ವಿಷಯಕ್ಕೆ ಹೋಗು

ತಾಜ್ ಮಹಲ್

Coordinates: 27°10′27″N 78°02′32″E / 27.17417°N 78.04222°E / 27.17417; 78.04222 (Taj Mahal)
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಾಜ್‌ ಮಹಲ್‌ ಭವ್ಯ ಸಮಾಧಿ

ತಾಜ್‌ ಮಹಲ್‌ (pronounced /tɑdʒ məˈhɑl/; ಹಿಂದಿ: ताज महल ; ಪರ್ಷಿಯನ್‌/ಉರ್ದು: تاج محل ) ಭಾರತದ ಆಗ್ರಾದಲ್ಲಿರುವ ಭವ್ಯ ಸಮಾಧಿಯಾಗಿದೆ. ಇದನ್ನು ಮೊಘಲ್‌‌ ಚಕ್ರವರ್ತಿ ಷಹ ಜಹಾನ್‌‌ ತನ್ನ ಮೆಚ್ಚಿನ ಪತ್ನಿ ಮಮ್ತಾಜ್‌ ಮಹಲ್‌ಳ ನೆನಪಿಗಾಗಿ ಕಟ್ಟಿಸಿದನು.

ಪರ್ಷಿಯನ್‌, ಭಾರತೀಯ ಮತ್ತು ಮುಸ್ಲಿಂ ವಾಸ್ತುಶೈಲಿಗಳ ಸಮ್ಮಿಶ್ರಣವಾದ ಮೊಘಲ್‌‌ ವಾಸ್ತುಶೈಲಿಗೆ ತಾಜ್‌ ಮಹಲ್‌ ("ತಾಜ್‌" ಎಂದೂ ಕರೆಯಲ್ಪಡುತ್ತದೆ) ಅತ್ಯುತ್ತಮ ಉದಾಹರಣೆಯೆಂದು ಪರಿಗಣಿಸಲಾಗಿದೆ.[೧][೨] ೧೯೮೩ರಲ್ಲಿ ತಾಜ್‌ ಮಹಲ್‌ UNESCOದ ವಿಶ್ವ ಪರಂಪರೆ ತಾಣವಾಗಿ ಗುರುತಿಸಲ್ಪಟ್ಟಿತು ಮತ್ತು ಇದನ್ನು "ಭಾರತದಲ್ಲಿರುವ ಮೊಘಲರ ಕಲೆಯ ಅನರ್ಘ್ಯ ರತ್ನ ಮತ್ತು ಜಾಗತಿಕವಾಗಿ ಮೆಚ್ಚುಗೆಯನ್ನು ಪಡೆದ ವಿಶ್ವ ಪರಂಪರೆಯ ಮೇರುಕೃತಿಗಳಲ್ಲಿ ಒಂದು" ಎಂದು ಉಲ್ಲೇಖಿಸಲಾಗಿದೆ.

ತಾಜ್‌ ಮಹಲ್ ವಾಸ್ತವವಾಗಿ ಅನೇಕ ಸಂರಚನೆಗಳ ಒಂದು ಸಮಗ್ರ ಸಂಕೀರ್ಣವಾಗಿದ್ದು, ಗೌರವರ್ಣದ ಗುಮ್ಮಟಾಕಾರದ ಅಮೃತಶಿಲೆಯ ಭವ್ಯ ಸಮಾಧಿಯು ಇದರ ಅತ್ಯಂತ ಸುಪರಿಚಿತ ಭಾಗವಾಗಿದೆ. ಈ ಕಟ್ಟಡದ ನಿರ್ಮಾಣ ಕಾರ್ಯವು ೧೬೩೨ರಲ್ಲಿ ಪ್ರಾರಂಭವಾಗಿ, ಸರಿಸುಮಾರು ೧೬೫೩ರ ಹೊತ್ತಿಗೆ ಪೂರ್ಣಗೊಂಡಿತು.ಈ ಸಮಾಧಿಯು ೧೭-ಹೆಕ್ಟೇರ್ (೪೨-ಎಕರೆ)ಸಂಕೀರ್ಣದ ಕೇಂದ್ರವಾಗಿದೆ, ಈ ಭವ್ಯ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಸಾವಿರಾರು ಕುಶಲಕರ್ಮಿಗಳು ಮತ್ತು ನುರಿತ ಕೆಲಸಗಾರರನ್ನು ಬಳಸಿಕೊಳ್ಳಲಾಗಿತ್ತು.[೩] ತಾಜ್‌ ಮಹಲ್‌‌ನ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗೆ ಅಬ್ದ್‌ ಉಲ್‌-ಕರೀಮ್‌ ಮಾಮುರ್‌ ಖಾನ್‌, ಮಖ್ರಾಮತ್‌ ಖಾನ್‌ ಮತ್ತು ಉಸ್ತಾದ್‌ ಅಹ್ಮದ್‌ ಲಹೌರಿ ಸೇರಿದಂತೆ ಇನ್ನೂ ಕೆಲವರನ್ನು ಒಳಗೊಂಡಂತೆ ವಾಸ್ತುಶಿಲ್ಪಿಗಳ ಮಂಡಳಿಗೆ ನೇಮಿಸಲಾಗಿತ್ತು.[೪][೫] ಅವರಲ್ಲಿ ಲಾಹೋರಿರವರನ್ನು ತಾಜ್ ಮಹಲ್ ನಿರ್ಮಾಣದ ಪ್ರಧಾನ ಶಿಲ್ಪಿ ಎಂದು ಸ್ಥೂಲವಾಗಿ ಪರಿಗಣಿಸಲಾಗಿದೆ.[೬]

ವಾಸ್ತುಶಿಲ್ಪ

[ಬದಲಾಯಿಸಿ]

ಸಮಾಧಿ

[ಬದಲಾಯಿಸಿ]

ಸಮಾಧಿಯು ಸಂಕೀರ್ಣದ ಕೇಂದ್ರ ಆಕರ್ಷಣೆಯಾಗಿದೆ. ಈ ದೊಡ್ಡ ಬಿಳಿ ಅಮೃತಶಿಲೆ ಕಟ್ಟಡವು ಚೌಕಾಕಾರದ ಪೀಠದ ಮೇಲೆ ನಿಂತಿದೆ ಮತ್ತು ಇದು ದೊಡ್ಡ ಗುಮ್ಮಟ ಮತ್ತು ಚಾವಣಿಯ ಶಿಖರದಿಂದ ಚಾವಣಿಯನ್ನು ಹೊಂದಿರುವ ಐವಾನ್‌‌ನೊಂದಿಗೆ (ಕಮಾನು-ಆಕಾರದ ಬಾಗಿಲು ದಾರಿ) ಸುಸಂಗತವಾಗಿರುವ ಕಟ್ಟಡಗಳಿಂದ ಒಳಗೊಂಡಿದೆ. ಹೆಚ್ಚಿನ ಮೊಘಲ್‌‌ ಸಮಾಧಿಗಳಂತೆ, ಇದರ ಮೂಲ ಅಂಶಗಳು ಕೂಡ ಪರ್ಷಿಯನ್‌ ಶೈಲಿಯದ್ದು.

ಯಮುನಾ ನದಿಯ ದಡದಿಂದ ನೋಡಿದ ತಾಜ್‌ ಮಹಲ್‌

ಇದರ ಅಡಿಪಾಯದ ರಚನೆಯು ಮೂಲಭೂತವಾಗಿ ನಯಗೊಳಿಸಿದ ಮೂಲೆಗಳೊಂದಿಗೆ ದೊಡ್ಡ, ಬಹು-ಕೋಣೆ ಹೊಂದಿರುವ ಘನವಾಗಿದೆ ಮತ್ತು ನಾಲ್ಕು ಕಡೆಗಳಲ್ಲಿಯೂ ಸರಿಸುಮಾರು 55 ಮೀಟರ್‌ಗಳ ಅಸಮ ಅಷ್ಟಭುಜಗಳಿಂದ ರಚಿತವಾಗಿದೆ. ಪ್ರತಿ ಕಡೆಗಳಲ್ಲಿ ಭಾರಿ ಪಿಸ್ತಾಕ್‌ ಅಥವಾ ಕಮಾನು ದಾರಿ ಮತ್ತು ಎರಡು ಕಡೆಯಲ್ಲಿ ಬಣವೆಯಂತಿರುವ ಎರಡು ಸಮಾನ ಆಕಾರದ, ಕಮಾನಿನ ಮೊಗಸಾಲೆಗಳೊಂದಿಗೆ ಐವಾನ್‌ನ್ನು ರಚಿಸಲಾಗಿದೆ. ಬಣವೆಯಂತೆ ಮಾಡಿದ ಪಿಸ್ತಾಕ್‌ಗಳ ಈ ಕಲಾಕೃತಿ ನಯಗೊಳಿಸಿದ ಮೂಲೆ ಪ್ರದೇಶಗಳಲ್ಲಿ ಪ್ರತಿಕೃತಿಸುವುದು, ಕಟ್ಟಡದ ಎಲ್ಲಾ ಕಡೆಗಳಲ್ಲಿ ಹೊಂದಿಕೊಳ್ಳುವಂತೆ ಪೂರ್ಣವಾಗಿ ವಿನ್ಯಾಸವನ್ನು ಮಾಡಲಾಗಿದೆ. ನಾಲ್ಕು ಮಿನರೆಟ್ಟುಗಳಿಂದ ಸಮಾಧಿಯನ್ನು ರಚಿಸಲಾಗಿದೆ. ಅದರಲ್ಲಿ ಒಂದೊಂದು ನಯಗೊಳಿಸಿದ ಮೂಲೆಗಳ ಮುಖಮಾಡಿರುವ ಪೀಠದ ಪ್ರತಿ ಮೂಲೆಗಳಲ್ಲಿರುವುದು. ಮಹಲಿನ ಮುಖ್ಯ ಕೋಣೆಯಲ್ಲಿ ನಕಲಿ ಶಿಲೆಗಳಿಂದ ಅಲಂಕೃತವಾದ ಮಮ್ತಾಜ್‌ ಮಹಲ್‌ ಮತ್ತು ಷಹ ಜಹಾನ್‌‌‌ರ ಶಿಲಾಶವ ಪೆಟ್ಟಿಗೆಯಿದೆ. ನೈಜ ಸಮಾಧಿಗಳು ಕೆಳಮಟ್ಟದಲ್ಲಿವೆ.

ಸಮಾಧಿಯನ್ನು ಸುತ್ತುವರಿದಿರುವ ಅಮೃತಶಿಲೆಯ ಈ ಮಹಲ್‌ ನಯನ ಮನೋಹರವಾಗಿದೆ.ಮಹಲ್‌ ಸುಮಾರು ೩೫ ಮೀಟರ್‌ಗಳಷ್ಟು ಎತ್ತರವಾಗಿದೆ. ಇದು ಸರಿಸುಮಾರು ಅಡಿಪಾಯದ ಉದ್ದದಷ್ಟೇ ಇದೆ. ಸುಮಾರು ೭ ಮೀಟರ್‌ಗಳಷ್ಟು ಎತ್ತರದ ಸಿಲಿಂಡರ್ ಆಕಾರದ "ಡ್ರಮ್‌"ನ ಮೇಲೆ ಕುಳಿತಂತೆ ಕಾಣುತ್ತದೆ. ಇದರ ಆಕಾರದ ಕಾರಣದಿಂದ, ಈ ಗುಮ್ಮಟವನ್ನು ಈರುಳ್ಳಿ ಗುಮ್ಮಟ ಅಥವಾ ಅಮೃದ್‌ (ಸೀಬೆಹಣ್ಣಿನಾಕಾರದ ಗುಮ್ಮಟ) ಎಂದು ಕೆಲವೊಮ್ಮೆ ಕರೆಯಲಾಗುವುದು. ಇದರ ತುದಿಯನ್ನು ಕಮಲದ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಸಹ ಮಹಲಿನ ಎತ್ತರವನ್ನು ಎದ್ದು ಕಾಣಿಸುವಂತೆ ಮಾಡುತ್ತದೆ. ಪ್ರಧಾನ ಗುಮ್ಮಟದ ಈರುಳ್ಳಿ ಆಕಾರವನ್ನು ಪ್ರತಿಕೃತಿಸುವ, ಪ್ರತಿ ಮೂಲೆಗಳಲ್ಲಿರುವ ನಾಲ್ಕು ಚಿಕ್ಕ ಗುಮ್ಮಟಾಕಾರದ ಛತ್ರಿಗಳನ್ನು (ಕಿಯೊಸ್ಕ್‌ಗಳು) ಮುಖ್ಯ ಗುಮ್ಮಟದ ಆಕಾರದಲ್ಲೇ ನಿರ್ಮಿಸಲಾಗಿದೆ. ಅವುಗಳ ದುಂಡುಕಂಬಗಳ ಪೀಠಕ್ಕೂ ಕಂಬಕ್ಕೂ ನಡುವಿನ ಭಾಗವು ಸಮಾಧಿಯ ಚಾವಣಿಯ ಸುತ್ತಲು ತೆರೆದಿರುತ್ತದೆ. ಇದು ಒಳಾಂಗಣಕ್ಕೆ ಬೆಳಕನ್ನು ಒದಗಿಸುತ್ತದೆ. ಎತ್ತರದ ಅಲಂಕಾರಿಕ ಶೃಂಗಗಳು (ಗುಲ್ಡಾಸ್ತಾಗಳು ) ಮೂಲ ಗೋಡೆಗಳ ಅಂಚುಗಳಲ್ಲಿ ವ್ಯಾಪಿಸಿವೆ ಮತ್ತು ಇವುಗಳು ಗುಮ್ಮಟದ ಎತ್ತರ ನೋಡುವುದಕ್ಕೆ ಎದ್ದು ಕಾಣುವಂತೆ ಮಾಡುತ್ತದೆ. ಕಮಲ ಕಲಾಕೃತಿಯು ಛತ್ರಿಗಳು ಮತ್ತು ಗುಲ್ಡಸ್ತಾಗಳೆರಡರಲ್ಲು ಪುರಾವರ್ತನೆಗೊಂಡಿದೆ. ಚಿನ್ನದ ಲೇಪನವನ್ನು ಹೊಂದಿರುವ ಗುಮ್ಮಟ ಮತ್ತು ಛತ್ರಿಗಳು ಸಾಂಪ್ರದಾಯಿಕ ಪರ್ಷಿಯನ್‌ ಮತ್ತು ಹಿಂದೂ ಅಲಂಕಾರಿಕ ಅಂಶಗಳ ಮಿಶ್ರಣವಾಗಿವೆ.

