ವಾಯುಗುಣ ಬದಲಾವಣೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕಳೆದ ೪೫೦,೦೦೦ ವರ್ಷಗಳಲ್ಲಿ ಭೂಮಿಯ ಹವಮಾನ ಬದಲಾವಣೆಗಳು

ವಾಯುಗುಣ ಬದಲಾವಣೆ ಭೂಮಿವಾಯುಗುಣದಲ್ಲಿ ಧೀರ್ಘ ಕಾಲದಲ್ಲಿ ಅನಿರೀಕ್ಷಿತವಾಗಿ ಉಂಟಾಗುವ ಬದಲಾವಣೆಗಳು.

ಪರಿಣಾಮಗಳು[ಬದಲಾಯಿಸಿ]

ವಾಯುಗುಣ ಬದಲಾವಣೆಯ ಘೋರ ಪರಿಣಾಮಗಳ ಕುರಿತು ಮೊದಲ ಬಾರಿ ಕೇಳುವವರಿಗೆ 'ಗೋಕುಲಾಷ್ಟಮಿಗೂ ಇಮಾಮ್ಸಾಬಿಗೂ ಏನು ಸಂಬಂಧ?' ಎಂಬಂತಿದೆ ಈ ಪ್ರಶ್ನೆ. ಆದರೆ, ವಾಯುಗುಣ ಬದಲಾವಣೆಯಿಂದ ಉಂಟಾಗುವ ಪ್ರವಾಹಗಳು, ಕ್ಷಾಮ ಮತ್ತು ಇತರೆ ನೈಸರ್ಗಿಕ ವಿಕೋಪಗಳು ಜನರಲ್ಲಿ ಮಾನಸಿಕ ರೋಗಗಳನ್ನು ಉಂಟು ಮಾಡುತ್ತವೆಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ. ಮಾನಸಿಕ ರೋಗಗಳಿಗೂ ವಾಯುಗುಣ ಬದಲಾವಣೆಗೂ ಇರುವ ಸಂಬಂಧ ಕುರಿತ ವರದಿಯಲ್ಲಿ ಈ ಅಂಶವನ್ನು ತಿಳಿಸಲಾಗಿದೆ. ಚಂಡ ಮಾರುತದಿಂದ ನಲುಗಿದ ಒಡಿಶಾ ಮತ್ತು ಪ್ರವಾಹಗಳಿಂದ ಮುಳುಗಿದ ಇಂಗ್ಲೆಂಡ್ಗಳಲ್ಲಿ ವಿಕೋಪ-ನಂತರದ ವೈಪರೀತ್ಯಗಳು ಜನರನ್ನು ತೀವ್ರವಾಗಿ ಕಾಡಿವೆ. ಬರಪೀಡಿತ ಪ್ರದೇಶಗಳಲ್ಲಿನ ರೈತರು ತೀವ್ರ ಹಣಕಾಸು ಮುಗ್ಗಟ್ಟು ಮತ್ತು ಸಾಲದ ಹೊರೆಯಿಂದ ಹೆಚ್ಚು ಮಾನಸಿಕ ವ್ಯಾಧಿ ಮತ್ತು ಒತ್ತಡಕ್ಕೆ ಒಳಗಾಗುತ್ತಾರೆ. ಅಂಥಹ ಪರಿಸ್ಥಿತಿಯಲ್ಲಿ ಸೂಕ್ತ ಯೋಜನೆಯಂತೆ ಬೆಳೆ ಬೆಳೆಯಲು ಆಗದಿರುವುದು, ಬೆಳೆ ನಾಶ, ಫಸಲು ಸಂಗ್ರಹಣೆ, ಪಶುಪಾಲನೆ ಅಭಿವೃದ್ಧಿ, ಇವೆಲ್ಲವೂ ತೊಂದರೆಗೆ ಸಿಲುಕಿ ಇದು ಇತರೆ ವ್ಯಾಪಾರ-ವ್ಯವಹಾರಗಳಿಗೆ ಪೆಟ್ಟು ನೀಡುತ್ತದೆ. ಈಗಾಗಲೇ ಸರ್ಕಾರದ ಜಾಗತೀಕರಣ ಮತ್ತು ಉದಾರೀಕರಣ ನೀತಿಗಳು ರೈತರನ್ನು ಆತ್ಮಹತ್ಯೆಯ ಕೂಪಕ್ಕೆ ತಳ್ಳುತ್ತಿರುವ ಜೊತೆಗೆ ವಾಯುಗುಣ ಬದಲಾವಣೆಯ ಪೆಡಂಭೂತವು ಸೇರಿಕೊಂಡಲ್ಲಿ ರೈತರ ಬದುಕು ಇನ್ನು ಸಮಾಧಿಯೇ ಸರಿ.

