ವಿಷಯಕ್ಕೆ ಹೋಗು

ತುರ್ಕಮೆನಿಸ್ತಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Republic of Turkmenistan
Türkmenistan Respublikasy
Flag of Turkmenistan
Flag
Coat of arms of Turkmenistan
Coat of arms
Anthem: Independent, Neutral, Turkmenistan State Anthem
Location of Turkmenistan
Capital
and largest city
Ashgabat
Official languagesTurkmen
Language for inter-ethnic
communication
Russian
Demonym(s)Turkmen
GovernmentPresidential republic Single-party state
• President
Gurbanguly Berdimuhamedow
Independence 
from the Soviet Union
• Declared
27 October 1991
• Recognized
25 December 1991
Area
• Total
488,100 km2 (188,500 sq mi)[] (52nd)
• Water (%)
4.9
Population
• 2009 estimate
5,110,000[] (112th)
• Density
10.5/km2 (27.2/sq mi) (208th)
GDP (PPP)2009 estimate
• Total
$31.966 billion[]
• Per capita
$5,971[]
HDI (2007)0.739[]
Error: Invalid HDI value · 109th
CurrencyTurkmen new manat (TMT)
Time zoneUTC+5 (TMT)
• Summer (DST)
UTC+5 (not observed)
Driving sideright
Calling code993
ISO 3166 codeTM
Internet TLD.tm
ತುರ್ಕಮೆನಿಸ್ತಾನ್ ಆರು ಸ್ವತಂತ್ರ ಟರ್ಕಿಕ್ ರಾಜ್ಯಗಳಲ್ಲಿ ಒಂದು

ತುರ್ಕಮೆನಿಸ್ತಾನ್ ಗಣರಾಜ್ಯ [ಸೂಕ್ತ ಉಲ್ಲೇಖನ ಬೇಕು]Turkmen: [Türkmenistan Respublikasy] Error: {{Lang}}: text has italic markup (help)[ಸೂಕ್ತ ಉಲ್ಲೇಖನ ಬೇಕು]ವನ್ನು ತುರ್ಕಮೆನಿಯ Russian: Туркмения ಎಂದೂ ಕರೆಯುತ್ತಾರೆ. ಕೇಂದ್ರ ಏಶಿಯಾತರ್ಕಿಕ್ ರಾಜ್ಯಗಳಲ್ಲಿ ಇದು ಒಂದು. 1991ರ ವರೆಗೆ ಇದು ಸೋವಿಯೆಟ್ ರಶಿಯಾದ ಭಾಗವಾದ ತುರ್ಕಮನ್ ಸೋವಿಯೆಟ್ ಸೋಶಿಯಲಿಸ್ಟ್ ರಿಪಬ್ಲಿಕ್ (ತುರ್ಕಮನ್ SSR) ಗಣರಾಜ್ಯವಾಗಿತ್ತು. ತುರ್ಕಮೆನಿಸ್ತಾನ ಆರು ಸ್ವತಂತ್ರ ತರ್ಕಿಕ್ ರಾಜ್ಯಗಳಲ್ಲಿ ಒಂದು. ಇದರ ಆಗ್ನೇಯ ಗಡಿಯಲ್ಲಿ ಅಫ್ಘಾನಿಸ್ತಾನ್, ದಕ್ಷಿಣ ಮತ್ತು ನೈಋತ್ಯದಲ್ಲಿ ಇರಾನ್, ಪೂರ್ವ ಮತ್ತು ಈಶಾನ್ಯದಲ್ಲಿ ಉಜಬೆಕಿಸ್ತಾನ್ ಮತ್ತು ಉತ್ತರ ಮತ್ತು ವಾಯವ್ಯದಲ್ಲಿ ಕಜಕಿಸ್ತಾನ್ ಪಶ್ಚಿಮದಲ್ಲಿ ಕಾಸ್ಪಿಯನ್ ಸಮುದ್ರಗಳಿವೆ.

ತುರ್ಕಮೆನಿಸ್ತಾನದ ಡಿಜಿಪಿ ಬೆಳವಣಿಗೆ ದರ 2009ರಲ್ಲಿ 6.1 ಇದ್ದು ಜಗತ್ತಿನಲ್ಲಿ 16ನೆ ಸ್ಥಾನದಲ್ಲಿತ್ತು. ಆದರೆ ಈ ಅಂಕಿಗಳು ವ್ಯಾಪಕ ತಪ್ಪುಗಳಿಂದ ಕೂಡಿರುವ ಸಾಧ್ಯತೆ ಇದೆ.[] ತನ್ನಲ್ಲಿರುವ ನೈಸರ್ಗಿಕ ಅನಿಲ ಸಂಪನ್ಮೂಲದಲ್ಲಿ ಅದು ಜಗತ್ತಿನಲ್ಲಿ ನಾಲ್ಕನೇ ಸ್ಥಾನದಲ್ಲಿ ನಿಲ್ಲುತ್ತದೆ. ಈ ದೇಶದ ಬಹುಭಾಗ ಕರಾಕುಂ (ಕಪ್ಪು ಮರಳು) ಮರುಭೂಮಿಯಿಂದ ಆವೃತ್ತವಾಗಿದ್ದರೂ ಕೆಲವು ಪ್ರದೇಶಗಳಲ್ಲಿ ನೈಸರ್ಗಿಕ ಸಂಪನ್ಮೂಲದಲ್ಲಿ ಇದು ಸಂಪದ್ಭರಿತವಾಗಿದೆ.

ಇತ್ತೀಚಿನವರೆಗೂ ತುರ್ಕಮನ್ ಸರ್ಕಾರ ಏಕಪಕ್ಷ ಪದ್ಧತಿಯನ್ನು ಹೊಂದಿತ್ತು; ಈ ಪದ್ಧತಿಯು ಪ್ರಜಾಪ್ರಭುತ್ವದ ಅತ್ಯಂತ ಕನಿಷ್ಠ ಮಾನದಂಡಗಳನ್ನೂ ಮುಟ್ಟುತ್ತಿಲ್ಲ ಎಂದು ಪರಿಗಣಿಸಲಾಗಿತ್ತು.[] ಅಧ್ಯಕ್ಷ ಸಪಾರ್ಮುರಾತ್ ನಿಯಾಜೋವ್ ("ತುರ್ಕಮೆನ್ ಬಾಸಿ"- "ತುರ್ಕಮೆನ್ನರ ನಾಯಕ"- ಎಂದು ಕರೆಯುತ್ತಿದ್ದರು). 21 ಡಿಸೆಂಬರ್ 2006ರಂದು ತಾವು ಸಾಯುವ ವರೆಗೂ ತುರ್ಕಮೆನಿಸ್ತಾನವನ್ನು ಆಳಿದರು. ಗುರ್ಬಾಂಗುಲಿ ಬೇರ್ದಿಮುಹಾಮೆದೊವ್ ನೂತನ ಅಧ್ಯಕ್ಷರಾಗಿ 11 ಫೆಬ್ರವರಿ 2007 ರಂದು ಆಯ್ಕೆಯಾದರು.

ಇತಿಹಾಸ

[ಬದಲಾಯಿಸಿ]

ತುರ್ಕಮೆನಿಸ್ತಾನ್ ಪ್ರದೇಶ ದೀರ್ಘವಾದ ಮತ್ತು ರಂಗುರಂಗಿನ ಇತಿಹಾಸವನ್ನು ಹೊಂದಿದೆ. ಒಂದು ಸಾಮ್ರಾಜ್ಯದ ಬಳಿಕ ಇನ್ನೊಂದು ಸಾಮ್ರಾಜ್ಯದ ಸೇನೆಗಳು ಇನ್ನಷ್ಟು ಸಂಪದ್ಭರಿತ ಪ್ರದೇಶದ ಕಡೆಗೆ ತೆರಳುವ ಮಾರ್ಗದಲ್ಲಿ ಇಲ್ಲಿ ತಾತ್ಕಾಲಿಕವಾಗಿ ಬೀಡುಬಿಟ್ಟಿದ್ದರು. ಈ ಪ್ರದೇಶದ ಲಿಖಿತ ಇತಿಹಾಸ ಪ್ರಾಚೀನ ಪರ್ಷಿಯಾದ ಅಚೆಮೆನಿಡ್ ಸಾಮ್ರಾಜ್ಯ ಇದನ್ನು ಗೆದ್ದುಕೊಂಡಬಳಿಕ ಆರಂಭವಾಗುತ್ತದೆ. ಈ ಪ್ರದೇಶವನ್ನು ಮಾರ್ಜಿಯಾನಾದ ಸತ್ರಾಪೀಸ್, ಖ್ವಾರೆಜ್ಮ್ ಮತ್ತು ಪಾರ್ಥಿಯಾ {8} ನಡುವೆ ವಿಭಾಗಿಸಲಾಗಿತ್ತು.

ಮಧ್ಯ ಏಶಿಯಾಕ್ಕೆ ದಂಡೆತ್ತಿ ಹೋಗುವ ಮಾರ್ಗದಲ್ಲಿ ಅಲೆಕ್ಸಾಂಡರ್ ಕ್ರಿ.ಪೂ. ನಾಲ್ಕನೇ ಶತಮಾನದಲ್ಲಿ ತುರ್ಕಮೆನಿಸ್ತಾನ್ ಪ್ರದೇಶವನ್ನು ಜಯಿಸಿದನು. ಅದೇ ಸಮಯದಲ್ಲಿ ಏಶಿಯಾ ಮತ್ತುಮೆಡಿಟರೇನಿಯನ್ ಪ್ರದೇಶದ ನಡುವೆ ಪ್ರಮುಖ ವ್ಯಾಪಾರ ಮಾರ್ಗವಾಗಿ ರೇಷ್ಮೆ ರಸ್ತೆ (ಸಿಲ್ಕ್ ರೋಡ್)ಯನ್ನು ನಿರ್ಮಿಸಲಾಯಿತು[ಸೂಕ್ತ ಉಲ್ಲೇಖನ ಬೇಕು].  .ಒಂದು ನೂರಾ ಐವತ್ತು ವರ್ಷಗಳ ಬಳಿಕ ಪರ್ಷಿಯಾದ ಪಾರ್ಥಿಯನ್ ರಾಜ್ಯ ತನ್ನ ರಾಜಧಾನಿಯನ್ನುನಿಸಾದಲ್ಲಿ ಸ್ಥಾಪಿಸಿತು. ಈಗ ಅದು ರಾಜಧಾನಿ ಅಸ್ಗಾಬಾತ್ ನ ಉಪನಗರವಾಗಿದೆ.[ಸೂಕ್ತ ಉಲ್ಲೇಖನ ಬೇಕು]   ಪಾರ್ಥಿಯನ್ ಸಾಮ್ರಾಜ್ಯವನ್ನು ಇರಾನದ್ದೆ ಇನ್ನೊಂದು ವಂಶ ಪರ್ಷಿಯಾದ ಸಸ್ಸಾನಿದರು ಪರಾಭವಗೊಳಿಸಿ ಅಧಿಕಾರಕ್ಕೆ ಬಂದರು. ಈ ಪ್ರದೇಶ ಅನೇಕ ಶತಮಾನಗಳ ವರೆಗೆ ಪರ್ಷಿಯನ್ ಸಾಮ್ರಾಜ್ಯದ ಪ್ರಾಂತ್ಯವಾಗಿ ಉಳಿದು ಬಂತು.

(0}ಕ್ರಿ.ಶಕ ಏಳನೇ ಶತಮಾನದಲ್ಲಿ ಅರಬರು ಈ ಪ್ರದೇಶವನ್ನು ಗೆದ್ದುಕೊಂಡರು.ಮತ್ತು ತಮ್ಮ ಜೊತೆಯಲ್ಲಿ ಇಸ್ಲಾಮ್ ತಂದರು. ಮಹಾನ್ ಮಧ್ಯಪ್ರಾಚ್ಯ ಸಂಸ್ಕೃತಿಯಲ್ಲಿ ತುರ್ಕಮೆನಿಸ್ತಾನವನ್ನು ಸೇರಿಸಿಕೊಂಡರು.[ಸೂಕ್ತ ಉಲ್ಲೇಖನ ಬೇಕು] ಕಲಿಫ್ ಅಲ್-ಮಾಮುನ್ ತನ್ನ ರಾಜಧಾನಿಯನ್ನು ಮೆರ್ವ್ ಗೆ ಸ್ಥಳಾಂತರಿಸಿದ ಬಳಿಕ ತುರ್ಕಮೆನಿಸ್ತಾನ್ ಪ್ರದೇಶವು ಬೇಗನೆ ಗ್ರೇಟರ್ ಕೊರಾಸನ್ ನ ರಾಜಧಾನಿಯಾಗಿ ಪ್ರಚಾರಕ್ಕೆ ಬಂತು.[ಸೂಕ್ತ ಉಲ್ಲೇಖನ ಬೇಕು]

ಚಿತ್ರ:Magtimguli Pyragy.jpg
ಮಾಗ್ತಿಂಗುಲಿ ಪಿರಾಗಿ
ಹನ್ನೊಂದನೇ ಶತಮಾನದ ಮಧ್ಯದಲ್ಲಿ ತುರ್ಕಮನ್ ಆಡಳಿತಸೆಲ್್ಜುಕ್ ಸಾಮ್ರಾಜ್ಯವು ಖೊರಾಸಾನ್ (ಆಧುನಿಕ ಅಫ್ಘಾನಿಸ್ಥಾನ್ )ಗೆ ವಿಸ್ತರಣೆ ಮಾಡುವ ಪ್ರಯತ್ನದಲ್ಲಿ ಆಧುನಿಕ ತುರ್ಕಮೆನಿಸ್ತಾನ್ ಪ್ರದೇಶದಲ್ಲಿ ತನ್ನ ಬಲವನ್ನು ಕೆಂದ್ರೀಕರಿಸಿತು.  ಈ ಸಾಮ್ರಾಜ್ಯ ಹನ್ನೆರಡನೆ ಶತಮಾನದ ಎರಡನೇ ಅರ್ಧದಲ್ಲಿ ಕುಸಿದು ಬಿತ್ತು. ಚೆಂಗೀಸ್ ಖಾನ್ ತನ್ನ ಪಶ್ಚಿಮದ ದಂಡಯಾತ್ರೆಯ ಸಮಯದಲ್ಲಿ ಪೂರ್ವ ಕಾಸ್ಪಿಯನ್ ಸಮುದ್ರ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ಪಡೆದಾಗ ತುರ್ಕಮೆನ್ನರು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡರು.