ಪ್ರಮುಖ ಗೋಪುರವು ಮೂಲತಃ ಚಿನ್ನದಿಂದ ಮಾಡಲ್ಪಟ್ಟಿದೆ, ಆದರೆ ೧೯ನೇ ಶತಮಾನದಲ್ಲಿ ಕಂಚಿನ ಲೇಪಿತ ಗೋಪುರದೊಂದಿಗೆ ಬದಲಿಸಲಾಯಿತು. ಈ ವೈಶಿಷ್ಟ್ಯವು ಸಾಂಪ್ರದಾಯಿಕ ಪರ್ಷಿಯನ್‌ ಮತ್ತು ಹಿಂದೂ ಅಲಂಕಾರಿಕ ಅಂಶಗಳ ಸಂಮಿಶ್ರಣದ ಒಂದು ಉತ್ತಮ ಉದಾಹರಣೆಯಾಗಿದೆ. ಗೋಪುರದ ತುದಿಯಲ್ಲಿ ಚಂದ್ರನ ಆಕೃತಿಯಿದೆ. ಅದರ ಸ್ವರ್ಗಾಭಿಮುಖವಾಗಿ ಮುಖಮಾಡಿರುವ ಈ ಶೃಂಗವು ಅಪ್ಪಟ ಮುಸ್ಲಿಂ ಕಲಾಕೃತಿಯ ಪ್ರಧಾನ ಅಂಶ. ಪ್ರಮುಖ ಗೋಪುರದ ತುದಿಯಲ್ಲಿ ಚಂದ್ರನಿರುವ ಕಾರಣ, ಚಂದ್ರನ ಶೃಂಗಗಳು ಮತ್ತು ಗೋಪುರದ ತುದಿ ಸೇರಿ ಶಿವನ ಸಾಂಪ್ರದಾಯಿಕ ಹಿಂದೂ ಚಿಹ್ನೆಯಾದ ತ್ರಿಶೂಲ ಆಕಾರದಂತೆ ಕಾಣುವುದು.[೩]

ಸುಮಾರು ೪೦ ಮೀಟರ್‌ಗಳಿಗಿಂತ ಹೆಚ್ಚು ಉದ್ದವಿರುವ ಪ್ರತಿ ಮಿನರೆಟ್ಟುಗಳು ವಿನ್ಯಾಸಕಾರನ ಭವ್ಯತೆಯನ್ನು ಪ್ರದರ್ಶಿಸುತ್ತವೆ. ಪ್ರಾರ್ಥನೆಗಾಗಿ ಮಹಮ್ಮದೀಯ ಘೋಷಕರು ಮುಸ್ಲಿಂ ಬಾಂಧವರನ್ನು ಕರೆಯುವ ಕಾರ್ಯಕ್ಕಾಗಿ ಮಿನರೆಟ್ಟುಗಳನ್ನು ಮಸೀದಿಗಳ ಸಾಂಪ್ರದಾಯಿಕ ಅಂಶದಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿ ಮಿನರೆಟ್ಟುಗಳನ್ನು ಕೆಲಸ ಮಾಡುವ ಎರಡು ಮೊಗಸಾಲೆಗಳಿಂದ ಮೂರು ಸಮ ಭಾಗಗಳಾಗಿ ವಿಗಂಡಿಸಲಾಗಿದ್ದು ಇವು ಗೋಪುರವನ್ನು ಸುತ್ತುವರಿದಿವೆ. ಗೋಪುರದ ಮೇಲೆ ಕೊನೆಯ ಮೊಗಸಾಲೆಯಿದ್ದು, ಇದು ಸಮಾಧಿಯ ವಿನ್ಯಾಸವನ್ನು ಹೋಲುವ ಛತ್ರಿಯಿಂದ ಸುತ್ತುವರಿಯಲ್ಪಟ್ಟಿದೆ. ಗೋಪುರದ ತುದಿಯಲ್ಲಿರುವ ಎಲ್ಲಾ ಛತ್ರಿಗಳು ಕಮಲದ ವಿನ್ಯಾಸದ ಅಲಂಕಾರಿಕ ಅಂಶದಿಂದ ಕೂಡಿವೆ. ಮಿನರೆಟ್ಟುಗಳನ್ನು ಪೀಠದಿಂದ ಸ್ವಲ್ಪ ಹೊರಕ್ಕೆ ನಿರ್ಮಿಸಲಾಗಿದೆ. ಆದ್ದರಿಂದ, ಒಂದು ವೇಳೆ ಕುಸಿತದ ಸಮಯದಲ್ಲಿ, (ಆ ಕಾಲದಲ್ಲಿ ದೊಡ್ಡ ಕಟ್ಟಡಗಳ ನಿರ್ಮಾಣದಲ್ಲಿರುವ ಸಾಮಾನ್ಯ ಅಂಶವಾಗಿದೆ) ಗೋಪುರದ ವಸ್ತುಗಳು ಸಮಾಧಿಯಿಂದ ದೂರ ಬೀಳಲೆಂದು ಹೀಗೆ ಮಾಡಲಾಗಿದೆ.

ಹೊರಾಂಗಣ ಅಲಂಕಾರ

[ಬದಲಾಯಿಸಿ]
ದೊಡ್ಡ ಪಿಸ್ತಾಕ್‌ನಲ್ಲಿರುವ ಸುಂದರ ಬರಹಗಾರಿಕೆ

ತಾಜ್‌ ಮಹಲ್‌ನ ಹೊರಾಂಗಣ ಅಲಂಕಾರ ಮೊಘಲ್‌ ವಾಸ್ತುಶಿಲ್ಪದಲ್ಲಿರುವ ಉತ್ತಮ ಅಂಶಗಳಿಂದ ಕೂಡಿದೆ.[ಸಾಕ್ಷ್ಯಾಧಾರ ಬೇಕಾಗಿದೆ] ಆ ಮೇಲ್ಮೈ ಅಲಂಕಾರಗಳ ಬದಲಾವಣೆಗಳು ಪ್ರಮಾಣಾನುಗುಣವಾಗಿ ನಾಜೂಕುಗೊಳಿಸಲಾಗಿದೆ. ಕಟ್ಟಡದ ಅಲಂಕಾರಿಕ ಅಂಶಗಳನ್ನು ಬಣ್ಣ ಬಳಿಯುವುದು, ಗಾರೆ ಮಾಡುವುದು, ಕಲ್ಲು ಕೆತ್ತನೆ, ಅಥವಾ ಕೆತ್ತನೆಯಿಂದ ಮಾಡಲಾಗಿದೆ. ಮಾನವ ವರ್ಗೀಕರಣಗಳ ವಿರುದ್ಧ ಮುಸ್ಲಿಂ ಧರ್ಮದ ನಿಷೇಧವನ್ನು ಈ ಸಾಲುಗಳಲ್ಲಿ ಬರೆಯಲಾಗಿದ್ದು, ಇಲ್ಲಿ ಚಿತ್ರಿಸಲಾಗಿರುವ ಅಂಶಗಳನ್ನು ಅಲಂಕಾರಿಕ ಅಂಶಗಳು ಸುಂದರ ಬರಹಗಾರಿಕೆ, ಅಮೂರ್ತ ಪ್ರಕಾರಗಳು ಅಥವಾ ಸಸ್ಯಕ ಕಲಾಕೃತಿಗಳಾಗಿ ವಿಂಗಡಿಸಲಾಗಿದೆ.

ಸಂಕೀರ್ಣದಾದ್ಯಂತ ಖುರಾನ್‌ನ ಪಠ್ಯಭಾಗವನ್ನು ಅಲಂಕಾರಿಕ ಅಂಶಗಳಾಗಿ ಬಳಸಲಾಗಿದೆ. ಈ ಪಠ್ಯಭಾಗಗಳನ್ನು ಅಮಾನತ್‌ ಖಾನ್‌‌ರವರು ಆರಿಸಿದ್ದರು ಎಂದು ಇತ್ತೀಚಿನ ವಿದ್ವಾಂಸರು ಹೇಳುತ್ತಾರೆ.[೭][೮] ನ್ಯಾಯದ ಪರಿಕಲ್ಪನೆಯನ್ನು ಪಠ್ಯವು ಉಲ್ಲೇಖಿಸುತ್ತದೆ. ಅವು ಈ ಕೆಳಗಿನವುಗಳನ್ನು ಒಳಗೊಂಡಿದೆ:

ಮಹಾದ್ವಾರದಲ್ಲಿ ಸುಂದರ ಬರವಣಿಗೆಯಲ್ಲಿ ಹೀಗೆ ಬರೆಯಲಾಗಿದೆ "ಓ ಆತ್ಮವೇ, ನಿಮ್ಮ ಕಲೆಯು ವಿಶ್ರಾಂತಿಯಲ್ಲಿದೆ. ನೀವು ದೇವರೊಂದಿಗೆ ಶಾಂತಿಯನ್ನು ಹೊಂದುವಿರಿ, ಮತ್ತು ದೇವರು ನಿಮ್ಮೊಂದಿಗೆ ಶಾಂತಿಯನ್ನು ಹೊಂದುವರು." [೮]

1609ರಲ್ಲಿ ಭಾರತಕ್ಕೆ ಇರಾನ್‌ನ ಸಿರಾಜ್‌ನಿಂದ ಬಂದಿರುವ ಪರ್ಷಿಯನ್‌ ಸುಂದರ ಬರಹಗಾರ ಅಬ್ದ್‌ ಉಲ್‌-ಹಕ್‌ರವರಿಂದ ಈ ಸುಂದರ ಲಿಪಿಗಾರಿಕೆಯನ್ನು ರಚಿಸಲಾಗಿದೆ. ಷಹ ಜಹಾನ್‌‌ ಅಬ್ದ್‌ ಉಲ್‌-ಹಕ್‌ರ "ವಿಸ್ಮಯಗೊಳಿಸುವ ಕಲಾರಸಿಕತೆ"ಗಾಗಿ ಕೊಡುಗೆಯಾಗಿ "ಅಮನಾತ್‌ ಖಾನ್‌" ಎಂಬ ಹೆಸರನ್ನು ನೀಡಿದನು.[೫] ಒಳ ಗುಮ್ಮಟದ ತಳ ಭಾಗದಲ್ಲಿ ಖುರಾನ್‌ನ ಸಾಲುಗಳ ಪಕ್ಕದಲ್ಲಿ "ಅಲ್ಪ ಜೀವಿ ಅಮನಾತ್‌ ಖಾನ್‌ ಸಿರಾಜಿರವರಿಂದ ಬರೆಯಲಾಗಿದೆ" ಎಂದು ಕೆತ್ತಲಾಗಿದೆ.[೯] ಸುಂದರ ಬರಹಗಾರಿಕೆಗಳಲ್ಲಿ ಹೆಚ್ಚಿನವುಗಳನ್ನು ಪುಷ್ಪಿತ ಥುಲುತ್‌ ಲಿಪಿಯಲ್ಲಿ ಬರೆಯಲಾಗಿದೆ. ಇದನ್ನು ಕೆಂಪು ಅಥವಾ ಕಪ್ಪು ಅಮೃತಶಿಲೆಯಿಂದ ಮಾಡಲಾಗಿದೆ ಮತ್ತು [೫] ಬಿಳಿ ಅಮೃತಶಿಲೆ ಫಲಕಗಳಲ್ಲಿ ಕೆತ್ತಲಾಗಿದೆ. ಮೇಲಿನ ಫಲಕಗಳನ್ನು ಕೆಳಗಿನಿಂದ ನೋಡಿದಾಗ ಒರೆಯಾಗಿ ಕಾಣುವುದನ್ನು ಕಡಿಮೆ ಮಾಡುವುದಕ್ಕಾಗಿ ಸ್ವಲ್ಪ ದೊಡ್ಡಕ್ಷರದಲ್ಲಿ ಬರೆಯಲಾಗಿದೆ. ಸ್ಮಾರಕ ಸಮಾಧಿಗಳಲ್ಲಿ ಅಮೃತಶಿಲೆಯಲ್ಲಿ ಕಂಡುಬರುವ ಸುಂದರ ಬರಹಗಳು ನಿರ್ದಿಷ್ಟವಾಗಿ ವಿವರವಾಗಿವೆ ಮತ್ತು ಸೂಕ್ಷ್ಮವಾಗಿವೆ.

ಅಮೂರ್ತ ಆಕೃತಿಗಳನ್ನು ಉದ್ದಕ್ಕೂ ಬಳಸಲಾಗಿದೆ. ಅದರಲ್ಲೂ ವಿಶೇಷವಾಗಿ ಕಟ್ಟಡ ಪೀಠ, ಮಿನರೆಟ್ಟುಗಳು, ದ್ವಾರ, ಮಸೀದಿ, ಜವಾಬ್‌ಗಳಲ್ಲಿ ಮತ್ತು ಸಮಾಧಿಯ ಮೇಲ್ಮೈ ಮೇಲೆ ಕಡಿಮೆ ಪ್ರಮಾಣದಲ್ಲಿ ಬಳಸಲಾಗಿದೆ. ಮರಳುಕಲ್ಲಿನ ಕಟ್ಟಡಗಳಲ್ಲಿನ ಗುಮ್ಮಟಗಳು ಮತ್ತು ಕಮಾನುಗಳನ್ನು ವಿಸ್ತಾರವಾದ ಜ್ಯಾಮಿತಿಯ ಪ್ರಕಾರಗಳಲ್ಲಿ ರಚಿಸಲು ಕೆತ್ತಿದ ಚಿತ್ರಕಲೆಜಾಲರ ವಿನ್ಯಾಸದೊಂದಿಗೆ ಮಾಡಲಾಗಿದೆ. ಹೆರಿಂಗ್‌ಬೋನಿನ ಮೂಳೆ ಕೆತ್ತನೆಯು ಹಲವು ಜೋಡಣೆಗಳ ನಡುವಿನ ಜಾಗವನ್ನು ಸೂಚಿಸುತ್ತದೆ. ಬಿಳಿ ಕೆತ್ತನೆಗಳನ್ನು ಮರಳುಶಿಲೆಯ ಕಟ್ಟಡಗಳಲ್ಲಿ ಬಳಸಲಾಗಿದೆ ಮತ್ತು ಬಿಳಿ ಅಮೃತಶಿಲೆಗಳಲ್ಲಿ ತಿಳಿಗಪ್ಪು ಮತ್ತು ಕಪ್ಪು ಕೆತ್ತನೆಗಳನ್ನು ಬಿಡಿಸಲಾಗಿದೆ. ಅಮೃತಶಿಲೆ ಕಟ್ಟಡಗಳ ಗಾರೆ ಮಾಡಿದ ಪ್ರದೇಶಗಳಲ್ಲಿ ಹೊಳಪಿನ ಬಣ್ಣವನ್ನು ಬಳಿಯಲಾಗಿದೆ ಮತ್ತು ಗಮನಾರ್ಹ ಸಂಕೀರ್ಣತೆಯ ಜ್ಯಾಮಿತಿಯ ಆಕೃತಿಗಳನ್ನು ರಚಿಸಲಾಗಿದೆ. ಮಹಡಿಗಳು ಮತ್ತು ಕಾಲುದಾರಿಗಳಲ್ಲಿ ಹೊಳಪಿನ ತಬಲದಂತಹ ಆಕಾರಗಳಲ್ಲಿ ಹೆಂಚುಗಳು ಅಥವಾ ದಿಮ್ಮಿಗಳನ್ನು ಬಳಸಲಾಗಿದೆ.

ಸಮಾಧಿಯ ಕೆಳಗೋಡೆಗಳಲ್ಲಿ ಹೂವುಗಳು ಮತ್ತು ದ್ರಾಕ್ಷಿ ಬಳ್ಳಿಯ ಚಿತ್ರಣಗಳನ್ನು ನೈಜ ಲೋಹದ ಉಬ್ಬುಗಳೊಂದಿಗೆ ಶ್ವೇತ ಅಮೃತಶಿಲೆ ನಡುದಿಂಡುಗಳನ್ನು ಕೆತ್ತಲಾಗಿದೆ. ಕೆತ್ತನೆಗಳ ಅಂದವಾದ ಶಿಲ್ಪಶೈಲಿ ಮತ್ತು ನಡುದಿಂಡುಗಳ ಅಂಚುಗಳನ್ನು ಎತ್ತಿತೋರಿಸಲು ಅಮೃತಶಿಲೆಯನ್ನು ನಯಗೊಳಿಸಲಾಗಿದೆ ಮತ್ತು ಕಮಾನುದಾರಿಯ ಮೂಲೆಗಟ್ಟುಗಳನ್ನು ಹೆಚ್ಚಾಗಿ ಜ್ಯಾಮಿತಿಯ ದ್ರಾಕ್ಷಿ ಬಳ್ಳಿಗಳು, ಹೂಗಳು ಮತ್ತು ಹಣ್ಣುಗಳಿಂದ ಕೂಡಿದ ಸೊಗಸಾದ ಪಿಯೆತ್ರಾ ದುರಾ ಕೆತ್ತನೆಗಳೊಂದಿಗೆ ಅಲಂಕರಿಸಲಾಗಿದೆ. ಹಳದಿ ಅಮೃತಶಿಲೆ, ಜ್ಯಾಸ್ಪರ್‌ ಮತ್ತು ಜೇಡ್‌ ಕಲ್ಲುಗಳ ಕೆತ್ತನೆಗಳನ್ನು ನಯಗೊಳಿಸಲಾಗಿದೆ ಮತ್ತು ಅವುಗಳನ್ನು ಗೋಡೆಗಳ ಮೇಲ್ಮೈಗೆ ಸರಿಹೊಂದುವಂತೆ ಮಟ್ಟ ಮಾಡಲಾಗಿದೆ.

