ಅಂತಃಸ್ರಾವ ಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Endocrinologist
Occupation
NamesDoctor, Medical Specialist
Activity sectorsMedicine
Description
Education requiredDoctor of Medicine

ಅಂತಃಸ್ರಾವ ಶಾಸ್ತ್ರ ವು (ಎಂಡೋಕ್ರೈನಾಲಜಿ -Endocrinology- ಗ್ರೀಕ್‌‌‌‌‌ἔνδον, ಎಂಡೋ , "ಒಳಗಡೆ"; κρῑνω, ಕ್ರೈನೋ , "ಪ್ರತ್ಯೇಕಿಸಲು"; ಮತ್ತು -λογία, -ಲಾಜಿಯಾ ಎಂಬ ಪದಗಳಿಂದ ಹುಟ್ಟಿಕೊಂಡಿದೆ) ಔಷಧ ವೈದ್ಯಶಾಸ್ತ್ರದ ಒಂದು ಶಾಖೆಯಾಗಿದೆ. ನಿರ್ನಾಳ ಗ್ರಂಥಿಗಳ ವ್ಯವಸ್ಥೆಯ ಮತ್ತು ಹಾರ್ಮೋನುಗಳೆಂದು ಕರೆಯಲ್ಪಡುವ ಅದರ ನಿರ್ದಿಷ್ಟ ಸ್ರವಿಸುವಿಕೆಗಳ ಅಸ್ತವ್ಯಸ್ತತೆ, ತ್ವರಿತ ವೃದ್ಧಿಯ ಕ್ರಿಯೆ, ಬೆಳವಣಿಗೆ, ಮತ್ತು ಪ್ರತ್ಯೇಕವಾಗುವಿಕೆಯಂಥ (ಊತಕ ಜನನ ಹಾಗೂ ಅಂಗಾಂಗ ಜನನವೂ ಸೇರಿದಂತೆ) ವಿಕಾಸಾತ್ಮಕವಾದ ಚಟುವಟಿಕೆಗಳ ಸಮಗ್ರೀಕರಣವನ್ನು ಈ ಶಾಖೆಯು ನಿರ್ವಹಿಸುತ್ತದೆ ಮತ್ತು ಚಯಾಪಚಯ ಕ್ರಿಯೆ, ಉಸಿರಾಟ, ವಿಸರ್ಜನೆ, ಚಲನೆ, ಸಂತಾನೋತ್ಪತ್ತಿ ಇವುಗಳ ಹೊಂದಾಣಿಕೆ, ಮತ್ತು ಸಂವೇದನದ ಗ್ರಹಿಕೆಯು ವಿಶಿಷ್ಟ ಲಕ್ಷಣಗಳ ಜೀವಕೋಶಗಳಿಂದ ಸಂಶ್ಲೇಷಿಸಲ್ಪಟ್ಟ ಹಾಗೂ ಸ್ರವಿಸಲ್ಪಟ್ಟ ರಾಸಾಯನಿಕ ಪ್ರಚೋದನೆಗಳು, ದ್ರವ್ಯಗಳ ಮೇಲೆ ಅವಲಂಬಿತವಾಗಿರುತ್ತವೆ. ಹಾರ್ಮೋನುಗಳ ಜೈವಿಕ ಉತ್ಪತ್ತಿ, ಸಂಗ್ರಹಣೆ, ರಾಸಾಯನಿಕ ಸಂಯೋಜನೆ, ಹಾಗೂ ಶಾರೀರಿಕ ಕ್ರಿಯೆಯ ಅಧ್ಯಯನದೊಂದಿಗೆ ಮತ್ತು ಅವುಗಳನ್ನು ಸ್ರವಿಸುವ ನಿರ್ನಾಳ ಗ್ರಂಥಿಗಳು ಹಾಗೂ ಅಂಗಾಂಶಗಳ ಜೀವಕೋಶಗಳೊಂದಿಗೆ ಅಂತಃಸ್ರಾವ ಶಾಸ್ತ್ರವು ಸಂಬಂಧವನ್ನು ಹೊಂದಿದೆ. ನಿರ್ನಾಳ ಗ್ರಂಥಿಗಳ ವ್ಯವಸ್ಥೆಯು ಶರೀರದ ವಿಭಿನ್ನ ಭಾಗಗಳಲ್ಲಿ ಹಲವಾರು ಗ್ರಂಥಿಗಳನ್ನು ಒಳಗೊಂಡಿದ್ದು, ಒಂದು ನಾಳ ವ್ಯವಸ್ಥೆಯೊಳಗೆ ಸ್ರವಿಸುವುದಕ್ಕೆ ಬದಲಾಗಿ ನೇರವಾಗಿ ರಕ್ತದೊಳಗೆ ಆ ಗ್ರಂಥಿಗಳು ಹಾರ್ಮೋನುಗಳನ್ನು ಸ್ರವಿಸುತ್ತವೆ. ಹಾರ್ಮೋನುಗಳು ವಿಭಿನ್ನ ಕಾರ್ಯಚಟುವಟಿಕೆಗಳು ಹಾಗೂ ಕ್ರಿಯಾವಿಧಾನಗಳನ್ನು ಹೊಂದಿವೆ; ಒಂದು ಹಾರ್ಮೋನು ವಿಭಿನ್ನ ಉದ್ದೇಶಿತ ಅಂಗಗಳ ಮೇಲೆ ಹಲವಾರು ಪರಿಣಾಮಗಳನ್ನು ಹೊಂದಿರಬಹುದು, ಮತ್ತು, ಇದಕ್ಕೆ ಪ್ರತಿಯಾಗಿ ಒಂದು ಉದ್ದೇಶಿತ ಅಂಗವು ಒಂದಕ್ಕಿಂತ ಹೆಚ್ಚಿನ ಹಾರ್ಮೋನಿನಿಂದ ಪ್ರಭಾವಕ್ಕೊಳಗಾಗಬಹುದಾಗಿದೆ. ಬೇಲಿಸ್‌ ಮತ್ತು ಸ್ಟಾರ್ಲಿಂಗ್‌‌ ಎಂಬಿಬ್ಬರು 1902ರಲ್ಲಿ ನೀಡಿರುವ ಮೂಲವ್ಯಾಖ್ಯಾನದಲ್ಲಿ (ಕೆಳಗೆ ನೋಡಿ) ಸ್ಪಷ್ಟವಾಗಿ ನಮೂದಿಸಿರುವ ಪ್ರಕಾರ, ರಾಸಾಯನಿಕವೊಂದು ಒಂದು ಹಾರ್ಮೋನು ಎಂಬುದಾಗಿ ವರ್ಗೀಕರಿಸಲ್ಪಡಬೇಕಾದರೆ ಅದು ಒಂದು ಅಂಗದಿಂದ ಉತ್ಪಾದಿಸಲ್ಪಡಬೇಕು, ರಕ್ತದೊಳಗೆ (ಸಣ್ಣ ಪ್ರಮಾಣಗಳಲ್ಲಿ) ಅದು ಬಿಡುಗಡೆಯಾಗಬೇಕು ಮತ್ತು ತನ್ನ ನಿರ್ದಿಷ್ಟ ಚಟುವಟಿಕೆಯನ್ನು ವಿನಿಯೋಗಿಸಲು ದೂರದ ಅಂಗವೊಂದಕ್ಕೆ ರಕ್ತದ ಮೂಲಕ ಅದು ಸಾಗಿಸಲ್ಪಡಬೇಕು. ಈ ವ್ಯಾಖ್ಯಾನವು ಬಹುಪಾಲು "ಶಿಷ್ಟ" ಹಾರ್ಮೋನುಗಳಿಗೆ ಹೊಂದಿಕೆಯಾಗುತ್ತದೆ, ಆದರೆ ಪ್ಯಾರಾಕ್ರೈನ್‌ ಕಾರ್ಯವಿಧಾನಗಳು (ಒಂದು ಅಂಗಾಂಶ ಅಥವಾ ಅಂಗದೊಳಗಿನ ಜೀವಕೋಶಗಳ ನಡುವಿನ ರಾಸಾಯನಿಕ ಸಂವಹನೆ), ಆಟೋಕ್ರೈನ್‌ ಸಂಕೇತಗಳು (ಒಂದೇ ಜೀವಕೋಶದ ಮೇಲೆ ಪ್ರಭಾವ ಬೀರುವ ಒಂದು ರಾಸಾಯನಿಕ), ಮತ್ತು ಇಂಟ್ರಾಕ್ರೈನ್‌ ಸಂಕೇತಗಳು (ಒಂದೇ ಜೀವಕೋಶದೊಳಗಡೆ ಪ್ರಭಾವ ಬೀರುವ ಒಂದು ರಾಸಾಯನಿಕ) ಸಹ ಅಸ್ತಿತ್ವದಲ್ಲಿವೆ.[೧] ಒಂದು ನರ ಅಂತಃಸ್ರಾವ ಸಂಕೇತವು ಒಂದು a "ಶಿಷ್ಟ" ಹಾರ್ಮೋನು ಆಗಿದ್ದು, ಒಂದು ನರಸ್ರಾವಕ ನರಕೋಶದಿಂದ ಅದು ರಕ್ತದೊಳಗೆ ಬಿಡುಗಡೆಯಾಗುತ್ತದೆ (ನರ ಅಂತಃಸ್ರಾವ ಶಾಸ್ತ್ರದ ಕುರಿತಾದ ಲೇಖನವನ್ನು ನೋಡಿ). ನಿರ್ದಿಷ್ಟ ಗ್ರಾಹಕಗಳನ್ನು ಉದ್ದೇಶಿತ ಅಂಗದಲ್ಲಿ ಬಂಧಿಸಿಡುವ ಮೂಲಕ ಹಾರ್ಮೋನುಗಳು ಕಾರ್ಯನಿರ್ವಹಿಸುತ್ತವೆ. ಬೌಲಿಯು ಸೂಚಿಸುವಂತೆ, ಒಂದು ಗ್ರಾಹಕವು ಕನಿಷ್ಟಪಕ್ಷ ಎರಡು ಮೂಲಭೂತ ಘಟಕಗಳನ್ನು ಹೊಂದಿದೆ:

 • ಒಂದು ಗುರುತಿಸುವಿಕೆಯ ತಾಣವಾಗಿದ್ದು, ಅದಕ್ಕೆ ಹಾರ್ಮೋನು ಅಂಟಿಕೊಳ್ಳುತ್ತದೆ
 • ಮತ್ತೊಂದು ಕಾರ್ಯನಿರ್ವಾಹಕ ತಾಣವಾಗಿದ್ದು, ಅದು ಕೋಶೀಯ ಕ್ರಿಯೆಯ ಮಾರ್ಪಾಡನ್ನು ತ್ವರಿತಗೊಳಿಸುತ್ತದೆ.[೨]

ಇವುಗಳ ಮಧ್ಯೆ ಒಂದು "ಅಡ್ಡಹಾಯ್ಕೆಯ ಕಾರ್ಯವಿಧಾನ"ವು ಅಸ್ತಿತ್ವದಲ್ಲಿದ್ದು, ಅದರಲ್ಲಿನ ಹಾರ್ಮೋನಿನ ಅಂಟಿಕೊಳ್ಳುವಿಕೆಯು ಅಲ್ಲೋಸ್ಟೆರಿಕ್‌ ಮಾರ್ಪಾಡನ್ನು ಚೋದಿಸುತ್ತದೆ; ಈ ಮಾರ್ಪಾಡು ಅದಕ್ಕೆ ಪ್ರತಿಯಾಗಿ ಸೂಕ್ತ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ.