ಮುಂದಿನ ಏಳು ಶತಮಾನಗಳವರೆಗೆ ತುರ್ಕಮೆನ್ ಜನರು ವಿವಿಧ ಸಾಮ್ರಾಜ್ಯಗಳ ಅಡಿಯಲ್ಲಿ ಬದುಕಿದರು ಮತ್ತು ಅಂತರ್-ಬುಡಕಟ್ಟು ಜಗಳದಲ್ಲಿ ಸದಾ ಬಡಿದಾಡಿದರು. ರಶಿಯಾ ಪಾಲ್ಗೊಳ್ಳುವ ವರೆಗೂ ತುರ್ಕಮನ್ ಇತಿಹಾಸ ಸ್ವಲ್ಪವಷ್ಟೇ ದಾಖಲಾಗಿದ್ದು. ಹೀಗಿದ್ದರೂ ಹದಿಮೂರರಿಂದ ಹದಿನಾರನೇ ಶತಮಾನಗಳ ವರೆಗೆ ತುರ್ಕಮೆನ್ ವಿಶಿಷ್ಟವಾದ ಜನಾಂಗೀಯ ಭಾಷಿಕ ಗುಂಪು ಅಸ್ತಿತ್ವಕ್ಕೆ ಬಂತು.[ಸೂಕ್ತ ಉಲ್ಲೇಖನ ಬೇಕು] ತುರ್ಕಮನ್್ರು ಸಮಕಾಲೀನ ಕಜಖ್್ಸ್ತಾನಮಾಂಗಿಶ್ಲಾಕ್ ಪರ್ಯಾಯ ದ್ವೀಪದಿಂದ ಇರಾನ್ ಗಡಿ ಪ್ರದೇಶದೆಡೆಗೆ ಮತ್ತು ಅಮು ದಾರಿಯಾ ಕಣಿವೆಗೆ ವಲಸೆ ಬಂದಿರುವುದರಿಂದ ಬುಡಕಟ್ಟು ತುರ್ಕಮನ್ ಸಮಾಜವು ಸಾಂಸ್ಕೃತಿಕ ಸಂಪ್ರದಾಯವನ್ನು ಮತ್ತಷ್ಟು ಬೆಳೆಸಿತು. ಇದು ತುರ್ಕಮನ್ ರಾಷ್ಟ್ರೀಯ ಆತ್ಮಸಾಕ್ಷಿಗೆ ಬುನಾದಿಯಾಯಿತು.

17ನೆ  ಮತ್ತು 19ನೆ ಶತಮಾನಗಳ ನಡುವೆ ತುರ್ಕಮೆನಿಸ್ತಾನದ ಮೇಲೆ ನಿಯಂತ್ರಣ ಪಡೆಯಲು ಪರ್ಶಿಯಾದವರು, ಶಾಗಳು, ಖಿವರು,ಖಾನರು,ಬುಖಾರಾದ ಅಮೀರರು ಮತ್ತು ಅಫ್ಘಾನಿಸ್ಥಾನದ ಆಡಳಿತಗಾರರ ನಡುವೆ ಹೋರಾಟ ನಡೆಯಿತು.  ಈ ಅವಧಿಯಲ್ಲಿ ತುರ್ಕಮನ್ ಆಧ್ಯಾತ್ಮಿಕ ನಾಯಕ ಮಾಗ್ತಿಂಗುಲಿ ಪಿರಾಗಿ ತನ್ನ ಜನರಿಗೆ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ದೊರಕಿಸಿಕೊಡಲು ಪ್ರಯತ್ನಿಸುವ ಮೂಲಕ ಪ್ರಾಮುಖ್ಯತೆ ಪಡೆದರು.   ತುರ್ಕಮನ್ ಅಲೆಮಾರಿಗಳು ವರ್ತಕರ ತಂಡದ ಮೇಲೆ ದಾಳಿ ಮಾಡಿ ವಿಶೇಷವಾಗಿ ಪರ್ಶಿಯಾದವರನ್ನು ಸೆರೆಯಾಳನ್ನಾಗಿ ಮಾಡಿಕೊಳ್ಳುತ್ತಿದ್ದರು. ಇವರನ್ನು ಖಿವಾ ಮತ್ತು ಬುಖಾರಾಗುಲಾಮಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು.[][]

ಈ ಸಮಯದಲ್ಲಿ ತುರ್ಕಮೆನಿಸ್ತಾನವೂ ಸೇರಿದಂತೆ ವಿಶಾಲವಾದ ಕೇಂದ್ರ ಏಶಿಯಾ ಪ್ರದೇಶವು ಬಹುತೇಕ ನಕ್ಷೆಗೆ ಒಳಪಟ್ಟಿರಲಿಲ್ಲ. ಮತ್ತು ಅಕ್ಷರಶಃ ಯುರೋಪಿಗೆ ಮತ್ತು ಪಶ್ಚಿಮ ಜಗತ್ತಿಗೆ ಅಪರಿಚಿತವಾಗಿಯೇ ಇತ್ತು. ಬ್ರಿಟೀಷ್ ಸಾಮ್ರಾಜ್ಯ ಮತ್ತು ತ್ಸಾರ್ ದೊರೆಗಳ ರಶಿಯಾ ಈ ಪ್ರದೇಶಗಳ ಮೇಲೆ ನಿಯಂತ್ರಣ ಪಡೆಯಲು ದ್ವೇಷ ಸಾಧಿಸಿದರು. ಮತ್ತು ದೊಡ್ಡ ಆಟ (ದಿ ಗ್ರೇಟ್ ಗೇಮ್)ವನ್ನೇ ಆಡಿದರು. ಕೆಂದ್ರ ಏಶಿಯಾದ ವಿಜಯದುದ್ದಕ್ಕೂ ರಶಿಯಾದವರು ತುರ್ಕಮನ್್ ರಿಂದ ಕಠಿಣವಾದ ಪ್ರತಿರೋಧವನ್ನು ಎದುರಿಸಿದರು. 1894ರ ವೇಳೆಗೆ ರಶಿಯಾ ತುರ್ಕಮೆನಿಸ್ತಾನದ ಮೇಲೆ ನಿಯಂತ್ರಣವನ್ನು ಸಾಧಿಸಿ ಅದನ್ನು ತನ್ನ ಸಾಮ್ರಾಜ್ಯದೊಳಗೆ ಸೇರಿಸಿಕೊಂಡಿತು.

ಸೋವಿಯತ್‌ ಒಕ್ಕೂಟ

[ಬದಲಾಯಿಸಿ]

.ಆಂಗ್ಲೋ- ರಶಿಯನ್ ಸಮ್ಮೇಳನ 1907ರಲ್ಲಿ ನಡೆಯುವುದರೊಂದಿಗೆ ಅವರ ನಡುವಿನ ದ್ವೇಷ ಅಧಿಕೃತವಾಗಿ ಮುಕ್ತಾಯವಾಯಿತು. .ನಿಧಾನವಾಗಿ ರಶಿಯಾದ ಮತ್ತು ಯುರೋಪಿನ ಸಂಸ್ಕೃತಿಯನ್ನು ಆ ಪ್ರದೇಶದಲ್ಲಿ ಪರಿಚಯಿಸಲಾಯಿತು. ಇದು ರಾಜಧಾನಿಯಾಗಿರುವ ನೂತನವಾಗಿ ನಿರ್ಮಿಸಿರುವ ಅಸ್ಗಾಬಾತ್ವಾಸ್ತು ರಚನೆಯಲ್ಲಿ ಕಂಡುಬರುವುದು.

1917ರಲ್ಲಿ ರಷಿಯಾದಲ್ಲಿ ನಡೆದ ಅಕ್ಟೋಬರ್ ಕ್ರಾಂತಿ ಮತ್ತು ಆನಂತರದ ರಾಜಕೀಯ ದಂಗೆಯು ಈ ಪ್ರದೇಶವನ್ನು ತುರ್ಕಮನ್ SSR ಎಂದು 1924ರಲ್ಲಿ ಘೋಷಿಸುವುದಕ್ಕೆ ದಾರಿಮಾಡಿತು. ಸೋವಿಯೆಟ್ ಒಕ್ಕೂಟಆರು ಗಣರಾಜ್ಯಗಳಲ್ಲಿ ಇದು ಒಂದಾಯಿತು. ಆಧುನಿಕ ತುರ್ಕಮೆನಿಸ್ತಾನದ ಗಡಿಗಳನ್ನು ಆಗ ಅದು ಹೊಂದಿತು.

ಕೇಂದ್ರ ಏಶಿಯಾದ ಒಬ್ಬ ತುರ್ಕಮನ್ ಸಾಂಪ್ರದಾಯಿಕ ಉಡುಪಿನಲ್ಲಿ

ಹೊಸ ತುರ್ಕಮೆನ್ SSR ಇನ್ನಷ್ಟು ಯುರೋಪೀಕರಣ ಪ್ರಕ್ರಿಯೆಗೆ ಒಳಪಟ್ಟಿತು. ಬುಡಕಟ್ಟು ತುರ್ಕಮನ್ ಜನರು ಜಾತ್ಯತೀತರಾಗಲು ಮತ್ತು ಯುರೋಪ್ ಶೈಲಿಯ ದಿರಿಸು ತೊಡಲು ಉತ್ತೇಜಿಸಲಾಯಿತು.

ತುರ್ಕಮೆನ್ ಭಾಷೆಗೆ ಬಳಸುತ್ತಿದ್ದ ವರ್ಣಮಾಲೆಯನ್ನು ಸಾಂಪ್ರದಾಯಿಕ ಅರೇಬಿಕ್ ಲಿಪಿಯಿಂದ [[ಲ್ಯಾಟಿನ್(/3)ಗೆ ಮತ್ತು ಅಂತಿಮವಾಗಿ {4}ಸಿರಿಲಿಕ್್ಗೆ ಬದಲಾಯಿಸಲಾಯಿತು.]]

ಹೀಗಿದ್ದರೂ ತುರ್ಕಮನ್ನರ ಹಿಂದಿನ ಅಲೆಮಾರಿ ಬದುಕಿನ ರೀತಿಯನ್ನು ಬದಲಿಸಿ ಅವರನ್ನು ಕಮ್ಯುನಿಸಂ ಕಡೆಗೆ ಒಲಿಸಿಕೊಳ್ಳುವ ರಶಿಯನ್ನರ ಪ್ರಯತ್ನ 1948ರ ವರೆಗೂ ಫಲ ನೀಡಿರಲಿಲ್ಲ. 1920 ಮತ್ತು 1930ರ ಅವಧಿಯಲ್ಲಿ ಆ ಪ್ರದೇಶದಲ್ಲಿ ರಾಷ್ಟ್ರೀಯವಾದಿ ಸಂಘಟನೆಗಳು ಅಸ್ತಿತ್ವದಲ್ಲಿದ್ದವು. 1948ರಲ್ಲಿ ಸಂಭವಿಸಿದ ಅಸ್ಗಾಬಾತ್ ಭೂಕಂಪ 110,000 ಜನರ ಬಲಿ ಪಡೆಯಿತು. ಇದು ಆ ನಗರದ ಜನಸಂಖ್ಯೆಯ ಮೂರರಲ್ಲಿ ಎರಡು ಭಾಗದಷ್ಟು.[]

ನಿರ್ದಿಷ್ಟವಾಗಿ 1920ರ ಮತ್ತು 1930ರ ಸೋವಿಯೆಟ್ ಒಕ್ಕೂಟದ ರಾಷ್ಟ್ರೀಯ ನೀತಿಗಳು ನಿಜವಾಗಿಯೂ ತುರ್ಕಮನ್ನರ ಸಂಪ್ರದಾಯಗಳ ಸಂಶೋಧನೆಗೆ ಉತ್ತೇಜನ ನೀಡಿತು.[] ತುರ್ಕಮನ್ನರು ಸೋವಿಯೆಟ್ ಆಡಳಿತ ಮತ್ತು ಶೈಕ್ಷಣಿಕ ವ್ಯವಸ್ಥೆಯಲ್ಲಿ ಪಡೆದಿರುವ ಪ್ರಾಮುಖ್ಯತೆಯಿಂದ ಸಂತುಷ್ಟರಾಗಿದ್ದಾರೆ. ಮತ್ತು ಸ್ಟಾಲಿನ್ ಅವಧಿಯಲ್ಲಿ ಗಣರಾಜ್ಯ ತನ್ನ ಸ್ವರೂಪದಲ್ಲಿ ಹೆಚ್ಚು ರಾಷ್ಟ್ರೀಯ ಎನ್ನಿಸಿತು. ಉದಾಹರಣೆಗೆ ತುರ್ಕಮನ್ ಆಡಳಿತ ಭಾಷೆಯಾಯಿತು.[]

ಸ್ವಾತಂತ್ರ್ಯ

[ಬದಲಾಯಿಸಿ]
ಸೋವಿಯೆಟ್ ಒಕ್ಕೂಟ ಕುಸಿಯಲು ಆರಂಭಿಸಿದಾಗ ತುರ್ಕಮೆನಿಸ್ತಾನ್ ಮತ್ತು ಇತರ ಕೇಂದ್ರ ಏಶಿಯಾ ಗಣರಾಜ್ಯಗಳು ರಾಜ್ಯಗಳ ಪುನಾರಚಿತ ರೂಪವನ್ನು ಕಾಯ್ದುಕೊಳ್ಳುವ ಬಗ್ಗೆ ತೀವ್ರವಾಗಿ ಒಲವು ತೋರಿದವು. ಇದಕ್ಕೆ ಮುಖ್ಯ ಕಾರಣ ಅವುಗಳಿಗೆ ತಮ್ಮ ಸಮೃದ್ಧಿಗಾಗಿ ಆರ್ಥಿಕ ಬಲ ಮತ್ತು ಸೋವಿಯೆಟ್ ಒಕ್ಕೂಟದ ಸಾಮಾನ್ಯ ಮಾರುಕಟ್ಟೆ ಬೇಕಾಗಿತ್ತು.   ಹೀಗಿದ್ದರೂ ತುರ್ಕಮೆನಿಸ್ತಾನ್ 27 ಅಕ್ಟೋಬರ್ 1991 ರಂದು ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು[೧೦]. ಪ್ರತ್ಯೇಕವಾಗಿ ಹೋದ ಕೊನೆಯ ಸೋವಿಯೆಟ್ ಗಣರಾಜ್ಯಗಳಲ್ಲಿ ಇದು ಒಂದು.  

