ವಿಷಯಕ್ಕೆ ಹೋಗು

ಮಾಲಿನ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪರಿಸರ ಮಾಲಿನ್ಯ ಇಂದ ಪುನರ್ನಿರ್ದೇಶಿತ)

ಪ್ರಾಚೀನ ಸಂಸ್ಕೃತಿ

[ಬದಲಾಯಿಸಿ]
ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಸ್ಥಾವರ. ಕಲ್ಲಿದ್ದಲಿನ ದಹನವು ಇಂಗಾಲದ ಡೈಆಕ್ಸೈಡ್ ಅನ್ನು ಉತ್ಪಾದಿಸುತ್ತದೆ, ಜೊತೆಗೆ ವಿವಿಧ ಪ್ರಮಾಣದಲ್ಲಿ ಸಲ್ಫರ್ ಡೈಆಕ್ಸೈಡ್ ಅನ್ನು ಉತ್ಪಾದಿಸುತ್ತದೆ.

ಖನಿಜಗಳನ್ನ ಕಾಯಿಸಿ ಬದಲಾಯಿಸುವ ಕ್ರಿಯೆಯ ಪ್ರಾರಂಭವಾದಂದಿನಿಂದ ಇದು ಗುರುತರ ಪ್ರಮಾಣದ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಯಿತು ಎನ್ನಬಹುದು. ಗ್ರೀನ್‌ಲ್ಯಾಂಡ್‌ನಲ್ಲಿಯ ಹಿಮನದಿಗಳ ನಮೂನೆಯಲ್ಲಿ ಗ್ರೀಕ್, ರೋಮನ್ ಮತ್ತು ಚೀನಾದಲ್ಲಿಯ ಲೋಹದ ಉತ್ಪನ್ನಗಳ ಉತ್ಪಾದನೆಯಿಂದಾಗಿ ಉಂಟಾಗುತ್ತಿರುವ ವಾಯು ಮಾಲಿನ್ಯದ ಕುರುಹುಗಳು ಕಾಣುತ್ತದೆ.[]

ಅಧಿಕೃತ ಸ್ವೀಕೃತಿ

[ಬದಲಾಯಿಸಿ]

ಮಾಲಿನ್ಯಕ್ಕೆ ಸಂಬಂಧಿಸಿದಂತಹ ಮೊದಲ ಬರಹಗಳು ಅರೇಬಿಕ್ ವ್ಯೆದ್ಯಕೀಯ ಗ್ರಂಥಗಳಾಗಿದ್ದು 9 ಮತ್ತು 13ನೇ ಶತಮಾನಗಳ ನಡುವೆ ವೈದ್ಯರುಗಳಿಂದ ಬರೆಯಲ್ಪಟ್ಟಿವೆ. ಅಲ್-ಕಿಂಡಿ(ಆಲ್ಕಿಂಡಸ್), ಕ್ವೆಸ್ಟಾ ಇಬ್ನ್ ಲ್ಯುಕಾ (ಕೊಸ್ತಾ ಬೆನ್ ಲುಕಾ), ಮೊಹಮ್ಮದ್ ಇಬ್ನ್ ಝಕಾರಿಯಾ ರಾಝೀ(ರಾಝೆಸ್), ಇಬ್ನ ಅಲ್ -ಜಝ್ಝಾರ್, ಅಲ್-ತಮಿಮಿ, ಅಲ್- ಮಸಿಹಿ, ಇಬ್ನ ಸಿನ(ಅವಿಸಿನ್ನ), ಅಲಿ ಇಬ್ನ್ ರಿದ್ವಾನ್, ಇಬ್ನ ಜುಮಯ್, ಐಸಾಕ್ ಇಸ್ರೇಲಿ, ಬೆನ್ ಸೊಲೊಮನ್, ಅಬ್ದ-ಎಲ್-ಲತಿಫ್, ಇಬ್ನ ಅಲ್-ಖಫ್ ಮತ್ತು ಇಬ್ನ್‌ ಅಲ್-ನಫೀಸ್ ಇವರುಗಳು ಆ ಗ್ರಂಥದಲ್ಲಿ ಮಾಲಿನ್ಯದ ಕುರಿತು ಬರೆದವರಾಗಿದ್ದಾರೆ. ಇವರ ಬರಹಗಳು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ತಿಳಿಸುತ್ತವೆ. ವಾಯುಮಾಲಿನ್ಯ, ನೀರು ಮಲಿನಗೊಳ್ಳುವಿಕೆ, ಮಣ್ಣು ಮಾಲಿನ್ಯ, ಘನ ತ್ಯಾಜ್ಯದ ಅಸಮರ್ಪಕ ನಿರ್ವಹಣೆ, ಕೆಲವು ಪ್ರದೇಶಗಳ ಪರಿಸರಕ್ಕೆ ಕುರಿತಾದಂತೆ ತಿಳಿಸುತ್ತವೆ.[] ಸಮುದ್ರ ಕಲ್ಲಿದ್ದಲನ್ನು ಉರಿಸುವುದರಿಂದ ಉಂಟಾಗುವ ಹೊಗೆಯಿಂದ ತೊಂದರೆಗಳು ಪ್ರಾರಂಭವಾದಾಗ, 1272ರಲ್ಲಿ ಇಂಗ್ಲಂಡ್‌ಕಿಂಗ್‌ ಎಡ್ವರ್ಡ್ Iಲಂಡನ್‌ನಲ್ಲಿ ಅದನ್ನು ಉರಿಸುವುದನ್ನು ಸುಗ್ರಿವಾಜ್ಞೆ ಜಾರಿಗೊಳಿಸುವ ಮೂಲಕ ನಿಷೇಧಿಸುತ್ತಾನೆ.[][] ಇಂಗ್ಲಂಡ್‌ನಲ್ಲಿ ಈ ಉರುವಲು ಎಷ್ಟು ಸಾಮಾನ್ಯವಾಗಿತ್ತು ಎಂದರೆ ಇದಕ್ಕೆ ಈ ಹೆಸರು ಬರಲು ಕಾರಣ ಇದನ್ನು ದೂರದ ಸಮುದ್ರ ತೀರದಿಂದ ಕೈಗಾಡಿಗಳಲ್ಲಿ ತರಲಾಗುತ್ತಿತ್ತು.

