ವಿಷವೈದ್ಯ ಶಾಸ್ತ್ರ
ವಿಷವೈದ್ಯ ಶಾಸ್ತ್ರ (ಗ್ರೀಕ್ ಶಬ್ಧಗಳಿಂದ τοξικός - toxicos "ವಿಷಯುಕ್ತ" ಮತ್ತು logos ) ಎಂದರೆ ಸಜೀವಿಗಳ ಮೇಲೆ ರಾಸಾಯನಿಕಗಳಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡುವುದು.[೧] ಇದು ವಿಷಪರಿಣಾಮದ ಲಕ್ಷಣಗಳ, ಯಾಂತ್ರಿಕ ವ್ಯವಸ್ಥೆಯ, ಚಿಕಿತ್ಸಾ ಕ್ರಮಗಳ ಮತ್ತು ಅದನ್ನು ಪತ್ತೆ ಹಚ್ಚುವುದರ ಅಧ್ಯಯನ, ಮುಖ್ಯವಾಗಿ ಜನರ ಮೇಲಾಗುವೆ ವಿಷಪರಿಣಾಮದ ಬಗ್ಗೆ.
ಇತಿಹಾಸ
[ಬದಲಾಯಿಸಿ]ಮ್ಯಾಥ್ಯೂ ಒರ್ಫಿಲ ಅವರನ್ನು ವಿಷವೈದ್ಯ ಶಾಸ್ತ್ರದ ಆಧುನಿಕ ಪಿತಾಮಹ ಎಂದು ಪರಿಗಣಿಸಲಾಗಿದೆ, ಕಾರಣ 1813ರಲ್ಲಿ ಇವರು ಬರೆದ ಟ್ರೈಟ್ ಡೆಸ್ ಪಾಯಿಸನ್ಸ್ , ಹಾಗೂಟಾಕ್ಸಿಕಾಲಜಿ ಜೆನೆರಲೆ ಎಂದು ಕರೆಯಲ್ಪಡುವ ಪುಸ್ತಕದಲ್ಲಿ ಇದರ ವಿದಿವತ್ತಾದ ಚಿಕಿತ್ಸೆಯನ್ನು ಮೊಟ್ಟಮೊದಲಿಗೆ ವಿವರಿಸಿದರು.[೨] ತೆಯೊಫ್ರಾಸ್ಟುಸ್ ಫಿಲಿಪಸ್ ಎರೊಲೆಸ್ ಬೊಂಬಾಸ್ಟುಸ್ ವೊನ್ ಹೊಹೆನ್ಹಿಮ್ (1493–1541) ಅವರನ್ನು ಸಹ ವಿಷ ವೈದ್ಯಶಾಸ್ತ್ರದ ಪಿತಾಮಹ ಎಂದು ಪರಿಗಣಿಸಲಾಗಿದೆ.(ಹಾಗೂ ಇವರನ್ನು ಪೆರಾಸೆಲ್ಸುಸ್ ಎಂದೂ ಉಲ್ಲೇಖಿಸಲಾಗಿದೆ, ಇದಕ್ಕೆ ಕಾರಣ ಇವರ ಅಧ್ಯಯನವು ಒಂದನೇ ಶತಮಾನದ ರೋಮನ್ ಚಿಕಿತ್ಸಕ ಸೆಲ್ಸುಸ್ ಕೆಲಸಕ್ಕಿಂತ ಮಿಗಿಲಾದುದು ಎಂಬ ಅವರ ನಂಬಿಕೆ).[೩] ಅವರ ಕ್ಲಾಸಿಕ್ ವಿಷವೈದ್ಯಶಾಸ್ತ್ರದ ನಿಯಮವು ಹೇಳುವಂತೆ "Alle Dinge sind Gift und nichts ist ohne Gift; allein die Dosis macht, dass ein Ding kein Gift ist. " ಇದರ ಅರ್ಥ, "ಎಲ್ಲ ವಸ್ತುಗಳು ವಿಷಕಾರಿ ಮತ್ತು ವಿಷವಲ್ಲದುದು ಯಾವುದು ಇಲ್ಲ; ಕೇವಲ ಅದರ ಪ್ರಮಾಣ ವಸ್ತುಗಳನ್ನು ವಿಷಕಾರಿಯಲ್ಲದಂತೆ ಮಾಡುತ್ತದೆ." ಇದನ್ನು ಆಗಾಗ್ಗೆ "ಔಷದಿಯ ಪ್ರಮಾಣವು ವಿಷದ ಅಂಶವನ್ನು ನಿರ್ಧರಿಸುತ್ತದೆ" ಎಂದು ಸಂಕ್ಷೇಪಿಸಲಾಗಿದೆ.