ಹಾರ್ಮೋನುಗಳ ರಾಸಾಯನಿಕ ವರ್ಗಗಳು[ಬದಲಾಯಿಸಿ]

ಚಿತ್ರ:Amine hormones, norepinephrine and triiodothryonine.jpg
ಅಮೈನ್‌ ಹಾರ್ಮೋನುಗಳು: ನೋರೆಪಿನೆಫ್ರೀನ್‌ ಮತ್ತು ಟ್ರೈಅಯಡೋಥೈರೋನಿನ್‌
ಸ್ಟೆರಾಯ್ಡ್‌ ಹಾರ್ಮೋನುಗಳು: ಕಾರ್ಟಿಸಾಲ್‌ ಮತ್ತು ವಿಟಮಿನ್‌ D3

ಗ್ರಿಫಿನ್‌‌ ಮತ್ತು ಒಜೆಡಾ ಎಂಬಿಬ್ಬರು ಹಾರ್ಮೋನಿನ ಮೂರು ವಿಭಿನ್ನ ವರ್ಗಗಳನ್ನು ಅವುಗಳ ರಾಸಾಯನಿಕ ಸಂಯೋಜನೆಯನ್ನು ಆಧರಿಸಿ ಗುರುತಿಸುತ್ತಾರೆ:[೩]

ಅಮೈನುಗಳು[ಬದಲಾಯಿಸಿ]

ನೋರ್‌ಪಿನೆಫ್ರೀನ್‌, ಎಪಿನೆಫ್ರೀನ್‌, ಮತ್ತು ಡೋಪಮೈನ್‌‌‌ನಂಥ ಅಮೈನುಗಳು, ಏಕ ಅಮೈನೋ ಆಮ್ಲಗಳಿಂದ ಜನ್ಯವಾಗಿವೆ. ಈ ನಿದರ್ಶನದಲ್ಲಿ ಅದು ಟೈರೋಸೀನ್ ಆಗಿದೆ‌. 3,5,3’-ಟ್ರೈಅಯಡೋಥೈರೋನೀನ್‌ (T3) ಮತ್ತು 3,5,3’,5’-ಟೆಟ್ರಾಅಯಡೋಥೈರೋನೀನ್‌‌ನಂಥ (ಥೈರಾಕ್ಸೀನ್‌, T4) ಥೈರಾಯ್ಡ್ ಹಾರ್ಮೋನುಗಳು ಈ ವರ್ಗದ ಒಂದು ಉಪವರ್ಗವಾಗಿವೆ, ಏಕೆಂದರೆ ಎರಡು ಅಯೋಡಿನೀಕೃತ ಟೈರೋಸೀನ್‌ ಅಮೈನೋ ಆಮ್ಲ ಶೇಷಗಳ ಸಂಯೋಜನೆಯಿಂದ ಅವು ಉತ್ಪತ್ತಿಯಾಗುತ್ತವೆ.

ಪೆಪ್ಟೈಡು ಮತ್ತು ಪ್ರೋಟೀನು[ಬದಲಾಯಿಸಿ]

ಪೆಪ್ಟೈಡು ಹಾರ್ಮೋನುಗಳು ಮತ್ತು ಪ್ರೋಟೀನು ಹಾರ್ಮೋನುಗಳು ಮೂರರಿಂದ (ಥೈರೋಟ್ರೋಪಿನ್‌-ಬಿಡುಗಡೆಮಾಡುವ ಹಾರ್ಮೋನಿನ ಸಂದರ್ಭದಲ್ಲಿ) 200ಕ್ಕೂ ಹೆಚ್ಚಿನವರೆಗಿರುವ (ಕೋಶಕವನ್ನು-ಉತ್ತೇಜಿಸುವ ಹಾರ್ಮೋನಿನ ಸಂದರ್ಭದಲ್ಲಿ) ಅಮೈನೋ ಆಮ್ಲ ಶೇಷಗಳನ್ನು ಒಳಗೊಂಡಿರುತ್ತವೆ ಮತ್ತು 30,000ದಷ್ಟು ದೊಡ್ಡದಾಗಿರುವ ಆಣ್ವಿಕ ತೂಕಗಳನ್ನು ಅವು ಹೊಂದಬಲ್ಲವಾಗಿರುತ್ತವೆ. ಅಡಿಪೋಸೈಟುಗಳಿಂದ ಲೆಪ್ಟಿನ್‌, ಜಠರದಿಂದ ಘ್ರೇಲಿನ್‌‌, ಮತ್ತು ಮೇದೋಜೀರಕ ಗ್ರಂಥಿಯಿಂದ ಇನ್‌ಸುಲಿನ್‌ ಹಾರ್ಮೋನುಗಳು ಸ್ರವಿಸಲ್ಪಡುವಂತೆ, ಪಿಟ್ಯುಟರಿ ಗ್ರಂಥಿಯಿಂದ ಸ್ರವಿಸಲ್ಪಡುವ ಎಲ್ಲಾ ಹಾರ್ಮೋನುಗಳೂ ಪೆಪ್ಟೈಡು ಹಾರ್ಮೋನುಗಳಾಗಿವೆ.

ಸ್ಟೆರಾಯ್ಡ್‌[ಬದಲಾಯಿಸಿ]

ಸ್ಟೆರಾಯ್ಡ್ ಹಾರ್ಮೋನುಗಳು ತಮ್ಮ ಮೂಲ ಸಂಯುಕ್ತವಾದ ಕೊಲೆಸ್ಟೆರಾಲ್‌‌ನಿಂದ ಪರಿವರ್ತಿತವಾಗಿವೆ. ಸಸ್ತನಿಯ ಸ್ಟೆರಾಯ್ಡ್‌‌ ಹಾರ್ಮೋನುಗಳನ್ನು ಅವು ಅಂಟಿಕೊಳ್ಳುವ ಗ್ರಾಹಕಗಳ ಅನುಸಾರ ಐದು ಗುಂಪುಗಳಾಗಿ ವಿಂಗಡಿಸಬಹುದು: ಗ್ಲೂಕೋಕಾರ್ಟಿಕಾಯ್ಡ್‌ಗಳು, ಮಿನರಲೋಕಾರ್ಟಿಕಾಯ್ಡ್‌ಗಳು, ಆಂಡ್ರೋಜೆನ್‌ಗಳು, ಈಸ್ಟ್ರೋಜೆನ್‌ಗಳು, ಮತ್ತು ಪ್ರೊಜೆಸ್ಟಾಜೆನ್‌ಗಳು.

ಅಂತಃಸ್ರಾವ ಶಾಸ್ತ್ರದ ಇತಿಹಾಸ ಮತ್ತು ಪ್ರಮುಖ ಆವಿಷ್ಕಾರಗಳು[ಬದಲಾಯಿಸಿ]