ವಾಯು ಮಾಲಿನ್ಯವು ಇಂಗ್ಲಂಡ್‌ನಲ್ಲಿ ಒಂದು ಸಮಸ್ಯೆಯಾಗಿಯೇ ಮುಂದುವರೆದಿದೆ, ಅದರಲ್ಲೂ ಕೈಗಾರಿಕಾ ಕ್ರಾಂತಿಯ ನಂತರದ ದಿನಗಳಲ್ಲಿ ಹಾಗೂ ಇತ್ತೀಚಿನ 1952ರ ಗ್ರೇಟ್ ಸ್ಮಾಗ್‌ಅವಘಡದವರೆವಿಗೂ ಕೂಡ. ಬಹಳ ಹಿಂದೆಯೇ ನೀರಿನ ಗುಣಮಟ್ಟದಲ್ಲಿ ತೊಂದರೆ ಅನುಭವಿಸಿದ ನಗರಗಳಲ್ಲಿ ಇದೇ ಮೊದಲನೆಯದು. 1858ರಲ್ಲಿ ಥೇಮ್ಸ್ ನದಿಯಲ್ಲಿನ ’ಗ್ರೇಟ್ ಸ್ಟಿಂಕ್’ ಘಟನೆಯಿಂದಾಗಿ ಲಂಡನ್‌ನಲ್ಲಿ ಒಳಚರಂಡಿ ವ್ಯವಸ್ಥೆಯ ನಿರ್ಮಾಣ ಪ್ರಾರಂಭವಾಗಲು ಕಾರಣವಾಯ್ತು. ನಮಗೆ ಇವತ್ತು ತಿಳಿದಿರುವಂತೆ ಕೈಗಾರಿಕಾ ಕ್ರಾಂತಿಯೇ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ದೊಡ್ಡ ದೊಡ್ಡ ಕಾರ್ಖಾನೆಗಳು ಹಾಗೂ ಅತಿಹೆಚ್ಚು ಕಲ್ಲಿದ್ದಲು ಮತ್ತು ಭೂಗರ್ಭದಲ್ಲಿ ದೊರೆಯುವ ಇತರ ಇಂಧನಗಳ ಬಳಕೆಯು ಹಿಂದೆಂದೂ ಕಂಡಿರದ ವಾಯುಮಾಲಿನ್ಯ ಮತ್ತು ಅತಿ ಹೆಚ್ಚು ಪ್ರಮಾಣದ ಕೈಗಾರಿಕಾ ರಾಸಾಯನಿಕಗಳು ಹಾಗೂ ಸಂಸ್ಕರಿಸದ ಮಾನವ ತ್ಯಾಜ್ಯದ ಹೆಚ್ಚಳಕ್ಕೆ ಕಾರಣವಾಯ್ತು. ಅಮೇರಿಕಾದ ಚಿಕಾಗೊ ಮತ್ತು ಸಿನ್ಸಿನ್ನಾಟಿ ನಗರಗಳು 1881ರಲ್ಲಿ ಶುದ್ಧ ಗಾಳಿ ಪೂರೈಕೆಯ ಕುರಿತಾದ ಕಾನೂನು ಜಾರಿಗೊಳಿಸಿದವುಗಳಲ್ಲಿ ಮೊಟ್ಟಮೊದಲನೆಯವಾಗಿವೆ. 20ನೇ ಶತಮಾನದ ಪ್ರಾರಂಭದಲ್ಲಿ ವಾಯು ಮಾಲಿನ್ಯ ಕುರಿತಂತೆ ಒಳಾಂಗಣ ಇಲಾಖೆಯ ಅಡಿಯಲ್ಲಿ ತಾತ್ಕಾಲಿಕ ’ವಾಯು ಮಾಲಿನ್ಯ ಕಚೇರಿ’ ತೆರೆದಾಗ ದೇಶದ ಉಳಿದ ನಗರಗಳು ಈ ಕಾನೂನನ್ನು ಜಾರಿಗೆ ತಂದವು. ಅತಿಹೆಚ್ಚು ಧೂಮ ಕವಿದ ವಾತಾವರಣವು 1940ರ ಅಂತ್ಯದಲ್ಲಿ ಲಾಸ್‌ಏಂಜಲೀಸ್ ಮತ್ತು ಪೆನ್‌ಸಿಲ್ವೇನಿಯಾದ ಡೊನೊರಾದಲ್ಲಿ ಕಂಡುಕೊಂಡು ವಾಯುಮಾಲಿನ್ಯದ ಕುರಿತಾಗಿ ಇನ್ನೊಂದು ಎಚ್ಚರಿಕೆಯನ್ನು ನೀಡಿತು.ಉಲ್ಲೇಖ ದೋಷ: Closing </ref> missing for <ref> tag

ಮೋಟಾರು ವಾಹನಗಳು ಹೊರಸೂಸುವ ಹೊಗೆಯು ವಾಯು ಮಾಲಿನ್ಯಕ್ಕೆ ಒಂದು ಪ್ರಮುಖವಾದ ಕಾರಣವಾಗಿದೆ.[][][] ವಿಶ್ವದ ಪ್ರಮುಖ ರಾಷ್ಟ್ರಗಳಾದ ಚೀನಾ,ಅಮೆರಿಕ ಸಂಯುಕ್ತ ಸಂಸ್ಥಾನಗಳು(USA), ರಷ್ಯಾ, ಮೆಕ್ಸಿಕೊ ಮತ್ತು ಜಪಾನ್ ರಾಷ್ಟ್ರಗಳು ವಾಯು ಮಾಲಿನ್ಯವನ್ನು ಹೊರಸೂಸುವಲ್ಲಿ ಪ್ರಮುಖವಾಗಿವೆ.

ರಾಸಾಯನಿಕ ಕೇಂದ್ರಗಳು, ಕಲ್ಲಿದ್ದಲು ಶಾಖೋತ್ಪನ್ನ ಕೇಂದ್ರಗಳು, ತೈಲ ಶುದ್ದೀಕರಣ ಕೇಂದ್ರಗಳು, ಪೆಟ್ರೊಕೆಮಿಕಲ್ ಕೇಂದ್ರಗಳು, ಅಣು ಚಟುವಟಿಕೆಯಿಂದುಂಟಾಗುವ ತಾಜ್ಯಗಳು, ಸುಡುವಿಕೆ, ದೊಡ್ಡ ಮಟ್ಟದ ಜಾನುವಾರು ವಾಸಸ್ಥಳಗಳು (ಉದಾ: ಹಸುಗಳು, ಹಂದಿಗಳು, ಕೋಳಿಗಳು),ಪಿವಿಸಿ ಕಾರ್ಖಾನೆಗಳು, ಖನಿಜ ಉತ್ಪಾದನ ಕಾರ್ಖಾನೆಗಳು, ಪ್ಲಾಸ್ಟಿಕ್ ಕಾರ್ಖಾನೆಗಳು ಮತ್ತು ದೊಡ್ಡ ಕೈಗಾರಿಕೆಗಳು ಪ್ರಮುಖವಾದ ಸ್ಥಿರ ಮಾಲಿನ್ಯ ಮ್ಗೂಲಗಳು ಎನಿಸಿವೆ.

