ಚಿಕಿತ್ಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೋಲಿಯೋಗಾಗಿ ಚಿಕಿತ್ಸೆ ಪಡೆಯುತ್ತಿರುವ ಮಗು

ಚಿಕಿತ್ಸೆ (ಇಲಾಜು, ಉಪಚಾರ) ಎಂದರೆ ರೋಗನಿದಾನದ ನಂತರ ಒಂದು ಆರೋಗ್ಯ ಸಮಸ್ಯೆಯ ಪರಿಹಾರದ ಪ್ರಯತ್ನ. ಮನೋರೋಗ ಚಿಕಿತ್ಸಕರು, ಮನೋರೋಗ ಪರಿಚರ್ಯಾ ವೃತ್ತಿಗರು, ಸಲಹೆಗಾರರು, ಮತ್ತು ಚಿಕಿತ್ಸಕ ಸಾಮಾಜಿಕ ಕರ್ಮಚಾರಿಗಳಂತಹ ಮನೋವಿಜ್ಞಾನಿಗಳು ಮತ್ತು ಇತರ ಮಾನಸಿಕ ಆರೋಗ್ಯ ವೃತ್ತಿಪರರಲ್ಲಿ, ಈ ಪದವು ನಿರ್ದಿಷ್ಟವಾಗಿ ಮಾನಸಿಕ ಚಿಕಿತ್ಸೆಯನ್ನು ಸೂಚಿಸಬಹುದು. ಒಂದು ನಿಯಮವಾಗಿ, ಪ್ರತಿ ಚಿಕಿತ್ಸೆಗೆ ಚಿಹ್ನೆಗಳು ಮತ್ತು ವಿರುದ್ಧಚಿಹ್ನೆಗಳು ಇರುತ್ತವೆ.

ಚಿಕಿತ್ಸಾ ತೀರ್ಮಾನಗಳು ಹಲವುವೇಳೆ ಔಪಚಾರಿಕ ಅಥವಾ ಅನೌಪಚಾರಿಕ ಕ್ರಮಾವಳಿ ಸಂಬಂಧಿ ಮಾರ್ಗದರ್ಶನ ಸೂತ್ರಗಳನ್ನು ಅನುಸರಿಸುತ್ತವೆ. ಚಿಕಿತ್ಸಾ ಆಯ್ಕೆಗಳನ್ನು ಹಲವುವೇಳೆ ಚಿಕಿತ್ಸಾ ವರ್ಗಗಳೆಂದು ಸ್ಥಾನಗಳಲ್ಲಿ ಅಥವಾ ಆದ್ಯತಾರೀತ್ಯವಾಗಿ ಜೋಡಿಸಬಹುದು : ಪ್ರಾಥಮಿಕ ವಿಧಾನದ ಚಿಕಿತ್ಸೆ, ದ್ವಿತೀಯಕ ವಿಧಾನದ ಚಿಕಿತ್ಸೆ, ತೃತೀಯಕ ವಿಧಾನದ ಚಿಕಿತ್ಸೆ, ಇತ್ಯಾದಿ. ಪ್ರಾಥಮಿಕ ವಿಧಾನದ ಚಿಕಿತ್ಸೆಯನ್ನು (ಕೆಲವೊಮ್ಮೆ ಪ್ರಾಥಮಿಕ ಚಿಕಿತ್ಸೆ, ಪ್ರವೇಶ ಚಿಕಿತ್ಸೆ, ಅಥವಾ ನೇರ ಚಿಕಿತ್ಸೆ ಎಂದೂ ಕರೆಯಲ್ಪಡುತ್ತದೆ) ಮೊದಲು ಪ್ರಯತ್ನಿಸಲಾಗುತ್ತದೆ.[೧] ಇತರ ಆಯ್ಕೆಗಳಿಗಿಂತ ಇದರ ಆದತ್ಯೆಯನ್ನು ಸಾಮಾನ್ಯವಾಗಿ: (1) ಅದರ ಅತ್ಯುತ್ತಮವಾಗಿ ಲಭ್ಯವಾದ ಪರಿಣಾಮಕಾರಿತ್ವ, ಸುರಕ್ಷತೆ, ಮತ್ತು ಸಹಿಷ್ಣುತೆಯ ಸಂಯೋಜನೆಯ ಚಿಕಿತ್ಸಕ ಪ್ರಯೋಗದ ಸಾಕ್ಷ್ಯದ ಆಧಾರದ ಮೇಲೆ ವಿಧ್ಯುಕ್ತವಾಗಿ ಶಿಫಾರಸು ಮಾಡಲಾಗುತ್ತದೆ ಅಥವಾ (2) ವೈದ್ಯರ ಚಿಕಿತ್ಸಕ ಅನುಭವವನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ. ಪ್ರಾಥಮಿಕ ವಿಧಾನದ ಚಿಕಿತ್ಸೆಯು ಸಮಸ್ಯೆಯನ್ನು ಪರಿಹರಿಸಲು ವಿಫಲವಾದರೆ ಅಥವಾ ಸಹಿಸಲಾಗದ ಅಡ್ಡಪರಿಣಾಮಗಳನ್ನು ಸೃಷ್ಟಿಸಿದರೆ, ಹೆಚ್ಚುವರಿ (ದ್ವಿತೀಯಕ ವಿಧಾನದ) ಚಿಕಿತ್ಸೆಗಳನ್ನು ಬದಲಿಯಾಗಿ ಕೈಗೊಳ್ಳಬಹುದು ಅಥವಾ ಚಿಕಿತ್ಸಾಕ್ರಮಕ್ಕೆ ಸೇರಿಸಬಹುದು, ಇದರ ನಂತರ ತೃತೀಯಕ ವಿಧಾನದ ಚಿಕಿತ್ಸೆಗಳು, ಇತ್ಯಾದಿ.