ಅಂತಃಸ್ರಾವ ಶಾಸ್ತ್ರದ ಅಧ್ಯಯನವು ಚೀನಾದಲ್ಲಿ ಪ್ರಾರಂಭವಾಯಿತು. 200 BCಯ[೪] ಹೊತ್ತಿಗಾಗಲೇ ಮಾನವ ಮೂತ್ರದಿಂದ ಲೈಂಗಿಕ ಹಾರ್ಮೋನು ಮತ್ತು ಪಿಟ್ಯುಟರಿ ಹಾರ್ಮೋನುಗಳನ್ನು ಪ್ರತ್ಯೇಕಿಸುವುದನ್ನು ಅರಿತಿದ್ದ ಚೀನಿಯರು, ಅವನ್ನು ಔಷಧೀಯ ಉದ್ದೇಶಗಳಿಗಾಗಿ ಬಳಸುತ್ತಿದ್ದರು. ಉತ್ಪತನದಂಥ ಅನೇಕ ಸಂಕೀರ್ಣ ವಿಧಾನಗಳನ್ನು ಅವರು ಬಳಸಿದರು.[೪] ಅಂತಿಮವಾಗಿ, ಸತ್ತ್ವಗುಂದಿಸಿದ ಎಳೆಹುಂಜಗಳು ಜುಟ್ಟುಗಳು ಮತ್ತು ಜೋಲಾಡುವ ಮಾಂಸಲ ಭಾಗಗಳನ್ನು ಬೆಳೆಸಿಕೊಳ್ಳಲಿಲ್ಲ ಅಥವಾ ಗಂಡಿನ ನಡವಳಿಕೆಯನ್ನು ಬಹಿರಂಗವಾಗಿ ಪ್ರದರ್ಶಿಸಲಿಲ್ಲ ಎಂಬುದನ್ನು ಬರ್ಟ್‌ಹೋಲ್ಡ್‌ ಎಂಬಾತ ಗಮನಿಸಿದಾಗ, ಯುರೋಪಿಯನ್ನರ ಅಂತಃಸ್ರಾವ ಶಾಸ್ತ್ರವು ಶುರುವಾಯಿತು (ಆದಾಗ್ಯೂ, ಸುಮಾರು 1500 ವರ್ಷಗಳಷ್ಟು ಮೊದಲೇ ಈ ವಿಜ್ಞಾನವನ್ನು ಚೀನಿಯರು ಕಂಡುಕೊಂಡಿದ್ದರು ಎಂಬುದನ್ನು ಗಮನಿಸಬೇಕು.) [೫] ಅದೇ ಪಕ್ಷಿಯ ಅಥವಾ ಮತ್ತೊಂದು ಸತ್ತ್ವಗುಂದಿಸಿದ ಪಕ್ಷಿಯ ಕಿಬ್ಬೊಟ್ಟೆಯ ಕುಹರದೊಳಗೆ ವೃಷಣಗಳನ್ನು ಮರಳಿ ಬದಲಿಸಿದ್ದರಿಂದ, ಸಾಮಾನ್ಯವಾದ ನಡವಳಿಕೆಯ ಮತ್ತು ಸ್ವರೂಪ ರಚನೆಯ ಬೆಳವಣಿಗೆಯು ಉಂಟಾದುದನ್ನು ಅವನು ಗಮನಿಸಿದ, ಮತ್ತು ವೃಷಣಗಳು ಒಂದು ದ್ರವ್ಯವನ್ನು ಸ್ರವಿಸಿದವು, ಈ ದ್ರವ್ಯವು ರಕ್ತವನ್ನು "ಒಂದು ಹದಕ್ಕೆ ತಂದಿತು", ಅದಕ್ಕೆ ಪ್ರತಿಯಾಗಿ ಸದರಿ ಹದಗೊಂಡ ಅಥವಾ ಒಗ್ಗಿಸಲಾದ ರಕ್ತವು ಎಳೆಹುಂಜದ ಶರೀರದ ಮೇಲೆ ತನ್ನ ಪ್ರಭಾವವನ್ನು ಬೀರಿತು ಎಂದು ಆತ (ತಪ್ಪಾಗಿ) ತೀರ್ಮಾನಕ್ಕೆ ಬಂದ. ವಾಸ್ತವವಾಗಿ, ಇತರ ಎರಡು ವಿಷಯಗಳ ಪೈಕಿ ಒಂದು ನಿಜವಾಗಿದ್ದಿರಲು ಸಾಧ್ಯವಿದೆ: ಅಂದರೆ, ರಕ್ತದ ಒಂದು ಘಟಕವನ್ನು ವೃಷಣಗಳು ಮಾರ್ಪಡಿಸಿದವು ಅಥವಾ ಸಕ್ರಿಯಗೊಳಿಸಿದವು ಎಂಬುದು ಅಥವಾ ರಕ್ತದಿಂದ ಒಂದು ಪ್ರತಿಬಂಧಕ ಅಂಶವನ್ನು ವೃಷಣಗಳು ತೆಗೆದುಹಾಕಿದವು ಎಂಬುದು. ಸತ್ತ್ವಗುಂದಿಸಿದ ಪ್ರಾಣಿಗಳಲ್ಲಿನ ಅವುಗಳ ಕಾರ್ಯಚಟುವಟಿಕೆಯನ್ನು ವೃಷಣಗಳ ಸಾರಸತ್ವವು ಬದಲಿಸಬಲ್ಲದು ಎಂಬುದು ತೋರಿಸಲ್ಪಡುವವರೆಗೂ ಗಂಡಿನ ಲಕ್ಷಣಗಳನ್ನು ಉಂಟುಮಾಡುವ ಒಂದು ದ್ರವ್ಯವನ್ನು ವೃಷಣಗಳು ಬಿಡುಗಡೆಮಾಡಿದವು ಎಂಬುದು ಸಾಬೀತಾಗಲಿಲ್ಲ. ಅಪ್ಪಟವಾದ, ಸ್ಫಟಿಕದಂಥ ಟೆಸ್ಟೋಸ್ಟೆರಾನ್‌ 1938ರಲ್ಲಿ ಪ್ರತ್ಯೇಕಿಸಲ್ಪಟ್ಟಿತು.[೬] ಬಹುಪಾಲು ಸಂಗತವಾದ ಅಂಗಾಂಶಗಳು ಮತ್ತು ನಿರ್ನಾಳ ಗ್ರಂಥಿಗಳು ಮುಂಚಿನ ಅಂಗರಚನಾ ಶಾಸ್ತ್ರಜ್ಞರಿಂದ ಗುರುತಿಸಲ್ಪಟ್ಟಿದ್ದವಾದರೂ, ಜೀವಿವಿಜ್ಞಾನದ ಕ್ರಿಯೆ ಮತ್ತು ರೋಗವನ್ನು ಅರ್ಥೈಸಿಕೊಳ್ಳುವಲ್ಲಿನ ಬಹುಪಾಲು ರಸಧಾತುಗಳಿಗೆ ಸಂಬಂಧಿಸಿದ ಒಂದು ಮಾರ್ಗ ಅಥವಾ ಪ್ರಸ್ತಾವಕ್ಕೆ ಅರಿಸ್ಟಾಟಲ್‌, ಹಿಪ್ಪೋಕ್ರೇಟಸ್‌, ಲೂಕ್ರೆಟಿಯಸ್‌, ಸೆಲ್ಸಸ್‌, ಮತ್ತು ಗೇಲನ್‌‌‌‌ನಂಥ ಶಿಷ್ಟ ಚಿಂತಕರಿಂದ ಸಮ್ಮತಿ ಸಿಕ್ಕಿತು ಎಂದು ಫ್ರೀಮನ್‌ ಮತ್ತು ಇತರರು[೭] ಅಭಿಪ್ರಾಯಪಟ್ಟಿದ್ದಾರೆ, ಮತ್ತು 19ನೇ ಶತಮಾನದಲ್ಲಿ ಸೂಕ್ಷ್ಮಜೀವಿ ಸಿದ್ಧಾಂತ, ಶರೀರ ವಿಜ್ಞಾನ, ಮತ್ತು ರೋಗನಿದಾನ ಶಾಸ್ತ್ರಕ್ಕಿರುವ ಅಂಗದ ಆಧಾರವು ಉದಯವಾಗುವವರೆಗೂ ಈ ಸಿದ್ಧಾಂತಗಳು ಅನಿಶ್ಚಿತವಾಗಿದ್ದವು. ಮಧ್ಯಯುಗದ ಪರ್ಷಿಯಾದಲ್ಲಿ, ಅವಿಸೆನ್ನಾ (980-1037) ಎಂಬಾತ ದಿ ಕೆನನ್‌ ಆಫ್‌ ಮೆಡಿಸಿನ್‌ (ಸುಮಾರು 1025) ಎಂಬ ಕೃತಿಯಲ್ಲಿ ಡಯಾಬಿಟಿಸ್‌ ಮೆಲ್ಲಿಟಸ್‌ ಕುರಿತಾದ ಒಂದು ವಿವರವಾದ ಮಾಹಿತಿಯನ್ನು ನೀಡುತ್ತಾ, "ವಿಪರೀತ ಹಸಿವು ಮತ್ತು ಲೈಂಗಿಕ ಚಟುವಟಿಕೆಗಳಲ್ಲಿನ ಕುಸಿತವನ್ನು ಅವನು ಈ ಕೃತಿಯಲ್ಲಿ ವಿವರಿಸಿದ ಮತ್ತು ಮಧುಮೇಹಿಗಳ ಮೂತ್ರವು ಸಿಹಿ ರುಚಿಯಿಂದ ಕೂಡಿರುವ ಅಂಶವನ್ನು ದಾಖಲಿಸಿದ." ಅವನಿಗಿಂತ ಮುಂಚೆಯಿದ್ದ ಕ್ಯಾಪಡೋಸಿಯಾದ ಅರೇಟಿಯಸ್‌ ರೀತಿಯಲ್ಲಿ ಅವಿಸೆನ್ನಾ ಕೂಡಾ ಒಂದು ಪ್ರಾಥಮಿಕ ಮತ್ತು ದ್ವಿತೀಯಕ ಹಂತದ ಮಧುಮೇಹವನ್ನು ಗುರುತಿಸಿದ. ಮಧುಮೇಹದ ಗ್ಯಾಂಗ್ರೀನು ಕುರಿತಾಗಿಯೂ ವಿವರಿಸಿದ ಆತ, ಲೂಪಿನ್‌ ಬೀಜಗಳು, ಟ್ರೈಗೋನೆಲ್ಲಾ (ಮೆಂತ್ಯದ ಗಿಡ‌), ಹಾಗೂ ಶತಾವರಿ ಬೀಜಗಳ ಒಂದು ಮಿಶ್ರಣವನ್ನು ಬಳಸಿಕೊಂಡು ಮಧುಮೇಹಕ್ಕೆ ಚಿಕಿತ್ಸೆ ನೀಡಿದ. ಈ ಮಿಶ್ರಣವು ಸಕ್ಕರೆಯ ವಿಸರ್ಜನೆಯಲ್ಲಿ ಒಂದು ಗಮನಾರ್ಹವಾದ ಕುಸಿತವನ್ನು ಉಂಟುಮಾಡುತ್ತದೆ ಮತ್ತು ಈ ಚಿಕಿತ್ಸೆಯನ್ನು ಆಧುನಿಕ ಕಾಲದಲ್ಲಿ ಈಗಲೂ ಶಿಫಾರಸು ಮಾಡಲಾಗುತ್ತಿದೆ. ಅವಿಸೆನ್ನಾ "ಡಯಾಬಿಟಿಸ್‌ ಇನ್‌ಸಿಪಿಡಿಯಸ್‌ ಸಮಸ್ಯೆಯ ಕುರಿತಾಗಿಯೂ ಅತ್ಯಂತ ಕರಾರುವಾಕ್ಕಾಗಿ ಮೊಟ್ಟಮೊದಲ ಬಾರಿಗೆ ವಿವರಿಸಿದನಾದರೂ", ನಂತರ ಬಂದ ಜೋಹಾನ್‌ ಪೀಟರ್‌ ಫ್ರಾಂಕ್‌ (1745-1821) ಎಂಬಾತ ಡಯಾಬಿಟಿಸ್‌ ಮೆಲ್ಲಿಟಸ್‌ ಹಾಗೂ ಡಯಾಬಿಟಿಸ್‌ ಇನ್‌ಸಿಪಿಡಿಯಸ್‌ ನಡುವಿನ ವ್ಯತ್ಯಾಸವನ್ನು ಮೊದಲಬಾರಿಗೆ ತೋರಿಸಿದ.[೮] 12ನೇ ಶತಮಾನದಲ್ಲಿ, ಝಯಾನ್‌ ಅಲ್‌-ಡಿನ್‌ ಅಲ್‌-ಜುರ್ಜಾನಿ ಎಂಬ ಮತ್ತೋರ್ವ ಮುಸ್ಲಿಂ ವೈದ್ಯನು ಗಳಗಂಡ ಮತ್ತು ಮೆಡ್ಡಗಣ್ಣು ಸಮಸ್ಯೆಯ ನಡುವಿನ ಸಂಬಂಧವನ್ನು ಗಮನಕ್ಕೆ ತಂದುಕೊಂಡ ನಂತರ, ಥೆಸರಸ್‌ ಆಫ್‌ ದಿ ಶಾಹ್‌ ಆಫ್‌ ಖ್ವಾರಜ್ಮ್‌ ಎಂಬ ತನ್ನ ಕೃತಿಯಲ್ಲಿ ಗ್ರೇವ್ಸ್‌ ರೋಗದ ಕುರಿತಾದ ಮೊದಲ ವಿವರಣೆಯನ್ನು ಒದಗಿಸಿದ. ಈ ಕೃತಿಯು ಆ ಕಾಲಕ್ಕೆ ಸಂಬಂಧಿಸಿದ ಒಂದು ಪ್ರಮುಖ ವೈದ್ಯಕೀಯ ನಿಘಂಟಾಗಿದೆ.[೯][೧೦] ಗಳಗಂಡ ಮತ್ತು ಹೃದಯಾತಿಸ್ಪಂದನದ ನಡುವಿನ ಒಂದು ಸಂಬಂಧವನ್ನೂ ಸಹ ಅಲ್‌-ಜುರಾನಿ ಪ್ರಮಾಣೀಕರಿಸಿದ.[೮] ಈ ರೋಗಕ್ಕೆ ನಂತರದಲ್ಲಿ ಐರಿಷ್‌ ವೈದ್ಯ ರಾಬರ್ಟ್‌ ಜೇಮ್ಸ್‌ ಗ್ರೇವ್ಸ್‌ನ[೧೧] ಹೆಸರನ್ನು ಇಡಲಾಯಿತು. ಈತ 1835ರಲ್ಲಿ ಮೆಡ್ಡಗಣ್ಣಿನೊಂದಿಗಿನ ಗಳಗಂಡದ ಒಂದು ಪ್ರಕರಣವನ್ನು ವಿವರಿಸಿದ. ಜರ್ಮನಿಯ ಕಾರ್ಲ್‌ ಅಡಾಲ್ಫ್‌ ವಾನ್‌ ಬೇಸ್‌ಡೋವ್‌ ಎಂಬಾತ ಕೂಡಾ 1840ರಲ್ಲಿ ಚಿಹ್ನೆಗಳ ಅದೇ ಸಮೂಹವನ್ನು ಸ್ವತಂತ್ರವಾಗಿ ದಾಖಲಿಸಿದರೆ, ಇದಕ್ಕೂ ಮುಂಚಿತವಾಗಿ ಕ್ರಮವಾಗಿ[೧೨] 1802 ಮತ್ತು 1810ರಲ್ಲಿ ಗಿಯುಸೆಪ್ಪೆ ಫ್ಲಾಜಾನಿ ಮತ್ತು ಆಂಟೋನಿಯೋ ಗಿಯುಸೆಪ್ಪೆ ಟೆಸ್ಟಾ ಎಂಬ ಇಬ್ಬರು ಇಟಾಲಿಯನ್ನರು ರೋಗದ ಕುರಿತಾದ ವರದಿಗಳನ್ನು ಪ್ರಕಟಿಸಿದ್ದರು. ಅಷ್ಟೇ ಅಲ್ಲ, 18ನೇ ಶತಮಾನದ ಅಂತ್ಯದ ವೇಳೆಗೆ ಕ್ಯಾಲೆಬ್‌ ಹಿಲಿಯರ್‌ ಪ್ಯಾರಿ (ಎಡ್ವರ್ಡ್‌ ಜೆನ್ನರ್‌‌‌ನ ಓರ್ವ ಸ್ನೇಹಿತ) ಎಂಬ ಓರ್ವ ಇಂಗ್ಲಿಷ್‌ ವೈದ್ಯ ಕೂಡಾ ರೋಗದ ಕುರಿತಾದ ವರದಿಗಳನ್ನು ದಾಖಲಿಸಿದ್ದ.