ಆಲ
ಆಲ | |
---|---|
Illustration of ಆಲದ ಎಲೆ ಮತ್ತು ಹಣ್ಣು | |
Scientific classification | |
ಸಾಮ್ರಾಜ್ಯ: | plantae
|
Division: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
Subgenus: | (Urostigma)
|
Species | |
Many species, including: |
ಆಲ (Banyan Tree)ಇದು ಭಾರತದ ರಾಷ್ಟ್ರವೃಕ್ಷ.ಹಿಂದಿನ ಕಾಲದಲ್ಲಿ ಇದರ ನೆರಳಿನಲ್ಲಿ ಬನಿಯಾ(ಹಿಂದುವರ್ತಕರು)ಗಳು ತಮ್ಮ ವ್ಯಾಪಾರ ಮಾಡುತ್ತಿದ್ದುದರಿಂದ ಇದನ್ನು ಪ್ರವಾಸಿಗಳು ಬನಿಯಾನ್ ಟ್ರೀ ಎಂದು ಕರೆದರು.ಇದು ಬೃಹತ ಪ್ರಾಮಾಣದ್ದಾಗಿದ್ದು ಅಗಲವಾಗಿ ಹರಡಿರುವ ಕೊಂಬೆಗಳಿಂದ ಕೂಡಿದೆ.ಎಲ್ಲೆಡೆ ಸಾಲುಮರಗಳಾಗಿ ಬೆಳೆಸಲಾಗಿದೆ.ಜಗತ್ತಿನ ಅತ್ಯಂತ ದೊಡ್ಡದಾದ ಮರ ಕಲ್ಕತ್ತಾದಲ್ಲಿದೆ.
ಸಸ್ಯ ಶಾಸ್ತ್ರೀಯ ವರ್ಗೀಕರಣ
[ಬದಲಾಯಿಸಿ]ಇದು ಮೊರಾಸಿಯೆ ಕುಟುಂಬಕ್ಕೆ ಸೇರಿದ್ದು,ಫೈಕಸ್ ಬೆಂಗಾಲೆನಿಸಿಸ್(Ficus Bengalensis)ಎಂದು ಸಸ್ಯ ಶಾಸ್ತ್ರೀಯ ಹೆಸರು.ಸಂಸ್ಕೃತದಲ್ಲಿ 'ವಟವೃಕ್ಷ 'ಎಂದು ಕರೆಯುತ್ತಾರೆ.
ಸಸ್ಯದ ಗುಣ ಲಕ್ಷಣಗಳು
[ಬದಲಾಯಿಸಿ]ಇದು ವಿಶಾಲ ಕೊಂಬೆಗಳಿಂದ ಕೂಡಿದ ಮರ.ಈ ಕೊಂಬೆಗಳಿಂದ ಬೀಳಲುಗಳು ಹೊರಟು ನೆಲವನ್ನು ತಾಗಿ ಕಾಂಡಗಳಾಗಿ ಪರಿವರ್ತಿಸುತ್ತವೆ.ಈ ರೀತಿಯಿಂದ ಹಲವು ಎಕರೆ ಪ್ರದೇಶಗಳನ್ನೂ ವ್ಯಾಪಿಸುವುದುಂಟು.ಎಲೆ ದಪ್ಪವಾಗಿದ್ದು,ತೊಗಲಿನಂತಿದ್ದು ಹೊಳಪಿನಿಂದ ಕೂಡಿದೆ.
ಉಪಯೋಗಗಳು
[ಬದಲಾಯಿಸಿ]ಇದು ಸಾಲುಮರವಾಗಿ ವ್ಯಾಪಕವಾಗಿ ಉಪಯೋಗದಲ್ಲಿದೆ.ನೆರಳಿಗಾಗಿ,ಉದ್ಯಾನವನಗಳಲ್ಲಿ ಅಲಂಕಾರಕ್ಕೆ ನೆಡುತ್ತಾರೆ.ಇದರ ಎಲೆಗಳು ಆನೆಗಳಿಗೆ ಮೇವಾಗಿ ಉಪಯೋಗವಾಗುತ್ತದೆ.ಇದರ ಸಸ್ಯಕ್ಷೀರ ಹಾಗೂ ಬೇರಿನಿಂದ ಔಷಧ ತಯಾರಿಸುತ್ತಾರೆ.
ಆಧಾರ ಗ್ರಂಥಗಳು
[ಬದಲಾಯಿಸಿ]೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