ನಾಲಿಗೆ
ಗೋಚರ
ನಾಲಿಗೆ ಬಾಯಿಯ ಸ್ನಾಯುವಿನ ಅಂಗ.ನಾಲಿಗೆಯು ಅಗಿಯುವುದಕ್ಕಾಗಿ ಆಹಾರವನ್ನು ಕುಶಲತೆಯಿಂದ ನಿರ್ವಹಿಸುವ, ಬಹುತೇಕ ಕಶೇರುಕಗಳ ಬಾಯಿಯ ಕೆಳ ಎಲ್ಲೆಯಲ್ಲಿರುವ ಒಂದು ಮಾಂಸಲ ಜಲಗ್ರಾಹಕ. ಅದು ರುಚಿಯ ಪ್ರಧಾನ ಅಂಗವಾಗಿದೆ ಏಕೆಂದರೆ ಅದರ ಮೇಲ್ಮೈಯ ಬಹುಭಾಗ ರುಚಿ ಮೊಗ್ಗುಗಳಿಂದ ಮುಚ್ಚಲ್ಪಟ್ಟಿದೆ. ನಾಲಿಗೆಯ ಮೇಲ್ಮೈಯು ಅನೇಕ ಜಿಹ್ವಾ ತೊಟ್ಟುಗಳಿಂದಲೂ ಮುಚ್ಚಲ್ಪಟ್ಟಿದೆ.ನಾಲಿಗೆಯನ್ನು ಆಹಾರವನ್ನು ನುಂಗುವ ಕ್ರಿಯೆಯಲ್ಲಿ ಬಳಸುತ್ತೇವೆ.ಮಾನವನ ನಾಲಿಗೆಯನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು.ಮುಂಭಾಗದಲ್ಲಿ ಓರಲ್ ಭಾಗವೆಂದು ಮತ್ತು ಹಿಂಭಾಗದಲ್ಲಿ ದನಿಯ ಭಾಗವೆಂದು ವಿಂಗಡಿಸಬಹುದು.
ನಾಲಿಗೆ ಪರೀಕ್ಷೆ
[ಬದಲಾಯಿಸಿ]- ಮೈಗೆ ಹುಷಾರಿಲ್ಲದಿದ್ದಾಗ ವೈದ್ಯರು ನಾಲಿಗೆ ತೋರಿಸಿ ಎಂದು ಹೇಳುವರು. ರೋಗಿಯ ನಾಲಿಗೆಯನ್ನು ಪರಿಶೀಲಿಸುವುದರಿಂದ ರೋಗ ಲಕ್ಷಣಗಳು ಗೋಚರಿಸಿ, ಏನು ಕಾಯಿಲೆ ಎಂದು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ಕಾಯಿಲೆ ಯಾವ ಹಂತದಲ್ಲಿದೆ ಎಂಬುದನ್ನೂ ಪತ್ತೆ ಹಚ್ಚಬಹುದು.
ನಾಲಿಗೆ ಬಣ್ಣ
[ಬದಲಾಯಿಸಿ]- ಆರೋಗ್ಯವಂತ ನಾಲಿಗೆ ಗುಲಾಬಿ ಬಣ್ಣದಿಂದ ಕೂಡಿದ್ದು, ಸಣ್ಣಸಣ್ಣ ಗಂಟುಗಳನ್ನು (ಪಾಪಿಲ್ಲೆ) ಹೊಂದಿರುತ್ತದೆ. ನಾಲಿಗೆಗೆ ನೋವಾಗಿದ್ದರೆ, ಅದರ ಬಣ್ಣ ಬದಲಾಗಿದ್ದರೆ ಅದು ರೋಗದ ಸೂಚನೆಯನ್ನು ನೀಡುತ್ತದೆ.
