ನಯಾಗರ ಜಲಪಾತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಅಮೆರಿಕ ಕಡೆಯ ನಯಾಗರ ಜಲಪಾತ'

'ವಿಶ್ವಪ್ರಸಿದ್ಧ ನಯಾಗರ ಜಲಪಾತ', ನಯಾಗರ ನದಿಯ ಮೇಲಿರುವ ಒಂದು ಜಲಪಾತ. ಅಮೆರಿಕದ ಅತಿ ದೊಡ್ಡ, ಸುಂದರ ಜಲಪಾತ. ಇದು ಉತ್ತರ ಅಮೇರಿಕ ದೇಶ ಮತ್ತು ಕೆನಡಾ ದೇಶ ಗಳೆರಡರಲ್ಲೂ ಚಾಚಿಕೊಂಡಿದೆ. ವರ್ಷಪ್ರತಿ ಸುಮಾರು ೧೨ ಮಿಲಿಯನ್ ಪರ್ಯಟಕರನ್ನು/ಪ್ರವಾಸಿಗರನ್ನು ಆಕರ್ಷಿಸುವ ಈ ಜಲಪಾತ, ರಾತ್ರಿಯ ಕತ್ತಲಿನಲ್ಲಿ ಬಣ್ಣಬಣ್ಣದ 'ಲೇಸರ್ ಸ್ಪಾಟ್ ಲೈಟ್' ಹರಿಸಿದಾಗ ಜಲಪಾತದ ಭೋರ್ಗರೆಯುವ ನೀರಿನಮೇಲೆ 'ಕಾಮನಬಿಲ್ಲಿನ ಬಣ್ಣ'ಗಳು ಹೊಳಪಿನಿಂದ ರಂಗೇರುತ್ತವೆ. ರಾತ್ರಿ ಹತ್ತುಗಂಟೆಗೆ ವಾರದಲ್ಲಿ ಎರಡು ಬಾರಿ ಆಗಸದಲ್ಲಿ ಚಿತ್ತಾರ ಬಿಂಬಿಸುವ ರಂಗು ರಂಗಾದ ಬಾಣ-ಬಿರುಸು ಪಟಾಕಿಗಳ ಸುರಿಮಳೆಯಾಗಿ ಅಲ್ಲಿನ ಯಾತ್ರಿಗಳಿಗೆ ದಿಗ್ಭ್ರಮೆಯಾಗುತ್ತದೆ. 'ನಯಾಗರ ಜಲಪಾತ'ದ ಬಗ್ಗೆ ಬರವಣಿಗೆ ಅಭಿಪ್ರಾಯಗಳು ನೂರಾರು; ಮತ್ತು ಅವೆಲ್ಲವೂ ವಿಭಿನ್ನವೇ.

[೧] ಜಲಪಾತಗಳ ಸಮೂಹವಾಗಿ ಕುದುರೆ ಲಾಳದಾಕಾರದಲ್ಲಿ ರಭಸದಿಂದ ಕೆಳಗೆ ಧುಮ್ಮಿಕ್ಕುವ ನೀರು ಹಾಲಿನ ಕಡಲಿನಂತೆ ವಿಶಾಲ. ದಣಿವಿಲ್ಲದೆ ಅಪಾರ ಜಲರಾಶಿ ಅಲ್ಲಿಂದ ಹಾರಿ ವೇಗವಾಗಿ ಕಿವಿಕಿವಿಡಾಗುವಂತೆ ಶಬ್ದಮಾಡುತ್ತಾ ನೆಗೆದು, ತಡವರಿಸುತ್ತಾ-ಎದ್ದು-ಬಿದ್ದು ಓಡಿಹೋಗುವ ನಿರಂತರ ನೋಟ, ಎಲ್ಲರನ್ನೂ ಚಕಿತಗೊಳಿಸುತ್ತದೆ.

