ್ಯಮವು ಒಳಗೊಳ್ಳುವುದರ ಮೂಲಕ, ದೇಶಿಯ ಪ್ರವಾಸೋದ್ಯಮಕ್ಕಿಂತ ಭಿನ್ನವಾಗಿದೆ ನಿಲ್ಲುತ್ತದೆ.[ಸೂಕ್ತ ಉಲ್ಲೇಖನ ಬೇಕು][clarification needed]ಅನೇಕ ದೇಶಗಳು ಒಳನಾಡಿನ ಪ್ರವಾಸಿಗರಿಗೆ ಸಂಬಂಧಿಸಿ ತೀವ್ರ ಪೈಪೊಟಿಯನ್ನು ಎದುರಿಸುತ್ತಿರುವುದರಿಂದ[ಸೂಕ್ತ ಉಲ್ಲೇಖನ ಬೇಕು],[ಯಾವಾಗ?] ಒಳನಾಡ ಪ್ರವಾಸೋದ್ಯಮದ ಪ್ರವರ್ತನೆಯಿಂದ ಅಂತರ ನಾಡಿನ ಪ್ರವಾಸೋದ್ಯಮದ ಪ್ರವರ್ತನೆಗೆ[ಯಾವಾಗ?]ಪ್ರವಾಸೋದ್ಯಮ ವಲಯವು ಇತ್ತೀಚೆಗೆ ವರ್ಗಾಯಿಸಲ್ಪಟ್ಟಿದೆ.


ವಿಶ್ವ ಪ್ರವಾಸೋದ್ಯಮ ಅಂಕಿಅಂಶಗಳು ಮತ್ತು ಶ್ರೇಯಾಂಕಗಳು[ಬದಲಾಯಿಸಿ]

ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನವನ್ನು ಆಧರಿಸಿದ ಹೆಚ್ಚು ಭೇಟಿಗೆ ಒಳಗಾಗುವ ದೇಶಗಳು[ಬದಲಾಯಿಸಿ]

2006 ಮತ್ತು 2008ರ ನಡುವಿನ ಅವಧಿಯಲ್ಲಿನ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯ ಆಧಾರದ ಮೇಲೆ, ಈ ಕೆಳಗಿನ ಹತ್ತು ದೇಶಗಳು ಅತಿ ಹೆಚ್ಚು ಬಾರಿ ಭೇಟಿಗೆ ಒಳಗಾಗಿವೆ ಎಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆ ವರದಿಮಾಡಿದೆ. 2006ರ ಅಂಕಿಅಂಶಗಳಿಗೆ ಹೋಲಿಸಿದಾಗ ಉಕ್ರೇನ್‌ ದೇಶವು ರಷ್ಯಾ, ಆಸ್ಟ್ರೀಯಾ ಮತ್ತು ಮೆಕ್ಸಿಕೊವನ್ನು ಮೀರಿಸಿ ಅತ್ಯುತ್ತಮ ಹತ್ತರ ಪಟ್ಟಿಯನ್ನು ಪ್ರವೇಶಿಸಿದೆ [೩] ಮತ್ತು ಅದು 2008ರಲ್ಲಿ ಅದು ಜರ್ಮನಿಯನ್ನೂ ಸಹ ಮೀರಿಸಿದೆ.[೬] 2008ರಲ್ಲಿ ಸ್ಪೇನ್‌ನ್ನು ಹಿಂದಿಕ್ಕುವ ಮೂಲಕ U.S. ಎರಡನೇ ಸ್ಥಾನವನ್ನು ಪಡೆದುಕೊಂಡಿತು. ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ ದೇಶಗಳ ಪಟ್ಟಿಯಲ್ಲಿನ ಬಹುಪಾಲು ದೇಶಗಳು ಯುರೋಪ್‌ ಖಂಡಕ್ಕೆ ಸೇರಿವೆ.


8 [27] Europe 25.0 million 22.2 million 18.9 million
9 [28] Europe 24.9 million 24.4 million 23.5 million
10 [29] North America 22.6 million 21.4 million 21.4 million


ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಸಂದಾಯವಾದ ಹಣ[ಬದಲಾಯಿಸಿ]

2008ರಲ್ಲಿ 922 ದಶಲಕ್ಷಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನವಾಗಿದ್ದು, 2007ಕ್ಕೆ ಹೋಲಿಸಿದಾಗ ಈ ಪ್ರಮಾಣದಲ್ಲಿ 1.9%ರಷ್ಟು ಬೆಳವಣಿಗೆ ಕಂಡುಬಂದಿದೆ. 2008ರಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಸಂದಾಯವಾದ ಹಣದ ಪ್ರಮಾಣವು 944 ಶತಕೋಟಿ US$ನ್ನು (642 ಶತಕೋಟಿ ಯುರೊ) ಮುಟ್ಟಿದ್ದು, ಸಂಬಂಧಪಟ್ಟ ವಾಸ್ತವಿಕ ಆದಾಯದಲ್ಲಿ 1.8%ರಷ್ಟು ಏರಿಕೆ ಕಂಡಂತಾಗಿದೆ.{3/} ಅಂತರರಾಷ್ಟ್ರೀಯ ಪ್ರಯಾಣಿಕ ಸಾರಿಗೆಯಿಂದ ಸಂದಾಯವಾದ ಹಣದ ರಫ್ತು ಮೌಲ್ಯವನ್ನು ಗಣನೆಗೆ ತೆಗೆದುಕೊಂಡಾಗ, 2008ರಲ್ಲಿ ಸಂದಾಯವಾದ ಒಟ್ಟು ಹಣವು ದಾಖಲೆಯ ಪ್ರಮಾಣವೆನ್ನಬಹುದಾದ 1.1 ಲಕ್ಷ ಕೋಟಿ US$ನ್ನು ಅಥವಾ ದಿನಕ್ಕೆ 3 ಶತಕೋಟಿ US$ಗಿಂತಲೂ ಹೆಚ್ಚಿನ ಮಟ್ಟವನ್ನು ಮುಟ್ಟಿದೆ.[೨]


ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ಈ ಕೆಳಗಿನ ಹತ್ತು ದೇಶಗಳನ್ನು 2008ರಲ್ಲಿ ಪ್ರವಾಸೋದ್ಯಮದಿಂದ ಅತಿ ಹೆಚ್ಚು ಆದಾಯ ಗಳಿಸಿದ ಅತ್ಯುತ್ತಮ ಹತ್ತು ದೇಶಗಳಾಗಿ ಪರಿಗಣಿಸಿದೆ.ಇವುಗಳಲ್ಲಿ ಹೆಚ್ಚಿನವು ಯುರೋಪಿಯನ್‌ ಖಂಡಕ್ಕೆ ಸೇರಿದವು ಎನ್ನುವುದನ್ನು ಗಮನಿಸಬೇಕು. ಆದರೆ ಸಂಯುಕ್ತ ಸಂಸ್ಥಾನವು ಅತ್ಯುತ್ತಮ ಆದಾಯ ಗಳಿಸುತ್ತಲೇ ಇರುವ ದೇಶವಾಗಿ ಮುಂದುವರಿದಿದೆ.


10 [33] Europe $22.0 billion $18.5 billion $16.9 billion
9 [34] Europe $21.8 billion $18.9 billion $16.6 billion


ಅಂತರರಾಷ್ಟ್ರೀಯ ಪ್ರವಾಸೋದ್ಯಮ ವೆಚ್ಚಗಳು[ಬದಲಾಯಿಸಿ]

ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ಈ ಕೆಳಗಿನ ದೇಶಗಳನ್ನು, 2008ರಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮದಲ್ಲಿ ಅತಿ ಹೆಚ್ಚು ವ್ಯಯಿಸಿದ ಹತ್ತು ದೇಶಗಳೆಂಬಂತೆ ಬಿಂಬಿಸಿದೆ. ಐದು ವರ್ಷಗಳ ಒಂದು ಶ್ರೇಣಿಯಲ್ಲಿ, ಜರ್ಮನಿ ಪ್ರವಾಸಿಗರು ಅತಿ ಹೆಚ್ಚು ವ್ಯಯಿಸುವ ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.[೬][೮]


ದೇಶ UNWTO
ಪ್ರಾದೇಶಿಕ
ಮಾರುಕಟ್ಟೆ
ಅಂತರರಾಷ್ಟ್ರೀಯ
ಪ್ರವಾಸೋದ್ಯಮ
ವೆಚ್ಚಗಳು
(2008)[೬]
ಅಂತರರಾಷ್ಟ್ರೀಯ
ಪ್ರವಾಸೋದ್ಯಮ
ವೆಚ್ಚಗಳು
(2007)[೬]
ಅಂತರರಾಷ್ಟ್ರೀಯ
ಪ್ರವಾಸೋದ್ಯಮ
ವೆಚ್ಚಗಳು
(2006)[೮]
1  Germany ಯುರೋಪ್‌ $91.0 ಶತಕೋಟಿ $83.1 ಶತಕೋಟಿ $73.9 ಶತಕೋಟಿ
2  United States ಉತ್ತರ ಅಮೆರಿಕ $79.7 ಶತಕೋಟಿ $76.4 ಶತಕೋಟಿ $72.1 ಶತಕೋಟಿ
3  United Kingdom ಯುರೋಪ್‌‌ $68.5 ಶತಕೋಟಿ $71.4 ಶತಕೋಟಿ $63.1 ಶತಕೋಟಿ
4  France ಯುರೋಪ್‌ $43.1 ಶತಕೋಟಿ $36.7 ಶತಕೋಟಿ $31.2 ಶತಕೋಟಿ
5  China ಏಷಿಯಾ $36.2 ಶತಕೋಟಿ $29.8 ಶತಕೋಟಿ $24.3 ಶತಕೋಟಿ
6  Italy ಯುರೋಪ್‌‌ $30.8 ಶತಕೋಟಿ $27.3 ಶತಕೋಟಿ $23.1 ಶತಕೋಟಿ
7  Japan ಏಷಿಯಾ $27.9 ಶತಕೋಟಿ $26.5 ಶತಕೋಟಿ $26.9 ಶತಕೋಟಿ
8  Canada ಉತ್ತರ ಅಮೆರಿಕ $26.9 ಶತಕೋಟಿ $24.7 ಶತಕೋಟಿ $20.5 ಶತಕೋಟಿ
9  Russia ಯುರೋಪ್‌ $24.9 ಶತಕೋಟಿ $22.3 ಶತಕೋಟಿ $18.2 ಶತಕೋಟಿ
10  Netherlands ಯುರೋಪ್‌ $21.7 ಶತಕೋಟಿ $19.1 ಶತಕೋಟಿ ಲಭ್ಯವಿಲ್ಲ