ಸೋವಿಯೆಟ್ ಒಕ್ಕೂಟದ ಅಂತಿಮ ವಿಸರ್ಜನೆಯ ಒಂದು ದಿನ ಮೊದಲು ಅಂದರೆ 25 ಡಿಸೆಂಬರ್ 1991 ರಂದು ತುರ್ಕಮೆನಿಸ್ತಾನ್ ಅಧಿಕೃತ ಮಾನ್ಯತೆಯನ್ನು ಪಡೆದುಕೊಂಡಿತು. ಅದರ ಮುಂದಿನ ವರ್ಷ ತುರ್ಕಮೆನಿಸ್ತಾನ್ ವಿಶ್ವಸಂಸ್ಥೆಯನ್ನು ಸೇರಿತು.

1991 ರಲ್ಲಿ ತುರ್ಕಮೆನಿಸ್ತಾನ್ ಮಾಜಿ ಸೋವಿಯೆಟ್ ಗಣರಾಜ್ಯಗಳ ಅಂತಾರಾಷ್ಟ್ರೀಯ ಸಂಘಟನೆಯಾದ ಸ್ವತಂತ್ರ ರಾಷ್ಟ್ರಗಳ ಕಾಮನ್ವೆಲ್ತ್ನ ಸದಸ್ಯತ್ವವನ್ನು ಪಡೆಯಿತು. ಹೀಗಿದ್ದರೂ ತುರ್ಕಮೆನಿಸ್ತಾನ್ ತನ್ನ ಸ್ಥಾನಮಾನವನ್ನು "ಸಹ ಸದಸ್ಯ"ತ್ವಕ್ಕೆ 2005 ಆಗಸ್ಟ್ ನಲ್ಲಿ ಇಳಿಸಿಕೊಂಡಿತು. ತುರ್ಕಮೆನ್ ಅಧ್ಯಕ್ಷರು ಇದಕ್ಕೆ ನೀಡಿದ ಕಾರಣ ದೇಶದ ನೀತಿಯಾದ ಶಾಶ್ವತ ಅಲಿಪ್ತತೆ.[೧೧]

ತುರ್ಕಮೆನ್ ಸೋವಿಯೆಟ್ ಸೋಷಿಯಲಿಸ್ಟ್ ರಿಪಬ್ಲಿಕ್ ನ ಹಿಂದಿನ ನಾಯಕ ಸಪರ್ಮುರಾತ್ ನಿಯಜೊವ್ ಸೋವಿಯೆಟ್ ಒಕ್ಕೂಟದ ವಿಸರ್ಜನೆ ಬಳಿಕವೂ ತುರ್ಕಮೆನಿಸ್ತಾನದ ನಾಯಕರಾಗಿ ಉಳಿದರು. ಸೋವಿಯೆಟ್ ಆಳ್ವಿಕೆಯ ನಂತರದ ಇವರ ಆಡಳಿತದಲ್ಲಿ ರಶಿಯಾ- ತುರ್ಕಮೆನ್ ಸಂಬಂಧ ತೀವ್ರ ಹದಗೆಟ್ಟಿತು. [ಸೂಕ್ತ ಉಲ್ಲೇಖನ ಬೇಕು] ಸಾಂಪ್ರದಾಯಿಕ ಮುಸ್ಲಿಂ ಮತ್ತು ತುರ್ಕಮೆನ್ ಸಂಸ್ಕೃತಿಯ ಪ್ರೋತ್ಸಾಹಕ ತಾನು ಎಂಬಂತೆ ಅವರು ತೋರಿಸಿಕೊಂಡರು. (ತಮ್ಮನ್ನು ತಾವೇ "ತುರ್ಕಮೆನ್್ಬಾಸಿ" ಅಥವಾ "ತುರ್ಕಮೆನ್ ಜನರ ನಾಯಕ" ಎಂದು ಕರೆದುಕೊಂಡರು. ಆದರೆ ಅವರು ತಮ್ಮ ಸರ್ವಾಧಿಕಾರದ ಆಡಳಿತ ಮತ್ತು ವೈಭವೋಪೇತ ಬದುಕಿನ ಆರಾಧನೆ ವ್ಯಕ್ತಿತ್ವದಿಂದಾಗಿ ಪಶ್ಚಿಮ ದೇಶಗಳಲ್ಲಿ ಕುಖ್ಯಾತಿಯನ್ನು ಗಳಿಸಿದರು. 1990ರ ದಶಕದಲ್ಲಿ ಅವರ ಅಧಿಕಾರ ಹೆಚ್ಚುತ್ತ ಹೋಗಿ 1999ರಲ್ಲಿ ಪ್ರೆಸಿಡೆಂಟ್ ಫಾರ್ ಲೈಫ್ (ಜೀವ ಇರುವ ವರೆಗೂ ಅವರೇ ಅಧ್ಯಕ್ಷರು) ಆದರು.

ನಿಯಾಜೊವ್ ಅನಿರೀಕ್ಷಿತವಾಗಿ 21 ಡಿಸೆಂಬರ್ 2006 ರಂದು ನಿಧನರಾದರು. ಹುದ್ದೆಯ ಯಾವ ಉತ್ತರಾಧಿಕಾರಿಯನ್ನೂ ಬಿಟ್ಟಿರಲಿಲ್ಲ. ಮುಂದೆ ಅಧಿಕಾರ ಹಿಡಿಯುವವರು ಯಾರು ಎಂಬುದೂ ಸ್ಪಷ್ಟ ಇರಲಿಲ್ಲ. ನಿಯಾಜೊವ್[೧೨] ಅವರಿಗೆ ಅನೈತಿಕ ಸಂಬಂಧದಲ್ಲಿ ಜನಿಸಿದವರೆಂಬ ಗಾಳಿಸುದ್ದಿ ಇದ್ದ ಹಿಂದಿನ ಉಪ ಪ್ರಧಾನ ಮಂತ್ರಿಗಳಲ್ಲಿ ಒಬ್ಬರಾದ ಗುರ್ಬಾಂಗುಲಿ ಬೇರ್ದಿಮುಹಮೆದೊವ್ ತಾತ್ಕಾಲಿಕವಾಗಿ ಅಧ್ಯಕ್ಷರಾದರು. ಸಂವಿಧಾನದ ಪ್ರಕಾರ ಪೀಪಲ್ಸ್ ಕೌನ್ಸಿಲ್ಲಿನ ಚೇರ್ಮನ್ ಒವೆಜ್ಗೆಲ್ಡಿ ಅತಾಯೇವ್ ಈ ಹುದ್ದೆಗೆ ಉತ್ತರಾಧಿಕಾರಿಯಾಗಬೇಕಿತ್ತು.

ಆದರೆ ಅತಾಯೇವ್ ಮೇಲೆ ಅಪರಾಧಗಳ ಆರೋಪ ಹೊರಿಸಲಾಯಿತು. ಮತ್ತು ಅವರನ್ನು ಅಧಿಕಾರದಿಂದ ತೆಗೆದುಹಾಕಲಾಯಿತು.

11 ಫೆಬ್ರವರಿ 2007ರಲ್ಲಿ ನಡೆದ ಚುನಾವಣೆಯಲ್ಲಿ ಬೇರ್ದಿಮುಹಮೆದೊವ್ ಚಲಾವಣೆಯಾದ ಶೇ. 95 ಮತಗಳಲ್ಲಿ ಶೇ. 89 ಮತಗಳನ್ನು ಪಡೆದು ಆಯ್ಕೆಯಾದರು. ಇದು ನ್ಯಾಯಯುತವಾದುದಲ್ಲ ಎಂದು ಹೊರಗಿನ ವೀಕ್ಷಕರು ಖಂಡಿಸಿದರು.[೧೩] ಅವರು 14 ಫೆಬ್ರವರಿ 2007ರಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ರಾಜಕೀಯ

[ಬದಲಾಯಿಸಿ]

thumb|250px|right|ಅಸ್ಗಾಬಾತ್್ನಲ್ಲಿಯ ಅಧ್ಯಕ್ಷರ ಅರಮನೆ

ಸೋವಿಯೆಟ್ ಒಕ್ಕೂಟದ ಭಾಗವಾಗಿದ್ದ 69 ವರ್ಷಗಳ ಬಳಿಕ (ಯೂನಿಯನ್ ರಿಪಬ್ಲಿಕ್ ಆಗಿ ಇದ್ದ 67 ವರ್ಷಗಳೂ ಸೇರಿ) ತುರ್ಕಮೆನಿಸ್ತಾನ್ 27 ಅಕ್ಟೋಬರ್ 1991ರಂದು ತನ್ನ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು.

ಜೀವಿತಾವಧಿ ಅಧ್ಯಕ್ಷ (ಪ್ರೆಸಿಡೆಂಟ್ ಫಾರ್ ಲೈಫ್) ಸಪರ್ಮುರಾತ್ ನಿಯಾಜೊವ್ ಸೋವಿಯೆಟ್ ಒಕ್ಕೂಟದ ಕಮ್ಯುನಿಸ್ಟ್ ಪಕ್ಷದ ಮಾಜಿ ಅಧಿಕಾರಿ. ತುರ್ಕಮೆನ್ SSRನ ಕಮ್ಯುನಿಸ್ಟ್ ಪಾರ್ಟಿಯ ಮುಖ್ಯಸ್ಥರಾಗಿ 1985 ರಿಂದ ಅವರು ತುರ್ಕಮೆನಿಸ್ತಾನವನ್ನು ಆಳಿದರು. 2006ರಲ್ಲಿ ಸಾಯುವ ವರೆಗೂ ಅವರು ಅಧಿಕಾರದಲ್ಲಿದ್ದರು.

        ಸೋವಿಯೆಟ್ ಒಕ್ಕೂಟದ ವಿಸರ್ಜನೆ ಬಳಿಕ ಅವರು ದೇಶದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದರು.   
೧೧ ಸೆಪ್ಟೆಂಬರ್ ೨೦೨೪28 ಡಿಸೆಂಬರ್ 1999ರಂದು ನಿಯಾಜೊವ್ ಮಜ್ಲಿಸ್(ಪಾರ್ಲಿಮೆಂಟ್)ನಿಂದ ತುರ್ಕಮೆನಿಸ್ತಾನದ ಪ್ರೆಸಿಡೆಂಟ್ ಫಾರ್ ಲೈಫ್ ಆಗಿ ಘೋಷಿತರಾದರು. ಮಜ್ಲಿಸ್  ಒಂದು ವಾರ ಮೊದಲಷ್ಟೇ ನಡೆದ ಚುನಾವಣೆಯಲ್ಲಿ ಗೆದ್ದು ಅಧಿಕಾರ ಸ್ವೀಕರಿಸಿತ್ತು. ಈ ಚುನಾವಣೆಯಲ್ಲಿ ಪ್ರೆಸಿಡೆಂಟ್ ಆಯ್ಕೆ ಮಾಡಿದವರಷ್ಟೇ ಅಭ್ಯರ್ಥಿಗಳಾಗಿದ್ದರು. ಪ್ರತಿಪಕ್ಷದ ಅಭ್ಯರ್ಥಿಗಳಿಗೆ ಅವಕಾಶ ಇರಲಿಲ್ಲ೧೧ ಸೆಪ್ಟೆಂಬರ್ ೨೦೨೪.

2006ರ ಡಿಸೆಂಬರ್್ನಲ್ಲಿ ನಿಯಾಜೊವ್ ಸಾವಿಗೀಡಾದ ಬಳಿಕ ತುರ್ಕಮೆನಿಸ್ತಾನದ ನಾಯಕತ್ವ ದೇಶವನ್ನು ತೆರೆದುಕೊಳ್ಳಲು ಪರೀಕ್ಷಾರ್ಥ ಹೆಜ್ಜೆಯನ್ನು ಇಟ್ಟಿತು. ಅವರ ಉತ್ತರಾಧಿಕಾರಿಯಾಗಿ ಬಂದ ಗುರ್ಬಂಗುಲಿ ಬೇರ್ದಿಮುಹಮೆದೊವ್ ಅವರು ನಿಯಾಜೊವ್ ಅವರ ಸಾಕಷ್ಟು ಪ್ರಮಾಣದಲ್ಲಿ ತುರ್ಕಮನ್ನರು ಇಲ್ಲದ ಒಪೆರ ಮತ್ತು ಸರ್ಕಸ್್ಗಳ ನಿಷೇಧವೂ ಸೇರಿದಂತೆ ಕೆಲವು ವಿಚಿತ್ರ ನೀತಿಗಳನ್ನು ರದ್ದುಮಾಡಿದರು. ಶಿಕ್ಷಣದಲ್ಲಿ ಬೇರ್ದಿಮುಹಮೆದೊವ್ ಅವರ ಸರ್ಕಾರ ಮೂಲ ಶಿಕ್ಷಣವನ್ನು ಒಂಬತ್ತು ವರ್ಷಗಳಿಂದ ಹತ್ತು ವರ್ಷಗಳಿಗೆ ಮತ್ತು ಉನ್ನತ ಶಿಕ್ಷಣವನ್ನು ನಾಲ್ಕು ವರ್ಷಗಳಿಂದ ಐದಕ್ಕೆ ಏರಿಸಿತು. ಅವರು ಪಶ್ಚಿಮ ದೇಶಗಳೊಂದಿಗೆ ಸಂಪರ್ಕವನ್ನು ಹೆಚ್ಚಿಸಿದರು. ಪಶ್ಚಿಮ ದೇಶಗಳಿಗೆ ಈ ದೇಶದ ನೈಸರ್ಗಿಕ ಅನಿಲ ಸಂಪತ್ತನ್ನು ಪಡೆದುಕೊಳ್ಳುವ ಆತುರವಿತ್ತು.- ಆದರೆ ಸರ್ಕಾರವು ಎಲ್ಲಿ ನಿಯಾಜೊವ್ ಅವರ ಕಠಿಣ ಆಡಳಿತ ಶೈಲಿಗೆ ಮರಳಿ ಬಿಡುವುದೋ ಎಂಬ ಭಯವೂ ಅವುಗಳಿಗೆ ಇತ್ತು.