ಸಮಕಾಲೀನ ಪದ್ದತಿಯಂತೆ ನೈಸರ್ಗಿಕ ಕಳೆ ತೆಗೆಯಲು ಕಳೆನಾಶಕಗಳು ಮತ್ತು ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಕೃಷಿಯ ವಾಯುಮಾಲಿನ್ಯ ಉಂಟಾಗುತ್ತದೆ.[] 130 ದೇಶಗಳ ಸುಮಾರು 2,500 ವಿಜ್ಞಾನಿಗಳನ್ನೊಳಗೊಂಡ ಇಂಟರ್ ಗೌರ್ನ್ಮೆಂಟ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್ (ಐಪಿಸಿಸಿ)ನ 2007ರ ಪೆಬ್ರುವರಿ ವರದಿಯಂತೆ, 1950ರಿಂದ ಈಚೆಗೆ ವಿಶ್ವದಲ್ಲಿ ಭೂತಾಪ ಏರಿಕೆಗೆ ಮಾನವನೇ ಪ್ರಥಮ ಕಾರಣ ಎಂದಿದ್ದಾರೆ. ಮಾನವನು ಜಾಗತಿಕ ಭೂತಾಪವನ್ನು ನಿಯಂತ್ರಿಸಬೇಕಾಗಿ ಮತ್ತು ಹಸಿರು ಮನೆ ಅನಿಲವನ್ನು ಕಡಿತಗೊಳಿಸಬೇಕೆಂದು ಈ ಪ್ರಮುಖ ವರದಿಯು ನಿರ್ದೇಶಿಸುತ್ತದೆ. ಆದರೆ ಬದಲಾದ ವಾತಾವರಣದ ಕ್ರಮದಿಂದಾಗಿ ಜೀವಿಗಳ ಅವಶೇಷಗಳು ಇಂಧನ, ಕಲ್ಲಿದ್ದಲುಗಳಾಗಿ ಪರಿವರ್ತನೆ ಯಾಗುತ್ತವೆ ಮತ್ತು ದಶಕಗಳಲ್ಲಿ ತೈಲಕ್ಕೆ ಬೇಡಿಕೆ ಉಂಟಾಗುತ್ತದೆ ಎಂದು ಅಮೆರಿಕದ ಐಐಸಿಸಿಯ ಈ ವರ್ಷದ ಕೊನೆ ವರದಿಯು ಅಭಿಪ್ರಾಯಪಟ್ಟಿದೆ.[]

ಕೆಲವು ಸಾಮಾನ್ಯ ಮಣ್ಣಿನ ಮಲಿನಕಾರಕಗಳೆಂದರೆ ಕ್ಲೋರಿನೇಟೆಡ್ ಹೈಡ್ರೊಕಾರ್ಬನ್ಸ್(ಸಿಎಫ್‌ಹೆಚ್‌), ಭಾರವಾದ ಖನಿಜಗಳು (ಬ್ಯಾಟರಿಗಳಲ್ಲಿ ಕಂಡುಬರುವ ಕ್ರೊಮಿಯಂ, ಕ್ಯಾಡ್ಮಿಯಮ್ ಹಾಗೂ ಸೀಸ ಬಣ್ಣಗಳಲ್ಲಿ ಕಂಡುಬರುವ ಸೀಸಗಳು, ಗ್ಯಾಸೋಲೈನ್), ಎಂಟಿಬಿಇ, ವಿಮಾನ ಹಾರಾಟ ಇಂದನ ,ಸತು, ಅರ್ಸೆನಿಕ್ ಮತ್ತು ಬೆನ್‌ಜೈನ್‌.

2001ರ ಶ್ರೇಣಿಯ ಪತ್ರಿಕಾ ವರದಿಗಳ ಸಂಗ್ರಹವಾದ ಫೇಟ್ ಫುಲ್ ಹಾರ್ವೆಸ್ಟ್ ಪುಸ್ತಕದಲ್ಲಿ ಕೈಗಾರಿಕ ಉತ್ಪನ್ನಗಳನ್ನು ಗೊಬ್ಬರಗಳಾಗಿ ಮರುಬಳಕೆ ಮಾಡುವುದರಿಂದಾಗಿ ಅನೇಕ ಲೋಹಗಳು ಸೇರಿ ಮಣ್ಣಿನ ಮಲಿನವಾಗುತ್ತದೆ ಎಂದು ಹೇಳಲಾಗಿದೆ.ಸಾಮಾನ್ಯವಾಗಿ ಪುರಸಭೆಯ ನಿರುಪಯುಕ್ತ ಭೂಮಿಗಳು ರಾಸಾಯನಿಕಗಳ ಮೂಲಗಳಾಗಿ ಭೂ ಪರಿಸರದಲ್ಲಿ ಪ್ರವೇಶಿಸಿದ್ದು, (ಅಂತರಜಲದಲ್ಲಿಯೂ)ಅಲ್ಲಿ ಅಕ್ರಮವಾಗಿ ತ್ಯಜಿಸಲ್ಪಟ್ಟಿವೆ, ಅಥವಾ 1970ರಿಂದಿಚೇಗೆ ಯು.ಎಸ್.ಅಥವಾ ಇಯು ರಾಷ್ಟ್ರಗಳು ನಿರುಪಯುಕ್ತ ಭೂಮಿಯನ್ನು ಸಣ್ಣ ಪ್ರಮಾಣದಲ್ಲಿ ನಿಯಂತ್ರಿಸಿವೆ. ಅಲ್ಲಿರುವ ಬಿಡುಗಡೆಯಾಗುವ ಕೆಲವು ಅನುಪಯುಕ್ತ ಪೊಲಿಕ್ಲೋರಿನೆಟೆಡ್‌‍ ಡಿಬೆನ್‌ಜೊಡೈಕ್ಸಿನ್ಸ್‌ ಅನ್ನು ಸಾಮಾನ್ಯವಾಗಿ ಡೈಕ್ಸಿನ್ಸ್‌ , ಸರಳವಾಗಿ ಟಿಸಿಡಿಡಿ.[೧೦] ಎಂದು ಕರೆಯಲಾಗುತ್ತದೆ.[೧೦]

