ಆಗ್ರಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಆಗ್ರಾ
आगरा
ಮಹಾನಗರ
The Taj Mahal in Agra
ಆಗ್ರಾದಲ್ಲಿನ ತಾಜ್ ಮಹಲ್
Nickname(s): ಅಕ್ಬರಾಬಾದ್
ದೇಶ ಭಾರತ
ರಾಜ್ಯ ಉತ್ತರ ಪ್ರದೇಶ
ಜಿಲ್ಲೆ ಆಗ್ರಾ
ವಿಸ್ತೀರ್ಣ
 • ಮಹಾನಗರ ೧,೮೮೦.೪೦
ಎತ್ತರ ೧೭೧
ಜನ ಸಂಖ್ಯೆ (2011)
 • ಮಹಾನಗರ
 • ಸ್ಥಾನ 23
 • ಜನಸಾಂದ್ರತೆ
 • ಮೆಟ್ರೋ ೧೭
Languages
 • Official ಹಿಂದಿ
ಸಮಯ ವಲಯ ಐಎಸ್‍ಟಿ (ಯುಟಿಸಿ+5:30)
ಪಿನ್ 282 X
Telephone code 91(562)
ಜಾಲತಾಣ agra.nic.in

ಆಗ್ರಾ ನಗರ ಭಾರತ ದೇಶದ ಉತ್ತರ ಪ್ರದೇಶ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ಸ್ಥಳ. ವಿಶ್ವ ವಿಖ್ಯಾತ ತಾಜ್ ಮಹಲ್ ಇರುವ ಈ ಊರು ಜಗತ್ತಿನಾದ್ಯಂತ ಹೆಸರುವಾಸಿ.

ಹವಾಮಾನ[ಬದಲಾಯಿಸಿ]

ಆಗ್ರಾ ಶುಷ್ಕ ಹವಾಮಾನ ಹೊಂದಿದೆ. ಸಾಧಾರಣ ಚಳಿ, ದೀರ್ಘವಾದ, ಶುಷ್ಕ ಬೇಸಗೆ ಮತ್ತು ಕಡಿಮೆ ಅವಧಿಯ ಮಾನ್ಸೂನ್ ಇಲ್ಲಿಯ ಹವಾಮಾನ ವೈಶಿಷ್ಟ್ಯ. ಇಲ್ಲಿಯ ಮಾನ್ಸೂನ್ ದೇಶದ ಉಳಿದೆಡೆಯಂತೆ ತೀಕ್ಷ್ಣವಾಗಿಲ್ಲ.

ಜನಸಂಖ್ಯೆ[ಬದಲಾಯಿಸಿ]

೨೦೧೧ರ ಜನಗಣತಿಯಂತೆ ಆಗ್ರಾದ ಜನಸಂಖ್ಯೆ ೧೭,೭೫,೧೩೪. ೫೩% ಪುರುಷರು ಮತ್ತು ೪೭% ಮಹಿಳೆಯರು. ಸಾಕ್ಷರತೆಯ ಪ್ರಮಾಣ ೮೧%. ಹಿಂದೂ, ಇಸ್ಲಾಂ ಮತ್ತು ಜೈನ ಧರ್ಮಗಳು ಮುಖ್ಯ ಧರ್ಮಗಳು.

ಆಗ್ರಾದ ಜನರ ಧರ್ಮ
ಧರ್ಮ ಶೇಕಡಾ
ಹಿಂದೂ
  
81.6%
ಇಸ್ಲಾಂ
  
15.5%
ಜೈನ
  
1.4%
ಇತರರು†
  
1.5%
Distribution of religions
Includes ಸಿಖ್ಖರು (0.2%), ಬೌದ್ಧರು (<0.2%).