ಅಧ್ಯಕ್ಷೀಯ ಗಣರಾಜ್ಯ ಎಂಬ ಚೌಕಟ್ಟಿನಲ್ಲಿ ತುರ್ಕಮೆನಿಸ್ತಾನದ ರಾಜಕೀಯ ಅಡಕಗೊಂಡಿತು.ಇದರಲ್ಲಿ ಅಧ್ಯಕ್ಷ ದೇಶದ ಮುಖ್ಯಸ್ಥ ಮತ್ತು ಸರ್ಕಾರದ ಮುಖ್ಯಸ್ಥ.

.ನಿಯಾಜೋವ್ ಅಧಿಕಾರದಲ್ಲಿದ್ದಾಗ ಏಕ-ಪಕ್ಷ ಪದ್ಧತಿಯನ್ನು ತುರ್ಕಮೆನಿಸ್ಥಾನ ಹೊಂದಿತ್ತು. ಆದರೆ ಸೆಪ್ಟೆಂಬರ್ 2008ರಲ್ಲಿ ಪೀಪಲ್ಸ್ ಕೌನ್ಸಿಲ್ ಅವಿರೋಧವಾಗಿ ಗೊತ್ತುವಳಿಯೊಂದನ್ನು ಅಂಗೀಕರಿಸಿ ಹೊಸ ಸಂವಿಧಾನವನ್ನು ಅಳವಡಿಸಿಕೊಂಡಿತು. 

ಇದರ ನಂತರ ಕೌನ್ಸಲ್ ವಿಸರ್ಜನೆಯಾಯಿತು. 2008 ಡಿಸೆಂಬರ್್ನಲ್ಲಿ ಸಂಸತ್ತಿನ ಗಾತ್ರ ಗಮನಾರ್ಹವಾಗಿ ಹೆಚ್ಚಳವಾಯಿತು. ಹೊಸ ಸಂವಿಧಾನವು ಬಹು ರಾಜಕೀಯ ಪಕ್ಷಗಳ ರಚನೆಗೆ ಅನುಮತಿಯನ್ನು ನೀಡಿತು.

ಈಗ ಡೆಮಾಕ್ರಾಟಿಕ್ ಪಾರ್ಟಿ ಆಫ್ ತುರ್ಕಮೆನಿಸ್ತಾನ್ ಎಂದು ಕರೆಯಲ್ಪಡುವ ಹಿಂದಿನ ಕಮ್ಯುನಿಸ್ಟ್ ಪಾರ್ಟಿ ಮಾತ್ರ ಕಾರ್ಯನಿರ್ವಹಿಸಲು ಪರಿಣಾಮಕಾರಿ ಅನುಮತಿಯನ್ನು ಪಡೆದಿದೆ.    ಸರ್ಕಾರ ಅನುಮತಿ ನೀಡುವ ವರೆಗೆ ರಾಜಕೀಯ ಸಭೆಗಳು ಕಾನೂನುಬಾಹಿರ.

ಅತ್ಯಧಿಕ ಭ್ರಷ್ಟಾಚಾರ ಇರುವ ಜಗತ್ತಿನ ಇಪ್ಪತ್ತು ದೇಶಗಳಲ್ಲಿ ತುರ್ಕಮೆನಿಸ್ತಾನ್ ಕೂಡ ಒಂದು. 2008ರ ಭ್ರಷ್ಟಾಚಾರ ಗ್ರಹಿಸುವ ಸೂಚ್ಯಂಕ 0(ಅತಿ ಹೆಚ್ಚು ಭ್ರಷ್ಟ) ದಿಂದ ೧೦ (ಅತಿ ಕಡಿಮೆ ಭ್ರಷ್ಟ)ರಲ್ಲಿ ತುರ್ಕಮೆನಿಸ್ತಾನ್್ಗೆ 1.8 ಅಂಕ ಬಂದಿದೆ.[೧೪]

== ಮಾನವ ಹಕ್ಕುಗಳು ==

ಮಾನವ ಹಕ್ಕು ಮತ್ತು ನಾಗರಿಕ ಸ್ವಾತಂತ್ರ್ಬವನ್ನು ತುರ್ಕಮೆನಿಸ್ತಾನದ ಸಂವಿಧಾನದಲ್ಲಿ ಭರವಸೆ ನೀಡಲಾಗಿದ್ದರೂ (ಸಾಮಾಜಿಕ ಸಮಾನತೆ, ಲಿಂಗ ಸಮಾನತೆ, ಕ್ರೂರ ಮತ್ತು ಅಸ್ವಾಭಾವಿಕ ಶಿಕ್ಷೆಯಿಂದ ಸ್ವಾತಂತ್ರ್ಬ ಸಂಚಾರ ಸ್ವಾತಂತ್ರ್ಬಮುಂತಾದವು), ಮಾನವ ಹಕ್ಕುಗಳು ಆ ದೇಶದಲ್ಲಿ ವಾದಗ್ರಸ್ತ ವಿಷಯವಾಗಿದೆ. ಇತರ ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳಲ್ಲಿ ಕೆಲಸ ಮಾಡುವ ಹಕ್ಕು, ವಿಶ್ರಾಂತಿಯ ಹಕ್ಕು ಮತ್ತು ಶಿಕ್ಷಣ ಪಡೆಯವ ಹಕ್ಕುಗಳು ಸೇರಿವೆ. ಧಾರ್ಮಿಕ ಹಕ್ಕುಗಳ ಸ್ವಾತಂತ್ರ್ಯವೂ ಅಲ್ಲಿದೆ.[೧೫]

.

ಗಡಿ ರಹಿತ ವರದಿಗಾರರ (ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್)ಜಾಗತಿಕ ಪತ್ರಿಕಾ ಸ್ವಾತಂತ್ರ್ಬ ಸೂಚ್ಯಂಕವು ತುರ್ಕಮೆನಿಸ್ತಾನ್ ಜಗತ್ತಿನಲ್ಲೇ ಪತ್ರಿಕಾ ಸ್ವಾತಂತ್ರ್ಬದ ಮೇಲೆ ಮೂರನೆ ಅತಿ ಕೆಟ್ಟ ನಿರ್ಬಂಧಗಳನ್ನು ಹೇರಿದ ದೇಶ ಎಂದು ಹೇಳಿದೆ. 

ಮಾಜಿ ಅಧ್ಯಕ್ಷ ಸಪರ್್ಮುರಾತ್್ ಉಪಗ್ರಹ ಡಿಶ್[೧೬] ಗಳ ಮೇಲೆ ನಿಷೇಧ ಹೇರಿದ್ದರು. ಅಲ್ಲದೆ ದಾಡಿ ಬಿಡುವುದು, ಉದ್ದ ಕೂದಲು, ಬ್ಯಾಲೆಗಳು, ಒಪೇರಾಗಳು ಮತ್ತು ದ್ವನಿ ಮುದ್ರಿಸಿದ ಸಂಗೀತವನ್ನು ತುರ್ಕಮೆನಿಸ್ತಾನದಲ್ಲಿ ನಿಷೇಧಿಸಿದ್ದರು.[೧೭] ಈ ನಿರ್ಬಂಧಗಳನ್ನು ನೂತನ ಅಧ್ಯಕ್ಷ ಗುರ್ಬಾಂಗುಲಿ ಬೇರ್ಡಿಮುಹಾಮೆಡೋವ್ ನಿಧಾನವಾಗಿ ಸಡಿಲಿಸುತ್ತಿದ್ದಾರೆ. ಅಲ್ಲಿ ಸಾಧಾರಣ ಸುಧಾರಣೆಗಳಾಗಿದ್ದರೂ ಸರ್ಕಾರ ಗಂಭೀರ ಸ್ವರೂಪದಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮತ್ತು ಅದರ ಮಾನವ ಹಕ್ಕು ದಾಖಲೆ ಬಡವಾಗಿಯೇ ಉಳಿದಿದೆ.[೧೮]

ಆಡಳಿತಾತ್ಮಕ ವಿಭಾಗಗಳು

[ಬದಲಾಯಿಸಿ]
ತುರ್ಕಮೆನಿಸ್ತಾನದ ಪ್ರಾಂತ್ಯಗಳು

ತುರ್ಕಮೆನಿಸ್ತಾನ್ ಐದು ಪ್ರಾಂತ್ಯಗಳಲ್ಲಿ ಅಥವಾ ವೆಲಾಯತ್ಲಾರ್ (ತೋ-ಸೇ-ಲಾ- ಎಂದು ಉಚ್ಚರಿಸುವುದು) ಗಳಲ್ಲಿ ವಿಭಾಗಗೊಂಡಿದೆ. ವೆಲಾಯತ್ ಮತ್ತು ಒಂದು ರಾಜಧಾನಿ ಜಿಲ್ಲೆ. ಪ್ರಾಂತ್ಯಗಳನ್ನು ಜಿಲ್ಲೆಗಳನ್ನಾಗಿ ಮತ್ತೆ ವಿಭಜಿಸಲಾಗಿದೆ. (ಎಟ್ರಾಪ್ಲಾರ್ ,ಸಿಂಗ್, ಎಟ್ರಾಪ್ ), ಇವು ಕೌಂಟಿಗಳಾಗಿರಬಹುದು ಇಲ್ಲವೆ ನಗರಗಳಾಗಿರಬಹುದು. ತುರ್ಕಮೆನಿಸ್ತಾನದ ಸಂವಿಧಾನದ ಪ್ರಕಾರ (2008ರ ಸಂವಿಧಾನದ ಅನುಚ್ಛೇಧ 16, 1992ರ ಸಂವಿಧಾನದ ಅನುಚ್ಛೇಧ 47) ಕೆಲವು ನಗರಗಳು ವೆಲಾಯತ್ (ಪ್ರಾಂತ್ಯ) ಅಥವಾ ಎಟ್ರಾಪ್ (ಜಿಲ್ಲೆ) ಸ್ಥಾನವನ್ನು ಹೊಂದಬಹುದು.

ವಿಭಾಗ ಐಎಸ್ಓ 9001:2008 ರಾಜಧಾನಿ ನಗರ ಏರಿಯಾ [೧೯] ಜನಸಂಖ್ಯೆ (2005)[೧೯] (ಕೀ)
ಅಸ್ಗಬಾತ್ ನಗರ ಅಸ್ಗಬಾತ್ 470 km2 (180 sq mi) 871,500
ಅಹಲ್ ಪ್ರಾಂತ್ಯ TM-A ಅನೌ 97,160 km2 (37,510 sq mi) 939,700 1
ಬಾಲ್ಕನ್ ಪ್ರಾಂತ್ಯ TM-B ಬಾಲ್ಕನಾಬಾತ್   139,270 km2 (53,770 sq mi) 553,500 2
ಡಾಸೋಗುಜ್ ಪ್ರಾಂತ್ಯ TM-D ಡಾಸೋಗುಜ್ 73,430 km2 (28,350 sq mi) 1,370,400 3
ಲೆಬಾಪ್ ಪ್ರಾವಿನ್ಸ್ TM-L ತುರ್ಕಮೆನಾಬಾತ್ 93,730 km2 (36,190 sq mi) 1,334,500 4
ಮೇರಿ ಪ್ರಾಂತ್ಯ TM-M ಮೇರಿ 87,150 km2 (33,650 sq mi) 1,480,400 5

ಹವಾಮಾನ

[ಬದಲಾಯಿಸಿ]
ಜಗತ್ತಿನ ಅತ್ಯಂತ ಒಣ ಮರುಭೂಮಿಗಳಲ್ಲಿ ಇದು ಒಂದು. ಕೆಲವು ಪ್ರದೇಶಗಳಲ್ಲಿ ಸರಾಸರಿ  ವಾರ್ಷಿಕ ಮಂಜು ಮಾತ್ರವೇ ಬೀಳುವುದು.12 mm (0.47 in)     ಅಶ್ಖಾಬಾದ್48.9 °C (120.0 °F)ನಲ್ಲಿ ಮತ್ತು ಅಮು ದರಿಯಾ ನದಿ ತೀರದ ಕಟ್ಟಕಡೆಯ ದ್ವೀಪ ಕೆರ್ಕಿಯಲ್ಲಿ  ಅತ್ಯಧಿಕ ತಾಪಮಾನ 1983ರ ಜುಲೈನಲ್ಲಿ ದಾಖಲಾಗಿದೆ.[ಸೂಕ್ತ ಉಲ್ಲೇಖನ ಬೇಕು]51.7 °C (125.1 °F)

ಭೌಗೋಳಿಕ ಕ್ಷೇತ್ರ ಅಥವಾ ಭೂಗೋಳ ಶಾಸ್ತ್ರ

[ಬದಲಾಯಿಸಿ]
ತುರ್ಕಮೆನಿಸ್ತಾನ್ ನಕಾಶೆ
ತುರ್ಕಮೆನಿಸ್ತಾನದ ಮೇಲೆ ಧೂಳಿನ ಬಿರುಗಾಳಿ

At 488,100 km2 (188,500 sq mi), ತುರ್ಕಮೆನಿಸ್ತಾನ್ ಜಗತ್ತಿನ 52ನೆ ಅತಿದೊಡ್ಡ ರಾಷ್ಟ್ರ ಇದು ಸ್ಪೇನ್ ಗಿಂತ ಸ್ವಲ್ಪ ಸಣ್ಣದು ಮತ್ತು ಯುಎಸ್್ನ ಕ್ಯಾಲಿಫೋರ್ನಿಯಾ ರಾಜ್ಯಕ್ಕಿಂತ ಸ್ವಲ್ಪ ದೊಡ್ಡದು.

