ಕೈಗಾರಿಕಾ ಕ್ರಾಂತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಾಟ್ ಉಗಿ ಯಂತ್ರ, ಕಲ್ಲಿದ್ದಿಲಿನ ಇಂಧನ ಮುಖ್ಯವಾಗಿ ಬಳಸುವ ಉಗಿ ಯಂತ್ರ ಗ್ರೇಟ್ ಬ್ರಿಟನ್ ಮತ್ತು ವಿಶ್ವದಲ್ಲಿ ಕೈಗಾರಿಕಾ ಕ್ರಾಂತಿಗೆ ಚಾಲನೆ ನೀಡಿತು.[೧]

ಕೈಗಾರಿಕಾ ಕ್ರಾಂತಿಯು ೧೮ ಮತ್ತು ೧೯ನೇ ಶತಮಾನದ ಅವಧಿಯಲ್ಲಿ ಸಂಭವಿಸಿದೆ. ಆ ಅವಧಿಯಲ್ಲಿ ಕೃಷಿ, ಉತ್ಪಾದನೆ,ಗಣಿಗಾರಿಕೆ ಮತ್ತು ಸಾರಿಗೆಯಲ್ಲಿ ಪ್ರಮುಖ ಬದಲಾವಣೆಗಳಿಂದ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳ ಮೇಲೆ ಗಾಢಪರಿಣಾಮ ಬೀರಿತು. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿ ತರುವಾಯ ಯುರೋಪ್‌ನಾದ್ಯಂತ, ಉತ್ತರ ಅಮೆರಿಕ ಮತ್ತು ಅಂತಿಮವಾಗಿ ವಿಶ್ವದಲ್ಲಿ ಹರಡಿತು. ಕೈಗಾರಿಕಾ ಕ್ರಾಂತಿಯ ಪ್ರಾರಂಭವು ಮಾನವ ಇತಿಹಾಸದಲ್ಲಿ ಪ್ರಮುಖ ತಿರುವೆಂದು ಗುರುತಿಸಲಾಗಿದೆ; ಬಹುತೇಕ ಜನಜೀವನದ ಪ್ರತಿಯೊಂದು ಅಂಶದ ಮೇಲೆ ಅಂತಿಮವಾಗಿ ಕೆಲವು ರೀತಿಯಲ್ಲಿ ಪ್ರಭಾವ ಬೀರಿತು.

೧೮ನೇ ಶತಮಾನದ ಉತ್ತರಾರ್ಧದಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿಯಿಂದ ಗ್ರೇಟ್ ಬ್ರಿಟನ್‌ನ ಕೆಲವು ಭಾಗಗಳಲ್ಲಿ ಮುಂಚಿನ ದೈಹಿಕ ದುಡಿಮೆ ಮತ್ತು ಭಾರಎಳೆಯುವ ಪ್ರಾಣಿ-ಆಧಾರಿತ ಆರ್ಥಿಕತೆಯಿಂದ ಯಂತ್ರ-ಆಧಾರಿತ ಉತ್ಪಾದನೆಯತ್ತ ಪರಿವರ್ತನೆ ಆರಂಭವಾಯಿತು. ವಸ್ತ್ರೋದ್ಯಮ ಕೈಗಾರಿಕೆಗಳ ಯಾಂತ್ರೀಕರಣ,ಕಬ್ಬಿಣ ತಯಾರಿಸುವ ತಂತ್ರಗಳ ಅಭಿವೃದ್ಧಿ ಮತ್ತು ಸಂಸ್ಕರಿತ ಕಲ್ಲಿದ್ದಲಿನ ಹೆಚ್ಚೆಚ್ಚು ಬಳಕೆಯಿಂದ ಕೈಗಾರಿಕಾ ಕ್ರಾಂತಿ ಆರಂಭವಾಯಿತು.[೨] ಕಾಲುವೆಗಳು, ಸುಧಾರಿತ ರಸ್ತೆಗಳು ಮತ್ತು ರೈಲ್ವೆಗಳನ್ನು ಚಾಲ್ತಿಗೆ ತಂದಿದ್ದರಿಂದ ಮಾರಾಟ ವಿಸ್ತರಣೆ ಸಾಧ್ಯವಾಯಿತು. ಕಲ್ಲಿದ್ದಲು ಮುಖ್ಯ ಇಂಧನವಾದ ಉಗಿಶಕ್ತಿಪ್ರಾರಂಭ, ಜಲಚಕ್ರಗಳು ಮತ್ತು ಶಕ್ತಿಆಧಾರಿತ ಯಂತ್ರ(ಮುಖ್ಯವಾಗಿ ವಸ್ತ್ರೋದ್ಯಮ ತಯಾರಿಕೆಯಲ್ಲಿ)ಗಳ ವ್ಯಾಪಕ ಬಳಕೆಯಿಂದ ಉತ್ಪಾದನೆ ಸಾಮರ್ಥ್ಯದಲ್ಲಿ ಗಮನಾರ್ಹ ಹೆಚ್ಚಳಕ್ಕೆ ಪುಷ್ಠಿ ನೀಡಿತು.[೩] ಸರ್ವ-ಲೋಹದ ಯಂತ್ರೋಪಕರಣಗಳನ್ನು ೧೯ನೇ ಶತಮಾನದ ಮೊದಲ ಎರಡು ದಶಕಗಳಲ್ಲಿ ಅಭಿವೃದ್ಧಿಪಡಿಸಿದ್ದರಿಂದ ಇತರೆ ಕೈಗಾರಿಕೆಗಳಲ್ಲಿ ಉತ್ಪಾದನೆಗೆ ಹೆಚ್ಚು ಉತ್ಪಾದನೆ ಯಂತ್ರಗಳ ತಯಾರಿಕೆಗೆ ಅವಕಾಶ ಒದಗಿಸಿತು. ಪಶ್ಚಿಮ ಯುರೋಪ್ ಮತ್ತು ಉತ್ತರ ಅಮೆರಿಕದಾದ್ಯಂತ ೧೯ನೇ ಶತಮಾನದಲ್ಲಿ ಇದರ ಪ್ರಭಾವಗಳು ವಿಸ್ತರಿಸಿದವು. ತರುವಾಯ ವಿಶ್ವದ ಬಹುಭಾಗದಲ್ಲಿ ಪ್ರಭಾವ ಬೀರಿದ ಈ ಪ್ರಕ್ರಿಯೆಯು ಕೈಗಾರೀಕರಣವೆಂಬ ಹೆಸರಿನೊಂದಿಗೆ ಮುಂದುವರಿಯಿತು. ಕೈಗಾರೀಕರಣದಿಂದ ಸಮಾಜದ ಮೇಲೆ ಉಂಟಾದ ಬದಲಾವಣೆಯ ಪರಿಣಾಮ ಅಗಾಧವಾಗಿತ್ತು.[೪]

ಪ್ರಥಮ ಕೈಗಾರಿಕೆ ಕ್ರಾಂತಿಯು ೧೮ನೇ ಶತಮಾನದಲ್ಲಿ ಪ್ರಾರಂಭವಾಗಿ ೧೮೫೦ರ ಆಸುಪಾಸಿನಲ್ಲಿ ಎರಡನೇ ಹಂತದ ಕೈಗಾರಿಕಾ ಕ್ರಾಂತಿಯ ಜತೆ ವಿಲೀನಗೊಂಡಿತು. ಆ ಸಂದರ್ಭದಲ್ಲಿ ಉಗಿ-ಶಕ್ತಿ ಚಾಲಿತ ಹಡಗುಗಳು, ರೈಲ್ವೆಗಳ ಅಭಿವೃದ್ಧಿಯಿಂದ ಮತ್ತು ನಂತರ ೧೯ನೇ ಶತಮಾನದಲ್ಲಿ ಆಂತರಿಕ ದಹನ ಯಂತ್ರ ಮತ್ತು ವಿದ್ಯುಚ್ಛಕ್ತಿ ಉತ್ಪಾದನೆಯೊಂದಿಗೆ ತಾಂತ್ರಿಕ ಮತ್ತು ಆರ್ಥಿಕ ಪ್ರಗತಿ ವೇಗದ ಗತಿ ಪಡೆದುಕೊಂಡಿತು.

ಕೈಗಾರಿಕಾ ಕ್ರಾಂತಿ ಆವರಿಸಿದ ಕಾಲಾವಧಿಯನ್ನು ವಿವಿಧ ಇತಿಹಾಸಕಾರರು ಭಿನ್ನವಾಗಿ ಗುರುತಿಸಿದ್ದಾರೆ. ಬ್ರಿಟನ್‌ನಲ್ಲಿ ೧೭೮೦ರ ದಶಕದಲ್ಲಿ ಇದು "ಹೊರಹೊಮ್ಮಿತು" ಮತ್ತು ೧೮೩೦ರ ದಶಕ ಅಥವಾ ೧೮೪೦ರ ದಶಕದವರೆಗೆ ಅದರ ಅನುಭವ ಸಂಪೂರ್ಣ ತಟ್ಟಲಿಲ್ಲ ಎಂದು ಇತಿಹಾಸಕಾರ ಎರಿಕ್ ಹಾಬ್ಸ್‌ಬಾಮ್ ಹೇಳಿದ್ದಾರೆ.[೫] ಅದು ೧೭೬೦ ಮತ್ತು ೧೮೩೦ರ ಆಸುಪಾಸಿನಲ್ಲಿ ಸಂಭವಿಸಿತು ಎಂದು T.S.ಆಶ್‌ಟನ್ ಹೇಳಿದ್ದಾರೆ.[೬] ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯ ಪ್ರಕ್ರಿಯೆ ಕ್ರಮೇಣ ಸಂಭವಿಸಿತು ಮತ್ತು ಕ್ರಾಂತಿ ಎಂಬ ಪದವು ಈ ವಿದ್ಯಮಾನದ ನೈಜ ವಿವರಣೆಯಲ್ಲ ಎಂದು ೨೦ನೇ ಶತಮಾನದ ಇತಿಹಾಸಕಾರರಾದ ಜಾನ್ ಕ್ಲಾಪ್‌ಹ್ಯಾಮ್ ಮತ್ತು ನಿಕೋಲಾಸ್ ಕ್ರಾಫ್ಟ್ಸ್ ವಾದಿಸಿದ್ದಾರೆ. ಇತಿಹಾಸಕಾರರ ನಡುವೆ ಇದು ಇನ್ನೂ ಚರ್ಚಾಸ್ಪದ ವಸ್ತುವಾಗಿ ಉಳಿದಿದೆ.[೭][೮] ಕೈಗಾರಿಕಾ ಕ್ರಾಂತಿ ಮತ್ತು ಆಧುನಿಕ ಬಂಡವಾಳಶಾಹಿ ಅರ್ಥವ್ಯವಸ್ಥೆ ಹೊರಹೊಮ್ಮುವುದಕ್ಕೆ ಮುಂಚಿತವಾಗಿ GDP ತಲಾದಾಯವು ಸ್ಥಿರವಾಗಿತ್ತು.[೯] ಕೈಗಾರಿಕಾ ಕ್ರಾಂತಿಯಿಂದ ಬಂಡವಾಳಶಾಹಿ ಅರ್ಥಿಕತೆಗಳಲ್ಲಿ ತಲಾದಾಯದ ಆರ್ಥಿಕ ಪ್ರಗತಿ ಶಕೆ ಪ್ರಾರಂಭವಾಯಿತು.[೧೦] ಕೈಗಾರಿಕಾ ಕ್ರಾಂತಿಯು ಇತಿಹಾಸದ ಅತೀ ಮುಖ್ಯ ವಿದ್ಯಮಾನಗಳಲ್ಲಿ ಒಂದೆಂದು ಇತಿಹಾಸಕಾರರು ಒಪ್ಪಿದ್ದಾರೆ.[೧೧]

ಹೆಸರಿನ ಇತಿಹಾಸ[ಬದಲಾಯಿಸಿ]

ಈ ಪದವನ್ನು ಜನಪ್ರಿಯಗೊಳಿಸಿದ ಹಿರಿಮೆ ಆರ್ನಾಲ್ಡ್ ಟಾಯ್ನ್‌ಬೀ ಅವರಿಗೆ ಸಲ್ಲುತ್ತದೆ. ಅವರು ೧೮೮೧ರಲ್ಲಿ ನೀಡಿದ ಉಪನ್ಯಾಸಗಳು ಈ ಬಗ್ಗೆ ವಿಸ್ತೃತ ವಿವರಣೆಯನ್ನು ನೀಡಿವೆ.

ಇತಿಹಾಸಕಾರ ಡೇವಿಡ್ ಲ್ಯಾಂಡೆಸ್ ಪ್ರಕಾರ, ಪ್ರೆಂಚ್ ರಾಜತಾಂತ್ರಿಕ ಲೂವಿಸ್ ಗಿಲಾಮೆ ಒಟ್ಟೊ ಅವರ ೧೭೯೯ ಜುಲೈ ೬ರ ಪತ್ರದಲ್ಲಿ "ಕೈಗಾರಿಕಾ ಕ್ರಾಂತಿ"ಯ ಪದ ಮುಂಚಿತವಾಗಿ ಬಳಕೆಯಾಗಿದ್ದು ಪತ್ತೆಯಾಗಿದೆ.[೧] Archived 2015-04-15 ವೇಬ್ಯಾಕ್ ಮೆಷಿನ್ ನಲ್ಲಿ. ತಾಂತ್ರಿಕ ಬದಲಾವಣೆಗೆ ಅನ್ವಯಿಸುವ ಕೈಗಾರಿಕಾ ಕ್ರಾಂತಿ ಪದವು ೧೮೩೦ರ ದಶಕದ ಉತ್ತರಾರ್ಧದಲ್ಲಿ ಸಾಮಾನ್ಯವಾಗಿ ಹೆಚ್ಚು ಬಳಕೆಗೆ ಬಂತು.ಲೂವಿಸ್ ಆಗಸ್ಟೆ ಬ್ಲ್ಯಾಂಕಿ ೧೮೩೭ರಲ್ಲಿ la révolution industrielle ಬಗ್ಗೆ ವಿವರಣೆಯಲ್ಲಿ ಈ ಪದ ಬಳಸಿದ್ದಾರೆ. ಫ್ರೆಡೆರಿಕ್ ಎಂಜೆಲ್ಸ್ ತಮ್ಮ ದಿ ಕಂಡಿಷನ್ ಆಫ್ ದಿ ವರ್ಕಿಂಗ್ ಕ್ಲಾಸ್ ಇನ್ ಇಂಗ್ಲೆಂಡ್ ಇನ್ 1844 ನಲ್ಲಿ "ಕೈಗಾರಿಕಾ ಕ್ರಾಂತಿ, ಇಡೀ ನಾಗರಿಕ ಸಮಾಜವನ್ನು ಏಕಕಾಲದಲ್ಲಿ ಬದಲಿಸಿದ ಕ್ರಾಂತಿ" ಎಂದು ಹೇಳಿದ್ದಾರೆ. ಕೈಗಾರಿಕೆ ಪ್ರವೇಶದ ಬಗ್ಗೆ ತಮ್ಮ ಪುಸ್ತಕದಲ್ಲಿ,ರೇಮಂಡ್ ವಿಲಿಯಮ್ಸ್ ಹೀಗೆಂದು ವಿವರಿಸಿದ್ದಾರೆ: ಪ್ರಮುಖ ಕೈಗಾರಿಕೆ ಬದಲಾವಣೆಯ ಆಧಾರದ ಮೇಲೆ ಹೊಸ ಸಾಮಾಜಿಕ ವ್ಯವಸ್ಥೆಯ ಕಲ್ಪನೆಯು ೧೮೧೧ ಮತ್ತು ೧೮೧೮ರ ನಡುವೆ ಸೌಥೆ ಮತ್ತು ಓವೆನ್‌ನಲ್ಲಿ ಸ್ಪಷ್ಟವಾಗಿವೆ ಮತ್ತು ೧೭೯೦ರ ದಶಕದ ಆದಿಯಲ್ಲಿ ಬ್ಲೇಕ್‌‌ ಕಾಲದಷ್ಟು ಮುಂಚಿತವಾಗಿ ಮತ್ತು ಶತಮಾನದ ತಿರುವಿನಲ್ಲಿ ವರ್ಡ್ಸ್‌ವರ್ತ್ ನಲ್ಲಿ ಸ್ಪಷ್ಟಪಡಿಸಲಾಗಿದೆ.

ಕಾರಣಗಳು[ಬದಲಾಯಿಸಿ]

ಕೈಗಾರಿಕಾ ಕ್ರಾಂತಿಗೆ ಮುಂಚಿತವಾಗಿ ಮಾನವ ಇತಿಹಾಸದಲ್ಲಿ ಬಹುಭಾಗ ಪ್ರಾದೇಶಿಕ GDP ತಲಾದಾಯ ತೀರಾ ಸಣ್ಣ ಬದಲಾವಣೆಯಾಗಿದೆ.(ಖಾಲಿ ಪ್ರದೇಶಗಳೆಂದರೆ ದತ್ತಾಂಶವಿಲ್ಲವೆಂದು ಅರ್ಥ, ತೀರಾ ಕೆಳಮಟ್ಟಗಳಲ್ಲಲ್ಲ.1, 1000, 1500, 1600, 1700, 1820, 1900, and 2003 ವರ್ಷಗಳಿಗೆ ದತ್ತಾಂಶವಿಲ್ಲ)

ಕೈಗಾರಿಕಾ ಕ್ರಾಂತಿಗೆ ಕಾರಣಗಳು ಸಂಕೀರ್ಣವಾಗಿದ್ದು,ಚರ್ಚಾಸ್ಪದ ವಸ್ತುವಾಗಿ ಉಳಿದಿದೆ. ಬ್ರಿಟನ್‌ನಲ್ಲಿ ೧೭ನೇ ಶತಮಾನದಲ್ಲಿ ಇಂಗ್ಲೀಷ್ ಆಂತರಿಕ ಯುದ್ಧದ ನಂತರ ಊಳಿಗಮಾನ್ಯ ಪದ್ಧತಿಯ ಅಂತ್ಯಕಾಲದಲ್ಲಿ ಉಂಟಾದ ಸಾಮಾಜಿಕ ಮತ್ತು ಸಾಂಸ್ಥಿಕ ಬೆಳವಣಿಗೆಗಳ ಸಹಜಫಲವೇ ಕೈಗಾರಿಕಾ ಕ್ರಾಂತಿ ಎಂದು ಕೆಲವು ಇತಿಹಾಸಕಾರರು ನಂಬಿದ್ದಾರೆ. ರಾಷ್ಟ್ರೀಯ ಗಡಿ ನಿಯಂತ್ರಣ ಕ್ರಮಗಳು ಹೆಚ್ಚು ಪರಿಣಾಮಕಾರಿ ಆಗುತ್ತಿದ್ದಂತೆ,ರೋಗ ಪ್ರಸಾರ ಕುಂಠಿತಗೊಂಡಿತು ಮತ್ತು ಪೂರ್ವಕಾಲಗಳಲ್ಲಿ ಸಾಮಾನ್ಯವಾಗಿ ಹರಡುತ್ತಿದ್ದ ಸಾಂಕ್ರಾಮಿಕಗಳು ನಿವಾರಣೆಯಾದವು.[೧೨] ಶೈಶವಾವಸ್ಥೆಯನ್ನು ದಾಟಿ ಬದುಕುವ ಮಕ್ಕಳ ಶೇಕಡಾವಾರು ಪ್ರಮಾಣ ಗಮನಾರ್ಹ ಏರಿಕೆ ಕಂಡು, ಕಾರ್ಮಿಕ ಶಕ್ತಿ ಹೆಚ್ಚಿತು. ಎನ್‍‌ಕ್ಲೋಸರ್(ಒಟ್ಟಾರೆ ಭೂಆಕ್ರಮಣ)ಆಂದೋಳನ ಮತ್ತು ಬ್ರಿಟನ್ ಕೃಷಿ ಕ್ರಾಂತಿ‌ ಹೆಚ್ಚು ದಕ್ಷತೆಯಿಂದ ಕೂಡಿದ ಆಹಾರೋತ್ಪಾದನೆ ಮತ್ತು ಕಾರ್ಮಿಕರ ಹೆಚ್ಚು ಬಳಸುವಿಕೆ ಕಡಿತಕ್ಕೆ ಕಾರಣವಾಯಿತು.ಕೃಷಿಯಲ್ಲಿ ಉದ್ಯೋಗಾವಕಾಶ ಸಿಗದ ಹೆಚ್ಚುವರಿ ಜನಸಂಖ್ಯೆ ಗೃಹಕೈಗಾರಿಕೆಯನ್ನು ನೆಚ್ಚಿಕೊಳ್ಳಬೇಕಾಯಿತು. ಉದಾಹರಣೆಗೆ ನೇಯ್ಗೆ. ದೀರ್ಘಾವಧಿಯಲ್ಲಿ ನಗರಗಳಿಗೆ ಮತ್ತು ಹೊಸದಾಗಿ ಸ್ಥಾಪಿತವಾದ ಕಾರ್ಖಾನೆಗಳಲ್ಲಿ ಉದ್ಯೋಗ ಅರಸಬೇಕಾಯಿತು.[೧೩] ಅಂತಾರಾಷ್ಟ್ರೀಯ ವ್ಯಾಪಾರದ ಅಭಿವೃದ್ಧಿ ಜತೆಗೂಡಿದ ೧೭ನೇ ಶತಮಾನದ ವಸಾಹತುಶಾಹಿ ವಿಸ್ತರಣೆ, ಹಣಕಾಸು ಮಾರುಕಟ್ಟೆಗಳ ಸೃಷ್ಟಿ ಮತ್ತು ಬಂಡವಾಳ ಕ್ರೋಢೀಕರಣ ಕೂಡ ೧೭ನೇ ಶತಮಾನದ ವೈಜ್ಞಾನಿಕ ಕ್ರಾಂತಿಯ ರೀತಿಯಲ್ಲಿ ಅಂಶಗಳೆಂದು ಉದಾಹರಿಸಲಾಗಿದೆ.[೧೪]

ಶೈಕ್ಷಣಿಕ ಇತಿಹಾಸಕಾರರು ೧೯೮೦ರ ದಶಕದವರೆಗೆ,ಕೈಗಾರಿಕೆ ಸಂಶೋಧನೆಯು ಕೈಗಾರಿಕೆ ಕ್ರಾಂತಿಗೆ ಹೃದಯಭಾಗ ಮತ್ತು ಉಗಿ ಯಂತ್ರದ ಶೋಧನೆ ಮತ್ತು ಸುಧಾರಣೆಯು ಮುಖ್ಯ ಆವಿಷ್ಕಾರವೆಂದು ಸಾರ್ವತ್ರಿಕವಾಗಿ ನಂಬಿದ್ದರು.[೧೫] ಆದಾಗ್ಯೂ, ಮಾರುಕಟ್ಟೆ ಶಕೆಯ ಇತ್ತೀಚಿನ ಸಂಶೋಧನೆಯಲ್ಲಿ ಕೈಗಾರಿಕೆ ಕ್ರಾಂತಿಯ ಸಾಂಪ್ರದಾಯಿಕ, ಪೂರೈಕೆ ಆಧಾರಿತ ವ್ಯಾಖ್ಯಾನವನ್ನು ಪ್ರಶ್ನಿಸಿತು.[೧೬]

ಪೂರ್ವಕಾಲೀನಮಧ್ಯಯುಗದಲ್ಲಿ ಕೈಗಾರಿಕಾ ಕ್ರಾಂತಿ ಉಗಮವಾಗಿದೆ ಎಂದು ಲೆವಿಸ್ ಮಮ್‌ಫೋರ್ಡ್ ತಿಳಿಸಿದ್ದಾರೆ. ಇದು ಬಹುತೇಕ ಅಂದಾಜುಗಳಿಗಿಂತ ಮುಂಚಿನದ್ದಾಗಿದೆ.[೧೭] ಪ್ರಮಾಣಕ್ಕನುಗುಣವಾಗಿ ಸಮ‌ೂಹ ಉತ್ಪಾದನೆಯ ಮಾದರಿಯು ಮುದ್ರಣ ಯಂತ್ರ ಮತ್ತು "ಕೈಗಾರಿಕೆ ಶಕೆಯ ಮ‌ೂಲಮಾದರಿ ಗಡಿಯಾರ" ಎಂದು ಅವರು ವಿವರಿಸಿದ್ದಾರೆ. ಆದೇಶ ಮತ್ತು ಸಮಯಪಾಲನೆ ಕುರಿತು ಧಾರ್ಮಿಕ ಆಚರಣೆಯ ಮಹತ್ವವನ್ನು ಅವರು ಉದಾಹರಿಸಿದರು. ಮಧ್ಯಕಾಲೀನ ನಗರಗಳ ಮಧ್ಯಭಾಗದಲ್ಲಿ ನಿಯಮಿತ ವೇಳೆಗಳಲ್ಲಿ ಬಾರಿಸುವ ಗಂಟೆಯೊಂದಿಗೆ ಹೆಚ್ಚಿನ ಏಕಕಾಲಿಕತೆಗೆ ಅಗತ್ಯ ಪೂರ್ವಸೂಚಕಗಳಾಗಿದ್ದು ನಿಜ. ಇವು ನಂತರ ಉಗಿ ಯಂತ್ರ ಮುಂತಾದ ಹೆಚ್ಚಿನ ಬೌತಿಕ ಅಭಿವ್ಯಕ್ತಿಗಳಿಗೆ ಅಗತ್ಯವಾಗಿತ್ತು.

ಬ್ರಿಟನ್‌ನಲ್ಲಿ ಇದು ಸಂಭವಿಸಿದ ಕಾರಣಗಳನ್ನು ನಿರ್ದಿಷ್ಟವಾಗಿ ವಿವರಿಸುತ್ತಾ,ಕೈಗಾರಿಕಾ ಕ್ರಾಂತಿಗೆ ದೊಡ್ಡ ದೇಶೀಯ ಮಾರುಕಟ್ಟೆಯ ಉಪಸ್ಥಿತಿ ಕೂಡ ಚಾಲನಾ ಶಕ್ತಿಯಾಗಿ ಪರಿಗಣಿಸಲಾಗಿದೆ. ಫ್ರಾನ್ಸ್ ಮುಂತಾದ ಇತರೆ ರಾಷ್ಟ್ರಗಳಲ್ಲಿ,ಸ್ಥಳೀಯ ಪ್ರದೇಶಗಳಿಂದ ಮಾರುಕಟ್ಟೆಗಳು ವಿಭಜನೆಯಾಗಿದ್ದು, ಅವುಗಳ ನಡುವೆ ವ್ಯಾಪಾರವಾಗುವ ಸರಕಿಗೆ ಸುಂಕಗಳು ಮತ್ತು ತೆರಿಗೆಯನ್ನು ಆಗಾಗ್ಗೆ ಹೇರುತ್ತಿದ್ದವು.[೧೮]

ಅಭಿವೃದ್ಧಿಯಾಗುತ್ತಿರುವ ಹಕ್ಕುಸ್ವಾಮ್ಯವ್ಯವಸ್ಥೆಯಲ್ಲಿ (ಏಕಸ್ವಾಮ್ಯಗಳ ಕಾಯಿದೆ೧೬೨೩)ಸರ್ಕಾರ ಸೀಮಿತ ಏಕಸ್ವಾಮ್ಯಗಳನ್ನು ಸಂಶೋಧಕರಿಗೆ ನೀಡಿದ್ದು ಪ್ರಭಾವಶಾಲಿ ಅಂಶವೆಂದು ಪರಿಗಣಿಸಲಾಗಿದೆ. ಕೈಗಾರೀಕರಣ ಅಭಿವೃದ್ಧಿ ಕುರಿತು ಹಕ್ಕುಸ್ವಾಮ್ಯಗಳ ಒಳಿತು ಮತ್ತು ಕೆಡಕು ಎರಡನ್ನೂ ಪ್ರಮುಖ ತಂತ್ರಜ್ಞಾನ ಉಗಿಯಂತ್ರದ ಇತಿಹಾಸದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆವಿಷ್ಕಾರದ ಕಾರ್ಯಗಳನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಿದ್ದಕ್ಕೆ ಪ್ರತಿಯಾಗಿ,ಹಕ್ಕುಸ್ವಾಮ್ಯ ಪದ್ಧತಿಯು ಜೇಮ್ಸ್ ವಾಟ್ ಮುಂತಾದ ಸಂಶೋಧಕರಿಗೆ ಪ್ರಥಮ ಉಗಿ ಯಂತ್ರಗಳ ಉತ್ಪಾದನೆಗೆ ಏಕಸ್ವಾಮಿತ್ವ ನೀಡುವ ಇನಾಮು ನೀಡಿತು. ಸಂಶೋಧಕರಿಗೆ ಇನಾಮುಗಳನ್ನು ನೀಡುವ ಮ‌ೂಲಕ ತಾಂತ್ರಿಕ ಅಭಿವೃದ್ಧಿಯ ಗತಿಯನ್ನು ತೀವ್ರಗೊಳಿಸಿತು. ಆದರೆ ಏಕಸ್ವಾಮಿತ್ವಗಳು ಅದರ ಜತೆ ತನ್ನದೇ ಆದ ಅದಕ್ಷತೆಗಳನ್ನು ಉಂಟುಮಾಡಿತು. ಇದರಿಂದ ನಿಷ್ಕಪಟತೆ ಪ್ರಸಾರ ಮತ್ತು ಸಂಶೋಧಕರನ್ನು ಸನ್ಮಾನಿಸುವ ಅನುಕೂಲಕರ ಪರಿಣಾಮಗಳನ್ನು ಸಮತೂಕದಲ್ಲಿರಿಸಿತು ಅಥವಾ ಸಮತೋಲನ ತಪ್ಪುವಂತೆ ಮಾಡಿತು.[೧೯] ವಾಟ್ ಅವರ ಏಕಸ್ವಾಮಿತ್ವವು ರಿಚರ್ಡ್ ಟ್ರೆವಿಥಿಕ್, ವಿಲಿಯಂ ಮರ್ಡೊಕ್ ಅಥವಾ ಜೊನಾಥನ್ ಹಾರ್ನ್‌ಬ್ಲೋಯರ್ ಮುಂತಾದ ಸಂಶೋಧಕರು ಸುಧಾರಿತ ಉಗಿ ಯಂತ್ರಗಳನ್ನು ಜಾರಿಗೆ ತರುವುದಕ್ಕೆ ಅಡ್ಡಿಯಾಯಿತು. ಇದರಿಂದಾಗಿ ಕೈಗಾರಿಕಾ ಕ್ರಾಂತಿಯು ಸುಮಾರು ೧೬ ವರ್ಷಗಳಷ್ಟು ಕುಂಠಿತಗೊಂಡಿತು.[೨೦]

ಯುರೋಪ್‌ನಲ್ಲಿ ಸಂಭವಿಸಲು ಕಾರಣಗಳು[ಬದಲಾಯಿಸಿ]

A 1623 ಡಚ್ ಈಸ್ಟ್ ಇಂಡಿಯ ಕಂಪೆನಿ ಬಾಂಡ್.ಯುರೋಪಿಯನ್ 17ನೇ ಶತಮಾನದ ವಸಾಹತು ವಿಸ್ತರಣೆ,ಅಂತಾರಾಷ್ಟ್ರೀಯ ವ್ಯಾಪಾರ,ಮತ್ತು ಹಣಕಾಸು ಮಾರುಕಟ್ಟೆಗಳ ಸೃಷ್ಟಿಯಿಂದ ಹೊಸ ಕಾನೂನು ಮತ್ತು ಹಣಕಾಸು ಪರಿಸರವನ್ನು ನಿರ್ಮಿಸಿದೆ,ಅದು 18ನೇ ಶತಮಾನದ ಕೈಗಾರಿಕಾ ಬೆಳವಣಿಗೆಯನ್ನು ಬೆಂಬಲಿಸಿತು ಮತ್ತು ಅನುಕೂಲ ಕಲ್ಪಿಸಿತು.

ಕೈಗಾರಿಕಾ ಕ್ರಾಂತಿಯು ೧೮ನೇ ಶತಮಾನದಲ್ಲಿ ಯುರೋಪ್‌ನಲ್ಲಿ ಮಾತ್ರ ಸಂಭವಿಸಿ, ಜಗತ್ತಿನ ಇತರೆ ಭಾಗಗಳಲ್ಲಿ ವಿಶೇಷವಾಗಿ ಚೀನಾ, ಭಾರತ ಮತ್ತು ಮಧ್ಯಪ್ರಾಚ್ಯ ಅಥವಾ ಇತರೆ ಕಾಲಗಳಾದ ಪ್ರಾಚೀನ[೨೧] ಅಥವಾ ಮಧ್ಯಯುಗಗಳಲ್ಲಿ ವಿಶೇಷವಾಗಿ ಸಂಭವಿಸದಿರಲು ಕಾರಣಗಳೇನು ಎಂಬ ಪ್ರಶ್ನೆಯು ಇತಿಹಾಸಕಾರರಿಗೆ ಆಸಕ್ತಿ ಕೆರಳಿಸಿತು.[೨೨] ಇದಕ್ಕೆ ಶಿಕ್ಷಣ,ತಾಂತ್ರಿಕ ಬದಲಾವಣೆಗಳು[೨೩] (ನೋಡಿ,ಯುರೋಪ್‌ನಲ್ಲಿ ಸೈಂಟಿಫಿಕ್ ರಿವಾಲ್ಯೂಷನ್), "ಆಧುನಿಕ ಸರ್ಕಾರ", "ಆಧುನಿಕ" ಉದ್ಯೋಗದ ನಡವಳಿಕೆಗಳು,ಪರಿಸರ ಮತ್ತು ಸಂಸ್ಕೃತಿ ಸೇರಿದಂತೆ ಅಸಂಖ್ಯಾತ ಅಂಶಗಳನ್ನು ಸಲಹೆ ಮಾಡಲಾಯಿತು.[೨೪] ಜ್ಞಾನೋದಯದ ಯುಗವೆಂದರೆ ಬಹುಸಂಖ್ಯಾತ ಸಾಕ್ಷರ ಜನಸಂಖ್ಯೆಯಲ್ಲದೇ ಕೆಲಸದ ಬಗ್ಗೆ ಹೆಚ್ಚು ಆಧುನಿಕ ದೃಷ್ಟಿಕೋನ ಹೊಂದಿದವರೆಂದು ಅರ್ಥ. ಆದಾಗ್ಯೂ, ಅನೇಕ ಇತಿಹಾಸಕಾರರು ಯುರೋಪ್ ಮತ್ತು ಚೀನಾ ಹೆಚ್ಚುಕಡಿಮೆ ಸಮಾನ ಎಂಬ ವಾದವನ್ನು ಒಪ್ಪಲಿಲ್ಲ. ಪಶ್ಚಿಮ ಯುರೋಪ್‌ನಲ್ಲಿ ೧೮ನೇ ಶತಮಾನದ ಅಂತ್ಯದಲ್ಲಿ ತಲಾದಾಯ ಕೊಳ್ಳುವ ಶಕ್ತಿಯ ಹೋಲಿಕೆಯಲ್ಲಿ ಹೆಚ್ಚುಕಡಿಮೆ ೧೫೦೦ ಡಾಲರ್‌ಗಳೆಂದು ಇತ್ತೀಚಿಗೆ ಅಂದಾಜು ಮಾಡಲಾಗಿತ್ತು(ಬ್ರಿಟನ್ ಸುಮಾರು ೨೦೦೦ ಡಾಲರ್ ತಲಾದಾಯ ಹೊಂದಿದೆ).[೨೫] ಆದರೆ ಚೀನವನ್ನು ಇದಕ್ಕೆ ಹೋಲಿಸಿದಾಗ ಅದು ೪೫೦ ಡಾಲರ್ ತಲಾದಾಯ ಹೊಂದಿತ್ತು. ಅಲ್ಲದೇ ಸರಾಸರಿ ಬಡ್ಡಿದರ ಬ್ರಿಟನ್‌ನಲ್ಲಿ ೫% ಮತ್ತು ಚೀನದಲ್ಲಿ ೩೦%ಗಿಂತ ಹೆಚ್ಚಾಗಿದೆ.ಇವು ಬ್ರಿಟನ್‌ನಲ್ಲಿ ಬಂಡವಾಳ ಅತ್ಯಂತ ವಿಪುಲವಾಗಿತ್ತೆಂದು ಸ್ಪಷ್ಟಪಡಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಡೇವಿಡ್ ಲ್ಯಾಂಡೆಸ್ ಮತ್ತು ಮ್ಯಾಕ್ಸ್ ವೆಬರ್ ಮುಂತಾದ ಇತಿಹಾಸಕಾರರು[೨೬] ಚೀನ ಮತ್ತು ಯುರೋಪ್‌ನಲ್ಲಿನ ಭಿನ್ನ ಧಾರ್ಮಿಕ ಪದ್ಧತಿಗಳು ಕೈಗಾರಿಕಾ ಕ್ರಾಂತಿ ಸಂಭವಿಸಿದ ಸ್ಥಳದಲ್ಲಿ ನಿರ್ದೇಶಿಸಿದವೆಂದು ಕಾರಣ ನೀಡಿದ್ದಾರೆ. ಯುರೋಪ್ ಧರ್ಮ ಮತ್ತು ನಂಬಿಕೆಗಳು ಬಹುತೇಕ ಜುಡೊ-ಕ್ರಿಶ್ಚಿಯಾನಿಟಿ ಮತ್ತು ಗ್ರೀಕ್ ಚಿಂತನೆಯ ಉತ್ಪನ್ನಗಳು. ಇದಕ್ಕೆ ವಿರುದ್ಧವಾಗಿ, ಚೀನದ ಸಮಾಜವು ಕನ್‌ಫ್ಯೂಷಿಯಸ್,ಮೆನ್ಸಿಯಸ್, ಹಾನ್ ಫೈಜಿ ಲಿಗಾಲಿಸಂ, ಲಾವೊ ತ್ಸು ಟಾವೈಸಂ ಮತ್ತು ಬುದ್ಧ, ಬುದ್ಧಿಸಂ ಮುಂತಾದ ವ್ಯಕ್ತಿಗಳಿಂದ ಸಂಸ್ಥಾಪನೆಯಾಯಿತು. ಬ್ರಹ್ಮಾಂಡವು ತರ್ಕಸಮ್ಮತ ಮತ್ತು ಚಿರಂತನ ನಿಯಮಗಳಿಂದ ಆಳಲ್ಪಡುತ್ತದೆಂದು ಐರೋಪ್ಯರು ನಂಬಿದ್ದರೆ, ಪೂರ್ವ ದೇಶಗಳು ಬ್ರಹ್ಮಾಂಡವು ನಿರಂತರ ಪರಿವರ್ತನೆಯಿಂದ ಕೂಡಿರುವುದಾಗಿ ನಂಬಿದ್ದರು. ಬೌದ್ಧರು ಮತ್ತು ಟಾವೊವಾದಿಗಳು ತರ್ಕಸಮ್ಮತ ತಿಳಿವಳಿಕೆಯ ಸಾಮರ್ಥ್ಯ ಪಡೆದಿರಲಿಲ್ಲ.[ಸೂಕ್ತ ಉಲ್ಲೇಖನ ಬೇಕು]

ಭಾರತಕ್ಕೆ ಸಂಬಂಧಿಸಿದಂತೆ, ಮಾರ್ಕ್ಸ್‌ವಾದಿ ಇತಿಹಾಸಕಾರ ರಜನಿ ಪಾಲ್ಮೆ ದತ್ "ಭಾರತದಲ್ಲಿ ಕೈಗಾರಿಕಾ ಕ್ರಾಂತಿಗೆ ಹಣಕಾಸು ಪೂರೈಸಬೇಕಾಗಿದ್ದ ಬಂಡವಾಳವು ಬದಲಿಗೆ ಇಂಗ್ಲೆಂಡ್ ಕೈಗಾರಿಕಾ ಕ್ರಾಂತಿಗೆ ಹಣಕಾಸು ಪೂರೈಸಿತು" ಎಂದು ವಿಶ್ಲೇಷಿಸಿದ್ದಾರೆ.[೨೭] ಚೀನಾಗೆ ವ್ಯತಿರಿಕ್ತವಾಗಿ ಭಾರತ ಅನೇಕ ಪೈಪೋಟಿಯ ಪ್ರಭುತ್ವಗಳಾಗಿ ಹೋಳಾಯಿತು.ಅವುಗಳಲ್ಲಿ ಮೂರು ಮುಖ್ಯ ಪ್ರಭುತ್ವಗಳು ಮರಾಠರು, ಸಿಖ್ಖರು ಮತ್ತು ಮೊಘಲರು. ಇದರ ಜತೆಗೆ ಆರ್ಥಿಕತೆಯು ಎರಡು ಕ್ಷೇತ್ರಗಳ ಮೇಲೆ ಹೆಚ್ಚು ಅವಲಂಬಿತವಾಗಿತ್ತು-ಜೀವನಾಧಾರವಾದ ಕೃಷಿ ಮತ್ತು ಹತ್ತಿ. ತಾಂತ್ರಿಕ ಸಂಶೋಧನೆ ವಿರಳವಾಗಿದ್ದು ಕಂಡುಬಂತು. ಬ್ರಿಟನ್ ಸ್ವಾಧೀನಕ್ಕೆ ಮುಂಚಿತವಾಗಿ ನಿರಂಕುಶ ರಾಜಪ್ರಭುತ್ವಗಳು ಅರಮನೆಯ ಭಂಡಾರಗಳಲ್ಲಿ ಅಪಾರ ಪ್ರಮಾಣದ ಸಂಪತ್ತನ್ನು ದಾಸ್ತಾನಿರಿಸಿದ್ದರೆಂದು ನಂಬಲಾಗಿತ್ತು. ಚೀನ,ಭಾರತ ಮತ್ತು ಮಧ್ಯಪ್ರಾಚ್ಯದ ನಿರಂಕುಶವಾದಿ ಪ್ರಭುತ್ವಗಳು ಉತ್ಪಾದನೆ ಮತ್ತು ರಫ್ತುಗಳನ್ನು ಉತ್ತೇಜಿಸುವಲ್ಲಿ ವಿಫಲವಾದವು. ತಮ್ಮ ಪ್ರಜೆಗಳ ಯೋಗಕ್ಷೇಮದ ಬಗ್ಗೆ ಕಡಿಮೆ ಆಸಕ್ತಿ ಹೊಂದಿದ್ದವು.[೨೮]

ಬ್ರಿಟನ್‌ನಲ್ಲಿ ಸಂಭವಿಸಲು ಕಾರಣಗಳು[ಬದಲಾಯಿಸಿ]

ಕೈಗಾರಿಕಾ ಕ್ರಾಂತಿ ಪ್ರಗತಿ ಹೊಂದುತ್ತಿದ್ದಂತೆ ಬ್ರಿಟಿಷ್ ಉತ್ಪಾದಿತ ಇಳುವರಿ ಇತರೆ ಆರ್ಥಿಕತೆಗಳಿಗಿಂತ ಮುನ್ನುಗ್ಗಿತು.