ಒಳಾಂಗಣ ಅಲಂಕಾರ

[ಬದಲಾಯಿಸಿ]
ಸ್ಮಾರಕ ಸಮಾಧಿಗಳ ಸುತ್ತಲಿರುವ ಜಲಿ ಪರದೆ
ಷಹ ಜಹಾನ್‌‌ ಮತ್ತು ಮಮ್ತಾಜ್‌ ಮಹಲ್‌ ಸಮಾಧಿ
ಸ್ಮಾರಕ ಸಮಾಧಿಗಳು, ತಾಜ್‌ ಮಹಲ್‌ನ ಒಳಾಂಗಣ

ತಾಜ್‌ ಮಹಲ್‌ನ ಒಳಭಾಗದ ಮೆಟ್ಟಿಲುಗಳ ಅಂದವು ಸಾಂಪ್ರದಾಯಿಕ ಅಲಂಕಾರಿಕ ಅಂಶಗಳಿಗಿಂತ ಭಿನ್ನವಾಗಿದೆ. ಇಲ್ಲಿ ಕೆತ್ತನೆ ಕೆಲಸವು ಪಿಯೆತ್ರಾ ದುರಾ ಶೈಲಿಯಲ್ಲಿಲ್ಲ; ಬದಲಿಗೆ ಅತ್ಯಮೂಲ್ಯ ಮತ್ತು ಅಮೂಲ್ಯ ಶಿಲಾಲಿಖಿತರತ್ನಗಳಿಂದ ಕೂಡಿದೆ. ಒಳ ಕೋಣೆಯು ಅಷ್ಟಭುಜಾಕೃತಿಯಲ್ಲಿದ್ದು, ಎಲ್ಲ ಕಡೆಯಿಂದಲೂ ಪ್ರವೇಶಿಸಬಹುದಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಆದರೂ ದಕ್ಷಿಣದ ಉದ್ಯಾನಕ್ಕೆ ಮುಖಮಾಡಿರುವ ದ್ವಾರವನ್ನು ಮಾತ್ರ ಬಳಸಲಾಗುತ್ತಿದೆ. ಒಳ ಗೋಡೆಗಳು ಸುಮಾರು ೨೫ ಮೀಟರ್‌ಗಳಷ್ಟು ಎತ್ತರವಾಗಿದೆ ಮತ್ತು ಸೂರ್ಯ ಕಲಾಕೃತಿಯೊಂದಿಗೆ ಅಲಂಕೃತಗೊಂಡ "ನಕಲಿ" ಒಳ ಗುಮ್ಮಟ ಮಹಲಿನ ಮೇಲ್ಭಾಗದಲ್ಲಿದೆ. ಎಂಟು ಪಿಸ್ತಾಕ್ ಕಮಾನುಗಳು ನೆಲ ಮಟ್ಟದಲ್ಲಿರುವ ಜಾಗವನ್ನು ರೂಪಿಸಿವೆ ಮತ್ತು ಅದರ ಹೊರಗೆ ಪ್ರತಿ ಕೆಳ ಪಿಸ್ತಾಕ್‌ ಸುಮಾರು ಗೋಡೆಯ ಮಧ್ಯ ಭಾಗದಲ್ಲಿ ಎರಡನೆಯ ಪಿಸ್ತಾಕ್‌ನಿಂದ ಮೇಲ್ಭಾಗವನ್ನು ಹೊಂದಿರುತ್ತದೆ. ಮೇಲ್ಭಾಗದ ನಾಲ್ಕು ಕೇಂದ್ರ ಕಮಾನುಗಳು ಮೊಗಸಾಲೆ ಅಥವಾ ವೀಕ್ಷಣಾ ಪ್ರದೇಶವಾಗಿವೆ ಮತ್ತು ಪ್ರತಿ ಮೊಗಸಾಲೆಯ ಬಾಹ್ಯ ಕಿಟಕಿಗಳು ಜಟಿಲ ಪರದೆ ಅಥವಾ ಅಮೃತಶಿಲೆನಿಂದ ಕತ್ತರಿಸಿದ ಜಲಿ ಯನ್ನು ಹೊಂದಿವೆ. ಹೆಚ್ಚುವರಿಯಾಗಿ, ಮೊಲೆಗಳಲ್ಲಿರುವ ಛತ್ರಿಗಳಿಂದ ಸುತ್ತುವರಿದ ತೆರದ ಚಾವಣಿಗಳ ಮೂಲಕ ಮೊಗಸಾಲೆಯ ಕಿಟಕಿಗಳಿಂದ ಬರುವ ಬೆಳಕು ಒಳಾಂಗಣವನ್ನು ಪ್ರವೇಶಿಸುತ್ತದೆ. ಪ್ರತಿ ಕೋಣೆಯ ಗೋಡೆಯನ್ನು ಸಂಕೀರ್ಣದ ಹೊರಾಂಗಣದಾದ್ಯಂತ ಕಂಡುಬರುವ ಲೋಹದ ಉಬ್ಬುಗಳು, ಜಟಿಲ ಶಿಲಾಲಿಖಿತ ಕೆತ್ತನೆ ಮತ್ತು ನಯಗೊಳಿಸಿದ ಸುಂದರ ಬರಹದ ಫಲಕಗಳು, ವಿನ್ಯಾಸ ಅಂಶಗಳನ್ನು ವರ್ಣರಂಜಿತ ಶಿಲ್ಪಶೈಲಿಯಿಂದ ಪ್ರತಿಫಲಿಸುವಂತೆ ಉತ್ತಮವಾಗಿ ಅಲಂಕರಿಸಲಾಗಿದೆ. ಜಟಿಲ ಕೊರೆಯವ ಕೆಲಸದ ಮೂಲಕ ಕೆತ್ತಿದ ಎಂಟು ಅಮೃತಶಿಲೆ ಫಲಕಗಳಿಂದ ಮಾಡಿದ ಸ್ಮಾರಕ ಸಮಾಧಿಗಳು ಅಷ್ಟಭುಜಾಕೃತಿ ಅಮೃತಶಿಲೆ ಪರದೆ ಅಥವಾ ಜಲಿ ಯ ಅಂಚುಗಳನ್ನು ಹೊಂದಿವೆ. ಉಳಿದ ಮೇಲ್ಮೈಗಳನ್ನು ಬೆಲೆಬಾಳುವ ಕಲ್ಲುಗಳಲ್ಲಿ ಜೋಡಿ ದ್ರಾಕ್ಷಿ ಬಳ್ಳಿಗಳು, ಹಣ್ಣುಗಳು ಮತ್ತು ಹೂಗಳನ್ನು ಕೆತ್ತುವುದರೊಂದಿಗೆ ಅತ್ಯಂತ ಸೂಕ್ಷ್ಮ ಶಿಲ್ಪಶೈಲಿಯಲ್ಲಿ ಕೆತ್ತಲಾಗಿದೆ.

ಮುಸ್ಲಿಂ ಸಂಪ್ರದಾಯವು ಸಮಾಧಿಯ ಹೆಚ್ಚಿನ ಅಲಂಕಾರವನ್ನು ನಿಷೇಧಿಸುತ್ತದೆ. ಹಾಗಾಗಿ ಮಮ್ತಾಜ್‌ ಮತ್ತು ಷಹ ಜಹಾನ್‌‌ರವರ ಮುಖಗಳನ್ನು ಬಲ ಭಾಗ ಮತ್ತು ಮೆಕ್ಕಾದ ಕಡೆಗೆ ತಿರುಗಿಸುವುದರೊಂದಿಗೆ ಒಳಕೋಣೆಯ ಕೆಳಗೆ ಸರಳ ರಹಸ್ಯ ಜಾಗದಲ್ಲಿರಿಸಲಾಗಿದೆ. ಮಮ್ತಾಜ್‌ ಮಹಲ್‌ಳ ಸ್ಮಾರಕ ಸಮಾಧಿಯನ್ನು ಒಳ ಕೋಣೆಯ ಸರಿಯಾದ ಕೇಂದ್ರ ಭಾಗದಲ್ಲಿ ೨.೫ ಮೀಟರ್‌ಗಳಿಂದ ೧.೫ ಮೀಟರ್‌ಗಳಷ್ಟು ಉದ್ದದ ಚೌಕಾಕಾರದ ಅಮೃತಶಿಲೆ ತಳಹದಿಯಲ್ಲಿ ನಿರ್ಮಿಸಲಾಗಿದೆ. ಅಡಿಪಾಯ ಮತ್ತು ಶವಪೆಟ್ಟಿಗೆಯನ್ನು ಅತ್ಯಮೂಲ್ಯ ಮತ್ತು ಅಮೂಲ್ಯ ರತ್ನಗಳೊಂದಿಗೆ ನಯವಾಗಿ ಕೆತ್ತಲಾಗಿದೆ. ಶವಪೆಟ್ಟಿಗೆಯಲ್ಲಿರುವ ಸುಂದರ ಬರಹಗಳು ಮಮ್ತಾಜ್‌ಳ ಕುರಿತು ತಿಳಿಸುವುದು ಮತ್ತು ಹೊಗಳುವುದು. ಶವಪೆಟ್ಟಿಗೆಯ ಮುಚ್ಚಳದ ಮೇಲಿರುವ ಎತ್ತರಿಸಲಾದ ಆಯತಾಕಾರದ ಹಲಗೆಯು ಬರವಣಿಗೆ ಪೀಠವನ್ನು ಸೂಚಿಸುತ್ತದೆ. ಷಹ ಜಹಾನ್‌‌ನ ಸ್ಮಾರಕ ಸಮಾಧಿಯು ಮಮ್ತಾಜ್‌ಳ ಸಮಾಧಿಯ ಪಕ್ಕ ಪಶ್ಚಿಮ ದಿಕ್ಕಿನಲ್ಲಿದೆ ಮತ್ತು ಅದು ಮಾತ್ರ ಪೂರ್ಣ ಸಂಕೀರ್ಣದಲ್ಲಿ ವಿಷಮಪಾರ್ಶ್ವದ ಅಂಶವಾಗಿ ಗೋಚರಿಸುವುದು. ಅವನ ಸ್ಮಾರಕ ಸಮಾಧಿಯು ಅವನ ಹೆಂಡತಿಯ ಸಮಾಧಿಗಿಂತ ದೊಡ್ಡದಾಗಿದೆ, ಆದರೆ ಒಂದೇ ಸಮನಾದ ಅಂಶಗಳನ್ನು ಪ್ರತಿಫಲಿಸುವುದು. ಇದು ಎತ್ತರವಾದ ಅಡಿಪಾಯದ ಮೇಲಿರುವ ದೊಡ್ಡದಾದ ಶವಪೆಟ್ಟಿಗೆಯಾಗಿದೆ. ಇದನ್ನು ವಿಸ್ಮಯಗೊಳಿಸುವ ನಿಖರತೆಯೊಂದಿಗೆ ಶಿಲಾಲಿಖಿತದಿಂದ ಅಲಂಕರಿಸಲಾಗಿದೆ ಮತ್ತು ಸುಂದರ ಬರಹಗಳಿಂದ ಬರೆದ ಬರಹವು ಅವನ ಗುರುತು ತಿಳಿಸುವುದು. ಶವಪೆಟ್ಟಿಗೆ ಮುಚ್ಚಳದ ಮೇಲೆ ಚಿಕ್ಕ ಲೇಖನಿ ಪೆಟ್ಟಿಗೆಯ ಸಾಂಪ್ರದಾಯಿಕ ಶಿಲ್ಪಾಕೃತಿಯಂತಿದೆ. ಲೇಖನಿ ಪೆಟ್ಟಿಗೆ ಮತ್ತು ಬರವಣಿಗೆ ಪೆಟ್ಟಿಗೆಗಳು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಶವಪೆಟ್ಟಿಗೆಯನ್ನು ಅಲಂಕರಿಸುವ ಸಾಂಪ್ರದಾಯಿಕ ಮೊಘಲ್‌‌ ಶವಸಂಸ್ಕಾರ ಚಿಹ್ನೆಗಳಾಗಿವೆ. "ಮಮ್ತಾಜ್‌ಳ ಶ್ರೇಷ್ಠತೆ, ಭವ್ಯತೆ, ಗಾಂಭೀರ್ಯತೆ, ಅನನ್ಯತೆ, ಚಿರಂತನ, ಮತ್ತು ವೈಭವತೆ..." ಗುಣಗಳು ಸೇರಿದಂತೆ ದೇವರ ತೊಂಬತ್ತೊಬತ್ತು ಹೆಸರುಗಳನ್ನು ಮಮ್ತಾಜ್‌ ಮಹಲ್‌ಳ ನೈಜ ಸಮಾಧಿಯ ಪಾರ್ಶ್ವಗಳಲ್ಲಿ ಕೆತ್ತಲಾಗಿರುವ ಸುಂದರ ಬರಹಗಳಲ್ಲಿ ಕಾಣಬಹುದು' . ಷಹ ಜಹಾನ್‌‌ನ ಸಮಾಧಿಯಲ್ಲಿ "ಅವನು ಹಿಜಿರಾ ವರ್ಷದ ರಜಾಬ್‌ ತಿಂಗಳ ಇಪ್ಪತ್ತಾರರ ರಾತ್ರಿ ಈ ಪ್ರಪಂಚದಿಂದ ಪರಲೋಕದ ಭೋಜನ ಭವನಕ್ಕೆ ಪ್ರಯಾಣಿಸಿದರು" ಎಂದು ಸುಂದರ ಬರಹಗಳಲ್ಲಿ ಕೆತ್ತಲಾಗಿದೆ.

ಉದ್ಯಾನ

[ಬದಲಾಯಿಸಿ]
ಪ್ರತಿಫಲನ ಕೊಳ ಕಾಲುದಾರಿಗಳು

ಸಂಕೀರ್ಣವು 300 ಮೀಟರ್‌ ಉದ್ದವಾದ ಛಾರ್ಬಾಘ್‌ ಅಥವಾ ಮೊಘಲ್‌‌ ಉದ್ಯಾನವನ್ನು ಒಳಗೊಂಡಿದೆ. ಉದ್ಯಾನದಲ್ಲಿ ಎತ್ತರಿಸಿದ ಹಾದಿಗಳನ್ನು ನಿರ್ಮಿಸಲಾಗಿದ್ದು ನಾಲ್ಕು ಕಾಲು ಭಾಗದಲ್ಲಿ ಪ್ರತಿಯೊಂದನ್ನು ೧೬ ಕೆಳ ಹೂದೋಟಗಳು ಅಥವಾ ಹೂಹಾಸುಗಳಾಗಿ ವಿಂಗಡಿಸಲಾಗಿದೆ. ಉದ್ಯಾನದ ಕೇಂದ್ರದಲ್ಲಿ ಎತ್ತರದ ಅಮೃತಶಿಲೆಯ ನೀರಿನ ತೊಟ್ಟಿ ಇದೆ. ಸಮಾಧಿ ಮತ್ತು ದ್ವಾರದ ನಡುವಿನ ಮಧ್ಯದಾರಿಯಲ್ಲಿ ಉತ್ತರ-ದಕ್ಷಿಣ ಅಕ್ಷದಲ್ಲಿ ಪ್ರತಿಫಲಿಸುವ ಕೊಳವು ಭವ್ಯ ಸಮಾಧಿಯ ಬಿಂಬವನ್ನು ಪ್ರತಿಫಲಿಸುತ್ತದೆ. ಮಹಮ್ಮದ್‌ರಿಗೆ ವಚನವಿತ್ತಂತೆ "ಸಿರಿವಂತಿಕೆಯ" ಸೂಚಕವಾಗಿ ಕಟ್ಟಿರುವ ಅಮೃತಶಿಲೆಯ ನೀರಿನ ತೊಟ್ಟಿಯನ್ನು ಅಲ್‌ ಹವ್ದ್‌ ಅಲ್‌-ಕವ್ತಾರ್‌ ಎಂದು ಕರೆಯಲಾಗುತ್ತದೆ.[೧೦] ಉದ್ಯಾನದ ಇನ್ನೊಂದೆಡೆ ಸಾಲುಮರಗಳು ಮತ್ತು ನೀರಿನ ಕಾರಂಜಿಗಳಿವೆ.[೧೧] ಭಾರತಕ್ಕೆ ಮೊದಲ ಮೊಘಲ್‌‌ ಚರ್ಕವರ್ತಿ ಬಾಬರ್‌ ಪರ್ಷಿಯನ್ ಉದ್ಯಾನಗಳಿಂದ ಪ್ರೇರೇಪಿತನಾಗಿ ಛಾರ್ಬಾಘ್‌ ಉದ್ಯಾನವನ್ನು ಪರಿಚಯಿಸಿದನು.ಇದು ಜನ್ನಾದ (ಸ್ವರ್ಗ)ದಲ್ಲಿ ಹರಿಯುವ ನಾಲ್ಕು ನದಿಗಳನ್ನು ಸೂಚಿಸುತ್ತದೆ. ಮತ್ತು ಪರ್ಷಿಯಾದ ಪ್ಯಾರಿಡೇಜಾ ಎಂದರೆ ಸ್ವರ್ಗ ಉದ್ಯಾನದಿಂದ ಸೃಷ್ಟಿಯಾದ 'ಗೋಡೆಗಳ ಉದ್ಯಾನ'ವನ್ನು ಬಿಂಬಿಸುತ್ತದೆ. ಮೊಘಲ್‌‌ ಅವಧಿಯ ಮುಸ್ಲಿಂ ಧರ್ಮದ ಆಧ್ಯಾತ್ಮಿಕತೆಯಲ್ಲಿ, ಉದ್ಯಾನದ ಕೇಂದ್ರದಲ್ಲಿರುವ ಕಾರಂಜಿ ಅಥವಾ ಬೆಟ್ಟದಿಂದ ಹರಿಯುವ ನಾಲ್ಕು ನದಿಗಳು ಉತ್ತರ, ದಕ್ಷಿಣ, ಪಶ್ಚಿಮ ಮತ್ತು ಪೂರ್ವಕ್ಕೆ ಉದ್ಯಾನವನ್ನು ಬೇರ್ಪಡಿಸುವುದರೊಂದಿಗೆ ಶ್ರೀಮಂತಿಕೆಯ ಮಾದರಿ ಉದ್ಯಾನದಂತೆ ಸ್ವರ್ಗವನ್ನು ವಿವರಿಸಲಾಗಿದೆ.