ಮಾಲಿನ್ಯವು ಕೆಲವೊಮ್ಮೆ ನೈಸರ್ಗಿಕ ಪ್ರಕೋಪಗಳಿಂದ ಕೂಡ ಆಗಬಹುದಾಗಿದೆ. ಉದಾಹರಣೆಗೆ ಜಲಮಾಲಿನ್ಯದಲ್ಲಿ ಸುಂಟರಗಾಳಿ ಪ್ರಕೋಪವನ್ನು ಉದಾಹರಿಸಬಹುದಾಗಿದೆ. ಇದು ಸಮುದ್ರದಲ್ಲಿ ಯಾನದ ಹಡಗುಗಳು ಅಥವಾ ಯಂತ್ರಗಳನ್ನು ಪ್ರಕೋಪಕ್ಕೆ ತುತ್ತುಮಾಡುವುದರಿಂದ ಪೆಟ್ರೊ ಕೆಮಿಕಲ್ ರಾಸಾಯನಿಕಗಳು ಸಮುದ್ರದಲ್ಲಿ ಸೇರಿ ಜಲಮಾಲಿನ್ಯ ಉಂಟಾಗುತ್ತದೆ. ಸಮುದ್ರ ತೀರದ ತೈಲಕೇಂದ್ರಗಳು, ತೈಲ ಶುದ್ದಿಕರಣ ಕೇಂದ್ರಗಳೂ ಕೂಡ ಅಧಿಕ ಪ್ರಮಾಣದ ಪರಿಸರ ಹಾಳು ಮಾಡುವ ಕಾರ್ಯವನ್ನು ಮಾಡುತ್ತಿವೆ. ಕೆಲವು ಮಾಲಿನ್ಯ ಮೂಲಗಳಾದ ಅಣುಶಕ್ತಿ ಕೇಂದ್ರಗಳು ಅಥವಾ ಆಯಿಲ್ ಟ್ಯಾಂಕರ್ಗಳು ಅಪಘಾತಕ್ಕೊಳಪಟ್ಟ ಸಂದರ್ಭದಲ್ಲಿ ದೀರ್ಘಾವಧಿಯ ಮಾಲಿನ್ಯಕಾರಕ ಅಂಶಗಳು ಬಿಡುಗಡೆಯಾಗುತ್ತವೆ. ಶಬ್ದ ಮಾಲಿನ್ಯದ ಪ್ರಮುಖ ವರ್ಗ ಮೂಲವೆಂದರೆ ಮೋಟಾರು ವಾಹನಗಳು, ಜಗತ್ತಿನಾದ್ಯಂತ 90 ಶೇಕಡಾ ಅಹಿತಕರ ಶಬ್ದಗಳ ಉತ್ಪತ್ತಿ ಇದರಿಂದ ಉಂಟಾಗುತ್ತದೆ.

ಪ್ರಭಾವಗಳು

[ಬದಲಾಯಿಸಿ]

ಮಾನವನ ಆರೋಗ್ಯ.

[ಬದಲಾಯಿಸಿ]
ಮನುಶ್ಯರ ಆರೋಗ್ಯದ ಮೇಲೆ ಕೆಲವು ಸಾಮಾನ್ಯ ರೀತಿಯ ಮಾಲಿನ್ಯಗಳಿಂದಾಗುವ ಮುಖ್ಯ ಪರಿಣಾಮಗಳ ಮೇಲ್ನೋಟ.

ಗಾಳಿಯ ವ್ಯತಿರಿಕ್ತ ಗುಣಮಟ್ಟವೂ ಮನುಷ್ಯನನ್ನು ಒಳಗೊಂಡಂತೆ ಅನೇಕ ಜೈವಿಕಗಳನ್ನು ಕೊಲ್ಲುತ್ತದೆ. ಓಜೋನ್ ಪದರ ಮಾಲಿನ್ಯವು , ರೆಸ್ಪಿರೆಟರಿ ರೋಗ, ಕಾರ್ಡಿಯೊವ್ಯಾಸ್ಕುಲರ್‌ ರೋಗಗಳು, ಗಂಟಲು ಬೇನೆ, ಎದೆನೋವು ಹಾಗೂ ರಕ್ತ ಹೆಪ್ಪುಗಟ್ಟುವಿಕೆಯಂತಹ ಅತಿಕೆಟ್ಟ ಖಾಯಿಲೆಗಳಿಗೆ ಕಾರಣವಾಗಿದೆ. ಜಲ ಮಾಲಿನ್ಯವು ನಿತ್ಯ ಸುಮಾರು 14,000 ಜನರ ಸಾವಿಗೆ ಕಾರಣವಾಗಿದ್ದು, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಚರಂಡಿಗಳನ್ನು ಸ್ವಚ್ಚಗೊಳಿಸದೆ, ಕುಡಿಯುವ ನೀರಿನ ಮಲಿನತೆಯು ಹೆಚ್ಚಾಗಿದೆ. ವಾರ್ಷಿಕವಾಗಿ ಯುಎಸ್ ನಲ್ಲಿ 50,000ಕ್ಕೂ ಹೆಚ್ಚು ಸಂಖ್ಯೆಯ ಜನ ಸಾವನಪ್ಪುತ್ತಿದ್ದಾರೆ ಎಂದು ಅದ್ಯಯನಗಳು ತಿಳಿಸಿವೆ.[೧೧] ತೈಲ ಸೋರಿಕೆಯು ಚರ್ಮ ಸಂಬಂಧಿತ ರೋಗಗಳಿಗೆ ಕಾರಣವಾಗುತ್ತದೆ. ಶಬ್ದ ಮಾಲಿನ್ಯದಿಂದ ಕಿವಿ ಕೇಳಿಸದಿರುವಿಕೆ, ಅತಿ ಹೆಚ್ಚು ರಕ್ತದೊತ್ತಡ, ಮಾನಸಿಕ ಒತ್ತಡ ಮತ್ತು ನಿದ್ರಾಹೀನತೆ ಉಂಟಾಗುತ್ತವೆ. ಪಾದರಸದ ಪರೋಕ್ಷ ಸೇವನೆಯು ಮಕ್ಕಳ ಬೆಳವಣಿಗೆಗೆ ಕುಂಠಿತಹಾಗೂ ನರ ದೌರ್ಬಲ್ಯತೆಗೆ ಕಾರಣಾವಾಗುತ್ತದೆ. ವಯಸ್ಸಾದ ವ್ಯಕ್ತಿಗಳು ಹೆಚ್ಚಾಗಿ ವಾಯುಮಾಲಿನ್ಯದಿಂದಾಗುವ ಪ್ರಮುಖ ಕಾಯಿಲೆಗಳಿಗೆ ಹೆಚ್ಚಾಗಿ ತುತ್ತಾದವರಾಗಿದ್ದಾರೆ. ಅವುಗಳಲ್ಲಿ ಹೃದಯ ಸಂಬಂಧಿ ಹಾಗು ಶ್ವಾಸಕೋಶ ಕಾಯಿಲೆಗಳೂ ಕೂಡ ಸೇರುತ್ತವೆ.

ಮಕ್ಕಳು ಮತ್ತು ಶಿಶುಗಳಿಗೂ ಕೂಡ ಅನೇಕ ತೊಂದರೆಗಳಾಗುತ್ತಿವೆ. ಲೆಡ್ ಮತ್ತು ಭಾರವಾದ ಲೋಹಗಳಿಂದ ನರ ದೌರ್ಬಲ್ಯ ಸಮಸ್ಯೆಗಳು ಕಾಣಿಸುತ್ತವೆ. ರಾಸಾಯನಿಕಗಳು ಮತ್ತು ವಿಕಿರಣಗಳು ಕ್ಯಾನ್ಸರ್ ಹಾಗೂ ಹುಟ್ಟಿಗೆ ಸಂಬಂಧಿಸಿದ ರೋಗಗಳನ್ನು ತಂದೊಡ್ಡುತ್ತವೆ.

ಪರಿಸರ

[ಬದಲಾಯಿಸಿ]

ಪ್ರಸ್ತುತ ಪರಿಸರದಲ್ಲಿ ಮಾಲಿನ್ಯ ವಿಸ್ತಾರವಾಗಿ ಬೆಳೆದಿದೆ. ಹಾಗೂ ಅದರ ಮೇಲೆ ಅನೇಕ ಪರಿಣಾಮಗಳನ್ನು ಕೂಡ ಬೀರುತ್ತದೆ.

