ವಿಷಯಕ್ಕೆ ಹೋಗು

ಶಬ್ದ ಮಾಲಿನ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಬೋಯಿಂಗ್ 747-400 ವಿಮಾನ ಲಂಡನ್‌ನ ಹೀಥ್ರೂ ವಿಮಾನನಿಲ್ದಾಣದಲ್ಲಿ ಇಳಿಯುವುದಕ್ಕೂ ಮುನ್ನ ಮನೆಗಳಿಗೆ ಸಮೀಪದಲ್ಲಿ ಹಾದು ಹೋಗುತ್ತಿರುವುದು

ಶಬ್ದ ಮಾಲಿನ್ಯ ಮಾನವ ಅಥವಾ ಪ್ರಾಣಿಗಳ ಜೀವನದ ಮೇಲೆ ದುಷ್ಪರಿಣಾಮ ಬೀರಿ ಅವುಗಳ ಜೀವನ ಚಟುವಟಿಕೆಯ ಸಮತೋಲಕ್ಕೆ ಭಂಗ ತರುವಂಥ, ಮನುಷ್ಯ-ಪ್ರಾಣಿ-ಯಂತ್ರಗಳಿಂದ ಹೊಮ್ಮಿ ಬರುವ ಸಪ್ಪಳಕ್ಕೆ 'ಶಬ್ದ ಮಾಲಿನ್ಯ' ಎನ್ನಲಾಗಿದೆ. ಸಾಮಾನ್ಯವಾಗಿ ಸಾರಿಗೆ, ಅದರಲ್ಲೂ ವಿಶೇಷವಾಗಿ ಮೋಟಾರ್‌ ವಾಹನಸಂಚಾರದಿಂದ ಹೊಮ್ಮುವ ಶಬ್ದ ಈ ಮಲಿನತೆಗೆ ತನ್ನ ಕಾಣಿಕೆ ನೀಡುತ್ತದೆ.

ವಿಶ್ವದಾದ್ಯಂತ ಶಬ್ದಮಾಲಿನ್ಯಕ್ಕೆ ಮುಖ್ಯ ಕಾರಣ ಸಾರಿಗೆ ವ್ಯವಸ್ಥೆ - ಎಂದರೆ ವಿವಿಧ ರೀತಿಯ ವಾಹನಗಳ ಸದ್ದು - ವಿಮಾನದ ಸದ್ದು ಹಾಗೂ ರೈಲುಗಳ ಸದ್ದು ಕೂಡ ಇದರಲ್ಲಿ ಸೇರಿರುತ್ತದೆ.[೧][೨]

ಕಳಪೆ ನಗರ ಯೋಜನೆಗಳ ಕಾರಣದಿಂದಾಗಿ ಅಕ್ಕಪಕ್ಕದಲ್ಲೇ ನಾಯಿಕೊಡೆಗಳಂತೆ ಮೇಲೇಳುತ್ತಿರುವ ಕೈಗಾರಿಕೆಗಳು ಮತ್ತು ಮನೆಗಳು, ವಸತಿ ಪ್ರದೇಶಗಳಲ್ಲಿನ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಕಾರ್‌ ಅಲಾರಮ್‌‌, ತುರ್ತು ಸೇವೆಗಾಗಿ ಬಳಸುವ ಸೈರನ್‌, ಕಚೇರಿ ಪರಿಕರ, ಕಾರ್ಖಾನೆಯ ಯಂತ್ರಗಳು,ನಿರ್ಮಾಣ ಕಾಮಗಾರಿಗಳು, ರಸ್ತೆ, ಚರಂಡಿ ಮುಂತಾದ ನೆಲ ಸಂಬಂಧೀ ದುರಸ್ತಿ ಕಾಮಗಾರಿ, ಬೊಗಳು ನಾಯಿಗಳ ಆರ್ಭಟ, ಸಾಧನ ಸಾಮಗ್ರಿಗಳು, ಯಾಂತ್ರಿಕ ವಿದ್ಯುತ್ ಪರಿಕರಗಳು, ಬೆಳಕು ಬೆಳಗು ದೀಪದ ನಾದ, ಧ್ವನಿ ಮನರಂಜನಾ ಉಪಕರಣಗಳು, ಧ್ವನಿ ವರ್ಧಕಗಳು, ಮತ್ತು ಗಲಾಟೆ ಮಾಡುವ ಜನ-ಇವೆಲ್ಲವೂ ಶಬ್ದ ಮಾಲಿನ್ಯವನ್ನು ಉಂಟುಮಾಡುವ ಇನ್ನಿತರ ಕಾರಣಗಳು .

ಮನುಷ್ಯನ ಆರೋಗ್ಯದ ಮೇಲಿನ ಪರಿಣಾಮ[ಬದಲಾಯಿಸಿ]

ಆರೋಗ್ಯ ಮತ್ತು ವರ್ತನೆಯ ಎರಡರ ಮೇಲೂ ಶಬ್ದದ ದುಷ್ಪರಿಣಾಮ ಆರೋಗ್ಯ.ಆಗುವುದುಂಟು. ಅನಪೇಕ್ಷಿತ ಶಬ್ದವನ್ನು ನಾವು ಸದ್ದು (=noise)ಎನ್ನುತ್ತೇವೆ.ಈ ಅನಪೇಕ್ಷಿತ ಶಬ್ದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳು ಮಾಡುತ್ತದೆ.

ನೆಮ್ಮದಿ ಭಂಗ, ಆಕ್ರಮಣಶೀಲತೆ, ಅಧಿಕ ರಕ್ತದೊತ್ತಡ, ಅತಿಯಾದ ಒತ್ತಡ, ಕಿವಿಮೊರೆತ, ಕಿವುಡುತನ, ನಿದ್ರಾ ಭಂಗ ಮತ್ತು ಇತರೆ ಹಾನಿಕಾರಕ ದುಷ್ಪರಿಣಾಮಗಳನ್ನು ಬೀರಬಲ್ಲ ತಾಕತ್ತಿದೆ ಈ ಶಬ್ದಮಾಲಿನ್ಯಕ್ಕೆ.[೩][೪][೫][೬] ಒತ್ತಡ ಮತ್ತು ತೀವ್ರ ಉದ್ವೇಗಗಳು ಆರೋಗ್ಯದ ಮೇಲೆ ಉಂಟಾಗುವ ಶಬ್ದಮಾಲಿನ್ಯದ ಪ್ರಮುಖ ದುಷ್ಪರಿಣಾಮಗಳು. ಅದೇರೀತಿ ಕಿವಿಮೊರೆತದಿಂದ ಮರೆಗುಳಿತನ, ತೀವ್ರ ಖಿನ್ನತೆ ಮತ್ತು ಕೆಲವು ವೇಳೆ ಭೀತಿ ಆಕ್ರಮಿಸುವಿಕೆಗೂ ಇದು ಕಾರಣವಾಗುತ್ತದೆ.[೪][೭] ಅತಿಯಾದ ಶಬ್ದಕ್ಕೆ ನಿರಂತರವಾಗಿ ಒಳಗಾಗುವುದು ಶಬ್ದ ಪ್ರೇರಿತ ಕಿವುಡುತನಕ್ಕೆ ಕಾರಣವಾಗಬಹುದು.

