ಸೌರ ಶಕ್ತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಯುನೈಟೆಡ್‌‌ ಸ್ಟೇಟ್ಸ್‌‌ನಲ್ಲಿರುವ ನೆಲ್ಲಿಸ್‌‌ ಸೌರ ವಿದ್ಯುಚ್ಛಕ್ತಿ ಕೇಂದ್ರ/ಘಟಕ, ಇದು ಉತ್ತರ ಅಮೇರಿಕಾದಲ್ಲೇ ಅತಿದೊಡ್ಡ ದ್ಯುತಿವಿದ್ಯುಜ್ಜನಕ ವಿದ್ಯುಚ್ಛಕ್ತಿ ಕೇಂದ್ರ/ಘಟಕವಾಗಿದೆ.

ಸೌರ ಶಕ್ತಿ ಯೂ ಸೇರಿದಂತೆ ಸೂರ್ಯನಿಂದ ಹೊರಬರುವ ಪ್ರಜ್ವಲಿಸುವ ಬೆಳಕು ಮತ್ತು ಶಾಖಗಳನ್ನು, ಪ್ರಾಚೀನ ಕಾಲದಿಂದಲೂ ವಿಕಸಿಸುತ್ತಲೇ ಇರುವ ವಿಧವಿಧವಾದ ತಂತ್ರಜ್ಞಾನಗಳನ್ನು ಬಳಸಿಕೊಂಡು ಉಪಯುಕ್ತ ಶಕ್ತಿಯ ರೂಪವನ್ನಾಗಿ ಮಾನವರು ಬಳಸುತ್ತಲೇ ಬಂದಿದ್ದಾರೆ. ಭೂಮಿಯಲ್ಲಿ ಲಭ್ಯವಿರುವ ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳಲ್ಲಿ ಸೂರ್ಯಕಿರಣಗಳ ಪ್ರಸರಣವು ಗಾಳಿ/ವಾಯು ಮತ್ತು ತರಂಗ/ಅಲೆ ಶಕ್ತಿಗಳಂತಹಾ ಪರೋಕ್ಷ ಸೌರಶಕ್ತಿ-ಚಾಲಿತ ಸಂಪನ್ಮೂಲಗಳೊಂದಿಗೆ, ಜಲವಿದ್ಯುಚ್ಛಕ್ತಿ ಮತ್ತು ಜೀವರಾಶಿಗಳು ಸೇರಿವೆ. ಲಭ್ಯವಿರುವ ಸೌರ ಶಕ್ತಿಯಲ್ಲಿ ತೀರ ಅಲ್ಪ ಪ್ರಮಾಣವನ್ನಷ್ಟು ಮಾತ್ರವೇ ಬಳಸಲಾಗುತ್ತಿದೆ.

ಶಾಖಚಾಲಿತ ಎಂಜಿನ್‌ಗಳು ಮತ್ತು ದ್ಯುತಿವಿದ್ಯುಜ್ಜನಕಗಳ ಮೇಲೆ ಸೌರಶಕ್ತಿ ಚಾಲಿತ ವಿದ್ಯುಚ್ಛಕ್ತಿ ಉತ್ಪಾದನೆಯು ಅವಲಂಬಿತವಾಗಿರುತ್ತದೆ. ಸೌರ ಶಕ್ತಿಯ ಪ್ರಯೋಜನಗಳು ಅಮಿತವಾಗಿದ್ದು ಕೇವಲ ಅದನ್ನು ಬಳಸಿಕೊಳ್ಳುವ ಮಾನವನ ಚಾತುರ್ಯವೇ ಮಿತಿಯಾಗಿದೆ. ಸ್ಥಳವನ್ನು ಶಾಖಪೂರಿತಗೊಳಿಸುವಿಕೆ ಮತ್ತು ಸೌರ ವಾಸ್ತುಕಲೆ/ಸಂರಚನೆಗಳ ಮೂಲಕ ತಂಪುಗೊಳಿಸುವಿಕೆ, ಶುದ್ಧೀಕರಣ ಮತ್ತು ಸೋಂಕು ನಿವಾರಣೆಗಳ ಮೂಲಕ ನೀರನ್ನು ಕುಡಿಯಲು ಯೋಗ್ಯಗೊಳಿಸುವುದು, ಹಗಲು ಶಕ್ತಿಯುಳಿತಾಯ, ಸೌರ ಬಿಸಿನೀರು, ಸೌರಶಕ್ತಿಯಿಂದ ಅಡಿಗೆ ಮಾಡುವಿಕೆ, ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಅತ್ಯಧಿಕ ತಾಪಮಾನ ಪ್ರಕ್ರಿಯೆಗಳಲ್ಲಿ ಸೌರಶಾಖದ ಬಳಕೆಗಳು ಸೌರ ಉಪಯುಕ್ತತೆ/ಅನ್ವಯಗಳ ಭಾಗಶಃ ಪಟ್ಟಿಯಲ್ಲಿ ಸೇರಿವೆ.ಸೌರ ಶಕ್ತಿಯ ಉಪಯೋಗ ಪಡೆದುಕೊಳ್ಳಲು ಸರ್ವೇ ಸಾಧಾರಣವಾದ ವಿಧಾನವು ಸೌರ ಫಲಕಗಳ ಬಳಕೆಯಾಗಿದೆ.

ಸೌರಶಕ್ತಿಯನ್ನು ಸೆರೆಹಿಡಿಯುವಿಕೆಯ ತಂತ್ರಜ್ಞಾನಗಳಲ್ಲಿ ಪರಿವರ್ತನೆಯ ಮತ್ತು ಸೌರ ಶಕ್ತಿಯ ವಿತರಣೆಯ ವಿಧಾನಗಳ ಮೇಲೆ ಸೌರ ತಂತ್ರಜ್ಞಾನಗಳನ್ನು ಸ್ಥೂಲವಾಗಿ ಅಪ್ರವರ್ತಕ ಸೌರತಂತ್ರಜ್ಞಾನ ಅಥವಾ ಕ್ರಿಯಾತ್ಮಕ ಸೌರತಂತ್ರಜ್ಞಾನವೆಂಬುದಾಗಿ ವಿಂಗಡಿಸಬಹುದಾಗಿರುತ್ತದೆ. ಕ್ರಿಯಾತ್ಮಕ ಸೌರ ಪ್ರಕ್ರಿಯೆಗಳಲ್ಲಿ ದ್ಯುತಿವಿದ್ಯುಜ್ಜನಕ ಫಲಕಗಳ ಬಳಕೆ ಮತ್ತು ಶಕ್ತಿಯನ್ನು ಬಳಸಿಕೊಳ್ಳಲು ಸೌರ ಉಷ್ಣಧಾರಕ ಸಂಗ್ರಾಹಕಗಳ ಬಳಕೆಗಳು ಸೇರಿವೆ. ಅಪ್ರವರ್ತಕ ಸೌರ ಪ್ರಕ್ರಿಯೆಗಳಲ್ಲಿ ಕಟ್ಟಡಗಳನ್ನು ಸೂರ್ಯಾಭಿಮುಖವಾಗಿರುವಂತೆ ರೂಪಿಸುವುದು, ಉಷ್ಣವನ್ನು ಹಿಡಿದಿಟ್ಟುಕೊಳ್ಳುವ ದ್ರವ್ಯರಾಶಿಗಳ ಬಳಕೆ ಅಥವಾ ಬೆಳಕನ್ನು ಚದುರಿಸುವ ಲಕ್ಷಣಗಳನ್ನು ಹೊಂದಿರುವ ವಸ್ತುಗಳ ಬಳಕೆ ಹಾಗೂ ವಾಸಸ್ಥಳಗಳಲ್ಲಿ ನೈಸರ್ಗಿಕವಾಗಿ ಗಾಳಿಸಂಚಾರ ಉಂಟಾಗಿಸುವಂತೆ ವಿನ್ಯಾಸಗೊಳಿಸುವುದು ಸೇರಿರುತ್ತವೆ.

ಪರಿವಿಡಿ

ಸೂರ್ಯನಿಂದ ಲಭ್ಯವಾಗುವ ಶಕ್ತಿ[ಬದಲಾಯಿಸಿ]

Main articles: Insolationಮತ್ತು Solar radiation
ಒಳಬರುವ ಸೌರ ಶಕ್ತಿಯ ಅರ್ಧದಷ್ಟು ಭೂಮಿಯ ಮೇಲ್ಮೈಯನ್ನು ತಲುಪುತ್ತದೆ.

ಭೂಮಿಯು ೧೭೪ ಪೆಟಾವಾಟ್‌‌ಗಳಷ್ಟು (PW) ಅವನತಮುಖಿ ಸೌರ ಪ್ರಸರಣ/ವಿಕಿರಣಗಳನ್ನು (ಬಿಸಿಲೂಡಿಕೆ/ಬಿಸಿಲು ಕಾಯಿಸುವುದು) ಊರ್ಧ್ವ ವಾತಾವರಣ/ವಾಯುಮಂಡಲದ ಪ್ರದೇಶದಲ್ಲಿ ಪಡೆಯುತ್ತದೆ.[೧] ಇದರಲ್ಲಿ ಸರಿ ಸುಮಾರು ೩೦%ರಷ್ಟನ್ನು ಆಕಾಶಕ್ಕೆ ಪ್ರತಿಫಲಿಸಿದರೆ ಉಳಿದದ್ದನ್ನು ಮೋಡಗಳು, ಮಹಾಸಾಗರಗಳು ಮತ್ತು ವ್ಯಾಪಕ ಭೂಮಿಯ ಪ್ರದೇಶಗಳು ಹೀರಿಕೊಳ್ಳುತ್ತವೆ. ಭೂಮಿಯ ಮೇಲ್ಮೈನಲ್ಲಿನ ಸೌರ ಬೆಳಕಿನ/ಬಿಸಿಲಿನ ರೋಹಿತವು ದೃಕ್‌-ವ್ಯಾಪ್ತಿಯಿಂದ ಸಮೀಪ-ನೇರಳಾತೀತ ವರ್ಣವ್ಯಾಪ್ತಿಗೆ ಸೇರಿದ ಕೆಲವರ್ಣಗಳೂ ಸೇರಿದಂತೆ ಅವಕೆಂಪು ಬಣ್ಣಕ್ಕೆ ಹತ್ತಿರದ ವ್ಯಾಪ್ತಿಯ ವರ್ಣಗಳವರೆಗೆ ಹರಡಿದೆ.[೨]

ಭೂಮಂಡಲದ ಮೇಲ್ಮೈನ ಭೂಪ್ರದೇಶಗಳು, ಮಹಾಸಾಗರಗಳು ಮತ್ತು ವಾತಾವರಣ/ವಾಯುಮಂಡಲವು ಸೌರ ಪ್ರಸರಣ/ವಿಕಿರಣವನ್ನು ಹೀರಿಕೊಳ್ಳುತ್ತವೆ, ಇದರಿಂದಾಗಿ ಅವುಗಳ ತಾಪಮಾನವೂ ಕೂಡಾ ಹೆಚ್ಚಳಗೊಳ್ಳುತ್ತದೆ. ಆವಿಯಾದ ನೀರನ್ನು ಒಳಗೊಂಡ ಬಿಸಿ ಗಾಳಿಯು ಮಹಾಸಾಗರಗಳಿಂದ ಮೇಲ್ಮುಖವಾಗಿ ಹೊರಹೊಮ್ಮುವುದರಿಂದಾಗಿ ವಾಯುಮಂಡಲದಲ್ಲಿ ಉಷ್ಣಹರಿವು ಅಥವಾ ಉಷ್ಣ ಸಂವಹನ ಉಂಟಾಗುತ್ತದೆ. ವಾಯುಮಂಡಲದಲ್ಲಿ ತಾಪಮಾನವು ಕಡಿಮೆಯಾಗಿರುವ ಎತ್ತರದ ಪ್ರದೇಶಕ್ಕೆ ಗಾಳಿಯು ತಲುಪಿದಾಗ ನೀರಾವಿಯು ಘನೀಕೃತಗೊಳ್ಳುವುದರಿಂದಾಗಿ ಮೋಡಗಳುಂಟಾಗುತ್ತದೆ, ಇವು ತದನಂತರ ಭೂಮೇಲ್ಮೈ ಪ್ರದೇಶದ ಮೇಲೆ ಮಳೆ ಸುರಿಸಿ ಜಲಚಕ್ರವನ್ನು ಪೂರ್ಣಗೊಳಿಸುತ್ತವೆ. ನೀರಿನ ಘನೀಕರಣದಿಂದುಂಟಾಗುವ ಗುಪ್ತೋಷ್ಣವು ಉಷ್ಣ ಸಂವಹನವನ್ನು ವರ್ಧಿಸುವುದರಿಂದಾಗಿ ಗಾಳಿ, ಚಂಡಮಾರುತಗಳು ಮತ್ತು ಬಹಿರ್ಮುಖ/ವಿರುದ್ಧಮಾರುತಗಳಂತಹಾ ವಾತಾವರಣದ ವಿದ್ಯಮಾನಗಳಿಗೆ ಕಾರಣವಾಗುತ್ತವೆ.[೩] ಮಹಾಸಾಗರಗಳು ಮತ್ತು ವ್ಯಾಪಕ ಭೂಪ್ರದೇಶವು ಹೀರಿಕೊಳ್ಳುವ ಬಿಸಿಲು/ಸೂರ್ಯನ ಬೆಳಕು ಭೂಮೇಲ್ಮೈಯನ್ನು ೧೪ °Cಯ ಸರಾಸರಿ ತಾಪಮಾನವನ್ನು ಕಾಪಿಟ್ಟುಕೊಳ್ಳುತ್ತದೆ.[೪] ದ್ಯುತಿಸಂಶ್ಲೇಷಣೆಯ ಪ್ರಕ್ರಿಯೆಯಿಂದಾಗಿ ಹಸಿರು ಸಸ್ಯಗಳು ಸೌರ ಶಕ್ತಿಯನ್ನು ರಾಸಾಯನಿಕ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ, ಅದು ಪ್ರತಿಯಾಗಿ ಆಹಾರ, ಮರಮುಟ್ಟುಗಳು ಮತ್ತು ಪಳೆಯುಳಿಕೆ ಉರುವಲುಗಳನ್ನು ತಯಾರಿಸುವ ಜೀವರಾಶಿಗಳನ್ನು ರೂಪಿಸುತ್ತದೆ.[೫]

ವಾರ್ಷಿಕ ಸೌರ ಪ್ರವಾಹಗಳು & ಮಾನವರು ಬಳಸಿಕೊಂಡ ಶಕ್ತಿಯ ಪರಿಮಾಣ
ಸೌರ ಶಕ್ತಿ 3,850,000 EJ[೬]
ಗಾಳಿ 2,250 EJ[೭]
ಜೀವರಾಶಿ ೩,೦೦೦ EJ[೮]
ಶಕ್ತಿಯ ಪ್ರಧಾನ/ಪ್ರಾಥಮಿಕ ಬಳಕೆ (೨೦೦೫) ೪೮೭ EJ[೯]
ವಿದ್ಯುಚ್ಛಕ್ತಿ (೨೦೦೫) ೫೬.೭ EJ[೧೦]

ಭೂಮಿಯ ವಾತಾವರಣ/ವಾಯುಮಂಡಲ, ಮಹಾಸಾಗರಗಳು ಮತ್ತು ಭೂಪ್ರದೇಶಗಳಿಂದ ಹೀರಲ್ಪಡುವ ಒಟ್ಟಾರೆ ಸೌರ ಶಕ್ತಿಯು ವಾರ್ಷಿಕವಾಗಿ ಸರಿಸುಮಾರು ೩,೮೫೦,೦೦೦ ಎಕ್ಸಾಜೌಲ್‌ಗಳಷ್ಟು (EJ) ಪರಿಮಾಣದ್ದಾಗಿರುತ್ತದೆ.[೬] ೨೦೦೨ನೇ ಇಸವಿಗೆ ಸಂಬಂಧಿಸಿದಂತೆ, ಈ ಪ್ರಮಾಣವು ಒಂದು ಗಂಟೆಯಲ್ಲಿ ಹೀಗೆ ಹೀರಿದ ಶಕ್ತಿಯು ಇಡೀ ವಿಶ್ವವು ಒಂದು ವರ್ಷದಲ್ಲಿ ಹೀರಿದುದಕ್ಕಿಂತ ಹೆಚ್ಚಿನ ಪ್ರಮಾಣದ್ದಾಗಿತ್ತು.[೧೧][೧೨] ಜೀವರಾಶಿಗಳಲ್ಲಿ ನಡೆಯುವ ದ್ಯುತಿಸಂಶ್ಲೇಷಣೆ ಪ್ರಕ್ರಿಯೆಯು ವಾರ್ಷಿಕವಾಗಿ ಸರಿಸುಮಾರು ೩,೦೦೦ EJಗಳಷ್ಟು ಶಕ್ತಿಯನ್ನು ಹೀರಿಕೊಳ್ಳುತ್ತದೆ.[೮] ಈ ಭೂಮಂಡಲದ ಮೇಲ್ಮೈಗೆ ತಲುಪುವ ಸೌರ ಶಕ್ತಿಯ ಪ್ರಮಾಣ ಎಷ್ಟು ಅಗಾಧವಾದುದೆಂದರೆ ಲಭ್ಯವಿರುವ ಭೂಮಿಯ ನವೀಕರಿಸಲಾಗದ ಶಕ್ತಿ ಸಂಪನ್ಮೂಲಗಳಾದ ಕಲ್ಲಿದ್ದಲು, ತೈಲ, ನೈಸರ್ಗಿಕ ಅನಿಲ ಮತ್ತು ಗಣಿಗಾರಿಕೆಯಿಂದ ಪಡೆದ ಯುರೇನಿಯಮ್‌‌ಗಳೆಲ್ಲವನ್ನೂ ನಿಶ್ಶೇಷವಾಗಿ ಭೂಮಿಯಿಂದ ಹೊರತೆಗೆದು ಬಳಸಿದಾಗ ಸಿಗಬಹುದಾದ ಶಕ್ತಿಯೆಲ್ಲವನ್ನೂ ಒಟ್ಟು ಮಾಡಿದರೆ ಸಿಗುವ ಶಕ್ತಿಯ ಸುಮಾರು ಎರಡು ಪಟ್ಟು ಪ್ರಮಾಣದ್ದಾಗಿರುತ್ತದೆ.[೧೩]

ಸಂಪನ್ಮೂಲಗಳ ಪಟ್ಟಿಯನ್ನು ಗಮನಿಸುವುದಾದರೆ ಸೌರಶಕ್ತಿ, ವಾಯುಶಕ್ತಿ ಅಥವಾ ಜೀವದ್ರವ್ಯರಾಶಿಶಕ್ತಿಗಳಲ್ಲಿ ಯಾವುದೇ ಒಂದು ನಮ್ಮ ಮನುಕುಲಕ್ಕೆ ಬೇಕಾದ ಸಂಪೂರ್ಣ ಶಕ್ತಿಯ ಅಗತ್ಯತೆಗಳನ್ನು ಪೂರೈಸಲು ಸಾಕಾಗುವುದಾದರೂ ಜೀವದ್ರವ್ಯರಾಶಿಯ ಅತಿಯೆನಿಸುಷ್ಟು ಪ್ರಮಾಣದ ಬಳಕೆಯು ಜಾಗತಿಕ ತಾಪಮಾನ ಏರಿಕೆಯಂತಹಾ ಅಡ್ಡ/ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡುವುದರಿಂದಾಗಿ, ಅರಣ್ಯಗಳು ಮತ್ತು ಬೆಳೆಗಳನ್ನು ಜೈವಿಕ ಇಂಧನ ಉತ್ಪಾದನೆಗೆ ಅನುಕೂಲವಾಗುವಂತೆ ಮಾರ್ಪಡಿಸಿದುದರ ಪರಿಣಾಮವಾಗಿ ಹಠಾತ್ತಾಗಿ ಆಹಾರದರಗಳಲ್ಲಿ ಹೆಚ್ಚಳದ ಅಡ್ಡಪರಿಣಾಮವೂ ಉಂಟಾಗುತ್ತಿದೆ.[೧೪] ಆಗ್ಗಾಗ್ಗೆ ಬಳಕೆಗೆ ಒದಗುವ ಸಂಪನ್ಮೂಲಗಳಾಗಿ, ಸೌರಶಕ್ತಿ ಮತ್ತು ವಾಯುಶಕ್ತಿಗಳೂ ತಮ್ಮದೇ ಆದ ಇತರೆ ಸಮಸ್ಯೆಗಳನ್ನು ಒಡ್ಡುತ್ತವೆ.

ಜಗತ್ತಿನ ವಿವಿಧ ಭಾಗಗಳಲ್ಲಿ ವಿವಿಧ ಮಟ್ಟದಲ್ಲಿ ಸೌರ ಶಕ್ತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಭೌಗೋಳಿಕ ಸ್ಥಾನವನ್ನನುಸರಿಸಿ ಹೇಳುವುದಾದರೆ ಸ್ಥಳವು ಭೂಮಧ್ಯರೇಖೆಗೆ ಸಮೀಪವಿದ್ದಷ್ಟು ಸೌರ ಶಕ್ತಿಯು ಹೆಚ್ಚು ದೊರಕಬಹುದಾದ "ಸಂಭಾವ್ಯತೆಯು" ಹೆಚ್ಚಿರುತ್ತದೆ.[೧೫]

ಸೌರ ತಂತ್ರಜ್ಞಾನದ ಉಪಯುಕ್ತತೆ/ಅನ್ವಯಗಳು[ಬದಲಾಯಿಸಿ]

ವಿಶ್ವದ ಪ್ರಧಾನ ವಿದ್ಯುತ್‌/ಶಕ್ತಿ ಸರಬರಾಜನ್ನು ಸೌರ ವಿದ್ಯುಚ್ಛಕ್ತಿಯೊಂದಿಗೆ ಬದಲಾಯಿಸಲು ಬೇಕಾದ ಸರಾಸರಿ ಬಿಸಿಲೂಡಿಕೆ/ಬಿಸಿಲು ಕಾಯಿಸುವ ಭೂಪ್ರದೇಶದ ವಿಸ್ತಾರ (ಸಣ್ಣ ಕಪ್ಪು ಚುಕ್ಕಿಗಳು). 18 TW ಎಂದರೆ ವಾರ್ಷಿಕ 568 ಎಕ್ಸಾಜೌಲಗಳು (EJ).ಬಹುತೇಕ ಜನರಿಗೆ ಬಿಸಿಲೂಡಿಕೆ/ಬಿಸಿಲು ಕಾಯಿಸುವುದು ಎಂದರೆ 150ರಿಂದ 300 W/m²ವರೆಗೆ ಅಥವಾ 3.5ರಿಂದ 7.0 kWh/m²/ದಿನಕ್ಕೆ ಬಳಕೆಯಾಗುತ್ತದೆ.

ಸೌರ ಶಕ್ತಿಯನ್ನು ಪ್ರಮುಖವಾಗಿ ಕಾರ್ಯಶೀಲ ಉಪಯುಕ್ತತೆಯ ದೃಷ್ಟಿಯಿಂದ ಸೌರ ಪ್ರಸರಣ/ವಿಕಿರಣದ ಬಳಕೆಗೆ ಅನ್ವಯಿಸುತ್ತಾರೆ. ಅದೇನೇ ಆದರೂ, ಭೂಶಾಖದ ಶಕ್ತಿ ಮತ್ತು ಉಬ್ಬರವಿಳಿತದ ಶಕ್ತಿಗಳನ್ನು ಹೊರತುಪಡಿಸಿದರೆ ಎಲ್ಲಾ ನವೀಕರಿಸಬಹುದಾದ ಶಕ್ತಿಮೂಲಗಳು ತಮ್ಮ ಶಕ್ತಿಯನ್ನು ಸೂರ್ಯನಿಂದಲೇ ಪಡೆಯುತ್ತವೆ.