ಹೆಚ್ಚಿನ ಮೊಘಲ್‌‌ ಛಾರ್ಬಾಘ್‌ಗಳು ಮಧ್ಯಭಾಗದಲ್ಲಿ ಸಮಾಧಿ ಅಥವಾ ಉದ್ಯಾನಗೃಹವನ್ನು ಹೊಂದಿದ್ದು ಆಯತಾಕಾರದಲ್ಲಿರುತ್ತವೆ. ಅವುಗಳಲ್ಲಿ ತಾಜ್‌ ಮಹಲ್‌ ಉದ್ಯಾನವು ಅಸಾಮಾನ್ಯವಾದದ್ದು. ಪ್ರಧಾನ ಭಾಗವಾಗಿರುವ ಸಮಾಧಿಯು ಉದ್ಯಾನದ ಕೊನೆಯ ಭಾಗದಲ್ಲಿದೆ. ಯಮುನಾ ನದಿಯ ಇನ್ನೊಂದು ಬದಿಯಲ್ಲಿ ಮಹ್ತಾಬ್‌ ಬಾಘ್‌ ಅಥವಾ "ಬೆಳದಿಂಗಳ ಉದ್ಯಾನ"ದ ಆವಿಷ್ಕಾರದೊಂದಿಗೆ, ಭಾರತೀಯ ಪುರಾತತ್ವ ಸಂಸ್ಥೆ ತನ್ನ ವರದಿಯಲ್ಲಿ ಯಮುನಾ ನದಿ ಸ್ವರ್ಗದ ನದಿಗಳಲ್ಲಿ ಒಂದಾಗಿರುವಂತೆ ಕಾಣಬೇಕೆಂಬ ಆಶಯದೊಂದಿಗೆ ಉದ್ಯಾನದ ವಿನ್ಯಾಸದೊಂದಿಗೆ ಅದನ್ನು ಸೇರಿಸಲಾಗಿತ್ತು ಎಂದು ಹೇಳಿದೆ.[೧೨] ಈ ಉದ್ಯಾನ ಶಾಲಿಮರ್‌ ಉದ್ಯಾನಗಳಂತೆ ಅದೇ ರೀತಿಯ ವಿನ್ಯಾಸ ಮತ್ತು ವಾಸ್ತು ಲಕ್ಷಣಗಳನ್ನು ಹೊಂದಿರುವುದರಿಂದ ಅದೇ ವಾಸ್ತುಶಿಲ್ಪಿ ಅಲಿ ಮರ್ದಾನ್‌ರವರು ಈ ಉದ್ಯಾನವನ್ನೂ ವಿನ್ಯಾಸಗೊಳಿರಬಹುದೆಂದು ಹೇಳಲಾಗಿದೆ.[೧೩] ಆರಂಭಿಕ ದಿನಗಳಲ್ಲಿ ಉದ್ಯಾನವು ಹೇರಳ ಪ್ರಮಾಣದ ಗುಲಾಬಿಗಳು, ನೈದಿಲೆಗಳು, ಮತ್ತು ಹಣ್ಣಿನ ಮರಗಳು ಸೇರಿದಂತೆ ಅನೇಕ ಸಸ್ಯವರ್ಗಗಳಿಂದ ಕೂಡಿತ್ತು.[೧೪] ಮೊಘಲ್‌‌ ಸಾಮ್ರಾಜ್ಯ ಪತನವಾಗುತ್ತಾ ಹೋದಂತೆ ಈ ಉದ್ಯಾನದ ನಿರ್ವಹಣೆ ಕಳೆಗುಂದುತ್ತಾ ಹೋಯಿತು. ನಂತರ ಬ್ರಿಟಿಷ್‌ ಆಳ್ವಿಕೆಯ ಸಮಯದಲ್ಲಿ ತಾಜ್‌ ಮಹಲ್‌ ನಿರ್ವಹಣೆಯನ್ನು ಅವರು ವಹಿಸಿಕೊಂಡ ಮೇಲೆ, ಅವರು ಲಂಡನ್‌ನ ಹುಲ್ಲು ಹಾಸುಗಳನ್ನು ಬಳಸಿ ಉದ್ಯಾನದ ಮೇಲ್ಮೈಯನ್ನು ಬದಲಾಯಿಸಿದರು.[೧೫]

ನೆರೆಹೊರೆಯ ಕಟ್ಟಡಗಳು

[ಬದಲಾಯಿಸಿ]
ಮಹಾದ್ವಾರ (ದರ್ವಾಜಾ-ಇ ರೌಜಾ)—ತಾಜ್‌ ಮಹಲ್‌‌ಗೆ ಮಹಾದ್ವಾರ

ತಾಜ್‌ ಮಹಲ್‌ ಸಂಕೀರ್ಣದ ಮೂರು ಕಡೆಯಲ್ಲಿ ದಂತಾಕೃತಿಯಿಂದ ಕೂಡಿದ ಕೆಂಪು ಮರಳುಕಲ್ಲುಗಳಿಂದ ಕೋಟೆಯನ್ನು ನಿರ್ಮಿಸಲಾಗಿದ್ದು ಇದು ನದಿಗೆ ಎದುರು ದಿಕ್ಕಿನಲ್ಲಿ ತೆರೆದುಕೊಂಡಿದೆ. ಕೋಟೆಯ ಹೊರಗೆ ಷಹ ಜಹಾನ್‌ನ ಇತರ ಪತ್ನಿಯರು ಮತ್ತು ಮಮ್ತಾಜ್‌ನ ಮೆಚ್ಚಿನ ಸೇವಕನ ದೊಡ್ಡದಾದ ಸಮಾಧಿ ಸೇರಿದಂತೆ ಇತರ ಹಲವು ಭವ್ಯ ಸಮಾಧಿಗಳಿವೆ. ಕೆಂಪು ಮರಳುಕಲ್ಲುಗಳಿಂದ ಕಟ್ಟಲಾದ ಈ ಸಮಾಧಿಗಳು ಆ ಕಾಲದ ಚಿಕ್ಕ ಮೊಘಲ್‌‌ ಸಮಾಧಿಗಳ ಮಾದರಿಗಳಾಗಿದ್ದವು. ಉದ್ಯಾನಕ್ಕೆ ಮುಖಮಾಡಿರುವ ಒಳಗೋಡೆಯ ಮುಂಭಾಗದಲ್ಲಿ ಎತ್ತರದ ಕಮಾನುಗಳನ್ನು ನಿರ್ಮಿಸಲಾಗಿದೆ. ಇದು ಹಿಂದೂ ದೇವಾಲಯಗಳ ಅಪ್ಪಟ ವಾಸ್ತು ಶೈಲಿಯಲ್ಲಿದೆ. ನಂತರ ಈ ಶೈಲಿಯನ್ನು ಮೊಘಲ್‌‌ ಮಸೀದಿಗಳ ನಿರ್ಮಾಣಗಳಲ್ಲಿ ಅಳವಡಿಸಿಕೊಳ್ಳಲಾಯಿತು. ಈಗ ವಸ್ತುಸಂಗ್ರಹಾಲಯದಂತೆ ಬಳಸಲಾಗುತ್ತಿರುವ ಗುಮ್ಮಟಾಕಾರದ ಛತ್ರಿಗಳು ಮತ್ತು ಸಂಗೀತ ಕೋಣೆ ಯಂತಿರುವ ವೀಕ್ಷಣಾ ಪ್ರದೇಶಗಳು ಅಥವಾ ವೀಕ್ಷಣಾ ಗೋಪುರಗಳಂತಹ ಚಿಕ್ಕ ಕಟ್ಟಡಗಳಿಂದ ಕೋಟೆಯನ್ನು ವಿಭಿನ್ನವಾಗಿ ಕಟ್ಟಲಾಗಿದೆ.

ಮುಖ್ಯದ್ವಾರ (ದರ್ವಾಜಾ ) ಸ್ಮಾರಕವಾಗಿದ್ದು, ಇದನ್ನು ಅಮೃತಶಿಲೆಯಿಂದ ಕಟ್ಟಲಾಗಿದೆ. ಆರಂಭಿಕ ಮೊಘಲ್‌‌ ಚರ್ಕವರ್ತಿಗಳ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಈ ಸ್ಮಾರಕ ಕಟ್ಟಡಲಾಗಿದೆ. ಈ ಕಮಾನುದಾರಿಯು ಸಮಾಧಿಯ ಕಮಾನುದಾರಿಯ ರಚನೆಯನ್ನು ಹೋಲುತ್ತವೆ. ಮತ್ತು ಇದರ ಪಿಸ್ತಾಕ್‌ ಕಮಾನುಗಳನ್ನು ಸಮಾಧಿಯಲ್ಲಿರುವಂತೆ ಸುಂದರ ಬರಹಗಳಲ್ಲಿ ಅಲಂಕರಿಸಲಾಗಿದೆ. ಇದು ಪುಷ್ಪಾಕೃತಿಯ ಕಲಾಕೃತಿಗಳೊಂದಿಗೆ ಲೋಹದ ಉಬ್ಬುಗಳು ಮತ್ತು ಪಿಯೆತ್ರಾ ದುರಾದ ಕೆತ್ತನೆಗಳನ್ನು ಒಳಗೊಂಡಿದೆ. ಕಮಾನಿನ ಆಕಾರದ ಚಾವಣಿಗಳು ಮತ್ತು ಗೋಡೆಗಳು ಸಂಕೀರ್ಣದ ಇತರ ಮರಳುಕಲ್ಲಿನ ಕಟ್ಟಡಗಳಲ್ಲಿ ಕಂಡುಬರುವಂತೆ ಜಟಿಲವಾದ ಜ್ಯಾಮಿತಿಯ ವಿನ್ಯಾಸಗಳನ್ನು ಹೊಂದಿವೆ.

ತಾಜ್‌ ಮಹಲ್‌ ಮಸೀದಿ ಒಳಾಂಗಣದಲ್ಲಿ ಕಮಾನುಗಳು
ತಾಜ್‌ ಮಹಲ್‌ ಮಸೀದಿ ಅಥವಾ ಮಜೀದ್‌

ಸಮಾಧಿಯ ಕಡೆ ತೆರೆದುಕೊಂಡಿರುವ ಎರಡು ಭವ್ಯ ಮರಳುಕಲ್ಲಿನ ಕಟ್ಟಡಗಳು ಸಂಕೀರ್ಣದ ಕೊನೆಯ ಭಾಗದಲ್ಲಿವೆ. ಅವುಗಳ ಹಿಂಭಾಗವು ಪೂರ್ವ ಮತ್ತು ಪಶ್ಚಿಮ ಗೋಡೆಗಳಿಗೆ ಸಮಾನಾಂತರವಾಗಿದ್ದು ಎರಡು ಕಟ್ಟಡಗಳು ಕರಾರುವಕ್ಕಾಗಿ ಒಂದನ್ನೊಂದು ಹೋಲುತ್ತವೆ. ಪಶ್ಚಿಮದಲ್ಲಿರುವ ಕಟ್ಟಡವು ಮಸೀದಿಯಾಗಿದ್ದು ಇನ್ನೊಂದು ಕಟ್ಟಡವು ಜವಾಬ್‌ (ಉತ್ತರ) ಆಗಿದೆ. ವಾಸ್ತುಶೈಲಿಯನ್ನು ಸರಿದೂಗಿಸುವುದಕ್ಕಾಗಿ ಈ ಕಟ್ಟಡ ಕಟ್ಟಲಾಗಿತ್ತು. ಇದನ್ನು ಅತಿಥಿಗೃಹವಾಗಿ ಬಳಸಿರಬಹುದು. ಈ ಎರಡು ಕಟ್ಟಡಗಳ ನಡುವೆ ಜವಾಬ್‌ ನಲ್ಲಿರುವ ಮಿರಾಬ್‌ ನ (ಮೆಕ್ಕಾಕ್ಕೆ ಮುಖಮಾಡಿರುವ ಮಸೀದಿಯ ಗೋಡೆಗಳಲ್ಲಿರುವ ಗೂಡು) ಕೊರತೆಯೂ ಸೇರಿದಂತೆ ಅಸಮಾನತೆಯಿದೆ ಮತ್ತು ಜವಾಬ್‌‌ ನ ಮಹಡಿಗಳು ಜ್ಯಾಮಿತಿಯ ವಿನ್ಯಾಸದಲ್ಲಿ ರಚನೆಯಾಗಿವೆ. ಇದೇ ವೇಳೆ ಮಸೀದಿಯ ಮಹಡಿಗಳಲ್ಲಿ 569 ಪ್ರಾರ್ಥನೆ ಹಾಸುಗಳನ್ನು ಭಿನ್ನವಾಗಿ ಕಪ್ಪು ಅಮೃತಶಿಲೆಯಲ್ಲಿ ಕೆತ್ತಲಾಗಿದೆ. ಮಸೀದಿಯ ದೊಡ್ಡ ಸಭಾಂಗಣದ ಮೂಲ ವಿನ್ಯಾಸವು ಷಹ ಜಹಾನ್‌ನು ಕಟ್ಟಿದ ಇತರ ಕಟ್ಟಡಗಳಂತೆ ವಿಶೇಷವಾಗಿ ದೆಹಲಿಯ ಮಸೀದ್‌-ಜಹಾನ್‌ ನುಮಾ ಅಥವಾ ಜಮಾ ಮಸೀದಿಯಂತೆ ಮೂರು ಗುಮ್ಮಟಗಳನ್ನು ಹೊಂದಿದೆ‌. ಈ ಕಾಲದ ಮೊಘಲ್‌ ಮಸೀದಿಗಳು ಪ್ರಾರ್ಥನಾ ಮಂದಿರವನ್ನು ಒಂದು ಮುಖ್ಯ ಪ್ರಾರ್ಥನಾ ಸ್ಥಳ ಮತ್ತು ಎರಡೂ ಬದಿಯಲ್ಲಿ ಚಿಕ್ಕ ಪ್ರಾರ್ಥನಾ ಸ್ಥಳಗಳಂತೆ ಮೂರು ಮುಖ್ಯ ಭಾಗಗಳಾಗಿ ವಿಭಾಗಿಸುತ್ತವೆ. ತಾಜ್‌ ಮಹಲ್‌ನಲ್ಲಿ‌ ಪ್ರತಿ ಪ್ರಾರ್ಥನಾ ಸ್ಥಳದಲ್ಲಿ ದೊಡ್ಡದಾದ ಕಮಾನಿನಂತಹ ಗುಮ್ಮಟಕಾರದ ರಚನೆಯಿದೆ. ಈ ನೆರೆಹೊರೆಯ ಕಟ್ಟಡಗಳ ನಿರ್ಮಾಣ ಕಾರ್ಯ ೧೬೪೩ರಲ್ಲಿ ಪೂರ್ಣಗೊಂಡಿತು.

