ಹೃದಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾನವ ಹೃದಯ ಮತ್ತು ಪುಪ್ಪಸಗಳ ಒಂದು ಚಿತ್ರ

ಹೃದಯವು 3553 ಬೆನ್ನೆಲುಬುಳ್ಳ ಪ್ರಾಣಿಗಳಲ್ಲಿ ರಕ್ತದ ಸಂಚಲನೆಯನ್ನು ಕ್ರಮವಾಗಿ ಉಂಟುಮಾಡುವ ಒಂದು ಸ್ನಾಯು ವಿಧದ ಅಂಗ.[೧] ತೀರ ಪ್ರಾಥಮಿಕ ದರ್ಜೆಯ ಪ್ರಾಣಿಗಳನ್ನು (ಉದಾಹರಣೆಗೆ ಏಕಾಣು ಜೀವಿಗಳು) ಬಿಟ್ಟು ಇತರ ಇಲ್ಲ ಪ್ರಾಣಿಗಳಿಗೂ, ಎರೆಹುಳುಗಳನ್ನೂ ಒಳಗೊಂಡಂತೆ ಅಕಶೇರುಕಗಳಿಗೆ ಸಹ ಹೃದಯ ಉಂಟು, ಪ್ರಾಣಿ ದೇಹದಲ್ಲಿ ರಕ್ತಪರಿಚಲನೆಯ ನಿರಂತರತೆಯನ್ನು ಕೂಡಿಟ್ಟುಕೊಳ್ಳುವುದೇ ಇದು ನಿರ್ವಹಿಸುವ ಕ್ರಿಯೆ.

ಇದು ಎದೆಯ ಮಧ್ಯದಲ್ಲಿ ಸ್ವಲ್ಪ ಹಿಂದಕ್ಕೆ ಇದೆ. ಹೃದಯ ಸ್ನಾಯುಗಳ ಗೋಡೆಗಳು ನಿರ್ಜೀವವಾಗಿವೆ. ವಯಸ್ಕ ಮಾನವನ ಹೃದಯ 250 ಮತ್ತು 350 ಗ್ರಾಂ ನಷ್ಟು ದ್ರವ್ಯರಾಶಿ ಹೊಂದಿರುವ ಮುಷ್ಟಿ ಗಾತ್ರದ ಅಂಗ.

ಹೃದಯದ ಬಡಿತ

ಇದನ್ನು ಹೃದಯಾವರಣ ಎಂಬ ಎರಡು ಪದರದ ಚೀಲವು ಆವರಿಸಿದೆ. ಮಾನವ ಹೃದಯದ ಹೊರಗಿನ ಗೋಡೆಯು ಮೂರು ಪದರಗಳಿಂದ ರಚಿಸಲ್ಪಟ್ಟಿದೆ: ಒಳಪದರ, ಸ್ನಾಯುಪದರ, ಮತ್ತು ಮೇಲ್ಪದರ. ಸ್ನಾಯುಪದರ ಅಂದರೆ ಹೃದಯದ ಸ್ನಾಯು. ಒಳಪದರವು ಹೃದಯದ ಕೋಷ್ಠಗಳು ಮತ್ತು ಕವಾಟಗಳನ್ನು ಆವರಿಸುತ್ತದೆ.

ಮಾನವ ಹೃದಯವನ್ನು ನಾಲ್ಕು ಕೋಷ್ಠಗಳಾಗಿ ವಿಭಜಿಸಲಾಗುತ್ತದೆ: ಎರಡು ಹೃತ್ಕರ್ಣಗಳು ಮತ್ತು ಎರಡು ಹೃತ್ಕುಹರಗಳು. ಹೃತ್ಕರ್ಣಗಳು ರಕ್ತವನ್ನು ಸ್ವೀಕರಿಸುವ ಕೋಷ್ಠಗಳು ಮತ್ತು ಹೃತ್ಕುಹರಗಳು ಒತ್ತಿನೂಕುವ ಕೋಷ್ಠಗಳು. ಎಡ ಮತ್ತು ಬಲ ಭಾಗಗಳು ವಿಭಾಜಕ ಭಿತ್ತಿ (septum) ಯೆಂಬ ವಿಭಾಜಕ ಗೋಡೆಯಿಂದ ಪ್ರತ್ಯೇಕಿಸಲ್ಪಟ್ಟಿವೆ. ಈ ಎರಡು ಸ್ವೀಕರಣಾ ಕೋಣೆಗಳ ನಡುವೆ ಕವಾಟ (valves) ಗಳಿರುತ್ತವೆ. ಇವು ರಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತವೆ. ಹೃತ್ಕರ್ಣ (atrium) ಮತ್ತು ಹೃತ್ಕುಕ್ಷಿ (ventricle) ನಡುವಿನ ರಕ್ತ ಸಂಚಾರವನ್ನು ಹೃದಯದ ಬಲಬದಿಯಲ್ಲಿರುವ ತ್ರಗ್ರ ಕವಾಟ (tricuspid valve) ಮತ್ತು ಎಡಬದಿಯಲ್ಲಿರುವ ಇರ್ದಳ ಕವಾಟ (Mitral valve) ನಿಯಂತ್ರಿಸುತ್ತವೆ.