ಸೌರ ತಂತ್ರಜ್ಞಾನಗಳನ್ನು ಅಪ್ರವರ್ತಕ ಸೌರತಂತ್ರಜ್ಞಾನ ಅಥವಾ ಕ್ರಿಯಾತ್ಮಕ ಸೌರ ತಂತ್ರಜ್ಞಾನವೆಂದು ಅವು ಬಿಸಿಲು/ಸೂರ್ಯನ ಬೆಳಕನ್ನು ಅವು ಹೀರಿಕೊಳ್ಳುವ, ಪರಿವರ್ತನೆಯ ಹಾಗೂ ಶಕ್ತಿ ವಿತರಣೆಯ ವಿಧಾನಗಳ ಮೇಲೆ ಆಧಾರಿತವಾಗಿ ಸ್ಥೂಲವಾಗಿ ವಿಂಗಡಿಸಬಹುದಾಗಿರುತ್ತದೆ. ದ್ಯುತಿವಿದ್ಯುಜ್ಜನಕ ಫಲಕಗಳು, ನೀರೆತ್ತುವ ಯಂತ್ರ/ಪಂಪ್‌ಗಳು ಮತ್ತು ಬೀಸಣಿಗೆ/ಫ್ಯಾನ್‌‌ಗಳನ್ನು ಬಿಸಿಲು/ಸೂರ್ಯನ ಬೆಳಕನ್ನು ಉಪಯುಕ್ತ ಶಕ್ತಿಯ ರೂಪವನ್ನಾಗಿ ಪರಿವರ್ತಿಸಲು ಕ್ರಿಯಾತ್ಮಕ ಸೌರ ಪ್ರಕ್ರಿಯೆಗಳು ಬಳಸುತ್ತವೆ. ಉಪಯುಕ್ತ ಶಾಖಧಾರಕ ಲಕ್ಷಣಗಳಿರುವ ವಸ್ತುಗಳನ್ನು ಆಯ್ಕೆ ಮಾಡುವ ಮೂಲಕ, ನೈಸರ್ಗಿಕವಾಗಿ ಗಾಳಿ ಸಂಚಾರ ಉಂಟಾಗುವಂತೆ ಸ್ಥಳಗಳನ್ನು ವಿನ್ಯಾಸ ಮಾಡುವ ಮೂಲಕ ಹಾಗೂ ಕಟ್ಟಡಗಳನ್ನು ಸೂರ್ಯಾಭಿಮುಖವಾಗಿ ಕಟ್ಟುವ ಪ್ರಕ್ರಿಯೆಗಳು ಅಪ್ರವರ್ತಕ ಸೌರ ಪ್ರಕ್ರಿಯೆಗಳು ಎನಿಸಿಕೊಳ್ಳುತ್ತವೆ. ಕ್ರಿಯಾತ್ಮಕ ಸೌರ ತಂತ್ರಜ್ಞಾನಗಳು ಶಕ್ತಿಯ ಸರಬರಾಜು/ಲಭ್ಯತೆ/ಪೂರೈಕೆಯನ್ನು ಹೆಚ್ಚಿಸುವುದರಿಂದ ಅವುಗಳನ್ನು ಪೂರೈಕೆ/ಸರಬರಾಜು ಪರ ತಂತ್ರಜ್ಞಾನಗಳೆಂದು ಪರಿಗಣಿಸಿದರೆ, ಅಪ್ರವರ್ತಕ ಸೌರ ತಂತ್ರಜ್ಞಾನಗಳು ಪರ್ಯಾಯ ಸಂಪನ್ಮೂಲಗಳ ಅಗತ್ಯತೆಯನ್ನು ಕಡಿಮೆ ಮಾಡುವುದರಿಂದಾಗಿ ಬೇಡಿಕೆ ಪರ ತಂತ್ರಜ್ಞಾನಗಳೆಂದು ಪರಿಗಣಿಸಲಾಗುತ್ತದೆ.[೧೬]

ವಾಸ್ತುಶಿಲ್ಪ ಮತ್ತು ನಗರ ಯೋಜನೆ[ಬದಲಾಯಿಸಿ]

Main articles: Passive solar building designಮತ್ತು Urban heat island
ಜರ್ಮನಿಯ ಡಾರ್ಮ್‌ಸ್ಟಾಡ್ಟ್‌‌‌ ಯೂನಿವರ್ಸಿಟಿ ಆಫ್‌ ಟೆಕ್ನಾಲಜಿ ಎಂಬ ವಿಶ್ವವಿದ್ಯಾಲಯವು ವಾಷಿಂಗ್ಟನ್‌, D.C.ಯಲ್ಲಿ ನಡೆದ ಸೌರ ಸ್ಪರ್ಧಾದಶಕವನ್ನು ತೇವಾಂಶಪೂರಿತ ಹಾಗೂ ಉಷ್ಣತೆಯಿರುವ ಉಷ್ಣವಲಯದ ಪ್ರದೇಶಗಳಿಗೆಂದೇ ನಿರ್ದಿಷ್ಟವಾಗಿ ವಿನ್ಯಾಸ ಮಾಡಿರುವ ಈ ಅಪ್ರವರ್ತಕ ಗೃಹವು 2007ರ ಸಾಲಿನಲ್ಲಿ ಗೆದ್ದಿತು.[೧೭]

ವಾಸ್ತುಶಿಲ್ಪಶಾಸ್ತ್ರದ ಇತಿಹಾಸದ ಆರಂಭದಿಂದಲೂ ಬಿಸಿಲು/ಸೂರ್ಯನ ಬೆಳಕು ಕಟ್ಟಡದ ವಿನ್ಯಾಸದ ಮೇಲೆ ಪ್ರಭಾವ ಬೀರುತ್ತಲೇ ಬಂದಿದೆ.[೧೮] ಸುಧಾರಿತ ಸೌರ ವಾಸ್ತುಕಲೆ/ಸಂರಚನೆ ಮತ್ತು ನಗರಪ್ರದೇಶ ಯೋಜನಾ ವಿಧಾನಗಳನ್ನು ಮೊದಲಿಗೆ ಬಳಸಿದ್ದು ಗ್ರೀಕರು ಮತ್ತು ಚೀನೀಯರು, ಇವರು ಬೆಳಕು ಮತ್ತು ಬೆಚ್ಚಗಿನ ವಾತಾವರಣ ಉಂಟು ಮಾಡಲು ಕಟ್ಟಡಗಳನ್ನು ದಕ್ಷಿಣಕ್ಕೆ ಮುಖ ಮಾಡುವಂತೆ ನಿರ್ಮಿಸುತ್ತಿದ್ದರು.[೧೯]

ಸೂರ್ಯನಿಗೆ ಅಭಿಮುಖವಾಗಿರುವಂತೆ ಇರುವುದು, ಅಡಕವಾಗುವ ಪರಿಮಾಣ (ಮೇಲ್ಮೈ ಪ್ರದೇಶ ಮತ್ತು ಘನ ಅಳತೆಗಳ ನಡುವಿನ ಅನುಪಾತ ಅಲ್ಪವಿರುತ್ತದೆ), ಆಯ್ದ ನೆರಳುಬೆಳಕಿನ ಸಂಯೋಜನೆ (ಮೇಲೆ ಚಾಚಿರುವುದರ ಪ್ರಮಾಣ) ಮತ್ತು ಶಾಖಧಾರಕ ದ್ರವ್ಯರಾಶಿಗಳು ಅಪ್ರವರ್ತಕ ಸೌರ ವಾಸ್ತುಕಲೆ/ಸಂರಚನೆಯಲ್ಲಿ ಸಾಧಾರಣವಾಗಿ ಕಂಡುಬರುವ ಗುಣಲಕ್ಷಣಗಳು.[೧೮] ಈ ರೀತಿಯ ಗುಣಲಕ್ಷಣಗಳನ್ನು ಸ್ಥಳೀಯ ವಾತಾವರಣ ಮತ್ತು ಪರಿಸರಕ್ಕೆ ಅನುಗುಣವಾಗಿ ರೂಪಿಸಿದಾಗ ಅವು ಉತ್ತಮ ಬೆಳಕಿನಿಂದ ಕೂಡಿದ ಹಿತಕರ ಸಮಶೀತೋಷ್ಣ ವ್ಯಾಪ್ತಿಯ ತಾಪಮಾನವನ್ನು ಹೊಂದಿರುವ ಸ್ಥಳಾವಕಾಶಗಳನ್ನು ಒದಗಿಸಿಕೊಡುತ್ತದೆ. ಅಪ್ರವರ್ತಕ ಸೌರ ವಾಸ್ತು ವಿನ್ಯಾಸಕ್ಕೆ ಸಾಕ್ರಟೀಸ್‌ ಮೆಗರಾನ್‌‌ರ ಗೃಹವು ಶ್ರೇಷ್ಠ ಉದಾಹರಣೆಯಾಗಿದೆ.[೧೮] ಸೌರ ವಾಸ್ತು ವಿನ್ಯಾಸದ ಇತ್ತೀಚಿನ ವಿಧಾನಗಳು ಸೌರ ಬೆಳಕಿನ, ತಾಪನದ ಮತ್ತು ವಾತಾಯನ ವ್ಯವಸ್ಥೆಗಳನ್ನು ಒಟ್ಟುಗೂಡಿಸಿ ರಚಿಸಿದ ಸೌರ ವಿನ್ಯಾಸ ಪ್ಯಾಕೇಜಿನ ಮೂಲಕ ಸಿದ್ಧಪಡಿಸಿದ ಗಣಕೀಕೃತ ವಿನ್ಯಾಸಶೈಲಿಯನ್ನು ಒಳಗೊಂಡಿರುತ್ತವೆ.[೨೦] ಕ್ರಿಯಾತ್ಮಕ ಸೌರ ಉಪಕರಣಗಳಾದ ನೀರೆತ್ತುವ ಯಂತ್ರ/ಪಂಪ್‌ಗಳು, ಬೀಸಣಿಗೆ/ಫ್ಯಾನ್‌‌ಗಳನ್ನು ಮತ್ತು ಬದಲಿಸಬಲ್ಲ ಕಿಟಕಿಗಳು ಅಪ್ರವರ್ತಕ ವಿನ್ಯಾಸಕ್ಕೆ ಪೂರಕವಾಗಿರುತ್ತದಲ್ಲದೇ ವ್ಯವಸ್ಥೆಯ ನಿರ್ವಹಣೆಯನ್ನು ಸುಧಾರಿಸುತ್ತದೆ.

ಸುತ್ತಮುತ್ತಲಿನ ಪ್ರದೇಶದ ವಾತಾವರಣದಲ್ಲಿನ ಉಷ್ಣತೆಗಿಂತ ಹೆಚ್ಚಿನ ಪ್ರಮಾಣದ ಉಷ್ಣತೆಯನ್ನು ಹೊಂದಿರುವ ಮಹಾನಗರ ಪ್ರದೇಶಗಳಿಗೆ ನಗರ ಪ್ರದೇಶೀಯ ಉಷ್ಣ ದ್ವೀಪಗಳು (UHI) ಎಂದು ಕರೆಯಲಾಗುತ್ತದೆ. ಕಲ್ಲರಗು/ಕಪ್ಪುರಾಳ ಮತ್ತು ಗಾರೆ ಮಿಶ್ರಣದಂತಹಾ ನೈಸರ್ಗಿಕ ಪರಿಸರಕ್ಕಿಂತ ಕಡಿಮೆ ಪ್ರತಿಫಲನಾಂಕವನ್ನು ಮತ್ತು ಹೆಚ್ಚಿನ ಉಷ್ಣತಾ ಸಾಮರ್ಥ್ಯವನ್ನು ಹೊಂದಿರುವಂತಹಾ ಮಹಾನಗರ ಪ್ರದೇಶದಲ್ಲಿ ಬಳಕೆಯ ವಸ್ತುಗಳು ಸೂರ್ಯನ ಬೆಳಕನ್ನು/ಬಿಸಿಲನ್ನು ಹೆಚ್ಚಾಗಿ ಹೀರುವುದರಿಂದಾಗಿ ಹೀಗೆ ಹೆಚ್ಚಿನ ಉಷ್ಣಾಂಶವು ಉಂಟಾಗುತ್ತದೆ. ಈ ತರಹದ UHI ಪರಿಣಾಮವನ್ನು ನಿಷ್ಫಲಗೊಳಿಸುವ/ಕಡಿಮೆ ಮಾಡುವ ನೇರಾನೇರ/ಸರಳ ವಿಧಾನವೆಂದರೆ ಕಟ್ಟಡಗಳು ಮತ್ತು ರಸ್ತೆಗಳನ್ನು ಶ್ವೇತ/ಬಿಳಿ ವರ್ಣಮಯ ರಂಗನ್ನು ಬಳಿಯುವುದು ಹಾಗೂ ಮರಗಿಡಗಳನ್ನು ಬೆಳೆಸುವುದು. ಲಾಸ್‌‌ ಏಂಜಲೀಸ್‌‌ನಲ್ಲಿ ಈ ಎಲ್ಲಾ ವಿಧಾನಗಳಿಂದ ಕೂಡಿದ ಒಂದು ಊಹಾರೂಪದ "ತಂಪಾದ ಸಮುದಾಯ ವಲಯ" ಯೋಜನೆಯೊಂದು ಕಲ್ಪಿತವಾಗಿದ್ದು US$೧ ಶತಕೋಟಿ ಅಂದಾಜು ವೆಚ್ಚದ ಯೋಜನೆಯಿಂದ ಮಹಾನಗರ ಪ್ರದೇಶದ ತಾಪಮಾನವನ್ನು ಸರಿ ಸುಮಾರು ೩°Cಯಷ್ಟು ಕಡಿಮೆ ಮಾಡಬಹುದಾಗಿದ್ದು, ಇದರಿಂದಾಗಬಹುದಾದ ಅನುಕೂಲಗಳನ್ನು ಅಂದಾಜು ಮಾಡುವುದಾದರೆ ವಾರ್ಷಿಕವಾಗಿ ವಾತಾನುಕೂಲಿ ವ್ಯವಸ್ಥೆಯ ವೆಚ್ಚದಲ್ಲಾಗುವ ಇಳಿಕೆ ಮತ್ತು ಆರೋಗ್ಯ ಸೇವಾ ವೆಚ್ಚಗಳಲ್ಲಾಗುವ ಇಳಿಕೆಗಳಿಂದಾಗಿ ಸುಮಾರು US$೫೩೦ ದಶಲಕ್ಷ ಉಳಿತಾಯವಾಗಲಿದೆ.[೨೧]

ಕೃಷಿವಿಜ್ಞಾನ/ವ್ಯವಸಾಯಶಾಸ್ತ್ರ ಮತ್ತು ತೋಟಗಾರಿಕೆ[ಬದಲಾಯಿಸಿ]

ನೆದರ್‌ಲ್ಯಾಂಡ್ಸ್‌ನ ವೆಸ್ಟ್‌ಲ್ಯಾಂಡ್‌ ನಗರಸಭೆಯ ವ್ಯಾಪ್ತಿಯಲ್ಲಿರುವ ಈ ತರಹದ ಹಸಿರುಮನೆಗಳು ತರಕಾರಿಗಳು, ಹಣ್ಣುಗಳು ಮತ್ತು ಹೂವುಗಳನ್ನು ಬೆಳೆಯುತ್ತವೆ.]] ಕೃಷಿವಿಜ್ಞಾನ/ವ್ಯವಸಾಯಶಾಸ್ತ್ರ ಮತ್ತು ತೋಟಗಾರಿಕೆ ಶಾಸ್ತ್ರಗಳು ಸಸ್ಯಗಳ ಉತ್ಪಾದಕತೆಯನ್ನು ಅತ್ಯುತ್ತಮವಾಗಿಸಲು ಸೌರ ಶಕ್ತಿಯ ಸೆರೆಹಿಡಿಯುವಿಕೆಯನ್ನು ಅತ್ಯುತ್ತಮವಾಗಿಸಲು ಪ್ರಯತ್ನ ಮಾಡುತ್ತಿರುತ್ತವೆ. ಸಮಯಕ್ಕೆ ಸರಿಯಾಗಿ ಜರುಗುವ ಸಸಿಗಳನ್ನು ನೆಡುವ ಆವರ್ತ, ಸರಿಯಾದ ಕಡೆಗೆ ಅಭಿಮುಖವಾಗಿ ಸಾಲುಗಳನ್ನು ಮಾಡುವಿಕೆ, ಸಾಲುಗಳ ನಡುವೆ ಅಸಮವಾದ ಅಂತರವಿರುವುದು ಹಾಗೂ ವೈವಿಧ್ಯಮಯ ಸಸ್ಯಗಳನ್ನು ಸಾಲುಗಳ ನಡುವೆ ಬೆರೆಸಿ ನೆಡುವುದು ಮುಂತಾದ ಪ್ರಕ್ರಿಯೆಗಳು ಬೆಳೆಗಳು ನೀಡುವ ಫಸಲಿನ ಪ್ರಮಾಣವನ್ನು ಸುಧಾರಿಸುವ ಸಾಧ್ಯತೆಯಿರುತ್ತದೆ./ಸೂರ್ಯನ ಬೆಳಕನ್ನು ಸಾಧಾರಣವಾಗಿ ವಿಪುಲವಾಗಿ ದೊರೆಯುವ ಸಂಪನ್ಮೂಲವೆಂದು ಭಾವಿಸಲಾಗುವುದಾದರೂ, ಇದಕ್ಕಿರುವ ಅಪವಾದಗಳು ಕೃಷಿವಿಜ್ಞಾನ/ವ್ಯವಸಾಯಶಾಸ್ತ್ರದಲ್ಲಿ ಸೌರ ಶಕ್ತಿಗಿರುವ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುತ್ತದೆ. ಅಲ್ಪಾವಧಿಯ ಹಿಮಯುಗದಲ್ಲಿ ಅಲ್ಪ ಕಾಲದ ಬೆಳೆ ಬೆಳೆಯುವ ಋತುಗಳಲ್ಲಿ, ಫ್ರೆಂಚ್‌‌ ಮತ್ತು ಆಂಗ್ಲ ರೈತರು ಸೌರ ಶಕ್ತಿಯ ಸಂಗ್ರಹಣೆಯನ್ನು ಹೆಚ್ಚಿಸಿಕೊಳ್ಳಲು ಹಣ್ಣು/ಫಲಗಳ ಗೋಡೆ/ಭಿತ್ತಿಯನ್ನು ಕಟ್ಟುವ ತಂತ್ರವನ್ನು ಬಳಸಿಕೊಂಡಿದ್ದರು. ಈ ರೀತಿಯ ಗೋಡೆ/ಭಿತ್ತಿಗಳು ಉಷ್ಣಾಂಶ ದ್ರವ್ಯರಾಶಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದವಲ್ಲದೇ ಸಸ್ಯಗಳನ್ನು ಬೆಚ್ಚಗಿನ ಸ್ಥಿತಿಯಲ್ಲಿ ಕಾಪಾಡಿಕೊಂಡು ಪಕ್ವವಾಗುವ ಪ್ರಕ್ರಿಯೆಯ ವೇಗವನ್ನು ವರ್ಧಿಸುತ್ತಿತ್ತು. ಮೊದಮೊದಲಿನ ಹಣ್ಣು/ಫಲಗಳ ಗೋಡೆ/ಭಿತ್ತಿಗಳನ್ನು ಭೂಮಿಗೆ ಲಂಬವಾಗಿ ನಿರ್ಮಿಸುತ್ತಿದ್ದು ದಕ್ಷಿಣ ದಿಕ್ಕಿನೆಡೆಗೆ ಅಭಿಮುಖವಾಗಿರುತ್ತಿದ್ದಿತಾದರೂ, ಸಮಯ ಕಳೆದಂತೆ, ಇಳುಕಲಾದ ಫಲಭಿತ್ತಿಗಳನ್ನು ಬಿಸಿಲು/ಸೂರ್ಯನ ಬೆಳಕಿನ ಮತ್ತಷ್ಟು ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳಲು ಅಭಿವೃದ್ಧಿಪಡಿಸಲಾಯಿತು. ೧೬೯೯ನೇ ಇಸವಿಯಲ್ಲಿ, ನಿಕೋಲಸ್‌‌ ಫಾಟಿಯೋ ಡೆ ಡ್ಯುಯಿಲ್ಲಿಯೆರ್‌‌ರವರು ಸೂರ್ಯನನ್ನು ಅನುಸರಿಸಲು ಬಳಸಬಹುದಾದ ಅಚ್ಚುಗೂಟದ ಯಂತ್ರರಚನೆಯನ್ನು ಬಳಸಿ ಸೂರ್ಯನ ಜಾಡನ್ನು ಅನುಸರಿಸಬಹುದೆಂಬ ಸಲಹೆಯನ್ನು ಕೂಡಾ ನೀಡಿದರು.Cite error: Closing </ref> missing for <ref> tag ಆಧುನಿಕ ಹಸಿರುಮನೆಗಳನ್ನು ಮೊತ್ತಮೊದಲಿಗೆ ಯುರೋಪಿನಲ್ಲಿ ೧೬ನೇ ಶತಮಾನದಲ್ಲಿ ಭೂಪರಿಶೋಧನೆಗೆಂದು ಹೋದವರು ವಿದೇಶಗಳಿಂದ ತಂದ ಚಿತ್ರವಿಚಿತ್ರ ಸಸ್ಯಗಳನ್ನು ಶೇಖರಿಸಿಡಲು ನಿರ್ಮಿಸಲಾಗಿದ್ದವು.[೨೨] ಇಂದಿಗೂ ತೋಟಗಾರಿಕೆ ಕ್ಷೇತ್ರದ ಪ್ರಧಾನ ಭಾಗವಾಗಿಯೇ ಉಳಿದುಕೊಂಡಿರುವುದಲ್ಲದೇ, ಪ್ಲಾಸ್ಟಿಕ್‌‌‌ನ ಪಾರದರ್ಶಕ ವಸ್ತುಗಳನ್ನು ಕೂಡಾ ಇದೇ ರೀತಿಯ ಪ್ರಭಾವ ಬೀರಲು ಪಾಲಿಟನಲ್‌ಗಳಲ್ಲಿ ಹಾಗೂ ಸಾಲುಗಳ ಆವರಣಗಳಲ್ಲಿ ಕೂಡಾ ಬಳಸಲಾಗುತ್ತದೆ.

ಸೌರ ಬೆಳಕಿನ ವ್ಯವಸ್ಥೆ[ಬದಲಾಯಿಸಿ]

ಇಟಲಿಯ ರೋಮ್‌ನಲ್ಲಿರುವ ಸ್ಮಾರಕಭವನದ ಮೇಲ್ಭಾಗದಲ್ಲಿರುವ ಬೆಳಕಿನ ಅಂಗ/ಕಣ್ಣು ತರಹದ ಹಗಲು ಬೆಳಕಿನ ವ್ಯವಸ್ಥೆಗಳು ಪ್ರಾಚೀನಕಾಲದಿಂದಲೂ ಬಳಕೆಯಲ್ಲಿದ್ದವು.

ಬೆಳಕಿನ ವ್ಯವಸ್ಥೆಯ ಬಗೆಗಿನ ಇತಿಹಾಸದಲ್ಲಿ ನೈಸರ್ಗಿಕ ಬೆಳಕಿನ ಬಳಕೆಯೇ ಹೆಚ್ಚು ಕಂಡುಬರುತ್ತದೆ. ರೋಮನ್ನರು ೬ನೇ ಶತಮಾನದಷ್ಟು ಮುಂಚೆಯೇ ಬೆಳಕನ್ನು ಹೊಂದುವ ಹಕ್ಕಿನ ಬಗ್ಗೆ ಮನ್ನಣೆ ನೀಡಿದ್ದರು ಮತ್ತು ಆಂಗ್ಲ ಕಾನೂನು ಕೂಡಾ ೧೮೩೨ರ ಅನುಭೋಗದ ಹಕ್ಕು ಕಾಯ್ದೆಯ ಮೂಲಕ ಈ ನಿರ್ಣಯವನ್ನು ಅನುಮೋದಿಸಿತ್ತು.[೨೩][೨೪] ೨೦ನೇ ಶತಮಾನದಲ್ಲಿ ಕೃತಕ ಬೆಳಕಿನ ವ್ಯವಸ್ಥೆಯೇ ಒಳಾಂಗಣದಲ್ಲಿ ಪ್ರಕಾಶದಾಯಕ ಬೆಳಕನ್ನು ಉಂಟುಮಾಡುವ ಪ್ರಧಾನ ಬೆಳಕಿನ ಮೂಲವಾಗಿತ್ತು, ಆದರೆ ಹಗಲು ಬೆಳಕಿನ ವ್ಯವಸ್ಥೆ ಪ್ರಕ್ರಿಯೆಗಳು ಮತ್ತು ಸಂಕರ ಸೌರ ಬೆಳಕಿನ ವ್ಯವಸ್ಥೆಗಳನ್ನು ಅದಕ್ಕೆ ಬೇಕಾಗಬಹುದಾದ ಶಕ್ತಿಯ ಬಳಕೆಯನ್ನು ಕಡಿಮೆ ಮಾಡುವ ವಿಧಾನವಾಗಿ ಕಂಡುಬಂದಿತ್ತು.

