ಯುನೈಟೆಡ್ ಅರಬ್ ಎಮಿರೇಟ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
الإمارات العربية المتحدة
Al-Imārāt al-‘Arabīya al-Muttaḥida

ಯುನೈಟೆಡ್ ಅರಬ್ ಎಮಿರೇಟ್ಸ್
United Arab Emirates ದೇಶದ ಧ್ವಜ United Arab Emirates ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "xx"
ರಾಷ್ಟ್ರಗೀತೆ: Ishy Bilady

Location of United Arab Emirates

ರಾಜಧಾನಿ ಅಬು ಧಾಬಿ
22°47′N 54°37′E
ಅತ್ಯಂತ ದೊಡ್ಡ ನಗರ ದುಬೈ
ಅಧಿಕೃತ ಭಾಷೆ(ಗಳು) ಅರಾಬಿಕ್ ಭಾಷೆ
ಸರಕಾರ ಒಕ್ಕೂಟದ ಸಾಂವಿಧಾನಿಕ ಅರಸೊತ್ತಿಗೆ
 - ರಾಷ್ಟ್ರಾಧ್ಯಕ್ಷ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್
 - ಪ್ರಧಾನಿ ಮೊಹಮ್ಮದ್ ಬಿನ್ ರಷೀದ್ ಅಲ್ ಮಕ್ತೂಮ್
ಸ್ಥಾಪನೆ ಡಿಸೆಂಬರ್ 2 1971 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 83,600 ಚದರ ಕಿಮಿ ;  (116ನೆಯದು)
  32,278 ಚದರ ಮೈಲಿ 
 - ನೀರು (%) ನಗಣ್ಯ
ಜನಸಂಖ್ಯೆ  
 - 2005ರ ಅಂದಾಜು 4,496,000 (113ನೆಯದು)
 - 2006ರ ಜನಗಣತಿ 4,588,697
 - ಸಾಂದ್ರತೆ 64 /ಚದರ ಕಿಮಿ ;  (143rd)
139 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2007ರ ಅಂದಾಜು
 - ಒಟ್ಟು $159.3 ಬಿಲಿಯನ್ (54ನೆಯದು)
 - ತಲಾ $35,516 (16ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2007)
Increase 0.868 (39ನೆಯದು) – ಉನ್ನತ
ಚಲಾವಣಾ ನಾಣ್ಯ/ನೋಟು ಯು.ಎ.ಇ. ದಿರ್ರಮ್ (AED)
ಸಮಯ ವಲಯ GMT+4 (UTC+4)
 - ಬೇಸಿಗೆ (DST) ಪರಿಗಣನೆಯಲ್ಲಿಲ್ಲ (UTC+4)
ಅಂತರಜಾಲ ಸಂಕೇತ .ae
ದೂರವಾಣಿ ಸಂಕೇತ +971

ಯುನೈಟೆಡ್ ಅರಬ್ ಎಮಿರೇಟ್ಸ್ (ಸಂಯುಕ್ತ ಅರಬ್ ಗಣರಾಜ್ಯ ) ವಾಯವ್ಯ ಏಷ್ಯಾದ ಮಧ್ಯಪ್ರಾಚ್ಯದಲ್ಲಿ ಏಳು ಸ್ವಯಾಡಳಿತ ಎಮಿರ್ ಪ್ರಭುತ್ವ ಸಂಸ್ಥಾನಗಳ ಒಕ್ಕೂಟವಾಗಿರುವ ರಾಷ್ಟ್ರ. ಯು.ಎ.ಇ. ಅರಬ್ ಜಂಬೂದ್ವೀಪದ ಆಗ್ನೇಯ ಭಾಗದಲ್ಲಿದೆ. ಪರ್ಷಿಯನ್ ಕೊಲ್ಲಿಯ ಅಂಚಿನಲ್ಲಿರುವ ಯು.ಎ.ಇ. ಯ ನೆರೆರಾಷ್ಟ್ರಗಳೆಂದರೆ ಒಮಾನ್ ಮತ್ತು ಸೌದಿ ಅರೆಬಿಯ. ಒಕ್ಕೂಟದ ಏಳು ಸಂಸ್ಥಾನಗಳು ಇವು : ಅಭ್ ಧಾಬಿ, ಅಜ್ಮಾನ್, ಷಾರ್ಜಾ, ದುಬೈ, ರಾಸ್-ಅಲ್-ಖೈಮಾ, ಫುಜೈರಾ ಮತ್ತು ಉಮ್ಮ್-ಅಲ್-ಖುಮೈನ್. ೧೯೭೦ರ ದಶಕದಲ್ಲಿ ಇಲ್ಲಿನ ತೈಲೋದ್ಯಮವು ತೀವ್ರಗತಿಯಲ್ಲಿ ಅಭಿವೃದ್ಧಿಗೊಂಡು ಇಂದು ಯು.ಎ.ಇ. ವಿಶ್ವದ ಸಂಪದ್ಭರಿತ ದೇಶಗಳಲ್ಲಿ ಒಂದಾಗಿದೆ.