ಇಂಥಹ ನೈಸರ್ಗಿಕ ವಿಕೋಪ-ನಂತರದ ವೈಪರೀತ್ಯಗಳಿಂದ ಉಂಟಾಗುವ ಮಾನಸಿಕ ವ್ಯಾಧಿಗಳು ಈಗಾಗಲೇ ಪ್ರಪಂಚದಾದ್ಯಂತ ಶೇ. 10ರಷ್ಟು ದರದಲ್ಲಿ ವ್ಯಾಪಿಸುತ್ತಿವೆ. ಇದು ಸಂತ್ರಸ್ತರಲ್ಲಿ ತೀವ್ರತರದ ಒತ್ತಡ ನಿಮರ್ಾಣ ಮತ್ತು ಸಂಪನ್ಮೂಲ ನಷ್ಟಗಳಿಂದ ಶೀಘ್ರದಲ್ಲೇ ಶೇ. 20ರಷ್ಟು ದರವನ್ನು ಮುಟ್ಟುತ್ತದೆ. ಇದಕ್ಕೆ ಇನ್ನಷ್ಟು ಉದಾಹರಣೆಗಳೆಂದರೆ, ಏಷ್ಯಾದಲ್ಲಿ ಸುನಾಮಿ ಅಪ್ಪಳಿಸಿದಾಗ, ಮತ್ತು ಅಮೇರಿಕಾದ ನ್ಯೂ ಆಲರ್ಾನ್ಸ್ ನಗರದಲ್ಲಿ 'ಕತ್ರಿನಾ' ಬಿರುಗಾಳಿ ಸಂಭವಿಸಿದಾಗ ಶೇ. 70ರಷ್ಟು ಮಂದಿ ವಿಕೋಪ-ನಂತರದ ವೈಪರೀತ್ಯಗಳಿಂದ ಉಂಟಾಗುವ ಮಾನಸಿಕ ವ್ಯಾಧಿಯಿಂದ ನರಳಿದ್ದಾರೆ. ಜಗತ್ತಿನಾದ್ಯಂತ ವರ್ಷವೊಂದಕ್ಕೆ ವಿವಿಧ ರೋಗಗಳಿಂದ 1 ಕೋಟಿ ಹಸುಳೆಗಳು ಸಾಯುತ್ತಿರುವುದಕ್ಕೂ ಕೂಡ ವಾಯುಗುಣದ ಬದಲಾವಣೆಯೇ ಕಾರಣ ಎನ್ನಲಾಗಿದೆ.

ಜಾಗತಿಕ ತಾಪಮಾನ[ಬದಲಾಯಿಸಿ]

ಪ್ರಪಂಚದಾದ್ಯಂತ ಭೂಮಿಯ ತಾಪಮಾನದ ಹೆಚ್ಚಾಗುತ್ತಿರುವುದರಿಂದ ವಾಯುಗುಣ ಬದಲಾಗುತ್ತಿದೆ. ವಾಯುಗುಣದ ಬದಲಾವಣೆಯ ದುಷ್ಪರಿಣಾಮಗಳ ಹಲವಾರು ಮುಖಗಳು ತೀವ್ರಗತಿಯಲ್ಲಿ ನಮಗೆ ಗೋಚರವಾಗುತ್ತಿವೆ. ಭೂಮಿಯ ತಾಪಮಾನ ಇದೇ ಮಟ್ಟದಲ್ಲಿ ಏರಿಕೆಯಾದಲ್ಲಿ ಈ ಶತಮಾನದ ಅಂತ್ಯದ ವೇಳೆಗೆ ಭೂಮಿಯ ಉಷ್ಣಾಂಶ 4 ಡಿಗ್ರಿಯಷ್ಟು ಹೆಚ್ಚಾಗುತ್ತದೆಂದು ವಿಜ್ಞಾನಿಗಳು ವಿಶ್ವಸಂಸ್ಥೆಯ ವಾಯುಗುಣ ಬದಲಾವಣೆ ಕುರಿತಾದ ಅಂತರ ಸಕರ್ಾರಿ ಸಂಸ್ಥೆಯು ತಿಳಿಸಿದೆ. ಆದರೆ, ಉಷ್ಣಾಂಶ ಇನ್ನೆರಡು ಡಿಗ್ರಿಯಷ್ಟು ಹೆಚ್ಚಾದರೂ ಮನುಷ್ಯರು ಬದುಕುವುದೂ ಕೂಡ ದುಸ್ತರ. ಭೂಮಿಯ ತಾಪಮಾನದ ಏರಿಕೆಗೆ ಕಾರಣವಾಗಿರುವ ಕೈಗಾರಿಕೆಗಳು ಬಿಡುಗಡೆ ಮಾಡುತ್ತಿರುವ ವಿಷಾನಿಲಗಳನ್ನು ಕಡಿತ ಮಾಡಬೇಕೆಂದು ವಿಶ್ವಾದ್ಯಂತ ಸಂಘ ಸಂಸ್ಥೆಗಳು ಮತ್ತು ವಿಜ್ಞಾನಿಗಳಿಂದ ಒಕ್ಕೊರಲ ದನಿ ಮೂಡಿಬರುತ್ತಿದ್ದರೂ, ಅಮೇರಿಕಾವು ಒಳಗೊಂಡಂತೆ ಜಗತ್ತಿನ ಅತಿ ಹೆಚ್ಚು ಮಲಿನಕಾರಿ ರಾಷ್ಟ್ರಗಳು ವಿಷಾನಿಲ ವಿಸರ್ಜನೆ ಕಡಿತಕ್ಕೆ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ.