ಕೈಗಾರಿಕೆ ಕ್ರಾಂತಿಯ ಪ್ರಾರಂಭ ಕುರಿತ ಚರ್ಚೆಯಲ್ಲಿ ಇತರೆ ರಾಷ್ಟ್ರಗಳಿಗಿಂತ ಗ್ರೇಟ್ ಬ್ರಿಟನ್ ಹೊಂದಿದ್ದ ಅಪಾರ ಮೇಲುಗೈ ಕೂಡ ಒಳಗೊಂಡಿದೆ. ಬ್ರಿಟನ್ ತನ್ನ ಅನೇಕ ಸಾಗರೋತ್ತರ ವಸಾಹತುಗಳಿಂದ ನೈಸರ್ಗಿಕ ಅಥವಾ ಹಣಕಾಸು ಸಂಪನ್ಮೂಲಗಳನ್ನು ಸ್ವೀಕರಿಸಿದ ಪ್ರಾಮುಖ್ಯತೆ ಮತ್ತು ಆಫ್ರಿಕಾ ಮತ್ತು ಕ್ಯಾರಿಬಿಯನ್ ನಡುವೆ ಬ್ರಿಟಿಷ್ ಗುಲಾಮ ವ್ಯಾಪಾರದಿಂದ ಹುಟ್ಟಿದ ಲಾಭಗಳು ಕೈಗಾರಿಕೆ ಬಂಡವಾಳ ಉತ್ತೇಜನಕ್ಕೆ ನೆರವಾಗಿದ್ದರ ಪ್ರಾಮುಖ್ಯತೆ ಕುರಿತು ಕೆಲವರು ಒತ್ತಿಹೇಳಿದ್ದಾರೆ. ಆದಾಗ್ಯೂ ಗುಲಾಮ ವ್ಯಾಪಾರ ಮತ್ತು ವೆಸ್ಟ್ ಇಂಡೀಸ್ ತೋಟಗಾರಿಕೆಗಳು ಕೈಗಾರಿಕೆ ಕ್ರಾಂತಿಯ ವರ್ಷಗಳಲ್ಲಿ ಬ್ರಿಟಿಷ್ ರಾಷ್ಟ್ರೀಯ ಆದಾಯಕ್ಕೆ ಕೇವಲ ೫% ಒದಗಿಸಿತೆಂದು ಹೇಳಲಾಗಿದೆ.[೨೯] ಕೈಗಾರಿಕೆ ಕ್ರಾಂತಿಯ ಸಂದರ್ಭದಲ್ಲಿ ಗುಲಾಮಗಿರಿಯು ಬ್ರಿಟನ್‌ನಲ್ಲಿ ಕನಿಷ್ಠ ಆರ್ಥಿಕ ಲಾಭಗಳಿಗೆ ಕಾರಣವಾದರೂ,ಕ್ಯಾರಿಬಿಯನ್ ಮ‌ೂಲದ ಬೇಡಿಕೆ ಇಂಗ್ಲೆಂಡ್ ಕೈಗಾರಿಕೆ ಉತ್ಪಾದನೆಗೆ ೧೨% ಕಾರಣವಾಯಿತು.[೩೦]

ಪರ್ಯಾಯವಾಗಿ,ದೊಡ್ಡ ವಾಣಿಜ್ಯ ನೆಲೆಯಿಂದ ಹೆಚ್ಚಿನ ವ್ಯಾಪಾರ ಉದಾರೀಕರಣವು ಬ್ರಿಟನ್‌ಗೆ ದೃಢ ರಾಜಪ್ರಭುತ್ವಗಳನ್ನು ಹೊಂದಿದ ವಿಶೇಷವಾಗಿ ಚೀನಾ ಮತ್ತು ರಷ್ಯಾಗಿಂತ ಹೆಚ್ಚು ಪರಿಣಾಮಕಾರಿಯಾಗಿ ಹೊರಹೊಮ್ಮುತ್ತಿರುವ ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಗಳನ್ನು ಉತ್ಪಾದಿಸಿ ಬಳಸಲು ಅವಕಾಶ ನೀಡಿರಬಹುದು. ಹಣಕಾಸು ಲೂಟಿ ಮತ್ತು ಆರ್ಥಿಕ ಕುಸಿತದಿಂದ ವಿನಾಶಗೊಳ್ಳದ ಏಕೈಕ ಐರೋಪ್ಯ ರಾಷ್ಟ್ರ ಮತ್ತು ಉಪಯುಕ್ತ ಗಾತ್ರದ ಯಾವುದೇ ವಾಣಿಜ್ಯ ಹಡಗನ್ನು ಹೊಂದಿರುವ ರಾಷ್ಟ್ರವಾಗಿ ಬ್ರಿಟನ್ ನೆಪೋಲಿಯನ್ ಯುದ್ಧಗಳಿಂದ ಹೊರಹೊಮ್ಮಿದೆ(ಐರೋಪ್ಯ ವಾಣಿಜ್ಯ ಹಡಗುಗಳು ಯುದ್ಧದ ಸಂದರ್ಭದಲ್ಲಿ ರಾಯಲ್ ನೇವಿಯಿಂದ ನಾಶವಾಗಿತ್ತು.[೩೧] ಪೂರ್ವ ಸ್ವರೂಪಗಳ ಅನೇಕ ಉತ್ಪಾದಿತ ಸರಕುಗಳಿಗೆ ಮಾರುಕಟ್ಟೆಗಳಿವೆಯೆಂದು ಬ್ರಿಟನ್ ವ್ಯಾಪಕ ರಫ್ತು ಗೃಹಕೈಗಾರಿಕೆಗಳು ಕೂಡ ಖಾತರಿಮಾಡಿಕೊಂಡವು. ಆ ಸಂಘರ್ಷದಲ್ಲಿ ಬ್ರಿಟನ್ ಬಹುತೇಕ ಯುದ್ಧವು ಸಾಗರೋತ್ತರ ನಡೆಯುವುದರಲ್ಲಿ ಫಲಿತಾಂಶ ಒದಗಿಸಿತು.ಇದರಿಂದ ಯುರೋಪ್‌ನ ಬಹುತೇಕ ಭಾಗದ ಮೇಲೆ ಪರಿಣಾಮ ಬೀರಿದ ಪ್ರಾದೇಶಿಕ ಆಕ್ರಮಣದ ವಿನಾಶಕಾರಿ ಪ್ರಭಾವಗಳನ್ನು ತಗ್ಗಿಸಿದವು. ಬ್ರಿಟನ್ ಬೌಗೋಳಿಕ ಸ್ಥಾನ ಕೂಡ ಇನ್ನಷ್ಟು ನೆರವಾಯಿತು-ಅದು ಯುರೋಪ್‌ನ ಪ್ರಧಾನ ಭೂಭಾಗದಿಂದ ಪ್ರತ್ಯೇಕಗೊಂಡ ದ್ವೀಪ.

ಬ್ರಿಟನ್ ಹೊಂದಿದ್ದ ಮುಖ್ಯ ಸಂಪನ್ಮೂಲಗಳ ಲಭ್ಯತೆಯಿಂದ ಕೈಗಾರಿಕಾ ಕ್ರಾಂತಿಯಲ್ಲಿ ಯಶಸ್ವಿಯಾಗಲು ಸಮರ್ಥವಾಯಿತು ಎಂಬ ಇನ್ನೊಂದು ಸಿದ್ಧಾಂತವಿದೆ. ಅದರ ಸಣ್ಣ ಬೌಗೋಳಿಕ ಗಾತ್ರಕ್ಕೆ ದಟ್ಟವಾದ ಜನಸಂಖ್ಯೆಯನ್ನು ಹೊಂದಿದೆ. ಸಾಮಾನ್ಯ ಭೂಮಿಯ ಎನ್‌ಕ್ಲೋಸರ್(ಒಟ್ಟು ಸಾಗುವಳಿಗೆ ಭೂ ಆಕ್ರಮಣ) ಮತ್ತು ಸಂಬಂಧಿತ ಕೃಷಿ ಕ್ರಾಂತಿಯಿಂದ ಕಾರ್ಮಿಕಶಕ್ತಿಯ ಪೂರೈಕೆ ತಕ್ಷಣವೇ ಲಭ್ಯವಾಯಿತು. ನಾರ್ಥ್ ಆಫ್ ಇಂಗ್ಲೆಂಡ್, ಇಂಗ್ಲಿಷ್ ಮಿಡ್‌ಲ್ಯಾಂಡ್ಸ್, ಸೌತ್ ವೇಲ್ಸ್ ಮತ್ತು ಸ್ಕಾಟಿಷ್ ಲೋಲ್ಯಾಂಡ್‌ಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸ್ಥಳೀಯ ಹೊಂದಾಣಿಕೆಗಳು ಕೂಡ ಇದ್ದವು. ಕಲ್ಲಿದ್ದಲು, ಕಬ್ಬಿಣ,ಸೀಸ,ತಾಮ್ರ,ಸತು,ಸುಣ್ಣದ ಕಲ್ಲು ಮತ್ತು ಜಲಶಕ್ತಿಯ ಸ್ಥಳೀಯ ಪೂರೈಕೆಯಿಂದ ಕೈಗಾರಿಕೆಯ ಅಭಿವೃದ್ಧಿ ಮತ್ತು ವಿಸ್ತರಣೆಗೆ ಅತ್ಯುತ್ಕೃಷ್ಟ ಅನುಕೂಲಗಳನ್ನು ಕಲ್ಪಿಸಿದವು. ಅಲ್ಲದೇ, ವಾಯವ್ಯ ಇಂಗ್ಲೆಂಡ್‌ನ ಸೌಮ್ಯ ಹವಾಮಾನ ಪರಿಸ್ಥಿತಿಗಳು ಹತ್ತಿಯಿಂದ ನೂಲು ತೆಗೆಯುವುದಕ್ಕೆ ಸೂಕ್ತ ಸ್ಥಿತಿಗಳನ್ನು ಕಲ್ಪಿಸಿ,ವಸ್ತ್ರೋದ್ಯಮ ಕೈಗಾರಿಕೆಯ ಹುಟ್ಟಿಗೆ ನೈಸರ್ಗಿಕ ಆರಂಭಿಕ ಅಂಶವನ್ನು ಒದಗಿಸಿತು.

ಬ್ರಿಟನ್‌ನಲ್ಲಿ ೧೬೮೮ರ ಆಸುಪಾಸಿನಲ್ಲಿ ಸ್ಥಿರವಾದ ರಾಜಕೀಯ ಪರಿಸ್ಥಿತಿ ಮತ್ತು ಬ್ರಿಟನ್ ಸಮಾಜದ ಬದಲಾವಣೆಗೆ ತಕ್ಷಣವೇ ಗ್ರಹಿಸುವ ಶಕ್ತಿಯು(ಇತರೆ ಐರೋಪ್ಯ ರಾಷ್ಟ್ರಗಳಿಗೆ ಹೋಲಿಸಿದಾಗ) ಕೈಗಾರಿಕೆ ಕ್ರಾಂತಿಗೆ ಪ್ರಶಸ್ತವಾದ ಅಂಶಗಳೆಂದು ಹೇಳಲಾಗಿದೆ. ಎನ್‌ಕ್ಲೋಸರ್ ಆಂದೋಳನದಿಂದ ಬಹುತೇಕ ಭಾಗದಲ್ಲಿ ಕೈಗಾರೀಕರಣಕ್ಕೆ ಪ್ರತಿಭಟನೆಯ ಮಹತ್ವದ ಮ‌ೂಲವಾಗಿದ್ದ ರೈತಾಪಿವರ್ಗ ನಾಶವಾಯಿತು ಮತ್ತು ಭೂಮಿ ಹೊಂದಿದ ಮೇಲ್ವರ್ಗದ ಜನರು ವಾಣಿಜ್ಯ ಹಿತಾಸಕ್ತಿಗಳನ್ನು ಬೆಳೆಸಿಕೊಂಡರು.ಅದರಿಂದ ಬಂಡವಾಳಶಾಹಿಯ ಬೆಳವಣಿಗೆಗೆ ತೊಡಕುಗಳನ್ನು ನಿವಾರಿಸುವಲ್ಲಿ ಅವರು ಆದ್ಯಪ್ರವರ್ತಕರಾದರು.[೩೨] (ಹಿಲೇರೆ ಬೆಲ್ಲೋಕ್ ಅವರ ಸರ್ವೈಲ್ ಸ್ಟೇಟ್‌ನಲ್ಲಿ ಈ ಅಂಶವನ್ನು ಸ್ಪಷ್ಟಪಡಿಸಲಾಗಿದೆ).

ಪ್ರೊಟೆಸ್ಟೆಂಟ್ ಕೆಲಸದ ನೀತಿ[ಬದಲಾಯಿಸಿ]

ಪ್ರಗತಿ,ತಂತ್ರಜ್ಞಾನ ಮತ್ತು ಕಠಿಣ ದುಡಿಮೆಯಲ್ಲಿ ನಂಬಿಕೆಯಿರಿಸಿದ ಉದ್ಯಮಶೀಲ ವರ್ಗದ ಉಪಸ್ಥಿತಿಯಿಂದ ಬ್ರಿಟನ್ ಮುನ್ನಡ ಪಡೆಯಿತು ಎನ್ನುವುದು ಇನ್ನೊಂದು ಸಿದ್ಧಾಂತ.[೩೩] ಈ ವರ್ಗದ ಅಸ್ತಿತ್ವವನ್ನು ಆಗಾಗ್ಗೆ ಪ್ರೊಟೆಸ್ಟೆಂಟ್ ಕೆಲಸದ ನೀತಿಗೆ(ಮ್ಯಾಕ್ಸ್ ವೆಬರ್ ನೋಡಿ)ಮತ್ತು ಬ್ಯಾಪ್ಟಿಸ್ಟ್‌ರ ನಿರ್ದಿಷ್ಟ ಸ್ಥಿತಿಗತಿಗೆ ಮತ್ತು ಇಂಗ್ಲೀಷ್ ಆಂತರಿಕ ಯುದ್ಧದೊಂದಿಗೆ ರೂಪುತಳೆದ ಕ್ವೇಕರ್ಸ್ ಮತ್ತು ಪ್ರೆಸ್ಬಿಟೇರಿಯನ್ಸ್ ಮುಂತಾದ ಮತಭೇದವುಳ್ಳ ಪ್ರೊಟೆಸ್ಟೆಂಟ್ ಪಂಥಗಳಿಗೆ ಕೊಂಡಿ ಕಲ್ಪಿಸಲಾಗಿದೆ. ಕಾನೂನಿನ ನಿಯಮಗಳಲ್ಲಿ ವಿಶ್ವಾಸ ಬಲವರ್ಧನೆ ಅನುಸರಿಸಿ,೧೬೮೮ರ ಭವ್ಯ ಕ್ರಾಂತಿಯಲ್ಲಿ ಬ್ರಿಟನ್ ಸಂವಿಧಾನಿಕ ರಾಜಪ್ರಭುತ್ವದ ಮೂಲರೂಪದ ಸ್ಥಾಪನೆ,ಬ್ಯಾಂಕ್ ಆಫ್ ಇಂಗ್ಲೆಂಡ್‌ನ ರಾಷ್ಟ್ರೀಯ ಸಾಲದ ವ್ಯವಸ್ಥಾಪನೆ ಆಧಾರಿತ ಸ್ಥಿರ ಹಣಕಾಸು ಮಾರುಕಟ್ಟೆಯ ಹೊಮ್ಮುವಿಕೆಯಿಂದ ಕೈಗಾರಿಕೋದ್ಯಮಗಳಲ್ಲಿ ಖಾಸಗಿ ಹಣಕಾಸು ಹೂಡಿಕೆಗಳಿಗೆ ಸಾಮರ್ಥ್ಯ, ಆಸಕ್ತಿ ಬೆಳೆಯಿತು.

ಭಿನ್ನಮತೀಯರು ಬಹುತೇಕ ಎಲ್ಲ ಸಾರ್ವಜನಿಕ ಕಚೇರಿಗಳಿಂದ ನಿಷೇಧ ಅಥವಾ ನಿರುತ್ಸಾಹಕ್ಕೆ ಒಳಗಾದರಲ್ಲದೇ ಇಂಗ್ಲೆಂಡ್‌ನ ಕೇವಲ ಎರಡು ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣಕ್ಕೆ ಆ ಸಂದರ್ಭದಲ್ಲಿ ನಿಷೇಧ ಹೇರಲಾಯಿತು.( ಆದರೂ ಭಿನ್ನಮತೀಯರು ಸ್ಕಾಟ್‌ಲ್ಯಾಂಡ್‌ನ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸಕ್ಕೆ ಮುಕ್ತರಾಗಿದ್ದರು). ರಾಜಪ್ರಭುತ್ವದ ಮರುಸ್ಥಾಪನೆ ಸಂಭವಿಸಿದ ಕೂಡಲೇ ಅಧಿಕೃತ ಆಂಗ್ಲಿಕನ್ ಚರ್ಚ್‌ನಲ್ಲಿ ಸದಸ್ಯತ್ವವು ಟೆಸ್ಟ್ ಆಕ್ಟ್(ಇಂಗ್ಲೀಷ್ ದಂಡನೆಯ ಕಾನೂನುಗಳು)ಅನ್ವಯ ಕಡ್ಡಾಯವಾಯಿತು.ಅವರು ಅದಾದಬಳಿಕ ಬ್ಯಾಂಕಿಂಗ್, ಉತ್ಪಾದನೆ ಮತ್ತು ಶಿಕ್ಷಣದಲ್ಲಿ ಸಕ್ರಿಯರಾದರು. ವಿಶೇಷವಾಗಿ ಯೂನಿಟೇರಿಯನ್ಸ್(ಏಕದೇವ ಆರಾಧಕರು) ಶಿಕ್ಷಣದಲ್ಲಿ ಭಿನ್ನಮತೀಯ ಅಕಾಡೆಮಿಗಳನ್ನು ನಡೆಸುವ ಮ‌ೂಲಕ ಭಾಗಿಯಾಗಿದ್ದರು.ಆಕ್ಸ್‌ಫರ್ಡ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾನಿಲಯಗಳಿಗೆ ಮತ್ತು ಎಟಾನ್ ಮತ್ತು ಹಾರೊ ಶಾಲೆಗಳಿಗೆ ವ್ಯತಿರಿಕ್ತವಾಗಿ ಅವುಗಳಲ್ಲಿ ಲೆಕ್ಕಶಾಸ್ತ್ರ ಮತ್ತು ವಿಜ್ಞಾನಗಳಿಗೆ ಹೆಚ್ಚು ಗಮನ ನೀಡಲಾಯಿತು-ಇವು ಉತ್ಪಾದನೆ ತಂತ್ರಜ್ಞಾನಗಳ ಅಭಿವೃದ್ಧಿಗೆ ಮುಖ್ಯವಾದ ಪಾಂಡಿತ್ಯದ ಕ್ಷೇತ್ರಗಳು.

ರಾಷ್ಟ್ರೀಯ ಆರ್ಥಿಕತೆಗಳ ಸ್ವರೂಪದೊಂದಿಗೆ ಈ ಸಾಮಾಜಿಕ ಅಂಶವನ್ನು ಕೂಡ ಇತಿಹಾಸಕಾರರು ಕೆಲವೊಮ್ಮೆ ಅತೀ ಮುಖ್ಯವೆಂದು ಪರಿಗಣಿಸುತ್ತಾರೆ. ಸರ್ಕಾರದ ಕೆಲವು ವಿಭಾಗಗಳಿಂದ ಈ ಪಂಥಗಳ ಜನರನ್ನು ಹೊರಗಿಟ್ಟಿದ್ದರೂ ಕೂಡ,ಅವರನ್ನು ಸಾಂಪ್ರದಾಯಿಕ ಬಂಡವಾಳಗಾರರು ಅಥವಾ ಇತರೆ ಉದ್ಯಮಿಗಳು ಮುಂತಾದ ಮಧ್ಯಮವರ್ಗದ ಅನೇಕ ಮಂದಿ ಸ್ವಲ್ಪ ಮಟ್ಟಿಗೆ ಸಹಚರ ಪ್ರೊಟೆಸ್ಟೆಂಟರೆಂದು ಪರಿಗಣಿಸಿದ್ದರು. ಇಂತಹ ಸಹನಾಶಕ್ತಿ ಮತ್ತು ಬಂಡವಾಳ ಪೂರೈಕೆಯಿಂದ ಈ ಪಂಥಗಳ ಹೆಚ್ಚು ಉದ್ಯಮಶೀಲ ಪ್ರವೃತ್ತಿಯ ಜನರಿಗೆ ಸ್ವಾಭಾವಿಕ ಹೊರದಾರಿಯು ೧೭ನೇ ಶತಮಾನದ ವೈಜ್ಞಾನಿಕ ಕ್ರಾಂತಿಯ ಹಿನ್ನೆಲೆಯಲ್ಲಿ ಸೃಷ್ಟಿಯಾದ ತಂತ್ರಜ್ಞಾನಗಳಲ್ಲಿ ಹೊಸ ಅವಕಾಶಗಳನ್ನು ಅರಸುವುದಾಗಿತ್ತು.

ನಾವೀನ್ಯಗಳು[ಬದಲಾಯಿಸಿ]

ಸಂಶೋಧಕ ಸಾಮ್ಯುಯೆಲ್ ಕ್ರಾಂಪ್ಟನ್ ನಿರ್ಮಿಸಿದ ನೂಲುವ ಯಂತ್ರವು ಏಕೈಕ ಜೀವಂತ ನಿದರ್ಶನವಾಗಿದೆ.

ಕೈಗಾರಿಕಾ ಕ್ರಾಂತಿಯ ಪ್ರಾರಂಭವು ಸಣ್ಣ ಸಂಖ್ಯೆಯ ತಾಂತ್ರಿಕ ನಾವೀನ್ಯಗಳಿಗೆ ನಿಕಟ ಸಾಮೀಪ್ಯ ಹೊಂದಿದೆ,ಇವು[೩೪] ೧೮ನೇ ಶತಮಾನದ ಉತ್ತರಾರ್ಧದಲ್ಲಿ ರೂಪುತಳೆದಿತ್ತು.

ಇವು ಮ‌ೂರು "ಪ್ರಮುಖ ಕ್ಷೇತ್ರ"ಗಳನ್ನು ಪ್ರತಿನಿಧಿಸಿದ್ದು,ಅಲ್ಲಿ ಮುಖ್ಯ ನಾವೀನ್ಯಗಳು ಸಂಭವಿಸಿದವು.ಇವು ಆರ್ಥಿಕ ಪ್ರಗತಿಗೆ ಅವಕಾಶ ನೀಡಿದ್ದು,ಅವುಗಳ ಮ‌ೂಲಕ ಸಾಮಾನ್ಯವಾಗಿ ಕೈಗಾರಿಕಾ ಕ್ರಾಂತಿಯನ್ನು ವ್ಯಾಖ್ಯಾನಿಸಲಾಯಿತು. ಇವು ಯಾವುದೇ ಆವಿಷ್ಕಾರಗಳನ್ನು ವಿಶೇಷವಾಗಿ ವಸ್ತ್ರೋದ್ಯಮ ಉದ್ಯಮದಲ್ಲಿ ಆವಿಷ್ಕಾರಗಳನ್ನು ಕಿರಿದಾಗಿಸುವುದಾಗಿರಲಿಲ್ಲ. ವಸ್ತ್ರೋದ್ಯಮ ಕೈಗಾರಿಕೆಯಲ್ಲಿ ಸ್ಪಿನ್ನಿಂಗ್ ಜೆನ್ನಿ ಮತ್ತು ಫ್ಲೈಯಿಂಗ್ ಶಟಲ್ ಮತ್ತು ಮೆದು ಕಬ್ಬಿಣದ ಜತೆ ಅರೆಗಾವಾದ ಕಲ್ಲಿದ್ದಲು ಕರಗಿಸುವಿಕೆ ಮುಂತಾದ ಮುಂಚಿನ ಪ್ರಕ್ರಿಯೆಗಳು ಇಲ್ಲದಿದ್ದರೆ ಈ ಸಾಧನೆಗಳು ಅಸಾಧ್ಯವಾಗಬಹುದಿತ್ತು. ನಂತರ ವಿದ್ಯುತ್ ಮಗ್ಗ ಮತ್ತು ರಿಚರ್ಡ್ ಟ್ರೆವಿಥಿಕ್ ಅವರ ಅಧಿಕ ಒತ್ತಡದ ಉಗಿ ಯಂತ್ರ ಮುಂತಾದ ಆವಿಷ್ಕಾರಗಳು ಬ್ರಿಟನ್ ಬೆಳೆಯುತ್ತಿರುವ ಕೈಗಾರೀಕರಣಕ್ಕೆ ಮುಖ್ಯವಾಗಿತ್ತು.ಶಕ್ತಿಚಾಲಿತ ಹತ್ತಿಗಿರಣಿಗಳು ಮತ್ತು ಕಬ್ಬಿಣ ಉತ್ಪನ್ನಗಳ ತಯಾರಿಕೆಯಲ್ಲಿ ಉಗಿ ಯಂತ್ರಗಳ ಅಳವಡಿಕೆಯಿಂದ ಇತರೆ ಸಂಪನ್ಮೂಲಗಳ ಲಭ್ಯತೆಯಿಂದ ಹೆಚ್ಚು ಅನುಕೂಲದ ಸ್ಥಳಗಳಲ್ಲಿ ಸ್ಥಾಪನೆಗೆ ನೆರವಾಯಿತು. ಜಲಶಕ್ತಿ ಚಾಲಿತ ಗಿರಣಿಗಳಿಗೆ ಶಕ್ತಿ ಒದಗಿಸುವ ಜಲಮ‌ೂಲಕ್ಕಿಂತ ಇದು ಮಿಗಿಲಾಗಿತ್ತು.

ವಸ್ತ್ರೋದ್ಯಮ ಕ್ಷೇತ್ರದಲ್ಲಿ,ಇಂತಹ ಗಿರಣಿಗಳು ಕಾರ್ಖಾನೆಗಳ ಕಾರ್ಮಿಕಶಕ್ತಿಯ ಸಂಘಟನೆಗೆ ಮಾದರಿಯಾಯಿತು.ಕಾಟನೊಪೊಲೀಸ್ ಎಂದು ಸಂಕ್ಷಿಪ್ತಗೊಳಿಸಿದ ಹೆಸರನ್ನು, ಮ್ಯಾಂಚೆಸ್ಟರ್‌ ಮ‌ೂಲದ ಹತ್ತಿಗಿರಣಿಗಳು, ಕಾರ್ಖಾನೆಗಳು ಮತ್ತು ಆಡಳಿತ ಕಚೇರಿಗಳ ವಿಸ್ತಾರ ಸಮ‌ೂಹಕ್ಕೆ ಇರಿಸಲಾಯಿತು. ಉತ್ಪನ್ನದ ಭಾಗಗಳನ್ನು ಜೋಡಿಸುವ ವ್ಯವಸ್ಥೆಯು ಇದರಲ್ಲಿ ಮತ್ತು ಇತರೆ ಕೈಗಾರಿಕೆಗಳಲ್ಲಿ ದಕ್ಷತೆಯನ್ನು ಬಹುಮಟ್ಟಿದೆ ಸುಧಾರಿಸಿತು. ಒಂದು ಉತ್ಪನ್ನದ ಏಕೈಕ ಕೆಲಸವನ್ನು ಮಾಡುವುದಕ್ಕೆ ಅನೇಕ ಮಂದಿಗೆ ತರಬೇತಿ ನೀಡುವುದರೊಂದಿಗೆ,ನಂತರ ಮುಂದಿನ ಕಾರ್ಮಿಕನಿಗೆ ವರ್ಗಾಯಿಸುವುದರಿಂದ ತಯಾರಾದ ಸರಕುಗಳ ಸಂಖ್ಯೆ ಕೂಡ ಗಮನಾರ್ಹವಾಗಿ ಏರಿಕೆಯಾಯಿತು.

ಇನ್ನೊಂದು ಮುಖ್ಯವಾದ ಸಂಗತಿ ೧೭೫೬ರಲ್ಲಿ ಬ್ರಿಟಿಷ್ ಎಂಜಿನಿಯರ್ ಜಾನ್ ಸ್ಮೀಟನ್ ಅವರಿಂದ ೧೩ ಶತಮಾನಗಳ ಕಾಲ ಅಳಿಸಿಹೋಗಿದ್ದ ಕಾಂಕ್ರೀಟ್ (ಜಲಜನಕ ಸುಣ್ಣದ ಗಚ್ಚುಮ‌ೂಲ)ಮರುಶೋಧನೆ.[೩೫]

ಜ್ಞಾನದ ವರ್ಗಾವಣೆ[ಬದಲಾಯಿಸಿ]

ಓರೆ ಕುರಿತು ಉಪನ್ಯಾಸ ನೀಡುತ್ತಿರುವ ತತ್ವಜ್ಞಾನಿ(ca. 1766)ಔಪಚಾರಿಕ ದಾರ್ಶನಿಕ ಸಮಾಜಗಳು ವೈಜ್ಞಾನಿಕ ಮುನ್ನಡೆಗಳನ್ನು ಹರಡುತ್ತವೆ.

ಹೊಸ ಆವಿಷ್ಕಾರದ ಜ್ಞಾನವು ಅನೇಕ ಸಾಧನಗಳ ಮ‌ೂಲಕ ವಿಸ್ತರಿಸಿತು. ತಂತ್ರಜ್ಞಾನದಲ್ಲಿ ತರಬೇತಾದ ಕಾರ್ಮಿಕರು ಇನ್ನೊಬ್ಬ ಮಾಲೀಕರ ಬಳಿಗೆ ತೆರಳುತ್ತಿದ್ದರು ಅಥವಾ ತಂತ್ರಜ್ಞಾನವನ್ನು ಅಕ್ರಮವಾಗಿ ಪಡೆಯಲಾಗುತ್ತಿತ್ತು. ಕೆಲವರು ಅಧ್ಯಯನ ಪ್ರವಾಸ ಕೈಗೊಂಡು ಸಾಧ್ಯವಾದ ಕಡೆ ಮಾಹಿತಿ ಸಂಗ್ರಹಿಸುವುದು ಸಾಮಾನ್ಯ ವಿಧಾನವಾಗಿತ್ತು. ಕೈಗಾರಿಕಾ ಕ್ರಾಂತಿಯ ಇಡೀ ಅವಧಿಯಲ್ಲಿ ಮತ್ತು ಅದಕ್ಕಿಂತ ಶತಮಾನ ಮುಂಚಿತವಾಗಿ, ಎಲ್ಲ ಐರೋಪ್ಯ ರಾಷ್ಟ್ರಗಳು ಮತ್ತು ಅಮೆರಿಕ ಅಧ್ಯಯನ ಪ್ರವಾಸದಲ್ಲಿ ನಿರತವಾಗಿದ್ದವು; ಮತ್ತು ಸ್ವೀಡನ್ ಮತ್ತು ಫ್ರಾನ್ಸ್‌ನಂತ ಕೆಲವು ರಾಷ್ಟ್ರಗಳು ನಾಗರಿಕ ಸೇವಕರು ಅಥವಾ ತಂತ್ರಜ್ಞರಿಗೆ ಕೂಡ ಅಧ್ಯಯನ ಪ್ರವಾಸವನ್ನು ರಾಷ್ಟ್ರದ ನೀತಿಯಾಗಿ ಕೈಗೊಳ್ಳಲು ತರಬೇತಿ ನೀಡಿತ್ತು. ಇತರೆ ರಾಷ್ಟ್ರಗಳಲ್ಲಿ ವಿಶೇಷವಾಗಿ ಬ್ರಿಟನ್ ಮತ್ತು ಅಮೆರಿಕದಲ್ಲಿ ಈ ಅಭ್ಯಾಸವನ್ನು ತಮ್ಮ ವಿಧಾನಗಳ ಸುಧಾರಣೆಗೆ ಆಸಕ್ತಿ ಹೊಂದಿದ್ದ ವೈಯಕ್ತಿಕ ಉತ್ಪಾದಕರು ಕೈಗೊಳ್ಳುತ್ತಿದ್ದರು. ಈಗ ಪ್ರವಾಸಿ ದಿನಚರಿಗಳನ್ನು ಇಡುವ ಅಭ್ಯಾಸದಂತೆ ಆಗ ಅಧ್ಯಯನ ಪ್ರವಾಸಗಳನ್ನು ಕೈಗೊಳ್ಳುವುದು ಸಾಮಾನ್ಯವಾಗಿತ್ತು. ಆ ಕಾಲದ ಕೈಗಾರಿಕೋದ್ಯಮಿಗಳು ಮತ್ತು ತಂತ್ರಜ್ಞರ ದಾಖಲೆಗಳು ಅವರ ವಿಧಾನಗಳ ಬಗ್ಗೆ ಹೋಲಿಸಲಾಗದ ಮಾಹಿತಿಯ ಮ‌ೂಲವಾಗಿತ್ತು.

ಬರ್ಮಿಂಗ್‌ಹ್ಯಾಂ ಲೂನಾರ್ ಸೊಸೈಟಿ ತರದ ಅನೌಪಚಾರಿಕ ದಾರ್ಶನಿಕ ಸಮಾಜಗಳ ಜಾಲದ ಮ‌ೂಲಕ ಆವಿಷ್ಕಾರದ ಹರಡುವಿಕೆ ಇನ್ನೊಂದು ವಿಧಾನ.ಇದರಲ್ಲಿ ಸದಸ್ಯರು ನೈಸರ್ಗಿಕ ತತ್ವಶಾಸ್ತ್ರ(ಅದರ ಅರ್ಥ ವಿಜ್ಞಾನ) ಚರ್ಚಿಸಲು ಕಲೆಯುತ್ತಾರೆ. ಕೆಲವು ಬಾರಿ ಉತ್ಪಾದನೆಗೆ ಅದನ್ನು ಅನ್ವಯಿಸುವುದನ್ನು ಕುರಿತು ಚರ್ಚಿಸುತ್ತಾರೆ. ಲೂನಾರ್ ಸೊಸೈಟಿ ೧೭೬೫ರಿಂದ ೧೮೦೯ರವರೆಗೆ ಅಭಿವರ್ಧಿಸಿತು.ಅವುಗಳ ಬಗ್ಗೆ,"ಅವು, ನೀವು ಇಷ್ಟಪಟ್ಟರೆ, ಹದಿನೆಂಟನೇ ಶತಮಾನದ ಎಲ್ಲ ಕ್ರಾಂತಿಗಳಿಗಿಂತ ವಿಶಾಲ ವ್ಯಾಪ್ತಿಯ ಕೈಗಾರಿಕೆ ಕ್ರಾಂತಿಯ ಕ್ರಾಂತಿಕಾರಿ ಸಮಿತಿ" ಎಂದು ಹೇಳಲಾಗಿದೆ.[೩೬] ಇಂತಹ ಇತರೆ ಸಮಾಜಗಳು ಅವುಗಳ ಚಟುವಟಿಕೆಗಳು ಮತ್ತು ನಡವಳಿಕೆಗಳ ಸಂಪುಟಗಳನ್ನು ಪ್ರಕಟಿಸಿದವು. ಉದಾಹರಣೆಗೆ ಲಂಡನ್ ಮ‌ೂಲದ ರಾಯಲ್ ಸೊಸೈಟಿ ಆಫ್ ಆರ್ಟ್ಸ್ ಹೊಸ ಆವಿಷ್ಕಾರಗಳ ಸಚಿತ್ರ ಸಂಪುಟ ಮತ್ತು ತನ್ನ ವಾರ್ಷಿಕ ನಡವಳಿಕೆಗಳಲ್ಲಿ ಅವುಗಳ ಬಗ್ಗೆ ದಾಖಲೆಗಳನ್ನು ಪ್ರಕಟಿಸಿತು.

ತಂತ್ರಜ್ಞಾನವನ್ನು ವರ್ಣಿಸುವ ಪುಸ್ತಕಗಳು ಪ್ರಕಟವಾಗಿವೆ. ಹ್ಯಾರಿಸ್‌ ಅವರ ಲೆಕ್ಸಿಕನ್ ಟೆಕ್ನಿಕಂ (೧೭೦೪)ಮತ್ತು ಡಾ.ಅಬ್ರಾಹಂ ರೀಸ್ ಅವರ ಸೈಕ್ಲೋಪೀಡಿಯ (೧೮೦೨-೧೮೧೯) ಮುಂತಾದ ವಿಶ್ವಕೋಶಗಳು ಹೆಚ್ಚು ಮೌಲ್ಯಯುತವಾಗಿದೆ. ಸೈಕ್ಲೋಪೀಡಿಯ ಕೈಗಾರಿಕಾ ಕ್ರಾಂತಿಯ ಉತ್ತರಾರ್ಧದ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಬೃಹತ್ ಪ್ರಮಾಣದ ಮಾಹಿತಿಗಳನ್ನು ಹೊಂದಿದ್ದು,ಉತ್ಕೃಷ್ಟ ನಕ್ಷೆಗಳ ಮ‌ೂಲಕ ಉಲ್ಲೇಖಿಸಲಾಗಿದೆ. ವಿದೇಶಿ ಮುದ್ರಿತ ಮ‌ೂಲಗಳಾದ Descriptions des Arts et Métiers ಮತ್ತು ಡಿಡೆರಾಟ್‌ ಅವರ Encyclopédie ಉತ್ಕೃಷ್ಟ ಕೆತ್ತನೆಯ ಫಲಕಗಳಿಂದ ವಿದೇಶಿ ವಿಧಾನಗಳನ್ನು ವಿವರಿಸಿದೆ.

ಉತ್ಪಾದನೆ ಮತ್ತು ತಂತ್ರಜ್ಞಾನದ ಬಗ್ಗೆ ನಿಯತಕಾಲಿಕೆಗಳ ಪ್ರಕಟಣೆಗಳು ೧೮ನೇ ಶತಮಾನದ ಕೊನೆಯ ದಶಕದಲ್ಲಿ ಕಾಣಿಸಲು ಆರಂಭಿಸಿತು. ಅವುಗಳಲ್ಲಿ ಬಹುತೇಕ ನಿಯಮಿತವಾಗಿ ಹೊಸ ಹಕ್ಕುಸ್ವಾಮ್ಯಗಳ ನೋಟಿಸ್ ಕೂಡ ಸೇರಿದ್ದವು. Annales des Mines ಮುಂತಾದ ವಿದೇಶಿ ನಿಯತಕಾಲಿಕೆಗಳು ಅಧ್ಯಯನ ಪ್ರವಾಸಗಳ ಬಗ್ಗೆ ಬ್ರಿಟಿಷ್ ವಿಧಾನಗಳನ್ನು ಗಮನಿಸಿದ ಫ್ರೆಂಚ್ ಎಂಜಿನಿಯರುಗಳ ಪ್ರವಾಸಗಳ ವಿವರಗಳನ್ನು ಪ್ರಕಟಿಸಿದರು.

ಬ್ರಿಟನ್‌ನಲ್ಲಿ ತಾಂತ್ರಿಕ ಬೆಳವಣಿಗೆಗಳು[ಬದಲಾಯಿಸಿ]

ವಸ್ತ್ರೋದ್ಯಮ ಉತ್ಪಾದನೆ[ಬದಲಾಯಿಸಿ]

ಜರ್ಮನಿಯ ವುಪ್ಪೇರ್‌ಟಾಲ್‌ನಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ನೂಲುವ ಜೆನ್ನಿಯ ಮಾದರಿ.ನೂಲುವ ಜೆನ್ನಿ ಆವಿಷ್ಕಾರಗಳಲ್ಲಿ ಒಂದಾಗಿದ್ದು, ಅದು ಕೈಗಾರಿಕಾ ಕ್ರಾಂತಿಗೆ ನಾಂದಿ ಹಾಡಿತು.

ಬ್ರಿಟನ್ ವಸ್ತ್ರೋದ್ಯಮ ಉತ್ಪಾದನೆಯು ೧೮ನೇ ಶತಮಾನದ ಪೂರ್ವದಲ್ಲಿ ಉಣ್ಣೆ ಆಧಾರಿತವಾಗಿತ್ತು. ಕುಶಲಕರ್ಮಿಗಳು ನೂಲುವುದು ಮತ್ತು ನೇಯ್ಗೆಯನ್ನು ತಮ್ಮ ನಿವಾಸಗಳಲ್ಲೇ ಕೈಗೊಳ್ಳುವ ಮೂಲಕ ಅದರ ಸಂಸ್ಕರಣೆ ಮಾಡುತ್ತಿದ್ದರು. ಈ ವ್ಯವಸ್ಥೆಯನ್ನು ಗೃಹಕೈಗಾರಿಕೆಯೆಂದು ಕರೆಯಲಾಗುತ್ತದೆ. ನಾರು ಮತ್ತು ಹತ್ತಿಯನ್ನು ಉತ್ಕೃಷ್ಟ ವಸ್ತುಗಳಿಗೆ ಕೂಡ ಬಳಸಲಾಗುತ್ತದೆ. ಆದರೆ ಪೂರ್ವ ಸಂಸ್ಕರಣೆ ಪ್ರಕ್ರಿಯೆ ಅಗತ್ಯವಾದ್ದರಿಂದ ಅದರ ಸಂಸ್ಕರಣೆ ಕಷ್ಟ.ಆದ್ದರಿಂದ ಈ ವಸ್ತುಗಳಲ್ಲಿ ಸರಕುಗಳು ಉತ್ಪಾದನೆಯ ಸ್ವಲ್ಪ ಪ್ರಮಾಣವನ್ನು ಒಳಗೊಂಡಿದೆ.

ನೂಲುವ ಚಕ್ರ ಮತ್ತು ಕೈಮಗ್ಗದ ಬಳಕೆಯಿಂದ ಕೈಗಾರಿಕೆಯ ಉತ್ಪಾದನೆ ಸಾಮರ್ಥ್ಯವನ್ನು ನಿರ್ಬಂಧಿಸಿತು. ಆದೆರೆ ಆಧುನಿಕತೆಯ ಮುನ್ನಡೆಗಳಿಂದ ಉತ್ಪಾದಿತ ಹತ್ತಿ ಸರಕುಗಳು ೧೯ನೇ ಶತಮಾನದ ದಶಕಗಳ ಪೂರ್ವಾರ್ಧದಲ್ಲಿ ಪ್ರಬಲ ಬ್ರಿಟಿಷ್ ರಫ್ತು ಸರಕಾಗುವಷ್ಟು ಪ್ರಮಾಣದಲ್ಲಿ ಉತ್ಪಾದನೆಯು ವೃದ್ಧಿಯಾಯಿತು. ಭಾರತ ಹತ್ತಿ ಸರಕುಗಳ ಪ್ರಧಾನ ಪೂರೈಕೆದಾರ ರಾಷ್ಟ್ರವೆಂಬ ಸ್ಥಾನದಿಂದ ಸ್ಥಳಾಂತರಗೊಂಡಿತು.

ಬರ್ಮಿಂಗ್‌ಹ್ಯಾಂನಲ್ಲಿ ಜಾನ್ ವ್ಯಾಟ್ ನೆರವಿನೊಂದಿಗೆ ಅಭಿವೃದ್ಧಿಪಡಿಸಿದ ಉಣ್ಣೆಯ ದಾರವನ್ನು ಇನ್ನಷ್ಟು ದಪ್ಪನಾಗಿಸಲು ಲೆವಿಸ್ ಪಾಲ್, ರೋಲರ್ ನೂಲುವ ಯಂತ್ರ ಮತ್ತು ಫ್ಲೈಯರ್ ಮತ್ತು ಬಾಬಿನ್ ವ್ಯವಸ್ಥೆಯ ನೂಲುವ ಯಂತ್ರಕ್ಕೆ ಹಕ್ಕುಸ್ವಾಮ್ಯತೆ ಪಡೆದರು. ಪಾಲ್ ಮತ್ತು ವ್ಯಾಟ್ ಬರ್ಮಿಂಗ್‌ಹ್ಯಾಂನಲ್ಲಿ ಗಿರಣಿಯೊಂದನ್ನು ಆರಂಭಿಸಿದರು. ಈ ಗಿರಿಣಿಯು ಅವರ ರೋಲಿಂಗ್ ಯಂತ್ರವನ್ನು ಕತ್ತೆಯ ಶಕ್ತಿಯ ಮ‌ೂಲಕ ಬಳಸಿಕೊಂಡಿತು. ನಾರ್ಥಂಪ್ಟನ್‌ನಲ್ಲಿ ೧೭೪೩ರಲ್ಲಿ ಕಾರ್ಖಾನೆಯೊಂದು ಪ್ರಾರಂಭವಾಗಿ, ಪಾಲ್ ಮತ್ತು ವ್ಯಾಟ್‌ನ ಐದು ಯಂತ್ರಗಳಿಗೆ ತಲಾ ೫೦ ತಿರುಗಚ್ಚುಗಳನ್ನು ಜೋಡಿಸಲಾಯಿತು. ಇದು ೧೭೬೪ರವರೆಗೆ ಕಾರ್ಯನಿರ್ವಹಿಸಿತು. ಲಿಯೋಮಿನಿಸ್ಟರ್‌ನಲ್ಲಿ ಡ್ಯಾನಿಯಲ್ ಬೌರ್ನ್ ಇದೇ ರೀತಿಯ ಗಿರಣಿಯನ್ನು ನಿರ್ಮಿಸಿದ್ದರು.ಆದರೆ ಅದು ಸುಟ್ಟುಹೋಯಿತು. ಲೆವಿಸ್ ಪಾಲ್ ಮತ್ತು ಡೇನಿಯಲ್ ಬೌರ್ನ್ ಇಬ್ಬರೂ ೧೭೪೮ರಲ್ಲಿ ಕಾರ್ಡಿಂಗ್ ಯಂತ್ರಗಳ ಹಕ್ಕುಸ್ವಾಮ್ಯತೆ ಪಡೆದರು. ವಿವಿಧ ವೇಗದಲ್ಲಿ ಚಲಿಸುವ ಎರಡು ಜತೆ ರೋಲರುಗಳನ್ನು ಬಳಸಿಕೊಂಡ ನಂತರ ಇದು ಪ್ರಪ್ರಥಮ ಹತ್ತಿ ನೂಲುವ ಗಿರಣಿಯಲ್ಲಿ ಬಳಕೆಗೆ ಬಂತು. ಲೆವಿಸ್ ಆವಿಷ್ಕಾರವನ್ನು ನಂತರ ರಿಚರ್ಡ್ ಆರ್ಕ್‌ರೈಟ್ ತಮ್ಮ ವಾಟರ್ ಫ್ರೇಮ್ ಮತ್ತು ಸ್ಯಾಮುಯೆಲ್ ಕ್ರಾಮ್ಟನ್ ಸ್ಪಿನ್ನಿಂಗ್ ಮ್ಯೂಲ್(ಕದಿರುಗಳಿಂದ ನೂಲು ತೆಗೆಯುವ ಯಂತ್ರ)ದಲ್ಲಿ ಅಭಿವೃದ್ಧಿಪಡಿಸಿ, ಸುಧಾರಿಸಲಾಯಿತು.

ಇತರೆ ಸಂಶೋಧಕರು ಸ್ಪಿನ್ನಿಂಗ್(ಎಳೆಬಿಡಿಸುವುದು,ಹೊಸೆತ ಮತ್ತು ನೂಲುವ ಮತ್ತು ಸುತ್ತುವ) ವೈಯಕ್ತಿಕ ಹಂತಗಳ ದಕ್ಷತೆಯನ್ನು ವೃದ್ಧಿಸಿದ್ದರಿಂದ ನೂಲು ಪೂರೈಕೆ ತೀರಾ ವೃದ್ಧಿಸಿತು. ಶಟಲ್ ಮತ್ತು ಕೈಮಗ್ಗ ಅಥವಾ "ಫ್ರೇಮ್‌"‌ಗಳ ಸುಧಾರಣೆಗಳೊಂದಿಗೆ ಮುನ್ನಡೆಯುತ್ತಿದ್ದ ನೇಯ್ಗೆ ಉದ್ಯಮವನ್ನು ನೂಲಿನ ಪೂರೈಕೆ ಪೋಷಿಸಿತು. ಕಾರ್ಮಿಕನ ಇಳುವರಿ ಗಮನಾರ್ಹ ವೃದ್ಧಿಯಾಯಿತು. ಹೊಸ ಯಂತ್ರಗಳು ಉದ್ಯೋಗಕ್ಕೆ ಬೆದರಿಕೆಯೆಂದು ಭಾವಿಸಿ, ಮುಂಚಿನ ಸಂಶೋಧಕರ ಮೇಲೆ ದಾಳಿ ಮಾಡಿ ಅವರ ಆವಿಷ್ಕಾರಗಳನ್ನು ನಾಶ ಮಾಡಲಾಯಿತು.