ಉತ್ತರ ಅಕ್ಷಾಂಶ 220-26030† ಮತ್ತು ಪೂರ್ವರೇಖಾಂಶ 510-56030† ನಡುವೆ ಇದೆ. ಪೂರ್ವದಲ್ಲಿ ಒಮಾನ್ ಖಾರಿ, ಉತ್ತರದಲ್ಲಿ ಪರ್ಷಿಯನ್ ಖಾರಿ, ಆಗ್ನೇಯದಲ್ಲಿ ಒಮಾನ್‍ದೇಶ, ಪಶ್ಚಿಮ-ದಕ್ಷಿಣ ಗಳಲ್ಲಿ ಸೌದಿ ಅರೇಬಿಯ ಇದನ್ನು ಸುತ್ತುವರಿದಿವೆ. ರಾಜಧಾನಿ ಅಬುಧಾಬಿ.

ಈ ಅರಬ್ ಸಂಯುಕ್ತ ಪ್ರದೇಶ ಪೂರ್ವಪಶ್ಚಿಮವಾಗಿ 563 ಕಿಮೀ ಉತ್ತರ ದಕ್ಷಿಣವಾಗಿ 402 ಕಿಮೀ ಇದ್ದು 777 ಕಿಮೀ ತೀರ ಪ್ರದೇಶ ಹೊಂದಿದೆ. ಈ ಪ್ರದೇಶದವರೆಲ್ಲ ಅರಬ್ ಮುಸ್ಲಿಮರು. ಅರಾಬಿಕ್ ಇಲ್ಲಿನ ಆಡಳಿತ ಭಾಷೆ. ದುಬೈ ದೊಡ್ಡ ಬಂದರು ಹಾಗೂ ವ್ಯಾಪಾರ ಕೇಂದ್ರ.

ಆಡಳಿತ[ಬದಲಾಯಿಸಿ]

1971ರ ವರೆಗೆ ಈ ದೇಶಗಳು ಬ್ರಿಟನ್ನಿನ ರಕ್ಷಣೆಯಲ್ಲಿದ್ದು ಇವನ್ನು ಟ್ರೂಷಿಯಲ್ ದೇಶಗಳೆಂದು ಕರೆಯಲಾಗುತ್ತಿತ್ತು. 1971ರ ಅನಂತರ ಇವು ಸರ್ವತಂತ್ರ ಸ್ವತಂತ್ರ ದೇಶಗಳಾಗಿ ಒಕ್ಕೂಟ ರಚಿಸಿಕೊಂಡವು. ಈ ಏಳು ಅರಬ್ ದೇಶಗಳು ಪ್ರತ್ಯೇಕವಾಗಿ ತಮ್ಮವದೇ ಆದ ಅಮೀರನೊಬ್ಬನ ಆಡಳಿತಕ್ಕೆ ಒಳಪಟ್ಟಿರುತ್ತದೆ. ಈ ಅಮೀರ ಆ ದೇಶದ ಒಳಾಡಳಿತವನ್ನು ನಿಯಂತ್ರಿಸುತ್ತಾನೆ. ಏಳು ದೇಶಗಳ ಏಳುಮಂದಿ ಅಮೀರರು ಸೇರಿ ಒಬ್ಬ ಅಧ್ಯಕ್ಷನನ್ನು ಆರಿಸಿ ಈ ಒಕ್ಕೂಟದ ಸಂಯುಕ್ತ ರಕ್ಷಣೆ, ವಿದೇಶಿ ನೀತಿ ಮುಂತಾದವು ಇವನ ಅಧೀನಕ್ಕೆ ಸೇರಿರುತ್ತವೆ. 25 ಮಂದಿ ಮಂತ್ರಿಗಳ ಸಭೆ ಈ ದೇಶಾಡಳಿತವನ್ನು ಗಮನಿಸುತ್ತದೆ .