ಚರಿತ್ರೆ[ಬದಲಾಯಿಸಿ]

ಆಗ್ರಾದ ಪ್ರದೇಶದ ಉಲ್ಲೇಖವು ಮಹಾಭಾರತ ಗ್ರಂಥದಲ್ಲಿದ್ದರೂ ೧೫೦೪ ರಲ್ಲಿ ದೆಹಲಿಯ ಸುಲ್ತಾನನಾದ ಸಿಕಂದರ್ ಲೋಧಿಯು ಸ್ಥಾಪಿಸಿದ ಎಂಬುದು ಈಗ ದೊರೆಯುವ ಸಾಕ್ಷ್ಯ. ಅವನ ಮಗ ಇಬ್ರಾಹಿಂ ಲೋಧಿಯು ಇದನ್ನು ಮೊದಲನೆಯ ಪಾಣಿಪತ್ ಯುದ್ಧ ದಲ್ಲಿ ಬಾಬರನಿಗೆ ಸೋಲುವವರೆಗೆ ಎಂದರೆ ೧೫೨೬ರ ವರೆಗೆ ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ. ೧೫೩೦ರಲ್ಲಿ ಬಾಬರ್‍ನ ನಿಧನದ ನಂತರ ಅವನ ಮಗ ಹುಮಾಯೂನ್ ಶೇರ್ ಶಾಹ್‍ನಿಂದ ಭಾರತದ ಹೊರಗೆ ಓಡಿಸಲ್ಪಟ್ಟು ನಂತರ ವಿಜಯಿಯಾಗಿ ಪಟ್ಟವನ್ನೇರುವಾಗ ಅವನು ದೆಹಲಿಯನ್ನು ರಾಜಧಾನಿಯನ್ನಾಗಿಸಿಕೊಂಡ. ಹುಮಾಯೂನನ ಮಗ ಅಕ್ಬರ್ ಪುನಃ ರಾಜಧಾನಿಯನ್ನು ಆಗ್ರಾಕ್ಕೆ ಸ್ಥಳಾಂತರಿಸಿದ. ಈ ರೀತಿ ಸ್ಥಳಾಂತರಿಸುವಾಗ ಹಳೆಯ ಆಗ್ರಾವನ್ನು ಬಿಟ್ಟು ಯಮುನಾ ನದಿಯ ಬಲದಂಡೆಯಲ್ಲಿ ಹೊಸ ನಗರವನ್ನು ನಿರ್ಮಿಸಿದ. ಆದುದರಿಂದ ಈ ನಗರಕ್ಕೆ ಅಕ್ಬರಾಬಾದ್ ಎಂಬ ಹೆಸರೂ ಇದೆ. ಇದರ ನಂತರ ಆಗ್ರಾದ ಸುವರ್ಣ ಯುಗ. ಅಕ್ಬರ್,ಜಹಾಂಗೀರ್, ಷಾ ಜಹಾನ್ ನಂತಹ ಚಕ್ರವರ್ತಿಗಳು ಈ ನಗರದಿಂದ ದೇಶವನ್ನು ಆಳಿದರು. ಮುಂದೆ ಔರಂಗಜೇಬ ೧೬೫೩ರಲ್ಲಿ ಔರಂಗಾಬಾದ್ ಗೆ ಸ್ಥಳಾಂತರಿಸುವವರೆಗೆ ಇದು ಭಾರತದ ರಾಜಧಾನಿಯಾಗಿತ್ತು. ಮೊಘಲರ ಅವನತಿಯ ನಂತರ ಈ ಪ್ರದೇಶ ೧೮೦೩ ರ ವರೆಗೆ ಮರಾಠರ ಸ್ವಾಧೀನವಿದ್ದು ಇದರ ಹೆಸರು ಪುನಃ ಆಗ್ರಾ ಎಂದು ಬದಲಾಯಿತು. ಮುಂದೆ ಇದು ಬ್ರಿಟಿಷರ ವಶವಾಯಿತು.ಇಲ್ಲಿರುವ ತಾಜ್ ಮಹಲ್, ಆಗ್ರಾ ಕೋಟೆ ಹಾಗೂ ಫತೇಪುರ್ ಸಿಕ್ರಿ ವಿಶ್ವ ಪರಂಪರೆಯ ತಾಣಗಳಾಗಿ ಘೋಷಿತವಾಗಿವೆ.