ಹೆಚ್ಚು ಭೇಟಿ ನೀಡಲ್ಪಟ್ಟ ನಗರಗಳು[ಬದಲಾಯಿಸಿ]

ಆಯ್ದ ವರ್ಷಗಳ ಆಧಾರದ ಮೇಲಿನ ಅಂತರರಾಷ್ಟ್ರೀಯ ಪ್ರವಾಸಿಗರ ಅಂದಾಜು ಸಂಖ್ಯೆಯನ್ನು ಪರಿಗಣಿಸಿ ಸಿದ್ಧಗೊಳಿಸಲಾದ ಅತಿ ಹೆಚ್ಚು ಭೇಟಿ ನೀಡಲ್ಪಟ್ಟ ಮೊದಲ 20 ನಗರಗಳು
ನಗರ ದೇಶ ಅಂತರರಾಷ್ಟ್ರೀಯ
ಪ್ರವಾಸಿಗರು
(ದಶಲಕ್ಷಗಳು)
ವರ್ಷ/ಟಿಪ್ಪಣಿಗಳು
ಪ್ಯಾರಿಸ್‌  France 15.6 2007 (ಎಕ್ಸ್‌ಟ್ರಾ-ಮುರೋಸ್‌ ಪ್ರವಾಸಿಗರನ್ನು ಹೊರತುಪಡಿಸಿ)[೯]
ಲಂಡನ್‌  United Kingdom 14.8 2008[೧೦]
ಬ್ಯಾಂಗ್‌ಕಾಕ್‌  Thailand 10.84 2007 (ಬಾಹ್ಯ ಅಧ್ಯಯನ ಅಂದಾಜು)[೧೧]
ಸಿಂಗಪೂರ್  ಸಿಂಗಾಪುರ 10.3 2007[೧೨]
ನ್ಯೂಯಾರ್ಕ್ ನಗರ  United States 9.5 2008[೧೩]
ಹಾಂಗ್ ಕಾಂಗ್  China 7.94 2008 (ಚೀನಾದ ಪ್ರಧಾನ ಭೂಭಾಗವನ್ನು ಹೊರತುಪಡಿಸಿ)[೧೪]
ದುಬೈ  United Arab Emirates 6.9 2007[೧೫]
ಶಾಂಘಾಯ್‌  China 6.66 2007[೧೬]
ಇಸ್ತಾನ್‌ಬುಲ್‌  Turkey 6.45 2007 (ಬಾಹ್ಯ ಅಧ್ಯಯನ ಅಂದಾಜು)[೧೧]
ರೋಮ್‌  Italy 6.12 2007 (ಬಾಹ್ಯ ಅಧ್ಯಯನ ಅಂದಾಜು)[೧೧]
ಬಾರ್ಸಿಲೋನಾ  Spain 5.04 2007 (ಬಾಹ್ಯ ಅಧ್ಯಯನ ಅಂದಾಜು)[೧೧]
ಸಿಯೊಲ್‌  South Korea 4.99 2007 (ಬಾಹ್ಯ ಅಧ್ಯಯನ ಅಂದಾಜು)[೧೧]
ಮ್ಯಾಡ್ರಿಡ್‌  Spain 4.64 2008[೧೭]
ಮೆಕ್ಕಾ  Saudi Arabia 4.5 2007[೧೮]
ಕೌಲ ಲಂಪುರ್‌  Malaysia 4.4 2007 (ಬಾಹ್ಯ ಅಧ್ಯಯನ ಅಂದಾಜು)[೧೧]
ಬೀಜಿಂಗ್‌  China 4.4 2007[೧೯]
ಮಾಸ್ಕೊ  Russia 4.1 2008[೨೦]
ಪ್ರಾಗ್ವೆ  Czech Republic 4.1 2008[೨೧]
ಆ‍ಯ್‌ಮ್‌ಸ್ಟರ್‌ಡ್ಯಾಮ್  Netherlands 3.66 2008[೨೨]
ವಿಯೆನ್ನಾ  Austria 3.53 2008[೨೩]


ಇತಿಹಾಸ[ಬದಲಾಯಿಸಿ]

ಶ್ರೀಮಂತ ಜನರು ಹೆಚ್ಚಾಗಿ ಮಹಾನ್ ಕಟ್ಟಡಗಳು ಹಾಗೂ ಕಲಾಕೃತಿಗಳನ್ನು ನೋಡಲು, ಹೊಸ ಭಾಷೆಯನ್ನು ಕಲಿಯಲು, ಹೊಸ ಸಂಸ್ಕೃತಿಗಳ ಅನುಭವ ಹೊಂದಲು ಮತ್ತು ವಿವಿಧ ಅಡುಗೆ ಪದ್ದತಿಗಳ ರುಚಿಯನ್ನು ಸವಿಯಲು ಜಗತ್ತಿನ ದೂರದ ಪ್ರದೇಶಗಳಿಗೆ ಪ್ರಯಾಣಿಸುತ್ತಾರೆ. ತೀರಾ ಹಿಂದೆ ರೋಮನ್‌ ಗಣರಾಜ್ಯದ ಅವಧಿಯಲ್ಲಿ ಬಾಯಿಯೇನಂತಹ ಸ್ಥಳಗಳು ಶ್ರೀಮಂತರ ಕರಾವಳಿ ವಿಹಾರಧಾಮಗಳಾಗಿದ್ದವು. ಪ್ರವಾಸೋದ್ಯಮ ಎಂಬ ಪದವನ್ನು 1811ರಿಂದಲೂ ಮತ್ತು ಪ್ರವಾಸಿಗ ಎಂಬ ಪದವನ್ನು 1840ರಿಂದಲೂ ಬಳಸಲಾಗುತ್ತಿದೆ.[೨೪] 1936ರಲ್ಲಿ ರಾಷ್ಟ್ರಗಳ ಒಕ್ಕೂಟವು ವಿದೇಶಿ ಪ್ರವಾಸಿಗ ನನ್ನು "ಕನಿಷ್ಠ ಇಪ್ಪತ್ನಾಲ್ಕು ಗಂಟೆಗಳವರೆಗೆ ವಿದೇಶಕ್ಕೆ ಪ್ರಯಾಣಿಸುವವ" ಎಂದು ವ್ಯಾಖ್ಯಾನಿಸಿದೆ. ಇದರ ನಂತರ ಬಂದ ವಿಶ್ವ ಸಂಸ್ಥೆಯು, ಆರು ತಿಂಗಳವರೆಗಿನ ಗರಿಷ್ಠ ತಂಗುವಿಕೆ ಎಂಬ ಪದಗುಚ್ಛವನ್ನು ಸೇರಿಸುವ ಮೂಲಕ 1945ರಲ್ಲಿ ಆ ವ್ಯಾಖ್ಯಾನವನ್ನು ತಿದ್ದುಪಡಿ ಮಾಡಿತು.[೨೫]


ವಿರಾಮದ ಪ್ರಯಾಣ[ಬದಲಾಯಿಸಿ]

ಹೆಚ್ಚಾಗುತ್ತಲೇ ಇದ್ದ ಕೈಗಾರಿಕಾ ಜನಸಂಖ್ಯೆಯ ನಡುವೆ ವಿರಾಮದ ಸಮಯವನ್ನು ಪ್ರವರ್ತಿಸುವುದಕ್ಕೆ ಸಂಬಂಧಿಸಿದ ಮೊದಲ ಐರೋಪ್ಯ ದೇಶವಾದ ಯುನೈಟೆಡ್‌ ಕಿಂಗ್‌ಡಂ–ನಲ್ಲಿನ ಕೈಗಾರಿಕಾ ಕ್ರಾಂತಿಯೊಂದಿಗೆ ವಿರಾಮದ ಪ್ರಯಾಣವು ಹುಟ್ಟಿಕೊಂಡಿತು.[ಸೂಕ್ತ ಉಲ್ಲೇಖನ ಬೇಕು]

