ವೈಜ್ಞಾನಿಕ ಕ್ರಾಂತಿ
ವೈಜ್ಞಾನಿಕ ಕ್ರಾಂತಿ ಎಂದರೆ ಆರಂಭಿಕ ಆಧುನಿಕ ಕಾಲದಲ್ಲಿ ಗಣಿತ , ಭೌತಶಾಸ್ತ್ರ , ಖಗೋಳವಿಜ್ಞಾನ , ಜೀವಶಾಸ್ತ್ರ ( ಮಾನವ ಅಂಗರಚನಾಶಾಸ್ತ್ರ ಸೇರಿದಂತೆ) ಮತ್ತು ರಸಾಯನಶಾಸ್ತ್ರದ ಬೆಳವಣಿಗೆಗಳು ಪ್ರಕೃತಿಯ ಬಗೆಗಿನ ಸಮಾಜದ ದೃಷ್ಟಿಕೋನವನ್ನು ಬದಲಾಯಿಸಿದ ಹಲವು ಘಟನಾವಳಿಗಳ ಸರಣಿ. ಇದರ ಪರಿಣಾಮವಾಗಿ ಆಧುನಿಕ ವಿಜ್ಞಾನ ಹೊರಹೊಮ್ಮಿತು.[೧][೨][೩][೪][೫] ವೈಜ್ಞಾನಿಕ ಕ್ರಾಂತಿಯು ಯುರೋಪಿನಲ್ಲಿ ನವೋದಯ ಅಥವಾ ಪುನರುತ್ಥಾನದ ಅವಧಿಯ ಅಂತ್ಯದಲ್ಲಿ ನಡೆಯಿತು ಮತ್ತು 18 ನೇ ಶತಮಾನದ ಉತ್ತರಾರ್ಧದಲ್ಲಿ ಮುಂದುವರೆಯಿತು. ಇದು ಜ್ಞಾನೋದಯ ಎಂದು ಕರೆಯಲ್ಪಡುವ ಯುರೋಪಿನ ಬೌದ್ಧಿಕ ಸಾಮಾಜಿಕ ಚಳುವಳಿಯ ಮೇಲೆ ಪ್ರಭಾವ ಬೀರಿತು. ಅದರ ದಿನಾಂಕಗಳು ಚರ್ಚಿಸುವಾಗ 1543 ರಲ್ಲಿ ನಿಕೊಲಸ್ ಕೋಪರ್ನಿಕಸ್ ಅವರ “ಆನ್ ದಿ ರೆವಲ್ಯೂಷನ್ಸ್ ಆಫ್ ದಿ ಹೆವೆನ್ಲಿ ಸ್ಪಿಯರ್ಸ್ “ ನ ಪ್ರಕಟಣೆಯು ವೈಜ್ಞಾನಿಕ ಕ್ರಾಂತಿಯ ಆರಂಭವನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ.
