ದೋಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಶಾಖಪಟ್ಟಣದ ಮೀನುಗಾರಿಕಾ ದೋಣಿಗಳು

ದೋಣಿಯು ಆಕಾರಗಳ ದೊಡ್ಡ ವ್ಯಾಪ್ತಿಯ, ತೇಲಲು, ಜಾರಲು, ನೀರಿನ ಮೇಲೆ ಕೆಲಸ ಮಾಡಲು ಅಥವಾ ಪ್ರಯಾಣ ಮಾಡಲು ವಿನ್ಯಾಸಗೊಳಿಸಲಾದ ಒಂದು ಜಲವಾಹನ. ಸಣ್ಣ ದೋಣಿಗಳು ಸಾಮಾನ್ಯವಾಗಿ ಒಳನಾಡಿನ ಜಲಮಾರ್ಗಗಳಲ್ಲಿ (ಉದಾ. ನದಿಗಳು ಮತ್ತು ಕೆರೆಗಳು) ಮತ್ತು ಸಂರಕ್ಷಿತ ಕರಾವಳಿ ಪ್ರದೇಶಗಳಲ್ಲಿ ಕಂಡುಬರುತ್ತವೆ. ನೌಕಾಪಡೆಯ ಪದಗಳಲ್ಲಿ, ದೋಣಿಯು ಮತ್ತೊಂದು ನೌಕೆಯ (ಒಂದು ಹಡಗು) ಮೇಲೆ ಸಾಗಿಸಬಹುದಾದ ಸಾಕಷ್ಟು ಚಿಕ್ಕದಾದ ಒಂದು ನೌಕೆ. ಕೆಲವು ವ್ಯಾಖ್ಯಾನಗಳು ಗಾತ್ರದಲ್ಲಿ ವ್ಯತ್ಯಾಸ ಮಾಡುವುದಿಲ್ಲ, ಮತ್ತು ಮಹಾ ಸರೋವರಗಳ ಮೇಲಿನ ೧೦೦೦ ಅಡಿ ಉದ್ದದ ಬೃಹತ್ ಸರಕುನೌಕೆಗಳನ್ನು ದೋಣಿಗಳೆಂದೇ ಕರೆಯಲಾಗುತ್ತದೆ. ಹಡಗುಗಳು ಅವುಗಳ ಹೆಚ್ಚು ದೊಡ್ಡ ಗಾತ್ರ, ಆಕಾರ ಮತ್ತು ಸರಕು ಅಥವಾ ಪ್ರಯಾಣಿಕ ಸಾಮರ್ಥ್ಯವನ್ನು ಆಧರಿಸಿ ದೋಣಿಗಳಿಂದ ಭಿನ್ನವಾಗಿರುತ್ತವೆ.

ದೋಣಿಗಳು ಅವುಗಳ ಇಚ್ಛಿತ ಉದ್ದೇಶ, ದೊರೆಯುವ ವಸ್ತುಗಳು ಅಥವಾ ಸ್ಥಳೀಯ ಸಂಪ್ರದಾಯಗಳ ಕಾರಣ ವಿವಿಧ ಆಕಾರಗಳು, ಗಾತ್ರಗಳು ಮತ್ತು ನಿರ್ಮಾಣ ವಿಧಾನಗಳನ್ನು ಹೊಂದಿರುತ್ತವೆ. ಕಿರುಗೋಣಿ-ಬಗೆಯ ದೋಣಿಗಳನ್ನು ಪ್ರಾಗೈತಿಹಾಸಿಕ ಕಾಲದಿಂದ ಬಳಸಲಾಗುತ್ತಿದೆ ಮತ್ತು ವಿವಿಧ ಆವೃತ್ತಿಗಳನ್ನು ವಿಶ್ವದಾದ್ಯಂತ ಸಾರಿಗೆ, ಮೀನುಗಾರಿಕೆ ಅಥವಾ ಕ್ರೀಡೆಗಾಗಿ ಬಳಸಲಾಗುತ್ತದೆ. ಮೀನುಗಾರಿಕಾ ದೋಣಿಗಳು ಭಾಗಶಃ ಸ್ಥಳೀಯ ಪರಿಸ್ಥಿತಿಗಳಿಗೆ ಹೊಂದಿಕೆಯಾಗಲು ಶೈಲಿಯಲ್ಲಿ ವ್ಯಾಪಕವಾಗಿ ಬದಲಾಗುತ್ತವೆ.

ಚಿತ್ರಗಳು[ಬದಲಾಯಿಸಿ]

"https://kn.wikipedia.org/w/index.php?title=ದೋಣಿ&oldid=1094605" ಇಂದ ಪಡೆಯಲ್ಪಟ್ಟಿದೆ