ಈ ಮುನ್ನಡೆಗಳ ಲಾಭ ಪಡೆಯಲು,ಉದ್ಯಮಿಗಳ ಒಂದು ವರ್ಗವು ಮುಂದಾಯಿತು. ಅವರಲ್ಲಿ ರಿಚರ್ಡ್ ಆರ್ಕ್‌ರೈಟ್ ಅತ್ಯಂತ ಖ್ಯಾತರೆನಿಸಿದ್ದಾರೆ. ಕೆಲವು ಆವಿಷ್ಕಾರಗಳ ಪಟ್ಟಿಯೊಂದಿಗೆ ಅವರಿಗೆ ಹಿರಿಮೆ ಸಂದಿತು.ಆದರೆ ಆ ಆವಿಷ್ಕಾರಗಳನ್ನು ವಾಸ್ತವಿಕವಾಗಿ ಥಾಮಸ್ ಹೈಸ್ ಮತ್ತು ಜಾನ್ ಕೇ ಮೊದಲಾದ ಜನರು ಅಭಿವೃದ್ಧಿಪಡಿಸಿದ್ದರು. ಆರ್ಕ್‌ರೈಟ್ ಸಂಶೋಧಕರನ್ನು ಪೋಷಿಸಿದರು,ಕಲ್ಪನೆಗಳಿಗೆ ಹಕ್ಕುಸ್ವಾಮ್ಯತೆ ಪಡೆದರು ಮತ್ತು ಉಪಕ್ರಮಗಳಿಗೆ ಆರ್ಥಿಕ ನೆರವು ನೀಡಿ, ಯಂತ್ರಗಳನ್ನು ರಕ್ಷಿಸಿದರು. ಅವರು ಖಾರ್ಖಾನೆಯಲ್ಲಿ ಉತ್ಪಾದನೆ ಪ್ರಕ್ರಿಯೆಗಳನ್ನು ಒಟ್ಟುಗೂಡಿಸಿದ ಹತ್ತಿ ಗಿರಣಿಯನ್ನು ಸೃಷ್ಟಿಸಿದರು ಮತ್ತು ಶಕ್ತಿಯ ಬಳಕೆಯನ್ನು ಅಭಿವೃದ್ಧಿಪಡಿಸಿದರು. ಮೊದಲಿಗೆ ಅಶ್ವಶಕ್ತಿ ಮತ್ತು ನಂತರ ಜಲಶಕ್ತಿಯಿಂದ ಹತ್ತಿ ತಯಾರಿಕೆಯನ್ನು ಯಾಂತ್ರೀಕೃತ ಕೈಗಾರಿಕೆಯಾಗಿ ಪರಿವರ್ತಿಸಿತು. ಇದಕ್ಕೆ ಮುಂಚೆ ದೀರ್ಘಾವಧಿವರೆಗೆ ವಸ್ತ್ರೋದ್ಯಮ ಯಂತ್ರವನ್ನು ನಡೆಸಲು ಉಗಿ ಶಕ್ತಿಯನ್ನು ಬಳಸಲಾಗುತ್ತಿತ್ತು.

ಲೋಹ ಉದ್ಯಮ[ಬದಲಾಯಿಸಿ]

ಕೋಲ್‌ಬ್ರೂಕ್‌ಡೇಲ್ ಬೈ ನೈಟ್,1801,ಜಾಕೋಬ್ ಲೌಥರ್‌ಬರ್ಗ್ ದಿ ಯಂಗರ್, ಊದು ಕುಲುಮೆಗಳು ಕೋಲ್‌ಬ್ರೂಕ್‌ಡೇಲ್‌ನ ಕಬ್ಬಿಣ ತಯಾರಿಸುವ ಪಟ್ಟಣವನ್ನು ಬೆಳಗಿಸುತ್ತವೆ.
ಉಷ್ಣಪ್ರತಿಫಲಕ ಕುಲುಮೆಯು ಗಣಿಯಿಂದ ತೆಗೆದ ಕಲ್ಲಿದ್ದಲನ್ನು ಬಳಸಿ ಮೆದುಕಬ್ಬಿಣವನ್ನು ಉತ್ಪಾದಿಸಬಹುದು. ಉರಿಯುವ ಕಲ್ಲಿದ್ದಲು ಕಬ್ಬಿಣದ ಅದಿರಿನಿಂದ ಪ್ರತ್ಯೇಕವಾಗಿ ಉಳಿದು,ಗಂಧಕ ಮುಂತಾದ ಕಲ್ಮಶಗಳಿಂದ ಕಬ್ಬಿಣವನ್ನು ಮಾಲಿನ್ಯಗೊಳಿಸುವುದಿಲ್ಲ.ಇದು ಹೆಚ್ಚುವರಿ ಕಬ್ಬಿಣ ಉತ್ಪಾದನೆಗೆ ದಾರಿ ತೆರೆಯುತ್ತದೆ.

ಕೈಗಾರಿಕಾ ಕ್ರಾಂತಿಯ ಶಕೆಯಲ್ಲಿ ಲೋಹ ಕೈಗಾರಿಕೆಗಳಲ್ಲಿ ಪ್ರಮುಖ ಬದಲಾವಣೆಯಾಯಿತು. ಮರ ಆಧಾರಿತ ಸಾವಯವ ಇಂಧನಗಳಿಗೆ ಬದಲಿಯಾಗಿ ಕಲ್ಲಿದ್ದಲು ಆಧಾರಿತ ಪಳೆಯುಳಿಕೆ ಇಂಧನವು ಬಳಕೆಯಾಯಿತು. ಇವೆಲ್ಲ ಕೈಗಾರಿಕಾ ಕ್ರಾಂತಿಗೆ ಮುಂಚಿತವಾಗಿ ೧೬೭೮ರಿಂದ ಸರ್ ಕ್ಲೆಮೆಂಟ್ ಕ್ಲರ್ಕ್ ಮತ್ತಿತರು ಕುಪೋಲಾಸ್ ಎಂದು ಹೆಸರಾದ ಕಲ್ಲಿದ್ದಲು ಉಷ್ಣಪ್ರತಿಫಲಕ ಕುಲುಮೆಗಳನ್ನು ಬಳಸಿಕೊಂಡು ಕೈಗೊಂಡ ಆವಿಷ್ಕಾರಗಳ ಆಧಾರದ ಮೇಲೆ ಸಂಭವಿಸಿತು. ಇವು ಕಾರ್ಬನ್ ಮಾನಾಕ್ಸೈಡ್ ಹೊಂದಿದ ಜ್ವಾಲೆಗಳಿಂದ ನಿರ್ವಹಿಸಲಾಗುತ್ತಿತ್ತು. ಅದಿರಿನ ಮೇಲೆ ಇದು ಪ್ರತಿಕ್ರಿಯೆಯಾಗಿ ಆಕ್ಸೈಡ್‌ನ್ನು ಲೋಹವಾಗಿ ಸಂಕೋಚಿಸುತ್ತದೆ. ಕಲ್ಲಿದ್ದಲಿನಲ್ಲಿರುವ ಕಲ್ಮಶಗಳು(ಗಂಧಕ ಮುಂತಾದವು)ಲೋಹಕ್ಕೆ ಸ್ಥಳಾಂತರವಾಗದಿರುವ ಅನುಕೂಲ ಈ ತಂತ್ರಜ್ಞಾನಕ್ಕಿದೆ. ಈ ತಂತ್ರಜ್ಞಾನವನ್ನು ೧೬೭೮ರಿಂದ ಸೀಸದ ಮೇಲೆ ಅಳವಡಿಸಲಾಯಿತು ಮತ್ತು ೧೬೮೭ರಿಂದ ತಾಮ್ರದ ಮೇಲೆ ಅಳವಡಿಸಲಾಯಿತು. ಈ ತಂತ್ರಜ್ಞಾನವನ್ನು ಕಬ್ಬಿಣ ಎರಕಸಾಲೆ ಕೆಲಸದಲ್ಲಿ ೧೬೯೦ರ ದಶಕದಲ್ಲಿ ಅಳವಡಿಸಲಾಯಿತು,ಆದರೆ ಈ ಪ್ರಕರಣದಲ್ಲಿ ಉಷ್ಣಪ್ರತಿಫಲಕ ಕುಲುಮೆಯು ಗಾಳಿ ಕುಲುಮೆಯೆಂದು ಹೆಸರಾಗಿದೆ. ಕಬ್ಬಿಣ ಎರಕಹೊಯ್ಯುವ ಕುಪೋಲಾ ಭಿನ್ನ(ನಂತರದ)ಪರಿಷ್ಕಾರ.

ಇದನ್ನು ಅನುಸರಿಸಿ ಅಬ್ರಹಾಂ ಡಾರ್ಬಿ ೧೭೦೯ರಲ್ಲಿ ಕೋಲ್‌ಬ್ರೂಕ್‌ಡೇಲ್‌ನಲ್ಲಿ ತಮ್ಮ ಊದು ಕುಲುಮೆಗೆ ಕೋಕ್(ಅರೆಗಾವಾದ ಕಲ್ಲಿದ್ದಲು)ಇಂಧನವಾಗಿ ಬಳಸಿ ದಾಪುಗಾಲುಗಳನ್ನು ಇಟ್ಟರು. ಆದಾಗ್ಯೂ, ಅವರು ತಯಾರಿಸಿದ ಕೋಕ್ ಮೆದು ಕಬ್ಬಿಣವನ್ನು ಎರಕದ ಕಬ್ಬಿಣ ವಸ್ತುಗಳಾದ ಬಿಂದಿಗೆಗಳು ಮತ್ತು ಪಾತ್ರೆಗಳ ತಯಾರಿಕೆಗೆ ಬಹುತೇಕ ಬಳಸಲಾಯಿತು. ಎದುರಾಳಿಗಳಿಗಿಂತ ಅನುಕೂಲ ಪಡೆದಿದ್ದ ಅವರು ತಮ್ಮ ಹಕ್ಕುಸ್ವಾಮ್ಯ ಪ್ರಕ್ರಿಯೆ ಮ‌ೂಲಕ ಎರಕಹೊಯ್ದ ಬಿಂದಿಗೆಗಳು ಎದುರಾಳಿಗಳ ತಯಾರಿಕೆಗಿಂತ ತೆಳುವಾಗಿದ್ದು,ಅಗ್ಗದಲ್ಲಿ ಲಭ್ಯವಾಗಿತ್ತು. ಅವರ ಪುತ್ರ ಅಬ್ರಹಾಂ ಡರ್ಬಿ ಹಾರ್ಶೈ ಮತ್ತು ಕೆಟ್ಲಿ ಕುಲುಮೆಗಳನ್ನು(ಕೋಲ್‌ಬ್ರೂಕ್‌ಡೇಲ್ ಹತ್ತಿರ) ೧೭೫೦ರ ದಶಕದ ಮಧ್ಯಾವಧಿಯಲ್ಲಿ ತಯಾರಿಸುವ ತನಕ ಕುಲುಮೆಗಳಲ್ಲಿ ಬಾರ್ ಐರನ್(ದಂಡ ಕಬ್ಬಿಣ) ತಯಾರಿಕೆಗೆ ಕೋಕ್ ಮೆದುಕಬ್ಬಿಣದ ಬಳಕೆ ವಿರಳವಾಗಿತ್ತು. ಆಗ, ಕೋಕ್ ಮೆದುಕಬ್ಬಿಣವು ಇದ್ದಲಿನ ಮೆದು ಕಬ್ಬಿಣಕ್ಕಿಂತ ಅಗ್ಗದಲ್ಲಿ ಸಿಗುತ್ತಿತ್ತು.

ಕಮ್ಮಾರರು ದಂಡ ಕಬ್ಬಿಣವನ್ನು ಗ್ರಾಹಕವಸ್ತುಗಳಾಗಿ ಹಿಂದಿನಂತೆ ಕಬ್ಬಿಣದ ಬಟ್ಟಿಯ ಕುಲುಮೆಗಳಲ್ಲಿ ತಯಾರಿಸುತ್ತಿದ್ದರು. ಮುಂದಿನ ವರ್ಷಗಳಲ್ಲಿ ಆದಾಗ್ಯೂ, ಹೊಸ ಪ್ರಕ್ರಿಯೆಗಳನ್ನು ಅಳವಡಿಸಲಾಯಿತು. ಮೊದಲನೆಯದನ್ನು ಇಂದು ಪಾಟಿಂಗ್ ಮತ್ತು ಸ್ಟಾಂಪಿಂಗ್(ಮೆದು ಕಬ್ಬಿಣ ಸಂಸ್ಕರಿಸುವ ಪ್ರಕ್ರಿಯೆ)ಎಂದು ಉಲ್ಲೇಖಿಸಲಾಗಿದೆ. ಆದರೆ ಅದನ್ನು ಹೆನ್ರಿ ಕಾರ್ಟ್ ಅವರ ಪಡ್ಲಿಂಗ್(ಮೆದು ಕಬ್ಬಿಣದಿಂದ ಉಕ್ಕು ತಯಾರಿಸುವ) ಪ್ರಕ್ರಿಯೆ ಹಿಂದಿಕ್ಕಿತು. ಪಾಂಟಿಂಗ್ ಮತ್ತು ಸ್ಟಾಂಪಿಂಗ್ ಸುಧಾರಿತ ಆವೃತ್ತಿ ಬಹುಶಃ ಹಕ್ಕುಸ್ವಾಮ್ಯದಿಂದ ಮುಕ್ತವಾಗಿ ೧೭೮೫ರಿಂದ ಬರಬೇಕಿದ್ದ ಕಾರಣದಿಂದ, ಬ್ರಿಟನ್ ಕಬ್ಬಿಣ ಕೈಗಾರಿಕೆಯ ಉತ್ಪಾದನೆಯಲ್ಲಿ ದೊಡ್ಡ ವಿಸ್ತರಣೆ ಉಂಟಾಯಿತು. ಹೊಸ ಪ್ರಕ್ರಿಯೆಗಳು ಇದ್ದಲಿನ ಮೇಲೆ ಅವಲಂಬಿತವಾಗಿರಲಿಲ್ಲ. ಆದ್ದರಿಂದ ಇದ್ದಲಿನ ಮ‌ೂಲಗಳಿಗೆ ಅವು ಸೀಮಿತವಾಗಿರಲಿಲ್ಲ.

ಆ ಕಾಲಾವಧಿವರೆಗೆ,ಬ್ರಿಟಿಷ್ ಕಬ್ಬಿಣ ಉತ್ಪಾದಕರು ದೇಶೀಯ ಪೂರೈಕೆಗಳ ಕೊರತೆಗಳನ್ನು ತುಂಬಲು ಆಮದು ಕಬ್ಬಿಣವನ್ನು ಗಣನೀಯ ಪ್ರಮಾಣದಲ್ಲಿ ಬಳಸಿದ್ದರು. ಇವು ಮುಖ್ಯವಾಗಿ ೧೭ನೇ ಶತಮಾನದ ಮಧ್ಯಾವಧಿಯಿಂದ ಸ್ವೀಡನ್‌ನಿಂದ ತರಿಸಲಾಗಿತ್ತು ಮತ್ತು ನಂತರ ೧೭೨೦ರ ದಶಕದ ಅಂತ್ಯದಲ್ಲಿ ರಷ್ಯದಿಂದ ತರಿಸಲಾಯಿತು. ಆದಾಗ್ಯೂ,೧೭೮೫ರಿಂದ,ಹೊಸ ಕಬ್ಬಿಣ ತಯಾರಿಸುವ ತಂತ್ರಜ್ಞಾನದಿಂದ ಆಮದುಗಳು ಕುಂಠಿತವಾಯಿತು ಮತ್ತು ಬ್ರಿಟನ್ ಕಬ್ಬಿಣದ ದಂಡ ಹಾಗೂ ಉತ್ಪಾದಿತ ರೋಟ್ ಐರನ್(ಮೆದು ಕಬ್ಬಿಣ) ಗ್ರಾಹಕ ವಸ್ತುಗಳ ರಫ್ತುದೇಶವಾಯಿತು.

ಕಬ್ಬಿಣ ಅಗ್ಗದ ಮತ್ತು ವಿಪುಲವಾಗಿ ಲಭ್ಯವಾಗುತ್ತಿದ್ದಂತೆ,ಅಬ್ರಾಹಂ ಡರ್ಬಿ ೧೭೭೮ರಲ್ಲಿ ನಾವೀನ್ಯತೆಯ ಕಬ್ಬಿಣದ ಸೇತುವೆ ನಿರ್ಮಿಸಿದ ಬೆನ್ನ ಹಿಂದೆಯೇ ಅದು ಪ್ರಮುಖ ನಿರ್ಮಾಣ ವಸ್ತುವಾಗಿ ಕೂಡ ಬಳಕೆಯಾಯಿತು.

ದಿ ಐರನ್ ಬ್ರಿಜ್,ಶ್ರಾಪ್‌ಶೈರ್,ಇಂಗ್ಲೆಂಡ್

ಉಕ್ಕು ತಯಾರಿಕೆಯಲ್ಲಿ ಸುಧಾರಣೆ ತರಲಾಯಿತು. ಉಕ್ಕು ದುಬಾರಿ ಸರಕಾಗಿದ್ದು,ಕಬ್ಬಿಣ ಕಾರ್ಯನಿರ್ವಹಿಸದ ಕಡೆಗಳಲ್ಲಿ ಸಾಧನಗಳ ಅಂಚನ್ನು ಕತ್ತರಿಸಲು ಮತ್ತು ಸ್ಪ್ರಿಂಗ್‌ಗಳ ತಯಾರಿಕೆಯಲ್ಲಿ ಬಳಸಲಾಯಿತು. ಬೆಂಜಮಿನ್ ಹಂಟ್ಸ್‌ಮನ್ ೧೭೪೦ರ ದಶಕದಲ್ಲಿ ತಮ್ಮ ಕ್ರೂಸಿಬಲ್ ಉಕ್ಕು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರು. ಇದಕ್ಕೆ ಬೇಕಾಗಿದ್ದ ಕಚ್ಚಾವಸ್ತು ಬ್ಲಿಸ್ಟರ್ ಉಕ್ಕನ್ನು ಸಂಯೋಜನೆ ಪ್ರಕ್ರಿಯೆ(ಕಬ್ಬಿಣಕ್ಕೆ ಇಂಗಾಲ ಸೇರಿಸುವಿಕೆ)ಮ‌ೂಲಕ ತಯಾರಿಸಲಾಯಿತು.

ಅಗ್ಗದ ಕಬ್ಬಿಣ ಮತ್ತು ಉಕ್ಕಿನ ಪೂರೈಕೆಯು ಬಾಯ್ಲರ್‌ಗಳು ಮತ್ತು ಉಗಿ ಯಂತ್ರಗಳು, ತರುವಾಯ ರೈಲ್ವೆಗಳ ಅಭಿವೃದ್ಧಿಗೆ ನೆರವಾಯಿತು. ಯಂತ್ರೋಪಕರಣಗಳ ಸುಧಾರಣೆಗಳಿಂದ ಕಬ್ಬಿಣ ಮತ್ತು ಉಕ್ಕಿನಲ್ಲಿ ಉತ್ತಮ ಕೆಲಸಕ್ಕೆ ಅವಕಾಶ ಕಲ್ಪಿಸಿತು ಮತ್ತು ಬ್ರಿಟನ್ ಕೈಗಾರಿಕೆ ಬೆಳವಣಿಗೆಗೆ ಉತ್ತೇಜನ ನೀಡಿತು.

ಗಣಿಗಾರಿಕೆ[ಬದಲಾಯಿಸಿ]

ಸ್ವಂತ ಗಣಿಗಳಲ್ಲಿ ಕೆಲಸ ಮಾಡುತ್ತಿರುವ ಪುರುಷರು.1900ರ ದಶಕದ ಪೂರ್ವದಲ್ಲಿ, ಅಮೆರಿಕ

ಕಲ್ಲಿದ್ದಲು ಗಣಿಗಾರಿಕೆ ಬ್ರಿಟನ್‌ನಲ್ಲಿ ವಿಶೇಷವಾಗಿ ಸೌತ್ ವೇಲ್ಸ್‌ನಲ್ಲಿ ಮುಂಚಿತವಾಗಿಯೇ ಆರಂಭವಾಯಿತು. ಉಗಿ ಯಂತ್ರಕ್ಕೆ ಮುಂಚೆ, ಕಲ್ಲಿದ್ದಲಿಗೆ ತೋಡುವ ಕುಳಿಗಳು ಅನೇಕವೇಳೆ ಚಿಕ್ಕದಾದ ಗಂಟೆಯಾಕಾರಾದ ಕುಳಿಗಳಾಗಿದ್ದು ಮೇಲ್ಮೈಯಲ್ಲಿ ಕಲ್ಲಿದ್ದಲಿನ ನಿಕ್ಷೇಪಗಳನ್ನು ತೆಗೆದ ಬಳಿಕ ಅವುಗಳನ್ನು ತೊರೆಯಲಾಗುತ್ತಿತ್ತು. ಇತರ ಪ್ರಕರಣಗಳಲ್ಲಿ, ಬೌಗೋಳಿಕತೆ ಅನುಕೂಲವಾಗಿದ್ದರೆ, ಬೆಟ್ಟದ ಬದಿಯಲ್ಲಿ ಆಡಿಟ್(ಸಮತಲ ಹಾದಿ) ಅಥವಾ ಶಾಫ್ಟ್ ಗಣಿಗಾರಿಕೆ(ಸುರಂಗ) ಮ‌ೂಲಕ ಕಲ್ಲಿದ್ದಲನ್ನು ತೆಗೆಯಬಹುದಾಗಿತ್ತು. ಶಾಫ್ಟ್ ಗಣಿಗಾರಿಕೆಯನ್ನು ಕೆಲವು ಸ್ಥಳಗಳಲ್ಲಿ ಕೈಗೊಳ್ಳಲಾಯಿತು.ಆದರೆ ಗಣಿಯಲ್ಲಿರುವ ನೀರನ್ನು ಹೊರತೆಗೆಯುವ ಸಮಸ್ಯೆಯು ಪರಿಮಿತಿಯ ಅಂಶವಾಗಿತ್ತು. ಆದರೆ ಶಾಫ್ಟ್ ಮೇಲೆ ಬಕೆಟ್‌ಗಳಿಂದ ನೀರನ್ನು ತೆಗೆಯುವ ಮ‌ೂಲಕ ಅಥವಾ ಸೋಗ್(ಗಣಿಯಿಂದ ನೀರನ್ನು ತೆಗೆಯಲು ಬೆಟ್ಟದ ಬದಿಗೆ ಸುರಂಗ ಕೊರೆತ)ವಿಧಾನ ಅಳವಡಿಸಲಾಯಿತು. ಎರಡೂ ಪ್ರಸಂಗಗಳಲ್ಲಿ, ಗುರುತ್ವಾಕರ್ಷ ಶಕ್ತಿಯಿಂದ ಹರಿಯುವ ಮಟ್ಟದಲ್ಲಿ ತೊರೆ ಅಥವಾ ಕಂದಕಕ್ಕೆ ನೀರನ್ನು ಬಿಡಬೇಕಾಗಿತ್ತು. ಉಗಿ ಯಂತ್ರದ ಕಾರ್ಯಾರಂಭದಿಂದ ನೀರನ್ನು ತೆಗೆಯಲು ಬಹಳಷ್ಟು ಅನುಕೂಲವಾಯಿತು ಮತ್ತು ಶಾಫ್ಟ್‌ಗಳನ್ನು ಆಳಗೊಳಿಸಿ ಇನ್ನಷ್ಟು ಕಲ್ಲಿದ್ದಲನ್ನು ತೆಗೆಯಲು ಸಹಾಯ ಮಾಡಿತು. ಇವೆಲ್ಲವೂ ಕೈಗಾರಿಕೆ ಕ್ರಾಂತಿ ಆರಂಭಕ್ಕೆ ಮುಂಚಿನ ಬೆಳವಣಿಗೆಗಳಾಗಿವೆ. ಆದರೆ ಜೇಮ್ಸ್ ವಾಟ್ ಅವರ ಅತ್ಯಂತ ದಕ್ಷ ಉಗಿ ಯಂತ್ರವನ್ನು ೧೭೭೦ರ ದಶಕದಿಂದ ಅಳವಡಿಸಿದ್ದರಿಂದ ಯಂತ್ರಗಳ ಇಂಧನ ವೆಚ್ಚಗಳು ಕುಂಠಿತವಾಗಿ,ಗಣಿಗಾರಿಕೆ ಇನ್ನಷ್ಟು ಲಾಭದಾಯಕವಾಯಿತು. ಅನೇಕ ಗಣಿಗಳಲ್ಲಿ ಫೈರ್‌ಡ್ಯಾಂಪ್(ಮೀಥೇನ್ ಮುಂತಾದ ದಹನಕಾರಿ ಅನಿಲಗಳು)ಉಪಸ್ಥಿತಿಯಿಂದ ಕಲ್ಲಿದ್ದಲು ಗಣಿಗಾರಿಕೆ ಅಪಾಯಕಾರಿಯಾಗಿತ್ತು. ಸುರಕ್ಷಿತ ದೀಪ ಒದಗಿಸುವ ಮೂಲಕ ಸ್ವಲ್ಪ ಪ್ರಮಾಣದ ಸುರಕ್ಷತೆ ಕಲ್ಪಿಸಲಾಯಿತು. ಇದನ್ನು ೧೮೧೬ರಲ್ಲಿ ಸರ್ ಹಂಫ್ರಿ ಡೇವಿ ಆವಿಷ್ಕರಿಸಿದರು. ಮತ್ತು ಜಾರ್ಜ್ ಸ್ಟೀಫನ್‌ಸನ್ ಸ್ವತಂತ್ರವಾಗಿ ಆವಿಷ್ಕರಿಸಿದರು. ಆದಾಗ್ಯೂ,ದೀಪಗಳು ತಕ್ಷಣವೇ ಅಸುರಕ್ಷಿತವೆನಿಸಿ, ದುರ್ಬಲ ಬೆಳಕನ್ನು ಒದಗಿಸಿದ್ದರಿಂದ ಹುಸಿ ಬೆಳಕೆಂದು ಸಾಬೀತಾಯಿತು. ಫೈರ್‌ಡ್ಯಾಂಪ್(ದಹನಕಾರಿ ಅನಿಲಗಳು)ಸ್ಫೋಟಗಳು ಮುಂದುವರಿಯಿತು. ಆಗಾಗ್ಗೆ ಕಲ್ಲಿದ್ದಲು ಧೂಳು ಸ್ಫೋಟಗಳು ಉಂಟಾಗಿದ್ದರಿಂದ ಇಡೀ ಹತ್ತೊಂಬತ್ತನೇ ಶತಮಾನದ ಸಂದರ್ಭದಲ್ಲಿ ಸಾವುನೋವಿನ ಪ್ರಮಾಣ ಹೆಚ್ಚಿದವು. ಕೆಲಸ ಮಾಡುವ ಪರಿಸ್ಥಿತಿಗಳು ಕಳಪೆಯಾಗಿದ್ದು, ಕಲ್ಲುಗಳ ಉರುಳುವಿಕೆಯಿಂದ ಸಾವುನೋವಿನ ಪ್ರಮಾಣ ಅಧಿಕವಾಗಿತ್ತು.

ಉಗಿ ಶಕ್ತಿ[ಬದಲಾಯಿಸಿ]

1698 ಸವೇರಿ ಯಂತ್ರ-ಡೆನಿಸ್ ಪಾಪಿನ್ ವಿನ್ಯಾಸಗಳ ಆಧಾರದ ಮೇಲೆ ಥಾಮಸ್ ಸವೇರಿ ನಿರ್ಮಿಸಿದ ವಿಶ್ವದ ಪ್ರಥಮ ಯಂತ್ರ.

ನಿಶ್ಚಲ ಉಗಿ ಯಂತ್ರದ ಅಭಿವೃದ್ಧಿಯು ಕೈಗಾರಿಕಾ ಕ್ರಾಂತಿಯ ಮುಂಚಿನ ಮುಖ್ಯ ಅಂಶವಾಗಿತ್ತು.;ಆದಾಗ್ಯೂ,ಕೈಗಾರಿಕಾ ಕ್ರಾಂತಿಯ ಬಹುತೇಕ ಅವಧಿಯಲ್ಲಿ ಸಣ್ಣ ಯಂತ್ರಗಳನ್ನು ನಿರ್ವಹಿಸಲು ಬಹುತೇಕ ಕೈಗಾರಿಕೆಗಳು ಗಾಳಿ ಮತ್ತು ಜಲಶಕ್ತಿ ಹಾಗೂ ಅಶ್ವ ಮತ್ತು ಮಾನವ-ಶಕ್ತಿ ಮೇಲೆ ಅವಲಂಬಿತವಾಗಿತ್ತು.

ಕೈಗಾರಿಕೆಯಲ್ಲಿ ಉಗಿ ಶಕ್ತಿಯ ಬಳಕೆಗೆ ೧೬೯೮ರಲ್ಲಿ ಥಾಮಸ್ ಸವೇರಿ ನಿಜವಾದ ಪ್ರಯತ್ನ ಮಾಡಿದರು. ಲಂಡನ್‌ನಲ್ಲಿ ಅವರು ಕಡಿಮೆ ಎತ್ತರಕ್ಕೆ ಎಳೆಯುವ ಸಂಯೋಜಿತ ನಿರ್ವಾತ ಮತ್ತು ಒತ್ತಡ ಜಲಪಂಪ್‌ ನಿರ್ಮಿಸಿ ಹಕ್ಕುಸ್ವಾಮ್ಯತೆ ಪಡೆದರು.ಅದು ಸುಮಾರು ಒಂದು ಅಶ್ವಶಕ್ತಿ(ಎಚ್‌ಪಿ)ಯನ್ನು ಉತ್ಪಾದಿಸಿತು ಮತ್ತು ಅಸಂಖ್ಯಾತ ಜಲನಿರ್ವಹಣೆ ಕೆಲಸಗಳಲ್ಲಿ ಬಳಸಲಾಯಿತು ಮತ್ತು ಕೆಲವು ಗಣಿಗಳಲ್ಲಿ ಪ್ರಯತ್ನಿಸಲಾಯಿತು(ಅದರಿಂದ ದಿ ಮೈನರ್ಸ್ ಫ್ರೆಂಡ್ ಎಂಬ ಬ್ರಾಂಡ್ ಹೆಸರು).ಆದರೆ ನೀರನ್ನು ಮೇಲೆತ್ತುವ ಎತ್ತರ ಸೀಮಿತವಾಗಿತ್ತು ಮತ್ತು ಬಾಯ್ಲರ್ ಸ್ಫೋಟಗಳ ಅಪಾಯ ಸಂಭವನೀಯವಾಗಿತ್ತು.

ನ್ಯೂಕಾಮೆನ್‌ರ ಉಗಿ ಶಕ್ತಿಯ ವಾಯುಮಂಡಲದ ಯಂತ್ರ ಪ್ರಥಮ ಪ್ರಾಯೋಗಿಕ ಎಂಜಿನ್.ತರುವಾಯ ಉಗಿ ಯಂತ್ರಗಳು ಕೈಗಾರಿಕಾ ಕ್ರಾಂತಿಗೆ ಶಕ್ತಿ ನೀಡಿದವು.

ಥಾಮಸ್ ನ್ಯೂಕಾಮೆನ್ ೧೭೧೨ಕ್ಕೆ ಮುಂಚಿತವಾಗಿ ಪ್ರಥಮ ಸುರಕ್ಷಿತ ಮತ್ತು ಯಶಸ್ವಿ ಉಗಿ ಶಕ್ತಿ ಘಟಕವನ್ನು ಜಾರಿಗೆ ತಂದರು. ನ್ಯೂಕಾಮೆನ್ ಸವೇರಿಯಿಂದ ಪ್ರತ್ಯೇಕವಾಗಿ ನ್ಯೂಕಾಮೆನ್ ಉಗಿಯಂತ್ರವನ್ನು ಸ್ವತಂತ್ರವಾಗಿ ರೂಪಿಸಿದರು.ಆದರೆ ಸವೇರಿ ವಿಶಾಲ ವ್ಯಾಪ್ತಿಯ ಹಕ್ಕುಸ್ವಾಮ್ಯತೆ ಪಡೆದಿದ್ದರಿಂದ ನ್ಯೂಕಾಮೆನ್ ಮತ್ತು ಸಂಗಡಿಗರು ಸವೇರಿ ಜತೆ ಒಪ್ಪಂದ ಮಾಡಿಕೊಂಡು,೧೭೩೩ರವರೆಗೆ ಜಂಟಿ ಹಕ್ಕುಸ್ವಾಮ್ಯತೆ ಮೇಲೆ ಉಗಿ ಯಂತ್ರ ಮಾರಾಟ ಮಾಡಿದರು.[೩೭][೩೮] ನ್ಯೂಕಾಮೆನ್ ಯಂತ್ರವು ೩೦ ವರ್ಷಗಳ ಹಿಂದೆ ಕೈಗೊಂಡ ಪಾಪಿನ್ಸ್ ಪ್ರಯೋಗಗಳನ್ನು ಆಧರಿಸಿದಂತೆ ಕಂಡುಬಂತು. ಅದರಲ್ಲಿ ಪಿಸ್ಟನ್(ಆಡುಬೆಣೆ) ಮತ್ತು ಸಿಲಿಂಡರ್ ಬಳಸಲಾಗಿದ್ದು,ಒಂದು ತುದಿಯು ಪಿಸ್ಟನ್ ಮೇಲೆ ವಾತಾವರಣಕ್ಕೆ ತೆರೆದುಕೊಂಡಿತ್ತು. ವಾಯುಮಂಡಲ ಒತ್ತಡಕ್ಕಿಂತ(ಬಾಯ್ಲರ್ ತಡೆದುಕೊಳ್ಳುವ ಒತ್ತಡ)ಹೆಚ್ಚಿನ ಉಗಿಯನ್ನು ಗುರುತ್ವಾಕರ್ಷಕ ಪ್ರೇರಿತ ಮೇಲ್ಮುಖ ಚಲನೆ ಸಂದರ್ಭದಲ್ಲಿ ಪಿಸ್ಟನ್ ಕೆಳಗೆ ಸಿಲಿಂಡರ್ ಕೆಳಗಿನ ಅರ್ಧ ಭಾಗಕ್ಕೆ ಹಾಯಿಸಲಾಯಿತು; ಉಗಿಯಿರುವ ಸ್ಥಳಕ್ಕೆ ನಂತರ ತಣ್ಣೀರಿನ ಜೆಟ್ ಹಾಯಿಸುವ ಮ‌ೂಲಕ ಉಗಿಯು ಘನೀಕೃತಗೊಂಡು ಆಂಶಿಕ ನಿರ್ವಾತ ಸೃಷ್ಟಿಸಿತು. ಪಿಸ್ಟನ್ ಎರಡೂ ಬದಿಯಲ್ಲಿ ವಾಯುಮಂಡಲ ಮತ್ತು ನಿರ್ವಾತದ ಒತ್ತಡದ ಭಿನ್ನತೆಯಿಂದಾಗಿ ಪಿಸ್ಟನ್ ಸಿಲಿಂಡರ್‌ನ ಕೆಳಕ್ಕೆ ಸ್ಥಳಾಂತರವಾಗುತ್ತದೆ. ಇದರಿಂದ ವಿರುದ್ಧ ತುದಿಯಲ್ಲಿರುವ ರಾಕಿಂಗ್ ಬೀಮ್ ಮೇಲಕ್ಕೆ ಎಳೆಯುತ್ತದೆ. ಅದಕ್ಕೆ ಸುರಂಗಗಣಿಯಲ್ಲಿರುವ ಗುರುತ್ವಾಕರ್ಷಕ ಪ್ರೇರಿತ ಹಿಂದಕ್ಕೂ ಮುಂದಕ್ಕೂ ಚಲಿಸುವ ಶಕ್ತಿ ಪಂಪ್‌ಗಳನ್ನು ಜೋಡಿಸಲಾಗಿರುತ್ತದೆ. ಯಂತ್ರದ ಕೆಳಮುಖದ ಚಲನೆಯಿಂದ ಪಂಪ್‌ನ್ನು ಮೇಲಕ್ಕೆ ಎತ್ತಿ, ಪಂಪಿಂಗ್ ಸ್ಟ್ರೋಕ್‌ಗೆ ಸಿದ್ಧಪಡಿಸುತ್ತದೆ. ಮೊದಲಿಗೆ ಹಂತಗಳನ್ನು ಕೈಯಿಂದ ನಿಯಂತ್ರಿಸಲಾಗುತ್ತಿತ್ತು. ಆದರೆ ಹತ್ತು ವರ್ಷಗಳೊಳಗೆ ರಾಕಿಂಗ್ ಬೀಮ್‌ಗೆ ಲಂಬಾಕಾರದ ಪ್ಲಗ್ ಟ್ರೀ ಯನ್ನು ಬಿಗಿದು ಯಂತ್ರ ಸ್ವಯಂಚಾಲಿತವಾಗಿಸಲಾಯಿತು.

ಅನೇಕ ನ್ಯೂಕಾಮೆನ್ ಯಂತ್ರಗಳನ್ನು ಇದುವರೆಗೆ ಕೆಲಸಮಾಡಲು ಅಸಾಧ್ಯವಾಗಿದ್ದ ಆಳವಾದ ಗಣಿಗಳಲ್ಲಿ ಯಂತ್ರವನ್ನು ಮೇಲ್ಬಾಗದಲ್ಲಿರಿಸಿ ಯಶಸ್ವಿಯಾಗಿ ಅಳವಡಿಸಲಾಯಿತು;ಇವು ದೊಡ್ಡ ಯಂತ್ರಗಳಾಗಿದ್ದು,ನಿರ್ಮಾಣಕ್ಕೆ ಮತ್ತು ಉತ್ಪಾದನೆಗೆ ಯಥೇಚ್ಛ ಬಂಡವಾಳ ಅಗತ್ಯವಾಗಿತ್ತು.5 hp (3.7 kW) ಆಧುನಿಕ ಗುಣಮಟ್ಟಗಳಿಗಿಂತ ಅವು ತೀರಾ ಅಸಮರ್ಥವೆನಿಸಿದರೂ, ಕುಳಿಯ ಮೇಲ್ಭಾಗದಲ್ಲಿ ಅಗ್ಗವಾಗಿ ಸಿಗುವ ಕಲ್ಲಿದ್ದಲಿನಿಂದ,ಆಳವಾದ ಗಣಿಗಾರಿಕೆಗೆ ಅವಕಾಶ ನೀಡುವ ಮ‌ೂಲಕ ಕಲ್ಲಿದ್ದಲು ಗಣಿಗಾರಿಕೆ ಹೆಚ್ಚು ವಿಸ್ತರಿಸಿತು. ಅನಾನುಕೂಲಗಳ ನಡುವೆಯ‌ೂ, ನ್ಯೂಕಾಮೆನ್ ಯಂತ್ರಗಳು ವಿಶ್ವಾಸಾರ್ಹವೆನಿಸಿದ್ದು, ನಿರ್ವಹಣೆಗೆ ಸುಲಭವಾಗಿತ್ತು.ಹತ್ತೊಂಬತ್ತನೇ ಶತಮಾನದ ಪೂರ್ವದಶಕಗಳ ತನಕ ಕಲ್ಲಿದ್ದಲು ಗಣಿಗಳಲ್ಲಿ ಅದರ ಬಳಕೆ ಮುಂದುವರಿಯಿತು. ನ್ಯೂಕಾಮೆನ್ ೧೭೨೯ರಲ್ಲಿ ಮೃತಪಟ್ಟ ನಂತರ, ಅವರ ಯಂತ್ರಗಳು ಮೊದಲಿಗೆ ೧೭೨೨ರಲ್ಲಿ ಹಂಗರಿ,ಜರ್ಮನಿ, ಆಸ್ಟ್ರಿಯ ಮತ್ತು ಸ್ವೀಡನ್‌ಗೆ ವಿಸ್ತರಣೆಯಾಯಿತು. ಜಂಟಿ ಹಕ್ಕುಸ್ವಾಮ್ಯತೆ ಅಂತ್ಯಗೊಂಡ ನಂತರ ೧೭೩೩ರಲ್ಲಿ ಒಟ್ಟು ೧೧೦ ಯಂತ್ರಗಳನ್ನು ನಿರ್ಮಿಸಲಾಗಿತ್ತು. ಅವುಗಳಲ್ಲಿ ೧೪ ವಿದೇಶಗಳಲ್ಲಿತ್ತು. ಎಂಜಿನಿಯರ್ ಜಾನ್ ಸ್ಮೀಟನ್ ೧೭೭೦ರ ದಶಕದಲ್ಲಿ ದೊಡ್ಡ ಮಾದರಿಯ ಯಂತ್ರಗಳನ್ನು ತಯಾರಿಸಿ, ಅನೇಕ ಸುಧಾರಣೆಗಳನ್ನು ಕೈಗೊಂಡರು. ಒಟ್ಟು ೧,೪೫೪ ಯಂತ್ರಗಳನ್ನು ೧೮೦೦ರೊಳಗೆ ನಿರ್ಮಿಸಲಾಯಿತು.[೩೯]

ಜೇಮ್ಸ್ ವಾಟ್

ಯಂತ್ರ ಕಾರ್ಯನಿರ್ವಹಣೆ ತತ್ವಗಳಲ್ಲಿ ಜೇಮ್ಸ್ ವಾಟ್ ಮ‌ೂಲಭೂತ ಬದಲಾವಣೆಗಳನ್ನು ಮಾಡಿದರು. ಮ್ಯಾಥೀವ್ ಬೌಲ್ಟನ್ ಜತೆ ನಿಕಟ ಸಹಯೋಗದೊಂದಿಗೆ ಅವರು ೧೭೭೮ರೊಳಗೆ ತಮ್ಮ ಉಗಿ ಯಂತ್ರಕ್ಕೆ ಪರಿಪೂರ್ಣತೆ ತರುವಲ್ಲಿ ಯಶಸ್ವಿಯಾದರು. ಉಗಿ ಎಂಜಿನ್‌ಗೆ ಮ‌ೂಲಭೂತ ಸರಣಿ ಮಾರ್ಪಾಟುಗಳನ್ನು ಮಾಡಿದರು. ಸಿಲಿಂಡರ್ ಮೇಲ್ಭಾಗವನ್ನು ಮುಚ್ಚಿದ್ದರಿಂದ ಕಡಿಮೆ ಒತ್ತಡದ ಉಗಿ ವಾಯುಮಂಡಲದ ಬದಲಿಗೆ ಪಿಸ್ಟನ್ ಮೇಲ್ಬಾಗಕ್ಕೆ ಒತ್ತಡ ಹೇರಿಕೆ, ಉಗಿ ಜಾಕೆಟ್ ಬಳಕೆ ಮತ್ತು ಪ್ರತ್ಯೇಕ ಉಗಿ ಕಂಡೆನ್ಸರ್ ಚೇಂಬರ್ ನಿರ್ಮಾಣ ಗಮನಾರ್ಹವೆನಿಸಿದೆ. ಇವೆಲ್ಲವುಗಳಿಂದ ಹೆಚ್ಚು ಸ್ಥಿರ ಉಷ್ಣಾಂಶವನ್ನು ಸಿಲಿಂಡರ್‌ನಲ್ಲಿ ಕಾಯ್ದುಕೊಳ್ಳಲು ಸಾಧ್ಯವಾಗಿ, ಯಂತ್ರ ದಕ್ಷತೆಯು ವಾಯುಮಂಡಲದ ಪರಿಸ್ಥಿತಿಗಳಿಗೆ ಅನುಗುಣವಾಗಿ ವ್ಯತ್ಯಾಸವಾಗಲಿಲ್ಲ. ಈ ಸುಧಾರಣೆಗಳಿಂದ ಯಂತ್ರ ದಕ್ಷತೆಯು ಐದು ಅಂಶಕ್ಕೆ ಹೆಚ್ಚಾಯಿತು ಮತ್ತು ಕಲ್ಲಿದ್ದಲು ವೆಚ್ಚಗಳನ್ನು ೭೫% ಉಳಿಸಿತು.

ಆದರೆ ವಾಯುಮಂಡಲದ ಒತ್ತಡದ ಯಂತ್ರದಿಂದ ಚಕ್ರವನ್ನು ಸುಲಭವಾಗಿ ತಿರುಗಿಸುವುದಕ್ಕೆ ಅಳವಡಿಸಲಾಗಲಿಲ್ಲ. ಆದರೆ ೧೭೮೦ರ ಸುಮಾರಿಗೆ ವಾಸ್‌ಬೊರೋ ಮತ್ತು ಪಿಕಾರ್ಡ್ ಅದರಲ್ಲಿ ಯಶಸ್ವಿಯಾದರು. ಆದಾಗ್ಯೂ,೧೭೮೩ರಲ್ಲಿ ಹೆಚ್ಚು ಮಿತವ್ಯಯದ ವಾಟ್ ಉಗಿ ಯಂತ್ರನನ್ನು ದ್ವಿಪಾತ್ರದ ಸುತ್ತು ತಿರುಗುವ ವಿಧಾನವಾಗಿ ಪೂರ್ಣರೂಪದಲ್ಲಿ ಅಭಿವೃದ್ಧಿಪಡಿಸಲಾಯಿತು.ಅಂದರೆ ಅದನ್ನು ಕಾರ್ಖಾನೆ ಅಥವಾ ಗಿರಣಿಯ ರೋಟರಿ ಯಂತ್ರವನ್ನು ಚಲಿಸಲು ನೇರವಾಗಿ ಬಳಸಲಾಯಿತು. ವಾಟ್ ಅವರ ಮ‌ೂಲ ಯಂತ್ರ ವಿಧಗಳು ವಾಣಿಜ್ಯ ದೃಷ್ಟಿಯಿಂದ ಅತ್ಯಂತ ಯಶಸ್ವಿಯಾಯಿತು ಹಾಗೂ ೧೮೦೦ರಲ್ಲಿ ಬೌಲ್ಟನ್ & ವಾಟ್ ಸಂಸ್ಥೆ ೪೯೬ ಯಂತ್ರಗಳನ್ನು,ಜತೆಗೆ ೧೬೪ ಮೇಲೆ, ಕೆಳಗೆ ಚಲಿಸುವ ಪಂಪ್‌ಗಳು, ೨೪ ಊದು ಕುಲುಮೆಗಳನ್ನು,ಮತ್ತು ೩೦೮ ಶಕ್ತಿಆಧಾರಿತ ಗಿರಣಿ ಯಂತ್ರಗಳನ್ನು ನಿರ್ಮಿಸಿದರು; ಬಹುತೇಕ ಯಂತ್ರಗಳು ೫ಕ್ಕಿಂತ ಹೆಚ್ಚಿನ ದಕ್ಷತೆಯಲ್ಲಿ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ.10 hp (7.5 kW)

ಈ ಯಂತ್ರಗಳ ಶಕ್ತಿಯಿಂದ ನಡೆಯುವ ಲೇಥ್,ಪ್ಲೇನಿಂಗ್ ಮತ್ತು ಶೇಪಿಂಗ್ ಯಂತ್ರಗಳು ಮುಂತಾದ ಯಂತ್ರಸಾಧನಗಳ ಅಭಿವೃದ್ಧಿಯಿಂದ,ಯಂತ್ರಗಳ ಎಲ್ಲ ಲೋಹದ ಭಾಗಗಳನ್ನು ಸುಲಭವಾಗಿ ಮತ್ತು ನಿಖರವಾಗಿ ಕತ್ತರಿಸಲು ಸಾಧ್ಯವಾಗಿ,ದೊಡ್ಡ ಮತ್ತು ಶಕ್ತಿಯುತ ಎಂಜಿನ್‌ಗಳ ನಿರ್ಮಾಣ ಸಾಧ್ಯವಾಯಿತು.