ಹದಿನೆಂಟನೇ ಶತಮಾನದಲ್ಲಿ ಜೀನ್ ಸಿಲ್ವೆನ್ ಬೈಲ್ಲಿ ಅವರ ಕೃತಿಯಲ್ಲಿ ವೈಜ್ಞಾನಿಕ ಕ್ರಾಂತಿಯ ಪರಿಕಲ್ಪನೆಯು ಕಾಣಿಸಿಕೊಂಡಿತು ಮತ್ತು ಅವರು ಅದನ್ನು ಹಳೆಯದನ್ನು ಅಳಿಸಿಹಾಕುವ ಮತ್ತು ಹೊಸದನ್ನು ಸ್ಥಾಪಿಸುವ ಎರಡು ಹಂತಗಳ ಪ್ರಕ್ರಿಯೆಯಾಗಿ ನೋಡಿದರು.[೬] ವೈಜ್ಞಾನಿಕ ಕ್ರಾಂತಿಯ ಮತ್ತು 'ವೈಜ್ಞಾನಿಕ ನವೋದಯ'ಗಳ ಆರಂಭವು ತಮ್ಮ ಪೂರ್ವಿಕರ ಅರಿವನ್ನು ಮತ್ತೆ ಪಡೆಯವದರ ಮೇಲೆ ಕೇಂದ್ರೀಕೃತವಾಗಿತ್ತು; ಇದನ್ನು ಸಾಮಾನ್ಯವಾಗಿ 1632 ರಲ್ಲಿ ಗೆಲಿಲಿಯೋ ಅವರ “ಎರಡು ಮುಖ್ಯ ವಿಶ್ವ ವ್ಯವಸ್ಥೆಗಳಿಗೆ ಸಂಬಂಧಿಸಿದ ಸಂವಾದ”ದ ಪ್ರಕಟಣೆಯೊಂದಿಗೆ ಕೊನೆಗೊಂಡಿದೆ ಎಂದು ಪರಿಗಣಿಸಲಾಗಿದೆ. [೭] ವೈಜ್ಞಾನಿಕ ಕ್ರಾಂತಿಯ ಕೊನೆಗೊಳ್ಳುವುದು ಐಸಾಕ್ ನ್ಯೂಟನ್‌ರ 1687 ಪ್ರಿನ್ಸಿಪಿಯಾದ "ಮಹಾ ಸಂಶ್ಲೇಷಣೆ" ಯೊಂದಿಗೆ. ಈ ಕೃತಿಯು ಚಲನೆ ಮತ್ತು ಸಾರ್ವತ್ರಿಕ ಗುರುತ್ವಾಕರ್ಷಣೆಯ ನಿಯಮಗಳನ್ನು ರೂಪಿಸಿತು ಮತ್ತು ಆ ಮೂಲಕ ಹೊಸ ವಿಶ್ವವಿಜ್ಞಾನದ ಸಂಶ್ಲೇಷಣೆಯನ್ನು ಪೂರ್ಣಗೊಳಿಸುತ್ತದೆ. [೮] 18 ನೇ ಶತಮಾನದ ಅಂತ್ಯದ ವೇಳೆಗೆ, ವೈಜ್ಞಾನಿಕ ಕ್ರಾಂತಿಯು ಜ್ಞಾನೋದಯದ ಯುಗಕ್ಕೆ ದಾರಿಮಾಡಿಕೊಟ್ಟರೆ ನಂತರ " ಪ್ರತಿಬಿಂಬದ ಯುಗ " ಅದನ್ನು ಹಿಂಬಾಲಿಸಿತು.
ಪ್ರಾಚೀನ ಮತ್ತು ಮಧ್ಯಕಾಲೀನ ಹಿನ್ನೆಲೆ
[ಬದಲಾಯಿಸಿ]ವೈಜ್ಞಾನಿಕ ಕ್ರಾಂತಿಯನ್ನು ಮಧ್ಯಯುಗದಲ್ಲಿ ಪ್ರಾಚೀನ ಗ್ರೀಕ್ ಅರಿವು ಮತ್ತು ವಿಜ್ಞಾನದ ಅಡಿಪಾಯಗಳ ಮೇಲೆ ನಿರ್ಮಿಸಲಾಯಿತು. ಈ ಚಿಂತನೆಗಳನ್ನು ರೋಮನ್ / ಬೈಜಾಂಟೈನ್ ವಿಜ್ಞಾನ ಮತ್ತು ಮಧ್ಯಕಾಲೀನ ಇಸ್ಲಾಮಿಕ್ ವಿಜ್ಞಾನವು ವಿಸ್ತರಿಸಿ ಮತ್ತು