ನಿರ್ಮಾಣ

[ಬದಲಾಯಿಸಿ]
ತಾಜ್‌ ಮಹಲ್‌ ಭೂಮಹಡಿ ವಿನ್ಯಾಸ

ತಾಜ್‌ ಮಹಲ್‌ನ್ನು ಕೋಟೆಯ ನಗರ ಆಗ್ರಾದ ದಕ್ಷಿಣ ಭಾಗದಲ್ಲಿರುವ ಭೂಪ್ರದೇಶದಲ್ಲಿ ಕಟ್ಟಲಾಗಿದೆ. ತಾಜ್‌ ಮಹಲ್‌ ಕಟ್ಟಿದ್ದ ಸ್ಥಳಕ್ಕೆ ಪ್ರತಿಯಾಗಿ ಆಗ್ರಾದ ಕೇಂದ್ರ ಭಾಗದಲ್ಲಿದ್ದ ದೊಡ್ಡ ಅರಮನೆಯೊಂದನ್ನು ಷಹ ಜಹಾನ್‌ನು ಮಹರಾಜ ಜೈ ಸಿಂಗ್‌ರವರಿಗೆ ಕೊಡುಗೆಯಾಗಿ ನೀಡಿದನು.[೧೬] ಸುಮಾರು ಮೂರು ಎಕರೆಗಳಷ್ಟು ಪ್ರದೇಶದಲ್ಲಿ ಭೂಶೋಧನೆ ಮಾಡಲಾಯಿತು. ನೀರು ಜಿನುಗುವುದನ್ನು ಕಡಿಮೆ ಮಾಡಲು ಕಸವನ್ನು ತುಂಬಿ ಮಣ್ಣನ್ನು ಹಾಕಲಾಯಿತು ಮತ್ತು ನದಿ ದಡದಿಂದ ಮೇಲಿನ ೫೦ ಮೀಟರ್‌ಗಳಷ್ಟು ಎತ್ತರದ ಪ್ರದೇಶವನ್ನು ಸಮತಟ್ಟು ಮಾಡಲಾಯಿತು.ಸಮಾಧಿ ಸ್ಥಳದಲ್ಲಿ ಹಿಂದೆ ಬಾವಿಗಳನ್ನು ತೋಡಲಾಗಿದ್ದು ಪಾದಾಧಾರಕಲ್ಲು ಮತ್ತು ಹೆಂಟೆಗಳಿಂದ ತುಂಬಿಸಲಾಗಿತ್ತು. ಬಲಿಷ್ಠ ಬಿದಿರಿನ ಬದಲು ದೊಡ್ಡ ಇಟ್ಟಿಗೆಯನ್ನು ಬಳಸಿ ಕೆಲಸಗಾರರು ಕಟ್ಟಿದ ಹಂಗಾಮಿ ಕಟ್ಟಡವು ಸಮಾಧಿಯನ್ನು ಹೋಲುತ್ತದೆ. ಈ ಹಂಗಾಮಿ ಕಟ್ಟಡವು ಎಷ್ಟು ದೊಡ್ಡದಾಗಿದೆ ಎಂದರೆ ಕೆಲಸಗಾರರ ಇದನ್ನು ಕಿತ್ತುಹಾಕಲು ವರ್ಷಗಳೇ ಬೇಕಾಗಬಹುದು. ದಂತಕತೆಯ ಪ್ರಕಾರ, ಹಂಗಾಮಿ ಕಟ್ಟಡದಿಂದ ಇಟ್ಟಿಗೆಗಳನ್ನು ಯಾರಾದರೂ ಕೀಳಬಹುದೆಂದು ಭಾವಿಸಿ ಅದನ್ನು ಕೀಳಲು ಷಹ ಜಹಾನ್‌ ‌ಆಜ್ಞಾಪಿಸಿದ್ದ. ಆದ್ದರಿಂದ ಒಂದೇ ರಾತ್ರಿಯಲ್ಲಿ ರೈತರಿಂದ ಅದನ್ನು ಕಿತ್ತುಹಾಕಲಾಯಿತು. ನಿರ್ಮಾಣ ಸ್ಥಳಕ್ಕೆ ಅಮೃತಶಿಲೆ ಮತ್ತು ವಸ್ತುಗಳನ್ನು ಸಾಗಿಸಲು ಹದಿನೈದು ಕಿಲೋಮೀಟರ್‌ಗಳ ಉದ್ದದ ಜಲ್ಲಿಯಿಂದ ಹದಗೊಳಿಸಿದ ರಸ್ತೆಯನ್ನು ಮಾಡಲಾಗಿತ್ತು ಮತ್ತು ಅದರಲ್ಲಿ ಇಪ್ಪತ್ತು ಅಥವಾ ಮೂವತ್ತು ಎತ್ತುಗಳಿಂದ ಎಳೆಯಲ್ಡಡುತ್ತಿದ್ದ ವಿಶೇಷವಾಗಿ ನಿರ್ಮಿಸಿದ ಬಂಡಿಗಳಲ್ಲಿ ದಿಮ್ಮಿಗಳನ್ನು ಸಾಗಿಸಲಾಗುತ್ತಿತ್ತು. ದೊಡ್ಡ ಕಂಬ ಮತ್ತು ತೊಲೆ ಬೇಕಾದ ಸ್ಥಾನಕ್ಕೆ ದಿಮ್ಮಿಗಳನ್ನು ಏರಿಸಲು ರಾಟೆ ವ್ಯವಸ್ಥೆಯನ್ನು ಬಳಸಲಾಗಿತ್ತು. ಪುರ್ಸ್‌ ನ ಉಪನದಿಗಳಿಂದ ನೀರನ್ನು ಹಗ್ಗ ಮತ್ತು ಬಕೆಟ್‌ನ್ನು ಬಳಸಿ ಪ್ರಾಣಿಗಳ ಸಹಾಯದಿಂದ ಎತ್ತಲಾಗುತ್ತಿತ್ತು ಮತ್ತು ಅದನ್ನು ದೊಡ್ಡ ಸಂಗ್ರಹ ತೊಟ್ಟಿಗೆ ತುಂಬಿ, ದೊಡ್ಡ ವಿತರಣಾ ತೊಟ್ಟಿಗೆ ಏರಿಸಲಾಗುತ್ತಿತ್ತು. ಅದರಿಂದ ನೀರನ್ನು ಮೂರು ಉಪ ತೊಟ್ಟಿಗಳಿಗೆ ಹಾಯಿಸಿ, ನಂತರ ಅಲ್ಲಿಂದ ಕೊಳವೆಯ ಮುಖಾಂತರ ಸಂಕೀರ್ಣಕ್ಕೆ ತಲುಪಿಸಲಾಗುತ್ತಿತ್ತು.

ಪೀಠ ಮತ್ತು ಸಮಾಧಿಯ ನಿರ್ಮಾಣವನ್ನು ಪೂರ್ಣಗೊಳಿಸಲು ಸುಮಾರು ೧೨ ವರ್ಷ ತೆಗೆದುಕೊಳ್ಳಲಾಗಿತ್ತು. ಸಂಕೀರ್ಣದ ಇನ್ನುಳಿದ ಭಾಗವನ್ನು ಎಂದರೆ ಕ್ರಮವಾಗಿ ಮಸೀದಿಗಳು, ಜವಾಬ್‌ ಮತ್ತು ದ್ವಾರಬಾಗಿಲು ಕಟ್ಟಲು ಮತ್ತೆ ೧೦ ವರ್ಷಗಳ ಸಮಯ ಹಿಡಿಯಿತು. ಸಂಕೀರ್ಣದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದಾಗ, ಕಟ್ಟಡ "ಪೂರ್ಣಗೊಳ್ಳುವ" ವಿಚಾರದಲ್ಲಿ ವ್ಯತ್ಯಾಸಗಳಿದ್ದ ಕಾರಣ ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವ ದಿನಾಂಕದಲ್ಲೂ ಒಮ್ಮತವಿರಲಿಲ್ಲ. ಇದಕ್ಕೆ ಉದಾಹರಣೆ ಎಂದರೆ, ಭವ್ಯ ಸಮಾಧಿಯು ೧೬೪೩ರಲ್ಲಿ ಪೂರ್ಣಗೊಂಡಿತು, ಆದರೆ ಸಂಕೀರ್ಣದ ಉಳಿದ ಭಾಗದ ನಿರ್ಮಾಣ ಕಾರ್ಯ ಬಾಕಿ ಇದ್ದು ಕೆಲಸ ಮುಂದುವರಿಯಿತು. ಎಲ್ಲ ಸಮಯದಲ್ಲೂ ಅಂದಾಜು ವೆಚ್ಚವವನ್ನು ಕರಾರುವಕ್ಕಾಗಿ ಲೆಕ್ಕ ಹಾಕುವುದು ಕಷ್ಟವಾದ್ದರಿಂದ ಅಂದಾಜು ನಿರ್ಮಾಣದ ವೆಚ್ಚ ಬದಲಾಗುತ್ತಿತ್ತು. ಆ ಕಾಲದಲ್ಲೇ ಒಟ್ಟು ವೆಚ್ಚವನ್ನು ಸುಮಾರು ೩೨ ದಶಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿತ್ತು.[೧೭]

ತಾಜ್‌ ಮಹಲ್‌ ನಿರ್ಮಾಣದಲ್ಲಿ ಭಾರತ ಮತ್ತು ಏಷ್ಯಾದ್ಯಂತದ ದೊರೆಯುವ ಹಲವು ವಸ್ತುಗಳನ್ನು ಬಳಸಿ ನಿರ್ಮಿಸಲಾಯಿತು ಮತ್ತು ಸುಮಾರು ೧,೦೦೦ ಆನೆಗಳನ್ನು ಕಟ್ಟಡ ನಿರ್ಮಾಣದಲ್ಲಿ ವಸ್ತುಗಳ ಸಾಗಣಿಕೆಗಾಗಿ ಬಳಸಲಾಯಿತು. ರಾಜಸ್ಥಾನದಿಂದ ಪಾರದರ್ಶಕವಾದ ಬಿಳಿ ಅಮೃತಶಿಲೆಯನ್ನು, ಪಂಜಾಬ್‌ನಿಂದ ಜ್ಯಾಸ್ಪರ್‌ನ್ನು, ಚೀನಾದಿಂದ ಜೇಡ್‌ ಮತ್ತು ಸ್ಪಟಿಕವನ್ನು ತರಿಸಲಾಗಿತ್ತು. ಟಿಬೆಟ್‌ನಿಂದ ವೈಡೂರ್ಯ, ಅಫ್ಘಾನಿಸ್ಥಾನದಿಂದ ಲ್ಯಾಪಿಸ್‌ ಲಜುಲಿ, ಶ್ರೀಲಂಕಾದಿಂದ ನೀಲಮಣಿ ಮತ್ತು ಅರೇಬಿಯಾದಿಂದ ಕ್ಯಾಲ್ಸಡೆನಿಯನ್ನು ತರಿಸಿಕೊಂಡು ಅದನ್ನು ನಿರ್ಮಾಣದಲ್ಲಿ ಬಳಸಿಕೊಳ್ಳಲಾಗಿತ್ತು. ಒಟ್ಟಾಗಿ ಇಪ್ಪತ್ತೆಂಟು ವಿಧಗಳ ಅತ್ಯಮೂಲ್ಯ ಮತ್ತು ಅಮೂಲ್ಯ ರತ್ನಗಳನ್ನು ಬಿಳಿ ಅಮೃತಶಿಲೆಯಲ್ಲಿ ಕೊರೆದು ಇಡಲಾಯಿತು.

ಸ್ಮಿಥ್ಸೊನಿಯನ್‌ ಸಂಸ್ಥೆಯಿಂದ ತಾಜ್‌ ಮಹಲ್‌ನ ಕಲೆಗಾರರ ಅನಿಸಿಕೆ

ಉತ್ತರ ಭಾರತದಾದ್ಯಂತ ಇಪ್ಪತ್ತು ಸಾವಿರ ಕಾರ್ಮಿಕರನ್ನು ಕಟ್ಟಡ ಕೆಲಸದಲ್ಲಿ ಬಳಸಿಕೊಳ್ಳಲಾಗಿತ್ತು. ಬುಖಾರದಿಂದ ಶಿಲ್ಪಿಗಳು, ಸಿರಿಯಾ ಮತ್ತು ಪರ್ಷಿಯಾದಿಂದ ಸುಂದರ ಲಿಪಿಗಾರರು, ದಕ್ಷಿಣ ಭಾರತದಿಂದ ವಾಸ್ತುಶಿಲ್ಪಿಗಳು, ಬಲೂಚಿಸ್ತಾನದಿಂದ ಕಲ್ಲುಕಡೆಯುವವರು, ಕಟ್ಟಡದ ಗೋಪುರ ಕಟ್ಟುವುದರಲ್ಲಿ ಪರಿಣಿತರು, ಅಮೃತಶಿಲೆಯಲ್ಲಿ ಹೂಗಳನ್ನು ಕೆತ್ತುವವರು ಕ್ರಿಯಾತ್ಮಕ ಘಟಕವನ್ನು ರಚಿಸಿದ ಮೂವತ್ತೇಳು ಜನರಲ್ಲಿದ್ದಾರೆ. ಈ ಕೆಳಗಿನವರು ತಾಜ್‌ ಮಹಲ್‌ ನಿರ್ಮಾಣದಲ್ಲಿ ಭಾಗಿಯಾದ ಕೆಲವು ನಿರ್ಮಾಪಕರಾಗಿದ್ದಾರೆ:

 • ಇಸ್ಮಾಯಿಲ್‌ ಅಫಾಂದಿನು (a.ka. ಇಸ್ಮಾಯಿಲ್ ‌ಖಾನ್‌) ಒಟ್ಟೊಮಾನ್‌ ಸಾಮ್ರಾಜ್ಯದವನಾದ ಇವರು - ಮುಖ್ಯ ಗುಮ್ಮಟದ ವಿನ್ಯಾಸಕರಾಗಿದ್ದಾರೆ.[೧೮]
 • ಒಟ್ಟೊಮಾನ್‌ ಸಾಮ್ರಾಜ್ಯದ ಕೊಕ ಮಿಮರ್‌ ಸಿನಾನ್‌ ಅಘರಿಂದ ತರಬೇತಿ ಪಡೆದ ಪರ್ಷಿಯಾದ ಉಸ್ತಾದ್ ಇಸಾ ಮತ್ತು ಇಸಾ ಮಹಮ್ಮದ್‌ ಎಫ್ಫಿಂದಿರವರು ವಾಸ್ತುಶಿಲ್ಪ ವಿನ್ಯಾಸದಲ್ಲಿ ಪ್ರಮುಖ ಪಾತ್ರವನ್ನು ಆಗಾಗ್ಗೆ ನಿರ್ವಹಿಸಿದ್ದಾರೆ.[೧೯][೨೦]
 • ಪರ್ಷಿಯಾದ ಬನಾರಸ್‌‌‌ನಿಂದ ಬಂದಿರುವ 'ಪುರು'ರವರು ವಾಸ್ತುಶಿಲ್ಪವನ್ನು ಪರಿಶೀಲಿಸಿದ್ದಾರೆಂದು ಉಲ್ಲೇಖಿಸಲಾಗಿದೆ.[೨೧]
 • ಲಹೋರ್‌ ಮೂಲದ ಖಾಜಿಮ್‌ ಖಾನ್‌ರವರು ಬಲಿಷ್ಠ ಚಿನ್ನದ ಗೋಪುರವನ್ನು ವಿನ್ಯಾಸಗೊಳಿಸಿದರು.
 • ದೆಹಲಿಯಿಂದ ಬಂದಿರುವ ಶಿಲ್ಪಿ ಚಿರಾಂಜಿಲಾಲ್‌ರವರು ಪ್ರಮುಖ ಶಿಲ್ಪಿ ಮತ್ತು ಮೊಸಾಯಿಕ್‌ ಚಿತ್ರಕಾರರಾಗಿದ್ದರು.
 • ಇರಾನ್‌ನ ಸಿರಾಜ್‌ನಿಂದ ಬಂದಿರುವ ಅಮಾನತ್‌ ಖಾನ್‌ರವರು ಮುಖ್ಯ ಸುಂದರ ಬರಹಗಾರರಾಗಿದ್ದರು.[೨೨]
 • ಮಹಮ್ಮದ್‌ ಹನಿಫ್‌ರವರು ಕಲ್ಲುಕಡಿಯುವವರ ಮೇಲ್ವಿಚಾರಕರಾಗಿದ್ದರು.
 • ಸಿರಾಜ್‌ನ ಮಿರ್‌ ಅಬ್ದುಲ್‌ ಕರೀಮ್‌ ಮತ್ತು ಮುಕ್ಕರಿಮತ್‌ ಖಾನ್‌ರವರು ದೈನಂದಿನ ನಿರ್ಮಾಣಕ್ಕೆ ಬೇಕಾದ ಹಣಕಾಸು ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದರು.