ಸುಮಾರು ೧೮೦೦ರವರೆಗೆ, ಉಗಿ ಯಂತ್ರ ಸಾಮಾನ್ಯ ನಮ‌ೂನೆಯು ಬೀಮ್ ಯಂತ್ರ(ಸನ್ನೆಕೋಲಿನ ತತ್ವಗಳ ಆಧಾರದ ಮೇಲೆ ನಿರ್ಮಿಸಿದ ಎಂಜಿನ್) ಆಗಿತ್ತು. ಇದನ್ನು ಕಲ್ಲಿನ ಅಥವಾ ಇಟ್ಟಿಗೆಯ ಯಂತ್ರ-ಮನೆಯ ಅವಿಭಾಜ್ಯ ಅಂಗವಾಗಿ ನಿರ್ಮಿಸಲಾಗಿತ್ತು. ಆದರೆ ಶೀಘ್ರದಲ್ಲೇ ಟೇಬಲ್ ಎಂಜಿನ್ ರೀತಿಯ ಸ್ವಯಂಅಂತರ್ಗತ ವಾಹಕ ಎಂಜಿನ್(ತಕ್ಷಣವೇ ತೆಗೆಯಬಹುದು,ಆದರೆ ಚಕ್ರಗಳ ಮೇಲಿರುವುದಿಲ್ಲ)ಅಭಿವೃದ್ಧಿಪಡಿಸಲಾಯಿತು. ೧೯ನೇ ಶತಮಾನದ ಆಸುಪಾಸಿನಲ್ಲಿ ಕಾರ್ನಿಷ್ ಎಂಜಿನಿಯರ್ ರಿಚರ್ಡ್ ಟ್ರೆವೆಥಿಕ್ ಮತ್ತು ಅಮೆರಿಕನ್ ಆಲಿವರ್ ಎವಾನ್ಸ್ ಅತೀ ಒತ್ತಡದ ಘನೀಕೃತವಾಗದ ವಾಯುಮಂಡಲದ ಒತ್ತಡಕ್ಕೆ ವ್ಯತಿರಿಕ್ತವಾಗಿ ಉಗಿ ಯಂತ್ರಗಳ ತಯಾರಿಕೆ ಆರಂಭಿಸಿದರು. ಇದು ಯಂತ್ರ ಮತ್ತು ಬಾಯ್ಲರ್ ಏಕ ಘಟಕವಾಗಿ ಸೇರಿಸಿ ರಸ್ತೆಸಂಚಾರಗಳಲ್ಲಿ ಮತ್ತು ಚಲಿಸುವ ರೈಲಿನ ಯಂತ್ರಗಳಲ್ಲಿ ಮತ್ತು ಉಗಿ ದೋಣಿಗಳಲ್ಲಿ ಬಳಸಲು ಅವಕಾಶ ಕಲ್ಪಿಸಿತು.

ವಾಟ್ ಹಕ್ಕುಸ್ವಾಮ್ಯತೆ ಅಂತ್ಯಗೊಂಡ ೧೯ನೇ ಶತಮಾನದ ಪೂರ್ವದಲ್ಲಿ ಉಗಿ ಯಂತ್ರವು ಸಂಶೋಧಕರು ಮತ್ತು ಎಂಜಿನಿಯರುಗಳಿಂದ ಅನೇಕ ಸುಧಾರಣೆಗಳಿಗೆ ಒಳಪಟ್ಟಿತು.

ರಾಸಾಯನಿಕಗಳು[ಬದಲಾಯಿಸಿ]

ಥೇಮ್ಸ್ ಟನಲ್(1843ರಲ್ಲಿ ಆರಂಭವಾಯಿತು) ವಿಶ್ವದ ಪ್ರಥಮ ಜಲಗರ್ಭದ ಸುರಂಗಕ್ಕೆ ಸಿಮೆಂಟ್ ಬಳಸಲಾಯಿತು.

ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ರಾಸಾಯನಿಕಗಳ ಉತ್ಪಾದನೆ ಮುಖ್ಯ ಬೆಳವಣಿಗೆಯಾಗಿದೆ. ಇವುಗಳಲ್ಲಿ ಮೊದಲನೆಯದು ಸೀಸದ ಕೋಶದ ಪ್ರಕ್ರಿಯೆ ಮ‌ೂಲಕ ಗಂಧಕಾಮ್ಲದ ಉತ್ಪಾದನೆ. ಇದನ್ನು ಇಂಗ್ಲೀಷ್‌ ಪೌರ ಜಾನ್ ರೋಯಿಬಕ್(ಜೇಮ್ಸ್ ವಾಟ್ ಅವರ ಪ್ರಥಮ ಜತೆಗಾರ)೧೭೪೬ರಲ್ಲಿ ಪರಿಷ್ಕಾರ ಮಾಡಿದರು. ಮುಂಚಿನ ದುಬಾರಿ ಗಾಜಿನ ಕೋಶಗಳ ಬದಲಿಗೆ ಕಡಿಮೆ ವೆಚ್ಚದ ಸೀಸದ ಹಾಳೆಗಳಿಂದ ತಯಾರಿಸಿದ ಕೋಶಗಳನ್ನು ಬಳಸುವ ಮ‌ೂಲಕ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸುವಲ್ಲಿ ಅವರು ಯಶಸ್ವಿಯಾದರು. ಪ್ರತಿ ಬಾರಿ ಸಣ್ಣ ಪ್ರಮಾಣವನ್ನು ತಯಾರಿಸುವ ಬದಲಿಗೆ ಪ್ರತಿ ಕೋಶದಲ್ಲಿ ಕನಿಷ್ಠ ಹತ್ತುಪಟ್ಟು ಹೆಚ್ಚು ಉತ್ಪಾದಿಸಲು ಅವರಿಗೆ ಸಾಧ್ಯವಾಯಿತು.100 pounds (50 kg)

ದೊಡ್ಡ ಪ್ರಮಾಣದಲ್ಲಿ ಕ್ಷಾರದ ಉತ್ಪಾದನೆ ಕೂಡ ಮುಖ್ಯಗುರಿಯಾಗಿತ್ತು.ಸೋಡಿಯಂ ಕಾರ್ಬೋನೇಟ್ ಉತ್ಪಾದನೆಗೆ ವಿಧಾನವೊಂದನ್ನು ಜಾರಿಗೆ ತರುವಲ್ಲಿ ೧೭೯೧ರಲ್ಲಿ ನಿಕೋಲಾಸ್ ಲೆಬ್ಲಾಂಕ್ ಯಶಸ್ವಿಯಾದರು. ಲೆಬ್ಲಾಂಕ್ ಪ್ರಕ್ರಿಯೆಯಲ್ಲಿ ಗಂಧಕಾಮ್ಲದ ಜತೆ ಸೋಡಿಯಂ ಕ್ಲೋರೈಡ್ ಪ್ರತಿಕ್ರಿಯೆ ಹೊಂದಿ ಸೋಡಿಯಂ ಸಲ್ಫೇಟ್ ಮತ್ತು ಹೈಡ್ರೋಕ್ಲೋರಿಕ್ ಆಸಿಡ್ ನೀಡುವುದಾಗಿದೆ. ಸೋಡಿಯಂ ಸಲ್ಫೇಟ್‌ನ್ನು ಸುಣ್ಣದ ಕಲ್ಲು,(ಕ್ಯಾಲ್ಸಿಯಂ ಕಾರ್ಬೊನೇಟ್) ಮತ್ತು ಕಲ್ಲಿದ್ದಲಿನ ಜತೆ ಕುದಿಸಿದಾಗ, ಸೋಡಿಯಂ ಕಾರ್ಬೋನೇಟ್ ಮತ್ತು ಕ್ಯಾಲ್ಸಿಯಂ ಸಲ್ಫೈಡ್ ಸಂಯುಕ್ತವನ್ನು ನೀಡುತ್ತದೆ. ನೀರನ್ನು ಬೆರೆಸುವುದರಿಂದ ಕರಗುವ ಸೋಡಿಯಂ ಕಾರ್ಬೋನೇಟ್ ಕ್ಯಾಲ್ಸಿಯಂ ಸಲ್ಫೈಡ್‌ನಿಂದ ಪ್ರತ್ಯೇಕಗೊಳ್ಳುತ್ತದೆ. ಈ ಪ್ರಕ್ರಿಯೆಯಿಂದ ದೊಡ್ಡ ಪ್ರಮಾಣದ ಮಾಲಿನ್ಯ ಸೃಷ್ಟಿಯಾಯಿತು.(ಹೈಡ್ರೋಕ್ಲೋರಿಕ್ ಆಮ್ಲವು ಆರಂಭದಲ್ಲಿ ಗಾಳಿಯಲ್ಲಿ ಬೆರೆಯುತ್ತದೆ ಮತ್ತು ಕ್ಯಾಲ್ಸಿಯಂ ಸಲ್ಫೈಡ್ ಅನುಪಯುಕ್ತ ತ್ಯಾಜ್ಯ ಉತ್ಪನ್ನ) ಈ ಸಂಶ್ಲೇಷಿತ ಸೋಡಾ ಆಷ್ ನಿರ್ದಿಷ್ಟ ಸಸ್ಯಗಳನ್ನು (ಬಾರಿಲ್ಲಾ) ಸುಡುವುದಕ್ಕೆ ಹೋಲಿಸಿದರೆ ಅಥವಾ ಇದಕ್ಕೆ ಮುಂಚೆ ಸೋಡಾ ಆಷ್‌ಗೆ ಪ್ರಬಲ ಮ‌ೂಲಗಳಾಗಿದ್ದ ಕೆಲ್ಪ್‌ಗೆ ಹೋಲಿಸಿದರೆ ಮಿತವ್ಯಯಕಾರಿಯಾಗಿತ್ತು.[೪೦] ಅಲ್ಲದೇ ಪೊಟಾಷ್(ಪೊಟಾಸಿಯಂ ಕಾರ್ಬೋನೇಟ್) ಗಟ್ಟಿಮರದ ಬೂದಿಗಳಿಂದ ಜನ್ಯವಾಗಿತ್ತು.

ಇವೆರಡು ರಾಸಾಯನಿಕಗಳು ಅತೀ ಮುಖ್ಯವಾಗಿತ್ತು. ಏಕೆಂದರೆ ಅವು ಸಣ್ಣ ಪ್ರಮಾಣದ ನಿರ್ವಹಣೆಗಳ ಬದಲಿಯಾಗಿ ಹೆಚ್ಚು ಮಿತವ್ಯಯಕಾರಿ ಮತ್ತು ನಿಯಂತ್ರಿತ ಪ್ರಕ್ರಿಯೆಗಳಿಂದ ಕೂಡಿದ ಆವಿಷ್ಕಾರಗಳ ಆರಂಭಕ್ಕೆ ನೆರವಾದವು. ಗಾಜು, ವಸ್ತ್ರೋದ್ಯಮ, ಸೋಪ್ ಮತ್ತು ಕಾಗದ ಕೈಗಾರಿಕೆಗಳಲ್ಲಿ ಸೋಡಿಯಂ ಕಾರ್ಬೊನೇಟ್ ಅನೇಕ ರೀತಿಯಲ್ಲಿ ಬಳಕೆಯಾಗುತ್ತದೆ. ಗಂಧಕಾಮ್ಲ ಮುಂಚಿನ ಬಳಕೆಯು ಕಬ್ಬಿಣ ಮತ್ತು ಉಕ್ಕಿನ ಪಿಕ್ಲಿಂಗ್(ತುಕ್ಕು ತೆಗೆಯುವುದು) ಮತ್ತು ಬಟ್ಟೆಗಳನ್ನು ಬೆಳ್ಳಗಾಗಿಸುವ ಬ್ಲೀಚಿಂಗ್‌ನಲ್ಲಿ ಸೇರಿದೆ.

ಫ್ರೆಂಚ್ ರಸಾಯನಶಾಸ್ತ್ರಜ್ಞ ಕ್ಲಾಡೆ ಲೂವಿಸ್ ಬರ್ತೊಲೆಟ್ ಅವರ ಸಂಶೋಧನೆಗಳ ಆಧಾರದ ಮೇಲೆ ಸ್ಕಾಟಿಷ್ ರಸಾಯನಶಾಸ್ತ್ರಜ್ಞ ಚಾರ್ಲೆಸ್ ಟೆನೆಂಟ್ ಅವರು ತಯಾರಿಸಿದ ಬ್ಲೀಚಿಂಗ್ ಪುಡಿ(ಕ್ಯಾಲ್ಸಿಯಂ ಹೈಪೋಕ್ಲೋರೈಟ್)ವಸ್ತ್ರೋದ್ಯಮದ ಬ್ಲೀಚಿಂಗ್ ಪ್ರಕ್ರಿಯೆಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಉಂಟುಮಾಡಿದವು. ಆಗ ಬಳಕೆಯಲ್ಲಿದ್ದ ಸಾಂಪ್ರದಾಯಿಕ ವಿಧಾನದ ಬ್ಲೀಚಿಂಗ್‌ಗೆ ಅಗತ್ಯವಾಗಿದ್ದ ಕಾಲಾವಧಿಗಿಂತ(ತಿಂಗಳುಗಳಿಂದ ದಿನಗಳಿಗೆ)ಗಮನಾರ್ಹ ಇಳಿಕೆ ಕಂಡುಬಂತು. ಸಾಂಪ್ರದಾಯಿಕ ವಿಧಾನದಲ್ಲಿ ವಸ್ತ್ರಗಳನ್ನು ಕ್ಷಾರ ಅಥವಾ ಹುಳಿಯ ಹಾಲಿನಲ್ಲಿ ಅದ್ದಿದ ಬಳಿಕ ಬ್ಲೀಚ್ ಪ್ರದೇಶಗಳಲ್ಲಿ ಸೂರ್ಯನ ಬಿಸಿಲಿಗೆ ಪುನರಾವರ್ತಿತ ಒಡ್ಡುವಿಕೆ ಅಗತ್ಯವಿತ್ತು. ಉತ್ತರ ಗಾಸ್ಗೊದ ಸೇಂಟ್ ರೋಲೋಕ್ಸ್‌ನಲ್ಲಿರುವ ಟೆನಂಟ್ ಕಾರ್ಖಾನೆಯು ವಿಶ್ವದ ಅತೀದೊಡ್ಡ ರಾಸಾಯನಿಕ ಘಟಕವಾಯಿತು.

ಬ್ರಿಟಿಷ್ ಇಟ್ಟಿಗೆ ತಯಾರಕರಾಗಿದ್ದು,ಕಟ್ಟಡ ನಿರ್ಮಾಣಕಾರರಾಗಿ ಪರಿವರ್ತನೆಯಾದ ಜೋಸೆಫ್ ಆಸ್ಪ್‌ಡಿನ್ ೧೮೨೪ರಲ್ಲಿ ಪೋರ್ಟ್‌ಲ್ಯಾಂಡ್ ಸಿಮೆಂಟ್ ತಯಾರಿಕೆಯ ರಾಸಾಯನಿಕ ಪ್ರಕ್ರಿಯೆಗೆ ಹಕ್ಕುಸ್ವಾಮ್ಯ ಪಡೆದುಕೊಂಡರು. ಕಟ್ಟಡನಿರ್ಮಾಣ ವ್ಯವಹಾರಗಳಲ್ಲಿ ಅದು ಮುಖ್ಯ ಮುನ್ನಡೆಯಾಗಿತ್ತು. ಆವೆಮಣ್ಣು ಮತ್ತು ಸುಣ್ಣದಕಲ್ಲಿನ ಮಿಶ್ರಣವನ್ನು ೧೪೦೦ °C ಉಷ್ಣಾಂಶದಲ್ಲಿ ಕಾಯಿಸುವ ಮೂಲಕ ಹೆಪ್ಪುಗಟ್ಟಿಸುವುದು, ನಂತರ ಸಣ್ಣಗೆ ಪುಡಿಮಾಡಿ ನೀರು, ಮರಳು ಮತ್ತು ಜಲ್ಲಿಯ ಜತೆ ಮಿಶ್ರಣ ಮಾಡಿ ಕಾಂಕ್ರೀಟ್ ತಯಾರಿಸುವುದು ಈ ಪ್ರಕ್ರಿಯೆ ಒಳಗೊಂಡಿದೆ. ಪೋರ್ಟ್‌ಲ್ಯಾಂಡ್ ಸಿಮೆಂಟ್‌ನ್ನು ಖ್ಯಾತ ಇಂಗ್ಲೀಷ್ ಎಂಜಿನಿಯರ್ ಮಾರ್ಕ್ ಇಸಾಂಬರ್ಡ್ ಬ್ರೂನೆಲ್ ಅವರು ಅನೇಕ ವರ್ಷಗಳ ನಂತರ ಥೇಮ್ಸ್ ಸುರಂಗ ನಿರ್ಮಾಣದಲ್ಲಿ ಬಳಕೆ ಮಾಡಿದರು.[೪೧] ಒಂದು ತಲೆಮಾರಿನ ಬಳಿಕ ಲಂಡನ್ ಒಳಚರಂಡಿ ವ್ಯವಸ್ಥೆ ನಿರ್ಮಾಣದಲ್ಲಿ ಸಿಮೆಂಟ್ ದೊಡ್ಡ ಪ್ರಮಾಣದಲ್ಲಿ ಬಳಕೆಯಾಯಿತು.

ಯಂತ್ರೋಪಕರಣಗಳು[ಬದಲಾಯಿಸಿ]

ಸರ್ ಜೋಸೆಫ್ ವಿಟ್‌ವರ್ಥ್

ಯಂತ್ರೋಪಕರಣಗಳಿಂದ ಉತ್ಪಾದನೆ ಯಂತ್ರಗಳನ್ನು ತಯಾರಿಸಲು ಅನುಕೂಲ ಕಲ್ಪಿಸಿದ್ದರಿಂದ ಯಂತ್ರೋಪಕರಣಗಳು ಇಲ್ಲದೇ ಕೈಗಾರಿಕೆ ಕ್ರಾಂತಿ ಅಭಿವೃದ್ಧಿಯಾಗುತ್ತಲೇ ಇರಲಿಲ್ಲ. ಗಡಿಯಾರಗಳು ಮತ್ತು ಕೈಗಡಿಯಾರಗಳ ತಯಾರಕರು ಮತ್ತು ವೈಜ್ಞಾನಿಕ ಉಪಕರಣ ತಯಾರಕರು ೧೮ನೇ ಶತಮಾನದಲ್ಲಿ ಅಭಿವೃದ್ಧಿಗೊಳಿಸಿದ ಸಾಧನಗಳ ಮ‌ೂಲಗಳನ್ನು ಅವು ಹೊಂದಿತ್ತು.ಇದರಿಂದ ಅವರು ಸಣ್ಣ ಯಂತ್ರಗಳನ್ನು ಸಾಮ‌ೂಹಿಕ ಉತ್ಪಾದನೆ ಮಾಡಲು ಅನುಕೂಲವಾಯಿತು. ಮುಂಚಿನ ವಸ್ತ್ರೋದ್ಯಮ ಯಂತ್ರಗಳ ಯಾಂತ್ರಿಕ ಭಾಗಗಳನ್ನು "ಗಡಿಯಾರದ ಕೆಲಸ" ಎಂದು ಕರೆಯಲಾಗುತ್ತದೆ. ಏಕೆಂದರೆ ಯಂತ್ರದ ಭಾಗಗಳಲ್ಲಿ ಲೋಹದ ಸ್ಪೈಂಡಲ್‌ಗಳು ಮತ್ತು ಗೇರ್‌ಗಳನ್ನು ಅಳವಡಿಸಿದ್ದರು. ವಸ್ತ್ರೋದ್ಯಮ ಯಂತ್ರಗಳ ಉತ್ಪಾದನೆಯು ಈ ವ್ಯಾಪಾರಗಳಿಂದ ಕುಶಲಕರ್ಮಿಗಳನ್ನು ಸೆಳೆಯಿತು ಮತ್ತು ಇದು ಆಧುನಿಕ ಎಂಜಿನಿಯರಿಂಗ್ ಕೈಗಾರಿಕೆಯ ಮ‌ೂಲವಾಗಿದೆ.

ವಿವಿಧ ಕುಶಲಕರ್ಮಿಗಳು ಯಂತ್ರಗಳನ್ನು ತಯಾರಿಸಿದರು-ಬಡಗಿಗಳು ಮರದ ಉಪಕರಣಗಳನ್ನು ನಿರ್ಮಿಸಿದರು ಮತ್ತು ಕಮ್ಮಾರರು ಹಾಗೂ ಟರ್ನರ್‌ಗಳು ಲೋಹದ ಭಾಗಗಳನ್ನು ನಿರ್ಮಿಸಿದರು. ಯಂತ್ರೋಪಕರಣಗಳು ಉತ್ಪಾದನೆಯನ್ನು ಹೇಗೆ ಬದಲಾಯಿಸಿದವು ಎನ್ನುವುದಕ್ಕೆ ಉತ್ತಮ ಉದಾಹರಣೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಂನಲ್ಲಿ ೧೮೩೦ರಲ್ಲಿ ಸಂಭವಿಸಿತು. ಜೋಸೆಪ್ ಗಿಲ್ಲೊಟ್, ವಿಲಿಯಂ ಮಿಚೆಲ್ ಮತ್ತು ಜೇಮ್ಸ್ ಸ್ಟೀಫನ್ ಪೆರಿ ಅವರು ಆವಿಷ್ಕಾರ ಮಾಡಿದ ಹೊಸ ಯಂತ್ರವು ಸ್ಫುಟ, ಅಗ್ಗದ ಉಕ್ಕಿನ ಪೆನ್ ನಿಬ್‌ಗಳ ತಯಾರಿಕೆಗೆ ಅವಕಾಶ ಕಲ್ಪಿಸಿತು; ಈ ಪ್ರಕ್ರಿಯೆ ಪ್ರಯಾಸಕರ ಮತ್ತು ದುಬಾರಿಯಾಗಿತ್ತು. ಲೋಹದ ನಿರ್ವಹಣೆ ಕಷ್ಟಕರವಾದ್ದರಿಂದ ಮತ್ತು ಯಂತ್ರೋಪಕರಣಗಳ ಕೊರತೆಯಿಂದ, ಲೋಹದ ಬಳಕೆ ಕನಿಷ್ಠ ಸಂಖ್ಯೆಯಲ್ಲಿತ್ತು. ಮರದ ಉಪಕರಣಗಳು ಉಷ್ಣಾಂಶ ಮತ್ತು ಆರ್ದ್ರತೆಯೊಂದಿಗೆ ಅಳತೆಗಳನ್ನು ಬದಲಾಯಿಸುವ ಅನಾನುಕೂಲತೆ ಇರುತ್ತದೆ ಮತ್ತು ಕಾಲಾನುಕ್ರಮದಲ್ಲಿ ಕೀಲುಗಳು ಸಡಿಲಗೊಳ್ಳುತ್ತದೆ. ಕೈಗಾರಿಕಾ ಕ್ರಾಂತಿ ಪ್ರಗತಿ ಹೊಂದುತ್ತಿದ್ದಂತೆ,ಲೋಹದ ಚೌಕಟ್ಟುಗಳಿರುವ ಯಂತ್ರಗಳು ಸಾಮಾನ್ಯವೆನಿಸಿತು. ಆದರೆ ಅವುಗಳನ್ನು ಮಿತವ್ಯಯಕಾರಿಯಾಗಿ ತಯಾರಿಸಲು ಯಂತ್ರೋಪಕರಣಗಳ ಅಗತ್ಯವಿತ್ತು. ಯಂತ್ರೋಪಕರಣಗಳ ಆಗಮನಕ್ಕೆ ಮುಂಚಿತವಾಗಿ, ಸುತ್ತಿಗೆಗಳು, ಫೈಲ್‌ಗಳು,ಸ್ಕ್ರೇಪರ್‌ಗಳು,ಗರಗಸಗಳು ಮತ್ತು ಉಳಿಗಳು ಮುಂತಾದ ಮ‌ೂಲ ಕೈಸಾಧನಗಳನ್ನು ಬಳಸಿ ದೈಹಿಕ ದುಡಿಮೆಯಿಂದ ಲೋಹವನ್ನು ತಯಾರಿಸಲಾಗುತ್ತಿತ್ತು. ಈ ಮಾರ್ಗದಿಂದ ಸಣ್ಣ ಲೋಹದ ಭಾಗಗಳನ್ನು ತಕ್ಷಣವೇ ತಯಾರಿಸಲಾಗುತ್ತಿತ್ತು. ಆದರೆ ದೊಡ್ಡ ಯಂತ್ರದ ಭಾಗಗಳಿಗೆ ಉತ್ಪಾದನೆ ಅತ್ಯಂತ ಪ್ರಯಾಸಕರ ಮತ್ತು ವೆಚ್ಚದಾಯಕವಾಗಿತ್ತು.

1911ರಿಂದ ಬಳಕೆಗೆ ಬಂದ ಲೇತ್, ಇತರೆ ಯಂತ್ರಗಳನ್ನು ತಯಾರಿಸುವ ಯಂತ್ರೋಪಕರಣ

ಕುಶಲಕರ್ಮಿಗಳು ಬಳಸುವ ಕಾರ್ಯಾಗಾರದ ಲೇತ್(ಚರಕಿಯಂತ್ರ)ಗಳಲ್ಲದೇ,ಮುಂಚಿನ ಉಗಿ ಯಂತ್ರಗಳಲ್ಲಿ ದೊಡ್ಡ ವ್ಯಾಸದ ಸಿಲಿಂಡರ್‌ಗಳನ್ನು ಕೊರೆಯುವ ಸಿಲಿಂಡರ್ ಬೋರಿಂಗ್ ಯಂತ್ರವು ಪ್ರಥಮ ದೊಡ್ಡ ಯಂತ್ರೋಪಕರಣವಾಗಿತ್ತು. ನುಣುಪುಗೊಳಿಸುವ ಯಂತ್ರ,ರಂಧ್ರಕೊರೆಯುವ ಯಂತ್ರ ಮತ್ತು ಆಕಾರಗೊಳಿಸುವ ಯಂತ್ರ ೧೯ನೇ ಶತಮಾನದ ಪ್ರಥಮ ದಶಕಗಳಲ್ಲಿ ಅಭಿವೃದ್ಧಿಪಡಿಸಲಾಯಿತು. ಮಿಲ್ಲಿಂಗ್ ಯಂತ್ರವನ್ನು ಈ ಸಂದರ್ಭದಲ್ಲಿ ಆವಿಷ್ಕಾರ ಮಾಡಲಾಗಿದ್ದರೂ,ಎರಡನೇ ಕೈಗಾರಿಕಾ ಕ್ರಾಂತಿವರೆಗೆ ಅದು ಗಂಭೀರ ಕಾರ್ಯಾಗಾರದ ಸಾಧನವಾಗಿ ಅಭಿವೃದ್ಧಿಯಾಗಲಿಲ್ಲ.

ಯಂತ್ರೋಪಕರಣಗಳ ಅಭಿವೃದ್ಧಿಯಲ್ಲಿ ಮಿಲಿಟರಿ ಉತ್ಪಾದನೆ ಕೈಜೋಡಿಸಿದೆ. ಯಂತ್ರೋಪಕರಣಗಳ ತಯಾರಕರ ಶಾಲೆಯಲ್ಲಿ ೧೯ನೇ ಶತಮಾನದ ಪೂರ್ವದಲ್ಲಿ ಹೆನ್ರಿ ಮಾಡ್ಸ್‌ಲೇ ವೂಲ್‌ವಿಚ್ ರಾಯಲ್ ಶಸ್ತ್ರಾಗಾರದಲ್ಲಿ ಉದ್ಯೋಗದಲ್ಲಿದ್ದರು. ಯುವಕನಾಗಿದ್ದಾಗ ಫಿರಂಗಿ ಕೊರೆಯಲು, ವರ್ಬ್ರುಗಾನ್ಸ್ ತಮ್ಮ ಕೆಲಸದಲ್ಲಿ ತಯಾರಿಸಿದ್ದ ಕುದುರೆಯಿಂದ ಎಳೆಯುವ ದೊಡ್ಡ ಮರದ ಯಂತ್ರಗಳನ್ನು ಅವರು ಅಲ್ಲಿ ಕಂಡಿದ್ದರು. ಅವರು ನಂತರ, ಲೋಹದ ಬೀಗಗಳ ಉತ್ಪಾದನೆಯಲ್ಲಿ ಜೋಸೆಪ್ ಬ್ರಾಹ್ಮಾ ಜತೆ ಕೆಲಸ ಮಾಡಿದರು. ಶೀಘ್ರದಲ್ಲೇ ಸ್ವತಃ ಕೆಲಸ ಆರಂಭಿಸಿದರು. ರಾಯಲ್ ನೇವಿಗೆ ಪೋರ್ಟ್ಸ್‌ಮೌತ್ ಬ್ಲಾಕ್ ಮಿಲ್ಸ್‌ನಲ್ಲಿ ಹಡುಗುಗಳ ಭಾರ ಎತ್ತುವ ರಾಟೆ ಬ್ಲಾಕ್‌ಗಳನ್ನು ತಯಾರಿಸುವ ಯಂತ್ರದ ನಿರ್ಮಾಣಕ್ಕೆ ಅವರನ್ನು ಬಳಸಿಕೊಳ್ಳಲಾಯಿತು. ಇವೆಲ್ಲ ಲೋಹವಾಗಿದ್ದು, ಸಮ‌ೂಹ ಉತ್ಪಾದನೆಗೆ ಮತ್ತು ಅದಲುಬದಲು ಹಂತದೊಂದಿಗೆ ಬಿಡಿಭಾಗಗಳನ್ನು ತಯಾರಿಸಲು ಪ್ರಥಮ ಯಂತ್ರಗಳಾಗಿವೆ. ಸ್ಥಿರತೆ ಮತ್ತು ನಿಖರತೆ ಅಗತ್ಯದ ಬಗ್ಗೆ ಮಾಡ್ಸ್‌ಲೆ ಕಲಿತ ಪಾಠಗಳನ್ನು ಯಂತ್ರೋಪಕರಣಗಳ ಅಭಿವೃದ್ಧಿಯಲ್ಲಿ ಅಳವಡಿಸಿದರು.ಅವರು ಕಾರ್ಯಾಗಾರದಲ್ಲಿ ತಮ್ಮ ಕೆಲಸದ ಅಭಿವೃದ್ಧಿಗಾಗಿ ರಿಚರ್ಡ್ ರಾಬರ್ಟ್ಸ್,ಜೋಸೆಫ್ ಕ್ಲೆಮೆಂಟ್ ಮತ್ತು ಜೋಸೆಫ್ ವಿಟ್‌ವರ್ತ್ ಮುಂತಾದ ತಲೆಮಾರುಗಳ ಜನರಿಗೆ ತರಬೇತಿ ನೀಡಿದರು.

ಡರ್ಬಿಯ ಜೇಮ್ಸ್ ಫಾಕ್ಸ್ ಶತಮಾನದ ಪ್ರಥಮ ಮ‌ೂರನೇ ಒಂದರ ಅವಧಿಯಲ್ಲಿ ಯಂತ್ರೋಪಕರಣಗಳಲ್ಲಿ ಅನುಕೂಲಕರ ರಫ್ತು ವ್ಯಾಪಾರ ಮಾಡಿದ್ದರು.ಲೀಡ್ಸ್ ಮ್ಯಾಥಿವ್ ಮರ್ರೆ ಕೂಡ ಅದೇ ರೀತಿ ವ್ಯಾಪಾರ ಮಾಡಿದ್ದರು. ರಾಬರ್ಟ್ಸ್ ಉತ್ತಮ ದರ್ಜೆಯ ಯಂತ್ರೋಪಕರಣಗಳ ತಯಾರಕರಾಗಿದ್ದರು ಮತ್ತು ಕಾರ್ಯಾಗಾರದಲ್ಲಿ ನಿಖರ ಅಳತೆಗೆ ಜಿಗ್ಗುಗಳು ಮತ್ತು ಮಾಪಕಗಳ ಬಳಕೆಯಲ್ಲಿ ಪ್ರವರ್ತಕರೆನಿಸಿದರು.

ಅನಿಲ ದೀಪ ವ್ಯವಸ್ಥೆ[ಬದಲಾಯಿಸಿ]

ಕೈಗಾರಿಕೆ ಕ್ರಾಂತಿಯ ನಂತರದ ಪ್ರಮುಖ ಕೈಗಾರಿಕೆಯೆಂದರೆ ಅನಿಲ ದೀಪದ ವ್ಯವಸ್ಥೆ. ಇತರರು ಬೇರೆಕಡೆಗಳಲ್ಲಿ ಇದೇ ರೀತಿಯ ಆವಿಷ್ಕಾರಗಳನ್ನು ಕೈಗೊಂಡರೂ,ಬರ್ಮಿಂಗ್‌ಹ್ಯಾಂ ಉಗಿ ಯಂತ್ರ ಪ್ರವರ್ತಕರಾದ ಬೌಲ್ಟನ್ ಮತ್ತು ವಾಟ್ ಅವರಲ್ಲಿ ನೌಕರನಾಗಿದ್ದ ವಿಲಿಯಂ ಮರ್ಡೋಕ್ ದೊಡ್ಡ ಪ್ರಮಾಣದಲ್ಲಿ ಇವುಗಳನ್ನು ಪರಿಚಯಿಸುವ ಕೆಲಸ ಮಾಡಿದರು. ಕುಲುಮೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಲ್ಲಿದ್ದಿಲಿನ ಅನಿಲೀಕರಣ,ಅನಿಲದ ಶುದ್ಧೀಕರಣ(ಗಂಧಕ,ಅಮೋನಿಯ ಮತ್ತು ಭಾರದ ಹೈಡ್ರೋಕಾರ್ಬನ್‌ಗಳನ್ನು ತೆಗೆಯುವುದು) ಮತ್ತು ಅದರ ಸಂಗ್ರಹ ಮತ್ತು ವಿತರಣೆಯು ಈ ಪ್ರಕ್ರಿಯೆಯಲ್ಲಿ ಒಳಗೊಂಡಿದೆ. ಪ್ರಥಮ ಅನಿಲ ದೀಪ ವ್ಯವಸ್ಥೆಯ ಉಪಯುಕ್ತತೆಗಳನ್ನು ೧೮೧೨-೨೦ರ ನಡುವೆ ಲಂಡನ್‌ನಲ್ಲಿ ಪಡೆಯಲಾಯಿತು. ಅವು ಶೀಘ್ರದಲ್ಲೇ UKಯಲ್ಲಿ ಕಲ್ಲಿದ್ದಲಿನ ಪ್ರಮುಖ ಉಪಭೋಗಿಗಳೆನಿಸಿದವು. ಅನಿಲ ದೀಪ ವ್ಯವಸ್ಥೆಯು ಸಾಮಾಜಿಕ ಮತ್ತು ಕೈಗಾರಿಕೆ ಸಂಸ್ಥೆಯಲ್ಲಿ ಪರಿಣಾಮ ಬೀರಿತು. ಏಕೆಂದರೆ ಪ್ರಾಣಿಗಳ ಕೊಬ್ಬಿನಿಂದ ತಯಾರಾದ ಮೊಂಬತ್ತಿ ಅಥವಾ ತೈಲದ ದೀಪಗಳಿಗಿಂತ ಹೆಚ್ಚು ಕಾಲ ಕಾರ್ಖಾನೆಗಳು ಮತ್ತು ಅಂಗಡಿಗಳು ತೆರೆದಿಡಲು ಅವಕಾಶ ಕಲ್ಪಿಸಿತು. ಇವುಗಳ ಪರಿಚಯದಿಂದ ನಗರಗಳು ಮತ್ತು ಪಟ್ಟಣಗಳಲ್ಲಿ ರಾತ್ರಿಜೀವನ ಗರಿಗೆದರಲು ಅವಕಾಶವಾಯಿತು.ಒಳಾಂಗಣ ಮತ್ತು ಬೀದಿಗಳಲ್ಲಿ ಮುಂಚೆಗಿಂತ ದೊಡ್ಡ ಪ್ರಮಾಣದಲ್ಲಿ ಬೆಳಕಿನ ವ್ಯವಸ್ಥೆ ಮಾಡಲು ಸಾಧ್ಯವಾಯಿತು.

ಗಾಜು ತಯಾರಿಕೆ[ಬದಲಾಯಿಸಿ]

ಕ್ರಿಸ್ಟಲ್ ಪ್ಯಾಲೆಸ್ 1851ರ ಮಹಾನ್ ವಸ್ತುಪ್ರದರ್ಶನ ನಡೆಸಿತು.

ಸಿಲಿಂಡರ್ ಪ್ರಕ್ರಿಯೆ ಎಂದು ಹೆಸರಾದ ಗಾಜು ಉತ್ಪಾದನೆಯ ಹೊಸ ವಿಧಾನವನ್ನು ೧೯ನೇ ಶತಮಾನದ ಪೂರ್ವದಲ್ಲಿ ಯುರೋಪ್‌ನಲ್ಲಿ ಅಭಿವೃದ್ಧಿಪಡಿಸಲಾಯಿತು. ಗಾಜು ಹಾಳೆಗಳನ್ನು ಸೃಷ್ಟಿಸಲು ಚಾನ್ಸ್ ಸಹೋದರರು ಈ ಪ್ರಕ್ರಿಯೆಯನ್ನು ೧೮೩೨ರಲ್ಲಿ ಬಳಸಿದರು. ಅವರು ಕಿಟಕಿ ಮತ್ತು ತಟ್ಟೆ ಗಾಜುಗಳ ಪ್ರಮುಖ ಉತ್ಪಾದಕರಾದರು. ಈ ಮುನ್ನಡೆಯು ದೊಡ್ಡ ಪ್ರಮಾಣದಲ್ಲಿ ಕಿಟಕಿ, ಬಾಗಿಲು ಗಾಜು, ಕನ್ನಡಿ ಫಲಕಗಳನ್ನು ಯಾವುದೇ ಅಡೆತಡೆಯಿಲ್ಲದೇ ತಯಾರಿಕೆಗೆ ಅವಕಾಶ ನೀಡಿತು. ಹೀಗೆ,ಒಳಾಂಗಣಗಳಲ್ಲಿ ಜಾಗದ ಯೋಜನೆ ಮತ್ತು ಕಟ್ಟಡಗಳ ವಾತಾಯನ ವ್ಯವಸ್ಥೆ ಮುಕ್ತಗೊಳಿಸಿತು. ಹೊಸ ಮತ್ತು ನಾವೀನ್ಯದ ರಚನೆಯಲ್ಲಿ ಗಾಜಿನ ಹಾಳೆಯನ್ನು ಬಳಸಿದ್ದಕ್ಕೆ ಕ್ರಿಸ್ಟಲ್ ಪ್ಯಾಲೇಸ್ ಶ್ರೇಷ್ಠ ಉದಾಹರಣೆಯಾಗಿದೆ.

ಕೃಷಿಯ ಮೇಲೆ ಪರಿಣಾಮಗಳು[ಬದಲಾಯಿಸಿ]

A ಜಾನ್ ಫೌಲರ್ & ಕಂ. ಪ್ಲೋಯಿಂಗ್ ಯಂತ್ರ

ಯಂತ್ರಗಳ ಆವಿಷ್ಕಾರಗಳು ಬ್ರಿಟಿಷ್ ಕೃಷಿ ಕ್ರಾಂತಿಯನ್ನು ಮುನ್ನಡೆಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿತು. ಕೃಷಿ ಸುಧಾರಣೆಯು ಕೈಗಾರಿಕಾ ಕ್ರಾಂತಿಗಿಂತ ಶತಮಾನಗಳ ಮುಂಚೆ ಆರಂಭವಾಗಿದ್ದರೂ, ಭೂಮಿಯಿಂದ ಕಾರ್ಮಿಕಶಕ್ತಿಯನ್ನು ಮುಕ್ತಗೊಳಿಸಿ,ಹದಿನೆಂಟನೇ ಶತಮಾನದ ಹೊಸ ಕೈಗಾರಿಕೆ ಗಿರಣಿಗಳಲ್ಲಿ ಕೆಲಸ ಮಾಡುವಲ್ಲಿ ಪಾತ್ರವಹಿಸಿರಬಹುದು. ಕೈಗಾರಿಕಾ ಕ್ರಾಂತಿ ಪ್ರಗತಿ ಹೊಂದುತ್ತಿದ್ದಂತೆ, ಸಾಲು ಸಾಲು ಯಂತ್ರಗಳು ಲಭ್ಯವಾದವು. ಅವು ಆಹಾರೋತ್ಪಾದನೆಯನ್ನು ಕೆಲವೇ ಕಾರ್ಮಿಕರ ನೆರವಿನೊಂದಿಗೆ ಹೆಚ್ಚಿಸಿದವು.

ಜೆತ್ರೊ ಟುಲ್ ಅವರ ಬೀಜ ಬಿತ್ತುವ ಯಂತ್ರವನ್ನು ೧೭೩೧ರಲ್ಲಿ ಆವಿಷ್ಕರಿಸಲಾಯಿತು. ಅದು ಯಾಂತ್ರಿಕ ಬೀಜ ಬಿತ್ತುವ ವ್ಯವಸ್ಥೆಯಾಗಿದ್ದು,ಭೂನಿವೇಶನದಲ್ಲಿ ಬೀಜಗಳನ್ನು ದಕ್ಷತೆಯಿಂದ ವಿತರಣೆ ಮಾಡಿದವು. ಜೋಸೆಫ್ ಫೋಲ್‌ಜಾಂಬೆಯವರು ೧೭೩೦ರಲ್ಲಿ ಆವಿಷ್ಕರಿಸಿದ ರೋಥರಾಮ್ ಉಳುಮೆಯಂತ್ರವು ವಾಣಿಜ್ಯಿಕವಾಗಿ ಪ್ರಥಮಬಾರಿಗೆ ಯಶಸ್ವಿಯಾದ ಕಬ್ಬಿಣದ ಉಳುಮೆ ಯಂತ್ರ. ಆಂಡ್ರಿವ್ ಮೆಕೆಲ್ ಅವರ ೧೭೮೪ರಲ್ಲಿ ಆವಿಷ್ಕರಿಸಿದ ಕಾಳುಬಿಡಿಸುವ ಒಕ್ಕು ಯಂತ್ರವು ಅಂತಿಮವಾಗಿ ಅನೇಕ ಕೃಷಿ ಕಾರ್ಮಿಕರ ಪಾಲಿಗೆ ಕಂಟಕವಾಯಿತು ಮತ್ತು ೧೮೩೦ರಲ್ಲಿ ಕೃಷಿ ಬಂಡಾಯವಾದ ಸ್ವಿಂಗ್ ರಯಟ್ಸ್‌ಗೆ ದಾರಿ ಕಲ್ಪಿಸಿತು.