  • ಮಣ್ಣು ಫಲವತ್ತತೆಯನ್ನು ಕಳೆದುಕೊಂಡು ಸಸ್ಯಗಳು ಬೆಳೆಯಲು ಯೋಗ್ಯವಾಗಿರುವುದಿಲ್ಲ.ಇದು ಆಹಾರ ಸರಪಳಿಯಲ್ಲಿರುವ ಜೀವಿಗಳ ಮೇಲೆ ಪ್ರಭಾವ ಬೀರುತ್ತದೆ.
  • ಸ್ಮಾಗ್ ಮತ್ತು ಮಬ್ಬುನಿಂದ ಕಡಿಮೆಯಾದಂತಹ ಸೂರ್ಯನ ಬೆಳಕಿನ ಪರಿಮಾಣದಲ್ಲೇ ಸಸ್ಯಗಳು ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಸುತ್ತವೆ. ಉತ್ಪಾದನೆಗೆ ಮಾರ್ಗದರ್ಶಕವಾಗಬೇಕಾದ ಓಜೋನ್ ಕೊರತೆಯಿಂದಾಗಿ ಹಾಗೂ ಹೆಚ್ಚಿದ ಉಷ್ಣತೆಯಿಂದಾಗಿ ಸಸ್ಯವರ್ಗ ನಾಶವಾಗುತ್ತದೆ.
  • ಸ್ವಾಭಾವಿಕ ವರ್ಗಗಳೊಂದಿಗೆ ಸ್ಪರ್ಧಿಸುವ ಆಕ್ರಮಣ ಸಸ್ಯವರ್ಗಗಳಿಂದಾಗಿ ಜೈವಿಕ ವೈವಿದ್ಯತೆಯಲ್ಲಿ ಕುಂಠಿತವಾಗುತ್ತದೆ. ಒಂದು ಪ್ರದೇಶದ ವಾತಾವರಣದ ಮೂಲ ಸಸ್ಯಗಳಲ್ಲದ ಕಳೆರೀತಿಯ ಸಸ್ಯಗಳು ಹೆಚ್ಚಾಗಿ ಬೆಳೆಯುವುದರಿಂದ ಅಲ್ಲಿಯ ಜೈವಿಕ ಕಣಗಳ ವ್ಯುತ್ಪತ್ತಿ ಹೆಚ್ಚಾಗಿ ಮೂಲ ಸಸ್ಯಗಳ ಬೆಳವಣಿಗೆಯ ಸ್ಪರ್ಧೆಗೆ ತಡೆಯಾಗುತ್ತವೆ.
  • ಜೈವಿಕ ವರ್ಧನೆಯ ಕೆಲವು ಹಂತಗಳಲ್ಲಿ ಜೈವಿಕ ವೃದ್ಧಿಯಾಗುವಂತಹ ಸಂದರ್ಭಗಳಲ್ಲಿ ಜೀವಾಣುವಿನಲ್ಲಿ ಉತ್ಪತ್ತಿಯಾಗುವ ವಿಷ(ಕೆಲವು ಭಾರವಾದ ಲೋಹಗಳು), ಜೈವಿಕ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಸಾಂದ್ರವಾಗಿರುತ್ತದೆ.
  • [[ಕಾರ್ಬನ್ ಡೈ ಆಕ್ಸೈಡ್(CO2)

|ಕಾರ್ಬನ್‌ ಡೈಆಕ್ಸೈಡ್]]ಸೂಸುವಿಕೆಯು ಸರೋವರದ ಆಮ್ಲೀಕರಣಕ್ಕೆ ಕಾರಣವಾಗುತ್ತದೆ ಹಾಗೂ ಭೂಮಿಯ ಪಿಹೆಚ್ ಕಡಿಮೆಯಾಗಿ ಸರೋವರದಲ್ಲಿ ವಿಲೀನವಾಗುತ್ತಿದೆ.

ನಿಯಂತ್ರಣ ಮತ್ತು ಮುನ್ನೆಚ್ಚರಿಕೆ

[ಬದಲಾಯಿಸಿ]

ಮಾಲಿನ್ಯ ಪ್ರಭಾವಗಳಿಂದ ಪರಿಸರವನ್ನು ರಕ್ಷಿಸಲು, ಜಗತ್ತಿನಾದ್ಯಂತ ಅನೇಕ ದೇಶಗಳು ವಿವಿಧ ಮಾಲಿನ್ಯ ನಿಯಂತ್ರಣ ಕಾಯ್ದೆಗಳನ್ನು ರೂಪಿಸಿ, ಮಾಲಿನ್ಯದ ಪ್ರಭಾವಗಳನ್ನು ತಗ್ಗಿಸಬೇಕಾಗಿದೆ.

ಮಾಲಿನ್ಯ ನಿಯಂತ್ರಣ

[ಬದಲಾಯಿಸಿ]

ಪರಿಸರ ನಿರ್ವಹಣಾ ಕಾರ್ಯದಲ್ಲಿ ಮಾಲಿನ್ಯ ನಿಯಂತ್ರಣ ಶಬ್ಧವನ್ನು ಬಳಸಲಾಗುತ್ತದೆ. ಕೈಗಾರಿಕೆಗಳು ಹೊರಸೂಸುವ ರಾಸಾಯನಿಕ ಅನುಪಯುಕ್ತ ತ್ಯಾಜ್ಯಗಳುಮಣ್ಣು, ನೀರು ಅಥವಾ ಗಾಳಿಯನ್ನು ಸೇರದಂತೆ ತಡೆಯುವುದು ಎಂದು ಹೇಳಬಹುದು. ಮಾಲಿನ್ಯ ನಿಯಂತ್ರಣ ಮಾಡದೇ ಇದ್ದರೆ, ಅನುಭೋಗ, ಉಷ್ಣತೆ, ಕೃಷಿ, ಗಣಿಗಾರಿಕೆ, ಉತ್ಪಾದನೆ, ಸಾರಿಗೆ ಮತ್ತು ಮಾನವ ಚಟುವಟಿಕೆ ಇವೆಲ್ಲವುಗಳ ಅನುಪಯುಕ್ತ ವಸ್ತುಗಳು ಒಂದೆಡೆ ಸೇರಿಕೊಂಡು ಅಥವಾ ಚದುರಿ ಪರಿಸರವನ್ನು ಕಲುಷಿತಗೊಳಿಸುತ್ತವೆ. ನಿಯಂತ್ರಣದ ಅನುಕ್ರಮದಲ್ಲಿ, ಮಾಲಿನ್ಯ ಪ್ರತಿಬಂಧ ಮತ್ತು ತ್ಯಾಜ್ಯವಸ್ತುಗಳ ಕಡಿತಗೊಳಿಸುವುದುಮಾಲಿನ್ಯ ನಿಯಂತ್ರಣಕ್ಕಿಂತ ಹೆಚ್ಚು ಅಪೇಕ್ಷಣೀಯವಾಗಿದೆ.