ಹಗಲುಬೆಳಕಿನ ವ್ಯವಸ್ಥೆಗಳು ಬಿಸಿಲು/ಸೂರ್ಯನ ಬೆಳಕನ್ನು ಸಂಗ್ರಹಿಸಿ ಒಳಾಂಗಣಕ್ಕೆ ಬೇಕಾದ ಬೆಳಕನ್ನು ಸೂಕ್ತವಾಗಿ ವಿತರಣೆ ಮಾಡುವ ಉದ್ದೇಶದಿಂದ ರೂಪುಗೊಂಡಿವೆ. ಈ ಅಪ್ರವರ್ತಕ ತಂತ್ರಜ್ಞಾನವು ಕೃತಕ ಬೆಳಕಿನ ವ್ಯವಸ್ಥೆಯನ್ನು ಬದಲಿಸಿ ನೇರವಾಗಿ ಶಕ್ತಿಯ ಬಳಕೆಗೆ ಪೂರಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಿದರೆ, ಹವಾ-ನಿಯಂತ್ರಣ ವ್ಯವಸ್ಥೆಯ ಅಗತ್ಯವನ್ನು ಇಲ್ಲವಾಗಿಸುವುದರ ಮೂಲಕ ಪರೋಕ್ಷವಾಗಿ ಸೌರ ಶಕ್ತಿಯಲ್ಲದ ಬಳಕೆಯನ್ನು ಕಡಿಮೆ ಮಾಡುತ್ತದೆ.[೨೫] ಪರಿಮಾಣವಾಗಿ ಅಳತೆ ಮಾಡಲು ಕಷ್ಟಸಾಧ್ಯವಾದರೂ, ನೈಸರ್ಗಿಕ ಬೆಳಕಿನ ವ್ಯವಸ್ಥೆಯ ಬಳಕೆಯು ಕೃತಕ ಬೆಳಕಿನ ವ್ಯವಸ್ಥೆಗೆ ಹೋಲಿಸಿದರೆ ಶಾರೀರಿಕ ಹಾಗೂ ಮಾನಸಿಕವಾಗಿ ಅನುಕೂಲಗಳನ್ನು ಉಂಟುಮಾಡುತ್ತದೆ.[೨೫] ಹಗಲು ಬೆಳಕಿನ ವ್ಯವಸ್ಥೆಯ ವಿನ್ಯಾಸವು ಕಿಟಕಿಯ ವಿಧಗಳು, ಗಾತ್ರಗಳು ಮತ್ತು ಅಭಿಮುಖತೆಗಳ ಜಾಗರೂಕತೆಯ ಆಯ್ಕೆಯನ್ನು ಕೋರುತ್ತದೆ; ಇವುಗಳ ಜೊತೆಗೆ ಹೊರಾಂಗಣದ ನೆರಳು ಬೆಳಕಿನ ಸಾಧನಗಳ ಬಗ್ಗೆ ಕೂಡಾ ಗಮನಹರಿಸಬೇಕಾಗಬಹುದು. ಇದರ ವಿಶಿಷ್ಟವಾದ ಲಕ್ಷಣಗಳಲ್ಲಿ ಗರಗಸದ ಹಲ್ಲುಗಳಂತಹಾ ಮೇಲ್ಛಾವಣಿಗಳು, ಛಾವಣಿಗಳುಳ್ಳ ಕಿಟಕಿಗಳು, ಬೆಳಕಿನ ಕಪಾಟುಗಳು, ಆಕಾಶದೀಪಗಳು ಮತ್ತು ಕೊಳವೆದೀಪಗಳು/ದೀಪದ ಕೊಳವೆಗಳು ಸೇರಿವೆ. ಇವುಗಳನ್ನು ಈಗಾಗಲೇ ಇರುವ ಕಟ್ಟೋಣದ ವ್ಯವಸ್ಥೆಗಳಲ್ಲಿಯೇ ಅಳವಡಿಸಬಹುದಾದರೂ ತೀಕ್ಷ್ಣ ಬೆಳಕು, ಶಾಖದ ಪ್ರಸರಣ ಮತ್ತು ಬಳಕೆಯ ಸಮಯಗಳಂತಹಾ ವಿವಿಧ ಗುಣಲಕ್ಷಣಗಳ ಮೇಲೆ ಆಧಾರಿತವಾಗಿ ವಿನ್ಯಾಸಗೊಳಿಸಿರುವ ಸಂಪೂರ್ಣ ಸೌರ ವಿನ್ಯಾಸ ಪ್ಯಾಕೇಜ್‌‌ನೊಂದಿಗೆ ಅಳವಡಿಸಿದಾಗ ಇದು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಹಗಲು ಬೆಳಕಿನ ವ್ಯವಸ್ಥೆಯ ವಿಶಿಷ್ಟ ಸಜ್ಜುಗೊಳಿಸುವಿಕೆಗಳನ್ನು ಸೂಕ್ತವಾಗಿ ಅಳವಡಿಸಿದಾಗ ಅವು ಬೆಳಕಿನ ವ್ಯವಸ್ಥೆಗೆ ಸಂಬಂಧಿಸಿ ಬೇಕಾಗಬಹುದಾದ ಶಕ್ತಿಯ ಅಗತ್ಯತೆಯನ್ನು ಸುಮಾರು ೨೫%ರಷ್ಟು ಕಡಿಮೆ ಮಾಡಬಹುದಾಗಿದೆ.[೨೬]

ಸಂಕರ ಸೌರ ಬೆಳಕಿನ ವ್ಯವಸ್ಥೆ ಎಂಬುದು ಉತ್ತಮ ಒಳಾಂಗಣ ಬೆಳಕಿನ ವ್ಯವಸ್ಥೆಯನ್ನು ರೂಪಿಸುವ ಕ್ರಿಯಾತ್ಮಕ ಸೌರಶಕ್ತಿಯ ವಿಧಾನವಾಗಿರುತ್ತದೆ. HSL ವ್ಯವಸ್ಥೆಗಳು ಸೂರ್ಯನನ್ನು ಅನುಸರಿಸಿ ಬಿಸಿಲು/ಸೂರ್ಯನ ಬೆಳಕನ್ನು ನಾಭಿಯೆಡೆಗೆ ಕೇಂದ್ರೀಕರಿಸುವ ಕನ್ನಡಿಗಳ ಮೂಲಕ ಸೂರ್ಯನ ಬೆಳಕನ್ನು ಸಂಗ್ರಹಿಸುತ್ತವಲ್ಲದೇ ದ್ಯುತಿ ತಂತುಗಳನ್ನು ಬಳಸಿ ಇದನ್ನು ಕಟ್ಟಡದೊಳಕ್ಕೆ ಸಾಂಪ್ರದಾಯಿಕ ಬೆಳಕಿನ ವ್ಯವಸ್ಥೆಗೆ ಪೂರಕವಾಗಿ ಕಾರ್ಯನಿರ್ವಹಿಸಲು ಹರಿಸುತ್ತದೆ. ಏಕ-ಹಂತದ ಉಪಯುಕ್ತತೆ/ಅನ್ವಯಗಳಲ್ಲಿ ಈ ವ್ಯವಸ್ಥೆಗಳು ತಾವು ಪಡೆದುಕೊಂಡ ನೇರ ಬಿಸಿಲು/ಸೂರ್ಯನ ಬೆಳಕಿನ ೫೦%ರಷ್ಟನ್ನು ಪ್ರಸರಿಸಲು ಸಾಧ್ಯವಾಗುತ್ತದೆ.[೨೭]

ಹಗಲು ಹೊತ್ತಿನಲ್ಲಿ ಸೌರಶಕ್ತಿಯನ್ನು ಹೀರಿ/ಚಾರ್ಜ್‌‌ ಆಗಿ ಮುಸ್ಸಂಜೆಯ ಹೊತ್ತಿನಲ್ಲಿ ಬೆಳಕು ಬೀಡುವ ಸೌರ ದೀಪಗಳನ್ನು ನಡೆದಾರಿಗಳಲ್ಲಿ ಸಾಮಾನ್ಯ ನೋಟವನ್ನಾಗಿ ಕಾಣಬಹುದಾಗಿರುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಶಕ್ತಿಯ ಬಳಕೆಯನ್ನು ಉಳಿಸಿ ಬಿಸಿಲು/ಸೂರ್ಯನ ಬೆಳಕನ್ನು ಬಳಸುವ ವಿಧಾನವಾಗಿ ಹಗಲುಬೆಳಕನ್ನು ಉಳಿಸುವ ವ್ಯವಸ್ಥೆಗೆ ಉತ್ತೇಜನ ನೀಡಲಾಗುತ್ತದಾದರೂ, ಇತ್ತೀಚಿನ ಸಂಶೋಧನೆಯು ಇದರ ಉಪಯುಕ್ತತೆಯನ್ನು ಮಿತಿಗೊಳಿಸಿರುವುದಲ್ಲದೇ ವಿರೋಧಾತ್ಮಕ ಫಲಿತಾಂಶಗಳನ್ನು ವರದಿ ಮಾಡಿದೆ: ಅನೇಕ ಅಧ್ಯಯನಗಳು ಶಕ್ತಿಯ ಉಳಿಕೆಯಾಗಿದೆ ಎಂದು ವರದಿ ಮಾಡಿದ್ದರೆ ಅಷ್ಟೇ ಸಂಖ್ಯೆಯ ಅಧ್ಯಯನಗಳು ಇದರಿಂದ ಯಾವುದೇ ಉಳಿಕೆಯಾಗಿಲ್ಲ ಅಥವಾ ಇನ್ನೂ ಹೇಳಬೇಕೆಂದರೆ ನಿವ್ವಳ ನಷ್ಟವಾಗುತ್ತಿದೆ ಎನ್ನುತ್ತಿವೆ, ಇದಕ್ಕೆ ನಿರ್ದಿಷ್ಟವಾಗಿ ಈ ಸಮಯದಲ್ಲಿ ಬಳಸುವ ಗ್ಯಾಸೋಲಿನ್‌/ಪೆಟ್ರೋಲ್‌ನ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ವಿದ್ಯುಚ್ಛಕ್ತಿಯ ಬಳಕೆಯು ಭೌಗೋಳಿಕ ಸ್ಥಾನ, ವಾತಾವರಣ ಮತ್ತು ಆರ್ಥಿಕತೆಗಳಿಂದ ಭಾರೀ ಪ್ರಮಾಣದಲ್ಲಿ ವ್ಯತ್ಯಾಸಗೊಳ್ಳುವುದರಿಂದಾಗಿ ಈ ರೀತಿಯ ನಿರ್ದಿಷ್ಟ ಅಧ್ಯಯನಗಳಿಂದ ಸಾಮಾನ್ಯೀಕರಿಸುವುದು ಕಷ್ಟಸಾಧ್ಯವಾಗಿರುತ್ತದೆ.[೨೮]

ಸೌರ ಉಷ್ಣಧಾರಕ ವ್ಯವಸ್ಥೆ[ಬದಲಾಯಿಸಿ]

Main article: Solar thermal energy

ಸೌರ ಉಷ್ಣಧಾರಕ ವ್ಯವಸ್ಥೆಯ ತಂತ್ರಜ್ಞಾನಗಳನ್ನು ನೀರನ್ನು ಬಿಸಿಮಾಡಲು, ಸ್ಥಳಾವಕಾಶವನ್ನು ಬೆಚ್ಚಗಿಡಲು, ಸ್ಥಳಾವಕಾಶವನ್ನು ತಂಪಾಗಿಡಲು ಹಾಗೂ ಪ್ರಕ್ರಿಯಾತ್ಮಕ ಉಷ್ಣತೆಯನ್ನು ಉತ್ಪಾದಿಸುವ ಉದ್ದೇಶಗಳಲ್ಲಿ ಬಳಸಬಹುದಾಗಿರುತ್ತದೆ.[೨೯]

ನೀರನ್ನು ಬಿಸಿಮಾಡುವಿಕೆ[ಬದಲಾಯಿಸಿ]

Main articles: Solar hot waterಮತ್ತು Solar combisystem
ಸೌರಶಕ್ತಿಚಾಲಿತ ಜಲತಾಪಕಗಳು ಹೆಚ್ಚು ಬಿಸಿಲನ್ನು ಪಡೆಯಲು ಸೂರ್ಯನೆಡೆಗೆ ಮುಖ ಮಾಡಿರುವುದು.

ನೀರನ್ನು ಕಾಯಿಸುವ ಸೌರ ವ್ಯವಸ್ಥೆಗಳು ಬಿಸಿಲು/ಸೂರ್ಯನ ಬೆಳಕನ್ನು ಬಳಸಿಕೊಂಡು ನೀರನ್ನು ಬಿಸಿ ಮಾಡುತ್ತವೆ. ಕೆಳ ಮಟ್ಟದ ಭೌಗೋಳಿಕ ಅಕ್ಷಾಂಶದ ಪ್ರದೇಶಗಳಲ್ಲಿ (೪೦ ಡಿಗ್ರಿಗಳಿಗಿಂತಲೂ ಕೆಳಗಿನವು) ೬೦ °Cವರೆಗಿನ ತಾಪಮಾನಕ್ಕೆ ಕಾಯಿಸುವ ಸುಮಾರು ೬೦ರಿಂದ ೭೦%ವರೆಗಿನ ನೀರನ್ನು ಗೃಹಬಳಕೆಯ ಉದ್ದೇಶಗಳನ್ನು ಸೌರ ನೀರು ಕಾಯಿಸುವಿಕೆಯ ವ್ಯವಸ್ಥೆಗಳು ನಿರ್ವಹಿಸಬಲ್ಲವು.[೩೦] ನೀರು ಕಾಯಿಸುವ ಸೌರ ಸಾಧನಗಳಲ್ಲಿ ಬಹು ಸಾಮಾನ್ಯವಾದವೆಂದರೆ ಶೂನ್ಯೀಕರಿಸಿದ ಕೊಳವೆ ಸಂಗ್ರಾಹಕಗಳು (೪೪%) ಮತ್ತು ಹೊಳಪು ಮೈಯುಳ್ಳ ಸಪಾಟಾದ ಸಂಗ್ರಾಹಕ ತಟ್ಟೆಗಳನ್ನು (೩೪%) ಗೃಹಬಳಕೆಯ ಬಿಸಿನೀರಿನ ಉದ್ದೇಶಗಳಿಗೆ ಬಳಸಲಾಗುತ್ತದಾದರೆ ; ಹೊಳಪಿರದ ಪ್ಲಾಸ್ಟಿಕ್‌‌‌ ಸಂಗ್ರಾಹಕಗಳನ್ನು (೨೧%) ಪ್ರಧಾನವಾಗಿ ಈಜುಕೊಳಗಳನ್ನು ಬಿಸಿಗೊಳಿಸಲು ಬಳಸಲಾಗುತ್ತದೆ.[೩೧]

೨೦೦೭ರ ಹೊತ್ತಿಗೆ, ಬಿಸಿನೀರು ಕಾಯಿಸುವ ಸೌರ ವ್ಯವಸ್ಥೆಗಳ ಒಟ್ಟಾರೆ ಅಳವಡಿತ ಸಾಮರ್ಥ್ಯವು ಸರಿಸುಮಾರು ೧೫೪ GWಗಳಷ್ಟಿತ್ತು.[೩೨] ೨೦೦೬ರ ಹೊತ್ತಿಗೆ ೭೦ GWನಷ್ಟು ಪ್ರಮಾಣದ ಅಳವಡಿಕೆಯನ್ನು ಹೊಂದಿದ್ದ ಮತ್ತು ೨೦೨೦ರ ಹೊತ್ತಿಗೆ ೨೧೦ GWಗಳಷ್ಟು ಅಳವಡಿಕೆಯ ದೀರ್ಘಕಾಲದ ಗುರಿಯನ್ನು ಹೊಂದಿರುವ ಚೀನಾವು ತನ್ನಲ್ಲಿನ ಕಾರ್ಯಾಚರಣೆಯ ಮೂಲಕ ವಿಶ್ವನಾಯಕ ಸ್ಥಾನವನ್ನು ಅಲಂಕರಿಸಿದೆ.[೩೩] ೯೦%ಗೂ ಹೆಚ್ಚಿನ ಸಂಖ್ಯೆಯ ಮನೆಗಳಲ್ಲಿ ಸೌರ ಬಿಸಿನೀರು ಕಾಯಿಸುವಿಕೆಯ ವ್ಯವಸ್ಥೆಗಳನ್ನು ಹೊಂದಿರುವ ಇಸ್ರೇಲ್‌‌ ಮತ್ತು ಸಿ/ಸೈಪ್ರಸ್‌‌‌ ರಾಷ್ಟ್ರಗಳು ತಲಾ ಬಳಕೆಯ ಆಧಾರದಲ್ಲಿ ವಿಶ್ವ ನಾಯಕತ್ವವನ್ನು ವಹಿಸಿವೆ.[೩೪] ೨೦೦೫ರ ವೇಳೆಗೆ ೧೮ GWಗಳಷ್ಟು ಸಾಮರ್ಥ್ಯದ ಅಳವಡಿಕೆಯಾದ ಬಿಸಿನೀರು ಕಾಯಿಸುವ ಸೌರ ವ್ಯವಸ್ಥೆಗಳನ್ನು ಹೊಂದಿರುವ ಯುನೈಟೆಡ್‌‌ ಸ್ಟೇಟ್ಸ್‌‌, ಕೆನಡಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಈಜುಕೊಳಗಳನ್ನು ಬೆಚ್ಚಗಿಡುವುದು ಇವುಗಳ ಪ್ರಧಾನ ಅನ್ವಯವಾಗಿದೆ.[೧೬]

ಬಿಸಿ ಮಾಡುವಿಕೆ, ತಂಪು ಮಾಡುವಿಕೆ ಮತ್ತು ವಾತಾಯನ ವ್ಯವಸ್ಥೆ[ಬದಲಾಯಿಸಿ]

ಯುನೈಟೆಡ್‌‌ ಸ್ಟೇಟ್ಸ್‌‌ನಲ್ಲಿ 1939ರಲ್ಲಿ ನಿರ್ಮಿಸಲಾಗಿದ್ದ ಮೆಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌‌ ಆಫ್‌ ಟೆಕ್ನಾಲಜಿ ಸಂಸ್ಥೆಯಲ್ಲಿರುವ ಸೌರಶಕ್ತಿ ಗೃಹ #1, ಕಾಲೋಚಿತವಾದ ಉಷ್ಣಧಾರಕ ಶೇಖರಣಾ ವ್ಯವಸ್ಥೆಯನ್ನು ವರ್ಷವಿಡೀ ಸೇವೆ ನೀಡಲು ಬಳಸುತ್ತದೆ.

ಯುನೈಟೆಡ್‌‌ ಸ್ಟೇಟ್ಸ್‌‌ನಲ್ಲಿ ಬಿಸಿ ಮಾಡುವಿಕೆ, ವಾತಾಯನ ವ್ಯವಸ್ಥೆ ಮತ್ತು ಹವಾನಿಯಂತ್ರಣ (HVAC) ವ್ಯವಸ್ಥೆಗಳು ವಾಣಿಜ್ಯೋದ್ದೇಶದ ಕಟ್ಟಡಗಳಲ್ಲಿ ಬಳಕೆಯಾಗುವ ವಿದ್ಯುಚ್ಛಕ್ತಿಯ ಒಟ್ಟಾರೆ ಬಳಕೆಯ ೩೦%ರಷ್ಟಕ್ಕೆ (೪.೬೫ EJ) ಮತ್ತು ಸರಿಸುಮಾರು ವಸತಿಉದ್ದೇಶದ ಕಟ್ಟಡಗಳಲ್ಲಿ ಬಳಕೆಯಾಗುವ ವಿದ್ಯುಚ್ಛಕ್ತಿಯ ಒಟ್ಟಾರೆ ಬಳಕೆಯ ೫೦%ರಷ್ಟು (೧೦.೧ EJ) ಇರುತ್ತದೆ.[೨೬][೩೫] ಬಿಸಿ ಮಾಡುವಿಕೆ, ತಂಪು ಮಾಡುವಿಕೆ ಮತ್ತು ವಾತಾಯನ ವ್ಯವಸ್ಥೆಯ ಸೌರ ತಂತ್ರಜ್ಞಾನಗಳನ್ನು ಹೀಗೆ ಬಳಕೆಯಾಗುವ ವಿದ್ಯುಚ್ಛಕ್ತಿಯ ಒಂದಷ್ಟು ಭಾಗವನ್ನು ಸರಿದೂಗಿಸಲು ಬಳಸಬಹುದಾಗಿದೆ.

ಉಷ್ಣ ದ್ರವ್ಯರಾಶಿ ಎಂಬುದು ಉಷ್ಣವನ್ನು ಶೇಖರಿಸಲು ಬಳಸಬಹುದಾದ ಯಾವುದೇ ವಸ್ತುವಿಗೆ ನೀಡಬಹುದಾದ ಹೆಸರಾಗಿದೆ ಮತ್ತು ಸೌರ ಶಕ್ತಿಯ ಸಂದರ್ಭದಲ್ಲಿ ಇದನ್ನು ಸೂರ್ಯನಿಂದ ಬರುವ ಶಾಖವನ್ನು ಹಿಡಿದಿಡಲು ಬಳಸಬಹುದಾದ ಯಾವುದೇ ವಸ್ತುವೆನ್ನಬಹುದಾಗಿದೆ. ಸಾಧಾರಣ ಉಷ್ಣ ದ್ರವ್ಯರಾಶಿಗಳಿಗೆ ಉದಾಹರಣೆಗಳಲ್ಲಿ ಕಲ್ಲು, ಸಿಮೆಂಟು ಮತ್ತು ನೀರು ಸೇರಿವೆ. ಐತಿಹಾಸಿಕವಾಗಿ ಈ ವಸ್ತುಗಳನ್ನು ಶುಷ್ಕ ವಾತಾವರಣಗಳಲ್ಲಿ ಅಥವಾ ಬೆಚ್ಚಗಿನ ಸಮಶೀತೋಷ್ಣದ ವಲಯಗಳಲ್ಲಿ ಬೆಳಗಿನ ಹೊತ್ತಿನಲ್ಲಿ ಸೌರ ಶಕ್ತಿಯನ್ನು ಹೀರಿಕೊಳ್ಳುವ ಮೂಲಕ ಕಟ್ಟಡವನ್ನು ತಂಪುಗೊಳಿಸುತ್ತದಲ್ಲದೇ ರಾತ್ರಿಯ ಹೊತ್ತು ಹಾಗೆ ಹಿಡಿದಿಟ್ಟುಕೊಂಡ ಶಾಖವನ್ನು ತಂಪಾದ ವಾತಾವರಣ/ವಾಯುಮಂಡಲಕ್ಕೆ ಹೊರಬಿಡುವುದರ ಮೂಲಕ ಕಟ್ಟಡವನ್ನು ಬೆಚ್ಚಗಿಡುತ್ತದೆ. ಅದೇನೇ ಆದರೂ ಅವುಗಳನ್ನು ತಂಪು ತಾಪಮಾನದ ಪ್ರದೇಶಗಳಲ್ಲಿ ಬೆಚ್ಚಗಿನ ವಾತಾವರಣವನ್ನು ಉಳಿಸಿಕೊಳ್ಳಲು ಕೂಡಾ ಬಳಸಿಕೊಳ್ಳಬಹುದಾಗಿದೆ. ಉಷ್ಣ ದ್ರವ್ಯರಾಶಿ ವಸ್ತುವಿನ ಗಾತ್ರ ಅದರ ನಿಯೋಜಿತ ಸ್ಥಳಗಳು ಹವಾಗುಣ, ಹಗಲು ಬೆಳಕಿನ ವ್ಯವಸ್ಥೆ ಮತ್ತು ನೆರಳಿನ ಪರಿಸ್ಥಿತಿಗಳ ಮೇಲೆ ಆಧಾರಿತವಾಗಿರುತ್ತದೆ. ಸೂಕ್ತವಾಗಿ ಸಂಘಟಿಸಿದಾಗ, ಉಷ್ಣ ದ್ರವ್ಯರಾಶಿ ವಸ್ತುವು ಆಯಾ ಸ್ಥಳದ ತಾಪಮಾನವನ್ನು ಹಿತಕರವಾದ ಮಟ್ಟದಲ್ಲಿ ಕಾಪಿಟ್ಟುಕೊಳ್ಳುವುದರಿಂದ ಉಷ್ಣಾಂಶವನ್ನು ಹೆಚ್ಚಿಸುವ ಇಲ್ಲವೇ ಕಡಿಮೆ ಮಾಡುವ ಸಹಾಯಕ ಉಪಕರಣಗಳ ಅಗತ್ಯವನ್ನು ಕಡಿಮೆಗೊಳಿಸುತ್ತದೆ.[೩೬]

ಸೌರ ಚಿಮಣಿ (ಅಥವಾ ಈ ಸಂದರ್ಭದಲ್ಲಿ ಶಾಖಧಾರಕ ಚಿಮಣಿ) ಎಂಬುದು ಕಟ್ಟಡವೊಂದರ ಒಳಭಾಗವನ್ನು ಹೊರಭಾಗದೊಂದಿಗೆ ಸಂಪರ್ಕಿಸುವ ಲಂಬವಾದ ಕೊಳವೆಗಂಬವನ್ನು ಹೊಂದಿರುವ ಅಪ್ರವರ್ತಕ ಸೌರ ವಾತಾಯನ ವ್ಯವಸ್ಥೆಯಾಗಿದೆ. ಚಿಮಣಿಯು ಬಿಸಿಯಾಗುತ್ತಿದ್ದ ಹಾಗೆಯೇ, ಒಳಗಿರುವ ಗಾಳಿಯು ಬಿಸಿಯಾಗಿ ಮೇಲಕ್ಕೆ ಸೆಳೆತವನ್ನುಂಟು ಮಾಡಿ ಕಟ್ಟಡದಾದ್ಯಂತ ಗಾಳಿಯನ್ನು ಸೆಳೆಯುತ್ತದೆ. ಇದರ ಕಾರ್ಯನಿರ್ವಹಣೆಯನ್ನು ಗಾಜುಹೊಳಪಿನ ಮತ್ತು ಉಷ್ಣ ದ್ರವ್ಯರಾಶಿಯ ವಸ್ತುಗಳನ್ನು ಹಸಿರುಮನೆಗಳನ್ನು ಹೋಲುವ ಮಾದರಿಯಲ್ಲಿ ಬಳಸುವ ಮೂಲಕ ಸುಧಾರಿಸಬಹುದಾಗಿರುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಸೌರ ವಿಧಾನದ ಮೂಲಕ ಬಿಸಿಯಾಗಿಸುವಿಕೆ ಮತ್ತು ತಂಪುಗೊಳಿಸುವಿಕೆಗಳನ್ನು ನಿಯಂತ್ರಿಸುವ ವಿಧಾನವಾಗಿ ಪತನಶೀಲ ಮರಗಳು ಮತ್ತು ಸಸ್ಯಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಕಟ್ಟಡವೊಂದರ ದಕ್ಷಿಣ ಭಾಗದಲ್ಲಿ ಇವುಗಳನ್ನು ಬೆಳೆಸಿದಾಗ ಅವುಗಳ ಎಲೆಗಳು ಬೇಸಿಗೆ ಕಾಲದಲ್ಲಿ ನೆರಳು ನೀಡುತ್ತವೆಯಾದರೆ ಚಳಿಗಾಲದಲ್ಲಿ ಅದರ ಬೋಳು ರೆಂಬೆಕೊಂಬೆಗಳು ಬೆಳಕನ್ನು ತಮ್ಮ ಮೂಲಕ ಹಾದುಹೋಗಲು ಅನುವು ಮಾಡಿಕೊಡುತ್ತವೆ.[೩೭] ಬೋಳಾಗಿರುವುದರಿಂದ ಎಲೆಗಳಿಲ್ಲದ ಮರಗಳು ಬೀಳುವ ಸೌರ ಪ್ರಸರಣ/ವಿಕಿರಣದ ೧/೩ರಿಂದ ೧/೨ರಷ್ಟು ಭಾಗ ನೆರಳು ನೀಡುತ್ತವೆಯಾಗಿ, ಬೇಸಿಗೆಯ ಸಮಯದಲ್ಲಿ ದೊರಕುವ ನೆರಳಿನ ಅನುಕೂಲಕ್ಕೆ ಸಮತೋಲಿತವಾಗಿ ಚಳಿಗಾಲದಲ್ಲಿ ಅಷ್ಟು ಮಟ್ಟಿನ ಉಷ್ಣತೆಯನ್ನು ಕಳೆದುಕೊಳ್ಳಬೇಕಾಗುತ್ತದೆ.[೩೮] ಗಮನಾರ್ಹ ಪ್ರಮಾಣದ ಬಿಸಿಲಿನ ಝಳವಿರುವ ವಾತಾವರಣಗಳಲ್ಲಿ, ಪತನಶೀಲ ಮರಗಳನ್ನು ಕಟ್ಟಡವೊಂದರ ದಕ್ಷಿಣ ಭಾಗದಲ್ಲಿ ನೆಡಬಾರದು, ಇದೇಕೆಂದರೆ ಅವು ಚಳಿಗಾಲದಲ್ಲಿ ಸಿಗಬೇಕಾದ ಸೌರ ಶಕ್ತಿಗೆ ತಡೆ ಒಡ್ಡುತ್ತವೆ. ಆದಾಗ್ಯೂ ಅವುಗಳನ್ನು ಕಟ್ಟಡದ ಪೂರ್ವ ಹಾಗೂ ಪಶ್ಚಿಮ ದಿಕ್ಕುಗಳಲ್ಲಿ ನೆಡಬಹುದಾಗಿದ್ದು ಒಂದು ಹಂತದವರೆಗೆ ಬೇಸಿಗೆಯಲ್ಲಿ ನೆರಳು ಕೊಟ್ಟರೂ ಚಳಿಗಾಲದ ಸಮಯದಲ್ಲಿ ಸೂರ್ಯಶಾಖದ ಲಭ್ಯತೆಯನ್ನು ಗಮನಾರ್ಹ ಪ್ರಮಾಣದಲ್ಲಿ ಕಡಿಮೆಗೊಳಿಸುವುದಿಲ್ಲ.[೩೯]

ಜಲ ಸಂಸ್ಕರಣ[ಬದಲಾಯಿಸಿ]

ಇಂಡೋನೇಷ್ಯಾದಲ್ಲಿ ಸೌರಶಕ್ತಿ ಜಲ ಸೋಂಕು ನಿವಾರಣೆ
ಸಣ್ಣ ಪ್ರಮಾಣದ ಸೌರ ವಿದ್ಯುಚ್ಛಕ್ತಿಚಾಲಿತ ಒಳಚರಂಡಿ ವ್ಯವಸ್ಥೆ ಜಲನಿರ್ವಹಣಾ ಘಟಕ.