ಇದಕ್ಕೂ ಮುಂಚಿನ ವಿಷವೈದ್ಯ ಶಾಸ್ತ್ರದ ಬರಹಗಾರರಾದ Ibn ವಾಹ್ಷಿಯ (Arabic: أبو بكر أحمد بن وحشية Abu Bakr Ahmed ibn Wahshiyah ), ಅವರು 9ನೇ ಅಥವಾ 10ನೇ ಶತಮಾನದಲ್ಲಿ ವಿಷಗಳ ಬಗ್ಗೆ ಒಂದು ಪುಸ್ತಕ ವನ್ನು ರಚಿಸಿದರು.[೪]
ವಿಷವೈದ್ಯ ಶಾಸ್ತ್ರದಲ್ಲಿ ಅರಕ್ಷಿತ ಸ್ಥಿತಿಯ ಸಾವಯುವ ಜೀವಿಗಳ ಮೇಲಿನ ಪ್ರಮಾಣ ಮತ್ತು ಅದರ ಪರಿಣಾಮಗಳ ಸಂಬಂಧಕ್ಕೆ ಹೆಚ್ಚು ಪ್ರಾಮುಖ್ಯತೆಯಿದೆ. ಮುಖ್ಯವಾಗಿ ರಾಸಾಯನಿಕಗಳ ಪ್ರಮಾಣವು ವಿಷಪರಿಣಾಮವನ್ನು ನಿರ್ಧರಿಸುತ್ತದೆ,ಇದು ವಿಷದ ಪ್ರಮಾಣವು ಪದಾರ್ಥದಲ್ಲಿ ಎಷ್ಟು ಸೇರಿಕೊಂಡಿದೆ ಅನ್ನುವುದರ ಮೇಲೆ ಅವಲಂಬಿತವಾಗಿದೆ. ಯೋಗ್ಯ ನಿಯಮದಲ್ಲಿ ಎಲ್ಲಾ ಪದಾರ್ಥಗಳು ವಿಷಕಾರಿ ಯಾಗುತ್ತವೆ. LD50 ಅನ್ನುವ ಶಬ್ದ ವಿಷಕಾರಿ ಪದಾರ್ಥಗಳ ಪ್ರಮಾಣವು ಪ್ರತಿಶತ 50 ರಷ್ಟು ಪರೀಕ್ಷಿಯ ಜನಸಂಖ್ಯೆಯ ಪ್ರಾಣ ತೆಗೆಯುತ್ತದೆ ಎಂದು ಉಲ್ಲೇಖಿಸುತ್ತದೆ.(ಪರೀಕ್ಷೆಯು ಮಾನವಕುಲದ ಮೇಲಿನ ವಿಷಪರಿಣಾಮದ ಬಗ್ಗೆ ಕಾಳಜಿಹೊಂದಿದ್ದರೆ ಸಾಂಕೇತಿಕವಾಗಿ ಇಲಿಗಳ ಅಥವಾ ಇತರ ಜೀವಿಗಳಮೇಲೆ ಪರೀಕ್ಷೆ ಮಾಡಲಾಗುವುದು). ಪ್ರಾಣಿಗಳಲ್ಲಿ ಕಾಯಿಲೆಪೂರ್ವದ ವೃದ್ಧಿಯ ಅಂಶಗಳು LD50ಯ ಗಣನೆಗಳಿಗೆ ವ್ಯವಸ್ಥಿತವಾದ ಒಳಗಾಗುವ ಅಗತ್ಯವಿಲ್ಲ.[ಸಾಕ್ಷ್ಯಾಧಾರ ಬೇಕಾಗಿದೆ]
ಎಂಡೊಕ್ರೈನ್ ಡಿಸ್ರಪ್ಟರ್‌ಗಳ ಅಧ್ಯಯನದಲ್ಲಿ ಸಂಬಂಧಗಳು (ಅತಿಯಾದ ಪ್ರದರ್ಶನ ಹೆಚ್ಚಿನ ಅಪಾಯಕ್ಕೆ ಸಮ) ಸವಾಲಾಗಿವೆ.