ಇತಿಹಾಸ

[ಬದಲಾಯಿಸಿ]
ಸ್ಯಾಮ್ಯುಲ್‌ ಬೌರ್ನೆರವರಿಂದ ತಾಜ್‌ ಮಹಲ್‌, ೧೮೬೦.
ರಕ್ಷಣಾತ್ಮಕ ಯುದ್ಧದ ಸಮಯದ ಹಂಗಾಮಿ ಕಟ್ಟಡ

ತಾಜ್‌ ಮಹಲ್‌ನ ನಿರ್ಮಾಣವು ಪೂರ್ಣಗೊಂಡ ಕೆಲವೇ ದಿನಗಳ ನಂತರ, ಷಹ ಜಹಾನ್‌‌ ತನ್ನ ಮಗ ಔರಂಗಜೇಬ್‌ನಿಂದ ಪದಚ್ಯುತಿಗೆ ಒಳಗಾದನು ಮತ್ತು ಅವನನ್ನು ಆಗ್ರಾ ಬಂದರಿನ ಬಳಿ ಗೃಹ ಬಂಧನದಲ್ಲಿಡಲಾಯಿತು. ಷಹ ಜಹಾನ್‌‌ನ ಮರಣದ ನಂತರ, ಅವನ ಹೆಂಡತಿಯ ಸಮಾಧಿಯ ಪಕ್ಕದಲ್ಲಿ ಔರಂಗಜೇಬ್‌ ಷಹ ಜಹಾನ್‌‌ನನ್ನು ಮಣ್ಣು ಮಾಡಿದನು.[೨೩]

೧೯ನೇ ಶತಮಾನ ಅಂತ್ಯದ ವೇಳೆಗೆ, ದುರಸ್ತಿ ಮಾಡದ ಕಾರಣ ಕಟ್ಟಡದ ಕೆಲವು ಭಾಗಗಳು ಕುಸಿದು ಬಿದ್ದವು. ೧೮೫೭ರ ಭಾರತದ ಸ್ವಾತಂತ್ರ್ಯ ದಂಗೆಯ ಸಮಯದಲ್ಲಿ, ಬ್ರಿಟಿಷ್‌ ಸೈನಿಕರು ಮತ್ತು ಸರಕಾರಿ ಅಧಿಕಾರಿಗಳು ತಾಜ್‌ ಮಹಲ್‌ನ ಗೋಡೆಗಳಿಂದ ಅಮೂಲ್ಯ ರತ್ನಗಳು ಮತ್ತು ಲ್ಯಾಪಿಸ್‌ ಲಜುಲಿಯನ್ನು ಮೋಸದಿಂದ ತೆಗೆದುಕೊಂಡು ಹೋದರು. ಇದರಿಂದ ತಾಜ್‌ ಮಹಲ್‌ನ ಅಂದ ಹಾಳಾಯಿತು. ೧೯ನೇ ಶತಮಾನದ ಕೊನೆಯಲ್ಲಿ, ಬ್ರಿಟಿಷ್‌ ವೈಸ್‌ರಾಯ್‌ ಲಾರ್ಡ್‌ ಕರ್ಜನ್‌‌ ಭಾರಿ ಪ್ರಮಾಣದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಆದೇಶಿಸಿದನು. ಅದು ೧೯೦೮ರಲ್ಲಿ ಪೂರ್ಣಗೊಂಡಿತು.[೨೪][೨೫] ಅವನು ಕೈರೊ ಮಸೀದಿಯಲ್ಲಿರುವ ದೊಡ್ಡ ದೀಪದ ಮಾದರಿಯ ದೀಪವನ್ನು ಒಳಾಂಗಣ ಕೋಣೆಯಲ್ಲಿರಿಸಲು ಆದೇಶಿಸಿದನು. ಈ ಸಮಯದಲ್ಲಿ ಉದ್ಯಾನವನ್ನು ಇಂದಿಗೂ ಇರುವ ಬ್ರಿಟಿಷ್‌-ಶೈಲಿಯ ಹುಲ್ಲುಹಾಸುಗಳೊಂದಿಗೆ ಹೊಸದಾಗಿ ರೂಪಿಸಲಾಯಿತು.[೨೬]

೧೯೪೨ರಲ್ಲಿ ಸರಕಾರವು ಜರ್ಮನ್‌ ಲುಫ್ಟಪಾಫ್ಪೆಯ ವಾಯು ದಾಳಿ ಮತ್ತು ನಂತರದ ದಿನಗಳಲ್ಲಿ ಜಪಾನಿನ ವಾಯು ಪಡೆಯ ದಾಳಿಯನ್ನು ನಿರೀಕ್ಷಿಸಿ ಹಂಗಾಮಿ ಕಟ್ಟಡವನ್ನು ಸ್ಥಾಪಿಸಿತು. ೧೯೬೫ ಮತ್ತು ೧೯೭೧ರ ಭಾರತ-ಪಾಕಿಸ್ತಾನ ಯುದ್ಧಗಳ ಸಮಯದಲ್ಲಿ, ಯುದ್ದ ವಿಮಾನಗಳ ಚಾಲಕರನ್ನು ದಾರಿ ತಪ್ಪಿಸಲು ಮತ್ತೆ ಹಂಗಾಮಿ ಕಟ್ಟಡಗಳನ್ನು ಕಟ್ಟಲಾಗಿತ್ತು.[೨೭]ಭಾರತದ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನಗಳು ವಿರೋಧಿಸಿದ ಮಥುರಾ ತೈಲ ಸಂಸ್ಕರಣೆ ಕೇಂದ್ರದಿಂದ[೨೮] ಉಂಟಾಗುತ್ತಿರುವ ಅಮ್ಲ ಮಳೆ[೨೯] ಸೇರಿದಂತೆ ಯಮುನಾ ನದಿಯಲ್ಲಿ ಉಂಟಾಗುತ್ತಿರುವ ಪರಿಸರ ಮಾಲಿನ್ಯವು ತಾಜ್‌ ಮಹಲ್‌ಗಿರುವ ತೀರಾ ಇತ್ತೀಚಿನ ಅಪಾಯಗಳು. ಮಾಲಿನ್ಯವು ತಾಜ್‌ ಮಹಲ್‌ನ ಬಣ್ಣವನ್ನು ಹಳದಿಯಾಗಿಸಿದೆ. ಮಾಲಿನ್ಯವನ್ನು ನಿಯಂತ್ರಿಸಲು, ಸ್ಮಾರಕದ ಸುತ್ತಮುತ್ತ ಕಟ್ಟುನಿಟ್ಟಾದ ಮಾಲಿನ್ಯ ನಿಯಂತ್ರಣ ಮಾನಕವನ್ನು ಅಳವಡಿಸಿರುವ 10,400 ಘನ ಕಿಲೋಮೀಟರ್‌ (೪,೪೦೫ ಘನ ಮೈಲಿ) ಪ್ರದೇಶದಲ್ಲಿ ಭಾರತ ಸರಕಾರವು ತಾಜ್‌ ವಿಷಮ ಚತುರ್ಭುಜ ವಲಯವನ್ನು (TTZ) ಸ್ಥಾಪಿಸಿದೆ.[೩೦] ೧೯೮೩ರಲ್ಲಿ ತಾಜ್‌ ಮಹಲ್‌ನ್ನು UNESCO ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಿ ಮಾನ್ಯ ಮಾಡಿತು.[೩೧]

ಪ್ರವಾಸೋದ್ಯಮ

[ಬದಲಾಯಿಸಿ]
೨೦೦೦ರಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮತ್ತು ಅವರ ಪತ್ನಿ ಲ್ಯುಡ್ಮಿಲಾ ಪುಟಿನ್‌ರವರು ತಾಜ್‌ ಮಹಲ್‌ಗೆ ಭೇಟಿ ನೀಡಿದ್ದರು.

ವಾರ್ಷಿಕವಾಗಿ ತಾಜ್‌ ಮಹಲ್‌ಗೆ ೨ ರಿಂದ ೪ ದಶಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಇವರಲ್ಲಿ ೨೦೦,೦೦೦ಕ್ಕಿಂತ ಹೆಚ್ಚು ಜನರು ವಿದೇಶದಿಂದ ಬಂದವರಾಗಿರುತ್ತಾರೆ. ಹೆಚ್ಚಿನ ಪ್ರವಾಸಿಗರು ಚಳಿಗಾಲವಾದ ಅಕ್ಟೋಬರ್‌, ನವೆಂಬರ್ ಮತ್ತು ಫೆಬ್ರುವರಿ ತಿಂಗಳುಗಳಲ್ಲಿ ಭೇಟಿ ನೀಡುತ್ತಾರೆ. ಸಂಕೀರ್ಣದ ಸಮೀಪ ಮಾಲಿನ್ಯಕಾರಕ ವಾಹನಗಳನ್ನು ನಿಷೇಧಿಸಲಾಗಿದೆ. ಪ್ರವಾಸಿಗರು ವಾಹನ ನಿಲುಗಡೆ ಪ್ರದೇಶದಿಂದ ನಡೆದುಕೊಂಡು ಹೋಗಬೇಕು ಇಲ್ಲವೇ ವಿದ್ಯುತ್‌ ಬಸ್ಸನ್ನು ಹತ್ತಿ ಪ್ರಯಾಣಿಸಬೇಕು. ಖವಾಸ್‌ಪುರಾಸ್‌‌ನ್ನು (ಉತ್ತರ ಬೀದಿ) ಪ್ರಸ್ತುತವಾಗಿ ಹೊಸ ಪ್ರವಾಸಿ ಕೇಂದ್ರದಂತೆ ಬಳಸುವುದಕ್ಕಾಗಿ ನವೀಕರಿಸಲಾಗಿದೆ.[೩೨][೩೩] ತಾಜ್‌ನ ದಕ್ಷಿಣ ಭಾಗದಲ್ಲಿರುವ ಚಿಕ್ಕ ಪಟ್ಟಣವನ್ನು ತಾಜ್‌ ಘಂಜಿ ಅಥವಾ ಮಮ್ತಾಜಾಬಾದ್‌ ಎಂದು ಕರೆಯುತ್ತಾರೆ. ಮೂಲತಃ ಇದನ್ನು ಪ್ರವಾಸಿಗರು ಮತ್ತು ಕೆಲಸಗಾರರ ಅವಶ್ಯಕತೆಗಳನ್ನು ಪೂರೈಸಲು ತಂಗುದಾಣ, ಬೀದಿ ಅಂಗಡಿಗಳು ಮತ್ತು ಮಾರುಕಟ್ಟೆಗಳನ್ನು ಇಲ್ಲಿ ನಿರ್ಮಿಸಲಾಗಿತ್ತು.[೩೪] ವಿಶ್ವದಾದ್ಯಂತ ಇರುವ ಶಿಫಾರಸು ಮಾಡಿದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ತಾಜ್‌ ಮಹಲ್ ಸೇರಿದೆ. ಅಲ್ಲದೆ,[೩೫] ಇತ್ತೀಚೆಗೆ ನೆಡೆದ ಚುನಾವಣೆಯಲ್ಲಿ 100 ದಶಲಕ್ಷ ಮತಗಳೊಂದಿಗೆ ವಿಶ್ವದ ಹೊಸ ಏಳು ಅದ್ಭುತಗಳಲ್ಲಿ ಒಂದಾಗಿರುವುದು ಸೇರಿದಂತೆ ಆಧುನಿಕ ಜಗತ್ತಿನ ಏಳು ಅದ್ಭುತಗಳ ಪಟ್ಟಿಗಳಲ್ಲೂ ಕೂಡ ಸೇರಿದೆ‌.

ತಾಜ್‌ ಮಹಲ್‌ನ ಆವರಣ ಪ್ರತಿ ಶುಕ್ರವಾರದ 12 ರಿಂದ 2 ಗಂಟೆಗಳವರೆಗೆ ಪ್ರಾರ್ಥನೆಗೆಂದು ತೆರೆಯುವ ಕಾರಣ ಶುಕ್ರವಾರವನ್ನು ಹೊರತುಪಡಿಸಿ ವಾರಾಂತ್ಯದ ದಿನಗಳಲ್ಲಿ ಬೆಳಿಗ್ಗೆ 6ರಿಂದ ಸಂಜೆ 7ಗಂಟೆಯವ ಪ್ರವಾಸಿಗರಿಗೆ ತೆರೆದಿರುತ್ತದೆ. ಸಂಕೀರ್ಣವು [೩೬] ಶುಕ್ರವಾರಗಳು ಮತ್ತು ರಂಜಾನ್‌ ತಿಂಗಳನ್ನು ಹೊರತುಪಡಿಸಿ, ಹುಣ್ಣಿಮೆ ಹಾಗೂ ಹುಣ್ಣೆಮೆಯ ಹಿಂದಿನ ಮತ್ತು ನಂತರ ಎರಡು ದಿನ ತಾಜ್‌ ಮಹಲ್‌ನ ರಾತ್ರಿ ವೀಕ್ಷಣೆಗೆಂದೇ ಪ್ರವಾಸಿಗರಿಗೆ ಪ್ರವೇಶ ತೆರೆದಿರಲಾಗಿರುತ್ತದೆ. ಭದ್ರತಾ ಕಾರಣಗಳಿಗಾಗಿ [೩೭] ಪಾರದರ್ಶಕ ಬಾಟಲುಗಳಲ್ಲಿ ನೀರು, ಚಿಕ್ಕ ವೀಡಿಯೊ ಕ್ಯಾಮರಾಗಳು, ಸ್ಟಿಲ್‌ ಕ್ಯಾಮರಾಗಳು, ಸಂಚಾರಿ ದೂರವಾಣಿಗಳು ಮತ್ತು ಮಹಿಳೆಯರ ಚಿಕ್ಕ ಪರ್ಸುಗಳಂತಹ ಐದು ವಸ್ತುಗಳನ್ನು ಮಾತ್ರ ತಾಜ್‌ ಮಹಲ್‌ನೊಳಗೆ ಅನುಮತಿಸಲಾಗಿದೆ.