'ಮೇಡ್ ಆಫ್ ದ ಮಿಸ್ಟ್'

ಕೆನಡ ಮತ್ತು ಉತ್ತರ ಅಮೆರಿಕಗಳನ್ನು ಬೇರ್ಪಡಿಸುವ ಈ ವಿಶ್ವ ಪ್ರಸಿದ್ಧ ಸುಂದರ ಜಲರಾಶಿ, ಕೆನಡಾ ಕಡೆ ಆಂಟಾರಿಯೋ ಮತ್ತು ಅಮೆರಿಕದ ನ್ಯೂಯಾರ್ಕ್ ನಗರಗಳ ಮಧ್ಯಭಾಗದಲ್ಲಿದೆ. ಪರ್ಯಟನೆಯ ದೃಷ್ಟಿಯಿಂದ ಇದನ್ನು ಮೂರು ವಿಭಾಗಗಳಾಗಿ ವಿಂಗಡಿಸುತ್ತಾರೆ.

 • ಗೋಟ್ ಐಲ್ಯಾಂಡ್
 • ಹಾರ್ಸ್ ಶೂ ಫಾಲ್ಸ್
 • ಬ್ರೈಡ್ ವೆ
'ಕೆನಡಾ ಕಡೆಯ ಕುದುರೆ ಲಾಳಿಯಾಕಾರದ ಜಲಪಾತ

ಮೇಡ್ ಆಫ್ ದ ಮಿಸ್ಟ್ ರೈಡ್[ಬದಲಾಯಿಸಿ]

ಮೇ ತಿಂಗಳ ಮಧ್ಯಭಾಗದಲ್ಲಿ ಈ ಜಲಪಾತ ಬಹಳ ಹೆಸರುವಾಸಿಯಾದದ್ದು. ಉತ್ತರ ಅಮೆರಿಕಾ ಮತ್ತು ಕೆನಡಾ ರಾಷ್ಟ್ರಗಳ ಕಡೆಯಿಂದ ಈ ಜಲಪಾತವನ್ನು ಚೆನ್ನಾಗಿ ವೀಕ್ಷಿಸಬಹುದು. 'ನೀಲಿಬಣ್ಣದ ರೇನ್ ಕೋಟ್' ಧರಿಸಿ ಗುಂಪುಗುಂಪಾಗಿ ಪರ್ಯಟಕರು 'ಬೋಟ್ ಯಾನ'ಮಾಡುತ್ತಾ ಜಲಪಾತದ ಬುಡದವರೆಗೂ ಹೋಗಿಬರಲು ಸಾಧ್ಯವಿದೆ. ಅಲ್ಲಿ ಮೈಗೆ ಮುತ್ತುವ ತುಂತುರು ಹನಿಗಳ, ಹಿಮಮಣಿಗಳ ಅದ್ಭುತ ಅನುಭವಗಳನ್ನು ಮೈತುಂಬಿಸಿಕೊಂಡು ಬರುತ್ತಾರೆ. ಹೃದಯದ ಬಡಿತ ನಿಲ್ಲುವಷ್ಟು, ಇಲ್ಲವೆ ಡವಡವಗುಟ್ಟಿಸುವಷ್ಟು ರೋಮಾಂಚಕಾರಿ ಅನುಭವ ಅನನ್ಯವಾದುದು.

'ನಯಾಗರ ಫಾಲ್ಸ್ ನ ವಿವರಗಳು'[ಬದಲಾಯಿಸಿ]

'ನಯಾಗರ ಜಲಪಾತದ ಮತ್ತೊಂದು ಪಾರ್ಶ್ವ'

