ರೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೈಕೊಬ್ಯಾಕ್ಟೀರಿಯಮ್ ಟ್ಯೂಬರ್‍ಕ್ಯುಲೋಸಿಸ್, ಕ್ಷಯರೋಗವನ್ನು ಉಂಟುಮಾಡುವ ಬ್ಯಾಕ್ಟೀರಿಯಾ.

ರೋಗ ಒಂದು ಜೀವಿಯ ಭಾಗ ಅಥವಾ ಎಲ್ಲವನ್ನೂ ಬಾಧಿಸುವ ಒಂದು ನಿರ್ದಿಷ್ಟ ಅಸಹಜ ಸ್ಥಿತಿ, ಒಂದು ರಚನೆ ಅಥವಾ ಕ್ರಿಯೆಯ ಅಸ್ವಸ್ಥತೆ. ರೋಗದ ಅಧ್ಯಯನವನ್ನು ರೋಗ ವಿಜ್ಞಾನವೆಂದು ಕರೆಯಲಾಗುತ್ತದೆ ಮತ್ತು ಇದು ರೋಗನಿದಾನ ಶಾಸ್ತ್ರದ ಅಧ್ಯಯನವನ್ನು ಒಳಗೊಳ್ಳುತ್ತದೆ. ರೋಗವನ್ನು ಹಲವುವೇಳೆ ರೋಗಲಕ್ಷಣಗಳು ಮತ್ತು ವೈದ್ಯಕೀಯ ಚಿಹ್ನೆಗಳಿಗೆ ಸಂಬಂಧಿಸಿದ ವೈದ್ಯಕೀಯ ಸ್ಥಿತಿ ಎಂದು ಅರ್ಥೈಸಲಾಗುತ್ತದೆ. ಅದು ರೋಗಕಾರಕಗಳಂತಹ ಬಾಹ್ಯ ಅಂಶಗಳಿಂದ, ಅಥವಾ ಪ್ರತಿರಕ್ಷಣಾ ಶಕ್ತಿಯ ಕೊರತೆಯಂತಹ ವಿಶೇಷವಾಗಿ ಪ್ರತಿರಕ್ಷಣಾ ವ್ಯವಸ್ಥೆಯ ಆಂತರಿಕ ಅಪಸಾಮಾನ್ಯ ಕ್ರಿಯೆಗಳಿಂದ, ಅಥವಾ ಅಲರ್ಜಿಗಳು ಮತ್ತು ಸ್ವರಕ್ಷಣೆಯನ್ನು ಒಳಗೊಂಡಂತೆ ಅತಿಸೂಕ್ಷ್ಮತೆಯಿಂದ ಉಂಟಾಗಿರಬಹುದು.

ಮಾನವರಲ್ಲಿ, ರೋಗ ಪದವನ್ನು ಹಲವುವೇಳೆ ಸ್ಥೂಲವಾಗಿ ಪೀಡಿತ ವ್ಯಕ್ತಿಗೆ ನೋವು, ಅಪಸಾಮಾನ್ಯತೆ, ಸಂಕಟ, ಸಾಮಾಜಿಕ ಸಮಸ್ಯೆಗಳು, ಅಥವಾ ಸಾವನ್ನು ಉಂಟುಮಾಡುವ, ಅಥವಾ ಆ ವ್ಯಕ್ತಿಯ ಸಂಪರ್ಕದಲ್ಲಿರುವವರಿಗೆ ಹೋಲುವ ಸಮಸ್ಯೆಗಳನ್ನು ಉಂಟುಮಾಡುವ ಯಾವುದೇ ಸ್ಥಿತಿಯನ್ನು ಸೂಚಿಸಲು ಬಳಸಲಾಗುತ್ತದೆ. ಈ ವಿಶಾಲವಾದ ಅರ್ಥದಲ್ಲಿ, ಅದು ಕೆಲವೊಮ್ಮೆ ಗಾಯಗಳು, ಅಂಗವಿಕಲತೆಗಳು, ಅಸ್ವಸ್ಥತೆ, ಕುರುಹುಕಂತೆಗಳು, ಸೋಂಕುಗಳು, ಪ್ರತ್ಯೇಕಿತ ರೋಗಲಕ್ಷಣಗಳು, ವಕ್ರ ವರ್ತನೆಗಳು, ಮತ್ತು ರಚನೆ ಹಾಗೂ ಕ್ರಿಯೆಯ ವಿಲಕ್ಷಣ ಬದಲಾವಣೆಗಳನ್ನು ಒಳಗೊಳ್ಳುತ್ತದೆ. ರೋಗಗಳು ಜನರ ಮೇಲೆ ಕೇವಲ ಶಾರೀರಿಕವಾಗಿ ಅಲ್ಲದೆ, ಭಾವನಾತ್ಮಕವಾಗಿಯೂ ಪ್ರಭಾವ ಬೀರಬಲ್ಲವು, ಏಕೆಂದರೆ ರೋಗದಿಂದ ಪೀಡಿತವಾಗಿ ಅದರ ಜೊತೆ ಬಾಳುವುದು ಜೀವನದ ಬಗ್ಗೆ ಪೀಡಿತ ವ್ಯಕ್ತಿಯ ದೃಷ್ಟಿಕೋನವನ್ನು ಬದಲಿಸಬಹುದು.

"https://kn.wikipedia.org/w/index.php?title=ರೋಗ&oldid=752056" ಇಂದ ಪಡೆಯಲ್ಪಟ್ಟಿದೆ