ಮಾಲಿನ್ಯ ನಿಯಂತ್ರಣದ ಸಾಧನಗಳು

[ಬದಲಾಯಿಸಿ]

ಮಾಲಿನ್ಯ ನಿಯಂತ್ರಣದ ಸಾಧನಗಳು

[ಬದಲಾಯಿಸಿ]

ದೃಷ್ಟಿಕೋನಗಳು

[ಬದಲಾಯಿಸಿ]

ಜೀವ ಸ್ವರೂಪಗಳಿಂದ ಉತ್ಪತ್ತಿಯಾದ ಮಲಿನ ಮುನ್ಸೂಚಕಗಳು ನೈಸರ್ಗಿಕ ಕ್ರಿಯೆಯಿಂದ ಹೊರಬರುತ್ತವೆ. ಗೋಳದ ನಿಸರ್ಗ ಆಯ್ಕೆಯಲ್ಲಿ ಉಳಿಯುವ ಸಾಮರ್ಥ್ಯ ಮತ್ತು ಜನಸಂಖ್ಯಾ ಮಟ್ಟ ಕುಸಿತದ ಮೇಲೆ ಅದರ ಹಾಜರಾತಿ ಪರಿಣಾಮ ಬೀರುತ್ತವೆ. ಇವುಗಳು ಮೂಲಭೂತ ಅಥವಾ ಸ್ಥಳೀಯವಾಗಿ ಜನಸಂಖ್ಯಾ ನಾಶ ಹಾಗೂ ಕೆಲವು ಜೀವಿವರ್ಗಗಳ ನಾಶಕ್ಕೆ ಕಾರಣವಾಗುತ್ತದೆ. ಪರಿವರ್ತನೆ ಮತ್ತು ರೂಪಾಂತರಗಳಿಂದ ಹೊಸ ಸಮತೋಲನ ಬೆಳವಣಿಗೆಯಲ್ಲಿ ಪ್ರಕ್ರಿಯೆಗಳು ಅಸಾಧ್ಯ ಪರಿಣಾಮ ಬೀರುತ್ತದೆ. ಕೆಲವೊಂದು ಅಪರೂಪದ ಪರಿಸ್ಥಿತಿಗಳಲ್ಲಿ ಮಾಲಿನ್ಯವನ್ನೇ ಅರಗಿಸಿಕೊಂಡು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಜೀವಿಗಳಿಂದಾಗಿ ಅದನ್ನು ಮಾಲಿನ್ಯ ಎಂದು ಪರಿಗಣಿಸಲಾಗುವುದಿಲ್ಲ. ಮಾನವ ಪ್ರಪಂಚಕ್ಕೆ ತಂತ್ರಜ್ಞಾನ ಎಂಬುದು ಅಗತ್ಯವಾದ ಮತ್ತು ತೀವ್ರವಾದ ಬೇಡಿಕೆಯಿರುವಂತಹದ್ದಾಗಿದ್ದು ಇದು ಅನುಕೂಲಕರ ಮತ್ತು ಉಪಉತ್ಪನ್ನಗಳ ಒಂದು ಮೂಲವಾಗಿದೆ.

ಅಸ್ತಿತ್ವದ ಅವಧಿ ಇಂದು ಕಡಿಮೆಯಾಗುತ್ತಿರುವುದಕ್ಕೆ ಮಾನವ ಜೀವನದ ಗುಣಮಟ್ಟ ಹಾಗೂ ಆರೋಗ್ಯ ಸಂಬಂಧಿ ವಿಚಾರಗಳೂ ಕಾರಣವಾಗುತ್ತವೆ. ವಿಜ್ಞಾನವು ನಿಖರ ಪ್ರಯೋಗಗಳ ಮೂಲಕ, ಪ್ರಮಾಣಿಕರಿಸುವುದು, ವಿಷಪ್ರಯೋಗದಿಂದಾದ ತೊಂದರೆಗಳು ಇರುವ ಆಧುನಿಕ ಉಪಚಾರ ಅಥವಾ ನೈಸರ್ಗಿಕ ತೊಂದರೆಗಳು ಇವುಗಳ ಪ್ರಭಾವವನ್ನು ಯಾವ ಹಂತದಲ್ಲಿ ಗಮನಿಸಬಹುದು ಎಂಬುದನ್ನು ಕಂಡುಕೊಂಡಿದೆ.ಮಾಲಿನ್ಯದ ಸಾಮಾನ್ಯ ಕ್ಷೇತ್ರಗಳಲ್ಲಿ ಮಾಲಿನ್ಯ ಪ್ರಮಾಣವನ್ನು ಹತೋಟಿಯಲ್ಲಿಡುವುದು ಮುಖ್ಯ ಅವುಗಳಲ್ಲಿ ವಾಹನಗಳ ಹೊಗೆನಿಯಂತ್ರಣ , ಕೈಗಾರಿಕಾ ತ್ಯಾಜ್ಯ (ಉದಾ:ವೃತ್ತಿ ರಕ್ಷಣೆಮತ್ತು ಆರೋಗ್ಯ ಆಡಳಿತ(OSHA) PEL, ವಿಷಶಾಸ್ತ್ರ(ಉದಾ:LD50),ಮತ್ತು ಔಷಧಿ(ಉದಾ: ಚಿಕಿತ್ಸೆ ಮತ್ತು ಪ್ರಸರಣ ಪ್ರಮಾಣಗಳು) ಸೇರಿವೆ.

"ಮಾಲಿನ್ಯಕ್ಕೆ ಪರಿಹಾರ ಅದನ್ನು ಕಡಿಮೆಗೊಳಿಸುವುದು", ಎಂಬುದರ ತ್ಮಾತ್ಪರ್ಯವೆಂದರೆ, ಮಾಲಿನ್ಯ ನಿರ್ವಹಣೆಯಲ್ಲಿನ ಈ ಸಾಂಪ್ರಾದಾಯಿಕ ವಿಧಾನದಲ್ಲಿ ಮಾಲಿನ್ಯದ ಪ್ರಮಾಣ ಕಡಿಮೆಮಾಡುವುದು ಮುಖ್ಯವಾಗುತ್ತದೆ. ಅತೀ ಕಡಿಮೆ ಮಾಲಿನ್ಯ ಹಾನಿಕಾರಕವಲ್ಲ.[೧೪][೧೫] ಇದು ಕೆಲವು ಆಧುನಿಕ, ಸ್ಥಳೀಯ ಕ್ಷೇತ್ರ ಬಳಕೆಗಳಿಗೆ ಹೆಚ್ಚು ಸೂಕ್ತವಾಗಿದ್ದು, ಲ್ಯಾಬೋರೇಟರಿ ರಕ್ಷಣಾ ಕಾರ್ಯ ಮತ್ತು ವಿನಾಶಕಾರಿ ವಸ್ತುಗಳು ತುರ್ತು ನಿರ್ವಹಣೆಯಲ್ಲಿ ಬಿಡುಗಡೆಯಾಗುತ್ತವೆ. ಆದರೆ ಅದರ ಅರ್ಥವೇನೆಂದರೆ, ಈ ಕಡಿಮೆಗೊಳಿಸುವುದು ಎನ್ನುವುದು ವಾಸ್ತವವಾಗಿ ಅನಿಯಮಿತ ಬಳಕೆಯಾಗುತ್ತದೆ ಅಥವಾ ಅದರ ಪರಿಣಾಮವಾಗಿ ಎಲ್ಲಾ ಘಟನೆಗಳಲ್ಲಿ ಡಿಲುಟ್ಯಾಂಟ್ಸ್‌ ಒಪ್ಪಲ್ಪಡುತ್ತವೆ.

