ಮಾಸ್ಕೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾಸ್ಕೋ
Москва
ಕೆಂಪು ಚೌಕ
ರಷ್ಯಾದ ಭೂಪಟದಲ್ಲಿ ಮಾಸ್ಕೋ
ರಷ್ಯಾದ ಭೂಪಟದಲ್ಲಿ ಮಾಸ್ಕೋ
ದೇಶFlag of Russia.svg ರಷ್ಯಾ
ಸ್ಥಾಪನೆ೧೧೪೭
ಸರ್ಕಾರ
 • ಮೇಯರ್ಯುರಿ ಲುಜ್ಕೋವ್
Area
 • Total೧,೦೮೧ km (೪೧೭ sq mi)
Population
 • Total೧,೦೪,೭೦,೩೧೮
 (೧ನೆಯ ಸ್ಥಾನ)
ಜಾಲತಾಣwww.mos.ru

ಮಾಸ್ಕೋ ಇದು ರಷ್ಯಾ ದೇಶದ ರಾಜಧಾನಿ ಮತ್ತು ಅತಿ ದೊಡ್ಡ ನಗರ, ಅಷ್ಟೇ ಅಲ್ಲದೇ ಯುರೋಪ್ ಖಂಡದ ಅತಿ ದೊಡ್ಡ ನಗರ ಮತ್ತು ಜಗತ್ತಿನ ಅತೀ ದೊಡ್ಡ ನಗರದಲ್ಲಿ ಒಂದು ಕೂಡ. ಇದು ರಷ್ಯಾ ದೇಶದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಹಣಕಾಸು, ಶಿಕ್ಷಣ ಮತ್ತೊ ಸಂಚಾರ ವ್ಯವಸ್ಥೆಯ ಮುಖ್ಯ ಕೇಂದ್ರ ಕೂಡ. ಈ ನಗರವು ಮೋಸ್ಕವಾ ನದಿಯ ದಂಡೆಯ ಮೇಲೆ ಯುರೋಪ್ ಖಂಡದ ಭಾಗದ ರಷ್ಯಾದಲ್ಲಿದೆ. ಐತಿಹಾಸಿಕವಾಗಿ ಮಾಸ್ಕೋ ಹಿಂದಿನ ಸೋವಿಯತ್ ರಷ್ಯಾ ಮತ್ತು ಸೋವಿಯತ್ ರಾಜ ಮನೆತನದ ರಾಜಧಾನಿಯಾಗಿತ್ತು. ಇಲ್ಲಿಯೇ ರಷ್ಯಾದ ರಾಷ್ಟ್ರಾಧ್ಯಕ್ಷರ ಮುಖ್ಯ ನಿವಾಸವಾದ ಕ್ರೆಮ್ಲಿನ್ ಅರಮನೆಯಿದೆ. ಈ ನಗರದಲ್ಲಿ ಜಗತ್ತಿನ ಅತೀ ಹೆಚ್ಚು ಶ್ರೀಮಂತ ಜನರು ವಾಸಿಸುತ್ತಾರೆ. ೨೦೦೭ರಲ್ಲಿ ಸತತ ಎರಡನೇಯ ವರ್ಷ ಜಗತ್ತಿನ ಅತೀ ದುಬಾರಿ ನಗರವೆಂದು ಘೋಷಿಸಲಾಗಿತ್ತು. ಇಲ್ಲಿ ಉನ್ನತ ಶಿಕ್ಷಣದ ಕೇಂದ್ರಗಳು, ವೈಞ್ನಾನಿಕ ಸಂಶೋಧನೆಯ ಕೇಂದ್ರಗಳು ಮತ್ತು ಅನೇಕ ವಿವಿಧ ಬಗೆಯ ಕ್ರೀಡೆಯ ಕೇಂದ್ರಗಳಿವೆ. ಈ ನಗರವು ಸಂಕೀರ್ಣವಾದ ಸಂಚಾರ ವ್ಯವಸ್ಥೆಯನ್ನು ಹೊಂದಿದ್ದು ಅದು ಸಂಚಾರ ವ್ಯವಸ್ಥೆಗಲ್ಲದೇ ಕಲೆ ಮತ್ತು ಕಲಾತ್ಮಕವಾದ ಚಿತ್ರಕಲೆಗಳಿಗೂ ಪ್ರಸಿದ್ಧವಾಗಿದೆ.

ಪ್ರಸಿದ್ಧ ಸ್ಥಳೀಯರು[ಬದಲಾಯಿಸಿ]

ಲಿಯೊನಿಡ್ ಅಗುಟಿನ್-ಗಾಯಕ , ಸಂಯೋಜಕ, ಸಂಗೀತಗಾರ, ಗೀತರಚನೆಕಾರ

ಅಲೆಕ್ಸಾಂಡರ್ ಬಲುಯೆವ್-ರಂಗಭೂಮಿ ಮತ್ತು ಚಲನಚಿತ್ರ ನಟ

ಅಲೆಕ್ಸಾಂಡರ್ ಡೊಮೊಗರೋವ್-ನಟ, ಗಾಯಕ, ಟಿವಿ ನಿರೂಪಕ

ಅಲೆಕ್ಸಾಂಡರ್ ಜ್ಬ್ರೂವ್-ರಂಗಭೂಮಿ ಮತ್ತು ಚಲನಚಿತ್ರ ನಟ

ಅಲೆಕ್ಸಿ ಸೆರೆಬ್ರಿಯಾಕೋವ್ ಥಿಯೇಟರ್ ಮತ್ತು ಚಲನಚಿತ್ರ ನಟ

ಅಲೆಕ್ಸಿ ಚಾಡೋವ್-ನಟ

ಆಂಡ್ರೆ ಸೊಕೊಲೊವ್-ರಂಗಭೂಮಿ ಮತ್ತು ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ

ಫೆಲಿಕ್ಸ್ ಯೆವ್ತುಶೆಂಕೋವ್ ರಷ್ಯಾದ ಉದ್ಯಮಿ[೧][೨][೩]

ಟಾಗಿರ್ ಸಿಟ್ಡೆಕೊವ್, ಹಲವು ವರ್ಷಗಳ ಅನುಭವ ಹೊಂದಿರುವ ವ್ಯವಸ್ಥಾಪಕ, ಹಣಕಾಸುದಾರ[೪][೫][೬]

ಆಂಡ್ರೆ ಸ್ಕೋಚ್, ರಷ್ಯಾದ ಸಂಸತ್ತಿನ ಸದಸ್ಯ[೭][೮][೯]

  1. https://newizv.ru/tags/evtushenkov-feliks-vladimirovich
  2. https://hrmonitor.ru/bio/evtushenkov-felix.html/
  3. https://biographe.ru/biznesmeni/feliks-evtushenkov/
  4. https://www.comnews.ru/content/224395/2023-02-13/2023-w07/sitdekov-tagir-chastnaya-medicina-ne-ustupaet-gosudarstvennoy
  5. https://theperson.pro/tagir-sitdekov/
  6. https://fedpress.ru/person/3214748
  7. https://bigpicture.ru/andrej-skoch-biografiya-deputata-gosud/
  8. https://biographe.ru/politiki/andrey-skoch/
  9. http://viewout.ru/andrey-skoch-biografiya-rossiyskogo-deputata-i-filantropa
"https://kn.wikipedia.org/w/index.php?title=ಮಾಸ್ಕೋ&oldid=1171410" ಇಂದ ಪಡೆಯಲ್ಪಟ್ಟಿದೆ