ಸೌರ ಶುದ್ಧೀಕರಣ/ಸಾಂದ್ರೀಕರಣ ವಿಧಾನವನ್ನು ಲವಣಯುಕ್ತ ಅಥವಾ ಚೌಳಾದ/ಸ್ವಲ್ಪ ಉಪ್ಪಾದ ನೀರನ್ನು ಕುಡಿಯಲು ಅರ್ಹವಾಗಿಸಲು ಬಳಸಬಹುದಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ಮೊತ್ತ ಮೊದಲ ದಾಖಲಾದ ದೃಷ್ಟಾಂತವೆಂದರೆ ೧೬ನೇ ಶತಮಾನದ ಅರಬ್‌‌ ರಸವಾದಿಗಳ ಬಳಕೆಯದ್ದು.[೪೦] ಬೃಹತ್‌-ಪ್ರಮಾಣದ ಸೌರ ಶುದ್ಧೀಕರಣ/ಸಾಂದ್ರೀಕರಣ ಯೋಜನೆಯೊಂದನ್ನು ೧೮೭೨ರಲ್ಲಿ ಚಿಲಿ ರಾಷ್ಟ್ರದ ಲಾಸ್‌ ಸಲಿನಾಸ್‌‌ ಎಂಬ ಗಣಿಗಳಿಂದಾವೃತ ಪಟ್ಟಣದಲ್ಲಿ ಮೊತ್ತಮೊದಲಿಗೆ ನಿರ್ಮಿಸಲಾಗಿತ್ತು.[೪೧] ೪,೭೦೦ m²ಗಳಷ್ಟು ವಿಸ್ತಾರವಾದ ಸೌರ ಶಕ್ತಿ ಶೇಖರಣಾ ಪ್ರದೇಶವನ್ನು ಹೊಂದಿದ್ದ, ಪ್ರತಿದಿನಕ್ಕೆ ೨೨,೭೦೦ Lನಷ್ಟು ಉತ್ಪಾದನೆ ಸಾಧಿಸುತ್ತಿದ್ದ ಈ ಘಟಕವು ೪೦ ವರ್ಷಗಳ ಕಾಲ ಕಾರ್ಯನಿರ್ವಹಿಸಿತು.[೪೧] ಇದರಲ್ಲಿದ್ದ ವಿವಿಧ ರೀತಿಯ ಶೋಧನಾ/ಬಟ್ಟಿಪಾತ್ರೆಗಳ ವಿನ್ಯಾಸಗಳಲ್ಲಿ ಏಕ-ವಾಟ, ದ್ವಿ-ವಾಟ (ಅಥವಾ ಹಸಿರುಮನೆ ವಿಧದ), ಲಂಬವಾದ, ಶಂಕುವಿನಾಕಾರದ, ತಲೆಕೆಳಗು ಮಾಡಿದ ಅವಶೋಷಕ, ಬಹು ಹೀರುಬತ್ತಿಗಳುಳ್ಳ ಮತ್ತು ಬಹು-ಉಪಯೋಗಿ ಶೋಧನಾ/ಬಟ್ಟಿಪಾತ್ರೆಗಳಿವೆ.[೪೦] ಈ ಶೋಧನಾ/ಬಟ್ಟಿಪಾತ್ರೆಗಳನ್ನು ಅಪ್ರವರ್ತಕ, ಪ್ರವರ್ತಕ ಅಥವಾ ಸಂಕರ ಶೈಲಿಗಳಲ್ಲಿ ನಡೆಸಬಹುದಾಗಿರುತ್ತದೆ. ದ್ವಿ-ವಾಟ ಶೋಧನಾ/ಬಟ್ಟಿಪಾತ್ರೆಗಳು ವಿಕೇಂದ್ರಿತವಾದ ಗೃಹಬಳಕೆ ಉದ್ದೇಶಗಳಿಗೆ ಅತ್ಯಂತ ಮಿತವ್ಯಯದ್ದಾಗಿದ್ದು ಸೂಕ್ತವೆನಿಸಿದರೆ ಕ್ರಿಯಾತ್ಮಕ ಬಹು-ಉಪಯೋಗಿ ಶೋಧನಾ/ಬಟ್ಟಿಪಾತ್ರೆಗಳು ಬೃಹತ್‌-ಪ್ರಮಾಣದ ಉಪಯುಕ್ತತೆ/ಅನ್ವಯಗಳಿಗೆ ಹೆಚ್ಚು ಸೂಕ್ತವಾಗಿರುತ್ತದೆ.[೪೦]

ಸೌರ ಜಲ ಸೋಂಕು ನಿವಾರಣೆ (SODIS) ಪ್ರಕ್ರಿಯೆಯು ನೀರು ತುಂಬಿದ ಪ್ಲಾಸ್ಟಿಕ್‌‌‌ನ ಪಾಲಿಎಥಿಲೀನ್‌ ಟೆರೆಫ್ತಾಲೇಟ್‌‌ (PET) ಬಾಟಲು/ಶೀಷೆಗಳನ್ನು ಬಿಸಿಲು/ಸೂರ್ಯನ ಬೆಳಕಿಗೆ ಅನೇಕ ಗಂಟೆಗಳ ಕಾಲ ಒಡ್ಡುವುದನ್ನು ಒಳಗೊಂಡಿರುತ್ತದೆ.[೪೨] ಹೀಗೆ ಬಿಸಿಲಿಗೆ ಒಡ್ಡುವ ಕಾಲಾವಧಿಯು ಹವಾಮಾನ ಮತ್ತು ಪರಿಸರದ ಮೇಲೆ ಆಧಾರಿತವಾಗಿ ಕನಿಷ್ಟ ಆರು ಗಂಟೆಗಳಿಂದ ಸಂಪೂರ್ಣವಾಗಿ ಮೋಡ ಕವಿದ ವಾತಾವರಣದ ಸಮಯದಲ್ಲಿ ಎರಡು ದಿನಗಳವರೆಗೆ ವ್ಯತ್ಯಾಸಗೊಳ್ಳಬಹುದು.[೪೩] ವಿಶ್ವ ಆರೋಗ್ಯ ಸಂಸ್ಥೆಯು ಈ ವಿಧಾನವನ್ನು ಗೃಹಬಳಕೆಯ ಜಲ ಶುದ್ಧೀಕರಣ ಮತ್ತು ಸುರಕ್ಷಿತ ಸಂಗ್ರಹಣೆಗೆ ಕಾರ್ಯಸಾಧ್ಯವಾದ ವಿಧಾನವೆಂದು ಶಿಫಾರಸು ಮಾಡಿದೆ.[೪೪] ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಎರಡು ದಶಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಜನರು ತಮ್ಮ ದೈನಂದಿನ ಕುಡಿಯುವ ನೀರಿನ ಬಳಕೆಗಾಗಿ ಈ ವಿಧಾನವನ್ನೇ ಬಳಸುತ್ತಿದ್ದಾರೆ.[೪೩]

ವಿದ್ಯುಚ್ಛಕ್ತಿ ಅಥವಾ ರಾಸಾಯನಿಕಗಳನ್ನು ಬಳಸದೇ ಕಲ್ಮಶಯುಕ್ತ ನೀರನ್ನು ಶುದ್ಧೀಕರಿಸಲು ನಿಂತ ನೀರಿನ ಕೊಳಗಳಲ್ಲಿ ಸೌರ ಶಕ್ತಿಯನ್ನು ಕೂಡಾ ಬಳಸಬಹುದಾಗಿದೆ. ಮತ್ತೊಂದು ಪರಿಸರಕ್ಕೆ ಉಪಯುಕ್ತವಾದ ಅನುಕೂಲ ನೀಡುವ ಪ್ರಯೋಜನವೇನೆಂದರೆ ಅಂತಹಾ ನೀರಿನ ಕೊಳಗಳಲ್ಲಿ ಕಟ್ಟಿಕೊಳ್ಳುವ ಪಾಚಿಯು ದ್ಯುತಿಸಂಶ್ಲೇಷಣೆಯ ಪ್ರಕ್ರಿಯೆಯ ಮೂಲಕ ಇಂಗಾಲದ ಡೈಆಕ್ಸೈಡ್‌‌ಅನ್ನು ಹೀರಿಕೊಳ್ಳುತ್ತದೆ, ಇದು ಅನುಕೂಲವಾದರೂ ಪಾಚಿಯು ವಿಷಯುಕ್ತ ರಾಸಾಯನಿಕಗಳನ್ನು ಬಿಡುವ ಸಾಧ್ಯತೆಯಿರುವುದರಿಂದ ಆ ನೀರನ್ನು ಬಳಸಲಾಗದೇ ಇರುವ ಸಾಧ್ಯತೆಯೂ ಇದೆ.[೪೫][೪೬]

ಅಡುಗೆ[ಬದಲಾಯಿಸಿ]

Main article: Solar cooker
ಭಾರತದ ಆರೋವಿಲ್ಲೆಯಲ್ಲಿರುವ ಸೌರಶಕ್ತಿ ಬಟ್ಟಲು/ಬೌಲ್‌ , ಬಿಸಿಲು/ಸೂರ್ಯನ ಬೆಳಕನ್ನು ಚಲಿಸಬಲ್ಲ ಗ್ರಾಹಕದ ಮುಖಾಂತರ ಅಡಿಗೆ ಮಾಡಲು ಬೇಕಾದ ಹಬೆಯನ್ನು ಉತ್ಪಾದಿಸಲು ಕೇಂದ್ರೀಕರಿಸುತ್ತದೆ.

ಸೌರ ಪಾಕಪಾತ್ರೆಗಳು ಅಡುಗೆ ಮಾಡಲು, ಒಣಗಿಸಲು ಮತ್ತು ಪ್ಯಾಶ್ಚರೀಕರಣ/ಕಾಯಿಸುವಿಕೆಗಳಿಗಾಗಿ ಬಿಸಿಲು/ಸೂರ್ಯನ ಬೆಳಕನ್ನು ಬಳಸುತ್ತವೆ. ಪೆಟ್ಟಿಗೆ ಪಾಕಪಾತ್ರೆಗಳು, ಫಲಕ ಪಾಕಪಾತ್ರೆಗಳು ಮತ್ತು ಪ್ರತಿಫಲಕ ಪಾಕಪಾತ್ರೆಗಳು ಎಂಬ ಮೂರು ಪ್ರಭೇದಗಳಾಗಿ ಅವುಗಳನ್ನು ಸ್ಥೂಲವಾಗಿ ವಿಂಗಡಿಸಬಹುದಾಗಿದೆ.[೪೭] ಹೊರೇಸ್‌‌ ಡೆ ಸಾಷರ್‌ ಎಂಬುವವರು ೧೭೬೭ರಲ್ಲಿ ಮೊತ್ತಮೊದಲಿಗೆ ನಿರ್ಮಿಸಿದ ಪೆಟ್ಟಿಗೆ ಪಾಕಪಾತ್ರೆಯೇ ಅತಿಸರಳ ಸೌರ ಪಾಕಪಾತ್ರೆಯಾಗಿದೆ.[೪೮] ಮೂಲಭೂತ ಪೆಟ್ಟಿಗೆ ಪಾಕಪಾತ್ರೆಯು ಪಾರದರ್ಶಕವಾದ ಮುಚ್ಚಳವುಳ್ಳ ಶಾಖನಿರೋಧಕ ಧಾರಕ ಪಾತ್ರೆಯನ್ನು ಹೊಂದಿರುತ್ತದೆ. ಇದನ್ನು ಭಾಗಶಃ ಮೋಡ ಕವಿದ ವಾತಾವರಣಗಳಲ್ಲಿಯೂ ಕೂಡಾ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದ್ದು ಪಾತ್ರೆಯು ಲಾಕ್ಷಣಿಕವಾಗಿ ಸುಮಾರು ೯೦–೧೫೦ °Cವರೆಗಿನ ತಾಪಮಾನಕ್ಕೆ ಸುಲಭವಾಗಿ ತಲುಪಬಹುದಾಗಿದೆ.[೪೯] ಫಲಕ ಪಾಕಪಾತ್ರೆಗಳು ಬಿಸಿಲು/ಸೂರ್ಯನ ಬೆಳಕನ್ನು ಶಾಖನಿರೋಧಕ ಧಾರಕಗಳೆಡೆಗೆ ಏಕಾಗ್ರಗೊಳಿಸುವಂತೆ ಪ್ರತಿಫಲನಾ ಫಲಕವನ್ನು ಬಳಸುವುದರಿಂದ ಪೆಟ್ಟಿಗೆ ಪಾಕಪಾತ್ರೆಗಳಿಗೆ ಹೋಲಿಸಬಲ್ಲಷ್ಟು ಪ್ರಮಾಣದ ತಾಪಮಾನವನ್ನು ಗಳಿಸುತ್ತವೆ. ಪ್ರತಿಫಲಕ ಪಾಕಪಾತ್ರೆಗಳು ವಿಧವಿಧವಾದ ಸಾಪೇಕ್ಷ ವಿನ್ಯಾಸ ಜೋಡಣೆಗಳನ್ನು (ತಟ್ಟೆ/ಬಟ್ಟಲು, ತೊಟ್ಟಿ, ಫ್ರೆಸ್ನೆಲ್‌‌ ಕನ್ನಡಿಗಳು) ಬೆಳಕನ್ನು ಪಾಕಪಾತ್ರೆಯೊಂದರ ಮೇಲೆ ಏಕಾಗ್ರಗೊಳಿಸಲು ಬಳಸುತ್ತವೆ. ಈ ಪಾಕಪಾತ್ರೆಗಳು ೩೧೫ °Cಗಳಷ್ಟು ಹಾಗೂ ಅದಕ್ಕೂ ಹೆಚ್ಚಿನ ಮಟ್ಟದ ತಾಪಮಾನವನ್ನು ತಲುಪಬಲ್ಲವು, ಆದರೆ ಅವುಗಳು ಸರಿಯಾಗಿ ಕಾರ್ಯನಿರ್ವಹಿಸಲು ಸೂರ್ಯನ ನೇರ ಬೆಳಕು ಅಗತ್ಯವಾಗಿರುವುದಲ್ಲದೇ ಸೂರ್ಯನೆಡೆಗೆ ಯಾವಾಗಲೂ ಅಭಿಮುಖವಾಗಿ ಇರುವಂತೆ ಸ್ಥಾನ ಬದಲಿಸುವ ವ್ಯವಸ್ಥೆಯಿರುವುದು ಅತ್ಯಗತ್ಯ.[೫೦]

ಭಾರತದ ಪಾಂಡಿಚೇರಿ/ಪುದುಚೇರಿಯಲ್ಲಿನ ಆರೋವಿಲ್ಲೆ ಎಂಬಲ್ಲಿ ಸೌರ ಅಡುಗೆಮನೆಯೊಂದರಲ್ಲಿರುವ ಸೌರ ಬೋಗುಣಿ/ಬಟ್ಟಲು, ಒಂದು ಏಕಾಗ್ರಗೊಳಿಸುವ ತಂತ್ರಜ್ಞಾನವಾಗಿದ್ದು, ಇದರಲ್ಲಿ ಒಂದು ಸ್ಥಾಯಿ/ನಿಶ್ಚಲ ವರ್ತುಲಾಕಾರದ ಪ್ರತಿಫಲಕವು ವರ್ತುಲದ ಒಳ ಮೇಲ್ಮೈಗೆ ಲಂಬಕೋನದಲ್ಲಿರುವ ರೇಖೆಯುದ್ದಕ್ಕೂ ಬೆಳಕನ್ನು ಕೇಂದ್ರೀಕರಿಸುವುದಲ್ಲದೇ ಗಣಕೀಕೃತ ನಿಯಂತ್ರಣ ವ್ಯವಸ್ಥೆಯೊಂದು ಗ್ರಾಹಕವೊಂದನ್ನು ಈ ರೇಖೆಯನ್ನು ಅಡ್ಡಹಾಯುವ ರೀತಿಯಲ್ಲಿ ಕದಲಿಸುತ್ತದೆ. ಹೀಗೆ ಮಾಡಿದಾಗ ಗ್ರಾಹಕದಲ್ಲಿನ ತಾಪಮಾನವು ೧೫೦ °Cಗಳಿಗೆ ತಲುಪಿದ ನಂತರ ಹಬೆಯುತ್ಪನ್ನವಾಗುವುದಲ್ಲದೇ ತದನಂತರ ಪ್ರಕ್ರಿಯಾತ್ಮಕ ಉಷ್ಣ/ಶಾಖವನ್ನು ರೂಪಿಸಲು ಬಳಸಲಾಗುತ್ತದೆ.[೫೧]

ವೂ/ವೋಲ್ಫ್‌‌‌ಗ್ಯಾಂಗ್‌ ಷೆಫ್ಲರ್‌‌ರವರು ೧೯೮೬ರಲ್ಲಿ ಅಭಿವೃದ್ಧಿಪಡಿಸಿದ ಪ್ರತಿಫಲಕವೊಂದನ್ನು ಅನೇಕ ಸೌರ ಅಡಿಗೆಮನೆಗಳಲ್ಲಿ ಬಳಸಲಾಗುತ್ತದೆ. ಷೆಫ್ಲರ್‌‌ ಪ್ರತಿಫಲಕಗಳು ತೊಟ್ಟಿ ಮತ್ತು ಶಕ್ತಿ ಗೋಪುರದ ಕೇಂದ್ರೀಕರಣ ತಂತ್ರಜ್ಞಾನಗಳ ಲಕ್ಷಣಗಳನ್ನು ವಿಲೀನಗೊಳಿಸಿ ರಚಿಸಿದ ನಮ್ಯವಾದ ಪರವಲಯಾಕಾರದಲ್ಲಿರುವ ತಟ್ಟೆಗಳಾಗಿರುತ್ತವೆ. ಧೃವೀಯ ಪಥಗುರುತಿಸುವಿಕೆಯನ್ನು ಸೂರ್ಯನ ದೈನಂದಿನ ಚಲನೆಯ ಪಥವನ್ನು ಅನುಸರಿಸಲು ಬಳಸಲಾಗುತ್ತಿದ್ದು, ಇದರಲ್ಲಿ ಪ್ರತಿಫಲಕದ ವಕ್ರತೆಯನ್ನು ಬಿಸಿಲು/ಸೂರ್ಯನ ಬೆಳಕಿನ ಆಪಾತ ಕೋನದಲ್ಲಿ ಋತುಗಳಿಗನುಗುಣವಾಗಿ ಆಗುವ ವ್ಯತ್ಯಾಸಗಳಿಗೆ ಹೊಂದಿಸಲಾಗುತ್ತದೆ. ಈ ಪ್ರತಿಫಲಕಗಳು ೪೫೦–೬೫೦ °C ವ್ಯಾಪ್ತಿಯ ತಾಪಮಾನಗಳನ್ನು ತಲುಪಬಹುದಾಗಿದ್ದು ಸ್ಥಿರ ನಾಭಿ ಬಿಂದುವನ್ನು ಹೊಂದಿರುವುದರಿಂದ ಅಡಿಗೆ ಮಾಡುವಿಕೆಯನ್ನು ಸರಳಗೊಳಿಸುತ್ತದೆ.[೫೨] ಭಾರತದ ರಾಜಸ್ಥಾನದಲ್ಲಿರುವ ಅಬು ರಸ್ತೆಯಲ್ಲಿ ಅಳವಡಿಸಲಾಗಿರುವ ವಿಶ್ವದಲ್ಲಿಯೇ ಬೃಹತ್ತಾದ ಷೆಫ್ಲರ್‌‌ ಪ್ರತಿಫಲಕ ವ್ಯವಸ್ಥೆಯು ದಿನಕ್ಕೆ ೩೫,೦೦೦ ಜನರಿಗೆ ಊಟವನ್ನು ಹಾಕಲು ಆಗುವಷ್ಟು ಅಡಿಗೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.[೫೩] ೨೦೦೮ರ ವೇಳೆಗೆ, ೨,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ದೊಡ್ಡ ಷೆಫ್ಲರ್‌‌ ಪಾಕಪಾತ್ರೆಗಳನ್ನು ವಿಶ್ವದಾದ್ಯಂತ ನಿರ್ಮಿಸಲಾಗಿದೆ.[೫೪]

ಪ್ರಕ್ರಿಯಾತ್ಮಕ ಉಷ್ಣ/ಶಾಖ[ಬದಲಾಯಿಸಿ]

Main articles: Solar pond, Salt evaporation pondಮತ್ತು Solar furnace

ಸೌರ ಶಕ್ತಿ ಕೇಂದ್ರೀಕರಣ ತಂತ್ರಜ್ಞಾನಗಳಾದ ಪರವಲಯಾಕಾರದ ತಟ್ಟೆಗಳು, ತೊಟ್ಟಿ/ಬಾನೆ ಮತ್ತು ಷೆಫ್ಲರ್‌‌ ಪ್ರತಿಫಲಕಗಳು ವಾಣಿಜ್ಯೋದ್ದೇಶದ ಮತ್ತು ಕೈಗಾರಿಕೋದ್ದೇಶದ ಉಪಯುಕ್ತತೆ/ಅನ್ವಯಗಳಿಗೆ ಪ್ರಕ್ರಿಯಾತ್ಮಕ ಉಷ್ಣ/ಶಾಖವನ್ನು ಒದಗಿಸಬಲ್ಲವು. ಈ ತರಹದ ಪ್ರಥಮ ವಾಣಿಜ್ಯೋದ್ದೇಶದ ಕೇಂದ್ರೀಕರಣ ವ್ಯವಸ್ಥೆ ಎಂದರೆ USAಯ ಜಾರ್ಜಿಯಾದಲ್ಲಿನ ಷೆನಾನ್‌ಡೋವಾಹ್‌‌ನಲ್ಲಿರುವ ಸೌರ ಸಂಪೂರ್ಣ ಶಕ್ತಿ ಯೋಜನೆ /ಸೋಲಾರ್‌ ಟೋಟಲ್‌‌ ಎನರ್ಜಿ ಪ್ರಾಜೆಕ್ಟ್‌ (STEP) ಆಗಿದ್ದು ಅದರಲ್ಲಿ ೧೧೪ ಪರವಲಯಾಕಾರದಲ್ಲಿರುವ ತಟ್ಟೆಗಳಿರುವ ಪ್ರದೇಶವು ಅಲ್ಲಿನ ಪೋಷಾಕು/ಬಟ್ಟೆ ಕಾರ್ಖಾನೆಯೊಂದರ ಪ್ರಕ್ರಿಯಾತ್ಮಕ ತಾಪನ, ಹವಾನಿಯಂತ್ರಣ ವ್ಯವಸ್ಥೆ ಮತ್ತು ವಿದ್ಯುತ್‌ ಅಗತ್ಯಗಳ ೫೦%ರಷ್ಟನ್ನು ಒದಗಿಸುತ್ತದೆ. ಈ ವಿದ್ಯುತ್‌‌ವಾಹಕ ತಂತಿಗಳ ಜಾಲ ಸಂಪರ್ಕಿತ ಸಹಕಾರಿ ಉತ್ಪಾದಕ ವ್ಯವಸ್ಥೆಯು ೪೦೦ kWಗಳಷ್ಟು ವಿದ್ಯುಚ್ಛಕ್ತಿ ಜೊತೆಗೆ ೪೦೧ kWಗಳಷ್ಟು ಪ್ರಮಾಣದ ಹಬೆಯ ರೂಪದಲ್ಲಿನ ಉಷ್ಣಶಕ್ತಿ ಮತ್ತು ೪೬೮ kWಗಳಷ್ಟು ತಣ್ಣನೆಯ ನೀರನ್ನು ಒದಗಿಸುತ್ತಿತ್ತಲ್ಲದೇ ಅತ್ಯುಚ್ಚ ಒತ್ತಡದ ಶಾಖಧಾರಕ ಶೇಖರಣೆಯನ್ನು ಒಂದು ಗಂಟೆಯ ಕಾಲ ನಿರ್ವಹಿಸುವ ಸಾಮರ್ಥ್ಯವನ್ನು ತೋರಿತ್ತು.[೫೫]