ಅಭಿವೃದ್ಧಿಪಡಿಸಿತ್ತು. [೯] ಕೆಲವು ವಿದ್ವಾಂಸರು "ಸಾಂಪ್ರದಾಯಿಕ ಕ್ರಿಶ್ಚಿಯನ್ ಧರ್ಮದ ನಿರ್ದಿಷ್ಟ ಅಂಶಗಳು" ಮತ್ತು ವಿಜ್ಞಾನದ ಉದಯದ ನಡುವೆ ನೇರ ಸಂಬಂಧವನ್ನು ಗುರುತಿಸಿದ್ದಾರೆ. [] 18] [ ] [೧೦][೧೧] " ಅರಿಸ್ಟಾಟಲ್ ಸಂಪ್ರದಾಯ " 17 ನೇ ಶತಮಾನದಲ್ಲಿಯೂ ಸಹ ಒಂದು ಪ್ರಮುಖ ಬೌದ್ಧಿಕ ಚೌಕಟ್ಟಾಗಿ ಉಳಿದುಕೊಂಡಿತ್ತು. ಆದರೆ ಆ ಹೊತ್ತಿಗೆ ನಿಸರ್ಗ ದಾರ್ಶನಿಕರು ಅದರಿಂದ ಹೆಚ್ಚು ಹೆಚ್ಚು ದೂರ ಸರಿಯತೊಡಗಿದರು. [೫] ಪ್ರಮುಖ ವೈಜ್ಞಾನಿಕ ಚಿಂತನೆಗಳು ಪ್ರಾಚೀನ ಚಿಂತನೆಯಿಂದ ತೀರ ಭಿನ್ನವಾಗಿದ್ದವು. ಅನೇಕ ಸಂದರ್ಭಗಳಲ್ಲಿ ಈ ಪ್ರಾಚೀನ ಚಿಂತನೆಯ ಅಪಖ್ಯಾತಿಗೂ ಒಳಗಾಗಿತ್ತು. [೫] ವೈಜ್ಞಾನಿಕ ಕ್ರಾಂತಿಯ ಸಮಯದಲ್ಲಿ ಮೂಲಭೂತವಾಗಿ ರೂಪಾಂತರಗೊಂಡ ಆಲೋಚನೆಗಳು ಸೇರಿವೆ:
- ಅರಿಸ್ಟಾಟಲ್‌ನ ವಿಶ್ವವಿಜ್ಞಾನವು ಭೂಮಿಯನ್ನು ಗೋಳಾಕಾರದ ಶ್ರೇಣೀಕೃತ ಬ್ರಹ್ಮಾಂಡದ ಮಧ್ಯದಲ್ಲಿ ಇರಿಸಿತ್ತು. ಭೂಮಂಡಲ ಮತ್ತು ಆಕಾಶವು ವಿಭಿನ್ನ ಅಂಶಗಳಿಂದ ಕೂಡಿದ್ದು ಅವೆರಡು ಬೇರೆ ಬೇರೆ ರೀತಿಯ ಚಲನೆಯನ್ನು ಹೊಂದಿವೆ.
- ಅರಿಸ್ಟಾಟಲ್‌ನ ಪ್ರಕಾರ ಭೂಮಿಯ ಭಾಗವು ನಾಲ್ಕು |ಧಾತುಗಳು ಎಂದರೆ ಭೂಮಿ , ನೀರು , ಗಾಳಿ ಮತ್ತು ಬೆಂಕಿ ಎಂಬ ನಾಲ್ಕು ಒಂದರಳಗೊಂದು ಇರುವ ಕೇಂದ್ರೀಕೃತ ಗೋಳಗಳನ್ನು ಒಳಗೊಂಡಿದೆ. ಎಲ್ಲಾ ವಸ್ತುಗಳು ಅವುಗಳ ಧಾತುರೂಪದ ಸಂಯೋಜನೆಗೆ ಸೂಕ್ತವಾದ ಗೋಳವನ್ನು ತಲುಪುವವರೆಗೆ ಸ್ವಾಭಾವಿಕವಾಗಿ ಸರಳ ರೇಖೆಯಲ್ಲಿ ಚಲಿಸಿ ತಮ್ಮ ನೈಸರ್ಗಿಕ ಸ್ಥಾನವನ್ನು ಸೇರುತ್ತವೆ.ಭೂಮಿಯ ಮೇಲಿನ ಇತರ ಎಲ್ಲಾ ಚಲನೆಗಳೂ ನೈಸರ್ಗಿಕವಲ್ಲದ ಚಲನೆಗಳು . [೧೨][೧೩]