ಸಾಂಖ್ಯಿಕ ಮಹತ್ವ ಔದ್ಯೋಗಿಕ ಕ್ಷೇತ್ರದಲ್ಲಿನ ಗಣನೀಯ ಶಬ್ದಕ್ಕೆ ಒಳಗಾಗುವ ಇಳಿವಯಸ್ಸಿನ ಪುರುಷರ ಕೇಳುವ ಸೂಕ್ಷ್ಮತೆ ಮಾಮೂಲಿಗಿಂತ ದುರ್ಬಲವಾಗಿರುವ ನಿರ್ದಶನಗಳಿವೆ. ಕೇಳುವ ಸೂಕ್ಷ್ಮತೆ ವಯೋಮಾನಕ್ಕೆ ಅನುಗುಣವಾಗಿ ವ್ಯತ್ಯಾಸಗೊಳ್ಳುವುದಾದರೂ ಶಬ್ದಕ್ಕೆ ಈಡಾದ ಮತ್ತು ಈಡಾಗದಿರುವವರ ನಡುವೆ ೭೯ರ ವಯಸ್ಸಿನ ವೇಳೆಗೆ ಭೇದವೇ ತೋರುವುದಿಲ್ಲ .[೮]

ಸಾರಿಗೆ ಅಥವಾ ಕೈಗಾರಿಕಾ ಶಬ್ದಕ್ಕೆ ಒಡ್ಡಿಕೊಂಡ ಮಾಬಾನ್‌ ಬುಡಕಟ್ಟು ಜನ U.S. ಜನತೆಯೊಂದಿಗೆ ಹೋಲಿಸಿದಾಗ ಉನ್ನತಮಟ್ಟದ ಶಬ್ದ ಮಾಲಿನ್ಯ ಕಿವುಡುತನಕ್ಕೆ ಕಾರಣವಾಗುತ್ತದೆಂದು ತಿಳಿದುಬಂದಿದೆ.[೩]

ಭಾರೀ ಶಬ್ದಗಳು ಕಾರ್ಡಿಯೋವ್ಯಾಸ್ಕುಲರ್‌ಕಾಯಿಲೆಗೆ ಕಾರಣವಾಗಬಹುದು ಮತ್ತು ಸತತ ಎಂಟು ಗಂಟೆಗಳ ಅವಧಿ ಉನ್ನತ ಮಟ್ಟದ ಶಬ್ದಕ್ಕೆ ಒಡ್ಡಿಕೊಂಡಿದ್ದರೆ ಕಾಯಿಲೆಯ ಪ್ರಮಾಣದಲ್ಲಿ ಏರಿಕೆಯಾಗಬಹುದು. ಅಂದರೆ, ಅದರಿಂದ ರಕ್ತದೊತ್ತಡ ಐದು ಪಾಯಿಂಟ್‌ನಿಂದ ಹತ್ತು ಪಾಯಿಂಟ್‌ವರೆಗೆ ಏರಬಹುದು ಮತ್ತು ಒತ್ತಡ (ವೈದ್ಯಕೀಯ) [೩] ಹಾಗೂ ರಕ್ತದೊತ್ತಡವನ್ನು ಹೆಚ್ಚಿಸಬಹುದು.ಇದರಿಂದ ವ್ಯಾಸೋಕನ್‌ಸ್ಟ್ರಿಕ್ಷನ್‌ಕಾರೋನರಿ ಆರ್ಟರಿ ಕಾಯಿಲೆಗಳುತಲಪುವ ನಿದರ್ಶನಗಳೂ ಇವೆ. ಶಬ್ದ ಮಾಲಿನ್ಯ ಮಾನಸಿಕ ಮುಜುಗರಕ್ಕೆ ಈಡಾಗುವಂತೆ ಮಾಡುತ್ತದೆ . ನಗರ ಪ್ರದೇಶದ ಜನರು ಪ್ರತಿ ವರ್ಷ ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಲು ಒಂದು ಡೆಸಿಬಲ್‌ಗೆ ಅಂದಾಜು ನಾಲ್ಕು ಯೂರೋ ಹಣ ಕೊಡಲು ಸಿದ್ಧರಿದ್ದಾರೆ ಎನ್ನುವುದನ್ನು ಸ್ಪ್ಯಾನಿಷ್‌ ಸಂಶೋಧಕರ ತಂಡ ೨೦೦೫ರಲ್ಲಿ ನಡೆಸಿದ ಅಧ್ಯಯನ ತೋರಿಸಿದೆ.[೯]

ಪರಿಸರದ ಮೇಲಿನ ಪರಿಣಾಮಗಳು[ಬದಲಾಯಿಸಿ]