[೧೩] 1902ರಲ್ಲಿ ಬೇಲಿಸ್‌ ಮತ್ತು ಸ್ಟಾರ್ಲಿಂಗ್‌‌ ಎಂಬಿಬ್ಬರು ಪ್ರಯೋಗವೊಂದನ್ನು ನಡೆಸಿದರು ಮತ್ತು ಸಣ್ಣಕರುಳಿನ ಆರಂಭಭಾಗದೊಳಗೆ (ಅಂದರೆ ಡುಯೋಡಿನಂಗೆ) ತೊಟ್ಟಿಕ್ಕಿಸಲಾದ ಆಮ್ಲವು, ಸ್ರವಿಸುವಿಕೆಯನ್ನು ಪ್ರಾರಂಭಿಸುವಂತೆ ಮೇದೋಜೀರಕ ಗ್ರಂಥಿಯನ್ನು ಪ್ರಚೋದಿಸಿದುದನ್ನು ವೀಕ್ಷಿಸಿದರು. ಈ ಎರಡರ ನಡುವಿನ ಎಲ್ಲಾ ನರಸಂಪರ್ಕಗಳನ್ನು ಅವರು ತೆಗೆದುಹಾಕಿದ ನಂತರವು ಸ್ರವಿಸುವಿಕೆಯು ಮುಂದುವರೆದಿತ್ತು.[೧೪] ಕಂಠಾಭಿಧಮನಿಯೊಳಗೆ ಜೆಜ್ಯುನಮ್‌ ಲೋಳೆಪೊರೆಯ ಸಾರಸತ್ವವನ್ನು ಚುಚ್ಚುವ ಮೂಲಕವೂ ಇದೇ ಬಗೆಯ ಪ್ರತಿಕ್ರಿಯೆಯನ್ನು ಉಂಟುಮಾಡಬಹುದಾಗಿದ್ದು, ಲೋಳೆಪೊರೆಯಲ್ಲಿನ ಅದೇ ಅಂಶವು ಇದಕ್ಕೆ ಹೊಣೆಯಾಗಿತ್ತು ಎಂಬುದನ್ನು ಅವರು ತೋರಿಸಿದರು. ಈ ದ್ರವ್ಯಕ್ಕೆ ಅವರು "ಸೆಕ್ರಿಟಿನ್‌" ಎಂದು ಹೆಸರಿಸಿದರು ಮತ್ತು ಈ ರೀತಿಯಲ್ಲಿ ಕಾರ್ಯಚಟುವಟಿಕೆಯನ್ನು ತೋರಿಸುವ ರಾಸಾಯನಿಕಗಳಿಗಾಗಿ ಅವರು ಹಾರ್ಮೋನು ಎಂಬ ಪದವನ್ನು ಸೃಷ್ಟಿಸಿದರು. ವಾನ್‌ ಮೆರಿಂಗ್‌ ಮತ್ತು ಮಿನ್ಕೋವ್ಸ್ಕಿ ಎಂಬಿಬ್ಬರು 1889ರಲ್ಲಿ ವೀಕ್ಷಣೆಯೊಂದನ್ನು ಮಾಡುತ್ತಾ, ಶಸ್ತ್ರಚಿಕಿತ್ಸೆಯ ರೂಪದಲ್ಲಿ ಮೇದೋಜೀರಕ ಗ್ರಂಥಿಯನ್ನು ತೆಗೆದುಹಾಕುವುದರಿಂದ ರಕ್ತದ ಸಕ್ಕರೆಯಲ್ಲಿ ಒಂದು ಹೆಚ್ಚಳ ಕಂಡುಬರುತ್ತದೆ, ಇದನ್ನು ಅನುಸರಿಸಿ ಗಾಢವಿಸ್ಮೃತಿ ಹಾಗೂ ಅಂತಿಮವಾಗಿ ಸಾವು ಸಂಭವಿಸುತ್ತದೆ - ಇವು ಡಯಾಬಿಟಿಸ್‌ ಮೆಲ್ಲಿಟಸ್‌‌‌ನ ಚಿಹ್ನೆಗಳಾಗಿವೆ ಎಂಬುದನ್ನು ಕಂಡುಕೊಂಡರು. 1922ರಲ್ಲಿ, ಬ್ಯಾಂಟಿಂಗ್‌ ಮತ್ತು ಬೆಸ್ಟ್‌ ಎಂಬಿಬ್ಬರು ಈ ಕುರಿತು ಅಧ್ಯಯನ ಮಾಡುತ್ತಾ, ಮೇದೋಜೀರಕ ಗ್ರಂಥಿಯನ್ನು ಸಮರೂಪವಾಗಿಸುವಿಕೆಯಿಂದ ಮತ್ತು ಜನ್ಯವಾದ ಸಾರಸತ್ವವನ್ನು ಚುಚ್ಚುವುದರಿಂದ ಈ ಸ್ಥಿತಿಯು ಹಿಂದಕ್ಕೆ ತಿರುಗಿಸಲ್ಪಡುತ್ತದೆ ಎಂಬುದನ್ನು ಕಂಡುಕೊಂಡರು.[೧೫] ಇದಕ್ಕೆ ಹೊಣೆಯಾಗಿರುವ ಇನ್‌ಸುಲಿನ್‌ ಹಾರ್ಮೋನನ್ನು ಫ್ರೆಡೆರಿಕ್‌ ಸ್ಯಾಂಗರ್‌ 1953ರಲ್ಲಿ ಅನುಕ್ರಮ ಸರಣಿಯಲ್ಲಿ ವ್ಯವಸ್ಥೆಗೊಳಿಸುವವರೆಗೂ ಅದರ ಆವಿಷ್ಕಾರವಾಗಿರಲಿಲ್ಲ. ನರಹಾರ್ಮೋನುಗಳು 1921ರಲ್ಲಿ ಮೊದಲಬಾರಿಗೆ ಒಟ್ಟೊ ಲೋವಿಯಿಂದ ಗುರುತಿಸಲ್ಪಟ್ಟವು.[೧೬] ಒಂದು ಲವಣಯುಕ್ತ ದ್ರವಪಾತ್ರೆಯಲ್ಲಿ ಆತ ಕಪ್ಪೆಯೊಂದರ ಹೃದಯವನ್ನು (ಅದರ ವೇಗಸ್‌ ನರವು ತಾಗಿಕೊಂಡಿರುವಂತೆ ನರಗಳನ್ನು ಜೋಡಿಸುವ ಮೂಲಕ) ಬೆಚ್ಚಗೆ ಬೆಳೆಯುವಂತೆ ಮಾಡಿದ, ಹಾಗೂ ಕೆಲವೊಂದು ಕಾಲದವರೆಗೆ ಆ ದ್ರಾವಣದಲ್ಲೇ ಅದನ್ನು ಇರಿಸಿದ. ನರಗಳ ಜೋಡಣೆಯನ್ನು ಹೊಂದಿರದ ಒಂದು ಎರಡನೇ ಹೃದಯವನ್ನು ತೋಯಿಸಲು ಆ ದ್ರಾವಣವು ಆಗ ಬಳಸಲ್ಪಟ್ಟಿತು. ಮೊದಲನೇ ಹೃದಯದ ಮೇಲಿನ ವೇಗಸ್‌ ನರವನ್ನು ಪ್ರಚೋದಿಸಿದಾಗಲೆಲ್ಲಾ, ಋಣಾತ್ಮಕ ಇನೋಟ್ರೋಪಿಕ್‌ (ಮಿಡಿತದ ವೈಶಾಲ್ಯ) ಮತ್ತು ಕ್ರೋನೋಟ್ರೋಪಿಕ್‌ (ಮಿಡಿತದ ಪ್ರಮಾಣ) ಚಟುವಟಿಕೆಗಳು ಎರಡೂ ಹೃದಯಗಳಲ್ಲಿ ಕಂಡುಬರುತ್ತಿದ್ದವು. ವೇಗಸ್‌ ನರವು ಪ್ರಚೋದನೆಗೊಂಡಾಗ ಎರಡೂ ಹೃದಯದಲ್ಲೂ ಇದು ಕಂಡುಬರಲಿಲ್ಲ. ವೇಗಸ್‌ ನರವು ಲವಣಯುಕ್ತ ದ್ರಾವಣಕ್ಕೆ ಏನೋ ಶಕ್ತಿಯನ್ನು ಸೇರಿಸುತ್ತಿತ್ತು. ಹೃದಯದ ವೇಗಸ್‌ಗೆ ಸಂಬಂಧಿಸಿದ ನರ ಪ್ರಚೋದನೆಗೆ ಒಂದು ಪ್ರತಿರೋಧಕ ಎಂದು ಚಿರಪರಿಚಿತವಾಗಿರುವ ಅಟ್ರೋಪೀನ್‌ನ್ನು ಬಳಸಿಕೊಂಡು ಈ ಪರಿಣಾಮಕ್ಕೆ ತಡೆಯೊಡ್ಡಬಹುದಾಗಿತ್ತು. ಸ್ಪಷ್ಟವಾಗಿ, ವೇಗಸ್‌ ನರದಿಂದ ಏನೋ ಒಂದು ಸ್ರವಿಸಲ್ಪಡುತ್ತಿತ್ತು ಮತ್ತು ಹೃದಯದ ಮೇಲೆ ಅದು ಪರಿಣಾಮ ಬೀರುತ್ತಿತ್ತು. ಸ್ನಾಯುಪ್ರಚೋದಿತ ಪರಿಣಾಮಗಳನ್ನು ಉಂಟುಮಾಡುತ್ತಿದ್ದ "ವೇಗಸ್‌ಸ್ಟಫ್‌" (ಲೋವಿ ಅದನ್ನು ಕರೆದಂತೆ) ಎಂಬುದು ನಂತರ ಅಸಿಟೈಲ್‌ಕೊಲೀನ್‌ ಹಾಗೂ ನೋರ್‌ಪಿನೆಫ್ರೀನ್‌ ಎಂಬುದಾಗಿ ಗುರುತಿಸಲ್ಪಟ್ಟಿತು. ತನ್ನ ಈ ಆವಿಷ್ಕಾರಕ್ಕಾಗಿ ಲೋವಿಯು ನೊಬೆಲ್‌ ಪ್ರಶಸ್ತಿಯನ್ನು ಗೆದ್ದುಕೊಂಡ. ಅಂತಃಸ್ರಾವ ಶಾಸ್ತ್ರದಲ್ಲಿನ ಇತ್ತೀಚಿನ ಕೆಲಸವು ಹಾರ್ಮೋನುಗಳ ಪರಿಣಾಮಗಳನ್ನು ಪ್ರಚೋದಿಸುವುದಕ್ಕೆ ಕಾರಣವಾಗಿರುವ ಆಣ್ವಿಕ ಕಾರ್ಯವಿಧಾನಗಳ ಮೇಲೆ ಗಮನಹರಿಸುತ್ತದೆ. 1962ರಲ್ಲಿ ಅರ್ಲ್‌ ಸುಥರ್‌ಲ್ಯಾಂಡ್‌ ಎಂಬಾತನಿಂದ ಕೈಗೊಳ್ಳಲ್ಪಟ್ಟ ಕೆಲಸವು ಇದಕ್ಕೆ ಸಂಬಂಧಿಸಿದ ಮೊದಲ ಉದಾಹರಣೆಯಾಗಿದೆ. ಚಟುವಟಿಕೆಯನ್ನು ಪ್ರಚೋದಿಸಲು ಹಾರ್ಮೋನುಗಳು ಜೀವಕೋಶಗಳನ್ನು ಪ್ರವೇಶಿಸುತ್ತವೆಯೋ, ಅಥವಾ ಜೀವಕೋಶಗಳ ಹೊರಗೇ ಅವು ಉಳಿದುಬಿಡುತ್ತವೆಯೋ ಎಂಬುದನ್ನು ಸುಥರ್‌ಲ್ಯಾಂಡ್‌ ಕ್ರಮಬದ್ಧವಾಗಿ ಪರೀಕ್ಷಿಸಿದ. ಫಾಸ್ಫಾರಿಲೇಸ್‌ ಕಿಣ್ವದ ಚುರುಕುಗೊಳಿಸುವಿಕೆಯ ಮೂಲಕ ಗ್ಲೈಕೋಜೆನ್‌‌‌‌ನ್ನು ಗ್ಲೂಕೋಸ್‌ ಆಗಿ ಪರಿವರ್ತಿಸಲು ಯಕೃತ್ತಿನ ಮೇಲೆ ಕಾರ್ಯನಿರ್ವಹಿಸುವ ನೋರ್‌ಪಿನೆಫ್ರೀನ್ ಕುರಿತು ಅವನು ಅಧ್ಯಯನ ಮಾಡಿದ. ಯಕೃತ್ತನ್ನು ಒಂದು ಒಳಪೊರೆಯ ಭಾಗ ಮತ್ತು ಕರಗಬಲ್ಲ ಭಾಗವಾಗಿ (ಫಾಸ್ಫಾರಿಲೇಸ್‌ ಕರಗಬಲ್ಲದು) ಆತ ಏಕರೂಪವಾಗಿಸಿದ, ಒಳಪೊರೆಯ ಭಾಗಕ್ಕೆ ನೋರ್‌ಪಿನೆಫ್ರೀನ್‌ನ್ನು ಸೇರಿಸಿದ, ಅದರ ಕರಗಬಲ್ಲ ಉತ್ಪನ್ನಗಳ ಸಾರವನ್ನು ತೆಗೆದ, ಮತ್ತು ಮೊದಲ ಕರಗಬಲ್ಲ ಭಾಗಕ್ಕೆ ಅವನ್ನು ಸೇರಿಸಿದ. ಫಾಸ್ಫಾರಿಲೇಸ್‌ ಸಕ್ರಿಯಗೊಳಿಸಲ್ಪಡುವುದರ ಜೊತೆಗೆ, ನೋರ್‌ಪಿನೆಫ್ರೀನ್‌ನ ಉದ್ದೇಶಿತ ಗ್ರಾಹಕವು ಜೀವಕೋಶದ ಒಳಪೊರೆಯ ಮೇಲಿತ್ತೇ ಹೊರತು, ಅಂತರಕೋಶೀಯವಾಗಿ ನೆಲೆಗೊಂಡಿರಲಿಲ್ಲ ಎಂಬುದನ್ನು ಅದು ಸೂಚಿಸಿತು. ಸದರಿ ಸಂಯುಕ್ತವನ್ನು ಅವನು ನಂತರ ಸೈಕ್ಲಿಕ್‌ AMP (cAMP) ಎಂದು ಗುರುತಿಸಿದ ಮತ್ತು ತನ್ನ ಈ ಆವಿಷ್ಕಾರದೊಂದಿಗೆ ಎರಡನೇ-ಸಂದೇಶವಾಹಕ-ಮಧ್ಯವರ್ತಿತನದ ಪ್ರತಿಕ್ರಿಯಾಸರಣಿಗಳ ಪರಿಕಲ್ಪನೆಯನ್ನು ಅವನು ಸೃಷ್ಟಿಸಿದ. ಲೋವಿಯಂತೆ ಅವನೂ ಸಹ, ಅಂತಃಸ್ರಾವ ಶಾಸ್ತ್ರದಲ್ಲಿನ ತನ್ನ ಪರಿವರ್ತನಾಶೀಲ ಕಾರ್ಯಕ್ಕಾಗಿ ನೊಬೆಲ್‌ ಪ್ರಶಸ್ತಿಯನ್ನು ಗೆದ್ದುಕೊಂಡ.[೧೭]