ಮುಂದಿನ ಶತಮಾನಗಳಲ್ಲಿ ಪರಿಸರ ಮಾಲಿನ್ಯದ ಕೆಲವು ಸರಳ ಉಪಾಚಾರ ಅಧಿಕ ಪ್ರಮಾಣದಲ್ಲಿ ಯೋಗ್ಯವಾಗಿತ್ತು. ಭೌತಿಕ ಅಸ್ಥಿತ್ವ ಅನೇಕ ವೇಳೆ ಹೆಚ್ಚು ಕಡ್ಡಾಯವಾಗಿದ್ದು, ಮಾನವ ಮಾಲಿನ್ಯ ಮತ್ತು ಸಾಂದ್ರತೆ ಕಡಿಮೆ ಇದ್ದು, ತಂತ್ರಜ್ಞಾನ ಸರಳವಾಗಿದ್ದವು ಮತ್ತು ಅದರ ಉತ್ಪನ್ನಗಳು ಹೆಚ್ಚು ಗಂಭೀರ ಸ್ವರೂಪದ್ದಾಗಿದ್ದವು. ಆದರೆ ಇವು ಘಟನೆಯಲ್ಲಿ ದೀರ್ಘವಾಗಿರಲಿಲ್ಲ.ಅಲ್ಲದೆ, ಪ್ರಗತಿಗೆ ಕೇಂದ್ರೀಕೃತವಾಗುವ ವಿಸ್ತ್ರೀರ್ಣದ ಶಕ್ತಿ ಇದ್ದರೂ ಮುಂಚೆ ಅದು ಅಸಾಧ್ಯವಾಗಿತ್ತು. ಮೌಲ್ಯಮಾಪನದಲ್ಲಿ ಸಾಂಖ್ಯಿಕ ವಿಧಾನಗಳ ಬಳಕೆಯಿಂದ ಸಿಗುವ ಮೌಲ್ಯವು ಘಟನೆಗಳಲ್ಲಿನ ಸಂಭವನೀಯ ತತ್ವದ ಹಾನಿಗೆ ಚಲಾವಣೆಯನ್ನು ಒದಗಿಸಿದ್ದರೂ ಕೆಲವು ಸಂದರ್ಭಗಳಲ್ಲಿ ಮೌಲ್ಯಮಾಪನ ಪ್ರಮಾಣಿಕರಿಸಿದೆಯಾದರೂ ಖಚಿತಪಡಿಸಲ್ಪಟ್ಟ ಮಾದರಿಗಳ ಪುನರ್ವಿಂಗಡನೆಯು ಕಾರ್ಯ ಸಾಧ್ಯವಿಲ್ಲ ಅಥವಾ ಅಸಂಭವನೀಯವಾಗಿವೆ. ಜೊತೆಗೆ ಪರಿಸರದ ವಿಚಾರದ ಹೊರತಾಗಿಯೂ ಮಾನವ ಚಟುವಟಿಕೆಗಳ ಮೇಲೆ ನೇರ ಪ್ರಭಾವ ಬೀರುವಲ್ಲಿ ಪ್ರಾಮುಖ್ಯತೆ ಗಳಿಸಿವೆ.

ಈಗ ನಿಯಮಗಳ ಅನುಪಸ್ಥಿತಿಯಲ್ಲಿ ಇಡೀ ಪ್ರಪಂಚವೇ ಹಳೇ ಪರಿಪಾಠದ ಹತೋಟಿಯಲ್ಲಿದೆ. ಇದು ಮೂಲಭೂತವಾಗಿದ್ದು ಅನುಪಯುಕ್ತ ತ್ಯಾಜ್ಯವಸ್ತುಗಳ ವಿಸ್ತಾರವಾದ ಸಂಗ್ರಹಗಳಿಂದ ಕಾನೂನು ಬದ್ದವಾಗಿ ಬಿಡುಗಡೆಯಾಗುವ,ದಂಡ ಕಟ್ಟಲ್ಪಡುವ ಶಿಕ್ಷೆಗಳು ಹೆಚ್ಚಾಗುತ್ತಿವೆ ಅಥವಾ ಸೂಚನೆಗಳು ಅನ್ವಯಿಸುತ್ತವೆ. ಹಿಂಜರಿದ ಘಟನೆಗಳು ನಿಯಂತ್ರಣ ಮಟ್ಟದಲ್ಲಿಯೂ ಸಹ ಹೆಚ್ಚು ಬಿಡುಗಡೆಯಾಗುತ್ತವೆ ಅಥವಾ ಒತ್ತಾಯಿಸಲ್ಪಟ್ಟಿದ್ದರೂ ತಿರಸ್ಕೃತವಾಗಿವೆ. ಮಾಲಿನ್ಯದಿಂದ ಸ್ಥಳಾಂತರವಾಗಿ ನಿಸ್ಸಾರ ನಿವಾರಣೆಯಲ್ಲಿ ಅನೇಕ ಘಟನೆಗಳು ಆರ್ಥಿಕ ಮತ್ತು ತಾಂತ್ರಿಕವಾದ ಅಡೆತಡೆಗಳಿಂದ ವಿರೋಧಿಸಲ್ಪಡುತ್ತವೆ.

ಹಸಿರುಮನೆ ಅನಿಲಗಳು ಮತ್ತು ಜಾಗತಿಕ ತಾಪಮಾನ

[ಬದಲಾಯಿಸಿ]
ಇತಿಹಾಸದ ಮತ್ತು ತೋರಿಸಿಕೊಟ್ಟ ದೇಶದ CO2ಯಿನ ಉಗುಳಿಕೆ.ಮೂಲ: ಎನರ್ಜಿ ಇನ್‍ಫೊರ್ಮೇಷನ್ ಅಡ್ಮಿನಿಸ್ಟ್ರೇಷನ್.

