ವಿಷಯಕ್ಕೆ ಹೋಗು

ಗಡೀಪಾರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಡೀಪಾರು ಎಂದರೆ ಒಬ್ಬರ ಮನೆಯಿಂದ (ಅಂದರೆ ನಗರ, ರಾಜ್ಯ, ಅಥವಾ ದೇಶದಿಂದ) ದೂರ ಇರುವುದು, ಮತ್ತು ಆಗ ಹಿಂತಿರುಗಲು ಅನುಮತಿಯನ್ನು ಸ್ಪಷ್ಟವಾಗಿ ನಿರಾಕರಿಸಲಾಗುತ್ತದೆ ಅಥವಾ ಹಿಂತಿರುಗಿದರೆ ಸೆರೆಮನೆ ಅಥವಾ ಮರಣದ ಬೆದರಿಕೆ ಹಾಕಲಾಗುತ್ತದೆ. ಇದು ಶಿಕ್ಷೆ ಮತ್ತು ಒಂಟಿಜೀವನದ ರೂಪವಾಗಿರಬಹುದು.[೧] "ಆಂತರಿಕ ಗಡೀಪಾರು" (ಅಂದರೆ ವಾಸದ ದೇಶದೊಳಗೆ ಬಲವಂತದ ಪುನರ್ವಸತಿ), ಮತ್ತು "ಬಾಹ್ಯ ಗಡೀಪಾರು" (ಅಂದರೆ ನಿವಾಸದ ದೇಶದ ಹೊರಗಡೆ ಗಡೀಪಾರು ಮಾಡುವುದು) ನಡುವೆ ವ್ಯತ್ಯಾಸ ಮಾಡುವುದು ಸಾಮಾನ್ಯವಾಗಿದೆ. ಅತ್ಯಂತ ಸಾಮಾನ್ಯವಾಗಿ ಒಂದು ವೈಯಕ್ತಿಕ ಪರಿಸ್ಥಿತಿಯನ್ನು ವರ್ಣಿಸಲು ಬಳಸಲಾಗುತ್ತದಾದರೂ, ಈ ಪದವನ್ನು ಗುಂಪುಗಳಿಗೆ ಕೂಡ ಬಳಸಲಾಗುತ್ತದೆ (ವಿಶೇಷವಾಗಿ ಸ್ಥಳೀಯ ಅಥವಾ ರಾಷ್ಟ್ರೀಯ ಗುಂಪುಗಳು), ಅಥವಾ ಸಂಪೂರ್ಣ ಸರ್ಕಾರಕ್ಕೆ ಬಳಸಲಾಗುತ್ತದೆ. "ಚೆದುರಿ ಹೋದವರು" ಮತ್ತು "ನಿರಾಶ್ರಿತ"ಗಳಂತಹ ಪದಗಳು ಸ್ವಯಂಪ್ರೇರಿತ ಮತ್ತು ಬಲಾತ್ಕಾರದ ಗುಂಪು ಗಡೀಪಾರನ್ನು ವಿವರಿಸುತ್ತದೆ, ಮತ್ತು "ದೇಶಭ್ರಷ್ಟ ಸರ್ಕಾರ" ಪದವು ಬಲವಂತದಿಂದ ಸ್ಥಳಾಂತರಗೊಂಡ ಮತ್ತು ಆ ದೇಶದ ಹೊರಗಿನಿಂದ ತನ್ನ ನ್ಯಾಯಸಮ್ಮತತೆಯನ್ನು ವಾದಿಸುವ ಒಂದು ದೇಶದ ಸರ್ಕಾರವನ್ನು ವಿವರಿಸುತ್ತದೆ. ಗಡೀಪಾರು ಒಬ್ಬರ ತಾಯಿನಾಡಿನಿಂದ ಸ್ವಯಂ ವಿಹಿತ ನಿರ್ಗಮನ ಕೂಡ ಆಗಿರಬಹುದು. ಸ್ವಯಂ ಗಡೀಪಾರನ್ನು ಹಲವುವೇಳೆ ಅದನ್ನು ಸಾಧಿಸುವ ವ್ಯಕ್ತಿಯಿಂದ ಒಂದು ಪ್ರತಿಭಟನೆಯ ರೂಪವಾಗಿ (ಕಿರುಕುಳ ಅಥವಾ ಕಾನೂನು ವಿಷಯಗಳಿಂದ ತಪ್ಪಿಸಿಕೊಳ್ಳಲು (ಉದಾಹರಣೆಗೆ ತೆರಿಗೆ ಅಥವಾ ಅಪರಾಧದ ಆರೋಪಗಳು), ನಾಚಿಕೆ ಅಥವಾ ಪಶ್ಚಾತ್ತಾಪದ ಕ್ರಿಯೆ, ಒಂದು ನಿರ್ದಿಷ್ಟ ಪ್ರಯತ್ನಕ್ಕಾಗಿ ಸಮಯವನ್ನು ವಿನಿಯೋಗಿಸಲು ಸಾಧ್ಯವಾಗಲು ತಮ್ಮನ್ನು ದೂರವಿರಿಸಿಕೊಳ್ಳುವುದು) ಚಿತ್ರಿಸಲಾಗುತ್ತದೆ.