ಶಬ್ದ ಮಾಲಿನ್ಯ ಮಾಂಸಭಕ್ಷಕ ಪ್ರಾಣಿಗಳ ಸುಳಿವನ್ನು ಪತ್ತೆ ಹಚ್ಚುವಲ್ಲಿ ಮತ್ತು ಸಾವಿನ ದಡವೆಯಿಂದ ತಪ್ಪಿಸಿಕೊಳ್ಳುವಲ್ಲಿ ಇತರೆ ಪ್ರಾಣಿಗಳು ವಿಫಲವಾಗುವಂತೆ ಮಾಡಿ ಸಾವಿನ ಭೀತಿಯಲ್ಲೇ ಬದುಕುವಂತೆ ಮಾಡುತ್ತದೆ. ಇದರಿಂದ ಅಮಾಯಕ ಪ್ರಾಣಿಗಳ ಸಾವಿನ ಅಪಾಯ ಹೆಚ್ಚುತ್ತದೆ. ಅಲ್ಲದೆ ಈ ಪ್ರಾಣಿಗಳು ತಮ್ಮ ಸಂಪರ್ಕದಲ್ಲಿ ವಿಶೇಷವಾಗಿ ಸಂತಾನೋತ್ಪತ್ತಿ ಮತ್ತು ಆಹಾರ ಅನ್ವೇಷಣೆಯ ವಿಚಾರದಲ್ಲಿ ಇಂಥ ಶಬ್ದ ಅಡಚಣೆಯಾಗುತ್ತದೆ. ಪ್ರಕೃತಿಯ ಸೂಕ್ಷ್ಮ ಸಮತೋಲನವನ್ನು ಹಾಳುಗೆಡಹುವ ಶಬ್ದ ಮಾಲಿನ್ಯ ಪ್ರಾಣಿಗಳ ಮೇಲೆ ವಿನಾಶಕರ ಪರಿಣಾಮವನ್ನು ಬೀರುತ್ತದೆ.

ಸ್ಪೋಟಕಗಳ ಅತಿಯಾದ ಸದ್ದಿನಿಂದಾಗಿ ತಾತ್ಕಾಲಿಕ ಇಲ್ಲವೇ ಶಾಶ್ವತ ಕಿವುಡುತನ ಆವರಿಸಬಹುದು.[೧೦]

ಶಬ್ದ ಮಾಲಿನ್ಯ ಪ್ರಾಣಿಗಳ ವಾಸಯೋಗ್ಯ ಸ್ವಾಭಾವಿಕ ನೆಲೆಗಳ ಪ್ರಮಾಣವನ್ನು ಕುಗ್ಗಿಸುತ್ತವೆ.ಅಪಾಯದ ಅಂಚಿನಲ್ಲಿರುವ ಪ್ರಾಣಿ ಪ್ರಬೇಧಗಳನ್ನು ನಿರ್ಣಾಮಕ್ಕೆ ಇಲ್ಲಿಂದ ಹಾದಿ ಆರಂ.

ಸೆನಾ ಪಡೆಯ ಸೋನಾರ್‌ (ಜಲಾಂತರ ದೂರ ಸಂವೇದಿ ಉಪಕರಣ) ಉಂಟುಮಾಡಿದ ಬಾರೀ ಸದ್ದು ಬೀಚ್ಡ್‌ ವೇಲ್‌ (ಕಡಲ ಕಿನಾರೆಯ ತಿಮಿಂಗಿಲ)ನ ಕೆಲವು ಪ್ರಬೇಧಗಳ ಸಾವಿಗೆ ಕಾರಣಾವಾಗಿದ್ದು, ಶಬ್ದಮಾಲಿನ್ಯ ಏನೆಲ್ಲ ಹಾಳುಂಟು ಮಾಡಬಲ್ಲದು ಎಂಬುದಕ್ಕೆ ಒಂದು ನಿದರ್ಶನ.

ಶಬ್ದವು ಪ್ರಾಣಿ ಪ್ರಬೇಧಗಳು ಪರಸ್ಪರ ಸಂವಾದ ನಡೆಸಲು ಜೋರು ಸ್ವರ ಎತ್ತುವ ಅನಿವಾರ್ಯತೆಯನ್ನು ಹುಟ್ಟುಹಾಕುತ್ತದೆ. ಇದನ್ನು ಲಾಮ್‌ಬಾರ್ಡ್‌ ವೋಕಲ್‌ ರೆಸ್ಪಾನ್ಸ್‌ ಎಂದು ಕರೆಯಲಾಗುತ್ತದೆ.[೧೧] ಜಲಾಂತರ್ಗಾಮಿಗಳು ಶಬ್ದ ಮಾಡುವಾಗ ತಿಮಿಂಗಿಲಗಳ ಸ್ವರದ ಉದ್ದ ಹೆಚ್ಚಾಗಿರುತ್ತದೆ ಎನ್ನುವುದನ್ನು ವಿಜ್ಞಾನಿಗಳು ಮತ್ತು ಸಂಶೋಧಕರು ಪ್ರಯೋಗಗಳಿಂದ ಪತ್ತೆ ಮಾಡಿದ್ದಾರೆ.[೧೨] ಒಂದು ವೇಳೆ ಪ್ರಾಣಿಗಳು ಡೊಡ್ಡ ಸದ್ದಿನಲ್ಲಿ "ಮಾತನಾಡದಿದ್ದರೆ" ಮಾನವಜನ್ಯ ಶಬ್ದಗಳಿಂದ ಅವುಗಳ ಕೂಗು ಮಸುಕಾಗಿಬಿಡುತ್ತದೆ. ಕೇಳದೆ ಉಳಿದ ಈ ಧ್ವನಿಗಳು ಮಾಂಸ ಭಕ್ಷಕ ಪ್ರಾಣಿಗಳ ಬೇಟೆಯ ಹೊಂಚು ಅಥವಾ ಬೇಟೆಗಾರರ ಬೀಸುವ ಬಲೆಗೆ ಬಹುಶಃ ಎಚ್ಚರಿಕೆಗಳಾಗಬಹುದು. ಒಂದು ಪ್ರಬೇಧದ ಪ್ರಾಣಿ ಜೋರಾಗಿ ಕೂಗಿದಾಗ ಅದು ಬೇರೊಂದು ಪ್ರಾಣಿಯ ಸದ್ದನ್ನು ಸಾಕಷ್ಟು ಅಡಗಿಸುತ್ತದೆ. ಹೀಗಾಗಿ ಇತರ ಪ್ರಾಣಿಗಳು ಜೋರಾಗಿ ಕೂಗಬೇಕಾಗುತ್ತದೆ. ಅಂತಿಮವಾಗಿ ಇಡೀ ನಿಸರ್ಗ ವ್ಯವಸ್ಥೆಯೇ ಜೋರಾಗಿ ಕೂಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಹಗಲಿನ ಹೊತ್ತು ಶಬ್ದಮಾಲಿನ್ಯವಿರುವ ಪ್ರದೇಶಗಳಲ್ಲಿ, ನಗರ ಪ್ರದೇಶದಲ್ಲಿ ವಾಸಿಸುವ ಯೂರೋಪಿಯನ್‌ ರಾಬಿನ್‌ ಪ್ರಭೇದದ ಪಕ್ಷಿಗಳು, ರಾತ್ರಿಯಲ್ಲೇ ಹಾಡುತ್ತವೆ.[೧೩]

ರಾತ್ರಿಯ ಲಘು ಶಬ್ದಕ್ಕಿಂತ ಹಗಲಿನ ಶಬ್ದ ಜೋರು. ಈ ನಿಶಾಚರ ಪ್ರಾಣಿಯ ಹಾಡುಗಾರಿಕೆ ರಾತ್ರಿಗಿಂತ ಹಗಲಿನಲ್ಲಿ ಎತ್ತರದ ಸ್ವರದಲ್ಲಿ ಇರುತ್ತದೆಂಬ ಸ್ವಾರಸ್ಯದ ಸಂಗತಿ ಇದೇ ಅಧ್ಯಯನದಿಂದ ಬಯಲಾಯಿತು. ಅಧಿಕ ಸಾರಿಗೆ ಸಪ್ಪಳಕ್ಕೆ ಒಳಗಾದ ಜೀಬ್ರಾ ಫಿಂಚ್‌‌ಜೀಬ್ರಾ ಫಿಂಚ್‌ ಪಕ್ಷಿಗಳು ತಮ್ಮ ಸಂಗಾತಿಗಳಲ್ಲಿನ ನಿಷ್ಠೆ ಕಡಿತ ಮಾಡಿದವು. ಇತರೆ ಚಟುವಟಿಕೆಗಳಿಗಾಗಿ ಇರುವ ವಿಶಿಷ್ಟ ಗುಣ ಶಕ್ತಿಯನ್ನು ಇದು ಕುಂದಿಸುತ್ತದೆ. ಜನಸಂಖ್ಯೆಯ ವಿಕಾಸದ ಪಥವನ್ನು ಬದಲಾಯಿಸುತ್ತದೆ. ಅಲ್ಲದೆ ಗಂಭೀರವಾದ ವಂಶೀಯ (ಜಿನೆಟಿಕ್‌) ಮತ್ತು ವಿಕಾಸನ ಕ್ರಿಯೆಯ ಮೇಲೆ ಭಾರೀ ಪರಿಣಾಮಗಳನ್ನು ಉಂಟು ಮಾಡಬಲ್ಲ ಪ್ರಬಲ ಶಕ್ತಿ ಇದಕ್ಕೆ ಇದೆ.[೧೪]

UKಯಲ್ಲಿ ಶಬ್ದ ಮಾಲಿನ್ಯದ ಪರಿಣಾಮ[ಬದಲಾಯಿಸಿ]

ಮಾಹಿತಿ ಸ್ವಾತಂತ್ರ್ಯ ಕಾಯಿದೆ(FOI) ಕೋರಿಕೆಗೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿಗಳ ಪ್ರತಿಕ್ರಿಯೆಗಳನ್ನು ಆಧರಿಸಿ ಖನಿಜ ಉಣ್ಣೆ ಪದಾರ್ಥಗಳ ತಯಾರಕರಾದ ರಾಕ್‌ವೂಲ್‌ ಸಂಗ್ರಹಿಸಿದ ಅಂಕಿ ಅಂಶಗಳು ಏಪ್ರಿಲ್‌ ೨೦೦೮-೨೦೦೯ರಲ್ಲಿ UK ಕೌನ್ಸಿಲ್‌ಗೆ UK ನಿವಾಸಿಗಳಿಂದ ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದಂತೆ ೩೧೫,೮೩೮ ದೂರುಗಳು ಬಂದವು.

ಆಂಟಿ-ಸೋಷಿಯಲ್‌ ಬಿಹೇವಿಯರ್‌ (ಸ್ಕಾಟ್ಲೆಂಡ್‌)ಆಕ್ಟ್‌ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪರಿಸರಾರೋಗ್ಯ ಕಾಪಾಡುವ ಅಧಿಕಾರಿಗಳ ಮೇಲೆ ಪರಿಣಾಮ ಬೀರಿತು. ಶಬ್ದ ಇಳಿಸುವಂತೆ ೮,೦೬೯ ಅಧಿಕಾರಿಗಳಿಗೆ ನೋಟೀಸ್ ನೀಡಲಾಯಿತು ಕಳೆದ ೧೨ ತಿಂಗಳ ಅವಧಿಯಲ್ಲಿ ೫೨೪ ಭಾರೀ ಸ್ವರದ ಧ್ವನಿ ವರ್ಧಕಗಳು, ಸ್ಟಿರಿಯೋಗಳು ಮತ್ತು ಟೆಲಿವಿಷನ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. UKಯಲ್ಲಿ ಬೇರೆಲ್ಲ ಜಿಲ್ಲೆಗಳಿಗಿಂತ ವೆಸ್ಟ್‌ಮಿನಿಸ್ಟರ್‌ ನಗರ ಸಭೆಗೆ ಶಬ್ದ ಕುರಿತಂತೆ ಅತಿ ಹೆಚ್ಚಿನ ೯,೮೧೪ ಅಸಮಾಧಾನದ ದೂರುಗಳು ಬಂದವು. ಒಂದು ಸಾವಿರಕ್ಕೆ ೪೨.೩೨ ನಿವಾಸಿಗಳು ದೂರಿಗೆ ಇದು ಸಮ. ೧೦೦೦ ನಿವಾಸಿಗಳಿಂದ ತಲಾ ಒಂದು ದೂರು ಎಂಬ ಲೆಕ್ಕದಆಧಾರದ ಮೇಲೆ ನೀಡಲಾಗಿರುವ ಟಾಪ್‌ ೧೦ ಶ್ರೇಯಾಂಕದ ಕೌನ್ಸಿಲ್‌ಗಳಲ್ಲಿ ಎಂಟು ಕೌನ್ಸಿಲ್‌ಗಳು ಲಂಡನ್‌ನಲ್ಲೇ ಇವೆ.[೧೫]

ಶಬ್ದದ ಉಪಶಮನ ಮತ್ತು ನಿಯಂತ್ರಣ[ಬದಲಾಯಿಸಿ]

ಮೆಲ್ಬೋರ್ನ್‌ನಲ್ಲಿ ಶಬ್ದದ ಟ್ಯೂಬ್‌, ಆಸ್ಟ್ರೇಲಿಯ , ಪ್ರಾದೇಶಿಕ ಸೌಂದರ್ಯವನ್ನು ಹಾಳುಮಾಡಡೆ ರಸ್ತೆಮಾರ್ಗದ ಶಬ್ದವನ್ನು ಕಡಿಮೆ ಮಾಡಲೆಂದೇ ವಿನ್ಯಾಸಗೊಳಿಸಲಾಗಿದೆ.

ಶಬ್ದವನ್ನು ತಗ್ಗಿಸಲು ಅಥವಾ ತೆಗೆದುಹಾಕಲು ಬಳಸುವ ತಂತ್ರಜ್ಞಾನವನ್ನು ಈ ಕೆಳಕಂಡಂತೆ ಅನ್ವಯಿಸಬಹುದು . ರಸ್ತೆಮಾರ್ಗದ ಶಬ್ದವನ್ನು ತಗ್ಗಿಸಲು ಹಲವು ಕಾರ್ಯತಂತ್ರಗಳಿವೆ. ಅವುಗಳೆಂದರೆ: ಶಬ್ದ ನಿರೋಧಕಗಳ ಬಳಕೆ, ವಾಹನಗಳ ವೇಗ ನಿಯಂತ್ರಣ, ರಸ್ತೆಯ ಮೇಲ್ಮೈ ಸ್ವರೂಪದ ಸುಧಾರಣೆ, ಭಾರಿ ವಾಹನಗಳ ಮೇಲೆ ನಿಯಂತ್ರಣ ಹೇರಿಕೆ, ವೇಗ ವರ್ಧಕವನ್ನು ಕಡಿಮೆ ಮಾಡುವ ಮತ್ತು ಸರಾಗ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಸಂಚಾರಿ ನಿಯಂತ್ರಣಗಳ ಬಳಕೆ ಮತ್ತು ಟೈರ್‌ಗಳ ವಿನೂತನ ವಿನ್ಯಾಸ. ಈ ಕಾರ್ಯತಂತ್ರಗಳ ಅಳವಡಿಕೆಯಲ್ಲಿರುವ ಒಂದು ಮುಖ್ಯವಾದ ಅಂಶವೆಂದರೆ, ರಸ್ತೆಮಾರ್ಗದ ಶಬ್ದಕ್ಕೆ ಕಂಪ್ಯೂಟರ್‌ ಅಳವಡಿಸುವುದು. ಇದು ನಿರ್ದಿಷ್ಟ ಪ್ರಾದೇಶಿಕ ಲಕ್ಷಣ, ಅಲ್ಲಿಯ ಹವಾಮಾನ, ಸಂಚಾರಿ ಕಾರ್ಯಾಚರಣೆ ಮತ್ತು ಊಹಾತ್ಮಕ ಏರಿಳಿಕೆ ಮುಂತಾದ ವಿಚಾರಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಈ ಕಂಪ್ಯೂಟರ್ ಹೊಂದಿರಬೇಕು. ರಸ್ತೆಯ ನಿರ್ಮಣಕ್ಕೂ ಮೊದಲು ಮೇಲಿನ ಅಂಶಗಳನ್ನು ಚಾಚೂ ತಪ್ಪದೆ ಯೋಜಿಸಲ್ಪಟ್ಟರೆ ಮಾತ್ರ ವೆಚ್ಚಗಳನ್ನು ಸಾಧಾರಣ ಮಟ್ಟಕ್ಕೆ ತಗ್ಗಿಸುವುದು ಸಾಧ್ಯ.

ನಿಶ್ಯಬ್ದಜೆಟ್‌ ಎಂಜಿನ್‌ಗಳನ್ನು ವಿನ್ಯಾಸಗೊಳಿಸುವ ಮೂಲಕ ವಿಮಾನ ಹೊರಸೂಸುವ ಶಬ್ದವನ್ನು ಒಂದು ಹಂತದವರೆಗೆ ಕಡಿಮೆ ಮಾಡಬಹುದು. ಈ ಕಾರ್ಯ ೧೯೭೦ ಮತ್ತು ೯೮೦ರಲ್ಲಿ ಇದರ ಬೆನ್ನಿಗೆ ಹತ್ತಲಾಗಿತ್ತು. ಈ ಕಾರ್ಯತಂತ್ರ ನಗರ ಪ್ರದೇಶದ ಶಬ್ದದ ಮಟ್ಟವನ್ನು ಸೀಮಿತವಾಗಿ ತಗ್ಗಿಸಿತ್ತಾದರೂ ಅದು ಗಮನಾರ್ಹವೆ ಆಗಿತ್ತು.

ವಿಮಾನಗಳ ಮಾರ್ಗಗಳನ್ನು ಮತ್ತು ರನ್‌ವೇ ಬಳಕೆಯ ಸಮಯವನ್ನು ಬದಲಾಯಿಸುವುದು, ಕಾರ್ಯಾಚರಣೆಗಳ ಪುನರ್‌ಪರಿಶೀಲನೆ(=ಪನರ್‌ಪರಿಗಣನೆ) ವಿಮಾನ ನಿಲ್ದಾಣಗಳಿಗೆ ಸಮೀಪ ವಾಸಿಸುವ ಜನತೆಗೆ ಪ್ರಯೋಜನಕಾರಿಯಾಯಿತು. ೧೯೭೦ರಲ್ಲಿ ಆರಂಭಿಸಲಾದ FAA ಪ್ರಾಯೋಜಿತ ಗೃಹ ಮರುಸುಧಾರಣೆ (ಇನ್‌ಸಲೇಷನ್‌) ಯೋಜನೆ ಯುನೈಟೆಡ್‌ ಸ್ಟೇಟ್ಸ್‌ನಾದ್ಯಂತ ಸಾವಿರಾರು ಮನೆಗಳಲ್ಲಿ ವಾಸಯೋಗ್ಯ ಮನೆಯೊಳಗಿನ ಸದ್ದನ್ನು ಇಳಿಕೆ ಮಾಡಿದ ಯಶಸ್ಸನ್ನು ಸಂಭ್ರಮಿಸಿತು. ಕಾರ್ಮಿಕರು ಕೈಗಾರಿಕಾ ಶಬ್ದಕ್ಕೆ ತುತ್ತಾಗಿರುವುದನ್ನು ೧೯೩೦ರಿಂದಲೂ ಪ್ರಸ್ತಾಪಿಸುತ್ತಲೇ ಇದೆ. ಕೈಗಾರಿಕಾ ಪರಿಕರಗಳ ಮರುವಿನ್ಯಾಸ, ಯೋತ್ರಗಳಿಗೆ ಕಂಪನ ತಡೆವ ಪೀಠ ಮತ್ತು ಕಾರ್ಯಸ್ಥಾನಗಳಲ್ಲಿ ದೈಹಿಕ ತಡೆ ಮುಂತಾದ ಬದಲಾವಣೆಗಳನ್ನು ಸೂಚಿಸಲಾಗಿತ್ತು.

