ವಿಷಯಕ್ಕೆ ಹೋಗು

ಮುದ್ರಣ ಯಂತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ಯಾಲಿಫ಼ೋರ್ನಿಯಾದಲ್ಲಿ ಪುನರ್ಸೃಷ್ಟಿಸಲಾದ ಗೂಟನ್‍ಬರ್ಗ್ ಮುದ್ರಣ ಯಂತ್ರ

ಮುದ್ರಣ ಯಂತ್ರ (ಕಾಗದ ಅಥವಾ ಬಟ್ಟೆಯಂತಹ) ಮುದ್ರಣ ಮಾಧ್ಯಮದ ಮೇಲೆ ನಿಂತಿರುವ ಶಾಯಿಯುಕ್ತ ಮೇಲ್ಮೈಗೆ ಒತ್ತಡ ಹಾಕಲು, ಮತ್ತು ಆ ಮೂಲಕ ಶಾಯಿಯನ್ನು ವರ್ಗಾಯಿಸಲು ಬಳಸಲಾಗುವ ಒಂದು ಸಾಧನ. ಸಾಮಾನ್ಯವಾಗಿ ಪಠ್ಯಗಳಿಗೆ ಬಳಸಲಾದ ಮುದ್ರಣ ಯಂತ್ರದ ಆವಿಷ್ಕಾರ ಮತ್ತು ಹರಡುವಿಕೆ ಎರಡನೇ ಸಹಸ್ರಮಾನದ ಅತ್ಯಂತ ಪ್ರಭಾವಿ ಘಟನೆಗಳ ಪೈಕಿ ಒಂದಾಗಿತ್ತು[೧] ಮತ್ತು ಜನರು ತಾವು ವಾಸಿಸುವ ವಿಶ್ವವನ್ನು ಕಲ್ಪಿಸುವ ಹಾಗೂ ವಿವರಿಸುವ ರೀತಿಯಲ್ಲಿ ಕ್ರಾಂತಿ ಉಂಟುಮಾಡಿತು, ಮತ್ತು ಆಧುನಿಕ ಯುಗವನ್ನು ಬರಮಾಡಿಕೊಂಡಿತು.

ಮುದ್ರಣ ಯಂತ್ರವನ್ನು ಪವಿತ್ರ ರೋಮನ್ ಸಾಮ್ರಾಜ್ಯದಲ್ಲಿ, ಅಸ್ತಿತ್ವದಲ್ಲಿದ್ದ ತಿರುಪು ಒತ್ತು ಯಂತ್ರಗಳನ್ನು ಆಧರಿಸಿ, ೧೪೪೦ರ ಸುಮಾರು ಜರ್ಮನಿಯೊಹಾನಸ್ ಗೂಟನ್‍ಬರ್ಗ್‍ರಿಂದ ಆವಿಷ್ಕರಿಸಲಾಯಿತು. ವೃತ್ತಿಯಿಂದ ಚಿನಿವಾರನಾಗಿದ್ದ ಗೂಟನ್‍ಬರ್ಗ್, ಸಂಪೂರ್ಣ ಮುದ್ರಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದನು, ಮತ್ತು ಇದು ಅಸ್ತಿತ್ವದಲ್ಲಿದ್ದ ತಂತ್ರಜ್ಞಾನಗಳನ್ನು ಮುದ್ರಣ ಉದ್ದೇಶಗಳಿಗಾಗಿ ಅಳವಡಿಸಿಕೊಂಡು, ಮತ್ತು ಜೊತೆಗೆ ತನ್ನ ಸ್ವಂತ ನವೀನ ಆವಿಷ್ಕಾರಗಳನ್ನು ಮಾಡಿ, ಮುದ್ರಣ ಪ್ರಕ್ರಿಯೆಯನ್ನು ಅದರ ಎಲ್ಲ ಹಂತಗಳ ಒಂದು ಕೊನೆಯಿಂದ ಮತ್ತೊಂದು ಕೊನೆಗೆ ಪರಿಪೂರ್ಣಗೊಳಿಸಿತು.

ಹಲವು ದಶಕಗಳಲ್ಲಿ ಹನ್ನೆರಡು ಐರೋಪ್ಯ ದೇಶಗಳಲ್ಲಿನ ಇನ್ನೂರಕ್ಕೂ ಹೆಚ್ಚು ನಗರಗಳಿಗೆ ಮುದ್ರಣ ಯಂತ್ರ ಹರಡಿತು.

ಉಲ್ಲೇಖಗಳು

[ಬದಲಾಯಿಸಿ]
  1. For example, in 1999, the A&E Network ranked Gutenberg no. 1 on their "People of the Millennium" countdown Archived 2010-08-29 ವೇಬ್ಯಾಕ್ ಮೆಷಿನ್ ನಲ್ಲಿ.. In 1997, Time–Life magazine picked Gutenberg's invention as the most important of the second millennium Archived 2010-03-10 ವೇಬ್ಯಾಕ್ ಮೆಷಿನ್ ನಲ್ಲಿ.; the same did four prominent US journalists in their 1998 resume 1,000 Years, 1,000 People: Ranking The Men and Women Who Shaped The Millennium Archived 2012-03-03 ವೇಬ್ಯಾಕ್ ಮೆಷಿನ್ ನಲ್ಲಿ.. The Johann Gutenberg entry of the Catholic Encyclopedia describes his invention as having made a practically unparalleled cultural impact in the Christian era.