ದೇಶದ ಶೇ.80ಕ್ಕಿಂತ ಹೆಚ್ಚು ಭಾಗ ಕಾರಾಕುಮ್ ಮರುಭೂಮಿಯಿಂದ ಆವರಿಸಿದೆ. ದೇಶದ ಕೇಂದ್ರ ಭಾಗದಲ್ಲಿ ತುರಾನ್ ಕೊಳ್ಳ ಮತ್ತು ಕಾರಾಕುಮ್ ಮರುಭೂಮಿಯದೇ ಪ್ರಾಧಾನ್ಯ. ಕೋಪೆಟ್ ಡಾಗ್ ಶ್ರೇಣಿ ನೈಋತ್ಯ ಗಡಿಯುದ್ದಕ್ಕೂ ಇದೆ. ಅದರ ಕುಹ್- ಇ ರಿಝೆ (ರಿಝೆ ಪರ್ವತ) 2912 ಮೀಟರ್ (9,553 ಅಡಿ) ಎತ್ತರವಿದೆ[೨೦].

ದೇಶದ ಪಶ್ಚಿಮಕ್ಕಿರುವ ಬಾಲ್ಕನ್ ಪ್ರಾಂತ್ಯಗ್ರೇಟ್ ಬಾಲ್ಕನ್ ರೇಂಜ್(ಶ್ರೇಣಿ) ಮತ್ತು ದಕ್ಷಿಣದಲ್ಲಿ ಉಜ್ಬೆಕಿಸ್ತಾನ್ ಗಡಿಯ ಲಿಬಾಪ್ ಪ್ರಾವಿನ್ಸ್ ಗೆ ಹೊಂದಿಕೊಂಡಿರುವ ಕೊಯ್ತೆಂದಾಗ್ ಶ್ರೇಣಿ ಇತರ ಪ್ರಮುಖ ಏಕೈಕ ಪರ್ವತ. 1,880 metres (6,170 ft) ಗ್ರೇಟ್ ಬಾಲ್ಕನ್ ಶ್ರೇಣಿ ಮೌಂಟ್ ಅರ್ಲಾನ್[೨೧] ನಲ್ಲಿ ಎತ್ತರ ತಲುಪಿದ್ದರೆ ತುರ್ಕಮೆನಿಸ್ತಾನದಲ್ಲಿಯೇ ಅತಿ ಎತ್ತರದ ಪರ್ವತ [೨೨] ಕುಗಿತಾಂಗ್್ತೌ ಶ್ರೇಣಿಯ ಅಯಿರಿಬಾಬಾ. ನದಿಗಳಲ್ಲಿ ಅಮು ದಾರಿಯಾ ಮುರ್ಘಾಬ್ ಮತ್ತು ತೇಜೇನ್ ಸೇರಿವೆ.

ವಾತಾವರಣ ಬಹುತೇಕ ಶುಷ್ಕ ಮತ್ತು ಉಷ್ಣ ವಲಯಕ್ಕೆ ಹತ್ತಿರವಿರುವ ಉಷ್ಣೋಷ್ಣವಲಯ,  ಜೊತೆಗೆ ಸ್ವಲ್ಪ ಮಳೆ. ಚಳಿಗಾಲ ಸ್ವಲ್ಪವೇ. ಮತ್ತು ಒಣ. ಬಹುತೇಕ ಮಂಜು ಬೀಳುವುದು ಜನವರಿ ಮತ್ತು ಮೇ ನಡುವೆ. ದೇಶದ ಅತ್ಯಧಿಕ ಮಂಜು ಬೀಳುವ ಪ್ರದೇಶ ಕೋಪೆಟ್ ಡಾಗ್ ಶ್ರೇಣಿ.

ಕಾಸ್ಪಿಯನ್ ಸಮುದ್ರದ ತೀರದುದ್ದಕ್ಕೂ ತುರ್ಕಮನ್ನರು ಬೀಡು ಬಿಟ್ಟಿದ್ದಾರೆ.1,768 kilometres (1,099 mi) ಕ್ಯಾಸ್ಪಿಯನ್ ಸಮುದ್ರ ಸಂಪೂರ್ಣವಾಗಿ ಭೂಮಿಯಿಂದ ಸುತ್ತುವರಿಯಲ್ಪಟ್ಟಿದ್ದು ಎಲ್ಲಿಯೂ ಸಾಗರ ಸಂಗಮ ಇಲ್ಲ.

ಪ್ರಮುಖ ನಗರಗಳಲ್ಲಿ ಅಸ್ಗಾಬಾತ್ , ತುರ್ಕಮೆನ್^ಬಾಸಿ (ಮೊದಲು ಇದು ಕ್ರಾಸ್ನೋವೊಡ್ಸ್ಕ್) ದಾಸೋಗುಜ್ ಸೇರಿವೆ.

ಆರ್ಥಿಕತೆ

[ಬದಲಾಯಿಸಿ]

ಈ ದೇಶದಲ್ಲಿರುವ ನೈಸರ್ಗಿಕ ಅನಿಲ ಸಂಗ್ರಹ ಪ್ರಮಾಣ ಜಗತ್ತಿನಲ್ಲಿ ನಾಲ್ಕನೇ ಅತಿ ದೊಡ್ಡದು. ಸಾಕಷ್ಟು ದೊಡ್ಡ ಪ್ರಮಾಣದಲ್ಲಿಯೇ ತೈಲ ಸಂಗ್ರಹವೂ ಇಲ್ಲಿದೆ.[೨೩] 1994ರಲ್ಲಿ ರಶಿಯಾದ ಸರ್ಕಾರವು ತುರ್ಕಮೆನಿಸ್ತಾನದ ಅನಿಲವನ್ನು ಬದಲಾಗದ ಹಣದ (ಹಾರ್ಡ್ ಕರನ್ಸಿ) ಮಾರುಕಟ್ಟೆಗೆ ರಫ್ತು ಮಾಡುವುದಕ್ಕೆ ನಿರಾಕರಿಸಿತು. ಇದರಿಂದ ಹಿಂದಿನ ಸೋವಿಯೆಟ್ ಒಕ್ಕೂಟದ ಪ್ರಮುಖ ಗ್ರಾಹಕರಲ್ಲಿ ಅನಿಲ ವಿತರಣೆಯ ಸಾಲದ ಪ್ರಮಾಣ ಹೆಚ್ಚುತ್ತ ಹೋಯಿತು. ಇದರಿಂದಾಗಿ ಉದ್ಯಮದ ಉತ್ಪಾದನೆಯಲ್ಲಿ ತೀವ್ರ ಕುಸಿತ ಕಂಡುಬಂತು. ಮತ್ತು ಉಳಿತಾಯದ ಮುಂಗಡಪತ್ರವು ಕೊರತೆಯ ಮುಂಗಡಪತ್ರವಾಗಬೇಕಾಯಿತು. ದೇಶದ ನೀರಾವರಿ ಭೂಮಿಯ ಅರ್ಧದಷ್ಟು ಭಾಗದಲ್ಲಿ ಹತ್ತಿಯನ್ನು ಬೆಳೆಯುತ್ತಾರೆ. ಹತ್ತಿ ಬೆಳೆಯುವ ಜಗತ್ತಿನ ದೇಶಗಳಲ್ಲಿ ಇದರ ಸ್ಥಾನ ಹತ್ತನೆಯದು.

ಆರ್ಥಿಕ ಸುಧಾರಣೆಯತ್ತ ತುರ್ಕಮೆನಿಸ್ತಾನ್ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದೆ. ತನ್ನ ಆರ್ಥಿಕತೆಯನ್ನು ಸುಧಾರಿಸಿಕೊಳ್ಳಲು ಅನಿಲ ಮತ್ತು ಹತ್ತಿಯನ್ನು ಬಳಸಿಕೊಳ್ಳುವ ಆಸೆಯನ್ನು ಹೊಂದಿದೆ. 2004ರಲ್ಲಿ ನಿರುದ್ಯೋಗ ಪ್ರಮಾಣ 60%[] ಎಂದು ಅಂದಾಜು ಮಾಡಲಾಗಿತ್ತು. ಇದಕ್ಕೂ ಒಂದು ವರ್ಷ ಮೊದಲು ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ 58% ಎಂದು ತಿಳಿಯಲಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಖಾಸಗೀಕರಣದ ಗುರಿಗಳು ಸೀಮಿತವಾಗಿ ಉಳಿದವು.

1998 ಮತ್ತು 2002ರ ನಡುವೆ ನೈಸರ್ಗಿಕ ಅನಿಲವನ್ನು ರಫ್ತು ಮಾಡಲು ಸೂಕ್ತ ಮಾರ್ಗವಿಲ್ಲದ ಸ್ಥಿತಿ ಮುಂದುವರಿದುದರಿಂದ ಹಾಗೂ ಬಾಹ್ಯ ಕಿರು ಅವಧಿಯ ಸಾಲದ ವ್ಯಾಪಕ ಹೊಣೆಗಾರಿಕೆಯಿಂದ ತುರ್ಕಮೆನಿಸ್ತಾನ್ ತೊಂದರೆ ಅನುಭವಿಸಿತು. ಅದೇ ಕಾಲಕ್ಕೆ ಅಂತಾರಾಷ್ಟ್ರೀಯ ತೈಲ ಮತ್ತು ಅನಿಲ ಬೆಲೆಯಲ್ಲಿ ಹೆಚ್ಚಳವಾದುದರಿಂದ ಒಟ್ಟೂ ರಫ್ತುಗಳ ಮೌಲ್ಯ ತೀವ್ರವಾಗಿ ಹೆಚ್ಚಿತು. ವ್ಯಾಪಕವಾದ ಆಂತರಿಕ ಬಡತನ ಮತ್ತು ವಿದೇಶಿ ಸಾಲದ ಹೊರೆಯಿಂದ ಸದ್ಯದ ಭವಿಷ್ಯದಲ್ಲಿ ನಿರೀಕ್ಷೆ ನಿರಾಶಾದಾಯಕವಾಗಿದೆ.

ಅಧ್ಯಕ್ಷ ನಿಯಾಜೊವ್ ದೇಶದ ಹೆಚ್ಚಿನ ಆದಾಯವನ್ನು ನಗರಗಳನ್ನು ಅದರಲ್ಲೂ ವಿಶೇಷವಾಗಿ ಅಸ್ಗಾಬಾತ್ ನಗರವನ್ನು ನವೀಕರಣಗೊಳಿಸುವುದಕ್ಕೆ ಬಳಸಿದರು. ಭ್ರಷ್ಟಾಚಾರ ಕಾವಲು ನಾಯಿ (ವಾಚ್ ಡಾಗ್)ಗಳು ನಿರ್ದಿಷ್ಟವಾಗಿ ತುರ್ಕಮೆನಿಸ್ತಾನದ ಕರೆನ್ಸಿ ಸಂಗ್ರಹದ ನಿರ್ವಹಣೆ ಮೇಲೆ ಕಳವಳವನ್ನು ವ್ಯಕ್ತಪಡಿಸಿತು. ಇದರಲ್ಲಿ ಹೆಚ್ಚಿನದನ್ನು ಯೋಜನೇತರ ನಿಧಿಯಲ್ಲಿ ತೊಡಗಿಸಲಾಗಿತ್ತು. ಇದು ಫ್ರಾಂಕ್್ಫರ್ಟ್್ನ ಡ್ಯುತ್ಸೆ ಬ್ಯಾಂಕ್್ನ ವಿದೇಶಿ ವಿನಿಮಯ ಮೀಸಲು ನಿಧಿಯ ರೂಪದಲ್ಲಿತ್ತು. ಏಪ್ರಿಲ್ 2006ರಲ್ಲಿ ಲಂಡನ್್ ಮೂಲದ ಸರ್ಕಾರೇತರ ಸಂಘಟನೆ ಗ್ಲೋಬಲ್ ವಿಟ್್ನೆಸ್ ಬಿಡುಗಡೆ ಮಾಡಿದ ವರದಿಯಲ್ಲಿ ಇದನ್ನು ಹೇಳಲಾಗಿದೆ.

