ಫಿಜಿ
ಧ್ಯೇಯ: [Rerevaka na Kalou ka Doka na Tui] Error: {{Lang}}: text has italic markup (help) ದೇವರಿಗೆ ಹೆದರು ಮತ್ತು ರಾಣಿಯನ್ನು ಸತ್ಕರಿಸು | |
ರಾಷ್ಟ್ರಗೀತೆ: God Bless Fiji | |
ರಾಜಧಾನಿ | ಸುವಾ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಆಂಗ್ಲ, ಫಿಜಿ ಭಾಷೆ, ಮತ್ತು ಹಿಂದುಸ್ತಾನಿ ಭಾಷೆ (ಹಿಂದಿ ಮತ್ತು ಉರ್ದು) |
ಸರಕಾರ | ಗಣರಾಜ್ಯ (ಸೇನೆಯ ಆಡಳಿತದಡಿ) |
- ರಾಷ್ಟ್ರಪತಿ | Ratu Josefa Iloilovatu Uluivuda (Josefa Iloilo) |
- ಪ್ರಧಾನ ಮಂತ್ರಿ | Commodore Josaia Voreqe (Frank) Bainimarama |
- GCC Chairman | Ratu Ovini Bokini |
ಸ್ವಾತಂತ್ರ್ಯ | ಯುನೈಟೆಡ್ ಕಿಂಗ್‍ಡಮ್ನಿಂದ |
- ದಿನಾಂಕ | ಅಕ್ಟೊಬರ್ ೧೦, ೧೯೭೦ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 18,274 ಚದರ ಕಿಮಿ ; (155th) |
7,056 ಚದರ ಮೈಲಿ | |
- ನೀರು (%) | negligible |
ಜನಸಂಖ್ಯೆ | |
- ಡಿಸೆಂಬರ್ ೨೦೦೬ರ ಅಂದಾಜು | 853,445 (156th) |
- ಸಾಂದ್ರತೆ | ೪೬ /ಚದರ ಕಿಮಿ ; (148th) ೧೧೯ /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
- ಒಟ್ಟು | $5.447 billion (149th) |
- ತಲಾ | $6,375 (93rd) |
ಮಾನವ ಅಭಿವೃದ್ಧಿ ಸೂಚಿಕ (೨೦೦೪) |
0.758 (90th) – ಮಧ್ಯಮ |
ಚಲಾವಣಾ ನಾಣ್ಯ/ನೋಟು | ಫಿಜಿ ಡಾಲರ್ (FJD )
|
ಸಮಯ ವಲಯ | (UTC+12) |
ಅಂತರಜಾಲ ಸಂಕೇತ | .fj |
ದೂರವಾಣಿ ಸಂಕೇತ | +679
|
ಫಿಜಿ ದಕ್ಷಿಣ ಶಾಂತಸಾಗರದಲ್ಲಿರುವ ಒಂದು ದ್ವೀಪರಾಷ್ಟ್ರ. ಇದು ಆಸ್ಟ್ರೇಲಿಯಾದ ಈಶಾನ್ಯಕ್ಕೆ ಇದೆ. ಸುಮಾರು ೩೨೨ ದ್ವೀಪಗಳಿಂದ ಕೂಡಿದ ಈ ದ್ವೀಪಸಮೂಹದಲ್ಲಿ ೧೦೬ ದ್ವೀಪಗಳಲ್ಲಿ ಜನವಸತಿಯಿದೆ. ವಿಟಿ ಲೇವು ಮತ್ತು ವನುವಾ ಲೇವು ಎಂಬ ಎರಡು ಮುಖ್ಯ ದ್ವೀಪಗಳಲ್ಲಿಯೇ ದೇಶದ ಜನಸಂಖ್ಯೆಯ ೮೭% ಭಾಗ ನಲೆಸಿದ್ದಾರೆ. ದೇಶದ ವಿಸ್ತೀರ್ಣ ೧೮,೨೭೪ ಚ.ಕಿ.ಮೀ. ಮತ್ತು ಜನಸಂಖ್ಯೆ ಸುಮಾರು ೮.೫ ಲಕ್ಷ. ರಾಷ್ಟ್ರದ ರಾಜಧಾನಿ ಸುವಾ.