ತೈಲದಿಂದ ಬರುವ ಅಪಾರ ಆದಾಯವನ್ನು ದೇಶದಲ್ಲಿ ಹೊಸ ಶಾಲೆಗಳ ನಿರ್ಮಾಣಕ್ಕೆ, ಆಸ್ಪತ್ರೆಗಳ, ಹೊಸಮಾರ್ಗಗಳ, ನಿವೇಶನಗಳ, ವಸತಿಗೃಹಗಳ ನಿರ್ಮಾಣಕ್ಕೆ ಉಪಯೋಗಿಸಿ ದೇಶಕ್ಕೆ ಹೊಸರೂಪವನ್ನೆ ನೀಡಲಾಗಿದೆ. ಜನರ ಸೌಕರ್ಯ ಅಭಿವೃದ್ಧಿಯಾಗಿದೆ. 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಶಾಲಾಶಿಕ್ಷಣ ಕಡ್ಡಾಯ. ವಿಶಾಲವಾದ ಮರಳು ಭೂಮಿಯಲ್ಲಿ ನೀರಿನ ಬಾವಿಗಳು, ಒಯಸಿಸ್‍ಗಳು ಇವೆ. ಕಚ್ಚಾತೈಲವನ್ನೇ ವಿದೇಶಗಳಿಗೆ ರಫ್ತುಮಾಡಿ ತಮಗೆ ಬೇಕಾದ ಕಟ್ಟಡ ಸಾಮಗ್ರಿ, ಬಟ್ಟೆಗಳು, ಆಹಾರವಸ್ತುಗಳು, ವಿವಿಧ ಯಂತ್ರೊಪಕರಣಗಳನ್ನು ಆಮದು ಮಾಡಿಕೊಳ್ಳುತ್ತಾರೆ.

ಈ ಒಕ್ಕೂಟದ ವಿಸ್ತೀರ್ಣ 83,600 ಚ.ಕಿಮೀ. ಜನಸಂಖ್ಯೆ 26,03,000.

ಭೂಸ್ವರೂಪ[ಬದಲಾಯಿಸಿ]

ಇದರ ಭೂಭಾಗ ಸಮತಟ್ಟಾಗಿದೆ. ಕರಾವಳಿಯ ಮೈದಾನ ಒಳನಾಡಿನ ಮರುಭೂಮಿಯೊಂದಿಗೆ ಕೂಡುತ್ತದೆ. ಭೌಗೋಳಿಕವಾಗಿ ಇಲ್ಲಿ ಒಳನಾಡು ಪ್ರದೇಶ, ಮರುಭೂಮಿ, ಮತ್ತು ಕರಾವಳಿ ಎಂದು ಮೂರು ವಿಭಾಗಗಳಿವೆ.

ವಾಯುಗುಣ[ಬದಲಾಯಿಸಿ]

ಇಲ್ಲಿ ಉಷ್ಣತೆ ಹೆಚ್ಚು. ಮಳೆ ಕಡಿಮೆ. ಕರಾವಳಿ ಹೆಚ್ಚು ಆದ್ರ್ರ. ಒಳನಾಡಿನ ಮರಳುಗಾಡು ಶುಷ್ಕ. ಪೂರ್ವಭಾಗದಲ್ಲಿ ತಂಪಾದ ವಾಯುಗುಣವಿದೆ. ಅಲ್ಲಿ ಸ್ವಲ್ಪ ಮಳೆಯಾಗುತ್ತದೆ. ಬೇಸಗೆಯ ಸರಾಸರಿ ಉಷ್ಣಾಂಶ 32°ಸೆ. ಕೆಲವೊಮ್ಮೆ ಇದು 49°ಸೆ. ವರೆಗೂ ಹೆಚ್ಚುವು ದುಂಟು. ಚಳಿಗಾಲದ ಸರಾಸರಿ ಉಷ್ಣಾಂಶ 16°ಸೆ. ಇಲ್ಲಿ ವಾರ್ಷಿಕ ಸರಾಸರಿ ಮಳೆ 13 ಸೆಂಮೀ ವರ್ಷವಿಡೀ ಬಿಸಿಲಿನ ತಾಪ ಇರುತ್ತದೆ.

