ಜಠರಗರುಳು ವ್ಯೂಹ
ಗೋಚರ
(ಕರುಳು ಇಂದ ಪುನರ್ನಿರ್ದೇಶಿತ)
ಜಠರಗರುಳು ವ್ಯೂಹ ಆಹಾರವನ್ನು ಸೇವಿಸುವ, ಅಳವು ಹಾಗೂ ಪೋಷಕಾಂಶಗಳನ್ನು ಹೊರತೆಗೆಯಲು ಹಾಗೂ ಹೀರಿಕೊಳ್ಳಲು ಅದನ್ನು ಜೀರ್ಣಿಸುವ, ಮತ್ತು ಮಲ ಹಾಗೂ ಮೂತ್ರವಾಗಿ ಉಳಿದ ಕಸವನ್ನು ಹೊರಹಾಕುವ ಮಾನವರು ಮತ್ತು ಇತರ ಪ್ರಾಣಿಗಳ ಒಳಗಿನ ಒಂದು ಅಂಗ ವ್ಯವಸ್ಥೆ. ಬಾಯಿ, ಅನ್ನನಾಳ, ಹೊಟ್ಟೆ, ಮತ್ತು ಕರುಳುಗಳು ಮಾನವನ ತಿನಿಸುಗೊಳವೆಯ ಭಾಗವಾಗಿವೆ.
ದ್ವಿಪಾರ್ಶ್ವ ಸಮರೂಪತೆಯಿರುವ ಜೀವಿಗಳು ಜಠರಗರುಳುವ್ಯೂಹವನ್ನು ಹೊಂದಿರುತ್ತವೆ. ಇದು ಆಹಾರವನ್ನು ಜೀರ್ಣಕ್ರಿಯೆಯ ಅಂಗಗಳಿಗೆ ರವಾನಿಸುವ ನಳಿಕೆ.[೧] ದ್ವಿಪಾರ್ಶ್ವ ಸಮರೂಪತೆಯಿರುವ ದೊಡ್ಡ ಜೀವಿಗಳಲ್ಲಿ, ಜಠರಗರುಳು ವ್ಯೂಹವು ಸಾಮಾನ್ಯವಾಗಿ ಒಂದು ನಿರ್ಗಮನ ದ್ವಾರ, ಗುದವನ್ನು ಹೊಂದಿರುತ್ತವೆ. ಇದರ ಮೂಲಕ ಜೀವಿಯು ಮಲವನ್ನು ಹೊರಹಾಕುತ್ತದೆ. ಸಣ್ಣ ಜೀವಿಗಳು ಗುದವನ್ನು ಹೊಂದಿರುವುದಿಲ್ಲ ಮತ್ತು ಘನ ಕಸಪದಾರ್ಥವನ್ನು ಇತರ ಬಗೆಯಲ್ಲಿ (ಉದಾಹರಣೆಗೆ, ಬಾಯಿಯಿಂದ) ಹೊರಹಾಕುತ್ತವೆ.[೨]
ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Ruppert EE, Fox RS, Barnes RD (2004). "Introduction to Eumetazoa". Invertebrate Zoology (7 ed.). Brooks / Cole. pp. 99–103. ISBN 0-03-025982-7.
- ↑ Ruppert EE, Fox RS, Barnes RD (2004). "Introduction to Bilateria". Invertebrate Zoology (7 ed.). Brooks / Cole. pp. 203–205. ISBN 0-03-025982-7.