ಬುವಿಯ ಗರ್ಭದೊಳಕ್ಕೆ ವಿಷಾನಿಲ ತುಂಬುವ ಆಸ್ಟ್ರೇಲಿಯಾ ಯೋಜನೆ[ಬದಲಾಯಿಸಿ]

ಈ ನಡುವೆ, ಇಂಗಾಲದ ಡೈ ಆಕ್ಸೈಡ್ನ್ನು ಭೂಮಿಯೊಳಗೆ ಹೂತು ಹಾಕಲು ಆಸ್ಟ್ರೇಲಿಯಾದ ವಿಜ್ಞಾನಿಗಳು ಕಸರತ್ತು ನಡೆಸಿದ್ದಾರಂತೆ. ಪುರಾಣದ 'ಶಿವ'ನಂತೆ ಭೂಮಿಯೇನೂ ವಿಷವನ್ನೇ ಕುಡಿಯುವ ನೀಲಕಂಠ ಅಲ್ಲ. ಇಂಥಹ ವಿಷಾನಿಲಗಳನ್ನು ಕೈಗಾರಿಕೆಗಳು ಹೆಚ್ಚಾಗಿ ಬಿಡುಗಡೆ ಮಾಡದಂತೆ ತಡೆಗಟ್ಟುವ ಬದಲು, ಆಸ್ಟ್ರೇಲಿಯಾ ಸಕರ್ಾರವು ಕೈಗಾರಿಕೆಗಳಿಂದ ಬಿಡುಗಡೆಯಾಗುವ ವಿಷಾನಿಲಗಳನ್ನು ಭೂಮಿಯೊಳಕ್ಕೆ ಪಂಪ್ ಮಾಡುವ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ, ಈಗಾಗಲೇ ಉಪಯುಕ್ತ ನೈಸಗರ್ಿಕ ಅನಿಲವನ್ನು ಭೂಮಿಯಿಂದ ಹೊರತೆಗೆದಿರುವಂಥಹ ಖಾಲಿ ಭೂಭಾಗದೊಳಕ್ಕೆ ಸುಮಾರು 1.0 ಲಕ್ಷ ಟನ್ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಅಂದಾಜು 2 ಕಿಲೋಮೀಟರ್ ಆಳಕ್ಕೆ ಪಂಪ್ ಮಾಡಲಾಗುತ್ತದೆ. ಭೂಮಿಯ ಗರ್ಭದೊಳಕ್ಕೆ ವಿಷಾನಿಲವನ್ನು ತುಂಬಿ ಕೈತೊಳೆದುಕೊಳ್ಳುವುದು ಕೂಡ ಭೂಮಿಯ ತಾಪಮಾನ ಕಡಿಮೆಗೊಳಿಸುವ ಒಂದು ಪರಿಹಾರ ಮಾರ್ಗವೆಂದು ಸಾಧಿಸಲು ಆಸ್ಟ್ರೇಲಿಯಾ ಹೆಣಗುತ್ತಿದೆಯಷ್ಟೆ.

ಪರಿಹಾರ ಕ್ರಮಗಳು[ಬದಲಾಯಿಸಿ]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

???