ಆರ್ಥಿಕತೆ[ಬದಲಾಯಿಸಿ]

ಇದು ಇಪ್ಪತ್ತನೆಯ ಶತಮಾನದ ಮಧ್ಯದವ ರೆಗೂ ಹಿಂದುಳಿದಿತ್ತು. ಮೀನುಗಾರಿಕೆ ಯೊಂದೇ ಆಗಿನ ಮುಖ್ಯ ಉದ್ಯೋಗ. ಆ ಶತಮಾನದ ಉತ್ತರಾರ್ಧದಲ್ಲಿ ತೈಲ ನಿಕ್ಷೇಪ ಪತ್ತೆಯಾದ ಮೇಲೆ ಇದು ಸಂಪದ್ಯುಕ್ತ ವೆನಿಸಿತು. ನಗರಗಳೂ ಆಧುನಿಕ ಕೈಗಾರಿಕೆಗಳೂ ಬೆಳೆದುವು. ಜನ ತೈಲ ಉದ್ದಿಮೆಗಳಲ್ಲಿ ಕೆಲಸಮಾಡಲು ಉದ್ಯೋಗ ಹೆಚ್ಚಿತು. 1970ರ ವೇಳೆಗೆ ಇದು ಪ್ರಪಂಚದ ಅಧಿಕ ವರಮಾನ ಪಡೆಯುವ ದೇಶಗಳ ಸಾಲಿಗೆ ಸೇರಿತು.

ಇಲ್ಲಿ ವ್ಯವಸಾಯಕ್ಕೆ ಯೋಗ್ಯವಾದ ಭೂಮಿ ಬಹಳ ಕಡಿಮೆ. ಒಟ್ಟು ಭೂಭಾಗದ ಕೇವಲ ಶೇ. 1 ರಷ್ಟು. ಇಲ್ಲಿನ ಮುಖ್ಯ ಆಹಾರ ಬೆಳೆಗಳು ತರಕಾರಿ ಮತ್ತು ಕಲ್ಲಂಗಡಿಹಣ್ಣು. ಮುಖ್ಯ ವಾಣಿಜ್ಯ ಬೆಳೆ ಖರ್ಜೂರ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲ್ಲಿಯ ಮುಖ್ಯಸಂಪ ನ್ಮೂಲಗಳು. ಇಲ್ಲಿ ಶಾಖ ಥರ್ಮಲ್ ವಿದ್ಯುಚ್ಛಕ್ತಿಯನ್ನೂ ಉತ್ಪಾದಿಸಲಾಗುತ್ತದೆ.

ಇಲ್ಲಿಯ ಮುಖ್ಯ ಉದ್ದಿಮೆಗಳು ಮೀನುಗಾರಿಕೆ, ಪೆಟ್ರೋ-ರಾಸಾಯನಿಕಗಳು, ಕಟ್ಟಡ ಸಾಮಗ್ರಿಗಳ ಉತ್ಪಾದನೆ, ದೋಣಿ ನಿರ್ಮಾಣ, ಕರಕುಶಲವಸ್ತುಗಳ ತಯಾರಿಕೆ ಮತ್ತು ಮುತ್ತುಗಳ ಸಂಗ್ರಹ.

ಸಾರಿಗೆ[ಬದಲಾಯಿಸಿ]

ಭೂ ಪ್ರದೇಶ ಮರುಭೂಮಿ ಯಿಂದ ಕೂಡಿರುವುದರಿಂದ ರೈಲುಮಾರ್ಗಗಳಿಲ್ಲ. ಸು. 2,000 ಕಿಮೀ ಹೆದ್ದಾರಿ, 1800 ಕಿಮೀ ಸಾಧಾರಣ ರಸ್ತೆ ಇವೆ.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: