ಚರಂಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂದಿನ ಜಗತ್ತಿಗೆ ಭಾರೀ ತಳಮಳದ ಸಂಗತಿ ಎಂದರೆ ಜಲ ಮಾಲಿನ್ಯ. ಈ ಜಲ ಮಾಲಿನ್ಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅನೇಕ ರಾಷ್ಟ್ರಗಳ ಸರಕಾರಗಳು ಹೆಣಗಾಡುತ್ತಿವೆ. ಹಲವಾರು ಮಲಿನ ಪದಾರ್ಥಗಳು ನೀರಿನ ಪೂರೈಕೆ ಮಾಡುವಲ್ಲಿ ಬೆದರಿಕೆಯನ್ನೇ ಒಡ್ಡುತ್ತಿವೆ. ಮಲ ಮೂತ್ರಾದಿಯಾಗಿ ಊರಿನ ರೊಚ್ಚನ್ನು ಯಾವ ಸಂಸ್ಕರಣೆಗೂ ಒಳಪಡಿಸದೇ ನಿಸರ್ಗ ದತ್ತ ಸ್ವಚ್ಛ ನೀರಿಗೆ ಹರಿ ಬಿಡುವುದು ಇವುಗಳಲ್ಲೆಲ್ಲಾ ಅತ್ಯಂತ ಭಯಾನಕ. ಜನ ಸಾಮಾನ್ಯರು ಸಾರ್ವಜನಿಕರು ಸಂಚಾರ ಮಾಡುವ ಮಾರ್ಗ,ಮುಖ್ಯ ರಸ್ತೆ,ಒಳರಸ್ತೆಗಳ ಬದಿಗಳ(ಪಕ್ಕದ)ಲ್ಲಿರುವ ಇನ್ನೂ ಮುಚ್ಚದೆ ಇರುವ ಚರಂಡಿಗಳು,ಹಾಗೂ ಅವುಗಳಲ್ಲಿ ಉಂಟಾಗುವ,ಉತ್ಪತ್ತಿಯಾಗುವ ಕ್ರಿಮಿಗಳು ಕೀಟಗಳು,ಇವುಗಳಿಂದ ಪರಿಸರದಲ್ಲಿ ಉಂಟು ಮಾಡುವ ಭಯಾನಕ ರೋಗ ರುಜಿನಗಳಿಗೂ ಕಾರಣವಾಗಿರುವುದು ಮಾತ್ರವಲ್ಲ ಇವುಗಳಿಂದ ಉತ್ಪತ್ತಿಯಾಗುವ ಕೆಟ್ಟವಾಸನೆ(ದುರ್ನಾಥ)ಯ ಫಲವಾಗಿ ಪರಿಸರದಲ್ಲಿ ನಡೆದಾಡುವ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅತಿಯಾಗಿ ವ್ಯಾಪಿಸಿಕೊಂಡಿರುವ ಈ ಭೀಕರ ಸಮಸ್ಯೆ ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಂಡುಬರುವುದು ಹೆಚ್ಚು.ಅಭಿವೃದ್ಧಿ ಹೊಂದದ ದೇಶಗಳಲ್ಲಂತೂ ಊರಿನ ಹೊಲಸನ್ನು ಈ ರೀತಿಯಾಗಿ ಬಿಡುಗಡೆ ಮಾಡುವುದು ಸರ್ವೇಸಾಮಾನ್ಯ; ಈ ಬಗೆಯಲ್ಲಿ ತ್ಯಾಜ್ಯ ಬಿಡುಗಡೆ ಮಾಡುವುದನ್ನು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಚೀನಾ,ಭಾರತ ಮತ್ತು ಇರಾನ್‌ಗಳೂ ರೂಢಿಸಿಕೊಂಡಿವೆ. ಊರಿನ ಹೊಲಸು, ಜಿಗುಟು ರಾಡಿ, ಕಸ ಮತ್ತು ವಿಷಯುಕ್ತ ಪದಾರ್ಥಗಳನ್ನೂ ಚರಂಡಿಗೆ, ನೀರಿಗೆ ಎಸೆಯಲಾಗುತ್ತದೆ. ಊರಿನ ಹೊಲಸನ್ನು ಸಂಸ್ಕರಿಸಿದರೂ ಸಮಸ್ಯೆ ಮತ್ತೆ ಉದ್ಭವಿಸುತ್ತದೆ. ಸಂಸ್ಕರಣೆಯ ನಂತರ ದೊರೆಯುವ ಹೊಲಸು ಗಟ್ಟಿಗಳು ಅಥವಾ ಪುಡಿ ಪದಾರ್ಥವನ್ನು ಗುಂಡಿಗಳಲ್ಲಿ ತುಂಬಬೇಕು, ಇಲ್ಲವೇ ನೆಲದ ಮೇಲೆ ಹರಡ ಬೇಕು ಅಥವಾ ಸಮುದ್ರಕ್ಕೆ ಎಸೆಯಬೇಕು. ಊರಿನ ಹೊಲಸಷ್ಟೇ ಅಲ್ಲದೇ ಜಮೀನುಗಳಿಂದ ಕೊಚ್ಚಿ ಹರಿದು ಬರುವ ಮಾಲಿನ್ಯ,ಚಂಡಮಾರುತದಿಂದ ಅಪ್ಪಳಿಸುವ ಭಾರೀ ಮಳೆಯಿಂದ ಹರಿದು ಬರುವ ಮಲಿನ ಪದಾರ್ಥ, ಮತ್ತು ಸರಕಾರ ಹಾಗೂ ಕೈಗಾರಿಕೆಗಳಿಂದ ರಾಸಾಯನಿಕ ತ್ಯಾಜ್ಯದ ಸುರಿತ-ಇವೆಲ್ಲವೂ ಜಲ ಮೂಲಿನ್ಯಕ್ಕೆ ಕಾರಣವಾಗುವ ಪ್ರಮುಖ ಅಂಶಗಳು

"https://kn.wikipedia.org/w/index.php?title=ಚರಂಡಿ&oldid=1152337" ಇಂದ ಪಡೆಯಲ್ಪಟ್ಟಿದೆ