ಎಂಜಿನಿಯರ್ ಮತ್ತು ಸಂಶೋಧಕ ಜಾನ್ ಫೌಲರ್ ೧೮೫೦ ಮತ್ತು '೬೦ರ ದಶಕದಲ್ಲಿ ಉಳುಮೆಗೆ ಮತ್ತು ಒಳಚರಂಡಿ ಕಾಲುವೆಗಳನ್ನು ಅಗೆಯಲು ಉಗಿ ಯಂತ್ರಗಳ ಬಳಕೆಯ ಸಾಧ್ಯತೆಗಳನ್ನು ಪರಿಶೀಲಿಸಿದರು. ಅವರು ಆವಿಷ್ಕರಿಸಿದ ವ್ಯವಸ್ಥೆಯಲ್ಲಿ ಒಂದು ನಿಶ್ಚಲ ಯಂತ್ರ ಜಮೀನಿನ ಮ‌ೂಲೆಯಲ್ಲಿ ಉಳುಮೆಯಂತ್ರವನ್ನು ಅಚ್ಚುರಾಟೆ ಮತ್ತು ರಾಟೆಗಳ ಜತೆ ಮ‌ೂಲಕ ಎಳೆಯುವುದಾಗಿತ್ತು ಅಥವಾ ಜಮೀನಿನ ಎರಡೂ ಬದಿಯಲ್ಲಿ ಇರಿಸಲಾದ ಎರಡು ಯಂತ್ರಗಳು ಉಳುಮೆಯಂತ್ರವನ್ನು ಅಚ್ಚುರಾಟೆಗೆ ಜೋಡಿಸಿದ ಕೇಬಲ್ ಸಾಧನದಿಂದ ಹಿಂದಕ್ಕೆ,ಮುಂದಕ್ಕೆ ಎಳೆಯುವುದು ಒಳಗೊಂಡಿದೆ. ಫೌಲರ್ ಉಳುಮೆ ವ್ಯವಸ್ಥೆಯು ಕುದುರೆಯಿಂದ ಎಳೆಯುವ ಉಳುಮೆಯಂತ್ರಗಳಿಗೆ ಹೋಲಿಸಿದಾಗ ವ್ಯಾಪಕವಾಗಿ ಕೃಷಿಭೂಮಿ ಉಳುಮೆಯ ವೆಚ್ಚವನ್ನು ತಗ್ಗಿಸಿತು. ಅಲ್ಲದೇ ಅವರ ಉಳುಮೆ ವ್ಯವಸ್ಥೆಯಲ್ಲಿ, ಒಳಚರಂಡಿ ಕಾಲುವೆಗಳ ಅಗೆತಕ್ಕೆ ಬಳಸಿದಾಗ,ಮುಂಚಿನ ಬಳಸಿರದ ಜೌಗು ನೆಲದ ಉಳುಮೆಗೆ ಸಾಧ್ಯವಾಯಿತು. ಹುಲ್ಲುಮೆದೆಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಮತ್ತು ಜಮೀನುಗಳ ಉಳುಮೆಯಲ್ಲಿ ಒಕ್ಕು ಯಂತ್ರಗಳ ಕೆಲಸದಲ್ಲಿ ಭಾರಎಳೆಯುವ ಟ್ರಾಕ್ಷನ್ ಯಂತ್ರ ನಂತರ ಸಾಮಾನ್ಯ ದೃಶ್ಯವಾಗಿ ಕಂಡುಬಂತು.

ಬ್ರಿಟನ್‌ನಲ್ಲಿ ಸಾರಿಗೆ[ಬದಲಾಯಿಸಿ]

ಕೈಗಾರಿಕೆ ಕ್ರಾಂತಿಗೆ ಆರಂಭಿಕ ಹಂತದಲ್ಲಿ ಭಾರದ ವಸ್ತುಗಳನ್ನು ಸಮುದ್ರಮಾರ್ಗವಾಗಿ ಸಾಗಿಸಲು ಕರಾವಳಿ ನೌಕೆಗಳನ್ನು ಬಳಸುವುದರೊಂದಿಗೆ,ನದಿಗಳು ಮತ್ತು ರಸ್ತೆಗಳ ಮ‌ೂಲಕ ಒಳನಾಡು ಸಾರಿಗೆಯನ್ನು ಕೈಗೊಳ್ಳಲಾಯಿತು. ಕಲ್ಲಿದ್ದಲನ್ನು ನದಿಗಳಿಗೆ ಸಾಗಿಸಿ ಅಲ್ಲಿಂದ ಹಡಗಿಗೆ ಹೇರಲು ರೈಲ್ವೆಗಳು ಅಥವಾ ಬಂಡಿಮಾರ್ಗಗಳನ್ನು ಬಳಸಿಕೊಳ್ಳಲಾಯಿತು. ಆದರೆ ಕಾಲುವೆಗಳನ್ನು ಆಗ ಇನ್ನೂ ನಿರ್ಮಿಸಿರಲಿಲ್ಲ. ಭೂಮಿಯ ಮೇಲೆ ಪ್ರಾಣಿಗಳು ಎಲ್ಲ ಚಲನಶಕ್ತಿಯನ್ನು ಪೂರೈಸಿದರೆ,ಸಮುದ್ರದಲ್ಲಿ ನೌಕೆಗಳು ಚಲನಶಕ್ತಿಯನ್ನು ಒದಗಿಸಿದವು.

ಸುಂಕದ ವ್ಯವಸ್ಥೆಯಿರುವ ರಸ್ತೆಜಾಲ,ಕಾಲುವೆ ಮತ್ತು ಜಲಮಾರ್ಗದ ಜಾಲ ಮತ್ತು ರೈಲ್ವೆಜಾಲದೊಂದಿಗೆ ಕೈಗಾರಿಕಾ ಕ್ರಾಂತಿಯು ಬ್ರಿಟನ್ ಸಾರಿಗೆ ಮೂಲಸೌಲಭ್ಯವನ್ನು ಸುಧಾರಿಸಿತು. ಕಚ್ಚಾ ವಸ್ತುಗಳು ಮತ್ತು ಉತ್ಪಾದಿಸಿದ ಸಾಮಗ್ರಿಗಳನ್ನು ಮುಂಚಿಗಿಂತ ವೇಗದಲ್ಲಿ, ಅಗ್ಗದಲ್ಲಿ ಸಾಗಿಸಲು ಸಾಧ್ಯವಾಯಿತು. ಸುಧಾರಿತ ಸಾರಿಗೆಯಿಂದ ಹೊಸ ಕಲ್ಪನೆಗಳು ತಕ್ಷಣವೇ ಹರಡಲು ಅವಕಾಶ ಕಲ್ಪಿಸಿತು.

ಕರಾವಳಿ ನೌಕಾಯಾನ[ಬದಲಾಯಿಸಿ]

ಬ್ರಿಟನ್ ಕರಾವಳಿಯ ಸುತ್ತ ಸರಕುಗಳನ್ನು ಸಾಗಿಸಲು ತೇಲುವ ನೌಕೆಗಳನ್ನು ಹಿಂದಿನಿಂದಲೂ ಬಳಸಲಾಗಿತ್ತು. ಕಲ್ಲಿದ್ದಲನ್ನು ನ್ಯೂಕ್ಯಾಸಲ್‌ನಿಂದ ಲಂಡನ್‌ಗೆ ಸಾಗಣೆ ಮಾಡುವ ವ್ಯಾಪಾರ ಮಧ್ಯಕಾಲೀನ ಯುಗದಲ್ಲಿ ಆರಂಭವಾಯಿತು. ಬ್ರಿಟನ್‌ನೊಳಗೆ ಕಡಲತೀರದಲ್ಲಿ ಸಮುದ್ರ ಮಾರ್ಗವಾಗಿ ಸರಕುಗಳ ಸಾಗಣೆಯು ಶತಮಾನಗಳಿಗೆ ಮುಂಚಿತವಾಗಿಯೇ ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಸಾಮಾನ್ಯವಾಗಿತ್ತು. ಈ ಅವಧಿಯ ಅಂತ್ಯದಲ್ಲಿ ರೈಲ್ವೆಗಳ ಬೆಳವಣಿಗೆಯೊಂದಿಗೆ ಇದು ಕಡಿಮೆ ಪ್ರಾಮುಖ್ಯತೆ ಗಳಿಸಿತು.

ಸಂಚಾರಯೋಗ್ಯ ನದಿಗಳು[ಬದಲಾಯಿಸಿ]

ಯುನೈಟೆಡ್ ಕಿಂಗ್‌ಡಮ್ ಎಲ್ಲ ಪ್ರಮುಖ ನದಿಗಳು ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಸಂಚಾರ ಯೋಗ್ಯವಾಗಿದ್ದವು. ಕೆಲವು ಪ್ರಾಚೀನಕಾಲದಿಂದ ಸಂಚಾರಯೋಗ್ಯವಾಗಿವೆ. ಸೆವೆರ್ನ್,ಥೇಮ್ಸ್ ಮತ್ತು ಟ್ರೆಂಟ್ ಇವುಗಳಲ್ಲಿ ಗಮನಾರ್ಹವೆನಿಸಿದೆ. ಕೆಲವು ಸುಧಾರಣೆಯಾದವು ಅಥವಾ ಪ್ರವಾಹಕ್ಕೆ ಎದುರು ದಿಕ್ಕಿನಲ್ಲಿ ಯಾನವನ್ನು ವಿಸ್ತರಿಸಲಾಯಿತು.ಆದರೆ ಸಾಮಾನ್ಯವಾಗಿ ಕೈಗಾರಿಕಾ ಕ್ರಾಂತಿಯ ಸಂದರ್ಭಕ್ಕೆ ಬದಲಾಗಿ ಅದಕ್ಕೆ ಮುಂಚಿನ ಅವಧಿಯಲ್ಲಿ ಇದು ಚಾಲ್ತಿಯಲ್ಲಿತ್ತು.

ಸೆವೆರ್ನ್ ನದಿಯನ್ನು ವಿಶೇಷವಾಗಿ ಸರಕುಗಳನ್ನು ವಿದೇಶದಿಂದ ಬ್ರಿಸ್ಟಲ್‌ಗೆ ಆಮದು ಮಾಡುವುದಕ್ಕಾಗಿ ನಡುನಾಡಿಗೆ ಸರಕುಗಳ ಸಾಗಣೆಗೆ ಮತ್ತು ಶ್ರೋಪ್‌ಶೈರ್ ಉತ್ಪಾದನೆ ಕೇಂದ್ರಗಳಿಂದ(ಕೋಲ್‌ಬ್ರೂಕ್‌ಡೇಲ್‌ನಿಂದ ಕಬ್ಬಿಣದ ಸಾಮಗ್ರಿಗಳು ಮುಂತಾದವು) ಮತ್ತು ಬ್ಲಾಕ್ ಕಂಟ್ರಿಯಿಂದ ಸರಕುಗಳ ರಫ್ತಿಗೆ ಬಳಸಲಾಯಿತು. ಸಣ್ಣ ಸಾಗಣೆ ದೋಣಿಗಳಾದ ಟ್ರೊಗಳ ಮೂಲಕ ಸರಕುಗಳ ಸಾಗಣೆ ನಡೆಯುತ್ತಿತ್ತು. ಅವು ನದಿಯಲ್ಲಿ ವಿವಿಧ ಆಳವಿಲ್ಲದ ಪ್ರದೇಶಗಳು ಮತ್ತು ಸೇತುವೆಗಳಲ್ಲಿ ಹಾದುಹೋಗುವುದು ಸಾಧ್ಯವಿತ್ತು. ಟ್ರೋಗಳು ಬ್ರಿಸ್ಟಲ್ ಕಾಲುವೆಯಿಂದ ಸೌತ್ ವೇಲ್ಸ್ ಬಂದರುಗಳಿಗೆ ಮತ್ತು ಬ್ರಿಡ್ಜ್‌ವಾಟರ್ ಮುಂತಾದ ಸಾಮರ್‌ಸೆಟ್ ಬಂದರುಗಳಿಗೆ ಸಂಚರಿಸಲು ಸಾಧ್ಯವಾಗಿತ್ತಲ್ಲದೇ, ಫ್ರಾನ್ಸ್‌ನಷ್ಟು ದೂರದವರೆಗೆ ಸಾಗುತ್ತಿತ್ತು.

ಕಾಲುವೆಗಳು[ಬದಲಾಯಿಸಿ]

ಪಾಂಟ್ಸಿಸಿಲ್ಟೆ ಆಕ್ವೆಡಕ್ಟ್, ಲಾಂಗೋಲನ್ ವೇಲ್ಸ್

ನಡುನಾಡುಗಳಲ್ಲಿ ಮುಖ್ಯ ಉತ್ಪಾದನಾ ಕೇಂದ್ರಗಳು ಮತ್ತು ಉತ್ತರಭಾಗದೊಂದಿಗೆ ಸಮುದ್ರಬಂದರುಗಳು ಮತ್ತು ಲಂಡನ್ ಜತೆ ಕೊಂಡಿ ಕಲ್ಪಿಸಲು ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ಕಾಲುವೆಗಳ ನಿರ್ಮಾಣ ಆರಂಭಿಸಲಾಯಿತು. ಲಂಡನ್ ಆ ಕಾಲದಲ್ಲೇ ರಾಷ್ಟ್ರದ ದೊಡ್ಡ ಉತ್ಪಾದನಾ ಕೇಂದ್ರವಾಗಿತ್ತು. ದೊಡ್ಡ ಪ್ರಮಾಣದ ಸರಕುಗಳನ್ನು ದೇಶವ್ಯಾಪಿ ಸುಲಭವಾಗಿ ಸಾಗಿಸುವುದಕ್ಕೆ ಅವಕಾಶ ನೀಡಲು ಕಾಲುವೆಗಳು ಪ್ರಥಮ ತಂತ್ರಜ್ಞಾನವಾಗಿತ್ತು. ಏಕೈಕ ಕಾಲುವೆ ಕುದುರೆಯು ಗಾಡಿಗಿಂತ ೧೨ ಪಟ್ಟುವೇಗದ ಗತಿಯಲ್ಲಿ ಭಾರವನ್ನು ಎಳೆಯಲು ಸಮರ್ಥವಾಗಿತ್ತು. ಕಾಲುವೆಗಳ ರಾಷ್ಟ್ರೀಯ ಜಾಲವು ೧೮೨೦ರ ದಶಕದಲ್ಲಿ ಅಸ್ತಿತ್ವಕ್ಕೆ ಬಂತು. ಕಾಲುವೆ ನಿರ್ಮಾಣವು ಸಂಸ್ಥೆಗೆ ಆದರ್ಶಪ್ರಾಯವಾಗಿ ಸೇವೆ ಸಲ್ಲಿಸಿತು.ನಂತರ ಈ ವಿಧಾನಗಳನ್ನು ರೈಲ್ವೆಗಳ ನಿರ್ಮಾಣಕ್ಕೆ ಬಳಸಲಾಯಿತು. ರೈಲ್ವೆಗಳು ೧೮೪೦ರ ದಶಕದಿಂದ ಲಾಭದಾಯಕ ವಾಣಿಜ್ಯ ವ್ಯವಹಾರವಾಗಿ ಹರಡಿದ್ದರಿಂದ ಕಾಲುವೆಗಳಲ್ಲಿ ಸಾಗಣೆ ತರುವಾಯ ಬಹುತೇಕ ರದ್ದಾಯಿತು.

ಬ್ರಿಟನ್ ಕಾಲುವೆ ಜಾಲದ ಜತೆಗೆ ಈಗಲೂ ಉಳಿದುಕೊಂಡಿರುವ ಗಿರಣಿ ಕಟ್ಟಡಗಳು ಬ್ರಿಟನ್‌ನಲ್ಲಿ ಎದ್ದುಕಾಣುವ ಮುಂಚಿನ ಕೈಗಾರಿಕೆ ಕ್ರಾಂತಿಯ ಕಾಯಂ ಲಕ್ಷಣಗಳಲ್ಲಿ ಒಂದಾಗಿದೆ.

ರಸ್ತೆಗಳು[ಬದಲಾಯಿಸಿ]

ಮುಂಚಿನ ಬ್ರಿಟಿಷ್ ರಸ್ತೆ ವ್ಯವಸ್ಥೆಯ ಬಹುಭಾಗವನ್ನು ಸಾವಿರಾರು ಸ್ಥಳೀಯ ಪಾದ್ರಿಗಳು ಕಳಪೆಯಾಗಿ ನಿರ್ವಹಿಸಿದ್ದರು. ಆದರೆ ೧೭೨೦ರ ದಶಕದಿಂದೀಚೆಗೆ(ಕೆಲವು ಬಾರಿ ಅದಕ್ಕಿಂತ ಮುಂಚೆ)ರಸ್ತೆಸುಂಕಗಳನ್ನು ವಿಧಿಸಿದ ರಸ್ತೆಗಳನ್ನು ನಿರ್ವಹಿಸುವುದಕ್ಕಾಗಿ ಮತ್ತು ಸುಂಕ ವಸೂಲಿಗಾಗಿ ಸುಂಕದ ವ್ಯವಸ್ಥೆಯ ಟ್ರಸ್ಟ್‌ಗಳನ್ನು ಸ್ಥಾಪಿಸಲಾಯಿತು. ಅನೇಕ ಮುಖ್ಯರಸ್ತೆಗಳನ್ನು ೧೭೫೦ರ ದಶಕದಿಂದ ರಸ್ತೆಸುಂಕದ ವ್ಯವಸ್ಥೆಗೆ ಒಳಪಡಿಸಲಾಯಿತು.ಇಂಗ್ಲೆಂಡ್ ಮತ್ತು ವೇಲ್ಸ್‌ನ ಬಹುತೇಕ ಪ್ರತಿಯೊಂದು ರಸ್ತೆಯನ್ನು ಕೆಲವು ಸುಂಕದ ವ್ಯವಸ್ಥೆಯ ಟ್ರಸ್ಟ್ ಜವಾಬ್ದಾರಿ ವಹಿಸಿಕೊಳ್ಳುವಷ್ಟು ಮಟ್ಟಕ್ಕೆ ಸುಂಕದ ವ್ಯವಸ್ಥೆಗೆ ಅಳವಡಿಸಲಾಯಿತು. ಹೊಸ ತಂತ್ರಜ್ಞಾನದ ರಸ್ತೆಗಳನ್ನು ಜಾನ್ ಮೆಟ್‌ಕಾಫ್,ಥಾಮಸ್ ಟೆಲ್‌ಫೋರ್ಡ್ ಮತ್ತು ಜಾನ್ ಮೆಕಾಡಾಮ್ ನಿರ್ಮಿಸಿದರು. ಪ್ರಮುಖ ಸುಂಕದರಸ್ತೆಗಳು ಲಂಡನ್‌ನಿಂದ ಆರಂಭವಾದವು ಮತ್ತು ರಾಷ್ಟ್ರದ ಉಳಿದ ಭಾಗಗಳಿಗೆ ಸುಂಕದರಸ್ತೆಗಳ ಮ‌ಾರ್ಗವಾಗಿ ರಾಯಲ್ ಮೇಲ್ ಮುಟ್ಟುತ್ತಿತ್ತು. ನಿಧಾನ,ಅಗಲ ಚಕ್ರಗಳ, ಕುದುರೆಗಳಿಂದ ಎಳೆಯುವ ಬಂಡಿಗಳ ಮ‌ೂಲಕ ಈ ರಸ್ತೆಗಳಲ್ಲಿ ಭಾರೀ ಸರಕುಗಳನ್ನು ಸಾಗಿಸಲಾಗುತ್ತಿತ್ತು. ಹಗುರ ಸರಕುಗಳನ್ನು ಸಣ್ಣ ಗಾಡಿಗಳಲ್ಲಿ ಅಥವಾ ಸರಕು ಹೇರಿದ ಕುದುರೆಗಳ ತಂಡದೊಂದಿಗೆ ಸಾಗಿಸಲಾಯಿತು. ಸ್ಟೇಜ್ ಕೋಚ್‌ಗಳು ಶ್ರೀಮಂತರನ್ನು ಸಾಗಿಸಲು ಬಳಸಲಾಯಿತು.ಕಡಿಮೆ ಶ್ರೀಮಂತಿಕೆ ಉಳ್ಳವರು ಬಾಡಿಗೆ ಬಂಡಿಗಳಲ್ಲಿ ಸಂಚಾರಕ್ಕೆ ಶುಲ್ಕ ಪಾವತಿ ಮಾಡುತ್ತಿದ್ದರು.

ರೈಲುಮಾರ್ಗ[ಬದಲಾಯಿಸಿ]

ಗಣಿ ಪ್ರದೇಶಗಳಲ್ಲಿ ಕಲ್ಲಿದ್ದಲು ಸಾಗಣೆಗೆ ತೆರೆದಬಂಡಿ ಮಾರ್ಗಗಳು ೧೭ನೇ ಶತಮಾನದಲ್ಲಿ ಆರಂಭವಾಯಿತು ಮತ್ತು ಅವು ಆಗಾಗ್ಗೆ ಕಲ್ಲಿದ್ದಿಲಿನ ಇನ್ನಷ್ಟು ದೂರದ ಸಾಗಣೆಗೆ ಕಾಲುವೆ ಅಥವಾ ನದಿ ಜಾಲಗಳ ಜತೆ ಸಂಬಂಧ ಹೊಂದಿದ್ದವು. ಇವೆಲ್ಲವೂ ಕುದುರೆಗಳಿಂದ ಎಳೆಯಲಾಗುತ್ತಿತ್ತು ಅಥವಾ ಗುರುತ್ವಾಕರ್ಷಕ ಶಕ್ತಿಯ ಮೇಲೆ ಅವಲಂಬಿತವಾಗಿ, ಇಳಿಜಾರಿನಿಂದ ಬಂಡಿಗಳನ್ನು ಪುನಃ ಮೇಲೆತ್ತಲು ನಿಶ್ಚಲ ಉಗಿ ಯಂತ್ರವನ್ನು ಬಳಸಲಾಯಿತು. ಉಗಿ ಯಂತ್ರದ ಪ್ರಥಮ ಪ್ರಯೋಗವನ್ನು ಬಂಡಿ ಅಥವಾ ಪ್ಲೇಟ್ ವೇಸ್(ಎರಕದ ಕಬ್ಬಿಣದ ಪ್ಲೇಟ್ ಬಳಸಿದ್ದರಿಂದ ಹಾಗೆ ಕರೆಯಲಾಗಿದೆ)ಮೇಲೆ ಮಾಡಲಾಯಿತು. ಕುದುರೆಯಿಂದ ಎಳೆಯುವ ಸಾರ್ವಜನಿಕ ರೈಲ್ವೆಗಳು ೧೯ನೇ ಶತಮಾನದವರೆಗೆ ಮುಂಚಿನ ವರ್ಷಗಳವರೆಗೆ ಆರಂಭವಾಗಿರಲಿಲ್ಲ. ಉಗಿ ಚಾಲಿತ ಸಾರ್ವಜನಿಕ ರೈಲ್ವೆಗಳು ೧೮೨೫ರಲ್ಲಿ ಸ್ಟಾಕ್‌ಟನ್ ಮತ್ತು ಡಾರ್ಲಿಂಗ್‌ಟನ್ ರೈಲ್ವೆಯೊಂದಿಗೆ ಮತ್ತು ೧೮೩೦ರಲ್ಲಿ ಲಿವರ್‌ಪೂಲ್ ಮತ್ತು ಮ್ಯಾಂಚೆಸ್ಟರ್ ರೈಲ್ವೆಯೊಂದಿಗೆ ಆರಂಭವಾದವು. ದೊಡ್ಡ ನಗರಗಳಿಗೆ ಮತ್ತು ಪಟ್ಟಣಗಳಿಗೆ ಸಂಪರ್ಕಿಸುವ ಪ್ರಮುಖ ರೈಲ್ವೆಗಳ ನಿರ್ಮಾಣವು ೧೮೩೦ರ ದಶಕದಲ್ಲೇ ಆರಂಭವಾಯಿತು. ಆದರೆ ಪ್ರಥಮ ಕೈಗಾರಿಕಾ ಕ್ರಾಂತಿಯ ಅಂತ್ಯಕಾಲದಲ್ಲಿ ಅವು ವೇಗದ ಗತಿ ಪಡೆದುಕೊಂಡಿತು.

ರೈಲ್ವೆಗಳ ನಿರ್ಮಾಣ ಕಾರ್ಯವನ್ನು ಮುಗಿಸಿದ ನಂತರ ಅನೇಕ ಮಂದಿ ಕಾರ್ಮಿಕರು ತಮ್ಮ ಗ್ರಾಮೀಣ ಜೀವನಶೈಲಿಗಳಿಗೆ ಹಿಂತಿರುಗಲಿಲ್ಲ. ಬದಲಿಗೆ ನಗರಗಳಲ್ಲೇ ಉಳಿದು, ಕಾರ್ಖಾನೆಗಳಿಗೆ ಹೆಚ್ಚುವರಿ ಕಾರ್ಮಿಕರನ್ನು ಒದಗಿಸಿದರು. ರೈಲ್ವೆಗಳು ತಕ್ಷಣದ ಮತ್ತು ಸುಲಭದ ಸಾಗಣೆ ಮಾರ್ಗವಾಗಿ ಮತ್ತು ವಿದ್ಯುನ್ಮಾನ ಅಂಚೆ ಮತ್ತು ಸುದ್ದಿಗಳ ಸಾಗಣೆಗೆ ಬ್ರಿಟನ್ ವ್ಯಾಪಾರವಹಿವಾಟಿಗೆ ಬೃಹತ್ ಪ್ರಮಾಣದಲ್ಲಿ ನೆರವಾಯಿತು.

ಸಾಮಾಜಿಕ ಪರಿಣಾಮಗಳು[ಬದಲಾಯಿಸಿ]

ಸಾಮಾಜಿಕ ರಚನೆಗೆ ಸಂಬಂಧಿಸಿದಂತೆ, ಕೈಗಾರಿಕಾ ಕ್ರಾಂತಿಯು ಭೂಮಾಲೀಕ ಗಣ್ಯವರ್ಗದ ವ್ಯಕ್ತಿಗಳು ಮತ್ತು ಕೆಳವರ್ಗದ ಜನರ ವಿರುದ್ಧ ಮಧ್ಯಮವರ್ಗದ ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳಿಗೆ ಲಭಿಸಿದ ಜಯಕ್ಕೆ ಸಾಕ್ಷಿಯಾಗಿದೆ.

ಸಾಮಾನ್ಯ ದುಡಿಯುವ ವರ್ಗದ ಜನರು ಹೊಸ ಗಿರಣಿಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ಹೆಚ್ಚೆಚ್ಚು ಅವಕಾಶಗಳನ್ನು ಕಂಡುಕೊಂಡರು. ಆದರೆ ಅಲ್ಲಿ ಕಠಿಣ ದುಡಿಮೆ ಪರಿಸ್ಥಿತಿಗಳ ಜತೆಗೆ ಸುದೀರ್ಘಾವಧಿಯ ಕೆಲಸವಿತ್ತು ಮತ್ತು ಯಂತ್ರಗಳ ವೇಗ ಮೇಲುಗೈ ಪಡೆಯಿತು. ಆದಾಗ್ಯೂ,ಕಠಿಣ ದುಡಿಮೆ ಪರಿಸ್ಥಿತಿಗಳು ಕೈಗಾರಿಕಾ ಕ್ರಾಂತಿ ಸಂಭವಿಸುವುದಕ್ಕೆ ಬಹು ಹಿಂದೆಯೇ ಪ್ರಚಲಿತದಲ್ಲಿತ್ತು. ಕೈಗಾರಿಕಾ-ಪೂರ್ವ ಸಮಾಜವು ಸ್ಥಿರವಾಗಿತ್ತು ಮತ್ತು ಆಗಾಗ್ಗೆ ಕ್ರೌರ್ಯದಿಂದ ಕೂಡಿತ್ತು-ಬಾಲ ಕಾರ್ಮಿಕ ದುಡಿಮೆ, ಕೊಳಕು ಜೀವಿಸುವ ಸ್ಥಿತಿಗತಿಗಳು ಮತ್ತು ಸುದೀರ್ಘ ದುಡಿಮೆಯು ಕೈಗಾರಿಕೆ ಕ್ರಾಂತಿಯ ಮುಂಚಿನ ಅವಧಿಯಲ್ಲಿ ಚಾಲ್ತಿಯಲ್ಲಿತ್ತು.

ಕಾರ್ಖಾನೆಗಳು ಮತ್ತು ನಗರೀಕರಣ[ಬದಲಾಯಿಸಿ]

ಮ್ಯಾಂಚೆಸ್ಟರ್,ಇಂಗ್ಲೆಂಡ್("ಕೊಟೊನೊಪೊಲೀಸ್"), 1840ರಲ್ಲಿ ತೆಗೆದ ಚಿತ್ರ ಕಾರ್ಖಾನೆ ಚಿಮಣಿಗಳ ಸಮ‌ೂಹ ತೋರಿಸುತ್ತಿದೆ.

ಕೈಗಾರೀಕರಣವು ಕಾರ್ಖಾನೆಯ ಸೃಷ್ಟಿಗೆ ಕಾರಣವಾಯಿತು. ವಿವಾದಾತೀತವಾಗಿ ಜಾನ್ ಲೊಂಬೆಯ ಡರ್ಬಿಯಲ್ಲಿರುವ ಜಲ-ಶಕ್ತಿಯ ರೇಷ್ಮೆ ಗಿರಣಿಯು ೧೭೨೧ರಲ್ಲಿ ಕಾರ್ಯಾರಂಭಗೊಂಡಿತು. ಹತ್ತಿ ನೂಲುವ ಪ್ರಕ್ರಿಯೆ ಯಾಂತ್ರೀಕರಣಕ್ಕೆ ಒಳಗಾದ ನಂತರ ಕಾರ್ಖಾನೆ ಆರಂಭವಾಯಿತು.

ಆಧುನಿಕ ನಗರದ ಬೆಳವಣಿಗೆಗೆ ಕಾರ್ಖಾನೆ ವ್ಯವಸ್ಥೆ ಬಹುತೇಕ ಕಾರಣವಾಯಿತು.ಕಾರ್ಖಾನೆಗಳಲ್ಲಿ ಕೆಲಸ ಹುಡುಕಿಕೊಂಡು ಅನೇಕ ಮಂದಿ ಕಾರ್ಮಿಕರು ನಗರಗಳಿಗೆ ವಲಸೆ ಬಂದರು. ಗಿರಣಿಗಳು ಮತ್ತು "ಕೊಟನೊಪೊಲೀಸ್" ಎಂಬ ಉಪನಾಮ ಹೊಂದಿರುವ ಮ್ಯಾಂಚೆಸ್ಟರ್ ಸಂಬಂಧಿತ ಕೈಗಾರಿಕೆಗಳಲ್ಲಿ ಇದು ಉತ್ತಮವಾಗಿ ಉಲ್ಲೇಖಿತವಾಗಿದ್ದು, ವಿವಾದಾತೀತವಾಗಿ ವಿಶ್ವದ ಪ್ರಥಮ ಕೈಗಾರಿಕಾ ನಗರವಾಗಿದೆ. ಸಣ್ಣ ಗಿರಣಿಗಳಲ್ಲಿ ೧೯ನೇ ಶತಮಾನದ ಬಹುಭಾಗ ಉತ್ಪಾದನೆಯನ್ನು ಕೈಗೊಳ್ಳಲಾಯಿತು.ಅವು ಸಾಂಕೇತಿಕವಾಗಿ ಜಲಶಕ್ತಿಯಿಂದ ಕೂಡಿದ್ದು ಸ್ಥಳೀಯ ಜನರ ಅಗತ್ಯಗಳನ್ನು ಪೂರೈಸಲು ಸ್ಥಾಪಿಸಲಾಗಿತ್ತು. ನಂತರ ಪ್ರತಿಯೊಂದು ಕಾರ್ಖಾನೆಯು ಸ್ವಂತ ಉಗಿ ಯಂತ್ರ ಮತ್ತು ಹೊಗೆಕೊಳವೆಯನ್ನು ಹೊಂದಿ,ಬಾಯ್ಲರ್ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿತು.

ಕೈಗಾರೀಕರಣಕ್ಕೆ ಪರಿವರ್ತನೆಯು ಕಷ್ಟಕರವಾಗಿತ್ತು. ಉದಾಹರಣೆಗೆ,ಲುಡೈಟ್‌ರು ಎಂದು ಹೆಸರುವಾಸಿಯಾದ ಕೆಲವು ಇಂಗ್ಲೀಷ್ ಕಾರ್ಮಿಕರ ತಂಡವು ರಚನೆಯಾಗಿ ಕೈಗಾರೀಕರಣದ ವಿರುದ್ಧ ಪ್ರತಿಭಟಿಸಿದರು ಮತ್ತು ಕೆಲವು ಭಾರಿ ಕಾರ್ಖಾನೆಗಳನ್ನು ಧ್ವಂಸಮಾಡಿದರು.

ಇತರ ಕೈಗಾರಿಕೆಗಳಲ್ಲಿ ಕಾರ್ಖಾನೆಯ ಉತ್ಪಾದನೆಗೆ ಪರಿವರ್ತನೆಯಲ್ಲಿ ಅಷ್ಟೊಂದು ವ್ಯತ್ಯಾಸ ಕಾಣಲಿಲ್ಲ. ಕೆಲವು ಕೈಗಾರಿಕೋದ್ಯಮಿಗಳು ಸ್ವತಃ ಕಾರ್ಖಾನೆ ಮತ್ತು ಕಾರ್ಮಿಕರ ಜೀವನ ಸ್ಥಿತಿಗತಿಗಳ ಸುಧಾರಣೆಗೆ ಯತ್ನಿಸಿದರು. ಇಂತಹ ಸುಧಾರಣಾವಾದಿಗಳಲ್ಲಿ ಬಹು ಮುಂಚಿನವರು ರಾಬರ್ಟ್ ಓವೆನ್. ಅವರು ನ್ಯೂ ಲನಾರ್ಕ್ ಗಿರಣಿಗಳಲ್ಲಿ ಕಾರ್ಮಿಕರ ಸ್ಥಿತಿಗತಿಗಳ ಸುಧಾರಣೆ ಪ್ರಯತ್ನಗಳಲ್ಲಿ ಪ್ರವರ್ತಕರೆನಿಸಿದರು ಮತ್ತು ಪೂರ್ವದ ಸಮಾಜವಾದಿ ಚಳವಳಿಯ ಪ್ರಮುಖ ಚಿಂತಕರೆಂದು ಅವರನ್ನು ಪರಿಗಣಿಸಲಾಗಿದೆ.

ಸಂಯೋಜಿತ ಹಿತ್ತಾಳೆ ಗಿರಣಿಯು ೧೭೪೬ರಲ್ಲಿ ಬ್ರಿಸ್ಟಲ್ ಬಳಿಯ ವಾರ್ಮ್‌ಲೆನಲ್ಲಿ ಕಾರ್ಯಾಚರಣೆ ಆರಂಭಿಸಿತು. ಕಚ್ಚಾ ವಸ್ತು ಒಂದು ಕೊನೆಯಿಂದ ಬರುತ್ತಿದ್ದಂತೆ,ಹಿತ್ತಾಳೆಯಾಗಿ ಕರಗಿಸಿ ಅದರಿಂದ ತಟ್ಟೆ,ಪಿನ್‌ಗಳು, ವೈರ್ ಮತ್ತಿತರ ಸರಕುಗಳನ್ನು ಉತ್ಪಾದಿಸಲಾಯಿತು. ನಿವೇಶನದಲ್ಲಿ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲಾಯಿತು. ಜೋಸಯ ವೆಡ್ಜ್‌ವುಡ್ ಮತ್ತು ಮ್ಯಾಥಿವ್ ಬೌಲ್ಟನ್ ಮುಂಚಿನ ಪ್ರಮುಖ ಕೈಗಾರಿಕೋದ್ಯಮಿಗಳಾಗಿದ್ದು, ಕಾರ್ಖಾನೆ ವ್ಯವಸ್ಥೆಯನ್ನು ಅಳವಡಿಸಿಕೊಂಡರು.

ಬಾಲ ಕಾರ್ಮಿಕ ದುಡಿಮೆ[ಬದಲಾಯಿಸಿ]

ಯುವ "ಕಾರ್ಮಿಕ" ಕಲ್ಲಿದ್ದಲು ತೊಟ್ಟಿಯನ್ನು ಗಣಿಯ ಮೇಲ್ಛಾವಣಿಗೆ ಎಳೆಯುತ್ತಿರುವುದು.

ಕೈಗಾರಿಕಾ ಕ್ರಾಂತಿಯು ಜನಸಂಖ್ಯೆ ಹೆಚ್ಚಳಕ್ಕೆ ದಾರಿ ಕಲ್ಪಿಸಿತು. ಆದರೆ ಬಾಲ್ಯವಸ್ಥೆಯನ್ನು ಹಾದುಹೋಗುವ ಮಕ್ಕಳ ಸಂಖ್ಯೆ ಕೈಗಾರಿಕಾ ಕ್ರಾಂತಿಯುದ್ಧಕ್ಕೂ ಸುಧಾರಣೆಯಾಗಲಿಲ್ಲ(ಶಿಶು ಗಳ ಮರಣ ಪ್ರಮಾಣ ಗಮನಾರ್ಹ ಇಳಿಕೆಯಾದರೂ).[೪೨][೪೩] ಶಿಕ್ಷಣಾವಕಾಶಕ್ಕೆ ಸೀಮಿತ ಅವಕಾಶವಿತ್ತು ಮತ್ತು ಮಕ್ಕಳು ದುಡಿಯಬೇಕೆಂದು ನಿರೀಕ್ಷೆ ಹೊಂದಲಾಗಿತ್ತು. ಉತ್ಪಾದನೆ ದೃಷ್ಟಿಯಿಂದ ಮಕ್ಕಳು ಮತ್ತು ಪ್ರೌಢವಯಸ್ಕರ ಕೆಲಸವನ್ನು ಹೋಲಿಸಬಹುದಾಗಿದ್ದರೂ, ಮಕ್ಕಳಿಗೆ ಮಾಲೀಕರು ಕಡಿಮೆ ವೇತನ ನೀಡುತ್ತಿದ್ದರು; ಕೈಗಾರಿಕಾ ಯಂತ್ರದ ನಿರ್ವಹಣೆಗೆ ದೈಹಿಕಶಕ್ತಿಯ ಅಗತ್ಯವಿರಲಿಲ್ಲ.ಕೈಗಾರಿಕಾ ವ್ಯವಸ್ಥೆ ಸಂಪೂರ್ಣ ಹೊಸತಾದ್ದರಿಂದ ಅನುಭವೀ ಪ್ರೌಢವಯಸ್ಕ ಕಾರ್ಮಿಕರು ಇರಲಿಲ್ಲ. ಇದರಿಂದ ೧೮ ಮತ್ತು ೧೯ನೇ ಶತಮಾನಗಳ ನಡುವೆ, ಕೈಗಾರಿಕಾ ಕ್ರಾಂತಿಯ ಪೂರ್ವದ ಹಂತಗಳಲ್ಲಿ ಬಾಲ ಕಾರ್ಮಿಕರನ್ನು ಉತ್ಪಾದನೆ ದುಡಿಮೆಗೆ ಆಯ್ಕೆ ಮಾಡುವ ಕಾರ್ಮಿಕ ವರ್ಗದಲ್ಲಿ ಸೇರಿಸಲಾಯಿತು.

ಕೈಗಾರಿಕಾ ಕ್ರಾಂತಿಗೆ ಮುಂಚಿತವಾಗಿ ಬಾಲ ಕಾರ್ಮಿಕ ದುಡಿಮೆ ಜಾರಿಯಲ್ಲಿತ್ತು. ಆದರೆ ಜನಸಂಖ್ಯೆ ಮತ್ತು ಶಿಕ್ಷಣಾವಕಾಶದ ಪ್ರಗತಿಯಿಂದ ಅದು ಹೆಚ್ಚು ಗೋಚರವಾಯಿತು. ಅನೇಕ ಮಕ್ಕಳನ್ನು ಕೆಟ್ಟ ದುಡಿಮೆಯ ಪರಿಸ್ಥಿತಿಗಳಲ್ಲಿ ಪ್ರೌಢವಯಸ್ಕ ಕಾರ್ಮಿಕರಿಗಿಂತ ಕಡಿಮೆ ವೇತನಕ್ಕೆ ಬಲವಂತವಾಗಿ ದುಡಿಮೆಗೆ ದೂಡಲಾಯಿತು.[೪೪]

ವಿಶೇಷವಾಗಿ ಕಲ್ಲಿದ್ದಲು ಗಣಿಗಳಲ್ಲಿ ಮತ್ತು ವಸ್ತ್ರೋದ್ಯಮ ಕಾರ್ಖಾನೆಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ವರದಿಗಳನ್ನು ವಿವರವಾಗಿ ಬರೆಯಲಾಯಿತು.[೪೫] ಇವು ಮಕ್ಕಳ ಸಂಕಷ್ಟಗಳು ಬೆಳಕಿಗೆ ಬರಲು ನೆರವಾಯಿತು.[೪೬] ಸಾರ್ವಜನಿಕರ ಆಕ್ರೋಶದಿಂದ,ವಿಶೇಷವಾಗಿ ಮೇಲ್ವರ್ಗ ಮತ್ತು ಮಧ್ಯಮವರ್ಗದ ಜನರ ಆಕ್ರೋಶದಿಂದ ಯುವ ಕಾರ್ಮಿಕರ ಅಭಿವೃದ್ಧಿಯಲ್ಲಿ ಬದಲಾವಣೆ ಮ‌ೂಡಲು ನೆರವಾಯಿತು.

ಕಾನೂನಿನ ಮ‌ೂಲಕ ಬಾಲ ಕಾರ್ಮಿಕ ದುಡಿಮೆಯನ್ನು ಹದ್ದುಬಸ್ತಿಗೆ ತರಲು ರಾಜಕಾರಣಿಗಳು ಮತ್ತು ಸರ್ಕಾರ ಪ್ರಯತ್ನಿಸಿತು. ಆದರೆ ಕಾರ್ಖಾನೆ ಮಾಲೀಕರು ಪ್ರತಿಭಟಿಸಿದರು;ಹಸಿವು ತಪ್ಪಿಸಲು ಆಹಾರ ಖರೀದಿಗಾಗಿ ಮಕ್ಕಳಿಗೆ ಹಣ ನೀಡುವ ಮ‌ೂಲಕ ಬಡವರಿಗೆ ನೆರವಾಗುತ್ತಿರುವುದಾಗಿ ಕೆಲವರು ಭಾವಿಸಿದರು ಮತ್ತು ಇತರರು ಕೇವಲ ಬಾಲಕರ ಅಗ್ಗದ ದುಡಿಮೆಯನ್ನು ಸ್ವಾಗತಿಸಿದರು. ಬಾಲ ಕಾರ್ಮಿಕ ದುಡಿಮೆಯ ವಿರುದ್ದ ಪ್ರಥಮ ಸಾಮಾನ್ಯ ಕಾನೂನುಗಳಾದ ಫ್ಯಾಕ್ಟರಿ ಕಾಯ್ದೆಗಳನ್ನು ಇಂಗ್ಲೆಂಡ್‌ನಲ್ಲಿ ಅನುಮೋದಿಸಲಾಯಿತು: ಒಂಭತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ದುಡಿಯಲು ಅವಕಾಶವಿರಲಿಲ್ಲ ,ರಾತ್ರಿಪಾಳಿಯಲ್ಲಿ ಮಕ್ಕಳ ಕೆಲಸಕ್ಕೆ ಅನುಮತಿ ನಿಷೇಧ ಮತ್ತು ೧೮ರ ವಯೋಮಿತಿ ಕೆಳಗಿನ ಯುವಕರ ಕೆಲಸದ ಅವಧಿಯನ್ನು ೧೨ ಗಂಟೆಗಳಿಗೆ ಸೀಮಿತಗೊಳಿಸಲಾಯಿತು. ಕಾನೂನಿನ ಸೂಕ್ತ ಜಾರಿಯ ಬಗ್ಗೆ ಕಾರ್ಖಾನೆ ತಪಾಸಕರು ಮೇಲ್ವಿಚಾರಣೆ ವಹಿಸಿದರು. ಸುಮಾರು ಹತ್ತು ವರ್ಷಗಳು ಕಳೆದ ಬಳಿಕ,ಗಣಿಗಾರಿಕೆಯಲ್ಲಿ ಮಕ್ಕಳು ಮತ್ತು ಮಹಿಳೆಯರಿಗೆ ಉದ್ಯೋಗವನ್ನು ನಿಷೇಧಿಸಲಾಯಿತು. ಈ ಕಾನೂನುಗಳಿಂದ ಬಾಲ ಕಾರ್ಮಿಕರ ಸಂಖ್ಯೆಯನ್ನು ತಗ್ಗಿಸಿತು; ಆದಾಗ್ಯೂ,ಬಾಲ ಕಾರ್ಮಿಕ ದುಡಿಮೆಯು ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ೨೦ನೇ ಶತಮಾನದವರೆಗೆ ಉಳಿದಿತ್ತು.[೪೭] ಅಮೆರಿಕದ ಕೈಗಾರಿಕೆಗಳಲ್ಲಿ ೧೯೦೦ರಲ್ಲಿ ಹದಿನೈದು ವರ್ಷ ವಯೋಮಾನಕ್ಕಿಂತ ಕೆಳಗಿನ ೧.೭ದಶಲಕ್ಷ ಬಾಲಕಾರ್ಮಿಕರಿದ್ದಾರೆಂದು ವರದಿಯಾಗಿತ್ತು.[೪೮]

ವಸತಿ[ಬದಲಾಯಿಸಿ]

ಓವರ್ ಲಂಡನ್ ಬೈ ರೈಲ್ ಗುಸ್ಟಾವ್ ಡೋರ್,ಸಿ.18701870. ಹೊಸ ಕೈಗಾರಿಕೆ ನಗರಗಳಲ್ಲಿ ಸೃಷ್ಟಿಯಾದ ದಟ್ಟ ಜನಸಂಖ್ಯೆಯ ಮಾಲಿನ್ಯಕಾರಕ ಪರಿಸರಗಳನ್ನು ತೋರಿಸುತ್ತದೆ.

ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಜನಜೀವನ ಸ್ಥಿತಿಗತಿಗಳಲ್ಲಿ ವ್ಯತ್ಯಾಸದಿಂದ ಕೂಡಿತ್ತು. ಕೈಗಾರಿಕೆ ಮಾಲೀಕರ ಮನೆಗಳು ವೈಭವದಿಂದ ಕೂಡಿದ್ದರೆ ಕಾರ್ಮಿಕರು ಕೊಳಕು ಪರಿಸರದಲ್ಲಿ ಜೀವಿಸುತ್ತಿದ್ದರು. ಹೊಸದಾಗಿ ಶ್ರೀಮಂತರಾದ ಜನರ ವಾಸದ ಸ್ಥಿತಿಗತಿಗೆ ಕ್ಲಿಫ್ ಕ್ಯಾಸಲ್ ಕೈಗ್ಲೆ ಉತ್ತಮ ಉದಾಹರಣೆ. ಕೋಟೆಯೊಂದಿಗೆ ಗೋಪುರಗಳು ಮತ್ತು ತೋಟದ ಸುತ್ತ ಗೋಡೆಗಳೊಂದಿಗೆ ಬಿಡಿಬಿಡಿಯಾಗಿ ರೂಪಿಸಿದ ದೊಡ್ಡ ಮನೆ ಇದಾಗಿದೆ. ಮನೆ ಅತೀ ದೊಡ್ಡದಾಗಿದ್ದು,ಭಾರೀ ತೋಟದಿಂದ ಸುತ್ತುವರಿದಿತ್ತು. ಕ್ಲಿಫ್ ಕ್ಯಾಸಲ್ ಈಗ ಸಾರ್ವಜನಿಕರಿಗೆ ವಸ್ತುಪ್ರದರ್ಶನಾಲಯವಾಗಿ ತೆರೆದಿದೆ.