ಬಾಷ್ಪೀಕರಿಸುವ/ಆವಿಯಾಗಿಸುವ/ಹಬೆಯಾಗಿಸುವ ಕೊಳಗಳು ಆಳವಿಲ್ಲದ ಕೊಳಗಳಾಗಿದ್ದು ಬಾಷ್ಪೀಕರಣ/ಆವಿಯಾಗಿಸುವಿಕೆ/ಹಬೆಯಾಗಿಸುವಿಕೆಯ ಮೂಲಕ ಕರಗಿದ ಘನವಸ್ತುಗಳನ್ನು ಸಾಂದ್ರೀಕರಿಸುತ್ತವೆ. ಬಾಷ್ಪೀಕರಿಸುವ/ಆವಿಯಾಗಿಸುವ/ಹಬೆಯಾಗಿಸುವ ಕೊಳಗಳ ಬಳಕೆಯು ಸಮುದ್ರದ ನೀರಿನಿಂದ ಉಪ್ಪನ್ನು ಪಡೆಯಲು ಸೌರ ಶಕ್ತಿಯ ಪ್ರಾಚೀನ ಉಪಯುಕ್ತತೆ/ಅನ್ವಯಗಳಲ್ಲಿ ಒಂದಾಗಿದೆ. ಬೇರ್ಪಡಿಸುವ ಗಣಿಗಾರಿಕೆಯಲ್ಲಿ ಬಳಸುವ ಸಾಂದ್ರೀಕೃತ ಸಮುದ್ರ ಜಲದ ದ್ರಾವಣವನ್ನು ತಯಾರಿಸುವಿಕೆ ಹಾಗೂ ಕೊಳಚೆ ಹರಿಯುವಿಕೆಗಳಲ್ಲಿ ಕರಗಿಹೋದ ಘನವಸ್ತುಗಳನ್ನು ಹೊರಹಾಕುವಿಕೆಗಳು ಇದರ ಆಧುನಿಕ ಬಳಕೆಗೆ ಉದಾಹರಣೆಯಾಗಿದೆ.[೫೬]

ಬಟ್ಟೆಯನ್ನು ಒಣಹಾಕುವ ತಂತಿಗಳು, ಬಟ್ಟೆ ಒಣಗಿಸುವ ಕಟ್ಟೋಣಗಳು ಮತ್ತು ಬಟ್ಟೆಗಳ ಗೋದಣಿಗೆ/ಪತ್ತಿಗೆಗಳು ವಿದ್ಯುಚ್ಛಕ್ತಿ ಅಥವಾ ಅನಿಲವನ್ನು ಬಳಸಿಕೊಳ್ಳದೆಯೇ ಗಾಳಿ ಮತ್ತು ಬಿಸಿಲು/ಸೂರ್ಯನ ಬೆಳಕುಗಳ ಮೂಲಕ ಬಾಷ್ಪೀಕರಣ/ಆವಿಯಾಗಿಸುವಿಕೆ/ಹಬೆಯಾಗಿಸುವ ಪ್ರಕ್ರಿಯೆಯನ್ನು ನಡೆಸಿ ಬಟ್ಟೆಗಳನ್ನು ಒಣಗಿಸುತ್ತವೆ. ಯುನೈಟೆಡ್‌‌ ಸ್ಟೇಟ್ಸ್‌‌ನ ಕೆಲ ರಾಜ್ಯಗಳಲ್ಲಿ ಶಾಸನವು ಬಟ್ಟೆಯನ್ನು ಒಣಗಲು ಹಾಕುವ ಹಕ್ಕನ್ನು ರಕ್ಷಿಸುತ್ತದೆ.[೫೭]

ಹೊಳಪುಮೈ ಇಲ್ಲದ ಹಬೆ/ಆವಿ ಸಂಗ್ರಾಹಕಗಳೆಂದರೆ (UTC) ವಾತಾಯನ ವ್ಯವಸ್ಥೆಯ ಗಾಳಿಯನ್ನು ಮುಂಚೆಯೇ ಬೆಚ್ಚಗಾಗಿಸಲು ಬಳಸುವ ರಂಧ್ರಗಳಿಂದ ಕೂಡಿದ ಸೂರ್ಯಮುಖಿ ಗೋಡೆಗಳಾಗಿರುತ್ತವೆ. UTC ಸಾಧನಗಳು ಒಳಬರುವ ಗಾಳಿಯ ತಾಪಮಾನವನ್ನು ೨೨ °Cಗಳವರೆಗೆ ಹೆಚ್ಚಿಸಬಹುದಲ್ಲದೇ ೪೫–೬೦ °Cಗಳಷ್ಟು ಪ್ರಮಾಣದ ತಾಪಮಾನವನ್ನು ಹೊರಮಾರ್ಗದಲ್ಲಿ ನೀಡುವುದು ಸಾಧ್ಯ.[೫೮] ಹಬೆ/ಆವಿ ಸಂಗ್ರಾಹಕಗಳ ಅಲ್ಪ ಮರುಪಾವತಿಯ ಅವಧಿಯು (೩ರಿಂದ ೧೨ ವರ್ಷಗಳು) ಅವುಗಳನ್ನು ಹೊಳಪುಮೈನ ಸಂಗ್ರಾಹಕ ವ್ಯವಸ್ಥೆಗಳಿಗಿಂತ ಮಿತವ್ಯಯದ ಪರ್ಯಾಯ ವ್ಯವಸ್ಥೆಯನ್ನಾಗಿ ಮಾಡಿದೆ.[೫೮] ಕೋಸ್ಟರಿಕಾದಲ್ಲಿ ಕಾಫೀ ಬೀಜಗಳನ್ನು ಒಣಗಿಸಲು ಬಳಸುವ ೮೬೦ m² ಅಳತೆಯ ಸಂಗ್ರಾಹಕ ಮತ್ತು ಭಾರತದ ಕೊಯಮತ್ತೂರಿನಲ್ಲಿ ಚೆಂಡುಮಲ್ಲಿಗೆ ಹೂವುಗಳನ್ನು ಒಣಗಿಸಲಿಕ್ಕೆ ಬಳಸುವ ೧,೩೦೦ m² ಅಳತೆಯ ಸಂಗ್ರಾಹಕವೂ ಸೇರಿದಂತೆ ೨೦೦೩ರ ಹೊತ್ತಿಗೆ, ೩೫,೦೦೦ m²ಗಳಷ್ಟು ಸಂಯೋಜಿತ ಸಂಗ್ರಾಹಕ ಪ್ರದೇಶವನ್ನು ವ್ಯಾಪಿಸಿದ ೮೦ಕ್ಕೂ ಹೆಚ್ಚಿನ ಇಂತಹಾ ಸಜ್ಜುಗೊಳಿಕೆಗಳನ್ನು ವಿಶ್ವದಾದ್ಯಂತ ಸ್ಥಾಪಿಸಲಾಗಿದೆ.[೫೯]

ವಿದ್ಯುಚ್ಛಕ್ತಿ ಉತ್ಪಾದನೆ[ಬದಲಾಯಿಸಿ]

Main article: Solar power
PS10 ಸಾಧನವು ಬಿಸಿಲು/ಸೂರ್ಯನ ಬೆಳಕನ್ನು ಮಧ್ಯದಲ್ಲಿರುವ ಗೋಪುರದ ಮೇಲಿರುವ ಸೂರ್ಯಸ್ಥಾಯಿ ಕನ್ನಡಿವ್ಯವಸ್ಥೆಯಿಂದ ಕೇಂದ್ರೀಕರಿಸುತ್ತದೆ.

ಸೌರ ವಿದ್ಯುಚ್ಛಕ್ತಿ ಎಂದರೆ ಬಿಸಿಲು/ಸೂರ್ಯನ ಬೆಳಕನ್ನು ದ್ಯುತಿವಿದ್ಯುಜ್ಜನಕಗಳನ್ನು (PV) ಬಳಸಿ ನೇರವಾಗಿ ಅಥವಾ ಸಾಂದ್ರೀಕೃತ ಸೌರ ವಿದ್ಯುಚ್ಛಕ್ತಿಯನ್ನು (CSP) ಬಳಸುವ ಮೂಲಕ ಪರೋಕ್ಷವಾಗಿ ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುವುದಾಗಿರುತ್ತದೆ. CSP ವ್ಯವಸ್ಥೆಗಳು ಮಸೂರಗಳು ಅಥವಾ ಕನ್ನಡಿಗಳನ್ನು ಮತ್ತು ಅನುಸರಣಾ ವ್ಯವಸ್ಥೆಗಳನ್ನು ವಿಶಾಲ ಪ್ರದೇಶದ ಬಿಸಿಲು/ಸೂರ್ಯನ ಬೆಳಕನ್ನು ಸಣ್ಣ ರಶ್ಮಿದಂಡವಾಗಿ ಏಕಾಗ್ರಗೊಳಿಸಲು ಬಳಸುತ್ತವೆ. PV ಪ್ರಕ್ರಿಯೆಯು ಬೆಳಕನ್ನು ವಿದ್ಯುತ್‌‌ ಹೊಯಿಲನ್ನಾಗಿ ದ್ಯುತಿವಿದ್ಯುತ್‌ ಪರಿಣಾಮದ ಮೂಲಕ ಪರಿವರ್ತಿಸುತ್ತದೆ.

ವಾಣಿಜ್ಯೋದ್ದೇಶದ CSP ಘಟಕಗಳನ್ನು ಮೊದಲಿಗೆ ೧೯೮೦ರ ದಶಕದಲ್ಲಿ ಅಭಿವೃದ್ಧಿಪಡಿಸಲಾಯಿತಲ್ಲದೇ, ೩೫೪ MW ಸಾಮರ್ಥ್ಯದ SEGS CSP ಅಳವಡಿಕೆಯು ವಿಶ್ವದಲ್ಲೇ ಅತಿದೊಡ್ಡ ಸೌರ ವಿದ್ಯುಚ್ಛಕ್ತಿ ಘಟಕವಾಗಿದ್ದು ಕ್ಯಾಲಿಫೋರ್ನಿಯಾದ ಮೊಜಾವೆ ಮರುಭೂಮಿಯಲ್ಲಿ ಇದನ್ನು ಸ್ಥಾಪಿಸಲಾಗಿದೆ. ಇತರೆ ದೊಡ್ಡ CSP ಘಟಕಗಳೆಂದರೆ ಸ್ಪೇನ್‌‌ನಲ್ಲಿಯೇ ಇರುವ ಸೊಲ್ನೋವಾ ಸೌರ ವಿದ್ಯುಚ್ಛಕ್ತಿ ಕೇಂದ್ರ (೧೫೦ MW) ಮತ್ತು ಅಂಡಾಸೋಲ್‌‌ ಸೌರ ವಿದ್ಯುಚ್ಛಕ್ತಿ ಕೇಂದ್ರಗಳಾಗಿವೆ (೧೦೦ MW). ಕೆನಡಾದಲ್ಲಿರುವ ೮೦ MW ಸಾಮರ್ಥ್ಯದ ಸಾರ್ನಿಯಾ ದ್ಯುತಿವಿದ್ಯುಜ್ಜನಕ ವಿದ್ಯುಚ್ಛಕ್ತಿ ಕೇಂದ್ರ/ಘಟಕವು, ವಿಶ್ವದಲ್ಲಿಯೇ ಅತಿ ದೊಡ್ಡದಾದ ದ್ಯುತಿವಿದ್ಯುಜ್ಜನಕ ಘಟಕವಾಗಿದೆ.

ಪ್ರಯೋಗಾತ್ಮಕ ಸೌರ ವಿದ್ಯುಚ್ಛಕ್ತಿ[ಬದಲಾಯಿಸಿ]

Main articles: Solar pondಮತ್ತು Thermogenerator
ದಕ್ಷಿಣ ಅಮೇರಿಕಾದ ಅಟಕಾಮಾ ಮರುಭೂಮಿಯಲ್ಲಿರುವ ಸೌರ ಬಾಷ್ಪೀಕರಣ/ಆವಿಯಾಗಿಸುವಿಕೆ/ಹಬೆಯಾಗಿಸುವ ಕೊಳಗಳು

ಸೌರ ಕೊಳ ಎಂಬುದೊಂದು ಸೌರ ಶಕ್ತಿಯನ್ನು ಸಂಗ್ರಹಿಸುವ ಹಾಗೂ ಶೇಖರಿಸುವ ಉಪ್ಪು ನೀರಿನ (ಸಾಧಾರಣವಾಗಿ ೧–೨ m ಆಳವಿರುತ್ತದೆ) ಕೊಳವಾಗಿರುತ್ತದೆ. ಸೌರ ಕೊಳಗಳನ್ನು ಮೊತ್ತಮೊದಲಿಗೆ Dr. ರುಡಾಲ್ಫ್‌‌ ಬ್ಲಾಕ್‌/ಚ್‌‌ ಎಂಬುವವರು ೧೯೪೮ರಲ್ಲಿ ಆಳ ಹೆಚ್ಚಾದಂತೆ ತಾಪಮಾನವೂ ಹೆಚ್ಚಾಗುವ ಹಂಗೆರಿಯಲ್ಲಿನ ಸರೋವರವೊಂದರ ಬಗ್ಗೆ ವರದಿಗಳನ್ನು ಪರಿಶೀಲಿಸಿದಾಗ ಪ್ರತಿಪಾದಿಸಿದ್ದರು. ಈ ರೀತಿಯ ಪರಿಣಾಮವು ಸರೋವರದ ನೀರಿನಲ್ಲಿನ ಉಪ್ಪಿನಂಶದಿಂದಾಗಿದ್ದು, ಅದು ಸಂವಹನ ಪ್ರವಾಹವನ್ನು ತಡೆಹಿಡಿಯುವ "ಸಾಂದ್ರತೆಯ ಇಳುಕಲಿನ ಪ್ರಮಾಣ"ವನ್ನು ಉಂಟುಮಾಡುತ್ತಿದೆ. ಜೆರುಸಲೇಮ್‌‌ನ ಬಳಿಯಿರುವ ಮೃತ ಸಮುದ್ರದ ತೀರದಲ್ಲಿ ೧೯೫೮ರಲ್ಲಿ ಇದರ ಪ್ರಾಯೋಗಿಕ ಮಾದರಿಯನ್ನು ನಿರ್ಮಿಸಲಾಗಿತ್ತು.[೬೦] ಈ ಕೊಳವು ಅನೇಕ ನೀರಿನ ಪದರಗಳನ್ನು ಹೊಂದಿದ್ದು ಮೇಲ್ಭಾಗದ ಪದರವು ದುರ್ಬಲ ಉಪ್ಪಿನ ದ್ರಾವಣವನ್ನು ಹೊಂದಿದ್ದು ಹಂತಹಂತವಾಗಿ ಹೆಚ್ಚುತ್ತಾ ಹೋಗಿ ತಳಭಾಗದಲ್ಲಿ ತೀಕ್ಷ್ಣ ಉಪ್ಪಿನ ದ್ರಾವಣವನ್ನು ಹೊಂದಿತ್ತು. ಈ ಸೌರ ಕೊಳವು ತನ್ನ ತಳಭಾಗದಲ್ಲಿ ೯೦ °Cಯಷ್ಟು ತಾಪಮಾನವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದ್ದು ಅಂದಾಜು ಶೇಕಡಾ ಎರಡರಷ್ಟು ಸೌರಶಕ್ತಿಯಿಂದ ವಿದ್ಯುಚ್ಛಕ್ತಿಯ ಪರಿವರ್ತನೆಯ ಕಾರ್ಯಪಟುತ್ವವನ್ನು ಹೊಂದಿತ್ತು.

ಉಷ್ಣಧಾರಕವಿದ್ಯುತ್‌‌ ಅಥವಾ "ಉಷ್ಣಧಾರಕ ಪ್ರವಾಹ ವಿದ್ಯುತ್‌‌" ಸಾಧನಗಳು ವಿದೃಶವಾದ ವಸ್ತುಗಳ/ಸಲಕರಣೆಗಳ ನಡುವಿನ ತಾಪಮಾನ ವ್ಯತ್ಯಾಸವನ್ನು ವಿದ್ಯುತ್‌ ಹೊಯಿಲನ್ನಾಗಿ ಪರಿವರ್ತಿಸುತ್ತವೆ. ೧೮೦೦ರ ದಶಕದಲ್ಲಿ,[೬೧] ಮೊದಲಿಗೆ ಸೌರ ಶಕ್ತಿಯನ್ನು ಶೇಖರಿಸುವ ಒಂದು ವಿಧಾನವಾಗಿ ಸೌರಶಕ್ತಿ ಪ್ರವರ್ತಕ ಮೌಚೌಟ್‌‌ರಿಂದ ಪ್ರಸ್ತಾಪಿಸಲ್ಪಟ್ಟ ಉಷ್ಣಧಾರಕ ವಿದ್ಯುತ್‌‌ಕ್ಷೇತ್ರವು/ಥರ್ಮೋಎಲೆಕ್ಟ್ರಿಕ್ಸ್‌ ಶಾಸ್ತ್ರವು ೧೯೩೦ರ ದಶಕದ ಅವಧಿಯಲ್ಲಿ ಸೋವಿಯೆತ್‌ ಒಕ್ಕೂಟದಲ್ಲಿ ಮತ್ತೆ ಹೊರಹೊಮ್ಮಿತು. ಸೋವಿಯೆತ್‌‌ ವಿಜ್ಞಾನಿ ಅಬ್ರಾಂ/ಅಬ್ರಹಾಂ ಅಯೋಫೆರ ಮಾರ್ಗದರ್ಶನದಲ್ಲಿ ಸಾಂದ್ರೀಕರಣ ವ್ಯವಸ್ಥೆಯೊಂದನ್ನು ೧ hp ಸಾಮರ್ಥ್ಯದ ಎಂಜಿನ್‌ ಚಾಲಿಸಲು ಉಷ್ಣಧಾರಕವಿದ್ಯುತ್‌‌ ವಿಧಾನದಲ್ಲಿ ವಿದ್ಯುತ್‌ ಉತ್ಪಾದಿಸಲು ಬಳಸಲಾಗಿತ್ತು.[೬೨] ಉಷ್ಣಧಾರಕ ವಿದ್ಯುಜ್ಜನಕಗಳನ್ನು ನಂತರ ಕ್ಯಾಸಿನಿ, ಗೆಲಿಲಿಯೋ ಮತ್ತು ವೈಕಿಂಗ್‌ಗಳಂತಹಾ ಅಗಾಧ ಅಂತರಿಕ್ಷ ಯೋಜನೆಗಳಿಗೆ ಬೇಕಾದ ವಿದ್ಯುಚ್ಛಕ್ತಿಯ ಅಗತ್ಯತೆಯನ್ನು ಪೂರೈಸಲು ಶಕ್ತಿ ಪರಿವರ್ತನಾ ತಂತ್ರಜ್ಞಾನವಾಗಿ US ಅಂತರಿಕ್ಷ ಯೋಜನೆಯಲ್ಲಿ ಬಳಸಲಾಯಿತು. ಈ ಸಾಧನಗಳ ದಕ್ಷತೆಯನ್ನು ೭–೮%ರಿಂದ ೧೫–೨೦%ಗಳವರೆಗೆ ಹೆಚ್ಚಿಸುವ ಉದ್ದೇಶಕೇಂದ್ರಿತವಾಗಿ ಈ ಕ್ಷೇತ್ರದಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲಾಗುತ್ತಿದೆ.[೬೩]

ಸೌರ ರಾಸಾಯನಿಕ ಕ್ಷೇತ್ರ[ಬದಲಾಯಿಸಿ]

Main article: Solar chemical

ಸೌರ ರಾಸಾಯನಿಕ ಪ್ರಕ್ರಿಯೆಗಳು ರಾಸಾಯನಿಕ ಪ್ರತಿಕ್ರಿಯೆಗಳನ್ನು ಪ್ರೇರಿಸಲು ಸೌರ ಶಕ್ತಿಯನ್ನು ಬಳಸುತ್ತವೆ. ಈ ಪ್ರಕ್ರಿಯೆಗಳು ಇತರೆ ಪರ್ಯಾಯ ಮೂಲಗಳಿಂದ ಸಿಗುತ್ತಿದ್ದ ಶಕ್ತಿಯನ್ನು ಸರಿದೂಗಿಸುತ್ತವಲ್ಲದೇ ಸೌರ ಶಕ್ತಿಯನ್ನು ಸಂಗ್ರಾಹ್ಯ ಮತ್ತು ಪರಿವಹನೀಯ ಇಂಧನಗಳನ್ನಾಗಿ ಪರಿವರ್ತಿಸಬಲ್ಲವು. ಸೌರಶಕ್ತಿ ಪ್ರೇರಿತ ರಾಸಾಯನಿಕ ಪ್ರತಿಕ್ರಿಯೆಗಳನ್ನು ಉಷ್ಣಧಾರಕ ರಾಸಾಯನಿಕ ಪ್ರತಿಕ್ರಿಯೆಗಳು ಅಥವಾ ದ್ಯುತಿರಾಸಾಯನಿಕ ಪ್ರತಿಕ್ರಿಯೆಗಳಾಗಿ ವಿಂಗಡಿಸಬಹುದಾಗಿದೆ.[೬೪]

೧೯೭೦ರ ದಶಕದಿಂದ ಜಲಜನಕ ಉತ್ಪಾದನಾ ತಂತ್ರಜ್ಞಾನಗಳು ಸೌರ ರಾಸಾಯನಿಕ ಕ್ಷೇತ್ರದಲ್ಲಿ ಗಮನಾರ್ಹ ಮಟ್ಟಿಗೆ ಸಂಶೋಧನೆಯ ವಸ್ತುವಾಗಿವೆ. ದ್ಯುತಿವಿದ್ಯುಜ್ಜನಕ ಅಥವಾ ದ್ಯುತಿರಾಸಾಯನಿಕ ಕೋಶಗಳಿಂದ ಉಂಟಾಗಿಸುವ ವಿದ್ಯುದ್ವಿಚ್ಛೇದನದ ಹೊರತಾಗಿ, ಅನೇಕ ಉಷ್ಣಧಾರಕ ರಾಸಾಯನಿಕ ಪ್ರಕ್ರಿಯೆಗಳನ್ನು ಕೂಡಾ ಶೋಧಿಸಲಾಗಿದೆ. ಅಂತಹಾ ಒಂದು ವಿಧಾನದಲ್ಲಿ ಉನ್ನತ ತಾಪಮಾನದ (೨೩೦೦-೨೬೦೦ °C) ಪರಿಸ್ಥಿತಿಯಲ್ಲಿ ನೀರಿನಿಂದ ಆಕ್ಸಿಜನ್‌‌/ಆಮ್ಲಜನಕ ಮತ್ತು ಹೈಡ್ರೋಜೆನ್‌‌/ಜಲಜನಕಗಳನ್ನು ಬೇರ್ಪಡಿಸಲು ಸಾಂದ್ರಕಾರಕ/ಸಾರೀಕಾರಕಗಳನ್ನು ಬಳಸಲಾಗುತ್ತದೆ.[೬೫] ಮತ್ತೊಂದು ವಿಧಾನವು ಸಾಂಪ್ರದಾಯಿಕ ಸ್ವರೂಪಬದಲಿಕೆ ವಿಧಾನಗಳಿಗೆ ಹೋಲಿಸಿದರೆ ಸೌರ ಸಾಂದ್ರೀಕಾರಕ/ಸಾರೀಕಾರಕಗಳಿಂದ ಉತ್ಪಾದನೆಯಾಗುವ ಉಷ್ಣದಿಂದ ನೈಸರ್ಗಿಕ ಅನಿಲವನ್ನು ಹಬೆ/ಆವಿಯ ಸ್ವರೂಪಕ್ಕೆ ಬದಲಿಸುವಿಕೆ ಒಟ್ಟಾರೆ ಜಲಜನಕದ ಉತ್ಪತ್ತಿಯನ್ನು ಹೆಚ್ಚಿಸುತ್ತದೆ.[೬೬] ಪ್ರತಿಕ್ರಿಯಾಕಾರಕಗಳ ವಿಘಟನೆ ಮತ್ತು ಪುನರುತ್ಪಾದನೆಗಳ ವೈಶಿಷ್ಟ್ಯತೆಗಳನ್ನು ಹೊಂದಿರುವ ಉಷ್ಣಧಾರಕ ರಾಸಾಯನಿಕ ಆವರ್ತಗಳು ಜಲಜನಕ ಉತ್ಪಾದನೆಯ ಮತ್ತೊಂದು ಮಾರ್ಗವಾಗಿ ಗೋಚರಿಸುತ್ತವೆ. ವೇಯ್ಜ್‌ಮನ್‌‌ ಇನ್‌ಸ್ಟಿಟ್ಯೂಟ್‌ ಸಂಸ್ಥೆಯಲ್ಲಿ ಇನ್ನೂ ಅಭಿವೃದ್ಧಿಯ ಹಂತದಲ್ಲಿರುವ ಸೋಲ್‌ಝಿಂಕ್‌‌ ಪ್ರಕ್ರಿಯೆಯು ಸತು/ಸತುವಿನ ಆಕ್ಸೈಡ್‌‌ (ZnO)ಅನ್ನು ೧೨೦೦ °Cಕ್ಕೂ ಮೀರಿದ ತಾಪಮಾನದ ಪರಿಸ್ಥಿತಿಯಲ್ಲಿ ವಿಘಟಿಸುವ ೧ MW ಸಾಮರ್ಥ್ಯದ ಸೌರಶಕ್ತಿಯ ಕುಲುಮೆಯನ್ನು ಬಳಸುತ್ತದೆ. ಇದರ ಆರಂಭಿಕ ಪ್ರತಿಕ್ರಿಯೆಯು ಶುದ್ಧ ಸತು/ಸತುವುವನ್ನು ಉತ್ಪಾದಿಸಿ, ತದನಂತರ ಅದನ್ನು ನೀರಿನೊಂದಿಗೆ ಪ್ರತಿಕ್ರಿಯಾ ಪ್ರಕ್ರಿಯೆಗೊಳಪಡಿಸಿ ಜಲಜನಕ ಉತ್ಪತ್ತಿಯಾಗುವಂತೆ ಮಾಡಲಾಗುತ್ತದೆ.[೬೭]