2003[೨೪] ಆಗಸ್ಟ್ 14ರ ಪೀಪಲ್ಸ್ ಕೌನ್ಸಿಲ್್ನ ಘೋಷಣೆ ಪ್ರಕಾರ ಕೊರತೆ ಮೇಲಿಂದಮೇಲೆ ಕಾಣಿಸಿಕೊಂಡರೂ ವಿದ್ಯುತ್, ನೈಸರ್ಗಿಕ ಅನಿಲ, ನೀರು ಮತ್ತು ಉಪ್ಪು ನಾಗರಿಕರಿಗೆ ರಿಯಾಯಿತಿ ದರದಲ್ಲಿ 2030ರ ವರೆಗೆ ಲಭ್ಯವಾಗಲಿವೆ. ತುರ್ಕಮೆನಿಸ್ತಾನ್ 2006ರ ಸೆಪ್ಟೆಂಬರ್ 5ರಂದು ಪೂರೈಕೆಯನ್ನು ಕಡಿದುಹಾಕುವುದಾಗಿ ಬೆದರಿಕೆ ಒಡ್ಡಿದ ಬಳಿಕ ರಶಿಯಾ ತುರ್ಕಮನ್ ನೈಸರ್ಗಿಕ ಅನಿಲಕ್ಕೆ ಪ್ರತಿ 1000 ಕ್ಯುಬಿಕ್ ಮೀಟರ್್ಗೆ 65 ಡಾಲರ್್ನಿಂದ 100 ಡಾಲರ್ ನೀಡುವುದಕ್ಕೆ ಒಪ್ಪಿಕೊಂಡಿತು. ತುರ್ಕಮನ್ ಅನಿಲದ ಮೂರರಲ್ಲಿ ಎರಡು ಭಾಗ ರಶಿಯದ ಸರ್ಕಾರಿ ಸ್ವಾಮ್ಯಗಾಜ್್ಪ್ರೋಮ್್ನಿಂದಲೇ ಹೋಗುವುದು.[೨೫]

ನೈಸರ್ಗಿಕ ಅನಿಲ

[ಬದಲಾಯಿಸಿ]

thumb|ತುರ್ಕಮೆನಿಸ್ತಾನದ ತೈಲ ಮತ್ತು.ಅನಿಲ ಸಚಿವಾಲಯದ ಕೇಂದ್ರ ಕಚೇರಿ ನೈಸರ್ಗಿಕ ಅನಿಲ ಸಂಗ್ರಹದಲ್ಲಿ ತುರ್ಕಮೆನಿಸ್ತಾನ್ ಜಗತ್ತಿನಲ್ಲಿ ರಶಿಯ, ಇರಾನ್್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ಬಳಿಕ ನಾಲ್ಕನೆ ಸ್ಥಾನದಲ್ಲಿದೆ. ತುರ್ಕಮೆನಿಸ್ತಾನದ ನ್ಯಾಚುರಲ್ ಗ್ಯಾಸ್ ಕಂಪನಿ ತುರ್ಕಮೆಂಗಾಜ್ ತೈಲ ಮತ್ತು ಅನಿಲ ಸಚಿವಾಲಯದ ನೇತೃತ್ವದಲ್ಲಿ ದೇಶದಲ್ಲಿಯ ಅನಿಲ ಸಂಗ್ರಹಣೆಯನ್ನು ನಿಯಂತ್ರಿಸುತ್ತದೆ. ಅನಿಲ ಉತ್ಪಾದನೆ ರಾಷ್ಟ್ರೀಯ ಆರ್ಥಿಕತೆಯ ಅತ್ಯಂತ ಕ್ರಿಯಾತ್ಮಕ ಮತ್ತು ಭರವಸೆದಾಯಕ ಕ್ಷೇತ್ರವಾಗಿದೆ. ತುರ್ಕಮೆನಿಸ್ತಾನದ ಅನಿಲ ಸಂಗ್ರಹ 3.5-6.7 ಎಂಕ್ಯುಬಿಕ್ ಮೀಟರ್ ಎಂದು ಅಂದಾಜಿಸಲಾಗಿದೆ ಮತ್ತು ಇದರ ನಿರೀಕ್ಷಿತ ಅಂತಸ್ಥ ಸಾಮರ್ಥ್ಯ 21 ಲಕ್ಷ ಕೋಟಿ ಕ್ಯುಬಿಕ್ ಮೀಟರ್. ನೈಸರ್ಗಿಕ ಅನಿಲ ರಫ್ತಿಗೆ ಪೈಪ್್ ಲೈನ್್ಗಳನ್ನು ನಿರ್ಮಾಣ ಮಾಡುವುದಕ್ಕೆ ದೇಶವು ಚೀನದೊಂದಿಗೆ ಸಹಕರಿಸುತ್ತಿದೆ[೨೬]. ಇದನ್ನೂ ನೋಡಿ : http://en.wikipedia.org/wiki/Derweze for "The Gate To Hell", Derweze.

ತುರ್ಕಮೆನಿಸ್ತಾನದ ಬಹುತೇಕ ತೈಲವನ್ನು ಸಂಗ್ರಹಿಸಿವುದು ತುರ್ಕಮೆನಿಸ್ತಾನ ಸರ್ಕಾರಿ ಸ್ವಾಮ್ಯದ ಕಂಪನಿ (Concern) ತುರ್ಕಮನ್ನೆಬಿಟ್. ಕೋತುರ್ದೆಪೆ, ಬಾಲ್ಕನಾಬಾದ್ ಮತ್ತು ಕಾಸ್ಪಿಯನ್ ಸಮುದ್ರ ಬಳಿಯ ಚೆಕೆಲೆನ್ ಪ್ರದೇಶದಲ್ಲಿ ತೈಲವನ್ನು ತೆಗೆಯಲಾಗುತ್ತಿದ್ದು ಇಲ್ಲಿ ಒಟ್ಟಾರೆ 700 ದಶಲಕ್ಷ ಟನ್ ಸಂಗ್ರಹವಿದೆ ಎಂದು ಅಂದಾಜಿಸಲಾಗಿದೆ.   ಚೆಲೆಕನ್್ನಲ್ಲಿ 1909ರಲ್ಲಿ (ನೊಬೆಲ್ ಸಹೋದರರಿಂದ)  1930ರಲ್ಲಿ ಬಾಲ್ಕನಾಬಾದ್್ನಲ್ಲಿ  ಗಣಿಗಳಿಂದ ತೈಲ ಸಂಗ್ರಹಿಸುವ ಮೂಲಕ ತೈಲ ಸಂಗ್ರಹ ಉದ್ದಿಮೆಯು ಪ್ರಾರಂಭವಾಯಿತು.1948ರಲ್ಲಿ ಕುಮ್ದಾಗ್್ನಲ್ಲಿ ಮತ್ತು 1959ರಲ್ಲಿ ಕೋತುರ್ದೆಪೆಯಲ್ಲಿ ಗಣಿಗಳನ್ನು ಶೋಧಿಸಿದಾಗ ತೈಲ ಉತ್ಪಾದನೆಯಲ್ಲಿ ಹೆಚ್ಚಳ ಕಾಣಿಸಿಕೊಂಡಿತು.   ತುರ್ಕಮೆನಿಸ್ತಾನದಲ್ಲಿ ಉತ್ಪಾದನೆಯಾಗುವ ತೈಲದ ಬಹುದೊಡ್ಡ ಪಾಲು ತುರ್ಕಮೆನ್್ಬಾಶಿ ಮತ್ತು ಸೀದಿ ತೈಲಸಂಸ್ಕರಣೆ ಕೇಂದ್ರಗಳಲ್ಲಿ ಸಂಸ್ಕರಣೆಗೊಳ್ಳುತ್ತವೆ. ಅಲ್ಲದೆ ಟ್ಯಾಂಕರುಗಳಲ್ಲಿ ಕ್ಯಾಪ್ಪಿಯನ್ ಸಮುದ್ರದ ಮೂಲಕ ಯುರೋಪಿಗೆ ಕಾಲುವೆ ಮಾರ್ಗವಾಗಿ ರಫ್ತುಮಾಡಲಾಗುತ್ತದೆ.[೨೭]

ತುರ್ಕಮೆನಿಸ್ತಾನ್ ಕೇಂದ್ರ ಏಶಿಯಾ ಗಣರಾಜ್ಯಗಳಿಗೆ ಮತ್ತು ದಕ್ಷಿಣದ ನೆರೆಹೊರೆಯವರಿಗೆ ವಿದ್ಯುತ್ತನ್ನು ಸರಬರಾಜು ಮಾಡುವ ನಿವ್ವಳ ರಫ್ತುದಾರ ದೇಶವಾಗಿದೆ. ಅತ್ಯಂತ ಮಹತ್ವದ ಉತ್ಪಾದನಾ ಸ್ಥಾವರ ಹಿಂದೂಕುಶ್ ಜಲವಿದ್ಯುತ್ ಕೇಂದ್ರ. ಇದರ ಉತ್ಪಾದನಾ ಸಾಮರ್ಥ್ಯ 350 ಮೆಗಾವ್ಯಾಟ್ಸ್ ಮತ್ತು ಅನೇಕ ಉಷ್ಣವಿದ್ಯುತ್ ಸ್ಥಾವರಗಳಿವೆ. ಅವುಗಳ ಸಾಮರ್ಥ್ಯ 1,370 ಮೆಗಾವ್ಯಾಟ್ಸ್ ಎಂದು ಗಣಿಸಲಾಗಿದೆ. 1992ರಲ್ಲಿ ವಿದ್ಯುತ್ ಶಕ್ತಿ ಉತ್ಪಾದನೆ ಒಟ್ಟೂ 14.9 ಶತಕೋಟಿ ಕಿಲೋವ್ಯಾಟ್-ತಾಸು ಇತ್ತು[೨೮].

ದೇಶದ ನೀರಾವರಿಯ ಅರ್ಧ ಭಾಗದಲ್ಲಿ ಹತ್ತಿಯನ್ನು ಬೆಳೆಯಲಾಗಿದೆ. ಇದು ಹತ್ತಿ ಉತ್ಪಾದನೆಯಲ್ಲಿ ಜಗತ್ತಿನ ಹತ್ತನೆ ದೊಡ್ಡ ರಾಷ್ಟ್ರ

ಜನಸಂಖ್ಯಾಶಾಸ್ತ್ರ/ಅಂಕಿಸಂಖ್ಯೆ

[ಬದಲಾಯಿಸಿ]

ತುರ್ಕಮೆನಿಸ್ತಾನದ ಜನಸಂಖ್ಯೆಯ ದೊಡ್ಡ ಭಾಗ ಜನಾಂಗೀಯ ತುರ್ಕಮೆನ್ನರು. ಗಣನೀಯ ಪ್ರಮಾಣದಲ್ಲಿ ಅಲ್ಪಸಂಖ್ಯಾಕರಾದ ಉಜ್ಬೆಕ್ ಮತ್ತು ರಶಿಯನ್ನರು ಇದ್ದಾರೆ. ಸಣ್ಣಪ್ರಮಾಣದ ಅಲ್ಪಸಂಖ್ಯಾಕರಲ್ಲಿ ಕಜಾಕ್ಸ್, ಟಟಾರ್ಸ್, ಉಕ್ರೇನಿಯನ್ನರು, ಆರ್ಮೇರಿಯನ್ನರು, ಅಜೆರಿಸ್ ಮತ್ತು ಬಲೂಚಿಗಳು ಇದ್ದಾರೆ. ಜನಾಂಗೀಯ ರಶಿಯನ್ನರ ಸಂಖ್ಯೆ 1939ರಲ್ಲಿ ಶೇ.18.6 ಇದ್ದದ್ದು 1989ರಲ್ಲಿ ಶೇ.9.5ಕ್ಕೆ ಕುಸಿಯಿತು.[೨೯]

ಸಿಐಎ ವರ್ಲ್ಡ್ ಫ್ಯಾಕ್ಟ್ ಬುಕ್ ನೀಡಿರುವ ತುರ್ಕಮೆನಿಸ್ತಾನದ ಜನಾಂಗೀಯ ಜನಸಂಖ್ಯಾ ಪ್ರಮಾಣ, ಶೇ..85 ತುರ್ಕಮನ್ನರು, ಶೇ.5 ಉಜ್ಬೆಕ್, ಶೇ.4 ರಶಿಯನ್ನರು ಹಾಗೂ ಇತರರು ಶೇ.6 ಇದ್ದಾರೆ. (2003ರ ಅಂದಾಜು)[]. 2001ರ ಫೆಬ್ರವರಿಯಲ್ಲಿ ಅಸ್ಗಾಬಾತ್್ನಲ್ಲಿ ಪ್ರಕಟಿಸಿದ ಅಂಕಿ ಅಂಶಗಳಂತೆ ಜನಸಂಖ್ಯೆಯ ಶೇ.91 ಭಾಗ ತುರ್ಕಮನ್ನರು. ಶೇ.3 ಉಜ್ಬೆಕರು. ಶೇ.2 ರಶಿಯನ್ನರು. 1989 ಮತ್ತು 2001ರ ನಡುವೆ ತುರ್ಕಮೆನಿಸ್ತಾನದಲ್ಲಿ ತುರ್ಕಮೆನ್ನರ ಸಂಖ್ಯೆ ದ್ವಿಗುಣಗೊಂಡಿದೆ. (2.5 ರಿಂದ 4.9 ದಶಲಕ್ಷ) ಇದೇ ಅವಧಿಯಲ್ಲಿ ರಶಿಯನ್ನರ ಸಂಖ್ಯೆ ಮೂರರಲ್ಲಿ ಎರಡು ಭಾಗ ತಗ್ಗಿತು. (334,000ಕ್ಕೂ ಸ್ವಲ್ಪ ಅಧಿಕ ಇದ್ದದ್ದು 100,000ಕ್ಕೆ)

ತುರ್ಕಮೆನಿಸ್ತಾನದ ಅಧಿಕೃತ ಭಾಷೆ ತುರ್ಕಮೆನ್. (1992ರ ಸಂವಿಧಾನದ ಪ್ರಕಾರ), ಹೀಗಿದ್ದರೂ ರಶಿಯನ್ ವ್ಯಾಪಕವಾಗಿ ನಗರಗಳಲ್ಲಿ ಅಂತರ್್ಜನಾಂಗೀಯ ಸಂವಹನ ಭಾಷೆಯಾಗಿ ಮಾತನಾಡುತ್ತಾರೆ. ಜನಸಂಖ್ಯೆಯ ಶೇ.72 ತುರ್ಕಮೆನ್ ಮಾತನಾಡುತ್ತಾರೆ. ಶೇ.12 ಭಾಗ ಜನರು ರಶಿಯನ್, ಶೇ.9 ಭಾಗ ಉಜ್ಬೆಕ್ ಮತ್ತು ಇತರ ಭಾಷೆ ಶೇ.7 ಭಾಗ ಜನರು ಮಾತನಾಡುವರು.

thumb|ಅಸ್ಗಾಬಾತ್್ನಲ್ಲಿಯ ಆರ್ಟೋಗ್ರುಲ್ ಗಾಜಿ ಮಸೀದೆ. ಇದಕ್ಕೆ ಒಟ್ಟೋಮನ್ ಸಾಮ್ರಾಜ್ಯದ ಸ್ಥಾಪಕ ಒಸ್ಮಾನ್ ಗಾಜಿಯ ತಂದೆಯ ಹೆಸರನ್ನು ಇಡಲಾಗಿದೆ.