ಪ್ರಾರಂಭದಲ್ಲಿ ಈ ರೀತಿಯ ಪ್ರಯಾಣವು ಉತ್ಪಾದನಾ ಯಂತ್ರಗಳ ಮಾಲೀಕರು, ಆರ್ಥಿಕ ಮಿತಜನತಂತ್ರ, ಕಾರ್ಖಾನೆ ಮಾಲೀಕರು ಮತ್ತು ವ್ಯಾಪಾರಿಗಳಿಗೆ ಅನ್ವಯಿಸುತಿತ್ತು. ಈ ವರ್ಗಗಳು ಹೊಸ ಮಧ್ಯಮ ವರ್ಗವನ್ನು ಒಳಗೊಂಡಿದ್ದವು.1758ರಲ್ಲಿ ಕಾಕ್ಸ್‌ ಆಂಡ್ ಕಿಂಗ್ಸ್‌ ಎಂಬ ಮೊದಲ ಅಧಿಕೃತ ಪ್ರಯಾಣ ಕಂಪನಿಯು ರೂಪುಗೊಂಡಿತು.[೨೬]


ಈ ಹೊಸ ಉದ್ಯಮದ ಬ್ರಿಟಿಷ್ ಮೂಲವು ಅನೇಕ ಜಾಗದ ಹೆಸರುಗಳಲ್ಲಿ ಪ್ರತಿಬಿಂಬಿತವಾಗಿದೆ. ಫ್ರಾನ್ಸ್‌ಫ್ರೆಂಚ್ ರಿವಿಯೇರಾ ಎಂಬ ಕಡಲತೀರದ ಮೇಲೆ ಸ್ಥಿತವಾಗಿರುವ ಮೊದಲ ಮತ್ತು ಸುಸ್ಥಾಪಿತ ರಜಾದಿನ ವಿಹಾರಧಾಮಗಳಲ್ಲಿ ಒಂದಾದ ನೈಸ್‌ನಲ್ಲಿ, ಸಮುದ್ರಾಭಿಮುಖದಾದ್ಯಂತದ ಸುದೀರ್ಘವಾದ ಮಟ್ಟಸ ನೆಲವನ್ನು ಇಂದಿಗೂ ಸಹ ಪ್ರಾಮನಾಡ್‌ ಡೆಸ್ ಎಂಗ್ಲೈಸ್‌ ಎಂದೇ ಕರೆಯಲಾಗುತ್ತದೆ. ಯುರೋಪ್‌ ಖಂಡದಲ್ಲಿರುವ ಇನ್ನೂ ಅನೇಕ ಐತಿಹಾಸಿಕ ವಿಹಾರಧಾಮಗಳಲ್ಲಿ, ಹಳೆಯ, ಸುಸ್ಥಾಪಿತ ಅರಮನೆ ಹೊಟೇಲುಗಳು ಹೊಟೇಲ್ ಬ್ರಿಸ್ಟಲ್ , ಹೊಟೇಲ್ ಕಾರ್ಲ್‌ಟನ್‌ ಅಥವಾ ಹೊಟೇಲ್ ಮೆಜೆಸ್ಟಿಕ್‌ – ಎಂಬ ಹೆಸರುಗಳನ್ನು ಹೊಂದುವುದರ ಮೂಲಕ, ಇಂಗ್ಲಿಷ್‌ ಗ್ರಾಹಕರ ಪ್ರಾಬಲ್ಯವನ್ನು ಪ್ರತಿಬಿಂಬಿಸುತ್ತವೆ.ವಿರಾಮದ ಉದ್ದೇಶವನ್ನು ಹೊಂದಿರುವ ಅನೇಕ ಪ್ರವಾಸಿಗರು ಬೇಸಿಗೆ ಮತ್ತು ಚಳಿಗಾಲ ಎರಡೂ ಅವಧಿಯಲ್ಲೂ ಉಷ್ಣವಲಯಕ್ಕೆ ಪ್ರವಾಸ ಕೈಗೊಳ್ಳುತ್ತಾರೆ. ಈ ರೀತಿ ಪದೇ ಪದೇ ಭೇಟಿಗೆ ಒಳಗಾಗುವ ಸ್ಥಳಗಳೆಂದರೆ: ಕ್ಯೂಬಾ, ಡಾಮಿನಿಕನ್ ಗಣರಾಜ್ಯ, ಥೈಲೆಂಡ್‌, ಆಸ್ಟ್ರೇಲಿಯಾದಲ್ಲಿರುವ ಉತ್ತರ ಕ್ವಿನ್ಸ್‌ಲೆಂಡ್‌ ಮತ್ತು ಸಂಯುಕ್ತ ಸಂಸ್ಥಾನ‌ಗಳಲ್ಲಿರುವ ಫ್ಲೋರಿಡಾ.


ಚಳಿಗಾಲದ ಪ್ರವಾಸೋದ್ಯಮ[ಬದಲಾಯಿಸಿ]

ವಿವಿಧ ಯುರೋಪಿಯನ್ ದೇಶಗಳಲ್ಲಿ (ಉದಾ:ಆಸ್ಟ್ರೀಯಾ, ಬಲ್ಗೇರಿಯಾ, ಝೆಕ್‌ ಗಣರಾಜ್ಯ‌, ಫ್ರಾನ್ಸ್‌, ಜರ್ಮನಿ, ಐಸ್‌ಲೆಂಡ್, ಇಟಲಿ, ನಾರ್ವೆ, ಪೋಲೆಂಡ್‌, ಸ್ಲೋವಾಕಿಯಾ, ಸ್ಪೇನ್‌, ಸ್ವಿಜರ್ಲೆಂಡ್‌) ಹಾಗೂ ಕೆನಡಾ, ಸಂಯುಕ್ತ ಸಂಸ್ಥಾನಗಳು‌, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಜಪಾನ್‌, ಕೊರಿಯಾ, ಚಿಲಿ ಮತ್ತು ಅರ್ಜೆಂಟೈನಾದಂತಹ ದೇಶಗಳಲ್ಲಿ ಪ್ರಮುಖ ಸ್ಕೀ ವಿಹಾರಧಾಮ (ಹಿಮಜಾರಾಟದ ತಾಣ)ಗಳು ನೆಲೆಗೊಂಡಿವೆ.


ಸಾಮೂಹಿಕ ಪ್ರವಾಸೋದ್ಯಮ[ಬದಲಾಯಿಸಿ]

ತಂತ್ರಜ್ಞಾನದಲ್ಲಿ ಸುಧಾರಣೆಗಳು ಕಂಡುಬಂದಾಗ ಮಾತ್ರವೇ ಸಾಮೂಹಿಕ ಪ್ರವಾಸೋದ್ಯಮವು ಅಭಿವೃದ್ಧಿಯಾಗಲು ಸಾಧ್ಯ. ಇದರಿಂದಾಗಿ ವಿರಾಮಕ್ಕೆ ಅರ್ಹವಾದ ಸ್ಥಳಗಳಿಗೆ ಅತ್ಯಲ್ಪ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರ ಸಾಗಣೆ ಅಥವಾ ಪ್ರವಾಸ ಕೈಗೂಡುತ್ತದೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ತಮ್ಮ ವಿರಾಮದ ಸಮಯವನ್ನು ಆನಂದದಿಂದ ಕಳೆಯುವುದು ಸಾಧ್ಯವಾಗುತ್ತದೆ.


ಸಂಯುಕ್ತ ಸಂಸ್ಥಾನಗಳಲ್ಲಿ ಯುರೋಪಿಯನ್ ಶೈಲಿಯಲ್ಲಿನ ಮೊದಲ ಸಾಗರತೀರದ ವಿಹಾರಧಾಮಗಳು ನ್ಯೂಜರ್ಸಿಯಲ್ಲಿರುವ ಅಟ್ಲಾಂಟಿಕ್ ನಗರ ಮತ್ತು ನ್ಯೂಯಾರ್ಕ್‌ನಲ್ಲಿರುವ ಲಾಂಗ್ ಐಲ್ಯಾಂಡ್‌ನಲ್ಲಿವೆ.


ಯುರೋಪ್‌ ಖಂಡದಲ್ಲಿನ ಆರಂಭಿಕ ವಿಹಾರಧಾಮಗಳಲ್ಲಿ ಇವುಗಳು ಸೇರಿದ್ದವು ಬ್ರುಸೆಲ್ಸ್‌ ಜನರಿಂದ ಜನಪ್ರಿಯಗೊಳಿಸಲ್ಪಟ್ಟ ಒಸ್ಟೆಂಡ್‌; ಪ್ಯಾರಿಸ್‌ ನಿವಾಸಿಗಳಿಗಾಗಿ ಮೀಸಲಾಗಿದ್ದ ಬೌಲೋನ್‌-ಸುರ್‌-ಮೆರ್‌ (ಪಾಸ್‌-ಡೆ-ಕ್ಯಾಲೈಸ್‌) ಮತ್ತು ಡೆಯುವಿಲ್ಲೆ (ಕ್ಯಾಲ್ವಾಡೋಸ್‌); ಮತ್ತು 1797ರಲ್ಲಿ ಬಾಲ್ಟಿಕ್‌ ಸಮುದ್ರದ ತೀರದಲ್ಲಿನ ಮೊಟ್ಟಮೊದಲ ಕಡಲತೀರದ ವಿಹಾರಧಾಮವಾಗಿ ನಿರ್ಮಿಸಲ್ಪಟ್ಟ ಹೈಲಿಜೆಂಡಮ್‌.


ವಿಶೇಷ ಲಕ್ಷಣದ ಪ್ರವಾಸೋದ್ಯಮಗಳು[ಬದಲಾಯಿಸಿ]

For a more comprehensive list, see List of adjectival tourisms.

ಹಲವು ವರ್ಷಗಳ ನಂತರ ಹೊರಹೊಮ್ಮಿರುವ ಪ್ರವಾಸೋದ್ಯಮದ ಅಸಂಖ್ಯಾತ ತಾಣ ಅಥವಾ ವಿಶಿಷ್ಟ ಪ್ರಯಾಣದ ಸ್ವರೂಪಗಳನ್ನು ವಿಶೇಷ ಲಕ್ಷಣದ ಪ್ರವಾಸೋದ್ಯಮ ಎನ್ನಲಾಗುತ್ತದೆ. ಇವುಗಳಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ಗುರಿ ಇರುತ್ತದೆ.ಈ ಉದ್ದೇಶಗಳಲ್ಲಿ ಹಲವು ಪ್ರವಾಸೋದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳ ಸಾಮಾನ್ಯವಾದ ಬಳಕೆಯಿಂದ ಅಸ್ತಿತ್ವಕ್ಕೆ ಬಂದಿವೆ.[ಸೂಕ್ತ ಉಲ್ಲೇಖನ ಬೇಕು] ಇತರ ಅಸ್ತಿತ್ವಕ್ಕೆ ಬರುತ್ತಿರುವ ವಿಷಯಗಳು ಜನಪ್ರಿಯ ಬಳಕೆಯನ್ನು ಗಳಿಸಿರಬಹುದು ಅಥವಾ ಇಲ್ಲದೆ ಇರಬಹುದು. ಹೆಚ್ಚು ಸಾಮಾನ್ಯ ಪ್ರವಾಸಿ ತಾಣ ಪ್ರವಾಸೋದ್ಯಮ ಮಾರುಕಟ್ಟೆ ಉದಾಹರಣೆಗಳು ಇವುಗಳನ್ನು ಒಳಗೊಂಡಿದೆ:

 1. ಕೃಷಿ ಪ್ರವಾಸೋದ್ಯಮ
 2. ಅಡುಗೆ ಪ್ರವಾಸೋದ್ಯಮ
 3. ಸಾಂಸ್ಕೃತಿಕ ಪ್ರವಾಸೋದ್ಯಮ
 4. ಪರಿಸರ ಪ್ರವಾಸೋದ್ಯಮ
 5. ಪರಂಪರೆಯ ಪ್ರವಾಸೋದ್ಯಮ
 6. LGBT ಪ್ರವಾಸೋದ್ಯಮ
 7. ವೈದ್ಯಕೀಯ ಪ್ರವಾಸೋದ್ಯಮ
 8. ನೌಕಾಯಾನ ಪ್ರವಾಸೋದ್ಯಮ
 9. ಧಾರ್ಮಿಕ ಪ್ರವಾಸೋದ್ಯಮ
 10. ಬಾಹ್ಯಕಾಶ ಪ್ರವಾಸೋದ್ಯಮ
 11. ಯುದ್ಧ ಪ್ರವಾಸೋದ್ಯಮ
 12. ವನ್ಯಜೀವಿ ಪ್ರವಾಸೋದ್ಯಮ


ಇತ್ತೀಚಿನ ಅಭಿವೃದ್ಧಿಗಳು[ಬದಲಾಯಿಸಿ]

ಕಳೆದ ಕೆಲವು ದಶಕಗಳಲ್ಲಿ ಪ್ರವಾಸೋದ್ಯಮದಲ್ಲಿ ಏರುಗತಿಯ ವಿದ್ಯಮಾನವು ಕಾಣುತ್ತಿದೆ. ಅದರಲ್ಲೂ ವಿಶೇಷವಾಗಿ ಯುರೋಪ್‌‌ನಲ್ಲಿ ಅಲ್ಪಾವಧಿಯ ವಿರಾಮಕ್ಕೆ ಅಂತರರಾಷ್ಟ್ರೀಯ ಪ್ರಯಾಣದಲ್ಲಿ ತೀವ್ರ ಏರಿಕೆಯಾಗಿದೆ.[ಸೂಕ್ತ ಉಲ್ಲೇಖನ ಬೇಕು] ಪ್ರವಾಸಿಗರು ಮೇಲ್ಮಟ್ಟದ ಬಳಕೆಗೆ ಯೋಗ್ಯ ಆದಾಯ, ಅಧಿಕ ವಿರಾಮ ಸಮಯವನ್ನು ಹೊಂದಿರುವುದರೊಂದಿಗೆ ಶಿಕ್ಷಿತರಾಗಿದ್ದು, ಅವರು ಸುಸಂಸ್ಕೃತ ಅಭಿರುಚಿಯನ್ನು ಹೊಂದಿರುತ್ತಾರೆ.[ಸೂಕ್ತ ಉಲ್ಲೇಖನ ಬೇಕು] ಈಗ ಸಾಮೂಹಿಕ ಮಾರುಕಟ್ಟೆಯನ್ನು ಪ್ರತ್ಯೇಕಗೊಳಿಸುವುದರ ಪರಿಣಾಮವಾಗಿ ಕಲತೀರದ ವಿಹಾರಗಳ ಉತ್ತಮ ಗುಣಮಟ್ಟದ ವಸ್ತುಗಳಿಗೆ ಬೇಡಿಕೆ ಇದೆ. ಕ್ಲಬ್‌ 18-30, ಕ್ವಿಟರ್‌ ವಿಹಾರಧಾಮಗಳು, ಕೌಟುಂಬಿಕ ರಜಾದಿನ ಅಥವಾ ಚಿಕ್ಕ ಮಾರುಕಟ್ಟೆ-ಉದ್ದೇಶಿತ ಗಮ್ಯಸ್ಥಾನದ ಹೋಟೆಲ್‌ಗಳಂತಹ ಹೆಚ್ಚು ವಿಶಿಷ್ಟವಾದ ಪ್ರಕಾರಗಳನ್ನು ಜನರು ಬಯಸುತ್ತಾರೆ.


ಜಂಬೊ ಜೆಟ್‌ಗಳು, ಕಡಿಮೆ ವೆಚ್ಚದ ವಿಮಾನಗಳು ಮತ್ತು ಹೆಚ್ಚು ಸುಲಭವಾಗಿ ಪ್ರವೇಸಿಸಬಹುದಾದ ವಿಮಾನ ನಿಲ್ದಾಣಗಳಂತಹ ತಂತ್ರಜ್ಞಾನ ಮತ್ತು ಸಾರಿಗೆ ಸೌಕರ್ಯಗಳಲ್ಲಿನ ಅಭಿವೃದ್ಧಿಯು ಪ್ರವಾಸೋದ್ಯಮದ ಹಲವು ಪ್ರಕಾರಗಳ ವೆಚ್ಚಗಳನ್ನು ಕಡಿಮೆಗೊಳಿಸಿವೆ. ಯಾವುದೇ ಅವಧಿಯಲ್ಲಿ 500,000ದಷ್ಟು ಜನರು ವಿಮಾನದಲ್ಲಿರುತ್ತಾರೆ ಎನ್ನುವುದನ್ನು WHO ಅಂದಾಜಿಸಿದೆ.[೨೭] ದೀರ್ಘಕಾಲ ಪ್ರವಾಸ ಮಾಡಿದ ಜನರ ನಿವೃತ್ತಿ ವಯಸ್ಸಿನ ಜೀವನಶೈಲಿಯಲ್ಲಿ ಬದಾವಣೆಗಳಾಗಿವೆ. ಇದಕ್ಕಾಗಿ ಪ್ರವಾಸೋದ್ಯಮ ಉತ್ಪನ್ನಗಳ ಅಂತರ್ಜಾಲ ಮಾರಾಟಗಳನ್ನು ಸುಲಭಗೊಳಿಸಲಾಗಿದೆ. ಕೆಲವು ಪ್ರವಾಸಿ ಸ್ಥಳಗಳಲ್ಲಿ ಗ್ರಾಹಕರ ವಿನಂತಿಯ ಮೇರೆಗೆ ದರ್ಜಿ ತಯಾರಿಸಿದ ಪ್ಯಾಕೇಜ್‌ನಲ್ಲಿ ಉಲ್ಲೇಖಿಸಿದ ಒಟ್ಟು ಬೆಲೆಯಲ್ಲಿ ಸುದೃಡವಾಗಿ ಕಟ್ಟಿದ ಪ್ಯಾಕಿಂಗ್ ಪದಾರ್ಥ ನೀಡಲು ಪ್ರಾರಂಭಿಸಿದವು.


ಸಪ್ಟೆಂಬರ್ 11 ದಾಳಿ ಹಾಗೂ ಬಾಲಿ ಮತ್ತು ಹಲವು ಯುರೋಪಿಯನ್‌ ನಗರಗಳಂತಹ ಪ್ರವಾಸಿಗರ ಗಮ್ಯಸ್ಥಾನಗಳ ಮೇಲೆ ಉಗ್ರಗಾಮಿಗಳ ಬೆದರಿಕೆಯಂತಹವುಗಳು ಪ್ರವಾಸೋದ್ಯಮವನ್ನು ಕುಂಠಿತಗೊಳಿಸಿದೆ. 26 ಡಿಸೆಂಬರ್‌ 2004ರಲ್ಲಿ 2004 ಹಿಂದೂ ಮಹಾ ಸಾಗರ ಭೂಕಂಪದಿಂದಾದ ಸುನಾಮಿಯು ಮಾಲ್ಡೀವ್ಸ್‌ ಸೇರಿದಂತೆ ಹಿಂದೂ ಮಹಾ ಸಾಗರ ಸಾಗರದಲ್ಲಿ ದಡದಲ್ಲಿರುವ ಏಷ್ಯಾ ರಾಷ್ಟ್ರಗಳಿಗೆ ಅಪ್ಪಳಿಸಿತು. ಇದರಲ್ಲಿ ಸಾವಿರಾರು ಜನ ಜೀವ ಕಳೆದುಕೊಂಡರು ಹಾಗೂ ಹಲವಾರು ಪ್ರವಾಸಿಗರು ಸತ್ತರು. ಆ ಸ್ಥಳದ ಭಾರಿ ಪ್ರಮಾಣದ ಸ್ವಚ್ಛಗೊಳಿಸುವಿಕೆ ಕಾರ್ಯಚರಣೆಯು ಅಲ್ಲಿನ ಪ್ರವಾಸೋದ್ಯಮವನ್ನು ಸ್ಥಗಿತಗೊಳಿಸಿತು ಅಥವಾ ಅದಕ್ಕೆ ತಡೆಯುಂಟುಮಾಡಿತು.


ಪ್ರವಾಸೋದ್ಯಮ ಮತ್ತು ಪ್ರಯಾಣ ಎಂಬ ಪದಗಳನ್ನು ಕೆಲವೊಮ್ಮೆ ಅದಲು ಬದಲಾಗಿ ಬಳಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಯಾಣವು ಪ್ರವಾಸೋದ್ಯಮಕ್ಕೆ ಸಮಾನವಾದ ವ್ಯಾಖ್ಯಾನವನ್ನು ಹೊಂದಿದೆ. ಆದರೆ ಪ್ರಯಾಣವು ಹೆಚ್ಚು ಉದ್ದೇಶಪೂರ್ವಕವಾದ ಪ್ರಯಾಣದ ಅರ್ಥವನ್ನು ನೀಡುತ್ತದೆ. ಪ್ರವಾಸೋದ್ಯಮ ಮತ್ತು ಪ್ರವಾಸಿಗ ಎಂಬ ಪದಗಳನ್ನು ಕೆಲವೊಮ್ಮೆ ಪ್ರವಾಸಿಗರು ಭೇಟಿನೀಡಿದ ಸಂಸ್ಕೃತಿಗಳು ಅಥವಾ ಸ್ಥಳಗಳಲ್ಲಿ ಗಾಢವಾದ ಆಸಕ್ತಿಯನ್ನು ವ್ಯಕ್ತಪಡಿಸಲು ಹೀನಾರ್ಥವಾಗಿ ಬಳಸುತ್ತಾರೆ.


ನಿರಂತರ ಪ್ರವಾಸೋದ್ಯಮ[ಬದಲಾಯಿಸಿ]

"ನಿರಂತರ ಪ್ರವಾಸೋದ್ಯಮವು ಸಾಂಸ್ಕೃತಿಕ ಐಕ್ಯತೆ, ಮೂಲ ಪ್ರಾಕೃತಿಕ ಪ್ರಕ್ರಿಯೆಗಳು, ಜೈವಿಕ ವೈವಿಧ್ಯತೆ ಮತ್ತು ಜೈವಿಕ ಬೆಂಬಲ ವ್ಯವಸ್ಥೆಗಳನ್ನು ನಿರ್ವಹಿಸುವಾಗ ಆರ್ಥಿಕ, ಸಾಮಾಜಿಕ ಮತ್ತು ಕಲಾತ್ಮಕ ಅಗತ್ಯಗಳನ್ನು ಭರಿಸಬಹುದಾದ ಹಾದಿಯಲ್ಲಿ ಎಲ್ಲಾ ಸಂಪನ್ಮೂಲಗಳನ್ನು ನಿರ್ವಹಿಸುವುದನ್ನು ಮುಂದುವರಿಸುವಂತೆ ಯೋಜಿಸುತ್ತದೆ." (ವಿಶ್ವ ಪ್ರವಾಸೋದ್ಯಮ ಸಂಸ್ಥೆ)


ನಿರಂತರ ಅಭಿವೃದ್ಧಿಯು "ಭವಿಷ್ಯದ ಪೀಳಿಗೆ ಅಗತ್ಯಕತೆಗಳನ್ನು ಭರಿಸಲು ಅವರ ಸಾಮರ್ಥ್ಯದೊಂದಿಗೆ ರಾಜಿ ಮಾಡಿಕೊಳ್ಳದೆ ಪ್ರಸಕ್ತ ಅಗತ್ಯಕತೆಗಳನ್ನು ಭರಿಸುವುದನ್ನು" ಸೂಚಿಸುತ್ತದೆ (ವಿಶ್ವ ಪರಿಸರ ಮತ್ತು ಅಭಿವೃದ್ಧಿ ಮಂಡಳಿ, 1987)[೨೮]


ಪರಿಸರ-ಪ್ರವಾಸೋದ್ಯಮ[ಬದಲಾಯಿಸಿ]

Main article: Eco-tourism


ವೈದ್ಯಕೀಯ ಪ್ರವಾಸೋದ್ಯಮ[ಬದಲಾಯಿಸಿ]

Main article: Medical tourism

ವಿವಿಧ ದೇಶಗಳ ನಡುವೆ, ವಿಶೇಷವಾಗಿ ಆಗ್ನೇಯ ಏಷಿಯಾ, ಭಾರತ, ಪೂರ್ವ ಯುರೋಪ್‌‌ನಲ್ಲಿ ನಿರ್ದಿಷ್ಟ ವೈದ್ಯಕೀಯ ಕಾರ್ಯವಿಧಾನಕ್ಕೆ ಗಮನಾರ್ಹ ಬೆಲೆ ವ್ಯತ್ಯಾಸವಿದ್ದಾಗ ಮತ್ತು ನಿರ್ದಿಷ್ಟ ವೈದ್ಯಕೀಯ ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ ವಿವಿಧ ನಿಯಂತ್ರಕ ವೈಜ್ಞಾನಿಕ ಪ್ರಕ್ರಿಯೆಯ ವಲಯಗಳಿದ್ದಲ್ಲಿ (ಉದಾ. ದಂತವೈದ್ಯ), ದರ ಅಥವಾ ನಿಯತ್ರಕ ವ್ಯತ್ಯಾಸಗಳ ಲಾಭಹೊಂದುವುದಕ್ಕಾಗಿ ಪ್ರಯಾಣ ಮಾಡುವುದನ್ನು ಕೆಲವೊಮ್ಮೆ "ವೈದ್ಯಕೀಯ ಪ್ರವಾಸೋದ್ಯಮ" ಎಂದು ಕರೆಯುತ್ತಾರೆ.


ಶೈಕ್ಷಣಿಕ ಪ್ರವಾಸೋದ್ಯಮ[ಬದಲಾಯಿಸಿ]

ಶೈಕ್ಷಣಿಕ ಪ್ರವಾಸೋದ್ಯಮವು ಶಿಕ್ಷಣದ ಬೋಧನೆ ಮತ್ತು ಕಲಿಕೆಯ ಏರುತ್ತಿರುವ ಜನಪ್ರಿಯತೆ ಮತ್ತು ತರಗತಿಯ ವಾತಾವರಣದಿಂದ ಹೊರಗೆ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಅಭಿವೃದ್ಧಿಯಾಗಿದೆ.[ಸೂಕ್ತ ಉಲ್ಲೇಖನ ಬೇಕು] ಶೈಕ್ಷಣಿಕ ಪ್ರವಾಸೋದ್ಯಮದಲ್ಲಿ ವಿದ್ಯಾರ್ಥಿ ವಿಚಾರ ವಿನಿಮಯ ಕಾರ್ಯಕ್ರಮಗಳು ಮತ್ತು ಅದ್ಯಯನ ಪ್ರವಾಸ ಅಥವಾ ಕೆಲಸ ಮಾಡಲು ಮತ್ತು ಅಂತರರಾಷ್ಟ್ರೀಯ ಪ್ರಾಯೋಗಿಕ ತರಬೇತಿ ಕಾರ್ಯಕ್ರಮದಂತಹ ವಿವಿಧ ಪರಿಸರದ ತರಗತಿಯೊಳಗೆ ಕಲಿತ ಕೌಶಲ್ಯಗಳನ್ನು ಅನ್ವಯಿಕೆಯಂತಹ ಸಂಸ್ಕೃತಿಯ ಬಗ್ಗೆ ಕಲಿಯಲು ಇನ್ನೊಂದು ದೇಶಕ್ಕೆ ಭೇಟಿ ನೀಡುವುದು ಒಳಗೊಂಡಂತೆ ಪ್ರವಾಸ ಅಥವಾ ವಿರಾಮದ ಚಟುವಟಿಕೆಯ ಮೇಲೆ ಮುಖ್ಯವಾಗಿ ಕೇಂದ್ರಿಕರಿಸುತ್ತದೆ.


ಇತ್ತೀಚಿಗೆ ಸಂಭವಿಸಿದ ಹಣಕಾಸಿನ ಬಿಕ್ಕಟ್ಟಿನಿಂದಾಗಿ ಹೆಚ್ಚಿನ ಜನರಲ್ಲಿ ತಮ್ಮ ದೇಶದಾದ್ಯಂತ ಪ್ರಯಾಣಿಸುವ ಬಯಕೆಯಲ್ಲಿ ಏರಿಕೆಯಾಗುತ್ತಿರುವುದು ಕಾಣುತ್ತಿದೆ. ಇದನ್ನು ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ ಸ್ಥಳೀಯ ಜನರು ವಿದೇಶಕ್ಕೆ ಪ್ರಯಾಣಿಸುವುದಕ್ಕಿಂತ ಹೆಚ್ಚು ದೇಶದೊಳಗೆ 'ಪ್ರಯಾಣಿಸುವುದಕ್ಕೆ' ಆದ್ಯತೆ ನೀಡುತ್ತಾರೆ. ಇದು ವೆಚ್ಚವನ್ನು ಕಡಿಮೆಗೊಳಿಸುತ್ತದೆ. ಮತ್ತು ಶೈಕ್ಷಣಿಕ ಪ್ರವಾಸೋದ್ಯಮವನ್ನು ಅಭಿವೃದ್ದಿಸುವುದರಿಂದ ಸ್ಥಳೀಯ ಜನರಿಂದ ಹೆಚ್ಚಿನ ಆದಾಯವನ್ನು ಸೃಷ್ಟಿಸಬಹುದು.


ಇತರ ಅಭಿವೃದ್ಧಿಗಳು[ಬದಲಾಯಿಸಿ]

ಸೃಜನಶೀಲ ಪ್ರವಾಸೋದ್ಯಮ[ಬದಲಾಯಿಸಿ]

ಕ್ರಿಯಾಶೀಲಾತ್ಮಕ ಪ್ರವಾಸೋದ್ಯಮವು ಸಾಂಸ್ಕೃತಿಕ ಪ್ರವಾಸೋದ್ಯಮದ ಪ್ರಕಾರವಾಗಿದ್ದು, ಇದು ಪ್ರವಾಸೋದ್ಯಮದ ಉಗಮದಲ್ಲಿಯೇ ಅಸ್ತಿತ್ವಕ್ಕೆ ಬಂದಿದೆ. ಹೆಚ್ಚಾಗಿ ಪರಸ್ಪರ ಕಾರ್ಯನಿರ್ವಹಿಸುವ ಶೈಕ್ಷಣಿಕ ಅನುಭವಗಳ ಉದ್ದೇಶಕ್ಕಾಗಿ ಶ್ರೀಮಂತ ಕುಟುಂಬದ ಮಕ್ಕಳು ಗ್ರ್ಯಾಂಡ್ ಟೂರ್‌ ಮಾಡುವ ದಿನಗಳು ಮತ್ತೆ ಬಂದಿರುವುದನ್ನು ಯುರೋಪ್‌‌ನಲ್ಲಿ ಕಾಣಬಹುದು. ಇತ್ತೀಚೆಗೆ ಸಾಂಸ್ಕೃತಿಕ ಮತ್ತು ಕರಕೌಶಲ್ಯಗಳ ಪ್ರವಾಸೋದ್ಯಮ ಸೇರಿದಂತೆ ಯುರೋಪಿಯನ್‌ ಕಮೀಷನ್‌ಗಾಗಿ ಹಲವಾರು ಯೋಜನೆಗಳನ್ನು ನಿರ್ದೇಶಿಸಿದ ಪ್ರವಾಸೋದ್ಯಮ ಮತ್ತು ವಿರಾಮ ಶಿಕ್ಷಣ ಸಂಸ್ಥೆಯ (ATLAS) ಸದಸ್ಯರಾಗಿರುವ ಕ್ರಿಸ್ಪೈನ್‌ ರೇಮಂಡ್‌ ಮತ್ತು ಗ್ರೇಗ್ ರಿಚರ್ಡ್ಸ್‌‌[ಸೂಕ್ತ ಉಲ್ಲೇಖನ ಬೇಕು]ರವರು ಕ್ರಿಯಾಶೀಲಾತ್ಮಕ ಪ್ರವಾಸೋದ್ಯಮಕ್ಕೆ ನಿರಂತರ ಪ್ರವಾಸೋದ್ಯಮ ಎನ್ನುವ ತಮ್ಮದೇ ಆದ ಹೆಸರನ್ನು ನೀಡಿದ್ದಾರೆ. ಪರಸ್ಪರ ಕಾರ್ಯನಿರ್ವಹಿಸುವ ಕಾರ್ಯಗಾರ ಮತ್ತು ಅನೌಪಚಾರಿಕ ಕಲಿಕೆ ಅನುಭವಗಳ ಮೂಲಕ ಆತಿಥ್ಯ ವಹಿಸಿದ ಸಮುದಾಯದ ಸಂಸ್ಕೃತಿಯಲ್ಲಿ ಪ್ರಯಾಣಿಕರ ಸಕ್ರಿಯ ಭಾಗವಹಿಸುವಿಕೆಗೆ ಸಂಬಂಧಿಸಿದ ಪ್ರವಾಸೋದ್ಯಮ ಎಂದು "ಕ್ರಿಯಾಶೀಲಾತ್ಮಕ ಪ್ರವಾಸೋದ್ಯಮ"ವನ್ನು ವ್ಯಾಖ್ಯಾನಿಸಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]


ಹಾಗೆಯೇ ಕ್ರಿಯಾಶೀಲಾತ್ಮಕ ನಗರಗಳ ಜಾಲವನ್ನು ಹೊಂದಿರುವ ಮತ್ತು ಸ್ಥಳದ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಸಕ್ರಿಯವಾಗಿ ಅರ್ಥೈಹಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವ ದೃಢಪಡಿಸಿದ ಕ್ರಿಯಾಶೀಲಾತ್ಮಕ ಪ್ರವಾಸೋದ್ಯಮದಲ್ಲಿ ತೊಡಗಿ, ವಿಶ್ವಾಸರ್ಹ ಅನುಭವವನ್ನು ಹೊಂದಿರುವ UNESCOನಂತಹ ಉತ್ತಮ ಅಸ್ತಿತ್ವ ಹೊಂದಿರುವ ಸಂಸ್ಥೆಗಳು ಕ್ರಿಯಾಶೀಲಾತ್ಮಕ ಪ್ರವಾಸೋದ್ಯಮ ಕಲ್ಪನೆಯನ್ನು ಆಯ್ದಕೊಂಡಿದೆ.[ಸೂಕ್ತ ಉಲ್ಲೇಖನ ಬೇಕು]


ಕ್ರಿಯಾಶೀಲಾತ್ಮಕ ಪ್ರವಾಸೋದ್ಯಮವು ಸಾಂಸ್ಕೃತಿಕ ಪ್ರವಾಸೋದ್ಯಮದ ಒಂದು ಪ್ರಕಾರದಂತೆ, ಪ್ರಯಾಣಿಕರು ಭೇಟಿ ನೀಡಿದ ಆತಿಥ್ಯ ವಹಿಸಿಕೊಂಡ ಸಮುದಾಯದ ಸಂಸ್ಕೃತಿಯಲ್ಲಿ ಅವರ ಭಾಗವಹಿಸುವಿಕೆಯನ್ನು ಆಕರ್ಷಿಸುವುದರಿಂದಾಗಿ ಇತ್ತೀಚೆಗೆ ಜನಪ್ರಿಯವಾಗುತ್ತದೆ. ಯುನೈಟೆಡ್‌ ಕಿಂಗ್‌ಡಮ್‌, ದಿ ಬಹಮಾಸ್‌, ಜಮೈಕಾ, ಸ್ಪೇನ್‌, ಇಟಲಿ ಮತ್ತು ನ್ಯೂಜಿಲೆಂಡ್‌ ಸೇರಿದಂತೆ ಹಲವು ದೇಶಗಳು ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಈ ಮಾದರಿಯ ಸೇವೆಗಳನ್ನು ನೀಡುತ್ತಿವೆ.


ಕರಾಳ ಪ್ರವಾಸೋದ್ಯಮ[ಬದಲಾಯಿಸಿ]

"ಕರಾಳ" ಪ್ರವಾಸೋದ್ಯಮವು ವಿಶೇಷ ಆಸಕ್ತಿಯ ಪ್ರವಾಸೋದ್ಯಮದಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಒಂದು ಕ್ಷೇತ್ರವಾಗಿದೆ ಎಂದು ಲೆನನ್‌ ಮತ್ತು ಫೋಲೆರವರು (2000)[ಸೂಕ್ತ ಉಲ್ಲೇಖನ ಬೇಕು] ಗುರುತಿಸಿದ್ದಾರೆ. ಈ ಪ್ರಕಾರದ ಪ್ರವಾಸೋದ್ಯಮವು ಯುದ್ಧಭೂಮಿಗಳು, ಭಯಂಕರ ಅಪರಾಧಗಳು ಅಥವಾ ನರಹತ್ಯೆಯ ಘಟನಾಸ್ಥಳಗಳು, ಉದಾಹರಣೆಗೆ ಕೈದಿ ಶಿಬಿರದಂತಹ "ಕರಾಳ" ಸ್ಥಳಗಳಿಗೆ ಭೇಟಿ ನೀಡುವುದನ್ನು ಒಳಗೊಂಡಿದೆ. ಕರಾಳ ಪ್ರವಾಸೋದ್ಯಮವು ಕೆಳಗಿನ ತೀವ್ರರೂಪದ ನೈತಿಕ ಮತ್ತು ಸೈದ್ಧಾಂತಿಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ: ಪ್ರವಾಸಿಗರ ಭೇಟಿಗೆ ಇಂತಹ ಸ್ಥಳಗಳು ಲಭ್ಯವಿರಬೇಕೆ ಮತ್ತು ಹಾಗೆ ಲಭ್ಯವಿದ್ದಲ್ಲಿ, ಯಾವ ರೀತಿಯ ಜನಪ್ರಿಯತೆ ಒಳಗೊಂಡಿರಬೇಕು. ಶೋಕ, ಸ್ಮರಣೆ, ಭೀಕರ ಕೌತುಕ ಅಥವಾ ಮನರಂಜನೆಯಂತಹ ವಿವಿಧ ಪ್ರೇರಣೆಯಿಂದ ಪ್ರವಾಸ ಮಾಡುವ ಮನಸ್ಸು ಸೃಷ್ಟಿಯಾಗಬೇಕಾಗಿರುವುದರಿಂದ ಕರಾಳ ಪ್ರವಾಸೋದ್ಯಮವು ಒಂದು ಚಿಕ್ಕ ಮಾರುಕಟ್ಟೆಯಾಗಿಯೇ ಉಳಿದಿದೆ. ಇದರ ಮೂಲವು ಉತ್ಸವ ಮೈದಾನಗಳು ಮತ್ತು ಮಧ್ಯ ಕಾಲೀನ ಉತ್ಸವಗಳಲ್ಲಿ ಹುಟ್ಟಿಕೊಂಡಿದೆ.[೨೯]


ಅಭಿವೃದ್ಧಿ[ಬದಲಾಯಿಸಿ]

ಚಿತ್ರ:2005xtoursim receipts.PNG
2005ರಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಸಂದ ಹಣ
ಪೆಟ್ರೋನಾಸ್ ಅವಳಿ ಗೋಪುರಗಳು, ಕೌಲ ಲಂಪುರ್‌, ಮಲೇಷಿಯಾ.