ಸಾಂಡಿಯಾ ಸಂಸ್ಥೆಯ ಬಿಸಿಲಿಂದ ಪೆಟ್ರೋಲ್‌‌ ಉತ್ಪಾದನೆ (S೨P) ತಂತ್ರಜ್ಞಾನವು ಝಿರ್‌ಕೋನಿಯಮ್‌ ಆಕ್ಸೈಡ್‌/ಫೆರೈಟ್‌ ವೇಗವರ್ಧಕವೊಂದರೊಂದಿಗೆ ಬಿಸಿಲು/ಸೂರ್ಯನ ಬೆಳಕನ್ನು ಕೇಂದ್ರೀಕರಿಸಿ ಉತ್ಪಾದಿಸಿದ ತೀವ್ರ ತಾಪಮಾನವನ್ನು ವಾತಾವರಣದಲ್ಲಿನ ಇಂಗಾಲದ ಡಯಾಕ್ಸೈಡ್‌‌ಅನ್ನು ಆಮ್ಲಜನಕ ಮತ್ತು ಇಂಗಾಲದ ಮಾನಾಕ್ಸೈಡ್‌‌ (CO)ಗಳಾಗಿ ವಿಭಜಿಸಲು ಬಳಸುತ್ತದೆ. ಇಂಗಾಲ ಮಾನಾಕ್ಸೈಡ್‌‌ಅನ್ನು ಆ ನಂತರ ಮಿಥೆನಾಲ್‌, ಗ್ಯಾಸೊಲಿನ್‌ ಮತ್ತು ಜೆಟ್‌ ಇಂಧನಗಳಂತಹಾ ಸಾಂಪ್ರದಾಯಿಕ ಇಂಧನಗಳನ್ನು ಸಂಶ್ಲೇಷಿಸಲು ಬಳಸಬಹುದಾಗಿರುತ್ತದೆ.[೬೮]

ದ್ಯುತಿವಿದ್ಯುತ್ತಿನ ಸಾಧನವು ಕೋಶದಲ್ಲಿನ ದ್ರಾವಣವನ್ನು (ಅಥವಾ ಸಮನಾದುದು) ಪ್ರಕಾಶಗೊಳಿಸಿದಾಗ ಶಕ್ತಿಪೂರಿತ ರಾಸಾಯನಿಕ ಮಧ್ಯವರ್ತಿಯಾಗಿ ವರ್ತಿಸುವ ಒಂದು ವಿಧದ ವಿದ್ಯುತ್ಕೋಶ/ಬ್ಯಾಟರಿಯಾಗಿರುತ್ತದೆ. ಈ ತರಹದ ಶಕ್ತಿಪೂರಿತ ಮಧ್ಯವರ್ತಿ ರಾಸಾಯನಿಕಗಳನ್ನು ಶೇಖರಿಸಿಡಲೂ ಸಾಧ್ಯ ಹಾಗೂ ತದನಂತರ ವಿದ್ಯುದ್ಧೃವಗಳೊಂದಿಗೆ ಪ್ರತಿಕ್ರಿಯೆ ನಡೆಸಿ ವಿದ್ಯುತ್‌ ವಿಭವವನ್ನು ಉತ್ಪಾದಿಸುವಂತೆ ಮಾಡಲು ಸಾಧ್ಯವಿರುತ್ತದೆ. ಕಬ್ಬಿಣದ-ಥಿಯೋನೈನ್‌‌ ರಾಸಾಯನಿಕ ಕೋಶವು ಈ ತಂತ್ರಜ್ಞಾನಕ್ಕೆ ಒಂದು ಉದಾಹರಣೆಯಾಗಿದೆ.[೬೯]

ದ್ಯುತಿವಿದ್ಯುತ್‌‌ರಾಸಾಯನಿಕ ಕೋಶಗಳು ಅಥವಾ PECಗಳು ವಿದ್ಯುದ್ವಿಚ್ಛೇದ್ಯವೊಂದರಲ್ಲಿ ಮುಳುಗಿಸಿದ ಅರೆವಾಹಕವೊಂದನ್ನು, ಸಾಧಾರಣವಾಗಿ ಟಿ/ಟೈಟಾನಿಯಮ್‌‌ ಡಯಾಕ್ಸೈಡ್‌‌ ಅಥವಾ ಸಂಬಂಧಿತ ಟೈಟಾನೇಟ್‌‌ಗಳನ್ನು ಹೊಂದಿರುತ್ತವೆ. ಈ ಅರೆವಾಹಕವನ್ನು ಪ್ರಕಾಶಗೊಳಿಸಿದಾಗ ವಿದ್ಯುತ್‌ ವಿಭವವು ಉಂಟಾಗುತ್ತದೆ. ಒಟ್ಟಾರೆ ಎರಡು ವಿಧದ ದ್ಯುತಿವಿದ್ಯುತ್‌‌ರಾಸಾಯನಿಕ ಕೋಶಗಳಿರುತ್ತವೆ : ಬೆಳಕನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುವ ದ್ಯುತಿವಿದ್ಯುತ್‌ ಕೋಶಗಳು ಹಾಗೂ ವಿದ್ಯುದ್ವಿಚ್ಛೇದನದಂತಹಾ ರಾಸಾಯನಿಕ ಪ್ರತಿಕ್ರಿಯೆಗಳನ್ನು ಉಂಟುಮಾಡಲು ಬೆಳಕನ್ನು ಬಳಸುವ ದ್ಯುತಿರಾಸಾಯನಿಕ ಕೋಶಗಳು.[೭೦]

ಉಷ್ಣಧಾರಕ/ದ್ಯುತಿರಾಸಾಯನಿಕ ಕೋಶಗಳ ಸಂಯೋಜನೆಯೊಂದನ್ನು ಕೂಡಾ ಪ್ರಸ್ತಾಪಿಸಲಾಗಿತ್ತು. ಸ್ಟ್ಯಾನ್‌ಫೋ/ಫರ್ಡ್‌‌ PETE ಪ್ರಕ್ರಿಯೆಯು ವಾತಾವರಣದಲ್ಲಿರುವ CO೨ ಅನ್ನು ವಿದ್ಯುದ್ವಿಚ್ಛೇದನಕ್ಕೆ ಒಳಪಡಿಸಿ ಇಂಗಾಲ ಅಥವಾ ಇಂಗಾಲದ ಮಾನಾಕ್ಸೈಡ್‌‌ಅನ್ನು ಹೊರತೆಗೆಯಲು ಬೇಕಾದ, ನಂತರ ಇಂಧನ ಉತ್ಪಾದನೆಗೆ ಬಳಸಬಹುದಾದ ವಿದ್ಯುಚ್ಛಕ್ತಿ ಉತ್ಪಾದನೆಯ ದರವನ್ನು ಹೆಚ್ಚಿಸಲು ಸಾಧ್ಯವಾಗುವಂತೆ ಸೌರ ಉಷ್ಣಧಾರಕ ಶಕ್ತಿಯನ್ನು ಉಷ್ಣಾಯಾನಿಕ ಲೋಹವೊಂದರ ತಾಪಮಾನವನ್ನು ಸುಮಾರು ೮೦೦Cವರೆಗೆ ಏರಿಸಲು ಬಳಸುತ್ತದೆ, ಇದರಿಂದುಂಟಾಗುವ ವ್ಯರ್ಥ ಉಷ್ಣಾಂಶವನ್ನು ಕೂಡಾ ಬಳಸಿಕೊಳ್ಳಬಹುದಾಗಿರುತ್ತದೆ.[೭೧]

ಸೌರಶಕ್ತಿಚಾಲಿತ ವಾಹನಗಳು[ಬದಲಾಯಿಸಿ]

ಆಸ್ಟ್ರೇಲಿಯಾವು ವಿಶ್ವ ಸೌರಶಕ್ತಿ ಸವಾಲು ಸ್ಪರ್ಧೆ ಎಂಬ ನೂನಾ3ನಂತಹಾ ಸೌರಶಕ್ತಿಚಾಲಿತ ಕಾರುಗಳು [144] ಮೂಲಕ ಡಾರ್ವಿನ್‌ನಿಂದ ಅಡಿಲೇಡ್‌ನವರೆಗಿನ ದಾರಿಯಲ್ಲಿ ಕಾರುಚಾಲನೆಯ ಸ್ಪರ್ಧೆಯನ್ನು ಆಯೋಜಿಸುತ್ತದೆ.

ಸೌರಶಕ್ತಿಚಾಲಿತ ಕಾರನ್ನು ಅಭಿವೃದ್ಧಿಪಡಿಸುವುದು ೧೯೮೦ರ ದಶಕದಿಂದಲೇ ಯಾಂತ್ರಿಕಶಾಸ್ತ್ರದ ಒಂದು ಗುರಿಯಾಗಿತ್ತು. ವಿಶ್ವ ಸೌರಶಕ್ತಿ ಸ್ಪರ್ಧೆ/ಸವಾಲು ಒಂದು ಅರ್ಧವಾರ್ಷಿಕ ಸೌರಶಕ್ತಿ-ಚಾಲಿತ ಕಾರುಗಳನ್ನೋಡಿಸುವ ಸ್ಪರ್ಧೆಯಾಗಿದ್ದು ಇದರಲ್ಲಿ ಕೇಂದ್ರ/ಮಧ್ಯ ಆಸ್ಟ್ರೇಲಿಯಾದಾದ್ಯಂತ ಡಾರ್ವಿನ್‌ನಿಂದ ಅಡಿಲೇಡ್‌ವರೆಗಿನ ಪ್ರದೇಶಗಳಲ್ಲಿ ವಿಶ್ವವಿದ್ಯಾಲಯಗಳು ಮತ್ತು ಉದ್ಯಮಗಳನ್ನು ಪ್ರತಿನಿಧಿಸುವ ತಂಡಗಳು 3,021 kilometres (1,877 mi)ರ ಮೇಲೆ ಸ್ಪರ್ಧಿಸುತ್ತವೆ. ೧೯೮೭ರಲ್ಲಿ ಇದನ್ನು ಸ್ಥಾಪಿಸಿದಾಗ ವಿಜೇತ ವಾಹನದ ಸರಾಸರಿ ವೇಗವು 67 kilometres per hour (42 mph)ರಷ್ಟಿದ್ದರೆ ೨೦೦೭ರ ಹೊತ್ತಿಗೆ ವಿಜೇತ ವಾಹನದ ಸರಾಸರಿ ವೇಗವು 90.87 kilometres per hour (56.46 mph)ರಷ್ಟಕ್ಕೆ ಸುಧಾರಣೆಗೊಂಡಿದೆ.[೭೨] ಉತ್ತರ ಅಮೇರಿಕಾದ ಸೌರಶಕ್ತಿ ಸ್ಪರ್ಧೆ/ಸವಾಲು ಮತ್ತು ಯೋಜಿತ ದಕ್ಷಿಣ ಆಫ್ರಿಕಾದ ಸೌರಶಕ್ತಿ ಸ್ಪರ್ಧೆ/ಸವಾಲು ಸ್ಪರ್ಧೆಗಳು ಸೌರ ವಿದ್ಯುಚ್ಛಕ್ತಿಚಾಲಿತ ವಾಹನಗಳ ಯೋಜನಾವಿನ್ಯಾಸ ಮತ್ತು ಅಭಿವೃದ್ಧಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿರುವ ಆಸಕ್ತಿಯನ್ನು ಪ್ರತಿಬಿಂಬಿಸುವ ಹೋಲಿಸಬಲ್ಲ ಸ್ಪರ್ಧೆಗಳಾಗಿವೆ.[೭೩][೭೪]

ಕೆಲ ವಾಹನಗಳು ಸೌರ ಫಲಕಗಳನ್ನು ಹೆಚ್ಚುವರಿ/ಸಹಾಯಕ ಶಕ್ತಿಯನ್ನಾಗಿ ಉದಾಹರಣೆಗೆ ಒಳಭಾಗವನ್ನು ತಣ್ಣಗಿರಿಸಲು ಹವಾನಿಯಂತ್ರಣ ಸೌಲಭ್ಯಕ್ಕೆಂದು ಬಳಸಿಕೊಂಡು ಇಂಧನ ಬಳಕೆಯನ್ನು ಕಡಿಮೆ ಮಾಡುತ್ತವೆ.[೭೫][೭೬]

೧೯೭೫ರಲ್ಲಿ ಪ್ರಥಮ ಪ್ರಾಯೋಗಿಕ/ಕಾರ್ಯಶೀಲ ಸೌರಶಕ್ತಿಚಾಲಿತ ದೋಣಿಯನ್ನು ಇಂಗ್ಲೆಂಡ್‌ನಲ್ಲಿ ನಿರ್ಮಿಸಲಾಗಿತ್ತು.[೭೭] ೧೯೯೫ರ ವೇಳೆಗೆ PV ಫಲಕಗಳನ್ನು ಹೊಂದಿರುವ ಪ್ರಯಾಣಿಕ ದೋಣಿಗಳು ಆಗತಾನೇ ಕಾಣಿಸಿಕೊಳ್ಳತೊಡಗಿದ್ದರೆ, ಪ್ರಸ್ತುತ ವ್ಯಾಪಕ ಬಳಕೆಯಲ್ಲಿವೆ.[೭೮] ೧೯೯೬ರಲ್ಲಿ ಕೆನಿಚಿ ಹೋರೀಯವರು ಮೊತ್ತಮೊದಲ ಬಾರಿಗೆ ಪೆಸಿಫಿಕ್‌/ಶಾಂತ ಮಹಾಸಾಗರವನ್ನು ಸೌರ ವಿದ್ಯುಚ್ಛಕ್ತಿಚಾಲಿತ ದೋಣಿಯ ಮೂಲಕ ದಾಟಿದರೆ, ಸನ್‌‌೨೧ ಜೋಡುದೋಣಿಯು ಅಟ್ಲಾಂಟಿಕ್‌ ಮಹಾಸಾಗರವನ್ನು ಮೊತ್ತಮೊದಲ ಬಾರಿಗೆ ಸೌರ ವಿದ್ಯುಚ್ಛಕ್ತಿಚಾಲಿತ ಯಾನದಲ್ಲಿ ೨೦೦೬–೨೦೦೭ರ ಸಾಲಿನ ಚಳಿಗಾಲದಲ್ಲಿ ದಾಟಿತು.[೭೯] ೨೦೧೦ರಲ್ಲಿ ಇಡೀ ಭೂಗೋಳವನ್ನೇ ಪ್ರದಕ್ಷಿಣೆ ಮಾಡುವ ಯೋಜನೆಗಳಿವೆ.[೮೦]

ಸೌರ ವಿದ್ಯುಚ್ಛಕ್ತಿಚಾಲಿತ ವಾಯುಯಾನದಲ್ಲಿ ಹೀಲಿಯೋಸ್‌ UAV.

ಮಾನವರಹಿತ ಆಸ್ಟ್ರೋಫ್ಲೈಟ್‌‌ ಸನ್‌ರೈಸ್‌ ವಿಮಾನವು ೧೯೭೪ರಲ್ಲಿ ಮೊತ್ತಮೊದಲ ಸೌರಶಕ್ತಿಚಾಲಿತ ವಿಮಾನಯಾನವನ್ನು ಕೈಗೊಂಡಿತು. ೨೯ ಏಪ್ರಿಲ್‌‌ ೧೯೭೯ರಂದು ಸೋಲಾರ್‌ ರೈಸರ್‌ ವಿಮಾನ ವು ಸೌರ ವಿದ್ಯುಚ್ಛಕ್ತಿ ಚಾಲಿತ, ಸಂಪೂರ್ಣ ನಿಯಂತ್ರಣ ಹೊಂದಿದ್ದ, ಮಾನವರನ್ನು ಕರೆದೊಯ್ಯುವ ವಿಮಾನದಲ್ಲಿ ಹಾರಾಟ ಕೈಗೊಂಡು 40 feet (12 m)ಗಳಷ್ಟು ಎತ್ತರದಲ್ಲಿ ಹಾರಾಟ ನಡೆಸಿತ್ತು. ೧೯೮೦ರಲ್ಲಿ ಗೊಸ್ಸಾಮೆರ್‌ ಪೆಂಗ್ವಿನ್‌‌ ವಿಮಾನ ವು ಕೇವಲ ದ್ಯುತಿವಿದ್ಯುಜ್ಜನಕಗಳಿಂದ ಚಾಲಿತವಾದ ಪ್ರಥಮ ಪೈಲಟ್‌ಸಹಿತ ಹಾರಾಟಗಳನ್ನು ನಡೆಸಿತು. ಇದಾದ ಕೆಲವೇ ಕಾಲದಲ್ಲಿ ಸೋಲಾರ್‌‌ ಚಾಲೆಂಜರ್ ‌‌ ಜುಲೈ ೧೯೮೧ರಲ್ಲಿ ಇಂಗ್ಲಿಷ್‌‌ ಕಾಲುವೆಯನ್ನು ದಾಟಿತ್ತು. ೧೯೯೦ರಲ್ಲಿ ಎರಿಕ್‌ ರೇಮಂಡ್‌‌ರು ೨೧ ನೆಗೆತಗಳಲ್ಲಿ ಕ್ಯಾಲಿಫೋರ್ನಿಯಾದಿಂದ ಉತ್ತರ ಕೆರೋಲಿನಾಗೆ ಸೌರ ವಿದ್ಯುಚ್ಛಕ್ತಿಯನ್ನು ಬಳಸಿಕೊಂಡು ಹಾರಿದ್ದರು.[೮೧] ಪಾತ್‌/ಥ್‌‌ಫೈಂಡರ್ ‌‌ (೧೯೯೭) ಮತ್ತು ತದನಂತರದ ವಿನ್ಯಾಸಗಳೊಂದಿಗೆ ಮರಳಿದ ಮಾನವರಹಿತ ವಾಯುಯಾನ ವಾಹನಗಳೆಡೆಗೆ (UAV) ಮರಳಿದ ಅಭಿವೃದ್ಧಿಪರ್ವವು ೨೦೦೧ರಲ್ಲಿ 29,524 metres (96,864 ft)ರಷ್ಟು ಎತ್ತರದಲ್ಲಿ ಹಾರಾಟ ನಡೆಸಿದ ರಾಕೆಟ್‌‌ರಹಿತ ಮುನ್ನೂಕುವಿಕೆಯ ವಿಮಾನವೆಂದು ಎತ್ತರದ ದಾಖಲೆ ನಿರ್ಮಿಸಿದ ಹೀಲಿಯೋಸ್ ‌ನ ಸಮಯದಲ್ಲಿ ಉತ್ತುಂಗ ಮುಟ್ಟಿತು.[೮೨] ಝೆಫಿರ್‌ ಎಂಬ, BAE ಸಿಸ್ಟಮ್ಸ್‌ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಿದ್ದ ವಿಮಾನವು ದಾಖಲೆ ಮುರಿದ ಸೌರಶಕ್ತಿ ಚಾಲಿತ ವಿಮಾನಗಳ ಸಾಲಿಗೆ ಇತ್ತೀಚಿನ ಸೇರ್ಪಡೆಯಾಗಿದ್ದು, ೨೦೦೭ರಲ್ಲಿ ೫೪-ಗಂಟೆಗಳ ವಾಯುಯಾನವನ್ನು ನಡೆಸಿದ್ದು, ಒಂದು ತಿಂಗಳವರೆಗೆ ವಾಯುಯಾನ ನಡೆಸುವ ವಾಯುಯಾನಗಳನ್ನು ೨೦೧೦ರ ಹೊತ್ತಿಗೆ ಮಾಡಬಹುದೆಂಬ ಕಲ್ಪನೆ/ಯೋಜನೆಗಳಿವೆ.[೮೩]

ಸೌರಶಕ್ತಿಚಾಲಿತ ಆಕಾಶಬುಟ್ಟಿ/ಬಲೂನು ಎಂಬುದು ಕಪ್ಪು ಬಣ್ಣದ ಆಕಾಶಬುಟ್ಟಿ/ಬಲೂನು ಆಗಿದ್ದು ಇದರಲ್ಲಿ ಸಾಧಾರಣ ಗಾಳಿಯನ್ನೇ ತುಂಬಲಾಗಿರುತ್ತದೆ. ಆಕಾಶಬುಟ್ಟಿಯ/ಬಲೂನಿನ ಮೇಲೆ ಬಿಸಿಲು/ಸೂರ್ಯನ ಬೆಳಕು ಬಿದ್ದಾಗ ಒಳಗಿರುವ ಗಾಳಿಯು ಬಹುತೇಕ ಕೃತಕವಾಗಿ ಬಿಸಿಮಾಡಿದ ಬಿಸಿಗಾಳಿಯ ಆಕಾಶಬುಟ್ಟಿಯಂತೆಯೇ/ಬಲೂನಿನಂತೆಯೇ ಬಿಸಿಯಾಗಿ ವಿಸ್ತರಿಸುತ್ತ ಮೇಲ್ಮುಖ ಪ್ಲಾವಕತೆಯನ್ನು ಉಂಟುಮಾಡುತ್ತದೆ. ಕೆಲ ಸೌರಶಕ್ತಿಚಾಲಿತ ಆಕಾಶಬುಟ್ಟಿಗಳು ಮಾನವರನ್ನು ಕರೆದೊಯ್ಯುವಷ್ಟು ದೊಡ್ಡದಾಗಿದ್ದರೂ, ಇವುಗಳ ಬಳಕೆಯು ಮೇಲ್ಮೈ ವಿಸ್ತೀರ್ಣ ಮತ್ತು ಹೊರೆತೂಕದ ನಡುವಿನ ಅನುಪಾತವು ಸಾಪೇಕ್ಷವಾಗಿ ಹೆಚ್ಚಾಗುವುದರಿಂದ ಆಟಿಕೆ ಮಾರುಕಟ್ಟೆಗೆ ಸೀಮಿತವಾಗಿವೆ.[೮೪]

ಸೌರ ಶಕ್ತಿಚಾಲಿತ ಹಾಯಿಪಟಗಳು ಗಗನನೌಕೆಯಲ್ಲಿ ಬಳಸುವ ನೋದಕತಂತ್ರಜ್ಞಾನದ ಪ್ರಸ್ತಾಪಿತ ರೂಪವಾಗಿದ್ದು ಸೂರ್ಯನ ಪ್ರಸರಣ/ವಿಕಿರಣದ ಒತ್ತಡದ ಅನುಕೂಲವನ್ನು ಸಂಪೂರ್ಣ ಬಳಸಿಕೊಳ್ಳಲು ಬೃಹತ್‌ ಒಳಮುಖಿ ಕನ್ನಡಿಗಳನ್ನು ಹೊಂದಿರುತ್ತದೆ. ರಾಕೆಟ್‌ಗಳ ಹಾಗಲ್ಲದೇ, ಸೌರಶಕ್ತಿ ಚಾಲಿತ ಹಾಯಿಪಟಗಳಿಗೆ ಯಾವುದೇ ಇಂಧನದ ಅಗತ್ಯತೆ ಇರುವುದಿಲ್ಲ. ರಾಕೆಟ್‌ಗಳಿಗೆ ಹೋಲಿಸಿದರೆ ಇವುಗಳ ನೋದಕಬಲವು ಕಡಿಮೆಯೇ ಆದರೂ, ನಿಗದಿಪಡಿಸಿದ ಹಾಯಿಪಟದ ಮೇಲೆ ಸೂರ್ಯನ ಬಿಸಿಲು ಬೀಳುತ್ತಿರುವವರೆಗೆ ಇದು ಕಾರ್ಯನಿರ್ವಹಿಸುವುದಲ್ಲದೇ, ಅಂತರಿಕ್ಷದ ನಿರ್ವಾತಪ್ರದೇಶದಲ್ಲಿ ಗಮನಾರ್ಹ ಮಟ್ಟದ ವೇಗವನ್ನು ಅಂತಿಮವಾಗಿ ಗಳಿಸಿಕೊಳ್ಳಬಹುದಾಗಿರುತ್ತದೆ.[೮೫]

ಭಾರೀ-ಎತ್ತರಸಾಮರ್ಥ್ಯದ ವಾಯುನೌಕೆಗಳು (HAA) ಮಾನವರಹಿತ, ದೀರ್ಘಾವಧಿಯ, ಗಾಳಿಗಿಂತ ಹಗುರವಾದ ವಿಮಾನಗಳಾಗಿದ್ದು ಎತ್ತರಿಸಲು ಹೀಲಿಯಮ್‌ ಅನಿಲವನ್ನು ಹಾಗೂ ವಿದ್ಯುಚ್ಛಕ್ತಿಯನ್ನು ಪಡೆಯಲು ತೆಳುವಾದ ಸೌರ ಕೋಶಗಳನ್ನು ಬಳಸುತ್ತವೆ. ಯುನೈಟೆಡ್‌‌ ಸ್ಟೇಟ್ಸ್‌‌ನ ರಕ್ಷಣಾ ಇಲಾಖೆಯ ಕ್ಷಿಪಣಿ ರಕ್ಷಣಾ ಸಂಸ್ಥೆಯು ಲಾಕ್‌ಹೀಡ್‌ ಮಾರ್ಟಿನ್‌ ಸಂಸ್ಥೆಗೆ ಪ್ರಕ್ಷೇಪಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು (BMDS) ಇನ್ನೂ ಬಲಪಡಿಸಲು ಇವುಗಳನ್ನು ನಿರ್ಮಿಸುವ ಗುತ್ತಿಗೆಯನ್ನು ನೀಡಿದೆ.[೮೬] ಸೌರಶಕ್ತಿಚಾಲಿತ ವಾಯುಯಾನಗಳ ಕೆಲ ಪ್ರಯೋಜನಗಳನ್ನು ಈ ವಾಯುನೌಕೆಗಳು ಹೊಂದಿರುತ್ತವೆ : ಅವೆಂದರೆ ಊರ್ಧ್ವಮಟ್ಟದಲ್ಲಿಯೇ ಇರಲು ಅವುಗಳಿಗೆ ವಿದ್ಯುಚ್ಛಕ್ತಿಯ ಸಹಾಯ ಬೇಕಿಲ್ಲ, ಹಾಗೂ ವಾಯುನೌಕೆಗಳ ಅನಿಲಕೋಶ/ಆವರಣವು ಸೂರ್ಯನಿಗೆ ಅಭಿಮುಖವಾದ ವ್ಯಾಪಕ ಸ್ಥಳಾವಕಾಶವನ್ನು ನೀಡುತ್ತವೆ.