ಕಾರ್ಬನ್ ಡೈಆಕ್ಸೈಡ್ ದ್ಯುತಿಸಂಶ್ಲೇಷಣೆಗೆ ಅಗತ್ಯವಾದರೂ ಕೆಲವೊಮ್ಮೆ ಅದು ಮಾಲಿನ್ಯವನ್ನು ನಿರ್ಧರಿಸುತ್ತದೆ. ಏಕೆಂದರೆ ವಾತಾವರಣದಲ್ಲಿ ಏರಿಕೆಯಾದ ಅನಿಲ ಪ್ರಮಾಣವು ಭೂಪರಿಸರದ ಮೇಲೆ ಪ್ರಭಾವ ಬೀರುತ್ತಲೇ ಇರುತ್ತದೆ. ಪರಿಸರಕ್ಕೆ ಅಡ್ಡಿಪಡಿಸುವ ಪ್ರಮುಖಾಂಶಗಳು ಮಾಲಿನ್ಯ ಪ್ರದೇಶಗಳ ನಡುವೆ ಇವೆ ಎಂದು ಬಿಂಬಿಸಲ್ಪಟ್ಟು, ಅವುಗಳಲ್ಲಿ ಸಾಮಾನ್ಯವಾಗಿ ಕೆಲವು ಜಲ ಮತ್ತು ವಾಯು ಎಂದು ಪ್ರತ್ಯೇಕವಾಗಿ ವರ್ಗಿಕರಿಸಲ್ಪಟ್ಟಿವೆ. ದೀರ್ಘಾವಧಿಯಲ್ಲಿ ಹೆಚ್ಚಾಗುತ್ತಿರುವ ನೈಸರ್ಗಿಕ ಕಾರ್ಬನ್‌ ಡೈಕ್ಸೈಡ್‌ ಮಟ್ಟವೂ ಲಘು ಕಾರಣವಾದರೂ ಸಮುದ್ರ ನೀರಿನ ಆಮ್ಲತೆಯ ಹೆಚ್ಚಳ ತೀವ್ರವಾಗಿದೆ ಮತ್ತು ಇದು ಕಡಲಿಗೆ ಸಂಬಂಧಿಸಿದ ಪರಿಸರವ್ಯವಸ್ಥೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಇತ್ತೀಚಿನ ಅಧ್ಯಯನಗಳು ಪತ್ತೆಹಚ್ಚಿವೆ.

ವಿವರಗಳಿಗಾಗಿ ನೋಡಿ

[ಬದಲಾಯಿಸಿ]

ವಾಯು ಮಾಲಿನ್ಯ


ಭೂ ಮಾಲಿನ್ಯ


ಜಲಮಾಲಿನ್ಯ


ಇತರೆ


ಆಕರಗಳು

[ಬದಲಾಯಿಸಿ]
  1. ಪುರಾತನ ಇತಿಹಾಸದಲ್ಲಿ ರೋಮನ್ ಮತ್ತು ಮಧ್ಯ ಯುಗೀನ ಕಾಲದಲ್ಲಿ ತಾಮ್ರ ಲೋಹ ಕರಗಿಸುವಿಕೆಯಿಂದಾದ ಮಾಲಿನ್ಯವನ್ನು ಗ್ರೀನ್‌ಲ್ಯಾಂಡ್‌‌ ಐಸ್‌‍ನಲ್ಲಿ ವರದಿ ಮಾಡಲಾಗಿದೆ, ವಿಜ್ಞಾನ ಸಂಖ್ಯೆ. 272,1996
  2. ಎಲ್‌. ಗರಿ(2002), "13ನೇ ಶತಮಾನದ ಅಂತ್ಯದವರೆಗಿನ ಪರಿಸರ ಮಾಲಿನ್ಯದ ಮೇಲೆ ಅರೇಬಿಕ್‌ ಒಪ್ಪಂದಗಳು", ಪರಿಸರ ಮತ್ತು ಇತಿಹಾಸ 8 (4), pp. 475-488.
  3. David Urbinato (1994). "London's Historic "Pea-Soupers"". United States Environmental Protection Agency. Retrieved 2006-08-02. {{cite web}}: Unknown parameter |month= ignored (help)
  4. "Deadly Smog". PBS. 2003-01-17. Retrieved 2006-08-02. {{cite web}}: Cite has empty unknown parameters: |1= and |coauthors= (help)
  5. ಪರಿಸರ ಸಾಮರ್ಥ್ಯ ವರದಿ 2001 (ಸಾರಿಗೆ, ಕೆನಡಾ ಜಾಲತಾಣ ಪುಟ)
  6. ಸ್ಟೇಟ್‌ ಆಫ್‌ ದಿ ಎನ್‌ವೈರ್‌ನ್ಮೆಂಟ್‌, ವಿವಾದ: ವಾಯು ಪ್ರಮಾಣ(ಆಸ್ಟ್ರೇಲಿಯದ ಸರಕಾರಿ ಜಾಲತಾಣ ಪುಟ)
  7. ಮಾಲಿನ್ಯ ಮತ್ತು ಸಮಾಜ Archived 2007-04-11 ವೇಬ್ಯಾಕ್ ಮೆಷಿನ್ ನಲ್ಲಿ., ಮರಿಸಾ ಬುಚಾನನ್‌ ಮತ್ತು ಕಾರ್ಲ್‌ ಹೊರ್ವಿಟ್ಜ್‌, ಮಿಚಿಗನ್‌ ವಿಶ್ವವಿದ್ಯಾನಿಲಯ
  8. ಸೈಲೆಂಟ್‌ ಸ್ಪ್ರಿಂಗ್ಸ್‌‍, ಆರ್‌ ಕಾರ್ಲ್‌ಸನ್‌‌, 1962
  9. http://news.nationalgeographic.com/news/2007/05/070504-global-warming.html
  10. ೧೦.೦ ೧೦.೧ Beychok, Milton R. (1987). "A data base for dioxin and furan emissions from refuse incinerators". Atmospheric Environment. 21 (1): 29–36. doi:10.1016/0004-6981(87)90267-8. {{cite journal}}: Unknown parameter |month= ignored (help)
  11. "ಆರ್ಕೈವ್ ನಕಲು". Archived from the original on 2011-04-30. Retrieved 2009-11-22.
  12. American Petroleum Institute (API) (February 1990). Management of Water Discharges: Design and Operations of Oil-Water Separators (1st Edition ed.). American Petroleum Institute. {{cite book}}: |edition= has extra text (help)CS1 maint: year (link)
  13. Beychok, Milton R. (1967). Aqueous Wastes from Petroleum and Petrochemical Plants (1st Edition ed.). John Wiley & Sons. LCCN 67019834. {{cite book}}: |edition= has extra text (help)
  14. Gershon Cohen Ph.D. "The 'Solution' to Pollution Is Still 'Dilution'". Earth Island Institute. Archived from the original on 2008-05-04. Retrieved 2006-02-14.
  15. "What is required". Clean Ocean Foundation. 2001. Archived from the original on 2006-05-19. Retrieved 2006-02-14.


ಹೊರಗಿನ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಮಾಲಿನ್ಯ&oldid=1248322" ಇಂದ ಪಡೆಯಲ್ಪಟ್ಟಿದೆ