ಹೃದಯ ಆವರ್ತನವು ಸಂಕುಚನ ಮತ್ತು ವ್ಯಾಕೋಚನ ಮತ್ತು ಮಧ್ಯದ ವಿರಾಮವನ್ನು ಒಳಗೊಳ್ಳುವ ಒಂದು ಪೂರ್ಣ ಹೃದಯಬಡಿತವನ್ನು ಸೂಚಿಸುತ್ತದೆ.

ರಕ್ತದ ಪರಿಚಲನೆಯು ದೇಹಕ್ಕೆ ಹಾಗೂ ದೇಹದಿಂದ ಸಿಸ್ಟೆಮಿಕ್ ಪರಿಚಲನೆ ಮತ್ತು ಶ್ವಾಸಕೋಶಗಳಿಗೆ ಹಾಗೂ ಶ್ವಾಸಕೋಶಗಳಿಂದ ಪಲ್ಮನರಿ ಪರಿಚಲನೆಯನ್ನು ಒಳಗೊಂಡಿರುತ್ತದೆ. ರಕ್ತವು ಬಲ ಮತ್ತು ಎಡ ಹೃತ್ಕರ್ಣದಲ್ಲಿ ನಿರಂತರವಾಗಿ ಸಂಗ್ರಹಗೊಳ್ಳುತ್ತದೆ. ಬಲ ಹೃತ್ಕರ್ಣ ಕುಗ್ಗಿದಾಗ, ರಕ್ತವು ತ್ರಿಕೋನಾಕಾರದ ಕವಾಟದ ಮೂಲಕ ಬಲ ಕುಹರದೊಳಗೆ ನೂಕಲ್ಪಡುತ್ತದೆ. ಬಲ ಕುಹರ ಕುಗ್ಗಿದಾಗ, ತ್ರಿಕೋನಾಕಾರದ ಕವಾಟ ಮುಚ್ಚಿಕೊಳ್ಳುತ್ತದೆ. ರಕ್ತವು ಪಲ್ಮನರಿ ಕವಾಟದ ಮೂಲಕ ಪಲ್ಮನರಿ ಸೊಂಡಿಲಿನೊಳಗೆ ನೂಕಲ್ಪಡುತ್ತದೆ. ರಕ್ತವು ಕಿರುಗುಳಿಗಳ ಹತ್ತಿರ ಹರಿದಾಗ ಚದರುವಿಕೆ ಪ್ರಕ್ರಿಯೆ ಮೂಲಕ ಇಂಗಾಲದ ಡೈಆಕ್ಸೈಡ್ ಮತ್ತು ಆಮ್ಲಜನಕದ ವಿನಿಮಯವಾಗುತ್ತದೆ.

