ನೋವು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ನೋವು ಎಡವಿ ಕಾಲ್ಬೆರಳನ್ನು ತಾಕಿಸಿಕೊಳ್ಳುವುದು, ಕೈಬೆರಳನ್ನು ಸುಟ್ಟಿಕೊಳ್ಳುವುದು, ಒಂದು ಗಾಯಕ್ಕೆ ಆಯಡಿನ್‌ನಂತಹ ನಂಜುನಿವಾರಕವನ್ನು ಹಚ್ಚುವುದು, ಮತ್ತು ನಗಿಸುವ ಮೂಳೆಗೆ (ಫನಿ ಬೋನ್) ತಾಕಿಸಿಕೊಳ್ಳುವಂತಹ ಅನುಭವಗಳಲ್ಲಿ ಸಾಮಾನ್ಯವಾದ ಅಪ್ರಿಯವಾದ ಅನಿಸಿಕೆ. ಇಂಟರ್‌ನ್ಯಾಶನಲ್ ಅಸೋಸಿಯೇಶನ್ ಫಾರ್ ದ ಸ್ಟಡಿ ಆಫ್ ಪೆಯ್ನ್ ನೋವನ್ನು "ವಾಸ್ತವಿಕ ಅಥವಾ ಸಂಭಾವ್ಯಸಾಧ್ಯ ಅಂಗಾಂಶ ಹಾನಿಗೆ ಸಂಬಂಧಿಸಿದ, ಅಥವಾ ಅಂತಹ ಹಾನಿಗೆ ಸಂಬಂಧಿಸಿದಂತೆ ವರ್ಣಿಸಲಾಗುವ ಒಂದು ಅಪ್ರಿಯವಾದ ಸಂವೇದನಶೀಲ ಮತ್ತು ಭಾವುಕ ಅನುಭವ" ಎಂದು ವ್ಯಾಖ್ಯಾನಿಸುತ್ತದೆ. ನೋವು ನಮ್ಮನ್ನು ಅಪಾಯದ ಅಥವಾ ಅಪಾಯದ ಸಾಧ್ಯತೆಯಿರುವ ಸನ್ನಿವೇಶಗಳಿಂದ ಹಿಮ್ಮೆಟ್ಟುವಂತೆ, ವಾಸಿಯಾಗುವವರೆಗೆ ಹಾನಿಗೊಳಗಾದ ದೇಹಭಾಗವನ್ನು ಸಲಹುವಂತೆ, ಮತ್ತು ಭವಿಷ್ಯದಲ್ಲಿ ಅಂತಹ ಸಂದರ್ಭಗಳಿಂದ ದೂರವಾಗಿರುವಂತೆ ಪ್ರೇರಿಸುತ್ತದೆ. ನೋವಿನಿಂದ ಮುಕ್ತಿಹೊಂದಲು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮದ್ದು, ಔಷಧಗಳು ದೊರೆಯುತ್ತವೆ.ದೈಹಿಕ ನೋವಿಗೆ ಚಿಕಿತ್ಸೆ ಪಡೆಯಬಹುದು ಆದರೆ ಮಾನಸಿಕ ನೋವಿಗೆ ಯಾವ ಚಿಕಿತ್ಸೆಯೂ ಇಲ್ಲ.


"https://kn.wikipedia.org/w/index.php?title=ನೋವು&oldid=719178" ಇಂದ ಪಡೆಯಲ್ಪಟ್ಟಿದೆ