ಬಹುತೇಕ ನೀರು ಕಾಲುವೆ ಮತ್ತು ಪೈಪ್ ಗಳ ಮುಖಾಂತರ ಹತ್ತಿರದ 'ಜಲವಿದ್ಯುತ್ ಸ್ಥಾವರ'ಕ್ಕೆ ಹಾಯಿಸಲಾಗುತ್ತದೆ. ವಿಶ್ವದ ಶೇಕಡಾ ೨೦% ರಷ್ಟು ಸಿಹಿನೀರು ಈ ಪ್ರದೇಶದ್ಸ ಮೇಲೆ ಹರಿದು ಬರುವ ನದಿಗಳು ಜಲಪಾತಕ್ಕೆ ಒದಗಿಸುತ್ತವೆ. 'ಗೈಡ್ ವ್ಯವಸ್ಥೆ' ಅತ್ಯುತ್ತಮವಾಗಿದೆ. ಸ್ಕೂಲ್ ಮಾಸ್ತರಣಿಯೋರ್ವಳು ಪೀಪಾಯಿನಲ್ಲಿ ಕುಳಿತು ಜಲಪಾತದ ಮೇಲಿನಿಂದ ಕೆಳಗೆ ಸಾಗಿ ಬದುಕಿ ಬಂದ ಬಗ್ಗೆ ವಿವರಣೆ ಸಿಗುತ್ತದೆ. ಜಲಪಾತದ ಅತಿ ಅಗಲವಾದ ಹರಿವು ನಿಮಿಷಕ್ಕೆ ೬ ಮಿಲಿಯನ್ ಘನ ಅಡಿಯಷ್ಟು ನೀರು ಒಂದೇಸಮನೆ ಭೋರ್ಗರೆಯುತ್ತಾ ಕೆಳಗೆ ಧುಮ್ಮಿಕ್ಕಿ ಓಡುತ್ತದೆ. ಜಲಪಾತದ ಬಳಿ, ಮನರಂಜನೀಯ ಹಾಗೂ ಅತ್ಯಂತ ರುದ್ರರಮಣೀಯ ದೃಶ್ಯಗಳನ್ನು ಕಾಣಬಹುದು. ವಿದ್ಯುತ್ ಸ್ಥಾವರದ ಜೊತೆಗೆ, ಔದ್ಯೋಗಿಕ ಮತ್ತು ಕೈಗಾರಿಕ ಕೇಂದ್ರವೆಂದು ಹೆಸರುಪಡೆದಿದೆ. 'ಮಧುಚಂದ್ರ'ಕ್ಕೆ ಇದು ಹೇಳಿಮಾಡಿಸಿದ ತಾಣ. ಇಲ್ಲಿಗೆ ಮದುವೆಯಾಗುವ ನೆವದಿಂದಲೇ ಬಂದವರ ಸಂಖ್ಯೆ ಅಪಾರ. ಯಾವ ಖರ್ಚುವೆಚ್ಚವಿಲ್ಲದೆ ಎರಡು ಹಾರ, ಇಲ್ಲವೇ 'ಪುಷ್ಪ ಗುಚ್ಛಗಳ ವಿನಿಮಯ'ದೊಂದಿಗೆ ಈಡೇರುವ ಮದುವೆಗಳು ಸರ್ವೇ ಸಾಮಾನ್ಯವಾಗಿವೆ.

ಚಲನಚಿತ್ರದ ಹೆಸರು ನಯಾಗರ[ಬದಲಾಯಿಸಿ]

ಇದೇ ಹೆಸರಿನ ಒಂದು 'ಹಾಲಿವುಡ್ ನಿರ್ಮಿತ ಚಲನಚಿತ್ರ' ಸನ್ ೧೯೫೦ ರಲ್ಲಿ ನಿರ್ಮಿಸಲ್ಪಟ್ಟಿತ್ತು. ಇದರ ನಂತರ ಬೇಕಾದಷ್ಟು ಚಲನಚಿತ್ರ ನಿರ್ಮಾಪಕರು ಈ ತಾಣವನ್ನು ತಮ್ಮ ಚಿತ್ರಗಳಿಗೆ ಆರಿಸಿಕೊಂಡಿದ್ದಾರೆ. ಮನರಂಜನೆಗೆ ವಿಶೇಷ ವ್ಯವಸ್ಥೆಮಾಡಿದ ಪರ್ಯಟಕ ಸಂಸ್ಥೆಗಳು ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತು ಅತ್ಯಂತ ಯಶಸ್ವಿಯಾಗಿ ಸಹಾಯ ಕಲ್ಪಿಸುತ್ತವೆ.