ಜೈವಿಕ ಪದಾರ್ಥಗಳ ವಿಷಪರಿಣಾಮ
[ಬದಲಾಯಿಸಿ]ಹೆಚ್ಚಿನ ಪದಾರ್ಥಗಳ ವಿಷಗಳು ಕೇವಲ ಪರೋಕ್ಷವಾಗಿಯೇ ವಿಷಕಾರಿ ಯಗುತ್ತವೆ ಎಂದು ಪರಿಗಣಿಸಲಾಗಿದೆ. "ಮರದ ಸರಾಯಿ," ಅಥವಾ ಮೆಥನೋಲ್ ಇದಕ್ಕೊಂದು ಉದಾಹರಣೆ, ಇದು ಪಿತ್ತಜನಕಾಂಗದಲ್ಲಿ ಫಾರ್ಮಾಲ್ಡಿಹೈಡ್ ಮತ್ತು ಫಾರ್ಮಿಕ್ ಆಮ್ಲವಾಗಿ ಪರಿವರ್ತನೆ ಗೊಳ್ಳುತ್ತದೆ. ಮೆಥನೋಲ್ ಸೇರ್ಪಡೆಯಿಂದ ಫಾರ್ಮಾಲ್ಡಿಹೈಡ್ ಮತ್ತು ಫಾರ್ಮಿಕ್ ಆಮ್ಲ ಗಳುಂಟಾಗಿ ವಿಷದ ಪರಿಣಾಮಕ್ಕೆ ಕಾರಣ ವಾಗುತ್ತವೆ. ಔಷದಿಗಳಿಂದ, ಅನೇಕ ಚಿಕ್ಕ ಅಣುಗಳು ಪಿತ್ತಜನಕಾಂಗದಲ್ಲಿ ವಿಷಕಾರಿಯಾಗುತ್ತವೆ, ಇದಕ್ಕೆ ಉತ್ತಮ ಉದಾಹರಣೆ ಎಂದರೆ ಅಸೆಟಮಿನೊಫೆನ್ (ಪ್ಯಾರಸಿಟಮಲ್), ಮುಖ್ಯವಾಗಿ ಕ್ರಾನಿಕ್ ಸರಾಯಿ ಉಪಯೋಗಿಸಲ್ಪಟ್ಟಾಗ. ಉತ್ಪತ್ತಿ ಮೂಲಕ್ಕೆ ಸಂಬಂಧಿಸಿದಂತೆ ನಿರ್ಧಿಷ್ಟ ಪಿತ್ತಜನಕಾಂಗದ ಕಿಣ್ವಗಳ ಭಿನ್ನತೆಯಿಂದ, ಅನೇಕ ಮಿಶ್ರಣಗಳಿಂದ ಉಂಟಾಗುವ ವಿಷಪರಿಣಾಮವು ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ. ಕಾರಣ ಒಂದು ಪಿತ್ತಜನಕಾಂಗದ ಕಿಣ್ವದ ಮೇಲಿನ ಬೇಡಿಕೆಯು ಇನ್ನೊಂದರ ಮೇಲೆ ಚಟುವಟಿಕೆಯನ್ನು ಪ್ರೇರೇಪಿಸಬಹುದು, ಅನೇಕ ಅಣುಗಳು ಕೇವಲ ಇತರ ಅಣುಗಳಿಂದ ಸೇರ್ಪಡೆಯಾದಾಗ ಮಾತ್ರ ವಿಷಕಾರಿಯಾಗುತ್ತವೆ. ಅನೇಕ ವಿಷವೈದ್ಯ ಶಾಸ್ತ್ರಜ್ಞರು ತೊಡಗಿರುವ ಒಂದೇ ಕುಟುಂಬದ ಚಟುವಟಿಕೆಗಳೆಂದರೆ, ಯಾವ ಪಿತ್ತಜನಕಾಂಗದ ಕಿಣ್ವಗಳು ಅಣುಗಳನ್ನು ವಿಷವನ್ನಾಗಿ ಪರಿವರ್ತಿಸುತ್ತವೆ ಎಂದು ಪತ್ತೆ ಹಚ್ಚುವುದು, ಯಾವ ಪದಾರ್ಥಗಳು ಪರಿವರ್ತನೆಯಿಂದ ವಿಷಕಾರಿಯಾಗುತ್ತವೆ ಮತ್ತು ಯಾವ ನಿಯಮದಲ್ಲಿ ಮತ್ತು ಯಾವ ವಿಶಿಷ್ಟ ವ್ಯಕ್ತಿಯಲ್ಲಿ ಈ ಪರಿವರ್ತನೆಯಾಗುತ್ತದೆ ಎಂದು ತಿಳಿಯುವುದು.
