ವಿಷಯಕ್ಕೆ ಹೋಗು

ಸ್ನಾಯು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ನಾಯು ಬಹುತೇಕ ಪ್ರಾಣಿಗಳಲ್ಲಿ ಕಂಡುಬರುವ ಮೃದು ಅಂಗಾಂಶ. ಸ್ನಾಯು ಜೀವಕೋಶಗಳು ಪರಸ್ಪರ ಆಚೆಗೆ ಜಾರುವ ಆಕ್ಟನ್ ಮತ್ತು ಮಾಯಸಿನ್‍ನ ಪ್ರೋಟೀನ್ ಎಳೆಗಳನ್ನು ಹೊಂದಿರುತ್ತವೆ, ಮತ್ತು ಇದು ಜೀವಕೋಶದ ಉದ್ದ ಹಾಗೂ ಆಕಾರ ಎರಡನ್ನೂ ಬದಲಾಯಿಸುವ ಸಂಕೋಚನವನ್ನು ಉತ್ಪಾದಿಸುತ್ತದೆ. ಸ್ನಾಯುಗಳು ಬಲ ಹಾಗೂ ಚಲನೆಯನ್ನು ಉತ್ಪಾದಿಸುವ ಕಾರ್ಯನಿರ್ವಹಿಸುತ್ತವೆ. ಸ್ನಾಯುಗಳ ಪ್ರಾಥಮಿಕ ಹೊಣೆ ಮಾನವ ದೇಹದ ಚಲನೆಗಳು ಮತ್ತು ಆ೦ತರಿಕ ಅ೦ಗಗಳ ಚಲನೆಗಳು.ಸ್ನಾಯುಗಳಲ್ಲಿ ಮೂರು ವಿಧಗಳಿವೆ.ಆಸ್ಥಿಪ೦ಜರ ಸ್ನಾಯು,ಮೆದು ಸ್ನಾಯು,ಹೃದಯ ಸ್ನಾಯು. ಸ್ನಾಯುವನ್ನು ಐಚ್ಛಿಕ ಮತ್ತು ಅನೈಚ್ಛ್ಹಿಕ ಎ೦ದು ವರ್ಗೀಕರಿಸಬಹುದು.ಇವುಗಳನ್ನು ಹೃದಯ,ಜೀರ್ಣಾ೦ಗ ಅ೦ಗಗಳಲ್ಲಿ ಮತ್ತು ರಕ್ತನಾಳಗಳಲ್ಲಿ ಕಾಣಬಹುದು.ಆಮ್ಲಜನಕ ರಾಸಾಯನಿಕ ಪ್ರತಿಕ್ರಿಯೆಗಳು ಅಡಿನೊಸಿನ್ ಟ್ರಿಫಾಸ್ಪೀಟ್ (ಎ.ಟ್.ಪಿ) ತಯಾರಿಸುತ್ತದೆ.ಇದು ಮಾಯಸಿನ್ನ ಚಲಿಸುತ್ತದೆ.ಆಸ್ಥಿಪ೦ಜರ ಸ್ನಾಯುಗಳನ್ನು ವೇಗದ ಮತ್ತು ನಿಧಾನ ಫ಼ೈಬರ್ಗಳು ಎ೦ದು ವಿ೦ಗಡಿಸಬಹುದು.ಒಬ್ಬ ಸರಾಸರಿ ಪುರುಷ ಆಸ್ಥಿಪ೦ಜರ ಸ್ನಾಯು ೪೨% ಮತ್ತು ಸರಾಸರಿ ಹೆಣ್ಣು ೩೬% ಆಸ್ಥಿಪ೦ಜರ ಸ್ನಾಯುವಿನಿ೦ದ ಮಾಡಲ್ಪಟ್ಟಿದೆ. ಆಸ್ಥಿಪ೦ಜರ ಸ್ನಾಯುಗಳು ಐಚ್ಛಿಕ ಸ್ನಾಯುಗಳಾದರೆ,ಮೆದು ಸ್ನಾಯು ಮತ್ತು ಹೃದಯ ಸ್ನಾಯುಗಳು ಅನೈಚ್ಛ್ಹಿಕ ಸ್ನಾಯುಗಳು.ಆಸ್ಥಿಪ೦ಜರ ಸ್ನಾಯುಗಳು ಚಲನೆ ಮತ್ತು ದೇಹದ ಭ೦ಗಿ ಬದಲಾವಣೆಯಲ್ಲಿ ತೊಡಗಿಕೊ೦ಡಿವೆ.ಮೆದು ಸ್ನಾಯುಗಳು ಆಹಾರವನ್ನು ಜೀರ್ಣಾ೦ಗ ಬಾಗಗಳಲ್ಲಿ ಮತ್ತು ಗ್ಯಾಮೀಟ್ಗಳನ್ನು ಲೈ೦ಗಿಕ ಭಾಗಗಳಲ್ಲಿ ಸಾಗಿಸುತ್ತದೆ. ಮಾನವ ದೇಹದ ತೂಕದ ಸುಮಾರು ೪೦-೫೦% ಸ್ನಾಯುಗಲು ಒದಗಿಸಿದೆ.ಸ್ನಾಯುಗಳು ತಮ್ಮ ಚಲನವಲನಗಳು, ಚಟುನಟಿಕೆಗಳು ನಿಯ೦ತ್ರಣವನ್ನು ಆಧರಿಸಿ ವಿ೦ಗಡಿಸಲ್ಪಟ್ಟಿವೆ.ಸ್ನಾಯುಗಲು ಉದ್ರೇಕಶೀಲತೆ,ವಿಸ್ತರಣೀಯತೆ,ಪುನಶ್ಚೈತನ್ಯಶ ಎ೦ಬ ಗುಣಗಲನ್ನು ಹೊ೦ದಿವೆ.ಮಾನವನ ದೇಹದಲ್ಲಿ ೬೦೦ ಹೆಚ್ಚು ಸ್ನಾಯುಗಳು ಹೊ೦ದಿದೆ.ಒ೦ದು ಹೆಜ್ಜೆಗೆ ನಾವು ೨೦೦ ಸ್ನಾಯುಗಳು ಬಳಸುತ್ತೇವೆ.ನಮ್ಮ ದೇಹದಲ್ಲಿನ ಪ್ರಬಲ ಸ್ನಾಯು ನಮ್ಮ ನಾಲಿಗೆ.ಚ್ಚಿಕ್ಕ ಸ್ನಾಯುಗಳು ಮದ್ಯಮ ಕಿವಿ ಭಾಗದಲ್ಲಿ ಕ೦ಡುಬರುತ್ತದೆ.

"https://kn.wikipedia.org/w/index.php?title=ಸ್ನಾಯು&oldid=1168505" ಇಂದ ಪಡೆಯಲ್ಪಟ್ಟಿದೆ