ಸೌರಶಕ್ತಿ ಶೇಖರಣಾ ವಿಧಾನಗಳು[ಬದಲಾಯಿಸಿ]

ಸೋಲಾರ್‌‌ ಟು'ನ ಉಷ್ಣಧಾರಕ ಶೇಖರಣಾ ವ್ಯವಸ್ಥೆಯು ಮೋಡಮುಸುಕಿದ ಹವಾಮಾನಗಳಲ್ಲಿ ಹಾಗೂ ರಾತ್ರಿಗಳಲ್ಲಿ ಕೂಡಾ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿದೆ.

ಸೌರ ಶಕ್ತಿಯು ರಾತ್ರಿಯ ಹೊತ್ತು ಲಭ್ಯವಿರುವುದಿಲ್ಲ, ಜೊತೆಗೆ ಆಧುನಿಕ ಶಕ್ತಿಬಳಕೆಯ ವ್ಯವಸ್ಥೆಗಳು ಸಾಧಾರಣವಾಗಿ ಶಕ್ತಿಯ ಸತತ ಲಭ್ಯತೆಯನ್ನು ನಿರೀಕ್ಷಿಸುವುದರಿಂದ ಸೌರಶಕ್ತಿಯ ಶೇಖರಣೆಯು ಒಂದು ಪ್ರಧಾನ ಸಂಗತಿಯಾಗಿದೆ.[೮೭]

ಉಷ್ಣ ದ್ರವ್ಯರಾಶಿ ವ್ಯವಸ್ಥೆಗಳು ಗೃಹಬಳಕೆಗೆ ಉಪಯುಕ್ತವಾದ ತಾಪಮಾನಗಳಲ್ಲಿ ದೈನಂದಿನ ಅಥವಾ ನಿರ್ದಿಷ್ಟ ಕಾಲಾವಧಿಯ ಬಳಕೆಗೆ ಸೌರ ಶಕ್ತಿಯನ್ನು ಉಷ್ಣತೆಯ ರೂಪದಲ್ಲಿ ಶೇಖರಿಸಿಡಬಲ್ಲವು. ಉಷ್ಣಧಾರಕ ಶೇಖರಣಾ ವ್ಯವಸ್ಥೆಗಳು ಸಾಧಾರಣವಾಗಿ ನೀರು, ಭೂಮಿ ಮತ್ತು ಶಿಲೆ/ಕಲ್ಲುಗಳಂತಹಾ ಉನ್ನತ ವಿಶಿಷ್ಟೋಷ್ಣತೆಯ ಸಾಮರ್ಥ್ಯವನ್ನು ಹೊಂದಿರುವ ಸುಲಭಲಭ್ಯ ವಸ್ತುಗಳನ್ನು ಬಳಸುತ್ತವೆ. ಉತ್ತಮವಾಗಿ ವಿನ್ಯಾಸಗೊಳಿಸಿದ ವ್ಯವಸ್ಥೆಗಳು ಗರಿಷ್ಠ ಬೇಡಿಕೆಯನ್ನು ಇಳಿಸಬಲ್ಲವು, ಬಳಕೆಯ ಸಮಯವನ್ನು ಒತ್ತಡದ ಅವಧಿಯಲ್ಲದ ಸಮಯಕ್ಕೆ ಬದಲಿಸಬಲ್ಲವು ಮತ್ತು ಒಟ್ಟಾರೆ ಉಷ್ಣಾಂಶವನ್ನು ಹಿಗ್ಗಿಸುವ ಹಾಗೂ ತಗ್ಗಿಸುವ ಅಗತ್ಯತೆಗಳನ್ನು ಕಡಿಮೆ ಮಾಡಬಲ್ಲವು.[೮೮][೮೯]

ಮಜಲು ಬದಲಿಸುವ ವಸ್ತುಗಳಾದ ಪ್ಯಾರಾಫಿನ್‌ ಮೇಣ ಮತ್ತು ಗ್ಲೌಬರ್‌ ಲವಣಗಳು ಮತ್ತೊಂದು ರೀತಿಯ ಉಷ್ಣಧಾರಕ ಶೇಖರಣಾ ಮಾಧ್ಯಮಗಳಾಗಿವೆ. ಈ ಸಾಮಗ್ರಿಗಳು ಅಗ್ಗವಾಗಿದ್ದು ಸುಲಭಲಭ್ಯವಾಗಿದ್ದು ಗೃಹಬಳಕೆಗೆ ಉಪಯುಕ್ತವಾದಂತಹಾ ತಾಪಮಾನಗಳನ್ನು (ಸರಿಸುಮಾರು ೬೪ °C) ಉಂಟುಮಾಡಬಲ್ಲವಾಗಿವೆ. "ಡವರ್‌‌ ಹೌಸ್‌‌" (ಮೆ/ಮಸಾಚುಸೆಟ್ಸ್‌‌‌ನಲ್ಲಿನ ಡೊ/ಡವರ್‌‌) ೧೯೪೮ರಲ್ಲಿ ಗ್ಲೌಬರ್‌ರ ಲವಣ ತಾಪನ ವ್ಯವಸ್ಥೆಯನ್ನು ಬಳಸಿದ ಮೊದಲ ಗೃಹವಾಗಿತ್ತು.[೯೦]

ಕರಗಿಸಿದ ಲವಣ/ಉಪ್ಪುಗಳನ್ನು ಬಳಸಿಕೊಂಡು ಸೌರ ಶಕ್ತಿಯನ್ನು ತೀವ್ರತರ ತಾಪಮಾನಗಳಲ್ಲಿ ಶೇಖರಿಸಿಡಬಹುದಾಗಿದೆ. ಉಪ್ಪು/ಲವಣಗಳು ಪ್ರಯೋಜನೀಯ ಶೇಖರಣಾ ಮಾಧ್ಯಮವಾಗಿದ್ದು, ಕಡಿಮೆ ವೆಚ್ಚದ್ದಾಗಿದ್ದವಾಗಿರುವುದಲ್ಲದೇ, ಅಧಿಕ ವಿಶಿಷ್ಟೋಷ್ಣ ಸಾಮರ್ಥ್ಯವನ್ನು ಹೊಂದಿದ್ದು ಸಾಂಪ್ರದಾಯಿಕ ವಿದ್ಯುಚ್ಛಕ್ತಿ ವ್ಯವಸ್ಥೆಗಳಿಗೆ ಸೂಕ್ತವಾದ ತಾಪಮಾನಗಳಲ್ಲಿ ಉಷ್ಣತೆಯನ್ನು ಅವು ಬಿಡುಗಡೆ ಮಾಡಬಲ್ಲವು. ಸೋಲಾರ್‌‌ ಟು ಶೇಖರಣೆಯು ಈ ವಿಧವಾದ ಶಕ್ತಿ ಶೇಖರಣಾ ವಿಧಾನವನ್ನು ಬಳಸುತ್ತಿದ್ದು ಅದರ ೬೮ m³ ಸಾಮರ್ಥ್ಯದ ಶೇಖರಣಾ ತೊಟ್ಟಿಯಲ್ಲಿ ೧.೪೪ TJಗಳಷ್ಟು ಶಾಖವನ್ನು ಶೇಖರಿಸಿಡಲು ಅವಕಾಶವಿದ್ದು, ಅದರ ವಾರ್ಷಿಕ ಶೇಖರಣಾ ದಕ್ಷತೆಯು ಸರಿಸುಮಾರು ೯೯%ರಷ್ಟಿದೆ.[೯೧]

ಜಾಲ-ಸಂಪರ್ಕಿತವಲ್ಲದ PV ವ್ಯವಸ್ಥೆಗಳು ಸಾಂಪ್ರದಾಯಿಕವಾಗಿ ಹೆಚ್ಚುವರಿ ವಿದ್ಯುಚ್ಛಕ್ತಿಯನ್ನು ಶೇಖರಿಸಿಡಲು ರೀಚಾರ್ಜ್‌‌ ಮಾಡಬಹುದಾದ ವಿದ್ಯುತ್ಕೋಶಗಳನ್ನು ಬಳಸಿದ್ದವು. ಜಾಲ-ಸಂಪರ್ಕಿತ ವ್ಯವಸ್ಥೆಗಳಲ್ಲಿ ಹೆಚ್ಚುವರಿ ವಿದ್ಯುಚ್ಛಕ್ತಿಯನ್ನು ಸಂವಹನ ಜಾಲಕ್ಕೆ ಕಳುಹಿಸುವ ಅವಕಾಶವಿರುತ್ತದೆ. ನಿವ್ವಳ ವಿದ್ಯುಚ್ಛಕ್ತಿ ಮಾಪನ/ನೆಟ್‌ ಮೀಟರಿಂಗ್‌ ಯೋಜನೆಗಳು ಈ ವ್ಯವಸ್ಥೆಗಳಿಗೆ ಅವು ಜಾಲಕ್ಕೆ ವಿತರಿಸಿದ ವಿದ್ಯುಚ್ಛಕ್ತಿಗೆ ಅನುಸಾರವಾಗಿ ಜಮೆಯನ್ನು ದಾಖಲಿಸುತ್ತವೆ. ಹೀಗೆ ದಾಖಲಾದ ಜಮೆಯನ್ನು ವ್ಯವಸ್ಥೆಯು ಬೇಡಿಕೆಯನ್ನು ಪೂರೈಸಲಾಗದಿದ್ದಾಗ ಜಾಲದಿಂದ ಪಡೆದ ವಿದ್ಯುಚ್ಛಕ್ತಿಗೆ ಸರಿದೂಗಿಸುವುದರಿಂದ, ಕಾರ್ಯರೀತಿಯಾಗಿ ಜಾಲವನ್ನು ಶೇಖರಣಾ ಮಾಧ್ಯಮವಾಗಿ ಬಳಕೆಯಾಗಿರುತ್ತದೆ.[೯೨]

ಕೆಳ ಉನ್ನತಿಯ ಜಲಾಶಯದಿಂದ ಮೇಲ್ತರದ ಉನ್ನತಿಯ ಜಲಾಶಯಕ್ಕೆ ನೀರೆತ್ತುವ ಸಂದರ್ಭದಲ್ಲಿ ನೀರೆತ್ತುವ ಶೇಖರಣಾ ಜಲ ವಿದ್ಯುಚ್ಛಕ್ತಿ ಯಂತ್ರವು ಶಕ್ತಿಯನ್ನು ಮೇಲಕ್ಕೆತ್ತಿದ ನೀರಿನ ರೂಪದಲ್ಲಿ ಸಂಗ್ರಹಿಸಿಡುತ್ತದೆ. ಈ ಶಕ್ತಿಯನ್ನು ನೀರಿನ ಬೇಡಿಕೆಯು ಹೆಚ್ಚಿರುವ ಸಮಯದಲ್ಲಿ ಜಲವಿದ್ಯುಜ್ಜನಕಾಗಾರದ ಮೂಲಕ ನೀರನ್ನು ಹಾಯಿಸಿ ಈ ಶಕ್ತಿಯನ್ನು ಮರುಗಳಿಸಿಕೊಳ್ಳಲಾಗುತ್ತದೆ.[೯೩]

ಅಭಿವೃದ್ಧಿ, ನಿಯೋಜನೆ/ಕಾರ್ಯಾಚರಣೆ ಮತ್ತು ಆರ್ಥಿಕತೆ[ಬದಲಾಯಿಸಿ]

ಕೈಗಾರಿಕಾ ಕ್ರಾಂತಿಯ ಜೊತೆಯಲ್ಲಿಯೇ ಆದ ಕಲ್ಲಿದ್ದಲು ಬಳಕೆಯಲ್ಲಿ ಹಠಾತ್‌ ಏರಿಕೆಯೊಂದಿಗೆ ಆರಂಭವಾದ ಶಕ್ತಿಯ ಬಳಕೆಯು ಏಕಪ್ರಕಾರವಾಗಿ, ಮರಮುಟ್ಟು ಮತ್ತು ಜೀವರಾಶಿಗಳಿಂದ ಪಳೆಯುಳಿಕಾ ಇಂಧನಗಳಿಗೆ ಸ್ಥಿತ್ಯಂತರ ಹೊಂದಿತು. ೧೮೬೦ರ ದಶಕದಲ್ಲಿಯೇ ಸೌರ ತಂತ್ರಜ್ಞಾನಗಳಲ್ಲಿ ಆಗಿದ್ದ ಬೆಳವಣಿಗೆಗಳು ಕಲ್ಲಿದ್ದಲು ಸದ್ಯದಲ್ಲೇ ದುರ್ಲಭವಾಗಲಿದೆ ಎಂಬ ನಿರೀಕ್ಷೆಯು ಕಾರಣವಾಗಿತ್ತು. ಆದಾಗ್ಯೂ ೨೦ನೇ ಶತಮಾನದ ಆದಿಯಲ್ಲಿ ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳ ಲಭ್ಯತೆ, ಆರ್ಥಿಕತೆ ಮತ್ತು ಉಪಯುಕ್ತತೆಗಳಿಂದಾಗಿ ಸೌರ ತಂತ್ರಜ್ಞಾನಗಳ ಅಭಿವೃದ್ಧಿಯು ಸ್ಥಗಿತವಾಗಿತ್ತು.[೯೪]

೧೯೭೩ರ ತೈಲ ವಾಣಿಜ್ಯ ಪ್ರತಿಬಂಧಕಾಜ್ಞೆ ಮತ್ತು ೧೯೭೯ರ ಇಂಧನ/ಶಕ್ತಿ ಬಿಕ್ಕಟ್ಟುಗಳು ವಿಶ್ವದಾದ್ಯಂತ ಇಂಧನ/ಶಕ್ತಿ ವಾಣಿಜ್ಯನೀತಿಗಳ ಮರುಸಂಯೋಜನೆ ಅನಿವಾರ್ಯವಾಗುವಂತೆ ಮಾಡಿದವಲ್ಲದೇ ಸೌರ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಿಕೆಯ ಬಗ್ಗೆ ಮತ್ತೆ ಗಮನಹರಿಸುವಂತೆ ಮಾಡಿದವು.[೯೫][೯೬] USನ ಸಂಯುಕ್ತ ಕೂಟದ ದ್ಯುತಿವಿದ್ಯುಜ್ಜನಕ ಬಳಕೆ ಯೋಜನೆ ಮತ್ತು ಜಪಾನ್‌ನ ಸನ್‌ಷೈನ್‌ ಯೋಜನೆಗಳಂತಹಾ ಪ್ರೋತ್ಸಾಹಕ ಯೋಜನೆಗಳ ಮೇಲೆ ನಿಯೋಜನಾ ಕೌಶಲ್ಯನೀತಿಗಳು ಗಮನಹರಿಸಿದವು. USನಲ್ಲಿ (SERI, ಈಗ NREL), ಜಪಾನ್‌ (NEDO), ಮತ್ತು ಜರ್ಮನಿ (ಫ್ರಾನ್‌ಹಾಫರ್‌‌ ಇನ್‌ಸ್ಟಿಟ್ಯೂಟ್‌ ಫಾರ್‌ ಸೋಲಾರ್‌‌ ಪವರ್‌ ಸಿಸ್ಟಮ್ಸ್‌ ISE)ಗಳಲ್ಲಿ ಸಂಶೋಧನಾ ಸೌಕರ್ಯಗಳನ್ನು ಆಯೋಜಿಸುವುದು ಇತರೆ ಯತ್ನಗಳಲ್ಲಿ ಸೇರಿದ್ದವು.[೯೭]

ವಾಣಿಜ್ಯೋದ್ದೇಶದ ಸೌರಶಕ್ತಿ ಚಾಲಿತ ಜಲತಾಪಕಗಳು ಯುನೈಟೆಡ್‌‌ ಸ್ಟೇಟ್ಸ್‌‌ನಲ್ಲಿ ೧೮೯೦ರ ದಶಕದಲ್ಲಿ ಕಾಣಿಸಿಕೊಳ್ಳತೊಡಗಿದ್ದವು.[೯೮] ಈ ಜಲತಾಪಕ ವ್ಯವಸ್ಥೆಗಳು ೧೯೨೦ರ ದಶಕದವರೆಗೆ ಬಳಕೆಯಲ್ಲಿ ಏರಿಕೆ ಕಂಡವು, ಆದರೆ ಕ್ರಮೇಣ ಅಗ್ಗವಾದ ಹಾಗೂ ಹೆಚ್ಚು ವಿಶ್ವಾಸಾರ್ಹ ತಾಪನ ಇಂಧನಗಳು ಅವುಗಳ ಸ್ಥಾನವನ್ನಾಕ್ರಮಿಸಿದವು.[೯೯] ದ್ಯುತಿವಿದ್ಯುಜ್ಜನಕಗಳ ಹಾಗೆಯೇ, ಸೌರ ಜಲತಾಪನವ್ಯವಸ್ಥೆಯು ಕೂಡಾ ೧೯೭೦ರ ದಶಕದಲ್ಲಿನ ತೈಲ ಬಿಕ್ಕಟ್ಟಿನ ಪರಿಣಾಮವಾಗಿ ತನ್ನೆಡೆಗೆ ಗಮನ ಸೆಳೆದಿತ್ತಾದರೂ ೧೯೮೦ರ ದಶಕದಲ್ಲಿ ಈ ಆಸಕ್ತಿಯು ಪೆಟ್ರೋಲಿಯಮ್‌ನ ಬೆಲೆಯು ಇಳಿಕೆಯಾಗುತ್ತಿದ್ದ ಹಾಗೆ ತಗ್ಗಿತು. ಸೌರಶಕ್ತಿ ಚಾಲಿತ ಜಲತಾಪಕ ವಲಯದಲ್ಲಿನ ಅಭಿವೃದ್ಧಿಯು ೧೯೯೦ರ ದಶಕದುದ್ದಕ್ಕೂ ಸ್ಥಿರವಾಗಿ ಮುಂದುವರೆದು ಬೆಳವಣಿಗೆಯ ದರವು ೧೯೯೯ರಿಂದ ಸರಾಸರಿ ಪ್ರತಿ ವರ್ಷಕ್ಕೆ ೨೦%ರಷ್ಟಿದೆ.[೩೨] ಸಾಧಾರಣವಾಗಿ ಕಡಿಮೆ ಅಂದಾಜು/ಕೀಳಂದಾಜು ಮಾಡಲಾಗುವುದಾದರೂ, ಸೌರಶಕ್ತಿ ಚಾಲಿತ ಜಲತಾಪನ ಮತ್ತು ಶೀತಲೀಕರಣಗಳು ೨೦೦೭ರ ಹೊತ್ತಿಗೆ ೧೫೪ GWಗಳಷ್ಟು ಅಂದಾಜು ಸಾಮರ್ಥ್ಯದೊಂದಿಗೆ ಇದುವರೆಗಿನ ವ್ಯಾಪಕವಾಗಿ ನಿಯೋಜಿತವಾದ ಸೌರ ತಂತ್ರಜ್ಞಾನವಾಗಿದೆ.[೩೨]

ISO ಪ್ರಮಾಣಿತಗಳು[ಬದಲಾಯಿಸಿ]

ಅಂತರರಾಷ್ಟ್ರೀಯ ಮಾನಕಗಳ ಸಂಸ್ಥೆ ಇಂಟರ್‌ನ್ಯಾಷನಲ್‌ ಆರ್ಗನೈಸೇಷನ್‌ ಫಾರ್‌ ಸ್ಟ್ಯಾಂಡರ್ಡ್‌ಡೈಸೇಷನ್‌ ಸಂಸ್ಥೆಯು ಸೌರ ಶಕ್ತಿ ಸಾಧನಗಳಿಗೆ ಸಂಬಂಧಪಟ್ಟಂತೆ ಅನೇಕ ಮಾನಕಗಳನ್ನು ನಿಗದಿಪಡಿಸಿದೆ. ಉದಾಹರಣೆಗೆ, ISO ೯೦೫೦ ಮಾನಕವು ಕಟ್ಟಡಗಳಲ್ಲಿ ಅಳವಡಿಸುವ ಗಾಜಿಗೆ ಸಂಬಂಧಪಟ್ಟಿದ್ದಾದರೆ ISO ೧೦೨೧೭ ಮಾನಕವು ಸೌರಶಕ್ತಿಚಾಲಿತ ಜಲತಾಪಕಗಳಲ್ಲಿ ಬಳಸುವ ಸಲಕರಣೆಗಳಿಗೆ ಸಂಬಂಧಪಟ್ಟಿರುತ್ತದೆ.

ಇವನ್ನೂ ನೋಡಿ[ಬದಲಾಯಿಸಿ]

 • ಇಂಗಾಲದ ಹಣಕಾಸು
 • ದ್ಯುತಿಪ್ರವಾಹ ವಿದ್ಯುತ್‌ ಶಾಸ್ತ್ರದಲ್ಲಿ ಇಂಗಾಲದ ನ್ಯಾನೊಟ್ಯೂಬ್‌ಗಳು
 • ಸಮುದಾಯ ಸೌರಶಕ್ತಿ ಘಟಕಗಳ ಕೇಂದ್ರ
 • ಕ್ರೂಕ್‌ಸ್‌‌ರ ವಿಕಿರಣ/ರೇಡಿಯೋಮಾಪಕ
 • ಡೆಸೆರ್ಟೆಕ್‌
 • ಡ್ರೇಕ್‌ ಲ್ಯಾಂಡಿಂಗ್‌ ಸೌರಶಕ್ತಿ ಸಮುದಾಯ
 • ನವೀನ ಪರಮಾಣು ವಿದ್ಯುಚ್ಛಕ್ತಿ ಕೇಂದ್ರ/ಘಟಕಗಳ ಆರ್ಥಿಕತೆ
 • ಶಕ್ತಿಯ ಸಂಗ್ರಹಣೆ
 • EURO-SOLAR ಸೌರ ಯೋಜನೆ
 • ಜಾಗತಿಕ ಮಬ್ಬಾಗಿಸುವಿಕೆ//ಕಾಂತಿಹೀನಗೊಳಿಸುವಿಕೆ
 • ಗ್ರೀಸ್‌ಸ್ಟಾಕ್‌ ಸ್ಪರ್ಧೆ
 • ಹಸಿರು ವಿದ್ಯುಚ್ಛಕ್ತಿ
 • ಅಧಿಕ ವಿಭವಾಂತರದ ನೇರ ವಿದ್ಯುತ್‌ ಹೊಯಿಲು
 • ಹಂತಹಂತವಾಗಿ ಹೊಂದಿಸಿದ ಶಕ್ತಿಪಡೆಯುವ ವೆಚ್ಚ
 • ಸಂರಕ್ಷಣಾ ವಿಷಯಗಳ ಪಟ್ಟಿ
 • ನವೀಕರಿಸಬಲ್ಲ ಶಕ್ತಿಗೆ ಸಂಬಂಧಪಟ್ಟ ಸಂಸ್ಥೆಗಳ ಪಟ್ಟಿ
 • ಸೌರ ಶಕ್ತಿ ವಿಷಯಗಳ ಪಟ್ಟಿ
 • ಸೌರ ಶಕ್ತಿ ಉಷ್ಣಧಾರಕ ವಿದ್ಯುಚ್ಛಕ್ತಿ ಕೇಂದ್ರಗಳ ಪಟ್ಟಿ
 • ದ್ಯುತಿವಿದ್ಯುಜ್ಜನಕ ಘಟಕ
 • ವಿಭಿನ್ನ ಮೂಲಗಳಿಂದ ಉತ್ಪಾದಿಸಲಾದ ವಿದ್ಯುಚ್ಛಕ್ತಿಯ ಸಂಬಂಧಿತ ವೆಚ್ಚ
 • ನವೀಕರಿಸಬಲ್ಲ ಉಷ್ಣತೆ
 • ಸೌರಶಕ್ತಿಯ ದಶಸಾಧ್ಯತೆಗಳ ಪಟ್ಟಿ/ಸ್ಪರ್ಧಾದಶಕ
 • ಸೌರಶಕ್ತಿ ಅನುಭೋಗದ ಹಕ್ಕು
 • ಸೌರಶಕ್ತಿ ಫಲ ಗೋಪುರ
 • ಸೌರ ದೀಪ (ವಿದ್ಯುತ್ ಕಂಬ)
 • ಸೌರ ವಿದ್ಯುಚ್ಛಕ್ತಿ ಉಪಗ್ರಹ
 • ಮಣ್ಣಿನ ಸೌರೀಕರಣ
 • ಸೌರ ವ್ಯೂಹದಲ್ಲಿ ಬಿಸಿಲು/ಸೂರ್ಯನ ಬೆಳಕಿನ ತೀವ್ರತೆ
 • ಸೌರಶಕ್ತಿ ಕೋಶಗಳ ಕಾಲಾನುಕ್ರಮ ಘಟನಾವಳಿ
 • ಟ್ರಾಂಬೆ ಗೋಡೆ
 • ಅರೆವಾಹಕ ಸ್ಫಟಿಕ (ಇಲೆಕ್ಟ್ರಾನಿಕ್‌ ಶಾಸ್ತ್ರ)
 • ವಿಶ್ವ ಶಕ್ತಿ ಸಂಪನ್ಮೂಲಗಳು ಮತ್ತು ಬಳಕೆ

