ಕ್ರೈಸ್ತ ಧರ್ಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕ್ರೈಸ್ತ ಧರ್ಮ ಯೇಸು ಕ್ರಿಸ್ತನ ಜೀವನ ಮತ್ತು ಉಪದೇಶಗಳ ಮೇಲೆ ಆಧಾರಿತ ಏಕದೇವವಾದವನ್ನು ಅನುಸರಿಸುವ ಧರ್ಮಗಳಲ್ಲಿ ಒಂದು. ೨೦೦೧ರ ಅಂದಾಜಿನ ಪ್ರಕಾರ ಪ್ರಪಂಚದಲ್ಲಿ ೨.೧ ಬಿಲಿಯನ್ ಅನುಯಾಯಿಗಳನ್ನು ಹೊಂದಿರುವ ಈ ಧರ್ಮ, ಜಗತ್ತಿನ ಅತಿ ದೊಡ್ಡ ಧರ್ಮವಾಗಿದೆ.

ಕ್ರಿ.ಶ. ೧ನೇ ಶತಮಾನದಲ್ಲಿ ಯಹೂದಿ ಧರ್ಮದ ಒಂದು ಪಂಥವಾಗಿ ಉದ್ಭವಿಸಿದ ಕ್ರೈಸ್ತ ಧರ್ಮ, ಯಹೂದಿಯರ ಧರ್ಮಗ್ರಂಥ ತನಖ್ ಅನ್ನು ತನ್ನ ಧರ್ಮಗ್ರಂಥವಾದ ಬೈಬಲ್‌ನ ಒಂದು ಭಾಗವಾದ ಹಳೆ ಒಡಂಬಡಿಕೆ (Old Testament)ಆಗಿ ಅಳವಡಿಸಿಕೊಂಡಿದೆ. ಇಸ್ಲಾಂ, ಯಹೂದಿ ಧರ್ಮ ಮತ್ತು ಕ್ರೈಸ್ತ ಧರ್ಮಗಳೆಲ್ಲಾ ಅಬ್ರಹಾಮ್‌ನನ್ನು ಪ್ರಮುಖನನ್ನಾಗಿ ಪರಿಗಣಿಸುವುದರಿಂದ ಇವನ್ನು ಅಬ್ರಹಮೀಯ ಧರ್ಮಗಳೆಂದೂ ವರ್ಗೀಕರಿಸಲಾಗುತ್ತವೆ. ಯೇಸುಕ್ರಿಸ್ತ ಹುಟ್ಟುವ ಕಾಲ, ಹುಟ್ಟಿದ ನಂತರದ ಕಾಲಘಟ್ಟ ಹಾಗೂ ಆತನ ಸಾವು-ಪುನರುತ್ಥಾನದ ನಂತರದ ಕೆಲವು ದಿನಗಳ ಚರಿತ್ರೆಯು ಬೈಬಲ್‌ನಲ್ಲಿ ಹೊಸ ಒಡಂಬಡಿಕೆ (New Testament)ಯ ರೂಪದಲ್ಲಿದೆ.