ನಂಬಿಕೆಗಳು

[ಬದಲಾಯಿಸಿ]

ತಾಜ್ ಮಹಲ್ ನಿರ್ಮಾಣವಾದಾಗಿನಿಂದಲೂ ಬೆರಗುಗೊಳಿಸುವಂತಿದ್ದು, ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ಅತೀತವಾಗಿದೆ, ಅಷ್ಟೆ ಅಲ್ಲದೆ ಸ್ಮಾರಕ ಕುರಿತ ತಾರ್ಕಿಕ ನಿಷ್ಕರ್ಷೆಗಳ ಮೇಲೆ ವೈಯಕ್ತಿಕ ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳು ನಿರಂತರವಾಗಿ ಮೇಲುಗೈ ಸಾಧಿಸಿವೆ.[೩೮]

ಜೀನ್‌-ಬಪ್ಟಿಸ್ಟೆ ಟ್ಯಾವೆರ್ನಿಯರ್‌ರವರು ತಾಜ್‌ ಮಹಲ್‌ಗೆ ಭೇಟಿ ನೀಡಿದ ಮೊದಲ ವೀದೇಶಿ ಪ್ರವಾಸಿಗ

ಯಮುನಾ ನದಿಯುದ್ದಕ್ಕೂ ಕಪ್ಪು ಅಮೃತಶಿಲೆಯಲ್ಲಿ ಭವ್ಯ ಸಮಾಧಿಯನ್ನು ನಿರ್ಮಿಸಲು ಷಹ ಜಹಾನ್‌‌ ಯೋಜನೆ ರೂಪಿಸಿದ್ದನು ಎಂಬುದನ್ನು ಐತಿಹಾಸಿಕ ಕಾಲದಿಂದಲೇ ಚಾಲ್ತಿಯಲ್ಲಿರುವ ನಂಬಿಕೆಗಳು ಹೇಳುತ್ತವೆ.[೩೯] ೧೬೬೫ರಲ್ಲಿ ಆಗ್ರಾಕ್ಕೆ ಭೇಟಿ ನೀಡಿದ ಯೂರೋಪಿಯನ್ ಪ್ರವಾಸಿಗ ಜೀನ್‌-ಬಾಪ್ಟಿಸ್ಟ್‌ ಟ್ಯಾವೆರ್ನಿಯರ್‌ನ ಕಾಲ್ಪನಿಕ ಬರಹಗಳಲ್ಲಿ ಈ ಕುರಿತು ಪ್ರಸ್ತಾಪ ಮಾಡಲಾಗಿದೆ.ಸಮಾಧಿಯ ನಿರ್ಮಾಣ ಸಾಧ್ಯವಾಗುವುದಕ್ಕಿಂತ ಮೊದಲೇ ಷಹ ಜಹಾನ್ ತನ್ನ ಮಗ ಔರಂಗಜೇಬ್‌ನಿಂದ ಪದಚ್ಯುತಿಗೊಂಡ ಎಂದು ಹೇಳಲಾಗಿದೆ. ಮಹ್ತಾಬ್‌ ಬಾಘ್‌ ನಬೆಳದಿಂಗಳ ಉದ್ಯಾನ ದಲ್ಲಿ ನದಿಯುದ್ದಕ್ಕೂ ಇರುವ ಕಪ್ಪು ಅಮೃತಶಿಲೆಯ ಅವಶೇಷಗಳು ಈ ದಂತಕತೆಯನ್ನು ಪುಷ್ಟೀಕರಿಸುವಂತಿವೆ.ಆದಾಗ್ಯೂ, ೧೯೯೦ರಲ್ಲಿ ಕೈಗೊಂಡ ಉತ್ಖನನಗಳು ಬಿಳಿ ಕಲ್ಲುಗಳು ಬಣ್ಣ ಕಳೆದುಕೊಂಡು ಕಪ್ಪು ಬಣ್ಣಕ್ಕೆ ತಿರುಗಿರುವುದನ್ನು ಕಂಡು ಹಿಡಿದಿವೆ.[೪೦] ೨೦೦೬ರಲ್ಲಿ ಪ್ರಾಕ್ತನ ವಿಮರ್ಶಕರು ಬೆಳದಿಂಗಳದ ಉದ್ಯಾನದಲ್ಲಿರುವ ಕೊಳದ ಒಂದು ಭಾಗವನ್ನು ಪುನರ್‌ನಿರ್ಮಿಸಿ ಕಪ್ಪು ಭವ್ಯ ಸಮಾಧಿಯ ಮೂಲದ ಬಗ್ಗೆ ಹೆಚ್ಚು ನಂಬಲಾರ್ಹ ವಾದವನ್ನು ಮಂಡಿಸಿದರು. ಷಹ ಜಹಾನ್‌‌ನ ಯೋಚನಾ ಲಹರಿಗಳಿಗೆ ಅನುರೂಪವಾಗಿಸಿ ಮತ್ತು ಕೊಳವನ್ನು ಸ್ಥಳಕ್ಕೆ ತಕ್ಕಂತೆ ಹೊಂದಿಸಿಕೊಂಡು ಬಿಳಿ ಭವ್ಯ ಸಮಾಧಿಯ ಕಪ್ಪು ಪ್ರತಿಫಲನವನ್ನು ಸ್ಪಷ್ಟವಾಗಿ ನೋಡಬಹುದು.[೪೧]

ಸಮಾಧಿಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ವಾಸ್ತುಶಿಲ್ಪಿಗಳು ಮತ್ತು ಕುಶಲಕಾರ್ಮಿಕರನ್ನು ಷಹ ಜಹಾನ್ ಅಂಗವಿಚ್ಛೇದನಗೊಳಿಸಿದ್ದು, ಊನಗೊಳಿಸಿ ಪೀಡಿಸಿದ್ದು ಮತ್ತು ಇದರಿಂದಾಗಿ ಮರಣಗಳು ಸಂಭವಿಸಿದ ಬಗ್ಗೆ ಭಯಾನಕ ವಿವರಗಳಿವೆ. ಆದರೆ ಈ ವಿವರಗಳನ್ನು ಖಚಿತಪಡಿಸುವ ಯಾವುದೇ ಸಾಕ್ಷಿಗಳು ಇಲ್ಲ. ಇದೇ ತೆರನಾದ ವಿನ್ಯಾಸದ ಇನ್ನಾವುದೇ ನಿರ್ಮಾಣದಲ್ಲಿ ಭಾಗಿಯಾಗುವುದಿಲ್ಲ ಎಂಬ ಒಪ್ಪಂದಕ್ಕೆ ಸಮಾಧಿ ನಿರ್ಮಾಣದಲ್ಲಿ ತೊಡಗಿದ್ದ ಕಾರ್ಮಿಕರಿಂದ ಸಹಿ ಹಾಕಿಸಿಕೊಳ್ಳಲಾಗಿತ್ತು ಎಂದೂ ಕೆಲವು ಕಥೆಗಳು ಹೇಳುತ್ತವೆ. ಇತರೆ ಹಲವು ಜನಪ್ರಿಯ ಕಟ್ಟಡಗಳ ಬಗ್ಗೆಯೂ ಇದೇ ತೆರನಾದ ಹೇಳಿಕೆಗಳಿವೆ.[೪೨] ೧೮೩೦ರಲ್ಲಿ ಭಾರತದ ಗವರ್ನರ್‌ ಜನರಲ್‌ ಆಗಿದ್ದ ಲಾರ್ಡ್‌ ವಿಲಿಯಂ ಬೆಂಟಿಂಕ್‌ರವರು ತಾಜ್‌ ಮಹಲ್‌ ಕೆಡವಿ, ಅದರಲ್ಲಿರುವ ಅಮೃತಶಿಲೆಯನ್ನು ಹರಾಜು ಹಾಕಲು ಯೋಜಿಸಿದ್ದರು ಎನ್ನುವುದರ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ. ಆದರೆ, ಆಗ್ರಾ ಕೋಟೆಯ ನಿರ್ಮಾಣದ ವೇಳೆ ತ್ಯಜಿಸಲಾದ ಅಮೃತಶಿಲೆಯ ಮಾರಾಟದಿಂದ ನಿಧಿ-ಸಂಗ್ರಹಿಸಲು ಬೆಂಟೆಂಕ್‌ ಉದ್ದೇಶಿಸಿದ್ದೇ ಮೇಲಿನ ಕಥೆಯ ಹುಟ್ಟಿಗೆ ಮೂಲ ಕಾರಣ ಎಂದು ಬೆಂಟಿಂಕ್‌ರ ಜೀವನ ಚರಿತ್ರೆಕಾರ ಜಾನ್‌ ರೊಸ್ಸೆಲ್ಲಿ ಹೇಳಿದ್ದಾರೆ.[೪೩]

ತಾಜ್‌ ಮಹಲ್‌ನ್ನು ಕಟ್ಟಿಸಿದ್ದು ಹಿಂದೂ ರಾಜ ಎಂದು ತಿಳಿಸಿ ಪಿ.ಎನ್‌. ಓಕ್‌ರವರು ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಸರ್ವೋಚ್ಛ ನ್ಯಾಯಾಲಯ ೨೦೦೦ರಲ್ಲಿ ತಿರಸ್ಕರಿಸಿತು.[೪೨][೪೪] ಭಾರತಕ್ಕೆ ಮುಸ್ಲಿಮರು ಆಕ್ರಮಣ ನಡೆಸುವುದಕ್ಕೂ ಮುಂಚೆಯಿದ್ದ, ಈಗ ಮುಸಲ್ಮಾನ ಸುಲ್ತಾನರಿಗೆ ಸೇರಿದ್ದು ಎನ್ನಲಾಗುವ ದೇಶದ ಇತರ ಐತಿಹಾಸಿಕ ಕಟ್ಟಡಗಳ ಜೊತೆಗೆ ತಾಜ್‌ ಗುರುತಿಸಿಕೊಂಡಿರುವ ಕಾರಣ, ಅದು ಹಿಂದೂ ಶಿವ ದೇವಾಲಯ ಮೂಲವನ್ನು ಹೊಂದಿದೆ ಎಂಬುದು ಓಕ್‌ರವರ ವಾದ.[೪೫] ರವೀಂದ್ರನಾಥ್‌ ಟಾಗೋರ್‌ರವರು ಈ ಸಮಾಧಿಯನ್ನು "ವನ್‌ ಟಿಯರ್‌‌-ಡ್ರಾಪ್‌...ಅಪಾನ್‌ ದಿ ಚಿಕ್‌ ಆಫ್‌ ಟೈಮ್‌" ಎಂದು ವರ್ಣಿಸಿದ್ದಾರೆ. ಇದರಿಂದ ಸ್ಫೂರ್ತಿ ಪಡೆದು ವರ್ಷಕ್ಕೊಮ್ಮೆ ಮಳೆಗಾಲದಲ್ಲಿ ಸ್ಮಾರಕ ಸಮಾಧಿಯ ಮೇಲೆ ನೀರಿನ ಹನಿ ಬಿದ್ದಂತೆ ಎಂದು ಹೆಚ್ಚು ಕಾವ್ಯಾತ್ಮಕವಾಗಿ ಬಣ್ಣಿಸಲಾಗಿದೆ. ಶಿಖರಾಗ್ರದಲ್ಲಿರುವ ಛಾಯಾರೇಖಾಕೃತಿಯನ್ನು ಹೊಡೆದಲ್ಲಿ, ಅದು ನೀರನ್ನು ಹೊರಸೂಸುತ್ತದೆ ಎಂಬ ನಂಬಿಕೆಯೂ ಇದೆ. ಆದರೆ ಈವೆರೆಗೂ, ಛಾಯಾರೇಖಾಕೃತಿಯು ಬಳೆಗಳ ತುಂಡುಗಳಿಂದ ಸುತ್ತುವರಿದಿರುವುದನ್ನು ಮಾತ್ರ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.[೪೬]

ಪ್ರತಿಕೃತಿಗಳು

[ಬದಲಾಯಿಸಿ]

ಬಾಂಗ್ಲಾದೇಶದ ತಾಜ್‌ ಮಹಲ್‌ , ಮಹಾರಾಷ್ಟ್ರದ ಔರಂಗಬಾದ್‌ನಲ್ಲಿರುವ ಬೀಬಿ ಕಾ ಮಕ್ಬಾರ, ಮತ್ತು ವಿಸ್ಕೊನ್ಸಿನ್‌ನ ಮಿಲ್ವೌಕಿನಲ್ಲಿರುವ ತ್ರಿಪೊಲಿ ಶ್ರಿನ್‌ ದೇವಾಲಯ ತಾಜ್‌ ಮಹಲ್‌ ಮಾದರಿಯ ಕಟ್ಟಡಗಳಾಗಿವೆ.

ಇದನ್ನು ನೋಡಿರಿ

[ಬದಲಾಯಿಸಿ]