- ಆಕಾಶದ ಭಾಗವು ಐದನೇ ಅಂಶವಾದ ಬದಲಾಗದ ಈತರ್‌ನಿಂದ ರೂಪಗೊಂಡಿದೆ. ಅಲ್ಲಿಯ ಎಲ್ಲ ಚಲನೆಗಳ ವೃತ್ತಾಕಾರದವು ಮತ್ತು ನೈಸರ್ಗಿಕ. [೧೪] ಅರಿಸ್ಟಾಟಲ್ ಸಂಪ್ರದಾಯದ ಖಗೋಳ ಸಿದ್ಧಾಂತಗಳು ಆಕಾಶದ, ನಿಯಮಕ್ಕೆ ಒಳಪಡದ ಚಲನೆಗಳನ್ನು, ಅನೇಕ ಸಂಕೀರ್ಣ ವೃತ್ತಾಕಾರದ ಚಲನೆಗಳನ್ನು ಒಟ್ಟುಗೂಡಿಸುವ ಮಾದರಿ ಬಳಸುವ ಮೂಲಕ ವಿವರಿಸಲು ಪ್ರಯತ್ನಿಸಿದವು. [೧೫]
- ಟಾಲೆಮಿ ಮಾದರಿಯ ಗ್ರಹಗಳ ಚಲನೆ : ಸಿನಡಸ್‌ಯ ಯುಡೋಕ್ಸಸ್‌ನ ಜ್ಯಾಮಿತಿಯ ಮಾದರಿಯನ್ನು ಆಧರಿಸಿ ಟಾಲೆಮಿಯು ತನ್ನ ಕೃತಿ ಆಲ್ಮಜೆಸ್ಟ್‌ನಲ್ಲಿ ಭವಿಷ್ಯದಲ್ಲಿ ಮತ್ತು ಕಾಲದಲ್ಲಿ ಹಿಂದೆ ಸೂರ್ಯ, ಚಂದ್ರ, ನಕ್ಷತ್ರಗಳು ಮತ್ತು ಗ್ರಹಗಳ ಸ್ಥಾನಗಳ ನಿಖರ ಲೆಕ್ಕಾಚಾರ ಮಾಡಬಹುದೆಂದು ತೋರಿಸಿಕೊಟ್ಟಿತು. ಅಲ್ಲದೆ ಖಗೋಳದ ಅವಲೋಕನಗಳನ್ನು ಬಳಸಿ ಹೇಗೆ ಇವುಗಳನ್ನು ಲೆಕ್ಕ ಹಾಕಬಹುದು ಎಂದು ಸಹ ತೋರಿಸಿಕೊಟ್ಟಿತು. ಟಾಲೆಮಿಯ ಮಾದರಿಯು ಭೌತಿಕ ವಾಸ್ತವತೆಯನ್ನು ವಿವರಿಸಲು ಗೋಳಾಕಾರದ ಚಿಪ್ಪುಗಳ ಪದರಗಳನ್ನು ಬಳಸಿತು. ಆದರೆ ಹೆಚ್ಚು ಸಂಕೀರ್ಣ ಮಾದರಿಗಳು ಈ ಭೌತಿಕ ವಿವರಣೆಗೆ ಸರಿ ಹೊಂದುತ್ತಿರಲಿಲ್ಲ. [೧೬]
ಉಲ್ಲೇಖಗಳು
[ಬದಲಾಯಿಸಿ]- ↑ Galilei, Galileo (1974) Two New Sciences, trans. Stillman Drake, (Madison: Univ. of Wisconsin Pr. pp. 217, 225, 296–67.
- ↑ Moody, Ernest A. (1951). "Galileo and Avempace: The Dynamics of the Leaning Tower Experiment (I)". Journal of the History of Ideas. 12 (2): 163–93. doi:10.2307/2707514. JSTOR 2707514.