ಬಡಜನರು ಇಕ್ಕಟ್ಟಾದ ಬೀದಿಗಳಲ್ಲಿರುವ ಸಣ್ಣ ಮನೆಗಳಲ್ಲಿ ವಾಸವಾಗಿದ್ದರು. ಈ ಮನೆಗಳು ಶೌಚಾಲಯದ ವ್ಯವಸ್ಥೆಗಳನ್ನು ಹಂಚಿಕೊಳ್ಳುತ್ತಿದ್ದವು ಮತ್ತು ತೆರೆದ ಚರಂಡಿ ಸೌಲಭ್ಯಗಳಿತ್ತು ಹಾಗೂ ಮನೆಗಳು ಸೋರಿಕೆಯ ಅಪಾಯದಲ್ಲಿದ್ದವು. ಮಾಲಿನ್ಯಯುಕ್ತ ನೀರಿನ ಪೂರೈಕೆಯಿಂದ ರೋಗಗಳು ಹರಡುತ್ತಿದ್ದವು. ಆದರೆ ೧೯ನೇ ಶತಮಾನದಲ್ಲಿ ಪರಿಸ್ಥಿತಿ ಸುಧಾರಿಸಿತು.ಒಳಚರಂಡಿ,ನೈರ್ಮಲ್ಯ ಮತ್ತು ಮನೆಗಳ ನಿರ್ಮಾಣಕ್ಕೆ ಕೆಲವು ಎಲ್ಲೆಗಳನ್ನು ರೂಪಿಸುವುದನ್ನು ಒಳಗೊಂಡ ಸಾರ್ವಜನಿಕ ಆರೋಗ್ಯ ಕಾಯ್ದೆಗಳನ್ನು ಜಾರಿಗೆ ತರಲಾಯಿತು. ಆದರೆ ಪ್ರತಿಯೊಬ್ಬರೂ ಇಂತಹ ಮನೆಗಳಲ್ಲಿ ವಾಸಿಸುತ್ತಿರಲಿಲ್ಲ. ಕೈಗಾರಿಕಾ ಕ್ರಾಂತಿಯು ವಕೀಲರು ಮತ್ತು ವೈದ್ಯರು ಮುಂತಾದ ವೃತ್ತಿಪರದ ದೊಡ್ಡ ಮಧ್ಯಮ ವರ್ಗವನ್ನು ಸೃಷ್ಟಿಸಿತು. ಸರ್ಕಾರ ಮತ್ತು ಸ್ಥಳೀಯ ಯೋಜನೆಗಳಿಂದ ೧೯ನೇ ಶತಮಾನದಲ್ಲಿ ಕಾಲಕ್ರಮೇಣ ನಗರಗಳು ಸ್ವಚ್ಛ ಸ್ಥಳಗಳಾಗಿ ರೂಪುಗೊಂಡು ಬಡವರ ಸ್ಥಿತಿಗತಿ ಸುಧಾರಿಸಿತು. ಆದರೆ ಕೈಗಾರೀಕರಣಕ್ಕೆ ಮುಂಚಿತವಾಗಿ ಬಡವರ ಜೀವನ ಸುಲಭವಾಗಿರಲಿಲ್ಲ. ಆದಾಗ್ಯೂ, ಕೈಗಾರಿಕಾ ಕ್ರಾಂತಿಯ ಫಲವಾಗಿ,ಕೊಳಕು ವಾಸದ ಸ್ಥಿತಿಗತಿಗಳ ಮ‌ೂಲಕ ಹರಡಿದ ರೋಗಗಳಿಂದಾಗಿ ಕಾರ್ಮಿಕ ವರ್ಗದ ಭಾರೀ ಸಂಖ್ಯೆಯ ಜನರು ಅಸುನೀಗಿದರು. ಗಣಿಗಳಿಂದ ಎದೆ ಸಂಬಂಧಿತ ರೋಗಗಳು ಮಾಲಿನ್ಯಯುಕ್ತ ನೀರಿನಿಂದ ಕಾಲರಾ ಮತ್ತು ಟೈಫಾಯಿಡ್ ಜತೆಗೆ ಸಿಡುಬು ಸಹ ಸಾಮಾನ್ಯವಾಗಿತ್ತು. ಕಾರ್ಖಾನೆಗಳಲ್ಲಿ ಬಾಲಕಾರ್ಮಿಕರು ಮತ್ತು ಮಹಿಳಾ ಕಾರ್ಮಿಕರಿಗೆ ಅಪಘಾತಗಳು ಸಾಮಾನ್ಯ ಸಂಗತಿಯಾಗಿತ್ತು. ಡಿಕನ್ಸ್ ಕಾದಂಬರಿಗಳು ಇದನ್ನು ಉಲ್ಲೇಖಿಸುತ್ತವೆ. ಕೆಲವು ಸರ್ಕಾರಿ ಅಧಿಕಾರಿಗಳು ಕೂಡ ತಾವು ಕಂಡ ದೃಶ್ಯದ ಬಗ್ಗೆ ದಿಗಿಲುಗೊಂಡರು.[ಸೂಕ್ತ ಉಲ್ಲೇಖನ ಬೇಕು] ಇದಕ್ಕೆ ಸಂಬಂಧಿಸಿದ ಮುಷ್ಕರಗಳು ಮತ್ತು ಗಲಭೆಗಳು ಸಾಮಾನ್ಯವಾಗಿತ್ತು.

ಲುಡೈಟರು[ಬದಲಾಯಿಸಿ]

ಲುಡೈಟ್ಸ್ ನಾಯಕ, 1812ರ ಕೆತ್ತನೆ

ಇಂಗ್ಲೀಷ್ ಅರ್ಥವ್ಯವಸ್ಥೆಯ ಶೀಘ್ರ ಕೈಗಾರಿಕೀಕರಣವು ಅನೇಕ ಮಂದಿ ಕುಶಲಕರ್ಮಿಗಳ ಕೆಲಸಕ್ಕೆ ಕುತ್ತಾಯಿತು. ಮೊದಲಿಗೆ ನಾಟಿಂಗ್‌ಹ್ಯಾಂ ಹತ್ತಿರ ಕಸೂತಿ ಮತ್ತು ಹೆಣೆದ ಉಡುಪು ತಯಾರಿಸುವ ಕಾರ್ಮಿಕರಿಗೆ ಈ ಬೆಳವಣಿಗೆ ಉಂಟಾಯಿತು. ಮುಂಚಿನ ಕೈಗಾರೀಕರಣದಿಂದಾಗಿ ವಸ್ತ್ರೋದ್ಯಮದ ಇತರೆ ಕ್ಷೇತ್ರಗಳಿಗೆ ಇದು ಹರಡಿತು. ಅನೇಕ ಮಂದಿ ನೇಕಾರರು ಉದ್ಯೋಗರಹಿತರಾದರು. ಒಬ್ಬ ನೇಕಾರನಿಗಿಂತ ಹೆಚ್ಚು ಬಟ್ಟೆ ಉತ್ಪಾದನೆಗೆ ಸೀಮಿತ ದುಡಿಮೆ(ಮತ್ತು ಅರೆಕುಶಲ)ಮಾತ್ರ ಅಗತ್ಯವಿದ್ದ ಯಂತ್ರಗಳಿಗೆ ಪೈಪೋಟಿ ನೀಡುವುದು ಅವರಿಗೆ ಸಾಧ್ಯವಾಗಲಿಲ್ಲ. ಅನೇಕ ಮಂದಿ ನಿರುದ್ಯೋಗಿ ಕಾರ್ಮಿಕರು, ನೇಕಾರರು ಮತ್ತಿತರರು ತಮ್ಮ ಕೆಲಸವನ್ನು ಕಿತ್ತುಕೊಂಡ ಯಂತ್ರಗಳ ಮೇಲೆ ತಮ್ಮ ಕೋಪವನ್ನು ತಿರುಗಿಸಿ, ಕಾರ್ಖಾನೆಗಳು ಮತ್ತು ಯಂತ್ರಗಳ ನಾಶಕ್ಕೆ ಆರಂಭಿಸಿದರು. ಈ ದಾಳಿಕೋರರು ಲುಡೈಟರು ಎಂದು ಹೆಸರುವಾಸಿಯಾಗಿದ್ದು, ಜನಪದ ಕಥೆಗಳ ವ್ಯಕ್ತಿಯಾಗಿದ್ದ ನೆಡ್ ಲುಡ್ ಅನುಯಾಯಿಗಳಾಗಿದ್ದರು. ಲುಡೈಟ್ ಆಂದೋಳನದ ಪ್ರಥಮ ದಾಳಿಗಳು ೧೮೧೧ರಲ್ಲಿ ಆರಂಭವಾಯಿತು. ಲುಡೈಟರು ಬಹು ಬೇಗನೇ ಜನಪ್ರಿಯತೆ ಗಳಿಸಿದರು ಮತ್ತು ಬ್ರಿಟಿಷ್ ಸರ್ಕಾರ ಕೈಗಾರಿಕೆಯ ರಕ್ಷಣೆಗೆ ಜನರ ಸೇನೆ ಅಥವಾ ಸೇನೆಯನ್ನು ಬಳಸಿಕೊಂಡು ಕಠಿಣ ಕ್ರಮಗಳನ್ನು ಕೈಗೊಂಡಿತು. ಈ ಗಲಭೆಕೋರರನ್ನು ಹಿಡಿದು ವಿಚಾರಣೆ ನಡೆಸಿ ಗಲ್ಲಿಗೇರಿಸಲಾಯಿತು ಅಥವಾ ಜೀವಾವಧಿ ಶಿಕ್ಷೆಗೆ ಗಡೀಪಾರು ಮಾಡಲಾಯಿತು.

ಕೃಷಿ ಕಾರ್ಮಿಕರ ಕ್ಷೇತ್ರದಲ್ಲಿ ೧೮೩೦ರ ದಶಕದಲ್ಲಿ ಉಂಟಾದ ಅಶಾಂತ ಸ್ಥಿತಿಯ ರೀತಿಯಲ್ಲಿ ಕೈಗಾರೀಕರಣಗೊಂಡ ಇತರೆ ಕ್ಷೇತ್ರಗಳಲ್ಲಿ ಕೂಡ ಅಶಾಂತಿ ಮುಂದುವರಿಯಿತು.ದಕ್ಷಿಣ ಬ್ರಿಟನ್ನಿನ ಅನೇಕ ಭಾಗಗಳು ಕ್ಯಾಪ್ಟನ್ ಸ್ವಿಂಗ್ ತೊಂದರೆಗಳಿಂದ ಪೀಡಿತವಾದವು. ಒಕ್ಕುವ ಯಂತ್ರಗಳು ವಿಶೇಷವಾಗಿ ಕೋಪಕ್ಕೆ ಗುರಿಯಾದವು ಮತ್ತು ಹುಲ್ಲಿನಮೆದೆಗೆ ಅಗ್ನಿಸ್ಪರ್ಷವು ಜನಪ್ರಿಯ ಚಟುವಟಿಕೆಯಾಗಿತ್ತು. ಆದಾಗ್ಯೂ, ಗಲಭೆಗಳು ಮೊದಲಿಗೆ ಕಾರ್ಮಿಕ ಸಂಘಗಳ ಸ್ಥಾಪನೆಗೆ ದಾರಿಕಲ್ಪಿಸಿತು ಹಾಗೂ ಮತ್ತಷ್ಟು ಸುಧಾರಣೆಗೆ ಒತ್ತಡ ಹೇರಲಾಯಿತು.

ಕಾರ್ಮಿಕ ಸಂಘಟನೆ[ಬದಲಾಯಿಸಿ]

ಬಿ.ಉದ್ಯೋಗದಾತರ ಸಂಘಟನೆ. ಸಿ.ಸರಕಾರ

ಕೆನಿಂಗ್‌ಟನ್ ಕಾಮನ್‌ನಲ್ಲಿ 1848ರ ಗ್ರೇಟ್ ಚಾರ್ಟಿಸ್ಟ್ ಸಭೆ

ಕೈಗಾರಿಕಾ ಕ್ರಾಂತಿಯಿಂದ ದುಡಿಮೆಯು ಗಿರಣಿಗಳು,ಕಾರ್ಖಾನೆಗಳು ಮತ್ತು ಗಣಿಗಳಲ್ಲಿ ಕೇಂದ್ರೀಕೃತವಾಯಿತು.ಹೀಗೆ ದುಡಿಯುವ ವರ್ಗದ ಜನರ ಹಿತಾಸಕ್ತಿ ರಕ್ಷಣೆಗೆ ಸಂಯೋಜನೆಗಳು ಅಥವಾ ಕಾರ್ಮಿಕ ಸಂಘಗಳೆಂಬ ಸಂಘಟನೆಗಳಿಗೆ ಅನುಕೂಲ ಒದಗಿಸಿತು. ಎಲ್ಲ ಕೆಲಸಗಳನ್ನು ನಿಲ್ಲಿಸಿ, ಉತ್ಪಾದನೆ ಸ್ಥಗಿತಗೊಳಿಸುವ ಮ‌ೂಲಕ ತಮ್ಮ ಬೇಡಿಕೆಗಳ ಈಡೇರಿಕೆಗೆ ಉತ್ತಮ ಷರತ್ತುಗಳನ್ನು ಹೇರುವ ಅಧಿಕಾರವನ್ನು ಅವು ಹೊಂದಿದ್ದವು. ಮಾಲೀಕರು ತಮ್ಮ ಹಿತಾಸಕ್ತಿ ಬಲಿಕೊಟ್ಟು ಕಾರ್ಮಿಕ ಸಂಘದ ಬೇಡಿಕೆಗಳಿಗೆ ಮಣಿಯುವುದು ಅಥವಾ ಉತ್ಪಾದನೆ ನಷ್ಟದ ವೆಚ್ಚವನ್ನು ಅನುಭವಿಸುವುದು ಇವೆರಡರ ನಡುವೆ ನಿರ್ಧರಿಸಬೇಕಾಗಿತ್ತು. ನುರಿತ ಕಾರ್ಮಿಕರಿಗೆ ಬದಲಿ ತರುವುದು ಕಷ್ಟವಾಗಿತ್ತು. ಈ ರೀತಿಯ ಚೌಕಾಸಿಯ ಮ‌ೂಲಕ ತಮ್ಮ ಷರತ್ತುಗಳನ್ನು ಹೇರುವಲ್ಲಿ ಮೊದಲಿಗೆ ಈ ಗುಂಪಿನ ಜನರು ಯಶಸ್ವಿಯಾದರು.

ಕಾರ್ಮಿಕಸಂಘಗಳು ಬದಲಾವಣೆಗೆ ಪ್ರಭಾವ ಬೀರಲು ಬಳಸುತ್ತಿದ್ದ ಮುಖ್ಯ ವಿಧಾನವೆಂದರೆ ಮುಷ್ಕರದ ಕ್ರಮ ಕೈಗೊಳ್ಳುವುದು. ಕಾರ್ಮಿಕ ಸಂಘಗಳು ಮತ್ತು ಆಡಳಿತ ಮಂಡಳಿ ಎರಡಕ್ಕೂ ಅನೇಕ ಮುಷ್ಕರಗಳು ನೋವಿನ ವಿದ್ಯಮಾನಗಳಾಗಿತ್ತು. ಇಂಗ್ಲೆಂಡ್‌ನಲ್ಲಿ ೧೭೯೯ರಿಂದ ಗುಂಪುಗೂಡುವಿಕೆ ತಡೆ ಕಾಯ್ದೆಯು ಕಾರ್ಮಿಕರು ಯಾವುದೇ ರೀತಿಯ ಕಾರ್ಮಿಕ ಸಂಘಗಳ ರಚನೆಗೆ ನಿಷೇಧ ವಿಧಿಸಿತು.ಆ ಕಾಯ್ದೆ ೧೮೨೪ರಲ್ಲಿ ರದ್ದಾಗುವ ತನಕ ಜಾರಿಯಲ್ಲಿತ್ತು. ಇದಾದ ಬಳಿಕವೂ ಸಂಘಟನೆಗಳನ್ನು ತೀವ್ರವಾಗಿ ನಿರ್ಬಂಧಿಸಲಾಯಿತು.

ರಿಫಾರ್ಮ್ ಆಕ್ಟ್ ವರ್ಷವಾದ ೧೮೩೨ರಲ್ಲಿ ಇಂಗ್ಲೆಂಡ್‌ನಲ್ಲಿ ಮತದಾನದ ವ್ಯಾಪ್ತಿಯನ್ನು ವಿಸ್ತರಿಸಲಾಯಿತು. ಆದರೆ ಸಾರ್ವತ್ರಿಕ ಮತದಾನದ ಹಕ್ಕು ನೀಡಲಿಲ್ಲ. ಡಾರ್ಸೆಟ್‌ನಲ್ಲಿ ಟಾಲ್‌ಪಡಲ್‌ನ ಆರು ಜನರು ಕೃಷಿ ಕಾರ್ಮಿಕರ ಸ್ನೇಹೀ ಸಂಘ ಸ್ಥಾಪಿಸಿ,೧೮೩೦ರ ದಶಕದಲ್ಲಿ ವೇತನಗಳ ಕ್ರಮೇಣ ಇಳಿಕೆ ವಿರುದ್ಧ ಪ್ರತಿಭಟಿಸಿದರು. ಅವರು ವಾರಕ್ಕೆ ೧೦ ಶಿಲ್ಲಿಂಗ್‌ಗಿಂತ ಕಡಿಮೆಗೆ ಕೆಲಸ ಮಾಡಲು ನಿರಾಕರಿಸಿದರು. ಅಷ್ಟರಲ್ಲಿ ವೇತನವು ವಾರಕ್ಕೆ ಏಳು ಶಿಲ್ಲಿಂಗ್‌ಗಳಿಗೆ ಇಳಿಕೆಯಾಗಿತ್ತು ಮತ್ತು ಆರು ಶಿಲ್ಲಿಂಗ್‌ಗಳಿಗೆ ಇನ್ನಷ್ಟು ಇಳಿಸುವ ನಿರೀಕ್ಷೆಯಿತ್ತು. ಸ್ಥಳೀಯ ಭೂಮಾಲೀಕ ಜೇಮ್ಸ್ ಫ್ರಾಂಪ್ಟನ್ ೧೮೩೪ರಲ್ಲಿ ಪ್ರಧಾನಮಂತ್ರಿ ಲಾರ್ಡ್ ಮೆಲ್ಬೋರ್ನ್ ಅವರಿಗೆ ಕಾರ್ಮಿಕ ಸಂಘಟನೆಯ ಬಗ್ಗೆ ದೂರು ನೀಡಲು ಪತ್ರ ಬರೆದರು. ಫ್ರೆಂಡ್ಲಿ ಸೊಸೈಟಿಯ ಸದಸ್ಯರ ರೀತಿಯಲ್ಲಿ ಪರಸ್ಪರ ಪ್ರಮಾಣಗಳನ್ನು ಮಾಡುವುದರಿಂದ ಜನರನ್ನು ನಿಷೇಧಿಸಿ ೧೭೯೭ರಲ್ಲಿ ಕಾನೂನೊಂದನ್ನು ತರಲಾಯಿತು. ಜೇಮ್ಸ್ ಬ್ರೈನ್, ಜೇಮ್ಸ್ ಹ್ಯಾಮೆಟ್,ಜಾರ್ಜ್ ಲೊವ್‌ಲೆಸ್, ಜಾರ್ಜ್ ಸೋದರ ಜೇಮ್ಸ್ ಲವ್‌ಲೆಸ್,ಜಾರ್ಜ್ ಸೋದರಳಿಯ ಥಾಮಸ್ ಸ್ಟಾಂಡ್‌ಫೀಲ್ಡ್ ಮತ್ತು ಥಾಮಸ್ ಪುತ್ರ ಜಾನ್ ಸ್ಟಾಂಡ್‌ಫೀಲ್ಡ್ ಅವರನ್ನು ಬಂಧಿಸಿ ತಪ್ಪಿತಸ್ಥರೆಂದು ಕಂಡುಬಂದಿದ್ದರಿಂದ ಆಸ್ಟ್ರೇಲಿಯಕ್ಕೆ ಗಡೀಪಾರು ಮಾಡಲಾಯಿತು. ಅವರು ಟಾಲ್‌ಪುಡಲ್ ಹುತಾತ್ಮರು ಎಂದು ಹೆಸರಾದರು. ಚಾರ್ಟಿಸ್ಟ್ ಆಂದೋಳನ ೧೮೩೦ ಮತ್ತು ೧೮೪೦ರ ದಶಕದಲ್ಲಿ ಪ್ರಥಮ ದೊಡ್ಡ ಪ್ರಮಾಣದ ಸಂಘಟಿತ ದುಡಿಯುವ ವರ್ಗದ ಆಂದೋಳನವಾಗಿದ್ದು,ರಾಜಕೀಯ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿತು. ಇದರ ಸುಧಾರಣೆಗಳ ಸನ್ನದು ಮೂರು ದಶಲಕ್ಷ ಸಹಿಗಳನ್ನು ಸ್ವೀಕರಿಸಿತು. ಆದರೆ ಸಂಸತ್ತು ಯಾವುದೇ ಪರಿಶೀಲನೆ ಮಾಡದೇ ತಿರಸ್ಕರಿಸಿತು.

ದುಡಿಯುವ ವರ್ಗದ ಜನರು ಸ್ನೇಹಿ ಸಂಘಗಳು ಮತ್ತು ಸಹಕಾರ ಸಂಘಗಳನ್ನು ಆರ್ಥಿಕ ಸಂಕಷ್ಟಗಳ ಕಾಲದ ವಿರುದ್ಧ ಪರಸ್ಪರ ಬೆಂಬಲದ ಗುಂಪುಗಳನ್ನಾಗಿ ರಚಿಸಿಕೊಂಡರು. ರಾಬರ್ಟ್ ಓವನ್ ಮುಂತಾದ ಪ್ರಬುದ್ಧ ಕೈಗಾರಿಕೋದ್ಯಮಿಗಳು ದುಡಿಯುವ ವರ್ಗದ ಪರಿಸ್ಥಿತಿ ಸುಧಾರಣೆಗೆ ಇಂತಹ ಸಂಘಟನೆಗಳನ್ನು ಬೆಂಬಲಿಸಿದರು.

ಕಾರ್ಮಿಕ ಸಂಘಗಳು ಮುಷ್ಕರ ಮಾಡುವ ಹಕ್ಕಿನ ವಿರುದ್ಧ ಕಾನೂನು ನಿರ್ಬಂಧಗಳನ್ನು ನಿಧಾನವಾಗಿ ನಿವಾರಿಸಿಕೊಂಡರು. ಹತ್ತಿ ಕಾರ್ಮಿಕರು ಮತ್ತು ಗಣಿ ಕಾರ್ಮಿಕರು ಚಾರ್ಟಿಸ್ಟ್ ಆಂದೋಳನದ ಮ‌ೂಲಕ ಆಯೋಜಿಸಿದ್ದ ೧೮೪೨ರ ಸಾರ್ವತ್ರಿಕ ಮುಷ್ಕರ ಗ್ರೇಟ್ ಬ್ರಿಟನ್‌ದಾದ್ಯಂತ ಉತ್ಪಾದನೆಯನ್ನು ನಿಲ್ಲಿಸಿತು.[೪೯]

ತರುವಾಯ, ಕಾರ್ಮಿಕ ಸಂಘಗಳ ಮ‌ೂಲಕ ದುಡಿಯುವ ವರ್ಗದ ಪರಿಣಾಮಕಾರಿ ರಾಜಕೀಯ ಸಂಘಟನೆಯನ್ನು ಸಾಧಿಸಲಾಯಿತು. ಮತದಾನದ ಹಕ್ಕಿನ ವ್ಯಾಪ್ತಿಯನ್ನು ೧೮೬೭ ಮತ್ತು ೧೮೮೫ರಲ್ಲಿ ವಿಸ್ತರಣೆ ಮಾಡಿದ ಬಳಿಕ,ಸಮಾಜವಾದಿ ರಾಜಕೀಯ ಪಕ್ಷಗಳನ್ನು ಬೆಂಬಲಿಸಲು ಅದು ಆರಂಭಿಸಿತು. ನಂತರ ವಿಲೀನಗೊಂಡು ಬ್ರಿಟಿಷ್ ಲೇಬರ್ ಪಾರ್ಟಿ ರಚನೆಯಾಯಿತು. ಕಾರ್ಮಿಕ ಸಂಘಟನೆ ತತ್ವ :

  • ಒಗ್ಗ ಟ್ಟಿನಲ್ಲಿ ಬಲವಿದೆ.
  • ಸಮಾನ ಉದ್ಯೋಗಕ್ಕ್ತ್ ಸಮಾನ ವೇತನ
  • ಶ್ರಮಿಕರ ಸ್ವಾ ತಂತ್ರ್ಯ

ಕಾರ್ಮಿಕ ಸಂಘಟನೆಗಳ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಅಂಶಗಳು

  • ಅಂತಾರಾಷ್ಟ್ರೀಯ ಬೆಳವಣಿಗೆ
  • ತತ್ವಾದರ್ಶಗಳು
  • ಸರಕಾರದ ನೀತಿ
  • ರಾಜಕೀಯ ಹಿನ್ನಲೆ
  • ವ್ಯ ವಸ್ಧಾ ಪಕತ್ತದ ನೀತಿ
  • ಸಾಮಾಜಿಕ
  • ಸಾಂಘಿಕ ವ್ಯ ವಸ್ಥೆ

ಕಾರ್ಮಿಕ ಸಂಘಟನೆಯ ಅವಶ್ಯಕತೆ ೧.ವರ್ಚಸ್ವೀ ಸಂಘಟನೆಯಾಗಿರಬೇಕು ೨.ಗಟ್ಟಿಯಾದ ತಳಹದಿಯನ್ನು ಹೋದಿರಬೀಕು ೩.ಸ್ವ ಷ್ಟವಾಗಿ ವಿವರಿಸಲ್ಪ ಟ್ಟ ಯೋಜನೆ ಮತ್ತು ನೀತಿಗಳನ್ನು ಹೊಂದಿರಬೇಕು ೪.ಕಾರ್ಮಿಕರಿಂದ ಕಾರ್ಮಿಕರಿಗಾಗಿ ೫.ಕಾರಣಗಳಿಗೆ ಪ್ರಾಮಾಣಿಕವಾಗಿ ಇರಬೇಕು ೬.ತನ್ನ ವ್ಯಾಪ್ತಿಯ ಆಚೆಗೂ ವಿಸ್ತರಿಸಬೇಕು ೭.ಜವಬ್ದಾರಿ ಪ್ರಜ್ಞೆ ಇರಬೇಕು

ಇತರ ಪರಿಣಾಮಗಳು[ಬದಲಾಯಿಸಿ]

ಮುದ್ರಣದ ಕೈಗಾರಿಕಾ ಪ್ರಕ್ರಿಯೆಗಳಿಗೆ ಉಗಿ ಶಕ್ತಿಯ ಅಳವಡಿಕೆಯು ಸುದ್ದಿಪತ್ರಿಕೆ ಮತ್ತು ಜನಪ್ರಿಯ ಪುಸ್ತಕ ಪ್ರಕಟಣೆಯ ಭಾರೀ ವಿಸ್ತರಣೆಗೆ ಬೆಂಬಲ ನೀಡಿತು. ಇದು ವೃದ್ಧಿಸುತ್ತಿರುವ ಸಾಕ್ಷರತೆ ಮತ್ತು ಸಾಮ‌ೂಹಿಕ ರಾಜಕೀಯ ಭಾಗವಹಿಸುವಿಕೆ ಬೇಡಿಕೆಗಳನ್ನು ಬಲಪಡಿಸಿತು.

ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಮಕ್ಕಳ ಜೀವಿತಾವಧಿ ನಿರೀಕ್ಷೆ ಗಮನಾರ್ಹವಾಗಿ ಏರಿಕೆಯಾಯಿತು. ಲಂಡನ್‌ನಲ್ಲಿ ಹುಟ್ಟಿದ,ಐದು ವರ್ಷ ಪೂರೈಸುವುದಕ್ಕೆ ಮುಂಚಿತವಾಗಿ ಅಸುನೀಗಿದ ಮಕ್ಕಳ ಶೇಕಡಾವಾರು ಪ್ರಮಾಣವು ೧೭೩೦-೧೭೪೯ರಲ್ಲಿ ೭೪.೫%ರಿಂದ ೧೮೧೦-೧೮೨೯ರಲ್ಲಿ ೩೧.೮%ಗೆ ಕುಸಿಯಿತು.[೪೩] ಕಾರ್ಮಿಕರ ವೇತನಗಳಲ್ಲಿ ೧೮೧೩-೧೯೧೩ರ ಅವಧಿಯ ಸಂದರ್ಭದಲ್ಲಿ ಗಮನಾರ್ಹ ಏರಿಕೆ ಕೂಡ ಆಗಿತ್ತು.[೫೦][೫೧][೫೨]

ಫೇಟಲ್ ಶೋರ್‌ ನಲ್ಲಿ ರಾಬರ್ಟ್ ಹಗೆಸ್ ಪ್ರಕಾರ,೧೭೦೦ ಮತ್ತು ೧೭೪೦ರ ನಡುವೆ ೬ ದಶಲಕ್ಷದಲ್ಲಿ ಸ್ಥಿರವಾಗಿ ಉಳಿದಿದ್ದ ಇಂಗ್ಲೆಂಡ್ ಜನಸಂಖ್ಯೆ ಮತ್ತು ವೇಲ್ಸ್ ಜನಸಂಖ್ಯೆಯು ೧೭೪೦ರ ಬಳಿಕ ಗಮನಾರ್ಹವಾಗಿ ವೃದ್ಧಿಸಿತು. ಇಂಗ್ಲೆಂಡ್ ಜನಸಂಖ್ಯೆ ೧೮೦೧ರಲ್ಲಿ ೮.೩ ದಶಲಕ್ಷದಿಂದ ೧೮೫೧ರಲ್ಲಿ ೧೬.೮ ದಶಲಕ್ಷದವರೆಗೆ ಎರಡುಪಟ್ಟಿಗಿಂತ ಹೆಚ್ಚಾಯಿತು ಮತ್ತು ೧೯೦೧ರಲ್ಲಿ ಪುನಃ ೩೦.೫ ದಶಲಕ್ಷಕ್ಕೆ ಎರಡು ಪಟ್ಟು ಏರಿಕೆಯ ಸಮೀಪವಿತ್ತು.[೫೩] ಜೀವನದ ಸ್ಥಿತಿಗತಿಗಳು ಮತ್ತು ಆರೋಗ್ಯಸೇವೆ ೧೯ನೇ ಶತಮಾನದಲ್ಲಿ ಸುಧಾರಣೆಯಾಗಿ,ಬ್ರಿಟನ್ ಜನಸಂಖ್ಯೆಯು ಪ್ರತಿ ೫೦ ವರ್ಷಗಳಿಗೊಮ್ಮೆ ಎರಡು ಪಟ್ಟು ಏರಿಕೆಯಾಯಿತು.[೫೪][೫೫] ಯುರೋಪ್ ಜನಸಂಖ್ಯೆಯು ೧೮ನೇ ಶತಮಾನದಲ್ಲಿ ಸುಮಾರು ೧೦೦ ದಶಲಕ್ಷದಿಂದ ೨೦೦ ದಶಲಕ್ಷಕ್ಕೆ ಎರಡು ಪಟ್ಟು ಏರಿಕೆಯಾಯಿತು ಮತ್ತು ೧೯ನೇ ಶತಮಾನದಲ್ಲಿ ಪುನಃ ಎರಡು ಪಟ್ಟು ಏರಿಕೆಯಾಗಿ ೪೦೦ ದಶಲಕ್ಷಕ್ಕೆ ಮುಟ್ಟಿತು.[೫೬]

ಆಧುನಿಕ ಕೈಗಾರಿಕೆಯು ೧೮ನೇ ಶತಮಾನದ ಕೊನೆಯಿಂದ ಬೆಳವಣಿಗೆ ಸಾಧಿಸಿದ್ದು, ಮೊದಲಿಗೆ ಯುರೋಪ್‌ನಲ್ಲಿ, ನಂತರ ಇತರೆ ಪ್ರದೇಶಗಳಲ್ಲಿ ವ್ಯಾಪಕ ನಗರೀಕರಣಕ್ಕೆ ಮತ್ತು ಹೊಸ ಮಹಾ ನಗರಗಳ ಹುಟ್ಟಿಗೆ ದಾರಿಕಲ್ಪಿಸಿತು. ಹೊಸ ಅವಕಾಶಗಳು ಗ್ರಾಮೀಣ ಸಮುದಾಯಗಳಿಂದ ನಗರ ಪ್ರದೇಶಗಳಿಗೆ ಅಸಂಖ್ಯಾತ ಸಂಖ್ಯೆಯ ವಲಸೆಗಾರರು ಬರುವಂತಾಯಿತು. ವಿಶ್ವದ ಜನಸಂಖ್ಯೆಯಲ್ಲಿ ಕೇವಲ ೩% ೧೮೦೦ರಲ್ಲಿ ನಗರಗಳಲ್ಲಿ ವಾಸಿಸಿದ್ದರು.[೫೭] ಈ ಅಂಕಿಅಂಶವು ೨೧ನೇ ಶತಮಾನದ ಆರಂಭದಲ್ಲಿ ಸುಮಾರು ೫೦%ಗೆ ಏರಿಕೆಯಾಯಿತು.[೫೮] ಮ್ಯಾಂಚೆಸ್ಟರ್ ೧೭೧೭ರಲ್ಲಿ ಕೇವಲ ೧೦,೦೦೦ ಜನಸಂಖ್ಯೆಯ ಮಾರುಕಟ್ಟೆ ಪಟ್ಟಣವಾಗಿತ್ತು. ಆದರೆ ೧೯೧೧ರಲ್ಲಿ ಅದರ ಜನಸಂಖ್ಯೆಯು ೨.೩ ದಶಲಕ್ಷವನ್ನು ಮುಟ್ಟಿತು.[೫೯]

ನಗರಗಳಲ್ಲಿ ಜನರನ್ನು ಆಹುತಿ ತೆಗೆದುಕೊಳ್ಳುತ್ತಿದ್ದ ಮಹಾನ್ ಹೆಮ್ಮಾರಿ ಕ್ಷಯ (TB).[೬೦] ೧೯ನೇ ಶತಮಾನದ ಅಂತ್ಯದಲ್ಲಿ ಯುರೋಪ್ ಮತ್ತು ನಾರ್ತ್ ಅಮೆರಿಕದ,೭೦ರಿಂದ ೯೦% ನಗರ ಜನಸಂಖ್ಯೆಗಳು M. tuberculosis ನಿಂದ ಪೀಡಿತವಾಯಿತು ಮತ್ತು ನಗರಗಳಲ್ಲಿ ೪೦% ದುಡಿಯುವ ವರ್ಗದ ಸಾವುಗಳು TBಯಿಂದ ಸಂಭವಿಸಿತು.[೬೧]

ಕಾಂಟಿನೆಂಟಲ್ ಯುರೋಪ್‌[ಬದಲಾಯಿಸಿ]

ಕಾಂಟಿನೆಂಟಲ್ ಯುರೋಪ್‌ನಲ್ಲಿ ಕೈಗಾರಿಕಾ ಕ್ರಾಂತಿಯು ಗ್ರೇಟ್ ಬ್ರಿಟನ್‌ಗೆ ಸ್ವಲ್ಪ ನಂತರ ಹುಟ್ಟಿಕೊಂಡಿತು. ಅನೇಕ ಕೈಗಾರಿಕೆಗಳಲ್ಲಿ,ಬ್ರಿಟನ್ ಹೊಸ ಸ್ಥಳಗಳಲ್ಲಿ ಅಭಿವೃದ್ಧಿಯಾದ ತಂತ್ರಜ್ಞಾನದ ಅಳವಡಿಕೆಯು ಇದರಲ್ಲಿ ಸೇರಿದೆ. ಆಗಾಗ್ಗೆ, ಬ್ರಿಟನ್ ಅಥವಾ ಬ್ರಿಟಿಷ್ ಎಂಜಿನಿಯರುಗಳಿಂದ ತಂತ್ರಜ್ಞಾನವನ್ನು ಖರೀದಿಸಲಾಯಿತು ಮತ್ತು ಉದ್ಯಮಿಗಳು ಹೊಸ ಅವಕಾಶಗಳನ್ನು ಅರಸಿಕೊಂಡು ವಿದೇಶಗಳಿಗೆ ತೆರಳಿದರು. ಇಂಗ್ಲೆಂಡ್ ವೆಸ್ಟ್‌ಫಾಲಿಯದ ರಹರ್ ಕಣಿವೆಯ ಭಾಗವನ್ನು ೧೮೦೯ರಲ್ಲಿ 'ಮಿನಿಯೇಚರ್ ಇಂಗ್ಲೆಂಡ್' ಎಂದು ಕರೆಯಲಾಯಿತು. ಇಂಗ್ಲೆಂಡ್ ಕೈಗಾರಿಕಾ ಪ್ರದೇಶಗಳಿಗೆ ಸಾಮ್ಯತೆಗಳನ್ನು ಹೊಂದಿದ್ದರಿಂದ ಹೀಗೆ ಕರೆಯಲಾಯಿತು. ಜರ್ಮನ್, ರಷ್ಯಾ ಮತ್ತು ಬೆಲ್ಜಿಯನ್ ಸರ್ಕಾರಗಳು ಹೊಸ ಕೈಗಾರಿಕೆಗಳಿಗೆ ಆರ್ಥಿಕ ನೆರವು ಒದಗಿಸಿದವು. ಕೆಲವು ಪ್ರಕರಣಗಳಲ್ಲಿ(ಕಬ್ಬಿಣ ಮುಂತಾದ) ಸ್ಥಳೀಯವಾಗಿ ವಿವಿಧ ಸಂಪನ್ಮೂಲಗಳ ಲಭ್ಯತೆಯಿಂದ ಬ್ರಿಟಿಷ್ ತಂತ್ರಜ್ಞಾನದ ಕೆಲವು ಅಂಶಗಳನ್ನು ಅಳವಡಿಸಲಾಯಿತೆಂದು ಅರ್ಥ ಕಲ್ಪಿಸಲಾಯಿತು.

ವಾಲ್ಲೋನಿಯ, ಬೆಲ್ಜಿಯಂ[ಬದಲಾಯಿಸಿ]

ಹಳೆಯ ಕೆನಾಲ್ ಡು ಕೇಂದ್ರದಲ್ಲಿ ದೋಣಿ ಮೇಲೆತ್ತುವ ಯಂತ್ರ.ಸುಮಾರು 1900 ವಿಶ್ವ ಪರಂಪರೆ ಸ್ಥಳದ ಕೇಂದ್ರ
ಬೋಯಿಸ್-ಡು-ಸಕ್ (1838-1853) La Louvièreನಲ್ಲಿ ಕಾರ್ಮಿಕರ ವಸತಿಗೃಹ

ಕಲ್ಲಿದ್ದಲು ಮತ್ತು ಉಕ್ಕಿಗೆ ಹೆಸರುವಾಸಿಯಾದ ವಾಲ್ಲೋನಿಯ ಮಧ್ಯಕಾಲೀನ ಯುಗದಿಂದ ದೃಢವಾದ ಕೈಗಾರಿಕಾ ಬೆಳವಣಿಗೆಯನ್ನು ಅನುಭವಿಸಿದೆ. ಅನೇಕ ವರ್ಷಗಳವರೆಗೆ,ಈ ಪ್ರದೇಶದ ಆರ್ಥಿಕತೆಗೆ ಭಾರೀ ಕೈಗಾರಿಕೆಯು ಪ್ರೇರಕ ಶಕ್ತಿಯಾಗಿತ್ತು. ವ್ಯಾಲ್ಲೋನಿಯ ಯುರೋಪ್ ಖಂಡದಲ್ಲಿ ಕೈಗಾರಿಕಾ ಕ್ರಾಂತಿಯ ಹುಟ್ಟಿನ ಸ್ಥಳವಾಗಿದೆ:

ಭೂಖಂಡದಲ್ಲಿ ರೈಲ್ವೆ ನಿರ್ಮಾಣಕ್ಕೆ ಮುಂಚೆ ಮುಖ್ಯವಾಗಿ ರೈಲುಮಾರ್ಗಗಳಿಗೆ ಆಕಾರಕ್ಕೆ ತರಬಹುದಾದ ಕಬ್ಬಿಣದ ಭಾರೀ ಪ್ರಮಾಣಗಳ ಬೇಡಿಕೆಯಿತ್ತು. ಅವಕ್ಕೆ ಕಡಿಮೆ ಗುಣಮಟ್ಟದ ಕಬ್ಬಿಣ ಸಾಕಾಗಿತ್ತು.ವಾಲ್ಲೋನಿಯ ಬ್ರಿಟಿಷ್ ಮಾದರಿಯನ್ನು ಯಶಸ್ವಿಯಾಗಿ ಅನುಸರಿಸಿದ ಏಕೈಕ ಭೂಖಂಡ ಪ್ರದೇಶವಾಗಿದೆ. ೧೮೨೦ರ ಮಧ್ಯಾವಧಿಯಿಂದ ಕೋಕ್ ಊದು ಕುಲುಮೆಗಳನ್ನು ಒಳಗೊಂಡ ಅಸಂಖ್ಯಾತ ಕೆಲಸಗಳು ಮತ್ತು ಲೀಗ್ ಮತ್ತು ಚಾರ್ಲೆರಾಯ್ ಸುತ್ತಮುತ್ತ ಕಲ್ಲಿದ್ದಲು ಗಣಿ ಪ್ರದೇಶಗಳಲ್ಲಿ ಕರಗಿದ ಕಬ್ಬಿಣ ಕಲಕುವ ಮತ್ತು ರಾಲಿಂಗ್ ಗಿರಣಿಗಳನ್ನು ಸ್ಥಾಪಿಸಲಾಯಿತು. ಎಲ್ಲಕ್ಕಿಂತ ಶ್ರೇಷ್ಠವೆನಿಸಿದ ಸೆರೈಂಗ್ ಜಾನ್ ಕಾಕೆರಿಲ್ ಕಾರ್ಖಾನೆಗಳು, ೧೮೨೫ರ ಆರಂಭದಲ್ಲೇ ಎಂಜಿನಿಯರಿಂಗ್‌ನಿಂದ ಹಿಡಿದು ಕಚ್ಚಾಸಾಮಗ್ರಿಗಳ ಪೂರೈಕೆಯವರೆಗೆ ಉತ್ಪಾದನೆಯ ಎಲ್ಲ ಹಂತಗಳನ್ನು ಸಂಯೋಜಿಸಿತು.[೬೨]

ಕೈಗಾರಿಕಾ ವಿಸ್ತರಣೆಯ ಮ‌ೂಲಭೂತ ವಿಕಸನಕ್ಕೆ ವಾಲ್ಲೋನಿಯ ಉದಾಹರಣೆಯಾಗಿ ಪರಿಗಣಿತವಾಯಿತು. ವಾಲ್ಲೋನಿಯದಲ್ಲಿ ಸಿಕ್ಕ ಕಲ್ಲಿದ್ದಲಿಗೆ ಅಭಿನಂದನೆಗಳು(ಫ್ರೆಂಚ್ ಪದ "ಹೊಯಿಲ್ಲೆ" ವಾಲ್ಲೋನಿಯದಲ್ಲಿ ಹುಟ್ಟಿತು)[೬೩] ಈ ಪ್ರದೇಶವು ಇಂಗ್ಲೆಂಡ್ ನಂತರ ವಿಶ್ವದ ಎರಡನೇ ಕೈಗಾರಿಕಾ ಶಕ್ತಿಯಾಗಿ ಬೆಳೆಯಿತು. ಸಿಲ್ಲಾನ್ ಇಂಡಸ್ಟ್ರಿಯಲ್ ‌(ಕೈಗಾರಿಕಾ ಪ್ರದೇಶ)ನೊಂದಿಗೆ ವಿಶೇಷವಾಗಿ ಹೈನ್, ಸಾಂಬ್ರೆ ಮತ್ತು ಮ್ಯೂಸ್ ಕಣಿವೆಗಳಲ್ಲಿ ಬೋರಿನೇಜ್ ಮತ್ತು ಲೀಗ್ ನಡುವೆ ಕಲ್ಲಿದ್ದಲು ಆಧಾರಿತ ಗಣಿಗಾರಿಕೆ ಮತ್ತು ಕಬ್ಬಿಣ ಉತ್ಪಾದನೆಯ ಅಪಾರ ಕೈಗಾರಿಕಾ ಅಭಿವೃದ್ಧಿ ಸಂಭವಿಸಿದೆಯೆಂದು ಅನೇಕ ಸಂಶೋಧಕರು ಗಮನಸೆಳೆದಿದ್ದಾರೆ.[೬೪]. "ವಾಲ್ಲೂನ್ ಪ್ರದೇಶಗಳು ಇಂಗ್ಲೆಂಡ್ ನಂತರ ವಿಶ್ವದಲ್ಲೇ ಎರಡನೇ ಕೈಗಾರಿಕಾ ಶಕ್ತಿಯೆಂಬುದು ಪ್ರಚಾರವಲ್ಲ, ವಾಸ್ತವಿಕ ಅಂಶ "ಎಂದು ಫಿಲಿಪ್ ರಾಕ್ಸಾನ್ ೧೮೩೦ರ ನಂತರದ ಅವಧಿಯ ಬಗ್ಗೆ ಬರೆದಿದ್ದಾರೆ.[೬೫] "ವಾಲ್ಲೂನ್‌ನ ಕಬ್ಬಿಣದ ಅದಿರು ಮತ್ತು ಊದು ಕುಲುಮೆಗಳ ಹೊರಗಿನ ಏಕೈಕ ಕೈಗಾರಿಕೆ ಕೇಂದ್ರವು ಹಳೆಯ ಉಡುಪು ತಯಾರಿಸುವ ಪಟ್ಟಣ ಘೆಂಟ್".[೬೬] Université de Liègeಪ್ರಾಧ್ಯಾಪಕ ಮೈಕೆಲ್ ಡಿ ಕಾಸ್ಟರ್ ಕೂಡ ಹೀಗೆ ಬರೆದಿದ್ದಾರೆ:"ಬೆಲ್ಜಿಯಂ ತನ್ನ ಜನಸಂಖ್ಯೆ ಮತ್ತು ಪ್ರದೇಶಾವಾರು ಪ್ರಮಾಣಕ್ಕೆ ಅನುಗುಣವಾಗಿ ವಿಶ್ವದಲ್ಲೇ ಎರಡನೇ ಕೈಗಾರಿಕಾ ಪ್ರದೇಶವಾಗಿದೆಯೆಂದು ಇತಿಹಾಸಕಾರರು ಮತ್ತು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ(...)