ಒಂದು ವೃತ್ತಿಯಾಗಿ ಅಂತಃಸ್ರಾವ ಶಾಸ್ತ್ರ[ಬದಲಾಯಿಸಿ]

ಪ್ರತಿಯೊಂದು ಅಂಗ ವ್ಯವಸ್ಥೆಯೂ ಹಾರ್ಮೋನುಗಳ ಸ್ರವಿಕೆ ಮತ್ತು ಅವುಗಳಿಗೆ ಪ್ರತಿಕ್ರಿಯಿಸುವ ಕೆಲಸವನ್ನು ಮಾಡುತ್ತದೆಯಾದರೂ (ಮಿದುಳು, ಶ್ವಾಸಕೋಶಗಳು, ಹೃದಯ, ಕರುಳು, ಚರ್ಮ, ಮತ್ತು ಮೂತ್ರಪಿಂಡವನ್ನು ಒಳಗೊಂಡಂತೆ), ಅಂತಃಸ್ರಾವ ಶಾಸ್ತ್ರದ ವೈದ್ಯಕೀಯ ವಿಶೇಷ ಅಧ್ಯಯನವು ಅಂತಃಸ್ರಾವಕ ಅಂಗಗಳ ಮೇಲೆ, ಅಂದರೆ ಹಾರ್ಮೋನು ಸ್ರವಿಸುವಿಕೆಯನ್ನು ಪ್ರಾಥಮಿಕ ಕ್ರಿಯೆಯಾಗಿ ಹೊಂದಿರುವ ಅಂಗಗಳ ಮೇಲೆ ಪ್ರಧಾನವಾಗಿ ಗಮನಹರಿಸುತ್ತದೆ. ಈ ಅಂಗಗಳಲ್ಲಿ ಪಿಟ್ಯುಟರಿ, ಥೈರಾಯ್ಡ್‌‌, ಅಡ್ರಿನಲ್‌ ಗ್ರಂಥಿಗಳು, ಅಂಡಾಶಯಗಳು, ವೃಷಣಗಳು, ಮತ್ತು ಮೇದೋಜೀರಕ ಗ್ರಂಥಿ ಇವುಗಳು ಸೇರಿಕೊಂಡಿವೆ. ಅಂತಃಸ್ರಾವಶಾಸ್ತ್ರಜ್ಞ ನೊಬ್ಬನು ಓರ್ವ ವೈದ್ಯನಾಗಿದ್ದು, ಮಧುಮೇಹ, ಥೈರಾಯ್ಡ್‌ ಹಾರ್ಮೋನುಗಳ ಅತಿಸ್ರಾವ, ಮತ್ತು ಇನ್ನೂ ಅನೇಕ ಅಸ್ವಸ್ಥತೆಗಳಂಥ (ಕೆಳಗೆ ನೀಡಲಾಗಿರುವ ರೋಗಗಳ ಪಟ್ಟಿಯನ್ನು ನೋಡಿ) ನಿರ್ನಾಳ ಗ್ರಂಥಿಗಳ ವ್ಯವಸ್ಥೆಯ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡುವಲ್ಲಿ ಪರಿಣತಿಯನ್ನು ಪಡೆದಿರುತ್ತಾನೆ.

