ಹಳೆ ಒಡಂಬಡಿಕೆ
Jump to navigation
Jump to search
ಹಳೆ ಒಡಂಬಡಿಕೆಯು (Old Testament) ಬೈಬಲ್ ನ ಪ್ರಥಮ ಭಾಗವಾಗಿದೆ. ಸುಮಾರು ೨೦೦೦ ವರ್ಷಗಳ ಐತಿಹ್ಯವಿರುವ ಬೈಬಲ್‌ನ ಮೂಲ ರೂಪ ಹೀಬ್ರುಗಳ ಪವಿತ್ರ ಗ್ರಂಥವಾದ ತನಕ್. ೫೦೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ಇದು ಬೈಬಲ್‌ನ ಒಂದು ಭಾಗವಾಗಿ ಉಳಿದುಕೊಂಡಿದೆ. ಯೇಸು ಕ್ರಿಸ್ತನು ಮತ್ತು ಆತನ ಶಿಷ್ಯರು ತಮ್ಮ ಭೋದನೆಗಳಲ್ಲಿ ಹಳೆ ಒಡಂಬಡಿಕೆಯ ಅನೇಕ ಭಾಗಗಳನ್ನು ಆಧಾರ ಮಾಡಿಕೊಂಡು ಭೋದಿಸುತ್ತಿದ್ದರು.ಹಳೆ ಒಡಂಬಡಿಕೆಯ ಈ ಭಾಗಗಳನ್ನು ಮೋಸೆಸ್‌ನ ಧರ್ಮಶಾಸ್ತ್ರ, ಪ್ರವಾದನ ಗ್ರಂಥ, ಕೀರ್ತನೆಗಳು ಎಂದು ವಿಂಗಡಿಸಲಾಗಿದೆ.
ಹಳೆ ಒಡಂಬಡಿಕೆಯಲ್ಲಿ ೩೯(ಪ್ರೊಟೆಸ್ಟಂಟರ ಆವೃತಿ)+೧೩(ಕಥೋಲಿಕರ ಆವೃತಿ) ಪುಸ್ತಕಗಳಿವೆ. ಅವು ಈ ಕೆಳಕಂಡಂತೆ ಇವೆ.
- ಆದಿಕಾಂಡ
- ವಿಮೋಚನಾಕಾಂಡ
- ಯಾಜಕಕಾಂಡ
- ಸಂಖ್ಯಾಕಾಂಡ
- ಧರ್ಮೋಪದೇಷಕಾಂಡ
- ಯೊಹೋಶುವ
- ನ್ಯಾಯಸ್ಥಾಪಕರು
- ರೂತಳು
- ಸಮುವೇಲನು ಭಾಗ ೧
- ಸಮುವೇಲನು ಭಾಗ ೨
- ಅರಸುಗಳು ಭಾಗ ೧
- ಅರಸುಗಳು ಭಾಗ ೨
- ಪೂರ್ವಕಾಲದ ವೃತ್ತಾಂತ ಭಾಗ ೧
- ಪೂರ್ವಕಾಲದ ವೃತ್ತಾಂತ ಭಾಗ ೨
- ಎಜ್ರನು
- ನೆಹೆಮೀಯಾ
- ಎಸ್ತೆರಳು
- ಯೋಬನ ಗ್ರಂಥ
- ಕೀರ್ತನೆಗಳು
- ಜ್ಞಾನೋಕ್ತಿಗಳು
- ಉಪದೇಷಕ
- ಪರಮಗೀತೆ
- ಪ್ರವಾದಿ ಯೆಶಾಯನ ಗ್ರಂಥ
- ಪ್ರವಾದಿ ಯೆರೆಮೀಯನ ಗ್ರಂಥ
- ಪ್ರಲಾಪಗಳು
- ಪ್ರವಾದಿ ಯೆಜೆಕಿಯೇಲನ ಗ್ರಂಥ
- ಪ್ರವಾದಿ ದಾನಿಯೇಲನ ಗ್ರಂಥ
- ಪ್ರವಾದಿ ಹೊಶೇಯನ ಗ್ರಂಥ
- ಪ್ರವಾದಿ ಯೊವೇಲನ ಗ್ರಂಥ
- ಪ್ರವಾದಿ ಆಮೋಸನ ಗ್ರಂಥ
- ಪ್ರವಾದಿ ಓಬದ್ಯನ ಗ್ರಂಥ
- ಪ್ರವಾದಿ ಯೋನನ ಗ್ರಂಥ
- ಪ್ರವಾದಿ ಮೀಕನ ಗ್ರಂಥ
- ಪ್ರವಾದಿ ನಹೂಮನ ಗ್ರಂಥ
- ಪ್ರವಾದಿ ಹಬಕ್ಕೂಕನ ಗ್ರಂಥ
- ಪ್ರವಾದಿ ಜೆಫನ್ಯನ ಗ್ರಂಥ
- ಪ್ರವಾದಿ ಹಗ್ಗಾಯನ ಗ್ರಂಥ
- ಪ್ರವಾದಿ ಜೆಕರ್ಯನ ಗ್ರಂಥ
- ಪ್ರವಾದಿ ಮಲಾಕಿಯನ ಗ್ರಂಥ
- ಅನುಗ್ರಂಥಗಳು(ಪ್ರೊಟೆಸ್ಟಂಟರ ಬೈಬಲ್‌ನಲ್ಲಿ ಈ ಕೆಳಕಂಡ ೧೩ ಪುಸ್ತಕಗಳು ಇರುವುದಿಲ್ಲ)