ವಿಷಯಕ್ಕೆ ಹೋಗು

ವಾಯುಗುಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಶ್ವಾದ್ಯಂತ ವಾಯುಗುಣ ವರ್ಗೀಕರಣಗಳು

ವಾಯುಗುಣವು ದೀರ್ಘ ಅವಧಿಯಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಉಷ್ಣಾಂಶ, ಆರ್ದ್ರತೆ, ವಾತಾವರಣದ ಒತ್ತಡ, ಗಾಳಿ, ಮಳೆ, ವಾತಾವರಣದಲ್ಲಿನ ಕಣಗಳ ಸಂಖ್ಯೆ ಮತ್ತು ಇತರ ಪವನಶಾಸ್ತ್ರ ಅಂಶಗಳ ಮಾಪನಗಳ ಅಂಕಿಅಂಶಗಳನ್ನು ಒಳಗೊಳ್ಳುತ್ತದೆ. ವಾಯುಗುಣಕ್ಕೆ ವ್ಯತಿರಿಕ್ತವಾಗಿ, ಹವಾಮಾನವು ಈ ಅಂಶಗಳ ಪ್ರಸ್ತುತ ಸ್ಥಿತಿ ಮತ್ತು ಅಲ್ಪಾವಧಿಯಲ್ಲಿ ಅವುಗಳ ವ್ಯತ್ಯಾಸಗಳನ್ನು ಒಳಗೊಂಡಿರುತ್ತದೆ. ಒಂದು ಪ್ರದೇಶದ ವಾಯುಗುಣವು ಐದು ಘಟಕಗಳಾದ, ವಾತಾವರಣ, ಜಲಾವರಣ, ಶೈತ್ಯಗೋಳ, ಭೂಮಿಯ ಮೇಲ್ಮೈ, ಮತ್ತು ಜೀವಗೋಳಗಳನ್ನು ಹೊಂದಿರುವ ವಾಯುಗುಣ ವ್ಯವಸ್ಥೆಯಿಂದ ಸೃಷ್ಟಿಯಾಗುತ್ತದೆ.

ಹವಾಮಾನದ ದೀರ್ಘಾವದಿ ಸರಾಸರಿಯನ್ನೇ ‘ವಾಯುಗುಣ’ವೆನ್ನುವರು. ನೀರಿನ ಆಕರ, ನೈಸರ್ಗಿಕ ಸಂಪನ್ಮೂಲ, ಬೆಳೆ ವಿಧಾನ , ಭೂಬಳಕೆ, ಕೈಗಾರಿಕಾ ಸ್ಥಾವರಗಳು, ಕಟ್ಟಡಗಳ ರಚನೆ, ಜನಾಂಗೀಯ ವೈಶಿಷ್ಟ್ಯಗಳು ವಾಯುಗುಣಕ್ಕೆ ಅನುಗುಣವಾಗಿರುತ್ತವೆ. ವಿಭಿನ್ನ ಪ್ರದೇಶಗಳಲ್ಲಿ, ವಿಭಿನ್ನ ಅವಧಿಯಲ್ಲಿರುವ ವಾಯುಮಂಡಲದ ಅಂಶಗಳಾದ ಉಷ್ಣತೆ, ಮಾರುತ, ಮಳೆಗಳು ಒಂದು ಪ್ರದೇಶದ ವಾಯುಗುಣದ ಮೇಲೆ ಪ್ರಭಾವ ಬೀರುತ್ತವೆ. ‘ಅಯಾನುಗೋಲ’, ಯಾಕೆಂದರೆ ಕಣಗಳು ಬಹುತೇಕ ಅಯಾನೀಕರಣಗೊಂಡಿರುತ್ತದೆ. ಮಳೆ ಹನಿಗಳು ಪುಟ್ಟ ಅಶ್ರಗಗಳಂತೆ (ಪ್ರಿಸಮ್‌ಗಳಂತೆ) – ವರ್ತಿಸುತ್ತವೆ. ಸೂರ್ಯ ಪ್ರಕಾಶ ಅವುಗಳ ಮೇಲೆ ಬಿದ್ದು ಒಳಗೆ ಸಾಗುವಾಗ ಕಿರಣಗಳು ಬೇರೆ ಬೇರೆ ಬಣ್ಣದವುಗಳಾಗಿ ಒಡೆಯುತ್ತವೆ. ಇವು ಒಳಬದಿಯಿಂದ ಪ್ರತಿಫಲಿಸಿ ನೀರ ಹನಿಗಳಿಂದ ಹೊರ ಬಂದು ಸೂರ್ಯನಿಗೆ ಅಭಿಮುಖವಾಗಿ ಸಾಗುತ್ತವೆ. ಹೀಗೆ ಸಾಗುವ ಒಂದೇ ಬಣ್ಣದ ಕಿರಣಗಳು ಬೇರೆ ಬೇರೆ ಮಳೆಹನಿಗಳಿಂದ ವೀಕ್ಷಕನನ್ನು ತಲುಪುವಾಗ – ಮೊದಲ ಅಥವಾ ಪ್ರಾಥಮಿಕ – ಕಾಮನ ಬಿಲ್ಲು ಕಾಣಿಸುತ್ತದೆ. ಸೂರ್ಯಕಿರಣ ಮತ್ತು ವೀಕ್ಷಕನನ್ನು ಹಾದುಹೋಗುವ ರೇಖೆಯೊಂದಿಗೆ ಈ ಬಿಲ್ಲು ಮಾಡುವ ಕೋನ ಸುಮಾರು 42 ಡಿಗ್ರಿ. ನೀರ ಹನಿಗಳೊಳಗೆ ಎರಡು ಬಾರಿ ಪ್ರತಿಫಲಿಸಿ ಹೊರಬರುವ ವಿವಿಧ ಬಣ್ಣಗಳ ಕಿರಣಗಳು ಎರಡನೇ – ಅಥವಾ ದ್ವಿತೀಯ – ಕಾಮನಬಿಲ್ಲನ್ನು ಉಂಟು ಮಾಡುತ್ತವೆ. ಸೂರ್ಯ ಕಿರಣ ಮತ್ತು ವೀಕ್ಷಕನನ್ನು ಹಾದು ಹೋಗುವ ರೇಖೆಯೊಂದಿಗೆ ಈ ಬಿಲ್ಲು ಮಾಡುವ ಕೋನ ಸುಮಾರು 50 ಡಿಗ್ರಿ.


"https://kn.wikipedia.org/w/index.php?title=ವಾಯುಗುಣ&oldid=719103" ಇಂದ ಪಡೆಯಲ್ಪಟ್ಟಿದೆ