ಬ್ರಹುಯಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಬ್ರಹುಯಿ ದ್ರಾವಿಡ ಭಾಷೆಗಳಲ್ಲೊಂದು. ಇದು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್ ದೇಶಗಳಲ್ಲಿ ಉಪಯೋಗಿಸಲ್ಪಡುತ್ತದೆ. ೨೦೦೫ರಲ್ಲಿ ತಿಳಿದಂತೆ ಸುಮಾರು ೨.೨ ಮಿಲಿಯನ್ ಜನರು ಈ ಭಾಷೆಯನ್ನು ಉಪಯೋಗಿಸುತ್ತಾರೆ. ಅವರಲ್ಲಿ ಶೇಖಡ ೯೦ ರಷ್ಟು ಮಂದಿ ಪಾಕಿಸ್ತಾನದ ಬಲುಚಿಸ್ತಾನ ಪ್ರಾಂತದವರು. ಇತರೆ ದ್ರಾವಿಡ ಭಾಷೆಗಳಿಂದ ಸುಮಾರು ೧೫೦೦ ಕಿಲೋಮೀಟರಿನ ಅಂತರದಲ್ಲಿ ಬೇರ್ಪಟ್ಟಿರುವುದರಿಂದ ಈ ಭಾಷೆಯ ಮೇಲೆ “ಇರಾನಿ” ಭಾಷೆಯ ಚಾಪು ಕಾಣಲಿದೆ. ಈ ಭಾಷೆಗೆ ಲಿಪಿ ಇಲ್ಲದಿರುವುದರಿಂದ ಇದನ್ನು ಅರಬ್ಬಿ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ಇತ್ತೀಚೆಗಷ್ಟೇ ಈ ಭಾಷೆಯನ್ನು ರೋಮನ್ ಲಿಪಿಯಲ್ಲಿ ಬರೆಯಲು ಕ್ವೆಟ್ಟಾದಲ್ಲಿರುವ ಬಲುಚಿಸ್ತಾನ ವಿಶ್ವವಿದ್ಯಾಲಯದ ಬ್ರಹುಯಿ ಭಾಷಾ ಮಂಡಳಿ ಅಭಿವೃದ್ದಿಪಡಿಸಿದೆ. ಬ್ರಹುಯಿ ಭಾಷೆಯ ರೋಮನ್ ಲಿಪಿಯ ಅಕ್ಷರಗಳು ಮತ್ತು ಸಮಾನಾಂತರ ಕನ್ನಡ ಅಕ್ಷರ ಮಾಲೆಯನ್ನು ಕೆಳಗೆ ನೀಡಲಾಗಿದೆ:

a á e í u ú ŕ i o
k g ģ
c j z ź
t d n
ŧ đ ń
p f b m
y r l v ş s h ļ x
ಕ್ಷ


ಈ ಭಾಷೆಯು ಕುರುಖ್(ಒರಾಒನ್), ಮಾಲ್ಟೋ ಮತ್ತು ಕನ್ನಡ ಭಾಷೆಯ ಕುಟುಂಬಕ್ಕೆ ಸೇರಿದೆ.[೧]


brh:Kánađ

  1. <ref name=ಜೂಲ್ಸ ಬ್ಲೋಚ್"canara-kurkh-brahui group; pre-aryan and pre-dravidian p.37; 58;
"https://kn.wikipedia.org/w/index.php?title=ಬ್ರಹುಯಿ&oldid=322726" ಇಂದ ಪಡೆಯಲ್ಪಟ್ಟಿದೆ