ಕಾರ್ಯ[ಬದಲಾಯಿಸಿ]

ಅಂತಃಸ್ರಾವ ಶಾಸ್ತ್ರದ ವೈದ್ಯಕೀಯ ವಿಶೇಷ ಅಧ್ಯಯನವು, ಒಂದು ಅಥವಾ ಹೆಚ್ಚಿನ ಹಾರ್ಮೋನುಗಳ ಕೊರತೆ ಅಥವಾ ಹೆಚ್ಚುವರಿ ಪ್ರಮಾಣದ ಅಸ್ವಸ್ಥತೆಗಳ ಸುದೀರ್ಘಾವಧಿಯ ನಿರ್ವಹಣೆ ಮತ್ತು ಚಿಹ್ನೆಗಳು ಹಾಗೂ ಬದಲಾವಣೆಗಳ ಒಂದು ವ್ಯಾಪಕ ವೈವಿಧ್ಯತೆಯ ವಿಶ್ಲೇಷಣಾತ್ಮಕ ಮೌಲ್ಯಮಾಪನವನ್ನು ಒಳಗೊಳ್ಳುತ್ತದೆ. ಅಂತಃಸ್ರಾವಕ ಕಾಯಿಲೆಗಳ ರೋಗನಿರ್ಣಯ ಮತ್ತು ಚಿಕಿತ್ಸೆಗಳು ಬಹುತೇಕ ವಿಶೇಷ ತಜ್ಞರಿಗಿಂತ ಹೆಚ್ಚಾಗಿ, ಪ್ರಯೋಗಾಲಯದ ಪರೀಕ್ಷೆಗಳಿಂದ ನಿರ್ದೇಶಿಸಲ್ಪಡುತ್ತವೆ. ಅನೇಕ ರೋಗಗಳನ್ನು ಕೆರಳಿಸುವಿಕೆ/ಪ್ರಚೋದನೆ ಅಥವಾ ಪ್ರತಿಬಂಧ/ನಿಗ್ರಹಣ ಪರೀಕ್ಷೆಯ ಮೂಲಕ ತಪಾಸಣೆ ನಡೆಸಲಾಗುತ್ತದೆ. ಒಂದು ಅಂತಃಸ್ರಾವಕ ಅಂಗದ ಕಾರ್ಯಚಟುವಟಿಕೆಯನ್ನು ಪರೀಕ್ಷಿಸಲು, ಒಂದು ಉತ್ತೇಜಿಸುವ ಮಧ್ಯವರ್ತಿಯನ್ನು ಬಳಸಿಕೊಂಡು ನೀಡಲಾಗುವ ಚುಚ್ಚುಮದ್ದನ್ನು ಇದು ಒಳಗೊಳ್ಳಬಹುದು. ಸಂಗತವಾದ ಹಾರ್ಮೋನುಗಳು ಅಥವಾ ಚಯಾಪಚಯ ಕ್ರಿಯೆಯ ಉತ್ಪನ್ನಗಳ ಬದಲಾವಣೆಗಳನ್ನು ಅಳೆದು ನಿರ್ಣಯಿಸಲು ರಕ್ತದ ಮಾದರಿಯನ್ನು ನಂತರ ತೆಗೆದುಕೊಳ್ಳಲಾಗುತ್ತದೆ. ಸದರಿ ತಪಾಸಣಾ ಕಾರ್ಯಗಳ ಪ್ರಯೋಜನಗಳು ಹಾಗೂ ಮಿತಿಗಳನ್ನು ಅರ್ಥಮಾಡಿಕೊಳ್ಳಲು ಓರ್ವ ಅಂತಃಸ್ರಾವಶಾಸ್ತ್ರಜ್ಞನು ಪ್ರಾಯೋಗಿಕ ರಾಸಾಯನಿಕ ಸಂಯೋಜನೆ ಮತ್ತು ಜೀವರಾಸಾಯನಿಕ ಸಂಯೋಜನೆಗಳ ವ್ಯಾಪಕ ಅರಿವನ್ನು ಹೊಂದಿರುವುದು ಅಗತ್ಯ. ಅಂತಃಸ್ರಾವ ಶಾಸ್ತ್ರದ ಅಭ್ಯಾಸದ ಎರಡನೇ ಅತಿಮುಖ್ಯ ಅಂಶವೆಂದರೆ ರೋಗದಿಂದ ಮಾನವ ಬದಲಾವಣೆಯನ್ನು ಪ್ರತ್ಯೇಕಿಸುವುದು. ದೈಹಿಕ ಬೆಳವಣಿಗೆಯ ವಿಲಕ್ಷಣವಾದ ಮಾದರಿಗಳು ಮತ್ತು ವಿಪರೀತವಾಗಿರುವ ಪರೀಕ್ಷೆಯ ಫಲಿತಾಂಶಗಳನ್ನು ರೋಗವಿದೆಯೋ ಅಥವಾ ಇಲ್ಲವೋ ಎಂಬುದರ ಸೂಚಕವಾಗಿ ಅಳೆದು ನಿರ್ಣಯಿಸಬೇಕಾಗುತ್ತದೆ. ಅಂತಃಸ್ರಾವಕ ಅಂಗಗಳ ವಿಶ್ಲೇಷಣಾತ್ಮಕ ಚಿತ್ರಿಸುವಿಕೆಯು ಇನ್ಸಿಡೆಂಟಾಲೋಮಾಗಳೆಂದು ಕರೆಯಲಾಗುವ ಸಂಭವನೀಯ ಆವಿಷ್ಕಾರಗಳನ್ನು ಬಹಿರಂಗಪಡಿಸಬಹುದಾಗಿದ್ದು, ಅವು ರೋಗವನ್ನು ಪ್ರತಿನಿಧಿಸಬಹುದು ಅಥವಾ ಪ್ರತಿನಿಧಿಸದೆಯೇ ಇರಬಹುದು. ಅಂತಃಸ್ರಾವ ಶಾಸ್ತ್ರವು ರೋಗಕ್ಕೆ ಸಂಬಂಧಿಸಿದಂತೆ ಮಾತ್ರವೇ ಅಲ್ಲದೇ ವ್ಯಕ್ತಿಯ ಕುರಿತೂ ಕಾಳಜಿವಹಿಸುವುದನ್ನು ಒಳಗೊಳ್ಳುತ್ತದೆ. ಬಹುಪಾಲು ಅಂತಃಸ್ರಾವಕ ಅಸ್ವಸ್ಥತೆಗಳು ದೀರ್ಘಕಾಲದ ರೋಗಗಳಾಗಿದ್ದು ಅವುಗಳಿಗೆ ಸುದೀರ್ಘಾವಧಿಯ ಆರೈಕೆಯ ಅಗತ್ಯವಿರುತ್ತದೆ. ಕೆಲವೊಂದು ಸಾಮಾನ್ಯವಾದ ಅಂತಃಸ್ರಾವಕ ಕಾಯಿಲೆಗಳಲ್ಲಿ ಡಯಾಬಿಟಿಸ್‌ ಮೆಲ್ಲಿಟಸ್‌, ಥೈರಾಯ್ಡ್‌ ಹಾರ್ಮೋನುಗಳ ಅಲ್ಪಸ್ರಾವ ಮತ್ತು ಚಯಾಪಚಯಿ ಸಹಲಕ್ಷಣಗಳು ಸೇರಿಕೊಂಡಿವೆ. ಮಧುಮೇಹ, ಸ್ಥೂಲತೆ ಮತ್ತು ಇತರ ದೀರ್ಘಕಾಲದ ರೋಗಗಳ ಆರೈಕೆಯು, ವೈಯಕ್ತಿಕ ಮತ್ತು ಸಾಮಾಜಿಕ ಮಟ್ಟದಲ್ಲಿ ಮಾತ್ರವೇ ಅಲ್ಲದೇ ಆಣ್ವಿಕ ಮಟ್ಟದಲ್ಲೂ ರೋಗಿಯನ್ನು ಅರ್ಥಮಾಡಿಕೊಳ್ಳುವುದನ್ನು ಅನಿವಾರ್ಯವಾಗಿಸುತ್ತದೆ, ಮತ್ತು ವೈದ್ಯ–ರೋಗಿಯ ನಡುವಿನ ಸಂಬಂಧವು ಒಂದು ಮುಖ್ಯವಾದ ಚಿಕಿತ್ಸಾ ಪ್ರಕ್ರಿಯೆಯಾಗಿರಲು ಸಾಧ್ಯವಿದೆ. ರೋಗಿಗಳಿಗೆ ಚಿಕಿತ್ಸೆ ನೀಡಿ ಉಪಚರಿಸುವುದರ ಜೊತೆಗೆ, ಅನೇಕ ಅಂತಃಸ್ರಾವಶಾಸ್ತ್ರಜ್ಞರು ಪ್ರಾಯೋಗಿಕ ವಿಜ್ಞಾನ ಮತ್ತು ವೈದ್ಯಕೀಯ ಸಂಶೋಧನೆ, ಬೋಧನೆ, ಹಾಗೂ ಆಸ್ಪತ್ರೆ ನಿರ್ವಹಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತರಬೇತಿ[ಬದಲಾಯಿಸಿ]

ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಏನಿಲ್ಲವೆಂದರೂ ಸುಮಾರು 4,000 ಸಂಖ್ಯೆಯಷ್ಟು ಅಂತಃಸ್ರಾವಶಾಸ್ತ್ರಜ್ಞರಿದ್ದಾರೆ.[ಸಾಕ್ಷ್ಯಾಧಾರ ಬೇಕಾಗಿದೆ] ಅಂತಃಸ್ರಾವಶಾಸ್ತ್ರಜ್ಞರು ಆಂತರಿಕ ಔಷಧ ವೈದ್ಯಶಾಸ್ತ್ರ ಅಥವಾ ಶಿಶುವೈದ್ಯಶಾಸ್ತ್ರದ ತಜ್ಞವೈದ್ಯರಾಗಿದ್ದಾರೆ. ಸಂತಾನೋತ್ಪತ್ತಿಯ ತಜ್ಞತೆಗೆ ಸಂಬಂಧಿಸಿದ ಅಂತಃಸ್ರಾವಶಾಸ್ತ್ರಜ್ಞರು ಪ್ರಸೂತಿ ವಿಜ್ಞಾನದಲ್ಲಿ ಮೊದಲು ತರಬೇತಿಯನ್ನು ಪಡೆದ ನಂತರ, ಪ್ರಧಾನವಾಗಿ ಫಲವಂತಿಕೆ ಹಾಗೂ ಋತುಚಕ್ರದ ಕ್ರಿಯೆಯ ಸಮಸ್ಯೆಗಳೊಂದಿಗೆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಸ್ಥಳೀಯವಾಗಿ ಲಭ್ಯವಿರುವ ತರಬೇತಿ ವ್ಯವಸ್ಥೆಯನ್ನು ಅವಲಂಬಿಸಿ, ವಿಶೇಷ ಪರಿಣತಿಯನ್ನು ಅಥವಾ ತಜ್ಞತೆಯನ್ನು ಹೊಂದುವುದಕ್ಕೆ ಕೆಲವರ್ಷಗಳು ಮುಂಚಿತವಾಗಿ, ಬಹುಪಾಲು ವೈದ್ಯರು ಓರ್ವ ಆಂತರಿಕ ರೋಗಗಳ ತಜ್ಞ, ಶಿಶುವೈದ್ಯ, ಅಥವಾ ಸ್ತ್ರೀರೋಗತಜ್ಞರಾಗಿ ಅರ್ಹತೆಯನ್ನು ಗಳಿಸಿಕೊಳ್ಳುತ್ತಾರೆ. U.S. ಮತ್ತು ಕೆನಡಾದಲ್ಲಿ, ವೈದ್ಯಕೀಯ ಶಾಲೆಯ ನಂತರದ ಆಂತರಿಕ ಔಷಧ ವೈದ್ಯಶಾಸ್ತ್ರ, ಶಿಶುವೈದ್ಯಶಾಸ್ತ್ರ, ಅಥವಾ ಸ್ತ್ರೀರೋಗಶಾಸ್ತ್ರದಲ್ಲಿನ ಮಂಡಳಿಯ ಪ್ರಮಾಣೀಕರಣಕ್ಕೆ ಸಂಬಂಧಿಸಿದ ತರಬೇತಿಯನ್ನು ತಜ್ಞ ವೈದ್ಯಕೀಯ ತರಬೇತಿಯ ಅವಧಿಯೆಂದು ಕರೆಯಲಾಗುತ್ತದೆ. ನಂತರ, ವಯಸ್ಕರ, ಶಿಶುವೈದ್ಯಕ್ಕೆ ಸಂಬಂಧಿಸಿದ, ಅಥವಾ ಸಂತಾನೋತ್ಪತ್ತಿಗೆ ಸಂಬಂಧಿಸಿದ ಅಂತಃಸ್ರಾವ ಶಾಸ್ತ್ರದಲ್ಲಿನ ಉಪ-ಪರಿಣತಿಯನ್ನು ಕುರಿತಾದ ಔಪಚಾರಿಕ ತರಬೇತಿಯನ್ನು ಒಂದು ಫೆಲೋಷಿಪ್ ಎಂದು ಕರೆಯಲಾಗುತ್ತದೆ. ಉತ್ತರ ಅಮೆರಿಕಾದ ಓರ್ವ ಅಂತಃಸ್ರಾವಶಾಸ್ತ್ರಜ್ಞನಿಗೆ ಸಂಬಂಧಿಸಿದ ವಿಶಿಷ್ಟ ರೀತಿಯ ತರಬೇತಿಯಲ್ಲಿ 4 ವರ್ಷಗಳಷ್ಟು ಅವಧಿಯ ಕಾಲೇಜು ಶಿಕ್ಷಣ, 4 ವರ್ಷಗಳಷ್ಟು ಅವಧಿಯ ವೈದ್ಯಕೀಯ ಶಾಲೆಯ ಶಿಕ್ಷಣ, 3 ವರ್ಷಗಳಷ್ಟು ತಜ್ಞ ವೈದ್ಯಕೀಯ ತರಬೇತಿಯ ಅವಧಿ, ಮತ್ತು 3 ವರ್ಷಗಳಷ್ಟು ಅವಧಿಯ ಫೆಲೋಷಿಪ್‌ ಇಷ್ಟು ಸೇರಿರುತ್ತವೆ. ವಯಸ್ಕ ಅಂತಃಸ್ರಾವಶಾಸ್ತ್ರಜ್ಞರು ಅಂತಃಸ್ರಾವ ಶಾಸ್ತ್ರ, ಮಧುಮೇಹ ಮತ್ತು ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ವಿಷಯಗಳಲ್ಲಿ ಅಮೆರಿಕನ್‌ ಬೋರ್ಡ್‌ ಆಫ್‌ ಇಂಟರ್ನಲ್‌ ಮೆಡಿಸಿನ್‌‌ನಿಂದ (ABIM) ಮಂಡಳಿಯ ಪ್ರಮಾಣಪತ್ರವನ್ನು ಪಡೆದವರಾಗಿರುತ್ತಾರೆ.

ವೃತ್ತಿಪರ ಸಂಘಟನೆಗಳು[ಬದಲಾಯಿಸಿ]

ಉತ್ತರ ಅಮೆರಿಕಾದಲ್ಲಿರುವ ಅಂತಃಸ್ರಾವಶಾಸ್ತ್ರಜ್ಞರ ಪ್ರಮುಖ ವೃತ್ತಿಪರ ಸಂಘಟನೆಗಳಲ್ಲಿ ಇವು ಸೇರಿವೆ: ದಿ ಎಂಡೋಕ್ರೈನ್‌ ಸೊಸೈಟಿ,[೧೮] ಅಮೆರಿಕನ್‌ ಅಸೋಸಿಯೇಷನ್‌ ಆಫ್‌ ಕ್ಲಿನಿಕಲ್‌ ಎಂಡೋಕ್ರೈನಾಲಜಿಸ್ಟ್ಸ್‌‌,[೧೯] ಅಮೆರಿಕನ್‌ ಡಯಬಿಟಿಕ್ಸ್‌ ಅಸೋಸಿಯೇಷನ್‌,[೨೦] ಲಾಸನ್‌ ವಿಲ್ಕಿನ್ಸ್‌ ಪೀಡಿಯಾಟ್ರಿಕ್‌ ಎಂಡೋಕ್ರೈನ್‌ ಸೊಸೈಟಿ,[೨೧] ಮತ್ತು ಅಮೆರಿಕನ್‌ ಥೈರಾಯ್ಡ್‌‌ ಅಸೋಸಿಯೇಷನ್‌.[೨೨] ಯುನೈಟೆಡ್‌ ಕಿಂಗ್‌ಡಂನಲ್ಲಿ, ಸೊಸೈಟಿ ಫಾರ್‌ ಎಂಡೋಕ್ರೈನಾಲಜಿ[೨೩] ಮತ್ತು ಬ್ರಿಟಿಷ್‌ ಸೊಸೈಟಿ ಫಾರ್‌ ಪೀಡಿಯಾಟ್ರಿಕ್‌ ಎಂಡೋಕ್ರೈನಾಲಜಿ ಅಂಡ್‌ ಡಯಾಬಿಟಿಸ್‌[೨೪] ಇವುಗಳು ಪ್ರಮುಖವಾದ ವೃತ್ತಿಪರ ಸಂಘಟನೆಗಳಾಗಿವೆ. ದಿ ಯುರೋಪಿಯನ್‌ ಸೊಸೈಟಿ ಫಾರ್‌ ಪೀಡಿಯಾಟ್ರಿಕ್‌ ಎಂಡೋಕ್ರೈನಾಲಜಿ[೨೫] ಎಂಬುದು ಶಿಶುವೈದ್ಯಕ್ಕೆ ಸಂಬಂಧಿಸಿದ ಅಂತಃಸ್ರಾವ ಶಾಸ್ತ್ರಕ್ಕೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಿರುವ ಅತ್ಯಂತ ದೊಡ್ಡ ಅಂತರರಾಷ್ಟ್ರೀಯ ವೃತ್ತಿಪರ ಸಂಘವಾಗಿದೆ. ವಿಶ್ವಾದ್ಯಂತ ಇದೇ ಬಗೆಯ ಇನ್ನೂ ಹಲವಾರು ಸಂಘಟನೆಗಳು ಅಸ್ತಿತ್ವದಲ್ಲಿವೆ.