ವಿಶ್ವ ಪ್ರವಾಸೋದ್ಯಮ ಸಂಸ್ಥೆಯು (UNWTO) ಅಂತರರಾಷ್ಟ್ರೀಯ ಪ್ರವಾಸೋದ್ಯಮ ಸರಾಸರಿ ವಾರ್ಷಿಕ 4 % ದರದಲ್ಲಿ ಅಭಿವೃದ್ಧಿ ಪಥದಲ್ಲಿ ಮುಂದುವರಿಯುವುದು ಎಂದು ಭವಿಷ್ಯ ನುಡಿದಿದೆ.[೩೦] ಈ-ವಾಣಿಜ್ಯದ ಉಗಮದೊಂದಿಗೆ ಪ್ರವಾಸೋದ್ಯಮ ಉತ್ಪನ್ನಗಳು ಅಂತರ್ಜಾಲದಲ್ಲಿ ಅತಿ ಹೆಚ್ಚು ಮಾರಾಟವಾಗುವ ವಸ್ತುಗಳಲ್ಲಿ ಒಂದಾಗಿವೆ.[ಸೂಕ್ತ ಉಲ್ಲೇಖನ ಬೇಕು] ಪ್ರವಾಸೋದ್ಯಮ ಉತ್ಪನ್ನಗಳು ಮತ್ತು ಸೇವೆಗಳು ಮಧ್ಯವರ್ತಿಗಳ ಮೂಲಕ ಲಭ್ಯವಾಗುವಂತೆ ಮಾಡಲಾಗಿದೆ. ಹಾಗೆಯೇ ಪ್ರವಾಸೋದ್ಯಮ ಸೌಲಭ್ಯವನ್ನು ಒದಗಿಸುವವರು (ಹೋಟೆಲ್‌ಗಳು, ವಿಮಾನಯಾನ, ಇತ್ಯಾದಿ.) ತಮ್ಮದೇ ಆದ ಸೇವೆಗಳನ್ನು ನೇರವಾಗಿ ಮಾರಾಟ ಮಾಡಬಹುದು. ಇದು ಆನ್‌ಲೈನ್ ಮತ್ತು ಸಾಂಪ್ರದಾಯಿಕ ಅಂಗಡಿಗಳೆರಡರಿಂದಲೂ ಮಧ್ಯವರ್ತಿಗಳ ಮೇಲೆ ಒತ್ತಡವನ್ನು ಹೇರುತ್ತದೆ.


ಇದು ಜಾಗತಿಕವಾಗಿ ತಲಾ ಪ್ರವಾಸೋದ್ಯಮ ವೆಚ್ಚ ಮತ್ತು ಪ್ರವಾಸೋದ್ಯಮದಲ್ಲಿ ತೊಡಗಿರುವ ದೇಶದ ಶ್ರೇಯಾಂಕದ ನಡುವೆ ಬಲವಾದ ಸಂಬಂಧವಿದೆ ಎನ್ನುವುದನ್ನು ಸೂಚಿಸುತ್ತದೆ.[೩೧] ಪ್ರವಾಸೋದ್ಯಮವು ಪ್ರಮುಖ ಆರ್ಥಿಕ ಕೊಡುಗೆಯನ್ನು ನೀಡುವುದಲ್ಲದೆ, ದೇಶದ ಸ್ಥಳೀಯ ಆರ್ಥವ್ಯವಸ್ಥೆಯ ಲಾಭಕ್ಕಾಗಿ ಜಾಗತಿಕ ಸಂಪನ್ಮೂಲವನ್ನು ಬಳಸುವ ಅಂತರಾಷ್ಟ್ರೀಯ ನಾಗರಿಕರಲ್ಲಿ ನಂಬಿಕೆಯ ಮಟ್ಟದ ಸೂಚಕವಾಗಿದೆ. ಹಾಗಾಗಿ ಪ್ರವಾಸೋದ್ಯಮದಲ್ಲಿನ ಅಭಿವೃದ್ಧಿಯ ಮುಂದಾಲೋಚನೆಗಳು ಪ್ರತಿ ದೇಶದ ಭವಿಷ್ಯದಲ್ಲಿ ಅನುಸರಿಸುವ ತುಲನಾತ್ಮಕ ಪ್ರಭಾವದ ಸೂಚಕದಂತೆ ಸೇವೆ ಸಲ್ಲಿಸಬಹುದು.


ಬಾಹ್ಯಕಾಶ ಪ್ರವಾಸೋದ್ಯಮವು 21ನೇ ಶತಮಾನದ ಮೊದಲ ಕಾಲಭಾಗದ ಅವಧಿಯಲ್ಲಿ ಚಾಲನೆಗೊಳ್ಳುವ ಸಾಧ್ಯತೆ ಇದೆ. ಆದರೂ ಹಲವು ಬಾಹ್ಯಕಾಶ ಎಲಿವೇಟರ್‌ನಂತಹ ಬಾಹ್ಯಕಾಶ ಪ್ರಯಾಣದ ವೆಚ್ಚವನ್ನು ಕಡಿಮೆಮಾಡುವ ತಂತ್ರಜ್ಞಾನ ಬರುವವರೆಗೆ ಸಾಂಪ್ರದಾಯಿಕ ಗಮ್ಯಸ್ಥಾನಗಳೊಂದಿಗೆ ಹೋಲಿಸಿದಾಗ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುತ್ತದೆ.[ಸೂಕ್ತ ಉಲ್ಲೇಖನ ಬೇಕು]


ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಸೌರಶಕ್ತಿ-ಚಾಲಿತ ವಿಮಾನಗಳು ಅಥವಾ ದೊಡ್ಡ ಪ್ರಮಾಣದ ವಾಯುನೌಕೆಗಳನ್ನು ಆಧರಿಸಿದ ವಾಯುನೌಕಾ ಹೋಟೆಲ್‌ಗಳನ್ನು ತಯಾರಿಸುವ ಸಾಧ್ಯತೆ ಇದೆ.[ಸೂಕ್ತ ಉಲ್ಲೇಖನ ಬೇಕು] ದುಬೈಯಲ್ಲಿ ನಿರ್ಮಾಣದ ಹಂತದಲ್ಲಿರುವ ಹೈಡ್ರೊಪೋಲಿಸ್‌ನಂತಹ ಅಂತರ್ಜಲ ಹೋಟೆಲ್‌ಗಳು 2009ರಲ್ಲಿ ಆರಂಭಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ. ಸಾಗರದಲ್ಲಿ ಪ್ರಯಾಣಿಕರು ದೊಡ್ಡ ಪ್ರಮಾಣದ ಪ್ರಯಾಣಿಕರ ಹಡಗುಗಳು ಮತ್ತು ತೆಲುವ ನಗರಗಳನ್ನು ಸ್ವಾಗತಿಸುವರು.[ಸೂಕ್ತ ಉಲ್ಲೇಖನ ಬೇಕು]


ಇತ್ತೀಚಿನ ವಿದ್ಯಮಾನ[ಬದಲಾಯಿಸಿ]

