ಸೌರ ಶಕ್ತಿ
ಸೂರ್ಯನ ಕಿರಣಗಳ ಶಾಖ ಮತ್ತು ಬೆಳಕಿನಿಂದ ಸಿಗುವ ಚೈತನ್ಯವನ್ನು (energy) ವಿವಿಧ ತಂತ್ರಜ್ಞಾನಗಳನ್ನು ಬಳಸಿ ಮಾನವನ ಉಪಯೋಗಕ್ಕೆ ಅನುಕೂಲವಾಗುವಂತೆ ಮಾರ್ಪಡಿಸಿ ಪಡೆಯುವುದೇ ಸೌರಶಕ್ತಿ.[೧] ಸೌರಶಕ್ತಿಯು ನವೀಕರಿಸಬಹುದಾದ ಸಂಪನ್ಮೂಲವಾಗಿದೆ, ಏಕೆಂದರೆ ಅದು ಬಳಕೆಯಾಗುವ ದರದಲ್ಲಿಯೇ ಪುನಃ ಭರ್ತಿಯಾಗುತ್ತದೆ. ಸೌರ ದ್ಯುತಿವಿದ್ಯುಜ್ಜನಕ ಕೋಶಗಳು (ಎಸ್.ಪಿ.ವಿ - ಸೋಲಾರ್ ಪೋಟೋ ವೋಲ್ಟಾಯಿಕ್ ಕೋಶ) ನೇರವಾಗಿ ಸೂರ್ಯನ ಬೆಳಕಿನಿಂದ ವಿದ್ಯುತ್ ಆಗಿ ಪರಿವರ್ತಿಸುತ್ತದೆ. ಕೇಂದ್ರೀಕೃತ ಸೌರ ಶಕ್ತಿ (ಸಿ.ಎಸ್.ಪಿ) ವ್ಯವಸ್ಥೆಗಳು ಪರಿವರ್ತನೆ ಪ್ರಕ್ರಿಯೆಗೆ ಪರೋಕ್ಷ ವಿಧಾನವನ್ನು ಬಳಸುತ್ತವೆ. ಎಸ್.ಪಿ.ವಿ ಮತ್ತು ಸಿ.ಎಸ್.ಪಿಗಳನ್ನು ಹೊರತುಪಡಿಸಿ, ಡೈ-ಸೆನ್ಸಿಟೈಜ್ಡ್ ಸೌರ ಕೋಶಗಳು, ದೀಪಕ ಸೌರ ಸಾಂದ್ರತೆಗಳು, ಜೈವಿಕ-ಹೈಬ್ರಿಡ್ ಸೌರ ಕೋಶಗಳು, ಫೋಟಾನ್ ವರ್ಧಿತ ಥರ್ಮೋನಿಕ್ ಹೊರಸೂಸುವಿಕೆ ವ್ಯವಸ್ಥೆಗಳು ಇನ್ನೂ ಮುಂತಾದ ಇತರ ಹೊಸ ತಂತ್ರಗಳು ಕೂಡ ಇವೆ.
