ವಿಷಯಕ್ಕೆ ಹೋಗು

ಸಭೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಭೆಗಳನ್ನು ಕೆಲವೊಮ್ಮೆ ಸಭಾ ಮೇಜುಗಳ ಸುತ್ತ ನಡೆಸಲಾಗುತ್ತದೆ.

ಸಭೆಯಲ್ಲಿ, ಇಬ್ಬರು ಅಥವಾ ಹೆಚ್ಚು ಜನರು, ಹಲವುವೇಳೆ ಒಂದು ಔಪಚಾರಿಕ ವ್ಯವಸ್ಥೆಯಲ್ಲಿ, ಒಂದು ಅಥವಾ ಹೆಚ್ಚು ವಿಷಯಗಳನ್ನು ಚರ್ಚಿಸಲು ಒಟ್ಟಾಗಿ ಸೇರುತ್ತಾರೆ.

ಸಭೆಯು ಮೌಖಿಕ ಮಾತಾಟದ ಮೂಲಕ ಮಾಹಿತಿ ಹಂಚಿಕೆ ಅಥವಾ ಒಪ್ಪಂದಕ್ಕೆ ಬರುವಿಕೆಯಂತಹ ಒಂದು ಸಾಮಾನ್ಯ ಗುರಿ ಸಾಧಿಸುವ ಉದ್ದೇಶಕ್ಕಾಗಿ ನಡೆಸಲಾದ ಎರಡು ಅಥವಾ ಹೆಚ್ಚು ಜನರ ಕೂಟ. ಸಭೆಗಳು ಮುಖಾಮುಖಿಯಾಗಿ ಆಗಬಹುದು ಅಥವಾ ದೂರವಾಣಿ ಸಮಾಲೋಚನಾ ಕರೆ, ಸ್ಕೈಪ್ ಕರೆ ಅಥವಾ ವೀಡಿಯೊ ಸಮಾಲೋಚನೆಯಂತಹ ಸಂಪರ್ಕ ತಂತ್ರಜ್ಞಾನದ ಮಧ್ಯಸ್ತಿಕೆಯಿಂದ ಆಗಬಹುದು.

ಸಭೆ ಮತ್ತು ಇತರ ಕೂಟಗಳ ನಡುವೆ ವ್ಯತ್ಯಾಸವಿದೆ, (ಬರಹೇಳದೇ ಇರುವ) ಅಕಸ್ಮಾತ್ ಭೇಟಿ, ಕ್ರೀಡೆ ಅಥವಾ ಸಂಗೀತಗೋಷ್ಠಿ (ಮೌಖಿಕ ಮಾತಾಟ ಪ್ರಾಸಂಗಿಕವಾಗಿರುತ್ತದೆ), ಪಾರ್ಟಿ ಅಥವಾ ಸ್ನೇಹಿತರ ಒಡನಾಟ (ಯಾವುದೇ ಸಾಮಾನ್ಯ ಗುರಿ ಸಾಧಿಸುವುದಿರುವುದಿಲ್ಲ), ಪ್ರದರ್ಶನ (ಇದರ ಸಾಮಾನ್ಯ ಗುರಿಯನ್ನು ಮುಖ್ಯವಾಗಿ ಹಾಜರಿರುವ ಪ್ರದರ್ಶನಕಾರರ ಸಂಖ್ಯೆ ಮೂಲಕ ಸಾಧಿಸಲಾಗುತ್ತದೆ, ಮೌಖಿಕ ಮಾತಾಟದ ಮೂಲಕವಲ್ಲ) ಕೆಲವು ಇತರ ಕೂಟಗಳ ಉದಾಹರಣೆಗಳು.

"ಸಭೆ" ಪದವು ಉಪನ್ಯಾಸ (ಒಂದು ಪ್ರಸ್ತುತಿ), ವಿಚಾರ ಗೋಷ್ಠಿ (ಸಾಮಾನ್ಯವಾಗಿ ಹಲವು ಪ್ರಸ್ತುತಿಗಳು, ಸಣ್ಣ ಗುಂಪು, ಒಂದು ದಿನ), ಸಮಾವೇಶ (ಮಧ್ಯಮ ಗಾತ್ರ, ಒಂದು ಅಥವಾ ಹೆಚ್ಚು ದಿನಗಳು), ಮಹಾಸಭೆ (ದೊಡ್ಡದು, ಹಲವು ದಿನ), ವ್ಯಾಪಾರ ಮೇಳ/ಪ್ರದರ್ಶನ (ದಾರಿಹೋಕರು ಭೇಟಿಕೊಡುವ ಮಾನವಸಹಿತ ಅಂಗಣಗಳು), ಕಮ್ಮಟ (ಸಣ್ಣದು, ಸಕ್ರಿಯ ಸಹಭಾಗಿಗಳು), ತರಬೇತಿ ಪಠ್ಯಕ್ರಮ, ತಂಡ ಸಂಘಟನೆ ಸಭೆ ಮತ್ತು ಕಿಕ್ ಆಫ್ ಸಂದರ್ಭಗಳನ್ನು ಒಳಗೊಳ್ಳುತ್ತದೆ.

"https://kn.wikipedia.org/w/index.php?title=ಸಭೆ&oldid=759899" ಇಂದ ಪಡೆಯಲ್ಪಟ್ಟಿದೆ