ಕಲ್ಲಿದ್ದಲು-ಗಣಿಗಳು,ಊದು ಕುಲುಮೆಗಳು,ಕಬ್ಬಿಣ ಮತ್ತು ಸತು ಕಾರ್ಖಾನೆಗಳು, ಉಣ್ಣೆ ತಯಾರಿಕೆ ಕಾರ್ಖಾನೆಗಳು,ಗಾಜು ಕೈಗಾರಿಕೆ,ಶಸ್ತ್ರಾಸ್ತ್ರ ಕೈಗಾರಿಕೆ ಕೇಂದ್ರೀಕೃತವಾದ ವಾಲ್ಲೋನಿಯದಿಂದ ಈ ದರ್ಜೆ ಸಿಕ್ಕಿದೆ.[೬೭]

ಜನಸಂಖ್ಯೆ ಪರಿಣಾಮಗಳು[ಬದಲಾಯಿಸಿ]

ವಾಲ್ಲೋನಿಯದ ಸಿಲ್ಲೋನ್ ಇಂಡಸ್ಟ್ರಿಯಲ್, ಉತ್ತರದಲ್ಲಿರುವ ನೀಲಿ ಕಲೆಯಲ್ಲ.
ಕ್ರಾಚೆಟ್ ಇನ್ ಫ್ರೇಮರೀಸ್‌ನ ಗಾಲೋ ಫ್ರೇಮ್(ಸುರುಳಿ ಗೋಪುರ) IN ವಾಲ್ಲೋನಿಯದ ಫ್ರೆಂಚ್ Châssis à molettes ಅಥವಾ ಬೆಲ್‌ಫ್ಲೂರ್(ಫ್ರೆಂಚ್ ಚೆವಾಲೆಮೆಂಟ್
ಲೀಗ್ಸ್ ವಿಶ್ವ ಮೇಳದ 1905ರ ಅಧಿಕೃತ ಪೋಸ್ಟರ್

ನಿರ್ದಿಷ್ಟ ಸಮಾಜವಾದಿ ಭೂಚಿತ್ರಣದಲ್ಲಿ ವಾಲ್ಲೋನಿಯ ದೃಢ ಸಮಾಜವಾದಿ ಪಕ್ಷ ಮತ್ತು ದೃಢ ಕಾರ್ಮಿಕ ಸಂಘಗಳ ಜನ್ಮಸ್ಥಳವಾಗಿತ್ತು. ಎಡಭಾಗದಲ್ಲಿ, ಸಿಲ್ಲಾನ್ ಇಂಡಸ್ಟ್ರಿಯಲ್ ,ಪಶ್ಚಿಮದಲ್ಲಿ ಮಾನ್ಸ್‌ನಿಂದ ಪೂರ್ವದಲ್ಲಿ ವರ್ವಿಯರ್ಸ್‌ವರೆಗೆ(ನಾರ್ತ್ ಫ್ಲಾಂಡರ್ಸ್ ಭಾಗವನ್ನು ಹೊರತುಪಡಿಸಿ, ಕೈಗಾರಿಕಾ ಕ್ರಾಂತಿಯ ಇನ್ನೊಂದು ಅವಧಿ, ೧೯೨೦ರ ನಂತರ) ಹರಡಿಕೊಂಡಿತ್ತು. ವಾಲ್ಲೋನಿಯ ಇಂಗ್ಲೆಂಡ್ ನಂತರ ಎರಡನೇ ಕೈಗಾರಿಕಾ ರಾಷ್ಟ್ರವಾಗಿದ್ದರೂ, ಅಲ್ಲಿ ಕೈಗಾರಿಕಾ ಕ್ರಾಂತಿಯಿಂದ ಉಂಟಾದ ಪರಿಣಾಮಗಳು ತೀರಾ ಭಿನ್ನವಾಗಿದೆ. 'ಬ್ರೇಕಿಂಗ್ ಸ್ಟೀರಿಯೊಟೈಪ್ಸ್‌'ನಲ್ಲಿ ಮುರಿಯಲ್ ಬೆವೆನ್ ಮತ್ತು ಇಸಾಬೆಲ್ಲೆ ಡೆವೊಸ್ ಹೇಳಿದ್ದಾರೆ:

ಕೈಗಾರಿಕಾ ಕ್ರಾಂತಿಯು ಮುಖ್ಯವಾಗಿ ಗ್ರಾಮೀಣ ಸಮಾಜವನ್ನು ನಗರಸಮಾಜವಾಗಿ ಪರಿವರ್ತಿಸಿತು. ಆದರೆ ಉತ್ತರ ಮತ್ತು ದಕ್ಷಿಣ ಬೆಲ್ಜಿಯಂ ನಡುವೆ ಗಾಢವಾದ ವ್ಯತ್ಯಾಸವಿತ್ತು. ಮಧ್ಯಕಾಲೀನ ಯುಗ ಮತ್ತು ಪೂರ್ವ ಆಧುನಿಕ ಅವಧಿಯಲ್ಲಿ ದೊಡ್ಡ ನಗರ ಕೇಂದ್ರಗಳ ಲಕ್ಷಣಗಳಿಂದ ಫ್ಲಾಂಡರ್ಸ್ ಕೂಡಿತ್ತು(...)ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ, ಈ ಪ್ರದೇಶವು(ಫ್ಲಾಂಡರ್ಸ್)ಶೇಕಡ ೩೦ಕ್ಕಿಂತ ಹೆಚ್ಚು ಪ್ರಮಾಣದ ನಗರೀಕರಣದಿಂದಾಗಿ,ವಿಶ್ವದಲ್ಲೇ ಅತ್ಯಂತ ನಗರೀಕೃತ ಪ್ರದೇಶಗಳಲ್ಲಿ ಒಂದಾಗಿ ಉಳಿಯಿತು. ಈ ಪ್ರಮಾಣವನ್ನು ಹೋಲಿಕೆ ಮಾಡಿದರೆ, ವಾಲ್ಲೋನಿಯದಲ್ಲಿ ಕೇವಲ ಶೇಕಡ ೧೭ ಮುಟ್ಟಿದೆ,ಪಶ್ಚಿಮ ಯುರೋಪ್ ರಾಷ್ಟ್ರಗಳಲ್ಲಿ ಕೇವಲ ಶೇಕಡ ೧೦, ಫ್ರಾನ್ಸ್‌ನಲ್ಲಿ ಶೇಕಡ ೧೬ ಮತ್ತು ಇಂಗ್ಲೆಂಡ್‌ನಲ್ಲಿ ಶೇಕಡ ೨೫. ಹತ್ತೊಂಬತ್ತನೆಯ ಶತಮಾನದ ಕೈಗಾರೀಕರಣವು ಸಾಂಪ್ರದಾಯಿಕ ನಗರ ಮೂಲಸೌಲಭ್ಯದ ಮೇಲೆ ಪ್ರಭಾವ ಬೀರಲಿಲ್ಲ, ಘೆಂಟ್ ಹೊರತುಪಡಿಸಿ.(...) ವಾಲ್ಲೋನಿಯದಲ್ಲಿ ಕೂಡ ಕೈಗಾರೀಕರಣ ಪ್ರಕ್ರಿಯೆಯಿಂದ ಸಾಂಪ್ರದಾಯಿಕ ನಗರ ಜಾಲವು ಬಹುತೇಕ ಪ್ರಭಾವರಹಿತವಾಗಿತ್ತು. ಆದರೂ,ನಗರವಾಸಿಗಳ ಪ್ರಮಾಣವು ೧೮೩೧ ಮತ್ತು ೧೯೧೦ರ ನಡುವೆ ಶೇಕಡ ೧೭ರಿಂದ ೪೫ಕ್ಕೆ ಏರಿಕೆಯಾಯಿತು. ವಿಶೇಷವಾಗಿ, ಬೋರಿನೇಜ್ ಮತ್ತು ಲೀಗ್ ನಡುವೆ ಹೈನ್,ಸಾಂಬ್ರೆ ಮತ್ತು ಮ್ಯೂಸ್ ಕಣಿವೆಗಳಲ್ಲಿ ಕಲ್ಲಿದ್ದಲು-ಗಣಿಗಾರಿಕೆ ಮತ್ತು ಕಲ್ಲಿದ್ದಲು-ನಿರ್ಮಾಣದಿಂದ ಬೃಹತ್ ಕೈಗಾರಿಕಾ ಅಭಿವೃದ್ಧಿಯಾಗಿದ್ದು, ನಗರೀಕರಣ ತೀವ್ರಗತಿಯಲ್ಲಿ ಸಾಗಿತು. ಎಂಭತ್ತು ವರ್ಷಗಳ ಕಾಲಾವಧಿಯಲ್ಲಿ,ಸುಮಾರು ೫,೦೦೦ ಜನರಿದ್ದ ಪುರಸಭೆಗಳ ಸಂಖ್ಯೆ ಕೇವಲ ೨೧ರಿಂದ ಒಂದು ನೂರಕ್ಕಿಂತ ಹೆಚ್ಚಾಯಿತು. ವಾಲ್ಲೂನ್ ಜನಸಂಖ್ಯೆ ಸುಮಾರು ಅರ್ಧದಷ್ಟು ಜನಸಂಖ್ಯೆ ಇಲ್ಲಿ ಕೇಂದ್ರೀಕೃತವಾಗಿತ್ತು. ಆದರೂ,ಕೈಗಾರೀಕರಣವು ಸ್ವಲ್ಪ ಸಾಂಪ್ರದಾಯಿಕವಾಗಿ ಉಳಿಯಿತು.ಅಂದರೆ ಆಧುನಿಕ ಮತ್ತು ದೊಡ್ಡ ನಗರ ಕೇಂದ್ರಗಳ ಬೆಳವಣಿಗೆಗೆ ಅದು ದಾರಿ ಕಲ್ಪಿಸಲಿಲ್ಲ. ಆದರೆ ಕಲ್ಲಿದ್ದಲು-ಗಣಿ ಮತ್ತು ಕಾರ್ಖಾನೆಯ ಸುತ್ತ ಕೈಗಾರಿಕಾ ಗ್ರಾಮಗಳು ಮತ್ತು ನಗರಗಳ ಸಮ‌ೂಹ ಬೆಳೆಯಿತು. ಈ ಸಣ್ಣ ಕೇಂದ್ರಗಳ ನಡುವೆ ಇರುವ ಸಂಪರ್ಕ ಮಾರ್ಗಗಳು ನಂತರ ಜನಸಾಂದ್ರತೆಯಿಂದ ಕೂಡಿದರೂ, ಉದಾಹರಣೆಗೆ, ಲೈಗ್ ಸುತ್ತಮುತ್ತಲಿನ ಪ್ರದೇಶಕ್ಕಿಂತ, ದಟ್ಟವಾದ ನಗರ ಸ್ವರೂಪವನ್ನು ಅಷ್ಟಾಗಿ ಹೊಂದಲಿಲ್ಲ. ಲೈಗ್‌‌ನ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಹಳೆಯ ಪಟ್ಟಣಕ್ಕೆ ನೇರ ವಲಸೆಗಾರರ ಹರಿವು ಉಂಟಾಗಿತ್ತು.[೬೮]

ರಾಜಕೀಯ ಮತ್ತು ಸಾಮಾಜಿಕ ಪರಿಣಾಮಗಳು[ಬದಲಾಯಿಸಿ]

ವಾಲ್ಲೋನಿಯ ಸಾರ್ವತ್ರಿಕ ಮುಷ್ಕರದ ಪ್ರದೇಶವಾಯಿತು. ಸಾರ್ವತ್ರಿಕ ಮುಷ್ಕರವು "ಪ್ರದೇಶ ಅಥವಾ ರಾಷ್ಟ್ರದ ಎಲ್ಲ ಕೈಗಾರಿಕೆಗಳಿಗೆ ಸೇರಿದ ಬಹುತೇಕ ಕಾರ್ಮಿಕರು ಕೆಲಸ ಸ್ಥಗಿತಗೊಳಿಸುವುದು. ಈ ಕೆಲಸ ಸ್ಥಗಿತವು ಮಾಲೀಕರಿಗೆ ಕೆಲವು ಆರ್ಥಿಕ ಬೇಡಿಕೆಗಳ ಸರಣಿಗೆ ಒತ್ತಡ ಹೇರಿಕೆ ಅಥವಾ ಕೆಲವು ಕುಂದುಕೊರತೆಗಳ ನಿವಾರಣೆ ಉದ್ದೇಶದಿಂದ ಕೂಡಿದ್ದರೆ ಆರ್ಥಿಕತೆಗೆ ಸಂಬಂಧಿಸಿದೆ. ಆದರೆ,ಸರ್ಕಾರದಿಂದ ಕೆಲವು ರಿಯಾಯಿತಿ ಸೌಲಭ್ಯಗಳನ್ನು ಕಿತ್ತುಕೊಳ್ಳುವ ಉದ್ದೇಶದಿಂದ ಅಥವಾ ಪ್ರಸಕ್ತ ಸರ್ಕಾರವನ್ನು ಉರುಳಿಸುವ ಗುರಿ ಹೊಂದಿದ್ದರೆ ಇದನ್ನು ರಾಜಕೀಯವೆನ್ನಲಾಗುತ್ತದೆ. ರಾಜಕೀಯ ಮುಷ್ಕರಕ್ಕೆ ಕಾರ್ಮಿಕ ಒಕ್ಕೂಟದ ಸದಸ್ಯರು ಕರೆ ಮಾಡುತ್ತಿದ್ದರು ಮತ್ತು ಕೆಲವು ಮಟ್ಟಿಗೆ ಅರಾಜಕತೆ ಚಟುವಟಿಕೆಗಳಿಂದ ರಾಜಕೀಯ ಮುಷ್ಕರ ನಡೆಯುತ್ತಿತ್ತು.[೬೯] ವಾಲ್ಲೊನಿಯದಲ್ಲಿ ಸಾರ್ವತ್ರಿಕ ಮುಷ್ಕರ ೧೮೮೫ರಲ್ಲಿ ಸಂಭವಿಸಿತು(ಕಮ್ಯೂನ್ ಡೆ ಪ್ಯಾರಿಸ್ ಆಚರಣೆಗೆ ಈ ಮುಷ್ಕರ ಆರಂಭವಾಯಿತು)೧೯೦೨,೧೯೧೩(ಸಾರ್ವತ್ರಿಕ ಮತದಾನದ ಹಕ್ಕು ಗೆಲ್ಲುವುದಕ್ಕಾಗಿ,೧೯೩೨,೧೯೩೬(ರಜಾದಿನಗಳಲ್ಲಿ ಸಂಬಳ ಪಾವತಿಗೆ),೧೯೫೦(ಲಿಯೋಪಾಲ್ಡ್ III ವಿರುದ್ಧ),೧೯೬೦-೧೯೬೧ರ ಚಳಿಗಾಲದಲ್ಲಿ ವಾಲ್ಲೂನ್ ಆರ್ಥಿಕ ಕುಸಿತ ಸ್ಪಷ್ಟವಾದಾಗ ಅಥವಾ ಕೆಲವು ಸಮಾಜವಾದಿ ಕಾರ್ಮಿಕ ಸಂಘಗಳ ನಾಯಕರಿಗೆ ಬೆಲ್ಜಿಯನ್ ಸರ್ಕಾರ ವಾಲ್ಲೊನಿಯದ ಆರ್ಥಿಕ ಚೇತರಿಕೆಗೆ ಏನನ್ನೂ ಮಾಡುವುದಿಲ್ಲವೆಂದು ಸ್ಪಷ್ಟವೆನಿಸಿದಾಗ(ಸ್ಪಷ್ಟವೆಂಬಂತೆ ಕಂಡಾಗ), ವಾಲ್ಲೋನಿಯಗೆ ಸ್ವಾಯತ್ತತೆ ದೊರಕಿಸುವುದಕ್ಕಾಗಿ ಮುಷ್ಕರ ನಡೆಯಿತು.

ಫ್ರಾನ್ಸ್‌‌[ಬದಲಾಯಿಸಿ]

ಕಮ್ಯುನ್ ಡಿ ಪ್ಯಾರಿಸ್ ತಡೆಗಟ್ಟು, ಮಾರ್ಚ್ 18, 1871ರಲ್ಲಿ ಸಾರ್ವತ್ರಿಕ ಮುಷ್ಕರದ ಮೆರವಣಿಗೆ ಮ‌ೂಲಕ ಮಾರ್ಚ್ 1885ರಲ್ಲಿ ವಾಲ್ಲೋನಿಯದಲ್ಲಿ ಆಚರಿಸಲಾಯಿತು.

ಫ್ರಾನ್ಸ್‌ನಲ್ಲಿ ಕೈಗಾರಿಕಾ ಕ್ರಾಂತಿ ನಿರ್ದಿಷ್ಟ ಪ್ರಕ್ರಿಯೆಯಾಗಿದ್ದು,ಇತರೆ ರಾಷ್ಟ್ರಗಳು ಅನುಸರಿಸಿದ ಮುಖ್ಯ ಮಾದರಿಗೆ ಸಾಮ್ಯತೆಯಿರಲಿಲ್ಲ. ಫ್ರಾನ್ಸ್ ಕೈಗಾರಿಕಾ ಕ್ರಾಂತಿಯು ಸ್ಪಷ್ಟವಾದ ಜಿಗಿತ ದಲ್ಲಿ ಹಾದುಹೋಗಿಲ್ಲ ಎಂದು ಬಹುತೇಕ ಫ್ರೆಂಚ್ ಇತಿಹಾಸಕಾರರು ಪರಿಗಣಿಸಿದ್ದಾರೆ. ಬದಲಿಗೆ,ಫ್ರಾನ್ಸ್ ಆರ್ಥಿಕ ಬೆಳವಣಿಗೆ ಮತ್ತು ಕೈಗಾರೀಕರಣ ಪ್ರಕ್ರಿಯೆ ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದಲ್ಲಿ ನಿಧಾನ ಮತ್ತು ಸ್ಥಿರವಾಗಿತ್ತು. ಆದಾಗ್ಯೂ, ಮಾರೈಸ್ ಲೆವಿ-ಲೆಬೊಯರ್ ಅವರಿಂದ ಕೆಲವು ಹಂತಗಳನ್ನು ಗುರುತಿಸಲಾಗಿದೆ:

  • ಫ್ರೆಂಚ್ ಕ್ರಾಂತಿ ಮತ್ತು ನೆಪೋಲಿಯೋನಿಕ್ ಯುದ್ಧಗಳು(೧೭೮೯-೧೮೧೫)
  • ಬ್ರಿಟನ್ ಜತೆ ಕೈಗಾರಿಕೀಕರಣ(೧೮೧೫-೧೮೬೦),
  • ಆರ್ಥಿಕತೆ ನಿಧಾನ(೧೮೬೦-೧೯೦೫),
  • ೧೯೦೫ರ ನಂತರ ಬೆಳವಣಿಗೆ ನವೀಕರಣ

ಯುನೈಟೆಡ್ ಸ್ಟೇಟ್ಸ್[ಬದಲಾಯಿಸಿ]

ಸ್ಲೇಟರ್ಸ್ ಗಿರಣಿ

ಯುನೈಟೆಡ್ ಸ್ಟೇಟ್ಸ್ ತನ್ನ ಮುಂಚಿನ ಕಾರ್ಖಾನೆಗಳಲ್ಲಿ ಯಂತ್ರಗಳಿಗೆ ಶಕ್ತಿ ಒದಗಿಸಲು ಅಶ್ವ-ಶಕ್ತಿ ಯಂತ್ರಾಂಗವನ್ನು ಬಳಸಿಕೊಂಡಿತು. ಆದರೆ ತರುವಾಯ ಜಲಶಕ್ತಿಗೆ ಬದಲಿಸಿತು.ಇದರ ಪರಿಣಾಮವಾಗಿ ಕೈಗಾರಿಕೀಕರಣವು ವೇಗವಾಗಿ ಹರಿಯುವ ನದಿಗಳ ಉಪಸ್ಥಿತಿಯಿದ್ದ ನ್ಯೂ ಇಂಗ್ಲೆಂಡ್ ಮತ್ತು ಈಶಾನ್ಯ ಯುನೈಟೆಡ್ ಸ್ಟೇಟ್ಸ್ ಉಳಿದ ಭಾಗಗಳಿಗೆ ಮಾತ್ರ ಸೀಮಿತವಾಗಿತ್ತು. ಅಶ್ವಗಳಿಂದ ಎಳೆಯುವ ಉತ್ಪಾದನೆಯು ಹೊಸ ಜಲ-ಶಕ್ತಿ ಚಾಲಿತ ಉತ್ಪಾದನೆ ಮಾದರಿಗಳಿಗಿಂತ ಹೆಚ್ಚು ಆರ್ಥಿಕವಾಗಿ ಸವಾಲಿನದು ಮತ್ತು ಕಷ್ಟದ ಪರ್ಯಾಯವೆಂದು ರುಜುವಾತಾಯಿತು. ಆದಾಗ್ಯೂ,ಕಚ್ಚಾ ಸಾಮಗ್ರಿಗಳು(ಹತ್ತಿ)ದಕ್ಷಿಣ ಯುನೈಟೆಡ್ ಸ್ಟೇಟ್ಸ್‌ನಿಂದ ಬಂದಿತ್ತು. ಆಂತರಿಕ ಯುದ್ಧ ೧೮೬೦ರ ದಶಕದಲ್ಲಿ ಸಂಭವಿಸಿದ ನಂತರವೇ ಉಗಿ-ಶಕ್ತಿ ಚಾಲಿತ ಉತ್ಪಾದನೆಯು ಜಲಶಕ್ತಿ ಚಾಲಿತ ಉತ್ಪಾದನೆಯನ್ನು ಮೀರಿಸಿ ರಾಷ್ಟ್ರಾದ್ಯಂತ ಕೈಗಾರಿಕೆಯು ಪೂರ್ಣವಾಗಿ ಹರಡಲು ಅವಕಾಶ ಕಲ್ಪಿಸಿತು.

ಸಾಮ್ಯುಯಲ್ ಸ್ಲೇಟರ್(೧೭೬೮-೧೮೩೫)ಅವರು ಅಮೆರಿಕ ಹತ್ತಿ ಕೈಗಾರಿಕೆಯ ಸಂಸ್ಥಾಪಕರು ಎಂದು ಜನಪ್ರಿಯತೆ ಗಳಿಸಿದ್ದರು. ಇಂಗ್ಲೆಂಡ್‌ನ ಡರ್ಬಿಷೈರ್‌ನಲ್ಲಿ ಬಾಲಕನಾಗಿ ಅಪ್ರೆಂಟಿಸ್ ತರಬೇತಿ ಪಡೆದ ಅವರು,ವಸ್ತ್ರೋದ್ಯಮದಲ್ಲಿ ಹೊಸ ತಂತ್ರಗಳನ್ನು ಕಲಿತರು ಮತ್ತು ನುರಿತ ಕಾರ್ಮಿಕರು ವಲಸೆ ಹೋಗುವುದನ್ನು ನಿಷೇಧಿಸುವ ಕಾನೂನನ್ನು ಉಲ್ಲಂಘಿಸಿ,ತಮಗೆ ತಿಳಿದಿರುವ ಜ್ಞಾನದಿಂದ ಹಣ ಮಾಡುವ ಆಶಯದೊಂದಿಗೆ ೧೭೮೯ರಲ್ಲಿ ನ್ಯೂಯಾರ್ಕ್‌ಗೆ ತೆರಳಿದರು. ಕ್ಯಾಬಾಟ್ ಬ್ರದರ್ಸ್ ಮತ್ತು ಹೂಡಿಕೆದಾರರ ನಡುವೆ ಸ್ಲೇಟರ್, ಬೆವರ್ಲಿ ಮಸಾಚುಸೆಟ್ಸ್‌ನಲ್ಲಿ ಬೆವರ್ಲಿ ಕಾಟನ್ ಮ್ಯಾನುಫ್ಯಾಕ್ಟರಿ ಆರಂಭಿಸಿದರು. ಇದು ಅಮೆರಿಕದ ಪ್ರಥಮ ಹತ್ತಿ ಗಿರಣಿಯಾಗಿತ್ತು. ಅಶ್ವ-ಶಕ್ತಿ ಉತ್ಪಾದನೆಯನ್ನು ಬಳಸಿಕೊಳ್ಳಲು ಈ ಹತ್ತಿಗಿರಣಿಯನ್ನು ವಿನ್ಯಾಸಗೊಳಿಸಲಾಗಿತ್ತು. ತಮ್ಮ ಅಶ್ವಚಾಲಿತ ಗಿರಣಿಯ ಆರ್ಥಿಕ ಸ್ಥಿರತೆ ಅಸ್ಥಿರತೆಯಿಂದ ಕೂಡಿದ್ದೆಂದು ಗಿರಣಿ ನಿರ್ವಾಹಕರು ತಕ್ಷಣವೇ ಅರಿತರು ಮತ್ತು ಅದನ್ನು ನಿರ್ಮಿಸಿದ ನಂತರ ಅನೇಕ ವರ್ಷಗಳವರೆಗೆ ವಿತ್ತೀಯ ಸಮಸ್ಯೆಗಳನ್ನು ಎದುರಿಸಿತು. ದೊಡ್ಡ ಪ್ರಮಾಣದ ಹತ್ತಿಯನ್ನು ಉತ್ಪಾದನೆಗೆ ಬಳಸುವಲ್ಲಿ ಮತ್ತು ೧೭೯೩ರಲ್ಲಿ ಸ್ಲೇಟರ್ ಎರಡನೇ ಗಿರಣಿಯಲ್ಲಿ(ಪಾವ್‌ಟಕೆಟ್‌, ರೋಡ್ ಐಲೆಂಡ್‌‌ನಲ್ಲಿರುವ ಸ್ಲೇಟರ್ಸ್ ಮಿಲ್), ಬಳಸಲಾದ ಜಲ-ಶಕ್ತಿಯ ಗಿರಣಿ ರಚನೆಯನ್ನು ಅಭಿವೃದ್ಧಿಪಡಿಸುವುದು[೭೦] ಎರಡರಲ್ಲೂ, ನಷ್ಟಗಳ ನಡುವೆಯ‌ೂ, ನಾವೀನ್ಯತೆಯ ಆಟದಬಯಲಾಗಿ ಮ್ಯಾನುಫ್ಯಾಕ್ಟರಿ ಸೇವೆ ಸಲ್ಲಿಸಿತು.[೭೦] ಅವರು ಹದಿಮ‌ೂರು ವಸ್ತ್ರೋದ್ಯಮ ಗಿರಣಿಗಳ ಮಾಲೀಕತ್ವ ಹೊಂದಿದರು. ಡೇನಿಯಲ್ ಡೇ ಉಕ್ಸ್‌ಬ್ರಿಜ್, ಮಸಾಚುಸೆಟ್ಸ್‌ನ ಬ್ಲಾಕ್‌ಸ್ಟೋನ್ ವ್ಯಾಲಿಯಲ್ಲಿ ಉಣ್ಣೆ ಎಳೆಗಳನ್ನು ಬಿಡಿಸುವ ಗಿರಣಿಯನ್ನು ೧೮೧೦ರಲ್ಲಿ ಸ್ಥಾಪಿಸಿದರು. ಇದು U.S.ನಲ್ಲಿ ಸ್ಥಾಪಿತವಾದ ಮ‌ೂರನೇ ಉಣ್ಣೆ ಗಿರಣಿಯಾಗಿದೆ. (ಹಾರ್ಟ್‌ಫೋರ್ಡ್, ಕನೆಕ್ಟಿಕಟ್‌ನಲ್ಲಿ ಮೊದಲನೆಯದು ಮತ್ತು ವಾಟರ್‌ಟೌನ್, ಮಸಾಚುಸೆಟ್ಸ್‌ನಲ್ಲಿ ಎರಡನೆಯದು.) ಜಾನ್ H.ಚಾಫೀ ಬ್ಲಾಕ್‌ಸ್ಟೋನ್ ನದಿ ಕಣಿವೆ ರಾಷ್ಟ್ರೀಯ ಪರಂಪರೆ ಕಾರಿಡರ್ 'ಅಮೆರಿಕದ ಕಠಿಣ-ದುಡಿಮೆಯ ನದಿ', ಬ್ಲಾಕ್‌ಸ್ಟೋನ್ ಇತಿಹಾಸವನ್ನು ಬಿಂಬಿಸುತ್ತದೆ. ವೋರ್ಸೆಸ್ಟರ್‌ನಿಂದ ಪ್ರಾವಿಡೆನ್ಸ್‌ವರೆಗೆ ವ್ಯಾಪ್ತಿ ಹೊಂದಿರುವ ಬ್ಲಾಕ್‌ಸ್ಟೋನ್ ರಿವರ್ ಮತ್ತು ಅದರ ಉಪನದಿಗಳು45 miles (72 km) ಅಮೆರಿಕದ ಕೈಗಾರಿಕಾ ಕ್ರಾಂತಿಯ ಹುಟ್ಟಿನ ಸ್ಥಳವಾಗಿದೆ. ಈ ಕಣಿವೆಯಲ್ಲಿ ಸ್ಲೇಟರ್ಸ್ ಮಿಲ್ ಸೇರಿದಂತೆ ೧೧೦೦ಕ್ಕಿಂತ ಹೆಚ್ಚು ಗಿರಣಿಗಳು ಅತ್ಯುಚ್ಛ್ರಾಯದ ಕಾಲದಲ್ಲಿ ಕಾರ್ಯನಿರ್ವಹಿಸುತ್ತಿತ್ತು ಮತ್ತು ಅದರೊಂದಿಗೆ ಅಮೆರಿಕದ ಕೈಗಾರಿಕಾ ಮತ್ತು ತಾಂತ್ರಿಕ ಅಭಿವೃದ್ಧಿಯ ಮುಂಚಿನ ಆರಂಭವಾಗಿದೆ.

ಇಂಗ್ಲೆಂಡ್‌ಗೆ ೧೮೧೦ರಲ್ಲಿ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ನ್ಯೂಬರಿ‌ಪೋರ್ಟ್ ವರ್ತಕ ಫ್ರಾನ್ಸಿಸ್ ಕ್ಯಾಬೋಟ್ ಲೊವೆಲ್ ಅವರಿಗೆ ಬ್ರಿಟಿಷ್ ವಸ್ತ್ರೋದ್ಯಮ ಕಾರ್ಖಾನೆಗಳಿಗೆ ಪ್ರವಾಸ ಮಾಡಲು ಅವಕಾಶ ನೀಡಲಾಯಿತಾದರೂ, ಟಿಪ್ಪಣಿಗಳನ್ನು ತೆಗೆದುಕೊಳ್ಳಲು ಅವಕಾಶವಿರಲಿಲ್ಲ. ವಾರ್ ಆಫ್ 1812 ತಮ್ಮ ಆಮದು ವ್ಯವಹಾರವನ್ನು ಹಾಳುಮಾಡಿದ್ದನ್ನು ಮತ್ತು ದೇಶೀಯ ಸಿದ್ದಪಡಿಸಿದ ಉಡುಪುಗಳಿಗೆ ಅಮೆರಿಕದಲ್ಲಿ ಮಾರುಕಟ್ಟೆ ಹೊಮ್ಮಿರುವುದನ್ನು ಅರಿತ ಅವರು,ವಸ್ತ್ರೋದ್ಯಮ ಯಂತ್ರಗಳ ವಿನ್ಯಾಸಗಳನ್ನು ನೆನಪಿಸಿಕೊಂಡು, ಅಮೆರಿಕಕ್ಕೆ ವಾಪಸು ಮರಳಿದ ಕೂಡಲೇ, ಬೋಸ್ಟನ್ ಉತ್ಪಾದನಾ ಕಂಪೆನಿಯನ್ನು ಸ್ಥಾಪಿಸಿದರು. ಲೊವೆಲ್ ಮತ್ತು ಅವರ ಸಹವರ್ತಿಗಳು ಅಮೆರಿಕದ ಹತ್ತಿಯಿಂದ ಬಟ್ಟೆ ಉತ್ಪಾದಿಸುವ ಎರಡನೇ ವಸ್ತ್ರೋದ್ಯಮ ಗಿರಣಿಯನ್ನು ಬೆವರ್ಲಿ ಕಾಟನ್ ಮ್ಯಾನುಫ್ಯಾಕ್ಟರಿ ನಂತರ ಎರಡನೆಯದಾಗಿ ವಾಲ್ಟೆಮ್,ಮಸಾಚುಸೆಟ್ಸ್‌ನಲ್ಲಿ ಸ್ಥಾಪಿಸಿದರು. ಆದರೆ ೧೮೧೭ರಲ್ಲಿ ಅವರ ಸಾವಿನ ನಂತರ ಸಹವರ್ತಿಗಳು ಅಮೆರಿಕದ ಪ್ರಥಮ ಯೋಜಿತ ಕೈಗಾರಿಕಾ ಪಟ್ಟಣವನ್ನು ನಿರ್ಮಿಸಿ, ಅವರ ಹೆಸರನ್ನು ಇಟ್ಟರು. ಈ ಸಂಸ್ಥೆಯು ಸಾರ್ವಜನಿಕ ಷೇರು ಬಿಡುಗಡೆಯಲ್ಲಿ ಬಂಡವಾಳ ಸಂಗ್ರಹಿಸಿತು.ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅದನ್ನು ಪ್ರಥಮ ಬಾರಿಗೆ ಬಳಸಿದ್ದರಲ್ಲಿ ಒಂದೆನಿಸಿತು. ಲೋವೆಲ್,ಮಸಾಚುಸೆಟ್ಸ್, ಕಾಲುವೆಗಳನ್ನು ಮತ್ತು ಮೆರಿಮ್ಯಾಕ್ ರಿವರ್‌ ಪೂರೈಸಿದ ಹತ್ತುಸಾವಿರ ಅಶ್ವಶಕ್ತಿಯನ್ನು ಬಳಸಿಕೊಂಡು,5.6 miles (9.0 km) "ಅಮೆರಿಕ ಕೈಗಾರಿಕಾ ಕ್ರಾಂತಿಯ ಉಗಮಸ್ಥಾನ" ಎಂದು ಪರಿಗಣಿತವಾಯಿತು. ಬ್ರಿಟನ್‌ನ ಕಳಪೆ ದುಡಿಮೆಯ ಪರಿಸ್ಥಿತಿಗಳಿಗೆ ನೇರ ಪ್ರತಿಕ್ರಿಯೆಯಾಗಿ ಲೋವೆಲ್ ಸಿಸ್ಟಮ್‌ನಂತಹ ಅಲ್ಪಕಾಲೀನ ಭ್ರಮೆಯನ್ನು ಸೃಷ್ಟಿಸಲಾಯಿತು.ಆದಾಗ್ಯೂ,೧೮೫೦ರಲ್ಲಿ,ವಿಶೇಷವಾಗಿ ಐರಿಷ್ ಆಲೂಗಡ್ಡೆ ಬರಗಾಲ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯು ಬಡ ವಲಸೆ ಕಾರ್ಮಿಕರಿಂದ ಬದಲಾಯಿತು.

ಯಂತ್ರೋಪಕರಣಗಳು, ಸಾಧನಗಳು, ಮಾಪಕಗಳು ಮತ್ತು ಗಡಿಯಾರಕ್ಕೆ ಅಗತ್ಯವಾಗಿದ್ದ ಸೂಕ್ಷ್ಮ ನಿಖರತೆಗೆ ಹೊಂದಿಕೊಳ್ಳುವ ಜೋಡಿಸುವ ವಿಧಾನಗಳ ಅಭಿವೃದ್ಧಿಯೊಂದಿಗೆ ವಾಲ್ಟಾಮ್‌, ಮಸಾಚುಸೆಟ್ಸ್ ವಾಲ್ಟಾಮ್ ವಾಚ್ ಕಂಪೆನಿಯಲ್ಲಿ ೧೮೫೪ರಲ್ಲಿ ಗಡಿಯಾರ ಉದ್ದಿಮೆಯ ಕೈಗಾರೀಕರಣ ಆರಂಭವಾಯಿತು.

ಜಪಾನ್‌[ಬದಲಾಯಿಸಿ]

ಇವಾಕುರಾ ಮಿಷನ್ ಎಂದು ಹೆಸರಾದ ಜಪಾನಿನ ರಾಜಕಾರಣಿಗಳ ಗುಂಪೊಂದು ೧೮೭೧ರಲ್ಲಿ ಪಾಶ್ಚಿಮಾತ್ಯ ವಿಧಾನಗಳನ್ನು ಕಲಿಯಲು ಯುರೋಪ್ ಮತ್ತು USA ಪ್ರವಾಸ ಮಾಡಿತು. ಇದರ ಫಲವಾಗಿ ಜಪಾನ್ ಹಿಂದುಳಿಯುವುದನ್ನು ತಪ್ಪಿಸಲು ಉದ್ದೇಶಪೂರ್ವಕ ರಾಷ್ಟ್ರ ನೇತೃತ್ವದ ಕೈಗಾರೀಕರಣ ನೀತಿ ರಚಿಸಲಾಯಿತು. ಬ್ಯಾಂಕ್ ಆಫ್ ಜಪಾನ್ ೧೮೭೭ರಲ್ಲಿ ಸ್ಥಾಪಿತವಾಗಿ, ಮಾದರಿ ಉಕ್ಕು ಮತ್ತು ವಸ್ತ್ರೋದ್ಯಮ ಕಾರ್ಖಾನೆಗಳಿಗೆ ಆರ್ಥಿಕ ನೆರವು ನೀಡಲು ತೆರಿಗೆಗಳನ್ನು ಬಳಸಿಕೊಂಡಿತು. ಶಿಕ್ಷಣಾವಕಾಶಗಳನ್ನು ವಿಸ್ತರಿಸಲಾಯಿತು ಮತ್ತು ಜಪಾನಿನ ವಿದ್ಯಾರ್ಥಿಗಳನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಿದ್ಯಾಭ್ಯಾಸಕ್ಕೆ ಕಳಿಸಲಾಯಿತು.

ಎರಡನೇ ಕೈಗಾರಿಕಾ ಕ್ರಾಂತಿ ಮತ್ತು ನಂತರದ ವಿಕಸನ[ಬದಲಾಯಿಸಿ]

ಬೆಸಿಮರ್ ಪರಿವರ್ತಕ

ಹೆಚ್ಚು ಬಾಳಿಕೆಬರುವ ರೈಲ್ವೆ ಮಾರ್ಗಗಳ ನಿರ್ಮಾಣಕ್ಕೆ ರೈಲ್ವೇಸ್‌ನ ತೃಪ್ತಿಪಡಿಸಲಾಗದ ಬೇಡಿಕೆಯಿಂದ ಅಗ್ಗದಲ್ಲಿ ಉಕ್ಕಿನ ಸಾಮ‌ೂಹಿಕ ಉತ್ಪಾದನೆಗೆ ಮಾರ್ಗ ಕಲ್ಪಿಸಿತು. ಕೈಗಾರಿಕಾ ಸಾಮ‌ೂಹಿಕ ಉತ್ಪಾದನೆಗೆ ಅನೇಕ ಹೊಸ ಕ್ಷೇತ್ರಗಳಲ್ಲಿ ಉಕ್ಕು ಮೊದಲನೆಯದೆಂದು ಉದಾಹರಿಸಲಾಯಿತು.ಅದು ೧೮೫೦ರಲ್ಲಿ ಆಸುಪಾಸಿನಲ್ಲಿ ಆರಂಭವಾದ "ಎರಡನೇ ಹಂತದ ಕೈಗಾರಿಕೆ ಕ್ರಾಂತಿ" ಲಕ್ಷಣವಾಗಿತ್ತು. ಆದರೆ ಉಕ್ಕಿನ ಸಾಮ‌ೂಹಿಕ ಉತ್ಪಾದನೆಗೆ ವಿಧಾನವನ್ನು ೧೮೬೦ರ ದಶಕದವರೆಗೆ ಆವಿಷ್ಕಾರ ಮಾಡಿರದಿದ್ದರೂ,ಸರ್ ಹೆನ್ರಿ ಬೆಸೆಮರ್ ಮೆದು ಕಬ್ಬಿಣ ಮತ್ತು ಉಕ್ಕನ್ನು ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದಿಸುವ ಹೊಸ ಕುಲುಮೆಯೊಂದನ್ನು ಆವಿಷ್ಕರಿಸಿದರು. ಆದಾಗ್ಯೂ, ಇದು ೧೮೭೦ರ ದಶಕದಲ್ಲಿ ವ್ಯಾಪಕವಾಗಿ ಲಭ್ಯವಾಯಿತು. ಎರಡನೆಯ ಕೈಗಾರಿಕಾ ಕ್ರಾಂತಿಯು ಕ್ರಮೇಣ ಬೆಳವಣಿಗೆ ಸಾಧಿಸಿ ರಾಸಾಯನಿಕ ಕೈಗಾರಿಕೆಗಳು, ಪೆಟ್ರೋಲಿಯಂ, ಸಂಸ್ಕರಣೆ ಮತ್ತು ವಿತರಣೆ, ವಿದ್ಯುತ್ ಕೈಗಾರಿಕೆಗಳು ಮತ್ತು ಇಪ್ಪತ್ತನೆಯ ಶತಮಾನದಲ್ಲಿ ವಾಹನೋದ್ಯಮಗಳು ಸೇರ್ಪಡೆಯಾದವು ಮತ್ತು ಬ್ರಿಟನ್‌ನಿಂದ ಯುನೈಟೆಡ್ ಸ್ಟೇಟ್ಸ್ ಮತ್ತು ಜರ್ಮನಿಗೆ ತಂತ್ರಜ್ಞಾನ ನಾಯಕತ್ವದ ಪರಿವರ್ತನೆಯೆಂದು ಗುರುತಿಸಲಾಯಿತು.

ಆಲ್ಪ್ಸ್‌ನಲ್ಲಿ ಜಲವಿದ್ಯುತ್ ಶಕ್ತಿ ಉತ್ಪಾದನೆ ಆರಂಭದಿಂದ,ಕಲ್ಲಿದ್ದಲಿನಿಂದ ವಂಚಿತವಾದ ಉತ್ತರ ಇಟಲಿಯಲ್ಲಿ ೧೮೯೦ರ ದಶಕದಲ್ಲಿ ಪ್ರಾರಂಭವಾದ ಕೈಗಾರೀಕರಣಕ್ಕೆ ಅನುಕೂಲ ಕಲ್ಪಿಸಿತು. ಮಿತವ್ಯವಕಾರಿ ಪೆಟ್ರೋಲಿಯಂ ಉತ್ಪನ್ನಗಳ ಹೆಚ್ಚು ಲಭ್ಯತೆಯಿಂದ ಕಲ್ಲಿದ್ದಲಿನ ಪ್ರಾಮುಖ್ಯತೆಯನ್ನು ತಗ್ಗಿಸಿತು ಮತ್ತು ಕೈಗಾರೀಕರಣದ ಸಾಮರ್ಥ್ಯ ಮತ್ತಷ್ಟು ವಿಶಾಲಗೊಂಡಿತು.