ಇತಿಹಾಸ[ಬದಲಾಯಿಸಿ]
ಕ್ರಿ.ಪೂ. ೧೦೦೦ರ ಸುಮಾರಿಗೆ ಇಲ್ಲಿ ಜನವಸತಿಯಿತ್ತೆಂಬುವುದರ ಬಗ್ಗೆ ಪುರಾವೆಗಳು ದೊರೆತಿವೆ. ನಂತರ ಆಗ್ನೇಯ ಏಷ್ಯಾದ ಜನರು ಇಲ್ಲಿ ನೆಲೆಯಾದರು. ಕ್ರಿ.ಶ. ೧೯ನೆಯ ಶತಮಾನದಲ್ಲಿ ಇಲ್ಲಿ ಯುರೋಪಿಯನ್ನರು ಶಾಶ್ವತವಾಗಿ ನೆಲೆಸಿದರು. ೧೮೭೪ರಲ್ಲಿ ಫಿಜಿ ಬ್ರಿಟಿಷರ ವಸಾಹತಾಯಿತು. ಇವರು ಭಾರತದಿಂದ ಗುತ್ತಿಗೆ ನೌಕರರನ್ನು ಕರೆತಂದರು. ೧೯೭೦ರಲ್ಲಿ ಫಿಜಿಯು ಸ್ವಾತಂತ್ರ್ಯ ಪಡೆಯಿತು. ರಾಷ್ಟ್ರದ ಜನತೆಯ ಸುಮಾರು ೫೪.೩% ಭಾಗದವರು ಪಾಲಿನೇಷ್ಯನ್ ಹಾಗೂ ಮೆಲನೇಷ್ಯನ್ ಸಂತತಿಯವರು. ೩೮.೧% ಪಾಲು ಮಂದಿ ಭಾರತೀಯ ಮೂಲದವರು. ರಾಜಕೀಯ ಅಸ್ಥಿರತೆಯ ಕಾರಣಗಳಿಂದಾಗಿ ಗಣನೀಯ ಪ್ರಮಾಣದ ಭಾರತೀಯ ಮೂಲದವರು ಫಿಜಿಯನ್ನು ತೊರೆಯುತ್ತಿದ್ದಾರೆ. ಈ ಎರಡೂ ಸಮುದಾಯಗಳ ನಡುವೆ ರಾಜಕೀಯ ಹಾಗೂ ಧಾರ್ಮಿಕ ಕಾರಣಗಳಿಂದಾಗಿ ತಿಕ್ಕಾಟ ನಡೆಯುತ್ತಲೇ ಇದೆ. ಪಾಲಿನೇಷ್ಯನ್ ಹಾಗೂ ಮೆಲಾನೇಷ್ಯನ್ ಜನತೆ ಬಹುಪಾಲು ಕ್ರೈಸ್ತಧರ್ಮೀಯರಾದರೆ ಭಾರತೀಯ ಮೂಲದವರಲ್ಲಿ ಹೆಚ್ಚಿನವರು ಹಿಂದೂಗಳು ಮತ್ತು ಮುಸ್ಲಿಮರು. ದಕ್ಷಿಣ ಭಾರತದ ಕೇರಳೀಯರ ಸಂಘಟನೆ ಯಾಗಿದೆ ಮಊನತ್ತುಲ್ ಇಸ್ಲಾಂ
ಆರ್ಥಿಕ ಸ್ಥಿತಿ[ಬದಲಾಯಿಸಿ]
ಫಿಜಿಯು ವಿಪುಲವಾದ ಅರಣ್ಯ ಸಂಪತ್ತು , ಖನಿಜಗಳು ಹಾಗೂ ಮೀನುಗಾರಿಕೆಯನ್ನು ಹೊಂದಿ ಶಾಂತಸಾಗರದ ದ್ವೀಪರಾಷ್ಟ್ರಗಳ ಪೈಕಿ ಹೆಚ್ಚಿನ ಆರ್ಥಿಕಬಲವನ್ನು ಹೊಂದಿದೆ. ಕಬ್ಬು ದೇಶದ ಪ್ರಮುಖ ವಾಣಿಜ್ಯ ಬೆಳೆ. ಸಕ್ಕರೆ ಉದ್ಯಮ ನಾಡಿನ ಅತಿ ದೊಡ್ಡ ಕೈಗಾರಿಕೆ. ಉಳಿದಂತೆ ಪ್ರವಾಸೋದ್ಯಮ ದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ವಿದೇಶಿ ವಿನಿಮಯ ಒದಗಿಸುತ್ತಿದೆ. ಆದರೆ ಪ್ರಕ್ಷುಬ್ಧ ರಾಜಕೀಯ ವಾತಾವರಣದಿಂದಾಗಿ ಆರ್ಥಿಕ ಪ್ರಗತಿಯು ಕುಂಠಿತವಾಗಿದೆ.