ರಾಷ್ಟ್ರೀಯ ಶಬ್ದ ಮಾಲಿನ್ಯ ವಿರೋಧಿ ಸಂಘಟನೆ, ಸರ್ಕಾರದ ಎಲ್ಲ ಹಂತಗಳಲ್ಲಿ ಶಬ್ದ ಮಾಲಿನ್ಯದ ನಿಯಂತ್ರಣ ಜಾರಿ ಮಾಡುವುದನ್ನು ಕಡ್ಡಾಯಗೊಳಿಸಲು ಆದೇಶ ಹೊರಡಿಸುವಂತೆ ನಾಯ್ಸ್‌ ಫ್ರೀ ಅಮೆರಿಕಒತ್ತಡ ಹೇರುತ್ತಲೇ ಬಂದಿದೆ.[೧೬]

ಶಾಸನಬದ್ಧ ಸ್ಥಾನಮಾನ[ಬದಲಾಯಿಸಿ]

೧೯೭೦ರವರೆಗೆ ಸರ್ಕಾರಗಳು ಶಬ್ದವನ್ನು "ಅನಿಷ್ಟ"ವೆಂದು ಪರಿಗಣಿಸಿದ್ದವೇ ವಿನಾ ಇದೊಂದು ಪರಿಸರದ ಸಮಸ್ಯೆ ಎಂದು ಗಮನಿಸಿಯೇ ಇರಲಿಲ್ಲ. ಹೆದ್ದಾರಿ ಮತ್ತು ವಿಮಾನ ಸೂಸುವ ಶಬ್ದಕ್ಕೆಯುನೈಟೆಡ್‌ ಸ್ಟ್ರೇಟ್ಸ್‌‌ನಲ್ಲಿ ಫೆಡರಲ್‌ ಮಾನದಂಡಗಳಿವೆ. ಸ್ಟೇಟ್ಸ್ ಮತ್ತು ಸ್ಥಳೀಯ ಸರ್ಕಾರಗಳುಕಟ್ಟಡ ಸಂಹಿತೆ, ನಗರ ಯೋಜನೆಮತ್ತು ರಸ್ತೆಮಾರ್ಗಗಳ ಅಭಿವೃದ್ಧಿಗೆ ಪ್ರತ್ಯೇಕವಾದ ಮತ್ತು ನಿರ್ದಿಷ್ಟವಾದ ಕಾನೂನುಗಳನ್ನು ರೂಪಿಸಿವೆ. ಶಬ್ದದ ವಿರುದ್ಧ ರಕ್ಷಣೆ ನೀಡಲು ಕೆಲವು ರಾಷ್ಟ್ರೀಯ, ಪ್ರಾಂತೀಯ ಅಥವಾ ರಾಜ್ಯಮಟ್ಟದ ಕಾನೂನುಗಳು ಕೆನಡಾ ಮತ್ತು EUಗಳಲ್ಲಿ ಇಲ್ಲವೆಂದೇ ಹೇಳಬಹುದು.

ಶಬ್ದ ಸಂಬಂಧೀ ನಿಯಮಗಳು ಮತ್ತು ನಿಯಂತ್ರಣಗಳು ನಗರಾಡಳಿತಗಳಲ್ಲಿ ವಿಸ್ತೃತವಾಗಿವೆ ಮತ್ತು ವಾಸ್ತವವಾಗಿ ಕೆಲವು ನಗರಗಳಲ್ಲಿ ಅಸ್ತಿತ್ವದಲ್ಲಿ ಇಲ್ಲವೇ ಇಲ್ಲ. ಕಿರಿಕಿರಿ ಉಂಟುಮಾಡುವ ಶಬ್ದ ಮಾಡುವುದನ್ನು ನಿಷೇಧಿಸುವ ಇಲ್ಲವೇ ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ಸ್ಥಳದಲ್ಲಿ ಮತ್ತು ನಿರ್ದಿಷ್ಟ ಚಟುವಟಿಕೆಗಳಲ್ಲಿ ಅಂಗೀಕಾರಾರ್ಹ ಶಬ್ದಕ್ಕಾಗಿ ನಿರ್ದಿಷ್ಟ ವಾದ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿರಬಹುದಾದ ಸಾಮಾನ್ಯವಾದ ನಿಯಮವೊಂದಿರಬಹುದಷ್ಟೇ.

Dr.ಪೌಲ್‌ ಹರ್ಮನ್‌ ೧೯೭೫ರಲ್ಲಿ ಮೊದಲು ಪೋರ್ಟ್‌ಲೆಂಡ್‌ನ ಓರಿಗಾನ್‌ ನಗರಕ್ಕಾಗಿ ಸಮಗ್ರ ಶಬ್ದ ಸಂಹಿತೆಯೊಂದನ್ನು ರಚಿದರು. ಇದಕ್ಕೆ EPA (ಪರಿಸರ ರಕ್ಷಣಾ ಏಜೆನ್ಸಿ) ಮತ್ತು HUD (ಗೃಹ ಮತ್ತು ನಗರಾಭಿವೃದ್ಧಿ ) ಸಂಸ್ಥೆಗಳು ಧನ ಸಹಾಯ ಮಾಡಿದವು. US ಮತ್ತು ಕೆನಡಾದ ಪ್ರಮಖ ಮಹಾನಗರ ಪ್ರದೇಶಗಳಿಗೆ ಪೋರ್ಟ್‌ಲೆಂಡ್‌ ಶಬ್ದ ಸಂಹಿತೆ ಇತರೆ ಬಹುತೇಕ ನಿಯಂತ್ರಣಗಳಿಗೆ ಅಡಿಪಾಯವಾದವು.[೧೭]