ಎಡ ಹೃದಯದಲ್ಲಿ, ಆಮ್ಲಜನಕಯುಕ್ತ ರಕ್ತವನ್ನು ಪಲ್ಮನರಿ ಅಭಿಧಮನಿಗಳ ಮೂಲಕ ಎಡ ಹೃತ್ಕರ್ಣಕ್ಕೆ ಹಿಂತಿರುಗಿಸಲಾಗುತ್ತದೆ. ವ್ಯವಸ್ಥಿತ ಪರಿಚಲನೆಗಾಗಿ ಅದನ್ನು ನಂತರ ಎಡ ಕುಹರ ಮತ್ತು ಮಹಾಪಧಮನಿಯೊಳಗೆ ನೂಕಲಾಗುತ್ತದೆ. ಲೋಮಧಮನಿಗಳಲ್ಲಿ, ರಕ್ತದಲ್ಲಿನ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಜೀವಕೋಶಗಳಿಗೆ ಪೂರೈಕೆ ಮಾಡಲಾಗುತ್ತದೆ, ಮತ್ತು ಅದರ ಬದಲಿಗೆ ಇಂಗಾಲದ ಡೈಆಕ್ಸೈಡ್ ಹಾಗೂ ತ್ಯಾಜ್ಯಗಳನ್ನು ಪಡೆಯಲಾಗುತ್ತದೆ. ಲೋಮನಾಳದಲ್ಲಿನ ಆಮ್ಲಜನಕರಹಿತ ರಕ್ತ ಅಭಿಧಮನಿಗಳಲ್ಲಿ ಮತ್ತು ಅಂತಿಮವಾಗಿ ಬಲ ಹೃದಯದೊಳಗೆ ಚಲಿಸುತ್ತದೆ.

ಬಲ ಹೃತ್ಕುಕ್ಷಿಯಿಂದ ಶ್ವಾಸ ಧಮನಿಗಳ (Pulmonary Arteries) ಮೂಲಕ ಶ್ವಾಸಕೋಶಕ್ಕೆ ಪೂರೈಸುವುದಕ್ಕಾಗಿ ರಕ್ತವನ್ನು ಹರಿಸಲು ಶ್ವಾಸಕೋಶ ಕವಾಟ (pulmonary valve) ಎಂಬ ಬಲ ಕವಾಟವು ಅವಕಾಶ ನೀಡುತ್ತದೆ. ರಕ್ತವು ಎಡ ಹೃತ್ಕುಕ್ಷಿಯಿಂದ ಎಡ ಮಹಾಪಧಮನಿ (aorta) ಗೆ ಹರಿಯುವುದನ್ನು ಎಡಭಾಗದಲ್ಲಿರುವ ಮಹಾಪಧಮನಿ ಕವಾಟ (aortic valve) ನಿಯಂತ್ರಿಸುತ್ತದೆ. ಸಾಮಾನ್ಯ ವ್ಯಕ್ತಿಯ ಹೃದಯವು ಐದು ಲೀಟರಿನಷ್ಟು ರಕ್ತವನ್ನು ಪಂಪ್ ಮಾಡುತ್ತದೆ. ಅದು ನಿರಂತರವಾಗಿ ಇಡೀ ದೇಹದಲ್ಲಿ ಹರಿಯುತ್ತಿರುತ್ತದೆ. ರಕ್ತವು ಹೃದಯದಿಂದ ಅಪಧಮನಿ(Arteries) ಎಂಬ ರಕ್ತನಾಳಗಳಿಗೆ ಸಂಚರಿಸಿ, ನಂತರ ಲೋಮನಾಳಗಳು(capillaries) ಎಂಬ ಸಣ್ಣ ರಕ್ತನಾಳಗಳಿಗೆ ಹರಿದು ಕೊನೆಯಲ್ಲಿ ಅಭಿಧಮನಿಗೆ ಸಂಚರಿಸಿ ಹೃದಯಕ್ಕೆ ಮರಳುತ್ತದೆ. ಸುಮಾರು 60 ಸೆಕೆಂಡುಗಳಲ್ಲಿ ನಡೆದು ಹೋಗುವ ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ರಕ್ತವು ನಮ್ಮ ದೇಹದ ಮೂಳೆಗಳಿಗೆ, ಮಾಂಸಖಂಡಗಳಿಗೆ, ಜೀವಕೋಶಗಳಿಗೆ ಮತ್ತು ಇತರ ಎಲ್ಲ ಅವಯವಗಳಿಗೆ ಶುದ್ಧರಕ್ತ ಸಹಿತ ಆಮ್ಲಜನಕದೊಂದಿಗೆ ಸಂಪೂರ್ಣ ಆರೈಕೆಯನ್ನು ನೀಡುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. The American Heritage Stedman's Medical Dictionary. "KMLE Medical Dictionary Definition of heart". {{cite web}}: External link in |author= (help).
"https://kn.wikipedia.org/w/index.php?title=ಹೃದಯ&oldid=1203433" ಇಂದ ಪಡೆಯಲ್ಪಟ್ಟಿದೆ