2000ರ ಕೊನೆಯ ಆರ್ಥಿಕ ಹಿಂಜರಿತದ ಫಲಿತಾಂಶವಾಗಿ, ಅಂತರರಾಷ್ಟ್ರೀಯ ಆಗಮನಗಳಲ್ಲಿ 2008ರ ಜೂನ್‌ನಲ್ಲಿ ಪ್ರಾರಂಭದಲ್ಲಿ ಭಾರಿ ಕುಸಿತವನ್ನು ಅನುಭವಿಸಿತು.2007ಯಿಂದ 2008ವರೆಗಿನ ಅಭಿವೃದ್ಧಿಯು 2008ರ ಮೊದಲ ಎಂಟು ತಿಂಗಳ ಅವಧಿಯಲ್ಲಿ ಕೇವಲ 3.7% ಆಗಿದೆ. ಅಮೆರಿಕಾ ತನ್ನ ವಿಸ್ತರಣ ದರ ಕಡಿಮೆ ಮಾಡಿ, 2008ರ ಜನವರಿಯಿಂದ ಆಗಸ್ಟವರೆಗೆ 6%ರಷ್ಟು ಅಭಿವೃದ್ಧಿಯನ್ನು ಕಾಯ್ದುಕೊಳ್ಳುತ್ತಾ, ಉತ್ತಮ ಸ್ಪರ್ಧೆ ನೀಡುತ್ತಿರುವಾಗ, ಏಷಿಯಾ ಮತ್ತು ಫೆಸಿಫಕ್ ಮಾರುಕಟ್ಟೆಗಳು ಇದರ ಪ್ರಭಾವಕ್ಕೆ ಒಳಗಾಗಿದೆ ಮತ್ತು ಯುರೋಪ್‌‌ ಮಾರುಕಟ್ಟೆಯು ಉತ್ತರ ಧ್ರುವದ ಬೇಸಿಗೆ ತಿಂಗಳಲ್ಲಿ ತಟಸ್ಥವಾಗಿತ್ತು. ಅದೇ ಅವಧಿಯಲ್ಲಿ ಕೇವಲ ಮಧ್ಯ ಪೂರ್ವ ರಾಷ್ಟ್ರಗಳು 2007ರಲ್ಲಿ ಹೋಲಿಸಿದಾಗ 17%ರಷ್ಟು ಅಭಿವೃದ್ಧಿ ಹೊಂದುವುದರೊಂದಿಗೆ ತಮ್ಮ ವೇಗದ ಅಭಿವೃದ್ಧಿಯೊಂದಿಗೆ ಮುಂದುವರಿದಿದ್ದವು.[೩೨] ಅಂತರರಾಷ್ಟ್ರೀಯ ಪ್ರವಾಸೋದ್ಯಮ ಬೇಡಿಕೆಯಲ್ಲಿನ ಈ ಕುಂಠಿತವು 2008ರ ಸಪ್ಟೆಂಬರ್‌ನಲ್ಲಿ ಋಣಾತ್ಮಕವಾದ ಅಭಿವೃದ್ಧಿಯೊಂದಿಗೆ ವಾಯು ಸಾರಿಗೆ ಉದ್ಯಮದಲ್ಲಿಯೂ ಸಹ ಪ್ರತಿಫಲಿಸಿದೆ ಮತ್ತು ಸಪ್ಟೆಂಬರ್‌ನಲ್ಲಿ ಪ್ರಯಾಣಿಕರ ದಟ್ಟಣೆಯಲ್ಲಿ 3.3%ರಷ್ಟು ಅಭಿವೃದ್ಧಿ ಕಂಡಿದೆ. ಹೋಟೆಲ್ ಉದ್ಯಮವು ಸಹ ಕೊಠಡಿಗಳ ಬಾಡಿಗೆ ಪಡೆಯುವವರ ಸಂಖ್ಯೆಯು ಕಡಿಮೆಯಾಗುತ್ತಿರುವುದನ್ನು ವರದಿಮಾಡಿದೆ.[೩೨] ಸಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟುನ ಪರಿಣಾಮವಾಗಿ ಜಾಗತಿಕ ಆರ್ಥಿಕ ಪರಿಸ್ಥಿತಿಯು ನಾಟಕೀಯವಾಗಿ ಹಾನಿಗೊಂಡದ್ದರಿಂದ, 2008ರ ಉಳಿದ ಭಾಗದಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮದಲ್ಲಿಯೂ ಕುಂಠಿತವನ್ನು ನಿರೀಕ್ಷಿಸಲಾಗಿದೆ ಮತ್ತು ಅತಿ ಹೆಚ್ಚು ವ್ಯಯಿಸುವ ದೇಶಗಳಲ್ಲಿ ಹೆಚ್ಚಿನವು ಈಗಾಗಲೇ ಹಿಂಜರಿತದ ಪ್ರಭಾವಕ್ಕೆ ಒಳಗಾಗಿದ್ದು, ಆರ್ಥಿಕ ಬಿಕ್ಕಟ್ಟುನಿಂದ ದೀರ್ಘ ಪ್ರಯಾಣಕ್ಕೆ ಹೆಚ್ಚಿನ ಪ್ರಭಾವವುಂಟಾಗಬಹುದೆಂಬ ನಿರೀಕ್ಷೆಯೊಂದಿಗೆ ಬೇಡಿಕೆಯ ಅಭಿವೃದ್ಧಿಯಲ್ಲಿನ ಈ ಕುಂಠಿತವು 2009ರವರೆಗೆ ಮುಂದುವರಿಯಬಹುದೆಂದು ಅಂದಾಜಿಸಲಾಗಿದೆ.[೩೨] 2009ರ ಮೊದಲ ನಾಲ್ಕು ತಿಂಗಳುಗಳಲ್ಲಿ 8%ರಷ್ಟು ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನದಲ್ಲಿ ಕುಸಿತ ಕಾಣುವುದರೊಂದಿಗೆ ಋಣಾತ್ಮಕ ಪೃವೃತ್ತಿಯು ಹೆಚ್ಚುತ್ತಾ ಹೋಯಿತು ಮತ್ತು ಸಾಂಕ್ರಾಮಿಕ AH1N1 ವೈರಸ್‌ ತೀವ್ರಗತಿಯಲ್ಲಿ ಹರಡುವುದರಿಂದಾಗಿ ಕೆಲವು ಪ್ರದೇಶಗಳಲ್ಲಿ ಈ ಕುಸಿತದ ದರವು ಹೆಚ್ಚಾಗಿತ್ತು.[೨]


ಗ್ಯಾಲರಿ[ಬದಲಾಯಿಸಿ]

Niagara Falls
Canada– USA border 


ಇದನ್ನೂ ನೋಡಿರಿ[ಬದಲಾಯಿಸಿ]


ಆಕರಗಳು[ಬದಲಾಯಿಸಿ]

 1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. ೨.೦ ೨.೧ ೨.೨ ೨.೩ ೨.೪ Cite error: Invalid <ref> tag; no text was provided for refs named WTOjune09
 3. ೩.೦ ೩.೧ ೩.೨ ೩.೩ Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).ಸಂಪುಟ 6 ಸಂ. 2 Cite error: Invalid <ref> tag; name "WTO2008" defined multiple times with different content
 4. Werner Hunziker and Kurt (1942). Grundriss der allgemeinen Fremdenverkehrslehre. OCLC 69064371. ; cf. ಹಾಸ್ಸೊ ಸ್ಪೋಡ್ ಇನ್ ಗುಂಥರ್ ಹೈಲಿಂಗ್‌ (ಆ.): ಟೂರಿಸಮಸ್‌-ಮ್ಯಾನೇಜ್‌ಮೇಂಟ್‌, ಬರ್ಲಿನ್ 1998
 5. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. ೬.೦ ೬.೧ ೬.೨ ೬.೩ ೬.೪ ೬.೫ ೬.೬ ೬.೭ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil. Click on the link "UNWTO Tourism Highlights" to access the pdf report.
 7. ೭.೦ ೭.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. ೮.೦ ೮.೧ Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 9. ಹೆಚ್ಚು ಖಚಿತ ಅಂಕಿಅಂಶಗಳಿಗಾಗಿ ನಿರೀಕ್ಷಿಸುತ್ತಿದೆ ಫ್ರಾನ್ಸ್‌ 24 / ಪ್ಯಾರಿಸ್‌ನ ಪ್ರವಾಸೋದ್ಯಮ ಕಛೇರಿ : ಮುಖ್ಯ ಲಕ್ಷಣಗಳು
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. ೧೧.೦ ೧೧.೧ ೧೧.೨ ೧೧.೩ ೧೧.೪ ೧೧.೫ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. ಮೂಲ : ಸಿಂಗಪೂರ್ ಪ್ರವಾಸೋದ್ಯಮ ಮಂಡಳಿ (STB)
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. ಮೂಲ : ದುಬೈ ಪ್ರವಾಸೋದ್ಯಮ ಮತ್ತು ವಾಣಿಜ್ಯಾ ಮಾರುಕಟ್ಟೆ (DTCM)
 16. ಮೂಲ: ಶಾಂಘೈ ಪುರಸಭೆ ಪ್ರವಾಸೋದ್ಯಮ ಆಡಳಿತ ಕಮೀಷಮನ್‌. Travelmole.com
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 22. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. Theobald, William F. (1998). Global Tourism. p. 10. ISBN 0750640227. 
 26. "Cox & Kings Website". 
 27. USಗೆ ಪ್ರಯಾಣಿಸುವವರಿಗೆ EU ಹಂದಿ ಜ್ವರದ ಸೂಚನೆ ನೀಡಿತು. ದಿ ಗಾರ್ಡಿಯನ್‌. ಏಪ್ರಿಲ್‌ 28, 2009.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. ಟೂರಿಸಮ್‌ ಪ್ರಿನ್ಸಿಪಲ್ಸ್‌ ಆಂಡ್‌ ಪ್ರ್ಯಾಕ್ಟಿಸ್‌, C. ಕೂಪರ್‌, J. ಫ್ಲೆಚರ್‌, A. ಫಿಯಲ್‌, D. ಗಿಲ್ಬರ್ಟ್‌, S. ವ್ಯಾನ್ಹಿಲ್‌, ಪಿಯರ್ಸನ್‌ ಎಜ್ಯುಕೇಶನ್‌, ಮೂರನೇ ಆವೃತ್ತಿ, ಮ್ಯಾಡ್ರಿಡ್‌ 2005
 30. "Long-term Prospects: Tourism 2020 Vision". World Tourism. 2004. 
 31. "airports & tourists". Global Culture. 2007. 
 32. ೩೨.೦ ೩೨.೧ ೩೨.೨ Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil). ಸಂಪುಟ 6, ಸಂಚಿಕೆ 3


ಹೊರಗಿನ ಕೊಂಡಿಗಳು[ಬದಲಾಯಿಸಿ]