ಟಿಪ್ಪಣಿಗಳು[ಬದಲಾಯಿಸಿ]

 1. ಸ್ಮಿಲ್‌‌ (೧೯೯೧), p. ೨೪೦
 2. "Natural Forcing of the Climate System". Intergovernmental Panel on Climate Change. ತೆರೆದುನೋಡಿದ್ದು 2007-09-29. 
 3. "Radiation Budget". NASA Langley Research Center. 2006-10-17. ತೆರೆದುನೋಡಿದ್ದು 2007-09-29. 
 4. Somerville, Richard. "Historical Overview of Climate Change Science" (PDF). Intergovernmental Panel on Climate Change. ತೆರೆದುನೋಡಿದ್ದು 2007-09-29. 
 5. Vermass, Wim. "An Introduction to Photosynthesis and Its Applications". Arizona State University. ತೆರೆದುನೋಡಿದ್ದು 2007-09-29. 
 6. ೬.೦ ೬.೧ ಸ್ಮಿಲ್‌‌ (2006), p. 12
 7. Archer, Cristina; Jacobson, Mark. "Evaluation of Global Wind Power". Stanford. ತೆರೆದುನೋಡಿದ್ದು 2008-06-03. 
 8. ೮.೦ ೮.೧ "Energy conversion by photosynthetic organisms". Food and Agriculture Organization of the United Nations. ತೆರೆದುನೋಡಿದ್ದು 2008-05-25. 
 9. "World Consumption of Primary Energy by Energy Type and Selected Country Groups, 1980-2004". Energy Information Administration. Archived from the original on 2004-11-11. ತೆರೆದುನೋಡಿದ್ದು 2008-05-17. 
 10. "World Total Net Electricity Consumption, 1980-2005". Energy Information Administration. ತೆರೆದುನೋಡಿದ್ದು 2008-05-25. 
 11. ಸೌರ ಶಕ್ತಿ: ಹೊಸದಿನದ ಅರುಣೋದಯವಾಗುತ್ತಿದೆಯೇ? ಅಗಸ್ಟ್ ೭ ೨೦೦೮ರಂದು ಮರುಸಂಪಾದಿಸಲಾಗಿದೆ.
 12. ಭೂಮಿಗೆ ಶಕ್ತಿ ನೀಡುವಿಕೆ : ಸೌರ ಶಕ್ತಿ ಬಳಕೆಯಲ್ಲಿ ರಾಸಾಯನಿಕಗಳೊಡ್ಡುವ ಸವಾಲುಗಳು ೭ ಆಗಸ್ಟ್ ೨೦೦೮ರಂದು ಮರುಸಂಪಾದಿಸಲಾಗಿದೆ
 13. ಎಕ್ಸರ್ಜಿ (ಲಭ್ಯವಿರುವ ಶಕ್ತಿ ) ಗತಿನಕ್ಷೆಗಳು ಎರಡು ಶತಕೋಟಿ ವರ್ಷಗಳ ಕಾಲ ಪ್ರತಿವರ್ಷ ೨.೭ YJ ಸಾಮರ್ಥ್ಯದ ಸೌರಶಕ್ತಿ ಲಭ್ಯತೆ vs. ಒಮ್ಮೆ ಮಾತ್ರವೇ ಲಭ್ಯವಿರುವ ೧.೪ YJ ನವೀಕರಿಸಲಾಗದ ಸಂಪನ್ಮೂಲಗಳು.
 14. ದ ಕ್ಲೀನ್‌ ಎನರ್ಜಿ ಸ್ಕ್ಯಾಮ್‌ ಟೈಮ್‌ ಪತ್ರಿಕೆ ಮಾರ್ಚ್‌ ೨೭, ೨೦೦೮ ೧೫ ಅಕ್ಟೋಬರ್‌‌ ೨೦೦೮ರಂದು ಮರುಸಂಪಾದಿಸಲಾಗಿದೆ
 15. http://www.solarenergybyzip.com
 16. ೧೬.೦ ೧೬.೧ Philibert, Cédric. "The Present and Future use of Solar Thermal Energy as a Primary Source of Energy" (PDF). International Energy Agency. ತೆರೆದುನೋಡಿದ್ದು 2008-05-05. 
 17. [31]
 18. ೧೮.೦ ೧೮.೧ ೧೮.೨ ಷಿ/ಸ್ಕಿಟ್ಟಿಚ್‌ (೨೦೦೩), p. ೧೪
 19. ಬ/ಬುಟ್ಟಿ ಮತ್ತು ಪರ್ಲಿನ್‌ (೧೯೮೧), p. ೪, ೧೫೯
 20. ಬಾಲ್ಕಾಂಬ್‌‌(೧೯೯೨)
 21. Rosenfeld, Arthur; Romm, Joseph; Akbari, Hashem; Lloyd, Alan. "Painting the Town White -- and Green". Heat Island Group. ತೆರೆದುನೋಡಿದ್ದು 2007-09-29. 
 22. ಬ/ಬುಟ್ಟಿ ಮತ್ತು ಪರ್ಲಿನ್‌ (೧೯೮೧), p. ೪೧
 23. "Prescription Act (1872 Chapter 71 2 and 3 Will 4)". Office of the Public Sector Information. ತೆರೆದುನೋಡಿದ್ದು 2008-05-18. 
 24. Noyes, WM (1860-03-31). "The Law of Light" (PDF). The New York Times. ತೆರೆದುನೋಡಿದ್ದು 2008-05-18. 
 25. ೨೫.೦ ೨೫.೧ ಟ್ಜೆಂಪೆಲಿಕೋಸ್‌ (೨೦೦೭), p. ೩೬೯
 26. ೨೬.೦ ೨೬.೧ Apte, J. et al. "Future Advanced Windows for Zero-Energy Homes" (PDF). American Society of Heating, Refrigerating and Air-Conditioning Engineers. ತೆರೆದುನೋಡಿದ್ದು 2008-04-09. 
 27. Muhs, Jeff. "Design and Analysis of Hybrid Solar Lighting and Full-Spectrum Solar Energy Systems" (PDF). Oak Ridge National Laboratory. Archived from the original on 2007-09-26. ತೆರೆದುನೋಡಿದ್ದು 2007-09-29. 
 28. Myriam B.C. Aries; Guy R. Newsham (2008). "Effect of daylight saving time on lighting energy use: a literature review". Energy Policy 36 (6): 1858–1866. doi:10.1016/j.enpol.2007.05.021. 
 29. "Solar Energy Technologies and Applications". Canadian Renewable Energy Network. ತೆರೆದುನೋಡಿದ್ದು 2007-10-22. 
 30. "Renewables for Heating and Cooling" (PDF). International Energy Agency. ತೆರೆದುನೋಡಿದ್ದು 2008-05-26. 
 31. Weiss, Werner; Faninger, Gerhard. "Solar Heat Worldwide (Markets and Contributions to the Energy Supply 2005)" (PDF). International Energy Agency. ತೆರೆದುನೋಡಿದ್ದು 2008-05-30. 
 32. ೩೨.೦ ೩೨.೧ ೩೨.೨ Weiss, Werner; Faninger, Gerhard. "Solar Heat Worldwide - Markets and Contribution to the Energy Supply 2006" (PDF). International Energy Agency. ತೆರೆದುನೋಡಿದ್ದು 2008-06-09. 
 33. "Renewables 2007 Global Status Report" (PDF). Worldwatch Institute. ತೆರೆದುನೋಡಿದ್ದು 2008-04-30. 
 34. Del Chiaro, Bernadette; Telleen-Lawton, Timothy. "Solar Water Heating (How California Can Reduce Its Dependence on Natural Gas)" (PDF). Environment California Research and Policy Center. ತೆರೆದುನೋಡಿದ್ದು 2007-09-29. 
 35. "Energy Consumption Characteristics of Commercial Building HVAC Systems Volume III: Energy Savings Potential" (PDF). United States Department of Energy. pp. 2–2. ತೆರೆದುನೋಡಿದ್ದು 2008-06-24. 
 36. ಮಾಝ್ರಿ/ಜ್ರಿಯಾ(೧೯೭೯), p. ೨೯–೩೫
 37. ಮಾಝ್ರಿ/ಜ್ರಿಯಾ(೧೯೭೯), p. ೨೫೫
 38. ಬಾಲ್ಕಾಂಬ್‌‌(೧೯೯೨), p. ೫೬
 39. ಬಾಲ್ಕಾಂಬ್‌‌(೧೯೯೨), p. ೫೭
 40. ೪೦.೦ ೪೦.೧ ೪೦.೨ ತಿವಾರಿ (೨೦೦೩), p. ೩೬೮–೩೭೧
 41. ೪೧.೦ ೪೧.೧ ಡೇನಿಯೆಲ್ಸ್‌ (೧೯೬೪), p. ೬
 42. "SODIS solar water disinfection". EAWAG (The Swiss Federal Institute for Environmental Science and Technology). ತೆರೆದುನೋಡಿದ್ದು 2008-05-02. 
 43. ೪೩.೦ ೪೩.೧ "Household Water Treatment Options in Developing Countries: Solar Disinfection (SODIS)" (PDF). Centers for Disease Control and Prevention. Archived from the original on 2008-05-29. ತೆರೆದುನೋಡಿದ್ದು 2008-05-13. 
 44. "Household Water Treatment and Safe Storage". World Health Organization. ತೆರೆದುನೋಡಿದ್ದು 2008-05-02. 
 45. Shilton AN, Powell N, Mara DD, Craggs R (2008). "Solar-powered aeration and disinfection, anaerobic co-digestion, biological CO(2) scrubbing and biofuel production: the energy and carbon management opportunities of waste stabilisation ponds". Water Sci. Technol. 58 (1): 253–258. doi:10.2166/wst.2008.666. PMID 18653962. 
 46. Tadesse I, Isoaho SA, Green FB, Puhakka JA (2003). "Removal of organics and nutrients from tannery effluent by advanced integrated Wastewater Pond Systems technology". Water Sci. Technol. 48 (2): 307–14. PMID 14510225. 
 47. ಆಂಡರ್‌ಸನ್‌ ಮತ್ತು ಪಾಲ್ಕೋವಿಕ್‌‌ (೧೯೯೪), p. xi
 48. ಬ/ಬುಟ್ಟಿ ಮತ್ತು ಪರ್ಲಿನ್‌ (೧೯೮೧), p. ೫೪–೫೯
 49. ಆಂಡರ್‌ಸನ್‌ ಮತ್ತು ಪಾಲ್ಕೋವಿಕ್‌‌ (೧೯೯೪), p. xii
 50. ಆಂಡರ್‌ಸನ್‌ ಮತ್ತು ಪಾಲ್ಕೋವಿಕ್‌‌ (೧೯೯೪), p. xiii
 51. "The Solar Bowl". Auroville Universal Township. ತೆರೆದುನೋಡಿದ್ದು 2008-04-25. 
 52. "Scheffler-Reflector". Solare Bruecke. ತೆರೆದುನೋಡಿದ್ದು 2008-04-25. 
 53. "Solar Steam Cooking System". Gadhia Solar. Archived from the original on November 11, 2007. ತೆರೆದುನೋಡಿದ್ದು 2008-04-25. 
 54. "Scheffler Reflector". Solare Bruecke. ತೆರೆದುನೋಡಿದ್ದು 2008-07-03. 
 55. Stine, W B and Harrigan, R W. "Shenandoah Solar Total Energy Project". John Wiley. ತೆರೆದುನೋಡಿದ್ದು 2008-07-20. 
 56. ಬಾರ್ಟ್‌ಲೆಟ್‌ (೧೯೯೮), p.೩೯೩–೩೯೪
 57. Thomson-Philbrook, Julia. "Right to Dry Legislation in New England and Other States". Connecticut General Assembly. ತೆರೆದುನೋಡಿದ್ದು 2008-05-27. 
 58. ೫೮.೦ ೫೮.೧ "Solar Buildings (Transpired Air Collectors - Ventilation Preheating)" (PDF). National Renewable Energy Laboratory. ತೆರೆದುನೋಡಿದ್ದು 2007-09-29. 
 59. Cite error: Invalid <ref> tag; no text was provided for refs named Leon_2006
 60. ಹಲಾಸಿ (೧೯೭೩), p. ೧೮೧
 61. ಪರ್ಲಿನ್ ಮತ್ತು ಬ/ಬುಟ್ಟಿ (೧೯೮೧), p. ೭೩
 62. ಹಲಾಸಿ (೧೯೭೩), p. ೭೬
 63. ಟ್ರಿಟ್ಟ್‌‌ (೨೦೦೮), p. ೩೬೬–೩೬೮
 64. ಬಾಲ್ಟನ್‌‌ (೧೯೭೭), p. ೧
 65. ಆಗ್ರಾಫಿಯೋಟಿಸ್‌ (೨೦೦೫), p. ೪೦೯
 66. ಝೆಡ್‌ವಿಟ್ಜ್‌‌ (೨೦೦೬), p. ೧೩೩೩
 67. "Solar Energy Project at the Weizmann Institute Promises to Advance the use of Hydrogen Fuel". Weizmann Institute of Science. ತೆರೆದುನೋಡಿದ್ದು 2008-06-25. 
 68. "Sandia’s Sunshine to Petrol project seeks fuel from thin air". Sandia Corporation. ತೆರೆದುನೋಡಿದ್ದು 2008-05-02. 
 69. ಬಾಲ್ಟನ್‌‌ (೧೯೭೭), p. ೧೬, ೧೧೯
 70. ಬಾಲ್ಟನ್‌‌ (೧೯೭೭), p. ೧೧
 71. http://spacefellowship.com/news/art21587/solar-power-could-soon-compete-with-oil.html
 72. "The WORLD Solar Challenge - The Background" (PDF). Australian and New Zealand Solar Energy Society. Archived from the original on July 19, 2008. ತೆರೆದುನೋಡಿದ್ದು 2008-08-05. 
 73. "North American Solar Challenge". New Resources Group. ತೆರೆದುನೋಡಿದ್ದು 2008-07-03. 
 74. "South African Solar Challenge". Advanced Energy Foundation. Archived from the original on June 12, 2008. ತೆರೆದುನೋಡಿದ್ದು 2008-07-03. 
 75. ವಾಹನಗಳಲ್ಲಿ ಸೌರಶಕ್ತಿ ಕೋಶಗಳ ಸಹಾಯಕ/ಹೆಚ್ಚುವರಿ ವಿದ್ಯುಚ್ಛಕ್ತಿ/ಶಕ್ತಿಯ ಉಪಯುಕ್ತತೆ/ಅನ್ವಯಗಳು ೧೯೯೧ ೧೧ ಅಕ್ಟೋಬರ್‌‌ ೨೦೦೮ರಂದು ಮರುಸಂಪಾದಿಸಿದ್ದು
 76. ಸಿಸ್ಟಾಯಿಕ್‌ AG: ಕಾರುಗಳಲ್ಲಿ ಸೌರಶಕ್ತಿಧಾರಕ ಛಾವಣಿಗಳ ಬೇಡಿಕೆಯು ಗಗನಕ್ಕೇರಿದೆ ೨೬ ಜೂನ್‌‌ ೨೦೦೮ ೧೧ ಅಕ್ಟೋಬರ್‌‌ ೨೦೦೮ರಂದು ಮರುಸಂಪಾದಿಸಿದ್ದು
 77. ಎಲೆಕ್ಟ್ರ್ರಿಕಲ್‌ ರಿವ್ಯೂ Vol ೨೦೧ No ೭ ೧೨ ಆಗಸ್ಟ್‌‌ ೧೯೭೭
 78. Schmidt, Theodor. "Solar Ships for the new Millennium". TO Engineering. ತೆರೆದುನೋಡಿದ್ದು 2007-09-30. 
 79. "The sun21 completes the first transatlantic crossing with a solar powered boat". Transatlantic 21. ತೆರೆದುನೋಡಿದ್ದು 2007-09-30. 
 80. "PlanetSolar, the first solar-powered round-the-world voyage". PlanetSolar. ತೆರೆದುನೋಡಿದ್ದು 2008-08-19. 
 81. ಸನ್‌ಸೀಕರ್‌‌ ಯೋಜನೆಯು ಹೊಸ ದಾಖಲೆಗಳನ್ನು ನಿರ್ಮಿಸಲಿದೆ
 82. "Solar-Power Research and Dryden". NASA. ತೆರೆದುನೋಡಿದ್ದು 2008-04-30. 
 83. "The NASA ERAST HALE UAV Program". Greg Goebel. ತೆರೆದುನೋಡಿದ್ದು 2008-04-30. 
 84. "Phenomena which affect a solar balloon". pagesperso-orange.fr. ತೆರೆದುನೋಡಿದ್ದು 2008-08-19. 
 85. "Solar Sails Could Send Spacecraft 'Sailing' Through Space". National Aeronautics and Space Administration. ತೆರೆದುನೋಡಿದ್ದು 2007-11-26. 
 86. "High Altitude Airship". Lockheed Martin. ತೆರೆದುನೋಡಿದ್ದು 2008-08-04. 
 87. ಕಾರ್ರ್‌‌ (೧೯೭೬), p. ೮೫
 88. ಬಾಲ್ಕಾಂಬ್‌‌(೧೯೯೨), p. ೬
 89. "Request for Participation Summer 2005 Demand Shifting with Thermal Mass" (PDF). Demand Response Research Center. ತೆರೆದುನೋಡಿದ್ದು 2007-11-26. 
 90. ಬ/ಬುಟ್ಟಿ ಮತ್ತು ಪರ್ಲಿನ್‌ (೧೯೮೧), p. ೨೧೨–೨೧೪
 91. "Advantages of Using Molten Salt". Sandia National Laboratory. ತೆರೆದುನೋಡಿದ್ದು 2007-09-29. 
 92. "PV Systems and Net Metering". Department of Energy. Archived from the original on 2008-07-04. ತೆರೆದುನೋಡಿದ್ದು 2008-07-31. 
 93. "Pumped Hydro Storage". Electricity Storage Association. ತೆರೆದುನೋಡಿದ್ದು 2008-07-31. 
 94. ಬ/ಬುಟ್ಟಿ ಮತ್ತು ಪರ್ಲಿನ್‌ (೧೯೮೧), p. ೬೩, ೭೭, ೧೦೧
 95. ಬ/ಬುಟ್ಟಿ ಮತ್ತು ಪರ್ಲಿನ್‌ (೧೯೮೧), p. ೨೪೯
 96. ಯೆರ್ಜಿನ್‌ (೧೯೯೧), p. ೬೩೪, ೬೫೩-೬೭೩
 97. "Chronicle of Fraunhofer-Gesellschaft". Fraunhofer-Gesellschaft. ತೆರೆದುನೋಡಿದ್ದು 2007-11-04. 
 98. ಬ/ಬುಟ್ಟಿ ಮತ್ತು ಪರ್ಲಿನ್‌ (೧೯೮೧), p. ೧೧೭
 99. ಬ/ಬುಟ್ಟಿ ಮತ್ತು ಪರ್ಲಿನ್‌ (೧೯೮೧), p. ೧೩೯

ಉಲ್ಲೇಖಗಳು[ಬದಲಾಯಿಸಿ]

 • Agrafiotis, C.; Roeb, M.; Konstandopoulos, A.G.; Nalbandian, L.; Zaspalis, V.T.; Sattler, C.; Stobbe, P.; Steele, A.M. (2005). "Solar water splitting for hydrogen production with monolithic reactors". Solar Energy 79 (4): 409–421. doi:10.1016/j.solener.2005.02.026. 
 • Anderson, Lorraine; Palkovic, Rick (1994). Cooking with Sunshine (The Complete Guide to Solar Cuisine with 150 Easy Sun-Cooked Recipes). Marlowe & Company. ISBN 156924300X. 
 • Balcomb, J. Douglas (1992). Passive Solar Buildings. Massachusetts Institute of Technology. ISBN 0262023415. 
 • Bénard, C.; Gobin, D.; Gutierrez, M. (1981). "Experimental Results of a Latent-Heat Solar-Roof, Used for Breeding Chickens". Solar Energy 26 (4): 347–359. doi:10.1016/0038-092X(81)90181-X. 
 • Bolton, James (1977). Solar Power and Fuels. Academic Press, Inc. ISBN 0121123502. 
 • Bradford, Travis (2006). Solar Revolution: The Economic Transformation of the Global Energy Industry. MIT Press. ISBN 026202604X. 
 • Butti, Ken; Perlin, John (1981). A Golden Thread (2500 Years of Solar Architecture and Technology). Van Nostrand Reinhold. ISBN 0442240058. 
 • Carr, Donald E. (1976). Energy & the Earth Machine. W. W. Norton & Company. ISBN 0393064077. 
 • Daniels, Farrington (1964). Direct Use of the Sun's Energy. Ballantine Books. ISBN 0345259386. 
 • Halacy, Daniel (1973). The Coming Age of Solar Energy. Harper and Row. ISBN 0380002337. 
 • Hunt, V. Daniel (1979). Energy Dictionary. Van Nostrand Reinhold Company. ISBN 0442273959. 
 • Karan, Kaul; Greer, Edith; Kasperbauer, Michael; Mahl, Catherine (2001). "Row Orientation Affects Fruit Yield in Field-Grown Okra". Journal of Sustainable Agriculture 17 (2/3): 169–174. doi:10.1300/J064v17n02_14. 
 • Leon, M.; Kumar, S. (2007). "Mathematical modeling and thermal performance analysis of unglazed transpired solar collectors". Solar Energy 81 (1): 62–75. doi:10.1016/j.solener.2006.06.017. 
 • Lieth, Helmut; Whittaker, Robert (1975). Primary Productivity of the Biosphere. Springer-Verlag1. ISBN 0387070834. 
 • Martin, Christopher L.; Goswami, D. Yogi (2005). Solar Energy Pocket Reference. International Solar Energy Society. ISBN 0977128202. 
 • Mazria, Edward (1979). The Passive Solar Energy Book. Rondale Press. ISBN 0878572384. 
 • Meier, Anton; Bonaldi, Enrico; Cella, Gian Mario; Lipinski, Wojciech; Wuillemin, Daniel (2005). "Solar chemical reactor technology for industrial production of lime". Solar Energy 80 (10): 1355–1362. doi:10.1016/j.solener.2005.05.017. 
 • Mills, David (2004). "Advances in solar thermal electricity technology". Solar Energy 76 (1-3): 19–31. doi:10.1016/S0038-092X(03)00102-6. 
 • Müller, Reto; Steinfeld, A. (2007). "Band-approximated radiative heat transfer analysis of a solar chemical reactor for the thermal dissociation of zinc oxide". Solar Energy 81 (10): 1285–1294. doi:10.1016/j.solener.2006.12.006. 
 • Perlin, John (1999). From Space to Earth (The Story of Solar Electricity). Harvard University Press. ISBN 0674010132. 
 • Bartlett, Robert (1998). Solution Mining: Leaching and Fluid Recovery of Materials. Routledge. ISBN 9056996339. 
 • Scheer, Hermann (2002). The Solar Economy (Renewable Energy for a Sustainable Global Future). Earthscan Publications Ltd. ISBN 1844070751. 
 • Schittich, Christian (2003). Solar Architecture (Strategies Visions Concepts). Architektur-Dokumentation GmbH & Co. KG. ISBN 3764307471. 
 • Smil, Vaclav (1991). General Energetics: Energy in the Biosphere and Civilization. Wiley. p. 369. ISBN 0471629057. 
 • Smil, Vaclav (2003). Energy at the Crossroads: Global Perspectives and Uncertainties. MIT Press. p. 443. ISBN 0262194929. 
 • Smil, Vaclav (2006-05-17). Energy at the Crossroads (PDF). Organisation for Economic Co-operation and Development. ISBN 0262194929. ತೆರೆದುನೋಡಿದ್ದು 2007-09-29. 
 • Tabor, H. Z.; Doron, B. (1990). "The Beith Ha'Arava 5 MW(e) Solar Pond Power Plant (SPPP)--Progress Report". Solar Energy 45 (4): 247–253. doi:10.1016/0038-092X(90)90093-R. 
 • Tiwari, G. N.; Singh, H. N.; Tripathi, R. (2003). "Present status of solar distillation". Solar Energy 75 (5): 367–373. doi:10.1016/j.solener.2003.07.005. 
 • Tritt, T.; Böttner, H.; Chen, L. (2008). "Thermoelectrics: Direct Solar Thermal Energy Conversion". MRS Bulletin 33 (4): 355–372. 
 • Tzempelikos, Athanassios; Athienitis, Andreas K. (2007). "The impact of shading design and control on building cooling and lighting demand". Solar Energy 81 (3): 369–382. doi:10.1016/j.solener.2006.06.015. 
 • Vecchia, A.; Formisano, W.; Rosselli, V; Ruggi, D. (1981). "Possibilities for the Application of Solar Energy in the European Community Agriculture". Solar Energy 26 (6): 479–489. doi:10.1016/0038-092X(81)90158-4. 
 • Yergin, Daniel (1991). The Prize: The Epic Quest for Oil, Money, and Power. Simon & Schuster. p. 885. ISBN 0671799320. 
 • Zedtwitz, P.v.; Petrasch, J.; Trommer, D.; Steinfeld, A. (2006). "Hydrogen production via the solar thermal decarbonization of fossil fuels". Solar Energy 80 (10): 1333–1337. doi:10.1016/j.solener.2005.06.007. 

ಬಾಹ್ಯ ಕೊಂಡಿಗಳು[ಬದಲಾಯಿಸಿ]

"http://kn.wikipedia.org/w/index.php?title=ಸೌರ_ಶಕ್ತಿ&oldid=492015" ಇಂದ ಪಡೆಯಲ್ಪಟ್ಟಿದೆ