ವಿದ್ಯುತ್ ಯುಗದ ಸಾಮಾಜಿಕ ಮತ್ತು ಸಾಂಸ್ಕೃತಿ ಪ್ರಭಾವಗಳನ್ನು ಮಾರ್ಷಲ್ ಮೆಕ್ಲುಹಾನ್ ವಿಶ್ಲೇಷಣೆ ಮಾಡಿದರು. ಯಾಂತ್ರೀಕರಣದ ಮುಂಚಿನ ಯುಗವು ಪ್ರತಿಯೊಂದು ಪ್ರಕ್ರಿಯೆಯನ್ನು ಅನುಕ್ರಮವಾಗಿ ವಿಭಜಿಸುವ ಕಲ್ಪನೆಯನ್ನು ಹರಡಿದ್ದರೆ, ಇದು ಏಕತಾನತೆ ತಂದ ವಿದ್ಯುತ್ತಿನ ದಿಢೀರ್ ವೇಗವನ್ನು ಜಾರಿಗೆ ತರುವುದರೊಂದಿಗೆ ಅಂತ್ಯಗೊಂಡಿತು. ಇದು "ವಿಶೇಷ ವಿಭಾಗಗಳ ಮೇಲೆ ಗಮನ"(ಒಂದು ನಿರ್ದಿಷ್ಟ ದೃಷ್ಟಿಕೋನದ ಅಳವಡಿಕೆ) ಕೇಂದ್ರೀಕರೀಸುವ ನಡೆಯಿಂದ "ಇಡೀ ಪ್ರಕ್ರಿಯೆ ಮೇಲೆ ದಿಢೀರ್ ಸೂಕ್ಷ್ಮ ಜಾಗೃತಿ", "ಒಟ್ಟು ಕ್ಷೇತ್ರದ" ಮೇಲೆ ಗಮನ", "ಇಡೀ ನಮ‌ೂನೆ ಮೇಲಿನ ಜ್ಞಾನ"ದ ಕಲ್ಪನೆಗೆ ಸಾಂಸ್ಕೃತಿಕ ರೂಪಾಂತರವನ್ನು ಹೇರಿತು. "ರಚನೆ ಮತ್ತು ಆಕಾರದ ಸಂಯೋಜಿತ ಕಲ್ಪನೆ"ಯಾದ ಸ್ವರೂಪ ಮತ್ತು ಕಾರ್ಯನಿರ್ವಹಣೆಯನ್ನು ಏಕತೆಯಿಂದ ಕೈಗೊಳ್ಳುವ ಜ್ಞಾನವನ್ನು ಸುಸ್ಪಷ್ಟವಾಗಿಸಿತು ಮತ್ತು ಪ್ರಚಲಿತಗೊಳಿಸಿತು. ವರ್ಣಚಿತ್ರ(ಘನಾಕೃತಿ ಕಲೆ), ಭೌತಶಾಸ್ತ್ರ,ಕವಿತೆ, ಸಂಪರ್ಕ ಮತ್ತು ಶಿಕ್ಷಣ ಸಿದ್ದಾಂತ ಕ್ಷೇತ್ರಗಳಲ್ಲಿ ಇದು ಪ್ರಮುಖ ಪರಿಣಾಮ ಉಂಟುಮಾಡಿತು.[೭೧]

ಈ ಕ್ಷೇತ್ರಗಳಲ್ಲಿ ಕೈಗಾರಿಕೀಕರಣದಿಂದಾಗಿ ೧೮೯೦ರ ದಶಕಗಳಲ್ಲಿ ಜಾಗತಿಕ ಹಿತಾಸಕ್ತಿಗಳು ಅಂಕುರಿಸುವುದರೊಂದಿಗೆ ಪ್ರಥಮ ದೈತ್ಯ ಕೈಗಾರಿಕಾ ನಿಗಮಗಳನ್ನು ಸೃಷ್ಟಿಸಿತು. U.S. ಸ್ಟೀಲ್, ಜನರಲ್ ಎಲೆಕ್ಟ್ರಿಕ್ ಮತ್ತು ಬೇಯರ್ AG ವಿಶ್ವದ ಷೇರು ಮಾರುಕಟ್ಟೆಗಳಲ್ಲಿ ರೈಲ್ವೆ ಕಂಪೆನಿಗಳ ಜತೆಗೂಡಿತು.

ಬೌದ್ಧಿಕ ವಿಶ್ಲೇಷಣೆಗಳು ಮತ್ತು ವಿಮರ್ಶೆ[ಬದಲಾಯಿಸಿ]

ಬಂಡವಾಳಶಾಹಿ[ಬದಲಾಯಿಸಿ]

ಜ್ಞಾನೋದಯದ ಯುಗ ಆಗಮನವು ಬೌದ್ಧಿಕ ಚೌಕಟ್ಟನ್ನು ಒದಗಿಸಿತು. ವೈಜ್ಞಾನಿಕ ಜ್ಞಾನದ ಬೆಳವಣಿಗೆಯ ಪ್ರಾಯೋಗಿಕ ಅಳವಡಿಕೆಯನ್ನು ಅದು ಸ್ವಾಗತಿಸಿತು-ವೈಜ್ಞಾನಿಕ ವಿಶ್ಲೇಷಣೆಯ ಮಾರ್ಗದರ್ಶನದಲ್ಲಿ ಉಗಿ ಯಂತ್ರ ವ್ಯವಸ್ಥಿತ ಅಭಿವೃದ್ಧಿಯಲ್ಲಿ ಈ ಅಂಶವು ಗೋಚರಿಸಿತು.ರಾಜಕೀಯ ಮತ್ತು ಸಾಮಾಜಿಕ ವಿಶ್ಲೇಷಣೆಗಳ ಬೆಳವಣಿಗೆಯು ಅಡಾಂ ಸ್ಮಿತ್‌ರ ದಿ ವೆಲ್ತ್ ಆಪ್ ನೇಷನ್ಸ್‌ ನಲ್ಲಿ ತುತ್ತತುದಿ ತಲುಪಿತು. ಉದಾಹರಣೆಗೆ ದಿ ಇಂಪ್ರೂವಿಂಗ್ ಸ್ಟೇಟ್ ಆಫ್ ದಿ ವರ್ಲ್ಡ್‌ ಪುಸ್ತಕದಲ್ಲಿ ಮಂಡಿಸಿರುವ ಬಂಡವಾಳಶಾಹಿ ವ್ಯವಸ್ಥೆಯ ಮುಖ್ಯ ವಾದಗಳಲ್ಲಿ ಒಂದೆಂದರೆ ಕೈಗಾರೀಕರಣವು ಎಲ್ಲರ ಸಂಪತ್ತನ್ನು ವೃದ್ಧಿಸುತ್ತದೆ. ಜೀವಿತಾವಧಿ ಹೆಚ್ಚಳದಿಂದ,ಕಡಿಮೆ ದುಡಿಮೆಯ ಗಂಟೆಗಳು ಮತ್ತು ಮಕ್ಕಳಿಗೆ ಮತ್ತು ಹಿರಿಯವಯಸ್ಕರ ದುಡಿಮೆ ನಿಷೇಧದಿಂದ ಸಾಬೀತಾಗಿದೆ.

ಮಾರ್ಕ್ಸ್‌ವಾದ[ಬದಲಾಯಿಸಿ]

ಕೈಗಾರೀಕಾ ಕ್ರಾಂತಿಯ ಪ್ರತಿಕ್ರಿಯೆಯಾಗಿ ಮಾರ್ಕ್ಸ್‌ವಾದವು ಅವಶ್ಯಕವಾಗಿ ಆರಂಭವಾಯಿತು.[೭೨] ಕಾರ್ಲ್ ಮಾರ್ಕ್ಸ್ ಪ್ರಕಾರ,ಕೈಗಾರೀಕರಣವು ಸಮಾಜವನ್ನು ಮಧ್ಯಮವರ್ಗಕ್ಕೆ(ಉತ್ಪಾದನೆ ಸಾಧನಗಳಾದ ಕಾರ್ಖಾನೆಗಳು ಮತ್ತು ಭೂಮಿಯ ಮಾಲೀಕರು)ಮತ್ತು ಇನ್ನಷ್ಟು ದೊಡ್ಡದಾದ ಕೆಳವರ್ಗಕ್ಕೆ(ಉತ್ಪಾದನೆಯ ಮಾರ್ಗಗಳ ಮ‌ೂಲಕ ಮೌಲ್ಯಯುತ ವಸ್ತುವನ್ನು ತೆಗೆಯಲು ಅವಶ್ಯಕವಾದ ದುಡಿಮೆಯನ್ನು ವಾಸ್ತವಿಕವಾಗಿ ನಿರ್ವಹಿಸುವವರು)ಧ್ರುವೀಕರಿಸಿತು. ಕೈಗಾರೀಕರಣ ಪ್ರಕ್ರಿಯೆಯನ್ನು ಬಂಡವಾಳಶಾಹಿಯ ಪೂರ್ಣ ಅಭಿವೃದ್ಧಿಗೆ ಅಗತ್ಯವಾದ ಊಳಿಗಮಾನ್ಯ ಆರ್ಥಿಕ ವಿಧಾನಗಳ ತಾರ್ಕಿಕ ದ್ವಂದ್ವಾತ್ಮಕ ಪ್ರಗತಿಯೆಂಬಂತೆ ಅವರು ಕಂಡರು. ಸಮಾಜವಾದ ಮತ್ತು ತರುವಾದ ಸಮತಾವಾದದ ಅಭಿವೃದ್ಧಿಗೆ ಅಗತ್ಯ ಪೂರ್ವಸೂಚಕದಂತೆ ಅವರು ಭಾವಿಸಿದರು.

ರಮ್ಯತಾವಾದ[ಬದಲಾಯಿಸಿ]

ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಹೊಸ ಕೈಗಾರೀಕರಣದತ್ತ ಬೌದ್ಧಿಕ ಮತ್ತು ಕಲಾತ್ಮಕ ವೈರ ಬೆಳೆಯಿತು. ಇದು ರಮ್ಯ ಅಭಿಯಾನವೆಂದು ಹೆಸರುವಾಸಿಯಾಗಿದೆ. ಇಂಗ್ಲೀಷ್‌ನಲ್ಲಿ ಇದರ ಮುಖ್ಯ ಪ್ರತಿಪಾದಕರಲ್ಲಿ ಕಲಾವಿದ ಮತ್ತು ಕವಿ ವಿಲಿಯಂ ಬ್ಲೇಕ್ ಮತ್ತು ಕವಿಗಳಾದ ವಿಲಿಯಂ ವರ್ಡ್ಸ್‌ವರ್ತ್, ಸ್ಯಾಮ್ಯುಯೆಲ್ ಟೇಲರ್ ಕೋಲ್‌ರಿಡ್ಜ್,ಜಾನ್ ಕೀಟ್ಸ್, ಬೈರಾನ್ ಮತ್ತು ಪರ್ಸಿ ಬೈಷೆ ಶೆಲ್ಲಿ ಸೇರಿದ್ದಾರೆ. ಈ ಅಭಿಯಾನವು ದೈತ್ಯಾಕಾರದ ಯಂತ್ರಗಳು ಮತ್ತು ಕಾರ್ಖಾನೆಗಳಿಗೆ ವ್ಯತಿರಿಕ್ತವಾಗಿ ಕಲೆ ಮತ್ತು ಭಾಷೆಯಲ್ಲಿ "ನಿಸರ್ಗ"ದ ಪ್ರಾಮುಖ್ಯತೆ ಬಗ್ಗೆ ಒತ್ತಿಹೇಳಿದೆ; ಬ್ಲೇಕ್ ಕವಿತೆಯ "ಡಾರ್ಕ್ ಸಟಾನಿಕ್ ಮಿಲ್ಸ್" ಮತ್ತು "ಎಂಡ್ ಡಿಡ್ ದೋಸ್ ಫೀಟ್ ಇನ್ ಏನ್ಸೀಂಟ್ ಟೈಮ್" ವೈಜ್ಞಾನಿಕ ಪ್ರಗತಿಯು ಎರಡು-ಅಂಚಿನದೆಂಬ ಕಳವಳಗಳನ್ನು ಬಿಂಬಿಸುವ ಮೇರಿ ಶೆಲ್ಲಿಯ ಕಾದಂಬರಿ ಫ್ರಾಂಕೆನ್‌ಸ್ಟೈನ್ .

ಇದನ್ನೂ ಗಮನಿಸಿ[ಬದಲಾಯಿಸಿ]

labour legislations

ಹೆಚ್ಚಿನ ಓದಿಗೆ[ಬದಲಾಯಿಸಿ]

ಹೆಚ್ಚಿನ ಓದಿಗೆ[ಬದಲಾಯಿಸಿ]

  • ಚಾಂಬ್ಲಿಸ್, ವಿಲಿಯಂ J.(ಎಡಿಟರ್),ಪ್ರಾಬ್ಲಮ್ಸ್ ಆಫ್ ಇಂಡಸ್ಟ್ರಿಯಲ್ ಸೊಸೈಟಿ,ರೀಡಿಂಗ್, ಮಸಾಚುಸೆಟ್ಸ್ :ಆಡಿಸನ್-ವೆಸ್ಲಿ ಪಬ್ಲಿಷಿಂಗ್ ಕಂ,ಡಿಸೆಂಬರ್ ೧೯೭೩.

ಬಾಹ್ಯ ಕೊಂಡಿಗಳು[ಬದಲಾಯಿಸಿ]

  1. ವಾಟ್ ಉಗಿ ಯಂತ್ರ ಚಿತ್ರ:UPM (ಮ್ಯಾಡ್ರಿಡ್)ಸೂಪೀರಿಯರ್ ಟೆಕ್ನಿಕಲ್ ಸ್ಕೂಲ್ ಆಫ್ ಇಂಡಸ್ಟ್ರಿಯಲ್ ಎಂಜಿನಿಯರ್ಸ್ ಮೊಗಸಾಲೆಯಲ್ಲಿ ಇರಿಸಿದೆ
  2. Beck B., Roger (1999). World History: Patterns of Interaction. Evanston, Illinois: McDougal Littell. {{cite book}}: Cite has empty unknown parameter: |coauthors= (help)
  3. ಬಿಸಿನೆಸ್ ಅಂಡ್ ಎಕನಾಮಿಕ್ಸ್ ಲೀಡಿಂಗ್ ಇಷ್ಯೂಸ್ ಇನ್ ಎಕನಾಮಿಕ್ ಡೆವಲಪ್‌ಮೆಂಟ್, , ಆಕ್ಸ್‌ಫರ್ಡ್ ಯ‌ೂನಿವರ್ಸಿಟಿ ಪ್ರೆಸ್ US. ISBN ೦-೧೯-೫೧೧೫೮೯-೯ ಓದುವುದಕ್ಕೆ
  4. ರಸೆಲ್ ಬ್ರೌನ್, ಲೆಸ್ಟರ್ ಎಕೊ-ಎಕಾನಮಿ , ಜೇಮ್ಸ್ & ಜೇಮ್ಸ್ / ಅರ್ಥ್‌ಸ್ಕಾನ್. ISBN ೧-೮೫೩೮೩-೯೦೪-೩ ಓದಿ
  5. ಎರಿಕ್ ಹಾಬ್ಸ್‌ಬಾಮ್, ದಿ ಏಜ್ ಆಫ್ ರಿವಾಲ್ಯುಷನ್: ಯುರೋಪ್ ೧೭೮೯–೧೮೪೮ , ವೈಡನ್‌ಫೀಲ್ಡ್ & ನಿಕೋಲ್ಸನ್ ಲಿಮಿಟೆಡ್. ISBN ೦-೩೪೯-೧೦೪೮೪-೦
  6. ಜೋಸೆಫ್ E ಇನಿಕೋರಿ. ಆಫ್ರಿಕನ್ಸ್ ಅಂಡ್ ದಿ ಇಂಡಸ್ಟ್ರಿಯಲ್ ರಿವಾಲ್ಯೂಷನ್ ಇನ್ ಇಂಗ್ಲೆಂಡ್ , ಕೇಂಬ್ರಿಜ್ ಯೂನಿವರ್ಸಿಟಿ ಪ್ರೆಸ್ ISBN ೦-೫೨೧-೦೧೦೭೯-೯ ಓದಿ
  7. Berg, Maxine (1992). "Rehabilitating the Industrial Revolution". The Economic History Review. 45: 24. doi:10.2307/2598327.
  8. ರಿಹ್ಯಾಬಿಲಿಟೇಟಿಂಗ್ ದಿ ಇಂಡಸ್ಟ್ರಿಯಲ್ ರಿವಾಲ್ಯೂಷನ್ Archived 2006-11-09 ವೇಬ್ಯಾಕ್ ಮೆಷಿನ್ ನಲ್ಲಿ. ಜೂಲಿ ಲಾರೆಂಜನ್ ಅವರಿಂದ , ಸೆಂಟ್ರಲ್ ಮಿಚಿಗನ್ ಯೂನಿವರ್ಸಿಟಿ. ನವೆಂಬರ್ ೨೦೦೫ ಮರುಸಂಪಾದಿಸಿದೆ.
  9. Robert Lucas, Jr. (2003). "The Industrial Revolution". Federal Reserve Bank of Minneapolis. Archived from the original on 2008-05-16. Retrieved 2007-11-14. it is fairly clear that up to 1800 or maybe 1750, no society had experienced sustained growth in per capita income. (Eighteenth century population growth also averaged one-third of 1 percent, the same as production growth.) That is, up to about two centuries ago, per capita incomes in all societies were stagnated at around $400 to $800 per year.
  10. Lucas, Robert (2003). "The Industrial Revolution Past and Future". Archived from the original on 2008-05-16. Retrieved 2010-01-28. [consider] annual growth rates of 2.4 percent for the first 60 years of the 20th century, of 1 percent for the entire 19th century, of one-third of 1 percent for the 18th century
  11. ಇಂಡಸ್ಟ್ರಿಯಲ್ ರಿವಾಲ್ಯುಷನ್ ಅಂಡ್ ದಿ ಸ್ಟಾಂಡರ್ಡ್ ಆಫ್ ಲೀವಿಂಗ್: ದಿ ಕನ್ಸೈಸ್ ಎನ್‌ಸೈಕ್ಲೋಪೀಡಿಯ ಆಫ್ ಎಕನಾಮಿಕ್ಸ್, ಲೈಬ್ರರಿ ಆಫ್ ಎಕನಾಮಿಕ್ಸ್ ಅಂಡ್ ಅಂಡ್ ಲಿಬರ್ಟಿ
  12. "BBC – Plague in Tudor and Stuart Britain". bbc.co.uk. Retrieved 2008-11-03.
  13. ದಿ ವರಿಜಿನ್ಸ್ ಆಫ್ ದಿ ಇಂಡಸ್ಟ್ರಿಯಲ್ ರಿವಾಲ್ಯೂಷನ್ ಇನ್ ಇಂಗ್ಲೆಂಡ್
  14. "ಸೈಂಟಿಫಿಕ್ ರಿವಾಲ್ಯೂಷನ್ Archived 2009-10-28 ವೇಬ್ಯಾಕ್ ಮೆಷಿನ್ ನಲ್ಲಿ.". "ಮೈಕ್ರೋಸಾಫ್ಟ್ ಎನ್‌ಕಾರ್ಟಾ ಆನ್‌ಲೈನ್ ಎನ್‌ಸೈಕ್ಲೋಪೀಡಿಯ ೨೦೦೯. ೨೦೦೯-೧೦-೩೧.
  15. ಹಡ್ಸನ್, ಪ್ಯಾಟ್. ದಿ ಇಂಡಸ್ಟ್ರಿಯಲ್ ರಿವಾಲ್ಯೂಷನ್ , ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್ US. ISBN ೦-೭೧೩೧-೬೫೩೧-೬
  16. Fullerton, Ronald A. (January 1988). "How Modern Is Modern Marketing? Marketing's Evolution and the Myth of the "Production Era"". The Journal of Marketing. New York City, NY: American Marketing Association. 52 (1): 108–125. doi:10.2307/1251689. {{cite journal}}: Cite has empty unknown parameter: |coauthors= (help)
  17. "Technics & Civilization". Lewis Mumford. Retrieved 2009-01-08.
  18. ಡೀನ್, ಫಿಲ್ಲಿಸ್. ದಿ ಫಸ್ಟ್ ಇಂಡಸ್ಟ್ರಿಯಲ್ ರಿವಾಲ್ಯೂಷನ್ , ಕೇಂಬ್ರಿಜ್ ಯೂನಿವರ್ಸಿಟಿ ಪ್ರೆಸ್. ISBN ೦-೫೨೧-೨೯೬೦೯-೯ ಓದಿ
  19. ಎರಿಕ್ ಸ್ಕಿಫ್, ಇಂಡಸ್ಟ್ರಿಯಲೈಸೇಷನ್ ವಿತೌಟ್ ನ್ಯಾಷನಲ್ ಪೇಟೆಂಟ್ಸ್:ದಿ ನೆದರ್‌ಲ್ಯಾಂಡ್ಸ್,೧೮೬೯-೧೯೧೨;ಸ್ವಿಜರ್‌ಲ್ಯಾಂಡ್, ೧೮೫೦-೧೯೦೭, ಪ್ರಿನ್ಸ್‌ಟೌನ್ ಯೂನಿವರ್ಸಿಟಿ ಪ್ರೆಸ್,೧೯೭೧
  20. ಮೈಕೇಲ್ ಬಾಲ್ಡ್ರಿನ್ ಅಂಡ್ ಡೇವಿಡ್ K.ಲೆವೈನ್ , ಏಗೇನ್ಸ್ಟ್ ಇಂಟಲೆಕ್ಚುಯಲ್ ಮಾನೊಪಲಿ, Chapter 1, final online version January 2, 2008 PDF (55 KB), page ೧೫. ಕೇಂಬ್ರಿಡ್ಜ್‌ ಯೂನಿವರ್ಸಿಟಿ ಪ್ರೆಸ್‌, ೨೦೦೮. ISBN ೧೩: ೯೭೮೦೫೨೧೮೭೯೨೮೬
  21. ವೈ ನೊ ಇಂಡಸ್ಟ್ರಿಯಲ್ ರಿವಾಲ್ಯುಷನ್ ಇನ್ ಏನ್ಸೀಂಟ್ ಗ್ರೀಸ್? Archived 2011-09-27 ವೇಬ್ಯಾಕ್ ಮೆಷಿನ್ ನಲ್ಲಿ. J.ಬ್ರಾಡ್‌‌ಫೋರ್ಡ್ ಡಿಲಾಂಗ್, ಅರ್ಥಶಾಸ್ತ್ರ ಪ್ರಾಧ್ಯಾಪಕರು,ಬರ್ಕಲಿಯ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯ, ೨೦ ಸೆಪ್ಟೆಂಬರ್ ೨೦೦೨. ಜನವರಿ ೨೦೦೭ ಮರುಸಂಪಾದನೆ
  22. ದಿ ವರಿಜಿನ್ಸ್ ಆಫ್ ದಿ ಇಂಡಸ್ಟ್ರಿಯಲ್ ರಿವಾಲ್ಯೂಷನ್ ಇನ್ ಇಂಗ್ಲೆಂಡ್ ಇತಿಹಾಸ ಮಾರ್ಗದರ್ಶಿ, ಸ್ಟೀವನ್ ಕ್ರೈಸ್,೧೧ ಅಕ್ಟೋಬರ್ ೨೦೦೬- ಜನವರಿ ೨೦೦೭ರಂದು ಮರುಸಂಪಾದಿಸಿದೆ.
  23. ಜಾಕ್ಸನ್ ಜೆ. ಸ್ಪೈಲ್‌ವಾಗಲ್ (೨೦೦೯). "ವೆಸ್ಟರ್ನ್ ಸಿವಿಲೈಜೇಷನ್ ". ಪುಟ.೬೦೭.
  24. ದಿ ಇಂಡಸ್ಟ್ರಿಯಲ್ ರಿವಾಲ್ಯೂಷನ್-ಕಾಸಸ್
  25. Cobb-Douglas in pre-modern Europe1 – Simulating early modern growth PDF (254 KB) ಜಾನ್ ಲುಟೆನ್ ವಾನ್ ಜಾಂಡೆನ್, ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಹಿಸ್ಟರಿ/ಯೂನಿವರ್ಸಿಟಿ ಆಫ್ ಉಟ್ರೇಕ್ಟ್. ಮೇ ೨೦೦೫ ಜನವರಿ ೨೦೦೭ರಂದು ಮರುಸಂಪಾದಿಸಿದೆ.
  26. Landes, David (1999). The Wealth and Poverty of Nations. London: Abacus. pp. 38–9. ISBN 0349111669. {{cite book}}: Cite has empty unknown parameter: |coauthors= (help)
  27. ಸೌತ್ ಏಷ್ಯನ್ ಹಿಸ್ಟರಿ -ಭಾರತದ ಉಪಖಂಡದ ಇತಿಹಾಸದ ಪುಟಗಳು:ಬ್ರಿಟಿಷ್ ಆಡಳಿತ ಮತ್ತು ವಸಾಹತುಶಾಹಿ ಪರಂಪರೆ. ರಜನಿ-ಪಾಲ್ಮೆ ದತ್ ಇಂಡಿಯ ಟುಡೆ(ಭಾರತದ ಆವೃತ್ತಿ ೧೯೪೭ರಲ್ಲಿ ಪ್ರಕಟ) ಜನವರಿ ೨೦೦೭ರಂದು ಮರುಸಂಪಾದಿಸಿದೆ.
  28. Monarchies 1000–2000. By W. M. SPELLMAN. ಲಂಡನ್: ರಿಯಾಕ್ಟಿಯನ್ ಬುಕ್ಸ್, 2001.[ಶಾಶ್ವತವಾಗಿ ಮಡಿದ ಕೊಂಡಿ]. ಜರ್ನಲ್ ಆಫ್ ವರ್ಲ್ಡ್ ಹಿಸ್ಟರಿ
  29. ವಾಸ್ ಸ್ಲೇವರಿ ದಿ ಇಂಜಿನ್ ಆಫ್ ಎಕನಾಮಿಕ್ ಗ್ರೋತ್? Archived 2009-02-26 ವೇಬ್ಯಾಕ್ ಮೆಷಿನ್ ನಲ್ಲಿ.ಡಿಜಿಟಲ್ ಇತಿಹಾಸ Archived 2009-02-26 ವೇಬ್ಯಾಕ್ ಮೆಷಿನ್ ನಲ್ಲಿ.
  30. ದಿ ಇಂಡಸ್ಟ್ರಿಯಲ್ ರಿವಾಲ್ಯೂಷನ್ ಬೈ ಪ್ಯಾಟ್ ಹಡ್ಸನ್, ಪುಟ.198
  31. ದಿ ರಾಯಲ್ ನೇವಿ ಬ್ರಿಟನ್ ಕೈಗಾರಿಕಾ ಬೆಳವಣಿಗೆಗೆ ಸ್ವತಃ ಕಾಣಿಕೆ ನೀಡಿರಬಹುದು. ಬ್ರಿಟನ್‌ನಲ್ಲಿ ಉದ್ಭವಿಸಿದ ಪ್ರಥಮ ಜಟಿಲ ಕೈಗಾರಿಕಾ ಉತ್ಪಾದನೆ ಪ್ರಕ್ರಿಯೆಗಳಲ್ಲಿ ಬ್ರಿಟಿಷ್ ಯುದ್ಧವಿಮಾನಗಳಿಗೆ ಸಾಮಗ್ರಿ ಒದಗಿಸಿದ ಪ್ರಕ್ರಿಯೆ ಸೇರಿದೆ. ಉದಾಹರಣೆಗೆ, ಆ ಅವಧಿಯಲ್ಲಿ ಬಳಸಿದ ಯುದ್ಧವಿಮಾನವು ಸರಾಸರಿ ೧೦೦೦ ರಾಟೆ ಫಿಟ್ಟಿಂಗ್ಸ್ ಬಳಸಿಕೊಂಡಿತು. ರಾಯಲ್ ನೇವಿಯಂತ ದೊಡ್ಡ ನೌಕಾಬಲದೊಂದಿಗೆ, ಈ ಫಿಟಿಂಗ್‌ಗಳು ಪ್ರತಿ ೪ರಿಂದ ೫ ವರ್ಷಗಳಲ್ಲಿ ಬದಲಾಯಿಸುವ ಅಗತ್ಯವಿದ್ದಿದ್ದರಿಂದ ಭಾರೀ ಬೇಡಿಕೆ ಸೃಷ್ಟಿಸಿ ಕೈಗಾರಿಕಾ ವಿಸ್ತರಣೆಗೆ ಪ್ರೋತ್ಸಾಹಿಸಿತು. ಹಗ್ಗದ ಕೈಗಾರಿಕೆ ಉತ್ಪಾದನೆ ಸಹ ಇದೇ ರೀತಿಯ ಅಂಶವಾಗಿ ಕಾಣಬಹುದು.
  32. ಬ್ಯಾರಿಂಗ್‌ಟನ್ ಮೂರ್ Jr., ಸೋಷಿಯಲ್ ವರಿಜಿನ್ಸ್ ಆಫ್ ಡಿಕ್ಟೇಟರ್‌ಶಿಪ್ ಅಂಡ್ ಡೆಮಾಕ್ರಸಿ: ಲಾರ್ಡ್ ಅಂಡ್ ಪೆಸೆಂಟ್ ಇನ್ ದಿ ಮೇಕಿಂಗ್ ಆಫ್ ದಿ ಮಾಡರ್ನ್ ವರ್ಲ್ಡ್ , pp. ೨೯-೩೦, ಬೋಸ್ಟನ್, ಬೆಕನ್ ಪ್ರೆಸ್,೧೯೬೬.
  33. Foster, Charles (2004). Capital and Innovation: How Britain Became the First Industrial Nation. Northwich: Arley Hall Press. ISBN 0951838245.ವಾಣಿಜ್ಯ ಕ್ರಾಂತಿಯನ್ನು ಅನುಸರಿಸಿ,ಉದ್ಯಮಶೀಲ ಸಂಸ್ಕೃತಿಯಲ್ಲಿ ಬಂಡವಾಳ ಕ್ರೋಢೀಕರಣ ಮತ್ತು ಸಂಪತ್ತು ಕೇಂದ್ರೀಕರಣವು ಕೈಗಾರಿಕಾ ಕ್ರಾಂತಿಯನ್ನು ಸಾಧ್ಯವಾಗಿಸಿತು ಎಂದು ವಾದಿಸಿದೆ. ಉದಾಹರಣೆಗೆ,
  34. ದಿ ಇಂಡಸ್ಟ್ರಿಯಲ್ ರಿವಾಲ್ಯುಷನ್ – ಇನ್ನೋವೇಷನ್ಸ್
  35. Encyclopædia Britannica (೨೦೦೮) "ಕಟ್ಟಡ ನಿರ್ಮಾಣ: ಆಧುನಿಕ ಕಾಂಕ್ರೀಟ್ ಮರುಪರಿಚಯ"
  36. ದಿ ಲೂನಾರ್ ಸೊಸೈಟಿ ಅಟ್ ಮೋರ್‌ಅಬೌಟ್, ಬರ್ಮಿಂಗ್‌ಹ್ಯಾಂ ಜಿವೆಲ್ಲರಿ ಕ್ವಾರ್ಟರ್ ಗೈಡ್ , ಬಾಬ್ ಮೈಲ್ಸ್ ವೆಬ್‌ಸೈಟ್
  37. ಹಲ್ಸ್, ಡೇವಿಡ್ H:ದಿ ಅರ್ಲಿ ಡೆವಲಪ್‌ಮೆಂಟ್ ಆಫ್ ದಿ ಸ್ಟೀಮ್ ಎಂಜಿನ್; TEE ಪಬ್ಲಿಷಿಂಗ್,ಲೀಮಿಂಗ್‌ಟನ್ ಸ್ಪಾ,U.K., ೧೯೯೯ ISBN ೧-೮೫೭೬೧-೧೦೭-೧
  38. L.T.C. ರೋಲ್ಟ್ ಅಂಡ್ J. S. ಅಲೆನ್, ದಿ ಸ್ಟೀಮ್ ಎಂಜಿನ್ ಆಫ್ ಥಾಮಸ್ ನ್ಯೂಕಾಮನ್ (ಲ್ಯಾಂಡ್‌ಮಾರ್ಕ್, ಆಷ್‌ಬೌರ್ನ್, ೧೯೯೭), ೪೪.
  39. ರೋಲ್ಟ್ ಅಂಡ್ ಅಲೆನ್,೧೪೫
  40. Clow, Archibald; Clow, Nan L. (June 1952), Chemical Revolution, Ayer Co, pp. 65–90, ISBN 0-8369-1909-2
  41. ಪ್ರಾಪರ್ಟೀಸ್ ಆಫ್ ಕಾಂಕ್ರೀಟ್ Archived 2021-02-25 ವೇಬ್ಯಾಕ್ ಮೆಷಿನ್ ನಲ್ಲಿ. ಯ‌ೂನಿವರ್ಸಿಟಿ ಆಫ್ ಮೆಮ್ಫಿಸ್ ಸಿವಿಲ್ ಎಂಜಿನಿಯರಿಂಗ್‌ ವಿಭಾಗದಿಂದ ಪ್ರಕಟಿತ ಉಪನ್ಯಾಸ ಟಿಪ್ಪಣಿಗಳು. ೨೦೦೭-೧೦-೧೭ರಂದು ಮರುಸಂಪಾದಿಸಿದೆ.
  42. Leukhina, Oksana (2007). "Demographic Transition and Industrial Revolution: A Macroeconomic Investigation" (PDF). Archived from the original (PDF) on 2007-11-27. Retrieved 2007-11-05. The decrease [in mortality] beginning in the second half of the 18th century was due mainly to declining adult mortality. Sustained decline of the mortality rates for the age groups 5-10, 10-15, and 15-25 began in the mid 19th century, while that for the age group 0-5 began three decades later {{cite web}}: |first1= missing |last1= (help); Missing pipe in: |first1= (help); line feed character in |quote= at position 199 (help)CS1 maint: numeric names: authors list (link). ನವಜಾತ ಶಿಶುಗಳು ಮತ್ತು ಮಕ್ಕಳು ಜೀವಸಹಿತ ಉಳಿಯುವ ಪ್ರಮಾಣವು ಈ ಅವಧಿಯಲ್ಲಿ ಸ್ಥಿರವಾಗಿದ್ದರೂ, ಜನನದ ಪ್ರಮಾಣ & ಒಟ್ಟಾರೆ ಜೀವಿತಾವಧಿ ಹೆಚ್ಚಳವಾಯಿತು. ಹೀಗೆ ಜನಸಂಖ್ಯೆ ಬೆಳೆಯಿತು, ಆದರೆ,ಸರಾಸರಿ ಬ್ರಿಟನ್ನಿಗನ ಆಯುಷ್ಯದ ಕಾಲ ೧೭೫೦ರಲ್ಲಿದ್ದಂತೆ ೧೮೫೦ರಲ್ಲಿತ್ತು.(೫ & ೬ ಅಂಕಿಅಂಶಗಳನ್ನು ನೋಡಿರಿ, ಪುಟ ೨೮). ಜನಸಂಖ್ಯಾ ಗಾತ್ರದ ಅಂಕಿಅಂಶಗಳು mortality.org ಸರಾಸರಿ ಆಯುಷ್ಯದ ಪ್ರಮಾಣವನ್ನು ೨೬ರಲ್ಲಿರಿಸಿದೆ.
  43. ೪೩.೦ ೪೩.೧ ಮ್ಯಾಬೆಲ್ C. ಬ್ಯೂರ್, ಹೆಲ್ತ್, ವೆಲ್ತ್ ಅಂಡ್ ಪಾಪ್ಯುಲೇಷನ್ ಇನ್ ದಿ ಅರ್ಲಿ ಡೇಸ್ ಆಫ್ ದಿ ಇಂಡಸ್ಟ್ರಿಯಲ್ ರಿವಾಲ್ಯುಷನ್ , ಲಂಡನ್: ಜಾರ್ಜ್ ರೌಟ್‌ಲೆಡ್ಜ್ & ಸನ್ಸ್, ೧೯೨೬, ಪುಟ ೩೦ ISBN ೦-೪೧೫-೩೮೨೧೮-೧
  44. "ದಿ ಲೈಫ್ ಆಫ್ ದಿ ಇಂಡಸ್ಟ್ರಿಯಲ್ ವರ್ಕರ್ ಇನ್ ನೈಟೀಂತ್-ಸೆಂಚುರಿ ಇಂಗ್ಲೆಂಡ್".
  45. "Testimony Gathered by Ashley's Mines Commission". 2008. Retrieved 2008-03-22.
  46. "The Life of the Industrial Worker in Nineteenth-Century England". 2008. Retrieved 2008-03-22.
  47. "ಫೋಟೋಗ್ರಾಫ್ಸ್ ಆಫ್ ಲೆವಿಸ್ ಹೈನ್:ಡಾಕ್ಯುಮೆಂಟೇಷನ್ ಆಫ್ ಚೈಲ್ಡ್ ಲೇಬರ್ ". U.S. ರಾಷ್ಟ್ರೀಯ ಪತ್ರಾಗಾರಗಳು ಮತ್ತು ದಾಖಲೆಗಳ ಆಡಳಿತ.
  48. "ದಿ ಇಂಡಸ್ಟ್ರಿಯಲ್ ರಿವಾಲ್ಯೂಷನ್". ಶಿಕ್ಷಕರ ವೆಬ್ ಇನ್‌ಸ್ಟಿಟ್ಯೂಟ್
  49. General Strike 1842 From chartists.net. ೧೩ ನವೆಂಬರ್ ೨೦೦೬ರಂದು ಮರುಸಂಪಾದಿಸಲಾಗಿದೆ.
  50. Crafts, N (1994). "Trends in Real Wages in Britain, 1750-1913". Explorations in Economic History. 31: 176. doi:10.1006/exeh.1994.1007.
  51. ಇಂಡಸ್ಟ್ರಿಯಲ್ ರಿವಾಲ್ಯೂಷನ್ ಅಂಡ್ ದಿ ಸ್ಟಾಂಡರ್ಡ್ ಆಫ್ ಲೀವಿಂಗ್ www.econlib.org,ನಿಂದ,೧೭ ಜುಲೈ, ೨೦೦೬ರಂದು ಡೌನ್‌ಲೋಡ್ ಮಾಡಲಾಗಿದೆ.
  52. R.M. ಹಾರ್ಟ್‌ವೆಲ್ ದಿ ರೈಸಿಂಗ್ ಸ್ಟಾಂಡರ್ಡ್ ಆಫ್ ಲಿವಿಂಗ್ ಇನ್ ಇಂಗ್ಲೆಂಡ್ ೧೮೦೦-೧೮೫೦ ಎಕಾನಾಮಿಕ್ ಹಿಸ್ಟರಿ ರಿವ್ಯೂ, ೧೯೬೩, ಪುಟ ೩೯೮ ISBN ೦-೬೩೧-೧೮೦೭೧-೦
  53. "ದಿ UK ಪಾಪ್ಯುಲೇಷನ್: ಪಾಸ್ಟ್, ಪ್ರೆಸೆಂಟ್ ಅಂಡ್ ಫ್ಯೂಚರ್" (PDF). Statistics.gov.uk
  54. "ಎ ಪೋಟ್ರೈಟ್ ಆಫ್ ಬ್ರಿಟನ್ ಇನ್ 2031". ದಿ ಇಂಡಿಪೆಂಡೆಂಟ್‌. ಅಕ್ಟೋಬರ್‌ ೨೪, ೨೦೦೭.
  55. BBC - ಹಿಸ್ಟರಿ - ವಿಕ್ಟೋರಿಯನ್ ಮೆಡಿಸಿನ್- ಫ್ರಂ ಫ್ಲೂಕ್ ಟು ಥಿಯರಿ. ಪ್ರಕಟ: ೨೦೦೨-೦೨-೦೧.
  56. "ಮಾಡರ್ನೈಜೇಷನ್ - ಪಾಪ್ಯುಲೇಷನ್ ಚೇಂಜ್". ವಿಶ್ವಕೋಶ ಬ್ರಿಟಾನಿಕಾ
  57. "ಹ್ಯುಮನ್ ಪಾಪ್ಯುಲೇಷನ್: ಅರ್ಬನೈಜೇಷನ್ Archived 2009-10-26 ವೇಬ್ಯಾಕ್ ಮೆಷಿನ್ ನಲ್ಲಿ.". ಜನಸಂಖ್ಯಾ ಉಲ್ಲೇಖ ವಿಭಾಗ
  58. "ಹ್ಯುಮನ್ ಪಾಪ್ಯುಲೇಷನ್: ಪಾಪ್ಯುಲೇಷನ್ ಗ್ರೋತ್: ಕ್ವಶ್ಚನ್ ಅಂಡ್ ಆನ್ಸರ್ Archived 2013-04-06 ವೇಬ್ಯಾಕ್ ಮೆಷಿನ್ ನಲ್ಲಿ.". ಜನಸಂಖ್ಯಾ ಉಲ್ಲೇಖ ವಿಭಾಗ
  59. ಮ್ಯಾಂಚೆಸ್ಟರ್ (ಇಂಗ್ಲೆಂಡ್, ಯುನೈಟೆಡ್ ಕಿಂಗ್‌ಡಮ್). ವಿಶ್ವಕೋಶ ಬ್ರಿಟಾನಿಕಾ
  60. "ಡಿಸೀಸಸ್ ಇನ್ ಇಂಡಸ್ಟ್ರಿಯಲ್ ಸಿಟೀಸ್ ಇನ್ ದಿ ಇಂಡಸ್ಟ್ರಿಯಲ್ ರಿವಾಲ್ಯೂಷನ್". Historylearningsite.co.uk.
  61. "ಟ್ಯೂಬರ್‌ಕ್ಯುಲೋಸಿಸ್ ಇನ್ ಯುರೋಪ್ ಅಂಡ್ ನಾರ್ತ್ ಅಮೆರಿಕ, 1800–1922". ದಿ ಹಾರ್ವರ್ಡ್ ಯುನಿವರ್ಸಿಟಿ ಲೈಬ್ರರಿ, ಓಪನ್ ಕಲೆಕ್ಷನ್ಸ್ ಪ್ರೋಗ್ರಾಂ: ಕಂಟಾಜಿಯನ್.
  62. ಕ್ರಿಸ್ ಇವಾನ್ಸ್, ಗೊರಾನ್ ರೈಡನ್, ದಿ ಇಂಡಸ್ಟ್ರಿಯಲ್ ರಿವಾಲ್ಯೂಷನ್ ಇನ್ ಐರನ್; ದಿ ಇಂಪಾಕ್ಟ್ ಆಫ್ ಬ್ರಿಟಿಷ್ ಕೋಲ್ ಟೆಕ್ನಾಲಜಿ ಇನ್ ನೈನ್ಟೀಂತ್-ಸೆಂಚುರಿ ಯುರೋಪ್ ಆಷ್‌ಗೇಟ್ ಪಬ್ಲಿಷಿಂಗ್ ಲಿ. ಫರ್‌ನಾಂ ೨೦೦೫ ಪ್ರಕಟಣೆ. pp. ೩೭-೩೮ ISBN ೦೭೫೪೬೩೩೯೦X.
  63. ಎ ವರ್ಡ್ ಫ್ರಂವಾಲ್ಲೂನ್ ಒರಿಜಿನ್
  64. ಮರಿಯಲ್ ಬೆವೆನ್ ಅಂಡ್ ಇಸಾಬೆಲ್ಲಾ ಡೆವೋಸ್ 'ಬ್ರೇಕಿಂಗ್ ಸ್ಟೀರಿಯೋಟೈಪ್ಸ್', in M.ಬೆಯೆನ್ ಅಂಡ್ I.ಡೇವೊಸ್ (ಎಡಿಟರ್ಸ್), 'ರೀಸೆಂಟ್ ವರ್ಕ್ ಇನ್ ಬೆಲ್ಜಿಯನ್ ಹಿಸ್ಟೋರಿಕಲ್ ಡೆಮಾಗ್ರಫಿ', in Revue belge d'histoire contemporaine , XXXI, ೨೦೦೧, ೩-೪, ಪುಟಗಳು ೩೪೭-೩೫೯ [೨]
  65. ಫಿಲಿಪ್ ರಾಕ್ಸ್‌ಹಾನ್, Le siècle des forges ou la Wallonie dans le creuset belge (೧೭೯೪-೧೯೧೪) , ಇನ್ B.ಡೆಮೋಲಿನ್ ಅಂಡ್ JL ಕುಪ್ಪರ್ (ಎಡಿಟರ್ಸ್), Histoire de la Wallonie , ಪ್ರಿವಾಟ್, ಟೋಲ್‌ಹೋಸ್, ೨೦೦೪, ಪುಟಗಳು ೨೩೩-೨೭೬, p. ೨೪೬ ISBN ೨-೭೦೮೯-೪೭೭೯-೬
  66. [ಯುರೋಪಿಯನ್ ರೂಟ್ ಆಫ್ ಇಂಡಸ್ಟ್ರಿಯಲ್ ಹೆರಿಟೇಜ್ http://en.erih.net/index.php?pageId=114 Archived 2013-07-31 ವೇಬ್ಯಾಕ್ ಮೆಷಿನ್ ನಲ್ಲಿ.]
  67. ಮೈಕೇಲ್ ಡಿ ಕಾಸ್ಟರ್, Les enjeux des conflits linguistiques , L'ಹರ್ಮಟನ್, ಪ್ಯಾರಿಸ್, ೨೦೦೭, ISBN ೯೭೮-೨-೨೯೬-೦೩೩೯-೮ , ಪುಟಗಳು ೧೨೨-೧೨೩
  68. ಮುರಿಯನ್ ಬೆವೆನ್ ಅಂಡ್ ಇಸಾಬೆಲ್ಲಾ ಡೆವೋಸ್ ಬ್ರೇಕಿಂಗ್ ಸ್ಟೀರಿಯೊಟೈಪ್ಸ್ ಆರ್ಟ್,ಸಿಟ್., ಪುಟಗಳು ೩೧೫-೩೧೬
  69. ದಿ ಕೊಲಂಬಿಯ ಎನ್‌ಸೈಕ್ಲೋಪೀಡಿಯ, 2008
  70. ೭೦.೦ ೭೦.೧ "ಮೇಡ್ ಇನ್ ಬೆವರ್ಲಿ-ಎ ಹಿಸ್ಟರಿ ಆಫ್ ಬೆವರ್ಲಿ ಇಂಡಸ್ಟ್ರಿ"ಡೇನಿಯಲ್ J.ಹೋಯ್ಸಿಂಗ್‌ಟನ್ ಅವರಿಂದ. ಬೆವರ್ಲಿ ಹಿಸ್ಟಾರಿಕ್ ಡಿಸ್ಟ್ರಿಕ್ ಕಮೀಷನ್ ಅವರ ಪ್ರಕಟಣೆ ೧೯೮೯.
  71. ಮಾರ್ಷಲ್ ಮೆಕ್ಲುಹಾನ್ (೧೯೬೪) ಅಂಡರ್‌ಸ್ಟಾಂಡಿಂಗ್ ಮೀಡಿಯ , p.೧೩ [೩]
  72. Karl Marx: Communist as Religious Eschatologist PDF (3.68 MB)