 • ವಿದ್ಯುತ್ ನಿರ್ಮಾಣ ನಿಗಮ
 • ಅಕ್ವೇರಿಯಮ್
 • ಕಲಾ ಉದ್ಯಾನವನ
 • ವಸ್ತುಪ್ರದರ್ಶನ-ದೇರ್ ಡೆವಿಲ್
 • ಹೆಲಿಕಾಪ್ಟರ್ ನಲ್ಲಿ ನಯಾಗರ ಮೇಲೆ ಅತಿ ಹತ್ತಿರದಲ್ಲಿ ಸುತ್ತಾಡಿಸುವ ಅಭಿಯಾನ
 • ’ವಿರ್ಲ್ ಪೂಲ್ ನೀರಿನ ಕಾರಂಜಿಯ ಉದ್ಯಾನವನ’
 • ನಯಾಗರ ಕೋಟೆ
 • ಜೆಟ್ ಬೋಟ್ ನಲ್ಲಿ ಸುತ್ತಾಟ
 • ಐತಿಹಾಸಿಕ ಪ್ರೇಕ್ಷಣೀಯ ತಾಣಗಳ
 • ಜಲಪಾತದ ಅತಿ ಹತ್ತಿರಕ್ಕೆ ಕೊಂಡೊಯ್ಯುವ, ಮೇಡ್ ಆಫ್ ದ ಮಿಸ್ಟ್, ಕೇವ್ ಆಫ್ ದ ವಿಂಡ್ ರೈಡ್ಸ್ ಗಳು

ಬ್ರೆಕ್ ಫಾಸ್ಟ್, ಊಟ, ತಿಂಡಿ-ತಿನಿಸುಗಳ ವ್ಯವಸ್ಥೆ[ಬದಲಾಯಿಸಿ]

'ಊಟ', 'ಬ್ರೆಕ್ ಫಾಸ್ಟ್' ಫಾಸ್ಟ್ ಫುಡ್ ಗಳಿಗೆ ಭಾರತವೂ ಸೇರಿದಂತೆ ಹಲವಾರು 'ರೆಸ್ಟಾರೆಂಟ್' ಗಳಿವೆ. ಅವರೆಲ್ಲಾ ಪರ್ಯಟಕರನ್ನು ತಮ್ಮ ವಾಹನಗಳಲ್ಲಿ ಕೂರಿಸಿಕೊಂಡು ತಮ್ಮ 'ಹೋಟೆಲ್' ಗಳಲ್ಲಿ ಊಟದ ವ್ಯವಸ್ಥೆಗಳನ್ನು ಒದಗಿಸಿದ ನಂತರ, ಅವರನ್ನು ಮತ್ತೆ 'ಜಲಪಾತ'ದ ಹತ್ತಿರಕ್ಕೆ ಕರೆತಂದು ಬಿಡುತ್ತಾರೆ. 'ಭಾರತೀಯ ಹೋಟೆಲ್ ಗಳ ಪರಿಚಾರಕರು' ಎಲ್ಲೆಡೆ ಸಿಗುತ್ತಾರೆ. ಅಂಗವಿಕಲರಿಗೆ, ಮಕ್ಕಳಿಗೆ, ವೃದ್ಧರಿಗೆ, ಹೆಣ್ಣುಮಕ್ಕಳಿಗೆ, ಮತ್ತು ಯುವಕರಿಗೆ, ಎಲ್ಲಾ ತರಹದ ಸೌಲಭ್ಯಗಳೂ ಯಾತ್ರಿಕರಿಗೆ ಲಭ್ಯವಿದೆ. ಸ್ಕೈಲಾನ್ ಟವರ್ ನ ತಿರುಗುವ ಹೋಟೆಲ್ ನಲ್ಲಿ ಕುಳಿತು ಪೇಯ-ತಿಂಡಿ-ತಿನಸುಗಳನ್ನು ಮೆಲ್ಲುತ್ತಾ 'ನಯಾಗರ ಜಲಪಾತ'ವನ್ನು ವೀಕ್ಷಿಸುವ ಪರ್ಯಟಕರಿಗೆ ಒಂದು ವಿಹಂಗಮನೋಟವನ್ನು ಒದಗಿಸಿಕೊಡುತ್ತದೆ.

ಇವುಗಳನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]