ಬಹುತೇಕ ನಗರ ನಿಯಂತ್ರಣ ಕಾನೂನುಗಳು ರಾತ್ರಿ ವೇಳೆಯಲ್ಲಿ (ರಾತ್ರಿ ೧೦ ಗಂಟೆಯಿಂದ ಮತ್ತು ಬೆಳಗ್ಗೆ ೬ ಗಂಟೆಯವರೆಗೆ) ಮನೆಗಳ ಮುಂದೆ ಹಾದು ಹೋಗುವ ವಾಹನದ ಸಪ್ಪಳದ ತೀವ್ರತೆಯನ್ನು ನಿರ್ಬಂಧಿಸಿವೆ. ಶಬ್ಧದ ಮೇಲಿನ ತೀವ್ರತೆಯನ್ನು ಹಗಲಿನಲ್ಲಿ ರಾತ್ರಿಗಿಂತ ಕೊಂಚ ಹೆಚ್ಚಿಡಲಾಗಿದೆ. ಆದರೂ ನಿಯಮಗಳ ಜಾರಿಯಲ್ಲಿ ಏಕರೂಪತೆ ಇಲ್ಲ. ದೂರುಗಳಿಗೆ ಕಿವಿಕೊಡದ ನಗರಾಡಳಿತಗಳೇ ಹೆಚ್ಚೆನ್ನಬಹುದು. ಕಾನೂನುಗಳನ್ನು ಜಾರೀಗೊಳಿಸುವ ಅಧಿಕಾರಿಯನ್ನು ಹೊಂದಿರುವ ನಗರಾಡಳಿತಗಳು ಕೂಡ, ತಪ್ಪಿತಸ್ತರನ್ನು ಕೋರ್ಟಿಗೆ ಎಳೆಯುವುದು ವೆಚ್ಚದಾಯಕವೆಂದು ಭಾವಿಸಿ ಕೇವಲ ಎಚ್ಚರಿಕೆ ನೋಟಿಸ್‌ಗಳನ್ನು ನೀಡುವುದಲ್ಲೇ ತಮ್ಮ ಕೆಲಸ ಮುಗಿಸಿ ಬಿಡುತ್ತಾರೆ. ಪೋರ್ಟ್‌ಲೆಂಡ್‌ನ ಓರಿಗಾನ್‌ ನಗರ ಇದಕ್ಕೆ ಗಮನಾರ್ಹವಾದ ಅಪವಾದ. ತನ್ನ ಪೌರರಿಗೆ ರಕ್ಷಣೆಗಾಗಿ ಪ್ರಬಲ ಕಾನೂನನ್ನು ಹೊಂದಿದ್ದು, ಪ್ರತಿ ಉಲ್ಲಂಘನೆಗೆ $೫೦೦೦ವರೆಗೂ ದಂಡ ವಿಧಿಸುತ್ತದೆ. ಒಂದೇ ನಿಯಮ ಮೀರುವ ಶಬ್ದ ಭಂಜಕರನ್ನು ಒಂದೇ ದಿನದಲ್ಲಿ ಹಲವು ಬಾರಿ ಅಧಿಕೃತವಾಗಿ ದಾಖಲಿಸುವ ಸಾಮರ್ಥ್ಯ ಈ ನಗರಾಡಳಿತಕ್ಕಿದೆ. ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದ ಹಲವು ಸಂಘರ್ಷಗಳು ಶಬ್ದೋತ್ಪಾದಕ ಮತ್ತು ಸ್ವೀಕೃತನ(ಶಬ್ದ ಮಾಲಿನ್ಯಕ್ಕೆ ಒಳಗಾಗುವವನು) ನಡುವೆ ಪರಸ್ಪರ ಇತ್ಯರ್ಥವಾಗುತ್ತವೆ.

ದೇಶದಿಂದ ದೇಶಕ್ಕೆ ಮೇಲ್ಮನವಿ ಕಾರ್ಯವಿಧಾನಗಳು ಬದಲಾಗುತ್ತವೆ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ವಿಶೇಷವಾಗಿ ಪೊಲೀಸ ಅಧಿಕಾರಿ ಜೊತೆ ಈ ವಿಚಾರಣಾ ಕ್ರಮ ಒಳಗೊಂಡಿರಬಹುದು. ಈ ಮಲಿನತೆಯ ದುಷ್ಪಪರಿಣಾಮಕ್ಕೆ ಒಳಗಾಗುವವರಲ್ಲಿ ಕೇವಲ ಶೇಕಡ ಐದರಿಂದ ಹತ್ತರಷ್ಟು ಜನ ಮಾತ್ರ ದೂರನ್ನು ದಾಖಲಿಸುತ್ತಾರೆ.ಹೀಗಾಗಿ ಶಬ್ದ ಮಾಲಿನ್ಯ ಮುಂದುವರೆದೇ ಇದೆ. ಪ್ರಶಾಂತವಾಗಿರುವುದು ತಮ್ಮ ಕಾನೂನಾತ್ಮಕ ಹಕ್ಕು ಎಂಬುದರ ಅರಿವು ಹಲವರಿಗಿಲ್ಲ ಅಲ್ಲದೆ ಶಬ್ದ ಮಾಲಿನ್ಯ ಮಾಡುವವರ ವಿರುದ್ಧ ಹೇಗೆ ದೂರು ದಾಖಲಿಸಬೇಕೆಂದೂ ಅನೇಕರಿಗೆ ಗೊತ್ತಿಲ್ಲ.