ಪ್ರಮುಖ ಸ್ಥಳಗಳು[ಬದಲಾಯಿಸಿ]

ಮುಖ್ಯ ಲೇಖನ: ತಾಜ್ ಮಹಲ್

ತಾಜ್ ಮಹಲ್ ಇದು ಪ್ರಪಂಚದ ಪ್ರಸಿದ್ಧ ಕಟ್ಟಡಗಳಲ್ಲಿ ಒಂದು. ಮುಸಲ್ಮಾನ ಶಿಲ್ಪಕಲೆಯ ಉತ್ಕೃಷ್ಟ ಉದಾಹರಣೆ.೧೬೫೩ರಲ್ಲಿ ನಿರ್ಮಾಣಗೊಂಡ ತಾಜ್ ಮಹಲ್ ಷಾ ಜಹಾನ್ ನಿಂದ ನಿರ್ಮಿಸಲ್ಪಟ್ಟಿತು.ಪೂರ್ಣವಾಗಿ ಅಮೃತಶಿಲೆಯಿಂದ ನಿರ್ಮಿತವಾದ ಇದರ ನಿರ್ಮಾಣ ಸಮಯ ಸುಮಾರು ೨೨ ವರ್ಷಗಳು.(೧೬೩೦ -೧೬೫೨). ಸುಮಾರು ೨೦ ಸಾವಿರ ಜನರ ಶ್ರಮದಿಂದ ಇದನ್ನು ನಿರ್ಮಿಸಲಾಗಿದೆ.

Panoramic View of TajMahal.jpg

ಆಗ್ರಾ ಕೋಟೆ

ಮುಖ್ಯ ಲೇಖನ: ಆಗ್ರಾ ಕೋಟೆ

೧೫೫೬ರಲ್ಲಿ ಅಕ್ಬರನಿಂದ ಕಟ್ಟಲ್ಪಟ್ಟಿತು.ಷಾ ಜಹಾನನ ಕಾಲದಲ್ಲಿ ಇದನ್ನು ಅರಮನೆಯನ್ನಾಗಿ ಪರಿವರ್ತಿಸಲಾಗಿತ್ತು.ಕೋಟೆಯ ಒಳಗಡೆ ಮೋತಿ ಮಸ್ಜಿದ್,ದಿವಾನ್-ಈ-ಆಮ್,ದಿವಾನ್-ಈ-ಖಾಸ್,ಜಹಾಂಗೀರನ ಅರಮನೆ,ಖಾಸ್ ಮಹಲ್,ಶೀಷ್ ಮಹಲ್ ಮುಂತಾದವುಗಳು ಮುಖ್ಯವಾಗಿವೆ.ಕೋಟೆಯ ಒಟ್ಟು ಸುತ್ತಳತೆ ಸುಮಾರು ೨.೪ ಕಿ.ಮೀ. ಫತೇಪುರ್ ಸಿಕ್ರಿ

ಮುಖ್ಯ ಲೇಖನ: ಫತೇಪುರ್ ಸಿಕ್ರಿ

ಇದು ಅಕ್ಬರನಿಂದ ಕಟ್ಟಲ್ಪಟ್ಟಿತ್ತು. ಅಕ್ಬರನು ಇದನ್ನು ತನ್ನ ರಾಜಧಾನಿಯನ್ನಾಗಿ ಮಾಡುವ ಉದ್ಧೇಶದಿಂದ ಕಟ್ಟಿದನಾದರೂ ಬಳಿಕ ನೀರಿನ ಕೊರೆತೆಯಿಂದ ಇದನ್ನು ತ್ಯಜಿಸಿ ಪುನಃ ಅಗ್ರಾಕ್ಕೆ ತನ್ನ ರಾಜಧಾನಿಯನ್ನು ಸ್ಥಳಾಂತರಿಸಿದನು.

"https://kn.wikipedia.org/w/index.php?title=ಆಗ್ರಾ&oldid=674861" ಇಂದ ಪಡೆಯಲ್ಪಟ್ಟಿದೆ