ವಿಷಯಕ್ಕೆ ಹೋಗು

ಅಧ್ಯಕ್ಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾರ್ಯನಿರತ ಅಧ್ಯಕ್ಷನ ಒಂದು ಉದಾಹರಣೆ - ಸ್ಯಾಮ್ ಅರ್ವಿನ್, ಸೆನೇಟಿನ ವಾಟರ್‍ಗೇಟ್ ವಿಚಾರಣೆಗಳ ಅಧ್ಯಕ್ಷತೆ ವಹಿಸಿರುವುದು, 1973

ಅಧ್ಯಕ್ಷ (ಸಭಾಧ್ಯಕ್ಷ) ಮಂಡಳಿ, ಸಮಿತಿ, ಅಥವಾ ಪರ್ಯಾಲೋಚಕ ಸಭೆಯಂತಹ ಒಂದು ಸಂಘಟಿತ ಗುಂಪಿನ ಅತ್ಯಂತ ಉನ್ನತ ಅಧಿಕಾರಿ. ಅಧಿಕಾರದಲ್ಲಿರುವ ವ್ಯಕ್ತಿಯನ್ನು ಸಾಮಾನ್ಯವಾಗಿ ಗುಂಪಿನ ಸದಸ್ಯರು ಆಯ್ಕೆಮಾಡುತ್ತಾರೆ ಅಥವಾ ನೇಮಿಸುತ್ತಾರೆ. ಅಧ್ಯಕ್ಷನು ಸೇರಿದ ಗುಂಪಿನ ಸಭೆಗಳ ಅಧ್ಯಕ್ಷತೆ ವಹಿಸುತ್ತಾನೆ ಮತ್ತು ಅದರ ವ್ಯವಹಾರವನ್ನು ಕ್ರಮಬದ್ಧವಾದ ರೀತಿಯಲ್ಲಿ ನಡೆಸುತ್ತಾನೆ.[] ಗುಂಪು ಅಧಿವೇಶನದಲ್ಲಿರದಿರುವಾಗ, ಅಧಿಕಾರಿಯ ಕರ್ತವ್ಯಗಳು ಹಲವುವೇಳೆ ಅದರ ಮುಖ್ಯಸ್ಥನಾಗಿ, ಬಾಹ್ಯ ಪ್ರಪಂಚಕ್ಕೆ ಅದರ ಪ್ರತಿನಿಧಿಯಾಗಿ ಮತ್ತು ಅದರ ವಕ್ತಾರನಾಗಿ ನಡೆದುಕೊಳ್ಳುವುದನ್ನು ಒಳಗೊಂಡಿರುತ್ತದೆ. ಕೆಲವು ಸಂಸ್ಥೆಗಳಲ್ಲಿ, ಈ ಸ್ಥಾನವನ್ನು ಸಭಾಧ್ಯಕ್ಷ ಸ್ಥಾನವೆಂದೂ ಕರೆಯಲಾಗುತ್ತದೆ.

ಕೆಲವೊಮ್ಮೆ, ಸಭಾಧ್ಯಕ್ಷನಿಗೆ ನೆರವು ನೀಡಲು ಮತ್ತು ಸಭಾಧ್ಯಕ್ಷನ ಗೈರುಹಾಜರಿಯಲ್ಲಿ ಸಭಾಧ್ಯಕ್ಷನಾಗಿ ಕಾರ್ಯನಿರ್ವಹಿಸಲು, ಅಥವಾ ಸಭಾಧ್ಯಕ್ಷನನ್ನು ಒಳಗೊಂಡ ಗೊತ್ತುವಳಿಯನ್ನು ಚರ್ಚಿಸಲಾಗುತ್ತಿರುವಾಗ ಸಭಾಧ್ಯಕ್ಷನ ಅಧೀನದಲ್ಲಿರುವ ಉಪ ಸಭಾಧ್ಯಕ್ಷನನ್ನು ಚುನಾಯಿಸಲಾಗುತ್ತದೆ. ಸಭಾಧ್ಯಕ್ಷ ಮತ್ತು ಉಪ ಸಭಾಧ್ಯಕ್ಷರ ಗೈರುಹಾಜರಿಯಲ್ಲಿ, ಒಂಟಿ ಸಭೆಯಲ್ಲಿ ಆ ಪಾತ್ರವನ್ನು ತುಂಬಲು ಗುಂಪುಗಳು ಕೆಲವೊಮ್ಮೆ ತತ್ಕಾಲ ಸಭಾಧ್ಯಕ್ಷನನ್ನು ಚುನಾಯಿಸುತ್ತಾರೆ.

ಸಾರ್ವಜನಿಕ ಸಂಸ್ಥೆಗಳಲ್ಲಿ ಮೂರು ಸಾಮಾನ್ಯ ಬಗೆಯ ಅಧ್ಯಕ್ಷರಿರುತ್ತಾರೆ.

  • ಅಧ್ಯಕ್ಷ ಮತ್ತು ಸಿಇಒ – ಸಿಇಒ ಅಧ್ಯಕ್ಷನ ಅಧಿಕಾರವನ್ನೂ ಹೊಂದಿರಬಹುದು, ಈ ಸಂದರ್ಭದಲ್ಲಿ ಮಂಡಳಿಯು ಪ್ರಧಾನ ನಿರ್ದೇಶಕನಾಗಿ ಮಂಡಳಿಯ ಸ್ವತಂತ್ರ ಸದಸ್ಯನನ್ನು ಹೆಸರಿಸುತ್ತದೆ.
  • ಕಾರ್ಯಕಾರಿ ಅಧ್ಯಕ್ಷ – ಸಿಇಒ ಯಿಂದ ಪ್ರತ್ಯೇಕವಾದ ಹುದ್ದೆ, ಮತ್ತು ಇದರಲ್ಲಿ ಹುದ್ದೆದಾರನು ಕಂಪನಿಯ ಕಾರ್ಯಾಚರಣೆಗಳ ಮೇಲೆ ಪ್ರಭಾವ ಹೊಂದಿರುತ್ತಾನೆ, ಉದಾಹರಣೆಗೆ ಆರಕಲ್‍ನ ಲ್ಯಾರಿ ಎಲಿಸನ್.
  • ಕಾರ್ಯನಿರ್ವಾಹಕೇತರ ಅಧ್ಯಕ್ಷ – ಇದು ಕೂಡ ಸಿಇಒ ಯಿಂದ ಪ್ರತ್ಯೇಕವಾದ ಹುದ್ದೆ, ಮತ್ತು ಕಾರ್ಯನಿರ್ವಾಹಕೇತರ ಅಧ್ಯಕ್ಷನು ಕಂಪನಿಯ ದೈನಂದಿನ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ವಿಶ್ವದಾದ್ಯಂತ, ಈ ನಡೆಯು ಸಾಂಸ್ಥಿಕ ಆಡಳಿತವನ್ನು ಸುಧಾರಿಸುತ್ತದೆ ಎಂದು ಕಂಪನಿಗಳು ಹೇಳುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. Robert, Henry M.; et al. (2011). Robert's Rules of Order Newly Revised (11th ed.). Philadelphia, PA: Da Capo Press. p. 22. ISBN 978-0-306-82020-5. {{cite book}}: Invalid |ref=harv (help)


"https://kn.wikipedia.org/w/index.php?title=ಅಧ್ಯಕ್ಷ&oldid=756128" ಇಂದ ಪಡೆಯಲ್ಪಟ್ಟಿದೆ