ತುರ್ಕಮೆನಿಸ್ತಾನದ ಪ್ರಬಲ ಧರ್ಮ ಇಸ್ಲಾಂ. (ಜನಸಂಖ್ಯೆಯ ಶೇ.89). ಜನಸಂಖ್ಯೆಯ ಶೇ.9 ಭಾಗ ಪೂರ್ವದ ಸಾಂಪ್ರದಾಯಿಕ ಚರ್ಚ್್ಗೆ ನಡೆದುಕೊಳ್ಳುವವರು. ಇವರು ರಶಿಯನ್ ಜನಾಂಗದವರು. ಉಳಿದ ಶೇ.2 ಭಾಗ ಜನಸಂಖ್ಯೆಯ ಧರ್ಮ ಗೊತ್ತಿಲ್ಲ ಎಂದು ದಾಖಲಾಗಿದೆ[]. ಇಸ್ಲಾಂ ತುರ್ಕಮೆನಿಸ್ತಾನಕ್ಕೆ ಬಂದುದರ ಪ್ರಮುಖ ಕಾರಣ ಶೇಕ್್ಗಳ ಮತಪ್ರಚಾರಕ ಚಟುವಟಿಕೆ. ಈ ಶೇಕ್್ಗಳು ಪುಣ್ಯಪುರುಷರು. ಅವರನ್ನು ಆಗಾಗ್ಗೆ ನಿರ್ದಿಷ್ಟ ಕುಲದ ಅಥವಾ ಬುಡಕಟ್ಟು ಗುಂಪಿನ ಅಧಿಪತಿಯೆಂದು ಸ್ವೀಕರಿಸುತ್ತಿದ್ದರು. ಈ ಮೂಲಕ ಅವರ "ಸ್ಥಾಪಕ"ರಾಗುತ್ತಿದ್ದರು. ಧಾರ್ಮಿಕ ಅನನ್ಯತೆಯ ಪ್ರತಿಪಾದನೆ ಇಂಥ ವ್ಯಕ್ತಿಗಳ ಸುತ್ತ ಸುತ್ತುತ್ತಿರುತ್ತದೆ. ಇದು ತುರ್ಕಮೆನಿಸ್ತಾನದಲ್ಲಿ ಬಳಕೆಯಲ್ಲಿರುವ ಇಸ್ಲಾಂನ ಅತ್ಯಂತ ಸ್ಥಳೀಯ ಬೆಳವಣಿಗೆಗಳಲ್ಲಿ ಒಂದು.

ಸೋವಿಯೆಟ್ ಯುಗದಲ್ಲಿ ಎಲ್ಲ ಧಾರ್ಮಿಕ ನಂಬಿಕೆಗಳನ್ನು ಮೂಢನಂಬಿಕೆ ಮತ್ತು "ಹಳೆಯದರ ಕುರುಹು." ಎಂದು ಕಮ್ಯುನಿಸ್ಟ್ ಅಧಿಕಾರಿಗಳಿಂದ ಹತ್ತಿಕ್ಕಲಾಗಿತ್ತು. ಬಹುತೇಕ ಧಾರ್ಮಿಕ ಶಾಲೆಗಳನ್ನು ಮತ್ತು ಧಾರ್ಮಿಕ ಆಚರಣೆಯನ್ನು ನಿಷೇಧಿಸಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿಯೇ ಮಸೀದಿಗಳನ್ನು ಮುಚ್ಚಲಾಗಿತ್ತು. ಆದರೆ 1990ರ ಈಚೆಗೆ ಸೋವಿಯೆಟ್ ಆಡಳಿತದಲ್ಲಿ ಕಳೆದುಹೋದ ಸಾಂಸ್ಕೃತಿಕ ಪರಂಪರೆಯನ್ನು ಮರಳಿ ಗಳಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಮಾಜಿ ಅಧ್ಯಕ್ಷ ಸಪರ್ಮುರಾಲ್ ನಿಯಾಜೋವ್ ಸಾರ್ವಜನಿಕ ಶಾಲೆಗಳಲ್ಲಿ ಇಸ್ಲಾಮಿನ ಮೂಲ ತತ್ವಗಳನ್ನು ಕಲಿಸುವಂತೆ ಆದೇಶ ಹೊರಡಿಸಿದರು. ಧಾರ್ಮಿಕ ಶಾಲೆಗಳು ಮತ್ತು ಮಸೀದಿಗಳು ಸೇರಿದಂತೆ ಹೆಚ್ಚು ಧಾರ್ಮಿಕ ಸಂಸ್ಥೆಗಳು ಕಾಣಿಸಿಕೊಂಡವು. ಇವುಗಳಲ್ಲಿ ಅನೇಕ ಸೌದಿ ಅರೇಬಿಯಾ, ಕುವೈಟ್ ಮತ್ತು ಟರ್ಕಿಯ ಬೆಂಬಲ ಪಡೆದವು. ಧಾರ್ಮಿಕ (ಪಾಠ)ಕ್ಲಾಸುಗಳು ಶಾಲೆಗಳಲ್ಲಿ ಮತ್ತು ಮಸೀದಿಗಳಲ್ಲಿ ನಡೆಯುತ್ತವೆ. ಅರೇಬಿಕ್ ಭಾಷೆ, ಕುರಾನ್ ಮತ್ತು ಹದಿತ್ ಮತ್ತು ಇಸ್ಲಾಮಿನ ಇತಿಹಾಸದ ಪಾಠವನ್ನು ಮಾಡುತ್ತಾರೆ.[೩೦]

ಅಧ್ಯಕ್ಷ ನಿಯಾಜೋವ್ ತಮ್ಮದೇ ಸ್ವಂತ ಧಾರ್ಮಿಕ ಪಠ್ಯವನ್ನು ಪ್ರತ್ಯೇಕ ಸಂಪುಟಗಳಲ್ಲಿ 2001 ಮತ್ತು 2004ರಲ್ಲಿ ರುಹ್ನಾಮಾ ಶೀರ್ಷಿಕೆಯಲ್ಲಿ ಜ್ರಕಟಿಸಿದರು. ತುರ್ಕ್್ಮೆನ್ಬಾಸಿ ಪ್ರಭುತ್ವದಲ್ಲಿ ಈ ಪುಸ್ತಕ ಬೇಕೇಬೇಕಾಗಿತ್ತು. ಇದು ತುರ್ಕಮೆನಿಸ್ತಾನದ ಶೈಕ್ಷಣಿಕ ವ್ಯವಸ್ಥೆಯ ಮೂಲ ಸೂತ್ರಗಳನ್ನು ರೂಪಿಸಿಕೊಟ್ಟಿತ್ತು. ಕುರಾನಗೆ ಸಮಾನವಾದ ಸ್ಥಾನವನ್ನು ಅದಕ್ಕೆ ನೀಡಲಾಗಿತ್ತು. (ಮಸೀದಿಗಳಲ್ಲಿ ಇವೆರಡೂ ಗ್ರಂಥಗಳನ್ನು ಅಕ್ಕಪಕ್ಕದಲ್ಲಿ ಇರಿಸಬೇಕಿತ್ತು.) ಮಾಜಿ ಅಧ್ಯಕ್ಷರ ವ್ಯಕ್ತಿತ್ವದ ಆರಾಧನೆಯ ಭಾಗವಾಗಿ ಈ ಗ್ರಂಥವನ್ನು ಅತ್ಯಧಿಕವಾಗಿ ಪ್ರೋತ್ಸಾಹಿಸಲಾಯಿತು. ಡ್ರೈವರ್ ಲೈಸೆನ್ಸ್ ಪಡೆದುಕೊಳ್ಳುವುದಕ್ಕೂ ರುಹ್ನಾಮಾದ ಅರಿವು ಇರುವುದು ಅಗತ್ಯವಾಗಿತ್ತು[೩೧]. ತುರ್ಕಮೆನಿಸ್ತಾನದಲ್ಲಿ ಬಹಾಯಿ ನಿಷ್ಠೆಯ ಇತಿಹಾಸ ಆ ಧರ್ಮದಷ್ಟೇ ಪ್ರಾಚೀನವಾದದ್ದು. ಮತ್ತು ಬಹಾಯಿ ಸಮುದಾಯದವರು ಇಂದಿಗೂ ಅಸ್ತಿತ್ವದಲ್ಲಿದ್ದಾರೆ.[೩೨]

ಸಂಸ್ಕೃತಿ

[ಬದಲಾಯಿಸಿ]
ಚಿತ್ರ:Turkmen bride in Turkmen national wedding dress.jpg
ಸಾಂದ್ರದಾಯಿಕ ಉಡುಗೆಯಲ್ಲಿ ತುರ್ಕಮನ್ ಹುಡುಗಿ
ಮಾಧ್ಯಮಿಕ ಹಂತದ ವರೆಗೆ ಶಿಕ್ಷಣವು ಸಾರ್ವತ್ರಿಕ ಮತ್ತು ಕಡ್ಡಾಯ. ಶಿಕ್ಷಣದ ಅವಧಿಯನ್ನು ಮೊದಲು 10ರಿಂದ 9 ವರ್ಷಕ್ಕೆ ಇಳಿಸಲಾಗಿತ್ತು. ಹೊಸ ಅಧ್ಯಕ್ಷರು 2007-2008ನೆ ಸಾಲಿನಿಂದ ಕಡ್ಡಾಯ ಶಿಕ್ಷಣದ ಅವಧಿಯನ್ನು 10 ವರ್ಷಕ್ಕೆ ನಿಗದಿಮಾಡಿ ಆದೇಶ ಹೊರಡಿಸಿದ್ದಾರೆ. [ಸೂಕ್ತ ಉಲ್ಲೇಖನ ಬೇಕು]

ಪರಂಪರೆ

[ಬದಲಾಯಿಸಿ]

ವಿಶ್ವಪಾರಂಪರಿಕ ತಾಣಗಳ ಪಟ್ಟಿಯಲ್ಲಿ ತುರ್ಕಮೆನಿಸ್ತಾನ್ ಇದೆ.

ಚಿತ್ರಗಳು ನಗರದ ಹೆಸರು ಸ್ಥಳ ಸಂಗೀತ ಸ್ವರಚಿಹ್ನೆಗಳು ದಿನಾಂಕ ಟೈಪ್
ಪ್ರಾಚೀನ ಮೆರ್ವ್ ಮೇರಿ ಕೇಂದ್ರ ಏಶಿಯಾದ ಒಂದು ಪ್ರಮುಖ ಒಯಾಸಿಸ್ ಸಿಟಿ, ಐತಿಹಾಸಿಕ ಸಿಲ್ಕ್ ರೋಡ್್ನಲ್ಲಿ 1995 ಸಾಂಸ್ಕೃತಿಕ[೩೩]
ಕೊನೆಉರ್ಜೆಂಕ್ ಕೊನೆಉರ್ಜೆಂಕ್ 12ನೆ ಶತಮಾನದ ರಾಜಧಾನಿ ಖ್ವಾರೆಜ್ಮ್್ನ ಉತ್ಖನನ ಮಾಡದ ಅವಶೇಷಗಳು 2005 ಸಾಂಸ್ಕೃತಿಕ[೩೪]
ಚಿತ್ರ:Aerial view of Nisa from north.jpg ನಿಸಾಪಾರ್ಥಿಯಾದ ಕೋಟೆಪಟ್ಟಣ ಬಾಗಿರ್, ಅಹಲ್ ಪ್ರಾಂತ್ಯ ಪಾರ್ಥಿಯನ್ನರ ಮೊದಲ ರಾಜಧಾನಿಗಳಲ್ಲಿ ಒಂದು 2007 ಸಾಂಸ್ಕೃತಿಕ[೩೫]

ಸಮೂಹ ಮಾಧ್ಯಮ

[ಬದಲಾಯಿಸಿ]

ತುರ್ಕಮೆನಿಸ್ತಾನದಲ್ಲಿ ಅನೇಕ ಪತ್ರಿಕೆಗಳು ಮತ್ತು ತಿಂಗಳ ಮ್ಯಾಗಜಿನ್್ಗಳನ್ನು ಪ್ರಕಟಿಸಲಾಗುತ್ತಿದೆ. ತುರ್ಕಮೆನಿಸ್ತಾನ್ ಸದ್ಯ ಉಪಗ್ರಹ ಮೂಲಕ ಐದು ರಾಷ್ಟ್ರೀಯ ಟೀವಿ ಛಾನೆಲ್್ಗಳನ್ನು ಪ್ರಸಾರ ಮಾಡುತ್ತಿದೆ. ಯಾವುದೇ ವಾಣಿಜ್ಯ ಅಥವಾ ಖಾಸಗಿ ಟೀವಿ ಕೇಂದ್ರಗಳಿಲ್ಲ. ಸರ್ಕಾರಿ ನಿಯಂತ್ರಣದಲ್ಲಿರುವ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳಿಗೆ ದೊಡ್ಡರೀತಿಯಲ್ಲೇ ಕತ್ತರಿಪ್ರಯೋಗವಾಗುತ್ತದೆ. ಸರ್ಕಾರ ಮತ್ತು ಅದರ ನಾಯಕರನ್ನು ವೈಭವೀಕರಿಸಲಾಗುತ್ತದೆ.