ಟಿಪ್ಪಣಿಗಳು

[ಬದಲಾಯಿಸಿ]
 1. Hasan, Parween (November ೧೯೯೪), "Review of Mughal Architecture: Its outline and its history", The Journal of Asian Studies, 53 (4): ೧೩೦೧
 2. ಲೆಸ್ಲಿ‌ ಎ. ಡುಟೆಂಪಲ್‌, "ದಿ ತಾಜ್‌ ಮಹಲ್‌", ಲರ್ನರ್‌ ಪಬ್ಲಿಶಿಂಗ್‌ ಗ್ರೂಪ್‌ (ಮಾರ್ಚ್‌ 2೨೦೦೩). ಪು. ೨೬: "ತಾಜ್‌ ಮಹಲ್‌ ಮೊಘಲ್‌ ವಾಸ್ತುಶಿಲ್ಪಕ್ಕೆ ಅದ್ಭುತ ಉದಾಹರಣೆಯಾಗಿದೆ. ಇದು ಮುಸ್ಲಿಂ, ಹಿಂದೂ ಮತ್ತು ಪರ್ಷಿಯನ್‌ ಶೈಲಿಗಳ ಮಿಶ್ರಣವಾಗಿದೆ"
 3. ೩.೦ ೩.೧ ಟಿಲ್ಲಿಟ್ಸನ್‌, ಜಿ.ಎಚ್‌.ಆರ್‌. (೧೯೯೦). ಆರ್ಕಿಟೆಕ್ಚರಲ್‌ ಗೈಡ್‌ ಟೂ ಮೊಘಲ್‌‌ ಇಂಡಿಯಾ, ಕ್ರೋನಿಕಲ್‌ ಬುಕ್ಸ್‌‌.
 4. ಆಗ್ರಾದ ತಾಜ್‌ ಮಹಲ್‌ನ ಇತಿಹಾಸ, ಪರಿಷ್ಕರಿತ ಆವೃತ್ತಿ: ೨೦ ಜನವರಿ 2009.
 5. ೫.೦ ೫.೧ ೫.೨ Anon. "The Taj mahal". Islamic architecture. Islamic Arts and Architecture Organization. Archived from the original on 17 ಏಪ್ರಿಲ್ 2009. Retrieved 22 may 2009. {{cite web}}: Check date values in: |accessdate= (help)
 6. UNESCO ಸಲಹೆ ಮಂಡಳಿ ಪರಿಶೀಲನೆ.
 7. ತಾಜ್‌ ಮಹಲ್‌ ಸುಂದರ ಬರಹಗಾರಿಕೆ - ಆಗ್ರಾದ ತಾಜ್‌ ಮಹಲ್‌ ಸುಂದರ ಲಿಪಿಗಾರಿಕೆ - ತಾಜ್‌ ಮಹಲ್‌ ಕೆತ್ತನೆಗಳು ಮತ್ತು ಸುಂದರ ಲಿಪಿಗಾರಿಕೆ.
 8. ೮.೦ ೮.೧ ಕೊಚ್‌, ಪು. 100.
 9. http.//www.pbs.org/treasuresoftheworld/taj_mahal/tlevel_2/t4visit_3calligrap.y.html pbs.org.
 10. Begley, Wayne E. (1979). "The Myth of the Taj Mahal and a New Theory of Its Symbolic Meaning". The Art Bulletin. 61 (1): 14. {{cite journal}}: |access-date= requires |url= (help); Unknown parameter |month= ignored (help)
 11. http.//www.taj-mahal-travel-tours.com/garden-of-taj-mahal.html taj-mahal-travel-tours.com.
 12. Wright, Karen (July 2000), "Moguls in the Moonlight — plans to restore Mehtab Bagh garden near Taj Mahal", Discover, archived from the original on 2007-12-09, retrieved 2009-12-16.
 13. Allan, John. The Cambridge Shorter History of India (edition = First). Cambridge: S. Chand, 288 pages. {{cite book}}: |format= requires |url= (help); Missing pipe in: |format= (help); Unknown parameter |origdate= ignored (|orig-year= suggested) (help)ಪು 318.
 14. ಜೆರ್ರಿ ಕ್ಯಾಮರಿಲ್ಲೊ ಡುನ್ನ್‌ ಜ್ಯುನಿಯರ್‌ರವರಿಂದ ತಾಜ್‌.
 15. ಕೊಚ್‌, ಪು. 139.
 16. ಛಘ್ತೈ ಲೆ ತಾಜ್‌ ಮಹಲ್‌ p.೪; ಲಹವ್ರಿ ಬಾದ್‌ಷಾಹ್ ನಾಮ್‌ ಸಂ.೧ ಪು. ೪೦೩.
 17. ಡಾ. ಎ. ಜಾಹೂರ್‌ ಮತ್ತು ಡಾ. ಜೆಡ್‌. ಹಕ್‌.
 18. ರವರು ತಾಜ್‌ ಮಹಲ್‌ನ್ನು ವಿನ್ಯಾಸಗೊಳಿಸಿದರು.
 19. ವಿಲಿಯಂ ಜೆ. ಹೆನ್ನೆಸ್ಸಿ, Ph.D., ನಿರ್ದೇಶಕರು, ಯುನಿವ್‌. ಆಫ್‌ ಮಿಚಿಗನ್‌ ಮ್ಯೂಸಿಯಂ ಆಫ್‌ ಆರ್ಟ್‌. IBM ೧೯೯೯ ವರ್ಡ್‌ ಬುಕ್‌.
 20. ಮಾರ್ವಿನ್‌ ಟ್ರ್ಯಾಕ್ಟೆನ್‌ಬರ್ಗ್‌ ಮತ್ತು ಇಸಾಬೆಲ್ಲಾ ಹೈಮಾನ್‌. ಪೂರ್ವ ಇತಿಹಾಸ ಮತ್ತು ಆಧುನಿಕತೆಯ ನಂತರದ ವಾಸ್ತುಶಿಲ್ಪ. ಪು. ೨೨೩.
 21. ISBN ೯೬೪-೭೪೬೩-೩೯-2೨.
 22. 10877 Lua error in ಮಾಡ್ಯೂಲ್:Webarchive at line 127: attempt to compare number with nil..
 23. ಗ್ಯಾಸ್ಕೊಯಿನ್‌, ಬಾಂಬರ್‌ (೧೯೭೧). ದಿ ಗ್ರೇಟ್‌ ಮೊಘಲ್ಸ್‌. ನ್ಯೂಯಾರ್ಕ್‌:ಹಾರ್ಪರ್‌ ಮತ್ತು ರೊವ್‌. ಪು. ೨೪೩.
 24. ಲಾರ್ಡ್‌ ಕರ್ಜೋನ್‌ನ ಹಿತ್ತಾಳೆ ದೀಪ Lua error in ಮಾಡ್ಯೂಲ್:Webarchive at line 127: attempt to compare number with nil..
 25. ಯಾಪ್‌, ಪೀಟರ್‌ (೧೯೮೩). ಪ್ರವಾಸಿಗರ ಉಲ್ಲೇಖಗಳ ನಿಘಂಟು. ಲಂಡನ್‌:ರೂಟ್‌ಲೆಡ್ಜ್‌ ಕೆಗನ್‌ ಮತ್ತು ಪೌಲ್‌. ಪು. ೪೬೦.
 26. ಉಲ್ಲೇಖ ದೋಷ: Invalid <ref> tag; no text was provided for refs named ಕೊಚ್‌, ಪು. ೧೩೯
 27. ತಾಜ್‌ ಮಹಲ್‌ 'ಮರೆಮಾಡಲಾಗಿದೆ'.
 28. ತಾಜ್‌ ಮಹಲ್‌ನ ಮೇಲೆ ತೈಲ ಸಂಸ್ಕರಣಾ ಪರಿಣಾಮ‌ Lua error in ಮಾಡ್ಯೂಲ್:Webarchive at line 127: attempt to compare number with nil..
 29. ಆಮ್ಲ ಮಳೆ ಮತ್ತು ತಾಜ್‌ ಮಹಲ್‌.
 30. http.//www.unesco.org/courier/2000_07/uk/signe.htm
 31. ತಾಜ್‌ ಮಹಲ್‌ ವಿಶ್ವ ಪಾರಂಪರಿಕ ತಾಣ ಪು..
 32. ಕೊಚ್‌, ಪು. ೧೨೦.
 33. ಕೊಚ್‌, ಪು. ೨೫೪.
 34. ಕೊಚ್‌, ಪು. 201-208.
 35. Travel Correspondent (2007-07-09). "New Seven Wonders of the World announced" (in English). The Telegraph. Archived from the original on 2008-01-21. Retrieved 2007-07-06. {{cite web}}: Cite has empty unknown parameters: |accessyear=, |month=, |accessmonthday=, and |coauthors= (help)CS1 maint: unrecognized language (link)
 36. http.//asi.nic.in/asi_monu_whs_agratajmahal_night.asp
 37. DNA - ಭಾರತ ತಾಜ್‌ನತ್ತ ಸಾಗುತ್ತಿದೆಯೆ? ಇದನ್ನು ನೀವೆಲ್ಲರೂ ಕೊಂಡೊಯ್ಯಬಹುದು - ದೈನಂದಿನ ಸುದ್ದಿ ಮತ್ತು ವಿಶ್ಲೇಷಣೆ.
 38. ಕೊಚ್‌, ಪು. 231.
 39. ಆಶರ್‌, ಪು. ೨೧೦.
 40. ಕೊಚ್‌, ಪು. ೨೪೯.
 41. ಸೈನಿಕರ ಸಾಮ್ರಾಜ್ಯ: ಭಾರತದ ಮೊಘಲ್‌‌ರು(೨೦೦೬) A+E ದೂರದರ್ಶನ ಜಾಲ.
 42. ೪೨.೦ ೪೨.೧ ಕೊಚ್‌, ಪು. ೨೩೯.
 43. ರೊಸ್ಸೆಲ್ಲಿ, ಜೆ., ಲಾರ್ಡ್‌ ವಿಲಿಯಂ ಬೆಂಟಿಂಕ್‌ ಉದಾರ ಚರ್ಕವರ್ತಿಯ ನಿರ್ಮಾಣ, ೧೭೭೪೫-೧೮೩೯ , ಸಸ್ಸೆಕ್ಸ್‌ ವಿಶ್ವವಿದ್ಯಾಲಯ ಮುದ್ರಣಾಲಯಕ್ಕಾಗಿ ಲಂಡನ್‌ ಚಾಟ್ಟೊ ವಿಂಡಸ್‌ ೧೯೭೪, ಪು. ೨೮೩.
 44. ಓಕ್‌ರ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿತು Archived 2005-02-15 ವೇಬ್ಯಾಕ್ ಮೆಷಿನ್ ನಲ್ಲಿ..
 45. Oak, Purushottam Nagesh. "The True Story of the Taj Mahal". Stephen Knapp. Retrieved ೨೦೦೭-೦೨-೨೩. {{cite web}}: Check date values in: |accessdate= (help)
 46. ಕೊಚ್‌, ಪು. ೨೪೦.

ಆಕರಗಳು

[ಬದಲಾಯಿಸಿ]
 • ಆಶರ್‌, ಕ್ಯಾಥರಿನ್‌ ಬಿ. ಆರ್ಕಿಟೆಕ್ಚರ್‌ ಆಫ್ ಮುಘಲ್‌‌ ಇಂಡಿಯಾ ನ್ಯೂ ಕ್ಯಾಂಬ್ರಿಡ್ಜ್‌ ಭಾರತದ ಇತಿಹಾಸ ಸಂ.೪ (ಕ್ಯಾಂಬ್ರಿಡ್ಜ್‌ ವಿಶ್ವವಿದ್ಯಾಲಯ ಮುದ್ರಣಾಲಯ) ೧೯೯೨ ISBN 0-೫೨೧-೨೬೭೨೮-೫.
 • ಬೆರ್ನಿಯರ್‌, ಫ್ರ್ಯಾಂಕೊಯಿ ಟ್ರಾವೆಲ್ಸ್‌ ಇನ್‌ ದ ಮೊಘಲ್‌ ಎಂಪಾಯರ್‌ A.D. ೧೬೫೨-೧೬೬೮ (ವೆಬ್‌ಮಿನಿಸ್ಟರ್‌: ಆರ್ಕಿಬಾಲ್ಡ್‌ ಕಾನ್‌ಸ್ಟೇಬಲ್‌ & ಕಂ.) ೧೮೯೧.
 • ಕ್ಯಾರ್ರೆಲ್‌, ಡೇವಿಡ್‌ (೧೯೭೧). ದಿ ತಾಜ್‌ ಮಹಲ್‌ , ನ್ಯೂಸೀಕ್‌ ಬುಕ್ಸ್‌ ISBN 0-೮೮೫೫೨-೦೨೪-೮.
 • ಛಘ್ತೈ, ಮಹಮದ್‌ ಅಬ್ದುಲ್ಲಾ ಲೆ ತಾಜ್‌ ಮಹಲ್‌ ಆಗ್ರಾ (ಇಂಡೆ). ಹಿಸ್ಟರಿ ಎಟ್‌ ಡೀಸ್ಕ್ರಿಪ್‌ಶನ್ (ಬ್ರುಸ್ಸೆಲ್ಸ್‌: ಎಡಿಶನ್ಸ್‌ ಡೆ ಲಾ ಕನ್ನೈಶನ್ಸ್‌) ೧೯೩೮.
 • ಕೊಪಲ್ಸ್‌ಸ್ಟೋನ್‌, ಟ್ರೆವಿನ್‌. (ed). (೧೯೬೩). ವರ್ಡ್‌ ಆರ್ಕಿಟೆಕ್ಚರ್‌ ‌— ಆನ್‌ ಇಲ್ಯುಸ್ಟ್ರೇಟೆಡ್‌ ಹಿಸ್ಟರಿ. ಹಮ್ಲಿನ್‌, ಲಂಡನ್‌.
 • ಗ್ಯಾಸ್ಕೊಯಿಜ್ನ್‌, ಬಾಂಬರ್‌ (೧೯೭೧). ದಿ ಗ್ರೇಟ್‌ ಮೊಘಲ್ಸ್‌ , ಹಾರ್ಪರ್‌ ಮತ್ತು ರೊವ್‌.
 • ಹಾವೆಲ್‌, ಇ.ಬಿ. (೧೯೧೩). ಇಂಡಿಯನ್‌ ಆರ್ಕಿಟೆಕ್ಚರ್‌: ಇಟ್ಸ್‌ ಸೈಕೊಲಜಿ, ಸ್ಟ್ರಕ್ಚರ್‌ ಆಂಡ್‌ ಹಿಸ್ಟರಿ , ಜಾನ್‌ ಮುರ್ರೆ.
 • ಕಾಂಬೊ, ಮಹಮದ್‌ ಸಾಲಿಹ್‌ ಅಮಲ್‌-ಈ-ಸಾಲಿಹ್‌ ಆರ್‌ ಷಹ ಜಹಾನ್‌‌ ನಾಮಹ್ Ed. ಗುಲಾಮ್‌ ಯಾಜ್ದಾನಿ (ಕಲ್ಕತ್ತಾ: ಬ್ಯಾಪ್ಟಿಸ್ಟ್‌ ಮಿಷನ್‌ ಮುದ್ರಣಾಲಯ) ಸಂ.I ೧೯೨೩. Vol. II ೧೯೨೭.
 • Koch, Ebba (2006). The Complete Taj Mahal: And the Riverfront Gardens of Agra (Paperback) (First ed.). Thames & Hudson Ltd., 288 pages. ISBN 0500342091. {{cite book}}: |format= requires |url= (help); Unknown parameter |origdate= ignored (|orig-year= suggested) (help)
 • ಲಾಹವ್ರಿ, 'ಅಬ್ದ್‌ ಅಲ್‌-ಹಮಿದ್‌ ಬಾದಷಹ ನಾಮಹ್ Ed. ಮೇಜರ್‌ ಡಬ್ಲ್ಯೂ.ಎನ್‌. ಲೀಸ್‌ರ ಮೇಲ್ವಿಚಾರಣೆಯಲ್ಲಿ ಮೌಲಾವಿಸ್‌ ಕಬೀರ್‌ ಅಲ್‌-ದಿನ್‌ ಅಹಮದ್‌ ಮತ್ತು 'ಅಬ್ದ್‌ ಅಲ್‌-ರಹೀಮ್‌. (ಕಲ್ಕತ್ತಾ: ಕಾಲೇಜ್‌ ಮುದ್ರಣಾಲಯ) ಸಂ. I ೧೮೬೭ ಸಂ. II ೧೮೬೮.
 • ಲಾಲ್‌, ಜಾನ್‌ (೧೯೯೨). ತಾಜ್‌ ಮಹಲ್‌ , ಟೈಗರ್‌ ಅಂತರಾಷ್ಟ್ರೀಯ ಮುದ್ರಣಾಲಯ.
 • Preston, Diana & Michael (೨೦೦೭). A Teardrop on the Cheek of Time (Hardback) (First ed.). London: Doubleday, 354 pages. ISBN 9780385609470. {{cite book}}: |format= requires |url= (help); Unknown parameter |origdate= ignored (|orig-year= suggested) (help)
 • ರೋತ್‌ಫಾರ್ಡ್‌, Ed (೧೯೯೮). ಇನ್‌ ದಿ ಲ್ಯಾಂಡ್ ಆಫ್‌ ತಾಜ್‌ ಮಹಲ್‌ , ಹೆನ್ರಿ ಹಾಲ್ಟ್‌ ISBN 0-8050-5299-2.
 • ಸಕ್ಸೆನಾ, ಬನರ್ಸಿ ಪ್ರಸಾದ್‌ ಹಿಸ್ಟರಿ ಆಫ್‌ ಷಹಜಹಾನ್‌ ಆಫ್‌ ದೆಹಲಿ (ಅಲಹಾಬಾದ್‌: ದಿ ಇಂಡಿಯನ್‌ ಪ್ರೆಸ್‌ ಲಿ.) ೧೯೯೨.
 • ಸ್ಟಾಲ್‌, ಬಿ (೧೯೯೫). ಆಗ್ರಾ ಆಂಡ್‌ ಫತೆಪುರ್‌ ಸಿಕ್ರಿ , ಮಿಲೆನಿಯಮ್‌.
 • ಸ್ಟೀರ್ಲಿನ್‌, ಹೆನ್ರಿ [ಸಂಪಾದಕ] ಮತ್ತು ವೊಲ್ವಾಸೆನ್‌, ಆಂಡ್ರೀಸ್ (೧೯೯೫). ಆರ್ಕಿಟೆಕ್ಚರ್‌ ಆಫ್‌ ವರ್ಡ್‌: ಇಸ್ಲಾಮಿಕ್‌ ಇಂಡಿಯಾ, ತಾಚೆನ್‌ .
 • ಟಿಲಿಟ್ಸನ್‌, ಜಿ.ಎಚ್‌.ಆರ್‌. (೧೯೯೦). ಆರ್ಕಿಟೆಕ್ಚರಲ್‌ ಗೈಡ್‌ ಟೂ ಮೊಘಲ್‌‌ ಇಂಡಿಯಾ , ಕ್ರೋನಿಕಲ್‌ ಬುಕ್ಸ್‌‌.
  • ತಾಜ್ ಮಹಲ್ ಅಥವಾ ತೇಜೋ ಮಹಲ್ (www.ontipremi.blogspot.com)

ಹೊರಗಿನ ಕೊಂಡಿಗಳು

[ಬದಲಾಯಿಸಿ]

27°10′27″N 78°02′32″E / 27.17417°N 78.04222°E / 27.17417; 78.04222 (Taj Mahal)