ಸೌರ ಶಕ್ತಿಯನ್ನು ಬಳಕೆ ಮಾಡುವ ವಿಧಾನಗಳು
[ಬದಲಾಯಿಸಿ]ಸೌರ ಶಕ್ತಿ ಮೇಲ್ಚಾವಣಿ
[ಬದಲಾಯಿಸಿ]ಮನುಷ್ಯ ಪ್ರಗತಿ ಸಾಧಿಸಿದಂತೆಲ್ಲ ವಿದ್ಯುತ್ ಶಕ್ತಿಯ ಅವಲಂಭನೆ ಹೆಚ್ಚಾಗುತ್ತಿದೆ, ಆದರೆ ಬಳಕೆಯ ವೇಗಕ್ಕೆ ತಕ್ಕಂತೆ ಉತ್ಪತ್ತಿಯಾಗುತ್ತಿಲ್ಲ. ಅಲ್ಲದೆ ಈಗ ಉತ್ಪದಿಸುತ್ತಿರುವ ವಿಧಾನಗಳೆಲ್ಲವೂ ನಿಸರ್ಗ ಸ್ನೇಹಿಯಾಗಿಲ್ಲ. ಆದ್ದರಿಂದ ನಾವು ಇತರೆ ಬದಲೀ ಇಂಧನ ಮೂಲಗಳ ಬಗ್ಗೆ ಗಮನ ಹರಿಸಬೇಕಾದ ಅವಶ್ಯಕತೆ ಇದೆ. ಈ ರೀತಿಯ ಬದಲೀ ಇಂಧನ ಮೂಲಗಳಲ್ಲಿ ಸೌರ ಶಕ್ತಿಯು ಅಗಾಧವಾದ, ಎಂದೆಂದಿಗೂ ಮುಗಿಯದ ನಿಸರ್ಗ ಶಕ್ತಿಯ ಮೂಲವಾಗಿದ್ದು ಇದನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುವ ಬಗ್ಗೆ ನಿರಂತರವಾಗಿ ಸಂಶೋದನೆಗಳಾಗುತ್ತಿವೆ. ಈ ನಿಟ್ಟಿನಲ್ಲಿ ಸೌರಶಕ್ತಿಯನ್ನು ಇರುವ ಜಾಗದಲ್ಲಿಯೆ ಸಂಗ್ರಹಿಸಿ ಬಳಸಿಕೊಳ್ಳಬಹುದಾದ ಒಂದು ವ್ಯವಸ್ಥೆಯೆ ಸೌರ ಶಕ್ತಿ ಮೇಲ್ಚಾವಣಿ. ಪ್ರತಿಯೊಬ್ಬರ ಮನೆಗಳಲ್ಲಿ ಮೇಲ್ಚಾವಣೆಯನ್ನು ಸೌರಶಕ್ತಿ ವಿದ್ಯುತ್ ಉತ್ಪಾದಿಸುವ ತಾಣಗಳಾಗಿ ಮಾಡಿದರೆ ಇಂದಿನ ಶಕ್ತಿಯ ಕೊರತೆಯನ್ನು ನೀಗಿಸಬಹುದು.[೨]
ಸೌರ ಕುಕ್ಕರ್
[ಬದಲಾಯಿಸಿ]ಸೌರ ಶಕ್ತಿಯನ್ನು ಉಪಯೋಗಿಸಿ ಕುಕ್ಕರ್ ಗಳ ಸಹಾಯದಿಂದ ಅಡುಗೆ ಮಾಡುವುದು, ಬಿಸಿ ಮಾಡುವುದು ಹಾಗೂ ಪ್ಯಾಸ್ಚರೀಕರಣ ಮಾಡಲು ಸೌರ ಕುಕ್ಕರ್ ಗಳನ್ನು ಬಳಸಬಹುದಾಗಿದೆ. ಇದುನ್ನು ಸೌರ ಒಲೆ ಎಂದು ಕೂಡ ಕರೆಯುತ್ತಾರೆ. ಸಾಮಾನ್ಯ ಸೌರಕುಕ್ಕರ್ ಒಂದು ಪೆಟ್ಟಿಗೆಯಾಕಾರದಲ್ಲಿದ್ದು ಅದರ ಒಳಭಾಗದಲ್ಲಿ ಇನ್ಸುಲೇಟೆಡ್ ಕವಚ ಹಾಗು ಮೇಲ್ಬಾಗದಲ್ಲಿ ಪಾರದರ್ಶಕ ಗಾಜಿನ ಹೊದಿಕೆಯನ್ನು ಹೊಂದಿರುತ್ತದೆ. ಸಾಮಾನ್ಯ ಸೌರಕುಕ್ಕರ್ ಗಳಲ್ಲಿ 90-150 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶವನ್ನು ಹಿಡಿದಿಡಬಹುದಾಗಿದ್ದು, ಸೌರಶಕ್ತಿಯನ್ನು ಕೇಂದ್ರಿಕರಿಸುವ ಕನ್ನಡಿಯಂತಹ ಪ್ರತಿಬಿಂಬಕಗಳನ್ನು ಉಪಯೋಗಿಸಿ ಗರಿಶ್ಟ 315ಡಿಗ್ರಿ ವರೆಗೆ ತಲುಪಬಹುದಾಗಿದೆ. ಸೌರಕುಕ್ಕರ್ ಗಳಲ್ಲಿ ಮುಖ್ಯವಾಗಿ ಈ ಕೆಳಕಂಡ ನಿಯಮಗಳನ್ವಯ ಉಷ್ಣಾಂಶವನ್ನು ಹಿಡಿದಿಡುತ್ತವೆ.