ಇದನ್ನೂ ನೋಡಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. ಉಲ್ಲೇಖ ದೋಷ: Invalid <ref> tag; no text was provided for refs named Senate
 2. C. ಮೈಕೇಲ್ ಹೋಗನ್‌ ಮತ್ತು ಗೇರಿ L. ಲಾತ್‌ಷಾ, ಹೆದ್ದಾರಿ ಯೋಜನೆ ಮತ್ತು ಯೂರಿಷನ್‌ ವಿಶೇಷತಾ ಸಮ್ಮೇಳನಗಳ ನಡುವಿನ ಸಂಬಂಧ ಮೇ 21-23, 1973, ಚಿಕಾಗೋ, ಇಲಿನಾಯ್ಸ್‌. ಅಮೆರಿಕನ್‌ ಸೊಸೈಟಿ ಆಫ್‌ ಸಿವಿಲ್‌ ಎಂಜಿನಯರ್ಸ್‌ ಇವರಿಂದ. Archived 2007-05-18 ವೇಬ್ಯಾಕ್ ಮೆಷಿನ್ ನಲ್ಲಿ. ನಗರ ಸಾರಿಗೆ ವಿಭಾಗ Archived 2007-05-18 ವೇಬ್ಯಾಕ್ ಮೆಷಿನ್ ನಲ್ಲಿ.
 3. ೩.೦ ೩.೧ ೩.೨ S. ರೋಸನ್‌ ಮತ್ತು P. ಓಲಿನ್‌, ಕಿವುಡಿತನ ಮತ್ತು ಕಾರೋನರಿ ಹೃದ್ರೋಗ ,ಒಂಟೊಲರಿಂಗೋಲಜಿದಾಖಲೆಗಳು , ೮೨:೨೩೬ (೧೯೬೫)
 4. ೪.೦ ೪.೧ J.M. ಫೀಲ್ಡ್‌ , ಗೃಹ ಪ್ರದೇಶಗಳಲ್ಲಿ ಶಾಬ್ದಿಕ ಕಿರಿಕಿರಿಯ ಮೇಲಿನ ವೈಯಕ್ತಿಕ ಮತ್ತು ಸಾಂದರ್ಭಿಕ ಅಸ್ಥಿರತೆಗಳ ಪರಿಣಾಮಗಳು , ಜರ್ನಲ್‌ ಆಫ್‌ ಅಕಾಸ್ಟಿಕಲ್‌ ಸೊಸೈಟಿ ಆಫ್‌ ಅಮೆರಿಕ, ೯೩: ೨೭೫೩-೨೭೬೩ (೧೯೯೩)
 5. "Noise Pollution". World Health Organisation. Archived from the original on 2010-01-08. Retrieved 2009-10-28.
 6. "Road noise link to blood pressure". BBC News.
 7. ಕಾರ್ಲ್‌ D. ಕ್ರಿಟರ್‌, ಮನುಷ್ಯನ ಮೇಲೆ ಶಬ್ದದ ಪರಿಣಾಮಗಳು , ಅಕಾಡೆಮಿಕ್‌ ಪ್ರೆಸ್‌‌ (೧೯೮೫)
 8. Rosenhall U, Pedersen K, Svanborg A (1990). "Presbycusis and noise-induced hearing loss". Ear Hear. 11 (4): 257–63. doi:10.1097/00003446-199008000-00002. PMID 2210099.{{cite journal}}: CS1 maint: multiple names: authors list (link)
 9. ಜೀಸಸ್‌ ಬ್ಯಾರ್ರೀರೋ, ಮರ್ಸಿಡೆಸ್‌ ಸ್ಯಾನ್‌ಚೆಸ್‌, ಮಾಂಟೆಸ್ಸೆರಾಟ್‌ ವಿಲಾದ್ರಿಚ್‌-ಗುರು (೨೦೦೫), "ನಿಶ್ಯಬ್ದಕ್ಕಾಗಿ ಜನ ಎಷ್ಟು ತೆರಲು ಸಿದ್ಧರಿದ್ದಾರೆ? ಒಂದು ಸಂಭವನೀಯ ಮೌಲ್ಯನಿರ್ಣಯ ಅಧ್ಯಯನ ", ಅನ್ವಯಿಕೆ ಅರ್ಥಶಾಸ್ತ್ರ , ೩೭ (೧೧)
 10. "ಸಾಗರ ಪರಿಸರದಲ್ಲಿ ಮಾನವಜನ್ಯ ಶಬ್ದದ ಪರಿಣಾಮಗಳು" (PDF). Archived from the original (PDF) on 2009-03-27. Retrieved 2009-10-28.
 11. "ಆರ್ಕೈವ್ ನಕಲು". Archived from the original on 2017-06-29. Retrieved 2021-07-20.
 12. ಹಮ್‌ಪ್ಯಾಕ್‌ ವೇಲ್‌‌ನಲ್ಲಿ ಪರಿವರ್ತನೆಗಳು (Megaptera novaeangliae) ಕಡಿಮೆ ತರಂಗಾಂತರ ಧ್ವನಿ ಪ್ರಸಾರಕ್ಕೆ ಸಂಬಂಧಿಸಿ ಹಾಡಿನ ಉದ್ದ
 13. Fuller RA, Warren PH, Gaston KJ (2007). "Daytime noise predicts nocturnal singing in urban robins". Biology Letters. 3: 368–70. doi:10.1098/rsbl.2007.0134.{{cite journal}}: CS1 maint: multiple names: authors list (link)
 14. ಮಿಲಿಯಸ್‌, S. (೨೦೦೭ಹೆಚ್ಚಿನ ಪ್ರಮಾಣ, ಕಡಿಮೆ ವಸ್ತುನಿಷ್ಠತೆ: ಶಬ್ದ ಮೊಳಗಿದಾಗ ಹಕ್ಕಿಗಳು ಕಡಿಮೆ ನಂಬಿಕಸ್ಢವಾಗುತ್ತವೆ.ಸೈನ್ಸ್‌ ನ್ಯೂಸ್‌ ಸಂಪುಟ. ೧೭೨, ಪು. ೧೧೬. (ಪರಾಮರ್ಶನಗಳು Archived 2008-04-24 ವೇಬ್ಯಾಕ್ ಮೆಷಿನ್ ನಲ್ಲಿ.)
 15. "London is home to the noisiest neighbours". London Evening Standard. Archived from the original on 2020-05-28. Retrieved 2009-10-28.
 16. http://www.noisefree.org Archived 2011-11-28 ವೇಬ್ಯಾಕ್ ಮೆಷಿನ್ ನಲ್ಲಿ.
 17. ಪೋರ್ಟ್‌ಲೆಂಡ್‌ ನಗರ, ಓರಿಗಾನ್‌. ಲೆಕ್ಕಪರಿಶೋಧಕರ ಕಚೇರಿ. ಅಧ್ಯಾಯ 18.02 ಶೀರ್ಷಿಕೆಶಬ್ದ ನಿಯಂತ್ರಣ. ಏಪ್ರಿಲ್‌ ೨೦, ೨೦೦೯ ರಂದು ಪರಿಷ್ಕರಿಸಲಾಗಿದೆ

ಹೊರಗಿನ ಕೊಂಡಿಗಳು[ಬದಲಾಯಿಸಿ]