- ↑ Clagett, Marshall (1961) The Science of Mechanics in the Middle Ages. Madison, Univ. of Wisconsin Pr. pp. 218–19, 252–55, 346, 409–16, 547, 576–78, 673–82
- ↑ Maier, Anneliese (1982) "Galileo and the Scholastic Theory of Impetus," pp. 103–23 in On the Threshold of Exact Science: Selected Writings of Anneliese Maier on Late Medieval Natural Philosophy. Philadelphia: Univ. of Pennsylvania Pr. ISBN 0-8122-7831-3
- ↑ ೫.೦ ೫.೧ ೫.೨ Hannam, p. 342
- ↑ >Cohen, I. Bernard (1976). "The Eighteenth-Century Origins of the Concept of Scientific Revolution". Journal of the History of Ideas. 37 (2): 257–88. doi:10.2307/2708824. JSTOR 2708824..
- ↑ Cohen, I. Bernard (1965). "Reviewed work: The Scientific Renaissance, 1450-1630, Marie Boas". Isis. 56 (2): 240–42. doi:10.1086/349987. JSTOR 227945.
- ↑ "PHYS 200 – Lecture 3 – Newton's Laws of Motion – Open Yale Courses". oyc.yale.edu.
- ↑ Grant, pp. 29–30, 42–47.
- ↑ Noll, Mark, Science, Religion, and A.D. White: Seeking Peace in the "Warfare Between Science and Theology" (PDF), The Biologos Foundation, p. 4, archived from the original (PDF) on 22 March 2015, retrieved 14 January 2015
- ↑ Lindberg, David C.; Numbers, Ronald L. (1986), "Introduction", God & Nature: Historical Essays on the Encounter Between Christianity and Science, Berkeley and Los Angeles: University of California Press, pp. 5, 12, ISBN 978-0-520-05538-4,
It would be indefensible to maintain, with Hooykaas and Jaki, that Christianity was fundamentally responsible for the successes of seventeenth-century science. It would be a mistake of equal magnitude, however, to overlook the intricate interlocking of scientific and religious concerns throughout the century.
- ↑ Grant, pp. 55–63, 87–104
- ↑ Pedersen, pp. 106–10.
- ↑ Grant, pp. 63–68, 104–16.
- ↑ Pedersen, pp. 86–89.
- ↑ Pedersen, pp. 86–89.
ಮುಂದಿನ ಓದು
[ಬದಲಾಯಿಸಿ]- Burns, William E. The Scientific Revolution in Global Perspective (Oxford University Press, 2016) xv + 198 pp.
- Cohen, H. Floris. The Rise of Modern Science Explained: A Comparative History (Cambridge University Press, 2015). vi + 296 pp.
- Grant, E. (1996). The Foundations of Modern Science in the Middle Ages: Their Religious, Institutional, and Intellectual Contexts. Cambridge Univ. Press. ISBN 978-0-521-56762-6.
- Hannam, James (2011). The Genesis of Science. ISBN 978-1-59698-155-3.
- Henry, John. The Scientific Revolution and the Origins of Modern Science (2008), 176 pp
- Knight, David. Voyaging in Strange Seas: The Great Revolution in Science (Yale U.P., 2014) viii + 329 pp.
- Lindberg, D.C. The Beginnings of Western Science: The European Scientific Tradition in Philosophical, Religious, and Institutional Context, 600 B.C. to A.D. 1450 (Univ. of Chicago Press, 1992).
- Pedersen, Olaf (1993). Early Physics and Astronomy: A Historical Introduction. Cambridge Univ. Press. ISBN 978-0-521-40899-8.
- Sharratt, Michael (1994). Galileo: Decisive Innovator. Cambridge: Cambridge University Press. ISBN 978-0-521-56671-1.
- Shapin, Steven (1996). The Scientific Revolution. Chicago: Chicago University Press. ISBN 978-0-226-75020-0.
- Weinberg, Steven. To Explain the World: The Discovery of Modern Science (2015) xiv + 417 pp.
- Westfall, Richard S. Never at Rest: A Biography of Isaac Newton (1983).
- Westfall, Richard S. (1971). The Construction of Modern Science. New York: John Wiley and Sons. ISBN 978-0-521-29295-5.
- Wootton, David. The Invention of Science: A New History of the Scientific Revolution (Penguin, 2015) . xiv + 769 pp. ISBN 0-06-175952-X