ಬಾಯಿ
Jump to navigation
Jump to search
ಪ್ರಾಣಿ ಅಂಗರಚನಾಶಾಸ್ತ್ರದಲ್ಲಿ, ಬಾಯಿಯು ಆಹಾರವನ್ನು ಸ್ವೀಕರಿಸುವ ಅನ್ನನಾಳದ ಮೊದಲ ಭಾಗ. ಕಶೇರುಕಗಳನ್ನು ಒಳಗೊಂಡಂತೆ, ಕೆಲವು ಪ್ರಾಣಿ ಸಂಘಗಳು, ಒಂದು ತುದಿಯಲ್ಲಿ ಬಾಯಿ ಹಾಗು ಮತ್ತೊಂದು ತುದಿಯಲ್ಲಿ ಗುದವಿರುವ ಸಂಪೂರ್ಣ ಪಚನ ವ್ಯವಸ್ಥೆಯನ್ನು ಹೊಂದಿರುತ್ತವೆ. ಜೀವಿವಿಕಾಸದಲ್ಲಿ ಯಾವ ತುದಿಯು ಮೊದಲು ರಚನೆಗೊಳ್ಳುತ್ತದೆ ಎಂಬುದು ಪ್ರಾಣಿಗಳನ್ನು ಪ್ರೋಟಸ್ಟೋಮ್ ಮತ್ತು ಡೂಟರಸ್ಟೋಮ್ ಎಂದು ವರ್ಗೀಕರಿಸಲು ಬಳಸಲಾಗುವ ಒಂದು ಮಾನದಂಡವಾಗಿದೆ.