ವಿಷವೈದ್ಯ ಶಾಸ್ತ್ರದ ಕಟ್ಟುಪಾಡುಗಳು
[ಬದಲಾಯಿಸಿ]ವಿಷವೈದ್ಯ ಶಾಸ್ತ್ರದ ಕ್ಷೇತ್ರದಲ್ಲಿಯೇ ಅನೇಕ ಅಸಾಧಾರಣ ಕಟ್ಟುಪಾಡುಗಳಿವೆ ಅವು ವಿವಿಧ ರಾಸಾಯನಿಕ ಮತ್ತು ಜೀವಶಾಸ್ತ್ರದ ಪರದಿಯ ವಿಷಯಾಂಶಗಳಿಗೆ ಸಂಬಂದಪಟ್ಟಿರುತ್ತವೆ. ಉದಾಹರಣೆಗೆ, ಪರಮಾಣುಗಳ ಗುಂಪಿನ ಸಂಕ್ಷಿಪ್ತಾಕೃತಿ ಪದ್ದತಿಯನ್ನು ವಿಷವೈದ್ಯ ಶಾಸ್ತ್ರದ ಅಧ್ಯಯನಕ್ಕೆ ಅನ್ವಯಿಸುವುದನ್ನು ಟೊಕ್ಸಿಕೊಜೆನೋಮಿಕ್ಸ್ ಒಳಗೊಂಡಿರುತ್ತದೆ.[೫] ಇತರ ವಿಭಾಗಗಳು ಜಲಸಂಬಂಧವಾದ ವಿಷವೈದ್ಯ ಶಾಸ್ತ್ರ, ರಾಸಾಯನಿಕ ವಿಷವೈದ್ಯ ಶಾಸ್ತ್ರ, ಪರಿಸರಕ್ಕೆ ಸಂಬಂಧಪಟ್ಟ ವಿಷವೈದ್ಯ ಶಾಸ್ತ್ರ , ವಾತಾವರಣಕ್ಕೆ ಸಂಬಂಧಪಟ್ಟ ವಿಷವೈದ್ಯ ಶಾಸ್ತ್ರ , ನ್ಯಾಯವ್ಯವಹಾರದ ವಿಷವೈದ್ಯ ಶಾಸ್ತ್ರ, ಮತ್ತು ವೈದ್ಯಕೀಯ ವಿಷವೈದ್ಯ ಶಾಸ್ತ್ರಗಳನ್ನು ಒಳಗೊಂಡಿರುತ್ತವೆ.
ರಾಸಾಯನಿಕ ವಿಷವೈದ್ಯ ಶಾಸ್ತ್ರ
[ಬದಲಾಯಿಸಿ]ರಾಸಾಯನಿಕ ವಿಷವೈದ್ಯ ಶಾಸ್ತ್ರವು ರಾಸಾಯನಿಕ ನಿಯೋಗಿಗಳಿಂದಾಗುವ ವಿಷಕಾರಿ ಪರಿಣಾಮಗಳಿಗೆ ಸಂಬಂಧಪಟ್ಟಂತೆ ಅವುಗಳ ರಚನೆ ಮತ್ತು ಯಾಂತ್ರಿಕ ಕೌಶಲ್ಯಗಳ ಅಧ್ಯಯನವನ್ನೊಳಗೊಂಡ ಒಂದು ವೈಜ್ಞಾನಿಕ ಶಿಸ್ತುಪಾಲನೆ,ಮತ್ತು ವಿಷವೈದ್ಯ ಶಾಸ್ತ್ರದ ರಾಸಾಯನಿಕ ವಿಷಯಾಂಶಗಳಿಗೆ ಸಂಬಂಧಪಟ್ಟ ಸಂಶೋಧನೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸುವಿಕೆ. ಈ ವಿಭಾಗದ ಅಧ್ಯಯನವು ಹೆಚ್ಚಾಗಿ ಬಹುವಿಭಾಗಗಳಿಂದ ಕೂಡಿದ್ದು, ಕಾಂಪ್ಯುಟೇಶನಲ್ ರಸಾಯನಶಾಸ್ತ್ರ ಮತ್ತು ಸಿಂಥೆತಿಕ್ ರಸಾಯನಶಾಸ್ತ್ರ, ಪ್ರೊಟೆಮಿಕ್ಸ್ ಮತ್ತು ಮೆಟಬಾಲೊಮಿಕ್ಸ್, ಔಷಧ ಅನ್ವೇಷಣೆ, ಔಷದ ಮೆಟಾಬಾಲಿಸಂ ಮತ್ತು ಕ್ರಿಯೆಯ ಯಾಂತ್ರಿಕ ಕೌಶಲ, ಬಯೋಇನ್ಫರ್ಮ್ಯಾಟಿಕ್ಸ್, ಬಯೋಅನಲಿಟಿಕಲ್ ರಸಾಯನಶಾಸ್ತ್ರ, ರಾಸಾಯನಿಕ ಜೀವಶಾಸ್ತ್ರ, ಮತ್ತು ಮಾಲಿಕ್ಯುಲರ್ ಎಪಿಡೆಮಿಯೋಲಜಿ.