ಕೆಲವು ಸಂದರ್ಭಗಳಲ್ಲಿ, ಕ್ರಾಂತಿ ಅಥವಾ ಇತರ ಸರ್ಕಾರ ಬದಲಾವಣೆಯ ನಂತರ ಪದಚ್ಯುತ ದೇಶದ ಮುಖ್ಯಸ್ಥನಿಗೆ ಗಡೀಪಾರಾಗಲು ಅವಕಾಶ ನೀಡಲಾಗುತ್ತದೆ, ಇದರಿಂದ ಹೆಚ್ಚು ಶಾಂತಿಯುತ ಪರಿವರ್ತನೆ ನಡೆಯಲು ಅಥವಾ ಕಾನೂನಿನಿಂದ ತಪ್ಪಿಸಿಕೊಳ್ಳಲು ಅವಕಾಶ ಸಿಗುತ್ತದೆ.

ಕಡಿಮೆ ತೆರಿಗೆಗಳಿರುವ ನ್ಯಾಯವ್ಯಾಪ್ತಿಗೆ ಹೋಗುವ ಒಬ್ಬ ಶ್ರೀಮಂತ ನಾಗರಿಕನನ್ನು ತೆರಿಗೆ ದೇಶಭ್ರಷ್ಟನೆಂದು ಕರೆಯಲಾಗುತ್ತದೆ. ಹಠಾತ್ ಐಶ್ವರ್ಯವನ್ನು ಸಾಧಿಸುವ ಲೇಖಕರು ಮತ್ತು ಸಂಗೀತಗಾರರಂತಹ ಸೃಜನಾತ್ಮಕ ಜನರು ಕೆಲವೊಮ್ಮೆ ಈ ಪರಿಹಾರವನ್ನು ಆಯ್ದುಕೊಳ್ಳುತ್ತಾರೆ. ಉದಾಹರಣಗಳಲ್ಲಿ ತಮ್ಮ ಕಾದಂಬರಿಗಳಾದ ಹೋಟೆಲ್ ಮತ್ತು ಏರ್‌ಪೋರ್ಟ್‌ನ ಅಂಕೆತಪ್ಪಿದ ಯಶಸ್ಸಿನ ನಂತರ ತೆರಿಗೆಗಳನ್ನು ತಪ್ಪಿಸಲು ಬಹಾಮಾಸ್‍ಗೆ ಸ್ಥಳಾಂತರವಾದ ಬ್ರಿಟಿಷ್ ಕೆನೇಡೀಯನ್ ಬರಹಗಾರ ಆರ್ಥರ್ ಹೇಲಿ, ಮತ್ತು ಇಂಗ್ಲಿಷ್ ರಾಕ್ ಬ್ಯಾಂಡ್ ರೋಲಿಂಗ್ ಸ್ಟೋನ್ಸ್‌ನವರು ಸೇರಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. Hobbes, Thomas (1886). Leviathan; Or, The Matter, Form and Power of a Commonwealth, Ecclesiastical and Civil. George Routledge and Sons. p. 145.
"https://kn.wikipedia.org/w/index.php?title=ಗಡೀಪಾರು&oldid=876238" ಇಂದ ಪಡೆಯಲ್ಪಟ್ಟಿದೆ