- ಸೂರ್ಯನ ಶಕ್ತಿಯನ್ನು ಕೇಂದ್ರಿಕರಿಸುವುದು.
- ಸೂರ್ಯ ಶಕ್ತಿಯನ್ನು ಶಾಖ ಶಕ್ತಿಯಾಗಿ ಪರಿವರರ್ತಿಸುವುದು.
- ಶಾಖವನ್ನು ಹಿಡಿದಿಡುವುದು.
ಸೌರ ಕುಕ್ಕರ್ ಗಳ ಉಪಯೋಗಗಳು
[ಬದಲಾಯಿಸಿ]- ಯಾವುದೇ ಇಂಧನದ ಅವಶ್ಯಕತೆ ಇರುವುದಿಲ್ಲ.
- ಉಪಯೋಗಿಸುವುದು ತುಂಬಾ ಸುಲಭ.
- ಹೆಚ್ಚು ಹೆಚ್ಚು ಬಳಕೆಯಿಂದ ಅರಣ್ಯ ನಾಶವನ್ನು ತಡೆಗಟ್ಟಬಹುದು.
- ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಬಹುದು.
- ಪ್ರತ್ಯೇಕ ಅಡುಗೆ ಮನೆಯ ಅವಶ್ಯಕತೆ ಇರುವುದಿಲ್ಲ.
ಸೌರ ವಿದ್ಯುತ್
[ಬದಲಾಯಿಸಿ]ಸೂರ್ಯನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವುದು.ಜಗತ್ತಿನಲ್ಲಿ ಹೆಚ್ಚುತ್ತಿರುವ ಶಕ್ತಿಯ ಬೇಡಿಕೆಯನ್ನು ಬಹಳಷ್ಟು ಮಟ್ಟಿಗೆ ಪರಿಹಾರ ನೀಡುವ ಒಂದೇ ಮೂಲವೇದರೆ ಅದು ಸೌರಶಕ್ತಿ. ಕ್ರಿ ಶ 2050ರ ವೇಳೆಗೆ ಜಗತ್ತಿಗೆ ಅತಿ ಹೆಚ್ಚು ಶಕ್ತಿಯನ್ನು ನೀಡುವ ಶಕ್ತಿಯ ಮೂಲವಾಗಿದೆ. ಸೊಲಾರ್ ಪನೆಲ್ ಗಳಲ್ಲಿರುವ ಪೋಟೋ ವೋಲ್ಟಾಯಿಕ್ ಕೋಶಗಳ ಮೂಲಕ ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಿ ಅದನ್ನು ಬ್ಯಾಟರಿಗಳಲ್ಲಿ ಸಂಗ್ರಹಿಸಲಾಗುತ್ತದೆ.