ಇವನ್ನೂ ಗಮನಿಸಿ
[ಬದಲಾಯಿಸಿ]- ಜಲವಾಸಿ ವಿಷವೈದ್ಯಶಾಸ್ತ್ರ
- ಆಟೊಮ್ಯಾಟಿಸಂ (ವಿಷವೈದ್ಯಶಾಸ್ತ್ರ)
- ಕೆಲವು ಸುರಕ್ಷಿತ ಅಂಶಗಳು
- ಚಿಲ್ಡ್ರನ್ಸ್ ಎನ್ವಿರಾನ್ಮೆಂಟಲ್ ಎಕ್ಪೋಶರ್ ರೀಸರ್ಚ್ ಸ್ಟಡಿ (CHEERS) (USನಲ್ಲಿ)
- ಎಕೊಟಾಕ್ಸಿಕಾಲಜಿ
- ಎಂಟೋಮಾಟಾಕ್ಸಿಕಾಲಜಿ
- ಪರಿಸರದ ವಿಶವೈದ್ಯಶಾಸ್ತ್ರ
- ಕಿಣ್ವಗಳ ನಿಷೇದ
- ನ್ಯಾಯಸ್ಥಾನಕ ವಿಶವೈದ್ಯಶಾಸ್ತ್ರ toxicology
- ಪ್ರನಾಳೀಯ ವಿಶವೈದ್ಯಶಾಸ್ತ್ರ
- ಇಂಡಿಕೇಟೀವ್ ಲಿಮಿಟ್ ವ್ಯಾಲ್ಯೂ
- ವಿಶವೈದ್ಯಶಾಸ್ತ್ರದ ಪ್ರಮುಖ ಪ್ರಕಟಣೆಗಳು
- [[ಮಿತಿ ಮೀರಿದ ಸೇವನೆ [ಅಧಿಕ ಪ್ರಮಾಣ]]]
- ಮಾಲಿನ್ಯ
- Toxic 100 (ಕಂಪನಿಗಳ ಪಟ್ಟಿ)
- ವಿಷತ್ವ
- ಟಾಕ್ಸಿಕೊಜಿನೊಮಿಕ್ಸ್
ಆಕರಗಳು
[ಬದಲಾಯಿಸಿ]- ↑ ""What is Toxicology" -Schrager, TF, October 4, 2006". Archived from the original on ಮಾರ್ಚ್ 10, 2007. Retrieved ಏಪ್ರಿಲ್ 6, 2010.
- ↑ U.S. National Library of Medicine, ಮ್ಯಾಥ್ಯೂ ಜೋಸೆಫ್ ಬೊನಾವೆಂಚರ್ ಒರ್ಫಿಲಾ ಅವರ ಜೀವನಚರಿತ್ರೆ (1787–1853)
- ↑ "Paracelsus Dose Response in the Handbook of Pesticide Toxicology WILLIAM C KRIEGER / Academic Press Oct01". Archived from the original on 2016-08-18. Retrieved 2010-04-06.