ಬಿಳಿ ನಾಲಿಗೆ
[ಬದಲಾಯಿಸಿ]- ನಾಲಿಗೆ ಬಿಳಿ ಬಣ್ಣದಿಂದ ಕೂಡಿದ್ದರೆ, ಬಾಯಿಯೊಳಗೆ ಯೀಸ್ಟ್ ಸೋಂಕು ಉಂಟಾಗಿದೆ ಎಂದರ್ಥ. ಸಕ್ಕರೆ ಕಾಯಿಲೆ, ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವವರ ನಾಲಿಗೆ ಬಿಳಿ ಬಣ್ಣದಿಂದ ಕೂಡಿರುತ್ತದೆ. ಕೆಲವೊಮ್ಮೆ ಆ್ಯಂಟಿಬಯಾಟಿಕ್ ಸೇವನೆಯಿಂದಲೂ ನಾಲಿಗೆ ಬಿಳಿ ಬಣ್ಣಕ್ಕೆ ತಿರುಗುವುದುಂಟು.
ಕೆಂಪು ನಾಲಿಗೆ
[ಬದಲಾಯಿಸಿ]- ತಿಳಿ ಕೆಂಪು ಬಣ್ಣದ ನಾಲಿಗೆ ಆರೋಗ್ಯ ಸೂಚಕ.
- ನಾಲಿಗೆ ಅತಿ ಕೆಂಬಣ್ಣದಿಂದ ಕೂಡಿದ್ದರೆ ಫೋಲಿಕ್ ಆ್ಯಸಿಡ್, ವಿಟಮಿನ್ ಬಿ–12 ಕೊರತೆ ಇದೆ ಎಂದರ್ಥ. ಕೆಲವು ಬಾರಿ ತೀವ್ರ ಜ್ವರದಿಂದ ಬಳಲುತ್ತಿರುವಾಗಲೂ ನಾಲಿಗೆ ಕೆಂಬಣ್ಣದಿಂದ ಕೂಡಿರುತ್ತದೆ.
ತಿಳಿ ಕಪ್ಪು ನಾಲಿಗೆ
[ಬದಲಾಯಿಸಿ]- ಸಿಗರೇಟು ಸೇದುವವರು, ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವವರ ನಾಲಿಗೆ ತಿಳಿ ಕಪ್ಪುಬಣ್ಣದಿಂದ ಕೂಡಿರುತ್ತದೆ. ಇದು ಅನಾರೋಗ್ಯಕರ ಸ್ಥಿತಿಯನ್ನು ಸೂಚಿಸುತ್ತದೆ.
ಬಾಯಿಯ ಆರೋಗ್ಯದಲ್ಲಿ ನಾಲಿಗೆಯ ಪಾತ್ರ
[ಬದಲಾಯಿಸಿ]- ಬಾಯಿಯ ಆರೋಗ್ಯದಲ್ಲಿ ನಾಲಿಗೆಯದ್ದು ಪ್ರಮುಖ ಪಾತ್ರ. ಹಲ್ಲು, ವಸಡು ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ನಾಲಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯ. ನಾಲಿಗೆ ಸ್ವಚ್ಛವಾಗಿರದಿದ್ದಲ್ಲಿ ಬ್ಯಾಕ್ಟೀರಿಯಾಗಳು ಹುಟ್ಟಿ, ಅವು ಬಾಯಿಯ ಮೂಲಕ ಹೊಟ್ಟೆಯೊಳಗೆ ಪ್ರವೇಶಿಸಿ, ಇಡೀ ದೇಹದ ಆರೋಗ್ಯ ವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇರುತ್ತದೆ.
ನಾಲಿಗೆಯ ಆರೋಗ್ಯ ಕಾಪಾಡಿಕೊಳ್ಳುವ ಬಗೆ
[ಬದಲಾಯಿಸಿ]- ನಾಲಿಗೆಯಲ್ಲಿ ಬಿಳಿಯಅಗ್ರಲೇಪನವಿದ್ದರೆ ನಾಲಿಗೆಯನ್ನು ಸ್ವಚ್ಛಗೊಳಿಸಲು ‘ಟಂಗ್ ಕ್ಲೀನರ್’ ಬಳಸಬೇಕು. ಇದು ತೆಳುವಾದ ಮೃದುವಾದ ದಾರದಿಂದ ಮಾಡಲ್ಪಟ್ಟಿದ್ದು, ನಾಲಿಗೆಯ ಮೇಲ್ಪದರವನ್ನು ಮೃದುವಾಗಿ ಸ್ವಚ್ಛಗೊಳಿಸುತ್ತದೆ. ನಾಲಿಗೆಯನ್ನು ಸ್ವಚ್ಛಗೊಳಿಸಿದ ಬಳಿಕ ಟಂಗ್ ಕ್ಲೀನರ್ ಅನ್ನು ಬಿಸಿನೀರಿನಲ್ಲಿ ಅದ್ದಿ ತೊಳೆಯಬೇಕು.