ಚಿಕಿತ್ಸಾ ಕ್ರಮಾವಳಿಗಳ ವಿಧ್ಯುಕ್ತವಾಗಿರುವಿಕೆ ಮತ್ತು ಚಿಕಿತ್ಸಾ ವರ್ಗಗಳ ಸ್ಥಾನಜೋಡಣೆಯು ಬಹಳ ವಿಸ್ತಾರವಾಗಿರುವ ಸಂದರ್ಭದ ಒಂದು ಉದಾಹರಣೆಯೆಂದರೆ ಕೀಮೊಥೆರಪಿ ಚಿಕಿತ್ಸಾಕ್ರಮಗಳು. ಕ್ಯಾನ್ಸರ್‌ನ ಕೆಲವು ರೂಪಗಳನ್ನು ಯಶಸ್ವಿಯಾಗಿ ಇಲಾಜು ಮಾಡುವಲ್ಲಿನ ಹೆಚ್ಚಿನ ಕಷ್ಟದ ಕಾರಣ, ಒಂದರ ನಂತರ ಮತ್ತೊಂದು ಚಿಕಿತ್ಸಾ ವರ್ಗವನ್ನು ಪ್ರಯತ್ನಿಸಬಹುದು. ಗಂತಿಶಾಸ್ತ್ರದಲ್ಲಿ, ಚಿಕಿತ್ಸಾ ವರ್ಗಗಳ ಎಣಿಕೆಯು ೧೦ ಅಥವಾ ೨೦ ಕೂಡ ಮುಟ್ಟಬಹುದು. ಹಲವುವೇಳೆ ಅನೇಕ ಚಿಕಿತ್ಸೆಗಳನ್ನು ಏಕಕಾಲದಲ್ಲಿ ಪ್ರಯತ್ನಿಸಬಹುದು (ಸಂಯೋಜನಾ ಚಿಕಿತ್ಸೆ ಅಥವಾ ಬಹುಚಿಕಿತ್ಸೆ). ಹಾಗಾಗಿ ಸಂಯೋಜನಾ ಕೀಮೊಥೆರಪಿಯನ್ನು ಪಾಲಿಕೀಮೊಥೆರಪಿ ಎಂದೂ ಕರೆಯಲಾಗುತ್ತದೆ. ಒಂದು ಕಾಲಕ್ಕೆ ಒಂದು ಕಾರಕ ಬಳಸುವ ಕೀಮೊಥೆರಪಿಯನ್ನು ಏಕಕಾರಕ ಚಿಕಿತ್ಸೆ ಎಂದು ಕರೆಯಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]