- ↑ ಮಾರ್ಟಿನ್ ಲೆವೆ (1966), Medieval Arabic Toxicology: The Book on Poisons of ibn Wahshiya and its Relation to Early Native American and Greek Texts
- ↑ Afshari CA, Hamadeh HK (2004). Toxicogenomics: principles and applications. New York: Wiley-Liss. ISBN 0-471-43417-5.
ಪುನರವಲೋಕನ: Omenn GS (2004). "Toxicogenomics: Principles and Applications". Environ Health Perspect. 112 (16): A962. PMC 1247673.{{cite journal}}
: Unknown parameter|month=
ignored (help)
ಹೆಚ್ಚಿನ ಮಾಹಿತಿಗಾಗಿ
[ಬದಲಾಯಿಸಿ]- Nelson, Lewis H.; Flomenbaum, Neal; Goldfrank, Lewis R.; Hoffman, Robert Louis; Howland, Mary Deems; Neal A. Lewin (2006). Goldfrank's toxicologic emergencies. New York: McGraw-Hill, Medical Pub. Division. ISBN 0-07-147914-7.
{{cite book}}
: CS1 maint: multiple names: authors list (link) - ರಿಚರ್ಡ್ಸ್ IS. 2008. Principles and Practice of Toxicology in Public Health. ಜೋನ್ಸ್ ಮತ್ತು ಬರ್ಟ್ಲೆಟ್ ಪ್ರಕಾಶಕರು, ಸಡ್ಬರಿ ಮಸ್ಸಾಚುಸೆಟ್ಸ್.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ToxSeek: Meta search and Clustering Engine for Environmental Health and Toxicology Archived 2011-02-11 ವೇಬ್ಯಾಕ್ ಮೆಷಿನ್ ನಲ್ಲಿ.
- SOT: Society of Toxicology, ವಿಜ್ಞಾನ ಮತ್ತು ವಿಶವೈದ್ಯ ಶಾಸ್ತ್ರಗಳ ಪ್ರಗತಿಯಲ್ಲಿ ಸುರಕ್ಷಿತ ಹಾಗೂ ಆರೋಗ್ಯಕರ ವಿಶ್ವವನ್ನು ಸೃಷ್ಟಿ ಮಾಡುವಲ್ಲಿ SOT ಕಾರ್ಯನಿರ್ವಹಿಸುತ್ತಿದೆ.
- ಗಿಲ್ಬರ್ಟ್ SG. A Small Dose of Toxicology – The Health Effects of Common Chemicals Archived 2012-01-18 ವೇಬ್ಯಾಕ್ ಮೆಷಿನ್ ನಲ್ಲಿ.. CRC ಪ್ರೆಸ್, ಬೋಕಾ ರಾಟನ್, ಫೆಬ್ರವರಿ 2004, ಪು 266.
- Critical Reviews in Toxicology Archived 2015-07-17 ವೇಬ್ಯಾಕ್ ಮೆಷಿನ್ ನಲ್ಲಿ., ವಿಷವೈದ್ಯಶಾಸ್ತ್ರದ ಎಲ್ಲ ರೂಪಗಳನ್ನು ಒಳಗೊಂಡಂತಹ ಶೈಕ್ಷಣಿಕ ಅಧ್ಯಯನ ನಡೆದ ಹಾಗೂ ತೀಕ್ಷ್ಣವಾಗಿ ಪುನರವಲೋಕಿಸಿದಂತಹ ಒಂದು ಪತ್ರಿಕೆ, ಡಾ. ರೋಜರ್ ಒ. ಮೆಕ್ಕ್ಲೆಲ್ಲನ್ ಅವರು ಸಂಪಾದಿಸಿದ್ದು.
- Agency for Toxic Substances and Disease Registry (ATSDR)
- American College of Medical Toxicology
- European Centre for Ecotoxicology and Toxicology of Chemicals
- Department of Health and Human Services National Toxicology Program (NTP)
- American Association of Poison Control Centers (AAPCC)
- Info. Tox. International Inc.
- Pages using the JsonConfig extension
- CS1 errors: unsupported parameter
- Articles that show a Medicine navs template
- Articles with hatnote templates targeting a nonexistent page
- ಉಲ್ಲೇಖಗಳ ಅಗತ್ಯ ಇರುವ ಲೇಖನಗಳು
- CS1 maint: multiple names: authors list
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ವಿಷವೈದ್ಯ ಶಾಸ್ತ್ರ
- ಆರೋಗ್ಯ