ವಿಷಯಕ್ಕೆ ಹೋಗು

ಸ್ಕೈಲಾನ್ ಟವರ್ ನ ತಿರುಗುವ ಹೋಟೆಲ್

Coordinates: 43°05′07″N 79°04′47″W / 43.08528°N 79.07972°W / 43.08528; -79.07972
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಕೈಲಾನ್ ಟವರ್
ಸಾಮಾನ್ಯ ಮಾಹಿತಿ
ಸ್ಥಿತಿಸಂಪೂರ್ಣ
ಮಾದರಿವೀಕ್ಷಣಾ ಗೋಪುರ
ಸ್ಥಳ5200 Robinson Street
Niagara Falls, Ontario
Canada
ನಿರ್ದೇಶಾಂಕ43°05′07″N 79°04′47″W / 43.08528°N 79.07972°W / 43.08528; -79.07972
ನಿರ್ಮಾಣ ಪ್ರಾರಂಭವಾದ ದಿನಾಂಕಮೇ ೧೯೬೪
ತೆರೆಯುವ ದಿನಾಂಕಒಕ್ಟೋಬರ್ 6, 1965
ಬೆಲೆ$7,000,000
Height
ಆಂಟೆನಾ ಸ್ಪೈರ್160 m (520 ft)
Technical details
ಮಹಡಿ ಸಂಖ್ಯೆ3
ಲಿಫ್ಟ್ಗಟು/ಎಲಿವೇಟರ್ಸ್3
Design and construction
ವಾಸ್ತುಶಿಲ್ಪಿBregman + Hamann Architects
ಮುಖ್ಯ ಗುತ್ತಿಗೆದಾರPigott Construction Company
ಚಿತ್ರ:DSC05772.pdf
'ಸ್ಕೈಲಾನ್ ಟವರ್'

'ಸ್ಕೈಲಾನ್ ಟವರ್, ನಯಾಗರ ಜಿಲ್ಲೆಗೆ ಕಾಲಿಡುತ್ತಿದ್ದಂತೆ ಕಣ್ಣಿಗೆ ಗೋಚರಿಸುವ ಸುಂದರ ಗೋಪುರ.ಇದು ಕೆನಡಾ ದೇಶದ ಒಂಟಾರಿಯೋ ನಗರದಲ್ಲಿದೆ. ಇದನ್ನು ಕಂಡಾಗ 'ಸಿಯಾಟಲ್ ನಗರದ, ಸ್ಪೇಸ್ ನೀಡಲ್' ಜ್ಞಾಪಕಕ್ಕೆ ಬರುವುದು ಅತಿ ಸಹಜ. ಇದು ನಯಾಗರ ಜಲಪಾತವನ್ನು ಹತ್ತಿರದಿಂದ ಸರಿಯಾಗಿ ನೋಡಲು ಸಹಾಯಮಾಡುತ್ತದೆ. ಈ ಜಿಲ್ಲೆಯಲ್ಲೇ ಅತ್ ಎತ್ತರದ ಗೋಪುರದ ಮೇಲೆ ಎರಡು ರೆಸ್ಟಾರೆಂಟ್ ಗಳನ್ನು ನಿರ್ಮಿಸಿದ್ದಾರೆ. ೨೭೬ ಜನ ಕುಳಿತುಕೊಂಡು ಊಟೋಪಚಾರಗಳಲ್ಲಿ ಭಾಗವಹಿಸಲು ಅನುಕೂಲವಿರುವ ಈ ರೆಸ್ಟರಾಂಟ್ ೩೬೦ ಡಿಗ್ರಿ ಸುತ್ತುತ್ತಲು ೧ ಗಂಟೆ ತೆಗೆದುಕ್ಕೊಳ್ಳುತ್ತದೆ. ಸನ್ ೧೯೬೪ ರಲ್ಲಿ ೭ ಮಿಲಿಯನ್ ಅಮೆರಿಕನ್ ಡಾಲರ್ ವ್ಯಯದಿಂದ ಕಟ್ಟಿಮುಗಿಸಿದ ಈ ಸ್ಕೈಲಾನ್ ಗೋಪುರವನ್ನು ಸಾರ್ವಜನಿಕರಿಗೆ ಒಪ್ಪಿಸಿದ್ದು ೧೯೬೫ ರಲ್ಲಿ ೩ ಲಿಫ್ಟ್ ಗಳು ೫೨ ಸೆಕೆಂಡಿಗೊಮ್ಮೆ ಕೆಳಗಿನಿಂದ ಮೇಲಕ್ಕೆ ಪರ್ಯಟಕರನ್ನು ಕರೆದುಕೊಂಡೊಯ್ಯುತ್ತವೆ. ಮೆಟ್ಟಲು ಹತ್ತಿಬರಲು ಆಶಿಸುವ ಸಾಹಸಿಗಳು ೬೬೨ ಮೆಟ್ಟಿಲುಗಳನ್ನು ಹತ್ತಬೇಕು. ಸುಮಾರು ೧೨೯ ಕಿ.ಮೀ.ದೂರದವರೆಗೂ ಇಲ್ಲಿಂದ ಸ್ಥಳಗಳನ್ನು ವೀಕ್ಷಿಸಬಹುದು. ಸ್ವಲ್ಪ ಮಂಜಿನ ಮಬ್ಬು ಕಡಿಮೆಯಿದ್ದ ದಿನದಂದು ಟೊರಾಂಟೋ ನಗರ ಇಲ್ಲಿಗೆ ಕಾಣಿಸುತ್ತದೆ. ಹಾಗೆಯೇ ಟೊರಾಂಟೋನಗರವಾಸಿಗಳು ಎತ್ತರದಿಂದ ನಯಾಗರ ಫಾಲ್ಸನ್ನು ನೋಡಬಹುದು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]