- ಮುಂಜಾನೆ ಹಲ್ಲುಜ್ಜಿದ ಬಳಿಕ ನಾಲಿಗೆಯ ಸ್ವಚ್ಛತೆಯ ಕಡೆಗೂ ಗಮನ ಹರಿಸಬೇಕು. ಅಂತೆಯೇ ರಾತ್ರಿ ಮಲಗುವ ಮುನ್ನ ಬಾಯಿ ಮತ್ತು ನಾಲಿಗೆಯನ್ನು ಸ್ವಚ್ಛಗೊಳಿಸಿ ಮಲಗುವುದು ಆರೋಗ್ಯಕ್ಕೆ ಉತ್ತಮ.
ಉಸಿರಾಟದ ತೊಂದರೆ
[ಬದಲಾಯಿಸಿ]- ಬಾಯಿಯ ಮೂಲಕ ಬ್ಯಾಕ್ಟೀರಿಯಾ ದೇಹದೊಳಗೆ ಸೇರಿ ಶ್ವಾಸಕೋಶಗಳಲ್ಲಿ ಸೋಂಕು ಉಂಟು ಮಾಡುತ್ತದೆ. ಇದರಿಂದ ಶ್ವಾಸಕೋಶ ಮತ್ತು ಉಸಿರಾಟದ ಸಮಸ್ಯೆಗಳು ಕಾಣಿಸುತ್ತವೆ.
- ಕೆಲವರಿಗೆ ಬಾಯಿ ಹುಣ್ಣುಗಳಾಗುವುದು ಸಹಜ. ಸಾಮಾನ್ಯವಾಗಿ ಔಷಧಿ ಪಡೆದರೆ ಒಂದೆರೆಡು ವಾರಗಳಲ್ಲಿ ಈ ಹುಣ್ಣು ವಾಸಿಯಾಗುತ್ತದೆ. ಬಿ. ವಿಟಮಿನ್ ಕೊರತೆ ಇರುವವರಲ್ಲಿ ಬಾಯಿಹುಣ್ಣಾಗುತ್ತದೆ.
- ನಾಲಿಗೆಯಲ್ಲಿ ಎರಡು ವಾರಗಳಿಗೂ ಹೆಚ್ಚು ಕಾಲ ನೋವು ಮತ್ತು ಹುಣ್ಣು ಇದ್ದರೆ ಅದು ಬಾಯಿ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು.
- ಬಾಯಿ ಆರೋಗ್ಯ ಕಾಪಾಡಿಕೊಳ್ಳದಿರುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಸಂಭವ ಹೆಚ್ಚು.
- ಬಾಯಿ ಮತ್ತು ವಸಡಿನಲ್ಲಿ ಸೋಂಕುಳ್ಳ ಮಹಿಳೆಯರಲ್ಲಿ ಅವಧಿಪೂರ್ವ ಶಿಶು ಜನನ ಸಾಧ್ಯತೆ ಇರುತ್ತದೆ.
ನೋಡಿ
[ಬದಲಾಯಿಸಿ]ಹೊರ ಸಂಪರ್ಕ
[ಬದಲಾಯಿಸಿ]- ತೊಡೆ ಮಾಂಸದಿಂದ ಕ್ಯಾನ್ಸರ್ ರೋಗಿಗೆ ಹೊಸ ನಾಲಿಗೆ Archived 2016-11-22 ವೇಬ್ಯಾಕ್ ಮೆಷಿನ್ ನಲ್ಲಿ.