ಕೃಷಿಗಾಗಿ ಸೌರ ಶಕ್ತಿ ಉಪಕರಣಗಳು
[ಬದಲಾಯಿಸಿ]ಸೌರ ಶಕ್ತಿಯನ್ನು ಕೃಷಿ ಉಪಕರಣಗಳನ್ನು ನಿರ್ವಹಿಸಲು ಸರಳವಾಗಿ ವೆಚ್ಚ ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಸೌರ ಹಸಿರುಮನೆ, ಸೌರ ವಿದ್ಯುತ್ ಬೇಲಿ, ನೀರಿನ ಪಂಪ್ ಸೌರ ಶುಷ್ಕಕಾರಿ ಯಂತ್ರ ಇತ್ಯಾದಿಗಳಂತಹ ಸಾಮಾನ್ಯ ಕೃಷಿ ಉಪಕರಣಗಳು ಬ್ಯಾಟರಿ ಶಕ್ತಿ ಮತ್ತು ಇಂಧನ ತೈಲದ ಬಳಕೆ ಇಲ್ಲದೆ ಕಾರ್ಯನಿರ್ವಹಿಸುತ್ತವೆ. ವ್ಯವಸಾಯದಲ್ಲಿ ಸೌರಶಕ್ತಿಯನ್ನು ಬಳಸುವುದರಿಂದ ಗ್ರಿಡ್-ವಿದ್ಯುತ್ ಮತ್ತು ನವೀಕರಿಸಲಾಗದ ಮೂಲಗಳಿಂದ ವಿದ್ಯುಚ್ಛಕ್ತಿ ಬಳಕೆಯನ್ನು ಕಡಿಮೆ ಮಾಡಬಹುದು. ಭಾರತದಲ್ಲಿ ಸೌರಶಕ್ತಿಯನ್ನು ಬಳಸಿ ಉಪಯೋಗಿಸಲಾಗುವ ಕೃಷಿ ಉಪಕರಣಗಳ ಪಟ್ಟಿ:[೩]
- ಸೌರ ನೀರಿನ ಪಂಪ್ - ಎಸ್.ಪಿ.ವಿ ಕೋಶಗಳನ್ನು ಬಳಸಿ ಸೌರಶಕ್ತಿಯನ್ನು ವಿದ್ಯುತ್ ಪ್ರವಾಹವಾಗಿ ಪರಿವರ್ತಿಸಿ 200ವ್ಯಾಟ್ನಿಂದ 5KWp ವರೆಗೆ (ಕಿಲೋವಾಟ್-ಪೀಕ್) ನೀರಿನ ಜಲಾಶಯಗಳು, ಹೊಳೆಗಳು, ಬಾವಿಗಳಿಂದ ನೀರನ್ನು ಮೇಲಕ್ಕೆ ಎತ್ತಬಹುದು.
- ಸೌರ ಚಾಲಿತ ವಿದ್ಯುತ್ ಬೇಲಿಗಳು 0.9 ರಿಂದ 1.2 ಸೆಕೆಂಡುಗಳ ಅಂತರದಲ್ಲಿ ಶಾಕ್ ನೀಡುತ್ತವಾಗಿದ್ದು, ವಿಸ್ತಾರವಾದ ಜಾಗ ಮತ್ತು ಜಾನುವಾರು ಸಾಕಣೆಗೆ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ.
- ಸೌರ ಶುಷ್ಕಕಾರಿ ಯಂತ್ರಗಳನ್ನು ರೈತರು ಮಾರುಕಟ್ಟೆಗೆ ಕಳುಹಿಸುವ ಮೊದಲು ಬೆಳೆಗಳನ್ನು ಒಣಗಿಸಲು ಬಳಸಲಾಗುತ್ತದೆ.
ಉಲ್ಲೇಖ
[ಬದಲಾಯಿಸಿ]- ↑ "ಆರ್ಕೈವ್ ನಕಲು" (PDF). IEA. OECD/IEA. Archived from the original (PDF) on 9 ನವೆಂಬರ್ 2019. Retrieved 6 May 2018.
- ↑ https://solarrooftop.gov.in/login
- ↑ http://www.ecoideaz.com/showcase/solar-powered-agricultural-tools-in-india