ವಿಷಯಕ್ಕೆ ಹೋಗು

ಕೋಕಾ-ಕೋಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕೋಕ್ ಇಂದ ಪುನರ್ನಿರ್ದೇಶಿತ)
ಕೋಕಾ ಕೋಲಾ ಬಾಟ್ಲಿಂಗ್ ಕಾರ್ಖಾನೆ. ಜನವರಿ 8, 1941, ಮಾಂಟ್ರಿಯಲ್, ಕೆನಡಾ.
Coca-Cola

ಕೋಕಾ-ಕೋಲಾ ೨೦೦ಕ್ಕಿಂತ ಹೆಚ್ಚು ದೇಶಗಳಲ್ಲಿನ ಅಂಗಡಿಗಳು, ರೆಸ್ಟರಂಟ್‍ಗಳು, ಮತ್ತು ಬಿಕರಿ ಯಂತ್ರಗಳಲ್ಲಿ ಮಾರಾಟಮಾಡಲಾಗುವ ಒಂದು ಕಾರ್ಬನೇಟಡ್ ಅಮಾದಕ ಪಾನೀಯ. ಇದನ್ನು ಜಾರ್ಜ ರಾಜ್ಯದ ಅಟ್ಲಾಂಟಾದಲ್ಲಿರುವ ದ ಕೋಕಾ-ಕೋಲಾ ಕಂಪನಿ ತಯಾರಿಸುತ್ತದೆ, ಮತ್ತು ಇದು ಹಲವುವೇಳೆ ಕೇವಲ ಕೋಕ್ (ಮಾರ್ಚ್ ೨೭, ೧೯೪೪ರಿಂದ ಸಂಯುಕ್ತ ಸಂಸ್ಥಾನದಲ್ಲಿ ದ ಕೋಕಾ-ಕೋಲಾ ಕಂಪನಿಯ ಒಂದು ನೋಂದಾಯಿತ ವ್ಯಾಪಾರ ಚಿಹ್ನೆ) ಎಂದು ಉಲ್ಲೇಖಿಸಲ್ಪಡುತ್ತದೆ. ೧೯ನೇ ಶತಮಾನದ ಕೊನೆಯ ವರ್ಷಗಳಲ್ಲಿ ಜಾನ್ ಪೆಂಬರ್ಟನ್‍ರಿಂದ ಆವಿಷ್ಕರಿಸಲ್ಪಟ್ಟಾಗ ಮೂಲತಃ ಒಂದು ಪೇಟಂಟ್ ಔಷಧವಾಗಿ ಉದ್ದೇಶಿತವಾಗಿದ್ದ ಕೋಕಾ-ಕೋಲಾವನ್ನು ಉದ್ಯಮಿ ಏಸ ಗ್ರಿಗ್ಸ್ ಕ್ಯಾಂಡ್ಲರ್ ಖರೀದಿಸಿದರು ಮತ್ತು ಅವರ ಮಾರಾಟ ತಂತ್ರಗಳು ಕೋಕ್‍ನ ೨೦ನೇ ಶತಮಾನದಾದ್ಯಂತ ವಿಶ್ವ ಅಮಾದಕ ಪಾನೀಯ ಮಾರುಕಟ್ಟೆಯ ಪ್ರಭುತ್ವಕ್ಕೆ ಕಾರಣವಾದವು.