ವೈದ್ಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
The Doctor Luke Fildes crop.jpg

ವೈದ್ಯನು ವೈದ್ಯಕೀಯ ವೃತ್ತಿಯನ್ನು ನಡೆಸುವ ಒಬ್ಬ ವೃತ್ತಿನಿರತ, ಅಂದರೆ ಈ ವೃತ್ತಿಯು ರೋಗ, ಗಾಯ, ಮತ್ತು ಇತರ ಶಾರೀರಿಕ ಹಾಗು ಮಾನಸಿಕ ದುರ್ಬಲತೆಗಳ ಅಧ್ಯಯನ, ರೋಗನಿರ್ಣಯ, ಮತ್ತು ಚಿಕಿತ್ಸೆಯ ಮೂಲಕ ಮಾನವ ಆರೋಗ್ಯವನ್ನು ಉತ್ತೇಜಿಸುವುದು, ಕಾಪಾಡಿಕೊಳ್ಳುವುದು, ಅಥವಾ ಪುನರಾರೋಗ್ಯ ಉಂಟುಮಾಡುವುದಕ್ಕೆ ಸಂಬಂಧಿಸಿರುತ್ತದೆ. ಈ ವೃತ್ತಿಯಲ್ಲಿ ನಿರತರಾಗಿರುವವರು ತಮ್ಮ ವೃತ್ತಿಯನ್ನು ನಿರ್ದಿಷ್ಟ ರೋಗಗಳ ವರ್ಗಗಳು, ಪ್ರಕಾರದ ರೋಗಿಗಳು, ಅಥವಾ ಚಿಕಿತ್ಸಾವಿಧಾನಗಳ ಮೇಲೆ ಕೇಂದ್ರೀಕರಿಸಬಹುದು (ಪರಿಣತ ವೈದ್ಯಭಿಷಜ) ಅಥವಾ ವ್ಯಕ್ತಿಗಳು,ಕುಟುಂಬಗಳು, ಮತ್ತು ಸಮುದಾಯಗಳಿಗೆ ನಿರಂತರ ಹಾಗು ಪರಿಪೂರ್ಣ ವೈದ್ಯಕೀಯ ಆರೈಕೆಯನ್ನು ಒದಗಿಸುವ ಜವಾಬ್ದಾರಿಯನ್ನು ವಹಿಸಬಹುದು (ಸಾಮಾನ್ಯ ವೈದ್ಯಭಿಷಜ). ವೈದ್ಯವೃತ್ತಿಗೆ (ಅಂಗರಚನಾಶಾಸ್ತ್ರ ಮತ್ತು ಶರೀರಶಾಸ್ತ್ರದಂತಹ) ಶೈಕ್ಷಣಿಕ ವಿಷಯಗಳು, ಆಧಾರವಾಗಿರುವ ರೋಗಗಳು ಮತ್ತು ಅವುಗಳ ಚಿಕಿತ್ಸೆಯ ವಿವರವಾದ ಅರಿವು - ವೈದ್ಯಕೀಯದ ವಿಜ್ಞಾನ - ಮತ್ತು ಜೊತೆಗೆ ಅದರ ಅನ್ವಯಿಕ ಅಭ್ಯಾಸದಲ್ಲಿ ಒಪ್ಪುವ ಸಾಮರ್ಥ್ಯ - ವೈದ್ಯಶಾಸ್ತ್ರದ ಕಲೆ ಅಥವಾ ಕೌಶಲ ಎರಡೂ ಸರಿಯಾಗಿ ಅಗತ್ಯವಿರುತ್ತದೆ.


"https://kn.wikipedia.org/w/index.php?title=ವೈದ್ಯ&oldid=420615" ಇಂದ ಪಡೆಯಲ್ಪಟ್ಟಿದೆ