ಕೇಂದ್ರ ಏಶಿಯಾದಲ್ಲಿ ಇಂಟರ್್ನೆಟ್ ಸೇವೆ ಅತಿ ಕಡಿಮೆ ಅಭಿವೃದ್ದಿ ಹೊಂದಿದೆ.  ಸರ್ಕಾರದ ಏಕೈಕ ಕಂಪನಿ ISP "ತುರ್ಕಮೆನ್್ಟೆಲಿಕಾಂ" ಇಂಟರ್್ನೆಟ್ ಲಭ್ಯತೆಯ ಸೇವೆಯನ್ನು ಒದಗಿಸುತ್ತದೆ.  2010ರಲ್ಲಿ 80,400 ಇಂಟರ್ನೆಟ್ ಬಳಕೆದಾರರು ತುರ್ಕಮೆನಿಸ್ತಾನ್ ದೇಶದಲ್ಲಿ ಇದ್ದರೆಂದು ಅಂದಾಜುಮಾಡಲಾಗಿದೆ. ಇದು ಒಟ್ಟೂ ಜನಸಂಖ್ಯೆಯ ಶೇ.1.6ರಷ್ಟು.[೩೬][೩೭]

ಅಂತಾರಾಷ್ಟ್ರೀಯ ಶ್ರೇಯಾಂಕಗಳು

[ಬದಲಾಯಿಸಿ]
ಸಂಸ್ಥೆ ಸಮೀಕ್ಷೆ ಶ್ರೇಯಾಂಕ
ಇನ್್ಸ್ಟಿಟ್ಯೂಟ್ ಫಾರ್ ಇಕಾನಾಮಿಕ್ಸ್ ಆ್ಯಂಡ್ ಪೀಸ್ [೨] ಗ್ಲೋಬಲ್ ಪೀಸ್ ಇಂಡೆಕ್ಸ್[೩೮] 144ರಲ್ಲಿ 101
ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಂ ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್ 182ರಲ್ಲಿ 109
ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ಕರಪ್ಷನ್ ಪರ್ಸೆಪ್ಷನ್ಸ್ ಇಂಡೆಕ್ಸ್ 180ರಲ್ಲಿ 168

ಇವನ್ನೂ ಗಮನಿಸಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ ೧.೪ ತುರ್ಕಮೆನಿಸ್ತಾನ್ Archived 2007-06-12 ವೇಬ್ಯಾಕ್ ಮೆಷಿನ್ ನಲ್ಲಿ., CIA World Factbook . 2010-04-11 ರಂದು ಮರುಸಂಪಾದಿಸಿದೆ
  2. Department of Economic and Social Affairs Population Division (2009). "World Population Prospects, Table A.1" (PDF). 2008 revision. United Nations. Retrieved 2009-03-12. {{cite journal}}: Cite journal requires |journal= (help); line feed character in |author= at position 42 (help)
  3. ೩.೦ ೩.೧ "Turkmenistan". International Monetary Fund. Retrieved 2010-04-21.
  4. "Human Development Report 2009: Turkmenistan". The United Nations. Archived from the original on 2013-05-24. Retrieved 2009-10-18.
  5. ಫ್ರೀಡಂ ಹೌಸ್ : ಫ್ರೀಡಂ ಇನ್ ದಿ ವರ್ಲ್ಡ್, ಕಂಟ್ರಿ ರಿಪೋರ್ಟ್ ಆನ್ ತುರ್ಕಮೆನಿಸ್ತಾನ್ http://www.freedomhouse.org/template.cfm?page=22&year=2009&country=7723 Archived 2011-10-23 ವೇಬ್ಯಾಕ್ ಮೆಷಿನ್ ನಲ್ಲಿ.
  6. "ದಿ ಇಂಡಿಯನ್ ಡಯಾಸ್್ಪೋರಾ ಇನ್ ಸೆಂಟ್ರಲ್ ಏಶಿಯಾ ಆ್ಯಂಡ್ ಇಟ್ಸ್ ಟ್ರೇಡ್, 1550-1900 Archived 2015-04-05 ವೇಬ್ಯಾಕ್ ಮೆಷಿನ್ ನಲ್ಲಿ. ". ಸ್ಕಾಟ್ ಕ್ಯಾಮರೂನ್ ಲೆವಿ (2002). p.68. ISBN 0-7910-6772-6
  7. "ಖಿವ ಮತ್ತು ತುರ್ಕಮೆನಿಸ್ತಾನ್ ". ಹೆನ್ರಿ ಸ್ಪಾಲ್ಡಿಂಗ್ (2010). p.109. ISBN 0-7910-6772-6
  8. 12 ಆಫ್ ದಿ ಮೋಸ್ಟ್ ಡಿಸ್ಟ್ರಕ್ಟಿವ್ ಅರ್ಥ್್ಕ್ವೇಕ್ಸ್. ಹೌಸ್ಟಫ್್ವರ್ಕ್ಸ್
  9. ೯.೦ ೯.೧ ಟೆರ್ರಿ ಮಾರ್ಟಿನ್- ದಿ ಅಫರ್ಮೇಟಿವ್ ಆ್ಯಕ್ಷನ್ ಎಂಪಾಯರ್ (ಇಟಾಚಾ & ಲಂಡನ್)
  10. ಟ್ರೈಬ್, ಕ್ಲಾಸ್ ಆ್ಯಂಡ್ ನೇಶನ್ ಇನ್ ತುರ್ಕಮೆನಿಸ್ತಾನ್, ಪೇಜ್ 1 ಟ್ರೈಬಲ್ ನೇಶನ್: ದಿ ಮೇಕಿಂಗ್ ಆಫ್ ಸೋವಿಯೆಟ್ ತುರ್ಕಮೆನಿಸ್ತಾನ್
  11. ತುರ್ಕಮೆನಿಸ್ತಾನ್ ರೆಡ್ಯುಸಸ್ ಟೈಸ್ ಟು ‘ಅಸೋಸಿಯೇಟ್ ಮೆಂಬರ್' ರೇಡಿಯೋ ಫ್ರೀ ಯುರೋಪ್, 29 ಆಗಸ್ಟ್ 2005
  12. "Profile: Kurbanguly Berdymukhamedov". news.bbc.co.uk. BBC. 2007-12-21. Retrieved 2008-10-08.
  13. "Country profile: Turkmenistan". news.bbc.co.uk. BBC. 2008-07-30. Retrieved 2008-10-08.
  14. 2008 ಕರ್ಪ್ಷನ್ ಪರ್ಷ್ಪಶನ್ ಇಂಡೆಕ್ಸ್ Archived 2009-03-11 ವೇಬ್ಯಾಕ್ ಮೆಷಿನ್ ನಲ್ಲಿ. ಫ್ರಾಂ ಟ್ರಾನ್ಸ್್ಪರೆನ್ಸಿ ಇಂಟರ್್ನ್ಯಾಶನಲ್ 14 ಮಾರ್ಚ್ 2009 ರಂದು ಮರುಸಂಪಾದಿಸಿದೆ.
  15. Bureau of Democracy, Human Rights, and Labor (2008). "Turkmenistan: International Religious Freedom Report 2008". US State Department. Retrieved 2008-11-15.{{cite web}}: CS1 maint: multiple names: authors list (link)
  16. Pannier, Bruce (2002-07-26). "Turkmebashi Takes New Interest In Satellite Television". EurasiaNet. Archived from the original on 2009-01-14. Retrieved 2009-01-02.
  17. "Turkmenistan bans recorded music". BBC News. 2005-08-23. Retrieved 2009-01-02.
  18. ಯು.ಎಸ್. ಡಿಪಾರ್ಟ್್ಮೆಂಟ್ ಆಫ್ ಸ್ಟೇಟ್, ತುರ್ಕಮೆನಿಸ್ತಾನ್: ಹ್ಯುಮನ್ ರೈಟ್ಸ್ ರಿಪೋರ್ಟ್ 2008,ಬ್ಯೂರೋ ಆಫ್ ಡೆಮಾಕ್ರಸಿ, ಪ್ಯೂಮನ್ ರೈಟ್ಸ್, ಆ್ಯಂಡ್ ಲೇಬರ್, 25 ಫೆಬ್ರವರಿ 2009.
  19. ೧೯.೦ ೧೯.೧ ಸ್ಟೆಟಿಸ್ಟಿಕಲ್ ಇಯರ್ ಬುಕ್ ಆಫ್ ತುರ್ಕಮೆನಿಸ್ತಾನ್ 2000-2004 , ನ್ಯಾಶನಲ್ ಇನ್ಸ್್ಸ್ಟಿಟ್ಯೂಟ್ ಆಫ್ ಸ್ಟೇಟ್ ಸ್ಟ್ಯಾಟಿಸ್ಟಿಕ್ಸ್ ಆ್ಯಂಡ್ ಇಂಟರ್ನ್ಯಾಶನಲ್ ಆಫ್ ತುರ್ಕಮೆನಿಸ್ತಾನ್, ಅಸ್ಗಾಬಾತ್, 2005.
  20. ಕುಹ್-ಇ ರಿಜೆ ಆನ್ Peakbagger.com
  21. ಮೌಂಟ್ ಆರ್ಲಾನ್ ಆನ್ Peakbagger.com
  22. ಅಯಿರಿ ಬಾಬಾ ಆನ್ Peakbagger.com
  23. "Premium content". Economist.com. 2009-07-09. Retrieved 2010-05-03.
  24. ರಿಸಲ್ಯೂಶನ್ ಆಫ್ ಖಾಲ್ಕ್ ಮಸ್ಲಾಹತಿ (ಪೀಪಲ್ಸ್ ಕೌನ್ಸಿಲ್ ಆಫ್ ತುರ್ಕಮೆನಿಸ್ತಾನ್) N 35 (14.08.2003)
  25. "Business | Russia reaches Turkmen gas deal". BBC News. 2006-09-05. Retrieved 2010-05-03.
  26. Dec 24, 2009 (2009-12-24). ""China plays Pipelineistan'". Atimes.com. Archived from the original on 2009-12-24. Retrieved 2010-05-03.{{cite web}}: CS1 maint: numeric names: authors list (link)
  27. ತುರ್ಕಮೆನಿಸ್ತಾನ್ ಆಯ್ಲ್ ಆ್ಯಂಡ್ ಗ್ಯಾಸ್. Archived 2013-12-02 ವೇಬ್ಯಾಕ್ ಮೆಷಿನ್ ನಲ್ಲಿ. ಸೆಪ್ಟೆಂಬರ್ 13 2009ರಂದು ಮರುಸಂಪಾದಿಸಲಾಗಿದೆ.
  28. ತುರ್ಕಮೆನಿಸ್ತಾನ್ ಸ್ಟಡಿ. 13 ಸೆಪ್ಟೆಂಬರ್ 2009ರಂದು ಮರುಸಂಪಾದಿಸಲಾಗಿದೆ.
  29. "ಮೈಗ್ರಂಟ್ ರಿಸೆಟ್ಲ್ಮೆಂಟ್ ಇನ್ ದಿ ರಶಿಯ್ ಫೆಡರೇಶನ್: ರಿಕನ್್ಸ್ಟ್ರಕ್ಟಿಂಗ್ 'ಹೋಮ್ಸ್' ಆ್ಯಂಡ್ 'ಹೋಮ್ ಲ್ಯಾಂಡ್ಸ್' ". ಮೋಯಾ ಫ್ಲಿನ್ನ್ 1994. ಪು 15 ISBN 1-84331-117-8
  30. ಲಾರಿ ಕ್ಲರ್ಕ್, ಮೈಕೆಲ್ ಥರ್ಮನ್, ಆ್ಯಂಡ್ ಡೇವಿಡ್ ಟೈಸನ್. "ತುರ್ಕಮೆನಿಸ್ತಾನ್". ಎ ಕಂಟ್ರಿ ಸ್ಟಡಿ: ತುರ್ಕಮೆನಿಸ್ತಾನ್ (ಗ್ಲೆನ್ ಇ. ಕರ್ಟಿಸ್, ಎಡಿಟರ್). ಲೈಬ್ರರಿ ಆಫ್ ಕಾಂಗ್ರೆಸ್ ಫೆಡರಲ್ ರಿಸರ್ಚ್ ಡಿವಿಸನ್ (ಮಾರ್ಚ್ 1996). ಈ ಲೇಖನ ಈ ಮೂಲದಿಂದ ಪಠ್ಯವನ್ನು ಸೇರಿಸಿಕೊಂಡಿದೆ,ಪಬ್ಲಿಕ್ ಡೊಮೇನ್ ಅದು ಇದರಲ್ಲಿದೆ . [೧]
  31. "Asia-Pacific | Turkmen drivers face unusual test". BBC News. 2004-08-02. Retrieved 2010-05-03.
  32. http://bahai-library.com/momen_encyclopedia_turkmenistan
  33. UNESCO. ಏನ್ಸಿಯಂಟ್ ಮೆರ್ವ್ ಸ್ಟೇಟ್ ಹಿಸ್ಟಾರಿಕಲ್ ಆ್ಯಂಡ್ ಕಲ್ಚರಲ್ ಪಾರ್ಕ್.
  34. UNESCO. ಕೊನೆರ್್ಜಂಕ್.
  35. UNESCO. ನಿಸಾ ಫೋರ್ಟ್ರೆಸ್.
  36. ತುರ್ಕಮೆನಿಸ್ತಾನ್: ಇಂಟರ್್ನೆಟ್, ಬ್ರಾಡ್್ಬ್ಯಾಂಡ್ ಆ್ಯಂಡ್ ಟೆಲಿಕಮ್ಯುನಿಕೇಶನ್ಸ್ ರಿಪೋರ್ಟ್ಸ್. Archived 2010-10-09 ವೇಬ್ಯಾಕ್ ಮೆಷಿನ್ ನಲ್ಲಿ. 25 ಆಗಸ್ಟ್ 2009ರಂದು ಪರಿಷ್ಕರಿಸಲಾಗಿದೆ.
  37. https://www.cia.gov/library/publications/the-world-factbook/geos/tx.html Archived 2007-06-12 ವೇಬ್ಯಾಕ್ ಮೆಷಿನ್ ನಲ್ಲಿ. CIA: ದಿ ವರ್ಲ್ಡ್ ಫೇಸ್್ಬುಕ್ 2009.
  38. "Vision of Humanity". Vision of Humanity. Archived from the original on 2008-07-04. Retrieved 2010-02-04.

ಮುಂದಿನ ಓದಿಗಾಗಿ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]
ಸರ್ಕಾರ
ಇತರ