ರೋಗಿ ಶಿಕ್ಷಣ[ಬದಲಾಯಿಸಿ]

ಅಂತಃಸ್ರಾವ ಶಾಸ್ತ್ರವು ಹಲವಾರು ರೋಗಸ್ಥಿತಿಗಳನ್ನು ಮತ್ತು ರೋಗಗಳನ್ನು ಒಳಗೊಳ್ಳುತ್ತದೆಯಾದ್ದರಿಂದ, ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಶಿಕ್ಷಣವನ್ನು ನೀಡುವ ಅನೇಕ ಸಂಘಟನೆಗಳು ಅಸ್ತಿತ್ವದಲ್ಲಿವೆ. ದಿ ಹಾರ್ಮೋನ್‌ ಫೌಂಡೇಷನ್‌ ಎಂಬ ಸಂಸ್ಥೆಯು ದಿ ಎಂಡೋಕ್ರೈನ್‌ ಸೊಸೈಟಿಯ ಸಾರ್ವಜನಿಕರು ಶಿಕ್ಷಣದ ಅಂಗಸಂಸ್ಥೆಯಾಗಿದ್ದು, ನಿರ್ನಾಳಗ್ರಂಥಿ-ಸಂಬಂಧಿತ ಎಲ್ಲಾ ರೋಗಸ್ಥಿತಿಗಳ ಕುರಿತು ಮಾಹಿತಿಯನ್ನು ಒದಗಿಸುತ್ತದೆ. ನಿರ್ನಾಳಗ್ರಂಥಿ-ಸಂಬಂಧಿತ ಒಂದು ಅಥವಾ ಒಂದಕ್ಕಿಂತ ಹೆಚ್ಚು ರೋಗಸ್ಥಿತಿಗಳ ಮೇಲೆ ಗಮನ ಹರಿಸುವ ಇತರ ಶೈಕ್ಷಣಿಕ ಸಂಘಟನೆಗಳಲ್ಲಿ ಅಮೆರಿಕನ್‌ ಡಯಬಿಟಿಕ್ಸ್‌ ಅಸೋಸಿಯೇಷನ್‌, ನ್ಯಾಷನಲ್‌ ಆಸ್ಟಿಯೋಪೋರೊಸಿಸ್‌ ಫೌಂಡೇಷನ್‌, ಹ್ಯೂಮನ್‌ ಗ್ರೋತ್‌ ಫೌಂಡೇಷನ್‌, ಅಮೆರಿಕನ್‌ ಮೆನೋಪಾಸ್‌ ಫೌಂಡೇಷನ್‌, ಇಂಕ್‌, ಹಾಗೂ ಥೈರಾಯ್ಡ್‌‌ ಫೌಂಡೇಷನ್‌ ಆಫ್‌ ಅಮೆರಿಕಾ ಮೊದಲಾದವು ಸೇರಿವೆ.

ಕಾಯಿಲೆಗಳು[ಬದಲಾಯಿಸಿ]

ನಿರ್ನಾಳಗ್ರಂಥಿಯ ಕಾಯಿಲೆಗಳು - Endocrine diseaseವಿಭಾಗದಲ್ಲಿನ ಮುಖ್ಯ ಲೇಖನವನ್ನು ನೋಡಿ ನಿರ್ನಾಳ ಗ್ರಂಥಿಗಳು ಮತ್ತು ರೋಗಗಳು‎;

ನಿರ್ನಾಳ ಗ್ರಂಥಿಗಳ ವ್ಯವಸ್ಥೆಯ ಒಂದು ಅಸ್ವಸ್ಥತೆಯ ಕಾರಣದಿಂದಾಗಿ ಬರುವ ಒಂದು ರೋಗವು ಅನೇಕವೇಳೆ ಒಂದು "ಹಾರ್ಮೋನು ಅಸಮತೋಲನ" ಎಂದು ಕರೆಸಿಕೊಳ್ಳುತ್ತದೆಯಾದರೂ, ತಾಂತ್ರಿಕವಾಗಿ ಅದು ಒಂದು ಎಂಡೋಕ್ರೈನೋಪತಿ ಅಥವಾ ಎಂಡೋಕ್ರೈನೋಸಿಸ್‌ ಎಂದು ಹೆಸರು ಪಡೆದಿದೆ.

ಜನಪ್ರಿಯ ಸಂಸ್ಕೃತಿಯಲ್ಲಿ[ಬದಲಾಯಿಸಿ]

ನೋಡಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. Nussey S, Whitehead S (2001). Endocrinology: An Integrated Approach. Oxford: Bios Scientific Publ. ISBN 1-85996-252-1.
 2. Kelly, Paul; Baulieu, Etienne-Emile (1990). Hormones: from molecules to disease. Paris: Hermann. ISBN 2-7056-6030-5.{{cite book}}: CS1 maint: multiple names: authors list (link)
 3. Ojeda, Sergio R.; Griffin, James Bennett (2000). Textbook of endocrine physiology (4th ed.). Oxford [Oxfordshire]: Oxford University Press. ISBN 0-19-513541-5.{{cite book}}: CS1 maint: multiple names: authors list (link)
 4. ೪.೦ ೪.೧ ‌ಟೆಂಪಲ್, ರಾಬರ್ಟ್‌. ದಿ ಜೀನಿಯಸ್‌ ಆಫ್‌ ಚೈನಾ. ಪುಟಗಳು 141, 142. ISBN 9781594772177.
 5. ಬರ್ಟ್‌ಹೋಲ್ಡ್ AA. ಟ್ರಾನ್ಸ್‌ಪ್ಲಾಂಟೇಷನ್‌ ಡೆರ್‌ ಹೋಡೆನ್‌ ಆರ್ಚ್‌. ಅನಾಟ್‌. ಫ್ಸಿಯೋಲ್‌. ವಿಸ್‌. ಮೆಡ್‌. 1849;16:42-6.
 6. ಡೇವಿಡ್ K, ಡಿಂಗನ್‌ಮ್ಯಾನೀಸ್‌ E, ಫ್ರ್ಯೂಡ್‌ J ಮತ್ತು ಇತರರು ಉಬರ್‌ ಕ್ರಿಸ್ಟಲ್ಲೈನಿಸ್ಕಸ್‌ ಮ್ಯಾನ್ಲಿಚೆಸ್‌ ಹಾರ್ಮೋನ್‌ ಔಸ್‌ ಹೋಡೆನ್‌ (ಟೆಸ್ಟೋಸ್ಟೆರಾನ್‌) ವಿರ್ಕ್‌‌ಸ್ಮರ್‌ ಅಲ್ಸ್‌ ಔಸ್‌ ಓಡೆರ್‌ ಔಸ್‌ ಕೊಲೆಸ್ಟಿರಿನ್‌ ಬೆರೀಟೆಟೆಸ್‌ ಆಂಡ್ರೋಸ್ಟೆರಾನ್‌. ಹೊಪ್‌ ಸೆಯ್ಲರ್ಸ್‌ Z ಫಿಸಿಯೋಲ್‌ ಕೆಮ್‌ 1935;233:281.
 7. Freeman ER, Bloom DA, McGuire EJ (2001). "A brief history of testosterone". J. Urol. 165 (2): 371–3. doi:10.1097/00005392-200102000-00004. PMID 11176375.{{cite journal}}: CS1 maint: multiple names: authors list (link)
 8. ೮.೦ ೮.೧ Nabipour, I. (2003). "Clinical Endocrinology in the Islamic Civilization in Iran". International Journal of Endocrinology and Metabolism. 1: 43–45 [44–5].
 9. Basedow's syndrome or disease at Who Named It? - ಕಾಯಿಲೆಯ ಇತಿಹಾಸ ಮತ್ತು ಹೆಸರಿಸುವಿಕೆ
 10. Ljunggren, J. G. (August 10, 1983). "Who was the man behind the syndrome: Ismail al-Jurjani, Testa, Flagani, Parry, Graves or Basedow? Use the term hyperthyreosis instead". Lakartidningen. 80 (32–33): 2902. PMID 6355710.{{cite journal}}: CS1 maint: date and year (link)
 11. Robert James Graves at Who Named It?
 12. Giuseppe Flajani at Who Named It?
 13. Hull G (1998). "Caleb Hillier Parry 1755-1822: a notable provincial physician". Journal of the Royal Society of Medicine. 91 (6): 335–8. PMC 1296785. PMID 9771526.
 14. ಬೇಲಿಸ್‌ WM, ಸ್ಟಾರ್ಲಿಂಗ್‌‌ EH. ದಿ ಮೆಕ್ಯಾನಿಸಂ ಆಫ್‌ ಪ್ಯಾಂಕ್ರಿಯಾಟಿಕ್‌ ಸೆಕ್ರೀಷನ್‌. J ಫಿಸಿಯೋಲ್‌ 1902;28:325–352.
 15. Bliss M (1989). "J. J. R. Macleod and the discovery of insulin". Q J Exp Physiol. 74 (2): 87–96. PMID 2657840.
 16. ಲೋವಿ, O. ಉಬರ್‌ಟ್ರಾಗ್ಬಾರ್ಕೀಟ್‌ ಡೆರ್‌ ಹೆಜ್‌ನರ್ವೆನ್‌ವಿರ್ಕುಂಗ್‌. ಫ್ಲೂಗರ್‌'ಸ್‌ ಆರ್ಚ್‌. ಗೆಸ್‌ ಫಿಸಿಯೋಲ್‌. 1921;189:239-42.
 17. Sutherland EW (1972). "Studies on the mechanism of hormone action". Science. 177 (47): 401–8. doi:10.1126/science.177.4047.401. PMID 4339614.
 18. Endo-society.org
 19. AACE.com
 20. ಮಧುಮೇಹ.org
 21. lwpes.org Archived 2017-09-27 ವೇಬ್ಯಾಕ್ ಮೆಷಿನ್ ನಲ್ಲಿ.
 22. ಥೈರಾಯ್ಡ್‌‌.org
 23. endocrinology.org
 24. bsped.org.uk
 25. Eurospe.org

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಬಳಗಗಳು ಮತ್ತು ಸಂಘ-ಸಂಸ್ಥೆಗಳು[ಬದಲಾಯಿಸಿ]